IND vs ENG: ಒಂದೇ ಓವರ್​ನಲ್ಲಿ ಆರಂಭಿಕರಿಬ್ಬರನ್ನು ಪೆವಿಲಿಯನ್​ಗಟ್ಟಿದ ಬ್ರಾರ್ – Kannada News | Gurnoor Brar’s Double Strike: Young Pacer Dismisses England Openers in 1st ODI

ಬರ್ಮಿಂಗ್ಹ್ಯಾಮ್​ನ ಎಡ್ಜ್​ಬಾಸ್ಟನ್​ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್‌ (India vs England) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ವೇಗಿ ಗುರ್ನೂರ್ ಬ್ರಾರ್ (Gurnoor Brar) ಒಂದೇ ಓವರ್​ನಲ್ಲಿ ಇಂಗ್ಲೆಂಡ್‌ ತಂಡದ ಇಬ್ಬರು ಆರಂಭಿಕರನ್ನು ಔಟ್ ಮಾಡಿದರು. ತಮ್ಮ ಖೋಟಾದ ಮೊದಲ ಎರಡು ಓವರ್​ಗಳಲ್ಲಿ ದುಬಾರಿಯಾಗಿದ್ದ ಬ್ರಾರ್, ಮೂರನೇ ಓವರ್​ನಲ್ಲಿ ಜಾಕೋಬ್ ಬೆಥೆಲ್ ಹಾಗೂ ಬೆನ್ ಡಕೆಟ್ ಅವರನ್ನು ಪೆವಿಲಿಯನ್​ಗಟ್ಟಿದರು. ಅರ್ಧಶತಕದ ಜೊತೆಯಾಟದ ಮೂಲಕ ಭಾರತ ತಂಡಕ್ಕೆ ಕಂಟಕರಾಗಿದ್ದ ಇವರಿಬ್ಬರನ್ನು ಔಟ್ ಮಾಡುವ ಮೂಲಕ ಬ್ರಾರ್ ತಂಡವನ್ನು ನಿರಾಳಗೊಳಿಸಿದರು.

ಇಂಗ್ಲೆಂಡ್​ಗೆ ಉತ್ತಮ ಆರಂಭ

ಎಡ್ಜ್​ಬಾಸ್ಟನ್​ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್​ಗೆ ವೇಗದ ಆರಂಭ ಸಿಗದಿದ್ದರೂ ಉತ್ತಮ ಆರಂಭ ಸಿಕ್ಕಿತು. ಆರಂಭಿಕರಾದ ಬೆಥೆಲ್ ಹಾಗೂ ಡಕೆಟ್ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದರು. ಇತ್ತ ಜಸ್ಪ್ರೀತ್ ಬುಮ್ರಾ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣ ಇಂಗ್ಲೆಂಡ್‌ ಆರಂಭಿಕರಿಗೆ ಸುಲಭವಾಗಿ ರನ್ ಕಲೆಹಾಕಲು ಬಿಡಲಿಲ್ಲ. ಈ ಒತ್ತಡದ ನಡುವೆಯೂ ಇಂಗ್ಲೆಂಡ್‌ ಆರಂಭಿಕರು ವಿಕೆಟ್ ಬಿಟ್ಟುಕೊಡಲಿಲ್ಲ. ಒಂದೆಡೆ ಬೆಥೆಲ್ ರನ್ ಕಲೆಹಾಕಲು ತಿಣುಕಾಡಿದರೆ, ಮತ್ತೊಂದೆಡೆ ಡಕೆಟ್ ಕೆಟ್ಟ ಎಸೆತಗಳನ್ನು ಸರಿಯಾಗಿ ದಂಡಿಸಿದರು. ಅದರಲ್ಲೂ ಬ್ರಾರ್ ಬೌಲಿಂಗ್​ನಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳ ಮಳೆಗರೆದರು.

ಬೆಥೆಲ್​ ಬಲಿ ಪಡೆದ ಬ್ರಾರ್

ಬ್ರಾರ್ ಎರಡು ಓವರ್​ಗಳಲ್ಲಿ ದುಬಾರಿಯಾದ ಕಾರಣ ಇಂಗ್ಲೆಂಡ್‌ 10 ಓವರ್​ಗಳಲ್ಲಿ 50 ರನ್​ಗಳ ಗಡಿ ದಾಟಿತು. ಇವರಿಬ್ಬರ ಜೊತೆಯಾಟ ಟೀಂ ಇಂಡಿಯಾಕ್ಕೆ ತಲೆನೋವು ತಂದಿತ್ತು. ಆದರೆ 13ನೇ ಓವರ್​ನಲ್ಲಿ ಮತ್ತೆ ದಾಳಿಗಿಳಿದ ಬ್ರಾರ್, ಈ ಓವರ್​ನ ಎರಡನೇ ಎಸೆತದಲ್ಲಿ ಬೆಥೆಲ್ ಅವರ ವಿಕೆಟ್ ಪಡೆದರು. ಬೆಥೆಲ್ ದೊಡ್ಡ ಶಾಟ್ ಆಡುವ ಯತ್ನದಲ್ಲಿ ವಾಷಿಂಗ್ಟನ್ ಸುಂದರ್​ಗೆ ಕ್ಯಾಚ್ ನೀಡಿದರು. ಇನ್ನು ಅದೇ ಓವರ್​ನ 4ನೇ ಎಸೆತದಲ್ಲಿ ಬ್ರಾರ್, ಡಕೆಟ್​ ಅವರನ್ನು ಪೆವಿಲಿಯನ್​ಗಟ್ಟಿದರು.

IND vs ENG: ಏಕದಿನ ಸರಣಿಯಲ್ಲಿ 7 ದಾಖಲೆಗಳ ಮೇಲೆ ಕಣ್ಣಿಟ್ಟ ಕಿಂಗ್ ಕೊಹ್ಲಿ

ಅದ್ಭುತ ಕ್ಯಾಚ್ ಹಿಡಿದ ಬುಮ್ರಾ

ಡಕೆಟ್ ಥರ್ಡ್​ ಮ್ಯಾನ್​ನಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಅಲ್ಲೆ ಇದ್ದ ಬುಮ್ರಾ ಸಮಯ ಪ್ರಜ್ಞೆ ಮೆರೆದು ಅದ್ಭುತ ಕ್ಯಾಚ್ ತೆಗೆದುಕೊಂಡರು. ಕ್ಯಾಚ್ ತೆಗೆದುಕೊಳ್ಳುವ ಯತ್ನದಲ್ಲಿ ತಾನು ಬೌಂಡರಿ ಗೆರೆಯನ್ನು ದಾಟುತ್ತಿರುವುದನ್ನು ಗಮನಿಸಿದ ಬುಮ್ರಾ, ಚೆಂಡನ್ನು ಬೌಂಡರಿ ಒಳಗೆ ಹಿಡಿದು ನಂತರ ಅದನ್ನ ಮೇಲಕ್ಕೆ ಎಸೆದು ಕ್ಯಾಚ್ ಅನ್ನು ಪೂರ್ಣಗೊಳಿಸಿದರು. ಹೀಗಾಗಿ ಇಂಗ್ಲೆಂಡ್‌ ಕೇವಲ 2 ರನ್​ಗಳ ಅಂತರದಲ್ಲಿ ಎರಡು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:59 pm, Tue, 14 July 26

Source link

ಪುನೀತ್, ದರ್ಶನ್ ಜೀವನದಲ್ಲಿ ಆ ಎರಡು ಘಟನೆ ನಡೆಯಬಾರದಿತ್ತು: ಡಾಲಿ ಧನಂಜಯ್ – Kannada News | Daali Dhananjaya talks about Puneeth Rajkumar and Darshan in special interview

ನಟನಾಗಿ, ನಿರ್ಮಾಪಕನಾಗಿ ಡಾಲಿ ಧನಂಜಯ ಅವರು ಕನ್ನಡ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸದ್ಯಕ್ಕೆ ಚಂದನವನ ಕಷ್ಟದಲ್ಲಿದೆ. ಪುನೀತ್ ರಾಜ್​ಕುಮಾರ್ ನಿಧನರಾಗಿದ್ದು ಮತ್ತು ದರ್ಶನ್ ಅವರು ಜೈಲು ಸೇರಿದ್ದು ಚಿತ್ರರಂಗಕ್ಕೆ ದೊಡ್ಡ ಪೆಟ್ಟುಕೊಟ್ಟಂತೆ ಆಗಿದೆ. ಆ ಬಗ್ಗೆ ಡಾಲಿ ಧನಂಜಯ (Daali Dhananjaya) ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಆ ಎರಡು ಘಟನೆಗಳು ದೊಡ್ಡ ಪೆಟ್ಟುಗಳು. ಪುನೀತ್ ರಾಜ್​ಕುಮಾರ್ ಮತ್ತು ದರ್ಶನ್ ಅವರು ಚಿತ್ರರಂಗದ ದೊಡ್ಡ ಮರಗಳು. ಒಂದು ವೇಳೆ ಟೈಮ್ ಟ್ರಾವೆಲ್ ಮಾಡುವ ಅವಕಾಶ ನನಗೆ ಸಿಕ್ಕರೆ ಆ ಎರಡು ಘಟನೆಗಳನ್ನು ನಾನು ತಡೆಯುತ್ತೇನೆ ಅಂತ ಸ್ನೇಹಿತರ ಬಳಿ ಆಗಾಗ ಹೇಳುತ್ತಿರುತ್ತೇನೆ. ಆ ಎರಡು ಘಟನೆಗಳು ಆಗಬಾರದಾಗಿತ್ತು. ಕೆಲವೊಂದನ್ನು ನಾವು ಬದಲಾಯಿಸೋಕೆ ಆಗಲ್ಲ. ಮುಂದಕ್ಕೆ ಏನು ಮಾಡಬಹುದು ಎಂಬುದು ಯೋಚನೆ ಮಾಡಬೇಕು’ ಎಂದು ಡಾಲಿ ಧನಂಜಯ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Weather Forecast: ಮುಂದಿನ 5 ದಿನ ಕರಾವಳಿ, ಮಲೆನಾಡಿನಲ್ಲಿ ಮುಂಗಾರು ಮಳೆ ಚುರುಕು; ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ – Kannada News | Karnataka Monsoon Update: Rain in Coastal, 40 km/h Wind Alert for Bengaluru and 12 Districts

ಬೆಂಗಳೂರು, ಜು.14: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಚುರುಕಾಗಲಿದ್ದು, ಕರಾವಳಿ ಹಾಗೂ ಒಳನಾಡಿನ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಜಿಲ್ಲಾವಾರು ಮುನ್ಸೂಚನೆ ಹಾಗೂ ಗಾಳಿಯ ವೇಗದ ಎಚ್ಚರಿಕೆಯನ್ನು ನೀಡಿದೆ.

ಮುಂದಿನ ಮೂರು ದಿನಗಳ ಕಾಲ ರಾಜ್ಯದಾದ್ಯಂತ ಮೋಡ ಕವಿದ ವಾತಾವರಣ ಇರಲಿದ್ದು, ಗಾಳಿಯಲ್ಲಿ ಸಾಪೇಕ್ಷ ಆರ್ದ್ರತೆ ಗರಿಷ್ಠ ಮಟ್ಟದಲ್ಲಿರಲಿದೆ. ಇದರಿಂದಾಗಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ತಾಪಮಾನದಲ್ಲಿ ಕೊಂಚ ಇಳಿಕೆಯಾಗಲಿದ್ದು, ತಂಪಾದ ಗಾಳಿ ಬೀಸಲಿದೆ.

ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಾರುತಗಳು ಸಕ್ರಿಯವಾಗಿದ್ದು, ಮುಂದಿನ ದಿನಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಳೆಯೊಂದಿಗೆ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ನಿರಂತರ ಬಲವಾದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಕರಾವಳಿ ಭಾಗದ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ದಕ್ಷಿಣ ಒಳನಾಡಿನ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿಯಲಿದ್ದು, ಬಯಲು ಸೀಮೆ ಜಿಲ್ಲೆಗಳಲ್ಲಿ ಭಾರಿ ವೇಗದ ಗಾಳಿ ಬೀಸಲಿದೆ. ಕೊಡಗು ಮತ್ತು ಹಾಸನ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮುಂಗಾರು ಮಳೆ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಹಾಗೂ ಉತ್ತರ ಒಳನಾಡಿನ ಗಡಿ ಭಾಗದ ಕೆಳಗಿನ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಬಲವಾದ ಗಾಳಿ ಬೀಸಲಿದೆ ಹಾಗೂ ವಾತಾವರಣದಲ್ಲಿ ಸ್ವಲ್ಒ ಬದಲಾವಣೆ ಆಗಲಿದೆ.

ಇದನ್ನೂ ಓದಿ: ನಾಡಗೀತೆಯಲ್ಲಿ ಮಹತ್ವದ ಬದಲಾವಣೆ: ‘ಜೈ ಭಾರತ ಜನನಿಯ ತನುಜಾತೆ’ಯಲ್ಲಿ ‘ಬೌದ್ಧ ಧರ್ಮ’ದ ಹೆಸರು ಸೇರ್ಪಡೆಗೆ ಸಮಿತಿ ಸಲಹೆ

ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸದ್ಯ ಮೋಡ ಕವಿದ ವಾತಾವರಣ ಇರಲಿದ್ದು, ತಾಪಮಾನದಲ್ಲಿ ತಂಪಾದ ಏರಿಳಿತ ಇರಲಿದೆ. ಕೆಲವು ಜಿಲ್ಲೆಗಳಲ್ಲಿ ಒಣಹವೆ ಇದ್ದರೂ ಸಂಜೆ ಅಥವಾ ರಾತ್ರಿ ವೇಳೆಗೆ ಗಾಳಿಯ ವೇಗ ಹೆಚ್ಚಾಗುವ ಸಾಧ್ಯತೆ ಇದೆ. ಮುಂದಿನ 3 ರಿಂದ 5 ದಿನಗಳ ಕಾಲ ಬಿರುಗಾಳಿಯ ತೀವ್ರತೆ ಹೆಚ್ಚಿರುವುದರಿಂದ ಬೆಳೆಗಳು ಹಾಗೂ ಬಾಳೆ, ಅಡಿಕೆ ಬೆಳೆಗಾರರು ಮುನ್ನೆಚ್ಚರಿಕೆ ವಹಿಸಬೇಕು. ಗಾಳಿಯ ದಿಕ್ಕು ಪಶ್ಚಿಮ ಹಾಗೂ ನೈಋತ್ಯ ದಿಕ್ಕಿನಿಂದ ಇರಲಿದ್ದು, ತೇವಾಂಶದ ಪ್ರಮಾಣ ಹೆಚ್ಚಿರಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:54 pm, Tue, 14 July 26

Source link

ಶಾಲೆ ಆರಂಭವಾಗಿ ತಿಂಗಳು ಕಳೆದರೂ ಗಡಿ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ವಿತರಣೆಯಾಗದ ಪಠ್ಯಪುಸ್ತಕ: ಸರ್ಕಾರದ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರೋಶ – Kannada News | Textbook Crisis: Over 10,000 Kannada Medium Students in Border Villages Await Books Even After a Month of School Reopening

ಗಡಿ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ವಿತರಣೆಯಾಗದ ಪಠ್ಯಪುಸ್ತಕ

ರಾಯಚೂರು, ಜುಲೈ 14: ಶಾಲೆಗಳು ಆರಂಭವಾಗಿ ತಿಂಗಳಿಗೂ ಹೆಚ್ಚು ಸಮಯ ಕಳೆದಿದ್ದರೂ, ಕರ್ನಾಟಕ–ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಗಡಿ ಭಾಗಗಳಲ್ಲಿರುವ 10 ಸಾವಿರಕ್ಕೂ ಹೆಚ್ಚು ಕನ್ನಡ ಮಾಧ್ಯಮದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಇನ್ನೂ ಎಲ್ಲಾ ವಿಷಯಗಳ ಕನ್ನಡ ಪಠ್ಯಪುಸ್ತಕಗಳು ಲಭ್ಯವಾಗಿಲ್ಲ. ಒಟ್ಟು 16 ಪ್ರಾಥಮಿಕ ಹಾಗೂ 17 ಪ್ರೌಢಶಾಲೆಗಳಿಗೆ ಇನ್ನೂ ಪಠ್ಯಪುಸ್ತಕಗಳು ತಲುಪಬೇಕಿದ್ದು, ಸರ್ಕಾರದ ನಿರ್ಲಕ್ಷ್ಯಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಡಿ ಭಾಗದ ಹಲವು ಶಾಲೆಗಳ ಶಿಕ್ಷಕರು ಒಂದು ಪುಸ್ತಕವನ್ನು 7–8 ವಿದ್ಯಾರ್ಥಿಗಳು ಹಂಚಿಕೊಂಡು ಓದುವಂತೆ ವ್ಯವಸ್ಥೆ ಮಾಡುತ್ತಿದ್ದಾರೆ. ಹಿಂದಿನ ವರ್ಷದ ವಿದ್ಯಾರ್ಥಿಗಳಿಂದ ಹಳೆಯ ಪುಸ್ತಕಗಳನ್ನು ಸಂಗ್ರಹಿಸಿ ಕೊರತೆಯನ್ನು ನೀಗಿಸುವ ಪ್ರಯತ್ನ ನಡೆಯುತ್ತಿದೆ. ಮೇ ತಿಂಗಳಲ್ಲೇ ಪಠ್ಯಪುಸ್ತಕಗಳ ಬೇಡಿಕೆಯನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದರೂ ಇನ್ನೂ ಪುಸ್ತಕಗಳು ಬಂದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಸ್ಟೂಡೆಂಟ್ ಯೂನಿಯನ್ ‌ಎಲೆಕ್ಷನ್ ಮತ್ತೆ ಜಾರಿ ಮಾಡುವುದಾಗಿ ಹೇಳಿ ಸೈಲೆಂಟ್ ಆದ ಸರ್ಕಾರ; ಕಾರಣವೇನು?

ಕೃಷ್ಣ ಮಂಡಲ, ಮಗನೂರು, ಕುನ್ಸಗಿ, ಹಿಂದುಪುರ, ಗುಲ್ಯಂ, ಹೊಳಗುಂದ, ಹಸನಾಳ, ಬಡಿನೆಹಾಳ, ಕುಂಟನಾಳ, ಸುಳೇಕೆರೆ, ಬಾಪುರ, ದೊಡ್ಡಹರಿವಾಣ, ನಡಿಚಾಗಿ, ರೌದೂರು, ಆದೋನಿ, ಕೌತಾಳಂ, ಹಳಹರವಿ ಸೇರಿದಂತೆ ಹಲವು ಗಡಿ ಗ್ರಾಮಗಳಲ್ಲಿ ಶತಮಾನಕ್ಕೂ ಹೆಚ್ಚು ಕಾಲದಿಂದ ಕನ್ನಡ ಮಾಧ್ಯಮ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಸರ್ಕಾರದ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ಬಿಟ್ಟು ತೆಲುಗು ಹಾಗೂ ಇಂಗ್ಲಿಷ್ ಮಾಧ್ಯಮದತ್ತ ಮುಖ ಮಾಡುತ್ತಿದ್ದಾರೆ ಎಂದು ಹೋರಾಟಗಾರ ಬಸವರಾಜ ಕಲಸಾ ಹೇಳಿದ್ದಾರೆ. ಒಂದೊಮ್ಮೆ ಕರ್ನಾಟಕದ ಶಾಲೆಗಳಲ್ಲಿ ಓದಲು ಮಕ್ಕಳನ್ನು ಕಳುಹಿಸಿದರೂ, ಅವರು ಕರ್ನಾಟಕದ ನಿವಾಸಿಗಳಲ್ಲ ಎಂಬ ಕಾರಣ ನೀಡಿ ವಸತಿ ನಿಲಯಗಳಲ್ಲಿ ಪ್ರವೇಶ ನಿರಾಕರಿಸಲಾಗುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ರಾಯಚೂರು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಜಿ., ಪಠ್ಯಪುಸ್ತಕಗಳ ಬೇಡಿಕೆಯನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದೆ. ಹಂತ ಹಂತವಾಗಿ ಪುಸ್ತಕಗಳು ಬರುತ್ತಿದ್ದು, ನೆರೆಯ ರಾಜ್ಯಗಳಲ್ಲಿರುವ ಕನ್ನಡ ಶಾಲೆಗಳಿಗೆ ವಿತರಿಸಲಾಗುತ್ತಿದೆ ಎಂದು ತಿಳಿಸಿರೋದಾಗಿ ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಟಾಕ್ಸಿಕ್’ ಸಿನಿಮಾದ ಹೊಸ ಹಾಡಿನ ಬಗ್ಗೆ ಅಪ್​​ಡೇಟ್ ಹಂಚಿಕೊಂಡ ವಿಶಾಲ್ – Kannada News | Vishal gave update on Toxic movie’s new song

ಯಶ್ (Yash) ನಟನೆಯ ‘ಟಾಕ್ಸಿಕ್’ ಭಾರತದ ಅತಿ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಬಿಡುಗಡೆ ದಿನಾಂಕ ಈಗಾಗಲೇ ಘೋಷಣೆ ಆಗಿದೆ. ಸಿನಿಮಾದ ಕೆಲ ಟೀಸರ್ ಮತ್ತು ಪಾತ್ರಗಳ ಪೋಸ್ಟರ್​​ಗಳು ಸಹ ಬಿಡುಗಡೆ ಆಗಿದ್ದು, ದಿನದಿಂದ ದಿನಕ್ಕೆ ಸಿನಿಮಾದ ಕ್ರೇಜ್ ಹೆಚ್ಚುತ್ತಲೇ ಸಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೆ ‘ಟಾಕ್ಸಿಕ್’ ಸಿನಿಮಾದ ‘ತಬಾಹಿ’ ಹಾಡನ್ನು ಬಿಡುಗಡೆ ಮಾಡಲಾಯ್ತು. ಹಾಡಿನ ಮೇಕಿಂಗ್, ಕಿಯಾರಾ ಹಾಗೂ ಯಶ್ ಅವರ ನಡುವಿನ ಕೆಮಿಸ್ಟ್ರಿ ಅಭಿಮಾನಿಗಳಿಗೆ ಬಹಳ ಹಿಡಿಸಿತ್ತು. ಇದೀಗ ಸಿನಿಮಾದ ಮತ್ತೊಂದು ಹಾಡಿನ ಬಗ್ಗೆ ಸಂಗೀತ ನಿರ್ದೇಶಕ ವಿಶಾಲ್ ಅಪ್​​ಡೇಟ್ ಹಂಚಿಕೊಂಡಿದ್ದಾರೆ.

ಸಂಗೀತ ಕಾರ್ಯಕ್ರಮವೊಂದಕ್ಕಾಗಿ ಕ್ಯಾಲಿಫೋರ್ನಿಯಾಕ್ಕೆ ತೆರಳಿರುವ ಸಂಗೀತ ನಿರ್ದೇಶಕ ವಿಶಾಲ್, ಅಲ್ಲಿಂದಲೇ ‘ಟಾಕ್ಸಿಕ್’ ಸಿನಿಮಾದ ನಾಲ್ಕನೇ ಹಾಡಿನ ಕೆಲಸದಲ್ಲಿ ನಿರತರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ವರ್ಕ್‌ಸ್ಟೇಷನ್‌ನ ಫೋಟೋವನ್ನು ಹಂಚಿಕೊಂಡಿರುವ ಅವರು, ಅದರಲ್ಲಿ ‘ಟಾಕ್ಸಿಕ್ – ಪಿಬಿಎಸ್ 4’ (Toxic – PBS 4) ಎಂದು ಹೆಸರಿಸಲಾದ ಪ್ರಾಜೆಕ್ಟ್ ಫೈಲ್ ಮೇಲೆ ಕೆಲಸ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ವಿಶಾಲ್ ನೀಡಿರುವ ಅಪ್​​ಡೇಟ್ ನೋಡಿದ ಅಭಿಮಾನಿಗಳು, ಸಿನಿಮಾದ ಮತ್ತೊಂದು ಹಾಡು ಶೀಘ್ರವೇ ಬಿಡುಗಡೆ ಆಗುವ ನಿರೀಕ್ಷೆಯಲ್ಲಿದ್ದಾರೆ.

ಗೀತೂ ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರದಲ್ಲಿ ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಈ ವರೆಗೆ ಬಿಡುಗಡೆ ಆಗಿರುವ ಸಿನಿಮಾದ ಟೀಸರ್ ಮತ್ತು ಹಾಡುಗಳನ್ನು ಗಮನಿಸಿದರೆ ಸಿನಿಮಾನಲ್ಲಿ ಸಾಕಷ್ಟು ಹಾಟ್ ದೃಶ್ಯಗಳು ಮತ್ತು ಆಕ್ಷನ್ ದೃಶ್ಯಗಳು ಇರುವುದು ಖಾತ್ರಿ ಆಗಿದೆ. ಸಿನಿಮಾನಲ್ಲಿ ಯಶ್ ರಾಯ ಮತ್ತು ಟಿಕೆಟ್ ಹೆಸರಿನ ಎರಡು ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:‘ಕರಾವಳಿ’ ಸಿನಿಮಾ ಹಾಡಿಗೆ ಹಿರಿಯ ಗಾಯಕಿ ಬಿ ಜಯಶ್ರೀ ಧ್ವನಿ

ಸಿನಿಮಾನಲ್ಲಿ ಅಕ್ಷಯ್ ಒಬೆರಾಯ್, ಸುದೇವ್ ನಾಯರ್ ಮತ್ತು ಅಮಿತ್ ತಿವಾರಿ ಸೇರಿದಂತೆ ಹಲವು ವಿದೇಶಿ ನಟ, ನಟಿಯರು ಸಹ ನಟಿಸಿದ್ದಾರೆ. ಈ ಚಿತ್ರಕ್ಕೆ ರವಿ ಬಸ್ರೂರು, ತನಿಷ್ಕ್ ಬಾಗ್ಚಿ ಮತ್ತು ಫಹೀಮ್ ಅಬ್ದುಲ್ಲಾ ಅವರೂ ಸಹ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಇವರುಗಳ ಜೊತೆಗೆ ವಿಶಾಲ್ ಕೆಲ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ‘ತಬಾಹಿ’ ಹಾಡಿಗೆ ವಿಶಾಲ್ ಅವರೇ ಸಂಗೀತ ನೀಡಿದ್ದಾರೆ.

ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್​​ಸ್ಟರ್ ಮೈಂಡ್ಸ್ ಒಟ್ಟಿಗೆ ನಿರ್ಮಾಣ ಮಾಡಿದೆ. ಸಿನಿಮಾವನ್ನು ಗೀತು ಮೋಹನ್​​ದಾಸ್ ನಿರ್ದೇಶಿಸಿದ್ದು, ಅವರ ಪತಿ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ರಾಜೀವ್ ರವಿ ಅವರು ಸಿನಿಮಾಟೊಗ್ರಫಿ ಮಾಡಿದ್ದಾರೆ. ಸಿನಿಮಾ ಆಗಸ್ಟ್ 26ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಏಕದಿನದಲ್ಲಿ ಕನ್ನಡಿಗನ ಕಮಾಲ್; ಒಂದೇ ಓವರ್​ನಲ್ಲಿ 2 ವಿಕೆಟ್ ಉರುಳಿಸಿದ ಪ್ರಸಿದ್ಧ್ ಕೃಷ್ಣ – Kannada News | Team India Dominates Edgbaston ODI After Early Setback: Prasidh Krishna Shines with Double Wicket

ಎಡ್ಜ್​ಬಾಸ್ಟನ್​ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬೌಲಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಆರಂಭಿಕ ಹಿನ್ನಡೆಯ ಬಳಿಕ ಅದ್ಭುತ ಪುನರಾಗಮನ ಮಾಡಿದೆ. ಮೊದಲ ವಿಕೆಟ್ ಕಬಳಿಸಲು 61 ರನ್​ಗಳನ್ನು ಬಿಟ್ಟುಕೊಟ್ಟಿದ್ದ ಟೀಂ ಇಂಡಿಯಾ ಆ ಬಳಿಕ ಪ್ರಮುಖ 5 ವಿಕೆಟ್‌ಗಳನ್ನು ಕೇವಲ 19 ರನ್​ಗಳ ಅಂತರದಲ್ಲಿ ಪಡೆದುಕೊಂಡಿದೆ. ಇದರಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರ ಕೊಡುಗೆಯೂ ಅಪಾರವಾಗಿದೆ. ಪ್ರಸಿದ್ಧ್ ಒಂದೇ ಓವರ್​ನಲ್ಲಿ ಎರಡು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಮೊದಲಿಗೆ ಅನುಭವಿ ಬಟ್ಲರ್ ವಿಕೆಟ್ ಪಡೆದ ಪ್ರಸಿದ್ಧ್ ಆ ಬಳಿಕ ಆಲ್‌ರೌಂಡರ್ ಸ್ಯಾಮ್ ಕರನ್ ಅವರನ್ನು ಖಾತೆ ತೆರೆಯಲು ಬಿಡಲಿಲ್ಲ.

Source link

ಸಾಲ ಮರುಪಾವತಿ ಮಾಡಿದ ಕೂಡ್ಲೇ ಬ್ಯಾಂಕ್‌ನಿಂದ ಈ ದಾಖಲೆಗಳನ್ನು ತಪ್ಪದೇ ಪಡೆಯಿರಿ – Kannada News | Bank Loan: Retrieve this document from the bank after repaying the loan.

ಸಾಂದರ್ಭಿಕ ಚಿತ್ರImage Credit source: Priyanka Parashar/Mint via Getty Images

ಸಾಲ (Loan) ಮಾಡಿಯಾದ್ರು ತುಪ್ಪ ತಿನ್ನು ಅನ್ನೋ ಮಾತಿದೆ. ಆದರೆ ಸಾಲ ಮಾಡಿ ಅದನ್ನು ತೀರಿಸುವವರೆಗೆ ನೆಮ್ಮದಿಯೇ ಇರಲ್ಲ. ಒಮ್ಮೆ ಸಾಲ ಮರುಪಾವತಿ ಮಾಡಿದ್ರೆ ಅದೇನೋ ಮನಸ್ಸಿಗೆ ಸಮಾಧಾನ. ಬ್ಯಾಂಕ್ ಸಾಲ ತೀರಿಸಿದ ಬಳಿಕ ಎಲ್ಲಾ ಕೆಲಸ ಆಯ್ತು, ಇನ್ನು ಆರಾಮಾಗಿ ಇರಬಹುದು ಅಂದು ಕೊಂಡಿದ್ದೀರಾ. ಆದರೆ ನೀವು  ಸಾಲ ಮರುಪಾವತಿ ಮಾಡಿದ ಬಳಿಕ ಸಂಬಂಧ ಪಟ್ಟ ಸಾಲ ಮುಕ್ತಾಯ ಪತ್ರ, ನಿರಾಕ್ಷೇಪಣೆ ಪ್ರಮಾಣಪತ್ರ ಸೇರಿದಂತೆ ಇನ್ನಿತ್ತರ ಅಗತ್ಯ ದಾಖಲೆಗಳನ್ನು (documents) ಬ್ಯಾಂಕ್‌ನಿಂದ ಪಡೆದುಕೊಳ್ಳುವುದನ್ನು ಮಾತ್ರ ಮರೆಯದಿರಿ.

ಸಾಲ ತೀರಿಸಿದ ಬಳಿಕ ಯಾವೆಲ್ಲಾ ದಾಖಲೆಗಳನ್ನು ಪಡೆಯಬೇಕು?

ಮೂಲ ದಾಖಲೆಗಳ ಮರುಪಾವತಿ: ಸಾಲ ಪಡೆಯುವಾಗ ನೀವು ಬ್ಯಾಂಕ್‌ನಲ್ಲಿ ಅಡಮಾನವಿಟ್ಟಿದ್ದ ಆಸ್ತಿ ಪತ್ರಗಳು, ಸೇಲ್ ಡೀಡ್, ಅಗ್ರಿಮೆಂಟ್ ಮುಂತಾದ ಎಲ್ಲಾ ಮೂಲ ದಾಖಲೆಗಳನ್ನು ತಪ್ಪದೇ ಪಡೆದುಕೊಳ್ಳಿ.

ನಿರಾಕ್ಷೇಪಣಾ ಪತ್ರ ಅಥವಾ ನೋ ಡ್ಯೂ ಸರ್ಟಿಫಿಕೇಟ್: ಸಾಲ ತೀರಿಸಿದ ಬಳಿಕ ನೀವು ಬ್ಯಾಂಕಿನಿಂದ ನೋ ಡ್ಯೂ ಸರ್ಟಿಫಿಕೇಟ್ ಪಡೆಯಬೇಕು. ಇದು ನೀವು ಸಾಲವನ್ನು ಸಂಪೂರ್ಣವಾಗಿ ತೀರಿಸಲಾಗಿದೆ ಹಾಗೂ ನಿಮ್ಮ ಮೇಲೆ ಯಾವುದೇ ಬಾಕಿ ಇಲ್ಲ ಎಂದು ದೃಢೀಕರಿಸುವ ದಾಖಲೆಯಾಗಿದೆ.

ಬ್ಲ್ಯಾಂಕ್ ಚೆಕ್ ವಾಪಸ್ ಪಡೆದುಕೊಳ್ಳಿ: ಬ್ಯಾಂಕಿನವರು ಸಾಲ ನೀಡುವ ವೇಳೆ ನಿಮ್ಮಿಂದ ಸಹಿ ಮಾಡಿದ ಖಾಲಿ ಚೆಕ್ ಗಳನ್ನು ಪಡೆದುಕೊಳ್ಳುತ್ತಾರೆ. ಸಾಲ ತೀರಿಸಿದ ಕೂಡಲೇ ಆ ಖಾಲಿ ಚೆಕ್ ಗಳನ್ನು ಪಡೆದುಕೊಳ್ಳಿ. ಈ ಚೆಕ್ ಗಳು ದುರ್ಬಳಕೆ ಆಗುವುದನ್ನು ತಪ್ಪಿಸುತ್ತದೆ.

ಕ್ರೆಡಿಟ್ ಸ್ಕೋರ್ ಪರಿಷ್ಕರಿಸಿಕೊಳ್ಳಿ: ಸಾಲ ಮುಕ್ತಾಯಗೊಂಡ ಬಳಿಕ ನೀವು ನಿಮ್ಮ ಸಿಬಿಲ್ ವರದಿಯಲ್ಲಿ ಸಾಲದ ಸ್ಥಿತಿಯು ಮುಕ್ತಾಯಗೊಂಡಿದೆ ಎಂದು ನವೀಕೃತವಾಗಿದೆಯೇ ಒಮ್ಮೆ ನೋಡಿಕೊಳ್ಳುವುದು ಉತ್ತಮ.

ಇದನ್ನೂ ಓದಿ: ಗೃಹಸಾಲ ಪಡೆಯುತ್ತಿದ್ದೀರಾ? 50 ಲಕ್ಷ ರೂ ಸಾಲ ಪಡೆಯಲು ನಿಮ್ಮ ಸಂಬಳ ಎಷ್ಟಿರಬೇಕು ಗೊತ್ತಾ? ಇಲ್ಲಿದೆ ಲೆಕ್ಕಾಚಾರ

ಖಾತೆ ಮುಚ್ಚುವಿಕೆ ಹೇಳಿಕೆ: ಸಾಲದ ಖಾತೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ತಿಳಿಸುವ ಅಧಿಕೃತ ಹೇಳಿಕೆಯಾಗಿದೆ. ಇದನ್ನು ನೀವು ಸಾಲ ತೀರಿಸಿದ ತಕ್ಷಣ ಹೇಳಿಕೆಯನ್ನು ಬ್ಯಾಂಕ್‌ನಿಂದ ಪಡೆದುಕೊಳ್ಳುವುದು ಸೂಕ್ತ.

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಬ್ಯಾಂಕ್ ಸಾಲ ತೀರಿಸಿದ ಬಳಿಕ ಅಗತ್ಯ ದಾಖಲೆಗಳನ್ನು ಯಾಕೆ ಮರಳಿ ಪಡೆಯಬೇಕು?

ಉತ್ತರ: ಬ್ಯಾಂಕ್ ಸಾಲ ತೀರಿಸಿದ ಬಳಿಕ ಅಗತ್ಯ ದಾಖಲೆಗಳನ್ನು ಪಡೆಯದೇ ಇದ್ದಲ್ಲಿ ತೊಂದರೆ ಆಗುವ ಸಾಧ್ಯತೆ ಹೆಚ್ಚು.

ಪ್ರಶ್ನೆ: ಮೂಲ ದಾಖಲೆಗಳು ಎಂದರೇನು?

ಉತ್ತರ: ನೀವು ಸಾಲ ಪಡೆಯುವಾಗ ಅಡಮಾನವಿಟ್ಟ ಆಸ್ತಿ ಪತ್ರಗಳು, ಸೇಲ್ ಡೀಡ್ ಹಾಗೂ ಅಗ್ರಿಮೆಂಟ್ ಮುಂತಾದ ದಾಖಲೆಗಳೇ ಮೂಲದಾಖಲೆಗಳಾಗಿವೆ.

ಪ್ರಶ್ನೆ: ಸಾಲ ತೀರಿಸಿದ ಬಳಿಕ ಯಾವೆಲ್ಲಾ ದಾಖಲೆಗಳನ್ನು ಮರಳಿ ಪಡೆಯಬೇಕು?

ಉತ್ತರ: ಸಾಲ ತೀರಿಸಿದ ಬಳಿಕ ನಿರಾಕ್ಷೇಪಣಾ ಪತ್ರ, ಮೂಲ ದಾಖಲೆ ಪತ್ರ, ಕ್ರೆಡಿಟ್ ಸ್ಕೋರ್, ಬ್ಲ್ಯಾಂಕ್ ಚೆಕ್ ವಾಪಸ್, ಖಾತೆ ಮುಚ್ಚುವಿಕೆ ಹೇಳಿಕೆ ಈ ದಾಖಲೆಗಳನ್ನು ಕೇಳಿ ಪಡೆಯಿರಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೇತಾಳ ದೇವಾಲಯದ ಮೇಲೆ ಬೇತಮಂಗಲ ಪೊಲೀಸರಿಂದ ದಿಢೀರ್​​ ದಾಳಿ: ಕಾರಣ ಇಲ್ಲಿದೆ – Kannada News | KGF Betala Temple Raid: Aghori Guruji Detained Amidst Allegations of Black Magic and Womens Harassment

ಕೋಲಾರ, ಜುಲೈ 14: ಜಿಲ್ಲೆ ಕೆಜಿಎಫ್ ತಾಲೂಕಿನ ಐವರಹಳ್ಳಿ ಗ್ರಾಮದ ಬಳಿಯಿರುವ ಬೇತಾಳ ದೇವಾಲಯದ ಮೇಲೆ ಬೇತಮಂಗಲ ಪೊಲೀಸರು ದಾಳಿ ನಡೆಸಿದ್ದಾರೆ. ಅಮಾವಾಸ್ಯೆ ದಿನದಂದೇ ನಡೆದ ಈ ಕಾರ್ಯಾಚರಣೆಯಲ್ಲಿ ದೇವಾಲಯದ ನಿರ್ಮಾತೃ ಅಗೋರಿ ಚಂದ್ರನಾಥ್ ಗುರೂಜಿಯನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ದೇವಾಲಯವು 108 ಅಡಿ ಎತ್ತರದ ಬೇತಾಳ ವಿಗ್ರಹದ ಮೂಲಕ ಆಂಧ್ರ ಮತ್ತು ತಮಿಳುನಾಡಿನಿಂದ ಭಕ್ತರನ್ನು ಆಕರ್ಷಿಸುತ್ತಿತ್ತು. ಆದರೆ, ಇಲ್ಲಿ ಮಾಟಮಂತ್ರ, ದೆವ್ವ ಬಿಡಿಸುವಿಕೆ, ಕುಡಿತ ಬಿಡಿಸುವ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು ಎಂಬ ಆರೋಪ ಕೇಳಿಬಂದಿತ್ತು. ವಿಶೇಷವಾಗಿ, ಮಹಿಳೆಯರಿಗೆ ದೆವ್ವ ಬಿಡಿಸುವ ನೆಪದಲ್ಲಿ ಹಿಂಸೆ ನೀಡಲಾಗುತ್ತಿತ್ತು ಎಂದು ಸ್ಥಳೀಯರು ದೂರು ನೀಡಿದ್ದರು. ಈ ಹಿನ್ನೆಲೆ ಸಿಪಿಐ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹೊಸ ಜಿಯೋ ಹೋಮ್ ಟಿವಿ ಪ್ಯಾಕ್ ಬಿಡುಗಡೆ; ಮಾಸಿಕ 400 ರೂಗೆ ಸಾವಿರಕ್ಕೂ ಹೆಚ್ಚು ಲೈವ್ ಚಾನಲ್​ಗಳು – Kannada News | Jio Home TV pack of Rs 400 gives over 1,000 live tv channels, premium OTT subscriptions

ಜಿಯೋ ಹೋಮ್ ಟಿವಿ ಪ್ಯಾಕ್Image Credit source: Reliance Jio

ಬೆಂಗಳೂರು, ಜುಲೈ 14: ದೇಶದ ಪ್ರಮುಖ ಟೆಲಿಕಾಂ ದೈತ್ಯ ರಿಲಾಯನ್ಸ್ ಜಿಯೋ (Reliance Jio), ಹೋಮ್ ಎಂಟರ್ಟೈನ್ಮೆಂಟ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದೆ. ಗ್ರಾಹಕರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಪ್ರೀಮಿಯಂ ಟೆಲಿವಿಷನ್ ಅನುಭವ ನೀಡುವ ಉದ್ದೇಶದಿಂದ ‘ಜಿಯೋ ಹೋಮ್ ಟಿವಿ ಪ್ಯಾಕ್’ (Jio Home TV Pack) ಅನ್ನು ಇಂದು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಯೋಜನೆಯಡಿ ಗ್ರಾಹಕರು ತಿಂಗಳಿಗೆ ಕೇವಲ ₹400 ಕ್ಕೆ (ಎಲ್ಲಾ ತೆರಿಗೆ ಒಳಗೊಂಡಂತೆ) 1,000 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ಆನಂದಿಸಬಹುದಾಗಿದೆ.

ಜಿಯೋ ಹೋಮ್ ಟಿವಿ ಪ್ಯಾಕ್‌ನ ಪ್ರಮುಖ ಫೀಚರ್ಸ್

  • ವೈವಿಧ್ಯಮಯ ಚಾನೆಲ್‌ಗಳು: ಗ್ರಾಹಕರು ತಮ್ಮ ಇಷ್ಟದ ಭಾಷೆಗಳಲ್ಲಿ ಮನರಂಜನೆ, ಚಲನಚಿತ್ರಗಳು, ಕ್ರೀಡೆ, ಸುದ್ದಿ, ಕಾರ್ಟೂನ್ (ಮಕ್ಕಳಿಗಾಗಿ), ಸಂಗೀತ ಮತ್ತು ಪ್ರಾದೇಶಿಕ ಚಾನೆಲ್‌ಗಳು ಸೇರಿದಂತೆ ಎಲ್ಲಾ ಪ್ರಮುಖ ಪ್ರಸಾರಕರ ಲೈವ್ ಟಿವಿ ಚಾನೆಲ್‌ಗಳನ್ನು ವೀಕ್ಷಿಸಬಹುದು.
  • ವಿಶೇಷ ಸ್ವಾಗತ ಕೊಡುಗೆ: ಜಿಯೋ ಹೋಮ್ ಟಿವಿ ಪ್ಯಾಕ್‌ಗೆ ಚಂದಾದಾರರಾಗುವ ಗ್ರಾಹಕರಿಗೆ ಮೊದಲ ತಿಂಗಳು (Welcome Offer) 30 Mbps ವೇಗದ ಉಚಿತ ಅನಿಯಮಿತ ವೈ-ಫೈ (Wi-Fi) ಸಿಗಲಿದೆ. ಇದರೊಂದಿಗೆ 12 ಪ್ರೀಮಿಯಂ ಒಟಿಟಿ (OTT) ಆಪ್‌ಗಳ ಚಂದಾದಾರಿಕೆಯೂ ಉಚಿತವಾಗಿ ಲಭ್ಯವಿರಲಿದೆ.
  • ಆರಂಭಿಕ ವೆಚ್ಚ ಮುಕ್ತ: ಗ್ರಾಹಕರ ಮೇಲಿನ ಮುಂಗಡ ವೆಚ್ಚದ ಭಾರವನ್ನು ಕಡಿಮೆ ಮಾಡಲು ಜಿಯೋ ಶೂನ್ಯ (₹0) ಇನ್‌ಸ್ಟಾಲೇಶನ್ (ಅಳವಡಿಕೆ) ಶುಲ್ಕ ಮತ್ತು ₹0 ಸೆಕ್ಯೂರಿಟಿ ಡೆಪಾಸಿಟ್ ಕೊಡುಗೆಯನ್ನು ಪ್ರಕಟಿಸಿದೆ.

ಇದನ್ನೂ ಓದಿ: ಹಾರ್ಮುಜ್ ಸಹವಾಸವೇ ಬೇಡ; ದೂರದಲ್ಲಿ ಬೇರೆಯೇ ಬಂದರು ಕಟ್ಟುತ್ತಿದೆ ಈ ಗಲ್ಫ್ ದೇಶ

ಜಿಯೋ ಹೋಮ್ ಟಿವಿ ಪ್ಯಾಕ್: ಪಾವತಿ ಆಯ್ಕೆ ಹೇಗೆ?

ಈ ಆಫರ್ ಆರಂಭದಲ್ಲಿ 6 ತಿಂಗಳ ರೀಚಾರ್ಜ್ (FRC) ಆಯ್ಕೆಯೊಂದಿಗೆ ಲಭ್ಯವಿದ್ದು, ಜಿಎಸ್‌ಟಿ ಸೇರಿದಂತೆ ಒಟ್ಟು ಮೊತ್ತ ₹2,400 ಆಗಿರುತ್ತದೆ. ಇದು ಗ್ರಾಹಕರಿಗೆ ದೀರ್ಘಾವಧಿಯ ಮತ್ತು ಜಂಜಾಟವಿಲ್ಲದ ಪಾವತಿ ಆಯ್ಕೆ ಒದಗಿಸುತ್ತದೆ.

ಮೊಬೈಲ್ ಗ್ರಾಹಕರಿಗೂ ಬಂಪರ್ ಆಫರ್: ಕಳೆದ ವಾರವಷ್ಟೇ ಜಿಯೋ ತನ್ನ ಮೊಬೈಲ್ ಬಳಕೆದಾರರಿಗಾಗಿ ಕೇವಲ ₹55 ಕ್ಕೆ 1,000 ಕ್ಕೂ ಹೆಚ್ಚು ಲೈವ್ ಚಾನೆಲ್‌ಗಳನ್ನು ವೀಕ್ಷಿಸಬಹುದಾದ ವಿಶೇಷ ಮೊಬೈಲ್ ಪ್ಯಾಕ್ ಅನ್ನು ಬಿಡುಗಡೆ ಮಾಡಿ ಗಮನ ಸೆಳೆದಿತ್ತು. ಈಗ ಹೋಮ್ ಟಿವಿ ಪ್ಯಾಕ್ ಮೂಲಕ ಇಡೀ ಕುಟುಂಬಕ್ಕೆ ಡಿಜಿಟಲ್ ಮನರಂಜನೆಯನ್ನು ಒದಗಿಸಲು ಮುಂದಾಗಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಟೋಲ್​ಗೆ ಅಮೆರಿಕ-ಇರಾನ್ ಪೈಪೋಟಿ; ಭಾರತಕ್ಕೆ ಏನು ತಲೆನೋವು?

ಲೈವ್ ಟೆಲಿವಿಷನ್, ಹೈ-ಸ್ಪೀಡ್ ಇಂಟರ್ನೆಟ್ ಮತ್ತು ಪ್ರೀಮಿಯಂ ಒಟಿಟಿ ಸ್ಟ್ರೀಮಿಂಗ್ ಈ ಮೂರನ್ನೂ ಒಂದೇ ಸೂರಿನಡಿ ತರುವ ಮೂಲಕ ರಿಲಯನ್ಸ್ ಜಿಯೋ ಭಾರತೀಯ ಕುಟುಂಬಗಳಿಗೆ ವಿಶ್ವದರ್ಜೆಯ ಡಿಜಿಟಲ್ ಅನುಭವ ನೀಡುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸೋಪಿನ ಪೌಡರ್ ಬಳಸಿ 2.3 ಕೋಟಿ ಲೀಟರ್ ನಕಲಿ ಹಾಲು ತಯಾರಿ; ಮಹಾರಾಷ್ಟ್ರದಲ್ಲಿ ಬಯಲಾಯ್ತು ಹಗರಣ – Kannada News | Nirma Detergent and palm oil used to make 2.3 crore litres of fake milk in Maharashtra FDA probe reveals big scam

ಮುಂಬೈ, ಜುಲೈ 14: ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯಲ್ಲಿ ಬೃಹತ್ ಪ್ರಮಾಣದ ಕೃತಕ ಅಥವಾ ನಕಲಿ ಹಾಲಿನ ಜಾಲವನ್ನು ಪೊಲೀಸರು ಹಾಗೂ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ (FDA) ಪತ್ತೆಹಚ್ಚಿದೆ. ಕಳೆದ 6 ತಿಂಗಳಲ್ಲಿ ಬರೋಬ್ಬರಿ 2.3 ಕೋಟಿ ಲೀಟರ್‌ಗೂ ಹೆಚ್ಚು ಕೃತಕ ಹಾಲನ್ನು ಇಡೀ ರಾಜ್ಯಾದ್ಯಂತ ಸರಬರಾಜು ಮಾಡಲಾಗಿದೆ ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ. ಧಾರಾಶಿವ್ ಜಿಲ್ಲೆಯ ಭೂಮ್ ತಾಲೂಕಿನಲ್ಲಿ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ವಶಪಡಿಸಿಕೊಂಡ ದಾಖಲೆಗಳು ಮತ್ತು ವಸ್ತುಗಳು ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿವೆ. ಆರೋಪಿಗಳು ಅಸಲಿ ಹಾಲಿನಂತೆಯೇ ಕಾಣುವಂತೆ ಮಾಡಲು ಮತ್ತು ಹಾಲಿನಲ್ಲಿ ಕೊಬ್ಬಿನಾಂಶ ಹೆಚ್ಚಿಸಲು ಕೆಲವು ಅಪಾಯಕಾರಿ ವಸ್ತುಗಳನ್ನು ಬಳಸುತ್ತಿದ್ದರು.

ಅವುಗಳೆಂದರೆ, ನಿರ್ಮಾ ಡಿಟರ್ಜೆಂಟ್ ಪೌಡರ್ (ಬಟ್ಟೆ ಒಗೆಯುವ ಸೋಪಿನ ಪುಡಿ), ಪಾಮ್ ಆಯಿಲ್, ಕಡಿಮೆ ಗುಣಮಟ್ಟದ ರಾಸಾಯನಿಕ ಪುಡಿ, ಕಳಪೆ ಗುಣಮಟ್ಟದ ಹಾಲಿನ ಪುಡಿ. ಕೇವಲ ಕಳೆದ 6 ತಿಂಗಳಲ್ಲಿ ಸುಮಾರು 2,30,470 ಕೆಜಿ ಕಳಪೆ ಹಾಲಿನ ಪುಡಿಯನ್ನು ಬಳಸಿ, ಸುಮಾರು 9.21 ಕೋಟಿ ರೂಪಾಯಿ ಮೌಲ್ಯದ 23,04,070 ಲೀಟರ್ ನಕಲಿ ಹಾಲನ್ನು ಇವರು ಉತ್ಪಾದಿಸಿದ್ದರು.

ದಾಳಿಯ ವೇಳೆ ಪತ್ತೆಯಾದ ದಾಖಲೆಗಳ ಆಧಾರದ ಮೇಲೆ ಅಧಿಕಾರಿಗಳ ಪ್ರಕಾರ, ಕಳೆದ 6 ತಿಂಗಳಲ್ಲಿ ಈ ನಕಲಿ ಹಾಲು ತಯಾರಿಗೆ ಸುಮಾರು 2.3 ಲಕ್ಷ ಕೆಜಿ ಕಳಪೆ ಗುಣಮಟ್ಟದ ಹಾಲಿನ ಪುಡಿಯನ್ನು ಬಳಸಲಾಗಿದೆ. ಈ ಪುಡಿ ಮತ್ತು ರಾಸಾಯನಿಕಗಳ ಸಹಾಯದಿಂದ ಸುಮಾರು 23.04 ಲಕ್ಷ ಲೀಟರ್ ಕೃತಕ ಹಾಲನ್ನು ನೇರವಾಗಿ ಉತ್ಪಾದಿಸಲಾಗಿದೆ. ಈ ನಕಲಿ ಹಾಲಿನ ಅಂದಾಜು ಮಾರುಕಟ್ಟೆ ಮೌಲ್ಯ ಬರೋಬ್ಬರಿ 9.21 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿಗೆ ಬರುತ್ತಿದ್ದ ಕಳಪೆ ಹಾಲು: ಗಡಿಯಲ್ಲಿ ಎಫ್‌ಎಸ್‌ಎಸ್‌ಎಐ ಭರ್ಜರಿ ಕಾರ್ಯಾಚರಣೆ, 30 ಕ್ಕೂ ಹೆಚ್ಚು ವಾಹನಗಳು ಜಪ್ತಿ!

ಮಾರುಕಟ್ಟೆಗೆ 2.3 ಕೋಟಿ ಲೀಟರ್ ಹಾಲು ತಲುಪಿದ್ದು ಹೇಗೆ?:

ಆರೋಪಿಗಳು ಕೃತಕ ಹಾಲನ್ನು ನೇರವಾಗಿ ಮಾರಾಟ ಮಾಡುತ್ತಿರಲಿಲ್ಲ. ಬದಲಿಗೆ, ಡೈರಿಗಳಿಗೆ ಸರಬರಾಜು ಮಾಡುವ ಮುನ್ನ ಪ್ರತಿ 100 ಲೀಟರ್ ಅಸಲಿ ಹಾಲಿಗೆ 10 ಲೀಟರ್ ಕೃತಕ ಹಾಲನ್ನು (ಶೇ. 10ರಷ್ಟು ಅನುಪಾತದಲ್ಲಿ) ಮಿಶ್ರಣ ಮಾಡುತ್ತಿದ್ದರು. ಹೀಗೆ ಅಸಲಿ ಹಾಲಿನೊಂದಿಗೆ ಈ ಕೃತಕ ಹಾಲನ್ನು ಬೆರೆಸಿದ್ದರಿಂದ, ಒಟ್ಟು ಕಲಬೆರಕೆ ಹಾಲಿನ ಪ್ರಮಾಣ 2.3 ಕೋಟಿ ಲೀಟರ್‌ಗಿಂತಲೂ ಅಧಿಕವಾಗಿ ಗ್ರಾಹಕರ ಮನೆಗಳನ್ನು ತಲುಪಿದೆ.

ಆರೋಗ್ಯಕ್ಕೆ ಭೀಕರ ಅಪಾಯ:

ಬಟ್ಟೆ ಒಗೆಯುವ ಸೋಪಿನ ಪೌಡರ್ ಮತ್ತು ರಾಸಾಯನಿಕಗಳು ಮನುಷ್ಯನ ದೇಹವನ್ನು ಸೇರಿದರೆ ಕಿಡ್ನಿ, ಲಿವರ್ ಮತ್ತು ಜೀರ್ಣಾಂಗ ವ್ಯವಸ್ಥೆಗೆ ತೀವ್ರ ಹಾನಿಯಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಅದರಲ್ಲೂ ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರ ಆರೋಗ್ಯದ ಮೇಲೆ ಇದು ಅತ್ಯಂತ ಗಂಭೀರ ಪರಿಣಾಮ ಬೀರುತ್ತದೆ. ಸಾರ್ವಜನಿಕರ ಆರೋಗ್ಯದೊಂದಿಗೆ ಆಟವಾಡುವ ಇಂತಹ ಜಾಲಗಳ ವಿರುದ್ಧ ಮಹಾರಾಷ್ಟ್ರ ಎಫ್‌ಡಿಎ ಕಠಿಣ ಕಾನೂನು ಕ್ರಮ ಕೈಗೊಂಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಳು ಜನರ ವಿರುದ್ಧ ಕಠಿಣ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಎಫ್‌ಐಆರ್ ದಾಖಲಾಗಿ ವಾರ ಕಳೆದರೂ ಎಲ್ಲಾ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದಾರೆ. ಭಾರತೀಯ ಆಹಾರ ಸುರಕ್ಷತಾ ಕಾಯ್ದೆಯಡಿ, ಜೀವಕ್ಕೆ ಕುತ್ತು ತರುವಂತಹ ಆಹಾರ ಕಲಬೆರಕೆ ದಂಧೆಯಲ್ಲಿ ತೊಡಗಿ ಅಪರಾಧ ಸಾಬೀತಾದರೆ, ಗರಿಷ್ಠ 10 ಲಕ್ಷ ರೂ. ದಂಡ ಮತ್ತು ಜೀವಾವಧಿ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಇದನ್ನೂ ಓದಿ: ಎಂಇಎಸ್‌ಗೆ ಕಾನೂನು ನೆರವು: ಮಹಾರಾಷ್ಟ್ರ ಸರ್ಕಾರದ ನಿರ್ಧಾರಕ್ಕೆ ಪ್ರಿಯಾಂಕ್ ಖರ್ಗೆ ಕಿಡಿ

ಯಾರು ಈ ಐಎಎಸ್ ಅಧಿಕಾರಿ?:

ಮಹಾರಾಷ್ಟ್ರದಲ್ಲಿ ಸದ್ಯ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆಯ (FDA) ವತಿಯಿಂದ ಹಾಲು ಕಲಬೆರಕೆ ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಅತ್ಯಂತ ಕಠಿಣ ಕಾರ್ಯಾಚರಣೆ ನಡೆಯುತ್ತಿದೆ. ಈ ಬೃಹತ್ ಆಂದೋಲನದ ನೇತೃತ್ವವನ್ನು ಮಹಾರಾಷ್ಟ್ರದ ದಕ್ಷ ಐಎಎಸ್ ಅಧಿಕಾರಿ ತುಕಾರಾಮ್ ಮುಂಢೆ ವಹಿಸಿಕೊಂಡಿದ್ದಾರೆ. ಮೇ 25ರಂದು ಐಎಎಸ್ ಅಧಿಕಾರಿ ತುಕಾರಾಮ್ ಮುಂಢೆ ಅವರು ಮಹಾರಾಷ್ಟ್ರದ ಎಫ್‌ಡಿಎ (FDA) ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡರು. ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ಆಹಾರ ಕಲಬೆರಕೆಯ ವಿರುದ್ಧ ಕಠಿಣ ಕಾರ್ಯಾಚರಣೆ ಆರಂಭವಾಯಿತು. ಡೈರಿಗಳು, ಸಾಗಣೆದಾರರು, ವಿತರಕರು, ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ಸೇರಿದಂತೆ ಇಡೀ ಹಾಲಿನ ಸರಬರಾಜು ಜಾಲದಾದ್ಯಂತ ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅವರು ಆದೇಶ ಹೊರಡಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version