ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಸರಕುಗಳ ಮೇಲೆ ಅಮೆರಿಕದಿಂದ ಶೇ. 20ರಷ್ಟು ಶುಲ್ಕ; ಟ್ರಂಪ್ ಘೋಷಣೆ – Kannada News | Donald Trump says US taking control of Strait of Hormuz To Charge 20 percent fee on all cargo shipped

ವಾಷಿಂಗ್ಟನ್, ಜುಲೈ 13: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಅತ್ಯಂತ ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, ಜಾಗತಿಕವಾಗಿ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ಜಲಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ಸಾಗಣೆ ಮಾಡಲಾಗುವ ಎಲ್ಲಾ ಸರಕುಗಳ ಮೇಲೆ ಅಮೆರಿಕವು ಶೇ. 20ರಷ್ಟು ಶುಲ್ಕವನ್ನು ವಿಧಿಸಲಿದೆ ಎಂದು ತಿಳಿಸಿದ್ದಾರೆ. “ಇಂದಿನಿಂದ ಯುಎಸ್‌ಎ (USA) ಅನ್ನು ‘ದಿ ಗಾರ್ಡಿಯನ್ ಆಫ್ ದಿ ಹಾರ್ಮುಜ್ ಸ್ಟ್ರೈಟ್’ (ಹಾರ್ಮುಜ್ ಜಲಸಂಧಿಯ ರಕ್ಷಕ) ಎಂದು ಕರೆಯಲಾಗುವುದು. ಜಗತ್ತಿನ ಅತ್ಯಂತ ಅಸ್ಥಿರವಾಗಿರುವ ಈ ಜಲಮಾರ್ಗಕ್ಕೆ ಸಂಪೂರ್ಣ ರಕ್ಷಣೆ ಮತ್ತು ಭದ್ರತೆ ಒದಗಿಸುವ ಕೆಲಸಕ್ಕಾಗಿ, ನ್ಯಾಯದ ದೃಷ್ಟಿಯಿಂದ ಅಮೆರಿಕಕ್ಕೆ ಮರುಪಾವತಿ ಸಿಗಬೇಕಿದೆ. ಹೀಗಾಗಿ ಇಲ್ಲಿ ಸಾಗಣೆಯಾಗುವ ಎಲ್ಲಾ ಸರಕುಗಳ ಮೇಲೆ ಶೇ. 20ರಷ್ಟು ದರದಲ್ಲಿ ಶುಲ್ಕ ವಿಧಿಸಲಾಗುವುದು. ಈ ಪ್ರಕ್ರಿಯೆ ಮತ್ತು ವ್ಯವಸ್ಥೆ ತಕ್ಷಣವೇ ಜಾರಿಗೆ ಬರಲಿದೆ” ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ.

ನಾವು ಹಾರ್ಮುಜ್ ಜಲಸಂಧಿಯ ರಕ್ಷಕರು ಎಂದ ಟ್ರಂಪ್:

ವಿಶ್ವದ ಒಟ್ಟು ತೈಲ ಮತ್ತು ನೈಸರ್ಗಿಕ ಅನಿಲದ ಪೂರೈಕೆಯಲ್ಲಿ ಸುಮಾರು 5ನೇ 1 ಭಾಗ (ಶೇ. 20ರಷ್ಟು) ಇದೇ ಜಲಸಂಧಿಯ ಮೂಲಕ ಸಾಗುವುದರಿಂದ ಇದು ಜಗತ್ತಿನ ಅತ್ಯಂತ ಪ್ರಮುಖ ಜಲಮಾರ್ಗವಾಗಿದೆ. ಈ ಕುರಿತು ಮಾತನಾಡಿದ ಟ್ರಂಪ್, “ನಾವು ಹಾರ್ಮುಜ್ ಜಲಸಂಧಿಯ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳುತ್ತಿದ್ದೇವೆ. ಇರಾನ್ ಬಳಿ ಏನೂ ಇಲ್ಲ. ಇನ್ನು ಮುಂದೆ ನಾವೇ ಈ ಜಲಸಂಧಿಯ ರಕ್ಷಕರಾಗಲಿದ್ದೇವೆ” ಎಂದಿದ್ದಾರೆ.

ಇದನ್ನೂ ಓದಿ: ನಾನೇ ನಂಬರ್ 1 ಟಾರ್ಗೆಟ್, ಇರಾನ್‌ ನನ್ನ ಹತ್ಯೆಗೆ ಸಂಚು ರೂಪಿಸುತ್ತಿದೆ ಎಂದ ಡೊನಾಲ್ಡ್ ಟ್ರಂಪ್

ರಕ್ಷಣೆ ನೀಡಿದ್ದಕ್ಕಾಗಿ ಅಮೆರಿಕಕ್ಕೆ ಹಣ:

ಅಮೆರಿಕವು ಈ ಹಾರ್ಮುಜ್ ಜಲಮಾರ್ಗಕ್ಕೆ ಭದ್ರತೆ ಒದಗಿಸುತ್ತಿರುವುದಕ್ಕೆ ಪ್ರತಿಯಾಗಿ ಜಗತ್ತಿನ ಶ್ರೀಮಂತ ರಾಷ್ಟ್ರಗಳಿಂದ ತಮಗೆ ಹಣ ಸಿಗಬೇಕು ಎಂದು ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ. “ಈ ಜಲಸಂಧಿಗೆ ಕಾವಲು ಕಾಯುತ್ತಿರುವುದಕ್ಕೆ ನಮಗೂ ಲಾಭ ಬೇಕಲ್ಲವೇ? ನಮ್ಮ ಸೈನಿಕರನ್ನು ಅಪಾಯಕ್ಕೆ ತಳ್ಳಿ ಇಷ್ಟೆಲ್ಲಾ ಭದ್ರತೆ ಒದಗಿಸುತ್ತಿರುವುದಕ್ಕೆ ನಮಗೆ ಮರುಪಾವತಿ ಸಿಗಬೇಕು ಎಂದು ನಾವು ಬಯಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಹಾರ್ಮುಜ್ ಜಲಸಂಧಿಯ ನಿಯಂತ್ರಣದ ವಿಷಯದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ದೀರ್ಘಕಾಲದಿಂದ ಸಂಘರ್ಷ ನಡೆಯುತ್ತಿದೆ. ಈ ಜಲಸಂಧಿಯ ಮೇಲೆ ತನಗೆ ಸಂಪೂರ್ಣ ನಿಯಂತ್ರಣವಿದೆ ಎಂದು ಇರಾನ್ ಹೇಳಿಕೊಳ್ಳುತ್ತಿದೆ. ಆದರೆ, ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಇದು ಮುಕ್ತ ಜಲಮಾರ್ಗವಾಗಿದ್ದು, ಎಲ್ಲಾ ದೇಶಗಳ ಹಡಗುಗಳು ಇಲ್ಲಿ ಮುಕ್ತವಾಗಿ ಸಂಚರಿಸಬಹುದು ಎಂದು ಅಮೆರಿಕ ವಾದಿಸುತ್ತಿದೆ.

ಇರಾನ್ ಎಚ್ಚರಿಕೆ:

ಟ್ರಂಪ್ ಅವರ ಈ ಘೋಷಣೆಗೆ ಇರಾನ್‌ನ ‘ಖಾತಮ್ ಅಲ್-ಅನ್ಬಿಯಾ’ ಮಿಲಿಟರಿ ಕಮಾಂಡ್‌ನ ವಕ್ತಾರರು ವಿಡಿಯೋ ಸಂದೇಶದ ಮೂಲಕ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. “ಯಾವುದೇ ಪರಿಸ್ಥಿತಿಯಲ್ಲೂ ಜಲಸಂಧಿಯ ನಿರ್ವಹಣೆಯಲ್ಲಿ ಅಮೆರಿಕ ಹಸ್ತಕ್ಷೇಪ ಮಾಡಲು ನಾವು ಬಿಡುವುದಿಲ್ಲ” ಎಂದು ಅವರು ಹೇಳಿದ್ದಾರೆ. ಈ ಜಲಮಾರ್ಗದ ವಿಷಯದಲ್ಲಿ ಅಮೆರಿಕದೊಂದಿಗೆ ಸಹಕರಿಸುವ ಯಾವುದೇ ಗಲ್ಫ್ ದೇಶಗಳ ಕ್ರಮವನ್ನು “ಯುದ್ಧದ ಘೋಷಣೆ” ಎಂದೇ ಪರಿಗಣಿಸಲಾಗುವುದು ಎಂದು ಅವರು ಗಲ್ಫ್ ರಾಷ್ಟ್ರಗಳಿಗೆ ಇರಾನ್ ಕಠಿಣ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಇರಾನ್‌ನಿಂದ ಹಾರ್ಮುಜ್ ಜಲಸಂಧಿ ಬಂದ್, ಹಡಗಿನ ಮೇಲೆ ದಾಳಿ ಬೆನ್ನಲ್ಲೇ ಅಮೆರಿಕದಿಂದ ಭೀಕರ ಪ್ರತೀಕಾರ

ಸಂಘರ್ಷಕ್ಕೆ ಕಾರಣವೇನು?:

ಇತ್ತೀಚೆಗೆ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುತ್ತಿದ್ದ ಹಡಗೊಂದರ ಮೇಲೆ ಇರಾನ್ ದಾಳಿ ನಡೆಸಿತ್ತು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅಮೆರಿಕ, ಇರಾನ್‌ನ ಮಿಲಿಟರಿ ನೆಲೆಗಳು ಮತ್ತು ಪ್ರಮುಖವಾಗಿ ಅದರ ಡ್ರೋನ್ ಉತ್ಪಾದನಾ ಕೇಂದ್ರಗಳ ಮೇಲೆ ಭಾರಿ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಸಹ ಯುಎಇ (UAE) ಮತ್ತು ಕತಾರ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಈ ಸಂಘರ್ಷದ ಕಾರಣದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಏಕಾಏಕಿ ಶೇ. 5ರಷ್ಟು ಏರಿಕೆಯಾಗಿವೆ.

ಕಳೆದ ತಿಂಗಳಷ್ಟೇ ಉಭಯ ದೇಶಗಳು ಡಿಜಿಟಲ್ ರೂಪದಲ್ಲಿ ತಾತ್ಕಾಲಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದವು ಮತ್ತು ಮಾತುಕತೆಗೆ ಒಪ್ಪಿಕೊಂಡಿದ್ದವು. ಆದರೆ, ಕಳೆದ ವಾರ ಆ ಕದನ ವಿರಾಮ ಒಪ್ಪಂದವು ಮುಕ್ತಾಯಗೊಂಡಿದೆ ಎಂದು ಟ್ರಂಪ್ ಘೋಷಿಸಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಎಫೆಕ್ಟ್​​: ಮೈದುಂಬಿದ ದೂದ್‌ಸಾಗರ ಜಲಪಾತ – Kannada News | Monsoon Magic: Dudhsagar Falls Draws Tourists After Heavy Rains in Western Ghats

ಬೆಳಗಾವಿ, ಜುಲೈ 13: ದೇಶದ ಹಲವು ಭಾಗಗಳಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದ್ದರೆ, ಇತ್ತ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಇದರ ಪರಿಣಾಮವಾಗಿ ಬೆಳಗಾವಿ ಗಡಿಯಲ್ಲಿರುವ ವಿಶ್ವಪ್ರಸಿದ್ಧ ದೂದ್‌ಸಾಗರ ಜಲಪಾತವು ಧುಮ್ಮಿಕ್ಕಿ ಹರಿಯುತ್ತಿದೆ. ಹಾಲಿನ ಹೊಳೆಯಂತೆ ಕಾಣುವ 1017 ಅಡಿ ಎತ್ತರದಿಂದ ಭೋರ್ಗರೆಯುವ ಈ ಜಲಪಾತವು  ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Chanakya Niti: ಜೀವನದಲ್ಲಿ ಮುಂದೆ ಬರಬೇಕು ಅಂದ್ರೆ ಈ ವಿಷಯಗಳನ್ನು ನಿಯಂತ್ರಿಸಲು ಕಲಿಯಿರಿ – Kannada News | Chanakya Niti: Chanakya says that these habits must be controlled to move forward in life

ನಮ್ಮಲ್ಲಿರುವ ಕೆಟ್ಟ ಅಭ್ಯಾಸಗಳು (bad habits) ನಮ್ಮನ್ನು ಮುಂದುವರೆಯಲು ಬಿಡುವುದಿಲ್ಲ, ಪ್ರಗತಿಗೆ ಅಡ್ಡಿಯನ್ನು ಉಂಟು ಮಾಡುತ್ತವೆ. ಆ ಅಭ್ಯಾಸವನ್ನು ನಿಯಂತ್ರಿಸಲು ಕಲಿತವರು ಮಾತ್ರ ಜೀವನದಲ್ಲಿ ಮುಂದುವರೆಯಲು ಸಾಧ್ಯ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಅವರ ಪ್ರಕಾರ ಪ್ರತಿಯೊಬ್ಬರೂ ಸಹ ಈ ಕೆಲವೊಂದು ಅಭ್ಯಾಸಗಳನ್ನು ನಿಯಂತ್ರಿಸಲೇಬೇಕು, ಇದು ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಸಾಕಷ್ಟು ಸಹಾಯವನ್ನು ಮಾಡುತ್ತದೆ. ಹಾಗಿದ್ರೆ ಜೀವನವನ್ನು ಸುಧಾರಿಸಲು, ಜೀವನದಲ್ಲಿ ಸಕಾರಾತ್ಮಕವಾಗಿ ಮುಂದುವರೆಯಲು ಯಾವೆಲ್ಲಾ ವಿಷಯಗಳನ್ನು ನಿಯಂತ್ರಿಸಬೇಕು ಎಂಬುದನ್ನು ನೋಡೋಣ ಬನ್ನಿ.

ಜೀವನದಲ್ಲಿ ಮುಂದುವರೆಯಲು ನಿಯಂತ್ರಿಸಬೇಕಾದ ಅಭ್ಯಾಸಗಳು:

ಕೋಪವನ್ನು ನಿಯಂತ್ರಣದಲ್ಲಿಡಿ: ಆಚಾರ್ಯ ಚಾಣಕ್ಯರ ಪ್ರಕಾರ, ವ್ಯಕ್ತಿಯ ದೊಡ್ಡ ಶತ್ರು ಆತನ ಕೋಪ. ನಾವು ಕೋಪಗೊಂಡಾಗ, ನಮ್ಮ ಮೆದುಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಕೋಪದ ಮನಸ್ಥಿತಿಯಲ್ಲಿಯೇ ಹೆಚ್ಚಾಗಿ ನಾವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಇದು ಸಂಬಂಧವನ್ನು ಹಾಳು ಮಾಡುವುದಲ್ಲದೆ ಕೆಲಸದ ವಿಷಯದಲ್ಲೂ ಸಾಕಷ್ಟು ಅಡ್ಡಿಯನ್ನು ಉಂಟುಮಾಡುತ್ತವೆ. ಹಾಗಾಗಿ ಕೋಪಗೊಂಡಾಗ ತಕ್ಷಣ ಪ್ರತಿಕ್ರಿಯಿಸುವ ಬದಲು ಶಾಂತವಾಗಿರಿ, ಇದು ಮುಂದಾಗುವ ಅನೇಕ ಅನಾಹುತಗಳನ್ನು ತಪ್ಪಿಸುವುದು ಮಅತ್ರವಲ್ಲದೆ, ನಿಮಗೆ ಜೀವನದಲ್ಲಿ ಮುಂದುವರೆಯಲೂ ಸಹ ಸಹಾಯ ಮಾಡುತ್ತದೆ.

ಮಾತನ್ನು ನಿಯಂತ್ರಿಸಿ: ಮಾತನಾಡುವ ಮೊದಲು ನಾವು ಯಾವಾಗಲೂ ಎಚ್ಚರಿಕೆಯಿಂದ ಯೋಚಿಸಬೇಕು ಮತ್ತು ಯಾವಾಗಲೂ ಸಿಹಿ ಪದಗಳನ್ನು ಬಳಸಬೇಕು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಯೋಚಿಸದೆ ಏನೇನೋ ಮಾತನಾಡುವ ಅಭ್ಯಾಸ  ಒಳ್ಳೆಯ ಸಂಬಂಧಗಳನ್ನು ಹಾಳು ಮಾಡುವುದಲ್ಲದೆ, ನಿಮ್ಮ ಎಲ್ಲಾ ಯೋಜನೆಗಳನ್ನು ಇತರರ ಬಳಿ ಹಂಚಿಕೊಳ್ಳುವುದರಿಂದ ನಿಮ್ಮ ಪ್ರಗತಿಗೂ ಅಡ್ಡಿಯನ್ನು ಉಂಟು ಮಾಡುತ್ತದೆ. ಆದ್ದರಿಂದ ಮಾತಿನ ಮೇಲೆ ನಿಯಂತ್ರಣವಿರಲಿ, ಯಾವಾಗಲೂ ಹಿತಮಿತವಾಗಿ ಮಾತನಾಡಿ.

ಇದನ್ನೂ ಓದಿ: ಶ್ರೀಮಂತಿಕೆ ಗಳಿಸಲು ಚಾಣಕ್ಯರು ಹೇಳಿಕೊಟ್ಟಿರುವ ಸಲಹೆಗಳಿವು

ಆಸೆಗಳನ್ನು ನಿಯಂತ್ರಿಸಿ:  ಆಚಾರ್ಯ ಚಾಣಕ್ಯರ ಪ್ರಕಾರ, ನಾವು ನಮ್ಮ ಮನಸ್ಸನ್ನು ನಿಯಂತ್ರಿಸದಿದ್ದರೆ ಮತ್ತು ದುರಾಸೆಯನ್ನು ನಿಯಂತ್ರಿಸದಿದ್ದರೆ, ಜೀವನದಲ್ಲಿ ಸಂತೋಷವಾಗಿರಲು ಎಂದಿಗೂ ಸಾಧ್ಯವಿಲ್ಲ ಹಾಗಾಗಿ ಇರುವುದರಲ್ಲಿಯೇ ತೃಪ್ತಿಯನ್ನು ಪಟ್ಟು ಗುರಿಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ. ಖಂಡಿತವಾಗಿಯೂ ಇದು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಉಂಟುಮಾಡುತ್ತವೆ.

ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ:  ಆಚಾರ್ಯ ಚಾಣಕ್ಯರ ಪ್ರಕಾರ ಹಣ ಸಂಪಾದಿಸುವುದು ಎಷ್ಟು ಮುಖ್ಯವೋ ಅದನ್ನು ಬುದ್ಧಿವಂತಿಕೆಯಿಂದ ಬಳಸುವುದು ಸಹ ಅಷ್ಟೇ ಮುಖ್ಯ. ಹಣವನ್ನು ವ್ಯರ್ಥ ಖರ್ಚು ಮಾಡಿದರೆ ಕೈಯಲ್ಲಿ ಹಣ ಉಳಿಯುವುದು ಕೂಡ ಇಲ್ಲ, ಇದು ಶ್ರೀಮಂತಿಕೆ ಗಳಿಸುವ ನಿಮ್ಮ ಕನಸಿಗೂ ಅಡ್ಡಿಯನ್ನು ಉಂಟು ಮಾಡುತ್ತದೆ. ಹಾಗಾಗಿ ಎಂದಿಗೂ ವ್ಯರ್ಥ ಖರ್ಚು ಮಾಡಬೇಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯ ಕಾಂಗ್ರೆಸ್​​ನಲ್ಲಿ ಗರಿಗೆದರಿದ ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​? – Kannada News | Karnataka Cabinet Expansion: Will the Congress Finalise the Aspirants’ List by July 17

ಬೆಂಗಳೂರು, ಜುಲೈ 13: ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪದಗ್ರಹಣ ಮಾಡಿ 40 ದಿನಗಳೇ ಕಳೆಯುತ್ತ ಬಂತು. ಆದರೆ ಸಂಪುಟ ವಿಸ್ತರಣೆಗೆ ಹಿಡಿದ ಗ್ರಹಣ ಮಾತ್ರ ಇನ್ನೂ ಬಿಟ್ಟಿಲ್ಲ. ಯಾವಾಗ ಗ್ರಹಣ ಬಿಡಬಹುದು ಎಂಬ ಬಗ್ಗೆ ಸ್ಪಷ್ಟತೆಯೂ ಸಿಕ್ತಿಲ್ಲ.‌ 15ಕ್ಕೂ ಹೆಚ್ಚು ಸಚಿವ ಸ್ಥಾನಗಳು ಖಾಲಿ ಇವೆ. ಸಿಎಂ ಡಿಕೆ ಶಿವಕುಮಾರ್ ಸಚಿವ ಸಂಪುಟ ವಿಸ್ತರಣಾ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಆರಂಭಿಸುವ ನಿರೀಕ್ಷೆಯಿದೆ. ಇದರ ಭಾಗವಾಗಿ ಅವರು ದೆಹಲಿಗೆ ಭೇಟಿ ನೀಡಲಿದ್ದಾರೆ. ಕಳೆದ ಹಲವು ದಿನಗಳ ವಿದೇಶ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ದೆಹಲಿಗೆ ಮರಳಿದ್ದು, ಇದು ಸಂಪುಟ ವಿಸ್ತರಣೆಯ ಚರ್ಚೆಗೆ ವೇಗ ನೀಡುವ ಸಾಧ್ಯತೆ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಸಿ. ವೇಣುಗೋಪಾಲ್, ರಾಹುಲ್ ಗಾಂಧಿ ಜೊತೆ ಸಚಿವ ಸಂಪುಟ ವಿಸ್ತರಣೆ ಕುರಿತು ಮಹತ್ವದ ಚರ್ಚೆ ನಡೆಸುವ ನಿರೀಕ್ಷೆಯಿದೆ. ಸಂಪುಟ ವಿಸ್ತರಣೆಯ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಬೇಕಿದ್ದು, ಯಾರಿಗೆ ಸ್ಥಾನ ಕೊಡಬೇಕು, ಯಾರನ್ನು ಕೈಬಿಡಬೇಕು, ಯಾವ ಪ್ರದೇಶಕ್ಕೆ ಎಷ್ಟು ಪ್ರಾತಿನಿಧ್ಯ ಮತ್ತು ಯಾವ ಸಮುದಾಯಕ್ಕೆ ಆದ್ಯತೆ ನೀಡಬೇಕು ಎಂಬುವುದು ದೊಡ್ಡ ಸವಾಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಸಂಪುಟ ವಿಸ್ತರಣೆ ಆದಷ್ಟು ಬೇಗ ಆಗಲಿದೆ ಎಂದು ಹೇಳಿಕೆ ನೀಡಿದ್ದು, ಆಕಾಂಕ್ಷಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಹಲವು ಶಾಸಕರು ಸಚಿವ ಸ್ಥಾನಕ್ಕಾಗಿ ದೆಹಲಿ ಮತ್ತು ಬೆಂಗಳೂರಿನಲ್ಲಿ ಲಾಬಿ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಜೈಪುರದಲ್ಲಿ ನಡೆಯಿತು ಶರ್ಮಿಳಾ ಮಾಂಡ್ರೆ ಮದುವೆ; ಇಲ್ಲಿದೆ ಫೋಟೋ ಗ್ಯಾಲರಿ

Source link

ಧಾರ್ಮಿಕ ಕ್ಷೇತ್ರದಲ್ಲಿ ಪ್ರವಾಸಿಗರ ಹುಚ್ಚಾಟ: ಸಕಲೇಶಪುರದ ಬೆಟ್ಟದ ಭೈರವೇಶ್ವರ ದೇಗುಲದಲ್ಲಿ ಕಠಿಣ ನಿಯಮ ಜಾರಿಗೆ ನಿರ್ಧಾರ – Kannada News | Tourist Misconduct at Betada Bhairaveshwara Temple: Strict Rules to Be Enforced in Sakaleshpur

ಪ್ರವಾಸಿಗರ ಹುಚ್ಚಾಟImage Credit source: tv9 kannada

ಹಾಸನ, ಜುಲೈ 13: ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ಸಹಸ್ರಾರು ಕುಟುಂಬಗಳ ಆರಾಧ್ಯ ದೈವವಾಗಿರುವ ಸಕಲೇಶಪುರ ತಾಲೂಕಿನ ಬೆಟ್ಟದ ಭೈರವೇಶ್ವರ ದೇವಾಲಯದಲ್ಲಿ ಪ್ರವಾಸಿಗರ (Tourist) ಮೋಜು-ಮಸ್ತಿ ಮತ್ತು ಹುಚ್ಚಾಟ ಮಿತಿ ಮೀರಿದ್ದು, ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಶ್ರದ್ಧಾ-ಭಕ್ತಿಯ ತಾಣದಲ್ಲಿ ಪ್ರವಾಸಿಗರು ಡಿಜೆ ಹಾಡುಗಳಿಗೆ ಕುಣಿದು, ರೀಲ್ಸ್ ಮಾಡುತ್ತಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವ ಹಿನ್ನೆಲೆಯಲ್ಲಿ, ಕ್ಷೇತ್ರಕ್ಕೆ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಅಧಿಕಾರಿಗಳು ಮತ್ತು ಶಾಸಕರ ನೇತೃತ್ವದ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಪ್ರಕೃತಿ ಸೊಬಗಿನ ತಾಣವೇ ಸ್ಥಳೀಯರಿಗೆ ಕಂಟಕ!

ಸಕಲೇಶಪುರ ತಾಲೂಕಿನ ಪಶ್ಚಿಮಘಟ್ಟದ ತಪ್ಪಲು ಮರಗುಂದ ಗ್ರಾಪಂ ಬಳಿಯ ಸಹಸ್ರಾರು ವರ್ಷಗಳ ಪುರಾತನ ಬೆಟ್ಟದ ಭೈರವೇಶ್ವರ ದೇಗುಲ ಈ ಭಾಗದ ಸಹಸ್ರಾರು ಕುಟುಂಬಗಳ ಮನೆದೇವರು. ಮರಗುಂದ ಗ್ರಾಪಂ ವ್ಯಾಪ್ತಿಯಲ್ಲಿ ಈ ಪುರಾತನ ದೇಗುಲ ನೆಲೆಸಿದೆ. ಒಂದು ಕಡೆ ಪಾಂಡವರ ಬೆಟ್ಟ, ಇನ್ನೊಂದೆಡೆ ಜೇನುಕಲ್ ಬೆಟ್ಟ, ದೀಪದ ಕಲ್ಲು ಹಾಗೂ ಮೂರ್ಕಣ್ಣು ಗುಡ್ಡಗಳ ವಿಶಾಲ ಹಸಿರ ರಾಶಿಯ ನಡುವೆ ಇರುವ ಈ ಕ್ಷೇತ್ರವನ್ನು ‘ಕರ್ನಾಟಕದ ಸ್ವಿಡ್ಜರ್ಲ್ಯಾಂಡ್’ ಎಂದೇ ಕರೆಯಲಾಗುತ್ತದೆ. ಇದೇ ಕಾರಣಕ್ಕೆ ಇಲ್ಲಿಗೆ ಹತ್ತಾರು ಸಿನೆಮಾ ಚಿತ್ರೀಕರಣ ತಂಡಗಳು ಬಂದು ಶೂಟಿಂಗ್ ಮಾಡಿದ್ದು, ಇದೀಗ ಪ್ರವಾಸಿಗರ ಪಾಲಿಗೆ ಹಾಟ್ ಸ್ಪಾಟ್ ಆಗಿದೆ. ಆದರೆ, ಇದೇ ಪ್ರಕೃತಿ ಸೊಬಗು ಸದ್ಯ ಸ್ಥಳೀಯರಿಗೆ ಕಂಟಕವಾಗಿ ಪರಿಣಮಿಸಿದೆ.

ಇದನ್ನೂ ಓದಿ: Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್‌ ಸಾಗರ್​!

ನಿನ್ನೆ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಪ್ರವಾಸಿಗರ ದಂಡು ದೇವಾಲಯ ಎನ್ನುವುದನ್ನು ಮರೆತು ತುಂಡುಡುಗೆಯಲ್ಲಿ ಓಡಾಡುತ್ತಾ, ಡಿಜೆ ಹಾಡು ಹಾಕಿಕೊಂಡು ಕುಣಿದು ಕುಪ್ಪಳಿಸಿರುವ ವಿಡಿಯೋ ವೈರಲ್ ಆಗಿದೆ. ಘಟನೆ ಬಗ್ಗೆ ಸ್ಥಳೀಯರು ಆಕ್ರೊಶ ಹೊರಹಾಕಿದ ಬೆನ್ನಲ್ಲೇ ಇಂದು ತಹಶೀಲ್ದಾರ್, ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸಿಮೆಂಟ್ ಮಂಜು ಸಭೆ ಮಾಡಿದ್ದಾರೆ.

ಪ್ರವಾಸಿಗರು ಬರಲಿ, ಆದರೆ ಧಾರ್ಮಿಕ ಭಾವನೆಗೆ ಧಕ್ಕೆ ತರುವುದು ಬೇಡ: ಶಾಸಕ ಸಿಮೆಂಟ್ ಮಂಜು

ಸಭೆ ಬಳಿಕ ಮಾತನಾಡಿದ ಶಾಸಕ ಸಿಮೆಂಟ್ ಮಂಜು, ‘‘ಪ್ರವಾಸಿಗರು ಬರಲಿ, ನಿಸರ್ಗ ನೋಡಿ ಖುಷಿ ಪಡಲಿ, ಆದರೆ ಇಲ್ಲಿನ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರುವುದು ಬೇಡ. ದೇಗುಲದ ಕಟ್ಟೆ ಮೇಲೆ ಹತ್ತಿ ಫೋಟೋ ತೆಗೆಯೋದು ಬೇಡ. ದಿನನಿತ್ಯ ಇಲ್ಲಿ ಪೊಲೀಸ್ ಕಾವಲು ಇರಬೇಕು, ಮೊಬೈಲ್ ಬಳಸದಂತೆ ಎಚ್ಚರಿಕೆ ವಹಿಸಬೇಕು ಎನ್ನುವ ಕಠಿಣ ನಿಯಮಗಳನ್ನ ಜಾರಿ ಮಾಡಲು ತೀರ್ಮಾನ ಮಾಡಿದ್ದು, ಜೊತೆಗೆ ದೇವಾಲಯದ ಆವರಣದಲ್ಲಿ ಅಗತ್ಯ ಮೂಲಸೌಲಭ್ಯ ನೀಡುವುದಾಗಿ’’ ಹೇಳಿದ್ದಾರೆ.

ಸ್ಥಳೀಯರ ನಿದ್ದೆಗೆಡಿಸಿದ ಪ್ರವಾಸಿಗರ ಹುಚ್ಚಾಟ

ಹಾಸನದಿಂದ ಸಕಲೇಶಪುರ ತಲುಪಿ ಅಲ್ಲಿಂದ ಹಾನುಬಾಳ್ ಮೂಲಕ ದೇವಾಲದ ಕೆರೆ ದಾಟಿ ಮುಂದೆ ಹೋದರೆ ಸಿಗುವುದು ಮರಗುಂದ ಗ್ರಾಮ. ಧಾರ್ಮಿಕ ಕ್ಷೇತ್ರದಲ್ಲಿ ಮನಸ್ಸಿಗೆ ನೆಮ್ಮದಿ ಅರಸುವುದು ಬಿಟ್ಟು ಪ್ರವಾಸಿಗರು ಮಾಡುತ್ತಿರುವ ಹುಚ್ಚಾಟ ಸ್ಥಳೀಯರನ್ನ ನಿದ್ದೆಗೆಡಿಸಿದೆ. ಯಾರಿಗೆ ದೂರು ನೀಡಿದರು ಕ್ರಮಕೈಗೊಳ್ಳ, ಕೆಲವರಂತೂ ಪ್ರಶ್ನೆ ಮಾಡಿದವರ ಮೇಲೆ ಹಲ್ಲೆ ಮಾಡಲು ಬರುತ್ತಾರೆ. ಬಂದ ಪ್ರವಾಸಿಗರು ದೇವರ ದರ್ಶನ ಮಾಡಿ ಹೋದರೆ ಏನೂ ಸಮಸ್ಯೆ ಇಲ್ಲ, ಆದರೆ ಬರುವುದೇ ರೀಲ್ಸ್, ಫೋಟೋಗಾಗಿ, ಅದಕ್ಕಾಗಿ ಕೆಲ ಪ್ರವಾಸಿಗರು ಮಾಡುವ ಹುಚ್ಚಾಟದ ವಿಡಿಯೋ ಆಗಾಗ ವೈರಲ್ ಆಗುತ್ತಿವೆ.

ಇದನ್ನೂ ಓದಿ: ಮಳೆ ಅಬ್ಬರಕ್ಕೆ ಅಂಬೋಲಿ ಫಾಲ್ಸ್​​ಗೆ ಜೀವ ಕಳೆ: ಜಲಪಾತ ನೋಡಲು ಮುಗಿಬಿದ್ದ ಪ್ರವಾಸಿಗರು

ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯದ ಬಳಿ ಯಾವುದೇ ಮೂಲಸೌಕರ್ಯಗಳಿಲ್ಲ. ಈ ವರ್ಷದ ಮಳೆಗಾಲದಲ್ಲಿ ತಡೆಗೋಡೆ ಕುಸಿದು ಬಿದ್ದಿರುವುದರಿಂದ ದೇಗುಲಕ್ಕೆ ಅಪಾಯ ಎದುರಾಗುವ ಆತಂಕವೂ ಇದೆ. ಪರಿಸ್ಥಿತಿ ಹೀಗಿದ್ದರೂ ಪ್ರವಾಸಿಗರು ಜವಾಬ್ದಾರಿಯಿಲ್ಲದೆ ವರ್ತಿಸುತ್ತಿರುವುದು ದುರದೃಷ್ಟಕರ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಕ್ಷೇತ್ರದ ಪಾವಿತ್ರತೆ ಕಾಪಾಡಲು ಮುಂದಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 9:09 pm, Mon, 13 July 26

Source link

ರಾಮಮಂದಿರ ದೇಣಿಗೆ ಕಳ್ಳತನ: ಅನುಪಮ್ ಖೇರ್ ಬಗ್ಗೆ ನಾಸಿರುದ್ದೀನ್ ಶಾ ಮಾತನಾಡಿದ್ದ ವಿಡಿಯೋ ವೈರಲ್ – Kannada News | Naseeruddin Shah Old Video calling Anupam Kher a Clown resurfaces amid Ram Temple Row

ಅಯೋಧ್ಯೆ ರಾಮಮಂದಿರದ ದೇಣಿಗೆ ಕಳ್ಳತನದ ವರದಿಗಳ ಕುರಿತು ಬಾಲಿವುಡ್ ನಟ ಅನುಪಮ್ ಖೇರ್ (Anupam Kher) ಇತ್ತೀಚೆಗೆ ನೀಡಿದ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ, ಹಿರಿಯ ನಟ ನಾಸಿರುದ್ದೀನ್ ಶಾ (Naseeruddin Shah) ಅವರು ಅನುಪಮ್ ಖೇರ್ ಅವರನ್ನು ‘ಜೋಕರ್’ (Clown) ಎಂದು ಕರೆದಿದ್ದ 2020ರ ಹಳೆಯ ಸಂದರ್ಶನದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಲು ಪ್ರಾರಂಭಿಸಿದೆ. ಅನುಪಮ್ ಖೇರ್ ಹೇಳಿಕೆಯನ್ನು ಟ್ರೋಲ್ ಮಾಡುತ್ತಿರುವ ನೆಟ್ಟಿಗರು, 2020ರಲ್ಲಿ ನಾಸಿರುದ್ದೀನ್ ಶಾ ಅವರು ಖೇರ್ ಅವರ ರಾಜಕೀಯ ನಿಲುವುಗಳನ್ನು ಟೀಕಿಸಿದ್ದ ವಿಡಿಯೋವನ್ನು ಮತ್ತೆ ಹಂಚಿಕೊಳ್ಳುತ್ತಿದ್ದಾರೆ.

‘ಇಂಡಿಯಾ ಟುಡೇ’ಗೆ ನೀಡಿದ ಸಂದರ್ಶನದಲ್ಲಿ ರಾಮಮಂದಿರದ ದೇಣಿಗೆ ಕಳ್ಳತನದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಅನುಪಮ್ ಖೇರ್, ‘ಇದು ತುಂಬಾ ಸಣ್ಣ ವಿಷಯ’ ಎಂದು ತಳ್ಳಿಹಾಕಿದ್ದರು. ಅಲ್ಲದೆ, ಇದನ್ನು ಮೊಘಲರ ಕಾಲದಲ್ಲಿ ನಡೆದ ದೇವಸ್ಥಾನಗಳ ಧ್ವಂಸ ಮತ್ತು ಲೂಟಿಗೆ ಹೋಲಿಸಿದ್ದರು. ಅವರ ಈ ಹೇಳಿಕೆ ಟ್ರೋಲ್ ಆಗುತ್ತಿದೆ. ಇದೇ ಸಂದರ್ಭದಲ್ಲಿ ನಾಸಿರುದ್ದೀನ್ ಶಾ ಅವರ ಹಳೇ ವಿಡಿಯೋ ವೈರಲ್ ಆಗುತ್ತಿದೆ.

ದೇಣಿಗೆ ಕಳ್ಳತನದ ಬಗ್ಗೆ ಅನುಪಮ್ ಖೇರ್ ಹೇಳಿದ್ದು ಏನು?

‘ಮೊಘಲರು ನಮ್ಮ ದೇವಸ್ಥಾನಗಳನ್ನು ಧ್ವಂಸಗೊಳಿಸಿ, ಬ್ರಾಹ್ಮಣರನ್ನು ಕೊಂದಾಗ, ದೇವಸ್ಥಾನದ ಸಂಪತ್ತನ್ನು ಲೂಟಿ ಮಾಡಿದಾಗ ಮತ್ತು ಆವರಣದೊಳಗೆ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದಾಗ ನಿಜವಾದ ಲೂಟಿ ನಡೆದಿತ್ತು. ಅದು ಇದಕ್ಕಿಂತ ದೊಡ್ಡ ದುರಂತವಾಗಿತ್ತು. ಆ ನೋವನ್ನೇ ನಾವು ಮರೆತು ಮುನ್ನಡೆದಿರುವಾಗ, ಈ ಕಳ್ಳತನದ ವಿಷಯ ತುಂಬಾ ಸಣ್ಣದು. ಜನರು ಇದನ್ನು ದೊಡ್ಡ ಇಶ್ಯೂ ಮಾಡುತ್ತಿದ್ದಾರೆ’ ಎಂದು ಖೇರ್ ಹೇಳಿದ್ದರು. ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಯಿತು.

ನಾಸಿರುದ್ದೀನ್ ಶಾ ಅವರ ಹಳೇ ವಿಡಿಯೋ ರೀ-ಟ್ರೆಂಡ್:

ಹಳೇ ಸಂದರ್ಶನದಲ್ಲಿ ನಾಸಿರುದ್ದೀನ್ ಶಾ ಅವರು ಅನುಪಮ್ ಖೇರ್ ಬಗ್ಗೆ ಕಟು ಟೀಕೆ ಮಾಡಿದ್ದರು. ‘ಅನುಪಮ್ ಖೇರ್ ಅವರಂತಹ ವ್ಯಕ್ತಿಗಳು ಸರ್ಕಾರದ ಪರವಾಗಿ ಹೆಚ್ಚು ಮಾತನಾಡುತ್ತಾರೆ. ಆದರೆ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಆತ ಒಬ್ಬ ಜೋಕರ್. ಎನ್‌ಎಸ್‌ಡಿ ಮತ್ತು ಎಫ್‌ಟಿಐಐನಲ್ಲಿ ಅವರ ಜೊತೆಗಿದ್ದ ಸಮಕಾಲೀನರು ಅವರ ಚಮಚಾಗಿರಿ ಮತ್ತು ಮುಖಸ್ತುತಿ ಮಾಡುವ ಗುಣದ ಬಗ್ಗೆ ಸಾಕ್ಷಿ ಹೇಳಬಲ್ಲರು. ಅದು ಅವರ ರಕ್ತದಲ್ಲೇ ಇದೆ. ಅದನ್ನು ಅವರು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಕಟುವಾಗಿ ಟೀಕಿಸಿದ್ದರು.

ಇದನ್ನೂ ಓದಿ: ‘ಧುರಂಧರ್ 2’ ಪ್ರೊಪಗಾಂಡ ಸಿನಿಮಾ ಎಂದವರಿಗೆ ತಿರುಗೇಟು ನೀಡಿದ ಅನುಪಮ್ ಖೇರ್

ಅಂದು ತಿರುಗೇಟು ನೀಡಿದ್ದ ಅನುಪಮ್ ಖೇರ್:

ನಾಸಿರುದ್ದೀನ್ ಶಾ ಅವರ ಈ ಆರೋಪಕ್ಕೆ ಅಂದೇ ‘ಎಕ್ಸ್’ (ಟ್ವಿಟರ್) ವಿಡಿಯೋ ಮೂಲಕ ಪ್ರತಿಕ್ರಿಯಿಸಿದ್ದ ಅನುಪಮ್ ಖೇರ್, ‘ನೀವು ಇಷ್ಟೊಂದು ಯಶಸ್ಸು ಗಳಿಸಿದ್ದರೂ ನಿಮ್ಮ ಇಡೀ ಜೀವನವನ್ನು ನಿರಾಶೆಯಲ್ಲೇ ಕಳೆದಿದ್ದೀರಿ. ನೀವು ದಿಲೀಪ್ ಕುಮಾರ್, ಅಮಿತಾಭ್ ಬಚ್ಚನ್, ರಾಜೇಶ್ ಖನ್ನಾ, ಶಾರುಖ್ ಖಾನ್ ಮತ್ತು ವಿರಾಟ್ ಕೊಹ್ಲಿಯವರನ್ನು ಕೂಡ ಟೀಕಿಸಿದ್ದೀರಿ. ಹಾಗಾಗಿ ನಿಮ್ಮ ಟೀಕೆಯ ಪಟ್ಟಿಯಲ್ಲಿ ನಾನಿರುವುದು ನನಗೆ ಹೆಮ್ಮೆಯ ವಿಷಯವೇ. ಅವರಲ್ಲಿ ಯಾರೂ ನಿಮ್ಮ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಏಕೆಂದರೆ ಇಷ್ಟು ವರ್ಷಗಳಿಂದ ನೀವು ತಿನ್ನುತ್ತಿರುವ ವಸ್ತುಗಳ ಪ್ರಭಾವದಿಂದಾಗಿ ನಿಮಗೆ ಯಾವುದು ಸರಿ, ಯಾವುದು ತಪ್ಪು ಎಂಬ ವ್ಯತ್ಯಾಸವೇ ತಿಳಿಯುತ್ತಿಲ್ಲ ಎಂಬುದು ನಮಗೆಲ್ಲರಿಗೂ ಗೊತ್ತು’ ಎಂದು ಖೇರ್ ತಿರುಗೇಟು ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs ENG: ಏಕದಿನ ಸರಣಿಯಲ್ಲಿ 7 ದಾಖಲೆಗಳ ಮೇಲೆ ಕಣ್ಣಿಟ್ಟ ಕಿಂಗ್ ಕೊಹ್ಲಿ – Kannada News | Virat Kohli’s ODI Comeback vs England: Eyeing Historic Records and Milestones

ಏಕದಿನ ಕ್ರಿಕೆಟ್​ನಲ್ಲಿ ಪ್ರಸ್ತುತ ಮೂರನೇ ಕ್ರಮಾಂಕದಲ್ಲಿ ಆಡುತ್ತಿರುವ ಕೊಹ್ಲಿ, ಈ ಸರಣಿಯಲ್ಲಿ 81 ರನ್​ಗಳ ಗಡಿ ದಾಟಿದರೆ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು 16,000 ರನ್​ಗಳನ್ನು ಪೂರೈಸಲಿದ್ದಾರೆ(PC-PTI).

Source link

ಮಾವು ಮಧುಮೇಹಿಗಳಿಗೆ ಮಾತ್ರವಲ್ಲ, ಕೆಲವು ಆರೋಗ್ಯ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ – Kannada News | Mangoes Are Healthy, But Not For Everyone: Know Who Should Be Careful

ಮಾವಿನಹಣ್ಣು ತಿನ್ನುವಾಗ ಈ ಅಂಶಗಳನ್ನು ನೆನಪಿಟ್ಟುಕೊಳ್ಳಿImage Credit source: Getty Images

ಮಳೆಗಾಲವಾದರೂ ಮಾವಿನ ಹಣ್ಣಿನ ಸೀಸನ್ ಇನ್ನೂ ಮುಗಿದಿಲ್ಲ. ರುಚಿ, ಸುವಾಸನೆ ಮತ್ತು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಮಾವು ಬಹುತೇಕರ ನೆಚ್ಚಿನ ಹಣ್ಣು. ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಫೈಬರ್, ಪೊಟ್ಯಾಸಿಯಂ, ಫೋಲೇಟ್ ಹಾಗೂ ಹಲವು ಆಂಟಿಆಕ್ಸಿಡೆಂಟ್‌ಗಳು ಇರುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಆದರೆ ಮಾವು ಆರೋಗ್ಯಕರವಾದರೂ ಎಲ್ಲರೂ ಸೇವನೆ ಮಾಡಬಹುದೇ ಎಂಬ ಪ್ರಶ್ನೆಗೆ ಹುಟ್ಟುಕೊಳ್ಳುತ್ತದೆ. ಆರೋಗ್ಯ ತಜ್ಞರ ಪ್ರಕಾರ ಕೆಲವು ಆರೋಗ್ಯ ಸಮಸ್ಯೆ ಇರುವವರಿಗೆ ಇದು ಒಳ್ಳೆಯದಲ್ಲ. ಯಾರಿಗೆ, ಯಾಕೆ ಒಳ್ಳೆಯದಲ್ಲ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಈ ಆರೋಗ್ಯ ಸಮಸ್ಯೆ ಇರುವವರು ಮಾವು ತಿನ್ನುವಾಗ ಎಚ್ಚರಿಕೆ ವಹಿಸಿ;

ಮಧುಮೇಹ ಇರುವವರು ಮಾವನ್ನು ಸಂಪೂರ್ಣವಾಗಿ ಬಿಡಬೇಕಾಗಿಲ್ಲ. ಆದರೆ ಒಂದೇ ಬಾರಿಗೆ ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಬಹುದು. ಆದ್ದರಿಂದ ವೈದ್ಯರು ಅಥವಾ ಪೌಷ್ಟಿಕ ತಜ್ಞರು ಸೂಚಿಸುವ ಪ್ರಮಾಣದಲ್ಲಿಯೇ ಸೇವಿಸುವುದು ಉತ್ತಮ. ಇದೇ ಸಲಹೆ ಪ್ರೀ-ಡಯಾಬಿಟಿಸ್, ಇನ್ಸುಲಿನ್ ರೆಸಿಸ್ಟೆನ್ಸ್ ಹಾಗೂ ಮೆಟಾಬಾಲಿಕ್ ಸಿಂಡ್ರೋಮ್ ಇರುವವರಿಗೂ ಅನ್ವಯಿಸುತ್ತದೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಸಹ ಎಚ್ಚರಿಕೆ ವಹಿಸಬೇಕು. ಮಾವಿನಲ್ಲಿ ನೈಸರ್ಗಿಕ ಸಕ್ಕರೆ ಮತ್ತು ಕ್ಯಾಲೊರಿ ಇರುವುದರಿಂದ ಅತಿಯಾಗಿ ತಿಂದರೆ ತೂಕ ಮಾಡಿಕೊಳ್ಳುವುದಕ್ಕೆ ಅಡ್ಡಿಯಾಗಬಹುದು. ಫ್ಯಾಟಿ ಲಿವರ್ ಸಮಸ್ಯೆ ಇರುವವರು ಮಾವನ್ನು ಸಮತೋಲಿತ ಆಹಾರದ ಭಾಗವಾಗಿ ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ ಅಗತ್ಯವನ್ನು ಪೂರೈಸಿಕೊಳ್ಳಲು ಈ ಆಹಾರಗಳ ಸೇವನೆ ಮಾಡಿ!

ಮಾವು ತಿನ್ನುವ ಸರಿಯಾದ ವಿಧಾನ ಯಾವುದು?

ಸಾಮಾನ್ಯವಾಗಿ ಮಾವಿನ ಜ್ಯೂಸ್, ಮಿಲ್ಕ್‌ಶೇಕ್ ಅಥವಾ ಹೆಚ್ಚು ಸಕ್ಕರೆ ಸೇರಿಸಿದ ಮಾವಿನ ಸಿಹಿ ಪದಾರ್ಥಗಳಿಗಿಂತ ಹಣ್ಣನ್ನೇ ತಿನ್ನುವುದು ಆರೋಗ್ಯಕರ. ಮೊಸರು ಅಥವಾ ಒಂದು ಮುಷ್ಟಿ ಬಾದಾಮಿ, ಗೋಡಂಬಿ ಅಥವಾ ಇತರ ನಟ್ಸ್ ಜೊತೆಗೆ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ವೇಗವಾಗಿ ಏರುವ ಸಾಧ್ಯತೆ ಕಡಿಮೆಯಾಗಬಹುದು.

ತಜ್ಞರು ನೀಡಿರುವ ಹೆಚ್ಚುವರಿ ಸಲಹೆ

ಮಾವು ತಿನ್ನುವ ಮೊದಲು ಚೆನ್ನಾಗಿ ತೊಳೆದು 20–30 ನಿಮಿಷ ನೀರಿನಲ್ಲಿ ನೆನೆಸಿಡುವುದು ಉತ್ತಮ ಎಂದು ಕೆಲವು ತಜ್ಞರು ಸಲಹೆ ನೀಡುತ್ತಾರೆ. ಇದರಿಂದ ಮೇಲ್ಮೈಯಲ್ಲಿರುವ ಧೂಳು, ಕಲ್ಮಶಗಳು ಹಾಗೂ ಕೆಲವು ಲ್ಯಾಟೆಕ್ಸ್ ಅಂಶಗಳು ಕಡಿಮೆಯಾಗಬಹುದು. ಆದರೆ ಇದರಿಂದ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯವಿಲ್ಲ.

ಅತಿಯಾಗಿ ಹಣ್ಣಾದ ಮಾವಿಗಿಂತ ಸಹಜವಾಗಿ ಹಣ್ಣಾದ ಹಣ್ಣನ್ನು ಆಯ್ಕೆ ಮಾಡುವುದು ಉತ್ತಮ. ಒಂದು ದಿನಕ್ಕೆ ಸುಮಾರು ಒಂದು ಮಧ್ಯಮ ಗಾತ್ರದ ಮಾವು ಸಾಕಷ್ಟು ಎಂದು ಪರಿಗಣಿಸಲಾಗುತ್ತದೆ. ಯಾವುದೇ ಆಹಾರವನ್ನು ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದ ಜೊತೆಗೆ ಮಾವನ್ನು ಸೇವಿಸಿದರೆ ಅದರ ಪೌಷ್ಟಿಕ ಲಾಭಗಳನ್ನು ಸುರಕ್ಷಿತವಾಗಿ ಪಡೆಯಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’; ಚುನಾವಣಾ ಆಯುಕ್ತರೆದುರು ಹೀಗಂದಿದ್ದರಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ – Kannada News | Will commit suicide; What EX PM Manmohan Singh told former CEC Quraishi during 2012 elections

ನವದೆಹಲಿ, ಜುಲೈ 13: ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಅವರು ತಮ್ಮ ಹೊಸ ಪುಸ್ತಕದಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ (Manmohan Singh) ಅವರಿಗೆ ಸಂಬಂಧಿಸಿದ ಕೆಲವು ಕುತೂಹಲಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. 2012ರ ಉತ್ತರ ಪ್ರದೇಶದ ಚುನಾವಣೆಯ ಸಂದರ್ಭದಲ್ಲಿ ತಮ್ಮದೇ ಸರ್ಕಾರದ ಸಚಿವರು ಚುನಾವಣಾ ಆಯೋಗದ ವಿರುದ್ಧ ಆಡುತ್ತಿದ್ದ ಹಗುರವಾದ ಮಾತುಗಳಿಂದ ಬೇಸತ್ತಿದ್ದ ಮನಮೋಹನ್ ಸಿಂಗ್, “ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಕೂಡ ಹೇಳಿದ್ದರು ಎಂದು ಖುರೇಷಿ ನೆನಪಿಸಿಕೊಂಡಿದ್ದಾರೆ.

ಖುರೇಷಿ ಅವರ ‘India and I: A Hundred Memories, Not a Memoir’ (ಇಂಡಿಯಾ ಆ್ಯಂಡ್ ಐ: ಎ ಹಂಡ್ರೆಡ್ ಮೆಮೊರಿಸ್, ನಾಟ್ ಎ ಮೆಮೊಯಿರ್) ಎಂಬ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ.

ಏನಿದು ಘಟನೆ?:

2012ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಅಂದಿನ ಕೇಂದ್ರ ಸಚಿವರಾಗಿದ್ದ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು, “ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗಗಳಲ್ಲಿ ಮುಸ್ಲಿಮರ ಕೋಟಾವನ್ನು ಶೇ. 4.5ರಿಂದ 9ಕ್ಕೆ ಹೆಚ್ಚಿಸಲಾಗುವುದು” ಎಂದು ಭರವಸೆ ನೀಡಿದ್ದರು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಯಾವುದೇ ಹೊಸ ಯೋಜನೆ ಅಥವಾ ಕೋಟಾವನ್ನು ಪ್ರಕಟಿಸುವಂತಿಲ್ಲ ಎಂದು ಆರೋಪಿಸಿ ಬಿಜೆಪಿ ತಕ್ಷಣವೇ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

ಇದನ್ನೂ ಓದಿ: ಹಾರ್ಟ್​ ಸರ್ಜರಿ ಬಳಿಕ ಮನಮೋಹನ್ ಸಿಂಗ್ ವೈದ್ಯರ ಬಳಿ ತಮ್ಮ ಆರೋಗ್ಯದ ವಿಚಾರ ಬಿಟ್ಟು ಬೇರೇನೋ ಕೇಳಿದ್ದರಂತೆ

“ಈ ಕುರಿತು ನಾವು 4 ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದೆವು. ಕಾಂಗ್ರೆಸ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ ಮತ್ತು ಬಿಜೆಪಿ ಪರವಾಗಿ ಅರುಣ್ ಜೇಟ್ಲಿ ಅವರಂತಹ ಇಬ್ಬರು ಘಟಾನುಘಟಿ ತಜ್ಞರು ವಾದ-ಪ್ರತಿವಾದ ನಡೆಸಿದರು. ಅಂತಿಮವಾಗಿ, ನೀತಿ ಸಂಹಿತೆಯ ಅಡಿಯಲ್ಲಿ ಲಭ್ಯವಿರುವ ಅತ್ಯಂತ ಕಠಿಣ ಕ್ರಮವಾಗಿ ನಾವು ಸಲ್ಮಾನ್ ಖುರ್ಷಿದ್ ಅವರಿಗೆ ಎಚ್ಚರಿಕೆ ನೀಡಿದೆವು” ಎಂದು ಖುರೇಷಿ ಬರೆದಿದ್ದಾರೆ.

ಸಚಿವರಿಂದ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ:

ಚುನಾವಣಾ ಆಯೋಗದ ಈ ಎಚ್ಚರಿಕೆಯಿಂದ ಕೆರಳಿದ ಅಂದಿನ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಕೆಲವು ಸಚಿವರು ಬಹಿರಂಗವಾಗಿಯೇ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಟೀಕಿಸಿದ್ದರು. ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಇದರಿಂದ ಆಗ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಎಸ್.ವೈ. ಖುರೇಷಿ ತೀವ್ರ ಬೇಸರಗೊಂಡಿದ್ದರು. ಕೇಂದ್ರ ಸಚಿವರ ಬೇಜವಾಬ್ದಾರಿ ವರ್ತನೆಯಿಂದ ಮನನೊಂದ ಖುರೇಷಿ ಪ್ರಧಾನಮಂತ್ರಿಗಳ ಆಪ್ತ ಕಾರ್ಯದರ್ಶಿಯ ಬಳಿ ಈ ಬಗ್ಗೆ ಬೇಸರ ತೋಡಿಕೊಂಡಿದ್ದರು.

ಅದೇ ದಿನ ಪ್ರಧಾನಿ ಮನಮೋಹನ್ ಸಿಂಗ್ ಕರೆ ಮಾಡಿ ಖುರೇಷಿಯವರಿಗೆ ಮನೆಗೆ ಬರಲು ಸೂಚಿಸಿದ್ದರಂತೆ. ಸಂಜೆ 7 ಗಂಟೆಗೆ ನಮ್ಮ ಮನೆಗೆ ಬನ್ನಿ ಎಂದಿದ್ದರಂತೆ. ಅದರಂತೆ ಖುರೇಷಿ ಅವರು ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ತೆರಳಿದ್ದರು.

ಆತ್ಮಹತ್ಯೆಯ ಮಾತನ್ನಾಡಿದ್ದರು ಮನಮೋಹನ್ ಸಿಂಗ್:

ಆಗ ತಮ್ಮ ಸರ್ಕಾರದ ಸಚಿವರ ವರ್ತನೆಯಿಂದ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಬಹಳ ಮುಜುಗರಕ್ಕೊಳಗಾಗಿದ್ದರು ಮತ್ತು ನೊಂದಿದ್ದರು. ಈ ಬಗ್ಗೆ ಖುರೇಷಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. “ನಾನು ಪ್ರಧಾನಿಗಳ ನಿವಾಸಕ್ಕೆ ಹೋದಾಗ ಡಾ. ಮನಮೋಹನ್ ಸಿಂಗ್ ಅವರು ಅತ್ಯಂತ ಬೇಸರದಲ್ಲಿದ್ದರು. ನನ್ನನ್ನು ನೋಡಿದ ಕೂಡಲೆ ಅವರು, ಖುರೇಷಿ ಅವರೇ, ನನ್ನ ಸಚಿವರು ಈ ರೀತಿ ಮಾತನಾಡುತ್ತಿದ್ದರೆ ನಾನೇನು ಮಾಡಲಿ? ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದರು. ಅವರ ಬಾಯಿಂದ ಅಂತಹ ಮಾತುಗಳನ್ನು ಕೇಳಿ ನನಗೆ ತೀವ್ರ ಆಘಾತವಾಯಿತು. ನಂತರ ನಾನೇ ಅವರಿಗೆ ಸಾಂತ್ವನ ಹೇಳಿ ಮನೆಗೆ ಬಂದಿದ್ದೆ” ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: ಮನಮೋಹನ್ ಸಿಂಗ್ ನಿಧನದ ಬಳಿಕ ಪ್ರಮುಖ ನಿರ್ಧಾರ ತೆಗೆದುಕೊಂಡ ಸಲ್ಮಾನ್ ಖಾನ್

“ನನಗೆ ಈ ವಿಷಯದ ಬಗ್ಗೆ ಅರಿವೇ ಇರಲಿಲ್ಲ. ಒಂದು ವೇಳೆ ಗೊತ್ತಿದ್ದಿದ್ದರೆ ಅವರಿಗೆ ನಾನೇ ತರಾಟೆಗೆ ತೆಗೆದುಕೊಳ್ಳುತ್ತಿದ್ದೆ. ಇನ್ನು ಮುಂದೆ ಏನೇ ಇದ್ದರೂ ನೇರವಾಗಿ ನನಗೆ ಫೋನ್ ಮಾಡಿ ತಿಳಿಸಿ” ಎಂದು ಮನಮೋಹನ್ ಸಿಂಗ್ ಹೇಳಿದ್ದರೆಂದು ಖುರೇಷಿ ಬರೆದಿದ್ದಾರೆ.

“ಚುನಾವಣಾ ಆಯೋಗವು ಕೇವಲ ಭಾರತದ ಹೆಮ್ಮೆ ಮಾತ್ರವಲ್ಲ, ಅದು ನಮ್ಮ ಪ್ರಜಾಪ್ರಭುತ್ವದ ಆತ್ಮ. ಅದನ್ನು ನಾವು ಕಳೆದುಕೊಂಡರೆ, ಎಲ್ಲವನ್ನೂ ಕಳೆದುಕೊಂಡಂತೆ.” ಎಂದು ಮನಮೋಹನ್ ಸಿಂಗ್ ಹೇಳಿದ್ದ ಮಾತು ನನಗೆ ಇನ್ನೂ ನೆನಪಿದೆ. “ರಾಜಕೀಯದ ಕಾರಣಕ್ಕಾಗಿ ಅಲ್ಲ, ಬದಲಿಗೆ ಸಾಂವಿಧಾನಿಕ ಶಿಷ್ಟಾಚಾರವನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ ತಮ್ಮ ಜೀವನದ ತತ್ವವಾಗಿಸಿಕೊಂಡಿದ್ದ ಒಬ್ಬ ನಾಯಕನನ್ನು ನೋಡಿ ನಾನು ಭಾವುಕನಾಗಿದ್ದೆ” ಎಂದು ಖುರೇಷಿ ನೆನಪಿಸಿಕೊಂಡಿದ್ದಾರೆ.

ಡಾ. ಮನಮೋಹನ್ ಸಿಂಗ್ ಅತ್ಯಂತ ಸೌಮ್ಯ ಸ್ವಭಾವದ ಮತ್ತು ಗೌರವಾನ್ವಿತ ರಾಜಕಾರಣಿಯಾಗಿದ್ದರು. ತಮ್ಮದೇ ಸಂಪುಟದ ಸಹೋದ್ಯೋಗಿಗಳು ಚುನಾವಣಾ ಆಯೋಗದಂತಹ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯ ಘನತೆಗೆ ಧಕ್ಕೆ ತರುತ್ತಿರುವುದನ್ನು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಪ್ರಧಾನಿಯವರ ಈ ಭಾವುಕ ಪ್ರತಿಕ್ರಿಯೆಯು ಅವರು ಸಾಂವಿಧಾನಿಕ ಸಂಸ್ಥೆಗಳಿಗೆ ನೀಡುತ್ತಿದ್ದ ಗೌರವ ಮತ್ತು ಅವರ ಪ್ರಾಮಾಣಿಕತೆಯನ್ನು ತೋರಿಸುತ್ತದೆ ಎಂದು ಖುರೇಷಿ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:04 pm, Mon, 13 July 26

Source link

Exit mobile version