GT vs RR: 47 ಎಸೆತಗಳಲ್ಲಿ 5ನೇ ಐಪಿಎಲ್ ಶತಕ ಬಾರಿಸಿದ ಶುಭ್​ಮನ್ ಗಿಲ್

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನಾಯಕನ ಇನ್ನಿಂಗ್ಸ್ ಆಡಿದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​ಮನ್ ಗಿಲ್ ಕೇವಲ 47 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿದ್ದಾರೆ. ಗೆಲುವಿಗೆ ರಾಜಸ್ಥಾನ್ ನೀಡಿದ 215 ರನ್​ಗಳ ಗುರಿ ಬೆನ್ನಟ್ಟಿದ ಗುಜರಾತ್ ಪರ ಅಬ್ಬರದ ಇನ್ನಿಂಗ್ಸ್ ಆಡಿದ ಶುಭ್​ಮನ್ 15 ಬೌಂಡರಿ ಹಾಗೂ 3 ಬೌಂಡರಿ ಸಹಿತ ತಮ್ಮ ಐದನೇ ಐಪಿಎಲ್ ಶತಕವನ್ನು ಪೂರೈಸಿದರು. ಮಾತ್ರವಲ್ಲದೆ ಸಾಯಿ ಸುದರ್ಶನ್ ಅವರೊಂದಿಗೆ 150 ರನ್​ಗಳ ಜೊತೆಯಾಟವನ್ನು ಕಟ್ಟಿದರು. ಇದು ಈ ಜೋಡಿಯ 11ನೇ ಶತಕದ ಜೊತೆಯಾಟವಾಗಿದ್ದು, ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕದ ಜೊತೆಯಾಟ ನಡೆಸಿದ ದಾಖಲೆಯನ್ನು ಈ ಜೋಡಿ ಬರೆಯಿತು.

ರಾಜಸ್ಥಾನ ರಾಯಲ್ಸ್ ವಿರುದ್ಧದ ಎರಡನೇ ಕ್ವಾಲಿಫೈಯರ್‌ನಲ್ಲಿ ಸ್ಮರಣೀಯ ಇನ್ನಿಂಗ್ಸ್ ಆಡಿದ ಗಿಲ್ ಕೇವಲ 47 ಎಸೆತಗಳಲ್ಲಿ ಶತಕ ಬಾರಿಸಿದರು. ಈ ಮೂಲಕ ಗುಜರಾತ್ ಟೈಟಾನ್ಸ್ ಪರ ಅತಿ ವೇಗದ ಶತಕ ಬಾರಿಸಿದ ದಾಖಲೆಯನ್ನು ನಿರ್ಮಿಸಿದರು. 53 ಎಸೆತಗಳಲ್ಲಿ 104 ರನ್ ಬಾರಿಸಿ ಔಟಾದ ಗಿಲ್, ಸಾಯಿ ಸುದರ್ಶನ್ ಅವರೊಂದಿಗೆ 167 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು, ಇದು ಪ್ಲೇಆಫ್‌ನಲ್ಲಿ ಯಾವುದೇ ವಿಕೆಟ್‌ಗೆ ಅತ್ಯಧಿಕ ಜೊತೆಯಾಟವಾಗಿದೆ.

Published On – 11:14 pm, Fri, 29 May 26

Source link

150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ ಸಂಜಯ್ ಮಿಶ್ರಾ

ಬಾಲಿವುಡ್​ನ (Bollywood) ಖ್ಯಾತ ನಟ ಸಂಜಯ್ ಮಿಶ್ರಾ (Sanjay Mishra) ಅವರ ಬಳಿ ನೂರಾರು ಕೋಟಿ ರೂಪಾಯಿ ಆಸ್ತಿ ಇದೆ. ಹಾಗಿದ್ದರೂ ಕೂಡ ಅವರು ಸರಳ ಜೀವನವನ್ನು ಮರೆತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅವರು ಇತ್ತೀಚೆಗೆ ಹಂಚಿಕೊಂಡ ಒಂದು ವಿಡಿಯೋ ಸಖತ್ ವೈರಲ್ ಆಗಿದೆ. ಮಳೆಗಾಲ ಆರಂಭ ಆಗುವುದಕ್ಕೂ ಮುನ್ನ ದೇವಸ್ಥಾನವನ್ನು ಸ್ವಚ್ಛಗೊಳಿಸುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ಸಿನಿಮಾ ಕೆಲಸಗಳಿಂದ ಬಿಡುವು ಪಡೆದಾಗ ಅವರು ತೋಟದ ಮನೆಯಲ್ಲಿ ಕಾಲ ಕಳೆಯುತ್ತಾರೆ. ಅಲ್ಲಿರುವ ಶಿವನ ದೇವಸ್ಥಾನದ ಕೆಲಸಗಳನ್ನು ಅವರು ಮಾಡಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೂಲಗಳ ಪ್ರಕಾರ, ಸಂಜಯ್ ಮಿಶ್ರಾ ಅವರು ಅಂದಾಜು 150 ಕೋಟಿ ರೂಪಾಯಿ ಒಡೆಯ. ಆದರೂ ಕೂಡ ಅವರು ಹಳ್ಳಿ ಹೈದನಂತೆ ಸುಡು ಬಿಸಿಲಿನಲ್ಲಿ ನಿಂತು ಕೆಲಸ ಮಾಡುತ್ತಿರುವ ವಿಡಿಯೋ (Sanjay Mishra Viral Video) ಎಲ್ಲರ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ಛಲವಾದಿ ನಾರಾಯಣಸ್ವಾಮಿ

ಕಲಬುರಗಿ, ಮೇ 29: ಒಂದು ತಿಂಗಳೊಳಗೆ ನಾಲ್ವರು ಹಿಂದೂ ವಿರೋಧಿಗಳು ಅಧಿಕಾರ ಕಳೆದುಕೊಂಡಿದ್ದಾರೆ ಎಂಬ ಪೋಸ್ಟರ್​​ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮಿಳುನಾಡಿನ ಎಂ.ಕೆ ಸ್ಟಾಲಿನ್, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಕೇರಳದ ಪಿಣರಾಯಿ ವಿಜಯನ್​ ಮತ್ತು ಕರ್ನಾಟಕದ ಸಿದ್ದರಾಮಯ್ಯರ ಪೋಸ್ಟರ್ ವೈರಲ್​ ಆಗಿದೆ. ಈ ಸಂಬಂಧ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದು, ಹಿಂದುತ್ವದ ವಿರುದ್ಧ ನಿಲುವು ತಳೆದಿದ್ದ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ನಾಲ್ಕು ಮಂದಿ ಮುಖ್ಯಮಂತ್ರಿಗಳು ಕಳೆದ ಒಂದು ತಿಂಗಳಲ್ಲೇ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ಮಾಡಿದರು. ಇನ್ನು ರಾಜಕೀಯ ನಿವೃತ್ತಿ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬದಲಾಗಿ ಕೋಮುವಾದಿಗಳ ವಿರುದ್ಧ ಹೋರಾಟ ಮಾಡುತ್ತೇನೆ ಎಂದಿದ್ದಾರೆ. ಆದರೆ ಅವರೇ ಕೋಮುವಾದಿಗಳು ಎಂದು ತಿರುಗೇಟು ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಡಿಕೆಶಿಗೆ ಸಿಎಂ ಯೋಗ: ನಿಜವಾಯ್ತು ಕೋಡಿಶ್ರೀ ಭವಿಷ್ಯ, ಸಿದ್ದರಾಮಯ್ಯ ಬಗ್ಗೆ ಅಂದು ಸ್ವಾಮೀಜಿ ಹೇಳಿದ್ದೇನು?

ಬೆಂಗಳೂರು , (ಮೇ 29): “ಹಾಲುಮತ ಸಮಾಜದಿಂದ ಅಧಿಕಾರ ಕಿತ್ತುಕೊಳ್ಳುವುದು ಕಷ್ಟ. ಅವರಾಗಿಯೇ ಬಿಟ್ಟರೆ ಮಾತ್ರ ಅಧಿಕಾರ” ಎನ್ನುವ ಮೂಲಕ‌ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ  (Siddaramaiah) ಬಿಟ್ಟು ಕೊಡುವವರೆಗೂ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ಅಧಿಕಾರ ಸಿಗುವುದಿಲ್ಲ ಎಂದು ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಈ ಹಿಂದೆ ಭವಿಷ್ಯ (Kodi Shree Predication) ನುಡಿದಿದ್ದರು. ಈಗ ಕೋಡಿಶ್ರೀಗಳ ಭವಿಷ್ಯ ಅಕ್ಷರಶಃ ನಿಜವಾಗಿದೆ. ಹೈಕಮಾಂಡ್ ಸೂಚಿಸಿದಂತೆ ಸಿದ್ದರಾಮಯ್ಯ, ಯಾವುದೇ ತಂಟೆ ತಗಾದೇ ತೆಗೆಯದೇ ನೇರವಾಗಿ ಬಂದು ಮುಖ್ಯಮಂತ್ರಿ ಸ್ಥಾನಕ್​ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಅವರೇ ಸಿಎಂ ಸ್ಥಾನವನ್ನ ನಯವಾಗಿ ಬಿಟ್ಟುಕೊಟ್ಟಿದ್ದಾರೆ. ಇದರೊಂದಿಗೆ ಕೋಡಿ ಶ್ರೀ ನುಡಿದಿದ್ದ ರಾಜಕೀಯ ಭವಿಷ್ಯ ನಿಜವಾಗಿದೆ.

ಬಲವಂತವಾಗಿ ಅಲುಗಾಡಿಸಲು ಆಗಲ್ಲ ಎಂದಿದ್ದ ಶ್ರೀ

ಅಂದು ಮುಖ್ಯಮಂತ್ರಿಗಳ ಅಧಿಕಾರಾವಧಿ ಕುರಿತು ಮಾತನಾಡಿದ್ದ ಶ್ರೀಗಳು, ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ಅಧಿಕಾರದಿಂದ ಮುಕ್ತಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. “ವಿರೋಧ ಪಕ್ಷಗಳಾಗಲಿ ಅಥವಾ ಸ್ವತಃ ಹೈಕಮಾಂಡ್ ಆಗಲಿ ಅವರನ್ನು ಒತ್ತಾಯಪೂರ್ವಕವಾಗಿ ಕುರ್ಚಿಯಿಂದ ಕೆಳಗಿಳಿಸಲು ಸಾಧ್ಯವಿಲ್ಲ. ಒಂದು ವೇಳೆ ಸಿದ್ದರಾಮಯ್ಯ ಅವರು ತಾವಾಗಿಯೇ ಮನಸ್ಸು ಮಾಡಿ ಸ್ಥಾನ ಬಿಟ್ಟುಕೊಟ್ಟರೆ ಮಾತ್ರ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸಾಧ್ಯ” ಎಂದು ಹೇಳಿದ್ದರು. ಅಂದರೆ ಈ ಬದಲಾವಣೆಯ ಹಿಂದೆ ಸಿದ್ದರಾಮಯ್ಯ ಅವರ ಸ್ವಯಂ ನಿರ್ಧಾರವೇ ಪ್ರಮುಖವಾಗಿರುತ್ತದೆ ಎಂದು ಶ್ರೀಗಳು ಅಂದೇ ಸೂಚಿಸಿದ್ದರು.

ಇದನ್ನೂ ನೋಡಿ: ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ

ಕೋಡಿಶ್ರೀಗಳು ಅಂದು ನುಡಿದಿದ್ದ ಭವಿಷ್ಯದಂತೆಯೇ ಇಂದು ಸಿದ್ದರಾಮಯ್ಯ ಅವರು ಯಾವುದೇ ಒತ್ತಡಕ್ಕೆ ಮಣಿಯದೆ, ಹೈಕಮಾಂಡ್ ಮೇಲಿನ ನಿಷ್ಠೆಯಿಂದಾಗಿ ತಾವಾಗಿಯೇ ಸ್ವಪ್ರೇರಣೆಯಿಂದ ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಈ ಗೌರವಯುತ ನಿರ್ಗಮನದೊಂದಿಗೆ ಕೋಡಿಮಠದ ಶ್ರೀಗಳ ಮಾತುಗಳು ಸತ್ಯವಾಗಿದೆ.

ರಾಹುಲ್ ಸೂಚನೆಯನ್ನು ಶಿರಸಾವಹಿಸಿ ಪಾಲಿಸಿದ ಸಿದ್ದು

2023ರಲ್ಲಿ ಸರ್ಕಾರ ರಚನೆ ವೇಳೆ ಸಿಎಂ ಸ್ಥಾನದ ಅಧಿಕಾರ ಹಂಚಿಕೆ ಬಗ್ಗೆ ಆಗಿತ್ತೆನ್ನಲಾದ ಅಲಿಖಿತ ಒಪ್ಪಂದ ಹಲವು ಸಮಯದ ಗೊಂದಲಗಳ ಬಳಿಕ ಅಂತಿಮವಾಗಿ ಸುಖಾಂತ್ಯ ಕಂಡಿದೆ. ಮುಂದಿನ ಸಿಎಂ ಡಿಕೆ ಶಿವಕುಮಾರ್ ಎಂದು ಬ್ರೇಕ್ ಫಾಸ್ಟ್ ಮೀಟಿಂಗ್​​ನಲ್ಲಿ ಸಿದ್ದರಾಮಯ್ಯ ಹೇಳಿದ್ದರು. ಅಲ್ಲದೇ ಜೊತೆಗೆ ಕರೆದುಕೊಂಡು ಲೋಕಭವನಕ್ಕೆ ತೆರಳಿ ಪಕ್ಕದಲ್ಲೇ ಡಿಕೆ ಶಿವಕುಮಾರ್ ಅವರನ್ನು ಇರಿಸಿಕೊಂಡು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾದರಿಯಾಗಿದ್ದಾರೆ.

ಮೊದಲಿನಿಂದಲೂ ನಾಯಕತ್ವ ಬದಲಾವಣೆ ಮುಸುಕಿನ ಗುದ್ದಾಟ ಶುರುವಾದಗೆಲ್ಲ ಸಿದ್ದರಾಮಯ್ಯನವರು ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆಂದು ಹೇಳಿಕೊಂಡೇ ಬಂದಿದ್ದರು. ಆದ್ರೆ, ಅಂತಿಮವಾಗಿ ರಾಹುಲ್ ಗಾಂಧಿ, ರಾಜೀನಾಮೆ ನೀಡಿ ಎಂದು ಹೇಳುತ್ತಾರೆಂಬ ನಂಬಿಕೆ ಸಿದ್ದರಾಮಯ್ಯನವರಿಗೆ ಇರಲಿಲ್ಲ. ಇವರು ಅಷ್ಟು ಸುಲಭಕ್ಕೆ ಬಿಟ್ಟು ಕೊಡುತ್ತಾರೆ ಎಂಬ ನಂಬಿಕೆಯೂ ಹೈಕಮಾಂಡ್ ನಾಯಕರಿಗಿರಲಿಲ್ಲ. ಅಲ್ಲದೇ ಈ ನಾಯಕತ್ವ ಬದಲಾವಣೆ ಗೊಂದಲ ಇಷ್ಟು ಸುಲಭಕ್ಕೆ ಈ ಪ್ರಕ್ರಿಯೆ ಮುಗಿಯುತ್ತದೆ ಎಂಬ ನಂಬಿಕೆ ಯಾರಿಗೂ ಇರಲಿಲ್ಲ.

ಹೀಗೆ ಸಿದ್ದರಾಮಯ್ಯನವರು ಶಿರಸಾವಹಿಸಿ ಪಾಲಿಸಿರುವುದರಿಂದಲೇ ಇದೀಗ ಡಿಕೆ ಶಿವಕುಮಾರ್​​​ಗೆ ಸಿಎಂ ಆಗುವ ಯೋಗ ಕೂಡಿಬಂದಿದೆ. ಒಂದು ವೇಳೆ ಸಿದ್ದರಾಮಯ್ಯನವರು ತಗಾದೆ ತೆಗೆದು ರಾಜೀನಾಮೆ ನೀಡಲು ಹಿಂದೇಟು ಹಾಕಿದ್ದರೆ ಡಿಕೆ ಶಿವಕುಮಾರ್ ಸಿಎಂ ಆಗುತ್ತಿರಲಿಲ್ಲ. ಒಂದು ವೇಳೆ ಸಿದ್ದರಾಮಯ್ಯನವರಿಂದ ಬಲವಂತವಾಗಿ ಸಿಎಂ ಕುರ್ಚಿ ಕಿತ್ತುಕೊಂಡಿದ್ದರೆ ಕಾಂಗ್ರೆಸ್ ಸರ್ಕಾರ ಇರುವುದು ಅನುಮಾನವಾಗಿತ್ತು.

Source link

GT vs RR: ಸತತ 2ನೇ ಪಂದ್ಯದಲ್ಲಿ ಶತಕ ವಂಚಿತರಾದ ವೈಭವ್ ಸೂರ್ಯವಂಶಿ

Source link

ಸಮಂತಾಗೆ ಮೋಸ ಮಾಡಿದ್ರಿ ಎಂದವರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟ ನಾಗ ಚೈತನ್ಯ

ಟಾಲಿವುಡ್ ಖ್ಯಾತ ನಟ ನಾಗ ಚೈತನ್ಯ (Naga Chaitanya) ಅವರು ತಮ್ಮ ವ್ಯಕ್ತಿತ್ವದ ಹಕ್ಕುಗಳ ರಕ್ಷಣೆಗಾಗಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮ ಹೆಸರು, ಫೋಟೋಗಳು, ಕೃತಕ ಬುದ್ಧಿಮತ್ತೆ (ಎಐ) ಬಳಸಿ ಸೃಷ್ಟಿಸಲಾದ ಡೀಪ್‌ಫೇಕ್ ಹಾಗೂ ಅಶ್ಲೀಲ ಕಂಟೆಂಟ್‌ಗಳ ಅನಧಿಕೃತ ಬಳಕೆಯನ್ನು ತಡೆಯಲು ಅವರು ಮೊಕದ್ದಮೆ ಹೂಡಿದ್ದಾರೆ. ಪ್ರಮುಖವಾಗಿ, ಅವರು ಮಾಜಿ ಪತ್ನಿ ಸಮಂತಾ (Samantha) ರುತ್ ಪ್ರಭುಗೆ ವಂಚಿಸಿ, ಆಕೆಯ ವೃತ್ತಿಜೀವನವನ್ನು ಹಾಳು ಮಾಡಿದ್ದಾರೆ ಎಂಬ ಅರ್ಥದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಮತ್ತು ನಿಂದನಾತ್ಮಕ ಸುದ್ದಿಗಳ ವಿರುದ್ಧ ನಾಗ ಚೈತನ್ಯ ಅವರ ಪರ ವಕೀಲರು ನ್ಯಾಯಾಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಏಕಸದಸ್ಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ನಾಗ ಚೈತನ್ಯ ಪರ ಹಿರಿಯ ವಕೀಲ ವೈಭವ್ ಗಗ್ಗರ್ ವಾದ ಮಂಡಿಸಿ, ಹಲವು ವೆಬ್‌ಸೈಟ್‌ಗಳು ಹಾಗೂ ಯೂಟ್ಯೂಬ್ ಚಾನೆಲ್‌ಗಳು ಹೆಚ್ಚಿನ ವೀವ್ಸ್ ಮತ್ತು ಹಣ ಗಳಿಸುವ ಉದ್ದೇಶಕ್ಕಾಗಿ ನಟನ ಹೆಸರನ್ನು ಅಶ್ಲೀಲ ಪದಗಳೊಂದಿಗೆ ಬಳಸಿ ಆಕ್ಷೇಪಾರ್ಹ ಕಂಟೆಂಟ್‌ಗಳನ್ನು ಪ್ರಸಾರ ಮಾಡುತ್ತಿವೆ ಎಂದು ಕೋರ್ಟ್ ಗಮನಕ್ಕೆ ತಂದರು.

‘ನಾಗ ಚೈತನ್ಯ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಎಐ ತಂತ್ರಜ್ಞಾನ ಮತ್ತು ಧ್ವನಿ ನಕಲು ಮಾಡಿ ಸುಳ್ಳು ಹಾಗೂ ವಿಕೃತ ವೀಡಿಯೊಗಳನ್ನು ಹರಿಬಿಡಲಾಗುತ್ತಿದೆ. ಮುಖ್ಯವಾಗಿ ಮಾಜಿ ಪತ್ನಿ ಸಮಂತಾ ಅವರಿಗೆ ನಾಗ ಚೈತನ್ಯ ವಂಚಿಸಿದ್ದಾರೆ ಮತ್ತು ಅವರ ಕೆರಿಯರ್ ಹಾಳು ಮಾಡಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಇದು ಟ್ರೋಲಿಂಗ್ ಮತ್ತು ನಿಂದನೆಯಾಗಿದೆ, ಇದನ್ನು ವಿಮರ್ಶೆ ಎನ್ನಲು ಸಾಧ್ಯವಿಲ್ಲ’ ಎಂದು ವಕೀಲರು ವಾದಿಸಿದರು.

ಅಷ್ಟೇ ಅಲ್ಲದೆ, ನಾಗ ಚೈತನ್ಯ ಅವರ ಅನುಮತಿಯಿಲ್ಲದೆ ಅವರ ಮುಖ ಮತ್ತು ಹೆಸರನ್ನು ಬಳಸಿ ಟಿ-ಶರ್ಟ್ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಅನಧಿಕೃತ ಲಿಸ್ಟಿಂಗ್‌ಗಳನ್ನು ಸಹ ಕೋರ್ಟ್‌ಗೆ ತೋರಿಸಲಾಯಿತು. ಈ ಹಿಂದೆ ನಾಗ ಚೈತನ್ಯ ಅವರ ತಂದೆ, ಹಿರಿಯ ನಟ ನಾಗಾರ್ಜುನ ಅವರ ವ್ಯಕ್ತಿತ್ವದ ಹಕ್ಕುಗಳಿಗೂ ಇದೇ ನ್ಯಾಯಾಲಯ ರಕ್ಷಣೆ ನೀಡಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಲಾಯಿತು.

ಇದನ್ನೂ ಓದಿ: ಒಂದೇ ಮದುವೆ ಸಮಾರಂಭದಲ್ಲಿ ಸಮಂತಾ-ನಾಗ ಚೈತನ್ಯ; ಮಾಜಿ ಜೋಡಿಯ ಫೋಟೋ ವೈರಲ್

ವಾದವನ್ನು ಆಲಿಸಿದ ನ್ಯಾಯಾಧೀಶರು, ‘ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ಸಾರ್ವಜನಿಕರ ಸೂಕ್ಷ್ಮ ಅವಲೋಕನಕ್ಕೆ ಒಳಗಾಗುವುದು ಸಹಜ. ನೀವು ಇತರರಿಗಿಂತ ಹೆಚ್ಚು ಸಾಫ್ಟ್ ಟಾರ್ಗೆಟ್ ಆಗುತ್ತೀರಿ ನಿಜ, ಆದರೆ ಅದಕ್ಕೂ ಕೆಲವು ಮಿತಿಗಳಿವೆ’ ಎಂದು ಅಭಿಪ್ರಾಯಪಟ್ಟರು. ಡಿಜಿಟಲ್ ಲೋಕದಲ್ಲಿ ಪ್ರತಿದಿನ ಇಂತಹ ಆಕ್ಷೇಪಾರ್ಹ ಕಂಟೆಂಟ್‌ಗಳು ಸೃಷ್ಟಿಯಾಗುತ್ತಿರುವುದರಿಂದ ಭವಿಷ್ಯದಲ್ಲೂ ಇವುಗಳನ್ನು ತಡೆಯಲು ಮುನ್ನೆಚ್ಚರಿಕಾ ನಿಷೇಧಾಜ್ಞೆ ನೀಡಬೇಕು ಎಂದು ಚೈತನ್ಯ ಪರ ವಕೀಲರು ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೃದಯಸ್ಪರ್ಶಿ ಘಟನೆ: ಮಳೆಯಲ್ಲಿ ರಸ್ತೆ ದಾಟಲು ಪರದಾಡುತ್ತಿದ್ದ ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್

ಬೆಂಗಳೂರು, ಮೇ 29: ಸಿಲಿಕಾನ್ ಸಿಟಿಯಲ್ಲಿ ಸುರಿದ ಧಾರಾಕಾರ ಮಳೆ ಒಂದೆಡೆ ಅವಾಂತರ ಸೃಷ್ಟಿಸುತ್ತಿದ್ದರೆ, ಮತ್ತೊಂದೆಡೆ ಇದೇ ಮಳೆಯ ನಡುವೆ ಬೆಂಗಳೂರು ಪೊಲೀಸರ ಮಾನವೀಯತೆಯ ದರ್ಶನವಾಗಿದೆ. ಮಳೆಯಲ್ಲಿ ರಸ್ತೆ ದಾಟಲು ಪರದಾಡುತ್ತಿದ್ದ ವಿಕಲಚೇತನ ಯುವಕನನ್ನು ಪೊಲೀಸ್ ಕಾನ್ಸ್ಟೇಬಲ್​​ ಅನಿಲ್​​ ಹೆಗಲ ಮೇಲೆ ಹೊತ್ತು ರಸ್ತೆ ದಾಟಿಸಿದ್ದಾರೆ. ಆ ಮೂಲಕ ಕರ್ತವ್ಯದ ವೇಳೆ ಮಾನವೀಯತೆ ಮೆರೆದ ಪೊಲೀಸ್ ಸಿಬ್ಬಂದಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳೆಲ್ಲಾ ಜಲಾವೃತಗೊಂಡಿವೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಾರ್ವಜನಿಕರ ರಕ್ಷಣೆಗೆ ನಿಲ್ಲುವ ಪೊಲೀಸರು ತಾವೂ ಕೂಡ ಮಳೆಯಲ್ಲಿ ನೆನೆಯುತ್ತಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರ ನಡುವೆ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆ ಅತ್ಯಂತ ಹೃದಯಸ್ಪರ್ಶಿ ಆಗಿದೆ.

ವರದಿ: ಶಿವು 

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Source link

ಸಂಗೀತಾ ಮೊಬೈಲ್ಸ್​ನ 52ನೇ ವಾರ್ಷಿಕೋತ್ಸವ ಮಾರಾಟ ಮೇಳ: ದಕ್ಷಿಣ ಭಾರತೀಯರಿಗೆ ಭರ್ಜರಿ ಬಹುಮಾನಗಳ ಸುರಿಮಳೆ, ಸಾಟಿ ಇಲ್ಲದ ಆಫರ್ಸ್

ಭಾರತದ ಪ್ರಮುಖ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ರಿಟೇಲ್ ಚೇನ್ ಆದ ‘ಸಂಗೀತಾ’ (sangeetha mobiles), ಮೇ 31 ರಿಂದ ತನ್ನ ಭವ್ಯವಾದ 52ನೇ ವರ್ಷದ ವಾರ್ಷಿಕೋತ್ಸವದ (52 years anniversary) ಮಾರಾಟ ಮೇಳವನ್ನು (52nd Anniversary Sale) ಘೋಷಿಸಿದೆ. ಇದನ್ನು ತನ್ನ “ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ಹೆಚ್ಚು ಕೊಡುಗೆಗಳಿರುವ ಮಾರಾಟ ಮೇಳ” ಎಂದು ಈ ಸಂಸ್ಥೆ ಬಣ್ಣಿಸಿದೆ. ಕೇವಲ ಸ್ಟೋರ್‌ಗೆ ಭೇಟಿ ನೀಡಿದರೂ ಸಾಕು, ಗ್ರಾಹಕರು 6,000 ರೂವರೆಗೆ ಪ್ರಯೋಜನಗಳನ್ನು ಪಡೆಯಬಹುದು. ಅಷ್ಟು ಮಾತ್ರವಲ್ಲ, ಡ್ಯಾಮೇಜ್ ಪ್ರೊಟೆಕ್ಷನ್, ಥೆಫ್ಟ್ ಪ್ರೊಟೆಕ್ಷನ್, ಸೈಬರ್ ಇನ್ಶೂರೆನ್ಸ್, ಡೋರ್‌ಸ್ಟೆಪ್ ಸರ್ವಿಸ್ ಮತ್ತು ಭರ್ಜರಿ ಬಹುಮಾನಗಳೂ ಗ್ರಾಹಕರಿಗೆ ಲಭ್ಯ ಇರುತ್ತವೆ.

ಸಂಗೀತಾದ ಈ ವಾರ್ಷಿಕೋತ್ಸವದ ಸಂಭ್ರಮಾಚರಣೆಯು ಗ್ರಾಹಕರಿಗೆ ಅಭೂತಪೂರ್ವ ಕೊಡುಗೆಗಳು, ರಕ್ಷಣಾ ಯೋಜನೆಗಳು, ಆಕರ್ಷಕ ಉಡುಗೊರೆಗಳು ಮತ್ತು ಸುಲಭ ಹಣಕಾಸು (Finance) ಆಯ್ಕೆಗಳನ್ನು ಒಟ್ಟುಗೂಡಿಸಿದೆ. ಇದು ದೇಶದಲ್ಲೇ ಅತ್ಯಂತ ಗ್ರಾಹಕ-ಸ್ನೇಹಿ ರಿಟೇಲ್ ಹಬ್ಬಗಳಲ್ಲಿ ಒಂದಾಗಿದ್ದು, ಪ್ರತಿಯೊಂದು ಸಂಗೀತಾ ಸ್ಟೋರ್​ನಲ್ಲೂ ಇಡೀ ತಿಂಗಳ ಕಾಲ ಲಭ್ಯ ಇರುತ್ತದೆ. ಈ ಸಂಭ್ರಮಾಚರಣೆಯ ಭಾಗವಾಗಿ, ಗ್ರಾಹಕರು ಸಂಗೀತಾದ ಯಾವುದೇ ಸ್ಟೋರ್‌ಗೆ ಭೇಟಿ ನೀಡುವ ಮೂಲಕ 6,000 ರೂವರೆಗಿನ ಪ್ರಯೋಜನಗಳನ್ನು ಪಡೆಯಬಹುದು. ಇದರ ಜೊತೆಗೆ, ಮೊಬೈಲ್‌ಗಳು, ಗ್ಯಾಜೆಟ್‌ಗಳು, ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉಪಕರಣಗಳ ಖರೀದಿಗಳ ಮೇಲೆ ಇನ್ನೂ ಹೆಚ್ಚಿನ ಬಹುಮಾನಗಳು ಮತ್ತು ಮೌಲ್ಯವರ್ಧಿತ ಕೊಡುಗೆಗಳೂ ಲಭ್ಯವಿವೆ.

ವಾರ್ಷಿಕೋತ್ಸವದ ಪ್ರಮುಖ ಆಫರ್‌ಗಳು

  • ಸಂಗೀತಾದ ಸ್ಟೋರ್‌ಗಳಿಗೆ ಭೇಟಿ ನೀಡುವ ಗ್ರಾಹಕರಿಗೆ 6,000 ರೂವರೆಗಿನ ಪ್ರಯೋಜನಗಳು.
  • ಸಂಗೀತಾದಲ್ಲಿ ಖರೀದಿಸುವ ಮೊಬೈಲ್ ಫೋನ್‌ಗಳ ಮೇಲೆ 24 ತಿಂಗಳ ಡ್ಯಾಮೇಜ್ ಪ್ರೊಟೆಕ್ಷನ್ (ಹಾನಿ ರಕ್ಷಣೆ).
  • ಮೊಬೈಲ್ ಫೋನ್‌ಗಳಿಗೆ 365 ದಿನಗಳ ಕಳ್ಳತನ ಮತ್ತು ನಷ್ಟದ ವಿರುದ್ಧ ರಕ್ಷಣೆ (Theft & Loss Protection).
  • 50,000 ರೂವರೆಗಿನ ಸೈಬರ್ ಕಳ್ಳತನ ವಿಮಾ ರಕ್ಷಣೆ (Cyber Theft Insurance Cover).
  • ಸಂಗೀತಾದಲ್ಲಿ ಖರೀದಿಸಿದ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ 365 ದಿನಗಳ ಡೋರ್‌ಸ್ಟೆಪ್ ಸರ್ವಿಸ್ (ಮನೆಬಾಗಿಲಿಗೆ ಸೇವೆ).
  • ಚಿನ್ನದ ನಾಣ್ಯಗಳು, ಗಿಫ್ಟ್ ವೋಚರ್‌ಗಳು, ಸ್ಕೂಟರ್‌ಗಳು ಮತ್ತು ಇನ್ನಿತರ ಆಕರ್ಷಕ ಉಡುಗೊರೆಗಳು ಹಾಗೂ ಲಕ್ಕಿ ಡ್ರಾ ಅವಕಾಶಗಳು.
  • ಅರ್ಹ ಹಳೆಯ ಫೋನ್‌ಗಳಿಗೆ 5,000 ರೂವರೆಗಿನ ಎಕ್ಸ್‌ಚೇಂಜ್ ಮೌಲ್ಯ.
  • ಅರ್ಹ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ 24 ತಿಂಗಳ 0% ಇಎಂಐ (EMI) ಸೌಲಭ್ಯ.

ಈ ವಾರ್ಷಿಕೋತ್ಸವದ ಅಭಿಯಾನವನ್ನು ಕೇವಲ ರಿಯಾಯಿತಿಗಳನ್ನು ನೀಡುವುದಕ್ಕಷ್ಟೇ ಸೀಮಿತಗೊಳಿಸದೆ, ಸಾಟಿಯಿಲ್ಲದ ರಕ್ಷಣೆ ಮತ್ತು ಸೇವಾ ಪ್ರಯೋಜನಗಳ ಮೂಲಕ ಗ್ರಾಹಕರಿಗೆ ಸಂಪೂರ್ಣ ನೆಮ್ಮದಿಯನ್ನು ನೀಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ.

ಈ ಮಾರಾಟ ಮೇಳದ ಚಾಲನೆ ಕುರಿತು ಮಾತನಾಡಿದ ಸಂಗೀತಾದ ವ್ಯವಸ್ಥಾಪಕ ನಿರ್ದೇಶಕರಾದ (Managing Director) ಸುಭಾಷ್ ರೆಡ್ಡಿ ಅವರು, “ಕಳೆದ 52 ವರ್ಷಗಳಿಂದ, ಗ್ರಾಹಕರು ಸಂಗೀತಾವನ್ನು ಕೇವಲ ಅತ್ಯುತ್ತಮ ಉತ್ಪನ್ನಗಳು ಮತ್ತು ಬೆಲೆಗಳಿಗಾಗಿ ಮಾತ್ರವಲ್ಲದೆ, ಪ್ರತಿಯೊಂದು ಖರೀದಿಯೊಂದಿಗೆ ಸಿಗುವ ವಿಶ್ವಾಸ ಮತ್ತು ಸೇವಾ ಅನುಭವಕ್ಕಾಗಿ ನಂಬಿದ್ದಾರೆ. ಈ ವಾರ್ಷಿಕೋತ್ಸವದ ಸಂಭ್ರಮಾಚರಣೆಯು ನಮ್ಮ ಗ್ರಾಹಕರಿಗೆ ಸಾಧ್ಯವಾದಷ್ಟು ದೊಡ್ಡ ರೀತಿಯಲ್ಲಿ ಕೃತಜ್ಞತೆ ಸಲ್ಲಿಸುವ ನಮ್ಮ ಒಂದು ಮಾರ್ಗವಾಗಿದೆ. ಹಿಂದೆಂದೂ ಕಾಣದ ರಕ್ಷಣಾ ಪ್ರಯೋಜನಗಳಿಂದ ಹಿಡಿದು ಬಹುಮಾನಗಳು, ಎಕ್ಸ್‌ಚೇಂಜ್ ಆಫರ್‌ಗಳು, ಡೋರ್‌ಸ್ಟೆಪ್ ಸರ್ವಿಸ್ ಮತ್ತು ಆಕರ್ಷಕ ಉಡುಗೊರೆಗಳವರೆಗೆ, ನಾವು ಪ್ರತಿಯೊಂದು ಮನೆಗೂ ಸಾಟಿಯಿಲ್ಲದ ಮೌಲ್ಯವನ್ನು ತಲುಪಿಸುವ ವಾರ್ಷಿಕೋತ್ಸವದ ಹಬ್ಬವನ್ನು ಸೃಷ್ಟಿಸಲು ಬಯಸಿದ್ದೇವೆ” ಎಂದಿದ್ದಾರೆ.

“ಇಂದಿನ ದಿನಗಳಲ್ಲಿ ತಂತ್ರಜ್ಞಾನ ಎಂಬುದು ವೈಯಕ್ತಿಕ ಮತ್ತು ದೈನಂದಿನ ಜೀವನದ ಅತ್ಯಗತ್ಯ ಭಾಗವಾಗಿದೆ. ನಮ್ಮ ಉದ್ದೇಶ ಕೇವಲ ಸಾಧನಗಳನ್ನು ಮಾರಾಟ ಮಾಡುವುದಲ್ಲ, ಬದಲಿಗೆ ಗ್ರಾಹಕರು ಖರೀದಿಸಿದ ನಂತರವೂ ದೀರ್ಘಕಾಲದವರೆಗೆ ಸುರಕ್ಷಿತವಾಗಿ, ಬೆಂಬಲಿತವಾಗಿ ಮತ್ತು ಪುರಸ್ಕೃತರಾಗಿರುವಂತೆ ನೋಡಿಕೊಳ್ಳುವುದಾಗಿದೆ. ಈ ವಾರ್ಷಿಕೋತ್ಸವದ ಸಂಭ್ರಮಾಚರಣೆಯು ನಮ್ಮ ಇದೇ ತತ್ವವನ್ನು ಪ್ರತಿಬಿಂಬಿಸುತ್ತದೆ” ಎಂದು ಸುಭಾಷ್ ರೆಡ್ಡಿ ತಿಳಿಸಿದ್ದಾರೆ.

ದಕ್ಷಿಣ ಭಾರತದಾದ್ಯಂತ ಬಲವಾದ ಅಸ್ತಿತ್ವ ಹೊಂದಿರುವ ಮತ್ತು ದಶಕಗಳಿಂದ ಗ್ರಾಹಕರ ವಿಶ್ವಾಸ ಸಂಪಾದಿಸಿರುವ ಸಂಗೀತಾವನ್ನು ಗ್ರಾಹಕ-ಕೇಂದ್ರಿತ ಇನ್ನೋವೇಶನ್, ಅತ್ಯುತ್ತಮ ಸೇವೆ ಮತ್ತು ಸಾಟಿಯಿಲ್ಲದ ಮೌಲ್ಯದ ಕೊಡುಗೆಗಳ ಮೂಲಕ ಭಾರತದ ಅತ್ಯಂತ ಪ್ರೀತಿಯ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ರಿಟೇಲ್ ತಾಣವಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತಾ ಮುನ್ನಡೆಯುತ್ತಿದೆ.

ಈ 52ನೇ ವರ್ಷದ ವಾರ್ಷಿಕೋತ್ಸವದ ಬೃಹತ್ ಮಾರಾಟ ಮೇಳವು ಮೇ 31 ರಿಂದ ಪ್ರಾರಂಭವಾಗಲಿದ್ದು, ಎಲ್ಲಾ ಸಂಗೀತಾ ಸ್ಟೋರ್‌ಗಳಲ್ಲಿ ಸೀಮಿತ ಅವಧಿಗೆ ಲಭ್ಯವಿರುತ್ತದೆ.

ಸಂಗೀತಾ ಕುರಿತು

ಐದು ದಶಕಗಳ ಹಿಂದೆ ಸ್ಥಾಪನೆಯಾದ ಸಂಗೀತಾ, ದಕ್ಷಿಣ ಭಾರತದ ಪ್ರಮುಖ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ರಿಟೇಲ್ ಸರಣಿಗಳಲ್ಲಿ ಒಂದಾಗಿದೆ. ಇದು ಹಲವು ನಗರಗಳಲ್ಲಿ ಪ್ರಬಲವಾದ ಓಮ್ನಿ-ಚಾನೆಲ್ (ಬಹು ಮಾಧ್ಯಮ ಸಂಪರ್ಕ) ಅಸ್ತಿತ್ವವನ್ನು ಹೊಂದಿದೆ. ಗ್ರಾಹಕಸ್ನೇಹಿ ಧೋರಣೆ, ವಿಶ್ವಾಸಾರ್ಹ ಸೇವೆ ಮತ್ತು ನವೀನ ರಿಟೇಲ್ ಅನುಭವಗಳಿಗೆ ಹೆಸರಾಗಿರುವ ಸಂಗೀತಾ, ಜಾಗತಿಕ ಪ್ರಮುಖ ಬ್ರ್ಯಾಂಡ್‌ಗಳಿಂದ ಮೊಬೈಲ್‌ಗಳು, ಗ್ಯಾಜೆಟ್‌ಗಳು, ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ಉಪಕರಣಗಳು ಮತ್ತು ತಂತ್ರಜ್ಞಾನದ ಪರಿಹಾರಗಳನ್ನು ಒದಗಿಸುತ್ತದೆ.

Source link

ಹಿಜಾಬ್ ಧರಿಸಿದ್ದಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆದ ಖ್ಯಾತ ನಟಿ ಅಂಕಿತಾ ಲೋಖಂಡೆ

ಕಿರುತೆರೆ ಹಾಗೂ ಬಾಲಿವುಡ್ ನಟಿ ಅಂಕಿತಾ ಲೋಖಂಡೆ (Ankita Lokhande) ಅವರು ಅಬುಧಾಬಿ ಪ್ರವಾಸದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬೆನ್ನಲ್ಲೇ ಭಾರಿ ಟ್ರೋಲಿಂಗ್‌ಗೆ ಒಳಗಾಗಿದ್ದಾರೆ. ಪತಿ ವಿಕ್ಕಿ ಜೈನ್ ಜೊತೆ ದುಬೈ ಪ್ರವಾಸದಲ್ಲಿರುವ ಅಂಕಿತಾ, ಅಲ್ಲಿನ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುವಾಗ ಹಿಜಾಬ್ (Hijab) ಧರಿಸಿದ್ದ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆದರೆ, ನಟಿಯ ಬೆಂಬಲಕ್ಕೆ ನಿಂತಿರುವ ಅವರ ಅಭಿಮಾನಿಗಳು ಟ್ರೋಲರ್‌ಗಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾರೆ.

ಗುರುವಾರ (ಮೇ 28) ಅಂಕಿತಾ ಲೋಖಂಡೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಬುಧಾಬಿ ಪ್ರವಾಸದ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದರು. ‘ನನ್ನ ಕ್ಯಾಮೆರಾ ರೋಲ್‌ನಿಂದ ಅಬುಧಾಬಿಯ ಸಣ್ಣ ಪ್ರೀತಿಯ ಜಲಕ್. ಹೊಸ ಜಾಗಗಳನ್ನು ಎಕ್ಸ್‌ಪ್ಲೋರ್ ಮಾಡುತ್ತಾ, ನಗುತ್ತಾ, ನೆನಪುಗಳನ್ನು ಮೂಡಿಸಿಕೊಳ್ಳುತ್ತಿರುವೆ’ ಎಂದು ಅಂಕಿತಾ ಕ್ಯಾಪ್ಷನ್ ಬರೆದುಕೊಂಡಿದ್ದರು. ಈ ಫೋಟೋಗಳ ಪೈಕಿ ಕೆಲವು ಚಿತ್ರಗಳಲ್ಲಿ ಅವರು ಹಿಜಾಬ್ ಧರಿಸಿ ಕಾಣಿಸಿಕೊಂಡಿದ್ದರು.

ಅಂಕಿತಾ ಅವರ ಈ ಪೋಸ್ಟ್ ಹೊರಬೀಳುತ್ತಿದ್ದಂತೆ ಒಂದು ವರ್ಗದ ನೆಟ್ಟಿಗರು ಅವರ ವಸ್ತ್ರ ವಿನ್ಯಾಸವನ್ನು ತೀವ್ರವಾಗಿ ಪ್ರಶ್ನಿಸಲು ಶುರು ಮಾಡಿದರು. ‘ಅವರು ಯಾಕೆ ಹಿಜಾಬ್ ಧರಿಸಿದ್ದಾರೆ? ಅವರೇನಾದರೂ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರಾ?’ ಹಾಗೂ ‘ನೀವು ಜೈನ್ ತಾನೇ, ಸ್ವಲ್ಪ ಯೋಚಿಸಿ ಬಟ್ಟೆ ಧರಿಸಿ’ ಎಂಬಂತಹ ನೆಗೆಟಿವ್ ಕಮೆಂಟ್‌ಗಳು ಹರಿದುಬಂದವು.

ಆದರೆ, ಈ ಟ್ರೋಲಿಂಗ್ ವಿರುದ್ಧ ಅಂಕಿತಾ ಅವರ ಅಭಿಮಾನಿಗಳು ತಕ್ಷಣವೇ ತಿರುಗಿಬಿದ್ದಿದ್ದಾರೆ. ದುಬೈ ಮತ್ತು ಅಬುಧಾಬಿಯ ಪ್ರಸಿದ್ಧ ಮಸೀದಿಗಳಿಗೆ ಭೇಟಿ ನೀಡುವಾಗ ಅಲ್ಲಿನ ನಿಯಮಗಳ ಪ್ರಕಾರ ತಲೆ ಮುಚ್ಚಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಹಾಗಾಗಿಯೇ ಅಂಕಿತಾ ಹಿಜಾಬ್ ಧರಿಸಿದ್ದಾರೆ ಮತ್ತು ಮಸೀದಿಯ ಆವರಣದಿಂದ ಹೊರಬಂದ ನಂತರ ಅವರು ಹಿಜಾಬ್ ಇಲ್ಲದ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ ಎಂಬುದನ್ನು ಅಭಿಮಾನಿಗಳು ನೆಟ್ಟಿಗರಿಗೆ ನೆನಪಿಸಿದ್ದಾರೆ.

ಇದನ್ನೂ ಓದಿ: ದಕ್ಷಿಣ ಭಾರತ ಸಿನಿಮಾದ ನಿರ್ಮಾಪಕನೊಟ್ಟಿಗೆ ಮಲಗಲು ಹೇಳಿದ್ದರು: ನಟಿ ಅಂಕಿತಾ

‘ಅವರು ಯಾವುದೇ ಧರ್ಮವನ್ನು ಪ್ರಚಾರ ಮಾಡುತ್ತಿಲ್ಲ. ಬದಲಿಗೆ ಅಲ್ಲಿನ ನಿಯಮಗಳನ್ನು ಗೌರವಿಸಿ ಆ ಸುಂದರ ಸ್ಮಾರಕವನ್ನು ವೀಕ್ಷಿಸುತ್ತಿದ್ದಾರೆ. ದೇವಸ್ಥಾನಗಳಿಗೆ ಹೋಗುವಾಗ ನಿರ್ದಿಷ್ಟ ಡ್ರೆಸ್ ಕೋಡ್ ಇರುವಂತೆ, ಮಸೀದಿಗೂ ಇರುತ್ತದೆ ಎಂಬುದನ್ನು ಅರಿಯದವರು ಸುಮ್ಮನಿರಬೇಕು’ ಎಂದು ಅಭಿಮಾನಿಯೊಬ್ಬರು ಕಿಡಿಕಾರಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ, ‘ಇದು ಸಂಪೂರ್ಣವಾಗಿ ಅವರ ವೈಯಕ್ತಿಕ ಆಯ್ಕೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

GT vs RR: ಅತ್ಯಂತ ನಿಧಾನಗತಿಯ ಅರ್ಧಶತಕ ಬಾರಿಸಿದ ವೈಭವ್ ಸೂರ್ಯವಂಶಿ

ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯುತ್ತಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಎಡಗೈ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಎರಡೆರಡು ದಾಖಲೆಗಳನ್ನು ನಿರ್ಮಿಸಿದ್ದಾರೆ. ಗುಜರಾತ್ ವಿರುದ್ಧದ ಈ ಪಂದ್ಯದಲ್ಲಿ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೈಭವ್, ಈ ಅರ್ಧಶತಕದ ಇನ್ನಿಂಗ್ಸ್ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ 700 ರನ್‌ಗಳ ಗಡಿ ದಾಟಿದರು. ಇದರ ಜೊತೆಗೆ ಪ್ಲೇಆಫ್‌ನಲ್ಲಿ 500 ರನ್‌ ಪೂರೈಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಪವರ್‌ಪ್ಲೇನಲ್ಲಿ 500 ರನ್‌ ಬಾರಿಸಿದ ಮೊದಲ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

Source link

Exit mobile version