Headlines

ಶಿಶುವಿಗೆ ಹಸುವಿನ ಹಾಲು ನೀಡುವುದಕ್ಕೆ ಸರಿಯಾದ ಸಮಯವಿದೆಯೇ? ಯಾವಾಗ ಆರಂಭ ಮಾಡಬೇಕು ತಿಳಿದುಕೊಳ್ಳಿ – Kannada News | Cow’s Milk for Babies: When to Start?

ಒಂದು ಮನೆಯಲ್ಲಿ ಮಗು ಜನಿಸಿದ ಮೇಲೆ ಪೋಷಕರು ತಮ್ಮ ಮಗು ಸೇವಿಸುವ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕಾಗುತ್ತದೆ. ಆರಂಭಿಕ ವರ್ಷಗಳಲ್ಲಿ, ಮಗುವಿನ ದೇಹ ವೇಗವಾಗಿ ಬೆಳೆಯುತ್ತದೆ, ಆದ್ದರಿಂದ ಅವರು ಪಡೆಯುವ ಪೋಷಣೆ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಇಂತಹ ಸಮಯದಲ್ಲಿ, ಪೋಷಕರು ಹಸುವಿನ ಹಾಲನ್ನು ಯಾವಾಗ ನೀಡಲು ಪ್ರಾರಂಭಿಸಬೇಕು ಎಂಬ ಗೊಂದಲ ಆರಂಭವಾಗುತ್ತದೆ. ಇದು ಸಾಮಾನ್ಯವಾಗಿದ್ದರೂ ಕೂಡ ಈ ಬಗ್ಗೆ ಸರಿಯಾದ ಮಾಹಿತಿ ಪಡೆಯುವುದು ಅನಿವಾರ್ಯವಾಗುತ್ತದೆ. ಹಸುವಿನ ಹಾಲು (Milk) ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಇತರ…

Read More

ಹಗಲಲ್ಲಿ ಕಬ್ಬು ಕಟಾವು, ರಾತ್ರಿ ವೇಳೆ ಮನೆ ಕಳ್ಳತನ: ಖತರ್ನಾಕ್​ ಗ್ಯಾಂಗ್​​ ಭೇದಿಸಿದ ಖಾಕಿ – Kannada News | Bagalkote Police Nab Maharashtra Based Workers’ Gang for House Thefts

ಆರೋಪಿಗಳು ವಾಸವಿದ್ದ ಸ್ಥಳದಲ್ಲಿ ಪೊಲೀಸರ ಪರಿಶೀಲನೆ. ಬಾಗಲಕೋಟೆ, ಜನವರಿ 25: ಕಬ್ಬು ಕಟಾವು ಮಾಡುವ ನೆಪದಲ್ಲಿ ಜಿಲ್ಲೆಗೆ ಎಂಟ್ರಿಕೊಟ್ಟು ಮನೆಗಳಲ್ಲಿ ಕಳ್ಳತನ ನಡೆಸುತ್ತಿದ್ದ ಮಹಾರಾಷ್ಟ್ರ ಮೂಲದ ಗ್ಯಾಂಗ್​​ನ ಬಾಗಲಕೋಟೆ ಪೊಲೀಸರು ಭೇದಿಸಿದ್ದಾರೆ. ಶಂಕರ್ ಪವಾರ್ (20), ಅಭಿ ಬೋಸ್ಲೆ(19), ಲಕ್ಷ್ಮೀ ಬೋಸ್ಲೆ (40), ಕರಣ ಪವಾರ್ (20) ಮತ್ತು ಮಮತಾ ಬೋಸ್ಲೆ(21) ಬಂಧಿತ ಆರೋಪಿಗಳಾಗಿದ್ದು, ಇವರೆಲ್ಲ ಮಹಾರಾಷ್ಟದ ಪರಬಾನಿ ಜಿಲ್ಲೆ ಮಂಗರೂಲ ತಾಂಡಾದ ನಿವಾಸಿಗಳು ಎಂಬುದು ಗೊತ್ತಾಗಿದೆ. ಕಬ್ಬು ಕಟಾವು ಕೆಲಸ ಮಾಡುವ ನೆಪದಲ್ಲಿ ಬಾಗಲಕೋಟೆಗೆ ಬಂದಿದ್ದ…

Read More

ನಮ್ಮ ಭವಿಷ್ಯಕ್ಕೆ ನಾವೇ ನಿರ್ಮಾತೃಗಳು: ರಾಷ್ಟ್ರಪತಿ ದ್ರೌಪದಿ ಮುರ್ಮು ಗಣರಾಜ್ಯೋತ್ಸವ ಸಂದೇಶ – Kannada News | President Draupadi Murmu speech on eve of 77th Republic Day celebrations

ನವದೆಹಲಿ, ಜನವರಿ 25: ಗಣರಾಜ್ಯೋತ್ಸವದ ಭಾಗವಾಗಿ ರಾಷ್ಟ್ರವನ್ನುದ್ದೇಶಿಸಿ ಭಾನುವಾರ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ವೀರರಿಗೆ ಗೌರವಾರ್ಪಣೆ ಸಲ್ಲಿಸಿದರು. ‘ನಾವು ಭಾರತೀಯರು ಬಹಳ ಉತ್ಸಾಹದಿಂದ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿದ್ದೇವೆ. ನಮ್ಮ ದೇಶದ ಭೂತ, ವರ್ತಮಾನ ಮತ್ತು ಭವಿಷ್ಯದ ಸ್ಥಿತಿಯನ್ನು ಅವಲೋಕಿಸಲು ಇದು ಸುದಿನವಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ನಮ್ಮ ರಾಷ್ಟ್ರೀಯ ಭವಿಷ್ಯಕ್ಕೆ ನಾವೇ ನಿರ್ಮಾತೃಗಳು ‘1950ರ ಜನವರಿ 26ರಿಂದಲೂ ನಮ್ಮ ಗಣತಂತ್ರವನ್ನು ಸಾಂವಿಧಾನಿಕ ಗುರಿಗಳತ್ತ ಮುನ್ನಡೆಸುತ್ತಿದ್ದೇವೆ. ಸಂವಿಧಾನ ಪೂರ್ಣವಾಗಿ…

Read More

Video: ಸೈಕಲ್ ಏರಿ ಹೊರಟ ಮಾಲೀಕನನ್ನು ತಡೆದು ನಿಲ್ಲಿಸಿದ ಗಜರಾಜ – Kannada News | Elephant stops owner riding bicycle, cutest video goes viral

ಪ್ರಾಣಿಗಳೇ ಹಾಗೆ, ತಮ್ಮ ಭಾವನೆಗಳನ್ನು ವಿಭಿನ್ನ ರೀತಿಯಲ್ಲಿ ತೋರ್ಪಡಿಸುತ್ತವೆ. ಯಾರು ತನ್ನನ್ನು ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳುತ್ತಾರೋ ಅವರ ಜೊತೆಯಲ್ಲಿ ಮಗುವಿನಂತೆ ವರ್ತಿಸುತ್ತವೆ ಹಾಗೂ ಸಲುಗೆ ಬೆಳೆಸಿಕೊಳ್ಳುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಆನೆಯು (elephant) ತನ್ನನ್ನು ಬಿಟ್ಟು ಹೊರಟ ಮಾಲೀಕನನ್ನು ತಡೆದು ನಿಲ್ಲಿಸುವ ದೃಶ್ಯವಾಗಿದೆ. ಈ ಮುದ್ದಾದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. srithapthaifamily ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮಾಲೀಕ ಹಾಗೂ ಗಜರಾಜನ ಸುಂದರ ಬಾಂಧವ್ಯವನ್ನು…

Read More

ರೈತರ ಪ್ರತಿಭಟನೆ ವೇಳೆ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಬಳಿ ಸೆರಗೊಡ್ಡಿ ಮಹಿಳೆ ಮನವಿ – Kannada News | Bidadi Farmers Protest: Woman Makes Emotional Plea to HD Kumaraswamy for Justice

ರಾಮನಗರ, ಜನವರಿ 25: ಜಿಬಿಐಟಿ ಯೋಜನೆ ವಿರುದ್ಧ ಸ್ಥಳೀಯ ರೈತರಿಂದ ಬಿಡದಿಯ ಬೈರಮಂಗಲದಲ್ಲಿ ನಡೆಯುತ್ತಿರುವ ಬೃಹತ್‌ ಹೋರಾಟದ ಪ್ರತಿಭಟನಾ ಸಭೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಮುಂದೆ ರೈತ ಮಹಿಳೆಯೋರ್ವರು ಭಾವನಾತ್ಮಕವಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 2006ರ ಭೂಸ್ವಾಧೀನ ನೀತಿಯಿಂದಾದ ಪರಿಣಾಮಗಳು ಮತ್ತು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಉಲ್ಲೇಖಿಸುತ್ತ, ರಾಜಕೀಯ ನಾಯಕರು ರೈತರ 322 ದಿನಗಳ ಧರಣಿಯ ಬಗ್ಗೆ ಬೆಳಗಾವಿ ಸದನದಲ್ಲಿ ಚರ್ಚಿಸದಿರುವ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ವಿನ್ನರ್‌ಗಳಿಗೆ ಸಿಗುವ ಗೌರವ,…

Read More

Padma Awards 2026: ರೋಹಿತ್, ಹರ್ಮನ್​ಪ್ರೀತ್ ಸೇರಿದಂತೆ 9 ಕ್ರೀಡಾ ಸಾಧಕರಿಗೆ ಪದ್ಮ ಪ್ರಶಸ್ತಿ – Kannada News | 2026 Padma Awards: Rohit Sharma among 9 others sports persons Honored Padma Awards

2026 ರ ಗಣರಾಜ್ಯೋತ್ಸವಕ್ಕೆ ಒಂದು ದಿನ ಮೊದಲು ಭಾರತ ಸರ್ಕಾರವು ಪ್ರತಿ ವರ್ಷದಂತೆ ಈ ವರ್ಷವೂ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಆ ಪ್ರಕಾರ ಕ್ರೀಡಾ ವಿಭಾಗದಲ್ಲೂ ವಿವಿದ ಸಾಧಕರಿಗೆ ಈ ಗೌರವ ಸಂದಿದೆ. ಅದರಲ್ಲೂ ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಐಸಿಸಿ ಟ್ರೋಫಿಗೆ ಮುನ್ನಡೆಸಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಪುರುಷರ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಇಬ್ಬರ ಜೊತೆಗೆ ದೇಶದ ಅತ್ಯಂತ…

Read More

Belagavi: ಚೋರ್ಲಾ ಘಾಟ್‌ ರಾಬರಿ ರಹಸ್ಯ ಬಿಚ್ಚಿಟ್ಟ ಪೊಲೀಸ್​​ ವರಿಷ್ಠಾಧಿಕಾರಿ – Kannada News | Chorla Ghat 400 Crore Robbery: Karnataka Police Seeks Maharashtra Cooperation Amidst Probe

ಬೆಳಗಾವಿ, ಜನವರಿ 25: ಕರ್ನಾಟಕ-ಗೋವಾ ಗಡಿಯಲ್ಲಿ 400 ಕೋಟಿ ರಾಬರಿ ಪ್ರಕರಣ ಸಂಬಂಧ ಬೆಳಗಾವಿ ಎಸ್ಪಿ ಕೆ. ರಾಮರಾಜನ್ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಜ.6ರಂದು ನಾಸಿಕ್ ಜಿಲ್ಲಾ ವರಿಷ್ಠಾಧಿಕಾರಿಯಿಂದ ನಮಗೆ ಪತ್ರ ಬಂದಿದ್ದು, ಚೋರ್ಲಾ ಘಾಟ್​​ನಲ್ಲಿ ರಾಬರಿಯಾಗಿರುವ ವಿಷಯ ಅದರಲ್ಲಿ ತಿಳಿಸಲಾಗಿತ್ತು. ರಾಬರಿ ಆದ ಹಣದ ಮೊತ್ತ ನಾಲ್ಕನೂರು ಕೋಟಿ ಆಗಿರಬಹುದು ಅಂತಾ ಪತ್ರದಲ್ಲಿ ಇತ್ತು. ಈ ಕಾರಣಕ್ಕೆ ನಮ್ಮ ಖಾನಾಪುರದ ಸಬ್ ಇನ್ಸ್ಪೆಕ್ಟರ್ ಸೇರಿ ಒಂದು ತಂಡವನ್ನ ಕಳುಹಿಸಿದ್ದೇವೆ. ಎಸ್ಐಟಿ ತಂಡ ಕೂಡ ರಚನೆ…

Read More

ಪದ್ಮ ಪ್ರಶಸ್ತಿ: ಚಿತ್ರರಂಗದ ಯಾವೆಲ್ಲ ಸಾಧಕರಿಗೆ ಸಿಕ್ಕಿತು ಗೌರವ? – Kannada News | Here is the list of entertainment industry people who got Padma awards 2026

ಭಾರತದ ಅತ್ಯುತ್ತಮ ನಾಗರೀಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಪದ್ಮಶ್ರೀ, ಪದ್ಮ ಭೂಷಣ ಮತ್ತು ಪದ್ಮ ವಿಭೂಷಣ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರವು ಘೋಷಣೆ ಮಾಡಿದೆ. ಕಲೆ, ಸಮಾಜ ಸೇವೆ, ಸಾಹಿತ್ಯ, ಶಿಕ್ಷಣ, ಆಡಳಿತ, ವಿಜ್ಞಾನ, ಕ್ರೀಡೆ, ಉದ್ಯಮ, ವೈದ್ಯಕೀಯ ಕ್ಷೇತ್ರ ಹೀಗೆ ಹಲವು ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡಿರುವ ವ್ಯಕ್ತಿಗೆ ಈ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ನೀಡುತ್ತಾ ಬಂದಿದೆ. 2026ರ ಸಾಲಿನ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಕಲಾ ವಿಭಾಗದಲ್ಲಿ ಈ ಬಾರಿ ಹಲವು ಸಿನಿಮಾ…

Read More

ವೀರ ಪ್ರಶಸ್ತಿ ವಿಜೇತರಿಂದ ಹಿಡಿದು ಸ್ತಬ್ಧಚಿತ್ರಗಳ ಮೆರವಣಿಗೆ, ಈ ಬಾರಿಯ ರಿಪಬ್ಲಿಕ್ ಪೆರೇಡ್ ಅದ್ಭುತ – Kannada News | 77th Republic Day Parade: Kartavya Path set to unveil unique mix of 150 years of ‘Vande Mataram’ and the nation’s progress & military might, immersed in rich cultural diversity and Jan Bhagidari

ನವದೆಹಲಿ, ಜನವರಿ 25: ನಾಳೆ ಸೋಮವಾರ ಭಾರತದ 77ನೇ ಗಣತಂತ್ರ ದಿನ (Republic Day). ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿನ ಕರ್ತವ್ಯ ಪಥದಲ್ಲಿ ರಾಷ್ಟ್ರೀಯ ಸಂಭ್ರಮ. ರಾಷ್ಟ್ರಪತಿ ದ್ರೌಪದಿ ಮುರ್ಮು ನೇತೃತ್ವದಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯಲಿವೆ. ದೇಶದ ಮಿಲಿಟರಿ ಶಕ್ತಿಯ ದೈತ್ಯ ದರ್ಶನಾಗಲಿದೆ. ಯುವಜನರು, ಕಲಾವಿದರು, ಕ್ರೀಡಾಪಟುಗಳು, ಕಾರ್ಮಿಕರು, ಮಹಿಳೆಯರು ಈ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ, ಸಾಕ್ಷಿಯೂ ಆಗಲಿದ್ದಾರೆ. ಯೂರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವೋನ್ ಡರ್ ಲೆಯೆನ್ (Ursula Von Der Leyen) ಮತ್ತು ಯೂರೋಪಿಯನ್ ಕೌನ್ಸಿಲ್ ಅಧ್ಯಕ್ಷ…

Read More

IND vs NZ: ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ; ತಂಡದಲ್ಲಿ 2 ಬದಲಾವಣೆ – Kannada News | IND vs NZ 3rd T20: India Aims to Seal Series in Guwahati; Playing XI and Match Preview

ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವು ಇದುವರೆಗೆ ಭರ್ಜರಿ ಪ್ರದರ್ಶನ ನೀಡುವ ಮೂಲಕ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿದೆ. ಇದೀಗ ಸರಣಿಯ ಮೂರನೇ ಪಂದ್ಯ ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಅಜೇಯ ಮುನ್ನಡೆ ಸಾಧಿಸುವುದರೊಂದಿಗೆ ಸರಣಿಯನ್ನು ವಶಪಡಿಸಿಕೊಳ್ಳುವ ಇರಾದೆಯಲ್ಲಿದೆ. ಇತ್ತ ಸರಣಿಯಲ್ಲಿ ಉಳಿಯಲು ನ್ಯೂಜಿಲೆಂಡ್ ಯಾವುದೇ ಬೆಲೆ ತೆತ್ತಾದರೂ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಟಾಸ್ ಗೆದ್ದ ಟೀಂ ಇಂಡಿಯಾ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್…

Read More