ದೊಡ್ಡವರು ತಿನ್ನುವ ಮಾತ್ರೆಯನ್ನು ಮಕ್ಕಳಿಗೆ ಅರ್ಧ ಮಾಡಿ ಕೊಡುತ್ತೀರಾ? ಹಾಗಿದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಿ – Kannada News | Children’s Medicine Safety: Expert Warns Against Splitting Adult Tablets

ಜ್ವರ, ಶೀತ ಅಥವಾ ನೋವಿನಂತಹ ಸಾಮಾನ್ಯ ಆರೋಗ್ಯ ಸಮಸ್ಯೆ ಬಂದಾಗ ಕೆಲವು ಪೋಷಕರು ದೊಡ್ಡವರ ಮಾತ್ರೆಯನ್ನು ಅರ್ಧ ಅಥವಾ ಕಾಲು ಭಾಗ ಮಾಡಿ ಮಕ್ಕಳಿಗೆ ನೀಡುತ್ತಾರೆ. ಇದರಿಂದ ಸರಿಯಾದ ಪ್ರಮಾಣ ಸಿಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಪೋಷಕರು ಈ ತಪ್ಪನ್ನು ಆಗಾಗ ಮಾಡುತ್ತಿರುತ್ತಾರೆ. ಆದರೆ ಮಕ್ಕಳಿಗೆ ಈ ವಿಧಾನ ಸುರಕ್ಷಿತವಲ್ಲ ಎಂದು ಮಕ್ಕಳ ತಜ್ಞರು ಎಚ್ಚರಿಸುತ್ತಾರೆ. ಆದರೆ ಈ ರೀತಿ ಮಾಡುವುದು ಏಕೆ ಅಪಾಯಕಾರಿ, ಅದರಿಂದಾಗುವ ಅಡ್ಡಪರಿಣಾಮಗಳು ಯಾವವು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಏಕೆ ಅಪಾಯಕಾರಿ?

ತಜ್ಞರ ಪ್ರಕಾರ, ಮಕ್ಕಳ ಔಷಧದ ಪ್ರಮಾಣವನ್ನು ಕೇವಲ ವಯಸ್ಸಿನ ಆಧಾರದ ಮೇಲೆ ಅಲ್ಲ, ಅವರ ತೂಕ, ಆರೋಗ್ಯದ ಸ್ಥಿತಿ, ಕಾಯಿಲೆಯ ತೀವ್ರತೆ ಹಾಗೂ ಔಷಧದ ಸ್ವಭಾವವನ್ನು ಗಮನಿಸಿ ನಿರ್ಧರಿಸಲಾಗುತ್ತದೆ. ಮಾತ್ರೆಯನ್ನು ಅರ್ಧ ಮಾಡಿದರೆ ಔಷಧದ ಪ್ರಮಾಣ ಸಮಾನವಾಗಿ ಹಂಚಿಕೆಯಾಗದೇ ಕಡಿಮೆ ಅಥವಾ ಹೆಚ್ಚು ಪ್ರಮಾಣ ದೇಹಕ್ಕೆ ಸೇರುವ ಸಾಧ್ಯತೆ ಇರುತ್ತದೆ. ಅದರಲ್ಲಿಯೂ CR (Controlled Release), SR (Sustained Release), MR (Modified Release) ಮತ್ತು ವಿಶೇಷ ಲೇಪನ (Coated) ಹೊಂದಿರುವ ಮಾತ್ರೆಗಳನ್ನು ಮುರಿದು ಕೊಡಬಾರದು. ಇದರಿಂದ ಔಷಧದ ಪರಿಣಾಮ ಬದಲಾಗಬಹುದು ಅಥವಾ ಅಡ್ಡಪರಿಣಾಮಗಳ ಅಪಾಯ ಹೆಚ್ಚಬಹುದು.

ಅಡ್ಡಪರಿಣಾಮಗಳ ಸಾಧ್ಯತೆ

ವಯಸ್ಕರ ಔಷಧವನ್ನು ಮಕ್ಕಳಿಗೆ ನೀಡುವುದರಿಂದ ದೇಹದಲ್ಲಿ ಟಾಕ್ಸಿಸಿಟಿ, ಅಲರ್ಜಿ, ಔಷಧದ ಅತಿಯಾದ ಪರಿಣಾಮ ಅಥವಾ ಬೇಕಾದಷ್ಟು ಪರಿಣಾಮ ಕಾಣದ ಸಮಸ್ಯೆಗಳು ಉಂಟಾಗಬಹುದು. ವಿಶೇಷವಾಗಿ ಆಂಟಿಬಯೋಟಿಕ್‌, ಹಾರ್ಮೋನ್ ಮತ್ತು ಹೃದಯ ಸಂಬಂಧಿತ ಔಷಧಗಳಲ್ಲಿ ಈ ಅಪಾಯ ಹೆಚ್ಚು.

ಇದನ್ನೂ ಓದಿ: ಕ್ಯಾಲ್ಸಿಯಂ ಕೊರತೆ ಮಾತ್ರವಲ್ಲ, ಈ ಅಭ್ಯಾಸಗಳೂ ಕೂಡ ಮೂಳೆಗಳನ್ನು ದುರ್ಬಲಗೊಳಿಸಬಹುದು!

ಏನು ಮಾಡಬೇಕು?

ಮಕ್ಕಳಿಗೆ ಯಾವಾಗಲೂ ವೈದ್ಯರು ಸೂಚಿಸಿದ ಸಿರಪ್, ಡ್ರಾಪ್ಸ್ ಅಥವಾ ಮಕ್ಕಳಿಗಾಗಿ ನೀಡಿರುವ ಮಾತ್ರೆಗಳನ್ನು ಮಾತ್ರ ನೀಡಿ. ಮನೆಯಲ್ಲಿರುವ ದೊಡ್ಡವರ ಔಷಧವನ್ನು ಸ್ವಂತ ನಿರ್ಧಾರದಿಂದ ಅರ್ಧ ಮಾಡಿ ಕೊಡುವುದನ್ನು ತಪ್ಪಿಸಿ. ಯಾವುದೇ ಔಷಧವನ್ನು ಆರಂಭಿಸುವ ಮೊದಲು ಮಕ್ಕಳ ವೈದ್ಯರ ಸಲಹೆ ಪಡೆಯುವುದು ಸುರಕ್ಷಿತ. ಸರಿಯಾದ ಡೋಸ್‌ ಮಾತ್ರ ಮಗುವಿನ ಆರೋಗ್ಯವನ್ನು ಕಾಪಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೀತಿ ಕುರುಡು ಅನ್ನೋದು ಇದಕ್ಕೇನಾ? 72 ವರ್ಷದ ವೃದ್ಧೆ- 22ರ ಯುವಕನ ಲವ್ ಸ್ಟೋರಿ ಇದು! – Kannada News | Viral Love Story 22 Years Young Man Married 72 Year Old Millionaire Woman

ನವದೆಹಲಿ, ಜುಲೈ 2: ಆತ ಕಾಲೇಜು ಮುಗಿಸಿದ ಯುವಕ. ವಯಸ್ಸು ಕೇವಲ 22. ಆತನ ವಯಸ್ಸಿನಲ್ಲಿ ಹುಡುಗಿಯರ ಮೇಲೆ ಲವ್ ಆಗೋದು ಸಹಜ ಬಿಡಿ. ಆದರೆ, ಆತನಿಗೆ ಲವ್ ಆಗಿದ್ದು ಹುಡುಗಿಯ ಮೇಲಲ್ಲ; ತನ್ನ ಅಜ್ಜಿಯ ವಯಸ್ಸಿನ ವೃದ್ಧೆಯ ಮೇಲೆ. ತನಗಿಂತಲೂ 50 ವರ್ಷ ದೊಡ್ಡವರಾದ ಆಗರ್ಭ ಶ್ರೀಮಂತೆಯಾದ 72 ವರ್ಷ ವಯಸ್ಸಿನ ವೃದ್ಧೆಯನ್ನು ಲವ್ ಮಾಡಿದ ಆ ಯುವಕ ಅವರನ್ನೇ ಮದುವೆಯಾಗಿದ್ದಾನೆ! ಇದು ಯಾವ ರೀತಿಯ ಲವ್ ಸ್ಟೋರಿ (Love Story) ಎಂದು ನೀವು ಆಶ್ಚರ್ಯಪಡಬಹುದು. ಆ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.

ಈ ಕುತೂಹಲಕಾರಿ ಕತೆ ಡೊಮಿನಿಕನ್ ಗಣರಾಜ್ಯದ 22 ವರ್ಷದ ಡೇನಿಯಲ್ ರಾಮಿರೆಜ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ 72 ವರ್ಷದ ಎಲೀನರ್ ಹೆಡ್ಜ್ ಅವರದು. ಡೇನಿಯಲ್ ತನ್ನ ಕುಟುಂಬದ ಸಣ್ಣ ಕೆಫೆಯಲ್ಲಿ ಸಹಾಯ ಮಾಡುತ್ತಾನೆ. ಸುಮಾರು 2 ವರ್ಷಗಳ ಹಿಂದೆ ಅಮೆರಿಕದ ಫ್ಲೋರಿಡಾ ನಿವಾಸಿ ಮತ್ತು ಮಿಲಿಯನೇರ್ ರಿಯಲ್ ಎಸ್ಟೇಟ್ ಹೂಡಿಕೆದಾರ ಎಲೀನರ್ ಹೆಡ್ಜ್ ವಿಹಾರಕ್ಕೆ ಪಂಟಾ ಕಾನಾಗೆ ಬಂದಾಗ, ಇಬ್ಬರೂ ಭೇಟಿಯಾದರು. ಕ್ರಮೇಣ, ಈ ಭೇಟಿಯು ಪ್ರೀತಿಗೆ ತಿರುಗಿತು. ಕಳೆದ ತಿಂಗಳು, ಇಬ್ಬರೂ ಮಿಯಾಮಿಯಲ್ಲಿ ವಿವಾಹವಾದರು.

ಇದನ್ನೂ ಓದಿ: ಪುರುಷರು ಮದುವೆಗೂ ಮುನ್ನ ಸಂಗಾತಿಯ ಬಗ್ಗೆ ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು

50 ವರ್ಷಗಳ ವಯಸ್ಸಿನ ಅಂತರದ ಹೊರತಾಗಿಯೂ, ದಂಪತಿ ತಮ್ಮ ಬಾಂಧವ್ಯವು ತುಂಬಾ ಪ್ರಬಲವಾಗಿದೆ ಎಂದು ಹೇಳುತ್ತಾರೆ. ಮಾಧ್ಯಮಗಳೊಂದಿಗೆ ಮಾತನಾಡುವಾಗ ಡೇನಿಯಲ್ ಭಾವುಕನಾಗಿದ್ದಾನೆ. “ಅವಳೇ ನನ್ನ ಜೀವನ.. ನಾವು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತೇವೆ. ವಯಸ್ಸು ಕೇವಲ ಒಂದು ನಂಬರ್ ಮಾತ್ರ. ಅವಳು ನನ್ನನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದಾಳೆ. ನಾನು ಅವಳಿಗೆ ಮತ್ತೊಮ್ಮೆ ಮುಕ್ತವಾಗಿ ಮತ್ತು ಸಂತೋಷದಿಂದ ಬದುಕಲು ಕಲಿಸುತ್ತಿದ್ದೇನೆ” ಎಂದು ಆತ ಹೇಳಿದ್ದಾನೆ.

ತನ್ನ ಮೊದಲ ಗಂಡನ ಮರಣದ ನಂತರ ಒಂಟಿಯಾಗಿದ್ದ ಎಲೀನರ್ ಡೇನಿಯಲ್‌ನಲ್ಲಿ ನಿಜವಾದ ಮತ್ತು ಪ್ರಾಮಾಣಿಕ ಸಂಗಾತಿಯನ್ನು ಕಂಡುಕೊಂಡಿದ್ದಾರಂತೆ. ಈ ಮದುವೆಯ ಸುದ್ದಿ ಎಲೀನರ್ ಅವರ ಮಕ್ಕಳನ್ನು ಸ್ವಲ್ಪ ಗೊಂದಲಕ್ಕೀಡು ಮಾಡಿದೆ. @psychological ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ದಂಪತಿಗಳ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗಿವೆ.

ಇದನ್ನೂ ಓದಿ: ತಾಳಿ ಕಿತ್ತೆಸೆದು ಹೋಗಿದ್ದವಳೇ ಮತ್ತೆ ಕಟ್ಟಿಸಿಕೊಂಡಳು! ಇದು ಪೇಂಟರ್ ಹುಡುಗ, ಶ್ರೀಮಂತ ಹುಡುಗಿಯ ಸಿನಿಮೀಯ ಲವ್ ಸ್ಟೋರಿ

“ಈ ಜಗತ್ತಿನಲ್ಲಿ ಶುದ್ಧ ಪ್ರೀತಿ ಇನ್ನೂ ಅಸ್ತಿತ್ವದಲ್ಲಿದೆ ಎಂಬುದಕ್ಕೆ ಅವು ಪುರಾವೆ, ಅವರಿಗೆ ನನ್ನ ಶುಭಾಶಯಗಳು” ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು “ಇದು ಪ್ರೀತಿಯಲ್ಲ, ಆ ಹುಡುಗ ಅವಳ ಬ್ಯಾಂಕ್ ಬ್ಯಾಲೆನ್ಸ್‌ಗೆ ಬಿದ್ದಿದ್ದಾನೆ” ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಟೀಂ ಇಂಡಿಯಾ ವಿರುದ್ಧ ಮಿಂಚಿದ್ದ ಭಾರತ ಮೂಲದ ವೇಗಿಗೆ ಜಾಕ್​ಪಾಟ್ – Kannada News | Jai Mundra: Indian Origin Bowler’s Heroics Against Team India and European T20 League Debut

ಸಿಕ್ಕ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದ ಜೈ ಮುಂದ್ರಾ, ಟೀಂ ಇಂಡಿಯಾ ವಿರುದ್ಧ ಆಡಿದ ಎರಡು ಪಂದ್ಯಗಳಲ್ಲಿ ಮಿಂಚಿನ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು. ಮೊದಲ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿ 25 ರನ್ ನೀಡಿ 2 ವಿಕೆಟ್ ಪಡೆದಿದ್ದ ಮುಂದ್ರಾ, ಎರಡನೇ ಪಂದ್ಯದಲ್ಲಿ 32 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿ ಭಾರತದ ಸೋಲಿಗೆ ಕಾರಣರಾಗಿದ್ದರು.

Source link

ರಾಯಚೂರು PWD ಇಲಾಖೆಯಲ್ಲಿ ಭ್ರಷ್ಟಾಚಾರ: ಗುತ್ತಿಗೆ ಪಡೆಯಲು ನಕಲಿ ಪ್ರಮಾಣ ಪತ್ರ ನೀಡಿರುವುದು ಪತ್ತೆ – Kannada News | Raichur PWD Corruption: Fake Contractor Certificate Exposed, NH Department Takes U Turn

PWD ಇಲಾಖೆಯಲ್ಲಿ ಭ್ರಷ್ಟಾಚಾರImage Credit source: tv9 kannada

ರಾಯಚೂರು, ಜುಲೈ 02: ರಾಯಚೂರಿನ (raichur) ಪಿಡಬ್ಲೂಡಿ ಇಲಾಖೆಯಲ್ಲಿ (PWD Department) ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಹೀಗಾಗಿ ಈ ಭ್ರಷ್ಟಾಚಾರದ ವಿರುದ್ಧ ಕೆಲ ಹೋರಾಟಗಾರರು ಹೋರಾಟ ಮಾಡಿದ್ದರು. ಈ ಬಗ್ಗೆ ಟಿವಿ9 ವರದಿ ಬೆನ್ನಲ್ಲೇ ಇದೀಗ ಗುತ್ತಿಗೆದಾರ ನಕಲಿ ಪ್ರಮಾಣ ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಮೊದಲು ತಾವೇ ಇದನ್ನ ಅಧಿಕೃತಗೊಳಿಸಿದ್ದ ವಿಜಯಪುರ ರಾಷ್ಟ್ರೀಯ ಹೆದ್ದಾರಿ ವಿಭಾಗ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಉಲ್ಟಾ ಹೊಡೆದಿದೆ.

3 ಕೋಟಿ 48 ಲಕ್ಷ ರೂ ಟೆಂಡರ್ ಇದೀಗ ಭಾರೀ ವಿವಾದ

ರಾಯಚೂರು ಜಿಲ್ಲೆಯ ಲಿಂಗಸಗೂರು–ಮುದಗಲ್ ಕ್ರಾಸ್ ನಡುವಿನ ರಾಷ್ಟ್ರೀಯ ಹೆದ್ದಾರಿ-150(ಎ) ಕಾಮಗಾರಿಗೆ ಸಂಬಂಧಿಸಿದ 3 ಕೋಟಿ 48 ಲಕ್ಷ ರೂ ಟೆಂಡರ್ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಗುತ್ತಿಗೆದಾರ ಭೀಮಾಶಂಕರ್ ಟೆಂಡರ್ ಪಡೆಯಲು ನಕಲಿ ವರ್ಕ್ ಡನ್ ಪ್ರಮಾಣ ಪತ್ರ ಸಲ್ಲಿಸಿರುವುದನ್ನ ಖುದ್ದು ವಿಜಯಪುರ ರಾಷ್ಟ್ರೀಯ ಹೆದ್ದಾರಿ ವಿಭಾಗ ಖಚಿತಪಡಿಸಿದೆ. ಇದರ ದಾಖಲೆಗಳು ಟಿವಿ9ಗೆ ಲಭ್ಯವಾಗಿವೆ.

ಇದನ್ನೂ ಓದಿ: ರಾಯಚೂರು PWD ಇಲಾಖೆಯಲ್ಲಿ ಭ್ರಷ್ಟಾಚಾರ: ಸತೀಶ್ ಜಾರಕಿಹೊಳಿ ಸಂಬಂಧಿ ಎಂದು ಹೇಳಿಕೊಂಡು ಕೋಟ್ಯಂತರ ರೂ ಲೂಟಿ

ಈ ಪ್ರಕರಣದ ಆರಂಭದಲ್ಲಿ ವಿಜಯಪುರ ರಾಷ್ಟ್ರೀಯ ಹೆದ್ದಾರಿ ವಿಭಾಗ ಪ್ರಮಾಣ ಪತ್ರವನ್ನು ತಾವೇ ನೀಡಿದ್ದೇವೆ ಎಂದು ರಾಯಚೂರು ಪಿಡಬ್ಲೂಡಿಗೆ ಪತ್ರ ನೀಡಲಾಗಿತ್ತು. ಆದರೆ ಪ್ರಕರಣ ಬಹಿರಂಗವಾಗುತ್ತಿದ್ದಂತೆ ಇದೀಗ ಇಲಾಖೆ ಯೂ-ಟರ್ನ್ ಪಡೆದಿದ್ದು, ಅಂತಹ ಯಾವುದೇ ಪ್ರಮಾಣ ಪತ್ರವನ್ನು ನಾವು ನೀಡಿಲ್ಲ, ಅದು ನಕಲಿ ಎಂದು ಅಧಿಕೃತವಾಗಿ ಸ್ಪಷ್ಟನೆ ನೀಡಿದೆ. ಆ ಮೂಲಕ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಇತ್ತ ರಾಯಚೂರು ಪಿಡಬ್ಲೂಡಿ ಕಾರ್ಯನಿರ್ವಾಹಕ ಎಂಜಿನಿಯರ್ ವೆಂಕಟೇಶ್ ಗಲಗ, ಈ ಕಾಮಗಾರಿ ಮತ್ತು ಪ್ರಮಾಣ ಪತ್ರಕ್ಕೂ ನಮ್ಮ ಇಲಾಖೆಗೆ ಯಾವುದೇ ಸಂಬಂಧ ಇಲ್ಲ ಎಂದು ದಾಖಲೆ ಸಮೇತ ಸ್ಪಷ್ಟಪಡಿಸಿದ್ದಾರೆ. ವಿಜಯಪುರ ವಿಭಾಗದ ದ್ವಂದ್ವ ನಿಲುವು ಹಾಗೂ ನಕಲಿ ದಾಖಲೆ ಆರೋಪದಿಂದ ಪಿಡಬ್ಲೂಡಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ.

ಯೂ-ಟರ್ನ್ ಹೊಡೆದ ವಿಜಯಪುರ ರಾಷ್ಟ್ರೀಯ ಹೆದ್ದಾರಿ ವಿಭಾಗ

ಇನ್ನು ಈ ಪ್ರಕರಣದ ಇಂಚಿಂಚು ಮಾಹಿತಿಯೂ ಟಿವಿ9ಗೆ ದಾಖಲೆ ಸಮೇತ ಲಭ್ಯವಾಗಿದೆ. ಅಲ್ಲದೇ ಬರೀ ಪಿಡಬ್ಲೂಡಿ ಇಲಾಖೆಯಲ್ಲಿ ಮಾತ್ರವಲ್ಲ ಎಲ್ಲಾ ಇಲಾಖೆಯಲ್ಲಿ ಈ ರೀತಿ ನಕಲಿ ದಾಖಲೆ ಸೃಷ್ಟಿ ಮಾಡಲಾಗಿದೆ ಅನ್ನೋ ಸ್ಫೋಟಕ ಮಾಹಿತಿಯನ್ನ ಪಿಡಬ್ಲೂಡಿ ಇ.ಇ ಗಲಗ ಟಿವಿ9 ಎದುರು ಹೇಳಿದ್ದಾರೆ. ಗುತ್ತಿಗೆದಾರ ಭೀಮಾಶಂಕರ್ ಸಲ್ಲಿಸಿದ್ದ ವರ್ಕ್ ಡನ್ ಪ್ರಮಾಣ ಪತ್ರದ ಕುರಿತು ರಾಯಚೂರು ಪಿಡಬ್ಲೂಡಿ ಇಲಾಖೆ ಫೆಬ್ರವರಿ 12ರಂದು ವಿಜಯಪುರ ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ಅಧಿಕೃತವಾಗಿ ಪತ್ರ ಬರೆದು ಮಾಹಿತಿ ಕೋರಿತ್ತು.

ಹಲವು ಅನುಮಾನಗಳಿಗೆ ಎಡೆಮಾಡಿದ ವಿಜಯಪುರ ವಿಭಾಗ ಉತ್ತರ

ಫೆಬ್ರವರಿ 16ರಂದು ವಿಜಯಪುರ ವಿಭಾಗದಿಂದ ಅದೇ ವರ್ಕ್ ಡನ್ ಪ್ರಮಾಣ ಪತ್ರವನ್ನು ದೃಢೀಕರಿಸಿದ್ದಾಗಿ ಹೇಳಿತ್ತು. ಆದರೆ ಪ್ರಕರಣ ಮಾಧ್ಯಮಗಳಲ್ಲಿ ಬಹಿರಂಗವಾದ ಬಳಿಕ ಜೂನ್​​​ 29ರಂದು ವಿಜಯಪುರ ರಾಷ್ಟ್ರೀಯ ಹೆದ್ದಾರಿ ವಿಭಾಗ ತನ್ನ ಹಿಂದಿನ ನಿಲುವಿನಿಂದ ಹಿಂದೆ ಸರಿದು, ನಾವು ಯಾವುದೇ ವರ್ಕ್ ಡನ್ ಪ್ರಮಾಣ ಪತ್ರ ನೀಡಿಲ್ಲ, ಸಲ್ಲಿಕೆಯಾಗಿರುವ ದಾಖಲೆ ನಕಲಿ ಎಂದು ಅಧಿಕೃತವಾಗಿ ತಿಳಿಸಿದೆ. ಒಂದೇ ಇಲಾಖೆಯಿಂದ ಬಂದಿರುವ ಎರಡೆರಡು ಉತ್ತರಗಳು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ರಾಯಚೂರು ಜಿಲ್ಲೆಯಲ್ಲಿ 318 ಶೂನ್ಯ ಶಿಕ್ಷಕ ಶಾಲೆಗಳು! ಸರ್ಕಾರಿ ಶಾಲೆಗಳ ದುಸ್ಥಿತಿ ಕೇಳೋರಿಲ್ಲ

ಇದಷ್ಟೇ ಅಲ್ಲ, ಯಾವಾಗ ವಿಜಯಪುರ ವಿಭಾಗದಿಂದ ಗುತ್ತಿಗೆದಾರ ಭೀಮಾಶಂಕರ್ ಪ್ರಮಾಣ ಪತ್ರ ನೀಡಿಲ್ಲ ಅನ್ನೋ ಉತ್ತರ ಬಂತೋ ಆಗ ಅಲರ್ಟ್ ಆದ ರಾಯಚೂರು ಪಿಡಬ್ಲೂಡಿ, ಈ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸಿದೆ. ಅಲ್ಲದೇ, ಗುತ್ತಿಗೆದಾರನಿಗೆ ಈ ಬಗ್ಗೆ ಉತ್ತರ ನೀಡುವಂತೆ ಪತ್ರ ಬರೆದಿದೆ. ಅಲ್ಲದೇ ಗುತ್ತಿಗೆದಾರ ಭೀಮಾಶಂಕರ್​ರನ್ನ ಬ್ಲಾಕ್ ಲಿಸ್ಟ್​ಗೆ ಹಾಕುವ ಬಗ್ಗೆಯು ಪತ್ರ ಬರೆಯಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಿರ್ದೇಶಕಿಯಾದ ಸಿನಿಮಾ ಪತ್ರಕರ್ತೆ ನೀರೂ ಶರ್ಮಾ; ಗಮನ ಸೆಳೆದ ‘ಬಾಂದ್ರಾ ಬಾಯ್’ – Kannada News | Journalist turned Filmmaker Neeru Sharma Debut Short Film Bandra Boy heads to Film Festivals

ಸಿನಿಮಾ ಪತ್ರಕರ್ತೆಯಾಗಿ ದಶಕಗಳ ಕಾಲ ಗುರುತಿಸಿಕೊಂಡಿದ್ದ ನೀರೂ ಶರ್ಮಾ (Neeru Sharma), ಇದೀಗ ನಿರ್ದೇಶಕಿಯಾಗಿ ಚಿತ್ರರಂಗಕ್ಕೆ ಭರ್ಜರಿ ಪಾದಾರ್ಪಣೆ ಮಾಡಿದ್ದಾರೆ. ಅವರು ನಿರ್ದೇಶಿಸಿರುವ ಚೊಚ್ಚಲ ಶಾರ್ಟ್ ಫಿಲ್ಮ್ ‘ಬಾಂದ್ರಾ ಬಾಯ್’ (Bandra Boy) ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಖತ್ ಸದ್ದು ಮಾಡುತ್ತಿದೆ. ಪ್ರಸಿದ್ಧ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳ (Film Festivals) ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾಗಿದೆ.

ಭಾರತೀಯ ಚಿತ್ರರಂಗ ಹಾಗೂ ಟೆಲಿವಿಷನ್ ಜಗತ್ತನ್ನು ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ಅತ್ಯಂತ ಹತ್ತಿರದಿಂದ ನೋಡಿ, ವರದಿ ಮಾಡಿದ್ದ ಹಿರಿಯ ಪತ್ರಕರ್ತೆ ನೀರೂ ಶರ್ಮಾ, ಬಳಿಕ ಸ್ಕ್ರೀನ್‌ಪ್ಲೇ ಬರವಣಿಗೆ ಕಡೆಗೆ ಮುಖ ಮಾಡಿದ್ದಾರೆ. ಚಿತ್ರರಂಗದ ಖ್ಯಾತ ನಿರ್ದೇಶಕ ಸುಭಾಷ್ ಘಾಯ್ ಅವರ ‘ವಿಸ್ಲಿಂಗ್ ವುಡ್ಸ್ ಇಂಟರ್ನ್ಯಾಷನಲ್’ ಸಂಸ್ಥೆಯಲ್ಲಿ ಸಿನಿಮಾ ನಿರ್ದೇಶನ ಕೋರ್ಸ್ ಮುಗಿಸಿರುವ ಅವರು, ಅಂತಾರಾಷ್ಟ್ರೀಯ ಮಟ್ಟದ ತರಬೇತಿ ಪಡೆದಿದ್ದಾರೆ.

ನಿರ್ದೇಶನದ ಜೊತೆಗೆ 2015ರಿಂದಲೇ ಚಿತ್ರಕಥೆ ಬರೆಯುವುದರಲ್ಲೂ ತೊಡಗಿಸಿಕೊಂಡಿರುವ ನೀರೂ ಶರ್ಮಾ ಅವರು, ಬಾಲಿವುಡ್‌ನ ಹಿರಿಯ ನಟ ಬೊಮನ್ ಇರಾನಿ ಹಾಗೂ ಪ್ರಖ್ಯಾತ ಚಿತ್ರಕಥೆಗಾರರಾದ ಅಂಜುಮ್ ರಾಜಬಲಿ ಮತ್ತು ಮಯೂರ್ ಪುರಿ ಅವರ ಮಾರ್ಗದರ್ಶನದಲ್ಲಿ ಸ್ಕ್ರಿಪ್ಟ್ ರೈಟಿಂಗ್ ಡಿಪ್ಲೊಮಾ ಪೂರೈಸಿದ್ದಾರೆ. ಆ ಅನುಭವದಲ್ಲಿ ನಿರ್ದೇಶನ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾ ಯುಗದ ಕಥೆ ಹೇಳುವ ‘ಬಾಂದ್ರಾ ಬಾಯ್’:
ನೀರೂ ಶರ್ಮಾ ನಿರ್ದೇಶನದ ಚೊಚ್ಚಲ ಚಿತ್ರ ‘ಬಾಂದ್ರಾ ಬಾಯ್’ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ. ಇಂದಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ಮಾಧ್ಯಮಗಳ ಸುಳ್ಳು ಸುದ್ದಿಗಳು, ಸಾರ್ವಜನಿಕರ ತಪ್ಪು ಗ್ರಹಿಕೆಗಳು ಮತ್ತು ಸಮಾಜದ ಪೂರ್ವಾಗ್ರಹ ಪೀಡಿತ ನಿರ್ಧಾರಗಳು ಒಬ್ಬ ವ್ಯಕ್ತಿಯ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.

‘ಬಾಂದ್ರಾ ಬಾಯ್’ ಚಿತ್ರದ ಪಾತ್ರವರ್ಗದಲ್ಲಿ ಯಾರೆಲ್ಲ ಇದ್ದಾರೆ?
ಈ ಥ್ರಿಲ್ಲರ್ ಶಾರ್ಟ್ ಫಿಲ್ಮ್‌ನಲ್ಲಿ ಅಹ್ವಾನ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರೆ, ಗುಜರಾತಿ ಮತ್ತು ಮರಾಠಿ ಚಿತ್ರರಂಗದ ಖ್ಯಾತ ನಟ ಧರ್ಮೇಂದ್ರ ಗೋಹಿಲ್ ಪ್ರಮುಖ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇವರ ಜೊತೆಗೆ ವಿಸ್ಲಿಂಗ್ ವುಡ್ಸ್ ಸಂಸ್ಥೆಯ ಲೋಚನ್ ಬರ್ಸಾಗ್ಡೆ, ರಂಗಭೂಮಿ ಕಲಾವಿದ ಯಶ್ ಪೆಡ್ನೇಕರ್ ಹಾಗೂ ಕಿರುತೆರೆಯ ಜನಪ್ರಿಯ ನಟರಾದ ಪವನ್ ತಿವಾರಿ ಮತ್ತು ಶ್ಯಾಮ್ ಥೋಮ್ರೆ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಇದನ್ನೂ ಓದಿ: ‘ಕುಣಿ’ ಕಿರುಚಿತ್ರಕ್ಕೆ ಫಿದಾ ಆದ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು

ವರದಿಗಾರ್ತಿಯಿಂದ ಕಥೆಗಾರ್ತಿಯಾಗಿ ಹೊಸ ಪಯಣ:
ಪತ್ರಿಕೋದ್ಯಮದಿಂದ ಚಿತ್ರರಂಗಕ್ಕೆ ಬಂದು ಯಶಸ್ವಿಯಾಗುವವರ ಸಂಖ್ಯೆ ತುಂಬಾ ಅಪರೂಪ. ಇಷ್ಟು ವರ್ಷಗಳ ಕಾಲ ಸಿನಿಮಾಗಳು, ಸೆಲೆಬ್ರಿಟಿಗಳು ಮತ್ತು ಬಾಕ್ಸ್ ಆಫೀಸ್ ವ್ಯವಹಾರದ ಬಗ್ಗೆ ವರದಿ ಮಾಡುತ್ತಿದ್ದ ನೀರೂ ಶರ್ಮಾ, ಈಗ ತಾವೇ ಕ್ಯಾಮೆರಾ ಹಿಂದೆ ನಿಂತು ಸ್ವಂತ ಕಥೆಗಳಿಗೆ ಜೀವ ನೀಡುತ್ತಿರುವುದು ವಿಶೇಷವಾಗಿದೆ. ಈಗಾಗಲೇ ಸಿನಿಮಾ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿರುವ ‘ಬಾಂದ್ರಾ ಬಾಯ್’ ಮುಂಬರುವ ತಿಂಗಳುಗಳಲ್ಲಿ ಜಾಗತಿಕ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿದ ಬಳಿಕ ಡಿಕೆಶಿ ಹೇಳಿದ್ದೇನು? – Kannada News | Bengaluru quarry tragedy: At least 7 labourers killed: CM Dk Shivakumr Talks about incident

ಬೆಂಗಳೂರು, (ಜುಲೈ 02): ಮಾಗಡಿ ರಸ್ತೆಯ ಮಾದಪಟ್ಟಣ ಬಳಿ ಕಲ್ಲು ಕ್ವಾರಿಯಲ್ಲಿ ದುರಂತದಲ್ಲಿ ಏಳು ಜನ ಸಾವನ್ನಪ್ಪಿದ್ದು, ಐದಾರು ಕಾರ್ಮಿಕರು ಗಾಯಗೊಂಡಿದ್ದಾರೆ. ಇನ್ನು ಗಾಯಗೊಂಡಿರುವರನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಇದೀಗ ಸಿಎಂ ಡಿಕೆ ಶಿವಕುಮಾರ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಇದೇ ವೇಳೆ ಮತನಾಡಿದ ಡಿಕೆಶಿ, ಬೆಳಗ್ಗೆ 7ರ ಸುಮಾರಿಗೆ ಘಟನೆ ನಡೆದಿದ್ದು 7 ಜನ ಮೃತಪಟ್ಟಿದ್ದಾರೆ. ಐವರು ಗಾಯಗೊಂಡಿದ್ದಾರೆ, ಒಬ್ಬರ ಸ್ಥಿತಿ ಬಹಳ ಗಂಭೀರವಾಗಿದೆ. ಯಾದಗಿರಿ, ಛತ್ತೀಸ್​ಗಢ ಮೂಲದ 7 ಜನರು ಮೃತಪಟ್ಟಿದ್ದಾರೆ. ಮೃತರ ಕುಟುಂಬ ಸದಸ್ಯರ ಜೊತೆ ಅಧಿಕಾರಿಗಳು ಚರ್ಚಿಸಿದ್ದು, ಮೃತದೇಹಗಳನ್ನು ಕಳುಹಿಸಲು ವ್ಯವಸ್ಥೆ ಮಾಡುತ್ತೇವೆ. ಸರ್ಕಾರದ ನಿಯಮಾನುಸಾರ ಪರಿಹಾರ ನೀಡುತ್ತೇವೆ. ಕಲ್ಲು ಕ್ವಾರಿಗಳ ಮಾಲೀಕರ ಜೊತೆ ಅಧಿಕಾರಿಗಳು ಮಾತನಾಡಿದ್ದು, ಮೃತರ ಕುಟುಂಬಗಳಿಗೆ ಮಾಲೀಕರಿಂದಲೂ ಪರಿಹಾರ ಕೊಡಿಸ್ತೇವೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND A vs SL A: 2ನೇ ಅನಧಿಕೃತ ಟೆಸ್ಟ್; ಉಭಯ ತಂಡಗಳಿಗೆ ಮೊದಲ ದಿನದ ಗೌರವ – Kannada News | India A vs SL A: Sri Lanka A Strong on Day 1, Reaches 288/5 in Galle Test

ಭಾರತ ಎ ಮತ್ತು ಶ್ರೀಲಂಕಾ ಎ ನಡುವೆ ಗಾಲೆಯಲ್ಲಿ ಎರಡನೇ ಅನಧಿಕೃತ ಟೆಸ್ಟ್ ಪಂದ್ಯ ನಡೆಯುತ್ತಿದೆ. ಪಂದ್ಯದ ಮೊದಲ ದಿನದಂದು, ಭಾರತದ ನಾಯಕ ಧ್ರುವ್ ಜುರೆಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ ತಂಡ ಮೊದಲ ದಿನದಾಟದಂತ್ಯಕ್ಕೆ 5 ವಿಕೆಟ್‌ಗಳನ್ನು ಕಳೆದುಕೊಂಡು 288 ರನ್ ಕಲೆಹಾಕಿದೆ. ತಂಡದ ಪರ ನಾಯಕ ಸಹನ್ ಅರಚ್ಚಿಗೆ ಅಜೇಯ 83 ರನ್​ಗಳ ಇನ್ನಿಂಗ್ಸ್ ಆಡಿದರೆ, ಉಳಿದ ಆಟಗಾರರೂ ಉಪಯುಕ್ತ ಇನ್ನಿಂಗ್ಸ್ ಆಡಿದರು. ಇತ್ತ ಭಾರತದ ಪರ ಸರಾಂಶ್ ಜೈನ್ ಹಾಗೂ ಯಶ್ ಠಾಕೂರ್ ತಲಾ 2 ವಿಕೆಟ್ ಪಡೆದರೆ, ಗುರ್ನೂರ್ ಬ್ರಾರ್ ಒಂದು ವಿಕೆಟ್ ಪಡೆದಿದ್ದಾರೆ.

ಅರಚ್ಛಿಗೆ ಅಜೇಯ 83 ರನ್

ಶ್ರೀಲಂಕಾ ಎ ತಂಡಕ್ಕೆ ಉತ್ತಮ ಆರಂಭವೇ ಲಭಿಸಿತು. ಮೊದಲ ವಿಕೆಟ್​ಗೆ 53 ರನ್​ಗಳ ಜೊತೆಯಾಟ ನೀಡಿದರು. ಆದಾಗ್ಯೂ ಆರಂಭಿಕ ಆಟಗಾರರಿಬ್ಬರನ್ನೂ 86 ರನ್‌ಗಳಿಗೆ ಔಟ್ ಮಾಡುವ ಮೂಲಕ ಭಾರತೀಯ ಬೌಲರ್‌ಗಳು ಪುನರಾಗಮನ ಮಾಡಿದರು. ಯಶ್ ಠಾಕೂರ್ ಮತ್ತು ಗುರ್ನೂರ್ ಬ್ರಾರ್ ಆರಂಭಿಕರಿಬ್ಬರ ವಿಕೆಟ್ ಉರುಳಿಸಿದರು. 3ನೇ ಕ್ರಮಾಂಕದಲ್ಲಿ ಬಂದ ನುವಾನಿಂದು ಫೆರ್ನಾಂಡೊ 44 ರನ್ ಗಳಿಸಿ ಸರಾಂಶ್ ಜೈನ್ ಬೌಲಿಂಗ್‌ನಲ್ಲಿ ಔಟಾದರೆ, ಅಂಜಲಾ ಬಂಡಾರ ಹಾಗೂ ನಾಯಕ ಸಹನ್ ಅರಚ್ಛಿಗೆ 99 ರನ್‌ಗಳ ಉತ್ತಮ ಪಾಲುದಾರಿಕೆಯನ್ನು ಹಂಚಿಕೊಂಡರು. ಬಂಡಾರ42 ರನ್‌ಗಳಿಗೆ ಔಟ್ ಆಗುವ ಮೂಲಕ ಈ ಪಾಲುದಾರಿಕೆ ಮುರಿದುಬಿದ್ದಿತು. ದಿನದ ಅಂತ್ಯಕ್ಕೆ ಅರಚ್ಛಿಗೆ 83 ರನ್ ಮತ್ತು ಗುಣಶೇಖರ 6 ರನ್ ಗಳಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಆಕಿಬ್ ನಬಿಗೆ ವಿಕೆಟ್ ಸಿಗಲಿಲ್ಲ

ಮೊದಲ ಟೆಸ್ಟ್‌ನಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದ ಆಕಿಬ್ ನಬಿ ದಾರ್ ಮೊದಲ ದಿನದಂದು ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಮೊದಲ ದಿನ ನಾಲ್ಕು ಮೇಡನ್ ಸೇರಿದಂತೆ 15 ಓವರ್ ಬೌಲಿಂಗ್ ಮಾಡಿದ ನಬಿ 50 ರನ್ ಬಿಟ್ಟುಕೊಟ್ಟರು. ಉಳಿದಂತೆ ಸರಾಂಶ್ ಜೈನ್ 24 ಓವರ್‌ಗಳಲ್ಲಿ 77 ರನ್ ಬಿಟ್ಟುಕೊಟ್ಟು ಎರಡು ವಿಕೆಟ್ ಪಡೆದರೆ, ಜೀಶನ್ ಅನ್ಸಾರಿ 16 ಓವರ್‌ಗಳಲ್ಲಿ 64 ರನ್ ಬಿಟ್ಟುಕೊಟ್ಟು ವಿಕೆಟ್ ಪಡೆಯಲಿಲ್ಲ. ಶೇಖ್ ರಶೀದ್ ಒಂದು ಓವರ್ ಬೌಲ್ ಮಾಡಿ 10 ರನ್ ಬಿಟ್ಟುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನನ್ನನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ; ಗಿಲ್, ಗಂಭೀರ್ ಮೇಲೆ ‘ಲಾರ್ಡ್’ ಗಂಭೀರ ಆರೋಪ – Kannada News | Shardul Thakur Accuses Gill, Gambhir of Underutilization in Team India; Alleges Conflict

ಭಾರತ ಕ್ರಿಕೆಟ್ ತಂಡದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತೊಮ್ಮೆ ಭುಗಿಲೆದ್ದಿವೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಮ್ಮನ್ನು ಸರಿಯಾಗಿ ಬಳಸಿಕೊಂಡಿಲ್ಲ. ನಾಯಕ ಶುಭ್​ಮನ್ ಗಿಲ್ ಮತ್ತು ಕೋಚ್ ಗೌತಮ್ ಗಂಭೀರ್ ಅವರ ತಂತ್ರಗಳಿಂದಾಗಿ ನನ್ನನ್ನು ಅನ್ಯಾಯವಾಗಿ ನಡೆಸಿಕೊಳ್ಳಲಾಗಿದೆ ಎಂದು ಲಾರ್ಡ್ ಶಾರ್ದೂಲ್ ಠಾಕೂರ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಸಮಯದಲ್ಲಿ ತಂಡದ ಆಡಳಿತ ಮಂಡಳಿ ತನ್ನನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ಆರೋಪ ಮಾಡಿರುವ ಠಾಕೂರ್ ಇದರ ಹೊರತಾಗಿಯೂ, ಟೀಂ ಇಂಡಿಯಾ ಪರ ಮತ್ತೆ ಆಡುವ ಭರವಸೆ ವ್ಯಕ್ತಪಡಿಸಿದ್ದು, ಅವಕಾಶ ಸಿಕ್ಕರೆ ದೇಶಕ್ಕಾಗಿ ತಮ್ಮ ಅತ್ಯುತ್ತಮ ಕೊಡುಗೆ ನೀಡಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.

ನನ್ನನ್ನು ಸರಿಯಾಗಿ ಬಳಸಿಕೊಂಡಿಲ್ಲ

ಕಳೆದ ವರ್ಷದ ಇಂಗ್ಲೆಂಡ್ ಪ್ರವಾಸದಲ್ಲಿ ಶಾರ್ದೂಲ್ ಠಾಕೂರ್ ಕೇವಲ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಆಡಿದ ಆ ಎರಡು ಪಂದ್ಯಗಳಲ್ಲೂ ಶಾರ್ದೂಲ್ ಅವರ ಪ್ರದರ್ಶನ ಮಿಶ್ರವಾಗಿತ್ತು. ಶಾರ್ದೂಲ್ ಆಡಿದ ಒಂದು ಟೆಸ್ಟ್​ನಲ್ಲಿ ಭಾರತ ಸೋತರೆ ಮತ್ತೊಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಆ ಎರಡು ಪಂದ್ಯಗಳಲ್ಲಿ ಆಲ್‌ರೌಂಡರ್ ಆಗಿ ಆಡಿದ ಶಾರ್ದೂಲ್ ಠಾಕೂರ್ ಕೇವಲ 27 ಓವರ್‌ಗಳನ್ನು ಬೌಲ್ ಮಾಡಿದರು. ಇದೀಗ ಆ ಎರಡು ಟೆಸ್ಟ್ ಪಂದ್ಯಗಳ ಬಗ್ಗೆ ಅಭಿಪ್ರಾಯ ಹೊರಹಾಕಿರುವ ಠಾಕೂರ್, ‘ಇಂಗ್ಲೆಂಡ್‌ನಲ್ಲಿ ನನ್ನನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ನನಗೆ ಅನಿಸುತ್ತದೆ. ನನಗೆ ಬಹಳ ಕಡಿಮೆ ಓವರ್ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿತು ಮತ್ತು ತಪ್ಪು ಹಂತಗಳಲ್ಲಿ ನನ್ನನ್ನು ಬಳಸಲಾಯಿತು. ಹೀಗಾಗಿ ಆಡಳಿತ ಮಂಡಳಿಯ ತಂತ್ರಗಳಲ್ಲಿ ದೋಷಗಳಿವೆ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದಿದ್ದಾರೆ.

ಕಷ್ಟಕರವಾದ ಪಿಚ್​ನಲ್ಲಿ ಉತ್ತಮವಾಗಿ ಬ್ಯಾಟಿಂಗ್‌ ಮಾಡಿದೆ

ಆ ಪ್ರವಾಸದಲ್ಲಿ ಶುಭ್​ಮನ್ ಗಿಲ್ ಭಾರತ ತಂಡವನ್ನು ಮುನ್ನಡೆಸಿದ್ದರೆ, ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿದ್ದರು. ಇದೀಗ ಶಾರ್ದೂಲ್ ಠಾಕೂರ್ ನಾಯಕ ಮತ್ತು ಕೋಚ್ ನಿರ್ಧಾರಗಳನ್ನು ಪ್ರಶ್ನಿಸಿದ್ದಾರೆ. ಆದಾಗ್ಯೂ ಈ ಪ್ರವಾಸದಲ್ಲಿ ಠಾಕೂರ್ ಬ್ಯಾಟಿಂಗ್‌ನಲ್ಲಿ 1, 4 ಮತ್ತು 41 ರನ್​ಗಳನ್ನಷ್ಟೇ ಕಲೆಹಾಕಿದ್ದು, ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಠಾಕೂರ್, ‘ಲೀಡ್ಸ್‌ನಲ್ಲಿ ನನ್ನ ಬ್ಯಾಟಿಂಗ್ ಕೆಟ್ಟ ಹೊಡೆತಗಳಿಂದ ಕೂಡಿತ್ತು. ಆದರೆ ನಾನು ಮ್ಯಾಂಚೆಸ್ಟರ್‌ನಲ್ಲಿ ಕಷ್ಟಕರವಾದ ಪಿಚ್​ನಲ್ಲೂ ಚೆನ್ನಾಗಿ ಬ್ಯಾಟಿಂಗ್ ಮಾಡಿದೆ. ಏಕೆಂದರೆ ಮೋಡ ಕವಿದಿತ್ತು, ಚೆಂಡು ಸ್ವಿಂಗ್ ಆಗುತ್ತಿತ್ತು ಮತ್ತು ಪಿಚ್ ನಿರ್ದಿಷ್ಟವಾಗಿ ಪುಟಿಯುತ್ತಿರಲಿಲ್ಲ. ಆದಾಗ್ಯೂ ನಾನು ಆ ಕಷ್ಟಕರವಾದ ಪಿಚ್​ನಲ್ಲಿ ಉತ್ತಮವಾಗಿ ಬ್ಯಾಟಿಂಗ್‌ ಮಾಡಿದೆ. ಇದರಿಂದ ಭಾರತ ತಂಡ ದೊಡ್ಡ ಮೊತ್ತ ಕಲೆಹಾಕಿ, ಪಂದ್ಯವನ್ನು ಡ್ರಾ ಮಾಡಿಕೊಂಡಿತು ಎಂದಿದ್ದಾರೆ.

ಟೀಮ್ ಇಂಡಿಯಾಗೆ ಮರಳುವ ಆಸೆ

ಶಾರ್ದೂಲ್ ಠಾಕೂರ್ ಸುಮಾರು 12 ತಿಂಗಳ ಹಿಂದೆ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಸಮಯದಲ್ಲಿ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರು, ಆ ಸರಣಿಯು 2-2 ಡ್ರಾದಲ್ಲಿ ಕೊನೆಗೊಂಡಿತು. ಇದೀಗ ಮತ್ತೆ ತಂಡದ ಪರ ಆಡುವ ಇಂಗಿತ ವ್ಯಕ್ತಪಡಿಸಿರುವ ಠಾಕೂರ್, ‘ನಾನು ಭಾರತಕ್ಕಾಗಿ ಮತ್ತೆ ಆಡಲು 100 ಪ್ರತಿಶತ ಬಯಸುತ್ತೇನೆ. ಅದು ಯಾವಾಗಲೂ ನನ್ನ ಮನಸ್ಸಿನಲ್ಲಿರುತ್ತದೆ. ನಿಮ್ಮನ್ನು ತಂಡದಿಂದ ಕೈಬಿಟ್ಟರೂ ಸಹ, ಭರವಸೆ ಒಂದು ದೊಡ್ಡ ಪದ ಎಂದು ನಾನು ಭಾವಿಸುತ್ತೇನೆ. ಭರವಸೆ ಜೀವಂತವಾಗಿರುವವರೆಗೆ, ಎಲ್ಲವೂ ಸಾಧ್ಯ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಜನಿಕಾಂತ್ ನಟನೆಯ ‘ಜೈಲರ್ 2’ ಅಕ್ಟೋಬರ್ 15ರಂದು ಬಿಡುಗಡೆ ಆಗೋದು ಖಚಿತ – Kannada News | Rajinikanth Jailer 2 official Release Date Sun Pictures Hrithik Roshan Shiva Rajkumar

ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ದಿನ ಕೊನೆಗೂ ಬಂದಿದೆ. ‘ಸನ್‌ ಪಿಕ್ಚರ್ಸ್’ ಸಂಸ್ಥೆಯು ಬಹುನಿರೀಕ್ಷಿತ ‘ಜೈಲರ್ 2’ (Jailer 2) ಸಿನಿಮಾದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸುವ ಮೂಲಕ ತಿಂಗಳುಗಳಿಂದ ನಡೆಯುತ್ತಿದ್ದ ಚರ್ಚೆಗಳಿಗೆ ತೆರೆ ಎಳೆದಿದೆ. ಸೀಕ್ವೆಲ್ ಘೋಷಣೆ ಆದಾಗಿನಿಂದಲೂ ಟೈಗರ್ ಮುತ್ತುವೇಲ್ ಪಾಂಡಿಯನ್ ಆಗಮನಕ್ಕಾಗಿ ಫ್ಯಾನ್ಸ್ ದಿನಗಣನೆ ಆರಂಭಿಸಿದ್ದರು. ಈಗ ರಿಲೀಸ್ ಡೇಟ್ (Jailer 2 Release Date) ಫಿಕ್ಸ್ ಆಗಿರುವುದರಿಂದ ಚಿತ್ರದ ಮೇಲಿನ ಹೈಪ್ ದುಪ್ಪಟ್ಟಾಗಿದೆ.

‘ಸನ್‌ ಪಿಕ್ಚರ್ಸ್’ ಸಂಸ್ಥೆಯು ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಬಿಡುಗಡೆ ದಿನಾಂಕವನ್ನು ಹಂಚಿಕೊಂಡಿದ್ದು, ‘ಅಕ್ಟೋಬರ್ 15 ರಂದು ಜೈಲರ್ 2 ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಲಿದೆ’ ಎಂದು ಬರೆದುಕೊಂಡಿದೆ. ಆ ಮೂಲಕ ಈ ಬಿಗ್ ಬಜೆಟ್ ಆ್ಯಕ್ಷನ್ ಸಿನಿಮಾ ದಸರಾ ಹಬ್ಬದ ರಜಾದಿನಗಳ ಸೌಲಭ್ಯವನ್ನು ಪಡೆದುಕೊಳ್ಳಲು ಸಜ್ಜಾಗಿದೆ.

ಕುತೂಹಲ ಮೂಡಿಸಿದ ಆ್ಯಕ್ಷನ್ ಟೀಸರ್:

ಬಿಡುಗಡೆ ದಿನಾಂಕದ ಜೊತೆಗೆ ಚಿತ್ರತಂಡ ಒಂದು ಭರ್ಜರಿ ಆ್ಯಕ್ಷನ್ ಟೀಸರ್ ಸಹ ರಿಲೀಸ್ ಮಾಡಿದೆ. ಚಿತ್ರದ ಕಥೆಯನ್ನು ಸಂಪೂರ್ಣವಾಗಿ ರಹಸ್ಯವಾಗಿಟ್ಟಿರುವ ಈ ಟೀಸರ್, ಸಿನಿಮಾದ ತಾರಾಗಣದ ಸಣ್ಣ ಝಲಕ್ ನೀಡಿದೆ. ಟೀಸರ್‌ನಲ್ಲಿ ರಜನಿಕಾಂತ್ ಅವರ ಐಕಾನಿಕ್ ಪಾತ್ರ ‘ಟೈಗರ್ ಮುತ್ತುವೇಲ್ ಪಾಂಡಿಯನ್’ ಮುಖವನ್ನು ಪೂರ್ತಿಯಾಗಿ ತೋರಿಸದೆ ಕುತೂಹಲ ಕಾಯ್ದುಕೊಳ್ಳಲಾಗಿದೆ. ಅವರು ಮತ್ತೊಂದು ಅಪಾಯಕಾರಿ ಮಿಷನ್‌ಗೆ ಹೆಜ್ಜೆ ಇಡುತ್ತಿರುವುದು ಕಾಣಿಸಿದ್ದು, ಮೊದಲ ಭಾಗಕ್ಕಿಂತಲೂ ದೊಡ್ಡ ಸವಾಲು ಈ ಬಾರಿ ಎದುರಾಗಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.

ಇರಲಿವೆ ಶಿವಣ್ಣ-ಮೋಹನ್‌ಲಾಲ್ ಪಾತ್ರಗಳು:

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಈ ಬಾರಿ ಅತಿ ದೊಡ್ಡ ತಾರಾಗಣವೇ ಒಂದಾಗಿದೆ. ಮೊದಲ ಭಾಗದಲ್ಲಿದ್ದ ‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಹಾಗೂ ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ಈ ಸೀಕ್ವೆಲ್‌ನಲ್ಲೂ ಮುಂದುವರಿದಿದ್ದಾರೆ. ಜೊತೆಗೆ ಎಸ್.ಜೆ. ಸೂರ್ಯ, ಮಿಥುನ್ ಚಕ್ರವರ್ತಿ, ಯೋಗಿ ಬಾಬು, ರಮ್ಯಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಬಾಲಿವುಡ್ ನಟಿ ವಿದ್ಯಾ ಬಾಲನ್ ಈ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವುದು ಮತ್ತೊಂದು ವಿಶೇಷ.

ಇದನ್ನೂ ಓದಿ: ವಿಜಯ್ ಜನ್ಮದಿನಕ್ಕೆ ರಜನಿಕಾಂತ್ ಸಾರ್ವಜನಿಕವಾಗಿ ವಿಶ್ ಮಾಡಿಲ್ಲ ಯಾಕೆ? ಸಿಕ್ತು ಉತ್ತರ

ಬಾಲಿವುಡ್ ಹೀರೋ ಹೃತಿಕ್ ರೋಷನ್ ಎಂಟ್ರಿ:

ಎಲ್ಲಕ್ಕಿಂತ ದೊಡ್ಡ ಸರ್ಪ್ರೈಸ್ ಎಂದರೆ, ಬಾಲಿವುಡ್ ಗ್ರೀಕ್ ಗಾಡ್ ಹೃತಿಕ್ ರೋಷನ್ ಈ ಚಿತ್ರಕ್ಕೆ ಸೇರ್ಪಡೆಯಾಗಿರುವುದು. ಅವರದ್ದು ಕೇವಲ ಸಣ್ಣ ಅತಿಥಿ ಪಾತ್ರವಲ್ಲ, ಬದಲಿಗೆ ಕಥೆಗೆ ದೊಡ್ಡ ತಿರುವು ನೀಡುವ ಪಾತ್ರ ಎನ್ನಲಾಗಿದೆ. ಮೂಲಗಳ ಪ್ರಕಾರ, ಹೃತಿಕ್ ರೋಶನ್ ಅವರು ರಜನಿಕಾಂತ್ ಅವರ ಆಪ್ತ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಾಯಕ ಸಂಕಷ್ಟದಲ್ಲಿರುವಾಗ ಕಥೆಯೊಳಗೆ ಎಂಟ್ರಿ ಕೊಟ್ಟು ಸಹಾಯ ಮಾಡುವ ಪವರ್‌ಫುಲ್ ಪಾತ್ರ ಇದಾಗಿದೆಯಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಹಾರ, ಮಧ್ಯಪ್ರದೇಶ, ಗುಜರಾತ್‌ನ 3 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಣೆ – Kannada News | Election Commission of India announces bypolls for 3 Assembly constituencies

ನವದೆಹಲಿ, ಜುಲೈ 2: ಬಿಹಾರ, ಮಧ್ಯಪ್ರದೇಶ ಮತ್ತು ಗುಜರಾತ್‌ನ ತಲಾ ಒಂದು ವಿಧಾನಸಭಾ ಕ್ಷೇತ್ರ ಸೇರಿದಂತೆ ಒಟ್ಟು 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (Election Commission Of India) ಇಂದು ಪ್ರಕಟಿಸಿದೆ. ಈ ಕ್ಷೇತ್ರಗಳಿಗೆ ಜುಲೈ 30ರಂದು ಮತದಾನ ನಡೆಯಲಿದೆ. ಬಿಹಾರದ ಬಂಕಿಪುರ, ಮಧ್ಯಪ್ರದೇಶದ ದಾತಿಯಾ ಮತ್ತು ಗುಜರಾತ್‌ನ ಮಂಜಲ್‌ಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.

ಬಿಹಾರದಲ್ಲಿ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಶಾಸಕ ರಾಜೇಂದ್ರ ಭಾರ್ತಿ ಅವರು ವಂಚನೆ ಪ್ರಕರಣವೊಂದರಲ್ಲಿ ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಅನರ್ಹಗೊಂಡಿದ್ದರಿಂದ ಮತ್ತು ಗುಜರಾತ್‌ನಲ್ಲಿ ಬಿಜೆಪಿ ಶಾಸಕ ಯೋಗೇಶ್‌ಭಾಯ್ ನಾರಾಯಣದಾಸ್ ಪಟೇಲ್ ಅವರ ನಿಧನದಿಂದಾಗಿ ಈ ಸ್ಥಾನಗಳು ತೆರವಾಗಿದ್ದವು.

ಇದನ್ನೂ ಓದಿ: ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ: ಅಡ್ಡಮತದಾನ ಮಾಡಿದವರಿಗೆ ಶಾಸ್ತಿ ಫಿಕ್ಸ್ ಎಂದ ಅಶೋಕ್

ಚುನಾವಣಾ ವೇಳಾಪಟ್ಟಿ:

ಜುಲೈ 13- ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ.

ಜುಲೈ 14- ನಾಮಪತ್ರಗಳ ಪರಿಶೀಲನೆ

ಜುಲೈ 16- ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ.

ಜುಲೈ 30- ಮತದಾನ.

ಆಗಸ್ಟ್ 3- ಮತ ಎಣಿಕೆ, ಫಲಿತಾಂಶ

ಇದನ್ನೂ ಓದಿ: ಪರಿಷತ್​ ಚುನಾವಣೆಯಲ್ಲಿ ಅಡ್ಡ ಮತದಾನ: ರಾಜ್ಯ ನಾಯಕರಿಗೆ ಮಹತ್ವದ​​ ಸೂಚನೆ ನೀಡಿದ ಬಿಜೆಪಿ ಹೈಕಮಾಂಡ್​​

ಚುನಾವಣೆ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳು ಒಳಪಡುವ ಜಿಲ್ಲೆಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಮಾದರಿ ನೀತಿಸಂಹಿತೆ ಜಾರಿಯಾಗಿದೆ ಎಂದು ಆಯೋಗ ತಿಳಿಸಿದೆ. ಎಲ್ಲಾ ಮತಗಟ್ಟೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳು (EVM) ಮತ್ತು ವಿವಿಪ್ಯಾಟ್‌ಗಳನ್ನು (VVPAT) ಬಳಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ. ಇದರೊಂದಿಗೆ, ಅಪರಾಧ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳು ಮತ್ತು ಅವರಿಗೆ ಟಿಕೆಟ್ ನೀಡಿರುವ ರಾಜಕೀಯ ಪಕ್ಷಗಳು, ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ತಮ್ಮ ಅಪರಾಧದ ವಿವರಗಳನ್ನು ಪತ್ರಿಕೆಗಳು, ದೂರದರ್ಶನ ಚಾನೆಲ್‌ಗಳು ಮತ್ತು ಅವರ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version