ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಕರ್ಣ’ದಲ್ಲಿ ಈಗ ರೋಚಕ ತಿರುವು ಎದುರಾಗಿದೆ. ಆಷಾಢ ಮಾಸದ ಹಿನ್ನೆಲೆಯಲ್ಲಿ ಕಥಾನಾಯಕ ಕರ್ಣ ಹಾಗೂ ನಿಧಿ ಜೋಡಿಗೆ ಹೊಸ ಸಂಕಷ್ಟ ಎದುರಾಗಿದೆ. ಇಬ್ಬರೂ ಮನೆಯವರ ಕಣ್ಣು ತಪ್ಪಿಸಿ ಕದ್ದುಮುಚ್ಚಿ ಪ್ರೀತಿ ಮಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಫನ್ ಎಪಿಸೋಡ್ ವೀಕ್ಷಕರಿಗೆ ಸಾಕಷ್ಟು ಮನರಂಜನೆ ನೀಡುತ್ತಿದೆ. ಈ ಧಾರಾವಾಹಿ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಸಾಗುತ್ತದೆ ಎನ್ನುವ ಕುತೂಹಲ ಮೂಡಿದೆ.
ಹೇಗಾದರೂ ಮಾಡಿ ನಿಧಿಯನ್ನು ಭೇಟಿಯಾಗಲು ಕರ್ಣ ಹೊಸ ಪ್ಲಾನ್ ಮಾಡಿದ್ದಾನೆ. ಆತ ಗ್ಯಾಸ್ ರಿಪೇರಿ ಮಾಡುವ ಮೆಕ್ಯಾನಿಕ್ ವೇಷ ಧರಿಸಿ ನಿಧಿ ಮನೆಗೆ ಬಂದಿದ್ದಾನೆ. ಈ ವೇಳೆ ಕಿಚನ್‌ನಲ್ಲಿ ಇಬ್ಬರೂ ಕದ್ದುಮುಚ್ಚಿ ಮಾತನಾಡುತ್ತಾ ಪ್ರೀತಿಯ ಕ್ಷಣಗಳನ್ನು ಕಳೆಯುತ್ತಾರೆ. ಆದರೆ ಈ ಖುಷಿ ಹೆಚ್ಚು ಹೊತ್ತು ಇರುವುದಿಲ್ಲ.
ಅಷ್ಟರಲ್ಲೇ ಮನೆಗೆ ಅಜ್ಜಿಯ ಎಂಟ್ರಿ ಆಗುತ್ತದೆ. ಹೊರಗಿರುವ ಪುರುಷರ ಚಪ್ಪಲಿ ನೋಡಿ ಅಜ್ಜಿಗೆ ಅನುಮಾನ ಶುರುವಾಗುತ್ತದೆ. ತಕ್ಷಣವೇ ಅಲರ್ಟ್ ಆಗುವ ನಿಧಿ, ಆತನನ್ನು ಫ್ಯಾನ್ ರಿಪೇರಿ ಮಾಡುವ ಮೆಕ್ಯಾನಿಕ್ ಎಂದು ಸುಳ್ಳು ಹೇಳುತ್ತಾಳೆ. ಅಜ್ಜಿ ಆತನಿಗೆ ಫ್ಯಾನ್ ಜೊತೆಗೆ ಐರನ್ ಬಾಕ್ಸ್ ಕೂಡ ರಿಪೇರಿ ಮಾಡಲು ಕೊಟ್ಟು ಪರೀಕ್ಷಿಸುತ್ತಾರೆ. ಈ ಕದ್ದುಮುಚ್ಚಿ ಪ್ರೀತಿಯ ಆಟ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ‘ಕರ್ಣ’ ಧಾರಾವಾಹಿಯಿಂದ ಕಾಣೆಯಾದ ನಟಿ ನಮ್ರತಾ ಗೌಡ
ನಿತ್ಯಾ ಕಾಣೆ
ನಿತ್ಯಾ ಪಾತ್ರ ಮಾಡುತ್ತಿರುವ ನಮ್ರತಾ ಗೌಡ ಅವರು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದು ವೀಕ್ಷಿರಿಗೆ ಸಾಕಷ್ಟು ಬೇಸರ ಮೂಡಿಸಿದೆ. ಅವರು ಯಾವಾಗ ಧಾರಾವಾಹಿಗೆ ಮರಳುತ್ತಾರೆ ಎನ್ನುವ ಕುತೂಹಲ ಮೂಡಿದೆ. ಅವರು ಇಲ್ಲದೆ ಇರುವುದು ನಮ್ರತಾ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅವರನ್ನು ಈ ರೀತಿ ಸೈಡ್ಲೈನ್ ಮಾಡಿದ್ದು ಸರಿ ಅಲ್ಲ ಎಂಬ ಮಾತು ಕೇಳಿ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
