ರಾಮನಗರ ಕಲ್ಲು ಕ್ವಾರಿಯಲ್ಲಿ ಏಳು ಕಾರ್ಮಿಕರ ಸಾವು ಪ್ರಕರಣ: ಮೂವರು ಅರೆಸ್ಟ್ – Kannada News | Ramanagara Quarry Disaster: 3 Arrested in 7 Laborers Death Case Near Bengaluru

ರಾಮನಗರ, ಜುಲೈ 03: ಗುರುವಾರ ಬೆಳಗ್ಗಿನ ಜಾವ ಬೆಂಗಳೂರು ದಕ್ಷಿಣ (Ramanagar) ತಾಲೂಕಿನ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಪಟ್ಟಣ ಗ್ರಾಮದಲ್ಲಿ ಕಾವೇರಿ ಕ್ವಾರಿಯಲ್ಲಿ ಏಕಾಏಕಿ ಕಲ್ಲುಬಂಡೆ ಕುಸಿದು ಬಿದ್ದ ಪರಿಣಾಮ ಏಳು ಮಂದಿ ಕೂಲಿ ಕಾರ್ಮಿಕರು ದಾರುಣವಾಗಿ ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಭೀಕರ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರ್ಮಿಕನ ದೂರಿನ ಮೇರೆಗೆ ಎಫ್​ಐಆರ್

ದುರಂತ ಸಂಭವಿಸುತ್ತಿದ್ದಂತೆ ಕಾರ್ಯಪ್ರವೃತ್ತರಾದ ತಾವರೆಕೆರೆ ಠಾಣೆಯ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿ ಮೂವರನ್ನು ಕಸ್ಟಡಿಗೆ ಪಡೆದಿದ್ದಾರೆ. ಸಾಯಿ ರಾಮ್ ಕ್ರಷರ್ ಮಾಲೀಕ ಪಾಂಡುರಂಗ, ಕ್ರಷರ್ ಹಾಗೂ ಕ್ವಾರಿ ಇನ್ ಚಾರ್ಜ್ ಲೋಕೇಶ್ ಹಾಗೂ ಕಾವೇರಿ ಕ್ರಷರ್ ನ ಲೋಕಲ್ ಇನ್ ಚಾರ್ಜ್ ರಾಜು , ಈ ಮೂವರು ಬಂಧನಕ್ಕೊಳಗಾದವರು. ಘಟನೆಯಲ್ಲಿ ಬದುಕುಳಿದ ಕಾರ್ಮಿಕ ಗೋಪಿಕೃಷ್ಣನ್ ಟಿ. ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ.

ಮೂರು ಟ್ರ್ಯಾಕ್ಟರ್ ಜಖಂ

ಘಟನೆಯ ದಿನದಂದು ಕ್ವಾರಿಯ ಕೆಳಭಾಗದಲ್ಲಿ ಒಟ್ಟು 16 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಕೇಂದ್ರ ವಲಯದ ಐಜಿಪಿ ಎಸ್.ಗಿರೀಶ್ ತಿಳಿಸಿದ್ದಾರೆ. ಅವರ ಮೇಲೆ ಏಕಾಏಕಿ ಬೃಹತ್ ಬಂಡೆ ಉರುಳಿದ ಕಾರಣ ರಾಮು (46), ರಾಜಪಾಲ್ ಸಿಂಗ್ (35), ಸತ್ಯನಾರಾಯಣ ಸಿಂಗ್ (31), ರಾಮ ವತಾರ್ ಸಿಂಗ್ (31), ರಾಜೇಂದ್ರ ಪ್ರಸಾದ್, ನೂಹರ್ ಸಿಂಗ್ ಮತ್ತು ಭುವನೇಶ್ವರ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಂಡೆ ಬಿದ್ದ ರಭಸಕ್ಕೆ ಸ್ಥಳದಲ್ಲಿದ್ದ ಮೂರು ಟ್ರ್ಯಾಕ್ಟರ್‌ಗಳು ಸಂಪೂರ್ಣ ಜಖಂಗೊಂಡಿವೆ. ಇನ್ನುಳಿದ ಗಾಯಾಳುಗಳಾದ ಗುಲಾಬ್ ಸಿಂಗ್, ರಾಜ್ ಪಾಲ್, ಚೋಟು, ನೋಹರ್ ಸಿಂಗ್ ಮತ್ತು ಆನಂದ್ ಅವರನ್ನು ಮೈಸೂರು ರಸ್ತೆಯ ಆರ್.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ ಕಲ್ಲು ಕ್ವಾರಿ ದುರಂತ: ಬಂಡೆ ಬಿದ್ದ ರಭಸಕ್ಕೆ ಮೃತದೇಹ ಚೆಲ್ಲಾಪಿಲ್ಲಿ, ಟ್ರ್ಯಾಕ್ಟರ್​​ಗಳು ಪೀಸ್​​ ಪೀಸ್​

ತಲೆಮರೆಸಿಕೊಂಡ ಮುಖ್ಯ ಮಾಲೀಕರು

ಪೊಲೀಸರು ಸದ್ಯ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದರೂ, ದುರಂತ ನಡೆದ ಕಾವೇರಿ ಕ್ರಷರ್‌ನ ಅಸಲಿ ಮಾಲೀಕ ಉದಯ್ ಶಂಕರ್ ಮತ್ತು ಬಸವೇಶ್ವರ ಕ್ರಷರ್ ಮಾಲೀಕ ಡಿ. ಆನಂದಸ್ವಾಮಿ ಹಾಗೂ ಹಿಟಾಚಿ ಚಾಲಕ ತಿರುಪತಿ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಈ ಪ್ರಮುಖ ಮಾಲೀಕರು ತಲೆಮರೆಸಿಕೊಂಡಿದ್ದು, ಇವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಾಕ್ಸ್ ಆಫೀಸ್‌ನಲ್ಲಿ ಮೆಗಾ ಫೈಟ್; ರಜನಿಕಾಂತ್ ‘ಜೈಲರ್ 2’ ಜೊತೆ ಚಿರಂಜೀವಿ ‘ವಿಶ್ವಂಭರ’ ಕ್ಲ್ಯಾಶ್? – Kannada News | Rajinikanth’s Jailer 2 vs Chiranjeevi’s Vishwambhara Dasara Box Office Clash

ದಸರಾ ಹಬ್ಬದ ಸಂದರ್ಭದಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ತೆರೆಗೆ ತರುವ ಪ್ರಯತ್ನ ಮಾಡುತ್ತಾರೆ. ಈ ಮೊದಲು ಈ ಹಬ್ಬದ ವೇಳೆ ಸಾಕಷ್ಟು ಕ್ಲ್ಯಾಶ್​​​ಗಳು ನಡೆದ ಉದಾಹರಣೆ ಇದೆ. ಈ ಬಾರಿಯೂ ದಸರಾ ರಂಗೇರುವ ಸೂಚನೆ ಇದೆ. ಸೂಪರ್‌ಸ್ಟಾರ್ ರಜನಿಕಾಂತ್, ಶಿವರಾಜ್​ಕುಮಾರ್ ಮೊದಲಾದವರು ನಟಿಸಿರೋ ‘ಜೈಲರ್ 2’ (Jailer 2)  ದಸರಾ ಪ್ರಯುಕ್ತ ಅಕ್ಟೋಬರ್ 15ಕ್ಕೆ ತೆರೆಗೆ ಬರುತ್ತಿದೆ. ಇದೇ ಸಂದರ್ಭದಲ್ಲಿ ಚಿರಂಜೀವಿ ನಟನೆಯ ‘ವಿಶ್ವಂಭರ’ ಕೂಡ ತೆರೆಗೆ ಬರುವ ನಿರೀಕ್ಷೆ ಇದೆ.

ಅಕ್ಟೋಬರ್‌ನಲ್ಲಿ ಮುಖಾಮುಖಿ?

ವರದಿಗಳ ಪ್ರಕಾರ ಚಿರಂಜೀವಿ ನಟನೆಯ ‘ವಿಶ್ವಂಭರ’ ಚಿತ್ರವನ್ನು ಅಕ್ಟೋಬರ್ 16 ರಂದು ತೆರೆಗೆ ಬರಲು ಯೋಜನೆ ನಡೆಸಲಾಗುತ್ತಿದೆ. ಇದಕ್ಕೂ ಒಂದು ದಿನ ಮುಂಚೆ ಅಂದರೆ ಅಕ್ಟೋಬರ್ 15 ರಂದು ರಜನಿಕಾಂತ್ ಅವರ ‘ಜೈಲರ್ 2’ ಬಿಡುಗಡೆಯಾಗಲಿದೆ. ಹೀಗಾಗಿ ದಕ್ಷಿಣ ಭಾರತದ ಇಬ್ಬರು ದೈತ್ಯ ನಟರ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನೇರ ಹಣಾಹಣಿ ನಡೆಸಲಿವೆ.

‘ಜೈಲರ್ 2’ ಟೀಸರ್

ಭಾರಿ ನಿರೀಕ್ಷೆಯ ‘ವಿಶ್ವಂಭರ’

‘ವಿಶ್ವಂಭರ’ ಒಂದು ಅದ್ಭುತ ಫ್ಯಾಂಟಸಿ ಕಥಾಹಂದರ ಹೊಂದಿರುವ ಸಿನಿಮಾ. ಈ ಚಿತ್ರವನ್ನು ಮಲ್ಲಿಡಿ ವಸಿಷ್ಠ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಭಾರಿ ಪ್ರಮಾಣದ ವಿಎಫ್‌ಎಕ್ಸ್ ಮತ್ತು ಸಿಜಿಐ ಕೆಲಸಗಳು ಇವೆ.ಸಿನಿಮಾ ಗ್ರಾಫಿಕ್ಸ್ ಕೆಲಸಗಳಿಗಾಗಿ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದೆ. ಚಿತ್ರದಲ್ಲಿ ಚಿರಂಜೀವಿ ಜೊತೆಗೆ ತ್ರಿಶಾ ಕೃಷ್ಣನ್, ಕುನಾಲ್ ಕಪೂರ್ ಮತ್ತು ಆಶಿಕಾ ರಂಗನಾಥ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ರಜನಿಕಾಂತ್ ನಟನೆಯ ‘ಜೈಲರ್ 2’ ಅಕ್ಟೋಬರ್ 15ರಂದು ಬಿಡುಗಡೆ ಆಗೋದು ಖಚಿತ

ಕುತೂಹಲ ಮೂಡಿಸಿದ ‘ಜೈಲರ್ 2’

ಮತ್ತೊಂದೆಡೆ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್ 2’ ಚಿತ್ರದ ಟೀಸರ್ ದಿನಾಂಕ ನಿನ್ನೆಯಷ್ಟೇ ರಿಲೀಸ್ ಆಗಿತ್ತು. ಈ ವಿಡಿಯೋದಲ್ಲಿ ರಜನಿಕಾಂತ್ ಅವರ ಲುಕ್ ಅನ್ನು ಸಸ್ಪೆನ್ಸ್ ಆಗಿ ಇಡಲಾಗಿದೆ. ಕೇವಲ ಅವರ ನೆರಳು ಕಾಣಿಸಿದೆ. ಈ ಚಿತ್ರದಲ್ಲಿ ಎಸ್‌ಜೆ ಸೂರ್ಯ, ರಮ್ಯಾ ಕೃಷ್ಣನ್, ಯೋಗಿ ಬಾಬು, ವಿಜಯ್ ಸೇತುಪತಿ ನಟಿಸುತ್ತಿದ್ದಾರೆ. ಇವರ ಜೊತೆಗೆ ಬಾಲಿವುಡ್ ನಟ ಹೃತಿಕ್ ರೋಷನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಹೈಪ್ ಹೆಚ್ಚಿಸಿದೆ. ಕನ್ನಡದ ಶಿವರಾಜ್​​ಕುಮಾರ್ ಕೂಡ ಸಿನಿಮಾದಲ್ಲಿ ಇರಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಾಕ್ಸ್​​ಗಳಲ್ಲಿ ನೋಟಿನ ಬಂಡಲ್, ವಾಶ್​ರೂಮ್​ನಲ್ಲಿ ನಗದು, ಜೇಬಿಲ್ಲದ ಸಮವಸ್ತ್ರ, ರಾಮಮಂದಿರದಲ್ಲಿ ವಾರದಿಂದೀಚೆಗೆ ಏನೇನಾಯ್ತು? – Kannada News | Ayodhya Ram Mandir Theft: CCTV Exposes Cash Smuggling, New Rules and Resignations

ಅಯೋಧ್ಯೆ, ಜುಲೈ 03: ಅಯೋಧ್ಯೆ ರಾಮ ಮಂದಿರ(Ram Mandir)ದ ಕಾಣಿಕೆ ಹಣ ಎಣಿಕೆ ವೇಳೆ ನಡೆದ ಕೋಟ್ಯಂತರ ರೂಪಾಯಿ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಅತ್ಯಂತ ಆಘಾತಕಾರಿ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. ದೇವಸ್ಥಾನದ ‘ಯಾತ್ರಿಕ ಸೌಲಭ್ಯ ಕೇಂದ್ರ’ದ (PFC) 45 ದಿನಗಳ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಜಾಲಾಡಿದಾಗ, ಬಂಧಿತ 8 ಆರೋಪಿಗಳ ಪೈಕಿ ಐವರು ನಗದು ಬಂಡಲ್‌ಗಳನ್ನು ಅತ್ಯಂತ ಜಾಣ್ಮೆಯಿಂದ ಕದ್ದು ತಮ್ಮ ಬಟ್ಟೆ ಮತ್ತು ಸಾಕ್ಸ್‌ಗಳ ಒಳಗೆ ತುರುಕಿಕೊಳ್ಳುತ್ತಿದ್ದ ಭೀಕರ ದೃಶ್ಯಗಳು ಪತ್ತೆಯಾಗಿವೆ.

ಶೌಚಾಲಯದ ವೆಂಟಿಲೇಷನ್‌ನಲ್ಲಿ ಸಿಕ್ಕಿತ್ತು ನೋಟಿನ ಕಂತೆ

ಜೂನ್ 3 ರಂದು ದೇವಸ್ಥಾನದ ಭದ್ರತಾ ಸಿಬ್ಬಂದಿ ನಡೆಸಿದ ಹಠಾತ್ ತಪಾಸಣೆಯ ವೇಳೆ, ಎಣಿಕೆ ಏಜೆಂಟರು ಬಳಸುತ್ತಿದ್ದ ಶೌಚಾಲಯದ (Washroom) ವಾತಾಯನ ವ್ಯವಸ್ಥೆಯ ಒಳಗೆ ಬಚ್ಚಿಟ್ಟಿದ್ದ ಭಾರಿ ನಗದು ಬಂಡಲ್ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಸಿಸಿಟಿವಿ ಪರಿಶೀಲಿಸಿದಾಗ ಮೊದಲು ಅನುಕಲ್ಪ್ ಮಿಶ್ರಾ ಹಾಗೂ ನಂತರ ಉಳಿದ ಆರೋಪಿಗಳ ಕೃತ್ಯ ಜಗಜ್ಜಾಹೀರಾಯಿತು. ದುರದೃಷ್ಟವಶಾತ್ ದೇವಾಲಯದಲ್ಲಿ ಕೇವಲ 45 ದಿನಗಳ ದೃಶ್ಯಾವಳಿ ಮಾತ್ರ ಉಳಿದಿದ್ದರಿಂದ, ಈ ಕಳ್ಳತನ ದಂಧೆ ಎಷ್ಟು ತಿಂಗಳಿನಿಂದ ನಡೆಯುತ್ತಿತ್ತು ಎಂಬುದನ್ನು ಪತ್ತೆಹಚ್ಚುವುದು ಸವಾಲಾಗಿದೆ. ಪೊಲೀಸರು ಈಗಾಗಲೇ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ ಸುಮಾರು 80 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

ಚಂಪತ್ ರಾಯ್ ಚಾಲಕನೇ ಕಿಂಗ್‌ಪಿನ್; ಟ್ರಸ್ಟ್‌ಗೆ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜೂನ್ 25 ರಂದು ನೀಡಿದ ದೂರಿನ ಮೇರೆಗೆ ಎಂಟು ಜನರನ್ನು ಬಂಧಿಸಲಾಗಿದೆ. ಅವಿನಾಶ್ ಶುಕ್ಲಾ, ಲವಕುಶ್ ಮಿಶ್ರಾ, ಅನುಕಲ್ಪ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ, ರಾಮ್ ಶಂಕರ್ ಯಾದವ್ ಅಲಿಯಾಸ್ ತಿನ್ನು ಯಾದವ್ ಮತ್ತು ಸುಭಾಷ್ ಶ್ರೀವಾಸ್ತವ್.
ಇವರಲ್ಲಿ ತಿನ್ನು ಯಾದವ್, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಮಾಜಿ ಚಾಲಕನಾಗಿದ್ದ, ನಿವೃತ್ತ ಬ್ಯಾಂಕ್ ಉದ್ಯೋಗಿ ಸುಭಾಷ್ ಶ್ರೀವಾಸ್ತವ್ ಶಿಫ್ಟ್ ಉಸ್ತುವಾರಿಯಾಗಿದ್ದ.

ರಾಜೀನಾಮೆ ಸಲ್ಲಿಕೆ: ಹಗರಣದ ನೈತಿಕ ಹೊಣೆ ಹೊತ್ತು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಈಗಾಗಲೇ ತಮ್ಮ ರಾಜೀನಾಮೆ ಪತ್ರಗಳನ್ನು ರವಾನಿಸಿದ್ದಾರೆ. ಜುಲೈ 6 ರಂದು ನಡೆಯಲಿರುವ ಟ್ರಸ್ಟ್‌ನ ಮಹತ್ವದ ಸಭೆಯಲ್ಲಿ ಈ ರಾಜೀನಾಮೆಗಳ ಅಂಗೀಕಾರ ಹಾಗೂ ಜೀವಿತಾವಧಿ ಸದಸ್ಯರನ್ನು ತೆಗೆದುಹಾಕಲು ಬೇಕಾದ 2/3 ಬಹುಮತದ ನಿಯಮಗಳ ಕುರಿತು ಆರ್‌ಎಸ್‌ಎಸ್ (RSS) ಹಿರಿಯ ನಾಯಕರ ಸಮ್ಮುಖದಲ್ಲಿ ಅಂತಿಮ ತೀರ್ಮಾನ ಹೊರಬೀಳಲಿದೆ.

ಮತ್ತಷ್ಟು ಓದಿ: ರಾಮ ಮಂದಿರ ದೇಣಿಗೆ ಹಗರಣದ ತನಿಖೆ ವೇಳೆ ಬಯಲಾಯ್ತು ನಕಲಿ ನೇಮಕಾತಿ ದಂಧೆ, ಸಿಗದ ಉದ್ಯೋಗ ದಾಖಲೆಗಳು

ಎಸ್‌ಬಿಐ ಶಿಫಾರಸು ಹಾಗೂ ಏಜೆನ್ಸಿ ಲೋಪ

ಮಂದಿರದ 35 ಕಾಣಿಕೆ ಪೆಟ್ಟಿಗೆಗಳ ಹಣವನ್ನು ಎರಡು ಶಿಫ್ಟ್‌ಗಳಲ್ಲಿ ಎಣಿಸಲು 50 ಜನರನ್ನು ಇರಿಸಲಾಗಿತ್ತು. ವಾರಾಣಸಿ ಮೂಲದ ‘ಸೈನಿಕ್ ಸೆಕ್ಯುರಿಟೀಸ್’ ಎಂಬ ಹ್ಯೂಮನ್ ರಿಸೋರ್ಸ್ ಸಂಸ್ಥೆಯ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಈ ಎಣಿಕೆ ಸಿಬ್ಬಂದಿಗಳನ್ನು ನೇಮಿಸಿತ್ತು. ಆದರೆ, ಏಜೆನ್ಸಿಯು ಸಿಬ್ಬಂದಿಗಳ ಹಿನ್ನೆಲೆಯನ್ನು ಸರಿಯಾಗಿ ಪರಿಶೀಲಿಸಿರಲಿಲ್ಲ ಮತ್ತು ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳ ಶಿಫಾರಸಿನ ಮೇರೆಗೆ ಈ ಹೆಸರುಗಳನ್ನು ಸೇರಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದ್ದು, ಬ್ಯಾಂಕ್ ನೌಕರರನ್ನೂ ತನಿಖೆಗೆ ಒಳಪಡಿಸಲಾಗಿದೆ.

ಜೇಬಿಲ್ಲದ ಸಮವಸ್ತ್ರ, ಕಟ್ಟುನಿಟ್ಟಿನ ಹೊಸ ರೂಲ್ಸ್

ಈ ಮಹಾ ಕಳ್ಳತನ ಬಯಲಾದ ಬೆನ್ನಲ್ಲೇ ರಾಮ ಮಂದಿರದ ಆಡಳಿತ ಮಂಡಳಿ ಇಡೀ ಎಣಿಕೆ ಪ್ರಕ್ರಿಯೆಯ ನಿಯಮಗಳನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಎಣಿಕೆ ಸಿಬ್ಬಂದಿಗೆ ಈಗ ಜೇಬಿಲ್ಲದ (Pocketless) ಆಕಾಶ ನೀಲಿ ಬಣ್ಣದ ವಿಶೇಷ ಗೌನ್ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ.

ಸಿಬ್ಬಂದಿ ಕಡ್ಡಾಯವಾಗಿ ಮೀಸಲಾದ ಕೊಠಡಿಯಲ್ಲೇ ಬಟ್ಟೆ ಬದಲಾಯಿಸಿ ಎಣಿಕೆ ರೂಮ್‌ಗೆ ಹೋಗಬೇಕು. ಒಳಗೆ ಹೋಗುವಾಗ ಮತ್ತು ಹೊರಬರುವಾಗ ಭಾರಿ ಮೆಟಲ್ ಡಿಟೆಕ್ಟರ್ ತಪಾಸಣೆ ನಡೆಯುತ್ತದೆ. ಸಭೆಗೆ ಮುಂಚಿತವಾಗಿ ಹಿರಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತರು ಆಗಮಿಸಲು ಪ್ರಾರಂಭಿಸಿದ್ದಾರೆ.

ಜುಲೈ 6 ರಂದು ಟ್ರಸ್ಟ್ ಸಭೆ

ಅಯೋಧ್ಯೆಯ ದೇವಾಲಯದಲ್ಲಿ ದೇಣಿಗೆ ಕಳ್ಳತನ ಆರೋಪದ ತನಿಖೆಯ ಮಧ್ಯೆ, ಜುಲೈ 6 ರಂದು ನಡೆಯಲಿರುವ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಸಭೆ ಮಹತ್ವ ಪಡೆದುಕೊಂಡಿದೆ .

ಶೌಚಾಲಯಕ್ಕೂ ತಪಾಸಣೆ: ಕರ್ತವ್ಯದ ಮಧ್ಯೆ ಸಿಬ್ಬಂದಿ ಶೌಚಾಲಯಕ್ಕೆ ಹೋಗಬೇಕಾದರೂ ಸಹ ಇದೇ ಕಠಿಣ ತಪಾಸಣೆಯ ಪ್ರೋಟೋಕಾಲ್ ಅನ್ವಯವಾಗುತ್ತದೆ. ಮೂರು ವರ್ಷಗಳ ಹಿಂದೆ ಜೇಬಿಲ್ಲದ ಪ್ಯಾಂಟ್ ನಿಯಮವಿತ್ತಾದರೂ, ಕಾಲಕ್ರಮೇಣ ನೌಕರರು ಕ್ಯಾಶುಯಲ್ ಬಟ್ಟೆ ಧರಿಸಿ ಬರುವುದನ್ನು ಯಾರೂ ತಡೆದಿರಲಿಲ್ಲ, ಅದೇ ಈ ತಪ್ಪಿಗೆ ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Naramukha Ganapathi: ಗಣೇಶನನ್ನು ಆತನ ಮಾನವ ಮುಖದೊಂದಿಗೆ ಪೂಜಿಸುವ ಏಕೈಕ ದೇವಾಲಯ ಎಲ್ಲಿದೆ ಗೊತ್ತಾ? – Kannada News | Naramukha Ganapathi: Human Faced Ganesha and Pitru Dosha Nivaran at Tilatarpanapuri

ನರಮುಖ ಬಾಲ ಗಣೇಶ ದೇವಸ್ಥಾನImage Credit source: Wikipedia

ವಿಘ್ನನಿವಾರಕ, ಬುದ್ಧಿ-ಜ್ಞಾನದ ಅಧಿದೇವತೆಯಾದ ಶ್ರೀ ಗಣೇಶ ಎಂದರೆ ನಮಗೆ ತಕ್ಷಣ ನೆನಪಾಗುವುದು ದೊಡ್ಡ ಕಿವಿಗಳು ಮತ್ತು ಆನೆಯ ಸೊಂಡಿಲಿರುವ ಗಜಮುಖ. ಆದರೆ, ಭಾರತದ ಅತ್ಯಂತ ಪವಿತ್ರ ಹಾಗೂ ಅಪರೂಪದ ಕ್ಷೇತ್ರವೊಂದರಲ್ಲಿ ಗಣಪತಿಯು ಸಂಪೂರ್ಣ ಭಿನ್ನ ರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾನೆ. ಇಲ್ಲಿ ಸ್ವಾಮಿಗೆ ಆನೆಯ ಸೊಂಡಿಲಿಲ್ಲ, ಬದಲಿಗೆ ಸಣ್ಣ ಬಾಲಕನ ರೂಪದಲ್ಲಿ, ಅತ್ಯಂತ ಪ್ರಶಾಂತವಾದ ಮಾನವ ಮುಖದೊಂದಿಗೆ ನೆಲೆ ನಿಂತಿರುವುದು ಈ ಆಲಯದ ವಿಶೇಷ. ಅದಕ್ಕಾಗಿಯೇ ಈ ಕ್ಷೇತ್ರವನ್ನು “ಆದಿ ವಿನಾಯಕ” ಅಥವಾ “ನರಮುಖ ಬಾಲ ಗಣಪತಿ” ದೇವಸ್ಥಾನ ಎಂದು ಕರೆಯಲಾಗುತ್ತದೆ.

ಎಲ್ಲಿದೆ ಈ ನರಮುಖ ಆದಿ ವಿನಾಯಕ ದೇವಸ್ಥಾನ?

ತಮಿಳುನಾಡು ರಾಜ್ಯದ ನಾಗಪಟ್ನಂ ಜಿಲ್ಲೆಯ ಕೂತನೂರು ಎಂಬ ಪ್ರದೇಶದ ಹತ್ತಿರವಿರುವ ‘ತಿಲತರ್ಪಣಪುರಿ’ ಎಂಬ ಗ್ರಾಮದಲ್ಲಿ ಈ ಅಪರೂಪದ ದೇವಾಲಯವಿದೆ. ಇಲ್ಲಿನ ಪ್ರಸಿದ್ಧ ‘ಮುಕ್ತೀಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ’ ನರಮುಖ ಆದಿ ವಿನಾಯಕನು ನೆಲೆಸಿದ್ದಾನೆ. ಜಗತ್ತಿನಲ್ಲಿಯೇ ಸೊಂಡಿಲಿಲ್ಲದ ಏಕೈಕ ಗಣಪತಿ ವಿಗ್ರಹ ಎಂಬ ಹೆಗ್ಗಳಿಕೆ ಈ ಕ್ಷೇತ್ರಕ್ಕಿದೆ. ಈ ಮುಖ್ಯ ಆಲಯದಲ್ಲಿ ಪರಮಶಿವನು ‘ಮುಕ್ತೀಶ್ವರ’ ರೂಪದಲ್ಲಿ ಮತ್ತು ಅಮ್ಮನವರು ‘ಸ್ವರ್ಣವಲ್ಲಿ ದೇವಿ’ ರೂಪದಲ್ಲಿ ದರ್ಶನ ನೀಡುತ್ತಾರೆ.

ಗಣೇಶನಿಗೆ ಆನೆ ತಲೆ ಬರುವ ಮುಂಚಿನ ರೂಪ:

ಪುರಾಣಗಳ ಪ್ರಕಾರ, ಶಿವಪಾರ್ವತಿಯರ ಪುತ್ರನಾದ ಗಣೇಶನಿಗೆ ಆನೆಯ ತಲೆಯನ್ನು ಜೋಡಿಸುವ ಮುನ್ನ ಆತ ಮಾನವ ರೂಪದಲ್ಲಿಯೇ ಜನಿಸಿದ್ದನು. ಆತನ ಆ ಮೂಲ ಆದಿ ಸ್ವರೂಪವನ್ನೇ ಈ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದು ಇಲ್ಲಿನ ಸ್ಥಳಪುರಾಣ ಹೇಳುತ್ತದೆ. ಇಲ್ಲಿ ಗಣೇಶನು ಬಲಗೈಯನ್ನು ತೊಡೆಯ ಮೇಲಿಟ್ಟುಕೊಂಡು, ಎಡಗೈಯಲ್ಲಿ ಮೋದಕವನ್ನು ಹಿಡಿದು, ಮುಗುಳ್ನಗೆಯ ಮಾನವ ಮುಖದೊಂದಿಗೆ ಕಾಣಿಸಿಕೊಳ್ಳುವುದು ಭಕ್ತರಲ್ಲಿ ಆಶ್ಚರ್ಯ ಮತ್ತು ಭಕ್ತಿಯನ್ನು ಮೂಡಿಸುತ್ತದೆ.

‘ತಿಲತರ್ಪಣಪುರಿ’ ಎಂಬ ಹೆಸರು ಬರಲು ರಾಮಾಯಣದ ಹಿನ್ನೆಲೆ ಏನು?

ಈ ಕ್ಷೇತ್ರಕ್ಕೆ ಪಿತೃಕಾರ್ಯಗಳಿಗೆ (ಶ್ರಾದ್ಧ ಕರ್ಮ) ಸಂಬಂಧಿಸಿದ ಒಂದು ದೊಡ್ಡ ಇತಿಹಾಸವಿದೆ. ಶ್ರೀರಾಮಚಂದ್ರನು ತನ್ನ ತಂದೆ ದಶರಥ ಮಹಾರಾಜನ ಆತ್ಮಕ್ಕೆ ಮೋಕ್ಷ ಸಿಗಲೆಂದು ಭಾರತದ ಅನೇಕ ಪುಣ್ಯಕ್ಷೇತ್ರಗಳಲ್ಲಿ ಪಿತೃಕಾರ್ಯಗಳನ್ನು ಮಾಡಿದರೂ ಆತನಿಗೆ ತೃಪ್ತಿ ಸಿಗಲಿಲ್ಲವಂತೆ. ಆಗ ಪರಮಶಿವನನ್ನು ಪ್ರಾರ್ಥಿಸಿದಾಗ, ಶಿವನು ಈ ಪವಿತ್ರ ಜಾಗದಲ್ಲಿ ತಿಲ (ಎಳ್ಳು) ತರ್ಪಣವನ್ನು ನೀಡಲು ಸೂಚಿಸಿದನು. ಶ್ರೀರಾಮನು ಇಲ್ಲಿನ ಪವಿತ್ರ ಕೊಳದಲ್ಲಿ ಸ್ನಾನ ಮಾಡಿ ಪಿತೃದೇವತೆಗಳಿಗೆ ತಿಲತರ್ಪಣ ಅರ್ಪಿಸಿದ ತಕ್ಷಣ ದಶರಥನಿಗೆ ಮುಕ್ತಿ ಸಿಕ್ಕಿತು ಎಂಬ ನಂಬಿಕೆಯಿದೆ. ಹೀಗೆ ‘ತಿಲ (ಎಳ್ಳು) + ತರ್ಪಣ + ಪುರಿ’ ಎಂಬ ಪದಗಳು ಸೇರಿ ಈ ಜಾಗಕ್ಕೆ “ತಿಲತರ್ಪಣಪುರಿ” ಎಂಬ ಹೆಸರು ಬಂದಿದೆ.

ಪಿತೃದೋಷ ನಿವಾರಣೆಯ ದಕ್ಷಿಣ ಕಾಶಿ:

ತಿಲತರ್ಪಣಪುರಿಯನ್ನು ದಕ್ಷಿಣ ಭಾರತದ ಪ್ರಮುಖ ಕಾಶಿ, ಗಯಾ ಮತ್ತು ರಾಮೇಶ್ವರಂ ಕ್ಷೇತ್ರಗಳಿಗೆ ಸಮಾನವಾಗಿ ಕಾಣಲಾಗುತ್ತದೆ. ಈ ಕ್ಷೇತ್ರದಲ್ಲಿ ಪಿತೃದೇವತೆಗಳಿಗೆ ತರ್ಪಣ ನೀಡಿದರೆ ಎಂತಹ ಪಿತೃದೋಷಗಳಿದ್ದರೂ ನಿವಾರಣೆಯಾಗುತ್ತವೆ ಎಂಬುದು ಭಕ್ತರ ದೃಢ ವಿಶ್ವಾಸ. ಪೂರ್ವಜರಿಗೆ ಸರಿಯಾದ ಸಮಯಕ್ಕೆ ಶ್ರಾದ್ಧಕರ್ಮಗಳನ್ನು ಮಾಡಲು ಸಾಧ್ಯವಾಗದವರು ಇಲ್ಲಿಗೆ ಬಂದು ತರ್ಪಣ ನೀಡಿ ಶುಭ ಫಲಗಳನ್ನು ಪಡೆಯುತ್ತಾರೆ. ಅದಕ್ಕಾಗಿಯೇ ಮಹಾಲಯ ಅಮಾವಾಸ್ಯೆ ಮತ್ತು ಪಿತೃಪಕ್ಷದ ದಿನಗಳಲ್ಲಿ ಇಲ್ಲಿಗೆ ಸಾವಿರಾರು ಭಕ್ತರು ಹರಿದು ಬರುತ್ತಾರೆ.

ಇದನ್ನೂ ಓದಿ: ತಿರುಮಲ ಭಕ್ತರಿಗೆ ಬಿಗ್ ಅಲರ್ಟ್; ಬೆಟ್ಟದ ಮೇಲೆ ಹಾರ್ನ್ ಮಾಡಿದರೆ ಬೀಳುತ್ತೆ ದಂಡ!

ನರಮುಖ ಬಾಲ ಗಣಪತಿಯ ದರ್ಶನದಿಂದ ಸಿಗುವ ಫಲಗಳೇನು?

ಭಕ್ತರ ನಂಬಿಕೆಯ ಪ್ರಕಾರ, ಈ ಅಪರೂಪದ ಆದಿ ವಿನಾಯಕನನ್ನು ದರ್ಶನ ಮಾಡಿ ಪೂಜಿಸುವುದರಿಂದ ಅಪಾರ ಫಲಗಳು ಸಿಗುತ್ತವೆ. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಬುದ್ಧಿಶಕ್ತಿ ಹಾಗೂ ನೆನಪಿನ ಶಕ್ತಿ ಅದ್ಭುತವಾಗಿ ಹೆಚ್ಚುತ್ತದೆ. ಜೀವನದಲ್ಲಿ ಎದುರಾಗುವ ಯಾವುದೇ ಅಡೆತಡೆಗಳು, ವಿಘ್ನಗಳು ದೂರವಾಗಿ ಅಂದುಕೊಂಡ ಕೆಲಸಗಳು ಯಶಸ್ವಿಯಾಗುತ್ತವೆ. ಕುಟುಂಬದಲ್ಲಿನ ಕಲಹಗಳು, ಮನಸ್ತಾಪಗಳು ದೂರವಾಗಿ ಸುಖ-ಶಾಂತಿ ಮತ್ತು ಐಶ್ವರ್ಯ ನೆಲೆಸುತ್ತದೆ.

ದೇವಸ್ಥಾನಕ್ಕೆ ತಲುಪುವುದು ಹೇಗೆ?

ತಿಲತರ್ಪಣಪುರಿ ಗ್ರಾಮವು ತಮಿಳುನಾಡಿನ ಪ್ರಮುಖ ಪುಣ್ಯಕ್ಷೇತ್ರಗಳಿಗೆ ತುಂಬಾ ಹತ್ತಿರದಲ್ಲಿದೆ. ಪ್ರಸಿದ್ಧ ಕೂತನೂರು ಸರಸ್ವತಿ ದೇವಸ್ಥಾನದಿಂದ ಕೇವಲ 3 ಕಿಲೋಮೀಟರ್ ದೂರದಲ್ಲಿದೆ. ತಿರುನಲ್ಲಾರ್ ಶನಿ ಭಗವಾನ್ ದೇವಸ್ಥಾನದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿದೆ. ಕುಂಭಕೋಣಂ, ಮಯಿಲಾಡುತುರೈ ಅಥವಾ ಕಾರೈಕ್ಕಾಲ್ ಪಟ್ಟಣಗಳಿಂದ ಬಸ್ ಅಥವಾ ಟ್ಯಾಕ್ಸಿಗಳ ಮೂಲಕ ಈ ದೇವಸ್ಥಾನವನ್ನು ಸುಲಭವಾಗಿ ತಲುಪಬಹುದು.

ಜಗತ್ತಿನಾದ್ಯಂತ ಗಜಮುಖ ಗಣೇಶನ ದೇವಸ್ಥಾನಗಳು ಕೋಟ್ಯಂತರ ಇರಬಹುದು, ಆದರೆ ಮಾನವ ಮುಖದೊಂದಿಗೆ ಸೊಂಡಿಲಿಲ್ಲದೆ ದರ್ಶನ ನೀಡುವ ಆದಿ ವಿನಾಯಕನ ಕ್ಷೇತ್ರ ಮಾತ್ರ ಅತ್ಯಂತ ಅಪರೂಪದ್ದು. ನಿಮ್ಮ ಜೀವನದ ಪಿತೃದೋಷಗಳು ದೂರಾಗಲು ಮತ್ತು ಮಕ್ಕಳ ವಿದ್ಯಾಭ್ಯಾಸ ಉತ್ತಮಗೊಳ್ಳಲು ಒಮ್ಮೆಯಾದರೂ ಈ ಮಹಿಮಾನ್ವಿತ ಕ್ಷೇತ್ರಕ್ಕೆ ಭೇಟಿ ನೀಡಿ ಸ್ವಾಮಿಯ ಕೃಪೆಗೆ ಪಾತ್ರರಾಗಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಂಡ್ಯ: ಹೈವೇಯಲ್ಲಿ ಕಂಟೇನರ್ ಲಾರಿ ಅಡ್ಡಗಟ್ಟಿ ಉದ್ಯಮಿ ಪುತ್ರನ ಅಟ್ಟಹಾಸ, ಫೈರಿಂಗ್ – Kannada News | Mandya Highway incident: Influential Businessman’s Son Opens Fire at Container Truck Driver in Dacoity Attempt

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆImage Credit source: tv9

ಮಂಡ್ಯ, ಜುಲೈ 3: ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಯುವಕರ ಪುಂಡಾಟಿಕೆ ಹಾಗೂ ರೌಡಿಸಂ ದಿನದಿಂದ ದಿನಕ್ಕೆ ಮಿತಿಮೀರುತ್ತಿರುವುದಕ್ಕೆ ಮತ್ತೊಂದು ಆಘಾತಕಾರಿ ಸಾಕ್ಷಿ ಸಿಕ್ಕಿದೆ. ಬೆಂಗಳೂರು-ಮೈಸೂರು ಹಳೆಯ ಹೆದ್ದಾರಿಯಲ್ಲಿ ಐಷಾರಾಮಿ ಕಾರಿನಲ್ಲಿ ಬಂದ ಮಂಡ್ಯದ ಪ್ರಭಾವಿ ಉದ್ಯಮಿಯೊಬ್ಬರ ಪುತ್ರ ಮತ್ತು ಆತನ ಗ್ಯಾಂಗ್, ಲಾರಿ ಚಾಲಕನ ಮೇಲೆ ಗನ್‌ನಿಂದ ಗುಂಡು ಹಾರಿಸಿ ದರೋಡೆಗೆ ಯತ್ನಿಸಿರುವುದು ದೃಢಪಟ್ಟಿದೆ. ಗುರುವಾರ ಮುಂಜಾನೆ 4 ಗಂಟೆ ಸುಮಾರಿಗೆ ಈ ಭೀಕರ ಕೃತ್ಯ ನಡೆದಿದ್ದು, ತಡರಾತ್ರಿ ಪೊಲೀಸರು ಉದ್ಯಮಿ ಪುತ್ರನನ್ನು ವಶಕ್ಕೆ ಪಡೆದು ಡಿವೈಎಸ್‌ಪಿ (DySP) ಕಚೇರಿಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಲಾರಿ ನಿಲ್ಲಿಸದಿದ್ದಕ್ಕೆ ಗುಂಡಿನ ದಾಳಿ!

ಮೈಸೂರು ಮೂಲದ ಚಾಲಕ ಶಂಕರ್ ಎಂಬುವವರು ಬೆಂಗಳೂರಿನಿಂದ ಔಷಧಗಳನ್ನು ತುಂಬಿಕೊಂಡು ಒಂಟಿಯಾಗಿ ಕಂಟೇನರ್ ಲಾರಿಯಲ್ಲಿ ಮಂಡ್ಯದ ಕಡೆಗೆ ಬರುತ್ತಿದ್ದರು. ಮುಂಜಾನೆ 4 ಗಂಟೆ ಸುಮಾರಿಗೆ ಹಳೇ ಹೆದ್ದಾರಿಯಲ್ಲಿ ಕಂಟೇನರ್ ಅನ್ನು ಅಡ್ಡಗಟ್ಟಲು ಉದ್ಯಮಿ ಪುತ್ರ ಹಾಗೂ ಆತನ ಗ್ಯಾಂಗ್ ಪ್ರಯತ್ನಿಸಿದೆ. ಆದರೆ, ಒಂಟಿಯಾಗಿದ್ದ ಚಾಲಕ ಶಂಕರ್ ಭಯದಿಂದ ಲಾರಿಯನ್ನು ನಿಲ್ಲಿಸದೇ ಮುನ್ನಡೆಸಿದ್ದಾರೆ. ಇದರಿಂದ ಆಕ್ರೋಶಗೊಂಡ ಉದ್ಯಮಿ ಪುತ್ರ, ಲಾರಿಯತ್ತ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ತೀವ್ರ ಭಯದ ಕಾರಣ ಪೊಲೀಸರಿಗೂ ಮಾಹಿತಿ ನೀಡದೆ ಅಲ್ಲಿಂದ ಹೊರಟುಹೋಗಿದ್ದರು.

ಜನರಿಂದ ಹರಡಿದ ಸುದ್ದಿ: ಎಚ್ಚೆತ್ತ ಪೊಲೀಸರು

ಹೆದ್ದಾರಿಯಲ್ಲಿ ನಡೆದ ಈ ಶೂಟೌಟ್ ಬಗ್ಗೆ ಸಾರ್ವಜನಿಕರಲ್ಲಿ ಬಾಯಿಂದ ಬಾಯಿಗೆ ಸುದ್ದಿ ಹರಡುತ್ತಿದ್ದಂತೆ ಎಚ್ಚೆತ್ತ ಮಂಡ್ಯ ಗ್ರಾಮಾಂತರ ಪೊಲೀಸರು, ತಕ್ಷಣವೇ ಲಾರಿ ಚಾಲಕ ಶಂಕರ್‌ನನ್ನು ಪತ್ತೆ ಹಚ್ಚಿ ಠಾಣೆಗೆ ಕರೆಸಿ ಅಧಿಕೃತ ದೂರು ದಾಖಲಿಸಿಕೊಂಡಿದ್ದಾರೆ. ತದನಂತರ ತೀವ್ರ ಕಾರ್ಯಾಚರಣೆ ನಡೆಸಿ ಪ್ರಭಾವಿ ಉದ್ಯಮಿಯ ಪುತ್ರನನ್ನು ತಡರಾತ್ರಿ ವಶಕ್ಕೆ ಪಡೆದಿದ್ದಾರೆ. ಸದ್ಯ ಮಂಡ್ಯ ಡಿವೈಎಸ್‌ಪಿ ಕಚೇರಿಯಲ್ಲಿ ಆರೋಪಿಯ ವಿಚಾರಣೆ ಮುಂದುವರಿದಿದ್ದು, ಮುಂಜಾನೆ 4 ಗಂಟೆಗೆ ಐಷಾರಾಮಿ ಕಾರಿನಲ್ಲಿ ಈ ಗ್ಯಾಂಗ್ ಹೈವೇಯಲ್ಲಿ ನಿಂತು ಏನು ಮಾಡುತ್ತಿತ್ತು? ದರೋಡೆಗೆ ಸಂಚು ರೂಪಿಸಿತ್ತೇ? ಎಂಬ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಲೈಸೆನ್ಸ್ ಇಲ್ಲದೆ ಗನ್ ಸಿಕ್ಕಿದ್ದು ಹೇಗೆ?

ಈ ಕೃತ್ಯಕ್ಕೆ ಉದ್ಯಮಿ ಪುತ್ರ ಅಕ್ರಮವಾಗಿ ಗನ್ ಬಳಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಆತನ ಬಳಿ ಯಾವುದೇ ಅಧಿಕೃತ ಗನ್ ಲೈಸೆನ್ಸ್ ಇರಲಿಲ್ಲ ಎಂಬುದು ಪತ್ತೆಯಾಗಿದೆ. ಪರವಾನಗಿ ಇಲ್ಲದಿದ್ದರೂ ಪ್ರಭಾವಿ ವ್ಯಕ್ತಿಯ ಮಗನಿಗೆ ಈ ಮಾರಕ ಆಯುಧ ಸಿಕ್ಕಿದ್ದು ಹೇಗೆ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.

ಇದನ್ನೂ ಓದಿ: ಗೃಹ ಸಚಿವರ ತವರಲ್ಲೇ ಮೈ ಮರೆತ್ರಾ ಪೊಲೀಸರು? ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!

ಮಂಡ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಪುಡಿ ರೌಡಿಗಳ ಕಾಟ ಹೆಚ್ಚಾಗುತ್ತಿದ್ದು, ಇಂತಹ ಕೃತ್ಯಗಳು ನಡೆಯುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸದ್ಯ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗ್ಯಾಂಗ್‌ನ ಇತರ ಸದಸ್ಯರಿಗಾಗಿ ಹುಡುಕಾಟ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

16 ದಾಖಲೆಗಳ ನೀಡಿದ್ರೂ ಸಿಗದ ಭಾರತೀಯ ಪೌರತ್ವ, ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್ – Kannada News | Guwahati HC Rejects 16 Docs: Man Fails to Prove Indian Citizenship in Assam

ಗುವಾಹಟಿ, ಜುಲೈ 03: ಪೌರತ್ವ(Citizenship) ಸಾಬೀತುಪಡಿಸುವ ನಿಟ್ಟಿನಲ್ಲಿ ವ್ಯಕ್ತಿಯೊಬ್ಬರು ಸಲ್ಲಿಕೆ ಮಾಡಿದ್ದ ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ಬರೋಬ್ಬರಿ 16 ಪ್ರಮುಖ ದಾಖಲೆಗಳನ್ನು ಗುವಾಹಟಿ ಹೈಕೋರ್ಟ್ ತಿರಸ್ಕರಿಸಿದೆ. ಈ ಎಲ್ಲಾ ದಾಖಲೆಗಳಿದ್ದರೂ ಅರ್ಜಿದಾರ ತಾನು ಭಾರತೀಯ ಪ್ರಜೆ ಎಂಬುದನ್ನು ಕಾನೂನಾತ್ಮಕವಾಗಿ ಸಾಬೀತುಪಡಿಸಲು ವಿಫಲನಾಗಿದ್ದಾನೆ ಎಂದು ನ್ಯಾಯಾಲಯ ಹೇಳಿದೆ.

ಏನಿದು ಪ್ರಕರಣ? ಹೈಕೋರ್ಟ್ ಮೆಟ್ಟಿಲೇರಿದ್ದು ಯಾಕೆ?
ಅಸ್ಸಾಂನ ಕಾಮರೂಪ್ ಜಿಲ್ಲೆಯ ವಿದೇಶಿಯರ ನ್ಯಾಯಮಂಡಳಿಯು 2019 ರ ಫೆಬ್ರವರಿಯಲ್ಲಿ ಅಮೀನುಲ್ ಹೋಕ್ ಎಂಬಾತನನ್ನು ವಿದೇಶಿ (ಅಕ್ರಮ ವಲಸಿಗ) ಎಂದು ಘೋಷಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಹೋಕ್ ಗುವಾಹಟಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.

ತಾನು ಭಾರತೀಯ ಎಂದು ಸಾಬೀತುಪಡಿಸಲು ಹೋಕ್ ಅವರು 1951 ರ ಎನ್‌ಆರ್‌ಸಿ (NRC) ಪ್ರತಿ, 1966 ರಿಂದ 2017 ರವರೆಗಿನ ಪೋಷಕರ ಮತದಾರರ ಪಟ್ಟಿ, 1973 ರ ಭೂ ಖರೀದಿ ಪತ್ರಗಳು, ಪ್ಯಾನ್ ಕಾರ್ಡ್ (PAN), ವೋಟರ್ ಐಡಿ ಮತ್ತು ಶಾಲಾ ಪ್ರಮಾಣಪತ್ರ ಸೇರಿದಂತೆ 16 ದಾಖಲೆಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದರು.

ದಾಖಲೆಗಳನ್ನು ಹೈಕೋರ್ಟ್ ತಿರಸ್ಕರಿಸಿದ್ದೇಕೆ?
ನ್ಯಾಯಮೂರ್ತಿಗಳಾದ ಕಲ್ಯಾಣ್ ರೈ ಸುರಾನ ಮತ್ತು ಶಮೀಮಾ ಜಹಾನ್ ಅವರ ಪೀಠವು ಜೂನ್ 30 ರಂದು ಈ ಆದೇಶ ಪ್ರಕಟಿಸಿದೆ. ವಿದೇಶಿಯರ ಕಾಯ್ದೆ 1964ರ ಸೆಕ್ಷನ್ 9 ರ ಪ್ರಕಾರ, ಒಬ್ಬ ವ್ಯಕ್ತಿ ವಿದೇಶಿಯೇ ಅಥವಾ ಅಲ್ಲವೇ ಎಂಬ ಪ್ರಶ್ನೆ ಎದ್ದಾಗ, ತಾನು ಭಾರತೀಯ ಪ್ರಜೆ ಎಂದು ಸಾಬೀತುಪಡಿಸುವ ಸಂಪೂರ್ಣ ಜವಾಬ್ದಾರಿ ಆ ವ್ಯಕ್ತಿಯ ಮೇಲೆಯೇ ಇರುತ್ತದೆ. ಆದರೆ ಹೋಕ್ ಸಲ್ಲಿಸಿದ ದಾಖಲೆಗಳಲ್ಲಿ ಹಲವು ಗಂಭೀರ ಲೋಪದೋಷಗಳಿರುವುದನ್ನು ಕೋರ್ಟ್ ಪತ್ತೆಹಚ್ಚಿದೆ.

ಹೋಕ್ ಅವರ ತಂದೆ ಮತ್ತು ಅಜ್ಜನ ಹೆಸರುಗಳ ಕಾಗುಣಿತದಲ್ಲಿ ಮತದಾರರ ಪಟ್ಟಿಯಿಂದ ಪಟ್ಟಿಗೆ ಭಾರಿ ವ್ಯತ್ಯಾಸಗಳಿದ್ದವು. ಅಲ್ಲದೆ, ಅವರ ಕುಟುಂಬವು ದೋಬಕುರಾ, ಘುಗುಡೋಬಾ ಮತ್ತು ಹಶ್ಡೋಬಾ ಎಂಬ ಮೂರು ಹಳ್ಳಿಗಳಿಗೆ ವಲಸೆ ಹೋಗಿದೆ ಎಂದು ವಾದಿಸಲಾಗಿದ್ದರೂ, ಅದಕ್ಕೆ ಪೂರಕವಾದ ಯಾವುದೇ ಅಧಿಕೃತ ವಾಸಸ್ಥಳ ಬದಲಾವಣೆ ದಾಖಲೆ ಇರಲಿಲ್ಲ. ಮತದಾರರ ಪಟ್ಟಿಯ ಹೆಸರುಗಳನ್ನು ಹೊಂದಿಸಲು ಕಟ್ಟುಕಥೆ ಹೆಣೆಯಲಾಗಿದೆ ಎಂದು ಕೋರ್ಟ್ ಹೇಳಿದೆ.

ತನಿಖೆಯ ವೇಳೆ ಹೋಕ್ ಅವರ ತಂದೆ ನ್ಯಾಯಾಲಯಕ್ಕೆ ಬಂದು ಈತನೇ ನನ್ನ ಮಗ ಎಂದು ಮೌಖಿಕವಾಗಿ ಹೇಳಿಕೆ ನೀಡಿದ್ದರು. ಆದರೆ ಲಿಖಿತ ಲಿಂಕ್ ದಾಖಲೆಗಳಿಲ್ಲದೆ ಕೇವಲ ತಂದೆಯ ಮೌಖಿಕ ಸಾಕ್ಷ್ಯವನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಹೋಕ್ ಸಲ್ಲಿಕೆ ಮಾಡಿದ್ದ ಹಶ್ಡೋಬಾ ಶಾಲೆಯ ಪ್ರಮಾಣಪತ್ರವನ್ನು ಬರೆದುಕೊಟ್ಟ ಮುಖ್ಯೋಪಾಧ್ಯಾಯರು ನ್ಯಾಯಾಲಯಕ್ಕೆ ಹಾಜರಾಗಿ ಅದನ್ನು ದೃಢಪಡಿಸಿರಲಿಲ್ಲ. ಹೀಗಾಗಿ ಆ ದಾಖಲೆಯನ್ನೂ ಕೋರ್ಟ್ ತಿರಸ್ಕರಿಸಿದೆ.

ಅಸ್ಸಾಂನಲ್ಲಿ 2019 ರಲ್ಲೇ ರಾಷ್ಟ್ರೀಯ ನಾಗರಿಕ ನೋಂದಣಿ (NRC) ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಅದು ಇನ್ನೂ ಅಧಿಕೃತವಾಗಿ ಜಾರಿಯಾಗಿಲ್ಲ. ಇಂತಹ ಸಂದರ್ಭದಲ್ಲಿ ಅಗತ್ಯ ಕಾನೂನು ಚೌಕಟ್ಟಿನ ಲಿಂಕ್ ದಾಖಲೆಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗೃಹ ಸಚಿವರ ತವರಲ್ಲೇ ಮೈ ಮರೆತ್ರಾ ಪೊಲೀಸರು? ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ! – Kannada News | Kalaburagi: POCSO Accused Manjunath Removes Handcuffs, Escapes Afzalpur Police Station While Staff Slept

ಕಲಬುರಗಿ, ಜುಲೈ 3: ಗೃಹ ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆಯಾದ ಕಲಬುರಗಿಯಲ್ಲಿ ಪೊಲೀಸರ ಘೋರ ನಿರ್ಲಕ್ಷ್ಯವೊಂದು ಬೆಳಕಿಗೆ ಬಂದಿದೆ. ಜಿಲ್ಲೆಯ ಅಫಜಲಪುರ ಪೊಲೀಸ್ ಠಾಣೆಗೆ ಬಂಧಿಸಿ ಕರೆತರಲಾಗಿದ್ದ ಪೋಕ್ಸೋ (POCSO) ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ್ ಎಂಬಾತ ಗುರುವಾರ ಮಧ್ಯರಾತ್ರಿ ಅತ್ಯಂತ ಚಾಣಾಕ್ಷತನದಿಂದ ಪರಾರಿಯಾಗಿದ್ದಾನೆ. ಠಾಣೆಯಲ್ಲಿದ್ದ ಸಿಬ್ಬಂದಿ ಗಡದ್ದಾಗಿ ಮಲಗಿರುವುದನ್ನು ಕಂಡ ಆರೋಪಿ, ತನಗೆ ಹಾಕಲಾಗಿದ್ದ ಕೈಕೋಳವನ್ನು ಬಿಚ್ಚಿಕೊಂಡು ಠಾಣೆಯ ಎರಡನೇ ಮಹಡಿಯಿಂದ ಪಕ್ಕದಲ್ಲೇ ಇದ್ದ ಮರದ ಕೊಂಬೆಯನ್ನು ಹಿಡಿದು ಜಿಗಿದು ಎಸ್ಕೇಪ್ ಆಗಿದ್ದಾನೆ.

ಸುಮಾರು ಒಂದು ವಾರದ ಹಿಂದೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಅಪ್ರಾಪ್ತ ಬಾಲಕಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಬಂಧಿಸಿದ್ದ ಪೊಲೀಸರು, ಮುಂದಿನ ಕಾನೂನು ಪ್ರಕ್ರಿಯೆ ಹಾಗೂ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಲುವಾಗಿ ಠಾಣೆಗೆ ಕರೆತಂದು ಇರಿಸಿದ್ದರು. ಆದರೆ, ಪೊಲೀಸರ ಮೈಮರೆವಿನ ಲಾಭ ಪಡೆದ ಆರೋಪಿ ನಸುಕಿನ ಜಾವ ಪರಾರಿಯಾಗಿದ್ದಾನೆ.

ಆರೋಪಿ ಮಂಜುನಾಥ್ ಠಾಣೆಯಿಂದ ಅತ್ಯಂತ ನಿರಾಳವಾಗಿ ಓಡಿ ಹೋಗುತ್ತಿರುವ ಸಂಪೂರ್ಣ ದೃಶ್ಯಗಳು ಪೊಲೀಸ್ ಠಾಣೆಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿವೆ. ಗೃಹ ಸಚಿವರ ತವರಿನಲ್ಲೇ ನಡೆದಿರುವ ಈ ಘಟನೆ ಸದ್ಯ ಇಡೀ ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿದೆ. ಸದ್ಯ ಎಚ್ಚೆತ್ತುಕೊಂಡಿರುವ ಹಿರಿಯ ಅಧಿಕಾರಿಗಳು ಆರೋಪಿಯ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದು, ನೆರೆಯ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿ ಭಾಗಗಳು ಸೇರಿದಂತೆ ವಿವಿಧೆಡೆ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ಕರ್ತವ್ಯ ಲೋಪ ಎಸಗಿದ ಸಿಬ್ಬಂದಿಯ ವಿರುದ್ಧವೂ ಕಠಿಣ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gruha Jyoti Scheme: ಗೃಹಜ್ಯೋತಿ ಪರಿಷ್ಕರಣೆ ಅಲ್ಲ; ಇದು ಮಾಹಿತಿ ಸಂಗ್ರಹ ಅಷ್ಟೇ ಎಂದ ಚೆಸ್ಕಾಂ MD ಅರ್ಚನಾ! – Kannada News | Gruha Jyoti Scheme: Not a Revision, But Data Collection, Clarifies CESC MD Archana

ಮೈಸೂರು, ಜುಲೈ 03: ಕರ್ನಾಟಕದಲ್ಲಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಂದ ರಾಜ್ಯಾದ್ಯಂತ ಮಾಹಿತಿ ಸಂಗ್ರಹಣೆ ಕಾರ್ಯ ಭರದಿಂದ ಸಾಗಿದೆ. ಮೈಸೂರಿನ ವಿಜಯನಗರ ಬಡಾವಣೆಯಲ್ಲಿ ನಡೆಯುತ್ತಿರುವ ಈ ಕಾರ್ಯದ ಎರಡನೇ ದಿನದ ಮೇಲ್ವಿಚಾರಣೆಯನ್ನು ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಅರ್ಚನಾ ಅವರು ನಡೆಸಿದ್ದಾರೆ. ಇದು ಗೃಹಜ್ಯೋತಿ ಯೋಜನೆಯ ಪರಿಷ್ಕರಣೆಯಲ್ಲ, ಬದಲಾಗಿ ಭವಿಷ್ಯದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಮತ್ತು ಫಲಾನುಭವಿಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ನಡೆಸುತ್ತಿರುವ ಒಂದು ವ್ಯವಸ್ಥಿತ ಮಾಹಿತಿ ಕಲೆಹಾಕುವ ಪ್ರಕ್ರಿಯೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಚೆಸ್ಕಾಂ ಸಿಬ್ಬಂದಿ ಮನೆ ಮನೆಗೆ ತೆರಳಿ ಒಟ್ಟು 11 ಅಂಶಗಳ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಡಿತರ ಚೀಟಿ ವಿವರಗಳು ಹಾಗೂ ಮನೆಯ ಮಾಲೀಕತ್ವ (ಸ್ವಂತ ಮನೆ/ಬಾಡಿಗೆ ಮನೆ) ಇತ್ಯಾದಿ ಮಾಹಿತಿಗಳನ್ನು ಕೇಳಲಾಗುತ್ತಿದೆ. ಜಾತಿ ಮತ್ತು ಪ್ಯಾನ್ ಕಾರ್ಡ್ ಮಾಹಿತಿಗಳು ಕಡ್ಡಾಯವಲ್ಲ ಎಂದು ಅರ್ಚನಾ ಅವರು ತಿಳಿಸಿದ್ದಾರೆ. ಮತದಾರರ ಗುರುತಿನ ಚೀಟಿ ಮಾಹಿತಿ ಮಾತ್ರ ಕಡ್ಡಾಯವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹಿಂದಿಯನ್ನು ರಾಜ ಭಾಷೆ ಎಂದು ಕರೆದ ಪವನ್ ಕಲ್ಯಾಣ್; ಕೇಳಿ ಬಂತು ಟೀಕೆ – Kannada News | Pawan Kalyan says Hindi Raj Bhasha Remark Sparks South India Language Controversy

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರ ಹೊಸ ಹೇಳಿಕೆಯೊಂದು ದಕ್ಷಿಣ ಭಾರತದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ‘ಹಿಂದಿ ಹೇರಿಕೆ’ಯನ್ನು ವಿರೋಧಿಸುತ್ತಿದ್ದ ಪವನ್, ಈಗ ಇದ್ದಕ್ಕಿದ್ದಂತೆ ಹಿಂದಿ ಭಾಷೆಯ ಪರವಾಗಿ ಬ್ಯಾಟ್ ಬೀಸಿರುವುದು ಪ್ರಾದೇಶಿಕ ಭಾಷಾ ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದ್ದ, ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಸಭೆಯಲ್ಲಿ ಹೇಳಿಕೆ

ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಪವನ್ ಕಲ್ಯಾಣ್, ತೆಲುಗು ಬಿಟ್ಟು ಹಿಂದಿಯಲ್ಲಿ ಭಾಷಣ ಮಾಡಲು ಆರಂಭಿಸಿದರು. ಇದಕ್ಕೆ ಕಾರಣ ನೀಡಿದ ಅವರು, ‘ನಾನು ಹಿಂದಿಯಲ್ಲಿ ಏಕೆ ಮಾತನಾಡುತ್ತಿದ್ದೇನೆ ಎಂದರೆ, ನಾವೆಲ್ಲರೂ ಗೌರವಿಸುವ, ಆದರಿಸುವ ಭಾಷೆ ಅದು. ನಮ್ಮ ರಾಷ್ಟ್ರೀಯ ಭಾಷೆಗಳಲ್ಲಿ ಒಂದಾದ ನಮ್ಮ ಭಾಷೆ, ರಾಜಭಾಷೆ ಹಿಂದಿ. ನಮ್ಮ ಭಾಷೆಗಳು ಭಿನ್ನವಾಗಿದ್ದರೂ, ನಮ್ಮ ಭಾವನೆ ಹಾಗೂ ಭಾರತೀಯತೆ ಒಂದೇ’ ಎಂದು ಪ್ರತಿಪಾದಿಸಿದರು.

ಪವನ್ ಬಗೆಗಿನ ಟ್ವೀಟ್

ಈ ಹಿಂದಿನ ನಿಲುವು ಏನಿತ್ತು?

ರಾಜಕೀಯಕ್ಕೆ ಬರುವ ಮುನ್ನ ಹಾಗೂ ಆರಂಭದ ದಿನಗಳಲ್ಲಿ ಪವನ್ ಕಲ್ಯಾಣ್ ದಕ್ಷಿಣ ಭಾರತದ ಭಾಷೆಗಳ ಮೇಲಿನ ಹಿಂದಿ ಹೇರಿಕೆಯನ್ನು ಬಲವಾಗಿ ಖಂಡಿಸುತ್ತಿದ್ದರು. ‘ಉತ್ತರ ಭಾರತದ ನಾಯಕರು ದಕ್ಷಿಣದವರನ್ನು ದ್ವಿತೀಯ ದರ್ಜೆಯ ಪ್ರಜೆಗಳಂತೆ ನೋಡಬಾರದು. ನಮಗೆ ನಮ್ಮದೇ ಆದ ಪ್ರಾದೇಶಿಕ ಅಸ್ಮಿತೆ ಇದೆ. ತಮಿಳು ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಲಾಗುತ್ತದೆ, ಅದೇ ರೀತಿ ಹಿಂದಿ ಭಾಷೆಯ ಸಿನಿಮಾಗಳನ್ನು ತಮಿಳಿಗೆ ಡಬ್ ಮಾಡಲಾಗುತ್ತದೆಯೇ’ ಎಂದು ಅವರು ಪ್ರಶ್ನೆ ಮಾಡಿದ್ದರು. ಆದರೆ, ಈಗ ಹಿಂದಿಯನ್ನು ರಾಜಭಾಷೆ ಎಂದು ಹೊಗಳುವ ಮೂಲಕ ತಮ್ಮ ಹಳೆಯ ನಿಲುವಿಗೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಂಡಿದ್ದಾರೆ.

ಇದನ್ನೂ ಓದಿ: ಹೊಸ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್

ವ್ಯಕ್ತವಾಗುತ್ತಿರುವ ತೀವ್ರ ವಿರೋಧ

ಪವನ್ ಕಲ್ಯಾಣ್ ಅವರ ಈ ಮಾತಿಗೆ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಪ್ರಾದೇಶಿಕ ಭಾಷಾ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಭಾರತಕ್ಕೆ ಯಾವುದೇ ಒಂದು ನಿರ್ದಿಷ್ಟ ರಾಷ್ಟ್ರಭಾಷೆ ಇಲ್ಲ. ಸಂವಿಧಾನದ ಪ್ರಕಾರ ಎಲ್ಲವೂ ಅಧಿಕೃತ ಭಾಷೆಗಳೇ ಆಗಿರುವಾಗ ಪವನ್ ಕಲ್ಯಾಣ್ ಹಿಂದಿಯ ಪರ ನಿಲುವು ತೋರಿಸುತ್ತಿರುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Vastu Tips: ರಾತ್ರಿ ಬೆಚ್ಚಿ ಬೀಳಿಸುವ ಕೆಟ್ಟ ಕನಸು ಬೀಳುತ್ತಿವೆಯೇ? ನಿಮ್ಮ ಬೆಡ್‌ರೂಮ್‌ನ ಈ ವಾಸ್ತು ದೋಷಗಳೇ ಕಾರಣ! – Kannada News | Vastu Tips for Sound Sleep: Eliminate Nightmares and Anxiety from Your Bedroom

ಅನೇಕ ಜನರು ನಿದ್ರೆಯ ಸಮಯದಲ್ಲಿ ಭಯಾನಕ ಅಥವಾ ವಿಚಿತ್ರ ಕನಸುಗಳನ್ನು ಕಾಣುತ್ತಾರೆ. ಇವು ಕೇವಲ ಆ ಕ್ಷಣದ ನಿದ್ರೆಗೆ ಅಡ್ಡಿಪಡಿಸುವುದಲ್ಲದೆ, ಮರುದಿನ ಇಡೀ ದಿನ ಒತ್ತಡ, ಆತಂಕ ಮತ್ತು ಅತಿಯಾದ ಆಯಾಸದಂತಹ ಸಮಸ್ಯೆಗಳನ್ನು ಉಂಟುಮಾಡುತ್ತವೆ. ನೀವು ಕೂಡ ಇಂತಹ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದರೆ, ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮಲಗುವ ಕೋಣೆಯಲ್ಲಿರುವ ಕೆಲವು ವಾಸ್ತು ದೋಷಗಳೇ ಇದಕ್ಕೆ ಕಾರಣವಾಗಿರಬಹುದು.

ನಾವು ವಾಸಿಸುವ ಮನೆಯಲ್ಲಿನ ಶಕ್ತಿಯ ಹರಿವು ನಮ್ಮ ಮನಸ್ಥಿತಿ, ಆರೋಗ್ಯ ಮತ್ತು ನಿದ್ರೆಯ ಗುಣಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತದೆ. ಮಲಗುವ ಕೋಣೆಯಲ್ಲಿನ ವಸ್ತುಗಳ ಜೋಡಣೆ, ಮಲಗುವ ದಿಕ್ಕು ಮತ್ತು ಸುತ್ತಮುತ್ತಲಿನ ಸ್ವಚ್ಛತೆಯಂತಹ ಅಂಶಗಳು ನಮ್ಮ ಉಪಪ್ರಜ್ಞೆ ಮನಸ್ಸನ್ನು ನಿಯಂತ್ರಿಸುತ್ತವೆ. ಹಾಗಾದರೆ ದುಃಸ್ವಪ್ನಗಳನ್ನು ತಡೆದು, ನೆಮ್ಮದಿಯ ನಿದ್ರೆ ಪಡೆಯಲು ಅನುಸರಿಸಬೇಕಾದ ವಾಸ್ತು ಸಲಹೆಗಳು ಯಾವುವು ಎಂದು ಇಲ್ಲಿ ತಿಳಿದುಕೊಳ್ಳಿ.

ಮಲಗುವ ದಿಕ್ಕು ಸರಿಯಾಗಿರಲಿ:

ವಾಸ್ತು ಶಾಸ್ತ್ರದ ಪ್ರಕಾರ, ಮಲಗುವಾಗ ನಿಮ್ಮ ತಲೆಯನ್ನು ಯಾವ ದಿಕ್ಕಿಗೆ ಇಡುತ್ತೀರಿ ಎಂಬುದು ಅತ್ಯಂತ ಮುಖ್ಯ. ಎಂದಿಗೂ ಉತ್ತರ ದಿಕ್ಕಿಗೆ (North) ತಲೆ ಇಟ್ಟು ಮಲಗಬಾರದು. ಭೂಮಿಯ ಕಾಂತೀಯ ವಲಯದ ಪ್ರಭಾವದಿಂದಾಗಿ ಉತ್ತರಕ್ಕೆ ತಲೆ ಇಟ್ಟು ಮಲಗುವುದರಿಂದ ಮಾನಸಿಕ ಅಶಾಂತಿ, ತಲೆನೋವು, ಆತಂಕ ಮತ್ತು ದುಃಸ್ವಪ್ನಗಳು ಬೀಳುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ, ನೆಮ್ಮದಿಯ ನಿದ್ರೆಗಾಗಿ ಯಾವಾಗಲೂ ದಕ್ಷಿಣ ಅಥವಾ ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗಲು ವಾಸ್ತು ತಜ್ಞರು ಸೂಚಿಸುತ್ತಾರೆ.

ಹಾಸಿಗೆಯ ಕೆಳಗೆ ಕಸ ಹಾಕಬೇಡಿ:

ಮನೆಯಲ್ಲಿ ಜಾಗ ಉಳಿಸಲು ಅನೇಕರು ಹಳೆಯ ಬೂಟುಗಳು, ಹರಿದ ಬಟ್ಟೆಗಳು, ತುಕ್ಕು ಹಿಡಿದ ಕಬ್ಬಿಣದ ವಸ್ತುಗಳು, ಮುರಿದ ಎಲೆಕ್ಟ್ರಾನಿಕ್ ಸಾಧನಗಳು ಅಥವಾ ಪ್ಲಾಸ್ಟಿಕ್ ಬಾಟಲಿಗಳನ್ನು ಹಾಸಿಗೆಯ (Bed) ಕೆಳಗೆ ತೂರಿಸಿ ಇಡುತ್ತಾರೆ. ಆದರೆ ವಾಸ್ತು ಪ್ರಕಾರ, ಈ ಅಭ್ಯಾಸವು ಅತ್ಯಂತ ಅಪಾಯಕಾರಿ. ಇವು ಹಾಸಿಗೆಯ ಸುತ್ತ ನಕಾರಾತ್ಮಕ ಶಕ್ತಿಯನ್ನು ಉಂಟು ಮಾಡುತ್ತವೆ. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಿ ನಿದ್ರಾಹೀನತೆ ಕಾಡುತ್ತದೆ. ಆದ್ದರಿಂದ ಹಾಸಿಗೆಯ ಕೆಳಭಾಗವನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ.

ಕನ್ನಡಿಯ ಪ್ರತಿಬಿಂಬ ನಿಮ್ಮ ಹಾಸಿಗೆಯ ಮೇಲೆ ಬೀಳದಿರಲಿ:

ಮಲಗುವ ಕೋಣೆಯಲ್ಲಿ ಡ್ರೆಸ್ಸಿಂಗ್ ಟೇಬಲ್ ಅಥವಾ ಕನ್ನಡಿ ಇಡುವುದು ಸಹಜ. ಆದರೆ, ನೀವು ಮಲಗಿರುವ ಹಾಸಿಗೆ ಅಥವಾ ನಿಮ್ಮ ದೇಹವು ಕನ್ನಡಿಯಲ್ಲಿ ಪ್ರತಿಬಿಂಬಿತವಾದರೆ ಅದನ್ನು ದೊಡ್ಡ ವಾಸ್ತು ದೋಷವೆಂದು ಪರಿಗಣಿಸಲಾಗುತ್ತದೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ರಾತ್ರಿ ವೇಳೆ ಆತಂಕವನ್ನು ಸೃಷ್ಟಿಸುತ್ತದೆ. ಒಂದು ವೇಳೆ ಕನ್ನಡಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಸಾಧ್ಯವಾಗದಿದ್ದರೆ, ಪ್ರತಿದಿನ ರಾತ್ರಿ ಮಲಗುವ ಮುನ್ನ ಅದರ ಮೇಲೆ ಒಂದು ಪರದೆ ಅಥವಾ ಬಟ್ಟೆಯನ್ನು ಮುಚ್ಚುವುದು ಉತ್ತಮ.

ಇದನ್ನೂ ಓದಿ: ಸಾನ್ನದ ನೀರಿಗೆ ಒಂದು ಚಿಟಿಕೆ ಕರ್ಪೂರ ಬೆರೆಸಿ; ಇದರ ಚಮತ್ಕಾರಿ ಪ್ರಯೋಜನಗಳು ಇಲ್ಲಿವೆ…

ಭಯಾನಕ ಚಿತ್ರಗಳು ಮಲಗುವ ಕೋಣೆಯಲ್ಲಿ ಬೇಡ:

ವಾಸ್ತು ಪ್ರಕಾರ, ಮಲಗುವ ಕೋಣೆಯಲ್ಲಿ ಹಿಂಸಾತ್ಮಕ ಪ್ರಾಣಿಗಳು, ಯುದ್ಧದ ದೃಶ್ಯಗಳು, ಒಣಗಿದ ಅಥವಾ ಮುಳ್ಳಿನ ಸಸ್ಯಗಳು ಹಾಗೂ ಚೂಪಾದ ಆಯುಧಗಳ ಚಿತ್ರಗಳನ್ನು ಹಾಕಬೇಡಿ. ಇಂತಹ ನಕಾರಾತ್ಮಕ ಚಿತ್ರಗಳು ನಿಮ್ಮ ಉಪಪ್ರಜ್ಞೆ ಮನಸ್ಸನ್ನು ಪ್ರಚೋದಿಸಿ, ರಾತ್ರಿಯಿಡೀ ಚಡಪಡಿಕೆ ಮತ್ತು ಭಯಾನಕ ಕನಸುಗಳು ಬೀಳುವಂತೆ ಮಾಡುತ್ತವೆ.

ಉತ್ತಮ ನಿದ್ರೆಗಾಗಿ ಸರಳ ವಾಸ್ತು ಟಿಪ್ಸ್:

ರಾತ್ರಿ ಮಲಗುವ ಮುನ್ನ ಮಲಗುವ ಕೋಣೆಯಲ್ಲಿ ಲಘು ಸುಗಂಧದ್ರವ್ಯ (Room Freshener) ಅಥವಾ ಕರ್ಪೂರದ ಹರಳುಗಳನ್ನು ಇಡುವುದರಿಂದ ಗಾಳಿ ಶುದ್ಧವಾಗಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಮಲಗುವ ಕೋಣೆಯಲ್ಲಿ ಅತ್ಯಂತ ಪ್ರಕಾಶಮಾನವಾದ ದೀಪಗಳ ಬದಲಿಗೆ ಹಿತವಾದ, ಕಡಿಮೆ ಬೆಳಕಿನ ನೈಟ್ ಲ್ಯಾಂಪ್ ಬಳಸಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version