Headlines

Daily Devotional: ಗಂಡ ಹೆಂಡತಿ ಒಂದೇ ತಟ್ಟೆಯಲ್ಲಿ ಊಟ ಮಾಡಿದರೆ ಏನಾಗುತ್ತೆ ಗೊತ್ತಾ? – Kannada News | Daily Devotional: Know why Husband and wife should not eat from the same plate

ಬೆಂಗಳೂರು, ಫೆಬ್ರುವರಿ​ 06: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಗಂಡ ಹೆಂಡತಿ ಒಂದೇ ತಟ್ಟೆಯಲ್ಲಿ ಊಟ ಮಾಡಿದರೆ ಏನಾಗುತ್ತೆ ಎಂಬುದನ್ನು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಅವರು ಹೇಳುವಂತೆ ನಮ್ಮ ಸನಾತನ ಧರ್ಮದಲ್ಲಿ ಋಣಾನುಬಂಧವು ಜೀವನದ ಎಲ್ಲ ಸಂಬಂಧಗಳಿಗೆ ಆಧಾರವಾಗಿದೆ. ಆಹಾರವು ಕೇವಲ ಹಸಿವನ್ನು ನೀಗಿಸದೆ, ದೇಹ, ಮನಸ್ಸು, ಭಾವನೆಗಳು ಮತ್ತು ಆಲೋಚನೆಗಳ ಮೇಲೆ ಆಳವಾದ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರವೂ ನಾವು ಸೇವಿಸುವ ಆಹಾರವು ನಮ್ಮ ಶಾಂತಿ ಮತ್ತು ನೆಮ್ಮದಿಯ ಮೇಲೆ ಪರಿಣಾಮ…

Read More

ನಗರಸಭೆ ಪೌರಾಯುಕ್ತೆಗೆ ನಿಂದನೆ ಕೇಸ್​​: ರಾಜೀವ್​ ಗೌಡ ಪರ ಸಚಿವ ಮುನಿಯಪ್ಪ ಬ್ಯಾಟಿಂಗ್​ – Kannada News | Shidlaghatta Banner Row: Minister Muniyappa Says Accused Rajeev Gowda Is a Quiet Person

ಬೆಂಗಳೂರು, ಜನವರಿ 15: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ‘ಕೈ’ ಮುಖಂಡನಿಂದ ನಿಂದನೆ ವಿಚಾರ ಸಂಬಂಧ ಆರೋಪಿ ರಾಜೀವ ಗೌಡ ಪರ ಸಚಿವ ಕೆ. ಹೆಚ್. ಮುನಿಯಪ್ಪ ಬ್ಯಾಟಿಂಗ್​​ ಮಾಡಿದ್ದಾರೆ. ರಾಜೀವ್ ಗೌಡ ಸೌಮ್ಯ ಸ್ವಭಾವದವರಾಗಿದ್ದು, ಕರೆದು ಆತನಿಗೆ ಬುದ್ಧಿ ಹೇಳುತ್ತೇನೆ. ರಾಜಕೀಯದಲ್ಲಿರುವ ವ್ಯಕ್ತಿ ಶಾಂತ ಸ್ವಭಾವದಿಂದ ಇರಬೇಕು. ಅಧಿಕಾರದಲ್ಲಿ ಇರುವವರಿಗೆ ಯಾರೂ ಹೀಗೆ ಮಾತನಾಡಬಾರದು ಎಂದಿದ್ದಾರೆ. ಅಲ್ಲದೆ ಶಿಡ್ಲಘಟ್ಟದಲ್ಲಿ ಜೆಡಿಎಸ್​ನವರು ಈ ಹಿಂದೆ ಬ್ಯಾನರ್ ಹಾಕಿದಾಗ ತೆಗೆಸಿಲ್ಲ, ಆದರೆ ಈಗ ತೆಗೆದಿದ್ದಾರೆ ಅಂತಾ ರಾಜೀವ್ ಹೇಳ್ತಿದ್ದಾರೆ. ಆ…

Read More

ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಭಾರಿ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ – Kannada News | Senior Congress Ministers Express Frustration Over Government Inertia and Party Confusion

ಬೆಂಗಳೂರು, ಫೆಬ್ರವರಿ 20: ಕಾಂಗ್ರೆಸ್ ಸರ್ಕಾರದಲ್ಲಿ ಕೆಲಸಗಳು ನಿಂತಲ್ಲೇ ನಿಂತಿವೆ ಎಂದು ಹಿರಿಯ ಸಚಿವರುಗಳ ವಲಯದಲ್ಲಿಯೇ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಆಡಳಿತದಲ್ಲಿ ಜಡತ್ವ ಆವರಿಸಿದ್ದು, ಪಕ್ಷದಲ್ಲಿನ ಗೊಂದಲಗಳು ಮತ್ತು ಮಂತ್ರಿಗಳಿಗೆ ಅನಗತ್ಯ ಜವಾಬ್ದಾರಿಗಳನ್ನು ವಹಿಸಿರುವುದು ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಈ ಕುರಿತು ಆರು ಮಂದಿ ಹಿರಿಯ ಸಚಿವರು ಕಳೆದ ವಾರ ಸಭೆ ನಡೆಸಿ, ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ. ಭಾಷಣಗಳು, ಜಾಹೀರಾತುಗಳು ಮತ್ತು ಹೇಳಿಕೆಗಳು ವಾಸ್ತವಕ್ಕೆ ದೂರವಾಗಿದ್ದು, ಕ್ಷೇತ್ರದ ಮತ್ತು ಇಲಾಖೆಯ ಮಟ್ಟದಲ್ಲಿ ಯಾವುದೇ ಕೆಲಸಗಳು ಚುರುಕುಗೊಂಡಿಲ್ಲ…

Read More

ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿಗೆ ಬಿಗ್ ರಿಲೀಫ್; ಆಫೀಸ್ ಧ್ವಂಸ ಕ್ರಮಕ್ಕೆ ಕೊಲ್ಕತ್ತಾ ಹೈಕೋರ್ಟ್ ತಡೆ – Kannada News | Big Relief for Abhishek Banerjee as High Court halts demolition of his office in Amtala

ಕೊಲ್ಕತ್ತಾ, ಜುಲೈ 19: ತೃಣಮೂಲ ಕಾಂಗ್ರೆಸ್ (TMC) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ (Abhishek Banerjee) ಅವರಿಗೆ ಕೊಲ್ಕತ್ತಾ ಹೈಕೋರ್ಟ್ ಇಂದು ದೊಡ್ಡ ರಿಲೀಫ್ ನೀಡಿದೆ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಅಮ್ತಾಲಾದಲ್ಲಿರುವ ಅಭಿಷೇಕ್ ಬ್ಯಾನರ್ಜಿ ಅವರ ಕಚೇರಿ ಕಟ್ಟಡದ ಧ್ವಂಸ ಕಾರ್ಯಕ್ಕೆ ನ್ಯಾಯಾಲಯ ತಡೆ ನೀಡಿದೆ. ಮುಂದಿನ ವಿಚಾರಣೆಯವರೆಗೆ ಅಥವಾ ಜುಲೈ ಅಂತ್ಯದವರೆಗೆ ಪ್ರಸ್ತುತ ಸ್ಥಿತಿಯನ್ನೇ ಕಾಯ್ದುಕೊಳ್ಳುವಂತೆ ನಿರ್ದೇಶಿಸಿದೆ. ಇದರಿಂದಾಗಿ ಅಭಿಷೇಕ್ ಬ್ಯಾನರ್ಜಿ ನಿಟ್ಟುಸಿರು ಬಿಡುವಂತಾಗಿದೆ. ಕೊಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ರಾಜಾ…

Read More

ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ ಮೆರೆದ ಗ್ಯಾಂಗ್​​

ರಾಮನಗರ, ಡಿಸೆಂಬರ್​​ 18: 19 ವರ್ಷದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಆತ್ಯಾಚಾರ ಆರೋಪ ಹಿನ್ನೆಲೆ ಬೆಂಗಳೂರಿನ ಮಾಗಡಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಕಾಸ್, ಪ್ರಶಾಂತ್ ಹಾಗೂ ಚೇತನ್ ಬಂಧಿತ ಆರೋಪಿಗಳು. ಬೆಂಗಳೂರಿನ ಕಾಲೇಜುವೊಂದರಲ್ಲಿ ಓದುತ್ತಿರುವ ವಿದ್ಯಾರ್ಥಿನಿಯನ್ನು ಪ್ರೀತಿಯ ನೆಪದಲ್ಲಿ ವಿಕಾಸ್ ಪರಿಚಯ ಮಾಡಿಕೊಂಡಿದ್ದ. ಆನಂತರ ವಿದ್ಯಾರ್ಥಿನಿಯ ಜೊತೆ ಲೈಂಗಿಕ ಸಂಪರ್ಕ ನಡೆಸಿದ್ದು, ಅದನ್ನು ವಿಡಿಯೋ ಮಾಡಿಕೊಂಡು ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದ. ಮೂರು ತಿಂಗಳ ಹಿಂದೆ ವಿಡಿಯೋ ಮಾಡಿಕೊಂಡಿದ್ದ ಈತ, ನಾನು ಕರೆದಾಗಲೆಲ್ಲ ಬರಬೇಕು ಎಂದು…

Read More

ಸ್ನಾಯು ಸೆಳೆತದಿಂದ ಕೈ ತಪ್ಪಿದ ಐತಿಹಾಸಿಕ ದಾಖಲೆ..! – Kannada News | Cramps Stop Shubman Gill From Making ODI History

ಮೊಹಮ್ಮದ್ ಅಝರುದ್ದೀನ್, ಸೌರವ್ ಗಂಗೂಲಿ, ಎಂ.ಎಸ್. ಧೋನಿ ಅವರಿಂದ ಹಿಡಿದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾವರೆಗೆ ಭಾರತದ ಹಲವು ಶ್ರೇಷ್ಠ ನಾಯಕರು ಇಂಗ್ಲೆಂಡ್ ವಿರುದ್ಧ ಅವರದ್ದೇ ನೆಲದಲ್ಲಿ ಬ್ಯಾಟ್ ಬೀಸಿದ್ದಾರೆ. ಆದರೆ ಇವರಾರೂ ಮಾಡಲಾಗದ ಒಂದು ವಿಶಿಷ್ಟ ಸಾಧನೆ ಬರೆಯುವ ಸುವರ್ಣ ಅವಕಾಶ ಭಾರತದ ಯುವ ನಾಯಕ ಶುಭ್​ಮನ್ ಗಿಲ್ ಅವರಿಗೆ ಒದಗಿಬಂದಿತ್ತು. ಆದರೆ ದುರದೃಷ್ಟವಶಾತ್, ಇತಿಹಾಸದ ಹೊಸ್ತಿಲಲ್ಲಿ ಗಿಲ್ ಅವರಿಗೆ ‘ಸ್ನಾಯು’ ಕೈ ಕೊಟ್ಟಿತು. ಸ್ನಾಯು ಸೆಳೆತದಿಂದ ಕೈ ತಪ್ಪಿದ ದಾಖಲೆ! ಇಂಗ್ಲೆಂಡ್ ನೀಡಿದ…

Read More

‘ಆಚೆ ಬಂದಮೇಲೂ ಗೆದ್ರಿ’; ಅಪ್ಪುನ ಮರೆಯದ ಗಿಲ್ಲಿಗೆ ಫ್ಯಾನ್ಸ್ ಅಭಿನಂದನೆ – Kannada News | Gilli Nata Visits Puneeth Rajkumar Samadhi Fans Says you Are the real winner

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಗಿಲ್ಲಿ ನಟ ಅವರು ಹುಟ್ಟೂರಲ್ಲಿ ವಿಜಯ ಯಾತ್ರೆ ಮಾಡಿದರು. ಇದಾದ ಬಳಿಕ ಬೆಂಗಳೂರಿಗೆ ಮರಳಿದ್ದಾರೆ. ಅವರು ಪುನೀತ್ ಸ್ಮಾರಕಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಫೋಟೋ ಗಮನ ಸೆಳೆದಿದೆ. ಪ್ರತಿ ಕಲಾವಿದರಿಗೂ, ಅದರಲ್ಲೂ ಯುವ ಕಲಾವಿದರಿಗೆ ಪುನೀತ್ ರಾಜ್​​ಕುಮಾರ್ ಎಂದರೆ ವಿಶೇಷ ಪ್ರೀತಿ ಇರುತ್ತದೆ. ಇದಕ್ಕೆ ಗಿಲ್ಲಿ ಕೂಡ ಹೊರತಾಗಿಲ್ಲ. ಅವರು ಪುನೀತ್ ಸ್ಮಾರಕಕ್ಕೆ ತೆರಳೋಕೆ ಮರೆತಿಲ್ಲ ಎಂಬುದು ವಿಶೇಷ. ಬಿಗ್ ಬಾಸ್ ವಿನ್ ಆದ ಬಳಿಕ ಗಿಲ್ಲಿ ಅವರು…

Read More

Video: ಪಂಚ್ ಕೋತಿ ಇದ್ದ ಮೃಗಾಲಯಕ್ಕೆ ನುಗ್ಗಿದ್ದ ಇಬ್ಬರು ಅಮೆರಿಕನ್ನರ ಬಂಧನ – Kannada News | Two Visitors Arrested After Entering Monkey Enclosure at Punch The Monkey’s Zoo

ಟೋಕಿಯೋ, ಮೇ 19: ಜಪಾನಿನಲ್ಲಿ ಪಂಚ್ ಕೋತಿ ಇದ್ದ ಮೃಗಾಲಯಕ್ಕೆ ನುಗ್ಗಿದ್ದ ಇಬ್ಬರು ಅಮೆರಿಕನ್ನರನ್ನು ಬಂಧಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಟೋಕಿಯೋ ಉಪನಗರ ಚಿಬಾದಲ್ಲಿರುವ ಪ್ರಸಿದ್ಧ ಇಚಿಕಾವಾ ಸಿಟಿ ಮೃಗಾಲಯದಲ್ಲಿ ಈ ಘಟನೆ ನಡೆದಿದ್ದು, ಕ್ರಿಪ್ಟೋಕರೆನ್ಸಿ ಪ್ರಚಾರಕ್ಕಾಗಿ ಇವರು ಈ ಹುಚ್ಚು ಸಾಹಸಕ್ಕೆ ಕೈಹಾಕಿದ್ದರು ಎನ್ನಲಾಗಿದೆ. ಬಂಧಿತರನ್ನು 24 ವರ್ಷದ ರೀಡ್ ಜಹ್ನಾಯಿ ಡೇಸನ್ ಮತ್ತು 27 ವರ್ಷದ ನೀಲ್ ಜಬಾಹ್ರಿ ಡುವಾನ್ ಎಂದು ಗುರುತಿಸಲಾಗಿದೆ. ವೈರಲ್ ಆಗಿರುವ ವಿಡಿಯೋ ತುಣುಕುಗಳ ಪ್ರಕಾರ, ಡೇಸನ್ ನೀಲಿ ಬಣ್ಣದ…

Read More

ಕರ್ನಾಟಕ ಹವಾಮಾನ ವರದಿ: ಇಂದು ಹಲವೆಡೆ ಭಾರೀ ಮಳೆ ಸಾಧ್ಯತೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​!

ಬೆಂಗಳೂರು, ಮಾರ್ಚ್​ 31: ಕಳೆದ ಎರಡು ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆ  (Weather Forecast)  ಸುರಿದಿದ್ದು, ಬಿಸಿಲ ಬೇಗೆ ಆರಿದಂತಾಗಿದೆ. ಇಂದೂ ಸಹ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಕಲಬುರ್ಗಿ, ವಿಜಯಪುರ ಮತ್ತು ಧಾರವಾಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​? ​ ಬೀದರ್, ಬಾಗಲಕೋಟೆ, ಗದಗ, ಉತ್ತರ ಕನ್ನಡ, ಶಿವಮೊಗ್ಗ,…

Read More

ಮುಂಬೈನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್​​ಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ – Kannada News | French President Emmanuel Macron meets PM Narendra Modi at Mumbai’s Lok Bhavan with a hug

ಮುಂಬೈ, ಫೆಬ್ರವರಿ 17: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (Emmanuel Macron) 3 ದಿನಗಳ ಭಾರತ ಭೇಟಿಯಲ್ಲಿದ್ದಾರೆ. ಸೋಮವಾರ ರಾತ್ರಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ರಾಜ್ಯಪಾಲ ಆಚಾರ್ಯ ದೇವವ್ರತ್ ಬರಮಾಡಿಕೊಂಡರು. ಇಂದು ಪ್ರಧಾನಿ ಮೋದಿ ಮುಂಬೈನ ಲೋಕ ಭವನದಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಅಪ್ಪುಗೆಯೊಂದಿಗೆ ಸ್ವಾಗತಿಸಿದ್ದಾರೆ. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More