IND vs ENG: ಒಂದೇ ಕೈನಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿದ ಕೆಎಲ್ ರಾಹುಲ್; ವಿಡಿಯೋ – Kannada News | IND vs ENG 1st ODI: KL Rahul’s Stunning Catch and India’s Bowling Dominate England

ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿ ಇಂಗ್ಲೆಂಡ್‌ ತಂಡವನ್ನು 258 ರನ್​ಗಳಿಗೆ ಆಲೌಟ್ ಮಾಡಿದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಎಲ್ಲಾ ವಿಭಾಗಗಳಲ್ಲ್ಲೂ ಅದ್ಭುತ ಪ್ರದರ್ಶನ ನೀಡಿತು. ಅದರಲ್ಲೂ ಕಳೆದ ಕೆಲವು ದಿನಗಳಿಂದ ಫಿಲ್ಡಿಂಗ್ ವಿಚಾರದಲ್ಲಿ ಟೀಂ ಇಂಡಿಯಾ ಸಾಕಷ್ಟು ತಪ್ಪುಗಳನ್ನು ಮಾಡಿತ್ತು. ಇದರಿಂದಾಗಿ ಸೋಲಿನ ಬೆಲೆಯನ್ನು ತೆತ್ತಿತ್ತು. ಆದರೆ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಫಿಲ್ಡಿಂಗ್ ಎಲ್ಲರ ಗಮನ ಸೆಳೆಯಿತು. ಮೂರು ಅದ್ಭುತ ಕ್ಯಾಚ್​ಗಳನ್ನು ಫಿಲ್ಡರ್​ಗಳು ಹಿಡಿದರು. ಅದರಲ್ಲೂ ವಿಕೆಟ್ ಕೀಪರ್ ರಾಹುಲ್ (KL Rahul) ಹಿಡಿದ ಕ್ಯಾಚ್ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಅದ್ಭುತ ಕ್ಯಾಚ್ ಹಿಡಿದ ರಾಹುಲ್‌

ಸುಮಾರು 706 ದಿನಗಳ ನಂತರ ಭಾರತ ಏಕದಿನ ತಂಡದಲ್ಲಿ ಆಡುವ ಅವಕಾಶ ಪಡೆದಿದ್ದ ಆಲ್‌ರೌಂಡರ್ ಶಿವಂ ದುಬೆ ಅವರ ಬೌಲಿಂಗ್​ನಲ್ಲಿ ವಿಲ್ ಜ್ಯಾಕ್ಸ್ ನೀಡಿದ ಕ್ಯಾಚ್ ಅನ್ನು ವಿಕೆಟ್‌ ಕೀಪರ್ ಕೆಎಲ್ ರಾಹುಲ್ ತಮ್ಮ ಬಲಕ್ಕೆ ಜಿಗಿದ್ದು ಒಂದೇ ಕೈನಲ್ಲಿ ಹಿಡಿದುಕೊಂಡರು. ಈ ಪಂದ್ಯದಲ್ಲಿ ಶಿವಂ ದುಬೆ 6 ಓವರ್‌ಗಳನ್ನು ಬೌಲ್ ಮಾಡಿ 27 ರನ್‌ಗಳನ್ನು ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದರು. ಅಪಾಯಕಾರಿಯಾಗಿ ಕಾಣುತ್ತಿದ್ದ ವಿಲ್ ಜ್ಯಾಕ್ಸ್ ಅವರನ್ನು ಔಟ್ ಮಾಡಿದರು. ಜ್ಯಾಕ್ಸ್ 19 ಎಸೆತಗಳಲ್ಲಿ 20 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಈ ಪಂದ್ಯಕ್ಕೂ ಮೊದಲು ಶಿವಂ ದುಬೆ ಕೇವಲ ಒಂದು ಏಕದಿನ ವಿಕೆಟ್ ಮಾತ್ರ ಪಡೆದಿದ್ದರು. ವಿಲ್ ಜ್ಯಾಕ್ಸ್ ಅವರ ಎರಡನೇ ಬಲಿಯಾದರು.

ಇಂಗ್ಲೆಂಡ್ ಇನ್ನಿಂಗ್ಸ್ ಹೀಗಿತ್ತು

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ 47.5 ಓವರ್‌ಗಳಲ್ಲಿ 258 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಲಿಯಾಮ್ ಡಾಸನ್ ಮತ್ತು ಜೋ ರೂಟ್ ಅರ್ಧಶತಕಗಳನ್ನು ಗಳಿಸಿದರು. ಇಬ್ಬರೂ ಶತಕದ ಪಾಲುದಾರಿಕೆಯನ್ನು ಗಳಿಸಿ ಇಂಗ್ಲೆಂಡ್ ತಂಡವನ್ನು ಗೌರವಾನ್ವಿತ ಸ್ಕೋರ್‌ಗೆ ಕೊಂಡೊಯ್ದರು. ಇಬ್ಬರ ನಡುವೆ 134 ಎಸೆತಗಳಲ್ಲಿ 121 ರನ್‌ಗಳ ಪಾಲುದಾರಿಕೆ ಇತ್ತು. ಒಂದು ಹಂತದಲ್ಲಿ ಇಂಗ್ಲೆಂಡ್ 107 ರನ್​ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಅಲ್ಲಿಂದ ಇವರಿಬ್ಬರು ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಲಿಯಾಮ್ ಡಾಸನ್ 68 ರನ್ ಬಾರಿಸಿದರೆ, ಜೋ ರೂಟ್ 76 ರನ್ ಬಾರಿಸಿ ಅಜೇಯರಾಗಿ ಉಳಿದರು. ಭಾರತದ ಪರ ಅಕ್ಷರ್ ಪಟೇಲ್ 4 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ ಮತ್ತು ಗುರ್ನೂರ್ ಬ್ರಾರ್ ತಲಾ 2 ವಿಕೆಟ್ ಪಡೆದರು. ಜಸ್ಪ್ರಿತ್ ಬುಮ್ರಾ ಮತ್ತು ಶಿವಂ ದುಬೆ ತಲಾ 1 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:33 pm, Tue, 14 July 26

Source link

‘ಟಾಕ್ಸಿಕ್’ನ ‘ತಬಾಹಿ’ ವೈರಲ್: ಹಾಡು ಬರೆದಿರುವ ಭಟ್ಟರು ಹೇಳಿದ್ದೇನು? – Kannada News | Lyric writer of Tabahi song Yogaraj Bhatt talks about the song’s success

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ‘ತಬಾಹಿ’ ಹಾಡು ದೊಡ್ಡ ಹಿಟ್ ಆಗಿದೆ. ಹಾಡಿನ ವಿಡಿಯೋ ಸಖತ್ ವೈರಲ್ ಆಗಿದೆ. ಕನ್ನಡದಲ್ಲಿ ‘ತಬಾಹಿ’ ಹಾಡನ್ನು ಯೋಗರಾಜ್ ಭಟ್ಟರು ಬರೆದಿದ್ದಾರೆ. ಇದೀಗ ನಿರ್ದೇಶಕ ಯೋಗರಾಜ್ ಭಟ್ಟರು, ‘ತಬಾಹಿ’ ಹಾಡನ್ನು ಬರೆದಿರುವ ಬಗ್ಗೆ ಟಿವಿ9 ಜೊತೆಗೆ ವಿವರಿಸಿದ್ದಾರೆ. ‘ತಬಾಹಿ’ ಹಾಡನ್ನು ಬರೆದ ರೀತಿ, ನಿರ್ದೇಶಕರು ಹಾಗೂ ಯಶ್ ಅವರ ಬೇಡಿಕೆ ಏನಾಗಿತ್ತು? ಎಲ್ಲವನ್ನೂ ಸಹ ಭಟ್ಟರು ವಿವರಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಮೆಟ್ರೋದಲ್ಲಿ ಪ್ರೇಮಿಗಳ ರೋಮ್ಯಾನ್ಸ್, ನೆಟ್ಟಿಗರು ಫುಲ್ ಗರಂ: ಸಾರ್ವಜನಿಕರ ಮುಂದೆ ಮೈಮರೆತ ಯುವ ಜೋಡಿ – Kannada News | Bengaluru Metro Kiss Row: Viral Video of Couple’s Public Indecency Prompts BMRCL Action Calls

ಬೆಂಗಳೂರು, ಜು.14: ದಿನ ಕಳೆದಮತೆ ಬೆಂಗಳೂರು ಮೆಟ್ರೋದಲ್ಲಿ ಒಂದಲ್ಲ ಒಂದು ಅವ್ಯವಸ್ಥೆಗಳು ಎದ್ದು ಕಾಣುತ್ತಿದೆ. ದೇಶದ ರಾಜಧಾನಿ ದೆಹಲಿಯ ಮೆಟ್ರೋದಲ್ಲಿ ಪ್ರೇಮಿಗಳ ಅಸಭ್ಯ ವರ್ತನೆ ಹಾಗೂ ಲವ್ವಿ-ಡವ್ವಿ ದೃಶ್ಯಗಳು ವೈರಲ್ ಆಗುತ್ತಿತ್ತು. ಆದರೆ, ಇದೀಗ ಅಂತಹದ್ದೇ ಒಂದು ಘಟನೆ ಸಿಲಿಕಾನ್ ಸಿಟಿಯ ‘ನಮ್ಮ ಮೆಟ್ರೋ’ (Namma Metro) ರೈಲಿನಲ್ಲೂ ನಡೆದಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಸರಿಯಾದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸಾರ್ವಜನಿಕ ಸ್ಥಳ ಎಂಬ ಕನಿಷ್ಠ ಜ್ಞಾನವೂ ಇಲ್ಲದೆ, ಸಹ ಪ್ರಯಾಣಿಕರ ಕಣ್ಣೆದುರಲ್ಲೇ ಯುವ ಜೋಡಿಯೊಂದು ಅತಿಯಾಗಿ ಮೈಮರೆತು ವರ್ತಿಸಿದ್ದಾರೆ. ಈ ಘಟನೆಯು ಕೆ.ಆರ್. ಪುರಂ (K.R. Puram) ಕಡೆಗೆ ಸಂಚರಿಸುತ್ತಿದ್ದ ಮೆಟ್ರೋ ರೈಲಿನ ಬೋಗಿಯೊಳಗೆ ನಡೆದಿದೆ. ಪ್ರಯಾಣಿಕರು ತುಂಬಿದ್ದರೂ ಸಹ, ಅದಾವುದನ್ನೂ ಲೆಕ್ಕಿಸದ ಪ್ರೇಮಿಗಳು ಪರಸ್ಪರ ಅಪ್ಪಿಕೊಂಡು ಕಿಸ್ (Kiss) ಮಾಡಿದ್ದಾರೆ. ಈ ಅಸಭ್ಯ ವರ್ತನೆಯನ್ನು ಕಂಡು ಅಸಮಾಧಾನಗೊಂಡ ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಇಡೀ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ನೆಟ್ಟಿಗರು ಬಿಎಂಆರ್‌ಸಿಎಲ್ (BMRCL) ಮತ್ತು ಬೆಂಗಳೂರು ಪೊಲೀಸರ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದು ಸಾರ್ವಜನಿಕ ಸಾರಿಗೆಯೋ ಅಥವಾ ಪ್ರೇಮಿಗಳ ಖಾಸಗಿ ಜಾಗವೋ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವರದಿ: ನಟರಾಜ್ ಬೆಂಗಳೂರು

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಎಸ್. ಜಾನಕಿ ನಿಧನದ ಬೆನ್ನಲ್ಲೇ ಮೊಮ್ಮಗಳಿಗೆ ಟ್ರೋಲ್ ಕಾಟ; ಕಣ್ಣೀರು ಹಾಕಿಲ್ಲ ಎಂದವರಿಗೆ ಅಪ್ಸರಾ ಸ್ಪಷ್ಟನೆ – Kannada News | S Janaki Granddaughter Apsara Vydyula reacts to trolls on social media for No Tears

ದಕ್ಷಿಣ ಭಾರತದ ಖ್ಯಾತ ಗಾಯಕಿ ಎಸ್. ಜಾನಕಿ (S Janaki) ಅವರು ಇತ್ತೀಚೆಗೆ ನಿಧನರಾಗಿದ್ದು, ಮೈಸೂರಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಆದರೆ, ಈ ದುಃಖದ ಸಂದರ್ಭದಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ವಿಕೃತಿ ಮೆರೆದಿದ್ದಾರೆ. ಜಾನಕಿ ಅವರ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿದ ಅವರ ಮೊಮ್ಮಗಳು ಅಪ್ಸರಾ (Apsara Vydyula) ಅವರ ಕಣ್ಣಿನಲ್ಲಿ ನೀರಿಲ್ಲ, ಅವರು ಅಳುತ್ತಿಲ್ಲ ಎಂದು ಕೆಲವರು ಟ್ರೋಲ್ ಮಾಡಿದ್ದರು. ಇದೀಗ ಈ ಟ್ರೋಲ್‌ಗಳಿಗೆ ಅಪ್ಸರಾ ಅವರು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಾಕುವ ಮೂಲಕ ಭಾವುಕ ಹಾಗೂ ಖಡಕ್ ಉತ್ತರ ನೀಡಿದ್ದಾರೆ.

ಅಳಲಿಲ್ಲ ಎಂದು ನನ್ನ ದುಃಖವನ್ನು ಅಳೆಯಬೇಡಿ:

ತಮ್ಮ ಕಣ್ಣೀರಿನ ಬಗ್ಗೆ ಪ್ರಶ್ನಿಸಿದವರಿಗೆ ಅಪ್ಸರಾ ಉತ್ತರಿಸಿದ್ದಾರೆ. ‘ಕಳೆದ ಕೆಲವು ದಿನಗಳಿಂದ ನನ್ನ ಕಣ್ಣಿನಲ್ಲಿ ನೀರಿಲ್ಲದ ಕಾರಣದಿಂದ ಹಲವರು ನನ್ನ ದುಃಖವನ್ನು ಪ್ರಶ್ನಿಸುತ್ತಿರುವುದನ್ನು ನಾನು ನೋಡಿದ್ದೇನೆ. ದಯವಿಟ್ಟು ನನ್ನ ಕಣ್ಣಿನಲ್ಲಿ ಕಾಣುವ ಅಥವಾ ಕಾಣದಿರುವ ಕಣ್ಣೀರಿನ ಆಧಾರದ ಮೇಲೆ ನನ್ನ ಅಜ್ಜಿಯ ಮೇಲಿರುವ ನನ್ನ ಪ್ರೀತಿಯನ್ನು ಅಳೆಯಬೇಡಿ. ಸಾವು ಎಂಬುದನ್ನು ಅತ್ಯಂತ ಆಧ್ಯಾತ್ಮಿಕವಾಗಿ ಅರ್ಥಮಾಡಿಕೊಳ್ಳುವುದನ್ನು ನನ್ನ ಅಜ್ಜಿ ನಮಗೆ ಕಲಿಸಿಕೊಟ್ಟಿದ್ದಾರೆ. ಜೀವನ ಕೊನೆಗೊಂಡ ತಕ್ಷಣ ಪ್ರೀತಿ ಕೊನೆಗೊಳ್ಳುವುದಿಲ್ಲ ಎಂಬುದನ್ನು ಅವರು ನಮಗೆ ತಿಳಿಸಿದ್ದಾರೆ. ನನ್ನ ಅನುಭವಗಳು ನನ್ನನ್ನು ಅಂದುಕೊಂಡಿದ್ದಕ್ಕಿಂತ ಹೆಚ್ಚು ಗಟ್ಟಿಯಾಗಿಸಿವೆ. ದುಃಖ ಎನ್ನುವುದು ಯಾವಾಗಲೂ ಜೋರಾಗಿ ಅತ್ತು ತೋರಿಸುವುದಲ್ಲ, ಕೆಲವೊಮ್ಮೆ ಅದು ನಿಶ್ಯಬ್ದವಾಗಿ, ಸ್ಥಿರವಾಗಿ ಮತ್ತು ಅತ್ಯಂತ ವೈಯಕ್ತಿಕವಾಗಿರುತ್ತದೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಅಜ್ಜಿ ಪಕ್ಕ ನಿಲ್ಲಬೇಕಿದ್ದ ಅಕ್ಕನೇ ಇಲ್ಲ:

ತಮ್ಮ ಕುಟುಂಬದ ಮತ್ತೊಂದು ಕಹಿ ಘಟನೆಯನ್ನು ನೆನೆದ ಅಪ್ಸರಾ, ‘ನನ್ನ ಅಜ್ಜಿಗೆ ಜಗತ್ತಿನಲ್ಲಿ ಅತ್ಯಂತ ಪ್ರೀತಿಯ ವ್ಯಕ್ತಿ ಎಂದರೆ ನನ್ನ ಅಕ್ಕ ವರ್ಷಾ. ಅವರಿಬ್ಬರೂ ಒಂದೇ ತರಹ ಇದ್ದರು. ಮಾತುಗಳಿಗೂ ಮೀರಿದ ಬಾಂಧವ್ಯ ಅವರದ್ದಾಗಿತ್ತು. ಇಂದು ನಾನು ನಿಂತಿರುವ ಜಾಗದಲ್ಲಿ ನಿಂತು, ಅಜ್ಜಿಯನ್ನು ನೋಡಿಕೊಳ್ಳಬೇಕಾಗಿದ್ದು ಮತ್ತು ಈ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿದ್ದು ನನ್ನ ಅಕ್ಕ ವರ್ಷಾ. ಆದರೆ ಅವಳು ಆಗಸ್ಟ್ 2023ರಲ್ಲಿ ನಮ್ಮನ್ನು ಅಗಲಿದಳು. ಆ ನಷ್ಟದಿಂದ ನಮ್ಮ ಕುಟುಂಬ ಇನ್ನೂ ಚೇತರಿಸಿಕೊಂಡಿಲ್ಲ. ದುಃಖ ಎಂಬುದು ಎಂದಿಗೂ ಮಾಯವಾಗುವುದಿಲ್ಲ. ಅದನ್ನು ಜೀವನಪೂರ್ತಿ ಹೊತ್ತು ಸಾಗುವುದನ್ನು ಕಲಿಯಬೇಕಷ್ಟೇ’ ಎಂದು ಬರೆದುಕೊಂಡಿದ್ದಾರೆ.

‘ಸಾರ್ವಜನಿಕ ಜೀವನದಲ್ಲಿ ಇದ್ದಾಗ ಜನರು ನಮ್ಮ ಬಗ್ಗೆ ಕಥೆಗಳನ್ನು ಕಟ್ಟುವುದು, ವದಂತಿಗಳನ್ನು ಹರಡುವುದು ಸಾಮಾನ್ಯ. ನಮ್ಮ ಕುಟುಂಬದ ಬಗ್ಗೆ ಸರಿಯಾಗಿ ತಿಳಿಯದವರು ಈ ರೀತಿ ಅಭಿಪ್ರಾಯಗಳನ್ನು ರೂಪಿಸುವುದು ನೋವು ತರುತ್ತದೆ. ನನ್ನ ಅಜ್ಜಿ ಅತ್ಯಂತ ದಯಾಮಯಿ, ವಿನಮ್ರ ಸ್ವಭಾವದವರಾಗಿದ್ದರು. ನನ್ನ ಅಕ್ಕ ವರ್ಷಾ ಕೂಡ ಹಾಗೇ ಇದ್ದಳು. ಅವರಿಬ್ಬರೂ ಈಗ ಒಂದಾಗಿದ್ದಾರೆ ಎನ್ನುವ ಆಲೋಚನೆಯೇ ನನಗೆ ನೆಮ್ಮದಿ ನೀಡುತ್ತಿದೆ’ ಎಂದು ಅಪ್ಸರಾ ಭಾವುಕರಾಗಿದ್ದಾರೆ.

ಇದನ್ನೂ ಓದಿ: ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು

ಸಂಪ್ರದಾಯ ಮುರಿದು ಅಂತ್ಯಸಂಸ್ಕಾರ ನೆರವೇರಿಸಿದ್ದ ಅಪ್ಸರಾ:

ವೈದಿಕ ಮಂತ್ರ ಘೋಷಗಳ ನಡುವೆ ಅಜ್ಜಿಯ ಚಿತೆಗೆ ಮೊಮ್ಮಗಳು ಅಪ್ಸರಾ ಅವರೇ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದರು. ಸಾಮಾನ್ಯವಾಗಿ ಪುರುಷರು ಮಾತ್ರ ಅಂತ್ಯಸಂಸ್ಕಾರ ಮಾಡಬೇಕು ಎಂಬ ಸಾಂಪ್ರದಾಯಿಕ ನಿಯಮವನ್ನು ಬದಿಗಿಟ್ಟು, ಮಡಕೆ ಹೊತ್ತು ಚಿತೆಯ ಸುತ್ತ ಪ್ರದಕ್ಷಿಣೆ ಹಾಕಿ ಅಜ್ಜಿಗೆ ಅಂತಿಮ ನಮನ ಸಲ್ಲಿಸಿದ್ದರು. ಅಂದಹಾಗೆ, ಅಪ್ಸರಾ ಅವರು ಎಸ್. ಜಾನಕಿ ಪುತ್ರ ಮುರಳಿ ಕೃಷ್ಣ ಅವರ ಮಗಳಾಗಿದ್ದಾರೆ. ಮುರಳಿ ಕೃಷ್ಣ ಅವರು ಕೂಡ ಇದೇ ವರ್ಷ ಜನವರಿ 22ರಂದು ನಿಧನರಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs ENG: 968 ದಿನಗಳ ಬಳಿಕ ಕಣಕ್ಕಿಳಿದು ಇತಿಹಾಸ ಸೃಷ್ಟಿಸಿದ ಬುಮ್ರಾ..!

Source link

ಮ್ಯಾನುಫ್ಯಾಕ್ಚರಿಂಗ್​ಗೆ ಇದೆ ಸೂಚ್ಯಂಕ; ಈಗ ಸೇವಾ ವಲಯದ ಉತ್ಪಾದನೆಗೂ ಸರ್ಕಾರ ತಂದಿದೆ ಹೊಸ ಸೂಚ್ಯಂಕ – Kannada News | Govt releases new index for production in service sector, many sub sectors see great growth

ಉದ್ಯೋಗಿಗಳ ಸಾಂದರ್ಭಿಕ ಚಿತ್ರImage Credit source: Ezra Bailey/Stone/Getty Images

ನವದೆಹಲಿ, ಜುಲೈ 14: ಭಾರತದ ಆರ್ಥಿಕ ಚಿತ್ರಣವನ್ನು ಹೆಚ್ಚು ನಿಖರವಾಗಿ ತೆರೆದಿಡುವ ನಿಟ್ಟಿನಲ್ಲಿ ಸರ್ಕಾರ ಮತ್ತೊಂದು ಪ್ರಮುಖ ಕ್ರಮ ತೆಗೆದುಕೊಂಡಿದೆ. ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಸೇವಾ ವಲಯದ ಉತ್ಪಾದನಾ ಸೂಚ್ಯಂಕವನ್ನು (Index of Services Production – ISP) ಬಿಡುಗಡೆ ಮಾಡಿದೆ. ಇದು ದೇಶದ ಮೊದಲ ಉಪ-ವಲಯ ಪ್ರಾಯೋಗಿಕ ‘ಸೇವಾ ವಲಯದ ಉತ್ಪಾದನಾ ಸೂಚ್ಯಂಕ’ ಆಗಿದೆ. 2024-25ನೇ ಸಾಲನ್ನು ಮೂಲ ವರ್ಷವನ್ನಾಗಿ (Base Year) ಇಟ್ಟುಕೊಂಡು, ಮೊದಲ ಹಂತವಾಗಿ 2026ರ ಏಪ್ರಿಲ್ ತಿಂಗಳ ಇಎಸ್‌ಪಿ ದತ್ತಾಂಶಗಳನ್ನು 19 ಉಪ-ವಲಯಗಳಿಗೆ ಬಿಡುಗಡೆ ಮಾಡಲಾಗಿದೆ.

ಏನಿದು ‘ISP’ ಸೂಚ್ಯಂಕ?

ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್​ನ ಬೆಳವಣಿಗೆ ಅಳೆಯಲು ಐಐಪಿ (ಕೈಗಾರಿಕಾ ಉತ್ಪಾದನಾ ಸೂಚ್ಯಂಕ) ಸೂಚ್ಯಂಕ ಇದೆ. ಭಾರತದ ಆರ್ಥಿಕತೆಗೆ ಅರ್ಧಕ್ಕಿಂತ ಹೆಚ್ಚು ಕೊಡುಗೆ ಸರ್ವಿಸ್ ಸೆಕ್ಟರ್​ನಿಂದ ಬರುತ್ತದೆ. ಈ ಕ್ಷೇತ್ರದ ಬೆಳವಣಿಗೆಯನ್ನು ಹೆಚ್ಚು ನಿಖರವಾಗಿ ಅಳೆಯಲು ಈ ಹೊಸ ಸೂಚ್ಯಂಕ ರೂಪಿಸಲಾಗಿದೆ. ಪ್ರಸ್ತುತ ಬಿಡುಗಡೆ ಮಾಡಲಾದ 19 ಉಪ-ವಲಯಗಳು ಒಟ್ಟಾರೆ ಸೇವಾ ವಲಯದ ಸುಮಾರು ಶೇಕಡಾ 60 ರಷ್ಟು ಭಾಗವನ್ನು ಒಳಗೊಂಡಿವೆ. ಇನ್ನು ಮುಂದೆ ಪ್ರತಿ ತಿಂಗಳ 29 ರಂದು ಈ ಸೂಚ್ಯಂಕವನ್ನು ಸರಣಿಯಾಗಿ ಪ್ರಕಟಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

2025ರ ಮೇ ತಿಂಗಳಲ್ಲಿ ರಚಿಸಲಾಗಿದ್ದ ತಾಂತ್ರಿಕ ಸಲಹಾ ಸಮಿತಿಯ (TAC-ISP) ಮಾರ್ಗದರ್ಶನದನ್ವಯ ಜಿಎಸ್‌ಟಿ (GST) ದತ್ತಾಂಶ ಮತ್ತು ಇತರೆ ಆಡಳಿತಾತ್ಮಕ ದಾಖಲೆಗಳ ಆಧಾರದ ಮೇಲೆ ಕೇವಲ ‘ಔಪಚಾರಿಕ ಸೇವಾ ವಲಯವನ್ನು’ (Formal Sector) ಮಾತ್ರ ಈ ಸೂಚ್ಯಂಕಕ್ಕೆ ಪರಿಗಣಿಸಲಾಗಿದೆ.

ಇದನ್ನೂ ಓದಿ: ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳಿವೆ ಎಂದು ಹೀಗೆ ಕಂಡು ಹಿಡಿಯಿರಿ

2026ರ ಏಪ್ರಿಲ್​ನಲ್ಲಿ ಐಎಸ್​ಪಿ ಸೂಚ್ಯಂಕದ ಮುಖ್ಯಾಂಶಗಳು

ಕಳೆದ ವರ್ಷದ (ಏಪ್ರಿಲ್ 2025) ಪ್ರಾಯೋಗಿಕ ದತ್ತಾಂಶಕ್ಕೆ ಹೋಲಿಸಿದರೆ, ಏಪ್ರಿಲ್ 2026 ರಲ್ಲಿ ಭಾರತದ ಸೇವಾ ವಲಯವು ಬಲವಾದ ಬೆಳವಣಿಗೆಯನ್ನು ದಾಖಲಿಸಿದೆ. ಒಟ್ಟು 19 ಉಪ-ವಲಯಗಳ ಪೈಕಿ 14 ವಲಯಗಳು ಎರಡಂಕಿ (Double-digit) ಪ್ರಗತಿಯನ್ನು ಕಂಡಿವೆ.

ಅತಿ ಹೆಚ್ಚು ಬೆಳವಣಿಗೆ ಕಂಡ ವಲಯಗಳು: ವಸತಿ ಮತ್ತು ಆಹಾರ ಸೇವೆಗಳು (Accommodation and Food) ಶೇ. 37.2, ಚಿಲ್ಲರೆ ವ್ಯಾಪಾರ (Retail Trade) ಶೇ. 30.8, ಆಡಳಿತಾತ್ಮಕ ಮತ್ತು ಬೆಂಬಲ ಸೇವೆಗಳು ಶೇ. 28.7 ಹಾಗೂ ರಿಯಲ್ ಎಸ್ಟೇಟ್ ವಲಯವು ಶೇ. 27.7 ರಷ್ಟು ಭರ್ಜರಿ ಪ್ರಗತಿ ಸಾಧಿಸಿವೆ.

ಕುಸಿತ ಕಂಡ ವಲಯಗಳು: ವಾಯು ಸಾರಿಗೆ (Air Transport) ವಲಯವು ಶೇ. -13.9 ರಷ್ಟು ಮತ್ತು ರೈಲ್ವೆ ಸಾರಿಗೆಯು ಶೇ. -0.4 ರಷ್ಟು ಇಳಿಕೆ ದಾಖಲಿಸಿವೆ.

ಸೇವಾ ಕ್ಷೇತ್ರದ ವಿವಿಧ ಉಪ-ವಲಯಗಳ ಪ್ರಗತಿ (ಏಪ್ರಿಲ್ 2025 ಕ್ಕೆ ಹೋಲಿಕೆ)

ಇದನ್ನೂ ಓದಿ: ಹಾರ್ಮುಜ್ ಸಹವಾಸವೇ ಬೇಡ; ದೂರದಲ್ಲಿ ಬೇರೆಯೇ ಬಂದರು ಕಟ್ಟುತ್ತಿದೆ ಈ ಗಲ್ಫ್ ದೇಶ

ಈ ಐಎಸ್​ಪಿ ಸೂಚ್ಯಂಕ ಏಕೆ ಮುಖ್ಯ?

ಇಲ್ಲಿಯವರೆಗೆ ಭಾರತದಲ್ಲಿ ಕೈಗಾರಿಕಾ ಪ್ರಗತಿಯನ್ನು ಅಳೆಯಲು ‘ಐಐಪಿ’ (IIP) ಸೂಚ್ಯಂಕ ಇತ್ತಾದರೂ, ಸೇವಾ ವಲಯದ ಅಲ್ಪಾವಧಿಯ ಚಲನವಲನಗಳನ್ನು ಮಾಸಿಕವಾಗಿ ನಿಖರವಾಗಿ ಅಳೆಯುವ ವ್ಯವಸ್ಥೆ ಇರಲಿಲ್ಲ. ಈ ಹೊಸ ಸೂಚ್ಯಂಕವು ದೇಶದ ಆರ್ಥಿಕತೆಯ ನಿಜವಾದ ಚಿತ್ರಣವನ್ನು ನೀಡಲು ಸಹಾಯ ಮಾಡುತ್ತದೆ. ಇದು ಸರ್ಕಾರದ ಆರ್ಥಿಕ ನೀತಿ ನಿರೂಪಣೆಗೆ, ಹೂಡಿಕೆದಾರರಿಗೆ ಮತ್ತು ಮಾರುಕಟ್ಟೆಯ ವಿಶ್ಲೇಷಣೆಗೆ ದಿಕ್ಸೂಚಿಯಾಗಲಿದೆ.

ಪ್ರಸ್ತುತ ಇದನ್ನು ಪ್ರಾಯೋಗಿಕ ಹಂತದಲ್ಲಿ (Experimental basis) ಬಿಡುಗಡೆ ಮಾಡಲಾಗಿದ್ದು, ದತ್ತಾಂಶಗಳ ಸ್ಥಿರತೆಯನ್ನು ಅಧ್ಯಯನ ಮಾಡಿದ ಬಳಿಕ ಒಟ್ಟಾರೆ ಸಮಗ್ರ ಜಾಗತಿಕ ಸೂಚ್ಯಂಕವನ್ನು ಹೊರತರಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 7:05 pm, Tue, 14 July 26

Source link

ಕಾಂಗ್ರೆಸ್​​ನಲ್ಲಿ ಮುಂದುವರಿದ ಮುನಿಸು?: ಸಿಎಂ ಸಭೆಗೆ ರಾಮಲಿಂಗಾರೆಡ್ಡಿ, ಜಮೀರ್​​ ಗೈರು

ಬೆಂಗಳೂರು, ಜುಲೈ 14: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಗಳೂರು ಕಾಂಗ್ರೆಸ್ ಶಾಸಕರೊಂದಿಗೆ ವಿಶೇಷ ಸಭೆ ನಡೆಸಿದ್ದು, ಈ ಸಭೆಯಲ್ಲಿ ಬಹುತೇಕ ಶಾಸಕರು ಭಾಗವಹಿಸಿದ್ದರೂ ಇಬ್ಬರು ಪ್ರಮುಖ ನಾಯಕರು ಗೈರಾಗಿದ್ದಾರೆ. ಸಚಿವ ರಾಮಲಿಂಗಾ ರೆಡ್ಡಿ ಮತ್ತು ಜಮೀರ್ ಅಹಮದ್ ಖಾನ್ ಮೀಟಿಂಗ್​​ನಿಂದ ದೂರವೇ ಉಳಿದಿದ್ದು, ಅವರ ಈ ನಿರ್ಧಾರದ ಬಗ್ಗೆ ನಾನಾ ವ್ಯಾಖ್ಯಾನಗಳು ಕೇಳಿಬಂದಿವೆ. ಭೈರತಿ ಸುರೇಶ್​​ ಕೂಡ ಸಭೆಗೆ ಗೈರು ಹಾಜರಾಗಿದ್ದಾರೆಯಾದರೂ ಅವರು ಪೂರ್ವನಿಯೋಜಿತ ಕಾರ್ಯಕ್ರಮದ ನಿಮಿತ್ತ ರಾಜ್ಯದಲ್ಲಿಲ್ಲ ಎನ್ನಲಾಗಿದೆ. ರಾಮಲಿಂಗಾ ರೆಡ್ಡಿ ಅವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ಸಿಗದ ಕುರಿತು ಮೊದಲಿನಿಂದಲೂ ಅಸಮಾಧಾನವಿತ್ತು. ನಂತರ ಅವರನ್ನು ಮನವೊಲಿಸಲಾಗಿದ್ದರೂ, ಇಂದಿನ ಸಭೆಗೆ ಅವರು ಹಾಜರಾಗದಿರುವುದು ಆ ಮುನಿಸು ಇನ್ನೂ ತಣ್ಣಗಾಗಿಲ್ಲವಾ ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕರ್ನಾಟಕದಲ್ಲಿ ದುರ್ಬಲಗೊಂಡ ಮುಂಗಾರು: ಹಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳ, ರಾಯಚೂರಲ್ಲಿ ದಾಖಲೆ – Kannada News | Karnataka Weather Update: Weak Monsoon Sparks Summer Like Heat; Bangalore Records Highest July Temperature in 5 Years

ಬೆಂಗಳೂರು, ಜುಲೈ 14: ಸಾಮಾನ್ಯವಾಗಿ ಮಳೆ ಹಾಗೂ ತಂಪಾದ ವಾತಾವರಣವಿಣವಿರಬೇಕಿದ್ದ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿಯೂ ಈ ಬಾರಿ ಕರ್ನಾಟಕದಲ್ಲಿ ಬೇಸಿಗೆಯ ಅನುಭವ ಉಂಟಾಗತೊಡಗಿದೆ. ಈ ವರ್ಷ ನೈಋತ್ಯ ಮುಂಗಾರು ದುರ್ಬಲಗೊಂಡಿರುವ ಕಾರಣ ತಾಪಮಾನ ಹೆಚ್ಚಳ ಕಂಡಿದೆ. ಕೆಲ ಜಿಲ್ಲೆಗಳ ತಾಪಮಾನ 3 ರಿಂದ 5 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆ ಕಂಡಿದೆ. ಬೆಂಗಳೂರು ನಗರದಲ್ಲಿಯೂ ಉಷ್ಣಾಂಶ ಹೆಚ್ಚಳವಾಗಿದ್ದು, 32.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಹಿಂದೆಲ್ಲ ಜುಲೈ ಸಂದರ್ಭ ನಗರದ ತಾಪಮಾನ 28 ಡಿಗ್ರಿ ಸೆಲ್ಸಿಯಸ್​​ನ ಆಸುಪಾಸು ಇರುತ್ತಿತ್ತಾದರೂ ಈ ಬಾರಿ ಬದಲಾವಣೆ ಕಂಡುಬಂದಿದೆ. ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಜುಲೈ ತಿಂಗಳಲ್ಲಿ ದಾಖಲಾದ ಅತಿ ಹೆಚ್ಚು ತಾಪಮಾನ ಇದಾಗಿದೆ. ಇದಕ್ಕೂ ಮೊದಲು 2021ರ ಜುಲೈನಲ್ಲಿ 32.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು ಎನ್ನಲಾಗಿದೆ.

ಹಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳ

ಬೆಂಗಳೂರು ಮಾತ್ರವಲ್ಲದೆ ಮೈಸೂರು, ಗದಗ, ಕೊಪ್ಪಳ ಸೇರಿದಂತೆ ಹಲವೆಡೆ ಸಾಮಾನ್ಯಕ್ಕಿಂತ ಸುಮಾರು 4 ಡಿಗ್ರಿ ಸೆಲ್ಸಿಯಸ್ ಹೆಚ್ಚು ತಾಪಮಾನ ದಾಖಲಾಗಿದೆ. ಈ ಅವಧಿಯಲ್ಲಿ ಸಾಮಾನ್ಯವಾಗಿ 33 ಗ್ರಿ ಸೆಲ್ಸಿಯಸ್ ಇರಬೇಕಾದ ಗರಿಷ್ಠ ತಾಪಮಾನ ರಾಯಚೂರಿನಲ್ಲಿ 38.4 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಆ ಮೂಲಕ ರಾಯಚೂರಿನಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. ರಾಜ್ಯ ಹವಾಮಾನ ಇಲಾಖೆ ಪ್ರಕಾರ, ನೈಋತ್ಯ ಮುಂಗಾರು ದುರ್ಬಲಗೊಂಡಿರುವುದರಿಂದ ಮಳೆಯ ಪ್ರಮಾಣ ಕುಸಿದಿದೆ. ಇದರಿಂದ ವಾತಾವರಣದಲ್ಲಿನ ತೇವಾಂಶ ಕಡಿಮೆಯಾಗಿ, ವಿಶೇಷವಾಗಿ ಉತ್ತರ ಒಳನಾಡು ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣಹವಾಮಾನ ಮುಂದುವರಿಯಲಿದೆ.

ಇದನ್ನೂ ಓದಿ: ಮುಂದಿನ 5 ದಿನ ಕರಾವಳಿ, ಮಲೆನಾಡಿನಲ್ಲಿ ಮುಂಗಾರು ಮಳೆ ಚುರುಕು; ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ

ಕೆಲ ಜಿಲ್ಲೆಗಳಿಗೆ ಮಳೆಯ ಎಚ್ಚರಿಕೆ

ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಮತ್ತು ದಕ್ಷಿಣ ಒಳನಾಡಿನ ಕೊಡಗು, ಹಾಸನ ಜಿಲ್ಲೆಗಳ ಒಂದೆರಡು ಕಡೆ ಮುಂದಿನ 24 ಗಂಟೆಗಳಲ್ಲಿ 30–40 ಕಿ.ಮೀ. ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳ ಒಂದೆರಡು ಕಡೆ ಬಲವಾದ ಗಾಳಿ ಬೀಸುವ ಸಾಧ್ಯತೆ ಬಗ್ಗೆಯೂ ಎಚ್ಚರಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

3 ವರ್ಷದ ಮಗು ಮೇಲೆ ಅತ್ಯಾಚಾರ ನಡೆಸಿದವನಿಗೆ ಗ್ರಾಮ ಪಂಚಾಯ್ತಿಯಿಂದ 1 ಲಕ್ಷ ರೂ. ದಂಡ; ಅದೇ ಹಣದಲ್ಲಿ ರಾತ್ರಿ ಎಣ್ಣೆ ಪಾರ್ಟಿ! – Kannada News | Jharkhand Man Fined Rs 1 Lakh For 3 Year Old Girl Rape village Panchayat Used It For Liquor Party

ರಾಂಚಿ, ಜುಲೈ 14: ನಮ್ಮ ದೇಶದಲ್ಲಿ ಕಾನೂನು ವ್ಯವಸ್ಥೆಗೆ ಜಾರಿಗೆ ಬಂದು ಹಲವು ದಶಕಗಳೇ ಕಳೆದಿದ್ದರೂ ಕೆಲವು ಹಳ್ಳಿಗಳಲ್ಲಿ ಕೋರ್ಟ್ ಬದಲು ಗ್ರಾಮ ಪಂಚಾಯ್ತಿಯನ್ನೋ, ಊರ ಮುಖಂಡರನ್ನೋ ನಂಬಿಕೊಂಡು ಅವರಿಂದಲೇ ನ್ಯಾಯ ತೀರ್ಮಾನ ತೆಗೆದುಕೊಳ್ಳುವ ಜನರು ಇಂದಿಗೂ ಇದ್ದಾರೆ. ಜಮೀನಿನ ವ್ಯಾಜ್ಯ, ಅಣ್ಣ-ತಮ್ಮಂದಿರ ಕಲಹಗಳಂತಹ ಸಣ್ಣ ವಿಷಯಗಳನ್ನು ಊರೊಳಗೇ ಬಗೆಹರಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ, ಜಾರ್ಖಂಡ್​​ನಲ್ಲಿ (Jharkhand) 3 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದ ಪ್ರಕರಣಕ್ಕೆ ಆ ಮಗುವಿನ ತಂದೆ-ತಾಯಿ ಪಂಚಾಯ್ತಿ ಕಟ್ಟೆಯಲ್ಲಿ ನ್ಯಾಯ ಕೇಳಿದ್ದಾರೆ. ಈ ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕಲು ಪಂಚಾಯ್ತಿ ಸದಸ್ಯರು ಆರೋಪಿಗೆ ಕೇವಲ 1 ಲಕ್ಷ ರೂ. ದಂಡ ವಿಧಿಸಿದ್ದಾರೆ. ಆ ಹಣವನ್ನು ಬಾಲಕಿಯ ಮನೆಯವರಿಗೂ ಕೊಡದೆ ಆ ಪಂಚಾಯ್ತಿಯ ಸದಸ್ಯರು ಆ ಹಣದಲ್ಲಿ ಆಲ್ಕೋಹಾಲ್ ಪಾರ್ಟಿ ಮಾಡಿದ್ದಾರೆ!

ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮದ 3 ವರ್ಷದ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕಲು ಗ್ರಾಮ ಪಂಚಾಯತ್ ಯತ್ನಿಸಿರುವ ಅತ್ಯಂತ ಅಮಾನವೀಯ ಮತ್ತು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪಂಚಾಯತ್ ಸದಸ್ಯರು ಆರೋಪಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿ, ಅದರಲ್ಲಿ ಬಂದ ಮುಂಗಡ ಹಣದಲ್ಲಿ ಮದ್ಯ ಮತ್ತು ಮಾಂಸದ ಪಾರ್ಟಿ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಕಾಶ್ಮೀರದ ಸರಳಾ ಭಟ್ ಅತ್ಯಾಚಾರ, ಕೊಲೆ ಪ್ರಕರಣ; 36 ವರ್ಷದ ಬಳಿಕ ಯಾಸಿನ್ ಮಲಿಕ್ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ!

ಏನಿದು ಘಟನೆ?:

ಆರೋಪಿ ಸುನಿಲ್ ಲೋಹಾರ ಶನಿವಾರ ಸಂಜೆ ತಮ್ಮದೇ ಊರಿನವರೊಬ್ಬರ ಮನೆಗೆ ಹೋಗಿದ್ದನು. ಆ ಮನೆಯಲ್ಲಿ 3 ವರ್ಷದ ಹೆಣ್ಣುಮಗುವಿತ್ತು. ಆತ ಹೋದ ಸಮಯದಲ್ಲಿ ಮಗುವಿನ ತಾಯಿ ಮನೆಯಲ್ಲಿದ್ದರು. ತಾಯಿ ತನ್ನ ಕೆಲಸಗಳಲ್ಲಿ ನಿರತರಾಗಿದ್ದಾಗ ಆ ಕುಟುಂಬಕ್ಕೆ ಪರಿಚಯಸ್ಥನಾಗಿದ್ದ ಆರೋಪಿ ಸುನಿಲ್ ತಾನು ಮಗುವನ್ನು ನೋಡಿಕೊಳ್ಳುತ್ತೇನೆ, ನೀವು ಕೆಲಸ ಮಾಡಿಕೊಳ್ಳಿ ಎಂದಿದ್ದಾನೆ. ಅದಕ್ಕೆ ಆ ತಾಯಿ ಒಪ್ಪಿದ ನಂತರ ಮಗುವನ್ನು ಮತ್ತೊಂದು ಕೋಣೆಗೆ ಕರೆದೊಯ್ದು ಅದೇ ಮನೆಯಲ್ಲಿ ಆತ ಅತ್ಯಾಚಾರ ಎಸಗಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡು ಮಗು ಜೋರಾಗಿ ಅಳಲು ಪ್ರಾರಂಭಿಸಿದಾಗ ತಾಯಿ ತಕ್ಷಣ ಓಡಿ ಬಂದಿದ್ದಾರೆ. ಆಗ ಮಗುವಿನ ಸ್ಥಿತಿಯನ್ನು ಕಂಡು ತಕ್ಷಣವೇ ಖಾಸಗಿ ಆಸ್ಪತ್ರೆಯ ವೈದ್ಯರ ಬಳಿಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ.

ಪೊಲೀಸ್ ದೂರಿನ ಬದಲು ಪಂಚಾಯ್ತಿ:

ಈ ಅತ್ಯಾಚಾರದ ಬಗ್ಗೆ ಪೊಲೀಸರಿಗೆ ದೂರು ನೀಡುವ ಬದಲು, ಗ್ರಾಮದ ಪಂಚಾಯತ್ ಸದಸ್ಯರು ಈ ವಿಷಯವನ್ನು ಗ್ರಾಮದ ಮಟ್ಟದಲ್ಲೇ ಮುಚ್ಚಿಹಾಕಲು ನಿರ್ಧರಿಸಿದರು. ಭಾನುವಾರ ಗ್ರಾಮದಲ್ಲಿ ತುರ್ತು ಸಭೆ ಕರೆದ ಪಂಚಾಯತ್, ಕಾನೂನು ಕ್ರಮದಿಂದ ಆರೋಪಿಯನ್ನು ಬಚಾವ್ ಮಾಡಲು ಆತನಿಗೆ 1 ಲಕ್ಷ ರೂ. ದಂಡ ವಿಧಿಸಿ ಪ್ರಕರಣವನ್ನು ಇತ್ಯರ್ಥಪಡಿಸಲು ಯತ್ನಿಸಿತು. ಪೊಲೀಸರಿಂದ ತಪ್ಪಿಸಿಕೊಳ್ಳಬಹುದು ಎಂಬ ಸಮಾಧಾನದಲ್ಲಿ ಆ ಅತ್ಯಾಚಾರ ಆರೋಪಿ ಸುನಿಲ್ ಲೋಹಾರ ದಂಡದ ಒಟ್ಟು ಮೊತ್ತದಲ್ಲಿ ತಕ್ಷಣವೇ 20,000 ರೂ.ಗಳನ್ನು ಪಂಚಾಯತ್‌ಗೆ ನೀಡಿದ. ಇನ್ನುಳಿದ 80,000 ರೂ.ಗಳನ್ನು ಒಂದು ವಾರದೊಳಗೆ ನೀಡಬೇಕೆಂದು ಆತನಿಗೆ ಸೂಚಿಸಲಾಯಿತು. ಅದಕ್ಕೆ ಆತನೂ ಒಪ್ಪಿದ.

ಇದನ್ನೂ ಓದಿ: 3 ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ 65 ವರ್ಷದ ವ್ಯಕ್ತಿಗೆ ಗಲ್ಲು ಶಿಕ್ಷೆ!

ಪಂಚಾಯತ್ ಸದಸ್ಯರು ಆತ ಕೊಟ್ಟ 20,000 ರೂ.ಗಳನ್ನು ಸಂತ್ರಸ್ತರ ಕುಟುಂಬಕ್ಕೂ ಕೊಡದೆ ತಾವೇ ರಾತ್ರಿ ಮಾಂಸ ಮತ್ತು ಮದ್ಯದ ಭರ್ಜರಿ ಪಾರ್ಟಿ ಆಯೋಜಿಸಿ ಖರ್ಚು ಮಾಡಿ ಎಂಜಾಯ್ ಮಾಡಿದ್ದಾರೆ. ಈ ವಿಷಯ ತಿಳಿದ ಊರಿನವರು ಯಾರೋ ಘಾಘ್ರಾ ಪೊಲೀಸ್ ಠಾಣೆಯ ಪ್ರಭಾರಿ ಮೋಹನ್ ಕುಮಾರ್ ಅವರಿಗೆ ಫೋನ್ ಮಾಡಿದ್ದರು. ಈ ಅತ್ಯಾಚಾರ ಪ್ರಕರಣವನ್ನು ಹಳ್ಳಿಯಲ್ಲೇ ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ, ಮಗುವಿನ ಕುಟುಂಬದ ಮೇಲೆ ಪೊಲೀಸರಿಗೆ ದೂರು ನೀಡದಂತೆ ಒತ್ತಡ ಹೇರಲಾಗುತ್ತಿದೆ ಎಂಬ ವಿಷಯವನ್ನು ಅವರು ಹೇಳಿದರು.

ಪೊಲೀಸರ ದಾಳಿಯಿಂದ ಬಯಲಾಯ್ತು ಕೃತ್ಯ:

ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಪೊಲೀಸರು ತಕ್ಷಣವೇ ಆ ಗ್ರಾಮಕ್ಕೆ ಧಾವಿಸಿದರು. ಅವರು ಹೋದಾಗ ಪಂಚಾಯ್ತಿಯವರ ಎಣ್ಣೆ ಪಾರ್ಟಿ ಜೋರಾಗಿ ನಡೆಯುತ್ತಿತ್ತು. ಪೊಲೀಸರು ಪಾರ್ಟಿ ನಡೆಯುತ್ತಿದ್ದ ಸ್ಥಳದಲ್ಲೇ ಆರೋಪಿ ಸುನಿಲ್ ಲೋಹಾರನನ್ನು ಬಂಧಿಸಿದರು. ನಂತರ ಸಂತ್ರಸ್ತ ಮಗುವಿನ ತಾಯಿಯಿಂದ ಹೇಳಿಕೆ ಪಡೆದು ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡರು.

ಪಂಚಾಯತ್ ಅಧ್ಯಕ್ಷ ಹೇಳಿದ್ದೇನು?:

ಈ ಘಟನೆಯ ಕುರಿತು ಅರಂಗಿ ಪಂಚಾಯತ್ ಮುಖ್ಯಸ್ಥ ಲೋಡೋ ಎಕ್ಕಾ ಪ್ರತಿಕ್ರಿಯೆ ನೀಡಿದ್ದಾರೆ. 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದ ಬಗ್ಗೆ ಪಾಲ್ಮಾ ಗ್ರಾಮದಲ್ಲಿ ಸಭೆ ನಡೆದಿರುವುದು ನಿಜ, ಆದರೆ ಆ ಸಭೆಯ ಬಗ್ಗೆ ತನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾರೆ. ಪೊಲೀಸರು ತಮ್ಮ ಗ್ರಾಮಕ್ಕೆ ಬಂದು ದಾಳಿ ನಡೆಸಿದ ಮೇಲೆಯೇ ತನಗೆ ಈ ವಿಷಯ ತಿಳಿಯಿತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಜನರಿಗೆ ಗುಡ್​​​ ನ್ಯೂಸ್; ಫಿಫಾ ವಿಶ್ವಕಪ್ ಸೆಮಿಫೈನಲ್ ನೋಡಲು ವಿಶೇಷ ಆದೇಶ – Kannada News | Late Night Delight: Hotels Open Until 3:30 AM for FIFA Matches in Karnataka

ಬೆಂಗಳೂರಿ, ಜು.14: ಕರ್ನಾಟಕ ರಾಜ್ಯ ಸರ್ಕಾರವು ಫುಟ್ಬಾಲ್ ಪ್ರೇಮಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಫಿಫಾ ವಿಶ್ವಕಪ್ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ವೀಕ್ಷಿಸುವವರ ಅನುಕೂಲಕ್ಕಾಗಿ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳನ್ನು ತಡರಾತ್ರಿ 3:30ರವರೆಗೆ ತೆರೆಯಲು ಅನುಮತಿ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಈ ಆದೇಶವು ಜಾರಿಯಲ್ಲಿರುತ್ತದೆ. ಈ ವಿಶೇಷ ಅನುಮತಿಯು ಪ್ರತಿದಿನ ಇರುವುದಿಲ್ಲ. ನಿರ್ದಿಷ್ಟವಾಗಿ ಇಂದು (ಮೊದಲ ಸೆಮಿಫೈನಲ್), ನಾಳೆ (ಎರಡನೇ ಸೆಮಿಫೈನಲ್) ಮತ್ತು ಜುಲೈ 19 ರಂದು (ಫೈನಲ್ ಪಂದ್ಯದ ದಿನ) ಮಾತ್ರ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಮಧ್ಯರಾತ್ರಿಯಿಂದ ಬೆಳಗಿನ ಜಾವ 3:30ರ ತನಕ ತೆರೆದಿರಲಿವೆ. ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್‌ಗಳು ಸಲ್ಲಿಸಿದ ಮನವಿಯ ಮೇರೆಗೆ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ರಾತ್ರಿ 12 ರಿಂದ 1 ಗಂಟೆಯ ವೇಳೆಗೆ ಮುಚ್ಚುವ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು, ಈ ದಿನಗಳಲ್ಲಿ ವಿಶೇಷವಾಗಿ ಫುಟ್ಬಾಲ್ ಅಭಿಮಾನಿಗಳಿಗಾಗಿ ಹೆಚ್ಚುವರಿ ಸಮಯ ಕಾರ್ಯನಿರ್ವಹಿಸಲಿವೆ. ಇಂದಿನ ಫ್ರಾನ್ಸ್-ಸ್ಪೇನ್ ಸೆಮಿಫೈನಲ್, ನಾಳೆಯ ಅರ್ಜೆಂಟೈನಾ-ಇಂಗ್ಲೆಂಡ್ ಸೆಮಿಫೈನಲ್ ಮತ್ತು ಮುಂದಿನ ಫೈನಲ್ ಪಂದ್ಯಗಳಿಗೆ ಈ ವ್ಯವಸ್ಥೆ ಸಹಕಾರಿಯಾಗಲಿದೆ. ಇದು ಫುಟ್ಬಾಲ್ ಪ್ರಿಯರಿಗೆ ಸಂತಸ ತಂದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

Exit mobile version