Fallen Hair: ನೆಲದ ಮೇಲೆ ಬಿದ್ದಿರುವ ತಲೆ ಕೂದಲನ್ನು ತುಳಿಯಬಾರದು ಯಾಕೆ? ಶಾಸ್ತ್ರಗಳು ಹೇಳುವುದೇನು? – Kannada News | Don’t Step on Fallen Hair: Astrological Reasons and Its Impact on Your Life

ಉದುರಿದ ಕೂದಲನ್ನು ತುಳಿಯಬಾರದುImage Credit source: Getty Images

ದೈನಂದಿನ ಜೀವನದಲ್ಲಿ ನಾವೆಲ್ಲರೂ ಕೂದಲು ಬಾಚುವಾಗ ಒಂದಲ್ಲ ಒಂದು ಕೂದಲು ನೆಲದ ಮೇಲೆ ಬೀಳುವುದನ್ನು ನೋಡೇ ಇರುತ್ತೇವೆ. ಸಾಮಾನ್ಯವಾಗಿ ಹಿರಿಯರು “ನೆಲದ ಮೇಲೆ ಬಿದ್ದಿರುವ ಕೂದಲನ್ನು ತುಳಿಯಬೇಡ, ಅದು ಅಪಶಕುನ” ಎಂದು ಹೇಳುವುದನ್ನು ನೀವು ಕೇಳಿರಬಹುದು. ಇದು ಕೇವಲ ಮೂಢನಂಬಿಕೆಯಲ್ಲ, ಇದರ ಹಿಂದೆ ಆಳವಾದ ಧಾರ್ಮಿಕ ಹಾಗೂ ಜ್ಯೋತಿಷ್ಯ ಶಾಸ್ತ್ರದ ಕಾರಣಗಳಿವೆ. ಉದುರಿದ ಕೂದಲಿನ ಮೇಲೆ ಅಪ್ಪಿತಪ್ಪಿ ಕಾಲಿಟ್ಟರೆ ಬದುಕಿನಲ್ಲಿ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕೂದಲು ಮತ್ತು ಶುಕ್ರ ಗ್ರಹ:

ಹಿಂದೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೂದಲನ್ನು ಶುಕ್ರ ಗ್ರಹಕ್ಕೆ ಹೋಲಿಸಲಾಗುತ್ತದೆ. ಶುಕ್ರ ಗ್ರಹವು ಮನುಷ್ಯನ ಜೀವನದ ಸೌಂದರ್ಯ, ಐಶ್ವರ್ಯ ಮತ್ತು ಭೌತಿಕ ಸುಖಗಳನ್ನು ನಿಯಂತ್ರಿಸುವ ಶಕ್ತಿಯಾಗಿದೆ. ಯಾವಾಗ ಕೂದಲು ತಲೆಯಿಂದ ಉದುರಿ ನೆಲಕ್ಕೆ ಬೀಳುತ್ತದೆಯೋ, ಆಗಲೇ ಜ್ಯೋತಿಷ್ಯದ ಪ್ರಕಾರ ಶುಕ್ರ ಗ್ರಹ ದುರ್ಬಲಗೊಳ್ಳುತ್ತಿದ್ದಾನೆ ಎಂದರ್ಥ. ಇಂತಹ ಪರಿಸ್ಥಿತಿಯಲ್ಲಿ ಆ ಕೂದಲನ್ನು ಕಾಲಿನಿಂದ ತುಳಿದರೆ ನಮ್ಮ ಜೀವನದ ಸುಖ-ಸಂತೋಷಗಳಿಗೆ ಧಕ್ಕೆಯಾಗುತ್ತದೆ ಎಂದು ನಂಬಲಾಗಿದೆ.

ಮಹಿಳೆಯರ ಕೂದಲು:

ಯಾವುದೇ ಒಬ್ಬ ಮಹಿಳೆಯ ತಲೆಯಿಂದ ಉದುರಿದ ಕೂದಲು ಯಾರದೇ ಕಾಲಿನ ಕೆಳಗೆ ಬಂದರೆ, ಅದು ಆ ಮಹಿಳೆಗೂ ಒಳ್ಳೆಯದಲ್ಲ ಮತ್ತು ಅದನ್ನು ತುಳಿದ ವ್ಯಕ್ತಿಗೂ ಶುಭವಲ್ಲ. ಶಾಸ್ತ್ರಗಳ ಪ್ರಕಾರ, ಮಹಿಳೆಯರ ಉದುರಿದ ಕೂದಲನ್ನು ತುಳಿಯುವುದರಿಂದ ಆ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ, ಭೌತಿಕ ಸುಖಗಳು ದೂರವಾಗುತ್ತವೆ ಮತ್ತು ಅವರ ದೈಹಿಕ ಸೌಂದರ್ಯಕ್ಕೆ ಹಾನಿ ಉಂಟಾಗುತ್ತದೆ.

ಇದನ್ನೂ ಓದಿ: ಗರುಡ ಪುರಾಣದ ಪ್ರಕಾರ ಈ 4 ಕೆಟ್ಟ ಅಭ್ಯಾಸಗಳಿದ್ದರೆ ಕೋಟ್ಯಧಿಪತಿಯೂ ಭಿಕ್ಷುಕನಾಗುತ್ತಾನೆ!

ಪುರುಷರ ಕೂದಲು ತುಳಿದರೆ ಆರೋಗ್ಯಕ್ಕೆ ಕುತ್ತು!

ಕೇವಲ ಮಹಿಳೆಯರಷ್ಟೇ ಅಲ್ಲ, ಪುರುಷರು ಸಹ ತಾವೂ ಕೂದಲು ಬಾಚಿದಾಗ ಅಥವಾ ಶೇವ್ ಮಾಡಿದಾಗ ಉದುರುವ ಕೂದಲನ್ನು ತಕ್ಷಣವೇ ಕಸದ ಬುಟ್ಟಿಗೆ ಹಾಕಬೇಕು. ಪುರುಷರ ಕೂದಲು ತುಳಿದರೆ ಆ ವ್ಯಕ್ತಿಯ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೆ, ಇದರಿಂದ ಜಾತಕದಲ್ಲಿರುವ ಸೂರ್ಯ, ಮಂಗಳ ಮತ್ತು ಬೃಹಸ್ಪತಿ (ಗುರು) ಗ್ರಹಗಳು ದುರ್ಬಲಗೊಳ್ಳುತ್ತವೆ. ಇದರ ಪರಿಣಾಮವಾಗಿ ವ್ಯಕ್ತಿಯ ನಾಯಕತ್ವ ಗುಣ, ಶಕ್ತಿ, ಮತ್ತು ಧೈರ್ಯ ಕುಂದುತ್ತಾ ಹೋಗುತ್ತದೆ ಎಂದು ನಂಬಲಾಗಿದೆ.

ಪುಟಾಣಿ ಮಕ್ಕಳ ಕೂದಲು ಮತ್ತು ಚಂದ್ರ ಗ್ರಹದ ಪ್ರಭಾವ:

ಮಕ್ಕಳು ಜನಿಸಿದಾಗ ಅವರ ತಲೆಯ ಮೇಲಿರುವ ಮೃದುವಾದ ಕೂದಲನ್ನು (ಹುಟ್ಟು ಕೂದಲು ಅಥವಾ ಹೊಟ್ಟೆ ಕೂದಲು) ತುಂಬಾ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಈ ಕೂದಲು ಉದುರಿ ಯಾರಾದರೂ ಅದರ ಮೇಲೆ ಕಾಲಿಟ್ಟರೆ, ಮಗುವಿನ ಜಾತಕದಲ್ಲಿ ಚಂದ್ರ ಗ್ರಹ ದುರ್ಬಲನಾಗುತ್ತಾನೆ. ಚಂದ್ರನು ಮನಸ್ಸು ಮತ್ತು ಆರೋಗ್ಯಕ್ಕೆ ಕಾರಕನಾಗಿರುವುದರಿಂದ ಮಗುವಿನ ಆರೋಗ್ಯ ಪದೇ ಪದೇ ಕ್ಷೀಣಿಸಬಹುದು ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಪಿಎಫ್ ಪೋರ್ಟಲ್​ನಲ್ಲಿ ಆಗಲ್ಲ ಯುಎಎನ್ ಆಕ್ಟಿವೇಶನ್; UMANG ಆಪ್​ನಲ್ಲಿ ಮಾತ್ರ ಸಾಧ್ಯ; ಇಲ್ಲಿವೆ ಮಹತ್ವದ ಅಪ್​ಡೇಟ್ಸ್ – Kannada News | EPFO updates, UAN generation and activation only on Umang app, not on portal

ನವದೆಹಲಿ, ಜುಲೈ 5: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಯುನಿಫೈಡ್ ಮೆಂಬರ್ ಪೋರ್ಟಲ್ ಅನ್ನು (Unified Member Portal) ಅಪ್‌ಗ್ರೇಡ್ ಮಾಡಿದೆ. ಇದರ ಬೆನ್ನಲ್ಲೇ ಪಿಎಫ್ (PF) ಸಬ್​ಸ್ಕ್ರೈಬರ್ಸ್​ಗೆ ಕೆಲ ಮಹತ್ವದ ಬದಲಾವಣೆಗಳನ್ನು ತಂದಿದೆ. ಇನ್ಮುಂದೆ ಇಪಿಎಫ್‌ಒ ವೆಬ್‌ಸೈಟ್ ಪೋರ್ಟಲ್ ಮೂಲಕ ನೇರವಾಗಿ UAN ಆಕ್ಟಿವೇಶನ್ (UAN Activation) ಮಾಡಲು ಅಥವಾ ಹೊಸ UAN ಜನರೇಟ್ (New UAN Generation) ಮಾಡಲು ಸಾಧ್ಯವಿಲ್ಲ. ಈ ಸೇವೆಗಳನ್ನು ವೆಬ್‌ಸೈಟ್‌ನಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ಅವನ್ನು UMANG ಮೊಬೈಲ್ ಆಪ್‌ಗೆ ವರ್ಗಾಯಿಸಲಾಗಿದೆ. ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ವಂಚನೆಗಳನ್ನು ತಡೆಯಲು ಇಪಿಎಫ್‌ಒ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಪ್ರಮುಖ ಬದಲಾವಣೆಗಳು ಮತ್ತು ಹೊಸ ನಿಯಮಗಳು

  • ಯುಎಎನ್ ಆ್ಯಕ್ಟಿವೇಶನ್: ಹೊಸ ಉದ್ಯೋಗಿಗಳು ತಮಗೆ ಸಿಕ್ಕ ಯುಎಎನ್ ನಂಬರ್ ಅನ್ನು ಆಕ್ಟಿವೇಟ್ ಮಾಡಲು ಅಥವಾ ಮೊದಲ ಬಾರಿಗೆ ಹೊಸ ಯುಎನ್ ಪಡೆದುಕೊಳ್ಳಲು ಇಪಿಎಫ್‌ಒ ವೆಬ್‌ಸೈಟ್‌ಗೆ ಹೋಗುವಂತಿಲ್ಲ.
  • ಮುಖದ ಗುರುತು ಕಡ್ಡಾಯ: ಇನ್ಮುಂದೆ ನೀವು UMANG ಆಪ್ ಮೂಲಕ UAN ಆಕ್ಟಿವೇಟ್ ಅಥವಾ ಜನರೇಟ್ ಮಾಡಬೇಕಾದರೆ ಆಧಾರ್ ಆಧಾರಿತ ‘ಫೇಸ್ ಅಥೆಂಟಿಕೇಶನ್’ (Face Authentication- ಮುಖದ ಸ್ಕ್ಯಾನ್) ಮಾಡುವುದು ಕಡ್ಡಾಯವಾಗಿದೆ. ಕೇವಲ ಆಧಾರ್ ಒಟಿಪಿ (OTP) ಮೂಲಕ ಮಾತ್ರವೇ ಈ ಪ್ರಕ್ರಿಯೆ ಮುಗಿಸಲು ಇನ್ಮುಂದೆ ಸಾಧ್ಯವಾಗುವುದಿಲ್ಲ.
  • ಮರೆತುಹೋದ UAN ಪಡೆಯುವುದು ಸುಲಭ: ನಿಮ್ಮ UAN ನಂಬರ್ ಅನ್ನು ನೀವು ಮರೆತಿದ್ದರೆ, ಅದನ್ನು ಇಪಿಎಫ್‌ಒ ಪೋರ್ಟಲ್‌ನಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್/ವಿಳಾಸದ ಪುರಾವೆ ಅಪ್‌ಲೋಡ್ ಮಾಡಿ ಮತ್ತು ಒಟಿಪಿ ಪರಿಶೀಲಿಸುವ ಮೂಲಕ ಸುಲಭವಾಗಿ ಮರಳಿ ಪಡೆಯಬಹುದು (UAN Retrieval).
  • ಡೆತ್ ಕ್ಲೈಮ್ ಸೌಲಭ್ಯ: ದುರದೃಷ್ಟವಶಾತ್ ಪಿಎಫ್ ಸದಸ್ಯರು ಮರಣ ಹೊಂದಿದಾಗ ಅವರ ಕುಟುಂಬದವರು ಹಣ ಪಡೆಯಲು ಸಲ್ಲಿಸುವ ಡೆತ್ ಕ್ಲೈಮ್ (Death Claims) ಮತ್ತು ಪೆನ್ಷನ್ ಅರ್ಜಿಗಳನ್ನು ಎಂದಿನಂತೆ ಯುನಿಫೈಡ್ ಪೋರ್ಟಲ್ ವೆಬ್‌ಸೈಟ್ ಮೂಲಕವೇ ಸಲ್ಲಿಸಬೇಕಾಗುತ್ತದೆ. (ಗರಿಷ್ಠ 2MB ಗಾತ್ರದ PDF ದಾಖಲೆಗಳನ್ನು ಮಾತ್ರ ಅಪ್‌ಲೋಡ್ ಮಾಡಬೇಕು).

ಇದನ್ನೂ ಓದಿ: ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಗ್ಗೆ ತಪ್ಪು ಕಲ್ಪನೆಗಳು; ಸರ್ಕಾರ ಒಂದೊಂದಕ್ಕೂ ನೀಡಿದ ಉತ್ತರ ಇಲ್ಲಿದೆ

UMANG ಆಪ್ ಮೂಲಕ UAN ಆಕ್ಟಿವೇಟ್ ಮಾಡುವುದು ಹೇಗೆ?

  • ಹಂತ 1: ನಿಮ್ಮ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ UMANG App ಮತ್ತು ಭಾರತ ಸರ್ಕಾರದ ಅಧಿಕೃತ Aadhaar Face RD App (ಮುಖದ ಸ್ಕ್ಯಾನ್ ಮಾಡಲು ಇದು ಅಗತ್ಯ) ಎರಡನ್ನೂ ಡೌನ್‌ಲೋಡ್ ಮಾಡಿಕೊಳ್ಳಿ.
  • ಹಂತ 2: UMANG ಆಪ್ ಓಪನ್ ಮಾಡಿ, ಅದರಲ್ಲಿ ಇಪಿಎಫ್‌ಒ (EPFO) ಸರ್ವಿಸಸ್ ವಿಭಾಗಕ್ಕೆ ಹೋಗಿ.
  • ಹಂತ 3: ಅಲ್ಲಿ ಕಾಣಿಸುವ “UAN Services Through Face Auth” ಆಯ್ಕೆಯ ಅಡಿಯಲ್ಲಿ “UAN Activation” (ಹೊಸದಾಗಿ ಕ್ರಿಯೇಟ್ ಮಾಡುವುದಾದರೆ ‘UAN Allotment and Activation’) ಎಂಬುದನ್ನು ಕ್ಲಿಕ್ ಮಾಡಿ.
  • ಹಂತ 4: ನಿಮ್ಮ UAN ನಂಬರ್, ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನಂತರ ನಿಮ್ಮ ಮೊಬೈಲ್ ಕ್ಯಾಮೆರಾ ಆನ್ ಆಗುತ್ತದೆ, ಅದರ ಮೂಲಕ ನಿಮ್ಮ ಮುಖವನ್ನು ಸ್ಕ್ಯಾನ್ (Face Auth) ಮಾಡಿ. ಆಧಾರ್ ಲಿಂಕ್ಡ್ ಮೊಬೈಲ್‌ಗೆ ಬರುವ ಒಟಿಪಿ ನಮೂದಿಸಿದರೆ ನಿಮ್ಮ UAN ತಕ್ಷಣವೇ ಆಕ್ಟಿವೇಟ್ ಆಗುತ್ತದೆ.

ಇದನ್ನೂ ಓದಿ: ರಾಷ್ಟ್ರೀಯ ಗೋಕುಲ್ ಮಿಷನ್; ಸರ್ಕಾರದ ಸಬ್ಸಿಡಿ, ಸಹಾಯಧನಗಳನ್ನು ಬಳಸಿ ಹೈನುಗಾರಿಕೆಯಿಂದ ಆದಾಯ ಗಳಿಸಿ

ಪಿಎಫ್ ಚಂದಾದಾರರಿಗೆ ಕಿವಿಮಾತು: ತಂತ್ರಜ್ಞಾನ ಅಪ್‌ಗ್ರೇಡ್ ಆಗಿರುವುದರಿಂದ ಮೊದಲ ಎರಡು ವಾರಗಳ ಕಾಲ ಆನ್‌ಲೈನ್‌ನಲ್ಲಿ ಕ್ಲೈಮ್ ಸೆಟಲ್‌ಮೆಂಟ್ ಮತ್ತು ಪರಿಶೀಲನೆಗೆ ಎಂದಿಗಿಂತ ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. ಸರ್ವರ್ ದಟ್ಟಣೆ ತಪ್ಪಿಸಲು ಉದ್ಯೋಗದ ಬಿಡುವಿನ ಅವಧಿಯಲ್ಲಿ (Peak Hours ಹೊರತುಪಡಿಸಿ) ಲಾಗಿನ್ ಮಾಡಲು ಪ್ರಯತ್ನಿಸಿ ಮತ್ತು ಒಂದೇ ಅರ್ಜಿಯನ್ನು ಪದೇ ಪದೇ ಸಬ್ಮಿಟ್ ಮಾಡಬೇಡಿ ಎಂದು ಇಪಿಎಫ್‌ಒ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಈ ಹೊಸ ಮಾಫಿಯಾ ಬಗ್ಗೆ ಎಚ್ಚರ! ಪ್ರತಿಷ್ಠಿತ ಕಾಲೇಜಿನಲ್ಲಿ ಸೀಟ್​​ ಕೊಡಿಸುವುದಾಗಿ ಲಕ್ಷಾಂತರ ರೂ ವಂಚನೆ – Kannada News | College Admission Scams: Student Lose Lakhs to Fake Seat Promises

ಹುಬ್ಬಳ್ಳಿ, ಜುಲೈ 05: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ” ಎಂಬ ನಾಣ್ಣುಡಿಯಂತೆ, ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರ ಜಾಲ ದಿನೇದಿನೆ ವಿಸ್ತರಿಸುತ್ತಲೇ ಇದೆ. ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಣ ಡಬಲ್, ಪಾರ್ಟ್-ಟೈಮ್ ಉದ್ಯೋಗದ ಆಮಿಷ ಒಡ್ಡುತ್ತಿದ್ದ ವಂಚಕರು, ಇದೀಗ ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಗುರಿಯಾಗಿಸಿಕೊಂಡು ವಂಚನೆಗೆ ಇಳಿದಿದ್ದಾರೆ. ಪ್ರತಿಷ್ಠಿತ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸೀಟು (Admission Scams) ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ ದೋಚುತ್ತಿರುವ ಗ್ಯಾಂಗ್ ಸಕ್ರಿಯವಾಗಿದ್ದು, ಇದಕ್ಕೆ ತಾಜಾ ಉದಾಹರಣೆಯಾಗಿ ಹುಬ್ಬಳ್ಳಿಯ (Hubballi) ವಿದ್ಯಾರ್ಥಿನಿಯೊಬ್ಬಳು (Students) ಬರೋಬ್ಬರಿ 16 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾಳೆ.

ಜಾಹೀರಾತು ನಂಬಿ ಲಕ್ಷಾಂತರ ರೂ ಕಳೆದುಕೊಂಡ ವಿದ್ಯಾರ್ಥಿನಿ

ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ಸ್ಫೂರ್ತಿ ಎಂಬ ವಿದ್ಯಾರ್ಥಿನಿಯೇ ವಂಚನೆಗೆ ಒಳಗಾದ ದುರ್ದೈವಿ. ಈಕೆ ಇನ್‌ಸ್ಟಾಗ್ರಾಮ್‌ನಲ್ಲಿ ‘ಟ್ರಸ್ಟ್‌ಲೈನ್ ಎಜುಕೇಶನ್’ ಎಂಬ ಐಡಿಯೊಂದರಲ್ಲಿದ್ದ ಲಿಂಕ್ ಅನ್ನು ಕ್ಲಿಕ್ ಮಾಡಿದ್ದಾಳೆ. ಅದರಲ್ಲಿ ಹೈದರಾಬಾದ್‌ನ ಪ್ರತಿಷ್ಠಿತ ‘ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್’ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ವಂಚಕರು ಜಾಹೀರಾತು ನೀಡಿದ್ದರು. ಇದನ್ನು ನಿಜವೆಂದು ನಂಬಿದ ವಿದ್ಯಾರ್ಥಿನಿ, ಅದರಲ್ಲಿ ನೀಡಲಾಗಿದ್ದ ಮೊಬೈಲ್ ನಂಬರ್​ಗೆ ಕರೆ ಮಾಡಿದ್ದಾಳೆ. ಆ ಕಡೆಯಿಂದ ಮಾತನಾಡಿದ ಕಿರಾತಕರು ಅಡ್ಮಿಷನ್‌ಗಾಗಿ ವಿದ್ಯಾರ್ಥಿನಿಯ ಶೈಕ್ಷಣಿಕ ದಾಖಲಾತಿಗಳನ್ನು ಪಡೆದುಕೊಂಡಿದ್ದಾರೆ. ಆದರೆ ಸೀಟ್ ಕೊಡಿಸುವ ಬದಲಾಗಿ ಲಕ್ಷ ಲಕ್ಷ ಹಣ ಪೀಕಿದ್ದಾರೆ.

ಹಂತ ಹಂತವಾಗಿ ಹಣ ಪೀಕಿದ ಖದೀಮರು

ಹೈದ್ರಾಬಾದ್​ನ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಕಾಲೇಜ್​​ಗೆ ನಿಮ್ಮ ಅರ್ಜಿ ಹಾಕಿದ್ದೇವೆ. ಅದು ಅನುಮೋದನೆ ಕೂಡಾ ಆಗಿದೆ. ನೀವು ಶುಲ್ಕ ಕಟ್ಟಿದ ತಕ್ಷಣ ನಿಮ್ಮ ಸೀಟ್ ಖಚಿತವಾಗುತ್ತದೆ ಎಂದು ಹೇಳಿದ್ದರಂತೆ. ವಂಚಕರ ಮಾತನ್ನು ನಂಬಿದ ವಿದ್ಯಾರ್ಥಿನಿ, ಪಾಲಕರ ಜೊತೆ ಮಾತನಾಡಿ ಹಂತಹಂತವಾಗಿ ಬರೋಬ್ಬರಿ 16 ಲಕ್ಷ 45 ಸಾವಿರ ರೂ ಹಣವನ್ನು ಅವರು ಹೇಳಿದ ಖಾತೆಗೆ ಹಾಕಿದ್ದಳು.

ಇದನನ್ನೂ ಓದಿ: ಸರ್ಕಾರದ ಕ್ರಮಕ್ಕೆ ಕಂಗಾಲಾದ ವಯೋವೃದ್ಧ ಪಿಂಚಣಿದಾರರು: ಕಚೇರಿಗೆ ಅಲೆದಾಟ

ಹಣ ಹಾಕಿದ ಮೇಲೆ  ಸೀಟ್ ಬಗ್ಗೆ ಮಾಹಿತಿ ಕೇಳಿದಾಗ ವಂಚಕರು ಫೋನ್ ಸ್ವಿಚ್ ಆಪ್ ಮಾಡಿಕೊಂಡಿದ್ದಾರೆ. ಇತ್ತ ಕಾಲೇಜ್​​ ನಂಬರ್​ಗೆ ಕರೆ ಮಾಡಿದಾಗ ಅವರು ಕೂಡ ನಮ್ಮಲ್ಲಿ ನಿಮ್ಮ ಹೆಸರಿನಲ್ಲಿ ಯಾವುದೇ ಸೀಟ್ ನೀಡಲಾಗಿಲ್ಲ. ಯಾವುದೇ ಅರ್ಜಿ ಕೂಡ ಬಂದಿಲ್ಲ ಎಂದಿದ್ದಾರೆ. ಆಗ ವಿದ್ಯಾರ್ಥಿನಿ ಮತ್ತು ಪಾಲಕರಿಗೆ ಗೊತ್ತಾಗಿದೆ, ನಾವು ಮೋಸ ಹೋಗಿದ್ದೇವೆ ಅಂತ.

ಸಿಇಎನ್ ಪೊಲೀಸ್ ಠಾಣೆಗೆ ದೂರು

ಸದ್ಯ ವಿದ್ಯಾರ್ಥಿನಿ ಹುಬ್ಬಳ್ಳಿಯ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಯಾರಾದರೂ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟ್ ಕೊಡಿಸುತ್ತೇವೆ ಅಂತ ಹೇಳಿದರೆ ಅವರ ಖಾತೆಗೆ ಹಣ ಹಾಕುವ ಮೊದಲು ಕಾಲೇಜಿಗೆ ಅಥವಾ ವಿಶ್ವವಿದ್ಯಾಲಯಕ್ಕೆ ನೇರವಾಗಿ ಭೇಟಿ ಮಾಡಿ ವಿಚಾರಣೆ ಮಾಡುವುದು ಸೂಕ್ತ. ಇಲ್ಲದಿದ್ದರೆ ನಿಮ್ಮ ಖಾತೆ ಖಾಲಿಯಾಗುತ್ತೆ ವಿನಃ ಸೀಟ್ ಸಿಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಬಾಲ್ಯದ ಭರವಸೆ ಈಡೇರಿಸಿದ ಮಗ; ಮೊದಲ ಬಾರಿಗೆ ತಾಯಿಯನ್ನು ಹೆಲಿಕಾಪ್ಟರ್ ಹತ್ತಿಸಿದ ಯುವಕ – Kannada News | A son fulfilled a childhood promise by taking his mother on a helicopter ride for the first time.

ಸಾಮಾನ್ಯವಾಗಿ ಈ ಮಕ್ಕಳು ಸಣ್ಣ ವಯಸ್ಸಿನಲ್ಲಿ ಹೆತ್ತವರ ಮುಂದೆ ನಾವು ದೊಡ್ಡವರು ಆದ ಮೇಲೆ ಹಾಗೆ ಆಗುತ್ತೇವೆ, ಹೀಗೆ ಆಗುತ್ತೇವೆ. ನಿಮ್ಮನ್ನು ಊರು ಸುತ್ತಿಸುತ್ತೇವೆ ಹೀಗೆ ಹೇಳುವುದನ್ನು ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ಯುವಕನು ಕೊನೆಯ ತನ್ನ ತಾಯಿಗೆ (mother) ಬಾಲ್ಯದಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಿ, ಹೆತ್ತಮ್ಮನ ಮೊಗದಲ್ಲಿ ನಗು ಮೂಡಿಸಿದ್ದಾನೆ. ತಾನು ಬಾಲ್ಯದಲ್ಲಿ ಹೇಳಿದ್ದಂತೆ ಅಮ್ಮನನ್ನು ಮೊದಲ ಬಾರಿಗೆ ಹೆಲಿಕಾಪ್ಟರ್ ಹತ್ತಿಸಿ ಆಕಾಶದಲ್ಲಿ ಹಾರಾಡುವಂತೆ ಮಾಡಿದ್ದಾನೆ. ಈ ಹೃದಯ ಸ್ಪರ್ಶಿ ಕ್ಷಣದ ಕ್ಲಿಪಿಂಗ್ ನೆಟ್ಟಿಗರ ಹೃದಯ ಗೆದ್ದಿದೆ.

ಯೋಗೇಶ್ ರಾವತ್ (yogeshrawat04) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ಗೆ ನನ್ನ ಹೆಲಿಕಾಪ್ಟರ್ ಸವಾರಿ ಎಂಬ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ, ನಾನು ದೊಡ್ಡವನಾದಾಗ ಅವಳನ್ನು ಹೆಲಿಕಾಪ್ಟರ್‌ನಲ್ಲಿ ಕೂರಿಸುತ್ತೇನೆ ಎಂದು ನನ್ನ ಬಾಲ್ಯದಲ್ಲಿ ನನ್ನ ತಾಯಿಗೆ ಭರವಸೆ ನೀಡಿದ್ದೆ, ಆದ್ದರಿಂದ ಇಂದು ಆ ದಿನ ಬಂದಿದೆ. ಆದರೆ, ನನ್ನ ತಾಯಿ ಹೆಲಿಕಾಪ್ಟರ್ ನೋಡಿದ ತಕ್ಷಣ ಭಯಭೀತರಾದರು. ಅಮ್ಮನ ಮುಖದಲ್ಲಿನ ಈ ನಗುವನ್ನು ನೋಡಿ. ಆಕೆ ಹೆಲಿಕಾಪ್ಟರ್‌ನಲ್ಲಿ ಕುಳಿತುಕೊಳ್ಳಲು ಹೆದರುತ್ತಿದ್ದಾರೆ. ಅವಳು ಹಿಂದೆಂದೂ ಈ ರೀತಿಯ ಯಾವುದರಲ್ಲೂ ಕುಳಿತಿರಲಿಲ್ಲ ಎಂದು ಹೇಳಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

ಅದೇಗೋ ನಾನು ಅಮ್ಮನನ್ನು ಒಳಗೆ ಕೂರಿಸಿ, ಅಮ್ಮ ಎಷ್ಟು ಭಯಪಡುತ್ತಿದ್ದಾಳೆ ಎಂದು ನೋಡಿದೆ. ಅವಳು ನನ್ನ ಕಾಲು ಹಿಡಿದುಕೊಂಡು ಕುಳಿತಿದ್ದಾಳೆ.. ಆದರೆ ನಾನು ಎಲ್ಲಿಗೂ ಹೋಗಲ್ಲಏನೂ ಆಗುವುದಿಲ್ಲ, ನಾನು ನಿಮ್ಮೊಂದಿಗಿದ್ದೇನೆ ಎಂದು ನಾನು  ತನ್ನ ತಾಯಿಗೆ ಧೈರ್ಯ ತುಂಬಿದೆ. ಹೆಲಿಕಾಪ್ಟರ್ ಆರಂಭವಾಗುತ್ತಿದ್ದಂತೆ, ಅಮ್ಮ ಕ್ರಮೇಣ ಆರಾಮದಾಯಕವಾಗಿದ್ದು, ತುಂಬಾ ಸಂತೋಷವಾಗಿದ್ದಾಳೆ. ಈ ವಿಡಿಯೋದ ಕೊನೆಗೆ ರಾವತ್ ತನ್ನ ತಾಯಿ ಬಳಿ ಅನುಭವ ಹೇಗಿತ್ತು ಎಂದು ಕೇಳಿದಾಗ ತುಂಬಾನೇ ಚೆನ್ನಾಗಿತ್ತು ಎಂದು ವಿವರಿಸಿದ್ದಾನೆ.

ಇದನ್ನೂ ಓದಿ: ತನ್ನ ಓದಿಗಾಗಿ ಚಿನ್ನದ ಬಳೆಗಳನ್ನು ಅಡವಿಟ್ಟ ಅಮ್ಮ; ತಾಯಿಯ ತ್ಯಾಗ ನೆನಪಿಸಿಕೊಂಡ ಮಗಳು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತಾಯಿಯ ಸಂತೋಷವೇ ಜೀವನದ ದೊಡ್ಡ ಸಾಧನೆ ಎಂದಿದ್ದಾರೆ. ಇನ್ನೊಬ್ಬರು, ನನ್ನನ್ನು ಭಾವುಕನನ್ನಾಗಿ ಮಾಡಿತು, ದೇವರು ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇಂತಹ ಮಗನನ್ನು ಪಡೆದ ನೀವೇ ಪುಣ್ಯವಂತರು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಬಾರಿ ಮಳೆಗಾಲದಲ್ಲಿ ತುಂಬಿದ ಕರ್ನಾಟಕದ ಮೊದಲ ಡ್ಯಾಂನ ಭೋರ್ಗರೆತ ಹೇಗಿದೆ ನೋಡಿ – Kannada News | Crest gates of Shivamogga Tunga reservoir lifted to release excess water

ಶಿವಮೊಗ್ಗ (ಜುಲೈ 05): ಜೂನ್ ತಿಂಗಳಲ್ಲಿ ಮುಂಗಾರು ಮಳೆ ಕೊರತೆಯಿಂದ ಶಿವಮೊಗ್ಗ ತಾಲೂಕಿನ ಗಾಜನೂರಿನ ತುಂಗಾ ಸೇರಿದಂತೆ ಹಲವು ಜಲಾಶಯಗಳು ಬತ್ತಿ ಹೋಗಿವೆ. ಆದ್ರೆ, ಜುಲೈ ಆರಂಭದಲ್ಲಿ ಮಲೆನಾಡು ಭಾಗದಲ್ಲಿ ಕ್ರಮೇಣ ಮುಂಗಾರು ಮಳೆ ಚುರುಕುಗೊಳ್ಳಲಾರಂಭಿಸಿದೆ. ಹೀಗಾಗಿ ಶಿವಮೊಗ್ಗ ತಾಲೂಕಿನ ಗಾಜನೂರಿನ ತುಂಗಾ ಜಲಾಶಯ (Shivamogga Tunga reservoir) ಭರ್ತಿಯಾಗಿದೆ. 3.24 ಟಿಎಂಸಿ ಸಾಮರ್ಥ್ಯ ಗಾಜನೂರಿನ ತುಂಗಾ ಜಲಾಶಯವು ಪ್ರತಿ ವರ್ಷ ಜೂನ್ ಮೊದಲ ವಾರದಲ್ಲಿ ಭರ್ತಿಯಾಗುತ್ತಿತ್ತು. ಆದ್ರೆ ಬಾರಿ ಆರಂಭದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಒಂದು ತಿಂಗಳು ತಡವಾಗಿ ಅಂದ್ರೆ ಜುಲೈ ಮೊದಲ ವಾರದಲ್ಲಿ ತುಂಗಾ ಜಲಾಶಯ ತುಂಬಿದೆ. ಇದರಿಂದ 10 ಗೇಟ್ ಓಪನ್ ಮಾಡಿ 20 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಬಿಡಲಾಗಿದೆ. ಇದರೊಂದಿಗೆ ಈ ಬಾರಿಯ ಮಳೆಗಾಲದಲ್ಲಿ ತುಂಬಿದ ಕರ್ನಾಟಕದ ಮೊದಲ ಡ್ಯಾಂ ಇದಾಗಿದ್ದು, ಭೋರ್ಗರೆತ ಹೇಗಿದೆ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆಮಿರ್ ಖಾನ್ ಮೂರನೇ ಪತ್ನಿ ಬೆಂಗಳೂರಿನ ಗೌರಿ ಯಾರು? ಭಾರತ ಸ್ವಾತಂತ್ರ್ಯ ಹೋರಾಟದೊಂದಿಗೆ ಅವರಿಗಿದೆ ಸಂಬಂಧ – Kannada News | Who is Aamir Khan’s wife Gauri Spratt, what is her background

ಬಾಲಿವುಡ್ ಸ್ಟಾರ್ ನಟ ಆಮಿರ್ ಖಾನ್ (Aamir Khan) ಇಂದು (ಜೂನ್ 5) ಗೌರಿ ಸ್ಪ್ರಾಟ್ ಅವರನ್ನು ಮುಂಬೈನ ತಮ್ಮ ನಿವಾಸದಲ್ಲಿ ವಿವಾಹವಾಗಿದ್ದಾರೆ. ಗೌರಿ ಸ್ಪ್ರಾಟ್ ಅಸಲಿಗೆ ಬೆಂಗಳೂರಿನವರು. ಆಮಿರ್ ಖಾನ್ ಹಾಗೂ ಗೌರಿ ಜೊತೆ-ಜೊತೆಯಾಗಿ ಓಡಾಡಲು ಆರಂಭಿಸಿದಾಗಿನಿಂದಲೂ ಯಾರು ಈ ಗೌರಿ ಎಂಬ ಕುತೂಹಲ ಹಲವರಿಗೆ ಇತ್ತು. ಈ ಹಿಂದೆ ಎರಡು ಬಾರಿ ಆಮಿರ್ ಖಾನ್ ಚಿತ್ರರಂಗಕ್ಕೆ ಸಂಬಂಧಿಸಿದವರನ್ನೇ ವಿವಾಹವಾಗಿದ್ದರು. ಆದರೆ ಗೌರಿ ಚಿತ್ರರಂಗದೊಂದಿಗೆ ಸಂಬಂಧಿಸಿದವರಲ್ಲ. ಅಷ್ಟಕ್ಕೂ ಯಾರು ಈ ಗೌರಿ ಸ್ಪ್ರಾಟ್?

ಬೆಂಗಳೂರಿನಲ್ಲಿ ಜನಿಸಿದ ಗೌರಿ ಸ್ಪ್ರ್ಯಾಟ್ ಅವರು ಬಹುಮುಖ ಪ್ರತಿಭೆಯುಳ್ಳ ಉದ್ಯಮಿ. ಫ್ಯಾಷನ್, ಸ್ಟೈಲಿಂಗ್ ಮತ್ತು ಉದ್ಯಮಶೀಲತೆಯಲ್ಲಿ ಇವರು ದೀರ್ಘಕಾಲದ ಅನುಭವವನ್ನು ಹೊಂದಿದ್ದಾರೆ. ಗೌರಿ ಅವರ ಕುಟುಂಬಕ್ಕೆ ಸ್ವಾತಂತ್ರ್ಯ ಹೋರಾಟದೊಂದಿಗೆ ಲಿಂಕ್ ಇದೆ. ಗೌರಿ ಅವರ ತಾತ ಫಿಲಿಫ್ ಸ್ಪಾರ್ಟ್, ಮೂಲತಃ ಇಂಗ್ಲೆಂಡ್​​ನವರಾದರೂ ಸಹ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ಕೊಡುಗೆ ನೀಡಿದವರು. ಬರಹಗಾರರು, ಕಮ್ಯೂನಿಸ್ಟ್ ಚಿಂತಕರು ಆಗಿದ್ದ ಫಿಲಿಫ್, 1920 ರಲ್ಲಿ ಭಾರತಕ್ಕೆ ಬಂದು ಇಲ್ಲಿಯೇ ನೆಲೆಸಿ, ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದರು. ಗೌರಿ ಅವರ ತಂದೆ ರಾಬರ್ಟ್ ಸ್ಪಾರ್ಟ್, ಉದ್ಯಮಿ ಆಗಿದ್ದರು. ತಾಯಿ ರೀಟಾ ಸ್ಪಾರ್ಟ್ ಸಹ ಉದ್ಯಮಿ ಆಗಿದ್ದರು.

ಗೌರಿ ಸ್ಪಾರ್ಟ್ ಅವರು ಊಟಿಯ ಪ್ರತಿಷ್ಠಿತ ಬ್ಲೂ ಮೌಂಟೇನ್ ಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು. 2004ರಲ್ಲಿ ಲಂಡನ್‌ನ ಯೂನಿವರ್ಸಿಟಿ ಆಫ್ ದಿ ಆರ್ಟ್ಸ್‌ನಿಂದ ‘ಫ್ಯಾಷನ್, ಸ್ಟೈಲಿಂಗ್ ಮತ್ತು ಫೋಟೋಗ್ರಫಿ’ ವಿಷಯದಲ್ಲಿ ಫೌಂಡೇಶನ್ ಡಿಗ್ರಿ ಪಡೆದುಕೊಂಡರು. ತಮ್ಮ ತಾಯಿ ರೀಟಾ ಸ್ಪ್ರ್ಯಾಟ್ ಅವರಿಂದ ಸ್ಫೂರ್ತಿ ಪಡೆದ ಗೌರಿ, ಬೆಂಗಳೂರಿನ ಮ್ಯಾಗ್ರತ್ ರಸ್ತೆಯಲ್ಲಿ ‘ಸ್ಪ್ರ್ಯಾಟ್ ಹೇರ್ ಸ್ಟುಡಿಯೋ’ವನ್ನು ತಮ್ಮ ಸಹೋದರಿ ಶೌನಾ ಅವರೊಂದಿಗೆ ನಡೆಸುತ್ತಿದ್ದರು. ನಂತರ ಈ ಸ್ಟುಡಿಯೋವನ್ನು ‘ಬಿ ಬ್ಲಂಟ್’ ನೆಟ್‌ವರ್ಕ್‌ಗೆ ಮಾರಾಟ ಮಾಡಿದರು. ಪ್ರಸ್ತುತ ಅವರು ಮುಂಬೈನಲ್ಲಿ ಬಿ ಬ್ಲಂಟ್ ಫ್ರಾಂಚೈಸಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ:ಸರಳವಾಗಿ ನಡೆದ ಆಮಿರ್ ಖಾನ್ ಮೂರನೇ ಮದುವೆ, ಅತಿಥಿಗಳು ಯಾರ್ಯಾರು?

2005 ರಿಂದ 2010 ರವರೆಗೆ ‘ಮಾರ್ಮಲೇಡ್’ ಸಂಸ್ಥೆಯ ಪಾಲುದಾರರಾಗಿದ್ದರು. ನಂತರ ‘3’C ಟೆಕ್ಸ್ ಪ್ರೈವೇಟ್ ಲಿಮಿಟೆಡ್’ನಲ್ಲಿ ನಿರ್ದೇಶಕಿಯಾಗಿ ಮತ್ತು ಡಿಸೈನ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ‘ದಿ ಲೆದರ್ ಬ್ಯೂಟಿಕ್’ನಲ್ಲಿ ಕನ್ಸಲ್ಟಿಂಗ್ ಡಿಸೈನರ್ ಆಗಿಯೂ ಕೆಲಸ ಮಾಡಿದ್ದಾರೆ. ಪ್ರಸ್ತುತ ಅವರು ‘ಆಮಿರ್ ಖಾನ್ ಪ್ರೊಡಕ್ಷನ್ಸ್’ನೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದು, ಚಲನಚಿತ್ರ ಮತ್ತು ಪ್ರಚಾರದ ಕಾರ್ಯಕ್ರಮಗಳಲ್ಲಿ ತಮ್ಮ ಸೃಜನಶೀಲತೆ ಮತ್ತು ವ್ಯವಸ್ಥಾಪನಾ ಕೌಶಲವನ್ನು ಬಳಸುತ್ತಿದ್ದಾರೆ.

ಆಮಿರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಅವರು ಕಳೆದ 25 ವರ್ಷಗಳಿಂದ ಪರಸ್ಪರ ಪರಿಚಯವಿದ್ದವರು. 25 ವರ್ಷಗಳ ಹಿಂದೆಯೇ ಇವರು ಸ್ನೇಹಿತರಾಗಿದ್ದರು. ಆದರೆ ಗೌರಿ ಶಿಕ್ಷಣಕ್ಕಾಗಿ ಲಂಡನ್​​ಗೆ ಹೋದರು, ಆಮಿರ್ ಖಾನ್ ಸಿನಿಮಾಗಳಲ್ಲಿ ಬ್ಯುಸಿ ಆದರು. ಒಬ್ಬರನ್ನೊಬ್ಬರು ಮರೆತೆ ಹೋಗಿದ್ದರು. ಆದರೆ ಇತ್ತೀಚೆಗೆ ಆಮಿರ್ ಖಾನ್ ಅವರ ಸಂಬಂಧಿ ನುಜಹತ್ ಖಾನ್ ಅವರಿಂದ ಈ ಇಬ್ಬರು ಮತ್ತೆ ಸಂಪರ್ಕಕ್ಕೆ ಬಂದರು. ಬಳಿಕ ಹಳೆಯ ಸ್ನೇಹ ಮತ್ತೆ ಚಿಗುರಿತು. ಇಬ್ಬರೂ ಮತ್ತೆ ಸ್ನೇಹಿತರಾದರು. ಈಗ ಮದುವೆಯಾಗಿ ಗಂಡ-ಹೆಂಡತಿ ಆಗಿದ್ದಾರೆ. ಅಂದಹಾಗೆ ಗೌರಿಗೆ ಈ ಹಿಂದೆಯೇ ಮದುವೆಯಾಗಿ ವಿಚ್ಛೇದನ ಸಹ ಆಗಿದೆ. ಹಿಂದಿನ ಮದುವೆಯಿಂದ ಗೌರಿ ಅವರಿಗೆ ಒಬ್ಬ ಮಗ ಸಹ ಇದ್ದಾನೆ. ಇನ್ನು ಆಮಿರ್ ಖಾನ್​​ಗೆ ಇದು ಮೂರನೇ ಮದುವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದುರಂತ್ ಎಕ್ಸ್​ಪ್ರೆಸ್ ರೈಲಿಗೆ ಬಾಂಬ್ ಬೆದರಿಕೆ: ಪ್ರಯಾಣಿಕರನ್ನ ಕೆಳಗಿಳಿಸಿ ತಪಾಸಣೆ, ಓರ್ವ ವಶಕ್ಕೆ! – Kannada News | Kolar: Bomb Threat to Duronto Express; Passengers Evacuated, One Person Detained

ಕೋಲರ, ಜುಲೈ 05: ಕೋಲ್ಕತ್ತಾದ ಹೌರಾ ಜಂಕ್ಷನ್‌ನಿಂದ ಬೆಂಗಳೂರಿನ ಎಸ್‌ಎಂವಿಟಿಗೆ ಆಗಮಿಸುತ್ತಿದ್ದ ದುರಂತ್ ಎಕ್ಸ್‌ಪ್ರೆಸ್ ರೈಲಿಗೆ ಕಿಡಿಗೇಡಿಯಿಂದ ಬಾಂಬ್ ಬೆದರಿಕೆ ಕರೆ ಬಂದಿದೆ. ಹೀಗಾಗಿ ತಕ್ಷಣ ಅಲರ್ಟ್ ಆದ ರೈಲ್ವೆ ಪೊಲೀಸರು ಕೋಲಾರ ಜಿಲ್ಲೆಯ ಬಂಗಾರಪೇಟೆ ರೈಲ್ವೆ ಜಂಕ್ಷನ್‌ನಲ್ಲಿ ರೈಲು ನಿಲ್ಲಿಸಿ ಪರಿಶೀಲನೆ ಮಾಡಿದರು. ಈ ವೇಳೆ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಸಿಬ್ಬಂದಿ ಪ್ರಯಾಣಿಕರನ್ನು ರೈಲಿನಿಂದ ಕೆಳಗಿಳಿಸಿ ಬಂಗಾರಪೇಟೆ ಪ್ಲಾಟ್​ಫಾರ್ಮ್ ನಂ.1ರಲ್ಲಿ ತಪಾಸಣೆ ಮಾಡಿದರು. ಇನ್ನು ದುರಂತ್ ಎಕ್ಸ್‌ಪ್ರೆಸ್ ರೈಲಿಗೆ ಬಾಂಬ್​ ಬೆದರಿಕೆ ಕರೆ ಮಾಡಿದ್ದ ಓರ್ವ ಯುವಕನನ್ನು ಜಿಲ್ಲೆಯ ಬಂಗಾರಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Source link

ಬೇಲಿಯೇ ಎದ್ದು ಹೊಲ ಮೇಯ್ದ ಕತೆ: ಅರೆಸ್ಟ್ ಆದ ಮಂಕಿ ಠಾಣೆ PSI ಮಾಡಿದ್ದೇನು ಗೊತ್ತಾ? – Kannada News | Uttara kannada monkey police station PSI Abhinandan Gowda Arrested In pocso case

ಕಾರವಾರ, (ಜುಲೈ 05): ಭಟ್ಕಳದ (Bhatkal) ಮಂಕಿ ಪೊಲೀಸ್ ಠಾಣೆಯ ಪಿಎಸ್‌ಐ ಅಭಿನಂದನ್ ಗೌಡ ವಿರುದ್ಧ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಸಂತ್ರಸ್ತೆಯ ದೂರಿನ ಅನ್ವಯ ಭಟ್ಕಳ ನಗರ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಅಭಿನಂದನ್ ಗೌಡನನ್ನು ಬಂಧಿಸಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರ ಮೂಲದ ಅಭಿನಂದನ್ ಗೌಡ, ಕೆಲವು ತಿಂಗಳ ಹಿಂದಷ್ಟೇ ಮಂಕಿ ಠಾಣೆಗೆ ಎಲ್​​​ಎನ್​​ಒ ಆಗಿ ಬಂದಿದ್ದು, ಇದೀಗ ಫೋಕ್ಸೊ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ.

ಪ್ರಕರಣದ ಹಿನ್ನೆಲೆ

ಯಲ್ಲಾಪುರ ಮೂಲದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಪಿಎಸ್‌ಐ ಅಭಿನಂದನ್ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. 16 ವರ್ಷದ ಬಾಲಕಿಯನ್ನ ಪುಸಲಾಯಿಸಿ ಭಟ್ಕಳಕ್ಕೆ ಕರೆತಂದು ಲಾಡ್ಜ್ ನಲ್ಲಿ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, ಈ ಕುರಿತು ಸಂತ್ರಸ್ತ ಅಪ್ರಾಪ್ತ ಬಾಲಕಿಯು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದರು. ಬಾಲಕಿಯ ದೂರಿಗೆ ತಕ್ಷಣವೇ ಸ್ಪಂದಿಸಿದ ಭಟ್ಕಳ ನಗರ ಠಾಣೆಯ ಪೊಲೀಸರು ಆರೋಪಿ ಪಿಎಸ್‌ಐ ಅಭಿನಂದನ್ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತದನಂತರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು, ಸದ್ಯ ಬಂಧನ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.ತನಿಖೆ ವೇಳೆ ಅಸಲಿ ಸತ್ಯ ಹೊರಗೆ ಬರಲಿದೆ.

ಇನ್ನು ಸಾರ್ವಜನಿಕರ ಜೀವ, ಆಸ್ತಿ ಮತ್ತು ಗೌರವದ ರಕ್ಷಣೆಯ ಹೊಣೆ ಹೊತ್ತಿರುವ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧವೇ ಇಂತಹ ಗಂಭೀರ ಆರೋಪ ಕೇಳಿಬಂದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Paperless Smart Hospital: ನಾರಾಯಣ ಹೆಲ್ತ್‌ನಿಂದ ದೇಶದ ಮೊದಲ ‘ಸ್ಮಾರ್ಟ್ ಆಸ್ಪತ್ರೆ’; ಪ್ರಮುಖ ನಾಯಕತ್ವ ಹುದ್ದೆಗಳಿಗೆ ನರ್ಸ್‌ಗಳಿಂದ ಅರ್ಜಿ ಆಹ್ವಾನ! – Kannada News | Narayana Health: India’s First Nurse Managed Paperless Smart Hospital in Bengaluru

ಖ್ಯಾತ ಹೃದ್ರೋಗ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿImage Credit source: x.com/kiranshaw

ಬೆಂಗಳೂರು: ಖ್ಯಾತ ಹೃದ್ರೋಗ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿ ನೇತೃತ್ವದ ನಾರಾಯಣ ಹೆಲ್ತ್ ಸಂಸ್ಥೆಯು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಸಜ್ಜಾಗಿದೆ. ಬೆಂಗಳೂರಿನ ಬನಶಂಕರಿಯಲ್ಲಿ ಭಾರತದ ಮೊದಲ ಸಂಪೂರ್ಣ ಕಾಗದ ರಹಿತ (Paperless) ಹಾಗೂ ಅತ್ಯಾಧುನಿಕ ‘ಸ್ಮಾರ್ಟ್ ಆಸ್ಪತ್ರೆ’ಯನ್ನು ಪ್ರಾರಂಭಿಸಲಾಗುತ್ತಿದೆ. ಈ ಆಸ್ಪತ್ರೆಯ ಸಂಪೂರ್ಣ ಆಡಳಿತ ಮತ್ತು ನಿರ್ವಹಣೆಯನ್ನು ನರ್ಸಿಂಗ್ ಸಿಬ್ಬಂದಿಯೇ ವಹಿಸಿಕೊಳ್ಳಲಿದ್ದಾರೆ ಎಂಬುದು ಇದರ ವಿಶೇಷತೆ. ಈ ಮಹತ್ವದ ಯೋಜನೆಗಾಗಿ ದೇಶಾದ್ಯಂತ ಇರುವ ಅರ್ಹ ನರ್ಸ್‌ಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸ್ಪತ್ರೆಯ ವಿಶೇಷತೆಗಳೇನು?

ಈ ಆಸ್ಪತ್ರೆಯಲ್ಲಿ ರಿಸೆಪ್ಷನಿಸ್ಟ್‌ಗಳು, ಸೆಕ್ರೆಟರಿಗಳು ಅಥವಾ ಪ್ರತ್ಯೇಕ ಎಚ್‌ಆರ್ ಮತ್ತು ಫೈನಾನ್ಸ್ ವಿಭಾಗಗಳಿರುವುದಿಲ್ಲ ಅಂದರೆ ಸಂಪೂರ್ಣ ಡಿಜಿಟಲ್ ಮತ್ತು ಪೇಪರ್‌ಲೆಸ್ ಆಗಿರುತ್ತದೆ.ಇದಲ್ಲದೇ ಕೇವಲ ವೈದ್ಯರು, ನರ್ಸ್‌ಗಳು ಮತ್ತು ತಂತ್ರಜ್ಞರು ಮಾತ್ರ ಇಲ್ಲಿ ಕಾರ್ಯನಿರ್ವಹಿಸಲಿದ್ದು, ಇಡೀ ಆಸ್ಪತ್ರೆಯ ಆಡಳಿತವನ್ನು ನರ್ಸ್‌ಗಳೇ ಮುನ್ನಡೆಸಲಿದ್ದಾರೆ.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

ಭವಿಷ್ಯದಲ್ಲಿ ದೊಡ್ಡ ಆಸ್ಪತ್ರೆಗಳ ಸಿಇಒ (CEO) ಆಗುವ ಮಹತ್ವಾಕಾಂಕ್ಷೆ ಹೊಂದಿರುವ ನರ್ಸ್‌ಗಳು ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು. ಬಿ.ಎಸ್ಸಿ (B.Sc) ಅಥವಾ ಜಿಎನ್‌ಎಂ (GNM) ಮುಗಿಸಿ ಕೇವಲ 1 ಅಥವಾ 2 ವರ್ಷಗಳ ಅನುಭವ ಹೊಂದಿರುವ ಯುವ ನರ್ಸ್‌ಗಳಿಗೂ ಇಲ್ಲಿ ಮುಕ್ತ ಅವಕಾಶವಿದೆ. ನಾರಾಯಣ ಹೆಲ್ತ್‌ನಲ್ಲಿ ಕೆಲಸ ಮಾಡುತ್ತಿರುವವರು ಮಾತ್ರವಲ್ಲದೆ, ದೇಶದ ಯಾವುದೇ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ನರ್ಸ್‌ಗಳು ಸಹ ಅರ್ಜಿ ಹಾಕಬಹುದು. ಈ ಪ್ರಕ್ರಿಯೆಯ ಮೂಲಕ ದೇಶಾದ್ಯಂತ ಕೇವಲ 25 ಅತ್ಯುತ್ತಮ ನರ್ಸ್‌ಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: ರಾತ್ರಿ ಮಲಗುವಾಗ ಅತಿಯಾಗಿ ಯೋಚಿಸುವುದರಿಂದ ಉಂಟಾಗುವ ಸಮಸ್ಯೆಗಳೇನು?

ಆಯ್ಕೆಯಾದವರಿಗೆ ಸಿಗುವ ಬಂಪರ್ ಆಫರ್‌ಗಳು:

ಆಯ್ಕೆಯಾದ ನರ್ಸ್‌ಗಳಿಗೆ ಅವರ ಕ್ಲಿನಿಕಲ್ ಸಂಬಳದ ಜೊತೆಗೆ, ಆಡಳಿತ ನಿರ್ವಹಣೆಗಾಗಿ ಪ್ರತಿ ತಿಂಗಳು ಭಾರಿ ಮ್ಯಾನೇಜ್‌ಮೆಂಟ್ ಇನ್ಸೆಂಟಿವ್ಸ್ (Management Incentives) ನೀಡಲಾಗುತ್ತದೆ. ಆಯ್ಕೆಯಾದ ಸಿಬ್ಬಂದಿಗೆ ಐಐಎಂ ಬೆಂಗಳೂರಿನಲ್ಲಿ (IIM Bangalore) ‘ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್’ ಕಾರ್ಯಕ್ರಮದಡಿ ಉನ್ನತ ತರಬೇತಿ ನೀಡಲಾಗುತ್ತದೆ. ಇದರ ಸಂಪೂರ್ಣ ವೆಚ್ಚವನ್ನು ನಾರಾಯಣ ಹೆಲ್ತ್ ಸಂಸ್ಥೆಯೇ ಭರಿಸಲಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಲು ಇಚ್ಛಿಸುವ ಅಭ್ಯರ್ಥಿಗಳು ತಮ್ಮ ನವೀಕರಿಸಿದ ರೆಸ್ಯೂಮ್ (Resume) ಅನ್ನು ಕೆಳಗಿನ ಇಮೇಲ್ ವಿಳಾಸಕ್ಕೆ ಕಳುಹಿಸಬಹುದಾಗಿದೆ:
ಇಮೇಲ್ ಐಡಿ: pani.nagaraja@narayanahealth.org

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:39 pm, Sun, 5 July 26

Source link

ಭಾರತ vs ಇಂಗ್ಲೆಂಡ್ 3ನೇ ಪಂದ್ಯ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ – Kannada News | India vs England 3rd T20I Date, When And Where?

ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಸರಣಿಯ ಮೊದಲೆರಡು ಪಂದ್ಯಗಳು ಮುಗಿವೆ. ಐದು ಮ್ಯಾಚ್​ಗಳ ಈ ಸರಣಿಯ ಮೊದಲ ಪಂದ್ಯವು ಮಳೆಗೆ ಆಹುತಿಯಾಗಿತ್ತು. ಇನ್ನು ಮ್ಯಾಂಚೆಸ್ಟರ್​ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಜಯ ಸಾಧಿಸಿದೆ. ಇದೀಗ ಉಭಯ ತಂಡಗಳು ಮೂರನೇ ಪಂದ್ಯಕ್ಕಾಗಿ ನಾಟಿಂಗ್​ಹ್ಯಾಮ್​ಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಪಂದ್ಯದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

  • ಭಾರತ ಮತ್ತು ಇಂಗ್ಲೆಂಡ್​ ನಡುವಣ 3ನೇ ಟಿ20 ಪಂದ್ಯ ಮಂಗಳವಾ (ಜು.7) ನಡೆಯಲಿದೆ.
  • ನಾಟಿಂಗ್​ಹ್ಯಾಮ್​ನ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ 3ನೇ ಟಿ20 ಪಂದ್ಯ ಜರುಗಲಿದೆ.
  • ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 10:00 ಗಂಟೆಗೆ ಶುರುವಾಗಲಿದೆ.

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಈ ಸರಣಿಯ ಎಲ್ಲಾ ಪಂದ್ಯಗಳನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಜಿಯೋಹಾಟ್‌ಸ್ಟಾರ್​ನಲ್ಲಿ ಲೈವ್ ವೀಕ್ಷಿಸಬಹುದು.

  • ನೇರ ಪ್ರಸಾರ (ಟಿವಿ): ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್​ಗಳಲ್ಲಿ.
  • ಲೈವ್ ಸ್ಟ್ರೀಮಿಂಗ್ (ಡಿಜಿಟಲ್): ಜಿಯೋಹಾಟ್‌ಸ್ಟಾರ್ ಆ್ಯಪ್ ಮತ್ತು ವೆಬ್‌ಸೈಟ್.

ಟ್ರೆಂಟ್ ಬ್ರಿಡ್ಜ್ ಪಿಚ್​:

ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿನ ಪಿಚ್​ ಬ್ಯಾಟಿಂಗ್‌ಗೆ ಹೆಚ್ಚಿನ ನೆರವು ನೀಡುತ್ತದೆ. ಹೀಗಾಗಿ ಈ ಪಂದ್ಯದಲ್ಲೂ ರನ್ ಮಳೆ ಹರಿಯುವ ನಿರೀಕ್ಷೆಯಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯವು ರಾತ್ರಿ 10 ಗಂಟೆಗೆ ಆರಂಭವಾಗುವುದರಿಂದ ಕ್ರಿಕೆಟ್ ಪ್ರೇಮಿಗಳಿಗೆ ತಡರಾತ್ರಿಯವರೆಗೆ ಭರ್ಜರಿ ಮನರಂಜನೆ ಸಿಗುವುದು ಖಚಿತ.

ಉಭಯ ತಂಡಗಳು:

ಇಂಗ್ಲೆಂಡ್ ಟಿ20 ತಂಡ: ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಫಿಲ್ ಸಾಲ್ಟ್, ಜೋರ್ಡನ್ ಕಾಕ್ಸ್ (ವಿಕೆಟ್ ಕೀಪರ್), ಟಾಮ್ ಬ್ಯಾಂಟನ್, ಜೋಫ್ರಾ ಆರ್ಚರ್, ಸ್ಯಾಮ್ ಕರನ್, ವಿಲ್ ಜಾಕ್ಸ್, ಜೇಕಬ್ ಬೆಥೆಲ್, ಜೇಮ್ಸ್ ಕೋಲ್ಸ್, ಆದಿಲ್ ರಶೀದ್, ರೆಹಾನ್ ಅಹ್ಮದ್, ಲಿಯಾಮ್ ಡಾಸನ್, ಸಾಕಿಬ್ ಮಹಮೂದ್, ಜೋಶ್ ಟಂಗ್, ಲ್ಯೂಕ್ ವುಡ್, ಸೋನಿ ಬೇಕರ್.

ಇದನ್ನೂ ಓದಿ: ಸೋಲಿನ ಬೆನ್ನಲ್ಲೇ ಅಪ್ಪಳಿಸಿದ ತಂದೆಯ ನಿಧನದ ಸುದ್ದಿ..!

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ, ಪ್ರಸಿದ್ಧ್ ಕೃಷ್ಣ, ಸೂರ್ಯಂಶ್ ಶೆಡ್ಗೆ.

Source link

Exit mobile version