ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ -ಕೃತಿ ಗೌಡ – Kannada News | Gichi Gili Gili Fame Prashanth Gowda Marries Actress Kruthi Gowda in a Grand Ceremony

ಕನ್ನಡ ಕಿರುತೆರೆಯ ಜನಪ್ರಿಯ ಹಾಸ್ಯ ನಟ, ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡು ಸುದ್ದಿಯಾಗಿದ್ದ ಪ್ರಶಾಂತ್ ಗೌಡ, ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ (ಜುಲೈ 5) ಪ್ರಶಾಂತ್ ಗೌಡ ಹಾಗೂ ಕೃತಿ ಗೌಡ ಅವರ ವಿವಾಹ ಮಹೋತ್ಸವ ಅತ್ಯಂತ ಸಡಗರ-ಸಂಭ್ರಮದಿಂದ ನೆರವೇರಿದೆ. ಇವರ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ನವಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಬಣ್ಣದ ಲೋಕದ ಹುಡುಗಿಯನ್ನೇ ಕೈಹಿಡಿದ ಪ್ರಶಾಂತ್

ಪ್ರಶಾಂತ್ ಗೌಡ ಅವರು ವಿವಾಹವಾಗಿರುವ ಕೃತಿ ಗೌಡ ಅವರು ಕೂಡ ಚಿತ್ರರಂಗದ ಹಿನ್ನೆಲೆಯನ್ನೇ ಹೊಂದಿದ್ದಾರೆ ಎಂಬುದು ವಿಶೇಷ. ಕೃತಿ ಗೌಡ ಅವರು ಈ ಹಿಂದೆ ‘ಬ್ರೇಕ್ ಫೇಲ್ಯೂರ್’ ಹೆಸರಿನ ಕನ್ನಡ ಸಿನಿಮಾದಲ್ಲಿ ನಟಿಸುವ ಮೂಲಕ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಕಲಾ ರಂಗದಲ್ಲೇ ಗುರುತಿಸಿಕೊಂಡಿರುವ ಈ ಜೋಡಿಯ ಪರಿಚಯ ಪ್ರೇಮಕ್ಕೆ ತಿರುಗಿ, ಈಗ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿ ಒಂದಾಗಿದ್ದಾರೆ.

ತಾರಾ ಕಳೆ ತಂದ ಸೆಲೆಬ್ರಿಟಿಗಳು

ಜುಲೈ 5ರಂದು ನಡೆದ ಈ ಅದ್ಧೂರಿ ಮದುವೆಗೆ ಕಿರುತೆರೆ ಹಾಗೂ ಬೆಳ್ಳಿತೆರೆಯ ಅನೇಕ ಪ್ರಮುಖ ಸೆಲೆಬ್ರಿಟಿಗಳು ಆಗಮಿಸಿ ನವದಂಪತಿಯನ್ನು ಹರಸಿದ್ದಾರೆ. ವಿಶೇಷವಾಗಿ ‘ಗಿಚ್ಚಿ ಗಿಲಿಗಿಲಿ’ ಶೋನ ಸಹ-ಕಲಾವಿದರು, ಕಾಮಿಡಿ ನಟರು ಹಾಗೂ ಪ್ರಶಾಂತ್ ಅವರ ಆಪ್ತ ಸ್ನೇಹಿತರು ಮದುವೆಯಲ್ಲಿ ಪಾಲ್ಗೊಂಡು ಸಖತ್ ಆಗಿ ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮವನ್ನು ಹೆಚ್ಚಿಸಿದ್ದಾರೆ.

ಇದನ್ನೂ ಓದಿ: ಪ್ರಶಾಂತ್ ಗೌಡ ಮದುವೆ ಆಗುತ್ತಿರುವ ಕೃತಿ ಗೌಡ ಯಾರು? ಇಲ್ಲಿದೆ ಅವರ ಹಿನ್ನೆಲೆ

‘ಗಿಚ್ಚಿ ಗಿಲಿಗಿಲಿ’ ಮೂಲಕ ಮನೆಮಾತಾದ ನಟ

ಪ್ರಶಾಂತ್ ಗೌಡ ಅವರು ಕಿರುತೆರೆಯಲ್ಲಿ ತಮ್ಮ ಅದ್ಭುತ ಹಾಸ್ಯ ಟೈಮಿಂಗ್ ಮೂಲಕವೇ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದವರು. ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಗಿಚ್ಚಿ ಗಿಲಿಗಿಲಿ’ಯ ಸತತ ಮೂರು ಸೀಸನ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಅವರು ಕರ್ನಾಟಕದಾದ್ಯಂತ ಮನೆಮಾತಾಗಿದ್ದಾರೆ. ಸದ್ಯ ಮದುವೆಯಾಗಿ ಸಂಸಾರ ನೌಕೆ ಏರಿರುವ ನೆಚ್ಚಿನ ನಟನಿಗೆ ಅಭಿಮಾನಿಗಳು ‘ಹೊಸ ಜೀವನಕ್ಕೆ ಶುಭವಾಗಲಿ’ ಎಂದು ಹಾರೈಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 9:40 am, Mon, 6 July 26

Source link

ವಿರಾಟ್ ಕೊಹ್ಲಿಯ ವಿಶ್ವ ದಾಖಲೆ ಮುರಿದ ಬೆತ್ ಮೂನಿ

Source link

37 ವರ್ಷಗಳ ಬಳಿಕ ಜೈಲಿನಿಂದ ಹೊರಬಂದ ದೇಶದ ಅತ್ಯಂತ ದೀರ್ಘಾವಧಿ ಕೈದಿ ಸಾಯಿಬಣ್ಣ: ಎರಡೆರಡು ಕೊಲೆ ಮಾಡಿದ್ದರೂ ಇಲ್ಲ ಪಶ್ಚಾತ್ತಾಪ! – Kannada News | India’s Longest Serving Prisoner Saibanna Natikar Released From Bengaluru Jail After 37 Years

ಬೆಂಗಳೂರು ಕೇಂದ್ರ ಕಾರಾಗೃಹ ಮತ್ತು ಸಾಯಿಬಣ್ಣ ಎನ್. ನಾಟೀಕರ್ (ಸಾಯಿಬಣ್ಣ ಚಿತ್ರ ಕೃಪೆ: ಎಎನ್​ಐ)Image Credit source: ANI

ಬೆಂಗಳೂರು, ಜುಲೈ 6: ಮುಖ ತುಂಬಾ ಗಡ್ಡ, ತಲೆ ತುಂಬಾ ಬಿಳಿ ಕೂದಲು ಮತ್ತು ವಯೋಸಹಜವಾಗಿ ನಡುಗುತ್ತಿರುವ ಕಾಲುಗಳೊಂದಿಗೆ 72 ವರ್ಷದ ಸಾಯಿಬಣ್ಣ ಎನ್. ನಾಟೀಕರ್ (Saibanna Natikar) ಇತ್ತೀಚೆಗೆ ಬೆಂಗಳೂರಿನ (Bengaluru) ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ದ್ವಾರದಿಂದ ಹೊರಗೆ ನಡೆದು ಬಂದಿದ್ದಾನೆ. ಸುಮಾರು ನಾಲ್ಕು ದಶಕಗಳ ಕಾಲ ಕತ್ತಲೆಯ ಕೋಣೆಯಲ್ಲಿದ್ದ ಸಾಯಿಬಣ್ಣ ಕೊನೆಗೂ ಮುಕ್ತ ಗಾಳಿಯನ್ನು ಉಸಿರಾಡಿದ್ದಾನೆ. ಜೈಲು ಅಧಿಕಾರಿಗಳ ಪ್ರಕಾರ, ಸಾಯಿಬಣ್ಣ ಭಾರತದಲ್ಲೇ ಅತಿ ಹೆಚ್ಚು ಕಾಲ ಅಂದರೆ ಸತತ 37 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ದೇಶದ ಮೊದಲ ಕೈದಿ.

ಈ ಕುರಿತು ಮಾತನಾಡಿರುವ ಕಾರಾಗೃಹ ಇಲಾಖೆ ಡಿಜಿಪಿ ಆಲೋಕ್ ಕುಮಾರ್, ‘ನಾನು ಈ ಹಿಂದೆ ಬೆಳಗಾವಿ ಮತ್ತು ಕಲಬುರಗಿ ಜೈಲಿನಲ್ಲಿದ್ದಾಗ ಸಾಯಿಬಣ್ಣನನ್ನು ಭೇಟಿಯಾಗಿದ್ದೆ. ಜೈಲಿನೊಳಗೆ ಈತನ ನಡವಳಿಕೆ ಅತ್ಯಂತ ಉತ್ತಮವಾಗಿತ್ತು’ ಎಂದು ತಿಳಿಸಿದ್ದಾರೆ.

ಪೆರೋಲ್ ಮೇಲೆ ಬಂದು ಎರಡನೇ ಪತ್ನಿ, ಮಗಳ ಕೊಲೆ ಮಾಡಿದ್ದ ಸಾಯಿಬಣ್ಣ!

ಸಾಯಿಬಣ್ಣನ ಅಪರಾಧದ ಇತಿಹಾಸ ಅತ್ಯಂತ ಭೀಕರವಾದುದು. 1988 ರಲ್ಲಿ ತನ್ನ ಮೊದಲ ಪತ್ನಿ ಮಲ್ಕವ್ವ ಎಂಬಾಕೆಯನ್ನು ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ಭೀಕರವಾಗಿ ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಈತನನ್ನು 1994 ರಲ್ಲಿ ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಆದರೆ ಜೈಲಿನಿಂದ ಹೊರಬಂದ ಆತ ನಾಗಮ್ಮ ಎಂಬಾಕೆಯನ್ನು ಎರಡನೇ ಮದುವೆಯಾಗಿ ಹೆಣ್ಣು ಮಗುವಿಗೆ ತಂದೆಯಾದ. ಆದರೆ ಕೆಲವು ವಾರಗಳಲ್ಲೇ ಎರಡನೇ ಪತ್ನಿಯ ಮೇಲೂ ಅನುಮಾನಗೊಂಡು, ಆಕೆಯನ್ನು ಮತ್ತು ಪುಟ್ಟ ಮಗಳು ವಿಜಯಲಕ್ಷ್ಮಿಯನ್ನು ಅಮಾನುಷವಾಗಿ ಕೊಚ್ಚಿ ಕೊಂದಿದ್ದ.

ಮರಣದಂಡನೆ ಶಿಕ್ಷೆ ಜೀವಾವಧಿಗೆ ಪರಿವರ್ತನೆ

ಸಹಕಾರ ವಲಯದಲ್ಲಿ ಕೆಲಸ ಮಾಡುತ್ತಿದ್ದ ಸಾಯಿಬಣ್ಣ ಈ ಭೀಕರ ಕೊಲೆಗಳಿಂದಾಗಿ ಕೆಲಸ ಕಳೆದುಕೊಂಡಿದ್ದಲ್ಲದೆ, ಇಂದು 1 ಕೋಟಿ ರೂಪಾಯಿಗೂ ಅಧಿಕ ಬೆಲೆಬಾಳುವ 10 ಎಕರೆ ಜಮೀನನ್ನೂ ಕಳೆದುಕೊಂಡಿದ್ದಾನೆ. 2003 ರಲ್ಲಿ ವಿಚಾರಣಾ ನ್ಯಾಯಾಲಯವು ಈ ಜೋಡಿ ಕೊಲೆಯ ಕ್ರೌರ್ಯವನ್ನು ಪರಿಗಣಿಸಿ ಈತನಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಆದರೆ ತದನಂತರ ಕರ್ನಾಟಕ ಹೈಕೋರ್ಟ್ ಇದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತನೆಗೊಳಿಸಿತು. ಸಾಯಿಬಣ್ಣ ಸುಮಾರು ಹತ್ತು ವರ್ಷಗಳ ಕಾಲ ಜೈಲಿನಲ್ಲಿ ಏಕಾಂತ ವಾಸ (Solitary Confinement) ಅನುಭವಿಸಿದ್ದನ್ನು ಹೈಕೋರ್ಟ್ ಕಾನೂನುಬಾಹಿರ ಮತ್ತು ಅತಿಮಾನುಷ ಎಂದು ಪರಿಗಣಿಸಿತು. ಜೊತೆಗೆ ಈತನ ಕ್ಷಮಾದಾನ ಅರ್ಜಿಯ ನಿರ್ಧಾರದಲ್ಲಿ ಆದ ವಿಳಂಬವೂ ಈತನಿಗೆ ವರದಾನವಾಗಿ ಪರಿಣಮಿಸಿ, ಈಗ 37 ವರ್ಷಗಳ ಬಳಿಕ ಬಿಡುಗಡೆಗೆ ಹಾದಿ ಮಾಡಿಕೊಟ್ಟಿದೆ.

ಕೊಲೆ ಮಾಡಿದ್ದರೂ ಮುಖದಲ್ಲಿಲ್ಲ ಪಶ್ಚಾತ್ತಾಪ!

ಜೈಲಿನಿಂದ ಬಿಡುಗಡೆಯಾದ ಬಳಿಕ ಮಾಧ್ಯಮಗಳ ಎದುರು ಮಾತನಾಡಿದ ಸಾಯಿಬಣ್ಣ, ಕೊಲೆಗಳ ಬಗ್ಗೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಲಿಲ್ಲ. ‘ನನ್ನ ಹೆಂಡತಿಯರು ದಾರಿ ತಪ್ಪಿದ್ದಕ್ಕೆ ನಾನು ಕೊಂದೆ. ಮೊದಲ ಕೊಲೆಯ ವೇಳೆ ಆಕೆಯ ಜೊತೆಯಿದ್ದ ವ್ಯಕ್ತಿ ಓಡಿ ಹೋದ, ಹಾಗಾಗಿ ಹೆಂಡತಿಯನ್ನು ಕೊಂದೆ. ಎರಡನೇ ಮದುವೆಯಾದಾಗ ನನ್ನ ಅತ್ತೆಯೇ ಮಗಳನ್ನು ದಾರಿ ತಪ್ಪಿಸಿದಳು. ಹೆಂಡತಿ ಕುರುಡಿ ಅಥವಾ ಕುಂಟಿಯಾಗಿದ್ದರೂ ಪರವಾಗಿಲ್ಲ, ಆದರೆ ಆಕೆಯ ಶೀಲ ಮುಖ್ಯ’ ಎಂದು ಹಳೇ ಜಿದ್ದನ್ನೇ ಆತ ಮಾಧ್ಯಮಗಳ ಮುಂದೆ ಉಸುರಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಗುವಿನ ಫೋಟೋ ಹಂಚಿಕೊಂಡು ‘ಮದರ್ ಪ್ರಾಮಿಸ್’ ಎಂದ ಡಾಲಿ ಧನಂಜಯ್ – Kannada News | Daali Dhananjaya Shares First Baby Photo, Promotes Mother Promise Movie in Style

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಡಾಲಿ ಧನಂಜಯ್ (Dhananjay) ಇತ್ತೀಚೆಗೆ ತಂದೆಯಾಗಿ ಬಡ್ತಿ ಪಡೆದಿದ್ದಾರೆ. ಅವರ ಪತ್ನಿ ಧನ್ಯಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಇದೀಗ ಧನಂಜಯ್ ತಮ್ಮ ಮುದ್ದಾದ ಮಗುವಿನ ಮೊದಲ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಗುವನ್ನು ಮಲಗಿಸಿ ಆಡಿಸುತ್ತಿರೋ ಚಿತ್ರವನ್ನು ಪೋಸ್ಟ್ ಮಾಡಿರುವ ಅವರು, ತಮ್ಮ ಅಭಿಮಾನಿಗಳೊಂದಿಗೆ ಈ ಸಂತಸದ ಕ್ಷಣವನ್ನು ಹಂಚಿಕೊಂಡಿದ್ದಾರೆ.

ವಿಶೇಷವೆಂದರೆ ಈ ಫೋಟೋದಲ್ಲಿ ಧನಂಜಯ್ ಧರಿಸಿರುವ ಶರ್ಟ್ ಎಲ್ಲರ ಗಮನ ಸೆಳೆಯುತ್ತಿದೆ. ಆ ಕಪ್ಪು ಬಣ್ಣದ ಶರ್ಟ್ ಮೇಲೆ ‘ಮದರ್ ಪ್ರಾಮಿಸ್’ ಎಂದು ಬರೆಯಲಾಗಿದೆ. ತಮ್ಮ ಮುಂಬರುವ ಹೊಸ ಸಿನಿಮಾದ ಪ್ರಚಾರಕ್ಕಾಗಿ ಅವರು ಈ ವಿಭಿನ್ನ ಶರ್ಟ್ ಧರಿಸಿದ್ದು, ಮಗುವಿನ ಆಗಮನದ ಜೊತೆಗೇ ಸಿನಿಮಾದ ಪ್ರಚಾರವನ್ನೂ ಸಖತ್ ಆಗಿಯೇ ಮಾಡುತ್ತಿದ್ದಾರೆ. ತಂದೆಯಾದ ಸಂಭ್ರಮದಲ್ಲಿರುವ ನಟನಿಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಡಾಲಿ ಹಂಚಿಕೊಂಡ ಫೋಟೋ

ನಟ ಧನಂಜಯ್ ಹಾಗೂ ಧನ್ಯಾ ಅವರ ವಿವಾಹವು ಕಳೆದ ಫೆಬ್ರವರಿ ತಿಂಗಳಲ್ಲಿ ಅತ್ಯಂತ ವೈಭವದಿಂದ ನೆರವೇರಿತ್ತು. ಈ ಮದುವೆಗೆ ಸ್ಯಾಂಡಲ್‌ವುಡ್‌ನ ನಟ-ನಟಿಯರು, ರಾಜಕಾರಣಿಗಳು ಹಾಗೂ ಸಾವಿರಾರು ಅಭಿಮಾನಿಗಳು ಸಾಕ್ಷಿಯಾಗಿದ್ದರು. ದೀರ್ಘಕಾಲದ ಪರಿಚಯದ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿಯ ಬಾಳಿಗೆ, ಮಗುವಿನ ಆಗಮನವಾಗಿರುವುದು ಕುಟುಂಬದ ಸಂತೋಷವನ್ನು ದ್ವಿಗುಣಗೊಳಿಸಿದೆ.

ಇದನ್ನೂ ಓದಿ: ಡಾಲಿ ಧನಂಜಯ್ ಸಿನಿಮಾ ‘ಮದರ್ ಪ್ರಾಮಿಸ್’ ಬಿಡುಗಡೆಗೆ ದಿನಾಂಕ ನಿಗದಿ

ಧನಂಜಯ್ ಅಭಿನಯದ ಬಹುನಿರೀಕ್ಷಿತ ‘ಮದರ್ ಪ್ರಾಮಿಸ್’ ಸಿನಿಮಾ ಜುಲೈ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದು ಕಾಮಿಡಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ಧನಂಜಯ್ ಅವರೇ ಸ್ವತಃ ನಿರ್ಮಾಣ ಮಾಡಿದ್ದಾರೆ. ಪೂರ್ಣಚಂದ್ರ ಮೈಸೂರು ನಿರ್ದೇಶನದ ಈ ಸಿನಿಮಾದಲ್ಲಿ ಬೆಂಗಳೂರಿನ ಜೂಜುಕೋರನೊಬ್ಬ ಶಕ್ತಿಶಾಲಿ ಗ್ಯಾಂಗ್‌ಸ್ಟರ್‌ಗಳು ಮತ್ತು ಕಳ್ಳಸಾಗಣೆದಾರರಿಂದ ತಪ್ಪಿಸಿಕೊಳ್ಳುವಾಗ ನಡೆಯುವ ರೋಚಕ ಕಥೆ ಇದೆ. ಚಿತ್ರದಲ್ಲಿ ಧನಂಜಯ್ ‘ರಾಸಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರೆ, ಪೂರ್ಣಚಂದ್ರ ಮೈಸೂರು, ಗೀತಾ, ವಿನಯಾ ಪ್ರಸಾದ್, ಗುರುದತ್ ಹಾಗೂ ನಾಗಭೂಷಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

TV9 Kannada News Live: ಫಿಫಾ ಇಂದ ಬ್ರೆಝಿಲ್ ಔಟ್; ಹಾಟ್​ಸ್ಟಾರ್​ನಲ್ಲಿ ಧೂಳೆಬ್ಬಿಸುತ್ತಿದೆ ‘ಪ್ರೀತಮ್ ಆ್ಯಂಡ್ ಪೆಡ್ರೊ’ ಸೀರಿಸ್! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | Breaking News in TV9 Kannada Live 6 July 2026 Karnataka SIR, Weather Rain Report, Bengaluru News Updates

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ

ಫಿಫಾ ವಿಶ್ವಕಪ್‌ನ ರೌಂಡ್ ಆಫ್-16 ನಾಕೌಟ್ ಪಂದ್ಯದಲ್ಲಿ ನಾರ್ವೆ ವಿರುದ್ಧ 2-1 ಗೋಲುಗಳ ಅಂತರದಿಂದ ಸೋತ ಬ್ರೆಝಿಲ್ ತಂಡವು ಕ್ವಾರ್ಟರ್ ಫೈನಲ್‌ಗೂ ಮುನ್ನವೇ ಟೂರ್ನಿಯಿಂದ ಹೊರಬಿದ್ದು ಭಾರಿ ಆಘಾತ ನೀಡಿದೆ. ಇತ್ತ ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಹಗರಣದ ತನಿಖೆ ತೀವ್ರಗೊಂಡಿರುವ ಬೆನ್ನಲ್ಲೇ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿರುವ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ರಾಜೀನಾಮೆ ಅಂಗೀಕಾರದ ಕುರಿತು ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಇಂದು ಮಧ್ಯಾಹ್ನ 3 ಗಂಟೆಗೆ ನಿರ್ಣಾಯಕ ಸಭೆ ನಡೆಸಲಿದೆ. ಮತ್ತೊಂದೆಡೆ ಮನರಂಜನಾ ಲೋಕದಲ್ಲಿ ರಾಜ್‌ಕುಮಾರ್ ಹಿರಾನಿ ನಿರ್ಮಾಣದ, ಅರ್ಷದ್ ವಾರ್ಸಿ ಮುಖ್ಯ ಭೂಮಿಕೆಯಲ್ಲಿರುವ ಕಾಮಿಡಿ ಮತ್ತು ಸಸ್ಪೆನ್ಸ್ ಸಮ್ಮಿಲನದ ‘ಪ್ರೀತಮ್ ಆ್ಯಂಡ್ ಪೆಡ್ರೊ’ ವೆಬ್ ಸರಣಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Source link

ಕಣ್ಣೀರಿನೊಂದಿಗೆ ವಿದಾಯ ಹೇಳಿದ ನೇಮರ್ ಜೂನಿಯರ್! – Kannada News | Neymar jr announces retirement from international football

ಮೈದಾನಕ್ಕಿಳಿದರೆ ಮೈ ನವಿರೇಳಿಸುವ ವೇಗ, ಎದುರಾಳಿ ಡಿಫೆಂಡರ್‌ಗಳನ್ನೇ ದಿಕ್ಕೆಡಿಸುವ ಮಾಂತ್ರಿಕ ಡ್ರಿಬ್ಲಿಂಗ್, ಕಾಲಿನಲ್ಲೇ ಕಾವ್ಯ ಬರೆಯುವ ಬ್ರೆಝಿಲಿಯನ್ ಸಾಂಬಾ ಶೈಲಿಯ ಫುಟ್‌ಬಾಲ್ ಚತುರ ನೇಮರ್ ಜೂನಿಯರ್ (Neymar Jr.)  ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. (PC: Getty images)

Source link

ಮದುವೆಯಾದ ಎರಡೇ ತಿಂಗಳಿಗೆ ನವವಿವಾಹಿತೆ ನಿಗೂಢ ಸಾವು – Kannada News | Delhi Newlywed Dies: Family Alleges Dowry Murder, Husband Under Scanner

ನವದೆಹಲಿ, ಜುಲೈ 06: ದೆಹಲಿಯ ಅಪಾರ್ಟ್​ಮೆಂಟ್ ಆವರಣದಲ್ಲಿ ಶನಿವಾರ ರಾತ್ರಿ 28 ವರ್ಷದ ನವವಿವಾಹಿತೆ ಆಕೃತಿ ಸುತಾರ್ ಎಂಬುವವರ ಶವ ಪತ್ತೆಯಾಗಿದೆ. ಇದು ಆತ್ಮಹತ್ಯೆಯಲ್ಲ, ವರದಕ್ಷಿಣೆ(Dowry)ಗಾಗಿ ಆಕೆಯ ಪತಿ ಮತ್ತು ಕುಟುಂಬಸ್ಥರೇ ಸೇರಿ ಮಾಡಿರುವ ಕೊಲೆ ಎಂದು ಆಕೃತಿ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಛತ್ತರ್‌ಪುರದ ಖಾಸಗಿ ಕಂಪನಿಯೊಂದರಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ ಆಕೃತಿ ಮೃತದೇಹ, ಲೋಧಿ ಕಾಲೋನಿಯಲ್ಲಿರುವ ಅಪಾರ್ಟ್​ಮೆಂಟ್​ ಹೊರಗೆ ಶನಿವಾರ ರಾತ್ರಿ 9 ಗಂಟೆ ಪತ್ತೆಯಾಗಿತ್ತು. ಆಕೆ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.

ಕೆಲಸಕ್ಕೆ ಸೇರಿದ್ದ ದಿನವೇ ಪಾರ್ಟಿ ಮಾಡಿದ್ದ ಆಕೃತಿ
ಕಳೆದ ಏಪ್ರಿಲ್ 24 ರಂದು ವಿವಾಹವಾಗಿದ್ದ ಆಕೃತಿ, ಮದುವೆಯ ರಜೆಯ ನಂತರ ಶನಿವಾರವಷ್ಟೇ ಹೊಸ ಕೆಲಸಕ್ಕೆ ಸೇರಿದ್ದರು. ಅದೇ ದಿನವೇ, ಅದೇ ಖುಷಿಯಲ್ಲಿ ಅಂದೇ ಅವರು ತಮ್ಮ ಸಹೋದ್ಯೋಗಿಗಳಿಗೆ ಒಂದು ಸಣ್ಣ ಪಾರ್ಟಿಯನ್ನೂ ಸಹ ಆಯೋಜಿಸಿದ್ದರು. ಸಂಜೆ 6 ಗಂಟೆ ಸುಮಾರಿಗೆ ತಾಯಿಯೊಂದಿಗೆ ಫೋನ್‌ನಲ್ಲಿ ಮಾತನಾಡಿ, ಪಾರ್ಟಿ ಮುಗಿಸಿ ಮನೆಗೆ ಹೋಗುತ್ತಿರುವುದಾಗಿ ಹೇಳಿದ್ದರು.

ಹೀಗೆ ಕಚೇರಿಯಲ್ಲಿ ಸಂತೋಷದಿಂದ ಪಾರ್ಟಿ ಮುಗಿಸಿ ಬಂದವಳು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಆಕೆಯ ಚಿಕ್ಕಪ್ಪ ಮನಂಜಯ್ ಹಾಗೂ ಸಹೋದರ ಅಮಯ್ ಸುತಾರ್ ವಾದಿಸಿದ್ದಾರೆ.

ಮತ್ತಷ್ಟು ಓದಿ: ಸರ್ಕಾರಿ ನೌಕರನೇ ಬೇಕೆಂದು ಮದುವೆ ಆಗುವ ಯುವತಿಯರೇ ಜೋಕೆ: ಪತಿಯ ವರದಕ್ಷಿಣೆ ಟಾರ್ಚರ್​​ಗೆ ನಾಲೆಗೆ ಹಾರಿದ ಮಹಿಳೆ

90 ನಿಮಿಷಗಳಲ್ಲಿ ಬದಲಾದ ದೃಶ್ಯ
ಆಕೃತಿ ತಾಯಿಯೊಂದಿಗೆ ಮಾತನಾಡಿದ ಕೇವಲ ಎರಡು ಗಂಟೆಗಳ ನಂತರ, ಅಂದರೆ ರಾತ್ರಿ 8 ಗಂಟೆಗೆ ಆಕೆಯ ಪತಿ ಅರಸು ಸಿಕ್ಕಾ ಆಕೆಯ ಪೋಷಕರಿಗೆ ಕರೆ ಮಾಡಿ, ಆಕೃತಿ ನಾಪತ್ತೆಯಾಗಿದ್ದಾಳೆ ಎಂದು ತಿಳಿಸಿದ್ದಾನೆ. ಅದಾಗಿ ಕೇವಲ 90 ನಿಮಿಷಗಳ ಒಳಗೆ ಪಾಲಿಕಾ ಕುಂಜ್‌ನಲ್ಲಿ ಆಕೆಯ ಶವ ಪತ್ತೆಯಾಗಿದೆ ಎಂದು ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಆಕೃತಿ ಮತ್ತು ಅರಸು ಸಿಕ್ಕಾ ಪರಸ್ಪರ ಎಂಟು ವರ್ಷಗಳ ಕಾಲ ಪ್ರೀತಿಸಿ ಏಪ್ರಿಲ್ 24 ರಂದು ಮದುವೆಯಾಗಿದ್ದರು. ಪತಿ ಅರಸು ಯಾವುದೇ ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದ. ಮದುವೆಯಾದ ದಿನದಿಂದಲೇ ಅರಸು ಮತ್ತು ಆತನ ಕುಟುಂಬದವರು 20 ಲಕ್ಷ ರೂ. ವರದಕ್ಷಿಣೆ ತರುವಂತೆ ಆಕೃತಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಪೋಷಕರು ಆರೋಪಿಸಿದ್ದಾರೆ. ಅರಸು ಹಲವು ಬಾರಿ ಆಕೃತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನ್ನು ಕುಟುಂಬಸ್ಥರು ನೆನಪಿಸಿಕೊಂಡಿದ್ದಾರೆ.

ಸಾವಿಗೆ ಕೇವಲ ಎರಡು ದಿನಗಳ ಮುನ್ನ ದಂಪತಿ ನಡುವೆ ಭಾರಿ ಜಗಳ ನಡೆದಿತ್ತು ಎಂದು ತಿಳಿದುಬಂದಿದೆ. ಸದ್ಯ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹತ್ಯೆ ಮತ್ತು ಆತ್ಮಹತ್ಯೆ ಎರಡೂ ಕೋನಗಳಿಂದ ತನಿಖೆ ಚುರುಕುಗೊಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಆಡಳಿತದ ಅವ್ಯವಸ್ಥೆ: ಮೊಬೈಲ್ ಟಾರ್ಚ್ ಬೆಳಕಿನಲ್ಲಿ KKRTC ಬಸ್ ಚಲಾಯಿಸಿದ್ದರ ಬಗ್ಗೆ ಸುರೇಶ್ ಕುಮಾರ್ ಆಕ್ರೋಶ – Kannada News | KKRTC Bus Headlight Failure: MLA Suresh Kumar Slams Govt Over Bus Driven 84 km Using Mobile Torch

ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್Image Credit source: tv9

ಬೆಂಗಳೂರು, ಜುಲೈ 6: ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ (KKRTC) ಸೇರಿದ ಬಸ್ಸೊಂದರ ಹೆಡ್​ಲೈಟ್ ಕೈಕೊಟ್ಟ ಕಾರಣ ಚಾಲಕ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಬಸ್ ಚಲಾಯಿಸಿರುವ ಆಘಾತಕಾರಿ ಘಟನೆಯ ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಬಿಜೆಪಿ (BJP) ಶಾಸಕ ಎಸ್ ಸುರೇಶ್ ಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ಆಡಳಿತದ ಅವ್ಯವಸ್ಥೆ ಎಂದು ಕಿಡಿಕಾರಿದ್ದಾರೆ. ಸಾಮಾಜಿಮ ಮಾಧ್ಯಮ ಫೇಸ್​​ಬುಕ್​ನಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ಆ ಚಾಲಕ ಮತ್ತು ಕಂಡಕ್ಟರ್ ಇಬ್ಬರಿಗೂ ಸಾರಿಗೆ ಸಚಿವರು ಹೆಚ್ಚು ಬೆಳಕು ನೀಡಬಲ್ಲ ಮೊಬೈಲ್ ಉಪಕರಣಗಳನ್ನು ನೀಡಿ ಸನ್ಮಾನ ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.

ಕೆಲವು ವರ್ಷಗಳ ಹಿಂದೆ ನಮ್ಮ ರಾಜ್ಯದ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ ಅಂದಿನ ಹಣಕಾಸು ಸಚಿವರು, ವಿಧಾನಸಭೆಯ ಸಿಬ್ಬಂದಿ ಹಿಡಿದ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಜೆಟ್ ಭಾಷಣ ಓದಿದ್ದನ್ನು ಇಡೀ ರಾಜ್ಯ ಗಮನಿಸಿತ್ತು. ವಿಧಾನಸಭೆಯಲ್ಲಿಯೇ ಈ ಸ್ಥಿತಿ ಬಂದದ್ದಕ್ಕೆ ಎಲ್ಲರೂ ಮರುಗಿದ್ದರು. ಇದೀಗ ಆ ವಿದ್ಯಮಾನಕ್ಕೆ ಸವಾಲೆಸಿದಿರುವ ಘಟನೆ ಕಲಬುರಗಿಯಿಂದ ಬಂದಿದೆ ಎಂದು ಫೇಸ್​​ಬುಕ್ ಪೋಸ್ಟ್​ನಲ್ಲಿ ಸುರೇಶ್ ಕುಮಾರ್ ಉಲ್ಲೇಖಿಸಿದ್ದಾರೆ.

‘ಕಲಬುರಗಿ ಯಿಂದ ಚಿಂಚೋಳಿಗೆ ರಾತ್ರಿ ಹೊರಟಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (KKRTC) ಬಸ್ಸೊಂದು, ಕಂಡಕ್ಟರ್ ಹಿಡಿದ ಮೊಬೈಲ್ ಟಾರ್ಚ್ ಬೆಳಕಲ್ಲೇ ಬರೋಬ್ಬರಿ 84 km ಚಲಿಸಿ ಚಿಂಚೋಳಿ ತಲುಪಿದೆಯೆಂತೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು ಸರ್ಕಾರಿ ಬಸ್ ಗಳ ದುಸ್ಥಿತಿ ಕುರಿತು ಆಕ್ರೋಶ ವ್ಯಕ್ತವಾಗಿದೆ. ಎಲ್ಲ ಮಾಧ್ಯಮಗಳಲ್ಲಿ ಇದು ಭಾರಿ ಸದ್ದು ಮಾಡಿದೆ. ಕಲಬುರಗಿ ಯಿಂದ ಚಿಂಚೋಳಿಗೆ ಹೊರಟಿದ್ದ ಬಸ್ಸಿಗೆ ಹೆಡ್ ಲೈಟ್ ಇರಲಿಲ್ಲ. ಆಗ ರಾತ್ರಿ ಕಗ್ಗತ್ತಲಿನಲ್ಲಿ ರಸ್ತೆ ಕಾಣುವಂತೆ ಕಂಡಕ್ಟರ್ ತಾವಿರೋ ಬಸ್ಸಿನ ಡ್ರೈವರ್ ಪಕ್ಕ ಕುಳಿತು ತಮ್ಮ ಮೊಬೈಲ್ ಟಾರ್ಚ್ ಬೆಳಗಿಸಿ ಬಸ್ಸು ಓಡಿಸಲು ಸಹಕರಿಸಿದ್ದಾರೆ. ಈ ಟಾರ್ಚ್ ಬೆಳಕಿನಲ್ಲಿಯೇ ಚಾಲಕರು ಸಹ ಹರಸಾಹಸಪಟ್ಟು 84 ಕಿಲೋಮೀಟರ್ ಬಸ್ ಓಡಿಸಿ ಚಿಂಚೋಳಿ ತಲುಪಿದ್ದಾರೆ. ಇದನ್ನು ಸಾಹಸ ಎಂದು ಹೇಳಬೇಕೊ ಅಥವಾ ದುಸ್ಸಾಹಸ ಎಂದು ಬಣ್ಣಿಸಬೇಕು ಗೊತ್ತಾಗುತ್ತಿಲ್ಲ. ಆದರೆ ಆಡಳಿತದ ಅವ್ಯವಸ್ಥೆ ಎಂಬುದಂತೂ ಸ್ಪಷ್ಟವಾಗಿದೆ. ಆ 84 ಕಿಲೋಮೀಟರ್ ಬಸ್ ಚಲಿಸುತ್ತಿದ್ದಾಗ ಪ್ರಯಾಣಿಕರ ಮನಸ್ಥಿತಿ ಹೇಗಿದ್ದಿರಬಹುದು?’ ಎಂದು ಸುರೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುರೇಶ್ ಕುಮಾರ್ ಫೇಸ್​ಬುಕ್ ಪೋಸ್ಟ್

‘ಆ ಚಾಲಕ ಮತ್ತು ಕಂಡಕ್ಟರ್ ಇಬ್ಬರಿಗೂ ಸಾರಿಗೆ ಸಚಿವರು ಹೆಚ್ಚು ಬೆಳಕು ನೀಡಬಲ್ಲ ಮೊಬೈಲ್ ಉಪಕರಣಗಳನ್ನು ನೀಡಿ ಸನ್ಮಾನ ಮಾಡಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ಹಾಗೆಯೇ ಈ ಗ್ಯಾರಂಟಿಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸದಂತೆ ಕೋರಿಕೊಳ್ಳುತ್ತೇನೆ. ಅಂದ ಹಾಗೆ ಈ ಕುರಿತು ರಾಜ್ಯ ಗೃಹ ಸಚಿವರು ಅಂತಿಮ ತೀರ್ಪು ನೀಡುವುದು ಇನ್ನೂ ಬಾಕಿ ಇದೆ ಎಂದು ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಮೊಬೈಲ್ ಟಾರ್ಚ್ ನೆರವಿನಿಂದ ಬಸ್ ಚಲಾಯಿಸಿದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

Source link

ಮದುವೆ ಆಗಿ ಐದು ವರ್ಷಗಳ ಬಳಿಕ ದೂರ ಆದ ಖ್ಯಾತ ಕಿರುತೆರೆ ದಂಪತಿ – Kannada News | Tanvi Thakkar and Aditya Kapadia Divorce Ghum Hai Kisikey Pyaar Meiin Actress Ends 5 Year Marriage

ಸೆಲೆಬ್ರಿಟಿಗಳ ವಲಯದಲ್ಲಿ ಸಾಕಷ್ಟು ವಿಚ್ಛೇದನಗಳು ನಡೆಯುತ್ತಿವೆ. ಅದಕ್ಕೆ ಈಗ ಒಂದು ಹೊಸ ಸೇರ್ಪಡೆ ಆಗಿದೆ ಎಂದೇ ಹೇಳಬಹುದು. ಪ್ರಸಿದ್ಧ ಹಿಂದಿ ಧಾರಾವಾಹಿ ‘ಘುಮ್ ಹೈ ಕಿಸಿಕೇ ಪ್ಯಾರ್ ಮೇಯಿನ್’ ಖ್ಯಾತಿಯ ನಟಿ ತನ್ವಿ ಠಕ್ಕರ್ ತಮ್ಮ ವೈವಾಹಿಕ ಜೀವನಕ್ಕೆ ಮುಕ್ತಾಯ ಹಾಡಿದ್ದಾರೆ. ಪತಿ ಆದಿತ್ಯ ಕಪಾಡಿಯಾ ಅವರಿಂದ ದೂರವಾಗುತ್ತಿರುವುದಾಗಿ ಅವರು ಅಧಿಕೃತವಾಗಿ ಘೋಷಿಸಿದ್ದಾರೆ. ಐದು ವರ್ಷಗಳ ದಾಂಪತ್ಯ ಜೀವನದ ಬಳಿಕ ಈ ಜೋಡಿ ಬೇರ್ಪಡುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಬೇಸರದ ಸುದ್ದಿ

ನಟಿ ತನ್ವಿ ಠಕ್ಕರ್ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಲವರು ಪ್ರಶ್ನೆ ಕೇಳುತ್ತಿದ್ದರು ಎಂದು ಅವರು ಹೇಳಿದ್ದಾರೆ. ಸಾಕಷ್ಟು ಆಲೋಚನೆ ಮಾಡಿದ ನಂತರ ತಾವಿಬ್ಬರೂ ಬೇರೆಯಾಗುವ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಇದು ತಮ್ಮ ಜೀವನದ ಅತ್ಯಂತ ಕಠಿಣ ನಿರ್ಧಾರ ಎಂದು ತನ್ವಿ ಹೇಳಿದ್ದಾರೆ.

ಪರಸ್ಪರ ಗೌರವದಿಂದ ಬೇರ್ಪಡೆ

ನಮ್ಮ ನಡುವೆ ಯಾವುದೇ ಜಗಳ ಅಥವಾ ದ್ವೇಷ ಇಲ್ಲ ಎಂದು ತನ್ವಿ ಸ್ಪಷ್ಟಪಡಿಸಿದ್ದಾರೆ. ಇಬ್ಬರ ಕುಟುಂಬಗಳ ಹಿತದೃಷ್ಟಿಯಿಂದ ಪರಸ್ಪರ ಗೌರವ ನೀಡಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಮ್ಮಿಬ್ಬರ ಮುಂದಿನ ಜೀವನದ ಶಾಂತಿ ಮತ್ತು ನೆಮ್ಮದಿಗಾಗಿ ಈ ಹೆಜ್ಜೆ ಇಟ್ಟಿದ್ದೇವೆ. ಈ ಸಮಯದಲ್ಲಿ ಮಾಧ್ಯಮಗಳು ಮತ್ತು ಅಭಿಮಾನಿಗಳು ನಮ್ಮ ಖಾಸಗಿತನವನ್ನು ಗೌರವಿಸಬೇಕು. ಈ ವಿಷಯವಾಗಿ ಯಾರೂ ಪ್ರಶ್ನೆಗಳನ್ನು ಕೇಳಬೇಡಿ ಎಂದು ತನ್ವಿ ವಿನಂತಿಸಿದ್ದಾರೆ.

ಪ್ರೀತಿ ಮತ್ತು ಮದುವೆಯ ಜರ್ನಿ

‘ಏಕ್ ದೂಸ್ರೆ ಸೆ ಕರ್ತೆ ಹೈ ಪ್ಯಾರ್ ಹಮ್’ ಧಾರಾವಾಹಿಯ ಶೂಟಿಂಗ್ ಸೆಟ್‌ನಲ್ಲಿ ಇವರಿಬ್ಬರ ಪರಿಚಯವಾಗಿತ್ತು. 2013 ರಲ್ಲಿ ಇವರ ನಿಶ್ಚಿತಾರ್ಥ ನಡೆದಿತ್ತು. ದೀರ್ಘಕಾಲದ ಪ್ರೀತಿಯ ನಂತರ ಫೆಬ್ರವರಿ 16, 2021 ರಂದು ಇವರು ಮದುವೆಯಾಗಿದ್ದರು. ರಿಜಿಸ್ಟರ್ ಮದುವೆಯಾದ ಬಳಿಕ ಮನೆಯಲ್ಲೇ ಸರಳವಾಗಿ ಸಂಭ್ರಮಿಸಿದ್ದರು. ಇತ್ತೀಚೆಗಷ್ಟೇ ಜೂನ್ 19 ರಂದು ಇವರು ತಮ್ಮ ಮಗನ 3ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದರು.

ಇದನ್ನೂ ಓದಿ:

ಕಿರುತೆರೆಯಲ್ಲಿ ಇಬ್ಬರ ಪಯಣ

ತನ್ವಿ ಠಕ್ಕರ್ ಅವರು ‘ಬಾಹು ಹಮಾರಿ ರಜನೀಕಾಂತ್’ ಮತ್ತು ‘ಘುಮ್ ಹೈ ಕಿಸಿಕೇ ಪ್ಯಾರ್ ಮೇಯಿನ್’ ಧಾರಾವಾಹಿಗಳ ಮೂಲಕ ಜನಪ್ರಿಯರಾಗಿದ್ದಾರೆ. ಪತಿ ಆದಿತ್ಯ ಕಪಾಡಿಯಾ ಅವರು ಬಾಲ ನಟನಾಗಿ ಚಿತ್ರರಂಗಕ್ಕೆ ಬಂದವರು. ಪ್ರಸಿದ್ಧ ಮಕ್ಕಳ ಸರಣಿ ‘ಜಸ್ಟ್ ಮೊಹಬ್ಬತ್’ ಮತ್ತು ‘ಶಾಕಾ ಲಾಕಾ ಬೂಮ್ ಬೂಮ್’ ನಲ್ಲಿ ಅವರು ನಟಿಸಿದ್ದರು. ಇದರೊಂದಿಗೆ ‘ಬಡೇ ಅಚ್ಚೆ ಲಗ್ತೇ ಹೈ’ ಸೇರಿದಂತೆ ಹಲವು ಹಿಂದಿ ಹಾಗೂ ಗುಜರಾತಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಮಳೆಯ ಸಿಂಚನಕ್ಕೆ ಬೆಂಗಳೂರು ಸೇರಿ ರಾಜ್ಯಾದ್ಯಂತ ವಾಯು ಮಾಲಿನ್ಯದಲ್ಲಿ ಭಾರಿ ಇಳಿಕೆ! – Kannada News | Karnataka AQI Update: Air Quality Improves Across State, Moderate in Bengaluru

ಬೆಂಗಳೂರು ಸೇರಿ ರಾಜ್ಯಾದ್ಯಂತ ವಾಯು ಮಾಲಿನ್ಯದಲ್ಲಿ ಭಾರಿ ಇಳಿಕೆ!

ಬೆಂಗಳೂರು, ಜುಲೈ 06: ರಾಜ್ಯದಾದ್ಯಂತ ಮುಂಗಾರು ಮಳೆ ಚುರುಕಾಗಿರುವ ಹಿನ್ನೆಲೆಯಲ್ಲಿ ಇಂದು ಕರ್ನಾಟಕದಾದ್ಯಂತ ಗಾಳಿಯ ಗುಣಮಟ್ಟ ಗಮನಾರ್ಹವಾಗಿ ಸುಧಾರಿಸಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ಜನತೆಗೆ ನಿರಾಳ ತಂದಿದೆ. ಇಂದಿನ ವಾಯು ಗುಣಮಟ್ಟ ಸೂಚ್ಯಂಕದ (AQI) ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರಿನ ವಾಯು ಗುಣಮಟ್ಟ

ಬೆಂಗಳೂರಿನಲ್ಲಿ ಇಂದು ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ 55 ರಿಂದ 63ರ ಆಸುಪಾಸಿನಲ್ಲಿ ದಾಖಲಾಗಿದ್ದು, ಇದು ಸಾಧಾರಣ ವಿಭಾಗಕ್ಕೆ ಸೇರುತ್ತದೆ.

  • ಬಿಟಿಎಂ ಲೇಔಟ್ ಮತ್ತು ಜಯನಗರ: ಇಲ್ಲಿನ ಎಕ್ಯೂಐ 56 ರಷ್ಟಿದ್ದು, ವಾಯು ಗುಣಮಟ್ಟ ತೃಪ್ತಿದಾಯಕವಾಗಿದೆ.
  • ಬಸವನಗುಡಿ: ಮಾರುಕಟ್ಟೆ ಹಾಗೂ ವಾಹನ ಸಂಚಾರದ ಒತ್ತಡದಿಂದಾಗಿ ಇಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆ ಕಂಡುಬಂದಿದ್ದು, 65 ರಷ್ಟು ದಾಖಲಾಗಿದೆ.
  • ಆದರ್ಶ್ ಪಾಮ್ ರಿಟ್ರೀಟ್ ಮತ್ತು ಸುತ್ತಮುತ್ತಲಿನ ಐಟಿ ವಲಯ: ಇಲ್ಲಿ 55 ರಿಂದ 60 ರ ನಡುವೆ ವಾಯು ಗುಣಮಟ್ಟ ಸೂಚ್ಯಂಕ ವರದಿಯಾಗಿದೆ.

ಬೆಂಗಳೂರಿನ ಗಾಳಿಯಲ್ಲಿ ಪ್ರಮುಖವಾಗಿ ಕಣರೂಪದ ಮಾಲಿನ್ಯಕಾರಕಗಳಾದ PM10 (34 µg/m³) ಮತ್ತು PM2.5 (15 µg/m³) ನಿಯಂತ್ರಣದಲ್ಲಿವೆ. ಶ್ವಾಸಕೋಶದ ತೊಂದರೆ ಅಥವಾ ತೀವ್ರ ಅಸ್ತಮಾ ಇರುವವರು ಮಾತ್ರ ಮುಂಜಾನೆ ಹೊರಾಂಗಣ ಚಟುವಟಿಕೆಗಳ ಸಮಯದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು, ಉಳಿದಂತೆ ಸಾಮಾನ್ಯ ಜನರಿಗೆ ಯಾವುದೇ ಆರೋಗ್ಯದ ಅಪಾಯವಿಲ್ಲ.

ಕರ್ನಾಟಕದ ಇತರೆ ಪ್ರಮುಖ ನಗರಗಳ ಪರಿಸ್ಥಿತಿ

ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ಸತತವಾಗಿ ಭಾರಿ ಮಳೆಯಾಗುತ್ತಿರುವುದರಿಂದ ಇಲ್ಲಿನ ವಾಯು ಗುಣಮಟ್ಟ ಅತ್ಯಂತ ಉತ್ತಮ ಸ್ಥಿತಿಯಲ್ಲಿದ್ದು, AQI 40 ಕ್ಕಿಂತ ಕಡಿಮೆ ದಾಖಲಾಗಿದೆ. ಉತ್ತರ ಒಳನಾಡಿನ ಈ ಕೈಗಾರಿಕಾ ಮತ್ತು ವಾಣಿಜ್ಯ ನಗರಗಳಾದ ಬೆಳಗಾವಿ ಮತ್ತು ಬಳ್ಳಾರಿಯಲ್ಲಿ ಇಂದಿನ ಎಕ್ಯೂಐ 56 ರಿಂದ 60ರಷ್ಟಿದೆ. ಬಾಗಲಕೋಟೆಯ ವಾಯು ಗುಣಮಟ್ಟ ಸಂಪೂರ್ಣವಾಗಿ ಉತ್ತಮವಾಗಿದ್ದು, ಮಾಲಿನ್ಯದ ಪ್ರಮಾಣ ತೀರಾ ಕನಿಷ್ಠ ಮಟ್ಟದಲ್ಲಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಜುಲೈ ತಿಂಗಳ ಮಳೆಯ ಸಿಂಚನದಿಂದಾಗಿ ಇಡೀ ಕರ್ನಾಟಕದ ಗಾಳಿಯು ಸ್ವಚ್ಛವಾಗಿದ್ದು, ಉಸಿರಾಟಕ್ಕೆ ಯೋಗ್ಯವಾದ ಉತ್ತಮ ಪರಿಸರ ನಿರ್ಮಾಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version