ನಮ್ಮಲ್ಲಿರುವ ಕೆಟ್ಟ ಅಭ್ಯಾಸಗಳು (bad habits) ನಮ್ಮನ್ನು ಮುಂದುವರೆಯಲು ಬಿಡುವುದಿಲ್ಲ, ಪ್ರಗತಿಗೆ ಅಡ್ಡಿಯನ್ನು ಉಂಟು ಮಾಡುತ್ತವೆ. ಆ ಅಭ್ಯಾಸವನ್ನು ನಿಯಂತ್ರಿಸಲು ಕಲಿತವರು ಮಾತ್ರ ಜೀವನದಲ್ಲಿ ಮುಂದುವರೆಯಲು ಸಾಧ್ಯ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಅವರ ಪ್ರಕಾರ ಪ್ರತಿಯೊಬ್ಬರೂ ಸಹ ಈ ಕೆಲವೊಂದು ಅಭ್ಯಾಸಗಳನ್ನು ನಿಯಂತ್ರಿಸಲೇಬೇಕು, ಇದು ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಸಾಕಷ್ಟು ಸಹಾಯವನ್ನು ಮಾಡುತ್ತದೆ. ಹಾಗಿದ್ರೆ ಜೀವನವನ್ನು ಸುಧಾರಿಸಲು, ಜೀವನದಲ್ಲಿ ಸಕಾರಾತ್ಮಕವಾಗಿ ಮುಂದುವರೆಯಲು ಯಾವೆಲ್ಲಾ ವಿಷಯಗಳನ್ನು ನಿಯಂತ್ರಿಸಬೇಕು ಎಂಬುದನ್ನು ನೋಡೋಣ ಬನ್ನಿ.
ಜೀವನದಲ್ಲಿ ಮುಂದುವರೆಯಲು ನಿಯಂತ್ರಿಸಬೇಕಾದ ಅಭ್ಯಾಸಗಳು:
ಕೋಪವನ್ನು ನಿಯಂತ್ರಣದಲ್ಲಿಡಿ: ಆಚಾರ್ಯ ಚಾಣಕ್ಯರ ಪ್ರಕಾರ, ವ್ಯಕ್ತಿಯ ದೊಡ್ಡ ಶತ್ರು ಆತನ ಕೋಪ. ನಾವು ಕೋಪಗೊಂಡಾಗ, ನಮ್ಮ ಮೆದುಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಕೋಪದ ಮನಸ್ಥಿತಿಯಲ್ಲಿಯೇ ಹೆಚ್ಚಾಗಿ ನಾವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಇದು ಸಂಬಂಧವನ್ನು ಹಾಳು ಮಾಡುವುದಲ್ಲದೆ ಕೆಲಸದ ವಿಷಯದಲ್ಲೂ ಸಾಕಷ್ಟು ಅಡ್ಡಿಯನ್ನು ಉಂಟುಮಾಡುತ್ತವೆ. ಹಾಗಾಗಿ ಕೋಪಗೊಂಡಾಗ ತಕ್ಷಣ ಪ್ರತಿಕ್ರಿಯಿಸುವ ಬದಲು ಶಾಂತವಾಗಿರಿ, ಇದು ಮುಂದಾಗುವ ಅನೇಕ ಅನಾಹುತಗಳನ್ನು ತಪ್ಪಿಸುವುದು ಮಅತ್ರವಲ್ಲದೆ, ನಿಮಗೆ ಜೀವನದಲ್ಲಿ ಮುಂದುವರೆಯಲೂ ಸಹ ಸಹಾಯ ಮಾಡುತ್ತದೆ.
ಮಾತನ್ನು ನಿಯಂತ್ರಿಸಿ: ಮಾತನಾಡುವ ಮೊದಲು ನಾವು ಯಾವಾಗಲೂ ಎಚ್ಚರಿಕೆಯಿಂದ ಯೋಚಿಸಬೇಕು ಮತ್ತು ಯಾವಾಗಲೂ ಸಿಹಿ ಪದಗಳನ್ನು ಬಳಸಬೇಕು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಯೋಚಿಸದೆ ಏನೇನೋ ಮಾತನಾಡುವ ಅಭ್ಯಾಸ ಒಳ್ಳೆಯ ಸಂಬಂಧಗಳನ್ನು ಹಾಳು ಮಾಡುವುದಲ್ಲದೆ, ನಿಮ್ಮ ಎಲ್ಲಾ ಯೋಜನೆಗಳನ್ನು ಇತರರ ಬಳಿ ಹಂಚಿಕೊಳ್ಳುವುದರಿಂದ ನಿಮ್ಮ ಪ್ರಗತಿಗೂ ಅಡ್ಡಿಯನ್ನು ಉಂಟು ಮಾಡುತ್ತದೆ. ಆದ್ದರಿಂದ ಮಾತಿನ ಮೇಲೆ ನಿಯಂತ್ರಣವಿರಲಿ, ಯಾವಾಗಲೂ ಹಿತಮಿತವಾಗಿ ಮಾತನಾಡಿ.
ಇದನ್ನೂ ಓದಿ: ಶ್ರೀಮಂತಿಕೆ ಗಳಿಸಲು ಚಾಣಕ್ಯರು ಹೇಳಿಕೊಟ್ಟಿರುವ ಸಲಹೆಗಳಿವು
ಆಸೆಗಳನ್ನು ನಿಯಂತ್ರಿಸಿ: ಆಚಾರ್ಯ ಚಾಣಕ್ಯರ ಪ್ರಕಾರ, ನಾವು ನಮ್ಮ ಮನಸ್ಸನ್ನು ನಿಯಂತ್ರಿಸದಿದ್ದರೆ ಮತ್ತು ದುರಾಸೆಯನ್ನು ನಿಯಂತ್ರಿಸದಿದ್ದರೆ, ಜೀವನದಲ್ಲಿ ಸಂತೋಷವಾಗಿರಲು ಎಂದಿಗೂ ಸಾಧ್ಯವಿಲ್ಲ ಹಾಗಾಗಿ ಇರುವುದರಲ್ಲಿಯೇ ತೃಪ್ತಿಯನ್ನು ಪಟ್ಟು ಗುರಿಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ. ಖಂಡಿತವಾಗಿಯೂ ಇದು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಉಂಟುಮಾಡುತ್ತವೆ.
ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ: ಆಚಾರ್ಯ ಚಾಣಕ್ಯರ ಪ್ರಕಾರ ಹಣ ಸಂಪಾದಿಸುವುದು ಎಷ್ಟು ಮುಖ್ಯವೋ ಅದನ್ನು ಬುದ್ಧಿವಂತಿಕೆಯಿಂದ ಬಳಸುವುದು ಸಹ ಅಷ್ಟೇ ಮುಖ್ಯ. ಹಣವನ್ನು ವ್ಯರ್ಥ ಖರ್ಚು ಮಾಡಿದರೆ ಕೈಯಲ್ಲಿ ಹಣ ಉಳಿಯುವುದು ಕೂಡ ಇಲ್ಲ, ಇದು ಶ್ರೀಮಂತಿಕೆ ಗಳಿಸುವ ನಿಮ್ಮ ಕನಸಿಗೂ ಅಡ್ಡಿಯನ್ನು ಉಂಟು ಮಾಡುತ್ತದೆ. ಹಾಗಾಗಿ ಎಂದಿಗೂ ವ್ಯರ್ಥ ಖರ್ಚು ಮಾಡಬೇಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
