ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು – Kannada News | Singer S Janaki funeral in Mysore and Ashes immersed in Cauvery river Srirangapatna

ಮೈಸೂರಿನಲ್ಲಿ ಭಾನುವಾರ (ಜುಲೈ 12) ಹಿರಿಯ ಗಾಯಕಿ ಎಸ್. ಜಾನಕಿ (S Janaki) ಅವರ ಅಂತ್ಯಕ್ರಿಯೆ ಮಾಡಲಾಗಿತ್ತು. ಇಂದು (ಜುಲೈ 13) ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಲಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿ‌ನ ಗೋಸಾಯ್ ಘಾಟ್​ನಲ್ಲಿ ಜಾನಕಿ ಅವರ ಕುಟುಂಬಸ್ಥರು ಅಸ್ಥಿ ವಿಸರ್ಜನೆ ಮಾಡಿದ್ದಾರೆ. ಜಾನಕಿ ಮೊಮ್ಮಗಳು ಅಪ್ಸರಾ ಅವರು ವಿಧಿವಿಧಾನ ಪೂಜೆ ನೆರವೇರಿಸಿದರು. ಅರ್ಚಕ ರಮೇಶ್ ಶರ್ಮಾ ನೇತೃತ್ವದಲ್ಲಿ ವಿಧಿವಿಧಾನ ಕಾರ್ಯ ಮಾಡಲಾಗಿದೆ. ಹಲವು ಭಾಷೆಗಳಲ್ಲಿ ಹಾಡಿದ್ದರೂ ಕೂಡ ಜಾನಕಿ ಅವರು ಕರ್ನಾಟಕದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಮೈಸೂರಿನಲ್ಲೇ ಅವರ ಸ್ಮಾರಕ ನಿರ್ಮಾಣ ಆಗಬೇಕು ಎಂದು ಹಂಸಲೇಖ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೊಸ ಮನೆ ಖರೀದಿಸುವಾಗ ಈ ದಾಖಲೆಗಳು ನಿಮ್ಮ ಕೈ ಸೇರಿದ್ಯಾ ಒಮ್ಮೆ ನೋಡ್ಕೊಳ್ಳಿ – Kannada News | Check these documents before buying a new house.

ಪ್ರತಿಯೊಬ್ಬರ ಕನಸು ಸ್ವಂತ ಮನೆ (Own Home). ತಾವಂದುಕೊಂಡಂತೆ ಮನೆ ಕಟ್ಟಬೇಕೆಂಬ ಆಸೆಯಿರುತ್ತದೆ. ಮನೆ ಖರೀದಿಸಲು ತಾವು ದುಡಿದ ಅಷ್ಟು ಹಣವನ್ನು ಹೂಡಿಕೆ ಮಾಡುತ್ತಾರೆ. ನೀವು ಕೂಡ ದುಡಿದ ದುಡ್ಡನ್ನೆಲ್ಲಾ ಹೊಸ ಮನೆ ಖರೀದಿಗೆ ಹೂಡಿಕೆ ಮಾಡೋಕೆ ಯೋಜನೆ ಹಾಕಿಕೊಂಡಿದ್ದೀರಾ. ನೀವು ಬೇರೆಯವರು ಕಟ್ಟಿದ ಮನೆಯನ್ನು ಖರೀದಿ ಮಾಡ್ತೀರಾ ಅಂತಾದ್ರೆ ರಿಜಿಸ್ಟ್ರಿ ಜತೆಗೆ ಶೀರ್ಷಿಕೆ ಪತ್ರ, ಸಾಲಮನ್ನಾ ಪ್ರಮಾಣಪತ್ರ, ಸರಪಳಿ ಪತ್ರ, ಸಂಪೂರ್ಣ ಪ್ರಮಾಣಪತ್ರ ಹಾಗೂ ಸ್ವಾಧೀನ ಪ್ರಮಾಣಪತ್ರ ಹೀಗೆ ಇನ್ನಿತರ ಅವಶ್ಯ ದಾಖಲೆಗಳನ್ನು ಒಮ್ಮೆ ಪರೀಕ್ಷಿಸುವುದು ಉತ್ತಮ.

ಮನೆ ಖರೀದಿ ಮಾಡುವಾಗ ಯಾವೆಲ್ಲಾ ದಾಖಲೆಗಳನ್ನು ನೋಡ್ಬೇಕು?

  • ಶೀರ್ಷಿಕೆ ಪತ್ರ
  • ಸರಪಳಿ ಪತ್ರ
  • ಭಾರಮುಕ್ತ ಪ್ರಮಾಣಪತ್ರ
  • ಬಿಲ್ಡರ್ ಅನುಮೋದಿತ ನಕ್ಷೆ
  • ಖಾತಾ ಪ್ರಮಾಣಪತ್ರ ಮತ್ತು ತೆರಿಗೆ ರಸೀದಿ
  • ಸಂಪೂರ್ಣ ಪ್ರಮಾಣಪತ್ರ ಹಾಗೂ ಸ್ವಾಧೀನ ಪ್ರಮಾಣಪತ್ರ

ಶೀರ್ಷಿಕೆ ಪತ್ರ: ಆಸ್ತಿ ಯಾರಿಂದ ಖರೀದಿ ಮಾಡುತ್ತೀರೋ ಅಂದರೆ (ಮಾರಾಟ ಮಾಡುವವರು) ನಿಜವಾದ ಮಾಲೀಕ ಎನ್ನುವುದನ್ನು ಇದು ಶೀರ್ಷಿಕೆ ಪತ್ರ ವಿವರಿಸುತ್ತದೆ. ಹೀಗಾಗಿ ಈ ದಾಖಲೆ ಇದ್ಯಾ  ನಿಮ್ಮ ಕೈ ಸೇರಿದ್ಯಾ ಎಂದು ನೋಡಿಕೊಳ್ಳಿ.

ಸರಪಳಿ ಪತ್ರ: ಹಲವಾರು ವರ್ಷಗಳಿಂದ ಆಸ್ತಿ ಯಾರ ಹೆಸರಲ್ಲಿದೆ ಹಾಗೂ ಯಾರಿಂದ ಯಾರಿಗೆ ಆಸ್ತಿ ಬಂದಿದೆ ಎನ್ನುವುದರ ಸಂಪೂರ್ಣ ಮಾಹಿತಿಯನ್ನು ತೋರಿಸುವ ದಾಖಲೆ ಈ ಸರಪಳಿ ಪತ್ರಯಾಗಿದೆ.

ಭಾರಮುಕ್ತ ಪ್ರಮಾಣಪತ್ರ: ಈ ದಾಖಲೆಯು ಆಸ್ತಿಯ ಮೇಲೆ ಯಾವುದೇ ಸಾಲ, ಬ್ಯಾಂಕ್ ಸಾಲ, ಕಾನೂನು ವಿವಾದಗಳ ಬಗ್ಗೆ ಇದರಲ್ಲಿ ಮಾಹಿತಿಯಿರುತ್ತದೆ. ಹೀಗಾಗಿ ನೀವು ಮನೆ ಖರೀದಿಸುವಾಗ ಕನಿಷ್ಠ 15 ರಿಂದ 30 ವರ್ಷಗಳ ಇಸಿ ಪಡೆಯುವುದು ನಿಮ್ಮ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು.

ಸಂಪೂರ್ಣ ಪ್ರಮಾಣಪತ್ರ ಮತ್ತು ಸ್ವಾಧೀನ ಪ್ರಮಾಣಪತ್ರ: ನೀವು ಮನೆ ಖರೀದಿಸುತ್ತಿದ್ದರೆ, ಆ ಕಟ್ಟಡ ಹಾಗೂ ಮನೆ ಪೂರ್ಣಗೊಂಡಿದೆ ಹಾಗೂ ವಾಸಿಸಲು ಯೋಗ್ಯವಾಗಿದೆ ಎಂದು ಸ್ಥಳೀಯ ಸಂಸ್ಥೆಯು ನೀಡುವ ಈ ಪ್ರಮಾಣಪತ್ರಗಳು ಇದಾಗಿದ್ದು, ಇದನ್ನು ಕಡ್ಡಾಯವಾಗಿ ಪರಿಶೀಲಿಸುವುದು ಮುಖ್ಯ.

ಖಾತಾ ಪ್ರಮಾಣಪತ್ರ ಮತ್ತು ತೆರಿಗೆ ರಸೀದಿ: ಆಸ್ತಿಯನ್ನು ಸ್ಥಳೀಯ ಪುರಸಭೆ ಹಾಗೂ ಕಾರ್ಪೊರೇಷನ್‌ನಲ್ಲಿ ನೋಂದಾಯಿಸಲಾಗಿದೆ ಎನ್ನುವುದನ್ನು ಈ ಖಾತಾ ಪ್ರಮಾಣ ಪತ್ರ ತೋರಿಸುತ್ತದೆ. ಈಗಿನವರೆಗೆ ಎಲ್ಲಾ ಆಸ್ತಿ ತೆರಿಗೆಗಳನ್ನು ಪಾವತಿಸಲಾಗಿದೆ ಎಂಬುದನ್ನು ಈ ತೆರಿಗೆ ರಸೀದಿ ಮೂಲಕ ಪರೀಕ್ಷಿಸಿಕೊಳ್ಳಿ.

ಇದನ್ನೂ ಓದಿ: ಗೃಹಸಾಲ ಪಡೆಯುತ್ತಿದ್ದೀರಾ? 50 ಲಕ್ಷ ರೂ ಸಾಲ ಪಡೆಯಲು ನಿಮ್ಮ ಸಂಬಳ ಎಷ್ಟಿರಬೇಕು ಗೊತ್ತಾ? ಇಲ್ಲಿದೆ ಲೆಕ್ಕಾಚಾರ

ಬಿಲ್ಡರ್ ಅನುಮೋದಿತ ನಕ್ಷೆ: ಸ್ಥಳೀಯ ಪ್ರಾಧಿಕಾರವು ಬಿಲ್ಡಿಂಗ್‌ಗೆ ಅನುಮೋದನೆ ನೀಡಿದ ನಕ್ಷೆಯನ್ನೇ ಹೊಸ ಮನೆ ಖರೀದಿಸುವಾಗ ಪರಿಶೀಲಿಸಿಕೊಳ್ಳಬೇಕು.

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಹಾಗೂ ಉತ್ತರ (FAQs)

ಪ್ರಶ್ನೆ: ಹೊಸ ಮನೆ ಖರೀದಿಸುವಾಗ ಈ ದಾಖಲೆಗಳು ಪರಿಶೀಲಿಸಬೇಕು?

ಉತ್ತರ: ಶೀರ್ಷಿಕೆ ಪತ್ರ, ಸರಪಳಿ ಪತ್ರ, ಭಾರಮುಕ್ತ ಪ್ರಮಾಣಪತ್ರ, ಬಿಲ್ಡರ್ ಅನುಮೋದಿತ ನಕ್ಷೆ, ಖಾತಾ ಪ್ರಮಾಣಪತ್ರ ಮತ್ತು ತೆರಿಗೆ ರಸೀದಿ, ಸಂಪೂರ್ಣ ಪ್ರಮಾಣಪತ್ರ ಹಾಗೂ ಸ್ವಾಧೀನ ಪ್ರಮಾಣಪತ್ರ ಈ ಎಲ್ಲಾ ದಾಖಲೆಗಳನ್ನು ಪರಿಶೀಲಿಸಬೇಕು.

ಪ್ರಶ್ನೆ: ಮನೆ ಖರೀದಿಸುವಾಗ ಎಷ್ಟು ವರ್ಷದ ಭಾರಮುಕ್ತ ಪ್ರಮಾಣಪತ್ರ ಪಡೆಯುವುದು ಸುರಕ್ಷಿತ?

ಉತ್ತರ: ಕನಿಷ್ಠ 15 ರಿಂದ 30 ವರ್ಷಗಳ ಇಸಿ ಪಡೆದುಕೊಳ್ಳುವುದು ಉತ್ತಮ.

ಪ್ರಶ್ನೆ: ಸರಪಳಿ ಪತ್ರ ಏನನ್ನೆಲ್ಲಾ ಒಳಗೊಂಡಿರುತ್ತದೆ?

ಹಲವಾರು ವರ್ಷಗಳಿಂದ ಆಸ್ತಿ ಯಾರ ಹೆಸರಲ್ಲಿದೆ ಹಾಗೂ ಯಾರಿಂದ ಯಾರಿಗೆ ಆಸ್ತಿ ಬಂದಿದೆ ಎನ್ನುವ ಸಂಪೂರ್ಣ ಮಾಹಿತಿ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

2027ಕ್ಕೆ ಮುಂದೂಡಿಕೆ ಆಯ್ತಾ ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಚಿತ್ರದ ರಿಲೀಸ್? – Kannada News | Salman Khan movie Maatrubhumi release delayed due to this reasons

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ನಟನೆಯ, ಬಹುನಿರೀಕ್ಷಿತ ‘ಮಾತೃಭೂಮಿ’ (Maatrubhumi) ಸಿನಿಮಾದ ಬಿಡುಗಡೆ ದಿನಾಂಕವು ಮತ್ತಷ್ಟು ಮುಂದೂಡಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಆರಂಭದಲ್ಲಿ ‘ಬ್ಯಾಟಲ್ ಆಫ್ ಗಲ್ವಾನ್’ (Battle Of Galwan) ಎಂದು ಹೆಸರಿಡಲಾಗಿದ್ದ ಈ ಸಿನಿಮಾಗೆ ಜಾಗತಿಕ ಮಟ್ಟದ ರಾಜತಾಂತ್ರಿಕ ವಿಘ್ನಗಳು ಎದುರಾಗಿವೆ. ಆದ್ದರಿಂದ ಸಿನಿಮಾದ ರಿಲೀಸ್ ದಿನಾಂಕವು 2027ಕ್ಕೆ ಶಿಫ್ಟ್ ಆಗಬಹುದು ಎನ್ನಲಾಗುತ್ತಿದೆ.

ರಕ್ಷಣಾ ಸಚಿವಾಲಯದ ಆಕ್ಷೇಪ?

ಈ ಚಿತ್ರವು 2020ರಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ ಗಲ್ವಾನ್ ಕಣಿವೆ ಸಂಘರ್ಷದ ಕಥಾಹಂದರವನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ, ಚಿತ್ರದಲ್ಲಿರುವ ಕೆಲವು ಸೂಕ್ಷ್ಮ ವಿಷಯಗಳು ಮತ್ತು ಚೀನಾದ ನೇರ ಉಲ್ಲೇಖಗಳ ಕುರಿತು ಭಾರತೀಯ ರಕ್ಷಣಾ ಸಚಿವಾಲಯವು ಕೆಲವು ಆಕ್ಷೇಪಣೆಗಳನ್ನು ಎತ್ತಿದೆ ಎಂದು ವರದಿಯಾಗಿದೆ. ಈ ಕಾರಣದಿಂದಾಗಿ ಚಿತ್ರಕ್ಕೆ ಅಗತ್ಯವಿರುವ ಕ್ಲಿಯರೆನ್ಸ್ ಸಿಗುವುದು ತಡವಾಗುತ್ತಿದೆ.

ವರ್ಷಾಂತ್ಯಕ್ಕೆ ಬರಲಿದೆಯೇ ಸಿನಿಮಾ?

ಚಿತ್ರದ ನಿರ್ಮಾಪಕರು ಈ ವರ್ಷದ ಅಂತ್ಯದೊಳಗೆ ಚಿತ್ರವನ್ನು ಹೇಗಾದರೂ ಮಾಡಿ ಚಿತ್ರಮಂದಿರಗಳಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅನುಮತಿ ಸಿಗುವುದು ಮತ್ತಷ್ಟು ವಿಳಂಬವಾದರೆ ಸಿನಿಮಾ ಬಿಡುಗಡೆ 2027ಕ್ಕೆ ಮುಂದೂಡಲ್ಪಡುವುದು ಅನಿವಾರ್ಯವಾಗಲಿದೆ. ಸಿನಿಮಾದ ವಿವಾದಾತ್ಮಕ ಅಂಶಗಳ ಕುರಿತಾದ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಒಂದು ವೇಳೆ ಶೀಘ್ರದಲ್ಲೇ ಇದು ಇತ್ಯರ್ಥವಾದರೂ, ಬಾಲಿವುಡ್‌ನಲ್ಲಿ ಈಗಾಗಲೇ ಪ್ರಮುಖ ರಿಲೀಸ್ ಡೇಟ್‌ಗಳನ್ನು ಬೇರೆ ದೊಡ್ಡ ಸಿನಿಮಾಗಳು ಕಾಯ್ದಿರಿಸಿವೆ. ಹೀಗಾಗಿ ‘ಮಾತೃಭೂಮಿ’ ಚಿತ್ರಕ್ಕೆ ಉತ್ತಮ ಸ್ಲಾಟ್ ಸಿಗುವುದು ಕಷ್ಟ ಎಂಬ ಅಭಿಪ್ರಾಯ ಇದೆ.

ದಸರಾ ರಜೆಯ ಮೇಲೆ ಕಣ್ಣು:

ಒಂದು ವೇಳೆ ಈ ವರ್ಷವೇ ಸಿನಿಮಾ ಬಿಡುಗಡೆಯಾಗುವುದಾದರೆ, ಅಕ್ಟೋಬರ್ 20ರಂದು (ಮಂಗಳವಾರ) ದಸರಾ ಹಬ್ಬ ಇರುವುದರಿಂದ, ಚಿತ್ರಕ್ಕೆ 5 ದಿನಗಳ ಸುದೀರ್ಘ ವೀಕೆಂಡ್ ಸಿಗುವ ಅವಕಾಶವಿದೆ. ಇದಲ್ಲದೆ, ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಅಕ್ಟೋಬರ್ 30ಕ್ಕೆ ಪ್ರೀಪೋನ್ ಆಗುವ ಸಾಧ್ಯತೆ ಇದೆ. ಅದರ ನಂತರ ನವೆಂಬರ್ ಕೊನೆಯ ವಾರದವರೆಗೂ ಯಾವುದೇ ದೊಡ್ಡ ಸಿನಿಮಾಗಳು ಇಲ್ಲದಿರುವುದರಿಂದ, ಅದು ಕೂಡ ‘ಮಾತೃಭೂಮಿ’ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಬಹುದು.

ಇದನ್ನೂ ಓದಿ: 52 ವರ್ಷಗಳಿಂದ ಸಲ್ಮಾನ್ ಖಾನ್ ಕೇವಲ 1 ಬಿಎಚ್​​ಕೆ ಮನೆಯಲ್ಲಿ ವಾಸಿಸುತ್ತಿರುವುದೇಕೆ ಗೊತ್ತಾ?

ಅಪೂರ್ವ ಲಖಿಯಾ ನಿರ್ದೇಶನದ, ಚಿತ್ರಾಂಗದಾ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಆರಂಭದಲ್ಲಿ ಏಪ್ರಿಲ್ 17ರಂದು ಬಿಡುಗಡೆಯಾಗಬೇಕಿತ್ತು. ಆದರೆ ಸಾಲು ಸಾಲು ಅಡೆತಡೆಗಳಿಂದಾಗಿ ಮುಂದೂಡಲ್ಪಡುತ್ತಲೇ ಸಾಗಿದೆ. ಒಂದು ವೇಳೆ ಈ ವರ್ಷ ಈ ಸಿನಿಮಾ ಬರದಿದ್ದರೆ, 2026ರಲ್ಲಿ ಸಲ್ಮಾನ್ ಖಾನ್ ಅವರ ಯಾವುದೇ ಚಿತ್ರಗಳು ತೆರೆಕಂಡಂತಾಗುವುದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಸ್ಟ್ರೇಲಿಯಾ ಪ್ರಧಾನಿಗೆ ಉಡುಗೊರೆಯಾಗಿ ಪಿಎಂ ಮೋದಿ ‘ಕಲೋನಿಯಲ್ ಕಸಿನ್ಸ್’ ಗ್ರಾಮಫೋನ್ ಆಲ್ಬಮ್‌ ಕೊಟ್ಟಿದ್ದೇಕೆ? – Kannada News | Who Are Colonial Cousins? Why PM Modi Gifted Vinyl Indian Pop Album to Australian PM?

ನವದೆಹಲಿ, ಜುಲೈ 13: ಬೇರೆ ದೇಶಗಳ ಅಧ್ಯಕ್ಷರು ಅಥವಾ ಪ್ರಧಾನಮಂತ್ರಿಗಳು ಭಾರತಕ್ಕೆ ಬಂದಾಗ ನಮ್ಮ ದೇಶದ ನೆನಪಿಗಾಗಿ ಉಡುಗೊರೆಗಳನ್ನು ನೀಡುವ ಪದ್ಧತಿ ಭಾರತ ಸರ್ಕಾರದಲ್ಲಿ ಮೊದಲಿನಿಂದ ಚಾಲ್ತಿಯಲ್ಲಿದೆ. ಹಾಗೇ, ಪ್ರಧಾನಿ ನರೇಂದ್ರ ಮೋದಿ ಬೇರೆ ದೇಶಕ್ಕೆ ಹೋದಾಗಲೂ ಅಲ್ಲಿನ ನಾಯಕರಿಗೆ ಇಲ್ಲಿಂದ ಭಾರತೀಯ ಕಲೆ, ಕುಸುರಿ-ಕೆತ್ತನೆ, ಕೈಮಗ್ಗ, ಸಂಸ್ಕೃತಿಯನ್ನು ಬಿತ್ತರಿಸುವ ವಿಶೇಷವಾದ ಉಡುಗೊರೆಗಳನ್ನು ಕೊಂಡೊಯ್ಯುವ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ. ಕಳೆದ ವಾರ ಆಸ್ಟ್ರೇಲಿಯಾಗೆ ಹೋಗಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಲ್ಲಿನ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರಿಗೆ 90ರ ದಶಕದ ಇಂಡೋ-ಪಾಪ್ ‘ಕಲೋನಿಯಲ್ ಕಸಿನ್ಸ್’ (Colonial Cousins) ಆಲ್ಬಮ್‌ನ ಸ್ಪೆಷಲ್ ಕಲೆಕ್ಟರ್ಸ್ ಎಡಿಷನ್ ‘ವಿನೈಲ್ ರೆಕಾರ್ಡ್’ (Vinyl Album) ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಉಡುಗೊರೆಯ ಬಳಿಕ ಈ ಆಲ್ಬಂ ಮತ್ತೊಮ್ಮೆ ಭಾರತದಲ್ಲೂ ಮತ್ತೆ ಭಾರೀ ಸದ್ದು ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಆಸ್ಟ್ರೇಲಿಯಾದ ಪ್ರಧಾನಿಗೆ ಈ ಮ್ಯೂಸಿಕ್ ಆಲ್ಬಂ ನೀಡಿರುವುದರ ಹಿಂದೆ ಹಲವು ಕುತೂಹಲಕಾರಿ ಸಂಗತಿಗಳಿವೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತದಿಂದ ಬೇರೆ ದೇಶದ ನಾಯಕರಿಗೆ ಉಡುಗೊರೆಗಳನ್ನು ನೀಡಲು ಆಯ್ಕೆ ಮಾಡುವಾಗ ಬಹಳ ಮುತುವರ್ಜಿ ವಹಿಸಲಾಗುತ್ತದೆ. ಆ ಉಡುಗೊರೆ ನಮ್ಮ ದೇಶದ ಸಂಸ್ಕೃತಿ, ಆಚರಣೆ, ಕಲೆಯನ್ನು ಪಸರಿಸುವಂತಿರಬೇಕು. ಹೀಗಾಗಿ, ರೇಷ್ಮೆ, ಕಾಟನ್ ಬಟ್ಟೆಯಿಂದ ಹಿಡಿದು ಅಮೃತಶಿಲೆಯ ಕೆತ್ತನೆಯ ಕಲಾಕೃತಿಗಳು, ಮರದ ಕೆತ್ತನೆಯ ಉಯ್ಯಾಲೆ, ಎರಡೂ ದೇಶಗಳ ಇತಿಹಾಸವನ್ನು ನೆನಪಿಸುವ ವಸ್ತುಗಳನ್ನು ಒಳಗೊಂಡು ಹಲವು ಉಡುಗೊರೆಗಳನ್ನು ಪ್ರಧಾನಿ ಮೋದಿ ಬೇರೆ ದೇಶಗಳ ನಾಯಕರಿಗೆ ನೀಡಿದ್ದಾರೆ. ಆದರೆ, ಈ ಬಾರಿ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರಿಗೆ ನೀಡಲಾಗಿರುವ ಭಾರತದ ಹೆಮ್ಮೆಯ ಸಾಂಸ್ಕೃತಿಕ ಸಂಕೇತವಾಗಿರುವ ‘ಕಲೋನಿಯಲ್ ಕಸಿನ್ಸ್’ (ಹರಿಹರನ್ ಮತ್ತು ಲೆಸ್ಲಿ ಲೂಯಿಸ್) ಅವರ ಐತಿಹಾಸಿಕ ಆಲ್ಬಮ್‌ನ ‘ವಿನೈಲ್ ರೆಕಾರ್ಡ್’ ಬಹಳ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾದ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ಮೋದಿ ಭೇಟಿ, ಮೆಲ್ಬೋರ್ನ್ ಕ್ಲಬ್ ಜೊತೆ ಐತಿಹಾಸಿಕ ಒಪ್ಪಂದ

ಪ್ರಧಾನಿ ಮೋದಿ ಇದೇ ಆಲ್ಬಂ ಅನ್ನು ಉಡುಗೊರೆಯಾಗಿ ಆಯ್ಕೆ ಮಾಡಿಕೊಳ್ಳಲು ಕೆಲವು ಮುಖ್ಯ ಕಾರಣಗಳಿವೆ. ಅವುಗಳೆಂದರೆ,

ಆಸ್ಟ್ರೇಲಿಯಾ ಪ್ರಧಾನಿ ಸಂಗೀತ ಪ್ರೇಮಿ:

ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಕೇವಲ ರಾಜಕಾರಣಿಯಲ್ಲ. ಅವರು ದೊಡ್ಡ ಸಂಗೀತ ಪ್ರೇಮಿ. ಅವರಿಗೆ ಹಳೆಯ ಶೈಲಿಯ ‘ವಿನೈಲ್ ರೆಕಾರ್ಡ್‌ಗಳನ್ನು’ (ಗ್ರಾಮಫೋನ್ ಡಿಸ್ಕ್) ಸಂಗ್ರಹಿಸುವ ಅಪರೂಪದ ಹವ್ಯಾಸವಿದೆ. ಹೀಗಾಗಿ, ಪ್ರಧಾನಿ ಮೋದಿ ಆಸ್ಟ್ರೇಲಿಯಾದ ಪ್ರಧಾನಿಯವರ ವೈಯಕ್ತಿಕ ಆಸಕ್ತಿ ಮತ್ತು ಹವ್ಯಾಸವನ್ನು ತಿಳಿದುಕೊಂಡು, ಅವರ ಹೃದಯಕ್ಕೆ ಮುಟ್ಟುವಂತಹ ಈ ವಿಶೇಷ ಮ್ಯೂಸಿಕ್ ರೆಕಾರ್ಡ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಪೂರ್ವ ಮತ್ತು ಪಶ್ಚಿಮ ಸಂಸ್ಕೃತಿಗಳ ಸಮ್ಮಿಲನ:

‘ಕಲೋನಿಯಲ್ ಕಸಿನ್ಸ್’ ಎಂಬುದು 1996ರ ಮ್ಯೂಸಿಕ್ ಆಲ್ಬಮ್. ಪಾಪ್ ಮ್ಯೂಸಿಕ್​ನಲ್ಲಿ ಈ ಆಲ್ಬಂ ಹೊಸ ಭಾಷ್ಯವನ್ನೇ ಬರೆಯಿತು. ಇದು ಕೇವಲ ಹಾಡುಗಳ ಸಂಗ್ರಹವಲ್ಲ, ಇದು ಸಾಂಸ್ಕೃತಿಕ ಸಮ್ಮಿಲನದ ಅದ್ಭುತ ಮೈಲಿಗಲ್ಲು. ಇದರಲ್ಲಿ ಗಾಯಕ ಹರಿಹರನ್ ಅವರ ಶುದ್ಧ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಗಜಲ್ ಶೈಲಿಯಿದೆ. ಮತ್ತೊಂದೆಡೆ, ಲೆಸ್ಲಿ ಲೂಯಿಸ್ ಅವರ ವೆಸ್ಟರ್ನ್ ಪಾಪ್, ರಾಕ್ ಮತ್ತು ಗಿಟಾರ್ ರಿದಮ್‌ಗಳಿವೆ.

ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧವೂ ಇದೇ ರೀತಿಯದ್ದಾಗಿದೆ. ಭಾರತವು ಪೂರ್ವದ ಸಾಂಸ್ಕೃತಿಕ ಹಿನ್ನೆಲೆ ಹೊಂದಿದ್ದರೆ, ಆಸ್ಟ್ರೇಲಿಯಾವು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಹೊಂದಿದೆ. ಈ ಎರಡೂ ದೇಶಗಳು ಹೇಗೆ ಪರಸ್ಪರ ಕೈಜೋಡಿಸಿ ಸಾಮರಸ್ಯದಿಂದ ಮುನ್ನಡೆಯುತ್ತಿವೆಯೋ, ಹಾಗೆಯೇ ಈ ಆಲ್ಬಮ್‌ನಲ್ಲಿ ಭಾರತೀಯ ಮತ್ತು ಪಾಶ್ಚಿಮಾತ್ಯ ಸಂಗೀತ ಲೋಕ ಸೌಹಾರ್ದತೆಯಿಂದ ಒಂದಾಗಿದೆ ಎಂಬುದನ್ನು ಬಿಂಬಿಸಲು ಮೋದಿ ಈ ಉಡುಗೊರೆ ನೀಡಿದ್ದಾರೆ.

ಭಾರತದ ಜಾಗತಿಕ ಸಾಂಸ್ಕೃತಿಕ ರಾಯಭಾರಿ:

ಕಲೋನಿಯಲ್ ಕಸಿನ್ಸ್ ಆಲ್ಬಮ್ ಬಿಡುಗಡೆಯಾದಾಗ ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಬಿಲ್ಬೋರ್ಡ್ ಪ್ರಶಸ್ತಿ ಮತ್ತು ಪ್ರತಿಷ್ಠಿತ ಅಂತಾರಾಷ್ಟ್ರೀಯ MTV ಅವಾರ್ಡ್ ಗೆದ್ದ ಮೊದಲ ಭಾರತೀಯ ಬ್ಯಾಂಡ್ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿತ್ತು. ಹೀಗಾಗಿ, ಭಾರತದ ಸಾಂಸ್ಕೃತಿಕ ರಫ್ತುಗಳು ಕೇವಲ ಪಾರಂಪರಿಕ ರೇಷ್ಮೆ ಬಟ್ಟೆಗಳು ಅಥವಾ ಕಲ್ಲಿನ ಕೆತ್ತನೆಗಳಿಗಷ್ಟೇ ಸೀಮಿತವಾಗಿಲ್ಲ. ಭಾರತವು ಜಾಗತಿಕ ಮಟ್ಟದ ಆಧುನಿಕ ಮತ್ತು ಸೃಜನಶೀಲ ಪಾಪ್ ಸಂಗೀತವನ್ನೂ ಕೂಡ ಸೃಷ್ಟಿಸಬಲ್ಲದು ಎಂಬುದನ್ನು ಜಗತ್ತಿಗೆ ಸಾರಲು ಪ್ರಧಾನಿ ಮೋದಿ ಈ ಆಲ್ಬಮ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ತಾಳ್ಮೆಯ ಸಂಕೇತ:

ಇಂದಿನ ಡಿಜಿಟಲ್ ಯುಗದಲ್ಲಿ ಜನರು ಮೊಬೈಲ್‌ಗಳಲ್ಲಿ ಪ್ರತಿ 30 ಸೆಕೆಂಡಿಗೆ ಹಾಡುಗಳನ್ನು ಬದಲಾಯಿಸುತ್ತಾರೆ. ಆದರೆ, ವಿನೈಲ್ ರೆಕಾರ್ಡ್‌ನಲ್ಲಿ (ಗ್ರಾಮಫೋನ್​ನಲ್ಲಿ) ಹಾಡು ಕೇಳಲು ತಾಳ್ಮೆ ಬೇಕು. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದೀರ್ಘಕಾಲೀನ ಸ್ನೇಹಕ್ಕೂ ಇಂತಹದ್ದೇ ತಾಳ್ಮೆ ಮತ್ತು ಬದ್ಧತೆ ಅಗತ್ಯ ಎಂಬುದನ್ನು ಈ ಅಪರೂಪದ ‘ವಿನೈಲ್ ಆಲ್ಬಮ್’ ಉಡುಗೊರೆ ನೆನಪಿಸುತ್ತದೆ.

ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ಪ್ರಧಾನಿ ಮೋದಿ ಭಾಷಣ; ‘ಕುಚ್ ಕುಚ್ ಹೋತಾ ಹೈ’ ಡೈಲಾಗ್ ಬಳಕೆಗೆ ಕರಣ್ ಸಂತಸ

ಪ್ರಧಾನಿ ನರೇಂದ್ರ ಮೋದಿಯವರು ನೀಡುವ ಪ್ರತಿಯೊಂದು ಉಡುಗೊರೆಯೂ ಭಾರತದ ‘ವೋಕಲ್ ಫಾರ್ ಲೋಕಲ್’ (Vocal for Local) ಮತ್ತು ‘ಏಕ ಭಾರತ ಶ್ರೇಷ್ಠ ಭಾರತ’ ಪರಿಕಲ್ಪನೆಯನ್ನು ಎತ್ತಿಹಿಡಿಯುತ್ತದೆ. ಜಮ್ಮು-ಕಾಶ್ಮೀರದ ಕುಂಕುಮಪುರ ಮತ್ತು ಶಾಲುಗಳಿಂದ ಹಿಡಿದು, ಕರ್ನಾಟಕದ ಶ್ರೀಗಂಧದ ಕೆತ್ತನೆಗಳು, ಗುಜರಾತ್‌ನ ಪಟೋಲಾ ರೇಷ್ಮೆ ಹಾಗೂ ಈಶಾನ್ಯ ಭಾರತದ ಬಿದಿರಿನ ಕಲೆಗಳವರೆಗೆ ಭಾರತದ ಮೂಲೆ ಮೂಲೆಯ ವಿಶಿಷ್ಟ ಕಲೆಗಳನ್ನು ಜಾಗತಿಕ ನಾಯಕರ ಮನೆಗೆ ತಲುಪಿಸುವ ಮೂಲಕ ಅವುಗಳನ್ನು ಪ್ರಧಾನಿ ಮೋದಿ ಭಾರತದ ಸಾಂಸ್ಕೃತಿಕ ರಾಯಭಾರಿಗಳನ್ನಾಗಿಸಿದ್ದಾರೆ.

ಹೆಚ್ಚಾಯ್ತು ಕಲೋನಿಯಲ್ ಕಸಿನ್ಸ್ ಜನಪ್ರಿಯತೆ:

ಪ್ರಧಾನಿ ಮೋದಿ ಆಸ್ಟ್ರೇಲಿಯಾದ ಪ್ರಧಾನಿಗೆ ಈ ಇಂಡೋ-ಪಾಪ್ ಆಲ್ಬಂ ಅನ್ನು ಉಡುಗೊರೆಯಾಗಿ ನೀಡಿದ ಬಳಿಕ ಈ ಆಲ್ಬಂನ ಜನಪ್ರಿಯತೆ ಮತ್ತೊಮ್ಮೆ ಹೆಚ್ಚಾಗಿದೆ. ಈ ಬಗ್ಗೆ ಸುದ್ಧಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿರುವ ಗಾಯಕ ಹರಿಹರನ್, “ಕಲೋನಿಯಲ್ ಕಸಿನ್ಸ್ ಯಾವಾಗಲೂ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿದೆ. ಪ್ರಧಾನಿಯವರು ನಮ್ಮ ಆಲ್ಬಮ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿದು ನನಗೆ ಮತ್ತು ಲೆಸ್ಲಿಗೆ ಅಪಾರ ಸಂತೋಷವಾಯಿತು. 1996ರಿಂದ 2000ರವರೆಗೆ ನಾವು ಬಿಡುಗಡೆ ಮಾಡಿದ ಸಂಗೀತ ಇಂದಿಗೂ ಪ್ರಸ್ತುತವಾಗಿದೆ. ಇಂದಿಗೂ ನಾನು ನನ್ನ ಶೋಗಳಲ್ಲಿ ಕಲೋನಿಯಲ್ ಕಸಿನ್ಸ್‌ನ ಒಂದೆರಡು ಹಾಡುಗಳನ್ನು ಹಾಡಿದರೆ ಪ್ರೇಕ್ಷಕರು ರೋಮಾಂಚನಗೊಳ್ಳುತ್ತಾರೆ” ಎಂದಿದ್ದಾರೆ.

ಯಾರು ಈ ‘ಕಲೋನಿಯಲ್ ಕಸಿನ್ಸ್’?:

ಈಗ ಎಲ್ಲ ಆಲ್ಬಂಗಳನ್ನೂ ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅದು ಎಲ್ಲರಿಗೂ ಸುಲಭವಾಗಿ ಲಭ್ಯವಾಗುತ್ತದೆ. ಆದರೆ, 90ರ ದಶಕದಲ್ಲಿ ಆ ರೀತಿಯ ಅವಕಾಶಗಳು ಇರಲಿಲ್ಲ. 1996ರಲ್ಲಿ ‘ಕಲೋನಿಯಲ್ ಕಸಿನ್ಸ್’ ಆಲ್ಬಮ್ ಬಿಡುಗಡೆಯಾದಾಗ ಅದು ಭಾರತೀಯ ರೇಡಿಯೋ ಜಗತ್ತಿನಲ್ಲಿ ಒಂದು ಕ್ರಾಂತಿಯನ್ನೇ ಸೃಷ್ಟಿಸಿತು. ಈ ಆಲ್ಬಂನಲ್ಲಿ ಹಾಡಿದ ಹರಿಹರನ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಗಜಲ್‌ಗಳಲ್ಲಿ ಅಪ್ರತಿಮ ಪಾಂಡಿತ್ಯ ಸಾಧಿಸಿ ಪ್ರಸಿದ್ಧರಾಗಿದ್ದರು. ಅವರು ಇಂದಿಗೂ ಸಿನಿಮಾ ಹಾಡುಗಳನ್ನು ಹಾಡುತ್ತಾರೆ. ಕನ್ನಡ, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿರುವ ಅವರಿಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಮತ್ತೊಬ್ಬರಾದ ಲೆಸ್ಲಿ ಲೂಯಿಸ್, ಭಾರತದ ಅತ್ಯುತ್ತಮ ವೆಸ್ಟರ್ನ್ (ಪಾಶ್ಚಿಮಾತ್ಯ) ಸಂಗೀತ ಸಂಯೋಜಕ, ಪ್ರೊಡ್ಯೂಸರ್ ಮತ್ತು ಪಾಪ್ ಗಾಯಕನಾಗಿ ಹೆಸರು ಮಾಡಿದ್ದರು.

ಈಗಿನ ಡಿಜಿಟಲ್ ಪ್ಲೇಲಿಸ್ಟ್‌ಗಳು ಬರುವ ದಶಕಗಳ ಮೊದಲೇ, ಭಾರತೀಯ ರಾಗಗಳು ಮತ್ತು ಅಕೌಸ್ಟಿಕ್ ಗಿಟಾರ್ ಹಾಗೂ ಆಧುನಿಕ ಮ್ಯೂಸಿಕ್ ಪ್ರೊಡಕ್ಷನ್ ಒಂದೇ ಹಾಡಿನಲ್ಲಿ ಎಷ್ಟು ಸಹಜವಾಗಿ ಬೆರೆಯಬಲ್ಲವು ಎಂಬುದನ್ನು ಈ ಜೋಡಿ ಸಾಬೀತುಪಡಿಸಿತು. ಇದರ ಮ್ಯೂಸಿಕ್ ವಿಡಿಯೋಗಳು ಜಾಗತಿಕ ಮಟ್ಟದ ಗುಣಮಟ್ಟ ಹೊಂದಿದ್ದರೂ, ಭಾರತೀಯ ಆತ್ಮವನ್ನು ಹೊಂದಿದ್ದವು. 1990ರ ದಶಕದ ಮಧ್ಯಭಾಗದಲ್ಲಿ ಒಟ್ಟಿಗೆ ಸೇರಿದ ಈ ಇಬ್ಬರು ಕಲಾವಿದರು ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪಾಶ್ಚಿಮಾತ್ಯ ಪಾಪ್ ಮತ್ತು ರಾಕ್ ಸಂಗೀತದೊಂದಿಗೆ ಅದ್ಭುತವಾಗಿ ಸಮ್ಮಿಲನಗೊಳಿಸಿದರು. ಇವರ ಈ ಹೊಸ ಪ್ರಯೋಗಕ್ಕೆ ಇಡೀ ಜಗತ್ತೇ ಮೆಚ್ಚಿಕೊಂಡಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:17 pm, Mon, 13 July 26

Source link

ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬ: ಅಧಿಕಾರಿಗಳು, ಗುತ್ತಿಗೆದಾರರಿಗೆ ಖಡಕ್​​ ಎಚ್ಚರಿಕೆ ಕೊಟ್ಟ ಸಚಿವ ಯತೀಂದ್ರ – Kannada News | Yathindra Issues Strict Orders Over Delays in Kalaburagi Water Project

ಕಲಬುರಗಿ, ಜುಲೈ 13: ನಗರದಲ್ಲಿ ಬಹುನಿರೀಕ್ಷಿತ ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬದ ಬಗ್ಗೆ ಸಚಿವ ಯತೀಂದ್ರ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನಗರದ ಅರ್ಧಕ್ಕಿಂತ ಹೆಚ್ಚು ಜನರು ಈ ನೀರಿನ ಯೋಜನೆಯ ಮೇಲೆ ಅವಲಂಬಿತರಾಗಿದ್ದು, ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಕಾಮಗಾರಿಯು ಕಳೆದ ವರ್ಷವೇ ಪೂರ್ಣಗೊಳ್ಳಬೇಕಾಗಿತ್ತು, ಆದರೆ ನಾಲ್ಕು ಬಾರಿ ಗಡುವು ವಿಸ್ತರಣೆಯಾಗಿದ್ದರೂ ಕೆಲಸ ಇನ್ನೂ ಮುಗಿದಿಲ್ಲ. ಗುತ್ತಿಗೆದಾರರಿಗೆ ಈಗಾಗಲೇ ದಂಡ ವಿಧಿಸಿದ್ದರೂ, ಕೆಲಸದ ವೇಗ ಹೆಚ್ಚಾಗಿಲ್ಲ. ನಿರ್ದಿಷ್ಟ ಸಮಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಮತ್ತು ಹಾಳಾದ ರಸ್ತೆಗಳನ್ನು ಪುನಃಸ್ಥಾಪಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ. ಸಾರ್ವಜನಿಕರ ಕುಂದುಕೊರತೆಗಳನ್ನು ಸ್ವೀಕರಿಸಲು, ನೋಂದಾಯಿಸಲು ಮತ್ತು ಅನುಸರಿಸಲು ಒಂದು ವ್ಯವಸ್ಥೆ ರೂಪಿಸಬೇಕು. ಸಾರ್ವಜನಿಕರು ಯಾರನ್ನು, ಎಲ್ಲಿ ಸಂಪರ್ಕಿಸಬೇಕು ಎಂಬುದರ ಕುರಿತು ಮಾಹಿತಿ ಹಾಗೂ ಸಂಖ್ಯೆಗಳನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

IND vs ENG: ಅಗ್ರಸ್ಥಾನಕ್ಕಾಗಿ ಟೀಂ ಇಂಡಿಯಾದ ಮೂವರ ನಡುವೆ ಪೈಪೋಟಿ

Source link

ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ ಅಗತ್ಯವನ್ನು ಪೂರೈಸಿಕೊಳ್ಳಲು ಈ ಆಹಾರಗಳ ಸೇವನೆ ಮಾಡಿ! – Kannada News | Why Pregnant Women Need More Calcium Than Usual

ಗರ್ಭಾವಸ್ಥೆ ಮಹಿಳೆಯ ಜೀವನದ ಅತ್ಯಂತ ಮಹತ್ವದ ಹಂತಗಳಲ್ಲಿ ಒಂದು. ಈ ಸಮಯದಲ್ಲಿ ತಾಯಿಯ ದೇಹದಲ್ಲಿ ಅನೇಕ ರೀತಿಯ ದೈಹಿಕ ಮತ್ತು ಹಾರ್ಮೋನಲ್ ಬದಲಾವಣೆಗಳಾಗುತ್ತದೆ. ಅದರ ಜೊತೆಗೆ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಬೇಕಾದ ಪೌಷ್ಟಿಕಾಂಶಗಳನ್ನು ಒದಗಿಸುವ ಜವಾಬ್ದಾರಿಯೂ ತಾಯಿಯದ್ದಾಗಿರುತ್ತದೆ. ಆದ್ದರಿಂದ ಪ್ರೋಟೀನ್, ಕಬ್ಬಿಣ, ಫೋಲಿಕ್ ಆಸಿಡ್ ಜೊತೆಗೆ ಕ್ಯಾಲ್ಸಿಯಂ ಕೂಡ ಅತ್ಯಗತ್ಯ ಖನಿಜವಾಗಿದೆ. ಕ್ಯಾಲ್ಸಿಯಂ ಕೊರತೆಯಾದರೆ ತಾಯಿಯ ಮೂಳೆಗಳು ದುರ್ಬಲವಾಗುವುದಷ್ಟೇ ಅಲ್ಲ, ಮಗುವಿನ ಮೂಳೆ ಮತ್ತು ಹಲ್ಲುಗಳ ಬೆಳವಣಿಗೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಗರ್ಭಿಣಿಯರಿಗೆ ಕ್ಯಾಲ್ಸಿಯಂ ಏಕೆ ಮುಖ್ಯ?

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಗರ್ಭದಲ್ಲಿರುವ ಮಗುವಿನ ಮೂಳೆಗಳು, ಹಲ್ಲುಗಳು, ಹೃದಯ, ನರಮಂಡಲ ಮತ್ತು ಸ್ನಾಯುಗಳ ಸರಿಯಾದ ಬೆಳವಣಿಗೆಗೆ ಕ್ಯಾಲ್ಸಿಯಂ ಅತ್ಯಗತ್ಯ. ಆಹಾರದಿಂದ ಸಾಕಷ್ಟು ಕ್ಯಾಲ್ಸಿಯಂ ದೊರೆಯದಿದ್ದರೆ, ಮಗುವಿನ ಅಗತ್ಯವನ್ನು ಪೂರೈಸಲು ತಾಯಿಯ ಮೂಳೆಗಳಲ್ಲಿ ಸಂಗ್ರಹವಾಗಿರುವ ಕ್ಯಾಲ್ಸಿಯಂ ಬಳಸಲಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಮೂಳೆ ಸಾಂದ್ರತೆ ಕಡಿಮೆಯಾಗುವ ಅಪಾಯ ಹೆಚ್ಚಬಹುದು. ಇದಲ್ಲದೆ, ಕಡಿಮೆ ಕ್ಯಾಲ್ಸಿಯಂ ಸೇವಿಸುವ ಮಹಿಳೆಯರಲ್ಲಿ ಪ್ರೀ-ಎಕ್ಲಾಂಪ್ಸಿಯಾ (ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡ) ಅಪಾಯ ಹೆಚ್ಚಿರಬಹುದು. ವೈದ್ಯರ ಸಲಹೆಯಂತೆ ಕ್ಯಾಲ್ಸಿಯಂ ಪೂರಕಗಳನ್ನು ತೆಗೆದುಕೊಳ್ಳುವುದರಿಂದ ಈ ಅಪಾಯವನ್ನು ಕೆಲವು ಸಂದರ್ಭಗಳಲ್ಲಿ ಕಡಿಮೆ ಮಾಡಬಹುದು.

ಕ್ಯಾಲ್ಸಿಯಂ ಅಗತ್ಯ ಪೂರೈಸಲು ಸೇವಿಸಬೇಕಾದ ಆಹಾರಗಳು?

  • ಹಾಲು, ಮೊಸರು, ಮಜ್ಜಿಗೆ, ಪನೀರ್
  • ರಾಗಿ ಮತ್ತು ಎಳ್ಳು
  • ಸೋಯಾ, ಟೋಫು
  • ಬಾದಾಮಿ
  • ಹಸಿರು ಸೊಪ್ಪುಗಳು (ಮಿತ ಪ್ರಮಾಣದಲ್ಲಿ)
  • ಕ್ಯಾಲ್ಸಿಯಂ ಫೋರ್ಟಿಫೈಡ್ ಆಹಾರ ಪದಾರ್ಥಗಳು

ಇದರ ಜೊತೆಗೆ ವಿಟಮಿನ್ ಡಿ ಕೂಡ ಸಮರ್ಪಕವಾಗಿರಬೇಕು. ಇದಿಲ್ಲದೆ ದೇಹವು ಕ್ಯಾಲ್ಸಿಯಂ ಅನ್ನು ಸರಿಯಾಗಿ ಹೀರಿಕೊಳ್ಳುವುದಿಲ್ಲ. ಹಾಗಾಗಿ ಬೆಳಗಿನ ಸೂರ್ಯನ ಬೆಳಕಿನಲ್ಲಿ 15–20 ನಿಮಿಷ ಇರುವುದೂ ಸಹಕಾರಿ.

ಇದನ್ನೂ ಓದಿ: ಊಟ ಮಾಡಿದ ತಕ್ಷಣ ಈ ತಪ್ಪುಗಳನ್ನು ಮಾಡಬೇಡಿ! ಇದು ಜೀರ್ಣಶಕ್ತಿಯನ್ನು ಹಾಳು ಮಾಡುತ್ತದೆ

ಕ್ಯಾಲ್ಸಿಯಂ ಮಾತ್ರೆ ಸೇವಿಸುವಾಗ ಗಮನಿಸಬೇಕಾದ ವಿಷಯಗಳು

ಕ್ಯಾಲ್ಸಿಯಂ ಮಾತ್ರೆಗಳನ್ನು ವೈದ್ಯರ ಸಲಹೆಯಂತೆ ಮಾತ್ರ ಸೇವಿಸಬೇಕು. ಕಬ್ಬಿಣ (Iron) ಮಾತ್ರೆ ಮತ್ತು ಕ್ಯಾಲ್ಸಿಯಂ ಮಾತ್ರೆಯನ್ನು ಒಂದೇ ಸಮಯದಲ್ಲಿ ಸೇವಿಸಬಾರದು. ಎರಡರ ನಡುವೆ ಕನಿಷ್ಠ 2 ಗಂಟೆಗಳ ಅಂತರ ಇರಬೇಕು. ಸಾಕಷ್ಟು ನೀರು ಕುಡಿಯುವುದು ಮತ್ತು ನಿಯಮಿತ ಗರ್ಭಪೂರ್ವ ತಪಾಸಣೆ ಮಾಡಿಸಿಕೊಳ್ಳುವುದೂ ಮುಖ್ಯ.

ತಜ್ಞರ ಸಲಹೆ

ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ ಕೊರತೆಯ ಲಕ್ಷಣಗಳಾದ ಕಾಲು ಸೆಳೆತ, ಹಲ್ಲು ದುರ್ಬಲವಾಗುವುದು, ಸ್ನಾಯು ನೋವು ಅಥವಾ ಅತಿಯಾದ ಆಯಾಸ ಕಂಡುಬಂದರೆ ನಿರ್ಲಕ್ಷಿಸಬೇಡಿ. ಸ್ವಯಂ ಔಷಧಿ ತೆಗೆದುಕೊಳ್ಳುವುದಕ್ಕಿಂತ ಪ್ರಸೂತಿ ತಜ್ಞರ ಸಲಹೆ ಪಡೆದು ಆಹಾರ ಮತ್ತು ಪೂರಕಗಳ ಪ್ರಮಾಣವನ್ನು ನಿಗದಿಪಡಿಸಿಕೊಳ್ಳುವುದು ಸುರಕ್ಷಿತ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಸರಿಯಾದ ಪೌಷ್ಟಿಕಾಂಶವೇ ತಾಯಿ ಹಾಗೂ ಮಗುವಿನ ಆರೋಗ್ಯಕರ ಭವಿಷ್ಯಕ್ಕೆ ಭದ್ರ ಅಡಿಪಾಯವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಟೂಡೆಂಟ್ ಯೂನಿಯನ್ ‌ಎಲೆಕ್ಷನ್ ಮತ್ತೆ ಜಾರಿ ಮಾಡುವುದಾಗಿ ಹೇಳಿ ಸೈಲೆಂಟ್ ಆದ ಸರ್ಕಾರ: ಕಾರಣವೇನು? – Kannada News | Karnataka Government Silent on Promise to Reintroduce Student Union Elections: What’s the Reason

ಪ್ರಾತಿನಿಧಿಕ ಚಿತ್ರ Image Credit source: Getty images

ಬೆಂಗಳೂರು, ಜುಲೈ 13: ರಾಜ್ಯದಲ್ಲಿ ಬ್ಯಾನ್ ಆಗಿದ್ದ ಕಾಲೇಜು ಎಲೆಕ್ಷನ್ (College Elections) ಮತ್ತೆ ಶುರು ಮಾಡಲು ಸರ್ಕಾರ ಮುಂದಾಗಿದೆ. ಆ ಮೂಲಕ ಕಾಲೇಜು ಹಂತದಲ್ಲಿಯೇ ಸ್ಟೂಡೆಂಟ್ ಲೀಡರ್ ಹುಟ್ಟುಹಾಕುಲು ಸರ್ಕಾರ ಸಜ್ಜಾಗಿದೆ. ಈ ವರ್ಷದ ಆರಂಭದಿಂದಲೇ ಕಾಲೇಜುಗಳಲ್ಲಿ ಹಾಗೂ ವಿವಿಗಳಲ್ಲಿ ಎಲೆಕ್ಷನ್ ನಡೆಸಲು ಮುಂದಾಗಿತ್ತು. ಇತ್ತ ವಿದ್ಯಾರ್ಥಿಗಳು ಕೂಡ ಸ್ಟೂಡೆಂಟ್ ಯೂನಿಯನ್ ‌ಎಲೆಕ್ಷನ್ ಮರುಕಳಿಸಲಿದೆ ಅಂತ ರೆಡಿಯಾಗಿದ್ದರು. ಆದರೆ ಯಾಕೋ ಸರ್ಕಾರ ಈ ಬಗ್ಗೆ ಸೈಲೆಂಟ್ ಆಗಿದೆ.

ಶೈಕ್ಷಣಿಕ ವರ್ಷ ಶುರುವಾಗಿದ್ದರೂ ಉನ್ನತ ಶಿಕ್ಷಣ ಸಚಿವರೂ ಇಲ್ಲ, ಚುನಾವಣೆಯೂ ಇಲ್ಲ

ಕಾಲೇಜು ಹಾಗೂ ವಿವಿಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸುವ ಸಂಬಂಧ ಈಗಾಗಲೇ ಸರ್ಕಾರ ಸಮಿತಿ ರಚನೆ ಮಾಡಿ ವರದಿ ಪಡೆದಿದೆ. ಕಾಲೇಜುಗಳಲ್ಲಿ ಹಾಗೂ ವಿವಿಗಳಲ್ಲಿ ಚುನಾವಣೆ ಬೇಕಾ, ಬೇಡ್ವಾ ಎಂಬುವುದರ ಕುರಿತು ಶಿಕ್ಷಣ ತಜ್ಞರು, ಸಾರ್ವಜನಿಕರು ಹಾಗೂ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಅದರಂತೆ 2026-27ನೇ ಸಾಲಿನಿಂದ ಕಾಲೇಜುಗಳಲ್ಲಿ ಚುನಾವಣೆ ಶುರು ಮಾಡಲು ಮುಂದಾಗಿತ್ತು. ಆದರೆ ಶೈಕ್ಷಣಿಕ ವರ್ಷ ಶುರುವಾಗಿದ್ದರೂ ಉನ್ನತ ಶಿಕ್ಷಣ ಸಚಿವರೂ ಇಲ್ಲ, ಕಾಲೇಜು ಚುನಾವಣೆಯೂ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ವಿದ್ಯಾರ್ಥಿ ವಲಯದಿಂದ ಸರ್ಕಾರಕ್ಕೆ ಚುನಾವಣೆ ನಡೆಸುವಂತೆ ತೀವ್ರ ಒತ್ತಾಯ ಕೇಳಿಬರುತ್ತಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಪಬ್ಲಿಕ್ ಮಾದರಿಯ ಮೌಲ್ಯಮಾಪನ ಪರೀಕ್ಷೆ ಜಾರಿಗೆ ಮುಂದಾದ ಶಿಕ್ಷಣ ಇಲಾಖೆ

ಸಿಎಂ ಡಿಕೆ ಶಿವಕುಮಾರ್ ಕನಸಿನ ಮಹತ್ವದ ಯೋಜನೆ ಸ್ಟೂಡೆಂಟ್ ಯೂನಿಯನ್ ‌ಎಲೆಕ್ಷನ್. ಆದರೆ ರಾಜ್ಯದಲ್ಲಿ ಈಗ ಕಾಲೇಜುಗಳ ಆರಂಭವಾದರೂ ಎಲೆಕ್ಷನ್ ಮಾತ್ರ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದ್ದಂತಾಗಿದೆ. ರಾಜ್ಯದಲ್ಲಿ ಕಾಲೇಜುಗಳು ವಿವಿಗಳು ಆರಂಭವಾದರೂ ಯಾವುದೇ ಯೂನಿಯನ್ ಎಲೆಕ್ಷನ್ ಇಲ್ಲದೆ ಯೋಜನೆ ಹಳ್ಳ ಹಿಡಿಯುವ ಲಕ್ಷಣಗಳು ಕಾಣಿಸುತ್ತಿವೆ. ಈಗ ಉನ್ನತ್ತ ಶಿಕ್ಷಣ ಸಚಿವರಿಲ್ಲದೆ ಮಂತ್ರಿಮಂಡಲ ವಿಸ್ತರಣೆಯಾಗದೆ. ಕಾಲೇಜುಗಳಲ್ಲಿ ಎಲೆಕ್ಷನ್ ಮಾಡೆಲ್​​ ಮತ್ತೆ ಹಳ್ಳ ಹಿಡಿದಿದ್ದು, ವಿದ್ಯಾರ್ಥಿ ನಾಯಕರಿಂದ ಎಲೆಕ್ಷನ್​ಗೆ ಬೇಡಿಕೆ ಕೇಳಿಬರುತ್ತಿದೆ. ಹೀಗಾಗಿ ಸರ್ಕಾರ ಆದಷ್ಟು ಬೇಗ ಚುನಾವಣೆ ನಡೆಸುವಂತೆ ಒತ್ತಾಯಿಸಲಾಗಿದೆ.

ವಿದ್ಯಾರ್ಥಿಗಳು ಹೇಳುವುದೇನು?

ಕಾಲೇಜ್ ಎಲೆಕ್ಷನ್​ಗಳಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಭವಿಷ್ಯದ ವ್ಯಕ್ತಿತ್ವ, ಕಾಲೇಜುಗಳಲ್ಲಿನ ಸಮಸ್ಯೆಗಳನ್ನ ಪ್ರಶ್ನಿಸಲು ಅನಕೂಲವಾಗುತ್ತೆ, ಹೀಗಾಗಿ ಚುನಾವಣೆ ಬೇಕು ಎಂದು ಪದವಿ ವಿದ್ಯಾರ್ಥಿ ನಿತೀನ್ ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ‘ಚಡ್ಡಿ’ ಮುಜುಗರ! 7ನೇ ತರಗತಿ ಬಾಲಕರಿಗೂ ಹಾಫ್ ಪ್ಯಾಂಟ್ ಬಟ್ಟೆ ವಿತರಣೆ, ಪೋಷಕರಿಗೆ ಇಕ್ಕಟ್ಟು

ಒಟ್ಟಿನಲ್ಲಿ ದಶಕಗಳ ಬಳಿಕ ಬ್ಯಾನ್ ಆಗಿದ್ದ ಎಲೆಕ್ಷನ್ ಈಗ ಮತ್ತೆ ಕಾಲೇಜು ಹಾಗೂ ವಿವಿಗಳಲ್ಲಿ ಬೇಕು ಅಂತ ಸರ್ಕಾರಕ್ಕೆ ವಿದ್ಯಾರ್ಥಿ ಸಂಘಟನೆಗಳಿಂದ ಒತ್ತಾಯ ಶುರುವಾಗಿದ್ದು, ಈ ಬಗ್ಗೆ ಸರ್ಕಾರ ಯಾವ ನಿರ್ಧಾರಕ್ಕೆ ಬರುತ್ತೆ ಅಂತ ಕಾದು ನೋಡಬೇಕಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಳೆಗಾಲದಲ್ಲಿ ಭೇಟಿ ನೀಡಲೇಬೇಕಾದ ಕರ್ನಾಟಕದ ಅತ್ಯದ್ಭುತ ಸ್ಥಳಗಳಿವು – Kannada News | Amazing places to visit in Karnataka during the monsoon season

ಮಳೆಗಾಲದ (monsoon) ಸಮಯದಲ್ಲಿ ಪ್ರಕೃತಿಯ ಸೌಂದರ್ಯ ದುಪ್ಪಾಟ್ಟಾಗುತ್ತದೆ. ಧುಮ್ಮಿಕ್ಕುವ ಜಲಧಾರೆಗಳು, ಹಚ್ಚ ಹಸಿರಿನಿಂದ ಕಂಗೊಳಿಸುವ ಗಿರಿಧಾಮಗಳು ಇವೆಲ್ಲವೂ ಮಳೆಗಾಲದ ಸಮಯದಲ್ಲಿ ಪ್ರಕೃತಿ ಪ್ರೇಮಿಗಳನ್ನು ಆಕರ್ಷಿಸುತ್ತದೆ. ಪ್ರಕೃತಿಯ ಇಂತಹ ಅತ್ಯದ್ಭುತ ಸೌಂದರ್ಯವನ್ನು ಸವಿಯಲೆಂದು ಅನೇಕರು ಕೇರಳ, ಮೇಘಾಲಯ ಅಂತ ದೂರದೂರುಗಳಿಗೆ ಪ್ರವಾಸ ಹೋಗ್ತಾರೆ. ನಮ್ಮ ಕರ್ನಾಟಕದಲ್ಲೂ ಭೂಮಿಯ ಮೇಲಿನ ಸ್ವರ್ಗದಂತಿರುವ ಇಂತಹ ಅತ್ಯದ್ಭುತ ಸ್ಥಳಗಳಿದ್ದು, ಈ ಬಾರಿ ಮಾನ್ಸೂನ್‌ ಟ್ರಿಪ್‌ ಏನಾದ್ರೂ ಪ್ಲಾನ್‌ ಮಾಡಿದ್ರೆ ಕೂರ್ಗ್‌, ಚಿಕ್ಕಮಗಳೂರು ಇತ್ಯಾದಿ ಕರ್ನಾಟದಲ್ಲಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ. ಎಲ್ಲೆಲ್ಲೂ ಹಚ್ಚಹಸಿರಿನ ವಾತಾವರಣ, ಚಿಟಪಟ ಮಳೆ, ಚುಮುಚುಮು ಚಳಿ ಇವೆಲ್ಲವೂ ಮನಸ್ಸಿಗೆ ಹಿತ ನೀಡಿ ನಿಮ್ಮ ಒತ್ತಡವನ್ನೆಲ್ಲಾ ಹೋಗಲಾಡಿಸುದೆ. ಹಾಗಿದ್ರೆ ಮಳೆಗಾಲದಲ್ಲಿ ಕರ್ನಾಟಕದ ಯಾವೆಲ್ಲಾ ತಾಣಗಳಿಗೆ ಪ್ರವಾಸ ಹೋದ್ರೆ ಬೆಸ್ಟ್‌ ಎನ್ನುವುದನ್ನು ನೋಡೋಣ ಬನ್ನಿ,

ಮಳೆಗಾಲದಲ್ಲಿ ಭೇಟಿ ನೀಡಲೇಬೇಕಾದ ಕರ್ನಾಟಕದ ಅತ್ಯದ್ಭುತ ತಾಣಗಳು:

ಕೊಡಗು: ಮಳೆಗಾಲದಲ್ಲಿ ಕೂರ್ಗ್‌ನ ಪ್ರಕೃತಿ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಮಂಜಿನಿಂದ ಆವರಿಸಿದ ಕಾಫಿ ತೋಟಗಳು, ಹಾಲಿನ ನೊರೆಯಂತೆ ಧುಮ್ಮಿಕ್ಕಿ ಹರಿಯುವ ಜಲಪಾತ, ತಂಪಾದ ವಾತಾವರಣ ಇವೆಲ್ಲವೂ ಮನಸ್ಸಿಗೆ ಮುದ ನೀಡುತ್ತದೆ. ಈ ಬಾರಿ ಮೂನ್ಸೂನ್‌ ಟ್ರಿಪ್‌ ಹೋಗೋ ಪ್ಲಾನ್‌ ಇದ್ರೆ ಕೂರ್ಗ್‌ಗೆ ಒಮ್ಮೆ ಭೇಟಿ ನೀಡಿ. ಇಲ್ಲಿ ನೀವು ಅಬ್ಬೆ ಜಲಪಾತ, ಇರ್ಪು ಜಲಪಾತ, ರಾಜಾಸೀಟ್, ಕಾಫಿ ತೋಟಗಳು ಇತ್ಯಾದಿ ಸುಂದರ ತಾಣಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

ಸಕಲೇಶಪುರ: ನಮ್ಮ ಕರ್ನಾಟಕದ ಅತ್ಯದ್ಭುತ ಗಿರಿಧಾಮಗಳಲ್ಲಿ ಸಕಲೇಶಪುರ ಕೂಡ ಒಂದು. ಮಳೆಗಾಲದಲ್ಲಿ ಭೇಟಿ ನೀಡಲು ಹೇಳಿ ಮಾಡಿಸಿದಂತಹ ಸ್ಥಳ ಇದಾಗಿದೆ. ಕೋಟೆಗಳು, ಚಹಾ, ಕಾಫಿ ಮತ್ತು ಮಸಾಲೆಗಳ ವಿಶಾಲ ತೋಟ, ಹಚ್ಚಹಸಿರಿನ ವಾತಾವರಣ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುವುದು ನಿಜ. ಇಲ್ಲಿ ನೀವು ಮಂಜರಾಬಾದ್‌, ಬಿಸ್ಲೆ ವ್ಯೂ ಪಾಯಿಂಟ್‌, ಮಂಜೇಹಳ್ಳಿ ಜಲಪಾತ, ಹಡ್ಲು ಜಲಪಾತ, ಬಿಸ್ಲೆ ರಿಸರ್ವ್ ಫಾರೆಸ್ಟ್, ಮಗಜಹಳ್ಳಿ ಜಲಪಾತ, ಬೆಟ್ಟ ಬೈರವೇಶ್ವರ ದೇವಸ್ಥಾನ, ಹಳೆಬೀಡು ಬೇಲೂರು ದೇವಸ್ಥಾನಗಳಿಗೆ ಭೇಟಿ ನೀಡಬಹುದು.

ಚಿಕ್ಕಮಗಳೂರು: ಮುನ್ನಾರ್‌, ವಯನಾಡ್‌ ಅಂತೆಲ್ಲಾ ಬೇರೆ ರಾಜ್ಯಗಳ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಬದಲು ನಮ್ಮ ಕರ್ನಾಟಕದಲ್ಲೇ ಇರುವ ಅತೀ ಸುಂದರವಾದ ಪ್ರವಾಸಿ ತಾಣಗಳಿರುವ ಚಿಕ್ಕಮಗಳೂರಿಗೆ ಮಳೆಗಾಲದಲ್ಲಿ ಭೇಟಿ ನೀಡಿ. ಕಾಫಿ ಮತ್ತು ಚಹಾ ತೋಟದ ಸೌಂದರ್ಯದ ಜೊತೆಗೆ ಹಚ್ಚ ಹಸಿರಿನ ಹೊದಿಕೆಯಂತೆ ಕಾಣುವ ಪಶ್ಚಿಮ ಘಟ್ಟಗಳ ಸೌಂದರ್ಯವನ್ನೂ ಸವಿಯಬಹುದು. ಇಲ್ಲಿ ನೀವು ಮುಳ್ಳಯ್ಯನಗಿರಿ, ಹೆಬ್ಬೆ ಜಲಪಾತ, ಬಾಬಾ ಬುಡನಗಿರಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ರಾಣಿ ಝರಿ, ಹಿರೇಕೊಳಲೆ ಕೆರೆ, ಸಂಸೆ, ಕಳಸ ಇತ್ಯಾದಿ ಸುಂದರ ತಾಣಗಳಿಗೆ ಭೇಟಿ ನೀಡಬಹುದು.

ಇದನ್ನೂ ಓದಿ: ಮಳೆಗಾಲದಲ್ಲಿ ಸ್ಥಳಗಳಿಗೆ ಪ್ರವಾಸ ಹೋಗೋದನ್ನು ಸಾಧ್ಯವಾದಷ್ಟು ತಪ್ಪಿಸಿ

ಆಗುಂಬೆ: ಪಶ್ಚಿಮ ಘಟ್ಟಗಳಲ್ಲಿ ನೆಲೆಯಾಗಿರುವ ದಕ್ಷಿಣದ ಚಿರಾಪುಂಜಿ ಎಂದೇ ಪ್ರಸಿದ್ಧವಾಗಿರುವ ಆಗುಂಬೆಗೆ ಮಳೆಗಾಲದಲ್ಲಿ ಭೇಟಿ ನೀಡಲೇಬೇಕಾದ ಅತ್ಯದ್ಭುತ ಸ್ಥಳವಾಗಿದೆ. ಇಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಣೆಗಳಿದ್ದು,  ಸನ್ಸೆಟ್ ವ್ಯೂ ಪಾಯಿಂಟ್, ಕೂಡ್ಲೂ ತೀರ್ಥ ಜಲಪಾತ, ಬರ್ಕಾಣ ಜಲಪಾತ, ಆಗುಂಬೆ ಘಾಟ್‌, ಕವಲೇದುರ್ಗ ಕೋಟೆ, ಕುಂದಾದ್ರಿ ಬೆಟ್ಟ, ಕೊಡಚಾದ್ರಿ ಇತ್ಯಾದಿ ತಾಣಗಳಿಗೆ ಭೇಟಿ ನೀಡಬಹುದು.

ಇದಲ್ಲದೆ ಕೆಮ್ಮಣ್ಣು ಗುಂಡಿ, ಜೋಗ ಜಲಪಾತ, ಶಿವನಸಮುದ್ರ ಮತ್ತು ಭರಚುಕ್ಕಿ ಜಲಪಾತ, ಕಬಿನಿ ಮತ್ತು ನಾಗರಹೊಳೆ, ಹಂಪಿ, ಶ್ರೀರಂಗಪಟ್ಟಣ, ನಂದಿ ಬೆಟ್ಟ, ಸ್ಕಂದಗಿರಿ ಇತ್ಯಾದಿ ಸುಂದರ ತಾಣಗಳಿಗೂ ಭೇಟಿ ನೀಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ದುರ್ಬಲವಾದ ನೈಋತ್ಯ ಮುಂಗಾರು; 12 ಜಿಲ್ಲೆಗಳಿಂದ ಮಳೆ ದೂರ! – Kannada News | Karnataka Weather Forecast: Weak Monsoon Leaves 12 Districts Dry; Moderate Rain Predicted for Coastal and Malnad Regions

ಬೆಂಗಳೂರು, ಜುಲೈ 13: ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗದಲ್ಲಿ ನೈಋತ್ಯ ಮುಂಗಾರು ದುರ್ಬಲವಾಗಿದ್ದು, ವರುಣಾರ್ಭಟ ತೀರಾ ಇಳಿಮುಖವಾಗಿದೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಉಷ್ಣತೆ ಪ್ರಮಾಣವೂ ಹೆಚ್ಚತೊಡಗಿದೆ. ಹೀಗಿದ್ದರೂ ನಾಳೆ (ಜುಲೈ 14) ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ 30–40 ಕಿ.ಮೀ ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹಾಗೆಯೇ, ಉತ್ತರ ಒಳನಾಡು ಕರ್ನಾಟಕದ ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳ ಒಂದೆರಡು ಕಡೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದ್ದರೆ ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ ಕೆಲವೆಡೆಯೂ ವರ್ಷಧಾರೆಯ ಸಾಧ್ಯತೆ ಇದೆ ಎನ್ನಲಾಗಿದೆ.  ಬಾಗಲಕೋಟೆ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಒಂದೆರಡು ಕಡೆ ಡೆ 30–40 ಕಿ.ಮೀ ವೇಗದ ಬಲವಾದ ಗಾಳಿ ಬೀಸುವ ಸಾಧ್ಯತೆ ಬಗ್ಗೆ ಇಲಾಖೆ ಎಚ್ಚರಿಸಿದೆ.

ಇದನ್ನೂ ಓದಿ:  ಕರ್ನಾಟಕದ ಈ ಜಿಲ್ಲೆಗಳಲ್ಲಿ 5 ದಿನ ಮಳೆ ಮುನ್ಸೂಚನೆ, ಬಿರುಗಾಳಿ ಸಾಧ್ಯತೆ; ಐಎಂಡಿ ಎಚ್ಚರಿಕೆ

12 ಜಿಲ್ಲೆಗಳಿಂದ ಮಳೆ ದೂರ

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಐಕಳದಲ್ಲಿ ನಿನ್ನೆ ರಾಜ್ಯದಲ್ಲೇ ಅತಿ ಹೆಚ್ಚು, ಅಂದರೆ 26.5 ಮಿ.ಮೀ. ಮಳೆಯಾಗಿದೆ. ಉಳಿದಂತೆ ಕೊಡಗಿನ ಪೊನ್ನಂಪೇಟೆಯ ಮಾಯಮುಡಿಯಲ್ಲಿ 11 ಮಿ.ಮೀ ಮತ್ತು ದಾವಣಗೆರೆಯ ಹೊನ್ನಾಳಿಯ ಹತ್ತೂರಿನಲ್ಲಿ 10.5 ಮಿ.ಮೀ. ವರ್ಷಧಾರೆಯಾಗಿದೆ. ಬಾಗಲಕೋಟೆ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ವಿಜಯನಗರ, ಗದಗ, ಬೆಂಗಳೂರು ನಗರ, ರಾಮನಗರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಮಳೆಯೇ ಆಗಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version