Bengaluru Air Quality: ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಮುಕ್ತ ‘ಶುದ್ಧ ಗಾಳಿ’, ನಿಮ್ಮ ನಗರದ AQI ಎಷ್ಟಿದೆ ನೋಡಿ! – Kannada News | Karnataka AQI Update Today: Bengaluru Air Quality Remains Safe and Healthy

ಬೆಂಗಳೂರು, ಜುಲೈ 07: ರಾಜ್ಯದೆಲ್ಲೆಡೆ ಇತ್ತೀಚೆಗೆ ಭಾರಿ ಮಳೆಯಾಗುತ್ತಿರುವ ಕಾರಣ ವಾತಾವರಣದಲ್ಲಿ ಸುಧಾರಣೆ ಬಂದಿದೆ. ಇಂದು ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಅತ್ಯಂತ ತೃಪ್ತಿಕರ ಹಾಗೂ ಆರೋಗ್ಯಕರ ಮಟ್ಟದಲ್ಲಿದೆ. ಪ್ರಸ್ತುತ ರಾಜ್ಯದಲ್ಲಿ ಮುಂಗಾರು ಮಳೆ ಸಕ್ರಿಯವಾಗಿರುವುದರಿಂದ ಮತ್ತು ನಿರಂತರವಾಗಿ ಬೀಸುತ್ತಿರುವ ಬಲವಾದ ಗಾಳಿಯ ಕಾರಣದಿಂದಾಗಿ ಧೂಳಿನ ಕಣಗಳು ಮತ್ತು ಮಾಲಿನ್ಯಕಾರಕಗಳು ಗಾಳಿಯಲ್ಲಿ ಗಣನೀಯವಾಗಿ ಕಡಿಮೆಯಾಗಿವೆ.

ಬೆಂಗಳೂರಿನ ವಾಯು ಗುಣಮಟ್ಟ

ರಾಜಧಾನಿ ಬೆಂಗಳೂರಿನಲ್ಲಿ ಇಂದು ವಾಯು ಗುಣಮಟ್ಟವು ಕೆಲವೆಡೆ ಉತ್ತಮವಾಗಿದ್ದರೆ ಇನ್ನೂ ಕೆಲವೆಡೆ ಸಾಧಾರಣ ಮಟ್ಟದಲ್ಲಿದೆ. ನಗರದ ಸರಾಸರಿ AQI ಪ್ರಸ್ತುತ 52 ರಿಂದ 55ರ ಆಸುಪಾಸಿನಲ್ಲಿ ದಾಖಲಾಗಿದೆ. ಸೆಂಟ್ರಲ್ ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ (CPCB) ನಿಯಂತ್ರಣ ಕೇಂದ್ರಗಳ ಪ್ರಕಾರ, ಹೆಬ್ಬಾಳ, ಜಯನಗರ ಮತ್ತು ಸಿಲ್ಕ್ ಬೋರ್ಡ್‌ನಂತಹ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲೂ ವಾಯು ಮಾಲಿನ್ಯದ ಮಟ್ಟ ನಿಯಂತ್ರಣದಲ್ಲಿದೆ.

ಗಾಳಿಯಲ್ಲಿನ ಪ್ರಮುಖ ಮಾಲಿನ್ಯಕಾರಕಗಳಾದ PM2.5 ಮತ್ತು PM10 ಕಣಗಳ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಈ ಗುಣಮಟ್ಟವು ಸಾಮಾನ್ಯ ದಿನಚರಿ ಹಾಗೂ ಹೊರಾಂಗಣ ಚಟುವಟಿಕೆಗಳಿಗೆ ಅತ್ಯಂತ ಸೂಕ್ತ ಹಾಗೂ ಸುರಕ್ಷಿತವಾಗಿದೆ. ಯಾವುದೇ ರೀತಿಯ ಆರೋಗ್ಯದ ಅಪಾಯಗಳು ಸದ್ಯಕ್ಕೆ ಇಲ್ಲ ಎಂದು ವರದಿ ತಿಳಿಸಿದೆ.

ಕರ್ನಾಟಕದ ಇತರೆ ಪ್ರಮುಖ ನಗರಗಳ ಸ್ಥಿತಿ

ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರೆ ಪ್ರಮುಖ ನಗರಗಳಲ್ಲೂ ಮುಂಗಾರು ಮಳೆಯ ಪ್ರಭಾವದಿಂದಾಗಿ ವಾತಾವರಣವು ಸ್ವಚ್ಛವಾಗಿದೆ. ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಇಲ್ಲಿನ AQI ಅತ್ಯಂತ ಕನಿಷ್ಠ ಮಟ್ಟದಲ್ಲಿದ್ದು (30-40), ‘ಉತ್ತಮ’ ಶ್ರೇಣಿಯಲ್ಲಿದೆ. ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 34 ರಿಂದ 42ರಷ್ಟಿದ್ದು, ಇಲ್ಲಿನ ಗಾಳಿ ಸಂಪೂರ್ಣವಾಗಿ ಶುದ್ಧವಾಗಿದೆ. ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳಿರುವ ಬಳ್ಳಾರಿ ಹಾಗೂ ದಾವಣಗೆರೆ ನಗರಗಳಲ್ಲಿ AQI ಸುಮಾರು 54ರಷ್ಟು ದಾಖಲಾಗಿದ್ದು, ‘ಸಾಧಾರಣ’ಮಟ್ಟವನ್ನು ಕಾಯ್ದುಕೊಂಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಇಂದಿನ ದಿನ ಗಾಳಿಯ ಗುಣಮಟ್ಟದ ದೃಷ್ಟಿಯಿಂದ ಇಡೀ ಕರ್ನಾಟಕಕ್ಕೆ ಅತ್ಯಂತ ಆರೋಗ್ಯಕರ ದಿನವಾಗಿದೆ. ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ಮುಂಜಾನೆಯ ನಡಿಗೆ ಹಾಗೂ ಇತರೆ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಗೆಳತಿ ಗಾಯತ್ರಿ’ ಧಾರಾವಾಹಿ ಮೂಲಕ ವೈಷ್ಣವಿ ಗೌಡ ಕಂಬ್ಯಾಕ್; ಪ್ರೋಮೋ ರಿಲೀಸ್  – Kannada News | Vaishnavi Gowda Gelathi Gayathri Promo Out: Udaya TV New Emotional Serial

‘ಸೀತಾ ರಾಮ’ ಧಾರಾವಾಹಿಯ ಭರ್ಜರಿ ಯಶಸ್ಸಿನ ಬಳಿಕ ವೈಷ್ಣವಿ ಗೌಡ ಈಗ ಉದಯ ಟಿವಿಯ ಹೊಸ ಸೀರಿಯಲ್ ಮೂಲಕ ಕಿರುತೆರೆಗೆ ಮರಳಲು ಸಜ್ಜಾಗಿದ್ದಾರೆ. ಈ ಹೊಸ ಧಾರಾವಾಹಿಯ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು, ಇದೀಗ ಇದರ ಅಧಿಕೃತ ಪ್ರೋಮೋ ಬಿಡುಗಡೆಯಾಗಿದೆ. ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ಈ ಹೊಸ ಧಾರಾವಾಹಿಗೆ ‘ಗೆಳತಿ ಗಾಯತ್ರಿ’ ಎಂದು ಹೆಸರಿಡಲಾಗಿದೆ. ಬಿಡುಗಡೆಯಾಗಿರುವ ಪ್ರೋಮೋದಲ್ಲಿ ವೈಷ್ಣವಿ ಗೌಡ ಅವರು ‘ಪಾರ್ವತಿ’ ಎಂಬ ಶ್ರೀಮಂತ ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬಳಿ ಐಷಾರಾಮಿ ಮನೆ, ಕಾರು, ಗಂಡ ಮತ್ತು ಎಲ್ಲಾ ತರಹದ ಸುಖ-ಸೌಲಭ್ಯಗಳಿವೆ. ಆದರೆ, ಅವರ ಮನಸ್ಸಿನಲ್ಲಿ ಒಂದು ಕೊರಗಿದೆ. ಅದೇ ತಮ್ಮ ಬಾಲ್ಯದ ಆಪ್ತ ಗೆಳತಿ ಗಾಯತ್ರಿಯ ನೆನಪು.

ಪ್ರೋಮೋದ ಹೈಲೈಟ್ಸ್

ಪ್ರೋಮೋದಲ್ಲಿ ಪಾರ್ವತಿ ತನ್ನ ಶಾಲಾ ದಿನಗಳ ಫೋಟೋವನ್ನು ನೋಡುತ್ತಾ ಬಾಲ್ಯದ ಗೆಳತಿಯನ್ನು ನೆನಪಿಸಿಕೊಳ್ಳುತ್ತಾಳೆ. ರನ್ನಿಂಗ್ ರೇಸ್‌ನಲ್ಲಿ ತಾನು ಗೆಲ್ಲಲಿ ಎಂದು ತನಗಾಗಿ ಸೋಲುತ್ತಿದ್ದ ಗೆಳತಿಯ ಅಪಾರ ಪ್ರೀತಿಯನ್ನು ನೆನೆದು ಭಾವುಕಳಾಗುತ್ತಾಳೆ.

ಇದನ್ನೂ ಓದಿ: ‘ಅಗ್ನಿಸಾಕ್ಷಿ’ ರೀಯೂನಿಯಲ್ಲಿ ವೈಷ್ಣವಿ ಗೌಡ ಸಖತ್ ಮಿಂಚಿಂಗ್

‘25 ವರ್ಷಗಳಿಂದ ಕಾಯುತ್ತಿದ್ದೇನೆ ಅಂದರೆ ನಿಮಗೂ ಸ್ವಲ್ಪ ಓವರ್ ಅನಿಸಬಹುದು ಅಲ್ವಾ?’ ಎನ್ನುತ್ತಾ ತನ್ನ ಗೆಳತಿ ಗಾಯತ್ರಿ ಖಂಡಿತ ಮರಳಿ ಬರುತ್ತಾಳೆ ಎಂಬ ಭರವಸೆಯನ್ನು ವ್ಯಕ್ತಪಡಿಸುತ್ತಾಳೆ. ಪ್ರೋಮೋ ನೋಡಿದರೆ ಇದು ಇಬ್ಬರು ಜೀವದ ಗೆಳತಿಯರ ಸುತ್ತ ಸಾಗುವ ಅತ್ಯಂತ ಭಾವನಾತ್ಮಕ ಮತ್ತು ಕುತೂಹಲಕಾರಿ ಕಥೆ ಎಂಬುದು ಸ್ಪಷ್ಟವಾಗುತ್ತದೆ.

ಶೀಘ್ರದಲ್ಲೇ ಪ್ರಸಾರ

‘ಗೆಳತಿ ಗಾಯತ್ರಿನ ಹುಡುಕೊಂಡು ಪಾರ್ವತಿ ಬರ್ತಿದ್ದಾಳೆ’ ಎಂಬ ವಾಯ್ಸ್ ಓವರ್‌ನೊಂದಿಗೆ ಪ್ರೋಮೋ ಮುಕ್ತಾಯವಾಗುತ್ತದೆ. ವೈಷ್ಣವಿ ಗೌಡ ಅವರ ಮುದ್ದಾದ ನಟನೆ ಮತ್ತು ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರಾವಾಹಿ ಶೀಘ್ರದಲ್ಲೇ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ‘ಸೀತಾ ರಾಮ’ ನಂತರ ವೈಷ್ಣವಿ ಅವರನ್ನು ಮತ್ತೆ ತೆರೆಮೇಲೆ ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಹಸುವಿಗೆ ಮೇವು ಹಾಕಲು ಹೋದವನ ಮೇಲೆ ಸಿಂಹ ದಾಳಿ, ತಲೆ ಸವರಿದರೂ ಬಿಡಲಿಲ್ಲ ಕಾಡಿನ ರಾಜ – Kannada News | Gujarat Lion Attack: Viral Video Shows Man Mauled by Lion in Bhavnagar

ಭಾವನಗರ , ಜುಲೈ 07: ಗುಜರಾತ್‌ನ ಭಾವನಗರದಲ್ಲಿ ಸಿಂಹ(Lion)ವೊಂದು ವ್ಯಕ್ತಿಯ ಮೇಲೆ ಭೀಕರವಾಗಿ ದಾಳಿ ಮಾಡಿರುವ ಘಟನೆ ನಡೆದಿದೆ. ಸಿಂಹವು ಆ ವ್ಯಕ್ತಿಯನ್ನು ನೆಲಕ್ಕೆ ತಳ್ಳಿ, ಆತನ ಕಾಲು ಮತ್ತು ಕೈಯನ್ನು ತನ್ನ ದವಡೆ ಹಾಗೂ ಪಂಜಗಳ ನಡುವೆ ಬಿಗಿಯಾಗಿ ಕಚ್ಚಿ ಹಿಡಿದುಕೊಂಡಿರುವ ಭಯಾನಕ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ವ್ಯಕ್ತಿ ಸಿಂಹದ ತಲೆ ಸವರುತ್ತರುವುದು ವಿಡಿಯೋದಲ್ಲಿ ಕಾಣಬಹುದು.

ಘಟನೆ ನಡೆದಿದ್ದು ಹೇಗೆ?
ಭಾವನಗರ ಜಿಲ್ಲೆಯ ಪಲಿತಾನ ತಾಲೂಕಿನ ಗರಾಜಿಯಾ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ 8.30 ರ ಸುಮಾರಿಗೆ ಈ ಘಟನೆ ನಡೆದಿದೆ. ಗ್ರಾಮದ ನಿವಾಸಿ ಕಲುಭಾಯ್ ಬೋಘಾಯ್ ಪರ್ಮಾರ್ ಎಂಬುವವರು ತಮ್ಮ ಮನೆಯ ಸಮೀಪ ಹಸುಗಳನ್ನು ಮೇಯಿಸುತ್ತಿದ್ದಾಗ, ಪೊದೆಗಳ ನಡುವಿನಿಂದ ಬಂದ ಸಿಂಹವೊಂದು ಇದ್ದಕ್ಕಿದ್ದಂತೆ ಅವರ ಮೇಲೆ ಎರಗಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?
ವೈರಲ್ ಆಗಿರುವ ವಿಡಿಯೋದಲ್ಲಿ, ಸಿಂಹವು ಗಂಭೀರವಾಗಿ ಗಾಯಗೊಂಡಿರುವ ಕಲುಭಾಯ್ ಅವರನ್ನು ನೆಲದ ಮೇಲೆ ಮಲಗಿಸಿ ದಾಳಿ ಮಾಡುತ್ತಿರುವುದನ್ನು ಕಾಣಬಹುದು. ಸಿಂಹವು ಅವರ ಒಂದು ಕಾಲನ್ನು ತನ್ನ ಪಂಜಗಳಿಂದ ಬಿಗಿಯಾಗಿ ಹಿಡಿದಿದ್ದರೆ, ಕೈಯನ್ನು ತನ್ನ ದವಡೆಯೊಳಗೆ ಸಿಲುಕಿಸಿಕೊಂಡಿತ್ತು. ಕಲುಭಾಯ್ ಅವರು ತೀವ್ರ ರಕ್ತಸ್ರಾವದಿಂದ ಬಳಲುತ್ತಾ, ಸಿಂಹದ ಹಿಡಿತದಿಂದ ತಪ್ಪಿಸಿಕೊಳ್ಳಲು ಹತಾಶ ಪ್ರಯತ್ನ ನಡೆಸುತ್ತಿರುವುದು ವಿಡಿಯೋದಲ್ಲಿದೆ.

ಮತ್ತಷ್ಟು ಓದಿ: ಯುವತಿ ಮೇಲೆ ಮೊಸಳೆ ಭೀಕರ ದಾಳಿ, ಪ್ರೇಯಸಿಯನ್ನು ಬಚಾವ್ ಮಾಡಲು ಹೋರಾಡಿದ ಪ್ರಿಯಕರ, ಆದ್ರೂ ಉಳೀಲಿಲ್ಲ ಜೀವ

ಪ್ರಾಣ ಪಣಕ್ಕಿಟ್ಟು ರಕ್ಷಿಸಿದ ಗ್ರಾಮಸ್ಥರು
ಘಟನೆಯನ್ನು ಕಂಡು ಗಾಬರಿಗೊಂಡ ಗ್ರಾಮಸ್ಥರು ತಕ್ಷಣವೇ ಸಿಂಹವನ್ನು ಸುತ್ತುವರಿದರು. ಪ್ರಾಣಿಯನ್ನು ಹೆದರಿಸಿ ಓಡಿಸಲು ಎಲ್ಲರೂ ಒಟ್ಟಾಗಿ ಜೋರಾಗಿ ಕೂಗುತ್ತಾ, ಹರಸಾಹಸ ಪಟ್ಟರು. ಗ್ರಾಮಸ್ಥರು ಎಷ್ಟೇ ಕೂಗಾಡಿದರೂ ಸಿಂಹವು ಮಾತ್ರ ಕಲುಭಾಯ್ ಅವರನ್ನು ಬಿಡದೆ ಹಾಗೆಯೇ ಹಿಡಿದುಕೊಂಡಿತ್ತು. ಕೊನೆಗೂ ಗ್ರಾಮಸ್ಥರ ತೀವ್ರ ಪ್ರತಿರೋಧದ ನಂತರ ಸಿಂಹವು ಆತನನ್ನು ಬಿಟ್ಟು ಕಾಡಿನ ಕಡೆಗೆ ಓಡಿದೆ.

ವಿಡಿಯೋ

ಸದ್ಯ ತೀವ್ರವಾಗಿ ಗಾಯಗೊಂಡಿರುವ ಕಲುಭಾಯ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯಿಂದಾಗಿ ಸುತ್ತಮುತ್ತಲಿನ ಹಳ್ಳಿಗಳ ಜನರಲ್ಲಿ ಭೀತಿ ಆವರಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಂದು ಸಣ್ಣ ಪಾತ್ರ, ಇಂದು ಸೂಪರ್​ ಸ್ಟಾರ್; ರಿಷಬ್ ಶೆಟ್ಟಿ ಬದುಕು ಬದಲಿಸಿದ ಸಿನಿಮಾ – Kannada News | Rishab Shetty Birthday: From Lucia Cameo to Kantara Star His Inspiring Success Story

ಇಂದು (ಜುಲೈ 7) ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಅವರ ಜನ್ಮದಿನ. ಈ ವಿಶೇಷ ಸಂದರ್ಭದಲ್ಲಿ ಅವರ ಹಳೆಯ ಸಿನಿಮಾದ ಅಪರೂಪದ ಝಲಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಭರ್ಜರಿ ಯಶಸ್ಸು ಕಂಡ ‘ಕಾಂತಾರ: ಚಾಪ್ಟರ್ 1’ ಚಿತ್ರದ ಮೂಲಕ ಇಡೀ ವಿಶ್ವದ ಗಮನ ಸೆಳೆದಿರುವ ರಿಷಬ್, ಚಿತ್ರರಂಗದಲ್ಲಿ ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಆದರೆ, ಈ ಯಶಸ್ಸಿನ ಹಿಂದೆ ಅವರ ಕಠಿಣ ಪರಿಶ್ರಮವಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಅವರು ನಟಿಸಿದ್ದ 13 ವರ್ಷಗಳ ಹಳೆಯ ಚಿತ್ರದ ವಿಡಿಯೋವೊಂದು ಈಗ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ.

‘ಲೂಸಿಯಾ’ ಚಿತ್ರದಲ್ಲಿ ಪೊಲೀಸ್ ಆಗಿದ್ದ ರಿಷಬ್

ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ರಿಷಬ್ ಶೆಟ್ಟಿ ಆರಂಭದ ದಿನಗಳಲ್ಲಿ ಸಾಕಷ್ಟು ವಿಭಿನ್ನ ಕೆಲಸಗಳನ್ನು ಮಾಡಿದ್ದರು. ನಟನೆಯ ಆಸಕ್ತಿಯಿಂದ ಗಾಂಧಿನಗರಕ್ಕೆ ಬಂದ ಅವರು ಮೊದಲು ‘ತುಘಲಕ್’ ಸಿನಿಮಾದಲ್ಲಿ ಕೆಲಸ ಮಾಡಿದರು. ಆ ಬಳಿಕ, 2013ರಲ್ಲಿ ತೆರೆಕಂಡಿದ್ದ ಸೂಪರ್ ಹಿಟ್ ‘ಲೂಸಿಯಾ’ ಚಿತ್ರದಲ್ಲಿ ಒಂದು ಸಣ್ಣ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಪವನ್ ಕುಮಾರ್ ನಿರ್ದೇಶನದ, ನೀನಾಸಂ ಸತೀಶ್ ನಾಯಕನಾಗಿದ್ದ ಆ ಚಿತ್ರ ಆಗಿನ ಕಾಲಕ್ಕೆ ಹೊಸ ಅಲೆ ಸೃಷ್ಟಿಸಿತ್ತು. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ರಿಷಬ್ ಅವರನ್ನು ಗುರುತಿಸಿರುವ ಅಭಿಮಾನಿಗಳು, ಅವರ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅಂದು ಸಣ್ಣ ಪಾತ್ರ ಮಾಡಿದ್ದ ನಟ, ಇಂದು ಜಾಗತಿಕ ಮಟ್ಟದ ಸ್ಟಾರ್ ಆಗಿ ಬೆಳೆದಿರುವುದನ್ನು ನೋಡಿ ನೆಟ್ಟಿಗರು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.

ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ್ದ ‘ಕಾಂತಾರ: ಚಾಪ್ಟರ್ 1’

ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ಅತ್ಯಂತ ಅದ್ದೂರಿ ಬಜೆಟ್‌ನಲ್ಲಿ ನಿರ್ಮಿಸಿದ್ದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಮೊದಲ ಭಾಗಕ್ಕಿಂತಲೂ ಮಿಗಿಲಾದ ಮೇಕಿಂಗ್ ಹಾಗೂ ರೋಚಕ ಕಥಾಹಂದರ ಹೊಂದಿದ್ದ ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.

ಇದನ್ನೂ ಓದಿ: ‘ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ’; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್ ಶೆಟ್ಟಿ

ಈ ಪ್ರಿಕ್ವೆಲ್ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ನಟನೆ ಮತ್ತು ಭಿನ್ನ ಗೆಟಪ್ ಚಿತ್ರಪ್ರೇಮಿಗಳಿಗೆ ಮೈ ರೋಮಾಂಚನಗೊಳಿಸಿತ್ತು. ನಟಿ ರುಕ್ಮಿಣಿ ವಸಂತ್ ಈ ಚಿತ್ರದಲ್ಲಿ ನಾಯಕಿಯಾಗಿ ರಿಷಬ್‌ಗೆ ಸಾಥ್ ನೀಡಿದ್ದರು. ಅಂದು ಸಣ್ಣ ಪುಟ್ಟ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಬದುಕು ಆರಂಭಿಸಿದ ಕರಾವಳಿಯ ಪ್ರತಿಭೆ, ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸಿನ ಶಿಖರ ಏರಿ ನಿಂತಿರುವುದು ನಿಜಕ್ಕೂ ರೋಮಾಂಚನಕಾರಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಾರ್ಮಾಡಿ ಘಾಟಿಯಲ್ಲಿ ರಣಮಳೆ, ದಟ್ಟ ಮಂಜು, ಫಾಲ್ಸ್​ಗಳ ಅಬ್ಬರ: ವಾಹನ ಸವಾರರ ಪರದಾಟ – Kannada News | Charmadi Ghat Rain Update: Heavy Rainfall and Thick Fog Disrupt Traffic on NH 173, Falls attracts tourists

ಚಿಕ್ಕಮಗಳೂರು, ಜುಲೈ 7: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದ ಮಳೆ ದಾಖಲಾಗಿದೆ. ಪಶ್ಚಿಮ ಘಟ್ಟದ ಈ ಪ್ರದೇಶದಲ್ಲಿ ಒಂದು ಕಡೆ ರಣಮಳೆ ಸುರಿಯುತ್ತಿದ್ದರೆ, ಮತ್ತೊಂದು ಕಡೆ ಇಡೀ ಘಾಟಿ ಪ್ರದೇಶವನ್ನು ದಟ್ಟವಾದ ಮಂಜು ಆವರಿಸಿಕೊಂಡಿದೆ. ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 173 (NH 173) ರ ಈ ಕಿರಿದಾದ ರಸ್ತೆಯಲ್ಲಿ ಮಳೆ ಮತ್ತು ಮಂಜಿನ ಕಾರಣದಿಂದಾಗಿ ಎದುರುಗಡೆ ಬರುವ ವಾಹನಗಳು ಸರಿಯಾಗಿ ಕಾಣಿಸದೆ ಸವಾರರು ಸಂಚಾರ ನಡೆಸಲು ತೀವ್ರ ಕಷ್ಟಪಡುತ್ತಿದ್ದಾರೆ. ಸದ್ಯ ಘಾಟಿ ಇಡೀ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಮಳೆಯಿಂದಾಗಿ ಘಾಟಿ ರಸ್ತೆಯ ಬದಿಗಳಲ್ಲಿ ಜಲಪಾತಗಳು ಸೃಷ್ಟಿಯಾಗಿದ್ದು ಪ್ರಯಾಣಿಕರು ಹಾಗೂ ಪ್ರವಾಸಿಗರನ್ನು ಸೆಳೆಯುತ್ತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ರಾಜ್ಯಾದ್ಯಂತ ರಣಮಳೆಯ ಅಬ್ಬರ! ಉಡುಪಿ, ಉತ್ತರ ಕನ್ನಡಕ್ಕೆ ರೆಡ್ ಅಲರ್ಟ್​ – Kannada News | Karnataka Weather Forecast: Red Alert in Udupi, Uttara Kannada; Heavy Rain Forecast

ಬೆಂಗಳೂರು, ಜುಲೈ 07: ಕರಾವಳಿ ಕರ್ನಾಟಕ ಮತ್ತು ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆ (Monsoon Rain) ಮತ್ತಷ್ಟು ಚುರುಕುಗೊಂಡಿದ್ದು, ಹವಾಮಾನ ಇಲಾಖೆಯು ರಾಜ್ಯದ ಹಲವು ಜಿಲ್ಲೆಗಳಿಗೆ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಿದೆ. ಕರಾವಳಿ ತೀರದಲ್ಲಿ ಗಂಟೆಗೆ 50 ರಿಂದ 60 ಕಿಲೋಮೀಟರ್ ವೇಗದ ಬಲವಾದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ರಾಜ್ಯದ ಒಳನಾಡಿನ ಜಿಲ್ಲೆಗಳಲ್ಲೂ ಸಾಧಾರಣದಿಂದ ಭಾರಿ ಮಳೆಯಾಗಲಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಕೋರಲಾಗಿದೆ.

ಯಾವೆಲ್ಲಾ ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಣೆ?

ಮಳೆಯ ತೀವ್ರತೆಯನ್ನು ಆಧರಿಸಿ ಹವಾಮಾನ ಇಲಾಖೆಯು ಜಿಲ್ಲಾವಾರು ಅಲರ್ಟ್‌ಗಳನ್ನು ಪ್ರಕಟಿಸಿದೆ. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ನೀಡಲಾಗಿದೆ. ಇದರೊಂದಿಗೆ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆಯಿದ್ದು, ಯೆಲ್ಲೋ ಅಲರ್ಟ್ ಜಾರಿಗೊಳಿಸಲಾಗಿದೆ.

ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ವರದಿ

ಕರಾವಳಿಯ ಜಿಲ್ಲೆಗಳಾದ ಉಡುಪಿ ಮತ್ತು ಉತ್ತರ ಕನ್ನಡದ ಕೆಲವು ಕಡೆಗಳಲ್ಲಿ ಗಾಳಿಯ ವೇಗದೊಂದಿಗೆ ಅತ್ಯಂತ ಭಾರಿ ಮಳೆಯಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರದೇಶಗಳಲ್ಲಿ 50-60 ಕಿ.ಮೀ ವೇಗದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಬೆಳಗಾವಿ ಜಿಲ್ಲೆಯಲ್ಲಿ ಅತಿ ಭಾರಿ ಮಳೆಯಾಗಲಿದ್ದರೆ, ಧಾರವಾಡ ಮತ್ತು ಗದಗ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ. ಹಾವೇರಿ, ವಿಜಯಪುರ, ಕಲಬುರಗಿ, ರಾಯಚೂರು, ಬಾಗಲಕೋಟೆ, ಬೀದರ್, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬಲವಾದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

ಇದನ್ನೂ ಓದಿ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರ: ಇಂದು ಎಲ್ಲೆಲ್ಲಿ ಶಾಲೆಗಳಿಗೆ ರಜೆ? ಇಲ್ಲಿದೆ ಪೂರ್ತಿ ವಿವರ

ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ದಾವಣಗೆರೆ, ಬಳ್ಳಾರಿ, ಚಾಮರಾಜನಗರ, ಕೋಲಾರ, ಮಂಡ್ಯ, ರಾಮನಗರ ಮತ್ತು ತುಮಕೂರು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ 40 ರಿಂದ 60 ಕಿ.ಮೀ ವೇಗದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಣ್ಣೀರಿನೊಂದಿಗೆ ವಿಶ್ವಕಪ್​ಗೆ ರೊನಾಲ್ಡೊ ವಿದಾಯ; ಅಪೂರ್ಣವಾಗಿಯೇ ಉಳಿದ ದೊಡ್ಡ ಕನಸು – Kannada News | Cristiano Ronaldo World Cup Dream Ends: Portugal Eliminated by Spain

ವಿಶ್ವ ಫುಟ್‌ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಫಿಪಾ ವಿಶ್ವಕಪ್ ಕನಸು ಕೊನೆಗೊಂಡಿದೆ. ಅಮೆರಿಕದ ಟೆಕ್ಸಾಸ್‌ನಲ್ಲಿ ಸೋಮವಾರ (ಭಾರತೀಯ ಕಾಲಮಾನ ಮುಂಜಾನೆ 1.30) ನಡೆದ ಪ್ರೀ-ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ತಂಡ ಸ್ಪೇನ್ ವಿರುದ್ಧ 1-0 ಗೋಲುಗಳಿಂದ ಸೋಲು ಅನುಭವಿಸಿತು. ಈ ಆಘಾತಕಾರಿ ಸೋಲಿನೊಂದಿಗೆ ಪೋರ್ಚುಗಲ್ ಟೂರ್ನಿಯಿಂದ ಹೊರಬಿದ್ದಿದೆ. ಈ ಮೂಲಕ ರೊನಾಲ್ಡೊ ಅವರ ದೊಡ್ಡ ಕನಸು ಅಪೂರ್ಣವಾಗಿಯೇ ಉಳಿದಂತೆ ಆಗಿದೆ.

ಕೊನೆ ನಿಮಿಷದಲ್ಲಿ ಗೋಲು ಹೊಡೆದ ಸ್ಪೇನ್

90 ನಿಮಿಷಗಳ ಅವಧಿ ಪೂರ್ಣಗೊಂಡಿತ್ತು. ಆ ಬಳಿಕ ಸ್ಟಾಪೇಜ್ ಟೈಮ್ ಅಲ್ಲಿ ಸ್ಪೇನ್‌ನ ಮೈಕೆಲ್ ಮೆರಿನೊ ಏಕೈಕ ಗೋಲು ಬಾರಿಸಿದರು. ಈ ಭರ್ಜರಿ ಗೋಲಿನ ನೆರವಿನಿಂದ ಸ್ಪೇನ್ ಕ್ವಾರ್ಟರ್‌ಫೈನಲ್ ತಲುಪಿತು. ಈ ಮೂಲಕ ಪೋರ್ಚುಗಲ್ ತಂಡ ವಿಶ್ವಕಪ್​​ನಿಂದ ಹೊರಬೀಳುವಂತಾಯಿತು.

ಕಣ್ಣೀರಿಟ್ಟ ರೊನಾಲ್ಡೊ; ಪಂದ್ಯ ಮುಗಿದ ತಕ್ಷಣ ಕ್ರಿಸ್ಟಿಯಾನೋ ರೊನಾಲ್ಡೊ ಮೈದಾನದಲ್ಲೇ ಕಣ್ಣೀರು ಹಾಕಿದರು. ಅಭಿಮಾನಿಗ ಎದುರು ಚಪ್ಪಾಳೆ ತಟ್ಟುತ್ತಾ ಅವರು ಭಾವುಕರಾಗಿ ಮೈದಾನದಿಂದ ಹೊರನಡೆದರು. ಇದು ತಮ್ಮ ಕೊನೆಯ ವಿಶ್ವಕಪ್ ಪಂದ್ಯ ಎಂಬುದನ್ನು ಅವರು ನಂತರ ಖಚಿತಪಡಿಸಿದರು.

‘ವಿಶ್ವಕಪ್‌ನಿಂದ ಈ ರೀತಿ ಹೊರಬೀಳುತ್ತಿರುವುದಕ್ಕೆ ನನಗೆ ಬೇಸರವಿದೆ. ಆದರೆ ನಾನು ನನ್ನ ದೇಶಕ್ಕಾಗಿ ಸರ್ವಸ್ವವನ್ನೂ ನೀಡಿದ್ದೇನೆ. ನಾನು ಯಾವುದೇ ಅಪರಾಧ ಪ್ರಜ್ಞೆ ಇಲ್ಲದೆ, ಮುಕ್ತ ಮನಸ್ಸಿನಿಂದ ಹೊರಹೋಗುತ್ತಿದ್ದೇನೆ’ ಎಂದು ರೊನಾಲ್ಡೊ ಹೇಳಿದರು.

ಅಪೂರ್ಣವಾಗಿಯೇ ಉಳಿದ ದೊಡ್ಡ ಕನಸು

ರೊನಾಲ್ಡೊ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಪೋರ್ಚುಗಲ್ ತಂಡಕ್ಕೆ 2016ರ ಯುರೋ ಕಪ್ ಮತ್ತು ಎರಡು ನೇಷನ್ಸ್ ಲೀಗ್ ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾರೆ. ಆದರೆ ಅವರಿಗೆ ವಿಶ್ವಕಪ್ ಟ್ರೋಫಿ ಗೆಲ್ಲಲು ಸಾಧ್ಯವಾಗುಲ್ಲ. ವಿಶ್ವಕಪ್‌ನಲ್ಲಿ ಅವರು ಆಡಿದ 27 ಪಂದ್ಯಗಳಲ್ಲಿ ಒಟ್ಟು 11 ಗೋಲುಗಳನ್ನು ಬಾರಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On – 7:33 am, Tue, 7 July 26

Source link

ರಾಮ ಮಂದಿರ ದೇಣಿಗೆ ಹಗರಣ: 45 ದಿನಗಳಲ್ಲಿ 70 ಬಾರಿ ಕಳ್ಳತನ, ಟ್ರಸ್ಟಿ ಅನಿಲ್ ಮಿಶ್ರಾ ವಿರುದ್ಧ ತನಿಖೆ – Kannada News | Ram Mandir Donation Scam: 70 Thefts in 45 Days, Trustee Mishra Under SIT Probe

ಅಯೋಧ್ಯೆ, ಜುಲೈ 07: ಅಯೋಧ್ಯೆಯ ರಾಮ ಮಂದಿರ(Ram Mandir)ದ ದೇಣಿಗೆ ದುರುಪಯೋಗ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ತನ್ನ ಪ್ರಾಥಮಿಕ ವರದಿಯಲ್ಲಿ ಅತ್ಯಂತ ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದೆ. ದೇವಾಲಯದಲ್ಲಿ ನಡೆದ ದೇಣಿಗೆ ಕಳ್ಳತನವು ಕೇವಲ ಒಮ್ಮೆಯ ಕೃತ್ಯವಲ್ಲ, ಬದಲಿಗೆ ಅಧಿಕಾರಿಗಳ ಕಣ್ಣು ತಪ್ಪಿಸಿ ದೀರ್ಘಕಾಲದವರೆಗೆ ನಡೆದ ವ್ಯವಸ್ಥಿತ ಹಗರಣ ಎಂದು ಎಸ್‌ಐಟಿ ಪತ್ತೆಹಚ್ಚಿದೆ.

ಇದರ ಬೆನ್ನಲ್ಲೇ, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಡಾ. ಅನಿಲ್ ಮಿಶ್ರಾ ಅವರ ರಾಜೀನಾಮೆಗಳನ್ನು ರಾಮ ಮಂದಿರ ಟ್ರಸ್ಟ್ ಅಧಿಕೃತವಾಗಿ ಅಂಗೀಕರಿಸಿದೆ.

ಎಸ್‌ಐಟಿ ವರದಿಯ ಆಘಾತಕಾರಿ ಅಂಶಗಳು
45 ದಿನಗಳಲ್ಲಿ 70 ಬಾರಿ ಕಳ್ಳತನ: ಕಳೆದ 45 ದಿನಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆರೋಪಿಗಳು ಕನಿಷ್ಠ 70 ಬಾರಿ ಕಳ್ಳತನ ಮಾಡಿರುವುದು ಪತ್ತೆಯಾಗಿದೆ. 2025 ರ ಏಪ್ರಿಲ್-ಮೇ ತಿಂಗಳಿನಿಂದ ಆರಂಭವಾದ ಈ ಕಳ್ಳತನವು 2026 ರ ಜೂನ್ 5 ರವರೆಗೆ ಪ್ರತಿದಿನ ನಿರಂತರವಾಗಿ ನಡೆದಿದೆ ಎಂದು ವರದಿ ಹೇಳಿದೆ.

ಬಟ್ಟೆಯೊಳಗೆ ಹಣದ ಕಳ್ಳಸಾಗಣೆ: ದೇಣಿಗೆ ಎಣಿಕೆ ಕೊಠಡಿಯ ಉಸ್ತುವಾರಿಗಳ ಕಳಪೆ ಮೇಲ್ವಿಚಾರಣೆಯನ್ನು ಆರೋಪಿಗಳು ದುರುಪಯೋಗಪಡಿಸಿಕೊಂಡಿದ್ದಾರೆ. ಬ್ಯಾಂಕ್ ಸಿಬ್ಬಂದಿ ಮತ್ತು ನೌಕರರು ಎಣಿಕೆ ಕೊಠಡಿಯಿಂದ ಹೊರಡುವ ಮುನ್ನ ತಪಾಸಣೆಯ ಲೋಪಗಳನ್ನು ಬಳಸಿ, ಹಣವನ್ನು ತಮ್ಮ ಬಟ್ಟೆಯೊಳಗೆ ಬಚ್ಚಿಟ್ಟುಕೊಂಡು ಹೋಗುತ್ತಿದ್ದರು.

ಲಕ್ಷಾಂತರ ನಗದು ವಶ: ತನಿಖೆ ಆರಂಭವಾಗುವ ಮುನ್ನವೇ ಕೆಲವು ಉದ್ಯೋಗಿಗಳಿಂದ 78.94 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿತ್ತು. ಜೂನ್ 4 ರಂದು ಎಣಿಕೆ ಕೊಠಡಿಯ ಪಕ್ಕದ ಸ್ನಾನಗೃಹದಲ್ಲೂ ಹೆಚ್ಚುವರಿಯಾಗಿ 2.25 ಲಕ್ಷ ರೂ. ನಗದು ಪತ್ತೆಯಾಗಿದೆ.

ಮತ್ತಷ್ಟು ಓದಿ: ರಾಮ ಮಂದಿರ ದೇಣಿಗೆ ವಿವಾದ: ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ಟ್ರಸ್ಟಿ ಡಾ. ಅನಿಲ್ ಮಿಶ್ರಾ ಪಾತ್ರದ ಬಗ್ಗೆ ತನಿಖೆ
ದೇಣಿಗೆ ಎಣಿಕೆ ಪ್ರಕ್ರಿಯೆಯನ್ನು ನಿಯಂತ್ರಿಸುವ ಜವಾಬ್ದಾರಿಯನ್ನು 2024 ರ ಸೆಪ್ಟೆಂಬರ್‌ನಲ್ಲಿ ಡಾ. ಅನಿಲ್ ಮಿಶ್ರಾ ಅವರಿಗೆ ನೀಡಲಾಗಿತ್ತು. ಆದರೆ, ಮಿಶ್ರಾ ಅವರು ಯಾವುದೇ ಅಧಿಕೃತ ನಿಯಮಾವಳಿಗಳನ್ನು (SOP) ಪಾಲಿಸಿರಲಿಲ್ಲ ಎಂದು ಎಸ್‌ಐಟಿ ಹೇಳಿದೆ. ಅವರು ತಮ್ಮಿಷ್ಟದ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಸುಭಾಷ್ ಶ್ರೀವಾಸ್ತವ ಎಂಬುವವರನ್ನು ಎಣಿಕೆ ಕೇಂದ್ರದ ಉಸ್ತುವಾರಿಯಾಗಿಸಿದ್ದರು.

ಮತ್ತೊಂದೆಡೆ, ಚಂಪತ್ ರಾಯ್ ಅವರ ಆಪ್ತ ಸಹಾಯಕ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಯಾವುದೇ ಲಿಖಿತ ಅನುಮತಿಯಿಲ್ಲದೆ ದೇಣಿಗೆ ಹುಂಡಿಗಳ ಕೀಲಿಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅನಿಲ್ ಮಿಶ್ರಾ ಅವರ ಪಾತ್ರದ ಬಗ್ಗೆಯೂ ಈಗ ತನಿಖೆ ತೀವ್ರಗೊಂಡಿದೆ.

ಟ್ರಸ್ಟ್ ಸಭೆಯ ಪ್ರಮುಖ ನಿರ್ಧಾರಗಳು
ಮಧ್ಯಂತರ ಪ್ರಧಾನ ಕಾರ್ಯದರ್ಶಿ ನೇಮಕ: ಚಂಪತ್ ರಾಯ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಟ್ರಸ್ಟಿ ಕೃಷ್ಣ ಮೋಹನ್ ಅವರನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಸಮಿತಿ ರಚನೆ: ಟ್ರಸ್ಟ್‌ಗೆ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಯನ್ನು ಆಯ್ಕೆ ಮಾಡಲು ನಿವೃತ್ತ ನ್ಯಾಯಾಧೀಶ ಪ್ರಮೋದ್ ಕೊಹ್ಲಿ, ನಿವೃತ್ತ ಲೆಫ್ಟಿನೆಂಟ್ ಜನರಲ್ ವಿಷ್ಣುಕಾಂತ್ ಚತುರ್ವೇದಿ ಮತ್ತು ಸುರೇಶ್ ಹವಾರೆ ಅವರನ್ನೊಳಗೊಂಡ ಮೂವರು ಸದಸ್ಯರ ಸಮಿತಿ ರಚಿಸಲಾಗಿದೆ.

ಮುಂದಿನ ಸಭೆ ಜುಲೈ 22 ಕ್ಕೆ: ಈ ಘಟನೆಯಿಂದ ತಮಗೆ ತೀವ್ರ ನೋವಾಗಿದೆ ಎಂದು ಟ್ರಸ್ಟ್ ಹೇಳಿದೆ. ಆದರೆ ಭಕ್ತರು ಆನ್‌ಲೈನ್ ಹಾಗೂ ಬ್ಯಾಂಕ್ ಮೂಲಕ ನೀಡಿರುವ ಎಲ್ಲಾ 2,926 ನಗದುರಹಿತ ದೇಣಿಗೆಗಳು ಸಂಪೂರ್ಣ ಸುರಕ್ಷಿತವಾಗಿವೆ ಎಂದು ಸ್ಪಷ್ಟಪಡಿಸಿದೆ. ಎಸ್‌ಐಟಿಯ ಅಂತಿಮ ವರದಿ ಬಂದ ಬಳಿಕ ಜುಲೈ 22 ರಂದು ಮತ್ತೊಂದು ಮಹತ್ವದ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸರ್ಕಾರಿ ಶಾಲಾ ಮಕ್ಕಳಿಗೆ ‘ಚಡ್ಡಿ’ ಮುಜುಗರ! 7ನೇ ತರಗತಿ ಬಾಲಕರಿಗೂ ಹಾಫ್ ಪ್ಯಾಂಟ್ ಬಟ್ಟೆ ವಿತರಣೆ, ಪೋಷಕರಿಗೆ ಇಕ್ಕಟ್ಟು – Kannada News | Karnataka Government School Controversy: 7th Standard Students Refuse to Wear Shorts, Demand Full Pants

ಬೆಂಗಳೂರು, ಜುಲೈ 7: ಕರ್ನಾಟಕದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ ಸಮವಸ್ತ್ರ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ನಗರ ಪ್ರದೇಶಗಳ ಸರ್ಕಾರಿ ಶಾಲೆಗಳಲ್ಲಿ 7ನೇ ತರಗತಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಚಡ್ಡಿ ಅಳತೆಯ ಬಟ್ಟೆಯೇ ಈಗ ದೊಡ್ಡ ವಿವಾದ ಮತ್ತು ಚರ್ಚೆಗೆ ಕಾರಣವಾಗಿದೆ. ಬೆಳೆಯುವ ವಯಸ್ಸಿನ ತಮಗೆ ಚಡ್ಡಿ ಧರಿಸಿ ಶಾಲೆಗೆ ಬರಲು ಮುಜುಗುರವಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಇದರ ಪರಿಣಾಮವಾಗಿ, ಸರ್ಕಾರ ಉಚಿತವಾಗಿ ನೀಡಿದ ಬಟ್ಟೆಯನ್ನು ಬಳಸದ ಪೋಷಕರು ಅನಿವಾರ್ಯವಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಪ್ಯಾಂಟ್ ಹೊಲಿಸಿ ಕೊಡುತ್ತಿದ್ದು, ಪೋಷಕರಿಗೆ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗುತ್ತಿದೆ.

ಮೂಲೆ ಸೇರಿದ ಉಚಿತ ಬಟ್ಟೆ, ಪೋಷಕರಿಗೆ ಆರ್ಥಿಕ ಹೊರೆ

ರಾಜ್ಯ ಸರ್ಕಾರವು 1 ರಿಂದ 7ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಿಸುತ್ತಿದೆ. ಆದರೆ 7ನೇ ತರಗತಿಯಲ್ಲಿ ಓದುವ 12–13 ವರ್ಷದ ಬಾಲಕರಿಗೂ ಈಗಲೂ ಕೇವಲ ಶರ್ಟ್ ಹಾಗೂ ಚಡ್ಡಿ (ಹಾಫ್ ಪ್ಯಾಂಟ್) ಹೊಲಿಸಲು ಬೇಕಾಗುವಷ್ಟು ಮಾತ್ರ ಬಟ್ಟೆ ನೀಡಲಾಗುತ್ತಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿನ ಬಹುತೇಕ ಖಾಸಗಿ ಶಾಲೆಗಳಲ್ಲಿ 6ನೇ ತರಗತಿಯಿಂದಲೇ ವಿದ್ಯಾರ್ಥಿಗಳು ಕಡ್ಡಾಯವಾಗಿ ಫುಲ್ ಪ್ಯಾಂಟ್ ಧರಿಸುತ್ತಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಹಳೇ ಚಡ್ಡಿ ಧರಿಸುವ ವ್ಯವಸ್ಥೆಯೇ ಮುಂದುವರಿದಿದೆ. ‘ಚಡ್ಡಿ ಹಾಕಿಕೊಂಡು ಶಾಲೆಗೆ ಬರಲು ಮುಜುಗರವಾಗುತ್ತದೆ. ಆಟ ಆಡುವಾಗ ಬಿದ್ದು ಗಾಯಗಳಾಗುತ್ತವೆ ಮತ್ತು ಚಳಿಗಾಲದಲ್ಲೂ ತೊಂದರೆಯಾಗುತ್ತದೆ. ನಮಗೂ ಫುಲ್ ಪ್ಯಾಂಟ್ ಬಟ್ಟೆ ಕೊಡಬೇಕು’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಮಕ್ಕಳ ಈ ಹಠ ಮತ್ತು ಒತ್ತಾಯಕ್ಕೆ ಮಣಿಯುತ್ತಿರುವ ಪೋಷಕರು ತಮ್ಮ ಸ್ವಂತ ಹಣದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ರೆಡಿಮೇಡ್ ಪ್ಯಾಂಟ್ ಅಥವಾ ಬಟ್ಟೆ ಖರೀದಿಸುತ್ತಿದ್ದಾರೆ. ‘ಮಕ್ಕಳು ಚಡ್ಡಿ ಹಾಕಲ್ಲ ಎನ್ನುತ್ತಾರೆ, ಹೀಗಾಗಿ ಸರ್ಕಾರ ಕೊಟ್ಟ ಬಟ್ಟೆ ಮನೆಯಲ್ಲೇ ಬಳಕೆಯಾಗದೆ ಉಳಿಯುತ್ತಿದೆ. ನಾವು ಬೇರೆ ಹಣ ಖರ್ಚು ಮಾಡಿ ಪ್ಯಾಂಟ್ ತರಬೇಕಾಗಿದೆ. ಸರ್ಕಾರ ಇನ್ಮುಂದೆ ಪ್ಯಾಂಟ್ ಅಳತೆಯ ಬಟ್ಟೆಯನ್ನಾದರೂ ನೀಡಿದರೆ ಪೋಷಕರಿಗೆ ಅನುಕೂಲವಾಗುತ್ತದೆ’ ಎಂದು ಪೋಷಕರು ಅಸಮಾಧಾನ ಹೊರಹಾಕಿದ್ದಾರೆ.

ಪರಿಶೀಲನೆಯ ಭರವಸೆ ನೀಡಿದ ಶಿಕ್ಷಣ ಇಲಾಖೆ ಆಯುಕ್ತರು

ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಕೇಳಿಬರುತ್ತಿರುವ ಈ ಬೇಡಿಕೆಯ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ಸುರಳ್ಳಕರ್ ವಿಕಾಸ್ ಕಿಶೋರ್ ಅವರು ಪ್ರತಿಕ್ರಿಯಿಸಿದ್ದಾರೆ. ಈ ಸಮಸ್ಯೆಯನ್ನು ಇಲಾಖೆಯು ಸೂಕ್ಷ್ಮವಾಗಿ ಗಮನಿಸಿದ್ದು, 7ನೇ ತರಗತಿಯಿಂದಲೇ ಬಾಲಕರಿಗೆ ಪ್ಯಾಂಟ್ ಅಳತೆಯ ಸಮವಸ್ತ್ರವನ್ನು ನೀಡುವಂತೆ ಬಂದಿರುವ ಮನವಿ ಮತ್ತು ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಹಾಗೂ ಈ ವಿಷಯವನ್ನು ಆದಷ್ಟು ಬೇರೆ ಪರಿಶೀಲಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಒಂದೆಡೆ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಉಚಿತ ಸಮವಸ್ತ್ರ ನೀಡುತ್ತಿದ್ದರೂ, ಅದು ಅಳತೆಯ ಸಮಸ್ಯೆಯಿಂದಾಗಿ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಪೋಷಕರು ತಮ್ಮ ಜೇಬಿನಿಂದಲೇ ಹಣ ಖರ್ಚು ಮಾಡುತ್ತಿರುವುದರಿಂದ ಸರ್ಕಾರದ ಉದ್ದೇಶವೇ ಹಳ್ಳ ಹಿಡಿಯುತ್ತಿದೆ. ಈ ಹಿನ್ನೆಲೆಯಲ್ಲಿ 7ನೇ ತರಗತಿಯಿಂದಲೇ ಪ್ಯಾಂಟ್ ನೀಡುವ ಬೇಡಿಕೆಗೆ ಸರ್ಕಾರ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲೋಕೇಶ್ ಸಿನಿಮಾ ಯೂನಿವರ್ಸ್ ಮುಗಿದಿಲ್ಲ; ಭರ್ಜರಿ ಅಪ್ಡೇಟ್ ಕೊಟ್ಟ ಕನಗರಾಜ್ – Kannada News | Lokesh Kanagaraj Confirms LCU is NOT Ending: Big Updates on Future Movies

ಖ್ಯಾತ ತಮಿಳು ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kanagaraj) ಈಗ ನಟನಾಗಿ ಬದಲಾಗಿದ್ದಾರೆ. ಅವರು ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಡಿಸಿ’ ಸಿನಿಮಾ ಜುಲೈ 31ರಂದು ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಈ ಸಿನಿಮಾದ ಪ್ರಚಾರದ ವೇಳೆ ಲೋಕೇಶ್ ತಮ್ಮ ‘ಲೋಕೇಶ್ ಸಿನಿಮಾ ಯೂನಿವರ್ಸ್’ ಬಗ್ಗೆ ದೊಡ್ಡ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ನಟನೆಯಲ್ಲಿ ಬ್ಯುಸಿ ಇರುವುದರಿಂದ ಎಲ್ಲರೂ ಇದು ಕ್ಲೋಸ್ ಆಯಿತು ಎಂದೇ ಭಾವಿಸಿದ್ದರು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಂತೆ ಆಗಿದೆ.

ಎಲ್‌ಸಿಯು ಮುಗಿದಿಲ್ಲ

ಲೋಕೇಶ್ ಕನಗರಾಜ್ ಅವರ ಸಿನಿಮಾಗಳ ಸರಣಿಯನ್ನು ‘ಲೋಕೇಶ್ ಸಿನೆಮ್ಯಾಟಿಕ್ ಯೂನಿವರ್ಸ್’ ಎಂದು ಕರೆಯಲಾಗುತ್ತದೆ. ಇತ್ತೀಚೆಗೆ ಈ ಸರಣಿ ಬಂದ್ ಆಗಲಿದೆ ಎಂದು ವದಂತಿ ಹಬ್ಬಿತ್ತು. ಆದರೆ ಲೋಕೇಶ್ ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ತಾವು ಎಲ್‌ಸಿಯು ಅನ್ನು ಎಂದಿಗೂ ಮುಚ್ಚುವುದಿಲ್ಲ ಎಂದು ಅವರು ಹೇಳಿದ್ದಾರೆ.

‘ಎಲ್‌ಸಿಯು ಎಂಬ ಹೆಸರನ್ನು ಅಭಿಮಾನಿಗಳೇ ಇಟ್ಟಿದ್ದಾರೆ. ನಾನು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ನನ್ನ ಸ್ವಂತ ಪ್ರೊಡಕ್ಷನ್ ಹೌಸ್ ಮುಚ್ಚಿದರೂ ಎಲ್‌ಸಿಯು ಮುಚ್ಚಲ್ಲ’ ಎಂದು ಲೋಕೇಶ್ ಕನಗರಾಜ್ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಮುಂದಿನ ಸಾಲು ಸಾಲು ಚಿತ್ರಗಳು

ಲೋಕೇಶ್ ಕನಗರಾಜ್ ಅವರು ಎಲ್‌ಸಿಯು ಸರಣಿಯಲ್ಲಿ ಹಲವು ಸಿನಿಮಾಗಳನ್ನು ಮಾಡಲು ಒಪ್ಪಿಕೊಂಡಿದ್ದಾರೆ. ಈ ಸರಣಿಯಲ್ಲಿ ಕಾರ್ತಿ ನಟನೆಯ ‘ಕೈದಿ 2’, ಕಮಲ್ ಹಾಸನ್ ನಟನೆಯ ‘ವಿಕ್ರಮ್ 2’, ಸೂರ್ಯ ಅವರ ‘ರೋಲೆಕ್ಸ್’, ಇದೇ ಯೂನಿವರ್ಸ್ ಅಡಿಯಲ್ಲಿ ಬರಲಿದೆ. ಲೋಕೇಶ್ ನಿರ್ಮಾಣದ ‘ಬೆಂಜ್’ ಸಿನಿಮಾ ಕೂಡ ರೆಡಿ ಆಗುತ್ತಿದೆ. ಈ ಬ್ಗಗೆ ಅವರೇ ಮಾಹಿತಿ ನೀಡಿದ್ದಾರೆ.

ಅಲ್ಲು ಅರ್ಜುನ್ ಸಿನಿಮಾ ಬಳಿಕ ಎಲ್‌ಸಿಯು

ಲೋಕೇಶ್ ಕನಕರಾಜ್ ಸದ್ಯದಲ್ಲೇ ತೆಲುಗು ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಸಿನಿಮಾ ನಿರ್ದೇಶಿಸಲಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ ನೀಡಲಿದ್ದಾರೆ. ಈ ಬಿಗ್ ಬಜೆಟ್ ಸಿನಿಮಾ ಮುಗಿದ ತಕ್ಷಣ ಲೋಕೇಶ್ ಮತ್ತೆ ಎಲ್‌ಸಿಯು ಚಿತ್ರಗಳ ಕೆಲಸಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ.

ಇದನ್ನೂ ಓದಿ:  ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ರಚಿತಾ ರಾಮ್?

‘ಕೈದಿ’, ‘ವಿಕ್ರಮ್’ ಮತ್ತು ‘ಲಿಯೋ’ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಧೂಳೆಬ್ಬಿಸಿದ್ದ ಎಲ್‌ಸಿಯು ಸರಣಿ ಮುಂದೆಯೂ ಮುಂದುವರಿಯಲಿದೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:06 am, Tue, 7 July 26

Source link

Exit mobile version