Headlines

ಗುರುವಿನ ವಕ್ರಗತಿಯಿಂದ ಈ ನಾಲ್ಕು ರಾಶಿಯವರ ಗತಿಯೂ ಬದಲು – Kannada News | Guru Vakri Effects: Jupiter Retrograde Impact on Your Zodiac Sign Astrology Predictions

ಗುರುವು ಮಿಥುನ ರಾಶಿಯ ಪುನರ್ವಸು ನಕ್ಷತ್ರದಲ್ಲಿ ವಕ್ರನಾಗಿ ಸಂಚರಿಸುತ್ತಿದ್ದಾನೆ. ಇನ್ನು ಸುಮಾರು ಎರಡು ತಿಂಗಳ ಕಾಲ ಮಿಥುನ ರಾಶಿ ಪುನರ್ವಸು ನಕ್ಷತ್ರದಲ್ಲಿ ಸಂಚರಿಸಕಿದ್ದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಹಳ ಮಹತ್ವದ ಬದಲಾವಣೆ. ಪುನರ್ವಸು ನಕ್ಷತ್ರವು ಗುರು ಗ್ರಹದ ನಕ್ಷತ್ರವಾಗಿದ್ದು, ಇಲ್ಲಿ ಗುರುವು ಬಲಿಷ್ಠನಾಗಿರುತ್ತಾನೆ. ​ಗುರುವು ವಕ್ರನಾದಾಗ ಅದರ ಪ್ರಭಾವವು ಸಾಮಾನ್ಯ ಸಂಚಾರಕ್ಕಿಂತ ಹೆಚ್ಚಾಗಿರುತ್ತದೆ. ಈ ಸಂಚಾರದಿಂದ ದ್ವಾದಶ ರಾಶಿಗಳ ಮೇಲಾಗುವ ಶುಭ ಮತ್ತು ಅಶುಭ ಫಲಗಳು ಇಲ್ಲಿವೆ. ​ಶುಭ ಫಲ ​ಮಿಥುನ : ಗುರುವು ನಿಮ್ಮ ರಾಶಿಯಲ್ಲೇ…

Read More

WPL 2026: ಆರ್​ಸಿಬಿ ಪಂದ್ಯ ಸೋತರೂ ಎಲ್ಲರ ಹೃದಯ ಗೆದ್ದ ರಿಚಾ ಘೋಷ್ – Kannada News | WPL 2026: Nat Sciver’s Century Powers MI to Victory Over RCB Despite Richa Ghosh’s 90

ಮಹಿಳಾ ಪ್ರೀಮಿಯರ್ ಲೀಗ್ ( Women’s Premier League) 2026 ರ 16 ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ (RCB vs MI) ನಡುವೆ ನಡೆಯಿತು. ವಡೋದರಾದಲ್ಲಿ ನಡೆದ ಈ ಪಂದ್ಯ ಅಭಿಮಾನಿಗಳಿಗೆ ಮನರಂಜನೆ ರಸದೌತಣ ನೀಡುವುದರಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ ಈ ಪಂದ್ಯವನ್ನು ಆರ್​ಸಿಬಿ ಸೋತಿತ್ತಾದರೂ, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ಗೆ ಒಂದು ಕ್ಷಣ ಸೋಲಿನ ಭಯ ಹುಟ್ಟಿಸಿತು ಎಂಬುದರಲ್ಲಿ ಸುಳಿಲ್ಲ. 35 ರನ್​ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿದ್ದ ಆರ್​ಸಿಬಿ…

Read More

ಗಣರಾಜ್ಯೋತ್ಸವದ ಧ್ವಜಾರೋಹಣದ ವೇಳೆ ಬಿದ್ದ ಧ್ವಜಸ್ತಂಭ; ಕೂದಲೆಳೆ ಅಂತರದಿಂದ ತೆಲಂಗಾಣ ಸಚಿವ ಪಾರು – Kannada News | Telangana minister V Srihari narrowly escapes injury after flagpole collapses during Republic Day

ಹೈದರಾಬಾದ್, ಜನವರಿ 26: ಇಂದು ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯಲ್ಲಿ ನಡೆದ ಗಣರಾಜ್ಯೋತ್ಸವ (Republic Day) ಆಚರಣೆಯ ಸಂದರ್ಭದಲ್ಲಿ ರಾಷ್ಟ್ರಧ್ವಜ ಹಾರಿಸುತ್ತಿದ್ದಾಗ ಧ್ವಜಸ್ತಂಭ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಕೂದಲೆಳೆ ಅಂತರದಿಂದ ಭಾರಿ ಅನಾಹುತವೊಂದು ತಪ್ಪಿದೆ. ತೆಲಂಗಾಣದ ಪಶುಸಂಗೋಪನಾ ಸಚಿವ ವಿ. ಶ್ರೀಹರಿ ಧ್ವಜಾರೋಹಣ ಮಾಡುತ್ತಿದ್ದಾಗ ಧ್ವಜಸ್ತಂಭ ಮುರಿದು ಬಿದ್ದಿದೆ. ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More

ಆಟೋದಿಂದ ಹಾರಿದ 4 ಗೆಳತಿಯರು; ಒಬ್ಬಳ ದುರಂತ ಸಾವಿಗೆ ಕಾರಣ ಯಾರು? – Kannada News | Kamareddy District Gurukul Students Jumped from Auto one Student Died

ಕಾಮರೆಡ್ಡಿ, ಜನವರಿ 26: ತೆಲಂಗಾಣದಲ್ಲಿ ವಿಚಿತ್ರವಾದ ರೀತಿಯಲ್ಲಿ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. ಗುರುಕುಲದ ಹಾಸ್ಟೆಲ್‌ನಲ್ಲಿ ಇರಬೇಕಾದ ನಾಲ್ವರು ವಿದ್ಯಾರ್ಥಿನಿಯರು ಆಟೋ ಹತ್ತಿದರು. ಆದರೆ, ಆಟೋದಲ್ಲಿ ಪ್ರಯಾಣ ಮಾಡುವಾಗ ಒಬ್ಬೊಬ್ಬರಾಗಿ ಕೆಳಗೆ ಬಿದ್ದರು. ಅವರಲ್ಲಿ ಮೂವರು ಬದುಕುಳಿದರು. ತಲೆಗೆ ತೀವ್ರ ಪೆಟ್ಟು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಗೀತ ಎಂಬ ಒಬ್ಬಳು ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಕಾಮರೆಡ್ಡಿ ಜಿಲ್ಲೆಯ ಬೋರ್ಲಂ ಗುರುಕುಲ ಶಾಲೆಯಲ್ಲಿ ಈ ಘಟನೆ ನಡೆದಿದೆ. ಗುರುಕುಲ ಶಾಲೆಯಲ್ಲಿ ನಿಜಕ್ಕೂ ಏನಾಯಿತು? ಆ ವಿದ್ಯಾರ್ಥಿನಿಯರು ಆಟೋ ಹತ್ತಿದ್ದು ಏಕೆ? ಅವರು…

Read More

ಸುದೀಪ್ ಸರ್ ಈ ಕೂಲಿಂಗ್ ಗ್ಲಾಸ್ ಗಿಫ್ಟ್ ಕೇಳಿದ್ರು, ಕೊಡಲ್ಲ ಅಂದೆ: ಸತೀಶ್ – Kannada News | Satish Cadaboms talks about Kichcha Sudeep party after Bigg Boss Kannada Season 12

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋ ಫಿನಾಲೆ ಬಳಿಕ ಸ್ಪರ್ಧಿಗಳೆಲ್ಲರೂ ಕಿಚ್ಚ ಸುದೀಪ್ ಜೊತೆ ಪಾರ್ಟಿ ಮಾಡಿದ್ದರು. ಅಲ್ಲಿ ನಡೆದ ಮಾತುಕಥೆ ಬಗ್ಗೆ ಸತೀಶ್ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಸತೀಶ್ ಧರಿಸುವ ಬಟ್ಟೆ, ಕೂಲಿಂಗ್ ಗ್ಲಾಸ್ ಇತ್ಯಾದಿ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗುತ್ತದೆ. ಅವುಗಳ ಬೆಲೆ ದುಬಾರಿ ಎಂದು ಅವರೇ ಹೇಳಿಕೊಳ್ಳುತ್ತಾರೆ. ‘18 ಸಲ ನನ್ನ ಗ್ಲಾಸ್ ಬಗ್ಗೆ ಚರ್ಚೆ ಆಯಿತು. ಈ ಕೂಲಿಂಗ್ ಗ್ಲಾಸ್ ಅನ್ನು ತುಕಾಲಿ ಸಂತುಗೆ ಗಿಫ್ಟ್…

Read More

ಹಫ್ತಾ ವಸೂಲಿ ಮಾಡುತ್ತ ಏರಿಯಾದಲ್ಲಿ ಹವಾ, ಮಸೀದಿ ಪಕ್ಕದ ಜಾಗಕ್ಕಾಗಿ ಬಿತ್ತು ಹೆಣ – Kannada News | Rowdy sheeter shabbir Hacked to death In Bengaluru For Land Near mosque

ಬೆಂಗಳೂರು, (ಜನವರಿ 26): ಹಫ್ತಾ ವಸೂಲಿ ಮಾಡುತ್ತಿದ್ದ ಏರಿಯಾದಲ್ಲಿ ಹವಾ ಮಾಡಿದ್ದ ನಟೋರಿಯಸ್ ರೌಡಿಶೀಟರ್ ನನ್ನು ಬರ್ಬರ ಹತ್ಯೆ ಮಾಡಲಾಗಿದೆ. ಬೆಂಗಳೂರಿನ (Bengaluru) ಮಂಗಮ್ಮನಪಾಳ್ಯದ ನಿವಾಸಿ ಮೊಹಮ್ಮದ್ ಶಬ್ಬೀರ್ ಕೊಲೆಯಾದ ರೌಡಿಶೀಟರ್. ಪ್ರತಿನಿತ್ಯ ಹಫ್ತಾ ವಸೂಲಿ ಮಾಡುತ್ತಿದ್ದ ಕಿರುಕುಳ ನೀಡುತ್ತಿದ್ದ. ಸಾಲದಕ್ಕೆ ರಿಯಲ್ ಎಸ್ಟೇಟ್ ದಂಧೆ ಮಾಡುತ್ತಾ ಮಸೀದಿ ಪಕ್ಕದ ಜಾಗದ ಮೇಲೆ ಕಣ್ಣು ಹಾಕಿದ್ದ. ಇದರಿಂದ ರೋಸಿ ಹೋಗಿದ್ದ ಏರಿಯಾದ ಯುವ ಪಡೆಯೊಂದು ರೌಡಿಶೀಟರ್​ ಮೊಹಮ್ಮದ್ ಶಬ್ಬೀರ್ ನನ್ನು ಹತ್ಯೆ ಮಾಡಿದೆ. ಹೇಳಿ ಕೇಳಿ ರೌಡಿಶೀಟರ್…

Read More

ಬದರಿನಾಥ-ಕೇದಾರನಾಥ ದೇವಾಲಯಕ್ಕೆ ಹಿಂದೂಗಳಲ್ಲದವರಿಗೆ ಪ್ರವೇಶ ನಿಷೇಧ – Kannada News | Badrinath and Kedarnath To Ban Non Hindus from entering dham Temple Panel To Pass Proposal Soon

ಉತ್ತರಕಾಶಿ, ಜನವರಿ 26: ಉತ್ತರಾಖಂಡದ ಹಿಮಾಲಯ ಪರ್ವತದಲ್ಲಿ ನೆಲೆಗೊಂಡಿರುವ ಶತಮಾನಗಳಷ್ಟು ಹಳೆಯದಾದ ಬದರಿನಾಥ (Badrinath) ಮತ್ತು ಕೇದಾರನಾಥ ದೇವಾಲಯಗಳಿಗೆ ಶೀಘ್ರದಲ್ಲೇ ಹಿಂದೂಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ. ಹಿಂದೂಗಳನ್ನು ಹೊರತುಪಡಿಸಿ ಬೇರೆ ಧರ್ಮದವರಿಗೆ ಈ ದೇವಾಲಯಗಳಿಗೆ ಪ್ರವೇಶ ನಿಷೇಧಿಸಲು ತೀರ್ಮಾನಿಸಲಾಗಿದೆ. ಚಾರ್ ಧಾಮ್ ತೀರ್ಥಯಾತ್ರೆಯ ಭಾಗವಾಗಿರುವ ಈ 2 ದೇವಾಲಯಗಳಿಗೆ ಹಿಂದೂಯೇತರರನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗುವುದು ಎಂದು ಈ ದೇವಾಲಯಗಳನ್ನು ನಿರ್ವಹಿಸುವ ದೇವಾಲಯ ಸಂಸ್ಥೆ ಘೋಷಿಸಿದೆ. ಬದರಿನಾಥ-ಕೇದಾರನಾಥ ಧಾಮ ಸೇರಿದಂತೆ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ (BKTC) ನಿಯಂತ್ರಿಸುವ…

Read More

ಗಣರಾಜ್ಯೋತ್ಸವ ಪರೇಡ್​​ನಲ್ಲಿ ಗಮನ ಸೆಳೆದ ಆಪರೇಷನ್ ಸಿಂಧೂರ್‌ ವಿಜಯೋತ್ಸವ – Kannada News | Operation Sindoor Dominates Republic Day Parade showcasing the unified strength of the Indian Army Air Force and Navy

ನವದೆಹಲಿ, ಜನವರಿ 26: ಇಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಆಪರೇಷನ್ ಸಿಂಧೂರ್ (Operation Sindoor) ಕುರಿತಾದ ಟ್ಯಾಬ್ಲೋ ಬಹಳ ಗಮನ ಸೆಳೆಯಿತು. ಇದು ಬ್ರಹ್ಮೋಸ್, S-400 ವಾಯು ರಕ್ಷಣಾ ಮತ್ತು ಡ್ರೋನ್ ಮಾಡೆಲ್​ಗಳನ್ನು ಒಳಗೊಂಡಿತ್ತು. ಹಾಗೇ, ವಾಯುಸೇನೆ, ನೌಕಾಪಡೆ, ಭೂ ಸೇನೆಯ ಒಗ್ಗಟ್ಟನ್ನು ಇದು ಪ್ರದರ್ಶಿಸಿತು. ಭಾರತದ 77ನೇ ಗಣರಾಜ್ಯೋತ್ಸವದ ಮೆರವಣಿಗೆಯು ಈ ವರ್ಷ ರಕ್ಷಣಾ ಸನ್ನದ್ಧತೆ, ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಜಂಟಿ ಕಾರ್ಯಾಚರಣೆಯ ಬಲದ ಮೇಲೆ ಪ್ರಬಲ ಒತ್ತು ನೀಡುವ ಮೂಲಕ ಜಾಗತಿಕ ಗಮನ…

Read More

T20 World Cup 2026: ಟಿ20 ವಿಶ್ವಕಪ್​ಗೆ 2 ಬಾರಿಯ ಚಾಂಪಿಯನ್ ತಂಡ ಪ್ರಕಟ – Kannada News | West Indies Squad for 2026 T20 World Cup Revealed

ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ 2026 ರ ಟಿ20 ವಿಶ್ವಕಪ್ (2026 T20 World Cup) ಫೆಬ್ರವರಿ 7 ರಿಂದ ಆರಂಭವಾಗಲಿದೆ. ಒಟ್ಟು 20 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು, ಈಗಾಗಲೇ ಭಾಗಶಃ ತಂಡಗಳನ್ನು ಘೋಷಿಸಲಾಗಿದೆ. ಇದೀಗ 17ನೇ ತಂಡವಾಗಿ ವೆಸ್ಟ್ ಇಂಡೀಸ್ 15 ಸದಸ್ಯರ ತಂಡವನ್ನು ( West Indies squad) ಘೋಷಿಸಿದೆ. ವೆಸ್ಟ್ ಇಂಡೀಸ್ ಈ ಟೂರ್ನಿಯಲ್ಲಿ ಎರಡು ಬಾರಿ ಚಾಂಪಿಯನ್ ಆಗಿದ್ದು, 2016 ರಲ್ಲಿ ಭಾರತದಲ್ಲಿ ಆಯೋಜಿಸಲಾಗಿದ್ದ ಟಿ20 ವಿಶ್ವಕಪ್​ನಲ್ಲಿ ಇಂಗ್ಲೆಂಡ್…

Read More

ಬಿಗ್ ಬಾಸ್ ಬಳಿಕ ಸಿನಿಮಾ ಅವಕಾಶ ಪಡೆದ ಮಲ್ಲಮ್ಮ; ಬದಲಾಯ್ತು ಲೈಫ್ – Kannada News | Mallamma gets movie offers after Bigg Boss Kannada Season 12

ಮಾತಿನ ಮಲ್ಲಮ್ಮ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ಬಳಿಕ ಹೆಚ್ಚು ಖ್ಯಾತಿ ಪಡೆದುಕೊಂಡರು. ಈಗ ಅವರಿಗೆ ಸಿನಿಮಾಗಳಿಂದ ಅವಕಾಶಗಳು ಸಿಗುತ್ತಿವೆ. ಅಲ್ಲದೇ, ಧಾರಾವಾಹಿಗಳಲ್ಲಿ ನಟಿಸುವ ಆಫರ್ ಸಹ ಬಂದಿದೆ. ಆ ಬಗ್ಗೆ ಮಲ್ಲಮ್ಮ ಅವರು ಟಿವಿ9 ಜೊತೆಗೆ ಮಾತನಾಡಿದ್ದಾರೆ. ‘ವಿನಾಶಕಾಲೇ’ ಸಿನಿಮಾದಲ್ಲಿ ಮಲ್ಲಮ್ಮ ಅವರು ನಟಿಸುತ್ತಿದ್ದಾರೆ. ತಾಯಿಯ ಪಾತ್ರ ಮಾಡಲು ಅವರು ಒಪ್ಪಿಕೊಂಡಿದ್ದಾರೆ. ಬಿಗ್ ಬಾಸ್ ಶೋನಿಂದ ತಮ್ಮ ಬದುಕು ಬದಲಾಗಿದೆ ಎಂದು ಮಲ್ಲಮ್ಮ (Mallamma) ಹೇಳಿದ್ದಾರೆ….

Read More