ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನಿಗೆ ಬಿಗ್ ರಿಲೀಫ್; 3 ವರ್ಷಗಳ ನಿಷೇಧ ತೆರವು..!

Source link

ಒಕ್ಕಲಿಗರ ಸಂಘದಲ್ಲಿ ಅವ್ಯವಹಾರದ ವಾಸನೆ: ನೇಮಕದಲ್ಲಿ ಕೋಟಿ ಕೋಟಿ ಭ್ರಷ್ಟಾಚಾರ – Kannada News | Allegations of corruption in the Karnataka Vokkaliga Sangha

ಬೆಂಗಳೂರು, (ಜುಲೈ 01): ರಾಜ್ಯ ಒಕ್ಕಲಿಗ ಸಂಘದಲ್ಲಿ (Karnataka Vokkaliga Sangha) ಸಾಲು ಸಾಲು ಅಕ್ರಮಗಳು (corruption) ನಡೆದಿವೆ ಎನ್ನುವ ಸ್ಫೋಟಕ ಸತ್ಯಗಳು ಈಗ ಒಂದೊಂದಾಗಿ ಹೊರಬರುತ್ತಿವೆ. ಸಂಘದ ಅಧೀನದಲ್ಲಿರುವ ಕಾಲೇಜುಗಳ ಪ್ರೊಫೆಸರ್ ಹಾಗೂ ನರ್ಸಿಂಗ್ ನೇಮಕಾತಿಯಲ್ಲಿ ಕೋಟ್ಯಂತರ ರೂಪಾಯಿ ಲಂಚದ ಆಟ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ, ಆಸ್ಪತ್ರೆಗೆ ‘ನಾಟ್ ಫಾರ್ ಸೇಲ್’ ಎಂದು ಬರೆದಿರುವ ಮೆಡಿಕಲ್ ಎಕ್ವಿಪ್‌ಮೆಂಟ್‌ಗಳನ್ನು ಖರೀದಿಸಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಸಂಘ ನಡೆಸಲು ಆಗದಿದ್ದರೆ ಕುರ್ಚಿ ಬಿಟ್ಟು ತೊಲಗಿ ಎಂದು ಅಧ್ಯಕ್ಷರು ಹಾಗೂ ಕಾರ್ಯದರ್ಶಿ ವಿರುದ್ಧ ಕೋನಪ್ಪ ರೆಡ್ಡಿ ಕಿಡಿಕಾರಿದ್ದಾರೆ.

ಹೌದು… ರಾಜ್ಯ ಒಕ್ಕಲಿಗ ಸಂಘದ ಆಡಳಿತ ಮಂಡಳಿ ವಿರುದ್ಧ ಈಗ ಅಕ್ರಮಗಳ ಸುರಿಮಳೆಯೇ ಆಗುತ್ತಿದೆ. ಸಂಘದ ಕಾಲೇಜುಗಳಲ್ಲಿ ಉದ್ಯೋಗ ಸಿಗಬೇಕೆಂದರೆ ಯೋಗ್ಯತೆಗಿಂತ ಲಂಚವೇ ಮಾನದಂಡವಾಗಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಾಧ್ಯಾಪಕರ ನೇಮಕ ಹಾಗೂ ನರ್ಸಿಂಗ್ ಸಿಬ್ಬಂದಿ, ಲ್ಯಾಬ್ ಟೆಕ್ನಿಷಿಯನ್ಸ್, ಕಂಪ್ಯೂಟರ್ ಆಪರೇಟಸ್೯ ನೇಮಕಾತಿಯಲ್ಲಿ ಅರ್ಹತೆ ಇಲ್ಲದವರಿಗೂ ಮಣೆ ಹಾಕಲಾಗಿದೆ. ಇನ್ನು ಪ್ರಮೋಷನ್ ವಿಚಾರದಲ್ಲೂ ದೊಡ್ಡ ಮಟ್ಟದ ಕಾನೂನು ಉಲ್ಲಂಘನೆಯಾಗಿದ್ದು, ನಿಯಮದ ಪ್ರಕಾರ 10 ವರ್ಷಗಳ ಅನುಭವ ಇರಬೇಕಾದ ಜಾಗದಲ್ಲಿ ಕೇವಲ ಮೂರೂವರೆ ವರ್ಷ ಅನುಭವ ಇದ್ದವರಿಗೆ ಪ್ರಮೋಷನ್ ನೀಡಿದ್ದಾರೆ. ಇದರ ವಿರುದ್ಧ ಯಾರಾದರೂ ಪ್ರಾಮಾಣಿಕವಾಗಿ ವರದಿ ನೀಡಿದರೆ, ಅವರ ವೇತನವನ್ನೇ ನಿಲ್ಲಿಸುವ ಬೆದರಿಕೆ ಹಾಕಲಾಗುತ್ತಿದೆ. ಇನ್ನು ಅಧ್ಯಕ್ಷರ ಕಚೇರಿಗೆ ಯಾರೇ ಹೋಗಬೇಕಾದರೂ ಮೊಬೈಲ್ ಫೋನ್‌ಗಳನ್ನು ಕಡ್ಡಾಯವಾಗಿ ಹೊರಗೆ ಇಟ್ಟೇ ಹೋಗಬೇಕು ಎಂಬ ಹಿಟ್ಲರ್ ನಿಯಮ ಜಾರಿಯಲ್ಲಿದೆ.ಅಂತ ಉಚ್ಚಾಟಿತ ನಿರ್ಧೇಶಕ ಕೋನಪ್ಪರೆಡ್ಡಿ ಗಂಭೀರವಾದಂತ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: KPSC ಅಧ್ಯಕ್ಷರ ಅಧಿಕಾರ ದುರುಪಯೋಗ ಆರೋಪ : ಸಿಎಂಗೆ ಜೋಶಿ ಬರೆದ ಪತ್ರದಲ್ಲೇನಿದೆ?

ಇನ್ನು ಎಲ್ಲಕ್ಕಿಂತ ಆಘಾತಕಾರಿ ವಿಷಯ ಎಂದರೆ, ಮಾರುಕಟ್ಟೆಯಲ್ಲಿ ಮುಕ್ತ ಮಾರಾಟಕ್ಕೆ ಅವಕಾಶವಿಲ್ಲದ, ‘ನಾಟ್ ಫಾರ್ ಸೇಲ್’ ಎಂಬ ಬೋರ್ಡ್ ಇರುವ ಮೆಡಿಕಲ್ ಎಕ್ವಿಪ್‌ಮೆಂಟ್‌ಗಳನ್ನು ಸಂಘದ ಆಸ್ಪತ್ರೆಗೆ ಖರೀದಿ ಮಾಡಲಾಗಿದೆ. ಈ ನಿಷೇಧಿತ ಯಂತ್ರಗಳನ್ನು ಖರೀದಿಸಿ, ಅದಕ್ಕೆ ಖೋಟಾ ಅಥವಾ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಗುಳುಂ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಖಜಾಂಚಿ ಹಾಗೂ ಕಾರ್ಯದರ್ಶಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಈ ಕೂಡಲೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.ಸಂಘದ ಕಾಲೇಜುಗಳಲ್ಲಿ ನೇಮಕಾತಿ ಆಗಬೇಕು ಅಂದ್ರೂ ಲಂಚ ಕೊಡಬೇಕು. 10 ವರ್ಷದ ಬದಲು ಮೂರುವರೆ ವರ್ಷ ಅನುಭವ ಇರೋರಿಗೆ ಪ್ರಮೋಷನ್ ಕೊಟ್ಟಿದ್ದಾರೆ. ನಾಟ್ ಫಾರ್ ಸೇಲ್ ಬೋರ್ಡ್ ಇರೋ ಮೆಡಿಕಲ್ ಇಕ್ಯೂಪ್ ಮೆಂಟ್ ಗಳನ್ನ ಖರೀದಿ ಮಾಡಿ ದಾಖಲೆ ಸೃಷ್ಟಿಸಿದ್ದಾರೆ. ಸಂಘ ನಡೆಸಲು ಆಗಲಿಲ್ಲ ಅಂದ್ರೆ ಕುರ್ಚಿ ಬಿಟ್ಟುಕೊಡಿ. ಇದರ ಬಗ್ಗೆ ನಿವೃತ್ತ ನ್ಯಾಯಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ಆಗಲೇಬೇಕು ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.

ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಒಕ್ಕಲಿಗ ಸಂಘದ ಸಂಸ್ಥೆಗಳಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಅಕ್ರಮಗಳು ನಡೆಯುತ್ತಿರುವುದು ನಿಜಕ್ಕೂ ಆತಂಕಕಾರಿ. ಈ ಎಲ್ಲಾ ಆರೋಪಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆದು ಸತ್ಯ ಹೊರಬರಬೇಕಿದೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

Source link

IND vs ENG: ಟಾಸ್ ಗೆದ್ದ ಶ್ರೇಯಸ್; ಬಲಿಷ್ಠ ಪ್ಲೇಯಿಂಗ್ 11 ಕಣಕ್ಕಿಳಿಸಿದ ಭಾರತ – Kannada News | IND vs ENG T20: Playing XI and Match Preview for Chester le Street Battle

ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯನ್ನು ಸೋತ ನಂತರ ಇದೀಗ ಟೀಂ ಇಂಡಿಯಾ ಮತ್ತೆ ಅಖಾಡಕ್ಕಿಳಿದಿದೆ. ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇಂದು ಡರ್ಹಾಮ್‌ನ ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ಆರಂಭವಾಗಿದೆ. ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದಲ್ಲಿ ಮೊದಲ ಸರಣಿಯನ್ನು ಸೋತ ನಂತರ, ಭಾರತ ತಂಡವು ಈ ಪಂದ್ಯದಲ್ಲಿ ಮತ್ತೆ ಪುಟಿದೇಳಲು ನೋಡುತ್ತಿದೆ. ಈ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯರಂತಹ ಸ್ಟಾರ್ ಆಟಗಾರರಿಲ್ಲದೆ ಟೀಂ ಇಂಡಿಯಾ ಆಡುತ್ತಿದೆ. ಹೀಗಾಗಿ ಬಲಿಷ್ಠ ಇಂಗ್ಲೆಂಡ್ ವಿರುದ್ಧ ತಂಡದ ಪ್ರದರ್ಶನ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಟಾಸ್ ಗೆದ್ದ ಟೀಂ ಇಂಡಿಯಾ

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿದ್ದಾರೆ. ಇದರ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಭಾರತ ತಂಡದಲ್ಲಿ ಮೂವರು ಸ್ಪಿನ್ನರ್​ಗಳಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ಇಬ್ಬರು ಬೌಲರ್​ಗಳು ಆಡಲಿದ್ದಾರೆ. ಆದರೆ ಬ್ಯಾಟಿಂಗ್‌ ವಿಭಾಗದಲ್ಲಿ ಯಾವುದೇ ಬದಲಾವಣೆಯಾಗದಿರುವುದು ಟೀಂ ಇಂಡಿಯಾ ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಿದೆ.

ವೈಭವ್​ಗೆ ಅವಕಾಶ ನೀಡಲಾಗಿಲ್ಲ

ಏಕೆಂದರೆ ಐರ್ಲೆಂಡ್ ವಿರುದ್ಧವೇ ವೈಭವ್ ಸೂರ್ಯವಂಶಿಯ ಪಾದಾರ್ಪಣೆಗೆ ಅವಕಾಶ ನೀಡಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಲ್ಲಿ ಅವರಿಗೆ ಆಡುವ ಅವಕಾಶ ಸಿಗಲಿಲ್ಲ. ಹೀಗಾಗಿ ಇಂಗ್ಲೆಂಡ್‌ ನೆಲದಲ್ಲಿ ವೈಭವ್ ಚೊಚ್ಚಲ ಪಂದ್ಯವನ್ನಾಡಬಹುದು ಎಂದು ನಂಬಲಾಗಿತ್ತು. ಆದರೆ ಸರಣಿಯ ಮೊದಲ ಪಂದ್ಯದಲ್ಲಿ ವೈಭವ್​ಗೆ ಅವಕಾಶ ನೀಡಲಾಗಿಲ್ಲ. ಹೀಗಾಗಿ ಐರ್ಲೆಂಡ್ ವಿರುದ್ಧ ಯಾವ ಬ್ಯಾಟಿಂಗ್‌ ವಿಭಾಗ ಆಡಿತ್ತೋ ಅದೇ ಬ್ಯಾಟಿಂಗ್‌ ವಿಭಾಗ ಇಂಗ್ಲೆಂಡ್‌ ವಿರುದ್ಧ ರನ್ ಕಲೆಹಾಕಲಿದೆ.

ಉಭಯ ತಂಡಗಳು

ಭಾರತ ತಂಡ: ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮತ್ತು ವರುಣ್ ಚಕ್ರವರ್ತಿ.

ಇಂಗ್ಲೆಂಡ್ ತಂಡ: ಫಿಲ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್ (ನಾಯಕ), ಜಾಕೋಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್, ಆದಿಲ್ ರಶೀದ್, ಲ್ಯೂಕ್ ವುಡ್ ಮತ್ತು ಸಾಕಿಬ್ ಮಹಮೂದ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:46 pm, Wed, 1 July 26

Source link

ಜನರಿಗೆ ಮತ್ತೆ ಬೆಲೆ ಏರಿಕೆ ಶಾಕ್: ಮತ್ತಷ್ಟು ದುಬಾರಿಯಾಗಲಿದೆ ಅಕ್ಕಿ, ಎಷ್ಟು ಗೊತ್ತಾ? – Kannada News | Rising Rice Prices in Karnataka: Monsoon Failure and Supply Shortage Drive Up Cost

ಬೆಂಗಳೂರು, ಜುಲೈ 01: ರಾಜ್ಯದಲ್ಲಿ ಉಂಟಾಗಿರುವ ಮಳೆ (Rain) ಕೊರತೆ ಹಾಗೂ ಕಚ್ಚಾ ವಸ್ತುಗಳ ಅಭಾವದಿಂದಾಗಿ ಅಕ್ಕಿ (Rice) ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ತಿಂಗಳಷ್ಟೇ ಪ್ರತಿ ಕೆಜಿ ಅಕ್ಕಿ ಬೆಲೆಯಲ್ಲಿ 3 ರಿಂದ 5 ರೂಪಾಯಿಯಷ್ಟು ಹೆಚ್ಚಳವಾಗಿತ್ತು. ಆದರೆ, ಇಂದಿನಿಂದ ಅಕ್ಕಿ ದರ ಮತ್ತೊಮ್ಮೆ ಏರಿಕೆಯಾಗಿದ್ದು, ಸಾಮಾನ್ಯ ತಳಿಯ ಅಕ್ಕಿ ಬೆಲೆ ಕೆಜಿಗೆ 5 ರೂ ಹಾಗೂ ಗುಣಮಟ್ಟದ ಅಕ್ಕಿ ಬೆಲೆ ಕೆಜಿಗೆ 10 ರೂಪಾಯಿಯಷ್ಟು ದುಬಾರಿಯಾಗಿದೆ.

ಹೊಸ ಅಕ್ಕಿಯ ದರ ಇಂದಿನಿಂದಲೇ ಜಾರಿ

ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಸಾಮಾನ್ಯ ಅಕ್ಕಿ ಚೀಲದ (ಕ್ವಿಂಟಾಲ್/ಮೂಟೆ) ಮೇಲೆ 130 ರೂಪಾಯಿ ಹಾಗೂ ಗುಣಮಟ್ಟದ ಅಕ್ಕಿ ಚೀಲದ ಮೇಲೆ 260 ರೂಪಾಯಿವರೆಗೆ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಹೊಸ ಅಕ್ಕಿಯ ದರ ಇಂದಿನಿಂದಲೇ ಜಾರಿಗೆ ಬಂದಿದ್ದು, ಹೋಲ್‌ಸೇಲ್ ದರದಲ್ಲಿ ಕೆಜಿಗೆ 5 ರಿಂದ 10 ರೂ ಏರಿಕೆಯಾಗಿದ್ದರೆ, ಚಿಲ್ಲರೆ ಮಾರುಕಟ್ಟೆಗೆ ತಲುಪುವಷ್ಟರಲ್ಲಿ ಗ್ರಾಹಕರಿಗೆ ಪ್ರತಿ ಕೆಜಿಗೆ 15 ರಿಂದ 20 ರೂಪಾಯಿಯಷ್ಟು ಹೊರೆ ಬೀಳಲಿದೆ.

ಜುಲೈನಲ್ಲಿ ಮತ್ತೆ ಏರಿಕೆ ಸಾಧ್ಯತೆ

ಇನ್ನು ಜುಲೈ ಎರಡನೇ ವಾರದಲ್ಲಿ ಅಕ್ಕಿ ದರ ಮತ್ತೊಮ್ಮೆ ಹೆಚ್ಚಾಗಲಿದೆ ಎಂದು ಹೋಲ್‌ಸೇಲ್ ವ್ಯಾಪಾರಿಗಳು ಮುನ್ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಮುಂಗಾರು ಮಳೆ ಸರಿಯಾಗಿ ಆಗದಿರುವುದು ಮತ್ತು ಜಲಾಶಯಗಳಲ್ಲಿ ನೀರಿನ ಕೊರತೆಯಿಂದಾಗಿ ಭತ್ತದ ಇಳುವರಿ ಕುಸಿದಿರುವುದು ಈ ಸತತ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ರಫ್ತು ಪ್ರಕ್ರಿಯೆಯೂ ಈ ಬೆಲೆ ಏರಿಕೆಗೆ ಮತ್ತೊಂದು ಪ್ರಮುಖ ಕಾರಣವಾಗಿದೆ.

ಬೇಸರ ವ್ಯಕ್ತಪಡಿಸುತ್ತಿರುವ ಗ್ರಾಹಕರು

ಪ್ರಸ್ತುತ ಭಾರತದಿಂದ ಶ್ರೀಲಂಕಾಕ್ಕೆ ಭಾರಿ ಪ್ರಮಾಣದಲ್ಲಿ ಅಕ್ಕಿ ಸರಬರಾಜಾಗುತ್ತಿದ್ದು, ಅಲ್ಲಿಂದ ಅದು ಬೇರೆ ಬೇರೆ ದೇಶಗಳಿಗೆ ಮರು ರಫ್ತಾಗುತ್ತಿದೆ. ಇದರಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ, ಪ್ರಮುಖವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ಕಿಯ ತೀವ್ರ ಕೊರತೆ ಎದುರಾಗಿದೆ. ಈ ಕುರಿತು ಆತಂಕ ವ್ಯಕ್ತಪಡಿಸಿರುವ ಗ್ರಾಹಕರು, ಅಕ್ಕಿ ಮೂಟೆಯೊಂದಕ್ಕೆ ಈಗಾಗಲೇ 250 ರಿಂದ 300 ರೂಪಾಯಿವರೆಗೆ ಹೆಚ್ಚುವರಿ ಹಣ ನೀಡಬೇಕಾಗಿ ಬಂದಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮತ್ತೊಂದು ಬೆಲೆ ಏರಿಕೆ ಬಿಸಿ: ಗ್ಯಾಸ್ ಬೆನ್ನಲ್ಲೇ ಗಗನಕ್ಕೇರಿದ ಅಕ್ಕಿ ದರ, ಕೆಜಿಗೆ 10 ರಿಂದ 20 ರೂ. ಹೆಚ್ಚಳ

ಕೇವಲ ಎರಡು ತಿಂಗಳ ಅವಧಿಯಲ್ಲಿ ಎರಡು ಬಾರಿ ದರ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿಯಾಗಲಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸೋನು ಶ್ರೀನಿವಾಸ್ ಗೌಡಗೆ ಇನ್‌ಸ್ಟಾಗ್ರಾಮ್‌ನಿಂದ ತಿಂಗಳಿಗೆ ಬರೋ ಹಣ ಎಷ್ಟು? – Kannada News | Sonu Srinivas Gowda’s Instagram Earnings Revealed: Less than 30K month

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುವ ಸೋನು ಶ್ರೀನಿವಾಸ್ ಗೌಡ, ಈಗ ಬೆಳ್ಳಿಪರದೆಗೆ ಹೆಜ್ಜೆ ಇಟ್ಟಿದ್ದಾರೆ. ಈ ಹಿಂದೆ ಅವರ ಖಾಸಗಿ ವಿಡಿಯೋ ವೈರಲ್ ಆಗಿ ದೊಡ್ಡ ಮಟ್ಟದ ವಿವಾದ ಸೃಷ್ಟಿಸಿತ್ತು. ಆ ಬಳಿಕ ಬಿಗ್ ಬಾಸ್ ಒಟಿಟಿ ಶೋಗೆ ಸ್ಪರ್ಧಿಯಾಗಿ ಬಂದ ಅವರು, ತಮ್ಮ ಮೇಲಿದ್ದ ನೆಗೆಟಿವ್ ಅಭಿಪ್ರಾಯಗಳನ್ನು ಬದಲಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅವರು ಬಿಗ್ ಬಾಸ್‌ಗೆ ಬಂದಾಗ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು, ಆದರೆ ಶೋ ಹೋಸ್ಟ್ ಕಿಚ್ಚ ಸುದೀಪ್ ಅವರು ‘ತಪ್ಪನ್ನು ತಿದ್ದಿಕೊಳ್ಳಲು ಪ್ರತಿಯೊಬ್ಬರಿಗೂ ಒಂದು ಚಾನ್ಸ್ ಕೊಡುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ಸೋನು ಪರವಾಗಿ ನಿಂತಿದ್ದರು. ಈಗ ಸೋನು ಅವರು ತಮ್ಮ ಗಳಿಕೆ ಬಗ್ಗೆ ಮಾತನಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಿಂದ ಎಷ್ಟು ಹಣ ಬರುತ್ತೆ ಗೊತ್ತಾ?

ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಸೋನು ಶ್ರೀನಿವಾಸ್ ಗೌಡ, ಇನ್‌ಸ್ಟಾಗ್ರಾಮ್ ಸಬ್‌ಸ್ಕ್ರಿಪ್ಷನ್‌ನಿಂದ ತಮಗೆ ಎಷ್ಟು ಆದಾಯ ಬರಬಹುದು ಎಂಬ ಲೆಕ್ಕಾಚಾರವನ್ನು ಬಿಚ್ಚಿಟ್ಟಿದ್ದಾರೆ.

ಸೋನು ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸದ್ಯಕ್ಕೆ ಇರುವುದು ಕೇವಲ 289 ಪೇಡ್ ಸಬ್‌ಸ್ಕ್ರೈಬರ್ಸ್ ಮಾತ್ರ. ಒಂದು ವೇಳೆ 300 ಜನ ಸಬ್‌ಸ್ಕ್ರೈಬರ್ಸ್ ಇದ್ದಾರೆ ಎಂದು ಅಂದುಕೊಂಡರೂ, ಒಬ್ಬರಿಂದ ಸಿಗುವ 390 ರೂಪಾಯಿಯಲ್ಲಿ ದೊಡ್ಡ ಮೊತ್ತವನ್ನು ಇನ್​​ಸ್ಟಾಗ್ರಾಮ್ ಇಟ್ಟುಕೊಳ್ಳುತ್ತದೆ ಎಂದಿದ್ದಾರೆ ಸೋನು.
‘ಇನ್‌ಸ್ಟಾಗ್ರಾಮ್ 100 ರೂಪಾಯಿ ತೆಗೆದುಕೊಂಡು ಉಳಿದ ಹಣ ನನಗೆ ನೀಡುತ್ತದೆ. ಈ ಲೆಕ್ಕಾಚಾರದ ಪ್ರಕಾರ ನನಗೆ ಇನ್‌ಸ್ಟಾಗ್ರಾಮ್‌ನಿಂದ ತಿಂಗಳಿಗೆ 30 ಸಾವಿರ ರೂಪಾಯಿ ಕೂಡ ಕೈ ಸೇರುವುದಿಲ್ಲ’ ಎಂದಿದ್ದಾರೆ ಅವರು.

ತಮ್ಮ ಒಟ್ಟು ತಿಂಗಳ ಆದಾಯ ಎಷ್ಟು ಎಂಬುದನ್ನು ನೇರವಾಗಿ ಬಹಿರಂಗಪಡಿಸದ ಸೋನು, ‘ಎಲ್ಲವನ್ನೂ ಮೊದಲೇ ಹೇಳಿದರೆ ಎಲ್ಲರ ಕಣ್ಣು ಬೀಳುತ್ತದೆ’ ಎಂದು ನಗುತ್ತಲೇ ಉತ್ತರಿಸಿದ್ದಾರೆ. ಆದರೆ ಸದ್ಯಕ್ಕೆ ಆರಾಮಾಗಿ ಜೀವನ ನಡೆಸಲು ಯಾವುದೇ ತೊಂದರೆಯಿಲ್ಲ ಎಂದಿದ್ದಾರೆ.

ಹೊಸ ಕಾರು ಖರೀದಿಸಿದ ಸೋನುಗೆ ತಪ್ಪಿಲ್ಲ ಸಾಲದ ಗೋಳು

ಕ್ಯಾಬ್‌ಗಳಲ್ಲಿ ಓಡಾಡಿ ಸುಸ್ತಾಗಿದ್ದ ಸೋನು ಶ್ರೀನಿವಾಸ್ ಗೌಡ ಇತ್ತೀಚೆಗೆ ತಮ್ಮದೇ ಆದ ಹೊಸ ಕಿಯಾ ಕಾರನ್ನು ಖರೀದಿಸಿದ್ದಾರೆ. ಆದರೆ ಈ ಕಾರು ಖರೀದಿಯ ಹಿಂದೆ ದೊಡ್ಡ ಸಾಲದ ಗೋಳಿದೆ ಎಂಬುದನ್ನು ಅವರೇ ಒಪ್ಪಿಕೊಂಡಿದ್ದಾರೆ. ಸೋನು ಖರೀದಿಸಿರುವ ಹೊಸ ಕಾರಿನ ಆನ್ ರೋಡ್ ಬೆಲೆ ಬರೋಬ್ಬರಿ 30 ಲಕ್ಷ ರೂಪಾಯಿ.
ಈ ಐಷಾರಾಮಿ ಕಾರನ್ನು ಮನೆಗೆ ತರಲು ಸೋನು ಶ್ರೀನಿವಾಸ್ ಗೌಡ ಅವರು ಪಾವತಿಸಿರುವುದು ಕೇವಲ 5 ಲಕ್ಷ ರೂಪಾಯಿ ಡೌನ್ ಪೇಮೆಂಟ್ ಮಾತ್ರ. ಇನ್ನುಳಿದ ಬರೋಬ್ಬರಿ 25 ಲಕ್ಷ ರೂಪಾಯಿ ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಸಾಲದ ಗೋಳು ಹೇಳಿಕೊಂಡ ಮಾಜಿ ಬಿಗ್​​ಬಾಸ್ ಸ್ಪರ್ಧಿ ಸೋನು ಗೌಡ

‘ಪೇಡ್ ಸಬ್‌ಸ್ಕ್ರೈಬರ್ಸ್ ಇದ್ದಾರೆ ಎಂದಾಕ್ಷಣ ಸೋನು ಶ್ರೀನಿವಾಸ್ ಗೌಡ ಒಮ್ಮೆಗೆ ದುಡ್ಡು ಕೊಟ್ಟು ಕಾರು ತಗೊಂಡಿದ್ದಾರೆ ಅಂದುಕೊಂಡರೆ ತಪ್ಪು, ನಾನು ಇಎಂಐ ಮೂಲಕವೇ ಕಾರು ಖರೀದಿಸಿದ್ದು. ಆರು ವರ್ಷಗಳ ಕಾಲ ಕಾರಿನ ಇಎಂಐ ಕಟ್ಟಬೇಕಿದೆ’ ಎಂದು ತಮ್ಮ ಸಾಲದ ಹೊರೆಯನ್ನು ತೋಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಾಟ್ಸಾಪ್ ಯೂಸರ್ ನೇಮ್ ಫೀಚರ್ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ; ಮೆಟಾಗೆ ನೋಟಿಸ್ ಜಾರಿ – Kannada News | Government issues notice to Meta over New WhatsApp Username Feature seeks reply in 3 days

ನವದೆಹಲಿ, ಜುಲೈ 1: ವಾಟ್ಸಾಪ್ (WhatsApp) ಬಳಕೆದಾರರಿಗಾಗಿ ಮೆಟಾ ಸಂಸ್ಥೆಯು ಸಿದ್ಧಪಡಿಸುತ್ತಿರುವ ಹೊಸ “ಯೂಸರ್‌ನೇಮ್” ವೈಶಿಷ್ಟ್ಯದ ಬಿಡುಗಡೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರ ಇಂದು ಆದೇಶಿಸಿದೆ. ಈ ಹೊಸ ಆಯ್ಕೆ ಸೈಬರ್ ಅಪರಾಧಗಳು ಮತ್ತು ಆನ್‌ಲೈನ್ ವಂಚನೆಗಳಿಗೆ ದಾರಿ ಮಾಡಿಕೊಡಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೆಟಾ ಕಂಪನಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದ್ದು, 3 ದಿನಗಳ ಒಳಗೆ ಸಮಗ್ರ ವಿವರಣೆ ನೀಡುವಂತೆ ಸೂಚನೆ ನೀಡಿದೆ.

ಟೆಲಿಗ್ರಾಂ ಮಾದರಿಯ ದುರ್ಬಳಕೆಯ ಭೀತಿ:

ಫೋನ್ ಸಂಖ್ಯೆಯನ್ನು ಹಂಚಿಕೊಳ್ಳದೆಯೇ ಕೇವಲ ಯೂಸರ್‌ನೇಮ್ ಮೂಲಕ ಇತರರನ್ನು ಸಂಪರ್ಕಿಸುವ ಈ ಆಪ್ಷನ್ ‘ಟೆಲಿಗ್ರಾಂ’ ಆ್ಯಪ್‌ನಂತೆ ವಂಚನೆಗಳಿಗೆ ವೇದಿಕೆಯಾಗಬಹುದು ಎಂದು ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಮೊಬೈಲ್ ಸಂಖ್ಯೆ ಕಾಣಿಸದೇ ಇರುವುದರಿಂದ ನಕಲಿ ಖಾತೆಗಳ ಸೃಷ್ಟಿ, ಆನ್‌ಲೈನ್ ಆರ್ಥಿಕ ವಂಚನೆಗಳು ಮತ್ತು ತಪ್ಪು ಮಾಹಿತಿ ಹರಡುವಿಕೆ ಹೆಚ್ಚಾಗಬಹುದು ಎಂದು ಭದ್ರತಾ ಸಂಸ್ಥೆಗಳು ಎಚ್ಚರಿಸಿವೆ.

ಫೋನ್ ಸಂಖ್ಯೆಗಳ ಬದಲಿಗೆ ಯೂಸರ್‌ನೇಮ್‌ಗಳನ್ನು ಬಳಸುವುದರಿಂದ ನಕಲಿ ಖಾತೆಗಳ ಸೃಷ್ಟಿ, ಆನ್‌ಲೈನ್ ವಂಚನೆ ಮತ್ತು ಖಾತೆಗಳ ದುರ್ಬಳಕೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಕೆಲವು ಕಿಡಿಗೇಡಿಗಳು ಈ ವ್ಯವಸ್ಥೆಯ ದುರುಪಯೋಗ ಪಡಿಸಿಕೊಂಡು ಜನರನ್ನು ದಾರಿತಪ್ಪಿಸಬಹುದು ಅಥವಾ ಸುಳ್ಳು ಮತ್ತು ಹಾನಿಕಾರಕ ಮಾಹಿತಿಯನ್ನು ಹರಡಬಹುದು ಎಂಬ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಈ ವೈಶಿಷ್ಟ್ಯ ಮತ್ತು ಬಳಕೆದಾರರ ಸುರಕ್ಷತೆಯ ಮೇಲೆ ಇದು ಬೀರಬಹುದಾದ ಪರಿಣಾಮಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ.

ಇದನ್ನೂ ಓದಿ: WhatsApp Username: ಯೂಸರ್​ನೇಮ್ ಇಟ್ಟು ಪೋನ್ ನಂಬರ್ ರಹಸ್ಯವಾಗಿಡಿ; ವಾಟ್ಸಾಪ್​ನಲ್ಲಿ ಹೊಸ ಫೀಚರ್

ಸದ್ಯಕ್ಕೆ ವಾಟ್ಸಾಪ್‌ನಲ್ಲಿ ಮೊಬೈಲ್ ಸಂಖ್ಯೆಯೇ ಪ್ರಮುಖ ಆಧಾರವಾಗಿದೆ. ಯೂಸರ್‌ನೇಮ್‌ಗಳು ಜಾರಿಗೆ ಬಂದರೆ ಸೈಬರ್ ಅಪರಾಧಿಗಳು ದೇಶದ ಒಳಗಿನಿಂದ ಕಾರ್ಯನಿರ್ವಹಿಸುತ್ತಿದ್ದಾರೋ ಅಥವಾ ವಿದೇಶದಿಂದಲೋ ಎಂಬುದನ್ನು ಪತ್ತೆಹಚ್ಚುವುದು ಸ್ಥಳೀಯ ಪೊಲೀಸರಿಗೆ ಕಷ್ಟವಾಗುತ್ತದೆ.

ಸರ್ಕಾರದ ಆದೇಶದಲ್ಲೇನಿದೆ?:

ಸರ್ಕಾರದೊಂದಿಗಿನ ಅಧಿಕೃತ ಸಮಾಲೋಚನಾ ಪ್ರಕ್ರಿಯೆಯು ಸಂಪೂರ್ಣವಾಗಿ ಮುಕ್ತಾಯಗೊಳ್ಳುವವರೆಗೆ ಭಾರತದಲ್ಲಿ ಈ ಯೂಸರ್‌ನೇಮ್ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಬಾರದು ಎಂದು ಮೆಟಾ ಸಂಸ್ಥೆಗೆ ಸೂಚನೆ ನೀಡಲಾಗಿದೆ. ಬಳಕೆದಾರರ ಖಾಸಗಿತನ ಕಾಯ್ದುಕೊಳ್ಳುವುದರ ಜೊತೆಗೆ ಸೈಬರ್ ಸುರಕ್ಷತೆಯನ್ನು ಹೇಗೆ ಕಾಪಾಡಲಾಗುವುದು ಎಂಬ ದೋಷರಹಿತ ಯೋಜನೆಯನ್ನು ಸಿದ್ಧಪಡಿಸುವಂತೆ ಐಟಿ ಸಚಿವಾಲಯವು ಮೆಟಾ ಕಂಪನಿಗೆ ತಿಳಿಸಿದೆ.

ಇದನ್ನೂ ಓದಿ: ಇಪಿಎಫ್​ಒದಿಂದ ಸದ್ಯದಲ್ಲೇ 2 ಹೊಸ ಸೇವೆಗಳು; ವಾಟ್ಸಾಪ್ ಚಾಟ್​ಬೋಟ್ ಮತ್ತು ಯುಪಿಐ ವಿತ್​ಡ್ರಾವಲ್

ಏನಿದು ಹೊಸ ವಾಟ್ಸಾಪ್ ಫೀಚರ್?:

ವಾಟ್ಸಾಪ್ ಬಳಕೆದಾರರು ಫೋನ್ ಸಂಖ್ಯೆಗಳ ಬದಲಿಗೆ ಯೂಸರ್‌ನೇಮ್‌ಗಳ ಮೂಲಕ ಪರಸ್ಪರ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುವ ಹೊಸ ವೈಶಿಷ್ಟ್ಯದ ಮೇಲೆ ಕೆಲಸ ಮಾಡುತ್ತಿದೆ. ವಿಶೇಷವಾಗಿ ಜನರು ಗ್ರೂಪ್ ಚಾಟ್‌ಗಳಿಗೆ ಸೇರಿದಾಗ ಅಥವಾ ಹೊಸ ಪರಿಚಯಸ್ಥರೊಂದಿಗೆ ಸಂಭಾಷಣೆಗಳನ್ನು ಪ್ರಾರಂಭಿಸಿದಾಗ ಅವರ ವೈಯಕ್ತಿಕ ಗೌಪ್ಯತೆಯನ್ನು ಕಾಯ್ದುಕೊಳ್ಳುವುದು ಈ ಅಪ್ಡೇಟ್‌ನ ಮುಖ್ಯ ಉದ್ದೇಶವಾಗಿದೆ. ಒಮ್ಮೆ ಈ ಫೀಚರ್ ಲಭ್ಯವಾದರೆ, ಯೂಸರ್‌ನೇಮ್ ಸೆಟ್ ಮಾಡಿದ ಬಳಕೆದಾರರು ಮೊದಲ ಬಾರಿಗೆ ಸಂಪರ್ಕಿಸುವ ವ್ಯಕ್ತಿಗಳಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ತೋರಿಸದೆಯೇ ಚಾಟ್ ಮಾಡಬಹುದು. ಇದು ಬಳಕೆದಾರರಿಗೆ ತಮ್ಮ ವೈಯಕ್ತಿಕ ಮಾಹಿತಿಯ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:51 pm, Wed, 1 July 26

Source link

KPSC ಅಧ್ಯಕ್ಷರ ಅಧಿಕಾರ ದುರುಪಯೋಗ ಆರೋಪ : ಸಿಎಂಗೆ ಜೋಶಿ ಬರೆದ ಪತ್ರದಲ್ಲೇನಿದೆ? – Kannada News | Pralhad joshi letter to cm dk shivakumar for investigation about kpsc chairman misuse power

ಬೆಂಗಳೂರು, (ಜುಲೈ 01): ಕರ್ನಾಟಕ ಲೋಕಸೇವಾ ಆಯೋಗ (KPSC) ಅಧ್ಯಕ್ಷರು ಅಧಿಕಾರ ದುರುಪಯೋಗ ಪಡಿಸಿಕೊಂಡ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿದ್ದು, ಸಮಗ್ರ ತನಿಖೆ ಆಗಬೇಕೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ (pralhad joshi )ಮುಖ್ಯಮಂತ್ರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. KPSC ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಅವರು ಅಧಿಕಾರ ದುರ್ಬಳಕೆ ಮತ್ತು ಸ್ವಜನಪಕ್ಷಪಾತ ಎಸಗಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ. ಕೈಗಾರಿಕಾ ವಿಸ್ತರಣಾಧಿಕಾರಿ (Industrial Extension Officers) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮ ನಡೆದಿರುವ ಕುರಿತು KPSC ಕಾರ್ಯದರ್ಶಿ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಿದ್ದಾರೆ. ಈ ಕುರಿತು ಪಾರದರ್ಶಕ ತನಿಖೆ ನಡೆಸಬೇಕು ಎಂದು ಸಚಿವ ಜೋಶಿ ಸಿಎಂಗೆ ಒತ್ತಾಯಿಸಿದ್ದಾರೆ.

ನ್ಯಾಯ ತತ್ವಕ್ಕೆ ವಿರುದ್ಧ ನಿಲುವು

ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆ ನೇಮಕಾತಿ ಪ್ರಕ್ರಿಯೆಯಲ್ಲಿ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿಯರೇ ಅಭ್ಯರ್ಥಿಗಳಾಗಿದ್ದರು. ತಾವೇ ಆಯೋಗದ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ಪುತ್ರಿಯರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಲ್ಲದೆ, ಇತ್ತೀಚೆಗೆ ಹೊರಬಿದ್ದ ಆಯ್ಕೆ ನಡಾವಳಿಗಳಿಗೂ (Selection Proceedings) ಸಹಿ ಹಾಕಿದ್ದಾರೆ. ಇದು ಸಹಜವಾಗಿಯೇ ನ್ಯಾಯ ತತ್ವಕ್ಕೆ (Principles of Natural Justice) ಸಂಪೂರ್ಣ ವಿರುದ್ಧ ನಿಲುವಾಗಿದೆ. ಇದರಲ್ಲಿ ನೈತಿಕತೆಯ ಉಲ್ಲಂಘನೆಯಾಗಿದೆ ಎಂದು ಪ್ರಲ್ಹಾದ ಜೋಶಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಉಡುಪಿ ಜಿಲ್ಲೆಯಲ್ಲಿ ಮೊಬೈಲ್ ನೆಟ್‌ವರ್ಕ್ ಟೆಸ್ಟ್: ಏರ್‌ಟೆಲ್, ಜಿಯೋ ಮುಂದು; ತೀರಾ ಹಿಂದಿರುವ ಬಿಎಸ್‌ಎನ್‌ಎಲ್!

ಮೀಸಲಾತಿ ಮತ್ತು ಆದಾಯ ನಿಯಮ ಉಲ್ಲಂಘನೆ

ಅಧ್ಯಕ್ಷರ ಪುತ್ರಿಯರ ಪೈಕಿ ಒಬ್ಬರು ಪಡೆದಿರುವ ಮೀಸಲಾತಿ ಅರ್ಹತೆ ಬಗ್ಗೆಯೂ ಸಂಶಯಗಳು ವ್ಯಕ್ತವಾಗಿವೆ. ನಿಗದಿಪಡಿಸಿದ ಆದಾಯದ ಮಾನದಂಡಗಳನ್ನು (Income Criteria) ಪೂರೈಸದೇ ಇರುವುದು ಒಂದೆಡೆಯಾದರೆ, ಸುಳ್ಳು ಮಾಹಿತಿ ನೀಡಿ ಮೀಸಲಾತಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದು ಅರ್ಹ ಮತ್ತು ಪ್ರಾಮಾಣಿಕ ಕೆಪಿಎಸ್‌ಸಿ ಆಕಾಂಕ್ಷಿಗಳಿಗೆ ಬಗೆದ ದ್ರೋಹ. ಇಡೀ ನೇಮಕಾತಿ ವ್ಯವಸ್ಥೆಗೇ ಅಂಟಿದ ಕಪ್ಪುಚುಕ್ಕೆಯಾಗಿದೆ ಎಂದು ಸಚಿವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಪಾರದರ್ಶಕ ತನಿಖೆಗೆ ಸಿಎಂಗೆ ಮನವಿ

KPSC ಅಧ್ಯಕ್ಷರಿಂದ ಬಹಿರಂಗವಾಗಿ ನಡೆದಿರುವ ಈ ಸ್ವಜನಪಕ್ಷಪಾತ ಮತ್ತು ಅಧಿಕಾರ ದುರುಪಯೋಗ ಕುರಿತು ಮುಖ್ಯಮಂತ್ರಿ ಗಮನ ಸೆಳೆದಿರುವ ಜೋಶಿ, ಪಾರದರ್ಶಕತೆ ಕಾಯ್ದುಕೊಳ್ಳಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

ರಾಜ್ಯಪಾಲರಿಗೂ ಪತ್ರ ಬರೆದು ಮನವಿ

ಈ ಪ್ರಕರಣ ಕೆಪಿಎಸ್‌ಸಿ ಸಂಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ. ಅಲ್ಲದೇ, ಅರ್ಹತೆ ಆಧಾರಿತ ವ್ಯವಸ್ಥೆಯನ್ನೇ ಪ್ರಶ್ನಿಸುವಂತಾಗಿದೆ. ಹೀಗಾಗಿ ಈ ಅಕ್ರಮವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಸಮಗ್ರ ತನಿಖೆಗೊಳಪಡಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ರಾಜ್ಯಪಾಲರಿಗೂ ಪತ್ರ ಬರೆದು ವಿನಂತಿಸಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗದ ಪಾವಿತ್ರ್ಯತೆ ಕಾಪಾಡಲು ಮತ್ತು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಒದಗಿಸಲು ಈ ತನಿಖೆ ಅತ್ಯಗತ್ಯವಾಗಿದೆ ಎಂದು ಸಚಿವರು ಅಭಿಪ್ರಾಯಿಸಿದ್ದು, ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೂ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕ ಮತ್ತು ಇರಾನ್ ನಡುವೆ ಉತ್ತಮ ಬಾಂಧವ್ಯವಿದೆ; ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ – Kannada News | US President Donald Trump Says discussions with Iran are moving in a positive direction

ನವದೆಹಲಿ, ಜುಲೈ 1: ಅಮೆರಿಕ ಮತ್ತು ಇರಾನ್ ದೇಶಗಳು ಅತ್ಯಂತ ಉತ್ತಮ ಬಾಂಧವ್ಯವನ್ನು ಹೊಂದಿವೆ ಮತ್ತು ಇತ್ತೀಚೆಗೆ ಕತಾರ್‌ನಲ್ಲಿ ನಡೆದ ರಾಜತಾಂತ್ರಿಕ ಸಭೆಗಳು ಆಶಾದಾಯಕ ಪ್ರಗತಿಯನ್ನು ತೋರಿಸಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ. ನಾರ್ತ್ ಡಕೋಟಾ ಪ್ರವಾಸಕ್ಕಾಗಿ ಕತಾರ್ ಒದಗಿಸಿದ ‘ಏರ್ ಫೋರ್ಸ್ ಒನ್’ ವಿಮಾನವನ್ನು ಏರುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ಜೊತೆಗಿನ ಮಾತುಕತೆಗಳು ಉತ್ತಮ ದಿಕ್ಕಿನಲ್ಲಿ ಸಾಗುತ್ತಿವೆ ಎಂದು ತಿಳಿಸಿದರು.

ಉಭಯ ದೇಶಗಳ ನಡುವೆ ಈ ಹಿಂದೆ ಉದ್ವಿಗ್ನತೆ ಇತ್ತಾದರೂ, ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸದಂತೆ ತಡೆಯುವುದರ ಮೇಲೆಯೇ ಪ್ರಸ್ತುತ ಪ್ರಯತ್ನಗಳು ಕೇಂದ್ರೀಕೃತವಾಗಿವೆ ಎಂದು ಅವರು ಹೇಳಿದರು. “ನಾವು ಅವರ ಮೇಲೆ ತೀವ್ರವಾದ ದಾಳಿ ನಡೆಸಿದ್ದೆವು. ಆದರೆ ಈಗ ನಾವು ತುಂಬಾ ಚೆನ್ನಾಗಿ ಒಟ್ಟಿಗೆ ಸಾಗುತ್ತಿದ್ದೇವೆ” ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್ ಅವರ ಪ್ರಕಾರ, ಇತ್ತೀಚೆಗೆ ಕತಾರ್‌ನಲ್ಲಿ ನಡೆದ ಚರ್ಚೆಗಳು ಯಶಸ್ವಿಯಾಗಿದ್ದು, ಉಭಯ ದೇಶಗಳು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಪರಸ್ಪರ ತಿಳುವಳಿಕೆಯನ್ನು ಸುಧಾರಿಸಲು ಮಾತುಕತೆಯಲ್ಲಿ ತೊಡಗಿವೆ. ಅಮೆರಿಕ ಆಡಳಿತವು ಇರಾನ್ ಜೊತೆಗಿನ ಸಂಬಂಧವನ್ನು ನಿರ್ವಹಿಸಲು ಪರೋಕ್ಷ ಮತ್ತು ತಾಂತ್ರಿಕ ಮಟ್ಟದ ಮಾತುಕತೆಗಳನ್ನು ಜಾಗತಿಕ ರಾಜತಾಂತ್ರಿಕ ಪ್ರಯತ್ನದ ಭಾಗವಾಗಿ ಬಳಸಿಕೊಳ್ಳುತ್ತಿದೆ.

ಇದನ್ನೂ ಓದಿ: ಟ್ರಂಪ್‌ಗೆ ಬಿಗ್ ಶಾಕ್: ಇರಾನ್ ವಿರುದ್ಧದ ಯುದ್ಧ ನಿಲ್ಲಿಸಲು ಅಮೆರಿಕ ಸೆನೆಟ್‌ನಲ್ಲಿ ನಿರ್ಣಯ ಅಂಗೀಕಾರ

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ ಈ ಪ್ರಸ್ತುತ ಪರಿಸ್ಥಿತಿಯ ಕುರಿತು ಪ್ರತಿಕ್ರಿಯಿಸಿದ್ದು, ಅಮೆರಿಕದೊಂದಿಗೆ ಶಾಂತಿ ಮಾತುಕತೆ ನಡೆಯುತ್ತಿಲ್ಲ ಎಂಬ ಇರಾನ್‌ನ ಸಾರ್ವಜನಿಕ ನಿರಾಕರಣೆಯನ್ನು ತಳ್ಳಿಹಾಕಿದ್ದಾರೆ. ಉಭಯ ದೇಶಗಳ ನಡುವೆ ತಾಂತ್ರಿಕ ಮಟ್ಟದ ಚರ್ಚೆಗಳು ಮುಂದುವರಿದಿವೆ ಎಂದು ಅವರು ಹೇಳಿದ್ದಾರೆ.

ಮತ್ತೊಂದು ಸಂದರ್ಶನದಲ್ಲಿ ಮಾತನಾಡಿದ ವ್ಯಾನ್ಸ್, “ಇರಾನಿಯನ್ನರು ಏನು ಹೇಳುತ್ತಾರೆಂಬುದರ ಬಗ್ಗೆ ನಮಗೆ ತಲೆಕೆಡಿಸಿಲ್ಲ. ಅವರು ಏನು ಮಾಡುತ್ತಾರೆ ಎಂಬುದು ನಮಗೆ ಮುಖ್ಯ,” ಎಂದು ಹೇಳಿದ್ದಾರೆ. ಮಾತುಕತೆಗಳು ವಿಫಲವಾದರೆ ಎಲ್ಲಾ ಆಯ್ಕೆಗಳನ್ನು ಮುಕ್ತವಾಗಿಟ್ಟುಕೊಂಡು, ರಾಜತಾಂತ್ರಿಕ ಪ್ರಯತ್ನಗಳನ್ನು ಮುಂದುವರಿಸಲು ಟ್ರಂಪ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಚಿಕಿತ್ಸೆ ಪಡೆದ್ರೂ ಮಕ್ಕಳಾಗಿಲ್ಲ: ರಾಯಚೂರು ಖಾಸಗಿ ಐವಿಎಫ್ ಮಾಫಿಯಾ ಬಯಲು – Kannada News | IVF Hospital Scam: Patients Allege Fraud Over Unfulfilled Treatment Promises

ರಾಯಚೂರು, ಜುಲೈ 01: ಮಕ್ಕಳಾಗದ ದಂಪತಿ ಐವಿಎಫ್ (IVF) ಎಂಬ ತಂತ್ರಜ್ಞಾನ ದಡಿಯ ಚಿಕಿತ್ಸೆಗೆ ಹೋಗುವುದು ಮಾಮೂಲು. ಆದರೆ ಇದೇ ಐವಿಎಫ್​ನಿಂದ ಮಕ್ಕಳಾಗಿಲ್ಲ, ಸುಮ್ಮನೆ ಹಣ ಪೀಕುದ್ದಾರೆ ಅಂತ ಗಡಿ ಜಿಲ್ಲೆಯ ಖಾಸಗಿ ಆಸ್ಪತ್ರೆ ವಿರುದ್ಧ ಕೆಲ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳಾಗುತ್ತವೆ ಅಂತಾ ನಾವು 100% ಗ್ಯಾರಂಟಿ ಕೊಟ್ಟಿಲ್ಲ. ಐವಿಎಫ್ ರಿಸಲ್ಟ್ ಇರುವುದು 40 ಪರ್ಸೆಂಟ್ ಮಾತ್ರ ಅಂತ ಆಸ್ಪತ್ರೆ ನೀಡಿರುವ ಹೇಳಿಕೆ ಶಾಕ್​ ಉಂಟುಮಾಡಿದೆ.

ಮಕ್ಕಳಾಗುವ ಭರವಸೆ ಕೊಟ್ಟು ವಂಚನೆ

ಒಂದು ಮಗುವಾದರೂ ಇರ್ಬೇಕು ಅನ್ನೋದು ಪ್ರತಿ ದಂಪತಿಯ ಕನಸು. ಆದರೆ ಮಕ್ಕಳಾಗದೇ ಹಿನ್ನೆಲೆ ಈಗಿನ ಜನ ಐವಿಎಫ್ ಅನ್ನೋ ಹೊಸ ತಂತ್ರಜ್ಞಾನದ ಚಿಕಿತ್ಸೆ ಪಡೆಯೋದು ಮಾಮೂಲಾಗಿದೆ. ಇಂಥಹದ್ದೆ ಐವಿಎಫ್ ಆಸ್ಪತ್ರೆ ಶೇಡಕಾ 100 ರಷ್ಟು ಮಕ್ಕಳು ಮಾಡುತ್ತೇವೆ ಅಂತ ಭರವಸೆ ಕೊಟ್ಟು ವಂಚಿಸುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ರಾಯಚೂರು PWD ಇಲಾಖೆಯಲ್ಲಿ ಭ್ರಷ್ಟಾಚಾರ: ಸತೀಶ್ ಜಾರಕಿಹೊಳಿ ಸಂಬಂಧಿ ಎಂದು ಹೇಳಿಕೊಂಡು ಕೋಟ್ಯಂತರ ರೂ ಲೂಟಿ

ರಾಯಚೂರು ನಗರದಲ್ಲಿರುವ ಖಾಸಗಿ ಐವಿಎಫ್ ಆಸ್ಪತ್ರೆ ವಿರುದ್ಧವೇ ಅಲ್ಲಿ ಚಿಕಿತ್ಸೆ ಪಡೆದವರೇ ಈಗ ಕೆರಳಿದ್ದಾರೆ. ಮಕ್ಕಳ ಭಾಗ್ಯ ಕರುಣಿಸದೇ ಕೇವಲ ಹಣ ವಸೂಲಿ ಮಾಡ್ತಿದ್ದಾರೆ ಅಂತ ಆಸ್ಪತ್ರೆ ವಿರುದ್ಧ ಕೆಲ ರೋಗಿಗಳು ಗಂಭೀರ ಆರೋಪ ಮಾಡಿದ್ದಾರೆ. ಚಿಕಿತ್ಸೆ ಪಡೆದು ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಮಕ್ಕಳಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ರೋಗಿಗಳು, ಆಸ್ಪತ್ರೆ 100% ಯಶಸ್ಸಿನ ಭರವಸೆ ನೀಡಿ ಹಣ ಪಡೆದಿದ್ದಾರೆ ಎಂದು ಉಮೇಶ್ ಹಾಗೂ ಶಾಲಮ್ ಎನ್ನುವವರು ಆರೋಪಿಸಿದ್ದಾರೆ. ಇದೇ ರೀತಿ ಸಾಕಷ್ಟು ಜನಕ್ಕೆ ಮೋಸ ಮಾಡಲಾಗಿದೆ ಎನ್ನಲಾಗುತ್ತಿದೆ.

ರಾಯಚೂರಿನ ಇದೇ ಖಾಸಗಿ ಐವಿಎಫ್ ಆಸ್ಪತ್ರೆ ವಿರುದ್ಧ ರಾಯಚೂರು ನಗರದ ನಿವಾಸಿಗಳಾದ ಉಮೇಶ್ ಹಾಗೂ ಶಾಲಮ್ ಎಂಬವರು ಕೆರಳಿದ್ದಾರೆ. ಉಮೇಶ್ ಹಾಗೂ ಶಾಲಮ್ ಇದೇ ಖಾಸಗಿ ಆಸ್ಪತ್ರೆಯಲ್ಲಿ ಮಕ್ಕಳಾಗು ಚಿಕಿತ್ಸೆ ಪಡೆದುಕೊಂಡಿದ್ದರಂತೆ. ಇವರು ಮೂರು-ನಾಲ್ಕು ಹಂತಗಳಲ್ಲಿ ಐವಿಎಫ್ ಚಿಕಿತ್ಸೆ ಪಡೆದರೂ ಮಕ್ಕಳಾಗಲಿಲ್ಲ. ಒಬ್ಬೊಬ್ಬರಿಂದ ಎರಡು ಲಕ್ಷ ರೂಪಾಯಿಗೂ ಹೆಚ್ಚು ಹಣ ಪಡೆದಿದ್ದಾರಂತೆ. 100% ಮಕ್ಕಳಾಗುತ್ತದೆ ಎಂಬ ಭರವಸೆ ನೀಡಿ ವಂಚನೆ ಮಾಡಲಾಗಿದೆ. ಜೊತೆಗೆ ಆಸ್ಪತ್ರೆ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರೋಗಿಗಳು ಆರೋಪಿಸಿದ್ದು, ಇದಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳ ಕುಮ್ಮಕ್ಕು ಕೂಡ ಇದೆ ಎಂದು ದೂರಿದ್ದಾರೆ.

ಆರೋಪಗಳನ್ನು ತಳ್ಳಿಹಾಕಿದ ಖಾಸಗಿ ಆಸ್ಪತ್ರೆ ಮಾಲಕಿ ಡಾ. ದೀಪಾ ಹನಮಸಾಗರ್

ಮಕ್ಕಳಾಗುತ್ತದೆ ಎಂದು ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ಚಿಕಿತ್ಸೆ ನೀಡಿದರೂ ಯಾವುದೇ ಫಲಿತಾಂಶ ಸಿಕಿಲ್ಲ ಅಂತ ಈ ರೋಗಿಗಳು ಆರೋಪಿಸಿದ್ದಾರೆ. ಇದಷ್ಟೇ ಅಲ್ಲದೇ, ಕಾನೂನು ಬಾಹಿರವಾಗಿ ಅನಧಿಕೃತವಾಗಿ ಅಸ್ಪತ್ರೆ ನಡೆಸಲಾಗುತ್ತಿದೆ ಅಂತ ಶಾಲಮ್  ಡಿಎಚ್​ಓಗೂ ದೂರು ನೀಡಿದ್ದಾರೆ. ಆದರೆ ಈ ಆರೋಪದ ಬಗ್ಗೆ ಖಾಸಗಿ ಆಸ್ಪತ್ರೆ ಮಾಲಕಿ ಡಾ. ದೀಪಾ ಹನಮಸಾಗರ್, ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಆಸ್ಪತ್ರೆ ಕಾನೂನುಬದ್ಧ ಲೈಸೆನ್ಸ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಐವಿಎಫ್ ಚಿಕಿತ್ಸೆಯಲ್ಲಿ 100% ಯಶಸ್ಸಿನ ಗ್ಯಾರಂಟಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವೈದ್ಯಕೀಯವಾಗಿ ಐವಿಎಫ್ ಯಶಸ್ಸಿನ ಪ್ರಮಾಣ ಶೇ.30 ರಿಂದ 40 ರಷ್ಟು ಇರುತ್ತೆ. ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.

ಅಗತ್ಯವಿದ್ದರೆ ಆಸ್ಪತ್ರೆಯ ಲೈಸೆನ್ಸ್ ರದ್ದು ಎಂದ ಡಿಎಚ್​ಓ ಡಾ. ಸುರೇಂದ್ರ ಬಾಬು

ಇನ್ನು ಈ ಬಗ್ಗೆ ಡಿಎಚ್​ಓ ಡಾ. ಸುರೇಂದ್ರ ಬಾಬು ಪ್ರತಿಕ್ರಿಯಿಸಿದ್ದು, ಆರೋಪಿತ ಖಾಸಗಿ ಆಸ್ಪತ್ರೆ ಲೈಸೆನ್ಸ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಐವಿಎಫ್ ಚಿಕಿತ್ಸೆಯಲ್ಲಿ 100% ಮಕ್ಕಳಾಗುತ್ತದೆ ಎಂದು ಭರವಸೆ ನೀಡಿ ರೋಗಿಗಳನ್ನು ವಂಚಿಸುವ ಬಗ್ಗೆ ದೂರು ಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ಆಸ್ಪತ್ರೆಯ ಲೈಸೆನ್ಸ್ ಕೂಡ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕಲಬುರಗಿ, ರಾಯಚೂರಿನಲ್ಲಿ ಕೃತಕ ಶೇಂದಿ ದಂಧೆ: 1,500 ಕೆಜಿ ಮರಣಾಂತಿಕ ಕೆಮಿಕಲ್ ಸೀಜ್ ಮಾಡಿದ ಅಬಕಾರಿ ಇಲಾಖೆ

ಒಟ್ಟಿನಲ್ಲಿ ಐವಿಎಫ್ ವಿಚಾರ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದ್ದು, ಆರೋಗ್ಯ ಇಲಾಖೆ ಈ ಬಗ್ಗೆ ಏನೆಲ್ಲಾ ಕ್ರಮಕೈಗೊಳ್ಳತ್ತೆ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಂಗಾಳದ ರೆಸ್ಟೋರೆಂಟ್ ಹೊರಗೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮೇಲೆ ಮೊಟ್ಟೆ ದಾಳಿ – Kannada News | TMC MP Mahua Moitra alleged egg attack outside West Bengal restaurant

ಕೊಲ್ಕತ್ತಾ, ಜುಲೈ 1: ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ (Mahua Moitra) ಇಂದು ತಮ್ಮ ಕೃಷ್ಣನಗರ ಲೋಕಸಭಾ ಕ್ಷೇತ್ರದಲ್ಲಿ ತಾವು ಇದ್ದ ರೆಸ್ಟೋರೆಂಟ್‌ವೊಂದರ ಹೊರಗೆ ನೆರೆದಿದ್ದ ಗುಂಪೊಂದು ತಮ್ಮ ಮೇಲೆ ಮೊಟ್ಟೆಗಳನ್ನು ಎಸೆದಿದೆ ಎಂದು ಆರೋಪಿಸಿದ್ದಾರೆ. ಮಹುವಾ ಮೊಯಿತ್ರಾ ತಮ್ಮ ಫೇಸ್‌ಬುಕ್ ಮತ್ತು ಎಕ್ಸ್ (ಟ್ವಿಟರ್) ಖಾತೆಗಳಲ್ಲಿ ಈ ಘಟನೆಯ ವಿಡಿಯೋಗಳನ್ನು ಹಂಚಿಕೊಂಡಿದ್ದು, ಈ ಕೃತ್ಯಕ್ಕಾಗಿ ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯ ಪೊಲೀಸರು ಮೂಕಪ್ರೇಕ್ಷಕರಾಗಿ ಅಲ್ಲೇ ನಿಂತುಕೊಂಡು ನೋಡುತ್ತಿದ್ದಾಗ ಈ ದಾಳಿಯನ್ನು ಬಿಜೆಪಿ ನಡೆಸಿದೆ ಎಂದು ಸಂಸದೆ ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ.

ತಮ್ಮ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ರೆಸ್ಟೋರೆಂಟ್​​ನಿಂದ ಹೊರಗೆ ಬರುವಾಗ ಅವರ ಮೇಲೆ ಮೊಟ್ಟೆಗಳನ್ನು ಎಸೆಯಲಾಗಿದೆ. ಬಳಿಕ ಮಹುವಾ ಮೊಯಿತ್ರಾ ಅವರು ರೆಸ್ಟೋರೆಂಟ್ ಒಳಗೆ ಸ್ಥಳೀಯ ಟಿಎಂಸಿ ನಾಯಕರು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಕುಳಿತು ರೆಸ್ಟೋರೆಂಟ್‌ನ ಕಿಟಕಿಗಳಿಗೆ ಮೊಟ್ಟೆಗಳು ಬಂದು ಅಪ್ಪಳಿಸುತ್ತಿರುವುದನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿದ್ದಾರೆ. ಕಿಟಕಿ ಗಾಜುಗಳಿಗೆ ಮೊಟ್ಟೆಗಳು ಬಂದು ಬೀಳುತ್ತಿದ್ದಂತೆ, ಈ ದಾಳಿಯ ಹಿಂದೆ ಬಿಜೆಪಿ ಕಾರ್ಯಕರ್ತರಿದ್ದಾರೆ ಎಂದು ಮೊಯಿತ್ರಾ ಆರೋಪಿಸುತ್ತಿರುವುದು ವಿಡಿಯೋದಲ್ಲಿ ಕೇಳಿಬರುತ್ತದೆ.

ಇದನ್ನೂ ಓದಿ: ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಮನೆ ಹೊರಗೆ ಟಿಎಂಸಿ ಶಾಸಕ ಕುನಾಲ್ ಘೋಷ್ ಮೇಲೆ ಮೊಟ್ಟೆ ದಾಳಿ

ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಜೆಪಿ ಬೆಂಬಲಿಗರೇ ಈ ಕೃತ್ಯ ಎಸಗಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಆದರೆ ಈ ಆರೋಪಗಳಿಗೆ ಬಿಜೆಪಿ ತಕ್ಷಣದ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಬಿಜೆಪಿ ವಿರುದ್ಧ ಮಹುವಾ ಆಕ್ರೋಶ:

ಈ ದಾಳಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳ ಮುಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಹುವಾ ಮೊಯಿತ್ರಾ, “ಇದು ಬಿಜೆಪಿಯ ಹತಾಶೆಯ ಪರಮಾವಧಿ. ಸಂಸತ್ತಿನಲ್ಲಾಗಲಿ ಅಥವಾ ಬೀದಿಯಲ್ಲಾಗಲಿ ನನ್ನ ಧ್ವನಿಯನ್ನು ಅಡಗಿಸಲು ಅವರಿಂದ ಸಾಧ್ಯವಿಲ್ಲ. ವೈಚಾರಿಕವಾಗಿ ಎದುರಿಸಲು ಸಾಧ್ಯವಾಗದ ಹೇಡಿಗಳು ಇಂತಹ ಕೀಳು ಮಟ್ಟದ ದಾಳಿಗಳಿಗೆ ಇಳಿದಿದ್ದಾರೆ. ಪಶ್ಚಿಮ ಬಂಗಾಳದ ಜನತೆ ಇಂತಹ ಗೂಂಡಾಗಿರಿಯನ್ನು ಸಹಿಸುವುದಿಲ್ಲ” ಎಂದು ಕಿಡಿಕಾರಿದ್ದಾರೆ.

ಘಟನೆ ನಡೆದಿದ್ದು ಹೇಗೆ?:

ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಹುವಾ ಮೊಯಿತ್ರಾ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ರೆಸ್ಟೋರೆಂಟ್‌ನಿಂದ ಹೊರಬಂದು ಕಾರಿನ ಕಡೆಗೆ ಹೆಜ್ಜೆ ಹಾಕುತ್ತಿದ್ದಾಗ, ಅಲ್ಲಿ ಜಮಾಯಿಸಿದ್ದ ಕೆಲವು ಯುವಕರ ಗುಂಪು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಾ ಅವರತ್ತ ಮೊಟ್ಟೆಗಳನ್ನು ಎಸೆಯಲು ಪ್ರಾರಂಭಿಸಿತು. ಕೆಲವು ಮೊಟ್ಟೆಗಳು ಅವರ ವಾಹನಕ್ಕೆ ಮತ್ತು ಅವರ ಭದ್ರತಾ ಸಿಬ್ಬಂದಿಗೆ ತಗುಲಿವೆ ಎನ್ನಲಾಗಿದೆ. ಸ್ಥಳದಲ್ಲಿದ್ದ ಟಿಎಂಸಿ ಕಾರ್ಯಕರ್ತರು ತಕ್ಷಣವೇ ಪ್ರತಿರೋಧ ಒಡ್ಡಿದಾಗ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಘಟನೆಯ ನಂತರ ಆ ಪ್ರದೇಶದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದ್ದು, ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ಭೂಮಿ ದುಂಡಗಿದೆ, ಎಲ್ಲರ ಲೆಕ್ಕ ಚುಕ್ತಾ ಆಗುತ್ತದೆ; ವಿಧಾನಸಭೆಯಲ್ಲಿ ಟಿಎಂಸಿ ವಿರುದ್ಧ ಗುಡುಗಿದ ಸುವೇಂದು ಅಧಿಕಾರಿ

ಟಿಎಂಸಿ ನಾಯಕರ ಮೇಲೆ ಪದೇಪದೆ ಮೊಟ್ಟೆ ದಾಳಿ:

ಕಳೆದ ಮೇ ತಿಂಗಳಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಪಕ್ಷವು ಬಿಜೆಪಿಗೆ ಸೋತು, ಮಮತಾ ಬ್ಯಾನರ್ಜಿ ಅವರ ಸರ್ಕಾರ ಪತನಗೊಂಡ ನಂತರ ಟಿಎಂಸಿ ನಾಯಕರ ಮೇಲೆ ನಡೆಯುತ್ತಿರುವ ಸರಣಿ ದಾಳಿಗಳ ಭಾಗವಾಗಿ ಈ ಇತ್ತೀಚಿನ ಘಟನೆ ಸಂಭವಿಸಿದೆ.

ಜೂನ್ 7: ಮಿದ್ನಾಪುರದಲ್ಲಿ ಟಿಎಂಸಿ ನಾಯಕ ಸುಜಯ್ ಹಜ್ರಾ ಅವರನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನದ ಮೇಲೆ ಸ್ಥಳೀಯ ನಿವಾಸಿಗಳು ಮೊಟ್ಟೆಗಳನ್ನು ಎಸೆದಿದ್ದರು. ವಸತಿ ಯೋಜನೆಯಡಿ ಮನೆಗಳನ್ನು ಕೊಡಿಸುವುದಾಗಿ ಫಲಾನುಭವಿಗಳಿಂದ ಹಣ ವಸೂಲಿ ಮಾಡಿ ವಂಚಿಸಿದ್ದಾರೆ ಎಂದು ಜನರು ಆರೋಪಿಸಿದ್ದರು.

ಅದೇ ದಿನ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಕರೆದೊಯ್ಯುತ್ತಿದ್ದ ಕೊಲ್ಕತ್ತಾದ ಕೌನ್ಸಿಲರ್‌ಗಳಾದ ಬಪ್ಪಾದಿತ್ಯ ದಾಸ್‌ಗುಪ್ತಾ ಮತ್ತು ಮೊಹಮ್ಮದ್ ಜಾಸಿಮುದ್ದೀನ್ ಅವರ ಮೇಲೂ ಮೊಟ್ಟೆಗಳನ್ನು ಎಸೆಯಲಾಗಿತ್ತು.

ಜೂನ್ 18 ಮತ್ತು 19: ಟಿಎಂಸಿ ಸಚಿವ ಉದಯನ್ ಗುಹಾ ಅವರನ್ನೂ ಇದೇ ರೀತಿ ಗುರಿ ಮಾಡಲಾಗಿತ್ತು. ಜೂನ್ 19ರಂದು ಅಸನ್ಸೋಲ್ ನ್ಯಾಯಾಲಯದ ಹೊರಗೆ ಟಿಎಂಸಿ ನಾಯಕ ವಿಜಯ್ ಸಿಂಗ್ ಅವರ ಮೇಲೆ ಪ್ರತಿಭಟನಾಕಾರರು “ಚೋರ್, ಚೋರ್” (ಕಳ್ಳ, ಕಳ್ಳ) ಎಂದು ಘೋಷಣೆ ಕೂಗುತ್ತಾ ಮೊಟ್ಟೆಗಳನ್ನು ಎಸೆದಿದ್ದರು.

ಮೇ 30: ಇದಕ್ಕಿಂತ ಮುಂಚೆ ಮೇ 30ರಂದು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್‌ಪುರಕ್ಕೆ ಚುನಾವಣೋತ್ತರ ಹಿಂಸಾಚಾರದಿಂದ ಸಂತ್ರಸ್ತರಾದ ಕುಟುಂಬಗಳನ್ನು ಭೇಟಿಯಾಗಲು ತೆರಳಿದ್ದ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ದೊಡ್ಡ ಮಟ್ಟದ ದಾಳಿ ನಡೆದಿತ್ತು. ಪ್ರತಿಭಟನಾಕಾರರು ಅಭಿಷೇಕ್ ಬ್ಯಾನರ್ಜಿ ಅವರ ಬೆಂಗಾವಲು ವಾಹನಗಳ ಮೇಲೆ ಮೊಟ್ಟೆ, ಕಲ್ಲು, ಶೂ ಮತ್ತು ಚಪ್ಪಲಿಗಳನ್ನು ಎಸೆದಿದ್ದರು. ಆ ನೂಕಾಟದಲ್ಲಿ ಅವರ ಶರ್ಟ್ ಹರಿದು ಹೋಗಿತ್ತು ಮತ್ತು ಕನ್ನಡಕಕ್ಕೆ ಹಾನಿಯಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version