ದೆಹಲಿಯಲ್ಲಿ ಅಫ್ಘಾನಿಸ್ತಾನ್​ ಕ್ರಿಕೆಟಿಗ ಶಪೂರ್ ಝದ್ರಾನ್ ನಿಧನ! – Kannada News | Afghanistan Pacer Shapoor Zadran Dies At 38

ಅಫ್ಘಾನಿಸ್ತಾನ್ ಕ್ರಿಕೆಟ್ ತಂಡವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೇಗದ ಬೌಲರ್ ಶಪೂರ್ ಝದ್ರಾನ್ (Shapoor Zadran) ಅವರು ಮಂಗಳವಾರ (ಜುಲೈ 7, 2026) ದೆಹಲಿಯಲ್ಲಿ ನಿಧನರಾಗಿದ್ದಾರೆ. ಜುಲೈ 8 ರಂದು ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಾಗಿದ್ದ ಅವರು, ಜನ್ಮದಿನದ ಕೇವಲ ಒಂದು ದಿನ ಮುಂಚಿತವಾಗಿ ಕೊನೆಯುಸಿರೆಳೆದಿದ್ದಾರೆ.

ಮಾರಣಾಂತಿಕ ಕಾಯಿಲೆ!

ಕಳೆದ ಕೆಲವು ತಿಂಗಳುಗಳಿಂದ ಶಪೂರ್ ಅವರು ‘ಹಿಮೋಫಾಗೊಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್’ (HLH) ಎಂಬ ಅಪರೂಪದ ಮತ್ತು ಮಾರಣಾಂತಿಕ ರೋಗನಿರೋಧಕ ಶಕ್ತಿ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ತೀವ್ರವಾದ ಉರಿಯೂತಕ್ಕೆ ಕಾರಣವಾಗುವ ಈ ಕಾಯಿಲೆಗೆ ಚಿಕಿತ್ಸೆ ಪಡೆಯಲು ಅವರು ಜನವರಿ 2026 ರಿಂದ ದೆಹಲಿ-ಎನ್‌ಸಿಆರ್‌ನ ಆಸ್ಪತ್ರೆಗೆ ದಾಖಲಾಗಿದ್ದರು. ಮೇ ತಿಂಗಳಿನಿಂದ ಅವರು ಐಸಿಯುನಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಅಫ್ಘಾನ್ ತಂಡ ಕಟ್ಟಿದ ಆಟಗಾರ:

ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿ (ACB) ಶಪೂರ್ ಅವರ ಅಗಲಿಕೆಗೆ ತೀವ್ರ ಸಂತಾಪ ಸೂಚಿಸಿದ್ದು, ಅವರನ್ನು “ಅಫ್ಘಾನ್ ಕ್ರಿಕೆಟ್‌ಗೆ ಬಲವಾದ ಬುನಾದಿ ಹಾಕಿಕೊಟ್ಟ ಮಹಾನ್ ಆಟಗಾರ” ಎಂದು ಕೊಂಡಾಡಿದೆ. ಇಂದಿನ ಅಫ್ಘಾನಿಸ್ತಾನ್ ತಂಡ ರೂಪುಗೊಳ್ಳುವಲ್ಲಿ ಶಪೂರ್ ಝದ್ರಾನ್ ಕೂಡ ಪ್ರಮುಖ ಪಾತ್ರವಹಿಸಿದ್ದರು. ಅಷ್ಟೇ ಅಲ್ಲದೆ ಯುವ ಆಟಗಾರರಿಗೆ ಸ್ಫೂರ್ತಿಯಾಗಿ ನಿಂತಿದ್ದರು.

ಶಪೂರ್ ವೃತ್ತಿಜೀವನ:

  • ಅಂತರರಾಷ್ಟ್ರೀಯ ಕೆರಿಯರ್: ಶಪೂರ್ ಅವರು 2009 ರಿಂದ 2020 ರವರೆಗೆ ಅಫ್ಘಾನಿಸ್ತಾನ್ ತಂಡವನ್ನು ಪ್ರತಿನಿಧಿಸಿದ್ದರು. ಈ ಅವಧಿಯಲ್ಲಿ 44 ಏಕದಿನ ಹಾಗೂ 36 ಟಿ20 ಪಂದ್ಯಗಳನ್ನಾಡಿ ಒಟ್ಟು 80 ವಿಕೆಟ್‌ಗಳನ್ನು ಕಬಳಿಸಿದ್ದರು.
  • ವಿಶ್ವಕಪ್‌ನ ಹೀರೊ: 2015ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ 10 ವಿಕೆಟ್ ಪಡೆಯುವ ಮೂಲಕ ಅವರು ಅಫ್ಘಾನಿಸ್ತಾನದ ಪರ ಗರಿಷ್ಠ ವಿಕೆಟ್ ಟೇಕರ್ ಎನಿಸಿಕೊಂಡಿದ್ದರು.
  • ಐತಿಹಾಸಿಕ ರನ್: 2015ರ ವಿಶ್ವಕಪ್‌ನಲ್ಲಿ ಸ್ಕಾಟ್‌ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಕೊನೆಯ ರನ್ ಗಳಿಸಿ, ಅಫ್ಘಾನಿಸ್ತಾನ್ ತಂಡಕ್ಕೆ ವಿಶ್ವಕಪ್ ಇತಿಹಾಸದಲ್ಲೇ ಮೊಟ್ಟಮೊದಲ ಜಯ ತಂದುಕೊಟ್ಟ ರೋಮಾಂಚಕ ಕ್ಷಣಕ್ಕೆ ಶಪೂರ್ ಕಾರಣರಾಗಿದ್ದರು.
  • ಸ್ಟಾರ್ ವೇಗಿ: 6 ಅಡಿ ಎತ್ತರದ ಕಾಯ ಮತ್ತು ಹಾರಾಡುವ ಕೇಶರಾಶಿಯೊಂದಿಗೆ ಭೀತಿ ಹುಟ್ಟಿಸುತ್ತಿದ್ದ ಅವರು ಅಫ್ಘಾನಿಸ್ತಾನದ ಮೊದಲ ಸ್ಟಾರ್ ವೇಗಿ ಎನಿಸಿಕೊಂಡಿದ್ದರು.
  •  ಮಾರ್ಗದರ್ಶಕ: ಕ್ರಿಕೆಟ್ ಆಟ ಮಾತ್ರವಲ್ಲದೆ, ರಶೀದ್ ಖಾನ್, ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್ ಸೇರಿದಂತೆ ಅಫ್ಘಾನ್ ತಂಡ ಇಂದಿನ ಹಲವು  ಕ್ರಿಕೆಟ್ ತಾರೆಗಳಿಗೆ ಶಪೂರ್ ಆರಂಭಿಕ ದಿನಗಳಲ್ಲಿ ಪ್ರಮುಖ ಮಾರ್ಗದರ್ಶಕರಾಗಿದ್ದರು.

ಇದನ್ನೂ ಓದಿ: ಅರ್ಜೆಂಟೀನಾ ಪರ ‘ಆಡುತ್ತಿರುವ’ ರೆಫರಿ… ಗಂಭೀರ ಆರೋಪ!

ಕಂಬನಿ ಮಿಡಿದ ಕ್ರಿಕೆಟ್ ಲೋಕ:

ಶಪೂರ್ ಝದ್ರಾನ್ ಅವರ ಅಕಾಲಿಕ ನಿಧನಕ್ಕೆ ಮಾಜಿ ಅಂತರರಾಷ್ಟ್ರೀಯ ಕೋಚ್ ರವಿಶಾಸ್ತ್ರಿ, ಅಫ್ಘಾನ್ ಆಟಗಾರರಾದ ಮೊಹಮ್ಮದ್ ನಬಿ, ರಶೀದ್ ಖಾನ್ ಸೇರಿದಂತೆ ವಿಶ್ವದಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳು ಹಾಗೂ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಕಂಬನಿ ಮಿಡಿದಿದ್ದಾರೆ.

Source link

Negative Energy: ರಾತ್ರಿ ದುಃಸ್ವಪ್ನ, ಭಯದಿಂದ ಪದೇ ಪದೇ ಎಚ್ಚರವಾಗುತ್ತಿದೆಯೇ? ಈ ಸಿಂಪಲ್​ ಟಿಪ್ಸ್​ ಟ್ರೈ ಮಾಡಿ

ರಾತ್ರಿ ಮಲಗಿದ ನಂತರ ಇದ್ದಕ್ಕಿದ್ದಂತೆ ಎಚ್ಚರವಾಗುವುದು, ದುಃಸ್ವಪ್ನಗಳಿಂದ ಆತಂಕಕ್ಕೊಳಗಾಗುವುದು ಅಥವಾ ಕಾರಣವಿಲ್ಲದೆ ಭಯ ಅನುಭವಿಸುವುದು ಕೆಲವರಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಜ್ಯೋತಿಷ್ಯ ಮತ್ತು ಜನಪದ ನಂಬಿಕೆಗಳ ಪ್ರಕಾರ, ಇಂತಹ ತೊಂದರೆಗಳು ಕೆಲವೊಮ್ಮೆ ನಕಾರಾತ್ಮಕ ಶಕ್ತಿ ಅಥವಾ ದುಷ್ಟ ದೃಷ್ಟಿಯ ಪ್ರಭಾವದಿಂದಲೂ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಬೆಳ್ಳುಳ್ಳಿಯನ್ನು ಬಳಸಿ ಮಾಡುವ ಒಂದು ಸರಳ ಪರಿಹಾರವನ್ನು ಅನುಸರಿಸಿದರೆ ಮನಸ್ಸಿಗೆ ಶಾಂತಿ ದೊರೆತು ಉತ್ತಮ ನಿದ್ರೆ ಬರುತ್ತದೆ ಎಂಬ ನಂಬಿಕೆ ಇದೆ.

ನಕಾರಾತ್ಮಕ ಶಕ್ತಿಯನ್ನು ದೂರವಿಡಲು ಬೆಳ್ಳುಳ್ಳಿ ಸಹಾಯಕವೇ?

ಅಡುಗೆಗೆ ಬಳಸುವ ಬೆಳ್ಳುಳ್ಳಿ ಕೇವಲ ಆಹಾರದ ರುಚಿ ಹೆಚ್ಚಿಸುವ ಪದಾರ್ಥ ಮಾತ್ರವಲ್ಲ. ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಅದರ ತೀಕ್ಷ್ಣವಾದ ವಾಸನೆಯು ನಕಾರಾತ್ಮಕ ಶಕ್ತಿ ಹಾಗೂ ದುಷ್ಟ ದೃಷ್ಟಿಯನ್ನು ದೂರವಿಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಭಯ, ಆತಂಕ ಅಥವಾ ಅಶಾಂತಿಯಿಂದ ಬಳಲುವವರಿಗೆ ಬೆಳ್ಳುಳ್ಳಿ ಬಳಸುವ ಪರಿಹಾರವನ್ನು ಶಿಫಾರಸು ಮಾಡಲಾಗುತ್ತದೆ.

ಇದನ್ನೂ ಓದಿ: ಜು. 16ರಂದು ಗುರು-ಆದಿತ್ಯ ರಾಜಯೋಗ; ಈ ಮೂರು ಜನ್ಮಸಂಖ್ಯೆಯವರಿಗೆ ಅದೃಷ್ಟ!

ಭಯ ಮತ್ತು ದುಃಸ್ವಪ್ನಗಳನ್ನು ಕಡಿಮೆ ಮಾಡಲು ಬೆಳ್ಳುಳ್ಳಿ ಪರಿಹಾರ ಹೇಗೆ ಮಾಡಬೇಕು?

ಈ ಪರಿಹಾರಕ್ಕಾಗಿ ಎರಡು ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಳ್ಳಿ. ರಾತ್ರಿ ಮಲಗುವ ಮೊದಲು ಅವುಗಳನ್ನು ನಿಮ್ಮ ದಿಂಬಿನ ಕೆಳಗೆ ಇಟ್ಟು ಮಲಗಿ. ಬೆಳಿಗ್ಗೆ ಎದ್ದ ನಂತರ ಆ ಬೆಳ್ಳುಳ್ಳಿ ಎಸಳುಗಳನ್ನು ಹರಿಯುವ ನೀರಿಗೆ ಬಿಡಬಹುದು ಅಥವಾ ಮನೆಯ ಹೊರಗೆ ಎಸೆಯಬಹುದು. ಈ ಕ್ರಮವನ್ನು ಕೆಲವು ದಿನಗಳ ಕಾಲ ನಿರಂತರವಾಗಿ ಅನುಸರಿಸಿದರೆ ಮನಸ್ಸು ಶಾಂತವಾಗಲು ಮತ್ತು ಉತ್ತಮ ನಿದ್ರೆ ಬರಲು ಸಹಾಯವಾಗುತ್ತದೆ ಎಂಬ ನಂಬಿಕೆ ಇದೆ.

ಈ ನಂಬಿಕೆಯ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿ:

ಈ ಪರಿಹಾರವು ಸಾಂಪ್ರದಾಯಿಕ ನಂಬಿಕೆ ಮತ್ತು ಜ್ಯೋತಿಷ್ಯ ಆಚರಣೆಗಳನ್ನು ಆಧರಿಸಿದೆ. ನೀವು ನಿರಂತರವಾಗಿ ದುಃಸ್ವಪ್ನ, ನಿದ್ರಾಹೀನತೆ, ಆತಂಕ ಅಥವಾ ಭಯದ ಸಮಸ್ಯೆಯಿಂದ ಬಳಲುತ್ತಿದ್ದರೆ, ವೈದ್ಯರು ಅಥವಾ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಸೂಕ್ತ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾಸಕರ ಭವನದ ಕಾರುಗಳ ದುರ್ಬಳಕೆಗೆ ಬ್ರೇಕ್: ಆಪ್ತ ಸಹಾಯಕರು, ಅತಿಥಿಗಳಿಗೆ ವಾಹನ ನೀಡದಂತೆ ಹೊಸ ಮಾರ್ಗಸೂಚಿ ಪ್ರಕಟ – Kannada News | Bengaluru Govt Vehicle Policy: Cashless System for MLAs Boosts Transparency

ಬೆಂಗಳೂರು, ಜು.8: ಬೆಂಗಳೂರಿನ ಶಾಸಕರ ಭವನದಲ್ಲಿ ಜನಪ್ರತಿನಿಧಿಗಳಿಗಾಗಿ ಮೀಸಲಿಟ್ಟಿರುವ ಸರ್ಕಾರಿ ವಾಹನಗಳು ದುರ್ಬಳಕೆಯಾಗುತ್ತಿರುವುದನ್ನು ತಡೆಯಲು ಕರ್ನಾಟಕ ವಿಧಾನಸಭೆ ಸಚಿವಾಲಯವು ಕಠಿಣ ಕ್ರಮ ಕೈಗೊಂಡಿದೆ. ಇನ್ಮುಂದೆ ಶಾಸಕರು ತಮ್ಮ ಆಪ್ತ ಸಹಾಯಕರು (PAs), ಅತಿಥಿಗಳು ಅಥವಾ ಪರಿಚಯಸ್ಥರಿಗೆ ಈ ವಾಹನಗಳನ್ನು ಶಿಫಾರಸು ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ಈ ಸಂಬಂಧ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಶಾಸಕರ ಭವನದ ವಾಹನಗಳನ್ನು ಕೇವಲ ‘ಗ್ರೇಟರ್ ಬೆಂಗಳೂರು ಅಥಾರಿಟಿ’ (GBA) ಅಂದರೆ ಬೆಂಗಳೂರು ನಗರದ ಗಡಿಯೊಳಗೆ ಮಾತ್ರ ಬಳಸಲು ಅವಕಾಶವಿರುತ್ತದೆ. ಕೇವಲ ವಿಮಾನ ನಿಲ್ದಾಣಕ್ಕೆ ಹೋಗಲು ಮಾತ್ರ ವಿನಾಯಿತಿ ನೀಡಲಾಗಿದೆ. ತುರ್ತು ಸಂದರ್ಭಗಳಲ್ಲಿ ವಾಹನಗಳನ್ನು ಬೆಂಗಳೂರಿನಿಂದ ಹೊರಗೆ ಕೊಂಡೊಯ್ಯಬೇಕಾದರೆ ಖುದ್ದು ವಿಧಾನಸಭಾ ಸ್ಪೀಕರ್ (ಸಭಾಪತಿ) ಅವರ ಪೂರ್ವಾನುಮತಿ ಪಡೆಯಬೇಕು ಎಂದು ಕಟ್ಟುನಿಟ್ಟಿನ ಆದೇಶವನ್ನು ನೀಡಿದ್ದಾರೆ.

ಶಾಸಕರ ಹೆಸರಿನಲ್ಲಿ ಅವರ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಮತ್ತು ಅತಿಥಿಗಳು ಶಿಫಾರಸು ಪತ್ರಗಳನ್ನು ನೀಡಿ ಹೊರಜಿಲ್ಲೆಗಳಿಗೆ ಪ್ರವಾಸ ಮಾಡಲು ಈ ಕಾರುಗಳನ್ನು ಬಳಸುತ್ತಿದ್ದರು ಎಂಬ ದೂರುಗಳು ಕೇಳಿಬಂದಿದ್ದವು. ಇದರಿಂದಾಗಿ ಬೆಂಗಳೂರಿಗೆ ಬರುವ ಶಾಸಕರಿಗೆ ತುರ್ತು ಸಂದರ್ಭಗಳಲ್ಲಿ ವಾಹನಗಳು ಸಿಗದೆ ತೀವ್ರ ಕೊರತೆ ಎದುರಾಗುತ್ತಿತ್ತು.

ಸದ್ಯ ವಿಧಾನಸಭಾ ಸದಸ್ಯರಿಗಾಗಿ (ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್ ಸೇರಿದಂತೆ) ಸುಮಾರು 80 ವಾಹನಗಳು ಹಾಗೂ ವಿಧಾನ ಪರಿಷತ್ ಸದಸ್ಯರು (MLCs) ಮತ್ತು ಮಾಜಿ ಸದಸ್ಯರಿಗಾಗಿ 40 ವಾಹನಗಳು ಲಭ್ಯವಿವೆ. ವಾಹನ ಹಾಗೂ ಚಾಲಕರ ಕೊರತೆ ಇರುವುದರಿಂದ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಹೊಸ ಆಲ್ಕೋಹಾಲ್ ನೀತಿ ಮ್ಯಾಜಿಕ್: ಬಿಯರ್ ಮಾರಾಟದಲ್ಲಿ ಶೇ 19.5 ರ ಭಾರಿ ಏರಿಕೆ, ಹರಿದುಬರುತ್ತಿದೆ ಅಬಕಾರಿ ಆದಾಯ

ಹೊಸ ನಿಯಮದ ಪ್ರಕಾರ, ಈ ಕಾರುಗಳ ಬಳಕೆಗೆ ಪ್ರತಿ ಕಿಲೋಮೀಟರ್‌ಗೆ 8 ರೂ. ನಿಂದ 12 ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಇದನ್ನು ಸಂಪೂರ್ಣವಾಗಿ ನಗದು ರಹಿತ (Cashless) ವ್ಯವಹಾರವಾಗಿಸಲಾಗಿದ್ದು, ಶಾಸಕರ ಮಾಸಿಕ ಸಂಬಳದಿಂದಲೇ ನೇರವಾಗಿ ಕಡಿತಗೊಳಿಸಲಾಗುತ್ತದೆ. ಮಾಜಿ ಶಾಸಕರಾಗಿದ್ದರೆ ಅವರ ಪಿಂಚಣಿಯಿಂದ (Pension) ಹಣ ಕಡಿತವಾಗಲಿದೆ. ಇದರಿಂದಾಗಿ ತಮ್ಮ ಹೆಸರಿನಲ್ಲಿ ಯಾರು ಕಾರು ಬಳಸಿದ್ದಾರೆ ಎಂಬುದು ಶಾಸಕರಿಗೂ ಸುಲಭವಾಗಿ ತಿಳಿಯಲಿದ್ದು, ಪಾರದರ್ಶಕತೆ ಹೆಚ್ಚಾಗಲಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:52 am, Wed, 8 July 26

Source link

ಭಾರತ-ಇಂಡೋನೇಷ್ಯಾ ಸ್ನೇಹ ಅತ್ಯಂತ ಗಟ್ಟಿ ಮತ್ತು ರೋಮಾಂಚಕ: ಪ್ರಧಾನಿ ಮೋದಿ ಭಾವುಕ ಪೋಸ್ಟ್ – Kannada News | PM Modi Celebrates Enduring India Indonesia Friendship After Landmark Jakarta Visit

ಜಕಾರ್ತಾ, ಜುಲೈ 08: ಇಂಡೋನೇಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಉಭಯ ದೇಶಗಳ ನಡುವಿನ ಐತಿಹಾಸಿಕ ಬಾಂಧವ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸ್ನೇಹವು ಅತ್ಯಂತ ಗಟ್ಟಿ, ರೋಮಾಂಚಕ ಹಾಗೂ ಸದಾ ಜೀವಂತವಾಗಿದೆ ಎಂದು ಪ್ರಧಾನಿ ಬರೆದಿದ್ದಾರೆ.

ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊಂದಿಗೆ ಯಶಸ್ವಿ ದ್ವಿಪಕ್ಷೀಯ ಮಾತುಕತೆ ನಡೆಸಿದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ. ಈ ಪ್ರವಾಸದಲ್ಲಿ ಭಾರತದ ಹೆಮ್ಮೆಯ ‘ಐಐಎಂ ಬೆಂಗಳೂರು’ ಸಂಸ್ಥೆಯ ಹೊಸ ಕ್ಯಾಂಪಸ್ ಅನ್ನು ಇಂಡೋನೇಷ್ಯಾದಲ್ಲಿ ಸ್ಥಾಪಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲದೆ, ಇಂಡೋನೇಷ್ಯಾ ದೇಶವು ಭಾರತದ ಶಕ್ತಿಶಾಲಿ ‘ಅಸ್ತ್ರ’ ಕ್ಷಿಪಣಿಗಳನ್ನು ಖರೀದಿಸಲು ನಿರ್ಧರಿಸಿದೆ.

ರಕ್ಷಣೆ, ವ್ಯಾಪಾರ, ಡಿಜಿಟಲ್ ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ವಲಯದಲ್ಲಿ ನಡೆದಿರುವ ಈ ಐತಿಹಾಸಿಕ ಒಪ್ಪಂದಗಳು ಉಭಯ ದೇಶಗಳ ಬಾಂಧವ್ಯವನ್ನು ಮುಂದಿನ ದಿನಗಳಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯಲಿವೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

Video Source: @narendramodi( X Account)

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಇಂಡೋನೇಷ್ಯಾದ ಭವ್ಯ ‘ಪ್ರಂಬಾನನ್’ ಶಿವ ದೇವಾಲಯಕ್ಕೆ ಪಿಎಂ ಮೋದಿ ಭೇಟಿ: ಜೀರ್ಣೋದ್ಧಾರಕ್ಕೆ ಭಾರತದ ಹಸ್ತ – Kannada News | PM Modi Visits Indonesia’s Iconic Prambanan Temple, Reinforces Shared Civilisational Heritage

ಜಕಾರ್ತಾ, ಜುಲೈ 08: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇಂಡೋನೇಷ್ಯಾ ಪ್ರವಾಸದ ಎರಡನೇ ದಿನವಾದ ಬುಧವಾರ, ಅಲ್ಲಿನ ಜಾವಾ ದ್ವೀಪದಲ್ಲಿರುವ ವಿಶ್ವಪ್ರಸಿದ್ಧ ‘ಪ್ರಂಬಾನನ್’ ಹಿಂದೂ ದೇವಾಲಯದ ಸಂಕೀರ್ಣಕ್ಕೆ ಭೇಟಿ ನೀಡಿದ್ದಾರೆ. ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊಂದಿಗೆ ಹೆಲಿಕಾಪ್ಟರ್ ಮೂಲಕ ಇಲ್ಲಿಗೆ ಆಗಮಿಸಿದ ಪ್ರಧಾನಿ ಮೋದಿ, ಈ ಭವ್ಯ ಯುನೆಸ್ಕೋ ಪರಂಪರೆ ತಾಣದ ಸೌಂದರ್ಯವನ್ನು ಕಣ್ಣುಂಬಿಕೊಂಡರು.

ಜಂಟಿ ಜೀರ್ಣೋದ್ಧಾರ ಯೋಜನೆಗೆ ಚಾಲನೆಇದೇ ಸಂದರ್ಭದಲ್ಲಿ, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಸುಬಿಯಾಂಟೊ ಅವರು ಸುಮಾರು 1,000 ವರ್ಷಗಳಷ್ಟು ಪುರಾತನವಾದ ಈ ಬೃಹತ್ ದೇವಸ್ಥಾನದ ಸಂಕೀರ್ಣದ ಸಂರಕ್ಷಣೆ ಮತ್ತು ಜೀರ್ಣೋದ್ಧಾರ ಯೋಜನೆಗೆ ಜಂಟಿಯಾಗಿ ಚಾಲನೆ ನೀಡಿದರು.
ಭಾರತದ ‘ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ’ (ASI) ಇಂಡೋನೇಷ್ಯಾದ ತಜ್ಞರೊಂದಿಗೆ ಕೈಜೋಡಿಸಿ ಈ ಐತಿಹಾಸಿಕ ಮಂದಿರವನ್ನು ನವೀಕರಿಸಲಿದೆ. ‘ಪ್ರಂಬಾನನ್’ ದೇವಸ್ಥಾನದ 3 ಪ್ರಮುಖ ವಿಶೇಷತೆಗಳು:ತ್ರಿಮೂರ್ತಿಗಳ ನೆಲೆ: 9ನೇ ಶತಮಾನದಲ್ಲಿ ನಿರ್ಮಾಣವಾದ ಈ ಸಂಕೀರ್ಣದಲ್ಲಿ ಒಟ್ಟು 240 ಸಣ್ಣ ಮತ್ತು ದೊಡ್ಡ ದೇಗುಲಗಳಿದ್ದವು.

ಇವುಗಳಲ್ಲಿ ಮುಖ್ಯವಾಗಿ ಶಿವ, ವಿಷ್ಣು ಮತ್ತು ಬ್ರಹ್ಮ ದೇವರಿಗೆ ಅರ್ಪಿತವಾದ ಮೂರು ಭವ್ಯ ಗೋಪುರಗಳಿದ್ದು, ಮಧ್ಯದಲ್ಲಿರುವ ಭಗವಾನ್ ಶಿವನ ಗೋಪುರವು ಬರೋಬ್ಬರಿ 47 ಮೀಟರ್ (154 ಅಡಿ) ಎತ್ತರವನ್ನು ಹೊಂದಿದೆ. ಗೋಡೆಗಳ ಮೇಲಿನ ರಾಮಾಯಣ: ಈ ದೇವಾಲಯದ ಕಲ್ಲಿನ ಗೋಡೆಗಳ ಮೇಲೆ ರಾಮಾಯಣ ಮಹಾಕಾವ್ಯದ ಕಥೆಗಳನ್ನು ಅದ್ಭುತವಾಗಿ ಕೆತ್ತಲಾಗಿದೆ. ಇಂದಿಗೂ ಇಲ್ಲಿ ಪ್ರತಿ ಹುಣ್ಣಿಮೆಯ ರಾತ್ರಿ ಪ್ರಸಿದ್ಧ ‘ರಾಮಾಯಣ ಬ್ಯಾಲೆ’ ನೃತ್ಯ ಪ್ರದರ್ಶನ ನಡೆಯುತ್ತದೆ.

ಸಾಂಸ್ಕೃತಿಕ ಸೇತು: ಪ್ರಕೃತಿ ವಿಕೋಪ ಹಾಗೂ ಭೂಕಂಪಗಳಿಂದ ಹಾನಿಗೊಳಗಾಗಿದ್ದ ಈ ಸನಾತನ ಕಲಾಕೃತಿಯನ್ನು ರಕ್ಷಿಸುವ ಮೂಲಕ ಭಾರತವು ಆಗ್ನೇಯ ಏಷ್ಯಾ ರಾಷ್ಟ್ರಗಳೊಂದಿಗೆ ತನ್ನ ಸಾವಿರ ವರ್ಷಗಳ ಹಳೆಯ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ: ಕುಸಿದು ಬೀಳುತ್ತಿರುವ ಬಂಡೆಗಲ್ಲುಗಳು – Kannada News | Charmadi Ghat Landslide Threat: Heavy Rains Trigger Boulder and Tree Collapse Near Alekhan, Commuters Alerted

ಚಿಕ್ಕಮಗಳೂರು, ಜುಲೈ 8: ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮಘಟ್ಟ ಸಾಲಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್‌ನಲ್ಲಿ ಭೂಕುಸಿತದ ಆತಂಕ ಎದುರಾಗಿದೆ. ಘಾಟ್‌ನ ಅಲೇಖಾನ್ ಸಮೀಪ ನಿರಂತರ ಮಳೆಯ ಪರಿಣಾಮವಾಗಿ ಬೃಹತ್ ಬಂಡೆಗಳು, ಮಣ್ಣು ಮತ್ತು ಮರಗಳು ಕುಸಿದು ರಸ್ತೆಗೆ ಬಿದ್ದಿವೆ. ಈ ಪ್ರದೇಶವು ಸೂಕ್ಷ್ಮ ಪಶ್ಚಿಮಘಟ್ಟ ಭಾಗವಾಗಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಇಲ್ಲಿ ದಾಖಲಾಗಿದೆ. ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ಪ್ರಮುಖ ಘಾಟ್ ರಸ್ತೆಯ ಅರ್ಧದಷ್ಟು ಭಾಗವು ಕುಸಿದ ಮಣ್ಣು ಮತ್ತು ಬಂಡೆಗಳಿಂದ ಆವೃತವಾಗಿದೆ. ಮಳೆ ಹೀಗೆಯೇ ಮುಂದುವರಿದರೆ ಮತ್ತಷ್ಟು ಭೂಕುಸಿತ ಸಂಭವಿಸುವ ಭೀತಿ ಇದೆ. ಇದರಿಂದ ಸಂಪೂರ್ಣ ಸಂಚಾರ ಸ್ಥಗಿತಗೊಳ್ಳುವ ಆತಂಕ ವ್ಯಕ್ತವಾಗಿದೆ.

ಗುಡ್ಡ ಕುಸಿತ ಸಂಭವಿಸಿದ್ದರೂ ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದುವರೆಗೆ ತೆರವು ಕಾರ್ಯಾಚರಣೆ ಕೈಗೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಸ್ಥಳೀಯರ ತಂಡ ಸ್ವತಃ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿಯ ಚಾರ್ಮಾಡಿ ಘಾಟ್‌ನಲ್ಲಿನ ಈ ಪರಿಸ್ಥಿತಿ ವಾಹನ ಸವಾರರು ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂಡೋನೇಷ್ಯಾದಲ್ಲಿ ಪ್ರಧಾನಿ ಮೋದಿ ಭಾಷಣ; ‘ಕುಚ್ ಕುಚ್ ಹೋತಾ ಹೈ’ ಡೈಲಾಗ್ ಬಳಕೆಗೆ ಕರಣ್ ಸಂತಸ – Kannada News | PM Modi Redefines India Indonesia Ties With Kuch Kuch Hota Hai Karan Johar Reacts

ಇಂಡೋನೇಷ್ಯಾದ ಜಕಾರ್ತದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಾತನಾಡಿದ್ದಾರೆ. ಈ ಭಾಷಣದಲ್ಲಿ ಅವರು ಬಾಲಿವುಡ್‌ನ ಪ್ರಸಿದ್ಧ ‘ಕುಚ್ ಕುಚ್ ಹೋತಾ ಹೈ’ ಸಿನಿಮಾದ ಉಲ್ಲೇಖ ಮಾಡಿದ್ದಾರೆ. ಪ್ರಧಾನಿಯವರ ಈ ಮಾತಿಗೆ ಚಿತ್ರದ ನಿರ್ದೇಶಕ ಕರಣ್ ಜೋಹರ್ ಅಪಾರ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಅವರು ತಮ್ಮ ಸಿನಿಮಾವನ್ನು ನೆನಪಿಸಿಕೊಂಡಿದ್ದಕ್ಕೆ ಕರಣ್ ಜೋಹರ್ ಅತ್ಯಂತ ಸಂತಸ ವ್ಯಕ್ತಪಡಿಸಿದ್ದಾರೆ.

ಮೋದಿ ಭಾಷಣದಲ್ಲಿ ಸಿನಿಮಾದ ಹವಾ!

ಇಂಡೋನೇಷ್ಯಾದಲ್ಲಿ ಭಾರತೀಯ ಸಿನಿಮಾಗಳಿಗೆ ಭಾರಿ ಜನಪ್ರಿಯತೆ ಇದೆ. ಪ್ರಧಾನಿ ಮೋದಿ ಅವರು ಅಲ್ಲಿನ ಜನರಿಗೆ ಭಾರತದ ಸಿನಿಮಾಗಳ ಕ್ರೇಜ್ ನೆನಪಿಸಿದರು. ಶಾರುಖ್ ಖಾನ್ ಮತ್ತು ಕಾಜೋಲ್ ನಟನೆಯ ‘ಕುಚ್ ಕುಚ್ ಹೋತಾ ಹೈ’ ಚಿತ್ರದ ಶೀರ್ಷಿಕೆ ಗೀತೆಯನ್ನು ಅವರು ಪ್ರಸ್ತಾಪಿಸಿದರು. ಭಾರತ ಮತ್ತು ಇಂಡೋನೇಷ್ಯಾ ದೇಶಗಳ ಸ್ನೇಹದ ಬಗ್ಗೆ ಮೋದಿ ಮಾತನಾಡಿದರು.

“ಇಲ್ಲಿ ಭಾರತದ ‘ಕುಚ್ ಕುಚ್ ಹೋತಾ ಹೈ’ ಹಾಡು ತುಂಬಾ ಫೇಮಸ್ ಆಗಿದೆ. ಇಂದು ನಾನು ಹೇಳಲು ಬಯಸುತ್ತೇನೆ. ಭಾರತ ಮತ್ತು ಇಂಡೋನೇಷ್ಯಾ ಜೊತೆಯಾಗಿ ಹೆಜ್ಜೆ ಇಟ್ಟರೆ ‘ಕುಚ್ ಕುಚ್’ (ಸ್ವಲ್ಪ ಸ್ವಲ್ಪ) ಮಾತ್ರ ಆಗುವುದಿಲ್ಲ. ಬದಲಿಗೆ ‘ಬಹುತ್ ಕುಚ್’ (ಬಹಳಷ್ಟು) ಒಳಿತಾಗುತ್ತದೆ’ ಎಂದು ಪ್ರಧಾನಿ ಮೋದಿ ವಿವರಿಸಿದರು.

ಕರಣ್ ಜೋಹರ್ ಭಾವುಕ ಪೋಸ್ಟ್!

ಪ್ರಧಾನಿ ಮೋದಿಯವರ ಭಾಷಣದ ವಿಡಿಯೋ ತುಣುಕನ್ನು ಕರಣ್ ಜೋಹರ್ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೇಟಸ್​​ನಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿಯವರು ಜಕಾರ್ತದಲ್ಲಿ ತಮ್ಮ ಸಿನಿಮಾದ ಬಗ್ಗೆ ಮಾತನಾಡಿದ್ದು ಹೆಮ್ಮೆ ತಂದಿದೆ ಎಂದು ಬರೆದುಕೊಂಡಿದ್ದಾರೆ. ಪ್ರೀತಿ ಎಂಬ ಭಾಷೆಗೆ ಯಾವುದೇ ಗಡಿಗಳಿಲ್ಲ ಎಂದು ಅವರು ಹೇಳಿದ್ದಾರೆ. ಈ ಹಾಡನ್ನು ಎಂದೆಂದಿಗೂ ಜೀವಂತವಾಗಿರಿಸಿದ್ದಕ್ಕೆ ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ: ;ರಾಮಾಯಣ ಚಿತ್ರಕ್ಕೆ ಕರಣ್ ಜೋಹರ್ ಡಿಸ್ಟ್ರಿಬ್ಯೂಟರ್; ಕೇವಲ 250 ಕೋಟಿ ರೂ.ಗೆ ಡೀಲ್

ಸಿನಿಮಾದ ಹಿನ್ನೆಲೆ

‘ಕುಚ್ ಕುಚ್ ಹೋತಾ ಹೈ’ ಸಿನಿಮಾ 1998 ರಲ್ಲಿ ಬಿಡುಗಡೆಯಾಗಿತ್ತು. ಇದು ಕರಣ್ ಜೋಹರ್ ನಿರ್ದೇಶನದ ಮೊದಲ ಸಿನಿಮಾವಾಗಿದೆ. ಶಾರುಖ್ ಖಾನ್, ಕಾಜೋಲ್ ಮತ್ತು ರಾಣಿ ಮುಖರ್ಜಿ ಈ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಬಾಲಿವುಡ್‌ನ ಸಾರ್ವಕಾಲಿಕ ದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಏಷ್ಯಾ ಕಪ್ ಡೇಟ್ ಫಿಕ್ಸ್​: 3 ಸ್ಟೇಡಿಯಂಗಳಲ್ಲಿ ಟೂರ್ನಿ! – Kannada News | Asia Cup 2027 tournament set for June July in Bangladesh

2027ರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ದಿನಾಂಕ ನಿಗದಿಯಾಗಿದೆ. ಮುಂದಿನ ವರ್ಷದ ಜೂನ್ 18 ರಿಂದ ಪಂದ್ಯಾವಳಿ ಆರಂಭವಾಗಲಿದ್ದು, ಜುಲೈ 4 ರಂದು ಮಹಾ ಫೈನಲ್ ಪಂದ್ಯ ಜರುಗಲಿದೆ. ಇನ್ನು ಈ ಬಾರಿ ಟೂರ್ನಿಯ ಆತಿಥ್ಯವನ್ನು ಬಾಂಗ್ಲಾದೇಶ್ ವಹಿಸಿಕೊಳ್ಳಲಿರುವುದು ಅಧಿಕೃತವಾಗಿದೆ. ಈ ಪಂದ್ಯಾವಳಿಯ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಏಕದಿನ ಮಾದರಿಯಲ್ಲಿ ಪಂದ್ಯಾವಳಿ:

ವಿಶ್ವಕಪ್ ಸರಣಿಗಳಿಗೆ ಅನುಗುಣವಾಗಿ ಏಷ್ಯಾ ಕಪ್ ಮಾದರಿಯನ್ನು ಬದಲಾಯಿಸಲಾಗುತ್ತದೆ. 2027ರ ಕೊನೆಯಲ್ಲಿ ಸೌತ್ ಆಫ್ರಿಕಾ/ಝಿಂಬಾಬ್ವೆ/ನಮೀಬಿಯಾದಲ್ಲಿ ಐಸಿಸಿ ಪುರುಷರ ಏಕದಿನ ವಿಶ್ವಕಪ್ ನಡೆಯಲಿದ್ದು, ಅದಕ್ಕೆ ಪೂರ್ವಸಿದ್ಧತೆಯಾಗಿ 2027ರ ಏಷ್ಯಾ ಕಪ್ ಅನ್ನು ಕೂಡ 50 ಓವರ್‌ಗಳ ಏಕದಿನ ಮಾದರಿಯಲ್ಲೇ ನಡೆಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ನಿರ್ಧರಿಸಿದೆ.

3 ಸ್ಟೇಡಿಯಂಗಳಲ್ಲಿ ಪಂದ್ಯ:

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಟೂರ್ನಿಯನ್ನು ಯಶಸ್ವಿಯಾಗಿ ನಡೆಸಲು ಮೂರು ಪ್ರಮುಖ ನಗರಗಳ ಕ್ರೀಡಾಂಗಣಗಳನ್ನು ಪ್ರಸ್ತಾಪಿಸಿದೆ. ಈ ಸ್ಟೇಡಿಯಂಗಳಿಗೆ ಎಸಿಸಿ ಕಡೆಯಿಂದ ಗ್ರೀನ್ ಸಿಗ್ನಲ್ ಸಿಗುವುದು ಖಚಿತ ಎಂದು ವರದಿಯಾಗಿದೆ. ಆ ಸ್ಟೇಡಿಯಂಗಳೆಂದರೆ…

  • ಮಿರ್​​ಪುರ್ (ಢಾಕಾ): ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ.
  • ಚತ್ತೋಗ್ರಾಮ್: ಬೀರ್ ಶ್ರೇಷ್ಠ ಫ್ಲೈಟ್ ಲೆಫ್ಟಿನೆಂಟ್ ಮತಿಯುರ್ ರೆಹಮಾನ್ ಕ್ರೀಡಾಂಗಣ.
  • ಸೈಲ್ಹೆಟ್: ಸೈಲ್ಹೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ.

ಈ ಟೂರ್ನಿಯ ಫೈನಲ್ ಪಂದ್ಯವನ್ನು ಢಾಕಾದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜಿಸಲು ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಪ್ಲ್ಯಾನ್ ರೂಪಿಸಿದೆ.

ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿ:

ಈ ಬಾರಿಯ ಏಷ್ಯಾಕಪ್​ನಲ್ಲೂ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಒಂದೇ ಗ್ರೂಪ್​ನಲ್ಲಿ ಕಾಣಿಸಿಕೊಳ್ಳಲಿದೆ. ಹೀಗಾಗಿ ಸಾಂಪ್ರದಾಯಿಕ ಎದುರಾಳಿಗಳು ಲೀಗ್​ ಹಂತದಲ್ಲೇ ಮುಖಾಮುಖಿಯಾಗಲಿದ್ದಾರೆ.

ಎಷ್ಟು ತಂಡಗಳು ಕಣಕ್ಕೆ?

ಏಷ್ಯಾದ ಅಗ್ರ 5 ಪೂರ್ಣಾವಧಿ ಸದಸ್ಯ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ್, ಶ್ರೀಲಂಕಾ, ಬಾಂಗ್ಲಾದೇಶ್, ಅಫ್ಘಾನಿಸ್ತಾನ್ ತಂಡಗಳು ಕಣಕ್ಕಿಳಿಯುವುದು ಖಚಿತವಾಗಿದೆ. ಇನ್ನು ಅರ್ಹತಾ ಸುತ್ತಿನಲ್ಲಿ ಗೆದ್ದು ಬರುವ ಒಂದು ಅಸೋಸಿಯೇಟ್ ತಂಡ ಸೇರಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿವೆ.

ಇದನ್ನೂ ಓದಿ: ಅರ್ಜೆಂಟೀನಾ ಪರ ‘ಆಡುತ್ತಿರುವ’ ರೆಫರಿ… ಗಂಭೀರ ಆರೋಪ!

11 ವರ್ಷಗಳ ನಂತರ ಬಾಂಗ್ಲಾದಲ್ಲಿ ಟೂರ್ನಿ:

ಬಾಂಗ್ಲಾದೇಶವು ಕೊನೆಯದಾಗಿ 2016 ರಲ್ಲಿ ಏಷ್ಯಾ ಕಪ್ (ಟಿ20 ಮಾದರಿ) ಆಯೋಜಿಸಿತ್ತು. ಈಗ ಸುದೀರ್ಘ 11 ವರ್ಷಗಳ ಬಳಿಕ ಮತ್ತೆ ಆತಿಥ್ಯ ವಹಿಸಲು ಸಜ್ಜಾಗಿ ನಿಂತಿದೆ. ಅದರಂತೆ 2027ರ ಏಷ್ಯಾಕಪ್​ ಏಕದಿನ ಟೂರ್ನಿಯು ಬಾಂಗ್ಲಾದೇಶ್​ನಲ್ಲಿ ಜರುಗಲಿದೆ.

Source link

Gold Rate: ಬಂಗಾರದ ದರ 4 ದಿನದಲ್ಲಿ 240 ರೂ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 8th July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 8: ಚಿನ್ನದ ಬೆಲೆ (Gold Rates) ಕಳೆದ ನಾಲ್ಕೈದು ದಿನಗಳಿಂದ ಸತತವಾಗಿ ಇಳಿಕೆ ಕಾಣುತ್ತಿದೆ. ಇವತ್ತು ಗ್ರಾಮ್​ಗೆ 70 ರೂ ಕಡಿಮೆ ಆಗಿದೆ. ನಾಲ್ಕು ದಿನದಲ್ಲಿ ಇದರ ಬೆಲೆ ಒಂದು ಗ್ರಾಮ್​ಗೆ 240 ರೂ ತಗ್ಗಿದಂತಾಗಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ಇಳಿಮುಖಗೊಂಡಿದೆ. ಬೆಳ್ಳಿ ಬೆಲೆ ಹೆಚ್ಚು ಸ್ಥಿರ ಸ್ಥಿತಿಯಲ್ಲಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,32,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,44,490 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,32,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜುಲೈ 8ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,449 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,245 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,837 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,449 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,245 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,245 ರೂ
  • ಚೆನ್ನೈ: 13,330 ರೂ
  • ಮುಂಬೈ: 13,245 ರೂ
  • ದೆಹಲಿ: 13,260 ರೂ
  • ಕೋಲ್ಕತಾ: 13,245 ರೂ
  • ಕೇರಳ: 13,245 ರೂ
  • ಅಹ್ಮದಾಬಾದ್: 13,250 ರೂ
  • ಜೈಪುರ್: 13,260 ರೂ
  • ಲಕ್ನೋ: 13,260 ರೂ
  • ಭುವನೇಶ್ವರ್: 13,245 ರೂ

ಇದನ್ನೂ ಓದಿ: ಜೂನ್​ನಲ್ಲಿ ಆಟೊಮೊಬೈಲ್ ಕ್ಷೇತ್ರಕ್ಕೆ ಸುಗ್ಗಿ; 25 ಲಕ್ಷಕ್ಕೂ ಅಧಿಕ ವಾಹನಗಳ ದಾಖಲೆ ಮಾರಾಟ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 552 ರಿಂಗಿಟ್ (12,878 ರುಪಾಯಿ)
  • ದುಬೈ: 500.75 ಡಿರಾಮ್ (12,972 ರುಪಾಯಿ)
  • ಅಮೆರಿಕ: 136.50 ಡಾಲರ್ (12,990 ರುಪಾಯಿ)
  • ಸಿಂಗಾಪುರ: 182.40 ಸಿಂಗಾಪುರ್ ಡಾಲರ್ (13,427 ರುಪಾಯಿ)
  • ಕತಾರ್: 501 ಕತಾರಿ ರಿಯಾಲ್ (13,079 ರೂ)
  • ಸೌದಿ ಅರೇಬಿಯಾ: 518 ಸೌದಿ ರಿಯಾಲ್ (13,129 ರುಪಾಯಿ)
  • ಓಮನ್: 53.35 ಒಮಾನಿ ರಿಯಾಲ್ (13,187 ರುಪಾಯಿ)
  • ಕುವೇತ್: 41.84 ಕುವೇತಿ ದಿನಾರ್ (12,942 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 245 ರೂ
  • ಚೆನ್ನೈ: 250 ರೂ
  • ಮುಂಬೈ: 245 ರೂ
  • ದೆಹಲಿ: 245 ರೂ
  • ಕೋಲ್ಕತಾ: 245 ರೂ
  • ಕೇರಳ: 250 ರೂ
  • ಅಹ್ಮದಾಬಾದ್: 245 ರೂ
  • ಜೈಪುರ್: 245 ರೂ
  • ಲಕ್ನೋ: 245 ರೂ
  • ಭುವನೇಶ್ವರ್: 250 ರೂ
  • ಪುಣೆ: 245

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಆಲ್ಕೋಹಾಲ್ ನೀತಿ ಮ್ಯಾಜಿಕ್: ಬಿಯರ್ ಮಾರಾಟದಲ್ಲಿ ಶೇ 19.5 ರ ಭಾರಿ ಏರಿಕೆ, ಹರಿದುಬರುತ್ತಿದೆ ಅಬಕಾರಿ ಆದಾಯ – Kannada News | Karnataka New AIB Policy Shifts Drinking Patterns: Beer Sales Surge by 19.5 percent in Q1 Boosting Excise Revenue

ಬೆಂಗಳೂರು, ಜುಲೈ 8: ರಾಜ್ಯ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದಿರುವ ನೂತನ ‘ಆಲ್ಕೋಹಾಲ್ ಇನ್ ಬಿವರೇಜ್’ (AIB) ತೆರಿಗೆ ನೀತಿಯು ಅಬಕಾರಿ ಇಲಾಖೆಯ ಖಜಾನೆಯನ್ನು ತುಂಬಿಸುವಲ್ಲಿ ಯಶಸ್ವಿಯಾಗಿದೆ. ಮೇ 11 ರಿಂದ ಜಾರಿಗೆ ಬಂದಿರುವ ಈ ನೂತನ ನೀತಿಯಡಿ ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ತೆರಿಗೆ ವಿಧಿಸಲಾಗುತ್ತಿದ್ದು, ರಾಜ್ಯದ ಮದ್ಯಪ್ರಿಯರ ಕುಡಿಯುವ ಶೈಲಿಯನ್ನೇ ಬದಲಾಯಿಸುತ್ತಿದೆ. ಹೆಚ್ಚು ತೀವ್ರತೆ ಹೊಂದಿರುವ ಹಾರ್ಡ್ ಲಿಕ್ಕರ್ ಬದಲಿಗೆ ಜನರು ಈಗ ಲಘು ಆಲ್ಕೋಹಾಲ್ ಹೊಂದಿರುವ ಮೈಲ್ಡ್ ಬಿಯರ್‌ಗಳತ್ತ (Beer) ಆಕರ್ಷಿತರಾಗುತ್ತಿದ್ದಾರೆ. ಶೇ 5 ಕ್ಕಿಂತ ಕಡಿಮೆ ಆಲ್ಕೋಹಾಲ್ ಹೊಂದಿರುವ ಪ್ರೀಮಿಯಂ ಲಾಗರ್ ಬಿಯರ್‌ಗಳ ಬೆಲೆಯಲ್ಲಿ ಭಾರಿ ಕಡಿತವಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

312 ಕೋಟಿ ರೂ. ಹೆಚ್ಚುವರಿ ಆದಾಯ ತಂದ ಬಿಯರ್

ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್‌ನಿಂದ ಜೂನ್) ಬಿಯರ್ ಮಾರಾಟದಿಂದಲೇ ಸರ್ಕಾರಕ್ಕೆ 312.67 ಕೋಟಿ ರೂ. ಹೆಚ್ಚುವರಿ ಆದಾಯ ಹರಿದುಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,602.14 ಕೋಟಿ ರೂ. ಆದಾಯ ಬಂದಿದ್ದರೆ, ಈ ಬಾರಿ ದಾಖಲೆಯ 1,914.81 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಅದೇ ರೀತಿ ಭಾರತೀಯ ಮದ್ಯ (IML) ಮಾರಾಟವೂ ಚುರುಕಾಗಿದ್ದು, ಕಳೆದ ವರ್ಷದ 7,407.53 ಕೋಟಿ ರೂ.ಗೆ ಹೋಲಿಸಿದರೆ ಈ ಬಾರಿ 8,394.32 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಒಟ್ಟಾರೆಯಾಗಿ ಮೊದಲ ತ್ರೈಮಾಸಿಕದಲ್ಲಿ ಅಬಕಾರಿ ಇಲಾಖೆಯು ಕಳೆದ ವರ್ಷಕ್ಕಿಂತ ಶೇ 14.39 ರಷ್ಟು ಬೆಳವಣಿಗೆಯೊಂದಿಗೆ ಒಟ್ಟು 10,599.29 ಕೋಟಿ ರೂ. ರಾಜಸ್ವ ಸಂಗ್ರಹ ಮಾಡಿದೆ.

ಅರ್ಧಕ್ಕರ್ಧ ಇಳಿದ ಕಿಂಗ್‌ಫಿಷರ್ ಪ್ರೀಮಿಯಂ ಬೆಲೆ

ಹೊಸ ತೆರಿಗೆ ನೀತಿಯಿಂದಾಗಿ ಪ್ರೀಮಿಯಂ ಲಾಗರ್ ಬಿಯರ್‌ಗಳು ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿವೆ. ಉದಾಹರಣೆಗೆ, ಯುನೈಟೆಡ್ ಬ್ರೂವರೀಸ್ (UB) ನ ಕಿಂಗ್‌ಫಿಷರ್ ಪ್ರೀಮಿಯಂನ 330 ಎಂಎಲ್ ಬಾಟಲಿ ಬೆಲೆ 125 ರೂ.ನಿಂದ ನೇರವಾಗಿ 60 ರೂ.ಗೆ ಇಳಿಕೆಯಾಗಿದೆ. ಇದರೊಂದಿಗೆ ಬಡ್‌ವೈಸರ್, ಕೊರೊನಾ, ಹೊಗಾರ್ಡನ್ ಹಾಗೂ ಬೆಂಗಳೂರಿನ ಸ್ಥಳೀಯ ಬ್ರ್ಯಾಂಡ್ ಆದ ಟೋಯ್ಟ್ (Toit) ಬಿಯರ್‌ಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.

ಬೇಸಿಗೆಯ ಗರಿಷ್ಠ ಅವಧಿಯಲ್ಲೇ ಬೆಲೆ ಇಳಿಕೆಯಾಗಿದ್ದರಿಂದ ಕಳೆದ ಒಂದೂವರೆ ತಿಂಗಳಲ್ಲಿ ಬಿಯರ್ ಇನ್ವೆಂಟರಿ ಶೇ 25-30 ರಷ್ಟು ಹೆಚ್ಚಾಗಿದೆ ಎಂದು ವ್ಯಾಪಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಗ್ರಾಹಕರಲ್ಲಿ ಗುಣಮಟ್ಟದ ಹಾಗೂ ಕಡಿಮೆ ಆಲ್ಕೋಹಾಲ್ ಹೊಂದಿರುವ ಪಾನೀಯಗಳನ್ನು ಉತ್ತೇಜಿಸುವುದೇ AIB ನೀತಿಯ ಮುಖ್ಯ ಉದ್ದೇಶ ಎಂದು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

45,000 ಕೋಟಿ ರೂ. ಆದಾಯದ ಗುರಿ, ಲೈಸೆನ್ಸ್ ಹರಾಜು

ಸರ್ಕಾರವು 2026-27ರ ಹಣಕಾಸು ವರ್ಷಕ್ಕೆ ಒಟ್ಟು 45,000 ಕೋಟಿ ರೂ. ಅಬಕಾರಿ ಆದಾಯದ ಗುರಿಯನ್ನು ಹೊಂದಿದ್ದು, ಇದನ್ನು ತಲುಪಲು IML ತಯಾರಕರು ತಮ್ಮ ಮದ್ಯದಲ್ಲಿ ಕನಿಷ್ಠ ಶೇ 40 ರಷ್ಟು ಆಲ್ಕೋಹಾಲ್ ಪ್ರಮಾಣವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳುವಂತೆ ಸೂಚಿಸಿದೆ (ವೋಡ್ಕಾಗೆ ಶೇ. 37.5 ವಿನಾಯಿತಿ ಇದೆ). ಇದರೊಂದಿಗೆ, ಬಳಕೆಯಾಗದ ಹಾಗೂ ರದ್ದಾಗಿರುವ 483 ಸಿಎಲ್-2ಎ (ಚಿಲ್ಲರೆ ಮದ್ಯದ ಅಂಗಡಿ) ಮತ್ತು 96 ಸಿಎಲ್-9ಎ (ಬಾರ್) ಪರವಾನಗಿಗಳನ್ನು ಈ ತಿಂಗಳ ಕೊನೆಯ ವಾರದಲ್ಲಿ ಆನ್‌ಲೈನ್ ಹರಾಜು ಪ್ರಕ್ರಿಯೆಯ ಮೂಲಕ ವಿಲೇವಾರಿ ಮಾಡಿ ಮತ್ತಷ್ಟು ಆದಾಯ ಗಳಿಸಲು ಅಬಕಾರಿ ಇಲಾಖೆ ಮುಂದಾಗಿದೆ. ಈ ಲೈಸೆನ್ಸ್‌ಗಳನ್ನು 2026-27 ರಿಂದ 2030-31ರ ವರೆಗಿನ ಐದು ವರ್ಷಗಳ ಅವಧಿಗೆ ನೀಡಲಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version