ಇಂಡೋನೇಷ್ಯಾದ 1,000 ವರ್ಷ ಹಳೆಯ ಶಿವನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪ್ರಧಾನಿ ಮೋದಿ ಬೆಂಬಲ – Kannada News | PM Modi Announced Support For Restoration Of 1000 Year Old Shiva Temple In Indonesia

ಜಕಾರ್ತಾ, ಜುಲೈ 7: ಪ್ರಧಾನಿ ನರೇಂದ್ರ ಮೋದಿ (PM Modi Indonesia Visit) ತಮ್ಮ ಇಂಡೋನೇಷ್ಯಾ ಪ್ರವಾಸದ ಅವಧಿಯಲ್ಲಿ ಜಕಾರ್ತಾದಲ್ಲಿ ಅಲ್ಲಿನ ಸಂಸತ್ತನ್ನುದ್ದೇಶಿಸಿ ಮಾತನಾಡುವಾಗ, ಇಂಡೋನೇಷ್ಯಾದಲ್ಲಿರುವ 1 ಸಾವಿರ ವರ್ಷ ಹಳೆಯದಾದ ಐತಿಹಾಸಿಕ ಪ್ರಂಬನನ್ ಶಿವ ದೇವಾಲಯದ (Prambanan Temple Compound) ಜೀರ್ಣೋದ್ಧಾರ ಮತ್ತು ಸಂರಕ್ಷಣೆಗೆ ಭಾರತ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಮಹತ್ವದ ಘೋಷಣೆ ಮಾಡಿದ್ದಾರೆ.

ಭಾರತ ಮತ್ತು ಇಂಡೋನೇಷ್ಯಾದ ನಡುವಿನ ಸಂಬಂಧವು ಕೇವಲ ಇತ್ತೀಚಿನ ರಾಜತಾಂತ್ರಿಕ ಸಂಬಂಧವಲ್ಲ. ಅದು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಪ್ರಂಬನನ್ ಶಿವ ದೇವಾಲಯವು 9ನೇ ಶತಮಾನದಲ್ಲಿ (ಸುಮಾರು 1,000 ವರ್ಷಗಳ ಹಿಂದೆ) ನಿರ್ಮಾಣಗೊಂಡ ಆಗ್ನೇಯ ಏಷ್ಯಾದ ಅತಿ ದೊಡ್ಡ ಹಿಂದೂ ದೇವಾಲಯ ಸಂಕೀರ್ಣಗಳಲ್ಲಿ ಒಂದಾಗಿದೆ. ಈ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದು ಉಭಯ ದೇಶಗಳ ಹಂಚಿಕೆಯ ಇತಿಹಾಸವನ್ನು ಗೌರವಿಸಿದಂತೆ ಎಂದು ಪ್ರಧಾನಿ ಮೋದಿ ಒತ್ತಿಹೇಳಿದ್ದಾರೆ.

ಪ್ರಂಬನನ್ ದೇವಾಲಯದ ಗೋಡೆಗಳ ಮೇಲೆ ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳ ಸುಂದರ ಕೆತ್ತನೆಗಳಿವೆ. ಇಂಡೋನೇಷ್ಯಾ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗಿದ್ದರೂ, ಅಲ್ಲಿನ ಸಂಸ್ಕೃತಿಯಲ್ಲಿ ರಾಮಾಯಣ ಮತ್ತು ಗರುಡನಿಗೆ ಅಪಾರ ಗೌರವವಿದೆ. ಕಾಂಬೋಡಿಯಾದ ಅಂಗ್ಕೋರ್ ವಾಟ್ ದೇವಾಲಯದ ಜೀರ್ಣೋದ್ಧಾರಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ASI) ಈಗಾಗಲೇ ದೊಡ್ಡ ಕೊಡುಗೆ ನೀಡಿದೆ. ಅದೇ ಮಾದರಿಯಲ್ಲಿ ಇಂಡೋನೇಷ್ಯಾದ ಈ ಪ್ರಾಚೀನ ಶಿವ ದೇವಾಲಯದ ಪುನರುತ್ಥಾನಕ್ಕೆ ಕೈಜೋಡಿಸುವ ಮೂಲಕ, ಜಾಗತಿಕ ಮಟ್ಟದಲ್ಲಿ ಸನಾತನ ಸಂಸ್ಕೃತಿಯ ಸ್ಮಾರಕಗಳನ್ನು ರಕ್ಷಿಸುವ ಭಾರತದ ಬದ್ಧತೆಯನ್ನು ಪ್ರಧಾನಿ ಮೋದಿ ಪ್ರದರ್ಶಿಸಿದ್ದಾರೆ.

ಪ್ರಂಬನನ್ ದೇವಾಲಯ ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿದೆ ಮತ್ತು ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣವಾಗಿದೆ. ಇಲ್ಲಿ ಶಿವ, ವಿಷ್ಣು ಮತ್ತು ಬ್ರಹ್ಮ ದೇವರಿಗೆ ಸಮರ್ಪಿತವಾದ ಭವ್ಯ ಗೋಪುರಗಳಿದ್ದು, ಅದರಲ್ಲಿ ಶಿವನ ಗೋಪುರವು ಅತ್ಯಂತ ಎತ್ತರವಾಗಿದೆ. ಇದು ಸುಮಾರು 47 ಮೀಟರ್ ಎತ್ತರವಿದೆ.

(Video Source: DD News)

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ರೆಡಿ ಟು ಈಟ್ ಆಹಾರ ಸೇವಿಸುವ ಮುನ್ನ ಡಾ. ಸುಹಾಸ್ ಹೇಳಿರುವ ಈ ವಿಷಯಗಳನ್ನು ತಿಳಿದುಕೊಳ್ಳಿ! – Kannada News | Hidden Dangers of Ready to Eat Foods: Expert Health Tips

Hidden Dangers of Ready-to-Eat Foods: Expert Health TipsImage Credit source: Tv9 kannada

ಇತ್ತೀಚಿನ ದಿನಗಳಲ್ಲಿ ರೆಡಿ ಟು ಈಟ್ ಆಹಾರ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಎಂದಾದರೂ ಇದು ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಯೋಚಿಸಿದ್ದೀರಾ… ಇದು ನಮ್ಮ ಸಮಯ ಉಳಿಸಬಹುದು ಆದರೆ ಆರೋಗ್ಯವನ್ನು ಕಾಪಾಡುತ್ತದೆಯೇ? ಆದಷ್ಟು ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಶೃಂಗೇರಿ ಶ್ರೀ ಶಾರದಾ ಧನ್ವಂತರಿ ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಸುಹಾಸ್ ಹೆಚ್. ಡಿ ಅವರು ಟಿವಿ9 ಕನ್ನಡಕ್ಕೆ ನೀಡಿದ್ದು ರೆಡಿ ಟು ಈಟ್ ಆಹಾರ ಸೇವನೆಯಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಪರಿಣಾಮಗಳ ಬಗ್ಗೆ ತಿಳಿಸಿದ್ದಾರೆ. ಅಷ್ಟೇಅಲ್ಲ, ನಾವು ಸೇವನೆ ಮಾಡುವ ಆಹಾರ ಮತ್ತು ಆಹಾರ ಸೇವನೆ ಕ್ರಮ ಹೇಗಿರಬೇಕು ಎಂಬುದರ ಕುರಿತು ವಿವರವಾಗಿ ಮಾಹಿತಿ ನೀಡಿದ್ದಾರೆ.

ಡಾ. ಸುಹಾಸ್ ಹೇಳುವ ಪ್ರಕಾರ, ಈ ರೆಡಿ ಟು ಈಟ್ ಆಹಾರಗಳು ಸಾಮಾನ್ಯ ಮಲಬದ್ಧತೆ, ಅಜೀರ್ಣದಿಂದ ಹಿಡಿದು ಅತಿ ಗಂಭೀರವಾದ ಕ್ಯಾನ್ಸರ್ ನಂತಹ ಕಾಯಿಲೆಗಳಿಗೂ ಕಾರಣವಾಗಬಹುದು. ಇಂತಹ ಆಹಾರಗಳು ಹೆಚ್ಚಾಗಿ ಸಂರಕ್ಷಕ (preservative) ಗಳಿಂದ ಅಲ್ಲದೇ ಆಸಿಡ್ ನ್ಯೂಟ್ರಿಲೈಜರ್ (acid neutralisers) ನಂತಹ ಹಲವು ರಾಸಾಯನಿಕ ವಸ್ತುಗಳಿಂದ ಕೂಡಿರುತ್ತದೆ ಹಾಗಾಗಿ ಇವು ರಕ್ತವನ್ನು ಕಲುಷಿತಗೊಳಿಸಿ ಚರ್ಮ ರೋಗ, ಆರ್ಥ್ರೈಟಿಸ್, ಸಣ್ಣ ವಯಸ್ಸಿನಲ್ಲೇ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಮಾನಸಿಕ ಪರಿಣಾಮಗಳು:

ನಿರಂತರವಾಗಿ ರೇಡಿ ಟು ಈಟ್ ಆಹಾರಗಳನ್ನು ಸೇವಿಸಿದರೆ ಉದಾಸೀನ, ಖಿನ್ನತೆ, ಬೇಗನೆ ಕೋಪಗೊಳ್ಳುವುದು ಇಂತಹ ಅಡ್ಡ ಪರಿಣಾಮಗಳನ್ನು ಬೀರುತ್ತವೆ.

ಇದನ್ನೂ ಓದಿ: ಸ್ವೀಟ್ ಸೇವನೆ ಮಾಡುವುದಕ್ಕೆ ಸರಿಯಾದ ಸಮಯ ಯಾವುದು ಗೊತ್ತಾ?

ಆಹಾರ ಹೇಗಿರಬೇಕು?

“ಆಹಾರ ಶುದ್ಧೋ ಸತ್ವ ಶುದ್ಧಿಃ” ಅಂದರೆ, ನಾವು ತಿನ್ನುವ ಆಹಾರವು ಶರೀರದಲ್ಲಿ ಸ್ಥೂಲ ಸೂಕ್ಷ್ಮ ಹಾಗೂ ಅತಿಸೂಕ್ಷ್ಮವಾಗಿ ಪರಿಣಾಮ ಹೊಂದುತ್ತವೆ. ಸ್ಥೂಲ ಭಾಗ ಮಲ ರೂಪವಾಗಿ ಹೊರಹಾಕಲ್ಪಡುತ್ತದೆ ಸೂಕ್ಷ್ಮ ಭಾಗ ಶರೀರದ ನಾನಾ ಭಾಗಗಳಿಗೆ ಸೇರಿ ಪೋಷಣೆಯನ್ನು ಬೇಕಾದ ಶಕ್ತಿಯನ್ನು ನೀಡುತ್ತದೆ ಆದರೆ ಅತಿಸೂಕ್ಷ್ಮ ಭಾಗ ನಮ್ಮ ಮನಸ್ಸನ್ನು ಬುದ್ಧಿಯನ್ನು ಪೋಷಿಸುತ್ತದೆ ಇದೇ ಕಾರಣದಿಂದ ಕೃಷ್ಣ ಪರಮಾತ್ಮನು ಮೇಲೆ ಹೇಳಿದ ವಾಕ್ಯವನ್ನು ಉಪದೇಶಿಸಿದ್ದಾನೆ. ತಿನ್ನುವ ಆಹಾರವು ಆಗಷ್ಟೇ ತಯಾರಿಸಿದ್ದಾಗಿರಬೇಕು, ಬಿಸಿ ಬಿಸಿಯಾಗಿ ಸೇವಿಸಬೇಕು, ಅಡಿಗೆಗೆ ಬಳಸಿದ ಪದಾರ್ಥಗಳು ಶುದ್ಧವಾಗಿರಬೇಕು (ಕಲಬೆರಕೆ ಇಲ್ಲದ) ಶರೀರಕ್ಕೆ ಪುಷ್ಟಿ ನೀಡುವ ಪದಾರ್ಥಗಳನ್ನು ಬಳಸಿರಬೇಕು, ಆಹಾರವು ಆರೂ ರಸಗಳಿಂದ ಕೂಡಿರಬೇಕು

ಆಹಾರ ಸೇವನೆ ಕ್ರಮ:

  • ಆಹಾರ ಸೇವಿಸುವ ಮೊದಲು ಹಸಿವಿರಬೇಕು, ಮಲ ಮೂತ್ರಗಳ ವಿಸರ್ಜನೆ ಆಗಿರಬೇಕು
  • ಆಹಾರದ ಇಚ್ಛೆ ಇರಬೇಕು
  • ಒಂದೆಡೆ ಆರಾಮವಾಗಿ ಕುಳಿತು ಆಹಾರ ಸೇವಿಸಬೇಕು
  • ಕೈ ಕಾಲು, ಬಾಯಿಯನ್ನು ತೊಳೆದು ಆಹಾರ ಸೇವಿಸಬೇಕು
  • ಅಡಿಗೆಯನ್ನು ನಿಂದಿಸದೇ ಖುಷಿಯಿಂದ ಸೇವಿಸಬೇಕು
  • ಹಿತವಾಗಿಯೂ ಮಿತವಾಗಿಯೂ ಆಹಾರವನ್ನು ಸೇವಿಸಬೇಕು
  • ಹೀಗೆ ಸೇವಿಸದ ಆಹಾರ ಶರೀರದ ಸಮತೋಲನವನ್ನು ಕಾಪಾಡುತ್ತದೆ ಹಾಗು ಬೇಕಾದ ಪುಷ್ಟಿಯನ್ನು ನೀಡುತ್ತದೆ

ಬದಲಾದ ಕಾಲಮಾನದಲ್ಲಿ ವೇಗದ ಜೀವನದಲ್ಲಿ ಆಹಾರ ಸೇವನೆಗೆ ಸಮಯ ತೆಗೆದಿಡಲು ಸಮಯವಿಲ್ಲದೆ ಓಡಾಡುತ್ತಾ, ವಾಹನದಲ್ಲೇ ಪ್ರಯಾಣಿಸುವಾಗ ಆಹಾರವನ್ನು ತಿನ್ನುವುದರಿಂದ ತಿಂದ ಆಹಾರವು ಸರಿಯಾಗಿ ಪರಿಣಾಮವಾಗದೆ ಹಲವು ರೀತಿಯ ಅನಾರೋಗ್ಯಗಳನ್ನು ಉಂಟುಮಾಡುತ್ತವೆ. ಇಂದು ನಾವು ತಿನ್ನುವ ಆಹಾರವೇ ನಾಳೆ ನಮ್ಮ ಆರೋಗ್ಯದ ಭಾಗವಾಗುವುದು ಎಂಬುದೇ ಸತ್ಯ ಹಾಗಾಗಿ ಆಹಾರದಲ್ಲಿ ಶುಚಿ, ರುಚಿ, ಶ್ರದ್ಧೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ ಸಿನಿಮಾದ ಟಿಕೆಟ್ ದರಕ್ಕೆ ನಟ, ಸಿಎಂ ವಿಜಯ್ ಖಡಕ್ ರೂಲ್ಸ್ – Kannada News | CM Thalapathy Vijay strict rules for Jana Nayagan ticket prices KVN Productions

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ದಳಪತಿ ವಿಜಯ್ (Thalapathy Vijay) ಅವರು ಸದ್ಯ ಉತ್ತಮ ಆಡಳಿತ ನೀಡುತ್ತಿದ್ದಾರೆ. ರಾಜಕೀಯ ಜೀವನದಲ್ಲಿ ವಿಜಯ್ ಯಶಸ್ಸಿನ ಹಾದಿಯಲ್ಲಿದ್ದರೂ, ಅವರ ಕೊನೆಯ ಸಿನಿಮಾ ಮಾತ್ರ ಸದ್ಯ ಏರಿಳಿತಗಳನ್ನು ಕಾಣುತ್ತಿದೆ. ಅವರು ನಟಿಸಿದ ಕೊನೆಯ ಚಿತ್ರ ‘ಜನ ನಾಯಗನ್’ (Jana Nayagan) ಇದೇ ತಿಂಗಳು ತೆರೆಕಾಣಲು ಸಜ್ಜಾಗಿದ್ದು, ಅದಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಈ ಸಿನಿಮಾ ನೋಡಲು ಅಭಿಮಾನಿಗಳು ಎಷ್ಟು ಕಾತುರರಾಗಿದ್ದಾರೋ, ಅದೇ ರೀತಿ ವಿಜಯ್ (CM Vijay) ಅವರನ್ನು ರಾಜಕೀಯವಾಗಿ ಟಾರ್ಗೆಟ್ ಮಾಡಲು ಅವರ ಎದುರಾಳಿಗಳು ಕೂಡ ಅಷ್ಟೇ ಕಾಯುತ್ತಿದ್ದಾರೆ.

ಬ್ಲ್ಯಾಕ್ ಟಿಕೆಟ್‌ ದರಕ್ಕೆ ಬ್ರೇಕ್; ವಿಜಯ್ ಖಡಕ್ ಎಚ್ಚರಿಕೆ:

ಒಂದು ವೇಳೆ ‘ಜನ ನಾಯಗನ್’ ಸಿನಿಮಾದ ಟಿಕೆಟ್‌ಗಳು ಬ್ಲ್ಯಾಕ್‌ನಲ್ಲಿ ಮಾರಾಟವಾದರೆ ಅಥವಾ ಥಿಯೇಟರ್‌ಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟವಾದರೆ, ವಿಜಯ್ ಅವರು ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಬೇಕಾಗುತ್ತದೆ. ಈ ಸೂಕ್ಷ್ಮ ಪರಿಸ್ಥಿತಿಯನ್ನು ಮೊದಲೇ ಅರಿತಿರುವ ಸಿಎಂ ವಿಜಯ್, ಈಗಿನಿಂದಲೇ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ತಪ್ಪು ಮಾಡಿದರೆ ಥಿಯೇಟರ್‌ಗಳ ಪರವಾನಗಿ ರದ್ದು:

ಚಿತ್ರಮಂದಿರಗಳ ಮೇಲೆ ನಿರಂತರ ದಾಳಿ ನಡೆಸುವಂತೆ ತಮಿಳುನಾಡು ಸರ್ಕಾರವು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎನ್ನಲಾಗಿದೆ. ಒಂದು ವೇಳೆ ಯಾವುದೇ ಚಿತ್ರಮಂದಿರದಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಮಾಡುವುದು ಕಂಡುಬಂದರೆ, ಅಂತಹ ಥಿಯೇಟರ್‌ಗಳ ಪರವಾನಗಿ ರದ್ದುಗೊಳಿಸಲು ಆದೇಶಿಸಲಾಗಿದೆ.

ಎದುರಾಳಿಗಳ ಕಣ್ಣು ದಳಪತಿ ವಿಜಯ್ ಮೇಲೆ:

ವಿಜಯ್ ಅವರ ರಾಜಕೀಯ ವಿರೋಧಿಗಳು ಹಾಗೂ ಡಿಎಂಕೆ ಬೆಂಬಲಿಗರು ಅವರು ಮಾಡುವ ಒಂದು ಸಣ್ಣ ತಪ್ಪಿಗಾಗಿ ಕಾಯುತ್ತಿದ್ದಾರೆ. ಸಿನಿಮಾದ ಯಶಸ್ಸು-ಅಪಜಯಗಳ ಮಾತು ಹಾಗಿರಲಿ, ಟಿಕೆಟ್ ದರದ ವಿಚಾರದಲ್ಲಿ ಏನಾದರೂ ಎಡವಟ್ಟಾದರೆ ಅದು ನೇರವಾಗಿ ಸಿಎಂ ವಿಜಯ್ ಅವರ ರಾಜಕೀಯ ಇಮೇಜ್‌ಗೆ ಧಕ್ಕೆ ತರಲಿದೆ. ಹೀಗಾಗಿ ಅವರು ತೀವ್ರ ಜಾಗರೂಕರಾಗಿದ್ದಾರೆ.

ಇದನ್ನೂ ಓದಿ: ‘ಜನ ನಾಯಗನ್’ ನಿರ್ಮಾಪಕರಿಗೆ ಪ್ರಮುಖ ಜವಾಬ್ದಾರಿ ವಹಿಸಿದ ಸಿಎಂ ವಿಜಯ್

ಚಿತ್ರದ ಬಿಡುಗಡೆಯ ಪ್ರತಿಯೊಂದು ಜವಾಬ್ದಾರಿಯನ್ನು ಈ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಪ್ರಖ್ಯಾತ ‘ಕೆವಿಎನ್ ಪ್ರೊಡಕ್ಷನ್ಸ್’ ಹೊತ್ತುಕೊಂಡಿದೆ. ಬಿಡುಗಡೆಯ ಸಂದರ್ಭದಲ್ಲಿ ಯಾವುದೇ ನೆಗೆಟಿವ್ ಪ್ರಚಾರ ಸಿಗದಂತೆ ಮತ್ತು ವಿಜಯ್ ಹೆಸರಿಗೆ ಮಸಿ ಬಳಿಯದಂತೆ ನೋಡಿಕೊಳ್ಳುವ ದೊಡ್ಡ ಜವಾಬ್ದಾರಿ ಈಗ ಕೆವಿಎನ್ ಪ್ರೊಡಕ್ಷನ್ಸ್ ಹೆಗಲ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎಥನಾಲ್ ಮಿಶ್ರಿತ ಪೆಟ್ರೋಲ್‌ನಿಂದ ಇಂಜಿನ್​ಗೆ ಹಾನಿಯಾಗದು; ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ – Kannada News | Union Petroleum Minister Hardeep Puri rejects ethanol E20 Row says no evidence of engine problems

ನವದೆಹಲಿ, ಜುಲೈ 7: ಎಥನಾಲ್ (Ethanol) ಮಿಶ್ರಿತ ಪೆಟ್ರೋಲ್ (E20) ವಾಹನಗಳ ಇಂಜಿನ್‌ಗಳಿಗೆ ಹಾನಿ ಉಂಟುಮಾಡುತ್ತದೆ ಎಂಬ ಇತ್ತೀಚಿನ ವಿವಾದವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ತಳ್ಳಿಹಾಕಿದ್ದಾರೆ. ಈ ಆತಂಕಗಳು ಕೇವಲ “ತಪ್ಪು ವರದಿ ಮತ್ತು ತಪ್ಪು ವ್ಯಾಖ್ಯಾನ”ಗಳಿಂದ ಸೃಷ್ಟಿಯಾಗಿದೆಯೇ ಹೊರತು ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. E20 ಪೆಟ್ರೋಲ್ ಇಂಜಿನ್ ಅನ್ನು ಹಾಳುಮಾಡುತ್ತದೆ, ಕೀಟಗಳನ್ನು ಆಕರ್ಷಿಸುತ್ತದೆ ಮತ್ತು ಮೈಲೇಜ್ ಕಡಿಮೆ ಮಾಡುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಯಾವುದೇ ಪುರಾವೆಗಳಿಲ್ಲ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ.

ಇ20 ಪೆಟ್ರೋಲ್ ಬಳಕೆಗೆ ಬಂದು ಈಗಾಗಲೇ 1 ವರ್ಷಕ್ಕೂ ಹೆಚ್ಚು ಕಾಲ ಕಳೆದಿದೆ. ಹೀಗಿರುವಾಗ ಈಗ ಏಕೆ ಈ ವಿವಾದವನ್ನು ಎಬ್ಬಿಸಲಾಗುತ್ತಿದೆ? ಎಂದು ಹರ್ದೀಪ್ ಸಿಂಗ್ ಪುರಿ ಪ್ರಶ್ನಿಸಿದ್ದಾರೆ. “ಪ್ರಸ್ತುತ ದೇಶದ ರಸ್ತೆಗಳಲ್ಲಿ 20 ಕೋಟಿ ದ್ವಿಚಕ್ರ ವಾಹನಗಳು ಮತ್ತು 20 ಲಕ್ಷ 4 ಚಕ್ರಗಳ ವಾಹನಗಳು ಇದೇ ಇ20 ಇಂಧನವನ್ನು ಬಳಸುತ್ತಿವೆ. ವಾಹನ ತಯಾರಕರು ಮತ್ತು ವಾಹನಗಳ ಸರ್ವಿಸ್ ಮಾಡುವ ಸಿಬ್ಬಂದಿ ಎಲ್ಲರೂ ಇದರಿಂದ ಯಾವುದೇ ತೊಂದರೆಯಾಗುತ್ತಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ ದಿಢೀರನೆ ಈ ಅಪಪ್ರಚಾರ ಏಕೆ?” ಎಂದು ಅವರು ಕೇಳಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್ ಬೆಲೆ ಇಳಿಯುತ್ತಾ? ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಸುಂಕ ರದ್ದುಗೊಳಿಸಿರುವುದು ಯಾರಿಗೆ ಲಾಭ?

ಅಲ್ಲದೆ, ಕಳೆದ ಮೂರೂವರೆ ವರ್ಷಗಳಿಂದ ಭಾರತದಲ್ಲಿ ಇ15 (E15) ಇಂಧನವನ್ನು ಯಾವುದೇ ಪ್ರಮುಖ ಸಮಸ್ಯೆಗಳಿಲ್ಲದೆ ಬಳಸಲಾಗುತ್ತಿದೆ ಎಂಬುದನ್ನು ಅವರು ನೆನಪಿಸಿದ್ದಾರೆ.

ಇ25 ಬಗ್ಗೆ ಇನ್ನೂ ಯಾವುದೇ ನಿರ್ಧಾರವಿಲ್ಲ:

ಭಾರತ ಸರ್ಕಾರವು ಇ25 ಇಂಧನ (25% ಎಥನಾಲ್ ಮಿಶ್ರಣ) ಜಾರಿಗೆ ತರಲು ಮುಂದಾಗಿದೆ ಎಂಬ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ ಸಚಿವ ಹರ್ದೀಪ್ ಸಿಂಗ್ ಪುರಿ, ಅಂತಹ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಾವು ಇ25 ಇಂಧನದ ಕುರಿತು ಕೇವಲ ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. ಈ ಪರೀಕ್ಷೆಗಳು ಮುಗಿಯಲು ಸಮಯ ಹಿಡಿಯುತ್ತದೆ. ವರದಿ ಬಂದ ನಂತರ ನಾವು ಅದನ್ನು ಮೌಲ್ಯಮಾಪನ ಮಾಡುತ್ತೇವೆ. ನಂತರ ವಾಹನ ತಯಾರಕರು ಮತ್ತು ಸಂಬಂಧಪಟ್ಟ ಪಾಲುದಾರರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ” ಎಂದಿದ್ದಾರೆ.

ಇದನ್ನೂ ಓದಿ: ಕಮರ್ಷಿಯಲ್ ಅಡುಗೆ ಅನಿಲವಾಗಿ ಎಥನಾಲ್ ಬಳಕೆ? ಎಲ್​ಪಿಜಿ ಅವಲಂಬನೆ ತಗ್ಗಿಸಲು ಸರ್ಕಾರದಿಂದ ಹೊಸ ಮಾರ್ಗೋಪಾಯ

ಏನಿದು ಎಥನಾಲ್ ವಿವಾದ?:

ಟ್ವಿಟರ್, ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಎಥನಾಲ್ ಮಿಶ್ರಿತ ಪೆಟ್ರೋಲ್‌ನಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತಿದೆ ಮತ್ತು ಇಂಜಿನ್ ಬಾಳಿಕೆ ಕಡಿಮೆಯಾಗುತ್ತಿದೆ ಎಂದು ಪೋಸ್ಟ್ ಮಾಡಲಾರಂಭಿಸಿದ ಬಳಿಕ ಈ ವಿವಾದ ಶುರುವಾಗಿತ್ತು. ಆದರೆ, ಕೇಂದ್ರ ಸರ್ಕಾರ ಈ ವಾದವನ್ನು ಸಂಪೂರ್ಣವಾಗಿ ನಿರಾಕರಿಸಿದೆ. ಇ20 ಇಂಧನಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾದ ಹೊಸ ವಾಹನಗಳಿಗೆ ಇದರಿಂದ ಯಾವುದೇ ಅಪಾಯವಿಲ್ಲ ಎಂದು ಕಾರು ಮತ್ತು ಬೈಕ್ ತಯಾರಿಕಾ ಕಂಪನಿಗಳು ಈಗಾಗಲೇ ಸ್ಪಷ್ಟಪಡಿಸಿವೆ.

ಕಚ್ಚಾ ತೈಲದ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ವಾಯು ಮಾಲಿನ್ಯ ತಡೆಗಟ್ಟಲು ಮತ್ತು ಕಬ್ಬು ಹಾಗೂ ಮೆಕ್ಕೆಜೋಳ ಬೆಳೆಯುವ ರೈತರಿಗೆ ಬೆಂಬಲ ನೀಡಲು ಸರ್ಕಾರ ಎಥನಾಲ್ ಮಿಶ್ರಣವನ್ನು ಉತ್ತೇಜಿಸುತ್ತಿದೆ. ಏಪ್ರಿಲ್ 1, 2026ರಿಂದ ಜಾರಿಗೆ ಬಂದಿರುವ ನಿಯಮದಂತೆ, ದೇಶಾದ್ಯಂತ ಕನಿಷ್ಠ 95 ರಿಸರ್ಚ್ ಆಕ್ಟೇನ್ ಸಂಖ್ಯೆ (RON) ಹೊಂದಿರುವ ಮತ್ತು ಶೇ. 20ರಷ್ಟು ಎಥನಾಲ್ ಮಿಶ್ರಿತ (E20) ಪೆಟ್ರೋಲ್ ಅನ್ನು ಕಡ್ಡಾಯಗೊಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಿರಾಡಿ ಘಾಟ್‌ನಲ್ಲಿ ನಿಯಂತ್ರಣ ತಪ್ಪಿ ಡಾಂಬರ್ ಟ್ಯಾಂಕರ್ ಪಲ್ಟಿ: ರಸ್ತೆಯಲ್ಲೇ ಹರಿದ ಡಾಂಬರ್ – Kannada News | Hassans Shiradi Ghat Witness Hazardous Bitumen Spill After Tanker Accident

ಹಾಸನ, ಜು.7: ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆ ಮುಂದುವರಿದಿದ್ದು, ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ನಿರಂತರ ಮಳೆ ಮತ್ತು ರಸ್ತೆಯಲ್ಲಿ ಆಯಿಲ್​ ತೇವ ಇರುವ ಪರಿಣಾಮದಿಂದ ಡಾಂಬರ್ ಸಾಗಿಸುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾಗಿದೆ. ಟ್ಯಾಂಕರ್ ಪಲ್ಟಿಯಾದ ರಭಸಕ್ಕೆ ಅದರ ವಾಲ್ವ್ ತೆರೆದುಕೊಂಡಿದ್ದು, ಡಾಂಬರ್ ರಸ್ತೆಯ ಮೇಲೆ ಹರಿಯುತ್ತಿದೆ. ಇದು ರಸ್ತೆಯನ್ನು ಆವರಿಸಿಕೊಳ್ಳುತ್ತಿದ್ದು, ದ್ವಿಚಕ್ರ ವಾಹನ ಸವಾರರಿಗೆ ತೀವ್ರ ಅಪಾಯವನ್ನುಂಟು ಮಾಡಿತ್ತು. ಡಾಂಬರ್ ಮೇಲೆ ವಾಹನಗಳು ಹೋದರೆ ಸ್ಕಿಡ್ ಆಗಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಈ ಅಪಘಾತ ನಡೆದು ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಕಳೆದಿದ್ದರೂ, ಡಾಂಬರ್ ಸೋರಿಕೆಯನ್ನು ತಡೆಯಲು ಅಥವಾ ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿರಲಿಲ್ಲ. ಕೂಡಲೇ ತೆರವುಗೊಳಿಸದಿದ್ದರೆ, ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಮತ್ತಷ್ಟು ಅಡಚಣೆ ಉಂಟಾಗಿ ಭಾರೀ ಅವಘಡಗಳಿಗೆ ಕಾರಣವಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು. ಇದೇ ಮಾರ್ಗದಲ್ಲಿ ಸುಮಾರು ಐದು ಕಿಲೋಮೀಟರ್ ಮುಂದೆಯೂ ಮತ್ತೊಂದು ಟ್ಯಾಂಕರ್ ರಸ್ತೆ ಬದಿಗೆ ಇಳಿದಿರುವುದು, ಘಾಟ್ ರಸ್ತೆಯು ಎಷ್ಟು ಅಪಾಯಕಾರಿಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ವಪಕ್ಷೀಯರೇ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ರು: ಬೇಸರ ಹೊರಹಾಕಿದ ವಿಜಯೇಂದ್ರ – Kannada News | Karnataka BJP President BY Vijayendra Express Un happy On Some His Own Party Leaders

ದಾವಣಗೆರೆ, (ಜುಲೈ 07): ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ (Cross Voting) ಮಾಡುವ ಮೂಲಕ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರ ಪಕ್ಷದಲ್ಲೇ ನಡೆಯಿತು. ಈ ಆಂತರಿಕ ಕಚ್ಚಾಟದಿಂದ ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಮತದಾರರಿಗೆ ತಲುಪಿಸುವಲ್ಲಿ ವಿಫಲರಾಗುತ್ತಿದ್ದೇವೆ ಎಂದು ಸ್ವತಃ ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರು ಬಹಿರಂಗವಾಗಿಯೇ ಬೇಸರ ಹೊರಹಾಕಿದ್ದಾರೆ. ಇದರೊಂದಿಗ ದಾವಣಗೆರೆಯಲ್ಲಿ ಇಂದು (ಜುಲೈ 07) ಆಯೋಜಿಸಿದ್ದ ವಿಧಾನಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ವಿಜಯೇಂದ್ರ ಪಕ್ಷದಲ್ಲಿನ ಆಂತರಿಕ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.

ನಮ್ಮವರೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸ ಮಾಡಿದ್ರು

ಇದೇ ವೇಳೆ ವಿಜಯೇಂದ್ರ ಅವರು,  ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರ ಅಡ್ಡಮತದಾನ ವಿಚಾರವನ್ನು ಪ್ರಸ್ತಾಪಿಸಿದ್ದು, ಸ್ವಪಕ್ಷೀಯರೇ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸ ಮಾಡಿದರು. ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಸ್ನೇಹಿತರು ಅಂತಾರೆ, ಬಿ.ವೈ.ವಿಜಯೇಂದ್ರ, ಡಿ.ಕೆ.ಶಿವಕುಮಾರ್ ಸ್ನೇಹಿತರು ಅಂತಾರೆ. ಹಳ್ಳಿ ಹಳ್ಳಿ ಸುತ್ತಿ ಪಕ್ಷ ಕಟ್ಟಿ ಬೆಳೆಸಿದ ಯಡಿಯೂರಪ್ಪ ಬಗ್ಗೆ ಈ ರೀತಿ ಹೇಳುತ್ತಾರೆ. ಯಡಿಯೂರಪ್ಪನವರ ವಿರುದ್ಧ ನಮ್ಮ ಪಕ್ಷದವರೇ ಮಾತಾಡುತ್ತಾರೆ ಎಂದು ಎಂದು ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ: ಸಂಸದ ಸುಧಾಕರ್, ಶಾಸಕ ವಿಶ್ವನಾಥ್ ಸಂಧಾನ: ಇಬ್ಬರಿಗೆ ಕೊಟ್ಟ ಖಡಕ್ ಸೂಚನೆಗಳೇನು?

ನಾನು ಡಿ.ಕೆ.ಶಿವಕುಮಾರ್ ಸ್ನೇಹಿತ ಎಂದು ಸುದ್ದಿ

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಂಜುನಾಥ್​ಗೆ ಬಿಜೆಪಿ ಟಿಕೆಟ್ ವಿಚಾರದ ಬಗ್ಗೆ ಮಾತನಾಡಿದ ವಿಜಯೇಂದ್ರ, ಡಿ.ಕೆ.ಸುರೇಶ್ ವಿರುದ್ಧ ಡಾ.ಮಂಜುನಾಥ್​ಗೆ ಟಿಕೆಟ್ ಕೊಟ್ಟಿದ್ದಕ್ಕೆ ಸುದ್ದಿ. ನಾನು ಡಿ.ಕೆ.ಶಿವಕುಮಾರ್ ಸ್ನೇಹಿತ ಎಂದು ಸುದ್ದಿ ಮಾಡಿದ್ರು. ನಾನು ಇಲ್ಲದಿದ್ದರೆ ಪಕ್ಷವೇ ನಡೆಯಲ್ಲ ಎಂಬ ಭ್ರಮೆ ಇಟ್ಕೊಳ್ಳಬೇಡಿ. ನನ್ನಿಂದಲೇ ಬಿಜೆಪಿ ಹುಟ್ಟಿದೆ ಎಂಬ ಮನೋಭಾವವಿದ್ರೆ ಬಿಟ್ಟು ಬಿಡಿ. ಈಗ ವೇದಿಕೆ ಮೇಲಿರುವ ನಾಯಕರ ಹೆಸರು ಹೇಳಿದ್ರೆ ಚಪ್ಪಾಳೆ ತಟ್ಟಲ್ಲ. ಸಮಾರಂಭಕ್ಕೆ ಬರುವ ನಮ್ಮ ಕಾರ್ಯಕರ್ತರೇ ಚಪ್ಪಾಳೆ ತಟ್ಟುವುದಿಲ್ಲ. ಇದೇ ರೀತಿಯಾದ್ರೆ ಯಾರೂ ಮಾತನಾಡಿಸದಂತಹ ಸ್ಥಿತಿ ಬರಬಹುದು. ಬಿಜೆಪಿ ನಾಯಕರು ದಾರಿಯಲ್ಲಿ ಹೋಗುತ್ತಿದ್ರೆ ಮಾತನಾಡಿಸದ ಸ್ಥಿತಿ ಬರಬಹುದು ಎಂದರು.

ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತಾ ಬಂದಿದೆ. ಈಗಲೂ ಗೆಲ್ಲಬೇಕು. ಪರಿಷತ್​ನ ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ 8 ಬಾರಿ ಗೆದ್ದಿದೆ. ಈ ಬಾರಿಯೂ ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕಿದೆ ಎಂದು ಹೇಳಿದರು.

ಖುದ್ದು ವಿಜಯೇಂದ್ರ ಅವರೇ ಆಂತರಿಕ ಕಚ್ಚಾಟದಿಂದ ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಮತದಾರರಿಗೆ ತಲುಪಿಸುವಲ್ಲಿ ವಿಫಲರಾಗುತ್ತಿದ್ದೇವೆ ಎಂದು ಹೇಳಿದ್ದು, ಭಾರೀ ಸಂಚಲನ ಮೂಡಿಸಿದೆ. ಅಲ್ಲದೇ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ಶುರುವಾಯ್ತಾ ‘ಕರಾವಳಿ’ ವಿವಾದ? – Kannada News | Karavali Movie Controversy Prajwal Devaraj Remuneration issue Gurudatha Ganiga clarification

ಪ್ರಜ್ವಲ್ ದೇವರಾಜ್ ಅವರು ನಟಿಸಿರುವ ‘ಕರಾವಳಿ’ (Karavali) ಸಿನಿಮಾ ಸದ್ಯದಲ್ಲೇ ಬಿಡುಗಡೆ ಆಗಲಿದೆ. ಈ ಸಿನಿಮಾಗೆ ಗುರುದತ್ ಗಾಣಿಗ ಅವರು ನಿರ್ದೇಶನ ಮಾಡಿರುವುದು ಮಾತ್ರವಲ್ಲದೇ ನಿರ್ಮಾಣ ಕೂಡ ಮಾಡಿದ್ದಾರೆ. ಈ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಅವರು ಡಬ್ಬಿಂಗ್ ಮಾಡಿಲ್ಲ ಎಂಬುದು ಗೊತ್ತಾಗಿದೆ. ಟ್ರೇಲರ್​ನಲ್ಲಿ ಕೂಡ ಪ್ರಜ್ವಲ್ ಅವರ ಧ್ವನಿ ಕೇಳಿಸಿಲ್ಲ. ಸಂಭಾವನೆ ಬಾಕಿ ಉಳಿಸಿಕೊಂಡ ಕಾರಣಕ್ಕೆ ಪ್ರಜ್ವಲ್ ಅವರು ಡಬ್ಬಿಂಗ್ ಮಾಡಿಲ್ಲವೇ ಎಂಬ ಅನುಮಾನ ಮೂಡಿದೆ. ಆ ಬಗ್ಗೆ ನಿರ್ದೇಶಕ, ನಿರ್ಮಾಪಕ ಗುರುದತ್ ಗಾಣಿಗ ಅವರು ಸ್ಪಷ್ಟನೆ ನೀಡಿದ್ದಾರೆ. ‘ಪ್ರಜ್ವಲ್ ಅವರಿಗೆ 1 ಕೋಟಿ 25 ಲಕ್ಷ ರೂಪಾಯಿ ಸಂಭಾವನೆ ಮಾತನಾಡಿದ್ದೆವು. ಈಗಾಗಲೇ ಒಂದು ಕೋಟಿ ರೂಪಾಯಿ ಕೊಟ್ಟಿದ್ದೇವೆ. ಇನ್ನೂ 25 ಲಕ್ಷ ರೂಪಾಯಿ ಬಾಕಿ ಇದೆ. ಅದನ್ನು ಕೊಡುತ್ತೇವೆ ಅಂತ ಮಾತನಾಡಿದ್ದೇವೆ. ಅವರು ಕೂಡ ಸರಿ ಅಂತ ಒಪ್ಪಿಕೊಂಡಿದ್ದಾರೆ. ಆದರೆ ಹೊಸ ಸಮಸ್ಯೆ ಯಾಕೆ ಶುರುವಾಗಿದೆ ಎಂಬುದು ಗೊತ್ತಿಲ್ಲ. ಟ್ರೇಲರ್ ಆದಮೇಲೆ ಡಬ್ಬಿಂಗ್ ಮಾಡಿ, ಉಳಿದಿದ್ದನ್ನು ನಾಲ್ಕು ಗೋಡೆ ನಡುವೆ ಕೂತು ಮಾತನಾಡಿ ಬಗೆಹರಿಸಿಕೊಳ್ಳೋಣ ಅಂತ ಅವರಿಗೆ ಹೇಳಿದ್ದೇವೆ. ಆದರೂ ಅವರ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ’ ಎಂದು ಗುರುದತ್ ಗಾಣಿಗ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಡಯಾಬಿಟೀಸ್‌ ಇರುವವರಲ್ಲಿ ಹಲ್ಲು ಮತ್ತು ಒಸಡುಗಳಲ್ಲಿ ರಕ್ತಸ್ರಾವ ಆಗುವುದಕ್ಕೆ ಕಾರಣವೇನು? ಇಲ್ಲಿದೆ ತಜ್ಞರ ಸಲಹೆ – Kannada News | Diabetes And Oral Health: Why Your Gums Bleed More Often

ಡಯಾಬಿಟೀಸ್‌ ಕೇವಲ ರಕ್ತದಲ್ಲಿನ ಸಕ್ಕರೆ ಮಟ್ಟವನ್ನೇ ಹೆಚ್ಚಿಸುವ ಕಾಯಿಲೆ ಮಾತ್ರವಲ್ಲ, ಇದು ಹೃದಯ, ಮೂತ್ರಪಿಂಡ, ಕಣ್ಣುಗಳ ಜೊತೆಗೆ ಬಾಯಿ, ಹಲ್ಲು ಮತ್ತು ಹಲ್ಲಿನ ದವಡೆಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರದಿದ್ದರೆ ಕೆಲವರಿಗೆ ಹಲ್ಲು ಮತ್ತು ಒಸಡುಗಳಲ್ಲಿ ರಕ್ತಸ್ರಾವದ ಸಮಸ್ಯೆ, ಊತ, ಬಾಯಿಯ ದುರ್ವಾಸನೆ ಹಾಗೂ ಹಲ್ಲುಗಳು ಸಡಿಲವಾಗುವ ಸಮಸ್ಯೆಗಳು ಕಾಣಿಸಬಹುದು. ಹಾಗಾದರೆ ಈ ರೀತಿ ಆಗುವುದಕ್ಕೆ ಕಾರಣವೇನು, ಇದರಿಂದ ರಕ್ಷಿಸಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ತಜ್ಞರ ಪ್ರಕಾರ, ಡಯಾಬಿಟೀಸ್‌ನಿಂದ ದೇಹದ ರೋಗನಿರೋಧಕ ಶಕ್ತಿ ದುರ್ಬಲವಾಗುತ್ತದೆ. ಇದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳ ವಿರುದ್ಧ ದೇಹ ಸಮರ್ಪಕವಾಗಿ ಹೋರಾಡಲು ಸಾಧ್ಯವಾಗುವುದಿಲ್ಲ. ಜೊತೆಗೆ ಹೆಚ್ಚಿನ ಗ್ಲೂಕೋಸ್ ಲಾಲಾರಸದಲ್ಲೂ ಸೇರಿ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಪರಿಣಾಮವಾಗಿ ಪ್ಲಾಕ್‌ ರೂಪುಗೊಂಡು ಒಸಡಿನಲ್ಲಿ ಸೋಂಕು ಉಂಟಾಗುವ ಅಪಾಯ ಹೆಚ್ಚುತ್ತದೆ. ಹೆಚ್ಚಿನ ಸಕ್ಕರೆ ಮಟ್ಟ ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುವುದರ ಜೊತೆಗೆ ಹಲ್ಲಿನ ಮಾಂಸದ ಕೊಲಾಜನ್‌ಗೆ ಹಾನಿ ಉಂಟುಮಾಡಬಹುದು. ಇದರಿಂದ ಹಲ್ಲುಗಳಿಗೆ ಬೆಂಬಲ ನೀಡುವ ಮೂಳೆಗಳೂ ದುರ್ಬಲವಾಗಿ, ಹಲ್ಲಿನ ಮಾಂಸದಿಂದ ರಕ್ತಸ್ರಾವ ಅಥವಾ ಹಲ್ಲು ಬೀಳುವ ಸಮಸ್ಯೆ ಕಾಣಿಸಬಹುದು.

ಇದನ್ನೂ ಓದಿ: ಜಿಮ್ ಬೇಡ! ಕೇವಲ ಮೆಟ್ಟಿಲು ಹತ್ತಿ ಇಳಿಯುವುದರಿಂದ ಸಿಗುತ್ತೆ 5 ಅದ್ಭುತ ಆರೋಗ್ಯ ಪ್ರಯೋಜನ

ಇದರ ಜೊತೆಗೆ ಡಯಾಬಿಟೀಸ್ ಇರುವವರಿಗೆ ಬಾಯಿ ಒಣಗುವ ಸಮಸ್ಯೆಯೂ ಸಾಮಾನ್ಯ. ಬಾಯಿ ಒಣಗಿದಾಗ ಬ್ಯಾಕ್ಟೀರಿಯಾಗಳು ವೇಗವಾಗಿ ಹೆಚ್ಚಾಗಿ ಹಲ್ಲು ಕುಳಿಯಾಗುವ ಹಾಗೂ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಕಾಯಿಲೆ ಗಂಭೀರವಾಗಬಹುದು.

ಈ ಸಮಸ್ಯೆಯಿಂದ ಹೇಗೆ ರಕ್ಷಿಸಿಕೊಳ್ಳಬಹುದು?

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು ಅತ್ಯಂತ ಮುಖ್ಯ. ದಿನಕ್ಕೆ ಎರಡು ಬಾರಿ ಹಲ್ಲು ತೊಳೆಯುವುದು, ಪ್ರತಿದಿನ ಫ್ಲಾಸ್ ಬಳಸುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಪ್ರತಿ ಆರು ತಿಂಗಳಿಗೊಮ್ಮೆ ದಂತ ತಪಾಸಣೆ ಮಾಡಿಸಿಕೊಳ್ಳುವುದು ಬಾಯಿಯ ಆರೋಗ್ಯ ಕಾಪಾಡಲು ಸಹಕಾರಿ. ಹಲ್ಲಿನ ಮಾಂಸದಿಂದ ಪದೇಪದೇ ರಕ್ತಸ್ರಾವವಾಗುವುದು, ಊತ ಕಡಿಮೆಯಾಗದಿರುವುದು ಅಥವಾ ಹಲ್ಲುಗಳು ಸಡಿಲವಾಗುವುದು ಕಂಡುಬಂದರೆ ನಿರ್ಲಕ್ಷ್ಯ ಮಾಡಬೇಡಿ. ತಕ್ಷಣ ದಂತ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ. ಡಯಾಬಿಟೀಸ್‌ ನಿಯಂತ್ರಣದಲ್ಲಿದ್ದರೆ ಹಲ್ಲು ಮತ್ತು ಒಸಡಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಳೆ ದಕ್ಷಿಣ ಕನ್ನಡ, ಕೊಡಗು ಸೇರಿದಂತೆ ರಾಜ್ಯದ ವಿವಿಧೆಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ – Kannada News | Monsoon Fury: Karnataka Declares School Holidays in Red Alert Districts for Student Safety

ಮಂಗಳೂರು, ಜು.7: ರಾಜ್ಯದಾದ್ಯಂತ ಮುಂಗಾರು ಮಳೆಯ ಆರ್ಭಟ ತೀವ್ರಗೊಂಡಿದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ, ಕೊಡಗು, ಬೆಳಗಾವಿ ಹಾಗೂ ಶಿವಮೊಗ್ಗ ಜಿಲ್ಲೆಯ ಪ್ರಮುಖ ತಾಲೂಕುಗಳ ಶಿಕ್ಷಣ ಸಂಸ್ಥೆಗಳಿಗೆ ನಾಳೆ (ಜುಲೈ 8, ಬುಧವಾರ) ರಜೆ ಘೋಷಿಸಿ ಜಿಲ್ಲಾಡಳಿತಗಳು ಆದೇಶ ಹೊರಡಿಸಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು, ವಸತಿ ಶಾಲೆಗಳು ಮತ್ತು ಪದವಿ ಪೂರ್ವ (ಪಿಯುಸಿ) ಕಾಲೇಜುಗಳಿಗೆ ಜುಲೈ 8ರ ಬುಧವಾರ ಕಡ್ಡಾಯ ರಜೆ ಇರಲಿದೆ. ಈ ರಜೆ ಆದೇಶವನ್ನು ಉಲ್ಲಂಘಿಸಿ ಯಾವುದೇ ಶಿಕ್ಷಣ ಸಂಸ್ಥೆಗಳನ್ನು ನಡೆಸಿದರೆ, ಅಂತಹ ಸಂಸ್ಥೆಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51(b) ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.

ಇನ್ನು ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮಳೆಯ ತೀವ್ರತೆ ಹೆಚ್ಚಾಗಿರುವುದರಿಂದ ಬುಧವಾರ ಜಿಲ್ಲೆಯ ಎಲ್ಲಾ ಅಂಗನವಾಡಿಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಸೋಮಶೇಖರ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಮೂರು ತಾಲೂಕುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ ಜಿಲ್ಲೆಯ ನಿಪ್ಪಾಣಿ, ಖಾನಾಪುರ ಮತ್ತು ಬೆಳಗಾವಿ ತಾಲೂಕುಗಳ ಎಲ್ಲಾ ಅಂಗನವಾಡಿ ಹಾಗೂ ಶಾಲೆಗಳಿಗೆ ನಾಳೆ (ಬುಧವಾರ) ರಜೆ ನೀಡಲಾಗಿದೆ.

ಇದನ್ನೂ ಓದಿ: ರಾಜ್ಯದ ಒಂದೆಡೆ ವರುಣನ ಆರ್ಭಟ: ರಾಯಚೂರು, ಕೊಪ್ಪಳದಲ್ಲಿ ಮಳೆ ಇಲ್ಲದೆ ಕಂಗಾಲಾದ ರೈತರು

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಬುಧವಾರ ಸಾಗರ ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಸಾಗರ ತಹಶೀಲ್ದಾರ್ ಪ್ರತಿಭಾ ಅವರು ಆದೇಶ ಹೊರಡಿಸಿದ್ದಾರೆ.ಮಳೆ ಪೀಡಿತ ಪ್ರದೇಶಗಳಲ್ಲಿ ನದಿ, ಹಳ್ಳ-ಕೊಳ್ಳ ಹಾಗೂ ಜಲಪಾತಗಳ ಬಳಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ತೆರಳದಂತೆ ಹಾಗೂ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಆಯಾ ಜಿಲ್ಲಾಡಳಿತಗಳು ಮನವಿ ಮಾಡಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಮಾಯಣ, ಮಹಾಭಾರತ ಇಂಡೋನೇಷ್ಯಾ- ಭಾರತದ ಬಾಂಧವ್ಯದ ಸ್ತಂಭಗಳು; ಪ್ರಧಾನಿ ಮೋದಿ – Kannada News | India and Indonesia Bond Rooted In Ramayana and Mahabharat PM Modi Highlights in Jakarta Parliament

ಜಕಾರ್ತಾ, ಜುಲೈ 7: ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi in indonesia) ಇಂಡೋನೇಷ್ಯಾ ಪ್ರವಾಸದ ಎರಡನೇ ದಿನವಾದ ಇಂದು ಜಕಾರ್ತಾದಲ್ಲಿ ಅಲ್ಲಿನ ಸಂಸತ್ತನ್ನು ಉದ್ದೇಶಿಸಿ ಐತಿಹಾಸಿಕ ಭಾಷಣ ಮಾಡಿದರು. ಇದಕ್ಕೂ ಮುನ್ನ ಪ್ರಧಾನಿ ಮೋದಿಯವರಿಗೆ ಇಂಡೋನೇಷ್ಯಾದ ಅತ್ಯುನ್ನತ ನಾಗರಿಕ ಗೌರವವಾದ ‘ಬಿಂತಾಂಗ್ ಆದಿಪೂರ್ಣ’ ಪ್ರಶಸ್ತಿಯನ್ನು ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ನೀಡಿ ಗೌರವಿಸಿದರು. ಈ ವೇಳೆ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮತ್ತು ಇಂಡೋನೇಷ್ಯಾ ನಡುವಿನ ಬಾಂಧವ್ಯವು ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ತಳಹದಿಯ ಮೇಲೆಯೂ ನಿರ್ಮಾಣವಾಗಿದೆ ಎಂದು ಬಣ್ಣಿಸಿದರು.

“ಭಾರತ ಮತ್ತು ಇಂಡೋನೇಷ್ಯಾ ಕೇವಲ ಸಮುದ್ರವನ್ನು ಮಾತ್ರ ಹಂಚಿಕೊಂಡಿಲ್ಲ; ನಾವು ಜಂಟಿ ಇತಿಹಾಸವನ್ನೂ ಹಂಚಿಕೊಂಡಿದ್ದೇವೆ. ನಮ್ಮ ಬಾಂಧವ್ಯವು ರಾಮಾಯಣ, ಮಹಾಭಾರತದ ಪರಂಪರೆಯಲ್ಲಿ ಮತ್ತು ನಳಂದಾದ ಪ್ರಾಚೀನ ಜ್ಞಾನದಲ್ಲಿ ಬೇರೂರಿದೆ. ನಾವು ವಯಾಂಗ್ (ತೊಗಲು ಬೊಂಬೆಯಾಟ), ನೃತ್ಯ ಮತ್ತು ಸಂಗೀತದ ಮೂಲಕ ಹಾಗೂ ಬೊರೊಬುದುರ್ ಮತ್ತು ಪ್ರಂಬನನ್‌ನಂತಹ ಭವ್ಯವಾದ ಸ್ಮಾರಕಗಳ ಮೂಲಕ ಪರಸ್ಪರ ಸಂಪರ್ಕ ಹೊಂದಿದ್ದೇವೆ. ಇಂಡೋನೇಷ್ಯಾದ ರಾಷ್ಟ್ರೀಯ ಲಾಂಛನವಾದ ‘ಗರುಡ’ ಮತ್ತು ಒಡಿಶಾದ ‘ಬಾಲಿ ಯಾತ್ರೆ’ಯ ಹಬ್ಬದ ಉತ್ಸಾಹದ ಮೂಲಕ ನಾವು ಒಂದಾಗಿದ್ದೇವೆ” ಎಂದು ಮೋದಿ ಹೇಳಿದರು.

“ನಮ್ಮ ರಾಜಧಾನಿಗಳ ನಡುವೆ ಸಾವಿರಾರು ಕಿಲೋಮೀಟರ್ ದೂರವಿರಬಹುದು. ಆದರೆ, ನಮ್ಮ ನಡುವಿನ ಸಮುದ್ರದ ವಿಸ್ತಾರ ಕೇವಲ 150 ಕಿಲೋಮೀಟರ್ ಮಾತ್ರ. ವಿಶ್ವದ ಅನೇಕ ಭಾಗಗಳಲ್ಲಿ ಸಮುದ್ರಗಳು ವಿಭಜನೆಯನ್ನು ಸೃಷ್ಟಿಸಿದ್ದರೆ, ನಮ್ಮ ನಡುವಿನ ಸಾಗರವು ಯಾವಾಗಲೂ ಭಾರತ ಮತ್ತು ಇಂಡೋನೇಷ್ಯಾವನ್ನು ಒಂದುಗೂಡಿಸಿದೆ” ಎಂದಿದ್ದಾರೆ.

(Video Source: PTI)

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Exit mobile version