Kalaburagi: ದೆಹಲಿ ಪೊಲೀಸರ ಸೋಗಲ್ಲಿ ದರೋಡೆ; ಸಿನಿಮಾ ಸ್ಟೈಲ್ನಲ್ಲಿ ಆರೋಪಿಗಳು ಲಾಕ್ – Kannada News | Kalaburagi Police Nab Fake Delhi Cops; Interstate Robbery Gang Arrested
ಬಂಧಿತ ಆರೋಪಿಗಳ ಜೊತೆ ಪೊಲೀಸರುImage Credit source: Tv9 Kannada ಕಲಬುರಗಿ, ಫೆಬ್ರವರಿ 02: ದೆಹಲಿ ಪೊಲೀಸರ ಸೋಗಿನಲ್ಲಿ ದರೋಡೆ ಮಾಡ್ತಿದ್ದ ನಟೋರಿಯಸ್ ಗ್ಯಾಂಗ್ನ ಖೆಡ್ಡಾಕ್ಕೆ ಕೆಡವುವಲ್ಲಿ ಕೊನೆಗೂ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳು ದೆಹಲಿ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಐದು ರಾಜ್ಯಗಳ ಪೊಲೀಸರ ನಿದ್ದೆಗೆಡಿಸಿದ್ದರು ಎನ್ನಲಾಗಿದ್ದು, ಅಂತಾರಾಜ್ಯ ದರೋಡೆ ಕೋರರಿಂದ ದೆಹಲಿ ಪೊಲೀಸರ ನಕಲಿ ಐಡಿ ಕಾರ್ಡ್ಗಳನ್ನ ವಶಪಡಿಸಿಕೊಳ್ಳಲಾಗಿದೆ. 90 ಗ್ರಾಂ ಚಿನ್ನಾಭರಣ ಸೇರಿದಂರೆ ಬರೋಬ್ಬರಿ 27 ಲಕ್ಷ ಮೌಲ್ಯದ ವಸ್ತುಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ….