ಸತತ ಸೋಲಿನಿಂದ ಕಂಗೆಟ್ಟ ಪೂಜಾ ಹೆಗ್ಡೆಗೆ ಬಾಲಿವುಡ್​​ನಲ್ಲಿ ಮೂಡಿದೆ ಆಶಾಕಿರಣ

ದಕ್ಷಿಣ ಭಾರತ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಲಕ್ಕಿ ಸುಂದರಿ ಎಂದೇ ಹೆಸರಾಗಿದ್ದ ಕರಾವಳಿ ಸುಂದರಿ ಪೂಜಾ ಹೆಗ್ಡೆ ಅವರ ಸುವರ್ಣ ಯುಗಕ್ಕೆ ಸದ್ಯ ಗ್ರಹಣ ಹಿಡಿದಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ನಟಿಯ ಸಿನಿಮಾಗಳು ದಕ್ಷಿಣ ಹಾಗೂ ಬಾಲಿವುಡ್ (Bollywood) ಎರಡೂ ಕಡೆ ಬ್ಯಾಕ್-ಟು-ಬ್ಯಾಕ್ ಸೋಲನ್ನು ಕಾಣುತ್ತಿವೆ. ದೊಡ್ಡ ದೊಡ್ಡ ಸೂಪರ್‌ಸ್ಟಾರ್‌ಗಳ ಜೊತೆ ಬಣ್ಣ ಹಚ್ಚಿದರೂ ಬಾಕ್ಸ್ ಆಫೀಸ್‌ನಲ್ಲಿ ಗೆಲುವು ಮಾತ್ರ ಪೂಜಾ ಅವರಿಗೆ ಮರೀಚಿಕೆಯಾಗಿದೆ. ಹಿಂದಿ ಸಿನಿಮಾ ಮೂಲಕ ಅವರು ಗೆಲುವಿನ ಭರವಸೆಯಲ್ಲಿದ್ದಾರೆ.

2021ರ ‘ಮೋಸ್ಟ್ ಎಲಿಜಬೆಲ್ ಬ್ಯಾಚುಲರ್’ ಸಿನಿಮಾದಿಂದ ಪೂಜಾ ಸೋಲು ಶುರುವಾಯಿತು. ನಂತರ ‘ರಾಧೆ ಶ್ಯಾಮ್’, ಆಚಾರ್ಯ, ಬೀಸ್ಟ್ , ಕಿಸಿ ಕಾ ಭಾಯ್ ಕಿಸಿ ಕಿ ಜಾನ್, ಸರ್ಕಸ್, ‘ದೇವ’, ‘ರೆಟ್ರೋ’ ಸಿನಿಮಾಗಳು ಸೋತವು. ‘ಜನ ನಾಯಗನ್’ ರಿಲೀಸ್ ಇನ್ನೂ ಸಂಕಷ್ಟದಲ್ಲಿದೆ. ಹೀಗಾಗಿ ಪೂಜಾ ಹೆಗ್ಡೆ ಮುಟ್ಟಿದ್ದೆಲ್ಲ ಚಿನ್ನ ಆಗೋ ಕಾಲ ಹೋಗಿದೆ.

ಸತತ ಸೋಲುಗಳಿಂದ ಕಳೆಗುಂದಿರುವ ಪೂಜಾ ಹೆಗ್ಡೆ ಅವರ ಕರಿಯರ್‌ಗೆ ಈಗ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾ ಒಂದು ಪ್ರಮುಖ ಆಶಾಕಿರಣವಾಗಿ ಮೂಡಿಬಂದಿದೆ. ಈ ಚಿತ್ರದ ಮೂಲಕ ಅವರು ತಮ್ಮ ಫ್ಲಾಪ್‌ಗಳ ಸರಣಿಗೆ ಬ್ರೇಕ್ ಹಾಕಲು ಭರ್ಜರಿ ತಯಾರಿ ನಡೆಸಿದ್ದಾರೆ.

ಇದನ್ನೂ ಓದಿ: ಚಿತ್ರರಂಗದಿಂದ ದೂರ ಸರಿಯುತ್ತಿದ್ದಾರೆ ಕರಣ್; ಬಾಲಿವುಡ್ ಪ್ರಮುಖರ ಜೊತೆ ಅಂತರ

ಡೇವಿಡ್ ಧವನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ವರುಣ್ ಧವನ್ ನಾಯಕರಾಗಿರುವ ಈ ಎಂಟರ್‌ಟೈನರ್ ಸಿನಿಮಾ, ನಟಿಯ ಕೆರಿಯರ್‌ಗೆ ಹೊಸ ತಿರುವು ನೀಡುವ ನಿರೀಕ್ಷೆ ಇದೆ. ಪೂಜಾ ಹೆಗ್ಡೆ ಕೂಡ ಈ ಪ್ರಾಜೆಕ್ಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, ತಮ್ಮ ಕಳೆದುಹೋದ ‘ಲಕ್ಕಿ ಹೀರೋಯಿನ್’ ಪಟ್ಟವನ್ನು ಮರಳಿ ಪಡೆಯಲು ಎದುರು ನೋಡುತ್ತಿದ್ದಾರೆ. ಈ ಚಿತ್ರ ಜೂನ್ 5ರಂದು ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಕಳ್ಳ ಅನ್ಕೊಂಡ್ರಾ, ಮೆಡಿಕಲ್ ಶಾಪ್ ಕ್ಲೋಸ್ ಆಗುವ ವೇಳೆ ಒಳಗೆ ನುಗ್ಗಿದ ವ್ಯಕ್ತಿ

ವಿಯೆಟ್ನಾಂ, ಮೇ 29: ವಿಯೆಟ್ನಾಂನಲ್ಲಿ ತಡರಾತ್ರಿ ಮೆಡಿಕಲ್ ಶಾಪ್ ಒಂದನ್ನು ಮುಚ್ಚುವ ಸಮಯದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಅಂಗಡಿಯ ಅರ್ಧ ಮುಚ್ಚಿದ್ದ ಶಟರ್ ಒಳಗೆ ವ್ಯಕ್ತಿಯೊಬ್ಬ ಓಡಿ ಬಂದಿರುವ ವಿಡಿಯೋ ವೈರಲ್ ಆಗಿದೆ. ಮೆಡಿಕಲ್ ಶಾಪ್​ನಲ್ಲಿದ್ದ ಇಬ್ಬರು ಮಹಿಳೆಯರು ಮೊದಲು ಆತ ಕಳ್ಳನೆಂದು ಭಾವಿಸಿದ್ದರು. ಆದರೆ ಅವರಿಗೆ ಬೇಕಾದ ವಸ್ತುವನ್ನು ಕೊಂಡು ಹಣ ಕೊಟ್ಟಿದ್ದನ್ನು ನೋಡಿ ನಿರಾಳರಾಗಿದ್ದಾರೆ. ಮನೆಯಲ್ಲಿದ್ದ ಆತನ ಪತ್ನಿ ಕೆಲವು ವಸ್ತುಗಳನ್ನು ತರಲು ಮೆಡಿಕಲ್ ಶಾಪ್‌ಗೆ ಕಳುಹಿಸಿದ್ದರು. ಒಂದು ವೇಳೆ ಅಂಗಡಿ ಮುಚ್ಚಿ, ಆತ ಬರಿಗೈಲಿ ಮನೆಗೆ ಮರಳಿದರೆ ಪತ್ನಿ ಬೆಳಗ್ಗಿನವರೆಗೆ ಬೈದು ರಗಳೆ ಮಾಡುತ್ತಿದ್ದಳಂತೆ. ಹೆಂಡತಿಯ ಬೈಗುಳದಿಂದ ತಪ್ಪಿಸಿಕೊಳ್ಳಲು ಆತ ಮುಚ್ಚುತ್ತಿದ್ದ ಅಂಗಡಿಯೊಳಗೆ ಆ ಸಾಹಸ ಮಾಡಿ ನುಗ್ಗಿದ್ದ. ಈ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಕೂಡ ನಗೆ ಚಟಾಕಿ ಹಾರಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗುಪ್ತವಾಗಿ ಬಂದು ಧ್ಯಾನ ಮಾಡಿದ್ದ ಡಿಕೆ ಶಿವಕುಮಾರ್​ಗೆ 40 ದಿನದಲ್ಲೇ ಸಿಕ್ಕಿತು ಸಿಎಂ ಕುರ್ಚಿ; ಇದು ಗದಗದ ಪುಣ್ಯಕ್ಷೇತ್ರದ ಪವಾಡ

ಡಿ.ಕೆ. ಶಿವಕುಮಾರ್, ಮುಕ್ತಿಮಂದಿರ ಲಕ್ಷ್ಮೇಶ್ವರImage Credit source: Tv9 kannada

ಲಕ್ಷ್ಮೇಶ್ವರ, ಮೇ.29: ಗದಗದ “ಈ ಜಾಗಕ್ಕೆ ಇರುವ ಶಕ್ತಿ ಮತ್ತು ಮಹಿಮೆಯ ಬಗ್ಗೆ ನಾನು ನಿಮಗೆ ಬಿಡಿಸಿ ಹೇಳಲ್ಲ…” ಎಂದು ಈ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದ ಮಾತುಗಳು ಈಗ ಅಕ್ಷರಶಃ ನಿಜವಾಗಿವೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಐತಿಹಾಸಿಕ ಪುಣ್ಯಕ್ಷೇತ್ರ ‘ಮುಕ್ತಿಮಂದಿರ’ಕ್ಕೆ ಭೇಟಿ ನೀಡಿ ವಿಶೇಷ ಸಂಕಲ್ಪ ಮಾಡಿದ ಕೇವಲ 40 ದಿನಗಳ ಒಳಗಾಗಿಯೇ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯದ ಮುಖ್ಯಮಂತ್ರಿ ಪಟ್ಟ ಒಲಿದು ಬಂದಿರುವುದು ಈಗ ಇಡೀ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಕಳೆದ ಏಪ್ರಿಲ್ 19 ರಂದು ಡಿ.ಕೆ. ಶಿವಕುಮಾರ್ ಅವರು ತಮಗೆ ಅತ್ಯಂತ ಆಪ್ತರು ಹಾಗೂ ಸ್ವಂತ ಪಕ್ಷದ ನಾಯಕರಿಗೂ ಯಾವುದೇ ಮಾಹಿತಿ ನೀಡದೆ ಮುಕ್ತಿಮಂದಿರಕ್ಕೆ ಅತ್ಯಂತ ರಹಸ್ಯವಾಗಿ ಆಗಮಿಸಿದ್ದರು. ಕೇವಲ ಪೊಲೀಸ್ ಸೆಕ್ಯೂರಿಟಿ (ಭದ್ರತೆ) ನಡುವೆ ಕ್ಷೇತ್ರಕ್ಕೆ ಬಂದಿದ್ದ ಅವರು, ಮುಕ್ತಿಮಂದಿರದ ಲಿಂಗೈಕ್ಯ ವೀರ ಗಂಗಾಧರ ಮಹಾಸ್ವಾಮಿಗಳ ಪವಿತ್ರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಶ್ರದ್ಧಾಭಕ್ತಿಯಿಂದ ಸಂಕಲ್ಪ ಮಾಡಿದ್ದರು.

ಮಾಧ್ಯಮಗಳನ್ನ ಹೊರಗಿಟ್ಟು ಗರ್ಭಗುಡಿಯಲ್ಲಿ ಜಪ, ತಪ

ಈ ರಹಸ್ಯ ಪೂಜೆಯ ವೇಳೆ ಗರ್ಭಗುಡಿಯೊಳಗೆ ಮಾಧ್ಯಮದವರು ಹಾಗೂ ಸ್ಥಳೀಯ ಮುಖಂಡರಿಗೆ ಪ್ರವೇಶ ನಿರಾಕರಿಸಿ ಹೊರಗಿಡಲಾಗಿತ್ತು. ಗರ್ಭಗುಡಿಯೊಳಗೆ ಕೇವಲ ಮುಕ್ತಿಮಂದಿರದ ಪೀಠಾಧಿಪತಿಗಳಾದ ಶ್ರೀ ವಿಮಲರೇಣುಕಾ ವೀರಮುಕ್ತಿ ಮುನಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಪ್ರಧಾನ ಅರ್ಚಕರಿಗೆ ಮಾತ್ರ ಪ್ರವೇಶವಿತ್ತು. ವೀರಗಂಗಾಧರ ಶ್ರೀಗಳ ಗದ್ದುಗೆ ಮುಂದೆ ಸುದೀರ್ಘ ಸಮಯ ಕುಳಿತುಕೊಂಡಿದ್ದ ಡಿಕೆಶಿ, ಕಣ್ಣು ಮುಚ್ಚಿ ಏಕಾಗ್ರತೆಯಿಂದ ಭಕ್ತಿಯ ಧ್ಯಾನ, ಜಪ ಮತ್ತು ತಪಗಳನ್ನು ಮಾಡಿದ್ದರು.

ಇದನ್ನೂ ಓದಿ: ಡಿಕೆ ಶಿವಕುಮಾರ್​​ಗೆ ಸದ್ಯದಲ್ಲೇ ಸಾಡೇ ಸಾತಿ ಶನಿ ಕಾಟ! ಮಾತಾಡಿದ್ರೆ ಪಟ್ಟ ಕೈ ತಪ್ಪುವ ಸಾಧ್ಯತೆ, ಅಜ್ಜಯ್ಯ ಭವಿಷ್ಯ

ಕ್ಷೇತ್ರದ ಮಹಿಮೆಗೆ ರಾಜಕೀಯ ವಲಯ ಅಚ್ಚರಿ!

ಅಂದು ಡಿಕೆಶಿ ಅವರು ಶ್ರೀಗಳ ಸನ್ನಿಧಿಯಲ್ಲಿ ರಾಜ್ಯದ ಅತ್ಯುನ್ನತ ರಾಜಕೀಯ ಅಧಿಕಾರ ಪ್ರಾಪ್ತಿಗಾಗಿ ವಿಶೇಷ ಸಂಕಲ್ಪ ಮಾಡಿದ್ದರು ಎನ್ನಲಾಗಿದ್ದು, ಅದಾಗಿ ಸರಿಯಾಗಿ 40 ದಿನಗಳು ಕಳೆಯುವಷ್ಟರಲ್ಲೇ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆಯಾಗಿ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿದು ಬಂದಿದೆ. ಈ ಮೂಲಕ ಮುಕ್ತಿಮಂದಿರ ಕ್ಷೇತ್ರದ ಅದ್ಭುತ ಆಧ್ಯಾತ್ಮಿಕ ಶಕ್ತಿ ಮತ್ತು ಲಿಂಗೈಕ್ಯ ಶ್ರೀಗಳ ಆಶೀರ್ವಾದದ ಪವಾಡ ಈಗ ಮತ್ತೊಮ್ಮೆ ಸಾಬೀತಾದಂತಾಗಿದ್ದು, ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಈ ಸುದ್ದಿ ಭಾರಿ ವೈರಲ್ ಆಗುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ಗೆಹ್ಲೋಟ್

ಬೆಂಗಳೂರು, ಮೇ 29: ಕರ್ನಾಟಕದ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಸಿಎಂ ಸ್ಥಾನದ ಬದಲಾವಣೆಯ ಪ್ರಕ್ರಿಯೆ ಅಂತಿಮ ಘಟ್ಟ ತಲುಪಿದೆ. ನಿನ್ನೆ (ಮೇ 28) ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ಇದೀಗ ಸಿದ್ದರಾಮಯ್ಯ ಸಲ್ಲಿಸಿದ್ದ ರಾಜೀನಾಮೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಧಿಕೃತವಾಗಿ ಅಂಗೀಕರಿಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯ ಅವರು ನಿನ್ನೆ ಬೆಳಗ್ಗೆ ಸಚಿವ ಸಂಪುಟ ಸಹೋದ್ಯೋಗಿಗಳೊಂದಿಗೆ ಉಪಹಾರ ಕೂಟ ನಡೆಸಿ ತಮ್ಮ ನಿರ್ಧಾರ ಪ್ರಕಟಿಸಿದ್ದರು. ತದನಂತರ ಲೋಕಭವನಕ್ಕೆ ತೆರಳಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಅವರಿಗೆ ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದರು. ರಾಜ್ಯಪಾಲ ಗೆಹ್ಲೋಟ್ ಅವರು ತಮ್ಮ ವಿಶೇಷ ವಿವೇಚನಾಧಿಕಾರವನ್ನು ಬಳಸಿ ಈ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

DK Shivakumar Oath Taking Date: ಡಿಕೆ ಶಿವಕುಮಾರ್ ಪ್ರಮಾಣವಚನ ಯಾವಾಗ, ಎಲ್ಲಿ? ಇಂದೇ ಫೈನಲ್ ಆಗಲಿದೆ ದಿನಾಂಕ

ಬೆಂಗಳೂರು, ಮೇ 29: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ನೀಡಿರುವ ರಾಜೀನಾಮೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶುಕ್ರವಾರ ಬೆಳಗ್ಗೆ ಅಂಗೀಕರಿಸಿದ್ದಾರೆ. ಇದರೊಂದಿಗೆ ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ಬಹುತೇಕ ಕೊನೆಯ ಹಂತಕ್ಕೆ ಬಂದಂತಾಗಿದೆ. ನೂತನ ಮುಖ್ಯಮಂತ್ರಿ ಯಾರು ಎಂಬುದನ್ನು ಪಕ್ಷವು ಅಧಿಕೃತವಾಗಿ ಘೋಷಣೆ ಮಾಡದಿದ್ದರೂ ಗುರುವಾರದ ಉಪಹಾರ ಸಭೆಯಲ್ಲಿ, ಡಿಕೆ ಶಿವಕುಮಾರ್ (DK Shivakumar) ಮುಂದಿನ ಸಿಎಂ ಆಗಲಿದ್ದಾರೆ ಎಂಬುದಾಗಿ ಸಿದ್ದರಾಮಯ್ಯ ಸಚಿವರಿಗೆ ತಿಳಿಸಿದ್ದಾರೆ ಎಂಬ ಮಾಹಿತಿ ಇದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರೂ ಸದ್ಯ ದೆಹಲಿಯಲ್ಲಿದ್ದು, ನೂತನ ಮುಖ್ಯಮಂತ್ರಿಯ ಪ್ರಮಾಣವಚನ, ಸಂಪುಟ ರಚನೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಲಿದ್ದಾರೆ.

ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಯಾವಾಗ?

ಹೊಸ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಮತ್ತು ನೂತನ ಸಚಿವ ಸಂಪುಟದ ಪ್ರಮಾಣವಚನ ಯಾವಾಗ ಎಂಬುದು ಅಧಿಕೃತವಾಗಿ ಇನ್ನೂ ಘೋಷಣೆಯಾಗಿಲ್ಲ. ಆದಾಗ್ಯೂ, ಪ್ರತಿಜ್ಞಾವಿಧಿ ಸ್ವೀಕಾರಕ್ಕೆ ಡಿಕೆ ಶಿವಕುಮಾರ್ ಉತ್ತಮ ಮೂರ್ತದ ಹುಡುಕಾಟದಲ್ಲಿದ್ದಾರೆ ಎಂಬುದು ತಿಳಿದು ಬಂದಿದೆ. ಅವರು ಈಗಾಗಲೇ ಜ್ಯೋತಿಷಿ ದ್ವಾರಕಾನಾಥ್ ಜೊತೆ ಮಾತನಾಡಿ ಮಹೂರ್ತದ ಬಗ್ಗೆ ಚರ್ಚಿಸಿದ್ದಾರೆ. ಮೂರು ಮೂಹೂರ್ತಗಳನ್ನು ಸೂಚಿಸುವಂತೆ ಮನವಿ ಮಾಡಿದ್ದಾರೆ. ಎಐಸಿಸಿಯ ಪ್ರಮುಖ ನಾಯಕರು, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಲಭ್ಯತೆ ನೋಡಿಕೊಂಡು ಪ್ರಮಾಣವಚನಕ್ಕೆ ದಿನಾಂಕ ನಿಗದಿಯಾಗಲಿದೆ.

ಮತ್ತೊಂದೆಡೆ, ಸೋಮವಾರವೇ ಸಂಜೆ ಗೋಧೂಳಿ ಮುಹೂರ್ತದಲ್ಲಿ ಡಿಕೆ ಶಿವಕುಮಾರ್ ನೇತೃತ್ವದ ಸಂಪುಟ ಪ್ರತಿಜ್ಞಾವಿಧಿ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಕೆಲವು ಮೂಲಗಳು ತಿಳಿಸಿವೆ.

ಡಿಕೆ ಶಿವಕುಮಾರ್ ಪ್ರಮಾಣ ವಚನ ಎಲ್ಲಿ?

ದೆಹಲಿಯಲ್ಲಿ ಹೈಕಮಾಂಡ್ ಜೊತೆ ನಡೆಯುವ ಸಭೆಯಲ್ಲಿ ನೂತನ ಸಂಪುಟ ಹಾಗೂ ಸಚಿವರ ವಿವರ ಅಂತಿಮಗೊಂಡ ಬಳಿಕ ಪ್ರಮಾಣವಚನ ಸ್ವೀಕಾರ ಸಮಾರಂಭದ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸುವ ನಿರೀಕ್ಷೆ ಇದೆ. ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಎಲ್ಲಿ ನಡೆಯಲಿದೆ ಎಂಬುದನ್ನು ಪಕ್ಷ ಇನ್ನಷ್ಟೇ ಘೋಷಿಸಬೇಕಿದೆ.

ಪ್ರಮಾಣವಚನ ಸ್ವೀಕಾರಕ್ಕೆ ಅತಿಥಿಗಳು ಯಾರೆಲ್ಲ?

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಹಾಗೂ ಕಾಂಗ್ರೆಸ್ನ ಪ್ರಮುಖ ರಾಜ್ಯ ನಾಯಕರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ: ಪ್ರಮಾಣವಚಕ್ಕೆ ಸಿದ್ಧತೆ: ಜ್ಯೋತಿಷಿ ಬಳಿ ಮುಹೂರ್ತ ಕೇಳಿದ ಡಿಕೆ ಶಿವಕುಮಾರ್

ಒಟ್ಟಿನಲ್ಲಿ, ದೆಹಲಿಯಲ್ಲಿ ಇಂದು ನಡೆಯಲಿರುವ ಉನ್ನತ ಮಟ್ಟದ ಸಭೆಯ ಬಳಿಕ ಈ ಎಲ್ಲ ವಿಚಾರಗಳು ಅಂತಿಮಗೊಳ್ಳಲಿವೆ ಎಂದು ನಿರೀಕ್ಷಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಚಾರ್ಲಿ ಸಿನಿಮಾ ನನಗೆ ತುಂಬಾ ಇಷ್ಟ’; ಮನಬಿಚ್ಚಿ ಮಾತನಾಡಿದ ಪಾರ್ವತಿ

ನಟಿ ಪಾರ್ವತಿ ಅವರು ಇಂಟರ್ವ್ಯೂ ಒಂದರಲ್ಲಿ ಮಾತನಾಡುತ್ತಾ, ತಮ್ಮ ಸಿನಿಮಾಗಳಲ್ಲೇ ತಮಗೆ ಅತ್ಯಂತ ಹತ್ತಿರವಾದ ಕ್ಯಾರೆಕ್ಟರ್ ಎಂದರೆ ಅದು ‘ಚಾರ್ಲಿ’ ಚಿತ್ರದ ಟೆಸ್ಸಾ ಎಂದು ಹೇಳಿದ್ದಾರೆ. ‘ಒಂದು ವಾರದ ಮಟ್ಟಿಗೆ ನಿಮ್ಮ ಸಿನಿಮಾದ ಯಾವ ಪಾತ್ರದ ಬಟ್ಟೆಗಳ ಜೊತೆ ನೀವು ಅದಲು-ಬದಲು ಮಾಡಿಕೊಳ್ಳಲು ಇಷ್ಟಪಡುತ್ತೀರಿ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಕ್ಷಣವೇ ಟೆಸ್ಸಾ ಹೆಸರನ್ನು ತೆಗೆದುಕೊಂಡಿದ್ದಾರೆ. ಈ ಪಾತ್ರವು ತಮ್ಮದೇ ಆದ ಸ್ವಂತ ಸ್ಟೈಲ್ ಅನ್ನು ಕದ್ದಂತಿದೆ ಎಂದು ಅವರು ತಮಾಷೆಯಾಗಿ ಅಭಿಪ್ರಾಯಪಟ್ಟಿದ್ದಾರೆ.

ಈ ಪಾತ್ರದ ಮೇಲಿನ ಪ್ರೀತಿಯಿಂದಾಗಿ ಆ ಪಾತ್ರದ ವಾರ್ಡ್‌ರೋಬ್ ಅನ್ನು ತೆಗೆದುಕೊಳ್ಳಲು ಬಯಸುವುದಾಗಿ ತಿಳಿಸಿದ್ದಾರೆ. ಟೆಸ್ಸಾ ಪಾತ್ರವು ತಮ್ಮದೇ ಆಲೋಚನೆಗಳು, ಕನ್ನಡಕದ ಶೈಲಿಯನ್ನು ಹೋಲುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲದೆ, ಈ ಸಿನಿಮಾದ ಪಾತ್ರವೇ ತಮಗೆ ಮೂಗುತಿ ಧರಿಸುವ ಹೊಸ ಶೈಲಿಯನ್ನು ನೀಡಿತು ಎಂದು ನೆನಪಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಶ್ವ ದಾಖಲೆ… ಪೊಲಾರ್ಡ್​ಗೆ​ 652 ಇನಿಂಗ್ಸ್, ವೈಭವ್​ಗೆ ಜಸ್ಟ್​ 33 ಇನಿಂಗ್ಸ್​!

Source link

ನೀಟ್-ಯುಜಿ ಮರುಪರೀಕ್ಷೆ: ಪ್ರಶ್ನೆಪತ್ರಿಕೆಗಳ ಸುರಕ್ಷಿತ ಸಾಗಣೆಗೆ ಭಾರತೀಯ ವಾಯುಪಡೆ ಬಳಕೆ

ನವದೆಹಲಿ, ಮೇ 29: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ಬಳಿಕ, ಕೇಂದ್ರ ಸರ್ಕಾರ ಜೂನ್ 21 ರಂದು ನಡೆಯಲಿರುವ ಮರುಪರೀಕ್ಷೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಮತ್ತು ಸುರಕ್ಷಿತವಾಗಿ ನಡೆಸಲು ಸಾರಥ್ಯ ವಹಿಸಿದೆ. ಈ ಬಾರಿ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ಪ್ರಶ್ನೆಪತ್ರಿಕೆಗಳನ್ನು ಸುರಕ್ಷಿತವಾಗಿ ಸಾಗಿಸಲು ಭಾರತೀಯ ವಾಯುಪಡೆಯನ್ನು (IAF) ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಸಭೆಯಲ್ಲಿ ಮಹತ್ವದ ತೀರ್ಮಾನ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನಿವಾಸದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು. ವಾಯುಪಡೆ ಮತ್ತು ಸೇನೆಯ ನೆರವು: ಬಿಗಿಯಾದ ಸಮಯದ ಮಿತಿ ಮತ್ತು ಹವಾಮಾನ ವೈಪರೀತ್ಯದ ಸವಾಲುಗಳನ್ನು ಎದುರಿಸಲು ಅಂಚೆ ಸೇವೆಗಳ ಜೊತೆಗೆ ವಾಯುಪಡೆಯ ವಿಮಾನಗಳನ್ನು ಬಳಸಲಾಗುತ್ತದೆ. ಅಷ್ಟೇ ಅಲ್ಲದೆ, ಕೇವಲ ಸಾಗಣೆಯ ಸುರಕ್ಷತೆಗಾಗಿ ಭಾರತೀಯ ಭೂಸೇನೆಯ (Army) ಲಾಜಿಸ್ಟಿಕ್ಸ್ ನೆರವನ್ನು ಪಡೆಯುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ.

ಲೀಕ್-ಪ್ರೂಫ್ ವ್ಯವಸ್ಥೆ: ಮರುಪರೀಕ್ಷೆಯ ಪ್ರಕ್ರಿಯೆಯು ಸಂಪೂರ್ಣವಾಗಿ ಸೋರಿಕೆ ಮುಕ್ತವಾಗಿರಲು ದೇಶದ ಪ್ರಮುಖ ಭದ್ರತಾ ಸಂಸ್ಥೆಗಳನ್ನು ಈ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಾಗಿದೆ.

ಮತ್ತಷ್ಟು ಓದಿ: ಮಗಳೇ ಹೋಗಿದ್ದಾಳೆ, ಇನ್ಯಾರ ಮೇಲೆ ದೂರೋಣ!’: ನೀಟ್ ಪರೀಕ್ಷೆಯ ಒತ್ತಡಕ್ಕೆ ಬಲಿಯಾಯ್ತಾ ಮತ್ತೊಂದು ಜೀವ? ಕಣ್ಣೀರಿಟ್ಟ ತಂದೆ

ಹಿನ್ನೆಲೆ ಏನು?
ಕಳೆದ ಮೇ 3 ರಂದು ನಡೆದಿದ್ದ ಮೂಲ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ತನಿಖೆಯಲ್ಲಿ ದೃಢಪಟ್ಟಿತ್ತು. ಇದರಿಂದಾಗಿ ಸುಮಾರು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಿದ್ದರಿಂದ ಸರ್ಕಾರ ಆ ಪರೀಕ್ಷೆಯನ್ನು ರದ್ದುಗೊಳಿಸಿ, ಜೂನ್ 21 ಕ್ಕೆ ಮರುಪರೀಕ್ಷೆ ನಿಗದಿಪಡಿಸಿದೆ.

2027 ರಿಂದ ಡಿಜಿಟಲ್ ಪರೀಕ್ಷೆ
ಪ್ರಶ್ನೆಪತ್ರಿಕೆ ಸೋರಿಕೆಯಂತಹ ಹಗರಣಗಳಿಗೆ ಶಾಶ್ವತ ಬ್ರೇಕ್ ಹಾಕಲು ಸರ್ಕಾರ ಮುಂದಿನ ದಿನಗಳಲ್ಲಿ ದೊಡ್ಡ ಬದಲಾವಣೆಗೆ ಕೈಹಾಕಿದೆ. 2027 ರ ಹಣಕಾಸು ವರ್ಷದಿಂದ ನೀಟ್ (NEET) ಪರೀಕ್ಷೆಯನ್ನು ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿ (CBT – Computer Based Testing) ಬದಲಾಯಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಪೇಪರ್ ಸೋರಿಕೆಯಾಗುವ ಸಾಧ್ಯತೆ ಸಂಪೂರ್ಣವಾಗಿ ತಪ್ಪಲಿದೆ ಎಂದು ಸರ್ಕಾರ ಆಶಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿದ್ಯುತ್ ಆಘಾತದಿಂದ ಸಾಯುತ್ತಿದ್ದ ಲೈನ್‌ಮನ್‌ಗೆ ಸಿಪಿಆರ್ ನೀಡಿ ಜೀವ ಉಳಿಸಿದ ಪೊಲೀಸ್​​ ಸಿಬ್ಬಂದಿ

ಹೈದರಾಬಾದ್, ಮೇ.29: ಸಾರ್ವಜನಿಕರ ರಕ್ಷಣೆ ಎಂದರೆ ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದಷ್ಟೇ ಅಲ್ಲ, ಸಂಕಷ್ಟದ ಸಮಯದಲ್ಲಿ ದೇವದೂತರಂತೆ ಬಂದು ಜೀವ ಉಳಿಸುವುದು ಕೂಡ ಹೌದು ಎಂಬುದನ್ನು ಹೈದರಾಬಾದ್ ನಗರ ಪೊಲೀಸ್ ಸಿಬ್ಬಂದಿಯೊಬ್ಬರು ಸಾಬೀತುಪಡಿಸಿದ್ದಾರೆ. ವಿದ್ಯುತ್ ಲೈನ್‌ ದುರಸ್ತಿ ಮಾಡುವಾಗ ಭೀಕರ ವಿದ್ಯುತ್ ಆಘಾತಕ್ಕೆ ಒಳಗಾಗಿ ಉಸಿರಾಟ ನಿಲ್ಲಿಸಿದ್ದ ಗುತ್ತಿಗೆ ಕಾರ್ಮಿಕರೊಬ್ಬರಿಗೆ ಟಪ್ಪಾಚಬುತ್ರ (Tappachabutra) ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಬಿ. ಸುರೇಶ್ ಅವರು ತಕ್ಷಣವೇ ಸಿಪಿಆರ್ (CPR) ಪ್ರಥಮ ಚಿಕಿತ್ಸೆ ನೀಡುವ ಮೂಲಕ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಕಾರ್ವಾನ್‌ನ ಕುಮ್ಮರವಾಡಿ ಹನುಮಾನ್ ದೇವಸ್ಥಾನದ ಬಳಿ TGPDCL (ತೆಲಂಗಾಣ ವಿದ್ಯುತ್ ಸಂಸ್ಥೆ) ಗುತ್ತಿಗೆ ಕಾರ್ಮಿಕರೊಬ್ಬರು ವಿದ್ಯುತ್ ಕಂಬದ ಮೇಲೆ ದುರಸ್ತಿ ಕಾರ್ಯ ಮಾಡುತ್ತಿರುವಾಗ ಶಾಕ್ ತಗುಲಿದೆ. ಇದರಿಂದಾಗಿ ಅವರು ತೀವ್ರವಾಗಿ ಗಾಯಗೊಂಡು ಕೆಳಗೆ ಬಿದ್ದಿದ್ದಾರೆ. ಈ ವೇಳೆ ತಮ್ಮ ಬಿಎಸ್‌-1 (BC-I) ಗಸ್ತು ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್ ಬಿ. ಸುರೇಶ್ ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾರ್ಮಿಕನ ನಾಡಿಮಿಡಿತ ಹಾಗೂ ಉಸಿರಾಟ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದನ್ನು ಗಮನಿಸಿದ್ದಾರೆ. ಒಂದು ಕ್ಷಣವೂ ವ್ಯರ್ಥ ಮಾಡದ ಕಾನ್‌ಸ್ಟೆಬಲ್ ಸುರೇಶ್ ಸ್ಥಳದಲ್ಲೇ ಕಾರ್ಮಿಕನ ಎದೆಯನ್ನು ಒತ್ತಿ ಕೃತಕ ಉಸಿರಾಟ (CPR – Cardiopulmonary Resuscitation) ನೀಡಲು ಆರಂಭಿಸಿದರು. ಸತತ ಪ್ರಯತ್ನದ ಫಲವಾಗಿ ಕಾರ್ಮಿಕನ ನಾಡಿಮಿಡಿತ ಮತ್ತು ಉಸಿರಾಟವು ಮರಳಿ ಬಂದಿದೆ. ತಕ್ಷಣವೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ. “ಕಾರ್ಮಿಕನನ್ನು ಆಸ್ಪತ್ರೆಗೆ ತರುವ ಮುನ್ನ ಆತನಿಗೆ ಸಿಕ್ಕ ಈ ಪ್ರಥಮ ಚಿಕಿತ್ಸೆ ‘ಗೋಲ್ಡನ್ ಅವರ್’ ನಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದೆ. ಪೊಲೀಸರು ಸರಿಯಾದ ಸಮಯಕ್ಕೆ ಸಿಪಿಆರ್ ನೀಡದಿದ್ದರೆ ಆತನ ಜೀವ ಉಳಿಸುವುದು ಅಸಾಧ್ಯವಾಗುತ್ತಿತ್ತು” ಎಂದು ವೈದ್ಯರು ತಿಳಿಸಿದ್ದಾರೆ. ಹೈದರಾಬಾದ್ ಪೊಲೀಸರ ಈ ಮಾನವೀಯ ನಡೆ ಹಾಗೂ ಸಾರ್ವಜನಿಕ ಸುರಕ್ಷತೆಯ ಬದ್ಧತೆಗೆ ದೇಶಾದ್ಯಂತ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka CM News Live: ದೆಹಲಿಯಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್

ಬೆಂಗಳೂರು, ಮೇ 29: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಸಿಎಂ ಸ್ಥಾನದ ಬದಲಾವಣೆಯ ಪ್ರಕ್ರಿಯೆ ಕೊನೆಯ ಹಂತಕ್ಕೆ ತಲುಪಿದೆ. ನಿನ್ನೆ (ಮೇ 28) ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಘೋಷಿಸಿದ್ದು, ಇಂದು ರಾಜ್ಯಪಾಲರು ರಾಜೀನಾಮೆ ಅಂಗೀಕರಿಸಿದ್ದಾರೆ. ಈ ಬೆನ್ನಲ್ಲೇ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ದೆಹಲಿಗೆ ತೆರಳಿದ್ದು, ಅಲ್ಲಿಂದ ವಾಪಸಾದ ನಂತರ ಸಿಎಲ್​​ಪಿ ಸಭೆ ನಡೆಯಲಿದೆ. ಇನ್ನು ಎರಡು ದಿನಗಳೊಳಗೆ ಮುಂದಿನ ಮುಖ್ಯಮಂತ್ರಿ ಹೆಸರು ಘೋಷಣೆಯಾಗಲಿದೆ. ಡಿಕೆ ಶಿವಕುಮಾರ್ ಮುಂದಿನ ಸಿಎಂ ಆಗಲಿರುವುದು ಬಹುತೇಕ ಖಚಿತವಾಗಿದೆ. ಕರ್ನಾಟಕ ರಾಜಕಾರಣದ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಅಪ್ಡೇಟ್ ಆಗಲಿದ್ದು, ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version