Bangaluru Rain: ಬೆಂಗಳೂರಲ್ಲಿ ವರುಣಾರ್ಭಟ: ರಸ್ತೆಗಳು ಜಲಾವೃತ, ಸಂಚಾರ ವ್ಯತ್ಯಯ

ಬೆಂಗಳೂರು, ಮೇ 29: ಸಿಲಿಕಾನ್​ ಸಿಟಿ ಜನರಿಗೆ ವೀಕೆಂಡ್ ಆರಂಭದಲ್ಲೇ ಮಳೆ ಶಾಕ್ ನೀಡಿದೆ. ಮೋಡ ಕವಿದ ವಾತಾವರಣವಿದ್ದ ನಗರದಲ್ಲಿ ಸಂಜೆಯಾಗುತ್ತಿದ್ದಂತೆ ವರುಣನ ಅಬ್ಬರ ಜೋರಾಗಿದೆ. ನಗರದ ಪ್ರಮುಖ ರಸ್ತೆಗಳು ಮಳೆ ನೀರಿಂದಾಗಿ ಜಲಾವೃತಗೊಂಡಿದ್ದು, ಮನೆಗೆ ಮರಳುತ್ತಿದ್ದ ಉದ್ಯೋಗಿಗಳು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಧಾರಾಕಾರ ಮಳೆಗೆ ಅಂಡರ್‌ಪಾಸ್‌ಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಮತ್ತಷ್ಟು ಮಾಹಿತಿ ಅಪ್​ಡೇಟ್​ ಆಗಲಿದೆ.

Source link

IPL 2026 GT vs RR Qualifier-2 Live Score: ಟಾಸ್ ಗೆದ್ದ ರಾಜಸ್ಥಾನ್ ಬ್ಯಾಟಿಂಗ್ ಆಯ್ಕೆ

ಇಂದು ಕ್ವಾಲಿಫೈಯರ್ 2 ರಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಿವೆ. ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯವನ್ನು ಗೆದ್ದ ತಂಡ ಫೈನಲ್‌ಗೆ ಮುನ್ನಡೆಯುತ್ತದೆ. ಗುಜರಾತ್ ತನ್ನ ಕೊನೆಯ ಫೈನಲ್ ಅನ್ನು 2023 ರಲ್ಲಿ ಆಡಿದರೆ, ರಾಜಸ್ಥಾನ ಕೊನೆಯದಾಗಿ 2022 ರಲ್ಲಿ ಪ್ರಶಸ್ತಿ ಪಂದ್ಯವನ್ನು ತಲುಪಿತು, ಅಲ್ಲಿ ಗುಜರಾತ್ ವಿರುದ್ಧ ಸೋತಿತು. ಈಗ ರಾಜಸ್ಥಾನವು ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಮತ್ತು ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗುವತ್ತ ಮುನ್ನಡೆಯುವ ಅವಕಾಶವನ್ನು ಹೊಂದಿದೆ.

Source link

ಚಿನ್ನಕ್ಕಿಂತಲೂ ಬಿಟ್​ಕಾಯಿನ್ ಒಂದು ಕೈ ಮೇಲೆ ಎನ್ನುತ್ತಿದ್ದ ಮಾರ್ಕ್ ಕ್ಯೂಬನ್ ಈಗ ಕೈಚೆಲ್ಲಿ ಕೂತ ಕಥೆ..!

ಬಿಟ್​ಕಾಯಿನ್ ಸಾಂದರ್ಭಿಕ ಚಿತ್ರImage Credit source: Getty Images

ವಾಷಿಂಗ್ಟನ್, ಮೇ 29: ಒಂದಾನೊಂದು ಕಾಲದಲ್ಲಿ ಕ್ರಿಪ್ಟೋಕರೆನ್ಸಿ (crypto currency) ಪರವಾಗಿ ಅತ್ಯಂತ ಪ್ರಬಲವಾಗಿ ಧ್ವನಿ ಎತ್ತುತ್ತಿದ್ದ ಅಮೆರಿಕದ ಬಿಲಿಯನೇರ್ ಉದ್ಯಮಿ ಮತ್ತು ‘ಶಾರ್ಕ್ ಟ್ಯಾಂಕ್’ (Shark Tank) ಕಾರ್ಯಕ್ರಮದ ಮಾಜಿ ಹೂಡಿಕೆದಾರ ಮಾರ್ಕ್ ಕ್ಯೂಬನ್ (Mark Cuban) ಈಗ ವರಸೆ ಬದಲಿಸಿದ್ದಾರೆ. ತಮಗೆ ಸೇರಿದ ಬಹುಪಾಲು ಬಿಟ್‌ಕಾಯಿನ್ (Bitcoin) ಹೂಡಿಕೆಯನ್ನು ಮಾರಾಟ ಮಾಡಿರುವುದಾಗಿ ಅವರು ಬಹಿರಂಗಪಡಿಸಿದ್ದಾರೆ. ಜಾಗತಿಕ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಸುರಕ್ಷಿತ ಆಸ್ತಿಯಾಗಿ (Hedge against global turmoil) ಕಾರ್ಯನಿರ್ವಹಿಸುವಲ್ಲಿ ಬಿಟ್‌ಕಾಯಿನ್ ವಿಫಲವಾಗಿದೆ ಎಂದು ಅವರು ತಮ್ಮ ಈ ನಿರ್ಧಾರಕ್ಕೆ ಪ್ರಮುಖ ಕಾರಣ ನೀಡಿದ್ದಾರೆ.

“ಇದು ನಾನು ಅಂದುಕೊಂಡಂತೆ ಇಲ್ಲ” ಎಂದ ಕ್ಯೂಬನ್

ಮಾರ್ಕ್ ಕ್ಯೂಬನ್ ಈ ಹಿಂದೆ ಬಿಟ್‌ಕಾಯಿನ್ ಅನ್ನು “ಚಿನ್ನದ ಅತ್ಯಂತ ಸುಧಾರಿತ ಆವೃತ್ತಿ” (Better version of gold than gold) ಎಂದು ಬಣ್ಣಿಸಿದ್ದರು. ಆದರೆ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಈ ಡಿಜಿಟಲ್ ಆಸ್ತಿಯು ಮಾರುಕಟ್ಟೆಯ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜಾಗತಿಕ ಸವಾಲುಗಳ ನಡುವೆಯೂ 2026-27ರಲ್ಲಿ ಭಾರತದ ಜಿಡಿಪಿ ಶೇ. 6.9 ವೃದ್ಧಿ: ಆರ್​ಬಿಐ ವಾರ್ಷಿಕ ವರದಿಯಲ್ಲಿ ಅಂದಾಜು

“ಇರಾನ್ ಯುದ್ಧದಂತಹ ಜಾಗತಿಕ ಉದ್ವಿಗ್ನತೆಗಳು ತಾರಕಕ್ಕೇರಿದಾಗ, ಸಾಂಪ್ರದಾಯಿಕ ಕರೆನ್ಸಿಗಳ ಮೌಲ್ಯ ಕುಸಿತಕ್ಕೆ ಬಿಟ್‌ಕಾಯಿನ್ ಅತ್ಯುತ್ತಮ ಪರ್ಯಾಯವಾಗಬಹುದು ಮತ್ತು ಇದು ಚಿನ್ನಕ್ಕಿಂತಲೂ ಉತ್ತಮವಾಗಿರಬಹುದು ಎಂದು ನಾನು ಭಾವಿಸಿದ್ದೆ. ಆದರೆ ಕಠಿಣ ಪರಿಸ್ಥಿತಿ ಎದುರಾದಾಗ ಚಿನ್ನದ ಬೆಲೆ ಗಗನಕ್ಕೇರಿ (ಸುಮಾರು $5,000 ತಲುಪಿತು), ಬಿಟ್‌ಕಾಯಿನ್ ಮೌಲ್ಯ ಮಾತ್ರ ತೀವ್ರವಾಗಿ ಕುಸಿಯಿತು. ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಇದು ನನಗೆ ಬೇಕಾದ ಸುರಕ್ಷತೆಯನ್ನು ಒದಗಿಸಲಿಲ್ಲ” ಎಂದಿದ್ದಾರೆ ಮಾರ್ಕ್ ಕ್ಯೂಬನ್.

ಕ್ರಿಪ್ಟೋ ಮಾರುಕಟ್ಟೆಯಿಂದ ದೂರ ಸರಿದರಾ ಬಿಲಿಯನೇರ್?

ಮಾರ್ಕ್ ಕ್ಯೂಬನ್ ಅವರ ಈ ಹೇಳಿಕೆಯು ಕ್ರಿಪ್ಟೋ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಏಕೆಂದರೆ 2021ರ ಅವಧಿಯಲ್ಲಿ ಅವರು ಪ್ರತಿದಿನ ಗಂಟೆಗಟ್ಟಲೆ ಕ್ರಿಪ್ಟೋ ಬಗ್ಗೆ ಅಧ್ಯಯನ ಮಾಡುತ್ತಿದ್ದರು ಮತ್ತು ತಮ್ಮ ಬಾಸ್ಕೆಟ್‌ಬಾಲ್ ತಂಡವಾದ ‘ಡಲ್ಲಾಸ್ ಮಾವೆರಿಕ್ಸ್’ನಲ್ಲೂ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಅಳವಡಿಸಿದ್ದರು. ಆ ಸಮಯದಲ್ಲಿ ಅವರ ಒಟ್ಟು ಕ್ರಿಪ್ಟೋ ಪೋರ್ಟ್‌ಫೋಲಿಯೊದಲ್ಲಿ ಶೇ. 60 ರಷ್ಟು ಬಿಟ್‌ಕಾಯಿನ್, ಶೇ. 30 ರಷ್ಟು ಎಥೆರಿಯಮ್ ಮತ್ತು ಶೇ. 10 ರಷ್ಟು ಇತರೆ ಸಣ್ಣ ಟೋಕನ್‌ಗಳಿದ್ದವು.

ಆದರೆ ಪ್ರಸ್ತುತ ಕ್ರಿಪ್ಟೋ ವ್ಯವಸ್ಥೆಯು ತನ್ನ ಹಾದಿ ತಪ್ಪಿದೆ (Lost the plot) ಎಂದಿರುವ ಕ್ಯೂಬನ್, ಇತ್ತೀಚಿನ ಮೀಮ್‌ಕಾಯಿನ್‌ಗಳು (Memecoins) ಮತ್ತು ಸಣ್ಣ ಟೋಕನ್‌ಗಳನ್ನು “ಕಸ” (Garbage) ಎಂದು ಕರೆಯುವ ಮೂಲಕ ತೀವ್ರವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ: ನೋಟು ಹಾಳಾಗುವ ಭಯ ಬೇಡ; ಕಾಗದದ ಬದಲು ಪಾಲಿಮರ್ ನೋಟು ಮುದ್ರಿಸಲು ಸರ್ಕಾರದ ಆಲೋಚನೆ

ಎಥೆರಿಯಮ್ ಮೇಲೆ ಇನ್ನೂ ಇದೆ ನಂಬಿಕೆ

ಬಿಟ್‌ಕಾಯಿನ್ ಮಾರಾಟ ಮಾಡಿದ್ದರೂ, ತಮಗೆ ಎಥೆರಿಯಮ್ (Ethereum) ಮೇಲೆ ಅಷ್ಟೊಂದು ನಿರಾಶೆಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹಣಕಾಸು ಅಪ್ಲಿಕೇಶನ್‌ಗಳು ಮತ್ತು ಸ್ಮಾರ್ಟ್ ಕಾಂಟ್ರಾಕ್ಟ್‌ಗಳನ್ನು ರನ್ ಮಾಡಲು ಎಥೆರಿಯಮ್ ಪ್ಲಾಟ್​ಫಾರ್ಮ್ ಉತ್ತಮವಾಗಿ ಬಳಕೆಯಾಗುತ್ತಿರುವುದೇ ಇದಕ್ಕೆ ಕಾರಣ ಎಂದಿದ್ದಾರೆ. ಆದಾಗ್ಯೂ, ಕಳೆದ ಐದು ವರ್ಷಗಳ ಮಾರುಕಟ್ಟೆ ಇತಿಹಾಸವನ್ನು ನೋಡಿದರೆ ಬಿಟ್‌ಕಾಯಿನ್ ಎಥೆರಿಯಮ್‌ಗಿಂತ ಹೆಚ್ಚಿನ ಲಾಭ ನೀಡಿದೆ ಎಂಬುದು ಗಮನಾರ್ಹ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ರಿಷಭ್ ಪಂತ್ ಜೊತೆಗೆ ಈ 4 ತಂಡಗಳ ನಾಯಕರಿಗೂ ಗೇಟ್​ಪಾಸ್ ಖಚಿತ

Source link

ಕರ್ನಾಟಕದ ಏಕೈಕ ಮಹಿಳಾ ವಿವಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: Phd, ಸಿಬ್ಬಂದಿ ನೇಮಕಾತಿಯಲ್ಲೂ ಭಾರಿ ಗೋಲ್ಮಾಲ್!

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯImage Credit source: tv9 kannada

ವಿಜಯಪುರ, ಮೇ 29: ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವಾದ ವಿಜಯಪುರದ (vijayapura) ‘ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ’ದಲ್ಲಿ (Karnataka State Akkamahadevi Women University) ಭ್ರಷ್ಟಾಚಾರ ಮತ್ತು ಅಕ್ರಮಗಳ ಸರಣಿ ಆರೋಪ ಕೇಳಿಬಂದಿವೆ. ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ನಿಯಮಗಳ ಉಲ್ಲಂಘನೆ ಹಾಗೂ ಪಿಎಚ್‌ಡಿ ಪದವಿ ಪ್ರದಾನ ವಿಚಾರದಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ಮತ್ತು ಲಂಚಕ್ಕೆ ಬೇಡಿಕೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಚರ್ಚೆಗೆ ಗ್ರಾಸವಾಗಿದೆ.

ಮುಖ್ಯಾಂಶಗಳು

  • ಕರ್ನಾಟಕ ಮಹಿಳಾ ವಿವಿ: ಬೋಧಕೇತರ ಸಿಬ್ಬಂದಿ ನೇಮಕಾತಿ ಅಕ್ರಮ
  • ಪಿಹೆಚ್‌ಡಿ ಪ್ರವೇಶಾತಿ ಮತ್ತು ಪದವಿ ಪ್ರದಾನದಲ್ಲಿ ಭ್ರಷ್ಟಾಚಾರ ಆರೋಪ
  • ಅಕ್ರಮಗಳ ಪರಿಹಾರಕ್ಕೆ ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹ

ನೇಮಕಾತಿ ಪ್ರಕ್ರಿಯೆ ನಿಯಮಬಾಹಿರ

ವಿಜಯಪುರ ನಗರದ ಹೊರ ಭಾಗದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಹೊರಗುತ್ತಿಗೆ ಆಧಾರದಲ್ಲಿ 20ಕ್ಕೂ ಅಧಿಕ ಬೋಧಕೇತರ ಸಿಬ್ಬಂದಿ, ಡಾಟಾ ಎಂಟ್ರಿ ಆಪರೇಟರ್‌ಗಳ ನೇಮಕಾತಿ ಪ್ರಕ್ರಿಯೆ ನಿಯಮಬಾಹಿರವಾಗಿ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬೋಧಕೇತರ ಸಿಬ್ಬಂದಿ ನೇಮಕಾತಿಗೆ ರಾಜ್ಯ ಸರ್ಕಾರ ಹಾಗೂ ವಿಶ್ವವಿದ್ಯಾಲಯದ ಹಣಕಾಸು ಸಮಿತಿಯಿಂದ ಅಗತ್ಯ ಅನುಮತಿ ಪಡೆಯಲಾಗಿಲ್ಲ. ಅಲ್ಲದೇ, ಯಾವುದೇ ಅಧಿಕೃತ ನೋಟಿಫಿಕೇಶನ್ ಹೊರಡಿಸದೆ ಹಾಗೂ ಮೀಸಲಾತಿ ನಿಯಮಾವಳಿ ಅನುಸರಿಸದೆ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಸರ್ಕಾರದ ಅನುಮತಿ ಪಡೆದು ನಿಯಮಾನುಸಾರ ನೇಮಕಾತಿ ನಡೆಯಬೇಕು ಹಾಗೂ ರೋಸ್ಟರ್ ಪದ್ಧತಿ ಕಡ್ಡಾಯವಾಗಿ ಪಾಲಿಸಬೇಕು. ನಿಯಮಬಾಹಿರ ನೇಮಕ ನಡೆದರೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹಾಲಿ ಮಾಜಿ ಸಿಂಡಿಕೇಟ್ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕಚೇರಿ ಸಮಯ ಬದಲಾವಣೆ: ವಿಜಯಪುರ ಸರ್ಕಾರಿ ಅಧಿಕಾರಿ-ಸಿಬ್ಬಂದಿಗೆ ಹೇಳೋರಿಲ್ಲ, ಕೇಳೋರಿಲ್ಲ

ಇನ್ನು ಪಿಹೆಚ್​​ಡಿ ಪದವಿ ಪ್ರದಾನ ವಿಚಾರದಲ್ಲೂ ಭ್ರಷ್ಟಾಚಾರ, ಕಿರುಕುಳ ಆರೋಪ ಕೇಳಿಬಂದಿವೆ. ಸರ್ಕಾರದ ಹಾಗೂ ಮೀಸಲಾತಿ ನಿಯಮಾವಳಿಗಳಿಗೆ ಅನುಗುಣವಾಗಿ ಪಿಹೆಚ್‌.ಡಿ ಪ್ರವೇಶಾತಿಯನ್ನು ಲಿಖಿತ ಮತ್ತು ಮೌಖಿಕ ಪರೀಕ್ಷೆಗಳ ಮೂಲಕ ನಡೆಸಬೇಕು. ಈ ವರ್ಷ 100ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ದಾಖಲಾತಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಪ್ರವೇಶ ಪ್ರಕ್ರಿಯೆಯಲ್ಲಿ ಎಕ್ಸಿಕ್ಯೂಟಿವ್ ಕಮಿಟಿಯನ್ನು ನಿಷ್ಕ್ರಿಯಗೊಳಿಸಿ, ಕೆಲವರಿಗೆ ಅನುಕೂಲವಾಗುವ ರೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಹಣ, ಚಿನ್ನಕ್ಕೆ ಬೇಡಿಕೆ

ಮಹಾಪ್ರಬಂಧ ಸಲ್ಲಿಕೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯಲ್ಲೂ ಗೋಲ್ಮಾಲ್ ನಡೆಯುತ್ತಿವೆ ಎಂದು ಸಂಶೋಧನಾ ವಿದ್ಯಾರ್ಥಿನಿ ಹೇಳಿದ್ದಾರೆ. ಮೌಖಿಕ ಪರೀಕ್ಷೆ ಮತ್ತು ಮಹಾಪ್ರಬಂಧ ಮೌಲ್ಯಮಾಪನವನ್ನು ಬಾಹ್ಯ ತಜ್ಞರ ಸಮಿತಿಯಿಂದ ಸಮರ್ಪಕವಾಗಿ ನಡೆಸದೇ, ಕಾಟಾಚಾರಕ್ಕೆ ಎಂಬಂತೆ ಪ್ರಕ್ರಿಯೆ ನಡೆಯುತ್ತಿದೆಯಂತೆ. ಮಹಾಪ್ರಬಂಧ ಸಲ್ಲಿಕೆಗೆ ವಿಶ್ವವಿದ್ಯಾಲಯ ಅನುಮತಿ ಪತ್ರ ನೀಡುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಹಣ ಹಾಗೂ ಚಿನ್ನಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ವಿವಿ ಕುಲಪತಿ ಪ್ರೊ ವಿಜಯಾ ಕೋರಿಶೆಟ್ಟಿ ಹೇಳಿದ್ದಿಷ್ಟು

ಮಹಿಳಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಸಿಂಡಿಕೇಟ್ ಅನುಮತಿ ನೀಡಲಾಗಿದೆ ಎಂದು ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಮಾಹಿತಿ ನೀಡಿದ್ದಾರೆ.

ಯಾವುದೇ ಅಕ್ರಮಕ್ಕೆ ಅವಕಾಶವಿಲ್ಲದಂತೆ ನೇಮಕಾತಿ ನಿಯಮಾವಳಿ ಪಾಲಿಸಲಾಗುವುದು. ಜೊತೆಗೆ ಪಿಹೆಚ್‌ಡಿ ಅಧ್ಯಯನಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದರೆ ವಿದ್ಯಾರ್ಥಿನಿಯರು ನೇರವಾಗಿ ನನ್ನ ಗಮನಕ್ಕೆ ತರಬಹುದು. ಸೂಕ್ತ ಕ್ರಮಕೈಗೊಳ್ಳಲಾಗುವುದು. ಇದರಾಚೆ ಯಾವುದೇ ಬೇಡಿಕೆಯಿಲ್ಲ, ಇದ್ದರು ಸಹ ನಮ್ಮ ಗಮನಕ್ಕೆ ತರಬೇಕೆಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಕ್ಕ ಮಹಾದೇವಿ ಮಹಿಳಾ ವಿವಿ ಸಿಬ್ಬಂದಿಯಿಂದ ಲೈಂಗಿಕ ಕಿರುಕುಳ; ದಯಾಮರಣಕ್ಕೆ ಸಂತ್ರಸ್ತೆ ಮನವಿ

ಬೋಧಕೇತರ ಸಿಬ್ಬಂದಿ ನೇಮಕಾತಿ ಹಾಗೂ ಪಿಹೆಚ್​​ಡಿ ಪದವಿ ಪ್ರದಾನ ವಿಚಾರದಲ್ಲಿ ವಿಜಯಪುರದ ಮಹಿಳಾ ವಿವಿ ಮೇಲೆ ಆರೋಪಗಳು ಕೇಳಿಬಂದಿವೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರು ಹಾಗೂ ಕುಲಾಧಿಪತಿಗಳು ಆಗಿರುವ ರಾಜ್ಯಪಾಲರು ಗಮನ ಹರಿಸಬೇಕಿದೆ. ಸತ್ಯಾಸತ್ಯತೆ ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗರ್ಭಾವಸ್ಥೆಯಲ್ಲಿ ಹೆಚ್ಚು ಕೋಪ, ಚಿಕ್ಕ ಚಿಕ್ಕ ವಿಷಯಕ್ಕೂ ಸ್ಟ್ರೆಸ್ ತೆಗೆದುಕೊಳ್ಳುತ್ತಿದ್ದರೆ ಈ ಸುದ್ದಿಯನ್ನು ತಪ್ಪದೆ ಓದಿ

ಗರ್ಭಾವಸ್ಥೆ (Pregnancy) ಮಹಿಳೆಯ ಜೀವನದ ಅತ್ಯಂತ ಮಹತ್ವದ ಹಂತವಾಗಿದೆ. ಈ ಸಮಯದಲ್ಲಿ ದೇಹದಲ್ಲಿ ಹಾರ್ಮೋನ್ ಬದಲಾವಣೆಗಳು ವೇಗವಾಗಿ ನಡೆಯುತ್ತವೆ ಎಂಬುದು ತಿಳಿದ ವಿಚಾರ. ಜೊತೆಗೆ ಮಾನಸಿಕ ಒತ್ತಡ, ಆತಂಕ ಮತ್ತು ಭಾವನಾತ್ಮಕ ಬದಲಾವಣೆಗಳು ಸಹ ಸಾಮಾನ್ಯವಾಗಿರುತ್ತವೆ. ಆದರೆ ಗರ್ಭಾವಸ್ಥೆಯಲ್ಲಿ ಹೆಚ್ಚು ಒತ್ತಡ ತೆಗೆದುಕೊಳ್ಳುವುದು ಪದೇ ಪದೇ ಕೋಪ ಮಾಡಿಕೊಳ್ಳುವುದು ಮತ್ತು ಚಿಕ್ಕ ಚಿಕ್ಕ ವಿಷಯಕ್ಕೂ ಸ್ಟ್ರೆಸ್ ತೆಗೆದುಕೊಳ್ಳುವುದರಿಂದ ಗರ್ಭದಲ್ಲಿರುವ ಮಗುವಿನ ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಿದ್ದಾರೆ. ಅಧ್ಯಯನಗಳ ಪ್ರಕಾರ, ದೀರ್ಘಕಾಲ ಮಾನಸಿಕ ಒತ್ತಡದಲ್ಲಿರುವ ಗರ್ಭಿಣಿಯರಲ್ಲಿ ಕೆಲವು ಹಾರ್ಮೋನ್ ಬದಲಾವಣೆಗಳು ಉಂಟಾಗುತ್ತವೆ. ಇದು ತಾಯಿಯ ಆರೋಗ್ಯದ ಜೊತೆಗೆ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾದರೆ ಸ್ಟ್ರೆಸ್ ಮಗುವಿನ ಮೆದುಳಿನ ಬೆಳವಣಿಗೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಯಾವ ರೀತಿಯ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು, ಜೊತೆಗೆ ಈ ರೀತಿ ಒತ್ತಡ ಕಡಿಮೆ ಮಾಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಗುವಿನ ಮೆದುಳಿನ ಬೆಳವಣಿಗೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ತಜ್ಞರ ಪ್ರಕಾರ, ಗರ್ಭಾವಸ್ಥೆಯಲ್ಲಿ ನಿರಂತರ ಒತ್ತಡದಲ್ಲಿದ್ದರೆ ಮಗುವಿನ ಭಾವನಾತ್ಮಕ ಬೆಳವಣಿಗೆ, ವರ್ತನೆ ಮತ್ತು ಏಕಾಗ್ರತೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕೆಲವು ಮಕ್ಕಳಲ್ಲಿ ಚಿಡಿಚಿಡಿತನ, ಆತಂಕ ಅಥವಾ ಗಮನ ಕೇಂದ್ರೀಕರಿಸುವಲ್ಲಿ ತೊಂದರೆ ಕಾಣಿಸಬಹುದು. ಆದರೆ ಎಲ್ಲಾ ಮಹಿಳೆಯರಿಗೂ ಮತ್ತು ಪ್ರತಿಯೊಂದು ಗರ್ಭಧಾರಣೆಯಲ್ಲೂ ಇದೇ ರೀತಿಯ ಪರಿಣಾಮ ಕಾಣಿಸಿಕೊಳ್ಳುತ್ತದೆ ಎನ್ನುವುದಕ್ಕೆ ಸಾಧ್ಯವಿಲ್ಲ.

ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು?

  • ನಿರಂತರ ಆತಂಕ ಅಥವಾ ಭಯ
  • ಹೆಚ್ಚಾಗಿ ಕೋಪ ಅಥವಾ ಚಿಡಿಚಿಡಿತನ
  • ನಿದ್ರೆಯ ಕೊರತೆ
  • ಹೆಚ್ಚು ದುಃಖ ಅಥವಾ ಏಕಾಂಗಿತನ
  • ದೈನಂದಿನ ಕೆಲಸಗಳಲ್ಲಿ ಆಸಕ್ತಿ ಕಡಿಮೆಯಾಗುವುದು

ಈ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ವೈದ್ಯರು ಅಥವಾ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಉತ್ತಮ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಯೂರಿನ್ ಇನ್ಫೆಕ್ಷನ್ ಹೆಚ್ಚಾಗುವುದಕ್ಕೆ ಕಾರಣವೇನು? ಇದನ್ನು ತಡೆಗಟ್ಟಲು ಏನು ಮಾಡಬೇಕು ತಿಳಿದುಕೊಳ್ಳಿ

ಒತ್ತಡ ಕಡಿಮೆ ಮಾಡಲು ಏನು ಮಾಡಬೇಕು?

ಗರ್ಭಿಣಿಯರು ಸಾಕಷ್ಟು ವಿಶ್ರಾಂತಿ ಪಡೆಯಬೇಕು ಮತ್ತು ಚೆನ್ನಾಗಿ ನಿದ್ರೆ ಮಾಡಬೇಕು. ಕುಟುಂಬದವರೊಂದಿಗೆ ಮಾತುಕತೆ ನಡೆಸುವುದು ಭಾವನಾತ್ಮಕ ಬೆಂಬಲ ನೀಡುತ್ತದೆ. ಲಘು ವ್ಯಾಯಾಮ, ಧ್ಯಾನ ಮತ್ತು ಸಮತೋಲನ ಆಹಾರ ಮಾನಸಿಕ ಆರೋಗ್ಯವನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ. ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯುವುದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಉತ್ತಮವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭೀಮಾತೀರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು: ಆಸ್ತಿ ವಿವಾದಕ್ಕೆ 6 ಮಂದಿಯ ಬರ್ಬರ ಕೊಲೆ

ವಿಜಯಪುರ, ಮೇ 29: ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದ್ದು, ಆಸ್ತಿ ವಿವಾದ ಹಿನ್ನೆಲೆ 6 ಜನರ ಭೀಕರ ಹತ್ಯೆ ಮಾಡಲಾಗಿದೆ. ಕುಟುಂಬಗಳ ನಡುವಿನ ಕಲಹ ವಿಕೋಪಕ್ಕೆ ಹೋದ ಪರಿಣಾಮ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಅಮಾನುಷ ಕೃತ್ಯ ನಡೆದಿದೆ. ರೇವಣಸಿದ್ದಪ್ಪ ನಿರಾಳೆ, ದುಂಡಪ್ಪ ರೇವಣಸಿದ್ದಪ್ಪ ನಿರಾಳೆ, ಶಿವಪುತ್ರ ರೇವಣಸಿದ್ದಪ್ಪ ನಿರಾಳೆ, ಚಂದ್ರಶೇಖರ್ ನಿರಾಳೆ
ಶಬ್ಬೀರ್ ನದಾಫ್ ಸೇರಿದಂತೆ 6 ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬಳಿಕ ಗುಂಡಿಟ್ಟು ಹತ್ಯೆ ಮಾಡಲಾಗಿದೆ.

ಜಮಿನು ವಿಚಾರವಾಗಿ ಅಪ್ಪುಗೌಡ ಪಾಟೀಲ್ ಹಾಗೂ ರೇವಣಸಿದ್ದಪ್ಪ‌ನಿರಾಳೆ ಕುಟುಂಬದ ಮಧ್ಯೆ ಜಗಳವಿತ್ತು. ಕಳೆದ ಕೆಲ ದಿನಗಳ ಹಿಂದೆ ಎರಡೂ ಕುಟುಂಬಗಳ ಮಧ್ಯೆ ಈ ಸಂಬಂಧ ನ್ಯಾಯ ಪಂಚಾಯತಿ ಕೂಡ ಆಗಿತ್ತು. ಇಂದು ಅದೇ‌ ಜಮೀನಿನ ವಿಚಾರದಲ್ಲಿ ನ್ಯಾಯ ಪಂಚಾಯತಿಗೆಂದು ನಿರಾಳೆ ಕುಟುಂಬ ಮತ್ತು ಇತರರು ತೆರಳಿದ್ದರು. ಈ ವೇಳೆ ನಿರಾಳೆ ಕುಟುಂಬದವರ ಮೇಲೆ ದಾಳಿ ನಡೆಸಲಾಗಿದೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

(ಮಾಹಿತಿ ಅಪ್ಡೇಟ್​​ ಆಗುತ್ತಿದೆ)

 

Source link

ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ 3 ದಿನಾಂಕ ನೀಡಿದ ದ್ವಾರಕನಾಥ್ ಗುರೂಜಿ

ಬೆಂಗಳೂರು, (ಮೇ 29): ಕರ್ನಾಟಕದ (Karnataka) ನೂತನ ಮುಖ್ಯಮಂತ್ರಿ ಪದಗ್ರಹಣ ಸಮಾರಂಭಕ್ಕೆ (CM Oath Ceremony) ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್‌ನಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಕಾಂಗ್ರೆಸ್ ಶಾಸಕಾಂಗ ನಾಯಕನ ಆಯ್ಕೆಗೂ ಮೊದಲೇ ಹೊಸ ಸಿಎಂ ಪ್ರಮಾಣವಚನ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆದಿವೆ. ಡಿಕೆ ಶಿವಕುಮಾರ್ (DK Shivakumar) ಅವರೇ ಮುಂದಿನ ಸಿಎಂ ಎನ್ನುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಡಿಕೆ ಶಿವಕುಮಾರ್, ಪ್ರಮಾಣವಚನ ಸ್ವೀಕಾರಕ್ಕೆ ದಿನಾಂಕ, ಸಮಯ ನೀಡುವಂತೆ ರಾಜಗುರು ದ್ವಾರಕನಾಥ್ ಗುರೂಜಿಗೆ (dwarakanath guruji) ಮನವಿ ಮಾಡಿದ್ದು, ಇದೀಗ ಅದರಂತೆ ದ್ವಾರಕನಾಥ್ ಗುರೂಜಿ ಅವರು ಡಿಕೆ ಜೂನ್ 5, 6 ಮತ್ತು 7ರಂದು ಪ್ರಮಾಣವಚನಕ್ಕೆ ಒಳ್ಳೆಯ ದಿನಗಳು ಎಂದು ಶಿವಕುಮಾರ್​ ಅವರಿಗೆ ನೀಡಿದ್ದಾರೆ.

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಹೊಸ ಸಿಎಂ ಪ್ರಮಾಣವಚನಕ್ಕೆ ಸಿದ್ಧತೆ
  • ಪ್ರಮಾಣವಚನ ಸ್ವೀಕಾರಕ್ಕೆ ಡಿಕೆ ಶಿವಕುಮಾರ್ ಗೆ ಮೂರು ದಿನಾಂಕ ಕೊಟ್ಟ ದ್ವಾರಕನಾಥ್ ಗುರೂಜಿ
  • ಮುಂದಿನ ತಿಂಗಳು ಜೂನ್ 5,6, ಮತ್ತು 7ರಂದು ಪ್ರಮಾಣವಚನ್ನೆ ದಿನಾಂಕ ನೀಡಿದ ದ್ವಾರಕನಾಥ್
  • ನಾಳಿನ ಸಿಎಲ್​​ಪಿ ಸಭೆ ಬಳಿಕ ಡಿಕೆ ಶಿವಕುಮಾರ್ ಹೆಸರು ಅಧಿಕೃತ ಘೋಷಣೆ

ಈ ಬಗ್ಗೆ ದ್ವಾರಕನಾಥ್ ಗುರೂಜಿ ಟಿವಿ9 ಜತೆ ಮಾತನಾಡಿದ್ದು, ಶುಭ ಘಳಿಗೆ ಬಂದಿದೆ, ಈಗಾಗಲೇ ಮುಹೂರ್ತ ಇಟ್ಟಾಗಿದೆ. ನಾಳೆ ನಾಳೆ 30 ಸಿಎಲ್ಪಿ ಸಭೆಯ ಮುಹೂರ್ತ ಕೊಟ್ಟಿದ್ದೆ. ಈಗ ಪ್ರಮಾಣ ವಚನ ಸ್ವೀಕಾರ ಮಾಡೋಕೆ ಮುಂದಿನ ತಿಂಗಳು 5, 6 ಮತ್ತು 7 ದಿನಾಂಕ ಕೊಟ್ಟಿದ್ದೇನೆ. ದೇವರ ಚಿಂತೆ, ಅನುಗೃಹದಿಂದ ಅವರಿಗೆ ಸಿಎಂ ಪದವಿ ಸಿಕ್ಕಿದೆ ಎಂದರು.

ಇದನ್ನೂ ಓದಿ: ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಭಾಗ್ಯ ಇದ್ಯಾ? ದ್ವಾರಕನಾಥ್ ಗುರೂಜಿ ಹೇಳಿದ್ದಿಷ್ಟು

136 ಸೀಟು ಬರುತ್ತೆ ಅಂತ ಹೇಳಿದ್ದೆ

ಅಧ್ಯಕ್ಷ ರಾಗಿ ಅವನ ಕೆಲಸ ಮಾಡಿದ್ದಾರೆ. 23ರಲ್ಲೂ ಕೇಳಿದ್ದರು, ನಾನು 136 ಸೀಟು ಬರುತ್ತೆ ಅಂತ ಹೇಳಿದ್ದೆ. ಅದೇ ಸಮಯದಲ್ಲಿ ಲೋಕಸಭೆ ಎಲೆಕ್ಷನ್ ನಲ್ಲೂ ದೇಶದಲ್ಲಿ 141 ಸೀಟು ಬರುತ್ತೆ ಅಂತ ಆವತ್ತೆ ಹೇಳಿದ್ದೇ. ಡಿಕೆ ಶಿವಕುಮಾರ್ ಅಧ್ಯಕ್ಷ ಆಗಿ ಕೆಲಸ ಮಾಡಿದ್ದಾರೆ/ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಕೆಲಸ ಮಾಡಿದ್ದಾರೆ. ನ್ಯಾಯವಾಗಿ ಇಬ್ಬರು ಅಧಿಕಾರ ಹಂಚಿ ಕೊಂಡು ಹೋಗಬೇಕಿತ್ತು . ಆದ್ರೆ ಡಿಕೆ ಶಿವಕುಮಾರ್ ಗೆ ಸ್ವಲ್ಪ ತಡವಾಯಿತು.

ಕಷ್ಟ ಪಟ್ಟಿದ್ದಕ್ಕೆ ಅಧಿಕಾರ ಬಂದಿಲ್ಲವೆಂದು ಸಾಕಷ್ಟು ನೋವು ಪಟ್ಟಿದ್ದಾರೆ. ಆಗ ನಾನು ಅವರ ಗ್ರಹಗಳ ವಿದ್ಯಾಮಾನ ನೋಡಿ ಹೆದರಬೇಡ ಎಂದು ಹೇಳಿದ್ದೆ. ಹಿಂದೆ ಸಹ ಬಂದಾಗ ಹೋಮ ಮಾಡೋದಕ್ಕೆ ಹೇಳಿದ್ದೆ.ದಶಕ ಗಳ ಹಿಂದೆ ಅವರಿಗೆ ಬಂಗಾರಪ್ಪ ಕಾಲದಲ್ಲಿ ಹೇಳಿದ್ದೆ, ಏನೇ ಮಂತ್ರಿ ಪದವಿ ಕೊಟ್ಟರೂ ತೆಗೆದುಕೊಳ್ಳಲು ಹೇಳಿದ್ದೇ, ಆಗಲೂ ದಿನಾಂಕ ಕೊಟ್ಟಿದ್ದೆ. ಆಗ ಅವರಿಗೆ ಒಳ್ಳೆದಾಯ್ತು.

ಡಿಕೆಶಿಗೆ ಬುಧಿದಿತ್ಯ ಯೋಗ ಇದೆ

ಬಂಗಾರಪ್ಪ ಕಾಲದಲ್ಲಿ ನಮ್ಮ ಡಿಕೆ ಶಿವಕುಮಾರ್ ಅವರ ಜೊತೆಗಿನ ಸಂಪರ್ಕ ಶುರುವಾಗಿದ್ದು, ಆಗಿನಿಂದ ನಮ್ಮನ್ನ ಬಿಡಲಿಲ್ಲ. ಎಲ್ಲಾ ಸಮಯದಲ್ಲೂ ನಮ್ಮನ್ನ ಕೇಳುತ್ತಿದ್ದ. ಅವರ ಜಾತಕ ನೋಡಿದ್ರೆ ಬುಧಿದಿತ್ಯ ಯೋಗ ಇದೆ. ಅದೊಂದು ದೊಡ್ಡ ಯೋಗ. ಇದು ಇತ್ತಂದ್ರೆ ರಾಜನಾಗುವ ಯೋಗ, ದೊಡ್ಡ ಸ್ಥಾನ ಬರುತ್ತೆ ಅಂತ ಅಧ್ಯಯನದಿಂದ ತಿಳಿದು ಬರುತ್ತದೆ ಎಂದು ವಿವರಿಸಿದರು.

ಮುಂದಿನ ಹಾದಿ ಮುಳ್ಳಿನ ಹಾದಿ

ನೀನು ಒಂದು ದಿನ ಮುಖ್ಯಮಂತ್ರಿ ಆಗಿಯೇ ಆಗುತ್ತಿಯಾ ಎಂದು ನಾನು 40 ವರ್ಷ ದ ಹಿಂದೆಯೇ ಆತನಿಗೆ ಹೇಳಿದ್ದೆ. ಈಗ ಅವರು ಮುಖ್ಯಮಂತ್ರಿ ಆಗುತ್ತಿದ್ದಾರೆ. ಎಲ್ಲವೂ ನಮ್ ಗುರುಗಳು ಅನುಗೃಹದಿಂದ ಅವರು ಸಿಎಂ ಆಗುತ್ತಿದ್ದಾರೆ. ಮುಂದಿನ ಹಾದಿ ಮುಳ್ಳಿನ ಹಾದಿ. ಈ ಮೂರು ವರ್ಷಗಳಲ್ಲಿ ಕೆಲಸ ಮಾಡಿಲ್ಲ. ಮುಂದೆ ಸಾಕಷ್ಟು ಅಭಿವೃದ್ಧಿ ಮಾಡಬೇಕು. ನಿನ್ನ ಗಮನ ಬೆಂಗಳೂರು ಅಭಿವೃದ್ಧಿ ಮಾಡಬೇಕು ಎಂದಿದ್ದೇನೆ. ದೀರ್ಘಕಾಲದ ಮುಖ್ಯಮಂತ್ರಿ ಆಗಿ ಡಿಕೆ ಶಿವಕುಮಾರ್ ಆಡಳಿತ ನಡೆಸುತ್ತಿದ್ದಾರೆ. ಅವರಿಗೆ ಶಕ್ತಿ ಇದೆ, ದೊಡ್ಡ ಶಕ್ತಿ ಇದೆ. ಅವರ ಬಗ್ಗೆ ನಿಮಗ್ಯಾರಿಗೂ ಗೊತ್ತಿಲ್ಲ . ಅವರಿಗೆ ಒಳ್ಳೆ ಗುಣ ಇದೆ, ಕೋಪ ಇದೆ. ಆದ್ರೆ ಹೃದಯ ವಿಶಾಲವಾಗಿದೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘‘ಟಾಕ್ಸಿಕ್’ ಪ್ರೇಮಕತೆ ಸಂಪೂರ್ಣ ಭಿನ್ನ’: ಕತೆಯ ಬಗ್ಗೆ ನಾಯಕಿ ಕಿಯಾರಾ ಮಾತು

ಯಶ್ (Yash) ನಟನೆಯ ‘ಟಾಕ್ಸಿಕ್’ ಪ್ರಸ್ತುತ ಭಾರತೀಯ ಚಿತ್ರರಂಗದ ಬಲು ನಿರೀಕ್ಷೆ ಸಿನಿಮಾ. ಈಗಾಗಲೇ ಸಿನಿಮಾದ ಬಿಡುಗಡೆ ದಿನಾಂಕ ಎರಡು ಬಾರಿ ಬದಲಾಗಿದೆ. ಸಿನಿಮಾದ ಬಿಡುಗಡೆ ಯಾವಾಗ ಎಂಬ ಬಗ್ಗೆ ಖಾತ್ರಿ ಸಹ ಇಲ್ಲ. ಯಶ್, ‘ಟಾಕ್ಸಿಕ್’ ಸಿನಿಮಾವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನದಲ್ಲಿದ್ದಾರೆ. ಇವುಗಳ ನಡುವೆ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿರುವ ನಾಯಕಿಯರು, ಕೆಲ ತಂತ್ರಜ್ಞರು ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಕೆಲವು ಕಡೆ ಮಾತನಾಡಿದ್ದು, ಎಲ್ಲರೂ ಸಹ ಬಹಳ ಹೆಮ್ಮೆಯಿಂದ ಸಿನಿಮಾದ ಬಗ್ಗೆ ಹೇಳಿಕೊಂಡಿದ್ದಾರೆ. ಅದರಲ್ಲೂ ಸಿನಿಮಾದ ಕತೆಯ ಭಿನ್ನತೆ ಬಗ್ಗೆ ಆಡಿರುವ ಮಾತುಗಳು ಕತೆಯ ಬಗ್ಗೆ ಹೆಚ್ಚು ಕುತೂಹಲ ಮೂಡಿಸುತ್ತಿವೆ. ಇದೀಗ ಸಿನಿಮಾದ ನಾಯಕಿ ಕಿಯಾರಾ ಅಡ್ವಾಣಿ, ‘ಟಾಕ್ಸಿಕ್’ ಕತೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಟಾಕ್ಸಿಕ್’ ಸಿನಿಮಾನಲ್ಲಿ ಗಂಡು-ಹೆಣ್ಣಿನ ಸಂಬಂಧವನ್ನು ಬೇರೆ ರೀತಿಯ ಕೋನದಲ್ಲಿ ನೋಡಲಾಗಿದೆ. ಗಂಡು ಮತ್ತು ಹೆಣ್ಣಿನ ನಡುವಿನ ಸಾಂಪ್ರದಾಯಿಕ ಸಮೀಕರಣದ ಬದಲಿಗೆ ಆ ಸಂಬಂಧವನ್ನು ಭಿನ್ನವಾದ ಬಗೆಯಲ್ಲಿ ನೋಡಲಾಗಿದೆ. ಗಂಡು-ಹೆಣ್ಣಿನ ನಡುವಿನ ಪ್ರೀತಿಯನ್ನು ವಿಭಿನ್ನವಾದ ದೃಷ್ಟಿಕೋನದಿಂದ ಹೇಳಲಾಗಿದೆ ಎಂದು ಕಿಯಾರಾ ಹೇಳಿದ್ದಾರೆ.

ಬಾಂಬೆ ಟೈಮ್ಸ್ ಜೊತೆಗಿನ ಸಂದರ್ಶನದಲ್ಲಿ ಚಿತ್ರದ ಬಗ್ಗೆ ಮಾತನಾಡಿದ ಕಿಯಾರಾ ಅಡ್ವಾಣಿ, ‘ಟಾಕ್ಸಿಕ್ ಸಿನಿಮಾವು ವಿಶಿಷ್ಟವಾದ ಭಾವನಾತ್ಮಕ ಲೋಕವನ್ನು ಹೊಂದಿದೆ. ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಮೊದಲು ತಮಗೆ ಕಥೆಯನ್ನು ವಿವರಿಸಿದಾಗ, ಅದು ತಮ್ಮ ಗ್ರಹಿಕೆಗೆ ಬರಲು ತುಸು ಸಮಯ ಬೇಕಾಯ್ತು, ಅಷ್ಟು ಭಿನ್ನವಾದ ಕತಾ ಎಳೆಯನ್ನು ಆ ಸಿನಿಮಾ ಹೊಂದಿದೆ ಎಂದು ಕಿಯಾರಾ ಹೇಳಿದ್ದಾರೆ.

ಇದನ್ನೂ ಓದಿ:‘ಟಾಕ್ಸಿಕ್ ಸಿನಿಮಾದ ಮಹಿಳಾ ಪಾತ್ರಗಳು ಸಖತ್ ಬೋಲ್ಡ್’: ಕೌತುಕ ಹೆಚ್ಚಿಸಿದ ಯಶ್

‘ಟಾಕ್ಸಿಕ್’ ಸಿನಿಮಾ ನೋಡಿದ ಮೇಲೆ, ಗಂಡು ಮತ್ತು ಹೆಣ್ಣಿನ ನಡುವಿನ ಸಂಬಂಧವನ್ನು ನೋಡುವ ದೃಷ್ಟಿಕೋನವೇ ಸಂಪೂರ್ಣವಾಗಿ ಬದಲಾಗುತ್ತದೆ ಎಂದು ನಾನು ಭಾವಿಸುತ್ತೇನೆ. ನಿಜ ಹೇಳಬೇಕೆಂದರೆ, ಗೀತು ಮೋಹನ್‌ದಾಸ್ ಅವರು ನನಗೆ ಕಥೆಯನ್ನು ವಿವರಿಸಿದಾಗ, ‘ಸರಿ, ಇದು ಕೂಡ ಸಹಜವೇ’ ಎಂದು ಅರ್ಥಮಾಡಿಕೊಳ್ಳಲು ನನಗೇ ಸ್ವಲ್ಪ ಸಮಯ ಹಿಡಿಯಿತು. ಕತೆ ಸ್ವಲ್ಪ ‘ಗ್ರೇ’ (ಹಿಂಸಾತ್ಮಕ ಅಥವಾ ಹೆಚ್ಚು ಗ್ಲಾಮರಸ್) ಆಗಿರಬಹುದು, ಎಲ್ಲರಿಗೂ ಗೊತ್ತಿರುವ ಎಂದಿನ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಇಲ್ಲದೇ ಇರಬಹುದು, ಆದರೆ ಪ್ರೀತಿಯಲ್ಲಿ ಒಂದು ರೀತಿಯ ಲಿಬರೇಷನ್ (ವಿಮೋಚನೆ) ಇರುತ್ತದೆ, ಅದನ್ನು ಈ ಸಿನಿಮಾ ತೋರಿಸಿದೆ’ ಎಂದು ಕಿಯಾರಾ ಹೇಳಿದ್ದಾರೆ.

ಚಿತ್ರದಲ್ಲಿ ತಮ್ಮ ‘ನಾಡಿಯಾ’ ಎಂಬ ಪಾತ್ರದ ಬಗ್ಗೆ ಮಾತನಾಡಿದ ಅವರು, ಆ ಪಾತ್ರದ ಮನಸ್ಥಿತಿ, ಭಾವನಾತ್ಮಕ ಜಟಿಲತೆ ನನ್ನನ್ನು ಕಾಡಿತು. ನಾಡಿಯಾ ಪಾತ್ರದ ಕಥೆಯನ್ನು ನನಗೆ ಹೇಳಿದಾಗ ನಾನು ಆಶ್ಚರ್ಯಚಕಿತಳಾದೆ. ನನ್ನ ಸ್ವಂತ ಆಲೋಚನೆಗಳಲ್ಲಿ ಅಷ್ಟು ಮುಕ್ತವಾಗಿ ಮತ್ತು ಯಾವುದೇ ಬಂಧನಗಳಿಲ್ಲದ ವ್ಯಕ್ತಿಯಾಗಿ ನನಗೆ ಇರಲು ಸಾಧ್ಯವಾಗಿದ್ದಿದ್ದರೆ ಎಷ್ಟು ಒಳ್ಳೆಯದಿತ್ತು ಎಂದು ನನಗೆ ಹಲವು ಬಾರಿ ಅನಿಸಿದೆ’ ಎಂದು ಅವರು ಹೇಳಿದ್ದಾರೆ.

ಈ ಚಿತ್ರದಲ್ಲಿ ಕೆಲಸ ಮಾಡುವಾಗ ಎದುರಾದ ಸವಾಲುಗಳನ್ನು ನೆನೆದ ಕಿಯಾರಾ, ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. ತಮಗೆ ಕನ್ನಡ ಭಾಷೆ ಬರದೇ ಇದ್ದರೂ, ಪ್ರತಿ ದೃಶ್ಯವನ್ನು ಮೊದಲು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಿ ನಂತರ ಕನ್ನಡದಲ್ಲಿ ಶೂಟ್ ಮಾಡಲಾಗುತ್ತಿತ್ತು ಮತ್ತು ಶೂಟಿಂಗ್‌ಗೂ ಮುನ್ನಾ ದಿನ ರಾತ್ರಿ ಅವರು ಸಂಭಾಷಣೆಗಳನ್ನು ಕಂಠಪಾಠ ಮಾಡುತ್ತಿದ್ದುದಾಗಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

40 ಸಾವಿರ ರೂ. ಸಂಬಳ ಇದ್ದಾಗ ಮನೆ ನಡೆಸಲು ಕಷ್ಟಪಟ್ಟಿದ್ದ ಉರ್ಫಿ ಜಾವೇದ್; ಈಗ ಎಷ್ಟು?

ತಮ್ಮ ವಿಭಿನ್ನ ಹಾಗೂ ವಿಚಿತ್ರ ಫ್ಯಾಷನ್ ಸೆನ್ಸ್ ಮೂಲಕವೇ ಇಂಟರ್ನೆಟ್ ಜಗತ್ತಿನಲ್ಲಿ ಸದಾ ಸಂಚಲನ ಮೂಡಿಸುವ ಉರ್ಫಿ ಜಾವೇದ್ (Uorfi Javed), ಇಂದು ದೇಶದ ಅತ್ಯಂತ ಜನಪ್ರಿಯ ಸೋಶಿಯಲ್ ಮೀಡಿಯಾ ಸೆನ್ಸೇಷನ್ ಆಗಿ ಬೆಳೆದಿದ್ದಾರೆ. ಆದರೆ, ಅವರ ಜೀವನದಲ್ಲಿ ಕೂಡ ಕಷ್ಟದ ದಿನಗಳು ಇದ್ದವು. ಇತ್ತೀಚೆಗೆ ನಟಿ ಸೋಹಾ ಅಲಿ ಖಾನ್ ಅವರ ಪಾಡ್‌ಕಾಸ್ಟ್​ನಲ್ಲಿ ಭಾಗವಹಿಸಿದ್ದ ಉರ್ಫಿ, ತಾವು ಟಿವಿ ಇಂಡಸ್ಟ್ರಿಯಲ್ಲಿ ಎದುರಿಸಿದ ಅವಮಾನ ಹಾಗೂ ಕಷ್ಟದ ದಿನಗಳ ಬಗ್ಗೆ ಅತ್ಯಂತ ಮುಕ್ತವಾಗಿ ಮಾತನಾಡಿದ್ದಾರೆ. 40 ಸಾವಿರ ಸಂಬಳ ಇದ್ದಾಗ ಜೀವನ ಕಷ್ಟವಾಗಿತ್ತು ಎಂದು ಹೇಳಿದ್ದಾರೆ. ಆದರೆ ಫೇಮಸ್ ಆದ ನಂತರ ಅವರು ತಿಂಗಳಿಗೆ 2 ಲಕ್ಷ ರೂಪಾಯಿ ಸಂಪಾದಿಸುವ ಮಟ್ಟಕ್ಕೆ ಬೆಳೆದರು.

ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡ ಉರ್ಫಿ, ‘ನನ್ನ ತಂದೆಯ ಕಿರುಕುಳ ತಾಳಲಾರದೆ ನಾನು ಮನೆಯಿಂದ ಓಡಿಬಂದಿದ್ದೆ. ಬದುಕಲು ದೆಹಲಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಿದೆ, ಮನೆಪಾಠ ಹೇಳಿಕೊಟ್ಟೆ. ಆದರೆ ನನ್ನ ಗುರಿ ಮುಂಬೈ ತಲುಪುವುದಾಗಿತ್ತು. ಮುಂಬೈಗೆ ಬಂದರೆ ಐದು ವರ್ಷದಲ್ಲಿ ಸ್ಟಾರ್ ಆಗಬಹುದು, ಕಾರು, ಬಂಗಲೆ ತಾನಾಗಿಯೇ ಬರುತ್ತದೆ ಅಂದುಕೊಂಡಿದ್ದೆ. ಆದರೆ ರಿಯಾಲಿಟಿ ತುಂಬಾನೇ ಭಿನ್ನವಾಗಿತ್ತು’ ಎಂದಿದ್ದಾರೆ.

ಬಾಲಿವುಡ್ ಸಿನಿಮಾಗಳಿಗೆ ಆಡಿಷನ್ ನೀಡಿದಾಗ ಗಾಡ್‌ಫಾದರ್ ಅಥವಾ ಬ್ಯಾಕ್‌ಗ್ರೌಂಡ್ ಇಲ್ಲದೆ ಇಲ್ಲಿ ಕೆಲಸ ಸಿಗುವುದು ಅಸಾಧ್ಯ ಎಂಬುದು ಅವರಿಗೆ ಅರ್ಥವಾಯಿತು. ‘ನನ್ನ ಸುಂದರ ಮುಖ ನೋಡಿ ಯಾರೂ ರಿಜೆಕ್ಟ್ ಮಾಡಲ್ಲ ಅಂದುಕೊಂಡು ಟಿವಿ ಸೀರಿಯಲ್‌ಗಳ ಆಡಿಷನ್ ನೀಡಲು ಪ್ರಾರಂಭಿಸಿದೆ. ಆದರೆ ನನಗೆ ಸಿಕ್ಕಿದ್ದು ಕೇವಲ ಪೋಷಕ ಪಾತ್ರಗಳು ಮಾತ್ರ’ ಎಂದು ಉರ್ಫಿ ಹೇಳಿದ್ದಾರೆ.

‘ಧಾರಾವಾಹಿ ಲೋಕದ ಅನುಭವ ಅತ್ಯಂತ ಕೆಟ್ಟದಾಗಿತ್ತು. ನೀವು ಮುಖ್ಯ ಭೂಮಿಕೆಯಲ್ಲಿ ಇಲ್ಲದಿದ್ದರೆ ಅಥವಾ ಸ್ಟಾರ್ ಆಗದಿದ್ದರೆ ಸೆಟ್‌ನಲ್ಲಿ ನಿಮ್ಮನ್ನು ಮನುಷ್ಯರೆಂದೇ ಪರಿಗಣಿಸುವುದಿಲ್ಲ. ಸೈಡ್ ಕ್ಯಾರೆಕ್ಟರ್ ಮಾಡುವವರಿಗೆ ಅಲ್ಲಿ ಒಳ್ಳೆಯ ಮರ್ಯಾದೆ ಸಿಗುವುದಿಲ್ಲ. ನನಗೆ ಅಲ್ಲಿ ನೆಮ್ಮದಿ ಇರಲಿಲ್ಲ, ನಾನು ಇದಕ್ಕಿಂತ ದೊಡ್ಡ ಸಾಧನೆ ಮಾಡಲು ಹುಟ್ಟಿದವಳು ಎಂಬ ನಂಬಿಕೆ ನನಗಿತ್ತು’ ಎಂದು ಅವರು ಹೇಳಿದ್ದಾರೆ.

‘ಆದರೆ ಮುಂಬೈನಂತಹ ದುಬಾರಿ ನಗರದಲ್ಲಿ ಬದುಕಲು, ಮನೆ ಬಾಡಿಗೆ ಕಟ್ಟಲು ಹಣ ಬೇಕಿತ್ತು. ಹಾಗಾಗಿ ತಿಂಗಳಿಗೆ ಸಿಗುತ್ತಿದ್ದ 40 ಸಾವಿರ ರೂಪಾಯಿಗಾಗಿ ಮನಸ್ಸಿಲ್ಲದಿದ್ದರೂ ಟಿವಿ ಧಾರಾವಾಹಿಗಳಲ್ಲಿ ನಟಿಸುವುದನ್ನು ಮುಂದುವರಿಸಿದೆ. ಆದರೆ ನನಗೆ ತೃಪ್ತಿ ಇರಲಿಲ್ಲ, ನಾನು ಯಾವಾಗಲೂ ಜನಪ್ರಿಯತೆಯಲ್ಲಿ ಇರಬೇಕೆಂದು ಬಯಸಿದ್ದೆ’ ಎಂದಿದ್ದಾರೆ ಉರ್ಫಿ ಜಾವೇದ್.

ಇದನ್ನೂ ಓದಿ: ತುಟಿ ಸೌಂದರ್ಯ ಹೆಚ್ಚಿಸಿಕೊಳ್ಳಲು ಹೋಗಿ ಇಂಥ ಸ್ಥಿತಿಗೆ ಬಂದ ಉರ್ಫಿ ಜಾವೇದ್

ಫ್ಯಾಷನ್‌ನಲ್ಲಿ ಆಸಕ್ತಿ ಇದ್ದರೂ ಉರ್ಫಿ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಸೋಶಿಯಲ್ ಮೀಡಿಯಾ ಬೆಳೆದಂತೆ ತಾವೇ ವಿನ್ಯಾಸಗೊಳಿಸಿದ ಉಡುಪುಗಳನ್ನು ಧರಿಸಿ ವಿಡಿಯೋ ಮಾಡಲು ಆರಂಭಿಸಿದರು. ಈ ನಡುವೆ ಅವರಿಗೆ ‘ಬಿಗ್ ಬಾಸ್ ಒಟಿಟಿ’ ಶೋನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಅಲ್ಲಿ ಅವರು ಕಸದ ಚೀಲದಿಂದ ಮಾಡಿದ ಉಡುಪನ್ನು ಧರಿಸಿದ್ದು ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಯಿತು. ಅದೇ ಅವರ ಜೀವನದ ಬಿಗ್ ಟರ್ನಿಂಗ್ ಪಾಯಿಂಟ್.

ತಮ್ಮ ಸೋಶಿಯಲ್ ಮೀಡಿಯಾ ಇಮೇಜ್ ಬಗ್ಗೆ ಮಾತನಾಡಿದ ಉರ್ಫಿ, ‘ನಾನು ಯಾವುದೇ ಪ್ಲಾನಿಂಗ್ ಮಾಡಿ ಈ ಇಮೇಜ್ ಕ್ರಿಯೇಟ್ ಮಾಡಿಲ್ಲ. ಎಲ್ಲವೂ ತಾನಾಗಿಯೇ ನಡೆದುಹೋಯಿತು. ಒಂದು ಕಾಲದಲ್ಲಿ ಟಿವಿ ಸೀರಿಯಲ್‌ಗಳಲ್ಲಿ ತಿಂಗಳಿಗೆ 40 ಸಾವಿರ ರೂಪಾಯಿ ಗಳಿಸಲು ಒದ್ದಾಡುತ್ತಿದ್ದ ನಾನು, ಇಂದು ಸೋಶಿಯಲ್ ಮೀಡಿಯಾ ಬ್ರ್ಯಾಂಡ್ ಕೊಲಾಬರೇಷನ್‌ಗಳ ಮೂಲಕ ತಿಂಗಳಿಗೆ ಕನಿಷ್ಠ 2 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸುತ್ತಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version