Headlines

ಗರ್ಭಾವಸ್ಥೆಯಲ್ಲಿ ಹೆಚ್ಚು ಕೋಪ, ಚಿಕ್ಕ ಚಿಕ್ಕ ವಿಷಯಕ್ಕೂ ಸ್ಟ್ರೆಸ್ ತೆಗೆದುಕೊಳ್ಳುತ್ತಿದ್ದರೆ ಈ ಸುದ್ದಿಯನ್ನು ತಪ್ಪದೆ ಓದಿ

ಗರ್ಭಾವಸ್ಥೆ (Pregnancy) ಮಹಿಳೆಯ ಜೀವನದ ಅತ್ಯಂತ ಮಹತ್ವದ ಹಂತವಾಗಿದೆ. ಈ ಸಮಯದಲ್ಲಿ ದೇಹದಲ್ಲಿ ಹಾರ್ಮೋನ್ ಬದಲಾವಣೆಗಳು ವೇಗವಾಗಿ ನಡೆಯುತ್ತವೆ ಎಂಬುದು ತಿಳಿದ ವಿಚಾರ. ಜೊತೆಗೆ ಮಾನಸಿಕ ಒತ್ತಡ, ಆತಂಕ ಮತ್ತು ಭಾವನಾತ್ಮಕ ಬದಲಾವಣೆಗಳು ಸಹ ಸಾಮಾನ್ಯವಾಗಿರುತ್ತವೆ. ಆದರೆ ಗರ್ಭಾವಸ್ಥೆಯಲ್ಲಿ ಹೆಚ್ಚು ಒತ್ತಡ ತೆಗೆದುಕೊಳ್ಳುವುದು ಪದೇ ಪದೇ ಕೋಪ ಮಾಡಿಕೊಳ್ಳುವುದು ಮತ್ತು ಚಿಕ್ಕ ಚಿಕ್ಕ ವಿಷಯಕ್ಕೂ ಸ್ಟ್ರೆಸ್ ತೆಗೆದುಕೊಳ್ಳುವುದರಿಂದ ಗರ್ಭದಲ್ಲಿರುವ ಮಗುವಿನ ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಿದ್ದಾರೆ. ಅಧ್ಯಯನಗಳ…

Read More

ಭೀಮಾತೀರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು: ಆಸ್ತಿ ವಿವಾದಕ್ಕೆ 6 ಮಂದಿಯ ಬರ್ಬರ ಕೊಲೆ

ವಿಜಯಪುರ, ಮೇ 29: ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದ್ದು, ಆಸ್ತಿ ವಿವಾದ ಹಿನ್ನೆಲೆ 6 ಜನರ ಭೀಕರ ಹತ್ಯೆ ಮಾಡಲಾಗಿದೆ. ಕುಟುಂಬಗಳ ನಡುವಿನ ಕಲಹ ವಿಕೋಪಕ್ಕೆ ಹೋದ ಪರಿಣಾಮ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಅಮಾನುಷ ಕೃತ್ಯ ನಡೆದಿದೆ. ರೇವಣಸಿದ್ದಪ್ಪ ನಿರಾಳೆ, ದುಂಡಪ್ಪ ರೇವಣಸಿದ್ದಪ್ಪ ನಿರಾಳೆ, ಶಿವಪುತ್ರ ರೇವಣಸಿದ್ದಪ್ಪ ನಿರಾಳೆ, ಚಂದ್ರಶೇಖರ್ ನಿರಾಳೆ ಶಬ್ಬೀರ್ ನದಾಫ್ ಸೇರಿದಂತೆ 6 ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬಳಿಕ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಜಮಿನು ವಿಚಾರವಾಗಿ ಅಪ್ಪುಗೌಡ…

Read More

ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ 3 ದಿನಾಂಕ ನೀಡಿದ ದ್ವಾರಕನಾಥ್ ಗುರೂಜಿ

ಬೆಂಗಳೂರು, (ಮೇ 29): ಕರ್ನಾಟಕದ (Karnataka) ನೂತನ ಮುಖ್ಯಮಂತ್ರಿ ಪದಗ್ರಹಣ ಸಮಾರಂಭಕ್ಕೆ (CM Oath Ceremony) ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್‌ನಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಕಾಂಗ್ರೆಸ್ ಶಾಸಕಾಂಗ ನಾಯಕನ ಆಯ್ಕೆಗೂ ಮೊದಲೇ ಹೊಸ ಸಿಎಂ ಪ್ರಮಾಣವಚನ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆದಿವೆ. ಡಿಕೆ ಶಿವಕುಮಾರ್ (DK Shivakumar) ಅವರೇ ಮುಂದಿನ ಸಿಎಂ ಎನ್ನುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಡಿಕೆ ಶಿವಕುಮಾರ್, ಪ್ರಮಾಣವಚನ ಸ್ವೀಕಾರಕ್ಕೆ ದಿನಾಂಕ, ಸಮಯ ನೀಡುವಂತೆ ರಾಜಗುರು ದ್ವಾರಕನಾಥ್ ಗುರೂಜಿಗೆ (dwarakanath guruji) ಮನವಿ ಮಾಡಿದ್ದು, ಇದೀಗ…

Read More

‘‘ಟಾಕ್ಸಿಕ್’ ಪ್ರೇಮಕತೆ ಸಂಪೂರ್ಣ ಭಿನ್ನ’: ಕತೆಯ ಬಗ್ಗೆ ನಾಯಕಿ ಕಿಯಾರಾ ಮಾತು

ಯಶ್ (Yash) ನಟನೆಯ ‘ಟಾಕ್ಸಿಕ್’ ಪ್ರಸ್ತುತ ಭಾರತೀಯ ಚಿತ್ರರಂಗದ ಬಲು ನಿರೀಕ್ಷೆ ಸಿನಿಮಾ. ಈಗಾಗಲೇ ಸಿನಿಮಾದ ಬಿಡುಗಡೆ ದಿನಾಂಕ ಎರಡು ಬಾರಿ ಬದಲಾಗಿದೆ. ಸಿನಿಮಾದ ಬಿಡುಗಡೆ ಯಾವಾಗ ಎಂಬ ಬಗ್ಗೆ ಖಾತ್ರಿ ಸಹ ಇಲ್ಲ. ಯಶ್, ‘ಟಾಕ್ಸಿಕ್’ ಸಿನಿಮಾವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನದಲ್ಲಿದ್ದಾರೆ. ಇವುಗಳ ನಡುವೆ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿರುವ ನಾಯಕಿಯರು, ಕೆಲ ತಂತ್ರಜ್ಞರು ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಕೆಲವು ಕಡೆ ಮಾತನಾಡಿದ್ದು, ಎಲ್ಲರೂ ಸಹ ಬಹಳ ಹೆಮ್ಮೆಯಿಂದ ಸಿನಿಮಾದ ಬಗ್ಗೆ ಹೇಳಿಕೊಂಡಿದ್ದಾರೆ. ಅದರಲ್ಲೂ ಸಿನಿಮಾದ ಕತೆಯ…

Read More

40 ಸಾವಿರ ರೂ. ಸಂಬಳ ಇದ್ದಾಗ ಮನೆ ನಡೆಸಲು ಕಷ್ಟಪಟ್ಟಿದ್ದ ಉರ್ಫಿ ಜಾವೇದ್; ಈಗ ಎಷ್ಟು?

ತಮ್ಮ ವಿಭಿನ್ನ ಹಾಗೂ ವಿಚಿತ್ರ ಫ್ಯಾಷನ್ ಸೆನ್ಸ್ ಮೂಲಕವೇ ಇಂಟರ್ನೆಟ್ ಜಗತ್ತಿನಲ್ಲಿ ಸದಾ ಸಂಚಲನ ಮೂಡಿಸುವ ಉರ್ಫಿ ಜಾವೇದ್ (Uorfi Javed), ಇಂದು ದೇಶದ ಅತ್ಯಂತ ಜನಪ್ರಿಯ ಸೋಶಿಯಲ್ ಮೀಡಿಯಾ ಸೆನ್ಸೇಷನ್ ಆಗಿ ಬೆಳೆದಿದ್ದಾರೆ. ಆದರೆ, ಅವರ ಜೀವನದಲ್ಲಿ ಕೂಡ ಕಷ್ಟದ ದಿನಗಳು ಇದ್ದವು. ಇತ್ತೀಚೆಗೆ ನಟಿ ಸೋಹಾ ಅಲಿ ಖಾನ್ ಅವರ ಪಾಡ್‌ಕಾಸ್ಟ್​ನಲ್ಲಿ ಭಾಗವಹಿಸಿದ್ದ ಉರ್ಫಿ, ತಾವು ಟಿವಿ ಇಂಡಸ್ಟ್ರಿಯಲ್ಲಿ ಎದುರಿಸಿದ ಅವಮಾನ ಹಾಗೂ ಕಷ್ಟದ ದಿನಗಳ ಬಗ್ಗೆ ಅತ್ಯಂತ ಮುಕ್ತವಾಗಿ ಮಾತನಾಡಿದ್ದಾರೆ. 40 ಸಾವಿರ…

Read More

ಜೂನ್ ತಿಂಗಳಲ್ಲಿ ಮೊಹರಂ ಸೇರಿ 12 ದಿನಗಳವರೆಗೆ ಬ್ಯಾಂಕ್ ರಜೆ; ಕರ್ನಾಟಕ ಹಾಗೂ ದೇಶವ್ಯಾಪಿ ಎಷ್ಟಿದೆ ರಜೆ?

ನವದೆಹಲಿ, ಮೇ 29: ಮುಂದಿನ ತಿಂಗಳು (2026ರ ಜೂನ್) ಬ್ಯಾಂಕುಗಳಿಗೆ 12 ದಿನಗಳವರೆಗೆ ರಜೆ (Bank Holidays) ಇರುತ್ತದೆ. ರಾಜ್ಯದಿಂದ ರಾಜ್ಯಕ್ಕೆ ರಜೆಗಳಲ್ಲಿ ವ್ಯತ್ಯಯ ಇರುತ್ತದೆ. ಮೊಹರಂ, ಮಹಾರಾಣಾ ಪ್ರತಾಪ್ ಜಯಂತಿ, ಗುರು ಅರ್ಜುನದೇವ ಬಲಿದಾನ ದಿನ, ಕಬೀರ್ ಜಯಂತಿ ಇತ್ಯಾದಿ ಕೆಲ ವಿಶೇಷ ದಿನಗಳು ಮತ್ತು ಆಚರಣೆಗಳು ಬೇರೆ ಬೇರೆ ರಾಜ್ಯಗಳಲ್ಲಿ ಇವೆ. ಈ 12 ರಜಾದಿನಗಳಲ್ಲಿ ಆರು ದಿನಗಳು ರೆಗ್ಯುಲರ್ ವೀಕೆಂಡ್ ರಜಾ ದಿನಗಳೇ ಆಗಿವೆ. ಮಿಝೋರಾಂ, ಹಿಮಾಚಲ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ. ಬೇರೆ ರಾಜ್ಯಗಳಿಗಿಂತ…

Read More

ಉದ್ಯೋಗ ಭವಿಷ್ಯ: ಈ 4 ರಾಶಿಯವರಿಗೆ ಸಿಗಲಿದೆ ಉನ್ನತ ಹುದ್ದೆ, ಸಂಬಳ ಹೆಚ್ಚಳದ ಬಿಗ್ ಆಫರ್!

ಮೇ 31ರಿಂದ ಜೂನ್‌ 06ರವರೆಗಿನ ಮೊದಲ ವಾರದಲ್ಲಿ ಉದ್ಯೋಗ ಅವಕಾಶಗಳು ಬರಲಿದ್ದು, ಅದನ್ನು ದೂರಸರಿಸದೇ ಅನುಭವಕ್ಕಾಗಿ ಸೇರಿಕೊಳ್ಳುವುದು ಸೂಕ್ತ. ನಿಮ್ಮ ಮಾರ್ಗವನ್ನು ತಪ್ಪಿಸಲು ಹಲವರು ಪ್ರಯತ್ನಶೀಲರಾದರೂ ಅದನ್ನು ಮೀರುವ ಸಾಮರ್ಥ್ಯ ಬೇಕಾಗಲಿದೆ. ಉದ್ಯಮವನ್ನು ಯಶಸ್ಸನ್ನು ಕಾಣಲಿ. ​ಮೇಷ ರಾಶಿ : ​ನಿಮ್ಮ ರಾಶಿಯಲ್ಲಿ ಮಂಗಳನಿರುವುದರಿಂದ ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ಕೆಲಸದ ಸ್ಥಳದಲ್ಲಿ ನಿಮ್ಮ ದಕ್ಷತೆಗೆ ಮೆಚ್ಚುಗೆ ದೊರೆಯುತ್ತದೆ. ಆದರೆ, ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ಆತುರ ಅಥವಾ ಸಿಟ್ಟಿನ ನಿರ್ಧಾರಗಳು ಬೇಡ, ತಾಳ್ಮೆ ಇರಲಿ. ​ವೃಷಭ ರಾಶಿ :…

Read More

1956ರಿಂದ ರಾಜ್ಯದಲ್ಲಿ ಪೂರ್ಣಾವಧಿ ಸಿಎಂ ಆಗಿದ್ದು ಕೇವಲ ಮೂವರು!: ಉಳಿದವರದ್ದೆಲ್ಲ ಅಲ್ಪಾವಧಿ ಅಧಿಕಾರ

ಕರ್ನಾಟಕದ ಪೂರ್ಣಾವಧಿ ಮುಖ್ಯಮಂತ್ರಿಗಳು ಬೆಂಗಳೂರು, ಮೇ 29: 2013-18ರ ವರೆಗೆ ಕರ್ನಾಟಕದ ಸಿಎಂ ಆಗಿ ಅವಧಿ ಪೂರ್ಣಗೊಳಿಸಿದ್ದ ಸಿದ್ದರಾಮಯ್ಯ (Siddaramaiah) ಈ ಬಾರಿ ಕೇವಲ 3 ವರ್ಷವಷ್ಟೇ ಆಡಳಿತ ನಡೆಸಿ ಪದತ್ಯಾಗ ಮಾಡಿದ್ದಾರೆ. ಅಷ್ಟಕ್ಕೂ ರಾಜಕೀಯ ಅಸ್ಥಿರತೆ, ನಾಯಕತ್ವ ಬದಲಾವಣೆಗಳು ಕರ್ನಾಟಕ ರಾಜಕೀಯದಲ್ಲಿ ಹೊಸತೇನಲ್ಲ. 1956ರಿಂದ ಇಂದಿನವರೆಗೆ ಕೇವಲ 3 ಮುಖ್ಯಮಂತ್ರಿಗಳು ಮಾತ್ರ ಪೂರ್ಣಾವಧಿಯ ಆಡಳಿತ ನಡೆಸಿದ್ದಾರೆ. ಎಸ್​​. ನಿಜಲಿಂಗಪ್ಪ (1962-68), ಡಿ. ದೇವರಾಜ ಅರಸ್​​ (1972-77) ಮತ್ತು ಸಿದ್ದರಾಮಯ್ಯ (2013-18) ಅವರನ್ನು ಬಿಟ್ಟರೆ ಉಳಿದವರೆಲ್ಲ ಅಲ್ಪಾವಧಿಯ…

Read More

ಬೆಂಗಳೂರಿನಲ್ಲಿ ಕೋಟ್ಯಂತರ ರೂ ಮೌಲ್ಯದ ಬಿಡಿಎ ಸೈಟ್ ಕಬಳಿಕೆ ಪ್ರಕರಣ ಬೆಳಕಿಗೆ: ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು

ಬೆಂಗಳೂರು, ಮೇ 29: ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಕಬಳಿಸಲು ಯತ್ನಿಸಿದ ಬೃಹತ್ ಭೂಗಳ್ಳತನ (Land)  ಹಗರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ವಂಚಕ ಶಾಲೂಮ್ ಕುಮಾರ್ ಎಂಬಾತನನ್ನು ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಸದ್ಯ ಶೇಷಾದ್ರಿಪುರಂ ಠಾಣೆಯಲ್ಲಿ ಈ ಕುರಿತು ಎಫ್​​ಐಆರ್​ ದಾಖಲಾಗಿದೆ. ಮುಖ್ಯಾಂಶಗಳು ಕೋಟ್ಯಂತರ ರೂಪಾಯಿ ಮೌಲ್ಯದ ಭೂಗಳ್ಳತನ ಪ್ರಕರಣ ರಿವೀಲ್​​ ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ಆಸ್ತಿ ಕಬಳಿಸಲು ಯತ್ನ ಶೇಷಾದ್ರಿಪುರಂ…

Read More

ಒಟ್ಟಿಗೆ ಎರಡು ಸಿನಿಮಾಗಳಲ್ಲಿ ‘ಪಿಶಾಚಿ’ ಆಗಲಿದ್ದಾರೆ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ (Rashmika Mandanna) ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಒಟ್ಟೊಟ್ಟಿಗೆ ಮೂರು 1000 ಕೋಟಿ ಸಿನಿಮಾಗಳಲ್ಲಿ ನಟಿಸಿರುವ ಏಕೈಕ ನಟಿ ಎನಿಸಿಕೊಂಡಿದ್ದಾರೆ ಅವರು. ಪ್ರಸ್ತುತ ಚಿತ್ರರಂಗದ ಕ್ಯೂಟ್ ನಟಿಯರಲ್ಲಿ ಒಬ್ಬರು. ಹಲವು ಒಳ್ಳೆಯ ಪ್ರೇಮಕತೆಗಳು, ರೊಮ್ಯಾಂಟಿಕ್, ಗ್ಲಾಮರಸ್ ಸಿನಿಮಾಗಳು ಅವರಿಗೆ ಆಫರ್ ಆಗುತ್ತಿವೆ. ಆದರೆ ರಶ್ಮಿಕಾ ಇವುಗಳ ನಡುವೆ ಒಟ್ಟಿಗೆ ಎರಡು ಸಿನಿಮಾನಲ್ಲಿ ದೆವ್ವ-ಭೂತದ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರಶ್ಮಿಕಾಗೆ ಹಾರರ್ ಸಿನಿಮಾ ಹೊಸದಲ್ಲ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಥಾಮ’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಅವರು…

Read More