ಶಿವಮೊಗ್ಗ: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಒಣಮರದ ರೆಂಬೆ; ಸ್ಥಳದಲ್ಲೇ ಯುವಕ ಸಾವು, ಮತ್ತೊಬ್ಬ ಗಂಭೀರ – Kannada News | Hosanagara Fatal Accident: Dry Tree Branch Crushes Bike Rider, One Dead, One Injured

ಶಿವಮೊಗ್ಗ, ಜೂ.4: ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಇಂದು ಭೀಕರ ದುರಂತವೊಂದು ನಡೆದಿದೆ. ಚಲಿಸುತ್ತಿದ್ದ ಬೈಕ್ ಮೇಲೆ ಒಣಮರದ ರೆಂಬೆಯೊಂದು ಮುರಿದು ಬಿದ್ದ ಪರಿಣಾಮ 26 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಮತ್ತೊಬ್ಬ ಯುವಕ ತೀವ್ರವಾಗಿ ಗಾಯಗೊಂಡಿದ್ದಾನೆ. ಹೊಸನಗರ ತಾಲೂಕಿನ ತಾರಿಗ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಶಿವಮೊಗ್ಗ ತಾಲೂಕಿನ ಚೋರಡಿ ಗ್ರಾಮದ ನಿವಾಸಿ ಸಂತೋಷ್ (26) ಮೃತಪಟ್ಟ ದುರ್ದೈವಿ. ಬೈಕ್‌ನಲ್ಲಿದ್ದ ಮತ್ತೊಬ್ಬ ಯುವಕ ವೀರಭದ್ರ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಮೃತ ಸಂತೋಷ್ ಹಾಗೂ ವೀರಭದ್ರ ಇಬ್ಬರೂ ಮೀನು ಹಿಡಿಯಲು ಬೇಕಾದ ಉಕ್ಕಡವನ್ನು ಬೈಕ್‌ನಲ್ಲಿ ಹೊತ್ತುಕೊಂಡು ಶಿವಮೊಗ್ಗ ತಾಲೂಕಿನ ಚೋರಡಿಯಿಂದ ರಿಪ್ಪನ್‌ಪೇಟೆ ಮಾರ್ಗವಾಗಿ ತಾರಿಗ ಗ್ರಾಮಕ್ಕೆ ಹೊರಟಿದ್ದರು. ಇವರು ತಾರಿಗ ರಸ್ತೆಯಲ್ಲಿ ಸಾಗುತ್ತಿದ್ದಾಗ, ರಸ್ತೆ ಬದಿಯಲ್ಲಿದ್ದ ಸುಮಾರು 50 ಅಡಿ ಎತ್ತರದ ಒಣಮರದ ದೊಡ್ಡ ರೆಂಬೆಯೊಂದು ಏಕಾಏಕಿ ಇವರ ಬೈಕ್ ಮೇಲೆ ಮುರಿದು ಬಿದ್ದಿದೆ. ಮರದ ರೆಂಬೆ ಬಿದ್ದ ರಭಸಕ್ಕೆ ಬೈಕ್ ಸಂಪೂರ್ಣ ನಿಯಂತ್ರಣ ತಪ್ಪಿ ರಸ್ತೆಗೆ ಅಪ್ಪಳಿಸಿದೆ.

ಇದನ್ನೂ ಓದಿ: ರಾಜಾಜಿನಗರದಲ್ಲಿ ಅವಘಡ: ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ

ಘಟನೆಯಿಂದಾಗಿ ಸಂತೋಷ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರಿಪ್ಪನ್‌ಪೇಟೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತ ಸಂತೋಷ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಬೆಂಗಳೂರಿನಲ್ಲಿ ಮರದ ಕೊಂಬೆ ಬಿದ್ದು ವ್ಯಕ್ತಿಗೆ ಗಂಭೀರ ಗಾಯ:

ರಾಜಾಜಿನಗರದ ರಾಮಮಂದಿರ ರಸ್ತೆಯಲ್ಲಿ ಭೀಕರ ದುರಂತವೊಂದು ಜೂನ 26ರಂದು ಸಂಭವಿಸಿತ್ತು. ದಿನನಿತ್ಯದ ಕೆಲಸ ಕಾರ್ಯಗಳಿಗಾಗಿ ಬೈಕ್‌ನಲ್ಲಿ ತೆರಳುತ್ತಿದ್ದ 50 ವರ್ಷದ ಸುರೇಶ್ ಎಂಬ ಸವಾರನ ಮೇಲೆ ಒಣಗಿದ ದೊಡ್ಡ ಮರದ ಕೊಂಬೆಯೊಂದು ಏಕಾಏಕಿ ಮುರಿದು ಬಿದ್ದಿತ್ತು. ಕೊಂಬೆ ಬಿದ್ದ ರಭಸಕ್ಕೆ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ರಸ್ತೆಗೆ ಉರುಳಿದ ಸುರೇಶ್ ಅವರು ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡಿದ್ದರು. ಯಶವಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಈ ತಪ್ಪುಗಳೇ ಫ್ರಿಡ್ಜ್‌ನಿಂದ ಕೆಟ್ಟ ವಾಸನೆ ಬರಲು ಕಾರಣ – Kannada News | Causes for fridge bad odor in monsoon

ಮಳೆಗಾಲದ ಆಗಮನದೊಂದಿಗೆ, ಗೋಡೆಗಳು, ನೆಲ ಮಾತ್ರವಲ್ಲದೆ ಅನೇಕ ಗೃಹೋಪಯೋಗಿ ವಸ್ತುಗಳಲ್ಲಿ ತೇವಾಂಶ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ವಿಶೇಷವಾಗಿ ಫ್ರಿಡ್ಜ್‌ನಲ್ಲೂ (fridge) ತೇವಾಂಶ ಕಾಣಿಸಿಕೊಳ್ಳುತ್ತದೆ. ತೇವಾಂಶದ ಜೊತೆಗೆ ಈ ಮಳೆಗಾಲದಲ್ಲಿ ಫ್ರಿಡ್ಜ್‌ನಿಂದ ದುರ್ವಾಸನೆ ಕೂಡ ಬರುತ್ತವೆ. ಫ್ರಿಡ್ಜ್‌ ಅನ್ನು ಹಲವು ದಿನಗಳಿಂದ ಸ್ವಚ್ಛಗೊಳಿಸದಿರುವುದೇ ಇದಕ್ಕೆ ಕಾರಣ ಎಂದು ಹಲವು ಜನರು ಭಾವಿಸುತ್ತಾರೆ. ಆದರೆ ಈ ಕೆಲವೊಂದು ತಪ್ಪುಗಲೇ ಇದಕ್ಕೆ ಮುಖ್ಯ ಕಾರಣ. ಮಳೆಗಾಲದಲ್ಲಿ ತೇವಾಂಶ ಹೆಚ್ಚಾಗುವುದರಿಂದ, ಫ್ರಿಡ್ಜ್ ಒಳಗೆ ಬ್ಯಾಕ್ಟೀರಿಯಾಗಳು ಸಂಗ್ರಹವಾಗಿ  ಆಹಾರ ಹಾಳಾಗುತ್ತವೆ ಇದರಿಂದಾಗಿ ಫ್ರಿಡ್ಜ್‌ ವಾಸನೆ ಬರುತ್ತವೆ. ಜೊತೆಗೆ ಈ ಕೆಲವು ಸಣ್ಣ ತಪ್ಪುಗಳು ಫ್ರಿಡ್ಜ್‌ನಿಂದ  ಕೆಟ್ಟ ವಾಸನೆ ಬರಲು ಕಾರಣವಾಗಬಹುದು. ಆ ತಪ್ಪುಗಳು ಯಾವುವು, ಫ್ರಿಡ್ಜ್‌ನಿಂದ ಬರುವ ಕೆಟ್ಟ ವಾಸನೆಯನ್ನು ತಡೆಯುವುದು ಹೇಗೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಮಳೆಗಾಲದಲ್ಲಿ ಫ್ರಿಡ್ಜ್‌ನಿಂದ ವಾಸನೆ ಬರಲು ಕಾರಣವೇನು?

ಒದ್ದೆಯಾದ ತರಕಾರಿ, ಹಣ್ಣುಗಳನ್ನು ನೇರವಾಗಿ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡುವುದು: ಅನೇಕರು ಮಾರುಕಟ್ಟೆಯಿಂದ ತಂದಂತಹ ಹಣ್ಣು ತರಕಾರಿಗಳನ್ನು ತೊಳೆದು, ಅದನ್ನು ಒಣಗಿಸದೆ ಹಾಗೆಯೇ ಫ್ರಿಡ್ಜ್‌ನಲ್ಲಿ ಸ್ಟೋರ್‌ ಮಾಡುತ್ತಾರೆ. ಹಾಗೆ ಮಾಡುವುದರಿಂದ ಹೆಚ್ಚುವರಿ ತೇವಾಂಶದಿಂದಾಗಿ ಹಣ್ಣು, ತರಕಾರಿಗಳಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಇದರಿಂದ ಅವು ಬೇಗನೆ ಹಾಳಾಗುತ್ತವೆ, ಮತ್ತು ಇದರಿಂದ ವಾಸನೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ, ತರಕಾರಿಗಳು ಮತ್ತು ಹಣ್ಣುಗಳನ್ನು ತೊಳೆದ ನಂತರ, ಅವುಗಳನ್ನು ಚೆನ್ನಾಗಿ ಒಣಗಿದ ನಂತರವೇ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡಿ.

ಉಳಿದ ಆಹಾರಗಳನ್ನು ಹೆಚ್ಚು ಸಮಯ ಫ್ರಿಡ್ಜ್‌ನಲ್ಲಿಡುವುದು: ಹೆಚ್ಚಿನವರು ಅನ್ನ, ಸಾಂಬಾರ್‌ ಸೇರಿದಂತೆ ಉಳಿದ ಆಹಾರಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟುಬಿಡುತ್ತಾರೆ. ಹೀಗೆ ಇದನ್ನು ಮಳೆಗಾಲದಲ್ಲಿ ಹೆಚ್ಚು ಸಮಯದ ಕಾಲ ಫ್ರಿಡ್ಜ್‌ನಲ್ಲಿಟ್ಟರೆ ಬ್ಯಾಕ್ಟೀರಿಯಾಗಳು ಅದರಲ್ಲಿ ಬೆಳೆದು ಕೆಟ್ಟ ವಾಸನೆಯನ್ನು ಉಂಟುಮಾಡಬಹುದು. ಆದ್ದರಿಂದ, ಹೆಚ್ಚು ಸಮಯ ಉಳಿದ ಆಹಾರಗಳನ್ನು ಫ್ರಿಡ್ಜ್‌ನಲ್ಲಿ ಇಡುವ ತಪ್ಪನ್ನು ಮಾಡಬೇಡಿ.

ರೆಫ್ರಿಜರೇಟರ್ ಡ್ರೈನ್ ಹೋಲ್ ಅನ್ನು ಪರೀಕ್ಷಿಸದಿರುವುದು: ಆಗಾಗ್ಗೆ, ಫ್ರಿಜ್‌ನಲ್ಲಿರುವ ಹೆಚ್ಚುವರಿ ತೇವಾಂಶವು ಸಣ್ಣ ಡ್ರೈನ್ ಹೋಲ್ ಮೂಲಕ ಹೊರಬರುತ್ತದೆ. ಅದು ಮುಚ್ಚಿಹೋದರೆ, ನೀರು ಫ್ರಿಡ್ಜ್‌ ಒಳಗಡೆಯೇ ಸಂಗ್ರಹವಾಗಬಹುದು. ಮಳೆಗಾಲದ ದಿನಗಳಲ್ಲಿ, ನೀರಿನಲ್ಲಿ ಆ ಬ್ಯಾಕ್ಟೀರಿಯಾಗಳು ಬೆಳೆಯಬಹುದು ಮತ್ತು ಅದು ಕೆಟ್ಟ ವಾಸನೆಯನ್ನು ಬರಲು ಪ್ರಾರಂಭಿಸುತ್ತದೆ. ಆದ್ದರಿಂದ, ಕಾಲಕಾಲಕ್ಕೆ ಡ್ರೈನ್ ಹೋಲ್ ಅನ್ನು ಪರಿಶೀಲಿಸುತ್ತಿರಿ.

ಬಾಗಿಲಿನ ರಬ್ಬರ್ ಸೀಲ್ ಅನ್ನು ಸ್ವಚ್ಛಗೊಳಿಸದಿರುವುದು: ರೆಫ್ರಿಜರೇಟರ್ ಬಾಗಿಲಿನ ಮೇಲಿನ ರಬ್ಬರ್ ಸೀಲ್ (ಗ್ಯಾಸ್ಕೆಟ್) ನಲ್ಲಿ ಧೂಳು, ಸಣ್ಣ ಆಹಾರ ಕಣಗಳು ಮತ್ತು ತೇವಾಂಶ ಸಂಗ್ರಹವಾಗುತ್ತದೆ. ಇದರಿಂದ ಮಳೆಗಾಲದಲ್ಲಿ ರಬ್ಬರ್‌ ಸೀಲ್‌ಗಳಲ್ಲಿ ಬ್ಯಾಕ್ಟೀರಿಯ, ಸೂಕ್ಷ್ಮ ಜೀವಿಗಳು ಬೆಳೆಯಬಹುದು. ಇದು ಕೆಟ್ಟ ವಾಸನೆಯನ್ನು ಉಂಟುಮಾಡಬಹುದು. ಆದ್ದರಿಂದ, ರಬ್ಬರ್ ಸೀಲ್ ಅನ್ನು ನಿಯಮಿತವಾಗಿ ಮೃದುವಾದ ಬಟ್ಟೆಯಿಂದ ಸ್ವಚ್ಛಗೊಳಿಸಿ.

ಇದನ್ನೂ ಓದಿ: ಮಳೆಗಾಲದಲ್ಲಿ ಫ್ರಿಡ್ಜ್‌ನಲ್ಲಿ ಒಂದು ಬೌಲ್‌ ಕಲ್ಲುಪ್ಪು ಇಡುವುದರಿಂದ ಏನಾಗುತ್ತದೆ ಗೊತ್ತಾ?

ಫ್ರಿಡ್ಜ್ ಅನ್ನು ಅತಿಯಾಗಿ ತುಂಬುವುದು: ಹೆಚ್ಚು ವಸ್ತುಗಳನ್ನು ಸಂಗ್ರಹಿಸುವುದರಿಂದ, ತಂಪಾದ ಗಾಳಿಯು ಇಡೀ ಫ್ರಿಡ್ಜ್ ಅನ್ನು ಸಮವಾಗಿ ತಲುಪಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ, ಆಹಾರ ಮತ್ತು ಪಾನೀಯಗಳು ಹಾಳಾಗಬಹುದು. ಇದು ಕೆಟ್ಟ ವಾಸನೆಯ ಅಪಾಯವನ್ನು ಹೆಚ್ಚಿಸುತ್ತದೆ.

ಫ್ರಿಡ್ಜ್‌ ವಾಸನೆಯನ್ನು ನಿವಾರಿಸುವ ಮನೆ ಮದ್ದುಗಳು:

  • ಫ್ರಿಡ್ಜ್‌ ವಾಸನೆಯನ್ನು ಹೋಗಲಾಡಿಲಸು ಒಂದು ಬೌಲ್‌ ಉಪ್ಪನ್ನು ಫ್ರಿಡ್ಜ್‌ನಲ್ಲಿ ಇಡಬಹುದು.
  • ಸ್ವಲ್ಪ ಅಡಿಗೆ ಸೋಡಾವನ್ನು ಉಪ್ಪಿನೊಂದಿಗೆ ಬೆರೆಸಿ, ಇದು ವಾಸನೆಯನ್ನು ಹೆಚ್ಚು ವೇಗವಾಗಿ ನಿವಾರಿಸುತ್ತದೆ.
  • ನಿಂಬೆ ಸಿಪ್ಪೆಗಳನ್ನು ಫ್ರಿಡ್ಜ್‌ನಲ್ಲಿ ಇಡಬಹುದು. ಇದು ನೈಸರ್ಗಿಕ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇತಿಹಾಸ ಬರೆದರೂ ವಿಶ್ವ ದಾಖಲೆ ಮುರಿಯಲು ಸಾಧ್ಯವಾಗಿಲ್ಲ! – Kannada News | Vaibhav Sooryavanshi Breaks Sachin Tendulkar’s Debut Record

ಅಂತಾರಾಷ್ಟ್ರೀಯ ಕ್ರಿಕೆಟ್‌ನ ಒತ್ತಡ ಮತ್ತು ಸವಾಲುಗಳನ್ನು ಎದುರಿಸಲು ಅಪಾರ ಅನುಭವ ಬೇಕು. ಆದರೆ, ಕ್ರಿಕೆಟ್ ಇತಿಹಾಸದಲ್ಲಿ ಕೆಲವೇ ಕೆಲವು ಅದ್ಭುತ ಪ್ರತಿಭೆಗಳು ತಮ್ಮ ಬಾಲ್ಯದಲ್ಲೇ ದೇಶವನ್ನು ಪ್ರತಿನಿಧಿಸಿ ಜಗತ್ತನ್ನು ಆಶ್ಚರ್ಯಚಕಿತಗೊಳಿಸಿದ್ದಾರೆ. ಅಂತಹ ಕಿರಿಯ ವಯಸ್ಸಿನ ಸಾಧಕರ ಪಟ್ಟಿಗೆ ವೈಭವ್ ಸೂರ್ಯವಂಶಿ (Vaibhav Sooryavanshi) ಕೂಡ ಸೇರ್ಪಡೆಯಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲೊ ಕಣಕ್ಕಿಳಿಯುವ ಮೂಲಕ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಐತಿಹಾಸಿಕ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

  • 1989 ರಲ್ಲಿ ಸಚಿನ್ ಭಾರತದ ಪರ ಮೊದಲ ಪಂದ್ಯವಾಡುವಾಗ ಅವರ ವಯಸ್ಸು 16 ವರ್ಷ 205 ದಿನಗಳು.
  • 15 ವರ್ಷ ಮತ್ತು 99 ದಿನಗಳ ವಯಸ್ಸಿನಲ್ಲಿ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿ ವೈಭವ್ ಸೂರ್ಯವಂಶಿ ಹೊಸ ಇತಿಹಾಸ ಬರೆದಿದ್ದಾರೆ.

ವೈಭವ್ ಸೂರ್ಯವಂಶಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರೂ ವಿಶ್ವ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.

ಏಕೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ 14 ವರ್ಷಕ್ಕೆ ಪಂದ್ಯವಾಡಿದ ಆಟಗಾರರಿದ್ದಾರೆ. ಈ ಸಾಧನೆ ಮಾಡಿದ ಮೊದಲ ಆಟಗಾರನ ಹೆಸರು ಹಸನ್ ರಾಝ.

  • 1996 ರಲ್ಲಿ ಹಸನ್ ರಾಝ ಪಾಕಿಸ್ತಾನ್ ಪರ ಮೊದಲ ಟೆಸ್ಟ್ ಪಂದ್ಯವಾಡುವಾಗ ಅವರ ವಯಸ್ಸು ಕೇವಲ ವಯಸ್ಸು ಕೇವಲ 14 ವರ್ಷ 227 ದಿನಗಳು.
  • ಟೆಸ್ಟ್ ಆಡಿದ ಕೆಲವೇ ದಿನಗಳಲ್ಲಿ (14 ವರ್ಷ 233 ದಿನಗಳು) ಏಕದಿನ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿ ಎರಡೂ ಫಾರ್ಮ್ಯಾಟ್‌ಗಳಲ್ಲಿ ಕಣಕ್ಕಿಳಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಹಸನ್ ರಾಝ ನಿರ್ಮಿಸಿದ್ದಾರೆ.

ಪುರುಷರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕಣಕ್ಕಿಳಿದ ಕಿರಿಯ ಆಟಗಾರ ಎಂಬ ರೊಮೇನಿಯಾದ ಮೇರಿಯನ್ ಗೆರಾಸಿಮ್ ಹೆಸರಿನಲ್ಲಿದೆ.

  • 2020 ರಲ್ಲಿ ಬಲ್ಗೇರಿಯಾ ವಿರುದ್ಧ ಕಣಕ್ಕಿಳಿದಾಗ ಮೇರಿಯನ್ ಗೆರಾಸಿಮ್ ಅವರ ವಯಸ್ಸು 14 ವರ್ಷ 16 ದಿನಗಳು.

ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಕಣಕ್ಕಿಳಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ರೊಮೇನಿಯಾದ ಮೇರಿಯನ್ ಗೆರಾಸಿಮ್ ಹೆಸರಿನಲ್ಲಿದೆ. ಈ ದಾಖಲೆಯನ್ನು ಮುರಿಯಲು ಯಾರಿಗೂ ಸಾಧ್ಯವಿಲ್ಲ.

ಇದನ್ನೂ ಓದಿ: ಇದೆಂತಾ ಅನ್ಯಾಯ… ಈ ಮೂವರ ಬದಲಿಗೆ ಆ ಮೂವರಿಗೆ ಸ್ಥಾನ..!

ಏಕೆಂದರೆ ಐಸಿಸಿ (ICC) ಈಗ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಕನಿಷ್ಠ 15 ವರ್ಷ ವಯಸ್ಸಾಗಿರಬೇಕು ಎಂಬ ನಿಯಮವನ್ನು ತಂದಿದೆ. ಹೀಗಾಗಿ, ಮೇರಿಯನ್ ಗೆರಾಸಿಮ್ ಹಾಗೂ ಹಸನ್ ರಾಝ ಹೆಸರಿನಲ್ಲಿರುವ ದಾಖಲೆಗಳು ಕ್ರಿಕೆಟ್ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಲಿದೆ ಎನ್ನಬಹುದು.

Source link

IND vs ENG: ಟಾಸ್ ಗೆದ್ದ ಭಾರತ: ವೈಭವ್ ಸೂರ್ಯವಂಶಿ ಪಾದಾರ್ಪಣೆ – Kannada News | India vs England 2nd T20I: Playing XI and Toss Update

ಭಾರತ ಮತ್ತು ಇಂಗ್ಲೆಂಡ್ ನಡುವಣ 2ನೇ ಟಿ20 ಪಂದ್ಯ ಶುರುವಾಗಿದೆ. ಮ್ಯಾಂಚೆಸ್ಟರ್​ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಇನ್ನು ಈ ಪಂದ್ಯಕ್ಕಾಗಿ ಭಾರತ ತಂಡದ ಪ್ಲೇಯಿಂಗ್ ಇಲೆವೆನ್​ನಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಅದರಂತೆ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದಾರೆ.

ವೈಭವ್ ಎಂಟ್ರಿ:

ಈ ಪಂದ್ಯದ ಮೂಲಕ ವೈಭವ್ ಸೂರ್ಯವಂಶಿ ಭಾರತದ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಇತ್ತ ವೈಭವ್​ ಸೂರ್ಯವಂಶಿ ಅವಕಾಶ ಸಿಕ್ಕ ಕಾರಣ, ಸಂಜು ಸ್ಯಾಮ್ಸನ್ ಅವರನ್ನು ಆಡುವ ಬಳದಿಂದ ಕೈ ಬಿಡಲಾಗಿದೆ.

ಇಂಗ್ಲೆಂಡ್ (ಪ್ಲೇಯಿಂಗ್ XI): ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್ (ನಾಯಕ), ಜೇಕಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್, ಆದಿಲ್ ರಶೀದ್, ಜೋಫ್ರಾ ಆರ್ಚರ್, ಜೋಶ್ ಟಂಗ್.

ಸಮಬಲದಲ್ಲಿರುವ ಸರಣಿ:

ಐದು ಮ್ಯಾಚ್​ಗಳ ಈ ಸರಣಿಯ ಮೊದಲ ಪಂದ್ಯವು ರದ್ದಾಗಿರುವ ಕಾರಣ ಸರಣಿ ಈಗ 0-0 ಅಂತರದಿಂದ ಸಮಬಲದಲ್ಲಿದೆ. ಅಂದರೆ ಈ ಸರಣಿ ಸೋಲನ್ನು ತಪ್ಪಿಸಿಕೊಳ್ಳಬೇಕಿದ್ದರೆ ಎರಡು ಗೆಲುವು ದಾಖಲಿಸಿದರೆ ಸಾಕು. ಹೀಗಾಗಿ ಉಭಯ ತಂಡಗಳು ದ್ವಿತೀಯ ಪಂದ್ಯದ ಮೂಲಕ ಗೆಲುವಿನ ಖಾತೆ ತೆರೆಯುವ ಇರಾದೆಯಲ್ಲಿದೆ.

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಭಾರತ ಮತ್ತು ಇಂಗ್ಲೆಂಡ್ ನಡುವಣ ದ್ವಿತೀಯ ಟಿ20 ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಜಿಯೋಹಾಟ್‌ಸ್ಟಾರ್​ನಲ್ಲಿ ಲೈವ್ ವೀಕ್ಷಿಸಬಹುದು.

  • ನೇರ ಪ್ರಸಾರ (ಟಿವಿ): ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್​ಗಳಲ್ಲಿ.
  • ಲೈವ್ ಸ್ಟ್ರೀಮಿಂಗ್ (ಡಿಜಿಟಲ್): ಜಿಯೋಹಾಟ್‌ಸ್ಟಾರ್ ಆ್ಯಪ್ ಮತ್ತು ವೆಬ್‌ಸೈಟ್.

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ, ಪ್ರಸಿದ್ಧ್ ಕೃಷ್ಣ, ಸೂರ್ಯಂಶ್ ಶೆಡ್ಗೆ.

ಇದನ್ನೂ ಓದಿ: ದಿಗ್ಗಜರೊಂದಿಗೆ ಹೋಲಿಸಿ, ವೈಭವ್​ಗೆ ಕಿವಿಮಾತು ಹೇಳಿದ ಕಪಿಲ್ ದೇವ್!

ಇಂಗ್ಲೆಂಡ್ ಟಿ20 ತಂಡ: ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಫಿಲ್ ಸಾಲ್ಟ್, ಜೋರ್ಡನ್ ಕಾಕ್ಸ್ (ವಿಕೆಟ್ ಕೀಪರ್), ಟಾಮ್ ಬ್ಯಾಂಟನ್, ಜೋಫ್ರಾ ಆರ್ಚರ್, ಸ್ಯಾಮ್ ಕರನ್, ವಿಲ್ ಜಾಕ್ಸ್, ಜೇಕಬ್ ಬೆಥೆಲ್, ಜೇಮ್ಸ್ ಕೋಲ್ಸ್, ಆದಿಲ್ ರಶೀದ್, ರೆಹಾನ್ ಅಹ್ಮದ್, ಲಿಯಾಮ್ ಡಾಸನ್, ಸಾಕಿಬ್ ಮಹಮೂದ್, ಜೋಶ್ ಟಂಗ್, ಲ್ಯೂಕ್ ವುಡ್, ಸೋನಿ ಬೇಕರ್.

Source link

ತಮ್ಮನ ಸಿನಿಮಾನಲ್ಲಿ ನಟಿಸಿದ ಅಣ್ಣ ಪ್ರಜ್ವಲ್ ದೇವರಾಜ್ – Kannada News | Prajwal Devaraj acting in brother Pranam Devaraj’s new movie

ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ (Prajwal Devaraj) ಕನ್ನಡದ ಸ್ಟಾರ್ ನಟರಲ್ಲಿ ಒಬ್ಬರು. ಅವರ ಸಹೋದರ ಪ್ರಣಾಮ್ ದೇವರಾಜ್ ಸಹ ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ, ಆದರೆ ಅಣ್ಣನಷ್ಟು ದೊಡ್ಡ ಯಶಸ್ಸು ಈ ವರೆಗೆ ಲಭಿಸಿಲ್ಲ, ಆದರೆ ಪ್ರಣಾಮ್ ಅವರು ಭಿನ್ನ-ಭಿನ್ನ ಜಾನರ್​​ಗಳ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಇದೀಗ ಪ್ರಣಾಮ್ ಅವರು ‘ಶ್ರೀರಸ್ತು’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ ಈ ಸಿನಿಮಾನಲ್ಲಿ ತಮ್ಮನ ಜೊತೆಗೆ ಅಣ್ಣ ಪ್ರಜ್ವಲ್ ಸಹ ನಟಿಸಿದ್ದಾರೆ.

ಪ್ರಣಾಮ್‌ ದೇವರಾಜ್‌ ಮತ್ತು ಪ್ರಜ್ವಲ್ ದೇವರಾಜ್ ಹಲವು ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದಾರೆ. ಆದರೆ ಈ ವರೆಗೆ ಈ ಇಬ್ಬರೂ ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಅಣ್ಣ-ತಮ್ಮ ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ಶ್ರೀರಸ್ತು’ ಸಿನಿಮಾನಲ್ಲಿ ಪ್ರಣಾಮ್ ಜೊತೆಗೆ ಪ್ರಜ್ವಲ್ ಸಹ ನಟಿಸಿದ್ದಾರೆ. ಇಂದು ಪ್ರಜ್ವಲ್ ದೇವರಾಜ್‌ ಜನ್ಮದಿನದ ಪ್ರಯುಕ್ತ ಶ್ರೀರಸ್ತು ಚಿತ್ರತಂಡ ಶುಭ ಕೋರುವ ಪೋಸ್ಟರ್‌ ಮತ್ತು ವಿಡಿಯೋ ಬಿಡುಗಡೆಗೊಳಿಸಿದ್ದು, ಪೋಸ್ಟರ್​​ಗಳಲ್ಲಿ ಪ್ರಣಾಮ್ ಜೊತೆಗೆ ಪ್ರಜ್ವಲ್ ಸಹ ಇದ್ದಾರೆ.

‘ಶ್ರೀರಸ್ತು’ ಕೌಟುಂಬಿಕ ಸಿನಿಮಾ ಆಗಿದ್ದು, ಹಳ್ಳಿಯ ಹಿನ್ನೆಲೆಯಲ್ಲಿ ನಡೆಯುವ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಪ್ರಣಮ್‌ಗೆ ಜೋಡಿ ಸಂಜನಾ ಆನಂದ್‌ ಜೋಡಿ ಆಗಿದ್ದಾರೆ. ಆದರೆ ಇದೀಗ ಪ್ರಜ್ವಲ್‌ ಕೂಡ ಸೇರಿಕೊಂಡಿದ್ದಾರೆ. ಚಿತ್ರಕ್ಕೂ ಒಂದು ಕೌಟುಂಬಿಕ ಕಳೆ ಬಂದಿದೆ. ಪ್ರೇಮದ ಜೊತೆಗೆ ಕೌಟುಂಬಿಕ ಪ್ರೀತಿಯನ್ನು ತೋರಿಸುವಂಥ ಒಂದು ವಿಭಿನ್ನ ಚಿತ್ರವಾಗಿ ಶ್ರೀರಸ್ತು ಮೂಡಿ ಬರಲಿದೆ ಎಂದು ನಿರ್ದೇಶಕ ಶಂಕರ್‌ ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ:‘ಕರಾವಳಿ’ ಸಿನಿಮಾ ಸೆಟ್​​ನಲ್ಲಿ ಪ್ರಜ್ವಲ್ ದೇವರಾಜ್ ಕ್ರಿಕೆಟ್ ಆಟ: ವಿಡಿಯೋ

ಚಿತ್ರ ಕನ್ನಡ ಮಾತ್ರವಲ್ಲದೆ ತೆಲುಗು ಭಾಷೆಯಲ್ಲಿ ಕೂಡ ಬಿಡುಗಡೆ ಆಗಲಿರುವುದು ವಿಶೇಷ. ಚಿತ್ರದಲ್ಲಿ ಖ್ಯಾತ ಕಲಾವಿದರಾದ ಸುಮನ್‌, ಆಮನಿ, ಚೈತ್ರಾರೈ, ರವಿ ಶಿವತೇಜ, ಜೋಶ್‌ ರವಿ, ರವಿ ಪ್ರಕಾಶ್‌ ಹೀಗೆ ತೆಲುಗು ಚಿತ್ರರಂಗದಲ್ಲಿಯೂ ಹೆಸರು ಮಾಡಿರುವ ಕಲಾವಿದರು ಇತರ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹರ ಕ್ರಿಯೇಶನ್ಸ್‌ ಬ್ಯಾನರ್‌ ನಲ್ಲಿ ಹರಗೌಡ ಚಿತ್ರವನ್ನು ದೊಡ್ಡ ಮಟ್ಟದಲ್ಲೇ ನಿರ್ಮಿಸುತ್ತಿದ್ದಾರೆ. ಪುಷ್ಪ ಸೇರಿದಂತೆ ಹಲವಾರು ಜನಪ್ರಿಯ ಚಿತ್ರಗಳ ಸಹಾಯಕ ಛಾಯಾಗ್ರಾಹಕ ಬಾಲಸರಸ್ವತಿ ಈ ಚಿತ್ರದ ಕ್ಯಾಮರಾಮ್ಯಾನ್. ಕೃಷ್ಣ ಮಾಯ ಕಲಾನಿರ್ದೇಶನವಿದ್ದು ಶ್ರೀ ವರ್ಕಲ ಸಂಕಲನ ನಿರ್ವಹಣೆ ಮಾಡುತ್ತಿದ್ದಾರೆ. ‘ಶ್ರೀರಸ್ತು’ ಚಿತ್ರತಂಡದ ಕಡೆಯಿಂದ ಅಧಿಕೃತವಾಗಿ ಹೊರಗೆ ಬಂದಿರುವುದು ಒಂದು ವಿಡಿಯೋ ತುಣುಕು ಮಾತ್ರ. ಆದರೆ ಅದರ ಹಿನ್ನೆಲೆ ಸಂಗೀತ ಈಗಾಗಲೇ ಗಮನ ಸೆಳೆದಿದೆ. ಶೇಖರ್ ಚಂದ್ರು ಅವರು ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಸಿನಿಮಾ ಶೀಘ್ರವೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸ್ವೀಟ್ ಸೇವನೆ ಮಾಡುವುದಕ್ಕೆ ಸರಿಯಾದ ಸಮಯ ಯಾವುದು ಗೊತ್ತಾ? – Kannada News | When Should You Eat Sweets? Expert Tips To Keep Blood Sugar Stable

ಇಂದಿನ ಜೀವನಶೈಲಿಯಲ್ಲಿ ಬಗೆ ಬಗೆಯ ಸಿಹಿ ಪದಾರ್ಥಗಳ ಸೇವನೆ ಮಾಡುವುದು ಬಹಳ ಸಾಮಾನ್ಯವಾಗಿದೆ. ಆದರೆ ಸಿಹಿ ತಿನ್ನುವ ಸಮಯವೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೌದು, ಅದರಲ್ಲಿಯೂ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಮಲಗುವ ಮೊದಲು ಸಿಹಿ ತಿನ್ನುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಬಹುದು. ನಿಮಗೂ ಕೂಡ ಈ ರೀತಿ ಅಭ್ಯಾಸವಿದ್ದರೆ ಇದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಿ. ಜೊತೆಗೆ ಸಿಹಿ ತಿನ್ನುವುದಕ್ಕೆ ಸೂಕ್ತ ಸಮಯ ಯಾವುದು ಮತ್ತು ಯಾಕೆ ಈ ಸಮಯಕ್ಕೆ ಸಿಹಿ ತಿನ್ನಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಖಾಲಿ ಹೊಟ್ಟೆಯಲ್ಲಿ ಸಿಹಿ ತಿಂದರೆ ಏನಾಗುತ್ತದೆ?

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸಿಹಿ ತಿಂದರೆ ಅದರಲ್ಲಿರುವ ಸಕ್ಕರೆ ವೇಗವಾಗಿ ರಕ್ತದಲ್ಲಿ ಬೆರೆತು ಬ್ಲಡ್ ಶುಗರ್ ಮಟ್ಟ ಏರಿಕೆಯಾಗುತ್ತದೆ. ಇದನ್ನು ನಿಯಂತ್ರಿಸಲು ದೇಹ ಹೆಚ್ಚು ಇನ್ಸುಲಿನ್ ಬಿಡುಗಡೆ ಮಾಡುತ್ತದೆ. ಪರಿಣಾಮವಾಗಿ ನಂತರ ಸಕ್ಕರೆ ಮಟ್ಟ ಏಕಾಏಕಿ ಇಳಿದು ಆಯಾಸ, ನಿಶಕ್ತಿ ಹಾಗೂ ಮತ್ತೆ ಸಿಹಿ ತಿನ್ನಬೇಕೆಂಬ ಆಸೆ ಉಂಟಾಗಬಹುದು.

ಇದನ್ನೂ ಓದಿ: ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿದರೆ ಆರೋಗ್ಯದಲ್ಲಿ ಬದಲಾವಣೆ ಆಗುತ್ತದೆಯೇ? ಯಾವ ಆಹಾರಗಳಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ?

ಸಿಹಿ ತಿನ್ನಲು ಉತ್ತಮ ಸಮಯ ಯಾವುದು?

ತಜ್ಞರ ಪ್ರಕಾರ, ಮಧ್ಯಾಹ್ನ ಅಥವಾ ರಾತ್ರಿ ಊಟದ ನಂತರ ಸ್ವಲ್ಪ ಪ್ರಮಾಣದಲ್ಲಿ ಸಿಹಿ ಸೇವಿಸುವುದು ಉತ್ತಮ. ಊಟದಲ್ಲಿರುವ ಫೈಬರ್, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳುರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತವೆ. ಆದರೆ ಮಲಗುವ ಮುನ್ನ ಮಾತ್ರ ಸೇವಿಸಬಾರದು. ಏಕೆಂದರೆ ಮಲಗುವ ಮುನ್ನ ಹೆಚ್ಚು ಸಿಹಿ ತಿನ್ನುವುದರಿಂದ ದೇಹವು ಹೆಚ್ಚುವರಿ ಕ್ಯಾಲೊರಿಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಇದರಿಂದ ಕೊಬ್ಬು ಸಂಗ್ರಹವಾಗಿ ತೂಕ ಹೆಚ್ಚಳ, ಸಕ್ಕರೆ ಮಟ್ಟದಲ್ಲಿ ಅಸಮತೋಲನ ಹಾಗೂ ಮೆಟಾಬಾಲಿಕ್ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು.

ಈ ಅಭ್ಯಾಸಗಳನ್ನು ಅನುಸರಿಸಿ

  • ಸಿಹಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ.
  • ಊಟಕ್ಕೆ ಬದಲಾಗಿ ಕೇಕ್, ಪೇಸ್ಟ್ರಿ ಅಥವಾ ಸಾಫ್ಟ್ ಡ್ರಿಂಕ್ಸ್ ಸೇವಿಸುವುದನ್ನು ತಪ್ಪಿಸಿ.
  • ಹಣ್ಣುಗಳು, ಬೇಳೆಕಾಳುಗಳು, ಧಾನ್ಯಗಳು ಮತ್ತು ಹಸಿರು ತರಕಾರಿಗಳಿಗೆ ಆದ್ಯತೆ ನೀಡಿ.
  • ಮಧುಮೇಹ, ಪ್ರೀ-ಡಯಾಬಿಟಿಸ್, ಥೈರಾಯ್ಡ್ ಅಥವಾ ಸ್ಥೂಲಕಾಯ ಸಮಸ್ಯೆ ಇರುವವರು ವೈದ್ಯರು ಅಥವಾ
  • ಡಯಟಿಷಿಯನ್ ಸಲಹೆಯಂತೆ ಸಿಹಿ ಸೇವಿಸಬೇಕು.

ಗಮನಿಸಿ: ಈ ಮಾಹಿತಿ ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಥೆನಾಲ್ ಮಿಶ್ರಣವನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಗಿದೆ, ವಾಹನಗಳಿಗೆ ಸುರಕ್ಷಿತವಾಗಿದೆ; ಕೈಗಾರಿಕಾ ತಜ್ಞರ ಸಮರ್ಥನೆ – Kannada News | Industry experts defend Ethanol Blending programme said E20 petrol is scientifically tested, safe for vehicles

ನವದೆಹಲಿ, ಜುಲೈ 4: ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣ ಮಾಡುವ ಇ20 (E20) ಇಂಧನದ ಬಳಕೆಯ ಬಗ್ಗೆ ಎದ್ದಿರುವ ಆತಂಕಗಳನ್ನು ಕೈಗಾರಿಕೆ ಮತ್ತು ಉದ್ಯಮಗಳ ತಜ್ಞರು ಇಂದು ದೂರ ಮಾಡಿದ್ದಾರೆ. ಈ ಇಂಧನವು ವ್ಯಾಪಕ ವೈಜ್ಞಾನಿಕ ಪರೀಕ್ಷೆಗಳಿಗೆ ಒಳಗಾಗಿದ್ದು, ಕಠಿಣ ಗುಣಮಟ್ಟದ ಮಾನದಂಡಗಳನ್ನು ಹೊಂದಿದೆ. ಇದು 2023ಕ್ಕಿಂತ ಮುಂಚೆ ತಯಾರಾದ ವಾಹನಗಳಿಗೂ ಸುರಕ್ಷಿತವಾಗಿದ್ದು, ಕಚ್ಚಾ ತೈಲ ಆಮದಿನ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

ಹೊಸ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಜ್ಞರು, ವಾಹನ ತಯಾರಕರು, ಪರೀಕ್ಷಾ ಸಂಸ್ಥೆಗಳು ಮತ್ತು ಇತರ ಪಾಲುದಾರರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿದ ನಂತರವೇ ದೇಶಾದ್ಯಂತ ಈ ಯೋಜನೆಯನ್ನು ಹಂತಹಂತವಾಗಿ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.

ವೈಜ್ಞಾನಿಕ ಮತ್ತು ವ್ಯವಸ್ಥಿತ ಅನುಷ್ಠಾನ:

ಇ20 ಪೆಟ್ರೋಲ್ ಯೋಜನೆಯು ರಾತ್ರೋರಾತ್ರಿ ತೆಗೆದುಕೊಂಡ ನಿರ್ಧಾರವಲ್ಲ. ಇದು 2018ರಿಂದಲೇ ಚರ್ಚೆ ಹಾಗೂ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಮತ್ತು ‘ಸಿಯಾಮ್’ (SIAM) ಸಂಸ್ಥೆಗಳ ವ್ಯಾಪಕ ಪರೀಕ್ಷೆಗಳಿಗೆ ಒಳಪಟ್ಟು ಜಾರಿಯಾಗಿದೆ. 2013-14ರಲ್ಲಿ ಕೇವಲ ಶೇ. 1.5ರಷ್ಟಿದ್ದ ಎಥನಾಲ್ ಮಿಶ್ರಣವನ್ನು ಡಿಸೆಂಬರ್ 2025ರ ವೇಳೆಗೆ ಶೇ. 20ಕ್ಕೆ (E20) ಹೆಚ್ಚಿಸುವ ಮೂಲಕ ನಿಗದಿತ ಅವಧಿಗಿಂತ 5 ವರ್ಷ ಮುಂಚಿತವಾಗಿಯೇ ಗುರಿ ತಲುಪಲಾಗಿದೆ.

ಇದನ್ನೂ ಓದಿ: E20 ಎಥೆನಾಲ್ ಮಿಶ್ರಣದ ಕುರಿತ ಸತ್ಯ ಸಂಗತಿ ಮತ್ತು ತಪ್ಪು ಕಲ್ಪನೆಗಳು

ಹಳೆಯ ವಾಹನಗಳಿಗೂ ಸುರಕ್ಷಿತ:

ಮಾರುತಿ ಸುಜುಕಿ ಮತ್ತು ಹೀರೋ ಮೋಟೋಕಾರ್ಪ್ ಸಂಸ್ಥೆಗಳ ತಜ್ಞರು ಸ್ಪಷ್ಟಪಡಿಸಿರುವಂತೆ, 2023ಕ್ಕಿಂತ ಹಳೆಯದಾದ (E10 ಇಂಧನಕ್ಕೆ ವಿನ್ಯಾಸಗೊಳಿಸಲಾದ) ವಾಹನಗಳಿಗೂ ಇ20 ಇಂಧನದಿಂದ ಯಾವುದೇ ಹಾನಿ, ಸವೆತ ಅಥವಾ ತುಕ್ಕು ಹಿಡಿಯುವ ಸಮಸ್ಯೆ ಕಂಡುಬಂದಿಲ್ಲ.

ಪರಿಸರಸ್ನೇಹಿ ಮತ್ತು ಆರ್ಥಿಕ ಭದ್ರತೆ:

ಸಸ್ಯಗಳಿಂದ ತಯಾರಾಗುವ ಎಥನಾಲ್ ಶೂನ್ಯ-ಇಂಗಾಲದ ಇಂಧನವಾಗಿದ್ದು, ಹವಾಮಾನ ವೈಪರೀತ್ಯ ತಡೆಯಲು ನೆರವಾಗುತ್ತದೆ. ಫಾರ್ಮುಲಾ 1 ರೇಸಿಂಗ್ ಕಾರುಗಳಲ್ಲೂ ಎಥನಾಲ್ ಇಂಧನ ಬಳಸಲಾಗುತ್ತದೆ. ಇದು ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಭಾರತದ ಕಚ್ಚಾ ತೈಲ ಆಮದು ವೆಚ್ಚವನ್ನು ತಗ್ಗಿಸಿದೆ.

ವಿಮಾ ಕಂಪನಿಗಳ ಸ್ಪಷ್ಟನೆ:

ಇ20 ಇಂಧನ ಬಳಸುವ ವಾಹನಗಳಿಗೆ ವಿಮೆ ನಿರಾಕರಿಸಲಾಗುವುದು ಎಂಬ ವದಂತಿಗಳನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿರಸ್ಕರಿಸಿದ್ದು, ವಿಮಾ ಕಂಪನಿಗಳು ಈಗಾಗಲೇ ಅಂತಹ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿವೆ ಎಂದು ಹೇಳಿದ್ದಾರೆ.

ಹಂತಹಂತವಾಗಿ ಜಾರಿಯಾದ ವೈಜ್ಞಾನಿಕ ಪ್ರಕ್ರಿಯೆ:

‘ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್’ (EIL) ಮಾಜಿ ಸಿಎಂಡಿ ವರ್ತಿಕಾ ಶುಕ್ಲಾ ಮಾತನಾಡಿ, “ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣ ಮಾಡುವ ಪ್ರಕ್ರಿಯೆಯು ರಾತ್ರೋರಾತ್ರಿ ನಡೆದಿರುವುದಲ್ಲ. ಇದು ಅತ್ಯಂತ ವ್ಯವಸ್ಥಿತ, ವೈಜ್ಞಾನಿಕ ಮತ್ತು ಹಂತ-ಹಂತವಾಗಿ ಜಾರಿಗೆ ತಂದ ಪ್ರಕ್ರಿಯೆಯಾಗಿದೆ,” ಎಂದರು. ಅಮೆರಿಕ, ಬ್ರೆಜಿಲ್, ಕೆನಡಾ ಮತ್ತು ಜರ್ಮನಿ ಸೇರಿದಂತೆ ಜಾಗತಿಕವಾಗಿ ಅನುಸರಿಸಲಾಗುತ್ತಿರುವ ಅತ್ಯುತ್ತಮ ಪದ್ಧತಿಗಳಿಗೆ ಅನುಗುಣವಾಗಿಯೇ ಭಾರತವೂ ಈ ಇಂಧನವನ್ನು ಅಳವಡಿಸಿಕೊಂಡಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಇಂಧನ ಕ್ರಾಂತಿ: ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಸಂಪೂರ್ಣ ಮನ್ನಾ

ಹವಾಮಾನ ಬದಲಾವಣೆಗೆ ಶೂನ್ಯ ಇಂಗಾಲದ ಇಂಧನ ಪರಿಹಾರ:

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್‌ನ ಕಾರ್ಪೊರೇಟ್ ಅಫೇರ್ಸ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಕ್ರಮ್ ಗುಲಾಟಿ ಮಾತನಾಡಿ, ಭಾರತದಲ್ಲಿ ಗ್ರಾಹಕರ ಕೈ ಸೇರುವ ಮುನ್ನ ವಾಹನಗಳು ಮತ್ತು ಇಂಧನಗಳು ಕಠಿಣ ಪರೀಕ್ಷೆಗಳಿಗೆ ಒಳಗಾಗುತ್ತವೆ ಎಂದರು. ಎಥನಾಲ್ ಅತ್ಯುತ್ತಮ ಇಂಧನವಾಗಿದ್ದು, ಉತ್ತಮ ಡ್ರೈವಿಂಗ್ ಅನುಭವ ನೀಡುತ್ತದೆ. ಇದು ಸಸ್ಯಗಳಿಂದ ಉತ್ಪತ್ತಿಯಾಗುವುದರಿಂದ ‘ಶೂನ್ಯ-ಇಂಗಾಲ’ದ ಇಂಧನವಾಗಿದೆ ಮತ್ತು ಇತ್ತೀಚಿನ ಪಶ್ಚಿಮ ಏಷ್ಯಾ ಬಿಕ್ಕಟ್ಟಿನಂತಹ ಜಾಗತಿಕ ತೈಲ ಮಾರುಕಟ್ಟೆಯ ಏರಿಳಿತಗಳಿಂದ ಭಾರತದ ಆರ್ಥಿಕತೆಯನ್ನು ರಕ್ಷಿಸಲು ಇದು ಸಹಕಾರಿಯಾಗಿದೆ ಎಂದು ವಿವರಿಸಿದರು.

ಹಳೆಯ ವಾಹನಗಳ ಗ್ರಾಹಕರಿಗೆ ಆತಂಕ ಬೇಡ:

ಮಾರುತಿ ಸುಜುಕಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಭಾರ್ತಿ ಮಾತನಾಡಿ, 2023ಕ್ಕಿಂತ ಮೊದಲು ತಯಾರಾದ ವಾಹನಗಳ ಬಗ್ಗೆ ಗ್ರಾಹಕರಲ್ಲಿ ಕಾಳಜಿ ಇರುವುದು ಸಹಜ. ಆದರೆ ಕಂಪನಿಯು ಇ10 ಕಾರುಗಳನ್ನು ಇ20 ಇಂಧನದೊಂದಿಗೆ ಎಲ್ಲಾ ಮಾನದಂಡಗಳ ಅಡಿಯಲ್ಲಿ ಪರೀಕ್ಷಿಸಿದ್ದು, ಯಾವುದೇ ತೊಂದರೆ ಕಂಡುಬಂದಿಲ್ಲ. ವಾಹನ ವಿನ್ಯಾಸದಲ್ಲಿ ಸಾಕಷ್ಟು ಸುರಕ್ಷತಾ ಮಾರ್ಜಿನ್‌ಗಳನ್ನು ಅಳವಡಿಸಲಾಗಿರುವುದರಿಂದ ಭಾಗಗಳ ಜೀವಿತಾವಧಿಗೆ ಯಾವುದೇ ಧಕ್ಕೆ ಬರುವುದಿಲ್ಲ ಎಂದು ಭರವಸೆ ನೀಡಿದರು.

ಹೀರೋ ಮೋಟೋಕಾರ್ಪ್‌ನ ಮುಖ್ಯ ವ್ಯಾಪಾರ ಅಧಿಕಾರಿ ಅಶುತೋಷ್ ವರ್ಮಾ ಮಾತನಾಡಿ, ಕೋಟ್ಯಂತರ ದ್ವಿಚಕ್ರ ವಾಹನಗಳ ಸೇವಾ ಡೇಟಾಗಳನ್ನು ನಾವು ವಿಶ್ಲೇಷಿಸಿದ್ದೇವೆ. ಇ20 ಇಂಧನ ಬಳಸುತ್ತಿರುವ ವಾಹನಗಳಲ್ಲಿ ಯಾವುದೇ ರೀತಿಯ ಹೆಚ್ಚಿನ ಹಾನಿ ಅಥವಾ ತಾಂತ್ರಿಕ ದೋಷಗಳು ವರದಿಯಾಗಿಲ್ಲ ಎಂದು ಸಾಕ್ಷ್ಯಗಳ ಸಮೇತ ತಿಳಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SIRನಲ್ಲಿ ನಿಯಮ ಉಲ್ಲಂಘನೆ: ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ನಿಯೋಗ ದೂರು – Kannada News | Karnataka BJP Alleges SIR Rule Violations, Files Complaint with Election Commission

ಬೆಂಗಳೂರು, ಜುಲೈ 04: ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಅಕ್ಷರಶಃ ರಾಜ್ಯ ರಾಜಕಾರಣದಲ್ಲೀಗ ಜಟಾಪಟಿಗೆ ಕಾರಣವಾಗಿದೆ. SIR ಪ್ರಕ್ರಿಯೆಯಲ್ಲೇ ನಿಯಮ ಉಲ್ಲಂಘನೆ ಆಗಿರುವ ಗಂಭೀರ ಆರೋಪ ಕೇಳಿ ಬಂದಿವೆ. ಹೀಗಾಗಿ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಿಯೋಗ ದಾಖಲೆ ಸಮೇತ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ಇಂದು ದೂರು (BJP) ಸಲ್ಲಿಸಲಾಗಿದ್ದು, ಮಧ್ಯಪ್ರವೇಶಿಸುವಂತೆ ಆಗ್ರಹಿಸಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ವ್ಯಾಪಕ ನಿಯಮ ಉಲ್ಲಂಘನೆ ಹಾಗೂ ವ್ಯವಸ್ಥಿತ ಅಕ್ರಮಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವಿಡಿಯೋ ಬಾಂಬ್ ಸಿಡಿಸಿದರೆ, ನಿನ್ನೆ ಶೋಭಾ ಕರಂದ್ಲಾಜೆ ಹಾಗೂ ಆರ್. ಅಶೋಕ್ ವಿಡಿಯೋ ಅಸ್ತ್ರ ಪ್ರಯೋಗಿಸಿದರು.

ಇದನ್ನೂ ಓದಿ: ದಾವಣಗೆರೆಯಲ್ಲಿ ಹಳ್ಳ ಹಿಡಿದ ‘ಎಸ್ಐಆರ್’ ಪ್ರಕ್ರಿಯೆ: ಮನೆ ಮನೆಗೆ ಹೋಗದೆ ದೇವಸ್ಥಾನ, ಅಂಗನವಾಡಿಯಲ್ಲೇ ಕುಳಿತ ಬಿಎಲ್‌ಓ

ಬಾಂಗ್ಲಾ ಪ್ರಜೆಗಳನ್ನು ಮತಪಟ್ಟಿಗೆ ಸೇರಿಸಲಾಗ್ತಿದೆ, ಮಸೀದಿಗಳಲ್ಲಿ ಟೆಂಟ್ ಹಾಕಿ ಅರ್ಜಿ ಹಂಚಲಾಗುತ್ತಿದೆ ಎಂದು ಜೆಡಿಎಸ್​ ಮತ್ತು ಬಿಜೆಪಿ ನಾಯಕರ ಗಂಭೀರ ಆರೋಪ ಮಾಡಿದ್ದಾರೆ. ಇನ್ನು ಈ  ಸಂಬಂಧ, ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ದಾಖಲೆ ಸಮೇತ ದೂರು ಕೊಟ್ಟಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ದೂರು ನೀಡಲಾಗಿದ್ದು, ಇದರಲ್ಲಿ ಸರ್ಕಾರದ ಕುಮ್ಮಕ್ಕು ಇದೆ ಎಂದು ಬಿಜೆಪಿ ಆರೋಪ ಮಾಡಿದೆ.

ಎಸ್ಐಆರ್ ಪ್ರಕ್ರಿಯೆಗೆ ರಾಜ್ಯ ಸರ್ಕಾರ ತಣ್ಣೀರು ಎರಚಿದೆ: ಬಿ.ವೈ.ವಿಜಯೇಂದ್ರ

ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಚುನಾವಣಾ ಆಯೋಗದ ಸದುದ್ದೇಶದಂತೆ SIR ನಡೆಯುತ್ತಿಲ್ಲ. ಎಸ್ಐಆರ್ ಪ್ರಕ್ರಿಯೆಗೆ ರಾಜ್ಯ ಸರ್ಕಾರ ತಣ್ಣೀರನ್ನು ಎರಚಿದೆ. ರಾಜ್ಯ ಸರ್ಕಾರ ಬಿಎಲ್ಒಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಛತ್ರ, ಮಸೀದಿ, ಕಚೇರಿಯಲ್ಲಿ ಕೂರಿಸಿ ಎಸ್ಐಆರ್ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: Karnataka SIR Row: ರಾಜ್ಯದಲ್ಲಿ SIR ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ: ಪ್ರಹ್ಲಾದ್​ ಜೋಶಿ

ಕಾಂಗ್ರೆಸ್ ಶಾಸಕರು ಬಿಎಲ್ಒಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಆಡಳಿತಾರೂಢ ಕಾಂಗ್ರೆಸ್​ನಿಂದ ಅಧಿಕಾರ ದುರ್ಬಳಕೆ ಆಗುತ್ತಿದೆ. ಎಲ್ಲೆಲ್ಲಿ ಲೋಪವಾಗಿದೆಯೋ ಅಲ್ಲಿ ಮತ್ತೊಮ್ಮೆ SIR ಮಾಡಬೇಕು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ SIR ಪ್ರಕ್ರಿಯೆ ಹಾಳುಮಾಡುತ್ತಿದೆ. ಜಯನಗರದಲ್ಲಿ ಅರ್ಜಿಯಲ್ಲಿ ಕಾಂಗ್ರೆಸ್ ಮುಖಂಡರ ಫೋಟೋಗಳಿವೆ. ಛತ್ರ, ಮಸೀದಿಗಳಲ್ಲಿ ಸಾಮೂಹಿಕವಾಗಿ ಎಸ್ಐಆರ್ ನಡೆಯುತ್ತಿದೆ. ಎಸ್ಐಆರ್ ಅಕ್ರಮದ ಬಗ್ಗೆ ಆಯೋಗಕ್ಕೆ ಎಲ್ಲಾ ದಾಖಲೆ ನೀಡಿದ್ದೇವೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 6:02 pm, Sat, 4 July 26

Source link

ಕರ್ನಾಟಕ ಹವಾಮಾನ ಮುನ್ಸೂಚನೆ: ಮುಂದಿನ 24 ಗಂಟೆಗಳಲ್ಲಿ ಕರಾವಳಿ – ಉತ್ತರ ಒಳನಾಡಿನಲ್ಲಿ ಭಾರಿ ಮಳೆ; ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿಗೆ ಸಾಧಾರಣ ಮಳೆ! – Kannada News | Monsoon Fury: Karnataka Weather Forecast Predicts Heavy Rains and Strong Winds.

ಬೆಂಗಳೂರು, ಜು.4: ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಭಾರಿಯಿಂದ ಅತ್ಯಂತ ಭಾರಿ ಮಳೆಯಾಗುವ (Heavy to Very Heavy Rain) ಸಾಧ್ಯತೆಯಿದೆ. ಮಳೆಯ ಜೊತೆಗೆ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ಮುನ್ನೆಚ್ಚರಿಕೆ ನೀಡಲಾಗಿದೆ.

ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ಸಹ ಬಿರುಗಾಳಿ ಸಹಿತ ಭಾರಿಯಿಂದ ಅತ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಜನಜೀವನಕ್ಕೆ ಅಲ್ಪಮಟ್ಟಿನ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಈ ಭಾಗಗಳಲ್ಲೂ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಮಳೆಯಿಂದಾಗಿ ಭೂಕುಸಿತದ ಭೀತಿ: ಆಗುಂಬೆ ಘಾಟಿಯಲ್ಲಿ ಘನ ವಾಹನಗಳ ಸಂಚಾರ ಬಂದ್! 

ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಜುಲೈ 9 ಮತ್ತು ಜುಲೈ 10 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಮಳೆಯ ಆರ್ಭಟ ಕೊಂಚ ಹೆಚ್ಚಿರಲಿದ್ದು, ಜುಲೈ 5, 6, 9 ಮತ್ತು 10 ರಂದು ಒಂದಲ್ಲಾ ಒಂದು ಕಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಮುನ್ಸೂಚನೆ ನೀಡಿರುವ ದಿನಗಳಂದು ರಾಜ್ಯದ ಒಳನಾಡಿನಲ್ಲಿ ಅಂದಾಜು 64.5 mm ನಿಂದ 115.4 mm ವರೆಗೆ ಭಾರಿ ಪ್ರಮಾಣದ ಮಳೆಯಾಗುವ ನಿರೀಕ್ಷೆಯಿದೆ. ಬಿರುಗಾಳಿ ಮತ್ತು ಸಿಡಿಲಿನ ಮುನ್ಸೂಚನೆ ಇರುವುದರಿಂದ ಸಾರ್ವಜನಿಕರು ಹಾಗೂ ರೈತರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಮತ್ತು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಹವಾಮಾನ ಇಲಾಖೆ ಕೋರಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೈಹಿಕ, ಮಾನಸಿಕ ದಣಿವನ್ನು ನಿವಾರಿಸಲು ಈ ಸುಲಭ ತಂತ್ರಗಳನ್ನು ತಪ್ಪದೇ ಪಾಲಿಸಿ – Kannada News | Follow These some evening routine to relieve physical and mental stress

ಬೆಳಗ್ಗೆ ಎದ್ದ ತಕ್ಷಣ ನಾವು ತುಂಬಾ ಆಕ್ಟಿವ್‌ ಆಗಿದ್ದರೂ, ಕೆಲಸದ ಒತ್ತಡ, ಬ್ಯುಸಿ ಜೀವನಶೈಲಿ ಇವೆಲ್ಲದರ ಕಾರಣದಿಂದಾಗಿ ಸಂಜೆಯ ವೇಳೆಗೆ ಸುಸ್ತು (Fatigue) ಕಾಣಿಸಿಕೊಳ್ಳುತ್ತದೆ. ಹೌದು ಸ್ನಾಯು ಸೆಳೆತ, ತಲೆ ನೋವು, ದೇಹ ನೋವಿನಂತಹ ದೈಹಿಕ ಆಯಾಸ ಮಾತ್ರವಲ್ಲ ಮಾನಸಿಕ ಆಯಾಸವು ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಬೇಗನೆ ಕೋಪಗೊಳ್ಳುತ್ತೇವೆ, ಕಿರಿಕಿರಿಯ ಭಾವನೆಯನ್ನು ಅನುಭವಿಸುತ್ತೇವೆ. ಹೀಗಿರುವಾಗ ನಿಮಗಾಗಿ ನೀವು ಸ್ವಲ್ಪ ಸಮಯವನ್ನು ಮೀಸಲಿಡುವ ಮೂಲಕ ದಿನನಿತ್ಯ ಅನುಭವಿಸುವಂತಹ ಈ ದೈಹಿಕ, ಮಾನಸಿಕ ಆಯಾಸವನ್ನು ಹೋಗಲಾಡಿಸಬಹುದು. ದಣಿವನ್ನು ನಿವಾರಿಸುವ ಆ ತಂತ್ರಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಆಯಾಸವನ್ನು ನಿವಾರಿಸಲು ಸಂಜೆ ಈ ಕೆಲಸಗಳನ್ನು ಮಾಡಿ:

ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ: ಕೆಲಸದಿಂದ ಮನೆಗೆ ಬಂದ ತಕ್ಷಣ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ, ಇದರಿಂದ ಸ್ನಾಯುಗಳ ಒತ್ತಡ ಮತ್ತು ಬಿಗಿತ ಕಡಿಮೆಯಾಗುತ್ತದೆ. ಇದು ದೈಹಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದ ಸಾಮಾನ್ಯ ತಾಪಮಾನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಗಿಡಮೂಲಿಕೆ ಚಹಾ ಸೇವಿಸಿ: ಸಾಮಾನ್ಯ ಚಹಾದ ಬದಲು ಕೆಲಸದಿಂದ ಮರಳಿ ಮನೆಗೆ ಬಂದ ನಂತರ  ಗಿಡಮೂಲಿಕಾ ಚಹಾವನ್ನು ಸೇವನೆ ಮಾಡಿ. ಕ್ಯಾಮೊಮೈಲ್ ಅಥವಾ ಲ್ಯಾವೆಂಡರ್ ಟೀ ಮನಸ್ಸನ್ನು ಶಾಂತಗೊಳಿಸುವ ಗುಣಗಳನ್ನು ಹೊಂದಿವೆ ಮತ್ತು ದೇಹವನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತವೆ. ಈ ಚಹಾಗಳು ಕೆಫೀನ್ ರಹಿತವಾಗಿದ್ದು, ಇದು ರಾತ್ರಿಯ ವೇಳೆ ವಿಶ್ರಾಂತಿ ಮತ್ತು ಆಳವಾದ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ.

ಆಳವಾದ ಉಸಿರಾಟ ಮತ್ತು ಧ್ಯಾನ ಮಾಡಿ: ಇದು ಆಯಾಸವನ್ನು ನಿವಾರಿಸಲು ಇರುವ ಉತ್ತಮ ಮಾರ್ಗವಾಗಿದೆ. ಧ್ಯಾನ ಅಥವಾ ಆಳವಾದ ಉಸಿರಾಟದ ವ್ಯಾಯಾಮ ಮಾಡುವಾಹ ನಾವು ಎಲ್ಲಾ ಚಿಂತೆಗಳನ್ನು ಮರೆತು ನಮ್ಮ ಉಸಿರಾಟದ ಮೇಲೆ ಮಾತ್ರ ಗಮನಹರಿಸುತ್ತೇವೆ. ಇದರಿಂದ ಒತ್ತಡ ನಿವಾರಣೆಯಾಗುತ್ತದೆ. ಅಲ್ಲದೆ ಆಳವಾದ ಉಸಿರಾಟ ಮತ್ತು ಧ್ಯಾನವು ರಾತ್ರಿಯ ಉತ್ತಮ ನಿದ್ರೆಯನ್ನು ಪಡೆಯಲು ಉತ್ತಮ ಮಾರ್ಗವಾಗಿದೆ.

ಇದನ್ನೂ ಓದಿ: ಫೋನ್‌ ವ್ಯಸನದಿಂದ ಮುಕ್ತರಾಗಲು ಸರಳ ಡಿಜಿಟಲ್‌ ಡಿಟಾಕ್ಸ್‌ ತಂತ್ರಗಳನ್ನು ಪಾಲಿಸಿ

ಅರೋಮಾ ಥೆರಪಿ: ಗಿಡಮೂಲಿಕಾ ಸಸ್ಯಗಳು ಮತ್ತು ಹೂವುಗಳಿಂದ ತಯಾರಿಸಲ್ಪಟ್ಟ ಸಾರಭೂತ ತೈಲಗಳು ಮನಸ್ಥಿತಿಯನ್ನು ಸುಧಾರಿಸುತ್ತವೆ, ಆಯಾಸವನ್ನು ಸಹ ನಿವಾರಿಸುತ್ತವೆ. ಸ್ನಾನದ ನೀರಿನಲ್ಲಿ ಅಥವಾ ಕೋಣೆಯಲ್ಲಿ ಈ ಎಣ್ಣೆಗಳ ಪರಿಮಳವನ್ನು ಹರಡುವುದರಿಂದ ವಿಶ್ರಾಂತಿ ಪಡೆಯಲು ಸಹಾಯವಾಗುತ್ತದೆ.

ಪ್ರೀತಿಪಾತ್ರರು ಅಥವಾ ಸ್ನೇಹಿತರೊಂದಿಗೆ ಸಮಯ ಕಳೆಯಿರಿ: ನೀವು ಒತ್ತಡಕ್ಕೊಳಗಾಗಿದ್ದಾಗಲೆಲ್ಲಾ, ಅದನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ನಿಮ್ಮ ಪ್ರೀತಿಪಾತ್ರರು ಅಥವಾ ಸ್ನೇಹಿತರೊಂದಿಗೆ ಸಮಯ ಕಳೆಯುವುದು. ಏಕೆಂದರೆ ನಾವು ಆ ಜನರನ್ನು ಭೇಟಿಯಾದಾಗ, ನಮಗೆ ಸಂತೋಷವಾಗುತ್ತದೆ. ಆಗ ನಾವು ನಮ್ಮ ಎಲ್ಲಾ ಚಿಂತೆಗಳನ್ನು ಮರೆತು ಖುಷಿಯಾಗಿರುತ್ತೇವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version