Headlines

IND vs NZ: ಉಳಿದೆರಡು ಪಂದ್ಯಗಳಿಂದಲೂ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಔಟ್

ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ಆತಿಥೇಯ ಟೀಂ ಇಂಡಿಯಾ ಈಗಾಗಲೇ 3-0 ಅಂತರದಿಂದ ವಶಪಡಿಸಿಕೊಂಡಿದೆ. ಆದಾಗ್ಯೂ ಟೀಂ ಇಂಡಿಯಾಕ್ಕೆ ಆಘಾತವೊಂದು ಎದುರಾಗಿದೆ. ಇಂಜುರಿಯಿಂದಾಗಿ ಮೊದಲ ಮೂರು ಪಂದ್ಯಗಳಿಂದ ಹೊರಗುಳಿದಿದ್ದ ಮಧ್ಯಮ ಕ್ರಮಾಂಕದ ಬ್ಯಾಟರ್ ತಿಲಕ್ ವರ್ಮಾ ಉಳಿದೆರಡು ಪಂದ್ಯಗಳಿಂದಲೂ ಹೊರಬಿದ್ದಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿರುವ ಬಿಸಿಸಿಐ, ತಿಲಕ್ ವರ್ಮಾ ಅವರ ಅಲಭ್ಯತೆಯನ್ನು ಖಚಿತಪಡಿಸಿದ್ದು, ಅವರ ಬದಲಿಯಾಗಿ ತಂಡಕ್ಕೆ ಆಯ್ಕೆಯಾಗಿದ್ದ ಶ್ರೇಯಸ್ ಅಯ್ಯರ್, ಉಳಿದ ಎರಡು ಪಂದ್ಯಗಳಿಗೆ ತಂಡದಲ್ಲಿ ಮುಂದುವರಿಯಲಿದ್ದಾರೆ ಎಂದಿದೆ. ಇದರರ್ಥ…

Read More

Video: ಜೀವನವನ್ನು ಆನಂದಿಸಲು ಬೆಂಗಳೂರನ್ನು ಹೀಗೆ ಬಳಸಿಕೊಳ್ಳಿ ಎಂದ ಮಹಿಳೆ – Kannada News | Bengaluru: Lucknow woman says Bengaluru not just for work, but to get what you wants

ಬೆಂಗಳೂರು, ಜನವರಿ 26: ಬೆಂಗಳೂರು (Bengaluru) ಅಂದರೆ ಯುವಕ ಯುವತಿಯರಿಗೆ ಅದೇನೋ ಸೆಳೆತ, ಹೀಗಾಗಿ ಅದೆಷ್ಟೋ ಯುವ ಮನಸ್ಸುಗಳನ್ನು ಕೈ ಬೀಸಿ ತನ್ನತ್ತ ಕರೆಯುವ ತಾಕತ್ತು ಈ ನಗರಕ್ಕಿದೆ. ಆದರೆ ಪ್ರಾರಂಭದಲ್ಲಿ ಈ ನಗರದ ವಾತಾವರಣಕ್ಕೆ, ಇಲ್ಲಿನ ಜೀವನ ಶೈಲಿಗೆ ಹೊಂದಿಕೊಳ್ಳುವುದು ಎಷ್ಟೋ ಜನರಿಗೆ ಕಷ್ಟವಾಗುವುದಿದೆ. ಲಕ್ನೋದ ಮಹಿಳೆಯೊಬ್ಬರು (Lucknow woman) ಈಗ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಇಲ್ಲಿನ ಜೀವನದ ಬಗ್ಗೆ ಚಿಂತನಶೀಲ ಪೋಸ್ಟ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.  ಕೆಲಸದ ಜತೆ ಜತೆಗೆ ಈ ನಗರದಲ್ಲಿ…

Read More

Kolar: ಬಂಗಾರದ ನಗರಿಯ ಫಲಪುಷ್ಪ ಪ್ರದರ್ಶನಕ್ಕೆ ಮಾರುಹೋದ ಜನ: ಇಲ್ಲಿವೆ ಸುಂದರ ಚಿತ್ರಗಳು – Kannada News | Kolar Flower Show: Various Artworks Steal the Spotlight

ಕೋಲಾರ ತೋಟಗಾರಿಕೆ ಮತ್ತು ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾಗಿರುವ ಮೂರು ದಿನಗಳ ಫಲಪುಷ್ಪ ಪ್ರದರ್ಶನ, ಸಿರಿಧಾನ್ಯ ಮತ್ತು ಸಾವಯವ ಮೇಳ ನೋಡುಗರನ್ನು ಪುಳಕಗೊಳಿಸಿದೆ. ಹೂವು ಮತ್ತು ಹಣ್ಣುಗಳಲ್ಲಿ ಅರಳಿದ ಸುಂದರ ಕಲಾಕೃತಿಗಳು ಮನಸೂರೆಗೊಂಡಿದ್ದು, ಕಲ್ಲಂಗಡಿಯಲ್ಲಿ ಮೂಡಿದ ವಿವಿಧ ಸೆಲೆಬ್ರಿಟಿಗಳ ಚಿತ್ರಗಳು ನೋಡುಗರನ್ನು ವಿಶೇಷವಾಗಿ ಆಕರ್ಷಿಸಿವೆ. ಹೂವಿನಲ್ಲಿ ನಿರ್ಮಾಣ ಮಾಡಿರುವ ಹಸು-ಕರು ಶಿಲ್ಪ, ಸಾಲುಮರದ ತಿಮ್ಮಕ್ಕ ಅವರ ಮರಳು ಶಿಲ್ಪ, ರಂಗೋಲಿಯಲ್ಲಿ ಅರಳಿರುವ ಗಣ್ಯರ ಚಿತ್ರಗಳು ನೋಡುಗರ ಕಣ್ಮನ ಸೆಳೆದಿವೆ. ಇತ್ತೀಚೆಗೆ ಬಿಗ್ ಬಾಸ್​​ನಲ್ಲಿ ಗೆಲುವು ಸಾಧಿಸಿದ ಗಿಲ್ಲಿನಟ,…

Read More

ಇರಾನ್ ಮೇಲೆ ಅಮೆರಿಕದ ದಾಳಿಯ ಭೀತಿ; ಭೂಗತ ಸ್ಥಳಕ್ಕೆ ಖಮೇನಿ ಶಿಫ್ಟ್ – Kannada News | Iran’s Supreme Leader Khamenei moves to underground bunker Amid Fears Of Potential US Attack threat

ಟೆಹ್ರಾನ್, ಜನವರಿ 26: ಟೆಹ್ರಾನ್‌ನಲ್ಲಿ ಕೆಲವು ವಾರಗಳಿಂದ ಸರ್ಕಾರದ ವಿರುದ್ಧ ಪ್ರತಿಭಟನೆಗಳು ಹೆಚ್ಚಾಗಿವೆ. ಇದರಿಂದ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿಭಟನಾಕಾರರ ಮೇಲೆ ಇಸ್ಲಾಮಿಕ್ ಆಡಳಿತದ ಹಿಂಸಾತ್ಮಕ ಕ್ರಮಗಳ ನಡುವೆ ಇರಾನ್ ಹಾಗೂ ಅಮೆರಿಕದ ನಡುವೆ ಯುದ್ಧ ಉಂಟಾಗುವ ಭೀತಿ ಎದುರಾಗಿದೆ. ಇದರ ಬೆನ್ನಲ್ಲೇ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Khamenei) ಟೆಹ್ರಾನ್‌ನ ಬಂಕರ್‌ನಲ್ಲಿ ಅಡಗಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಮೆರಿಕ ಇರಾನ್ ಮೇಲೆ ದಾಳಿ ನಡೆಸುವ ಅಪಾಯವಿದೆ ಎಂಬ ಸೂಚನೆ ಲಭ್ಯವಾಗುತ್ತಿದ್ದಂತೆ ಖಮೇನಿ…

Read More

400 ಕೋಟಿ ರೂ. ಕಳ್ಳತನ ಪ್ರಕರಣದ ಬಿಗ್ ಅಪ್​ಡೇಟ್: ಅಸಲಿಗೆ ದರೋಡೆ ಹೇಗಾಯ್ತು? ಯಾರಿಗೆ ಯಾವ ಜವಾಬ್ದಾರಿ? – Kannada News | Gujarat politician Link to Belagavi Rs 400 crore Robbery: here Is How to theft money

ಬೆಳಗಾವಿ, ಜನವರಿ 26): ಒಂದಲ್ಲ ಎರಡಲ್ಲ ಬೆಳಗಾವಿಯಲ್ಲಿ (Belagavi) ದರೋಡೆಯಾಗಿದ್ದು ಬರೋಬ್ಬರಿ 400 ಕೋಟಿ ರೂಪಾಯಿ ( Rs 400 Crore Robbery Case). ಈ ದರೋಡೆಯ ರಹಸ್ಯ ಬಟಾಬಯಲಾಗಿದ್ದು,  ಇದು ಸಿನಿಮಾ ಕಥೆಯನ್ನೂ ಮೀರಿಸುವಂತಿದೆ. ದರೋಡೆ ಆಗಿದೆ ಎಂದು ಯಾರು ಬಂದು ದೂರು ಕೊಡಲಿಲ್ಲ. ಅಯ್ಯಯ್ಯೋ ನನ್ನ ಕೋಟ್ಯಾಂತರ ರೂಪಾಯಿ ಹೋಯ್ತು ಎಂದು ಯಾರು ಬಾಯಿ ಬಡೆದುಕೊಳ್ಳಲಿಲ್ಲ.  ಪ್ರಕರಣವನ್ನ ಬಯಲು ಮಾಡಿದ್ದ ಸಂದೀಪ್, ಹಣ ಕಿಶೋರ್ ಸೇಠ್​ಗೆ ಸೇರಿದ್ದು, ಇದರಲ್ಲಿ ವಿರಾಟ್ ಗಾಂಧಿ ಎನ್ನುವರ ಕೈವಾಡವೂ…

Read More

ಚಾಲಕನ ಅಜಾಗರೂಕತೆ: ಬಿಎಂಟಿಸಿ ಬಸ್​ಗೆ ಡಿಕ್ಕಿ ಹೊಡೆದ ರೈಲು – Kannada News | Train Hits BMTC Bus In Sadaramangala Railway Parallel Road at Bengaluru

ಬೆಂಗಳೂರು, (ಜನವರಿ 26): ಬಿಎಂಟಿಸಿ ಬಸ್​​​ಗೆ  (BMTC Bus)ರೈಲು ನಡುವೆ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನ (Bengaluru) ಸಾದರಮಂಗಲ ಬಳಿ ನಡೆದಿದೆ. ರೈಲ್ವೆ ಪ್ಯಾರ್ಲಲ್ ರೋಡ್​ನಲ್ಲಿ ರಿವರ್ಸ್ ತೆಗೆದುಕೊಳ್ಳುವಾಗ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಬಸ್​ನಲ್ಲಿ ಪ್ರಯಾಣಿಕರು ಇರಲಿಲ್ಲ. ಇದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಇಂದು (ಜನವರಿ 26) ಬೆಳಗ್ಗೆ ಸಾದರಮಂಗಲ ಡಿಪೋ 51ರ KA57 F6000 ನಂಬರ್​ನ ಬಸ್​ ಕಾಡುಗೋಡಿ ಬಸ್ ಸ್ಟ್ಯಾಂಡ್ ಹೋಗಬೇಕೆಂದು ಚಾಲಕ ರಿವರ್ಸ್ ತೆಗೆದುಕೊಳ್ಳಲು ರೈಲ್ವೆ ಪ್ಯಾರ್ಲಲ್ ರೋಡ್ ನುಗ್ಗಿಸಿದ್ದಾನೆ. ಪರಿಣಾಮ…

Read More

ಪತಿಯ ಹಣದಾಹಕ್ಕೆ ಪತ್ನಿ ಕಳೆದುಕೊಂಡಳಾ ಜೀವ?: ಯುವತಿ ಕುಟುಂಬಸ್ಥರಿಂದ ಗಂಭೀರ ಆರೋಪ – Kannada News | Bengaluru Woman Found Dead: Parents Allege Dowry Harassment by Husband

ಬೆಂಗಳೂರು, ಜನವರಿ 26: 2 ವರ್ಷಗಳ ಹಿಂದೆ ಮದುವೆ ಆಗಿದ್ದ ಮಹಿಳೆಯೋರ್ವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಕೀರ್ತಿ ಮೃತ ಮಹಿಳೆಯಾಗಿದ್ದು, ವರದಕ್ಷಿಣೆ ಕಿರುಕುಳಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಆಕೆಯ ಪೋಷಕರು ಆರೋಪಿಸಿದ್ದಾರೆ. ಕಳೆದ 2 ತಿಂಗಳಿಂದ ಕಿರುಕುಳದ ಬಗ್ಗೆ ತಾಯಿ ಬಳಿ ಕೀರ್ತಿ ಹೇಳಿಕೊಂಡಿದ್ದರು ಎನ್ನಲಾಗಿದೆ. ತಲೆ ತಿರುಗಿ ಬಿದ್ದಿದ್ದಳು ಆಸ್ಪತ್ರೆಗೆ ಸೇರಿಸಿದ್ದೇವೆ ಎಂದು ಪತ್ನಿ ಪೋಷಕರಿಗೆ ಪತಿ ಗುರುಪ್ರಸಾದ್​​ ಮಾಹಿತಿ ನೀಡಿದ್ದ ಎನ್ನಲಾಗಿದ್ದು, ಬನಶಂಕರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ…

Read More

“ಮದರ್ ಆಫ್ ಆಲ್ ಟ್ರೇಡ್ ಡೀಲ್ಸ್”: ಈ ಒಪ್ಪಂದದಿಂದ ಅಗ್ಗವಾಗಲಿದೆ ಈ ವಸ್ತುಗಳ ಬೆಲೆ – Kannada News | India EU FTA: Cheaper Luxury Cars, Exports Boost and Global Stability in Fractured World.

EU ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೇಯೆನ್ ದೆಹಲಿ, ಜ.26: 77ನೇ ಗಣರಾಜ್ಯೋತ್ಸವದ (2026) ಮುಖ್ಯ ಅತಿಥಿಯಾಗಿ ಭಾಗವಹಿಸಿರುವ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ನೀಡಿರುವ ಹೇಳಿಕೆ ಇದೀಗ ಭಾರೀ ಚರ್ಚೆಯಲ್ಲಿದೆ. ಯಶಸ್ವಿ ಭಾರತವು ಜಗತ್ತನ್ನು ಹೆಚ್ಚು ಸ್ಥಿರ, ಸಮೃದ್ಧ ಮತ್ತು ಸುರಕ್ಷಿತವಾಗಿಸುತ್ತದೆ. ಪ್ರಸ್ತುತ ಜಗತ್ತು ಸಂಘರ್ಷಗಳಿಂದ ಹರಿದುಹಂಚಿಹೋಗಿರುವಾಗ (Fractured World), ಭಾರತ ಮತ್ತು ಯುರೋಪ್‌ ದೇಶಗಳು ‘ಸಂವಾದ ಮತ್ತು ಮುಕ್ತತೆ’ಯ ಮೂಲಕ ಹೊಸ ಹಾದಿಯನ್ನು ತೋರಿಸುತ್ತಿವೆ ಎಂದು ಅವರು ಶ್ಲಾಘಿಸಿದ್ದಾರೆ….

Read More

ದುಬಾರಿ ಸಂಭಾವನೆ, ‘ಕೈದಿ 2’ಗೆ ಫುಲ್ ಸ್ಟಾಪ್? ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟ ನಿರ್ದೇಶಕ – Kannada News | Lokesh Kanagaraj Clears Kaithi 2 Rumors, Confirms LCU Future and Allu Arjun Film Plans

ನಿರ್ದೇಶಕ ಲೋಕೇಶ್ ಕನಗರಾಜ್ ಅವರು ದಕ್ಷಿಣದ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಇತ್ತೀಚೆಗೆ ಬಂದ ಅವರ ನಿರ್ದೇಶನದ ‘ಕೂಲಿ’ ಸೋಲು ಕಂಡಿತು. ಈಗ ಲೋಕೇಶ್ ಅವರು ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ತಮ್ಮ ಬಗ್ಗೆ ಕೇಳಿ ಬಂದ ವದಂತಿಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಲೋಕೇಶ್ ಕನಗರಾಜ್ ಅವರು ‘ಕೈದಿ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ರಿಲೀಸ್ ಆಗಿದ್ದು 2019ರಲ್ಲಿ. ಈ ಚಿತ್ರಕ್ಕೆ ಸೀಕ್ವೆಲ್ ತರೋದಾಗಿ ಘೋಷಣೆ ಮಾಡಿದ್ದರು. ಆದರೆ,…

Read More

ಉಪೇಂದ್ರ, ರಮ್ಯಾ ನಟನೆಯ ‘ರಕ್ತ ಕಾಶ್ಮೀರ’ ಸಿನಿಮಾ ಜನವರಿ 30ಕ್ಕೆ ರಿಲೀಸ್ – Kannada News | Upendra Ramya starrer Raktha Kashmira releasing on 30 January

ಒಂದಷ್ಟು ವರ್ಷಗಳ ಹಿಂದೆಯೇ ‘ರಕ್ತ ಕಾಶ್ಮೀರ’ ಸಿನಿಮಾದ ಶೂಟಿಂಗ್ ನಡೆದಿತ್ತು. ಉಪೇಂದ್ರ (Upendra) ಹಾಗೂ ರಮ್ಯಾ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಆದರೆ ಕಾರಣಾಂತರಗಳಿಂದ ಚಿತ್ರದ ಕೆಲಸಗಳು ಪೂರ್ಣಗೊಳ್ಳುವುದು ತಡವಾಗಿತ್ತು. ಜನವರಿ 30ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು (SV Rajendra Singh Babu) ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ‘ಎಂಡಿಎಂ ಪ್ರೊಡಕ್ಷನ್ಸ್’ ಮೂಲಕ ‘ರಕ್ತ ಕಾಶ್ಮೀರ’ (Raktha Kashmira) ಸಿನಿಮಾ ನಿರ್ಮಾಣ ಆಗಿದೆ. ಮುಖೇಶ್ ರಿಶಿ,…

Read More