ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ ಅಗತ್ಯವನ್ನು ಪೂರೈಸಿಕೊಳ್ಳಲು ಈ ಆಹಾರಗಳ ಸೇವನೆ ಮಾಡಿ! – Kannada News | Why Pregnant Women Need More Calcium Than Usual

ಗರ್ಭಾವಸ್ಥೆ ಮಹಿಳೆಯ ಜೀವನದ ಅತ್ಯಂತ ಮಹತ್ವದ ಹಂತಗಳಲ್ಲಿ ಒಂದು. ಈ ಸಮಯದಲ್ಲಿ ತಾಯಿಯ ದೇಹದಲ್ಲಿ ಅನೇಕ ರೀತಿಯ ದೈಹಿಕ ಮತ್ತು ಹಾರ್ಮೋನಲ್ ಬದಲಾವಣೆಗಳಾಗುತ್ತದೆ. ಅದರ ಜೊತೆಗೆ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಬೇಕಾದ ಪೌಷ್ಟಿಕಾಂಶಗಳನ್ನು ಒದಗಿಸುವ ಜವಾಬ್ದಾರಿಯೂ ತಾಯಿಯದ್ದಾಗಿರುತ್ತದೆ. ಆದ್ದರಿಂದ ಪ್ರೋಟೀನ್, ಕಬ್ಬಿಣ, ಫೋಲಿಕ್ ಆಸಿಡ್ ಜೊತೆಗೆ ಕ್ಯಾಲ್ಸಿಯಂ ಕೂಡ ಅತ್ಯಗತ್ಯ ಖನಿಜವಾಗಿದೆ. ಕ್ಯಾಲ್ಸಿಯಂ ಕೊರತೆಯಾದರೆ ತಾಯಿಯ ಮೂಳೆಗಳು ದುರ್ಬಲವಾಗುವುದಷ್ಟೇ ಅಲ್ಲ, ಮಗುವಿನ ಮೂಳೆ ಮತ್ತು ಹಲ್ಲುಗಳ ಬೆಳವಣಿಗೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಗರ್ಭಿಣಿಯರಿಗೆ ಕ್ಯಾಲ್ಸಿಯಂ ಏಕೆ ಮುಖ್ಯ?

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಗರ್ಭದಲ್ಲಿರುವ ಮಗುವಿನ ಮೂಳೆಗಳು, ಹಲ್ಲುಗಳು, ಹೃದಯ, ನರಮಂಡಲ ಮತ್ತು ಸ್ನಾಯುಗಳ ಸರಿಯಾದ ಬೆಳವಣಿಗೆಗೆ ಕ್ಯಾಲ್ಸಿಯಂ ಅತ್ಯಗತ್ಯ. ಆಹಾರದಿಂದ ಸಾಕಷ್ಟು ಕ್ಯಾಲ್ಸಿಯಂ ದೊರೆಯದಿದ್ದರೆ, ಮಗುವಿನ ಅಗತ್ಯವನ್ನು ಪೂರೈಸಲು ತಾಯಿಯ ಮೂಳೆಗಳಲ್ಲಿ ಸಂಗ್ರಹವಾಗಿರುವ ಕ್ಯಾಲ್ಸಿಯಂ ಬಳಸಲಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಮೂಳೆ ಸಾಂದ್ರತೆ ಕಡಿಮೆಯಾಗುವ ಅಪಾಯ ಹೆಚ್ಚಬಹುದು. ಇದಲ್ಲದೆ, ಕಡಿಮೆ ಕ್ಯಾಲ್ಸಿಯಂ ಸೇವಿಸುವ ಮಹಿಳೆಯರಲ್ಲಿ ಪ್ರೀ-ಎಕ್ಲಾಂಪ್ಸಿಯಾ (ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡ) ಅಪಾಯ ಹೆಚ್ಚಿರಬಹುದು. ವೈದ್ಯರ ಸಲಹೆಯಂತೆ ಕ್ಯಾಲ್ಸಿಯಂ ಪೂರಕಗಳನ್ನು ತೆಗೆದುಕೊಳ್ಳುವುದರಿಂದ ಈ ಅಪಾಯವನ್ನು ಕೆಲವು ಸಂದರ್ಭಗಳಲ್ಲಿ ಕಡಿಮೆ ಮಾಡಬಹುದು.

ಕ್ಯಾಲ್ಸಿಯಂ ಅಗತ್ಯ ಪೂರೈಸಲು ಸೇವಿಸಬೇಕಾದ ಆಹಾರಗಳು?

  • ಹಾಲು, ಮೊಸರು, ಮಜ್ಜಿಗೆ, ಪನೀರ್
  • ರಾಗಿ ಮತ್ತು ಎಳ್ಳು
  • ಸೋಯಾ, ಟೋಫು
  • ಬಾದಾಮಿ
  • ಹಸಿರು ಸೊಪ್ಪುಗಳು (ಮಿತ ಪ್ರಮಾಣದಲ್ಲಿ)
  • ಕ್ಯಾಲ್ಸಿಯಂ ಫೋರ್ಟಿಫೈಡ್ ಆಹಾರ ಪದಾರ್ಥಗಳು

ಇದರ ಜೊತೆಗೆ ವಿಟಮಿನ್ ಡಿ ಕೂಡ ಸಮರ್ಪಕವಾಗಿರಬೇಕು. ಇದಿಲ್ಲದೆ ದೇಹವು ಕ್ಯಾಲ್ಸಿಯಂ ಅನ್ನು ಸರಿಯಾಗಿ ಹೀರಿಕೊಳ್ಳುವುದಿಲ್ಲ. ಹಾಗಾಗಿ ಬೆಳಗಿನ ಸೂರ್ಯನ ಬೆಳಕಿನಲ್ಲಿ 15–20 ನಿಮಿಷ ಇರುವುದೂ ಸಹಕಾರಿ.

ಇದನ್ನೂ ಓದಿ: ಊಟ ಮಾಡಿದ ತಕ್ಷಣ ಈ ತಪ್ಪುಗಳನ್ನು ಮಾಡಬೇಡಿ! ಇದು ಜೀರ್ಣಶಕ್ತಿಯನ್ನು ಹಾಳು ಮಾಡುತ್ತದೆ

ಕ್ಯಾಲ್ಸಿಯಂ ಮಾತ್ರೆ ಸೇವಿಸುವಾಗ ಗಮನಿಸಬೇಕಾದ ವಿಷಯಗಳು

ಕ್ಯಾಲ್ಸಿಯಂ ಮಾತ್ರೆಗಳನ್ನು ವೈದ್ಯರ ಸಲಹೆಯಂತೆ ಮಾತ್ರ ಸೇವಿಸಬೇಕು. ಕಬ್ಬಿಣ (Iron) ಮಾತ್ರೆ ಮತ್ತು ಕ್ಯಾಲ್ಸಿಯಂ ಮಾತ್ರೆಯನ್ನು ಒಂದೇ ಸಮಯದಲ್ಲಿ ಸೇವಿಸಬಾರದು. ಎರಡರ ನಡುವೆ ಕನಿಷ್ಠ 2 ಗಂಟೆಗಳ ಅಂತರ ಇರಬೇಕು. ಸಾಕಷ್ಟು ನೀರು ಕುಡಿಯುವುದು ಮತ್ತು ನಿಯಮಿತ ಗರ್ಭಪೂರ್ವ ತಪಾಸಣೆ ಮಾಡಿಸಿಕೊಳ್ಳುವುದೂ ಮುಖ್ಯ.

ತಜ್ಞರ ಸಲಹೆ

ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ ಕೊರತೆಯ ಲಕ್ಷಣಗಳಾದ ಕಾಲು ಸೆಳೆತ, ಹಲ್ಲು ದುರ್ಬಲವಾಗುವುದು, ಸ್ನಾಯು ನೋವು ಅಥವಾ ಅತಿಯಾದ ಆಯಾಸ ಕಂಡುಬಂದರೆ ನಿರ್ಲಕ್ಷಿಸಬೇಡಿ. ಸ್ವಯಂ ಔಷಧಿ ತೆಗೆದುಕೊಳ್ಳುವುದಕ್ಕಿಂತ ಪ್ರಸೂತಿ ತಜ್ಞರ ಸಲಹೆ ಪಡೆದು ಆಹಾರ ಮತ್ತು ಪೂರಕಗಳ ಪ್ರಮಾಣವನ್ನು ನಿಗದಿಪಡಿಸಿಕೊಳ್ಳುವುದು ಸುರಕ್ಷಿತ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಸರಿಯಾದ ಪೌಷ್ಟಿಕಾಂಶವೇ ತಾಯಿ ಹಾಗೂ ಮಗುವಿನ ಆರೋಗ್ಯಕರ ಭವಿಷ್ಯಕ್ಕೆ ಭದ್ರ ಅಡಿಪಾಯವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಟೂಡೆಂಟ್ ಯೂನಿಯನ್ ‌ಎಲೆಕ್ಷನ್ ಮತ್ತೆ ಜಾರಿ ಮಾಡುವುದಾಗಿ ಹೇಳಿ ಸೈಲೆಂಟ್ ಆದ ಸರ್ಕಾರ: ಕಾರಣವೇನು? – Kannada News | Karnataka Government Silent on Promise to Reintroduce Student Union Elections: What’s the Reason

ಪ್ರಾತಿನಿಧಿಕ ಚಿತ್ರ Image Credit source: Getty images

ಬೆಂಗಳೂರು, ಜುಲೈ 13: ರಾಜ್ಯದಲ್ಲಿ ಬ್ಯಾನ್ ಆಗಿದ್ದ ಕಾಲೇಜು ಎಲೆಕ್ಷನ್ (College Elections) ಮತ್ತೆ ಶುರು ಮಾಡಲು ಸರ್ಕಾರ ಮುಂದಾಗಿದೆ. ಆ ಮೂಲಕ ಕಾಲೇಜು ಹಂತದಲ್ಲಿಯೇ ಸ್ಟೂಡೆಂಟ್ ಲೀಡರ್ ಹುಟ್ಟುಹಾಕುಲು ಸರ್ಕಾರ ಸಜ್ಜಾಗಿದೆ. ಈ ವರ್ಷದ ಆರಂಭದಿಂದಲೇ ಕಾಲೇಜುಗಳಲ್ಲಿ ಹಾಗೂ ವಿವಿಗಳಲ್ಲಿ ಎಲೆಕ್ಷನ್ ನಡೆಸಲು ಮುಂದಾಗಿತ್ತು. ಇತ್ತ ವಿದ್ಯಾರ್ಥಿಗಳು ಕೂಡ ಸ್ಟೂಡೆಂಟ್ ಯೂನಿಯನ್ ‌ಎಲೆಕ್ಷನ್ ಮರುಕಳಿಸಲಿದೆ ಅಂತ ರೆಡಿಯಾಗಿದ್ದರು. ಆದರೆ ಯಾಕೋ ಸರ್ಕಾರ ಈ ಬಗ್ಗೆ ಸೈಲೆಂಟ್ ಆಗಿದೆ.

ಶೈಕ್ಷಣಿಕ ವರ್ಷ ಶುರುವಾಗಿದ್ದರೂ ಉನ್ನತ ಶಿಕ್ಷಣ ಸಚಿವರೂ ಇಲ್ಲ, ಚುನಾವಣೆಯೂ ಇಲ್ಲ

ಕಾಲೇಜು ಹಾಗೂ ವಿವಿಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸುವ ಸಂಬಂಧ ಈಗಾಗಲೇ ಸರ್ಕಾರ ಸಮಿತಿ ರಚನೆ ಮಾಡಿ ವರದಿ ಪಡೆದಿದೆ. ಕಾಲೇಜುಗಳಲ್ಲಿ ಹಾಗೂ ವಿವಿಗಳಲ್ಲಿ ಚುನಾವಣೆ ಬೇಕಾ, ಬೇಡ್ವಾ ಎಂಬುವುದರ ಕುರಿತು ಶಿಕ್ಷಣ ತಜ್ಞರು, ಸಾರ್ವಜನಿಕರು ಹಾಗೂ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಅದರಂತೆ 2026-27ನೇ ಸಾಲಿನಿಂದ ಕಾಲೇಜುಗಳಲ್ಲಿ ಚುನಾವಣೆ ಶುರು ಮಾಡಲು ಮುಂದಾಗಿತ್ತು. ಆದರೆ ಶೈಕ್ಷಣಿಕ ವರ್ಷ ಶುರುವಾಗಿದ್ದರೂ ಉನ್ನತ ಶಿಕ್ಷಣ ಸಚಿವರೂ ಇಲ್ಲ, ಕಾಲೇಜು ಚುನಾವಣೆಯೂ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ವಿದ್ಯಾರ್ಥಿ ವಲಯದಿಂದ ಸರ್ಕಾರಕ್ಕೆ ಚುನಾವಣೆ ನಡೆಸುವಂತೆ ತೀವ್ರ ಒತ್ತಾಯ ಕೇಳಿಬರುತ್ತಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಪಬ್ಲಿಕ್ ಮಾದರಿಯ ಮೌಲ್ಯಮಾಪನ ಪರೀಕ್ಷೆ ಜಾರಿಗೆ ಮುಂದಾದ ಶಿಕ್ಷಣ ಇಲಾಖೆ

ಸಿಎಂ ಡಿಕೆ ಶಿವಕುಮಾರ್ ಕನಸಿನ ಮಹತ್ವದ ಯೋಜನೆ ಸ್ಟೂಡೆಂಟ್ ಯೂನಿಯನ್ ‌ಎಲೆಕ್ಷನ್. ಆದರೆ ರಾಜ್ಯದಲ್ಲಿ ಈಗ ಕಾಲೇಜುಗಳ ಆರಂಭವಾದರೂ ಎಲೆಕ್ಷನ್ ಮಾತ್ರ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದ್ದಂತಾಗಿದೆ. ರಾಜ್ಯದಲ್ಲಿ ಕಾಲೇಜುಗಳು ವಿವಿಗಳು ಆರಂಭವಾದರೂ ಯಾವುದೇ ಯೂನಿಯನ್ ಎಲೆಕ್ಷನ್ ಇಲ್ಲದೆ ಯೋಜನೆ ಹಳ್ಳ ಹಿಡಿಯುವ ಲಕ್ಷಣಗಳು ಕಾಣಿಸುತ್ತಿವೆ. ಈಗ ಉನ್ನತ್ತ ಶಿಕ್ಷಣ ಸಚಿವರಿಲ್ಲದೆ ಮಂತ್ರಿಮಂಡಲ ವಿಸ್ತರಣೆಯಾಗದೆ. ಕಾಲೇಜುಗಳಲ್ಲಿ ಎಲೆಕ್ಷನ್ ಮಾಡೆಲ್​​ ಮತ್ತೆ ಹಳ್ಳ ಹಿಡಿದಿದ್ದು, ವಿದ್ಯಾರ್ಥಿ ನಾಯಕರಿಂದ ಎಲೆಕ್ಷನ್​ಗೆ ಬೇಡಿಕೆ ಕೇಳಿಬರುತ್ತಿದೆ. ಹೀಗಾಗಿ ಸರ್ಕಾರ ಆದಷ್ಟು ಬೇಗ ಚುನಾವಣೆ ನಡೆಸುವಂತೆ ಒತ್ತಾಯಿಸಲಾಗಿದೆ.

ವಿದ್ಯಾರ್ಥಿಗಳು ಹೇಳುವುದೇನು?

ಕಾಲೇಜ್ ಎಲೆಕ್ಷನ್​ಗಳಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಭವಿಷ್ಯದ ವ್ಯಕ್ತಿತ್ವ, ಕಾಲೇಜುಗಳಲ್ಲಿನ ಸಮಸ್ಯೆಗಳನ್ನ ಪ್ರಶ್ನಿಸಲು ಅನಕೂಲವಾಗುತ್ತೆ, ಹೀಗಾಗಿ ಚುನಾವಣೆ ಬೇಕು ಎಂದು ಪದವಿ ವಿದ್ಯಾರ್ಥಿ ನಿತೀನ್ ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ‘ಚಡ್ಡಿ’ ಮುಜುಗರ! 7ನೇ ತರಗತಿ ಬಾಲಕರಿಗೂ ಹಾಫ್ ಪ್ಯಾಂಟ್ ಬಟ್ಟೆ ವಿತರಣೆ, ಪೋಷಕರಿಗೆ ಇಕ್ಕಟ್ಟು

ಒಟ್ಟಿನಲ್ಲಿ ದಶಕಗಳ ಬಳಿಕ ಬ್ಯಾನ್ ಆಗಿದ್ದ ಎಲೆಕ್ಷನ್ ಈಗ ಮತ್ತೆ ಕಾಲೇಜು ಹಾಗೂ ವಿವಿಗಳಲ್ಲಿ ಬೇಕು ಅಂತ ಸರ್ಕಾರಕ್ಕೆ ವಿದ್ಯಾರ್ಥಿ ಸಂಘಟನೆಗಳಿಂದ ಒತ್ತಾಯ ಶುರುವಾಗಿದ್ದು, ಈ ಬಗ್ಗೆ ಸರ್ಕಾರ ಯಾವ ನಿರ್ಧಾರಕ್ಕೆ ಬರುತ್ತೆ ಅಂತ ಕಾದು ನೋಡಬೇಕಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಳೆಗಾಲದಲ್ಲಿ ಭೇಟಿ ನೀಡಲೇಬೇಕಾದ ಕರ್ನಾಟಕದ ಅತ್ಯದ್ಭುತ ಸ್ಥಳಗಳಿವು – Kannada News | Amazing places to visit in Karnataka during the monsoon season

ಮಳೆಗಾಲದ (monsoon) ಸಮಯದಲ್ಲಿ ಪ್ರಕೃತಿಯ ಸೌಂದರ್ಯ ದುಪ್ಪಾಟ್ಟಾಗುತ್ತದೆ. ಧುಮ್ಮಿಕ್ಕುವ ಜಲಧಾರೆಗಳು, ಹಚ್ಚ ಹಸಿರಿನಿಂದ ಕಂಗೊಳಿಸುವ ಗಿರಿಧಾಮಗಳು ಇವೆಲ್ಲವೂ ಮಳೆಗಾಲದ ಸಮಯದಲ್ಲಿ ಪ್ರಕೃತಿ ಪ್ರೇಮಿಗಳನ್ನು ಆಕರ್ಷಿಸುತ್ತದೆ. ಪ್ರಕೃತಿಯ ಇಂತಹ ಅತ್ಯದ್ಭುತ ಸೌಂದರ್ಯವನ್ನು ಸವಿಯಲೆಂದು ಅನೇಕರು ಕೇರಳ, ಮೇಘಾಲಯ ಅಂತ ದೂರದೂರುಗಳಿಗೆ ಪ್ರವಾಸ ಹೋಗ್ತಾರೆ. ನಮ್ಮ ಕರ್ನಾಟಕದಲ್ಲೂ ಭೂಮಿಯ ಮೇಲಿನ ಸ್ವರ್ಗದಂತಿರುವ ಇಂತಹ ಅತ್ಯದ್ಭುತ ಸ್ಥಳಗಳಿದ್ದು, ಈ ಬಾರಿ ಮಾನ್ಸೂನ್‌ ಟ್ರಿಪ್‌ ಏನಾದ್ರೂ ಪ್ಲಾನ್‌ ಮಾಡಿದ್ರೆ ಕೂರ್ಗ್‌, ಚಿಕ್ಕಮಗಳೂರು ಇತ್ಯಾದಿ ಕರ್ನಾಟದಲ್ಲಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ. ಎಲ್ಲೆಲ್ಲೂ ಹಚ್ಚಹಸಿರಿನ ವಾತಾವರಣ, ಚಿಟಪಟ ಮಳೆ, ಚುಮುಚುಮು ಚಳಿ ಇವೆಲ್ಲವೂ ಮನಸ್ಸಿಗೆ ಹಿತ ನೀಡಿ ನಿಮ್ಮ ಒತ್ತಡವನ್ನೆಲ್ಲಾ ಹೋಗಲಾಡಿಸುದೆ. ಹಾಗಿದ್ರೆ ಮಳೆಗಾಲದಲ್ಲಿ ಕರ್ನಾಟಕದ ಯಾವೆಲ್ಲಾ ತಾಣಗಳಿಗೆ ಪ್ರವಾಸ ಹೋದ್ರೆ ಬೆಸ್ಟ್‌ ಎನ್ನುವುದನ್ನು ನೋಡೋಣ ಬನ್ನಿ,

ಮಳೆಗಾಲದಲ್ಲಿ ಭೇಟಿ ನೀಡಲೇಬೇಕಾದ ಕರ್ನಾಟಕದ ಅತ್ಯದ್ಭುತ ತಾಣಗಳು:

ಕೊಡಗು: ಮಳೆಗಾಲದಲ್ಲಿ ಕೂರ್ಗ್‌ನ ಪ್ರಕೃತಿ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಮಂಜಿನಿಂದ ಆವರಿಸಿದ ಕಾಫಿ ತೋಟಗಳು, ಹಾಲಿನ ನೊರೆಯಂತೆ ಧುಮ್ಮಿಕ್ಕಿ ಹರಿಯುವ ಜಲಪಾತ, ತಂಪಾದ ವಾತಾವರಣ ಇವೆಲ್ಲವೂ ಮನಸ್ಸಿಗೆ ಮುದ ನೀಡುತ್ತದೆ. ಈ ಬಾರಿ ಮೂನ್ಸೂನ್‌ ಟ್ರಿಪ್‌ ಹೋಗೋ ಪ್ಲಾನ್‌ ಇದ್ರೆ ಕೂರ್ಗ್‌ಗೆ ಒಮ್ಮೆ ಭೇಟಿ ನೀಡಿ. ಇಲ್ಲಿ ನೀವು ಅಬ್ಬೆ ಜಲಪಾತ, ಇರ್ಪು ಜಲಪಾತ, ರಾಜಾಸೀಟ್, ಕಾಫಿ ತೋಟಗಳು ಇತ್ಯಾದಿ ಸುಂದರ ತಾಣಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

ಸಕಲೇಶಪುರ: ನಮ್ಮ ಕರ್ನಾಟಕದ ಅತ್ಯದ್ಭುತ ಗಿರಿಧಾಮಗಳಲ್ಲಿ ಸಕಲೇಶಪುರ ಕೂಡ ಒಂದು. ಮಳೆಗಾಲದಲ್ಲಿ ಭೇಟಿ ನೀಡಲು ಹೇಳಿ ಮಾಡಿಸಿದಂತಹ ಸ್ಥಳ ಇದಾಗಿದೆ. ಕೋಟೆಗಳು, ಚಹಾ, ಕಾಫಿ ಮತ್ತು ಮಸಾಲೆಗಳ ವಿಶಾಲ ತೋಟ, ಹಚ್ಚಹಸಿರಿನ ವಾತಾವರಣ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುವುದು ನಿಜ. ಇಲ್ಲಿ ನೀವು ಮಂಜರಾಬಾದ್‌, ಬಿಸ್ಲೆ ವ್ಯೂ ಪಾಯಿಂಟ್‌, ಮಂಜೇಹಳ್ಳಿ ಜಲಪಾತ, ಹಡ್ಲು ಜಲಪಾತ, ಬಿಸ್ಲೆ ರಿಸರ್ವ್ ಫಾರೆಸ್ಟ್, ಮಗಜಹಳ್ಳಿ ಜಲಪಾತ, ಬೆಟ್ಟ ಬೈರವೇಶ್ವರ ದೇವಸ್ಥಾನ, ಹಳೆಬೀಡು ಬೇಲೂರು ದೇವಸ್ಥಾನಗಳಿಗೆ ಭೇಟಿ ನೀಡಬಹುದು.

ಚಿಕ್ಕಮಗಳೂರು: ಮುನ್ನಾರ್‌, ವಯನಾಡ್‌ ಅಂತೆಲ್ಲಾ ಬೇರೆ ರಾಜ್ಯಗಳ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಬದಲು ನಮ್ಮ ಕರ್ನಾಟಕದಲ್ಲೇ ಇರುವ ಅತೀ ಸುಂದರವಾದ ಪ್ರವಾಸಿ ತಾಣಗಳಿರುವ ಚಿಕ್ಕಮಗಳೂರಿಗೆ ಮಳೆಗಾಲದಲ್ಲಿ ಭೇಟಿ ನೀಡಿ. ಕಾಫಿ ಮತ್ತು ಚಹಾ ತೋಟದ ಸೌಂದರ್ಯದ ಜೊತೆಗೆ ಹಚ್ಚ ಹಸಿರಿನ ಹೊದಿಕೆಯಂತೆ ಕಾಣುವ ಪಶ್ಚಿಮ ಘಟ್ಟಗಳ ಸೌಂದರ್ಯವನ್ನೂ ಸವಿಯಬಹುದು. ಇಲ್ಲಿ ನೀವು ಮುಳ್ಳಯ್ಯನಗಿರಿ, ಹೆಬ್ಬೆ ಜಲಪಾತ, ಬಾಬಾ ಬುಡನಗಿರಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ರಾಣಿ ಝರಿ, ಹಿರೇಕೊಳಲೆ ಕೆರೆ, ಸಂಸೆ, ಕಳಸ ಇತ್ಯಾದಿ ಸುಂದರ ತಾಣಗಳಿಗೆ ಭೇಟಿ ನೀಡಬಹುದು.

ಇದನ್ನೂ ಓದಿ: ಮಳೆಗಾಲದಲ್ಲಿ ಸ್ಥಳಗಳಿಗೆ ಪ್ರವಾಸ ಹೋಗೋದನ್ನು ಸಾಧ್ಯವಾದಷ್ಟು ತಪ್ಪಿಸಿ

ಆಗುಂಬೆ: ಪಶ್ಚಿಮ ಘಟ್ಟಗಳಲ್ಲಿ ನೆಲೆಯಾಗಿರುವ ದಕ್ಷಿಣದ ಚಿರಾಪುಂಜಿ ಎಂದೇ ಪ್ರಸಿದ್ಧವಾಗಿರುವ ಆಗುಂಬೆಗೆ ಮಳೆಗಾಲದಲ್ಲಿ ಭೇಟಿ ನೀಡಲೇಬೇಕಾದ ಅತ್ಯದ್ಭುತ ಸ್ಥಳವಾಗಿದೆ. ಇಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಣೆಗಳಿದ್ದು,  ಸನ್ಸೆಟ್ ವ್ಯೂ ಪಾಯಿಂಟ್, ಕೂಡ್ಲೂ ತೀರ್ಥ ಜಲಪಾತ, ಬರ್ಕಾಣ ಜಲಪಾತ, ಆಗುಂಬೆ ಘಾಟ್‌, ಕವಲೇದುರ್ಗ ಕೋಟೆ, ಕುಂದಾದ್ರಿ ಬೆಟ್ಟ, ಕೊಡಚಾದ್ರಿ ಇತ್ಯಾದಿ ತಾಣಗಳಿಗೆ ಭೇಟಿ ನೀಡಬಹುದು.

ಇದಲ್ಲದೆ ಕೆಮ್ಮಣ್ಣು ಗುಂಡಿ, ಜೋಗ ಜಲಪಾತ, ಶಿವನಸಮುದ್ರ ಮತ್ತು ಭರಚುಕ್ಕಿ ಜಲಪಾತ, ಕಬಿನಿ ಮತ್ತು ನಾಗರಹೊಳೆ, ಹಂಪಿ, ಶ್ರೀರಂಗಪಟ್ಟಣ, ನಂದಿ ಬೆಟ್ಟ, ಸ್ಕಂದಗಿರಿ ಇತ್ಯಾದಿ ಸುಂದರ ತಾಣಗಳಿಗೂ ಭೇಟಿ ನೀಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ದುರ್ಬಲವಾದ ನೈಋತ್ಯ ಮುಂಗಾರು; 12 ಜಿಲ್ಲೆಗಳಿಂದ ಮಳೆ ದೂರ! – Kannada News | Karnataka Weather Forecast: Weak Monsoon Leaves 12 Districts Dry; Moderate Rain Predicted for Coastal and Malnad Regions

ಬೆಂಗಳೂರು, ಜುಲೈ 13: ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗದಲ್ಲಿ ನೈಋತ್ಯ ಮುಂಗಾರು ದುರ್ಬಲವಾಗಿದ್ದು, ವರುಣಾರ್ಭಟ ತೀರಾ ಇಳಿಮುಖವಾಗಿದೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಉಷ್ಣತೆ ಪ್ರಮಾಣವೂ ಹೆಚ್ಚತೊಡಗಿದೆ. ಹೀಗಿದ್ದರೂ ನಾಳೆ (ಜುಲೈ 14) ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ 30–40 ಕಿ.ಮೀ ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹಾಗೆಯೇ, ಉತ್ತರ ಒಳನಾಡು ಕರ್ನಾಟಕದ ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳ ಒಂದೆರಡು ಕಡೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದ್ದರೆ ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ ಕೆಲವೆಡೆಯೂ ವರ್ಷಧಾರೆಯ ಸಾಧ್ಯತೆ ಇದೆ ಎನ್ನಲಾಗಿದೆ.  ಬಾಗಲಕೋಟೆ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಒಂದೆರಡು ಕಡೆ ಡೆ 30–40 ಕಿ.ಮೀ ವೇಗದ ಬಲವಾದ ಗಾಳಿ ಬೀಸುವ ಸಾಧ್ಯತೆ ಬಗ್ಗೆ ಇಲಾಖೆ ಎಚ್ಚರಿಸಿದೆ.

ಇದನ್ನೂ ಓದಿ:  ಕರ್ನಾಟಕದ ಈ ಜಿಲ್ಲೆಗಳಲ್ಲಿ 5 ದಿನ ಮಳೆ ಮುನ್ಸೂಚನೆ, ಬಿರುಗಾಳಿ ಸಾಧ್ಯತೆ; ಐಎಂಡಿ ಎಚ್ಚರಿಕೆ

12 ಜಿಲ್ಲೆಗಳಿಂದ ಮಳೆ ದೂರ

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಐಕಳದಲ್ಲಿ ನಿನ್ನೆ ರಾಜ್ಯದಲ್ಲೇ ಅತಿ ಹೆಚ್ಚು, ಅಂದರೆ 26.5 ಮಿ.ಮೀ. ಮಳೆಯಾಗಿದೆ. ಉಳಿದಂತೆ ಕೊಡಗಿನ ಪೊನ್ನಂಪೇಟೆಯ ಮಾಯಮುಡಿಯಲ್ಲಿ 11 ಮಿ.ಮೀ ಮತ್ತು ದಾವಣಗೆರೆಯ ಹೊನ್ನಾಳಿಯ ಹತ್ತೂರಿನಲ್ಲಿ 10.5 ಮಿ.ಮೀ. ವರ್ಷಧಾರೆಯಾಗಿದೆ. ಬಾಗಲಕೋಟೆ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ವಿಜಯನಗರ, ಗದಗ, ಬೆಂಗಳೂರು ನಗರ, ರಾಮನಗರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಮಳೆಯೇ ಆಗಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭಾರತ ಟಿ20 ತಂಡಕ್ಕೆ ಸೂರ್ಯಕುಮಾರ್ ಶೀಘ್ರದಲ್ಲೇ ಕಂಬ್ಯಾಕ್..! – Kannada News | Suryakumar Yadav’s T20 Comeback: Domestic Performance Key for Team India Return

ಮುಂಬರುವ ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಮತ್ತು ಇತರ ಟಿ20 ಪಂದ್ಯಾವಳಿಗಳಲ್ಲಿ ಸೂರ್ಯ ಉತ್ತಮ ಪ್ರದರ್ಶನ ನೀಡಿದರೆ, ಆಯ್ಕೆದಾರರು ಅವರಿಗೆ ತಂಡಕ್ಕೆ ಮರಳಲು ಅವಕಾಶ ನೀಡುವ ಸಾಧ್ಯತೆಯಿದೆ ಎಂದು ತಂಡದೊಳಗಿನ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ. ಇದಕ್ಕೆ ಕಾರಣ, ಸೂರ್ಯಕುಮಾರ್ ಯಾದವ್ ನಿರ್ಗಮನದ ನಂತರ, ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾದ ಕಳಪೆ ಪ್ರದರ್ಶನ(PC-PTI).

Source link

ಮೊಬೈಲ್​ನಿಂದ ಹೊಡೆದು ಗಂಡನನ್ನು ಕೊಂದ ಹೆಂಡತಿ! ಅಚ್ಚರಿಯಾದರೂ ಇದು ಸತ್ಯ – Kannada News | Wife Killed husband by Hitting head with Mobile Phone in Odisha Viral News

ಬೋಲಾಂಗೀರ್, ಜುಲೈ 13: ಯಾರ ಸಾವು ಹೇಗಾಗಬೇಕೆಂದು ದೇವರು ನಿರ್ಧರಿಸಿರುತ್ತಾನೋ ಯಾರಿಗೂ ಗೊತ್ತಿಲ್ಲ. ಕೆಲವೊಮ್ಮೆ ಕಲ್ಲುಬಂಡೆಯೇ ಮೈಮೇಲೆ ಬಿದ್ದರೂ ಅದೃಷ್ಟವಶಾತ್ ಪಾರಾಗಿಬಿಡುತ್ತಾರೆ. ಇನ್ನು ಕೆಲವೊಮ್ಮೆ ತಲೆಗೆ ಮೊಬೈಲ್ ತಾಗಿದರೂ ಸಾವನ್ನಪ್ಪಿಬಿಡುತ್ತಾರೆ! ನಂಬಲು ಕಷ್ಟವಾದರೂ ಇದು ಸತ್ಯ. ಒಡಿಶಾದಲ್ಲಿ ಕೌಟುಂಬಿಕ ಕಲಹದ ವೇಳೆ ಪತ್ನಿ ತನ್ನ ಮೊಬೈಲ್ (Mobile) ಫೋನ್‌ನಿಂದ ಗಂಡನ ತಲೆಗೆ ಹೊಡೆದ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿದ್ದ ಪತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.

ಜಗಳದ ವೇಳೆ ಮೊಬೈಲ್‌ನಿಂದ ಹಲ್ಲೆ:

ಪ್ರಾಥಮಿಕ ವರದಿಗಳ ಪ್ರಕಾರ, ಶನಿವಾರ ದಂಪತಿಯ ನಡುವೆ ತಮ್ಮ ಮನೆಯಲ್ಲಿ ಸಣ್ಣದಾಗಿ ಆರಂಭವಾದ ಕೌಟುಂಬಿಕ ಜಗಳ ತಾರಕಕ್ಕೇರಿತ್ತು. ಈ ತೀವ್ರ ಮಾತಿನ ಚಕಮಕಿಯ ನಡುವೆ, ಕೋಪಗೊಂಡ ಪತ್ನಿ ತನ್ನ ಕೈಯಲ್ಲಿದ್ದ ಮೊಬೈಲ್ ಫೋನ್‌ನಿಂದ ಪತಿಯ ತಲೆಗೆ ಬಲವಾಗಿ ಹೊಡೆದಿದ್ದಾಳೆ. ಇದರಿಂದಾಗಿ ಪತಿಯ ತಲೆಗೆ ಗಂಭೀರ ಪೆಟ್ಟಾಗಿದ್ದು, ಅವರು ತೀವ್ರವಾಗಿ ಗಾಯಗೊಂಡಿದ್ದರು.

ಇದನ್ನೂ ಓದಿ: ಗುಟ್ಟಾಗಿ ಮದುವೆಯಾಗಿದ್ದಳಾ ಸಿಯಾ? ಕೇತನ್ ಕೊಲೆ ಪ್ರಕರಣದಲ್ಲಿ ಹೊಸ ರಹಸ್ಯ ಬಯಲು

ಆಸ್ಪತ್ರೆಯಿಂದ ಡಿಸ್ಚಾರ್ಜ್:

ಗಾಯಗೊಂಡಿದ್ದ ವ್ಯಕ್ತಿಯನ್ನು ಕುಟುಂಬಸ್ಥರು ತಕ್ಷಣವೇ ಬೋಲಾಂಗೀರ್‌ನಲ್ಲಿರುವ ಜಿಲ್ಲಾ ಕೇಂದ್ರ ಆಸ್ಪತ್ರೆಗೆ (DHH) ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಅವರ ಆರೋಗ್ಯ ಸ್ಥಿತಿ ಸುಧಾರಿಸಿದ್ದನ್ನು ಗಮನಿಸಿದ ವೈದ್ಯರು, ಅವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಿದ್ದರು. ಆದರೆ, ಆಸ್ಪತ್ರೆಯಿಂದ ಮನೆಗೆ ತಲುಪಿದ ಕೆಲವೇ ದಿನಗಳಲ್ಲಿ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿತ್ತು. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಅವರನ್ನು ಮತ್ತೆ ತುರ್ತು ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ: Haryana Shootout: ಗುರುಗ್ರಾಮ್​ನಲ್ಲಿ ಉದ್ಯಮಿ ಬಂಗಲೆ ಮೇಲೆ ಗುಂಡಿನ ಸುರಿಮಳೆ! ಪೊಲೀಸರ ಕೌಂಟರ್​ ಅಟ್ಯಾಕ್​ಗೆ ನಾಲ್ವರು ಬಲಿ

ಚಿಕಿತ್ಸೆ ಫಲಿಸದೆ ಸಾವು:

ವೈದ್ಯರು ಅವರನ್ನು ಉಳಿಸಲು ತಮ್ಮ ಅತ್ಯುತ್ತಮ ಪ್ರಯತ್ನಗಳನ್ನು ನಡೆಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಆ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಘಟನೆಯ ನಂತರ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪತ್ನಿ ಮೊಬೈಲ್‌ನಿಂದ ತಲೆಗೆ ಹೊಡೆದ ಆಘಾತದಿಂದಲೇ ಆಂತರಿಕ ರಕ್ತಸ್ರಾವವಾಗಿ ವ್ಯಕ್ತಿ ಮೃತಪಟ್ಟಿದ್ದಾರೆಯೇ ಅಥವಾ ಸಾವಿಗೆ ಬೇರೆನಾದರೂ ಕಾರಣವಿದೆಯೇ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:09 pm, Mon, 13 July 26

Source link

ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿ ಕುಮಾರಸ್ವಾಮಿ ಮನವಿ

ಬೆಂಗಳೂರು, ಜುಲೈ 13: ‘‘ಕಳೆದ 500 ದಿನಗಳಿಂದ ಬಿಡದಿ ಟೌನ್​ಶಿಪ್ ಯೋಜನೆ ವಿರೋಧಿಸಿ  ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ರೈತರನ್ನು ಕೆರಳಿಸುವ ಕೆಲಸವನ್ನು ಸರ್ಕಾರ ಮಾಡಿದೆ. ರೈತ ಮಹಿಳೆಯರ ಆಕ್ರೋಶಕ್ಕೆ ರಾಜ್ಯ ಸರ್ಕಾರವೇ ನೇರ ಕಾರಣ’’ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸರ್ವೇ ಮಾಡಲು ಬಂದ ಅಧಿಕಾರಿಗಳಿಗೆ ರೈತ ಮಹಿಳೆಯರಿಂದ ಪೊರಕೆ ಏಟು ವಿಚಾರವಾಗಿ ಮಾಧ್ಯಮ ಹೇಳಿಕೆ ನೀಡಿರುವ ಹೆಚ್​ಡಿ ಕುಮಾರಸ್ವಾಮಿ, ‘‘ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ. ನಿಮ್ಮ ಪರವಾಗಿ ಕಾನೂನಾತ್ಮಕ ಹೋರಾಟ ನಡೆಸುವುದಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಯಾವುದೇ ಕಾರಣಕ್ಕೂ ನೀವು ಹೆದರುವ ಅಗತ್ಯ ಇಲ್ಲ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ದಬ್ಬಾಳಿಕೆ ನಡೆಸಿದರೆ ಸುಮ್ಮನಿರುವುದಿಲ್ಲ’’ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಸರಸ್ವತಿಯಲ್ಲ ಗಾಯತ್ರಿ; ಹೊಸ ತಂತ್ರಜ್ಞಾನದಿಂದ ಬಯಲಾಯ್ತು 900 ವರ್ಷಗಳ ಹಿಂದಿನ ದೇವತೆಯ ಅಸಲಿ ಗುರುತು! – Kannada News | No Veena Means It Is Not Saraswati but Gayatri How a missing veena revealed 900 year old mystery in Dhar

ಭೋಪಾಲ್, ಜುಲೈ 13: ದೇವಸ್ಥಾನಗಳಲ್ಲಿ, ಮ್ಯೂಸಿಯಂಗಳಲ್ಲಿ ನಮ್ಮ ದೇಶದ ಪ್ರಾಚೀನ ಕಾಲದ ದೇವರ ವಿಗ್ರಹಗಳು ಕಾಣಸಿಗುತ್ತವೆ. ಆ ಕಲ್ಲಿನ ಕೆತ್ತನೆಗೆ, ವಾಸ್ತುಶಿಲ್ಪಕ್ಕೆ ನಾವು ಕಣ್ಣರಳಿಸುತ್ತೇವೆಯೇ ವಿನಃ ನಮ್ಮಲ್ಲಿ ಬಹುತೇಕರು ಆ ದೇವರು ಅಥವಾ ದೇವತೆ ಯಾರು? ಎಂಬುದನ್ನು ಹೆಚ್ಚು ಗಮನಹರಿಸಿ ನೋಡುವುದಿಲ್ಲ. ಮಧ್ಯಪ್ರದೇಶದ (Madhya Pradesh) ಮ್ಯೂಸಿಯಂ ಒಂದರಲ್ಲಿ 900 ವರ್ಷಗಳ ಹಿಂದಿನ ಇದೇ ರೀತಿಯ ದೇವತೆಯ ಕಲಾಕೃತಿಯೊಂದಿತ್ತು. ಕಲ್ಲಿನಿಂದ ಕೆತ್ತಲಾದ ಈ ವಿಗ್ರಹವನ್ನು ಎಲ್ಲರೂ ಸರಸ್ವತಿ ದೇವಿಯ ವಿಗ್ರಹ ಎಂದೇ ಅಂದುಕೊಂಡಿದ್ದರು. ಆದರೆ, ಅದು ಸರಸ್ವತಿಯಲ್ಲ; ಗಾಯತ್ರಿ ದೇವತೆಯ ವಿಗ್ರಹ ಎಂಬುದು 9 ಶತಮಾನಗಳ ಬಳಿಕ ಈಗ ಬಯಲಾಗಿದೆ.

ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ರಾಜ್ಯ ವಸ್ತುಸಂಗ್ರಹಾಲಯದಲ್ಲಿದ್ದ 900 ವರ್ಷಗಳಷ್ಟು ಹಳೆಯದಾದ ದೇವತೆಯ ವಿಗ್ರಹವೊಂದರ ಕುರಿತಾಗಿ ಜನರಿಗಿದ್ದ 9 ಶತಮಾನಗಳಷ್ಟು ಹಳೆಯ ತಪ್ಪು ತಿಳುವಳಿಕೆಯನ್ನು ಪುರಾತತ್ವಶಾಸ್ತ್ರಜ್ಞರು ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಸರಿಪಡಿಸಿದ್ದಾರೆ. ಇದುವರೆಗೆ ‘ಸರಸ್ವತಿ ದೇವಿ’ ಎಂದು ಭಾವಿಸಲಾಗಿದ್ದ 12ನೇ ಶತಮಾನದ ಈ ವಿಗ್ರಹ ವಾಸ್ತವವಾಗಿ ಅತ್ಯಂತ ಅಪರೂಪದ ‘ಗಾಯತ್ರಿ ದೇವಿ’ಯ ಕಲಾಕೃತಿ ಎಂಬುದು ಈಗ ಸಾಬೀತಾಗಿದೆ.

3D ಮ್ಯಾಪಿಂಗ್ ತಂತ್ರಜ್ಞಾನದಿಂದ ಬಯಲಾಗಿದ್ದೇನು?:

ಕೆಂಪು ಮರಳುಗಲ್ಲಿನಿಂದ ಕೆತ್ತಲಾದ ಈ ಪುರಾತನ ವಿಗ್ರಹವನ್ನು ಪುರಾತತ್ವಶಾಸ್ತ್ರಜ್ಞರು ಅತ್ಯಾಧುನಿಕ ವೈಜ್ಞಾನಿಕ ಇಮೇಜಿಂಗ್ ಮತ್ತು ಡಿಜಿಟಲ್ ದಾಖಲೀಕರಣ ತಂತ್ರಜ್ಞಾನದ ಮೂಲಕ ಮರು-ಪರಿಶೀಲನೆ ನಡೆಸಿದ್ದಾರೆ. ಹೈ-ರೆಸಲ್ಯೂಶನ್ 3D ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸಿದಾಗ ಈ ಹಿಂದೆ ಕಣ್ಣಿಗೆ ಕಾಣಿಸದಿದ್ದ ಸೂಕ್ಷ್ಮ ಕೆತ್ತನೆಗಳು ಮತ್ತು ವಿಗ್ರಹದ ಆಕೃತಿಗಳು ಸ್ಪಷ್ಟವಾಗಿ ಗೋಚರಿಸಿವೆ. ಹಿಂದೂ ಧರ್ಮದ ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ಕೈಪಿಡಿಗಳಾದ ‘ಶಿಲ್ಪ ಶಾಸ್ತ್ರ’ಗಳೊಂದಿಗೆ ಈ ವಿಗ್ರಹದ ವಿವರಗಳನ್ನು ಸಂಶೋಧಕರು ಹೋಲಿಸಿ ನೋಡಿದಾಗ ಸರಸ್ವತಿ ದೇವಿಯ ವಿಗ್ರಹ ಅದಲ್ಲ ಎಂಬುದು ಸ್ಪಷ್ಟವಾಯಿತು.

ಸರಸ್ವತಿಯಲ್ಲ, ಗಾಯತ್ರಿ ಎಂಬುದಕ್ಕೆ ಸಾಕ್ಷಿಗಳೇನು?:

ಕೈಯಲ್ಲಿ ವೀಣೆ ಇರಲಿಲ್ಲ:

ಈ 900 ವರ್ಷದ ಹಿಂದಿನ ಕಲ್ಲಿನ ವಿಗ್ರಹದಲ್ಲಿ ಸರಸ್ವತಿ ದೇವಿಯ ಪ್ರಮುಖ ಗುರುತಾದ ‘ವೀಣೆ’ ಇಲ್ಲದೇ ಇರುವುದು ಸಂಶೋಧಕರ ಗಮನಕ್ಕೆ ಬಂತು. ಗುಪ್ತರ ಕಾಲದ ನಂತರದ ಎಲ್ಲಾ ಕಲೆಗಳಲ್ಲೂ ಸರಸ್ವತಿಯನ್ನು ವೀಣೆಯೊಂದಿಗೆ ಚಿತ್ರಿಸುವುದು ಕಡ್ಡಾಯವಾಗಿತ್ತು. ಆದರೆ ಈ 900 ವರ್ಷ ಹಳೆಯ ವಿಗ್ರಹದಲ್ಲಿ ವೀಣೆಯ ಯಾವುದೇ ಕುರುಹು ಇರಲಿಲ್ಲ. ಈ ಒಂದು ಮುಖ್ಯ ಸುಳಿವು ಇಡೀ ತನಿಖೆಯ ದಿಕ್ಕನ್ನೇ ಬದಲಿಸಿತು.

ಇದನ್ನೂ ಓದಿ: Shiva Parivar: ಶಿವನನ್ನ ಒಬ್ಬಂಟಿಯಾಗಿ ಪೂಜಿಸಲ್ಲ ಯಾಕೆ? ನಂದಿ, ಗಣೇಶ, ಪಾರ್ವತಿ ವಿಗ್ರಹ ಪ್ರತಿಷ್ಠಾಪಿಸುವುದೇಕೆ?

ವೇದ ಮತ್ತು ಕಮಲ ಹಿಡಿದಿದ್ದ ದೇವತೆ:

ಸರಸ್ವತಿಯ ಕೈಯಲ್ಲಿರುವ ವೀಣೆಯ ಬದಲಾಗಿ ಈ ದೇವತೆಯ ಕೈಯಲ್ಲಿ ವೇದಗಳು ಮತ್ತು ಕಮಲದ ಹೂವು ಇರುವುದು ಹೊಸ ತಂತ್ರಜ್ಞಾನದ ಮೂಲಕ ಸೂಕ್ಷ್ಮವಾಗಿ ಅವಲೋಕನ ಮಾಡಿದಾಗ ಗೋಚರವಾಯಿತು. ಈ ವಿವರಗಳು ‘ಶ್ರೀಮದ್ ದೇವಿ ಭಾಗವತ ಪುರಾಣ’ದಲ್ಲಿ ವಿವರಿಸಲಾದ ಗಾಯತ್ರಿ ದೇವಿಯ ರೂಪಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗಿತ್ತು. ಹೀಗಾಗಿ, ಈ ದೇವತೆ ಗಾಯತ್ರಿ ದೇವಿ ಎಂಬುದು ಸ್ಪಷ್ಟವಾಯಿತು.

ಪುರಾತತ್ವಶಾಸ್ತ್ರಜ್ಞರು ಹೇಳಿದ್ದೇನು?:

“4 ಭುಜ ಮತ್ತು ಕೈಗಳನ್ನು ಹೊಂದಿರುವ ಈ ದೇವತೆಯು ಲಲಿತಾಸನದಲ್ಲಿ ಕುಳಿತಿದ್ದಾಳೆ. ಆಕೆಯ ಕೈಗಳಲ್ಲಿ ಜಪಮಾಲೆ, ಕಮಲ ಮತ್ತು ವೇದಗಳಿವೆ. ಆಕೆಯ ಪಕ್ಕದಲ್ಲಿ ಕೆತ್ತಲಾದ ಹಂಸವು ಜ್ಞಾನದ ಸಂಕೇತವಾಗಿದೆ. ಈ ದೇವತೆಯ ದೈವತ್ವವನ್ನು ಸಾರಲು ಗಂಧರ್ವರು ಮಾಲೆಯನ್ನು ಹಿಡಿದಿದ್ದಾರೆ. ಈ ಎಲ್ಲಾ ಲಕ್ಷಣಗಳು ಇದು ಸರಸ್ವತಿಯಲ್ಲ, ಗಾಯತ್ರಿ ದೇವಿ ಎಂಬುದನ್ನು ಖಚಿತಪಡಿಸುತ್ತವೆ. ಗಾಯತ್ರಿ ದೇವಿಯ ಇಂತಹ ಸ್ವತಂತ್ರ ವಿಗ್ರಹಗಳು ಅತ್ಯಂತ ಅಪರೂಪ. ಈ ಹಿನ್ನೆಲೆಯಲ್ಲಿ ಈ ವಿಗ್ರಹ ಬಹಳ ಮಹತ್ವವಾದುದಾಗಿದೆ” ಎಂದು ಪುರಾತತ್ವ ಶಾಸ್ತ್ರಜ್ಞರು ಹೇಳಿದ್ದಾರೆ.

ಸರಸ್ವತಿ ದೇವಿ ಎಂದು ತಪ್ಪು ತಿಳಿದಿದ್ದು ಹೇಗೆ?:

ಈ ಶಿಲ್ಪವು ಪಶ್ಚಿಮ ಚಾಲುಕ್ಯರ ಶೈಲಿಯ ಕೆತ್ತನೆಯ ಪ್ರಭಾವವನ್ನು ಹೊಂದಿದೆ. ಈ ವಿಗ್ರಹವು ಪರಮಾರ ರಾಜವಂಶದ (9ರಿಂದ 14ನೇ ಶತಮಾನ) ರಾಜಧಾನಿಯಾಗಿದ್ದ ‘ಧಾರ್’ ನಗರದಲ್ಲಿ ಉತ್ಖನನದ ವೇಳೆ ಪತ್ತೆಯಾಗಿತ್ತು. ಆ ಕಾಲದಲ್ಲಿ ಇದು ಅತ್ಯಂತ ಪ್ರಸಿದ್ಧ ಐತಿಹಾಸಿಕ ಶಿಕ್ಷಣ ಕೇಂದ್ರವಾಗಿದ್ದರಿಂದ (ಜ್ಞಾನದ ದೇವತೆ ಸರಸ್ವತಿಯ ಆರಾಧನೆ ಹೆಚ್ಚಾಗಿದ್ದರಿಂದ) ಈ ವಿಗ್ರಹವನ್ನು ಸರಸ್ವತಿ ದೇವಿ ಎಂದು ತಪ್ಪಾಗಿ ಭಾವಿಸಲಾಗಿತ್ತು. ಹೀಗಾಗಿ, 900 ವರ್ಷಗಳಿಂದ ಈ ವಿಗ್ರಹ ಸರಸ್ವತಿ ದೇವಿ ಎಂಬ ಲೇಬಲ್​ನೊಂದಿಗೆ ಇತ್ತು. ಇದೀಗ ಆ ವಿಗ್ರಹಕ್ಕೆ ಹೊಸ ಹೆಸರು ಸಿಕ್ಕಿದ್ದು, ನಿಜವಾದ ಗುರುತು ಬಯಲಾಗಿದೆ.

ಇದನ್ನೂ ಓದಿ: Jagannath Rath Yatra 2026: ಪುರಿ ಜಗನ್ನಾಥನ ವಿಗ್ರಹಗಳು ಕೈಗಳಿಲ್ಲದೇ ಅಪೂರ್ಣವಾಗಿರಲು ಕಾರಣವೇನು ಗೊತ್ತಾ?

ಐಕಾನೋಗ್ರಫಿ ದೇವತೆಗಳಿಗೆ ಎಷ್ಟು ಕೈಗಳಿರಬೇಕು, ಯಾವ ಮುದ್ರೆ ಇರಬೇಕು, ಕೈಯಲ್ಲಿ ಯಾವ ಆಯುಧ ಅಥವಾ ಚಿಹ್ನೆ ಇರಬೇಕು (ಉದಾಹರಣೆಗೆ ತ್ರಿಶೂಲ ಅಥವಾ ಕಮಲ) ಎಂಬುದನ್ನು ನಿರ್ಧರಿಸುತ್ತದೆ. ಇದರಿಂದಾಗಿ ಸರಸ್ವತಿ ದೇವಿಯ ವಿಗ್ರಹ ಅಸಲಿಗೆ ಗಾಯತ್ರಿ ದೇವಿಯದ್ದು ಎಂಬುದು ಬಹಿರಂಗವಾಗಿದೆ.

ಭಾರತದಲ್ಲೇ ಅತ್ಯಂತ ಅಪರೂಪದ ಗಾಯತ್ರಿ ದೇವಿಯ ಈ ಸ್ವತಂತ್ರ ವಿಗ್ರಹದ ನೈಜ 3D ಮಾದರಿಯನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಾರ್ವಜನಿಕರಿಗೆ ಮತ್ತು ಸಂಶೋಧಕರಿಗೆ ಆನ್‌ಲೈನ್‌ನಲ್ಲಿ ವೀಕ್ಷಿಸಲು ಶೀಘ್ರದಲ್ಲೇ ಅವಕಾಶ ಕಲ್ಪಿಸಲಾಗುವುದು ಎಂಬು ಪುರಾತತ್ವ ಇಲಾಖೆ ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:32 pm, Mon, 13 July 26

Source link

ಜಿಬಿಎ ಅಸ್ತಿತ್ವಕ್ಕೆ ಬಂದು ವರ್ಷ ಕಳೆದರೂ ನಗರದಲ್ಲಿ ಇನ್ನೂ ರಾರಾಜಿಸುತ್ತಿವೆ ಹಳೆಯ ಬಿಬಿಎಂಪಿ ನಾಮಫಲಕಳು! – Kannada News | One Year After GBA Formation, Outdated BBMP Signboards Still Confuse Citizens

ಬೆಂಗಳೂರು, ಜುಲೈ 13: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬದಲಾಗಿ ಬೃಹತ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಸ್ತಿತ್ವಕ್ಕೆ ಬಂದು ಒಂದು ವರ್ಷ ಕಳೆದಿದ್ದರೂ, ನಗರದಲ್ಲಿ ಹಳೆಯ ಬಿಬಿಎಂಪಿ ನಾಮಫಲಕಗಳು ಇನ್ನೂ ರಾರಾಜಿಸುತ್ತಿವೆ. ಜಿಬಿಎ ಅಡಿ ಬೆಂಗಳೂರು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಎಂಬ ಐದು ಹೊಸ ನಗರಪಾಲಿಕೆಗಳು ರೂಪುಗೊಂಡಿವೆ. ಆದರೆ, ಈ ಬದಲಾವಣೆಗೆ ಅನುಗುಣವಾಗಿ ನಾಮಫಲಕಗಳನ್ನು ಅಳವಡಿಸುವಲ್ಲಿ ಅಧಿಕಾರಿಗಳು ತೀವ್ರ ವಿಳಂಬ ಮಾಡುತ್ತಿದ್ದಾರೆ. ಹಳೆಯ ಬೋರ್ಡ್‌ಗಳು ಯಥಾಸ್ಥಿತಿಯಲ್ಲಿರುವುದರಿಂದ ಸಾರ್ವಜನಿಕರು ತೀವ್ರ ಗೊಂದಲಕ್ಕೀಡಾಗಿದ್ದಾರೆ. ತಮ್ಮ ವಾರ್ಡ್ ಯಾವುದು, ಯಾವ ನಗರಪಾಲಿಕೆ ವ್ಯಾಪ್ತಿಗೆ ಬರುತ್ತೆ, ವಾರ್ಡ್ ಸಂಖ್ಯೆ ಬದಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಜನರಿಗೆ ಸ್ಪಷ್ಟ ಮಾಹಿತಿಯಿಲ್ಲ. ಇದರಿಂದಾಗಿ ನಾಗರಿಕರು ತಮ್ಮ ಸಮಸ್ಯೆಗಳನ್ನು ಯಾರಿಗೆ ತಿಳಿಸಬೇಕು ಎಂಬ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭಾರತ ಮತ್ತು ಇಂಡೋನೇಷ್ಯಾ ಸಂಬಂಧ: ರಾಮಾಯಣದ ಕೊಂಡಿಯಿಂದ ರಕ್ಷಣೆಯ ತಂತಿಯವರೆಗೆ – Kannada News | India and Indonesia relations, from Ramayana to modern defence arrangements

ಇಂಡೋನೇಷ್ಯಾದಲ್ಲಿ ಅಲ್ಲಿನ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿImage Credit source: AP

ಭಾರತ ಮತ್ತು ಇಂಡೋನೇಷ್ಯಾ ನಡುವೆ 2,000 ವರ್ಷಗಳಿಗಿಂತಲೂ ಹಳೆಯದಾದ ನಾಗರಿಕತೆಯ ಸಂಬಂಧವಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನಾಯಕತ್ವದಲ್ಲಿ ಈ ಪುರಾತನ ಬಾಂಧವ್ಯವನ್ನು ಬಲಿಷ್ಠ ಕಾರ್ಯತಂತ್ರದ ಪಾಲುದಾರಿಕೆಯಾಗಿ ಪರಿವರ್ತಿಸಲಾಗುತ್ತಿದೆ. ಭಾರತವು ತನ್ನ ಸಂಸ್ಕೃತಿಯನ್ನು ಕೇವಲ ಇತಿಹಾಸವಾಗಿ ನೋಡುತ್ತಿಲ್ಲ. ಬದಲಿಗೆ ಭವಿಷ್ಯದ ಪಾಲುದಾರಿಕೆಯನ್ನು ನಿರ್ಮಿಸಲು ಬಳಸಿಕೊಳ್ಳುತ್ತಿದೆ. ಇದರ ಭಾಗವಾಗಿ, ಯೋಗ್ಯಕರ್ತಾದಲ್ಲಿರುವ 9ನೇ ಶತಮಾನದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪ್ರಂಬನನ್ ಹಿಂದೂ ದೇವಾಲಯ ಸಂಕೀರ್ಣದ (ತ್ರಿಮೂರ್ತಿಗಳಿಗೆ ಸಮರ್ಪಿತವಾದ ದೇವಾಲಯ) ಸಂರಕ್ಷಣೆ ಮತ್ತು ಜೀರ್ಣೋದ್ಧಾರಕ್ಕೆ ಭಾರತ ನೆರವು ನೀಡಲಿದೆ.

  • ಬಾಂಧವ್ಯದ ಪ್ರತೀಕ: ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ತಮ್ಮಲ್ಲಿ ಭಾರತೀಯ ಡಿಎನ್‌ಎ ಇದೆ ಎಂದು ಹೇಳಿರುವುದು ಮತ್ತು ಪ್ರಧಾನಿ ಮೋದಿಯವರ ಆಡಳಿತ ವೈಖರಿಯನ್ನು ಶ್ಲಾಘಿಸಿರುವುದು ಭಾರತದ ಬೆಳೆಯುತ್ತಿರುವ ಸಾಂಸ್ಕೃತಿಕ ಪ್ರಭಾವವನ್ನು ತೋರಿಸುತ್ತದೆ.
  • ರಾಜತಾಂತ್ರಿಕ ಬದಲಾವಣೆ: 1965 ರ ಯುದ್ಧದಲ್ಲಿ ಇಂಡೋನೇಷ್ಯಾ ಪಾಕಿಸ್ತಾನವನ್ನು ಬೆಂಬಲಿಸಿತ್ತು. ಆದರೆ ಇಂದು ಪ್ರಧಾನಿ ಮೋದಿಯವರ ನೇತೃತ್ವದಲ್ಲಿ, ಅದು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತದ ಅತ್ಯಂತ ಮಹತ್ವದ ಸ್ಟ್ರಾಟಿಜಿಕ್ ಪಾರ್ಟ್ನರ್​ಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
  • ಬಿಂಟಾಂಗ್ ಆದಿಪೂರ್ಣ ಪ್ರಶಸ್ತಿ: ಪ್ರಧಾನಿ ಮೋದಿಯವರಿಗೆ ಇಂಡೋನೇಷ್ಯಾ ನೀಡಿದ ಅತ್ಯುನ್ನತ ನಾಗರಿಕ ಗೌರವವಾದ ಬಿಂಟಾಂಗ್ ಆದಿಪೂರ್ಣ ಕೇವಲ ಒಬ್ಬ ನಾಯಕನಿಗೆ ಸಂದ ಗೌರವವಲ್ಲ; ಇದು ಭಾರತದ ಪ್ರಾಚೀನ ನಾಗರಿಕತೆ ಮತ್ತು ಉಭಯ ದೇಶಗಳ ನಡುವಿನ ಆಳವಾದ ಸಾಂಸ್ಕೃತಿಕ ಸಂಬಂಧಕ್ಕೆ ಸಂದ ಮನ್ನಣೆಯಾಗಿದೆ.
  • ಹಂಚಿಕೆಯ ಸಂಕೇತಗಳು: ರಾಮಾಯಣ, ಮಹಾಭಾರತ, ಸಂಸ್ಕೃತ, ಗರುಡ ಮತ್ತು ಬಾಲಿ ಮುಂತಾದ ಹಂಚಿಕೆಯ ಸಂಕೇತಗಳು ಇಂದು ಕೇವಲ ಸಾಂಸ್ಕೃತಿಕ ಕೊಂಡಿಗಳಾಗಿ ಉಳಿದಿಲ್ಲ, ಅವು ಉಭಯ ದೇಶಗಳ ಬಾಂಧವ್ಯದ ಪ್ರಮುಖ ಅಡಿಪಾಯಗಳಾಗಿವೆ. ಭಾರತದ ಸಾಫ್ಟ್ ಪವರ್ ಈಗ ಕೇವಲ ಯೋಗ ಮತ್ತು ಸಂಸ್ಕೃತಿಗೆ ಸೀಮಿತವಾಗಿರದೆ ಶಿಕ್ಷಣ, ಆರೋಗ್ಯ ಮತ್ತು ಡಿಜಿಟಲ್ ಮೂಲಸೌಕರ್ಯಗಳಿಗೂ ವಿಸ್ತರಿಸಿದೆ.

ಇದನ್ನೂ ಓದಿ: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ; ತರಾತುರಿ ತೋರದ ಭಾರತ; ಕೆಟ್ಟ ಒಪ್ಪಂದಕ್ಕಿಂತ, ಒಪ್ಪಂದವಿಲ್ಲದಿರುವುದೇ ಲೇಸು – ಸರ್ಕಾರ ನಿಲುವು

ಭಾರತ ಮತ್ತು ಇಂಡೋನೇಷ್ಯಾದ ಐತಿಹಾಸಿಕ ಒಪ್ಪಂದಗಳು

ಸಂಸ್ಕೃತಿಯ ವಿಶ್ವಾಸವನ್ನು ಬಳಸಿಕೊಂಡು ರಕ್ಷಣೆ, ಶಿಕ್ಷಣ, ತಂತ್ರಜ್ಞಾನ ಮತ್ತು ಕಡಲ ಭದ್ರತೆಯಲ್ಲಿ ಮಾಡಿಕೊಳ್ಳಲಾದ ಪ್ರಮುಖ ಒಪ್ಪಂದಗಳು ಈ ಕೆಳಗಿನಂತಿವೆ:

1. ರಕ್ಷಣೆ ಮತ್ತು ಕಡಲ ಭದ್ರತೆ

  • ಬ್ರಹ್ಮೋಸ್ ಮತ್ತು ಅಸ್ತ್ರ ಕ್ಷಿಪಣಿಗಳು: ಇಂಡೋನೇಷ್ಯಾ ಭಾರತದಿಂದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಜೊತೆಗೆ, ಭಾರತದ ‘ಆಪರೇಷನ್ ಸಿಂಧೂರ್’ ಯಶಸ್ಸಿನ ನಂತರ ಅಸ್ತ್ರ ಏರ್-ಟು-ಏರ್ ಕ್ಷಿಪಣಿಗಳನ್ನು ಸಹ ಖರೀದಿಸಿದೆ.
  • ಸೇನಾ ತರಬೇತಿ: ಇಂಡೋನೇಷ್ಯಾದ ರಕ್ಷಣಾ ಅಧಿಕಾರಿಗಳಿಗೆ ಭಾರತದ ಪ್ರತಿಷ್ಠಿತ ಎನ್‌ಡಿಎ ಮತ್ತು ಡಿಎಸ್‌ಎಸ್‌ಸಿ (ಈಖಖಇ) ಸಂಸ್ಥೆಗಳಲ್ಲಿ ತರಬೇತಿ ನೀಡಲಾಗುವುದು.
  • ಸಬಾಂಗ್ ಬಂದರು ಅಭಿವೃದ್ಧಿ: ಮಲಕ್ಕಾ ಜಲಸಂಧಿಯ ಮುಖಭಾಗದಲ್ಲಿರುವ, ಮತ್ತು ಭಾರತದ ನಿಕೋಬಾರ್ ಬಂದರು ಯೋಜನೆಯಿಂದ ಕೇವಲ 100 ಮೈಲಿ ದೂರದಲ್ಲಿರುವ ಆಯಕಟ್ಟಿನ ಸಬಾಂಗ್ ಬಂದರನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ.

2. ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಪೂರೈಕೆ ಸರಪಳಿ

  • ದುರ್ಲಭ ಖನಿಜಗಳು : ಭಾರತದ, ಮಿಡ್‌ವೆಸ್ಟ್ ಲಿಮಿಟೆಡ್ ಮತ್ತು ಇಂಡೋನೇಷ್ಯಾದ ನಡುವೆ ತ್ರಿಪಕ್ಷೀಯ ಒಪ್ಪಂದವಾಗಿದ್ದು, ಇದು ಇಂಡೋನೇಷ್ಯಾದಲ್ಲಿ ಸ್ಟೀಲ್, ನಿಕೆಲ್ ಮತ್ತು ರೇರ್ ಅರ್ಥ್ ಮ್ಯಾಗ್ನೆಟ್‌ಗಳ ತಯಾರಿಕೆಯಲ್ಲಿ ಭಾರತೀಯ ಹೂಡಿಕೆಗೆ ಉತ್ತೇಜನ ನೀಡುತ್ತದೆ.
  • ಬಾಹ್ಯಾಕಾಶ ಸಹಕಾರ: ಉಪಗ್ರಹ ತಂತ್ರಜ್ಞಾನ, ಜಂಟಿ ಸಂಶೋಧನೆ ಮತ್ತು ದೂರಸಂವೇದಿ ದತ್ತಾಂಶ ಹಂಚಿಕೆಗಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ಕೃಷಿ ಮೇಲ್ವಿಚಾರಣೆ ಮತ್ತು ವಿಪತ್ತು ನಿರ್ವಹಣೆಗೆ ಸಹಕಾರಿಯಾಗಲಿದೆ.
  • ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್: ಭಾರತವು ತನ್ನ ಡಿಜಿಟಲ್ ತಂತ್ರಜ್ಞಾನವನ್ನು ಹಂಚಿಕೊಳ್ಳಲು ಒಪ್ಪಿಕೊಂಡಿದೆ. ಇದರ ಅಡಿಯಲ್ಲಿ ಭಾರತದ ಖಿಐ ಮತ್ತು ಇಂಡೋನೇಷ್ಯಾದ ಕ್ಕಿಐಖ ಪಾವತಿ ವ್ಯವಸ್ಥೆಗಳನ್ನು ಪರಸ್ಪರ ಜೋಡಿಸುವ ಪ್ರಕ್ರಿಯೆ ನಡೆಯಲಿದೆ. ಇದು ‘ಸ್ಟಾರ್ಟ್‌ಅಪ್ ಇಂಡಿಯಾ’ ಮಿಷನ್‌ಗೆ ಬೆಂಬಲ ನೀಡುತ್ತದೆ.

ಇದನ್ನೂ ಓದಿ: ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಬ್ರೇಕ್: ತಮಿಳುನಾಡಿನಲ್ಲಿ ಸದ್ಯಕ್ಕಿಲ್ಲ ‘ಸಂಪೂರ್ಣ ಗೋಹತ್ಯೆ ನಿಷೇಧ’

3. ಶಿಕ್ಷಣ, ಆರೋಗ್ಯ ಮತ್ತು ಸಾರ್ವಜನಿಕ ಕಲ್ಯಾಣ

  • ಐಐಎಂ ಬೆಂಗಳೂರು ವಿದೇಶಿ ಕ್ಯಾಂಪಸ್: ಭಾರತದ ಪ್ರಮುಖ ಮ್ಯಾನೇಜ್‌ಮೆಂಟ್ ಶಿಕ್ಷಣ ಬ್ರ್ಯಾಂಡ್ ಅನ್ನು ಆಸಿಯಾನ್ ದೇಶಗಳಿಗೆ ವಿಸ್ತರಿಸುವ ಭಾಗವಾಗಿ, ಬೆಂಗಳೂರು ಐಐಎಂ ತನ್ನ ಮೊದಲ ವಿದೇಶಿ ಕ್ಯಾಂಪಸ್ ಅನ್ನು ಇಂಡೋನೇಷ್ಯಾದ ಸಿಂಘಸಾರಿಯಲ್ಲಿ ತೆರೆಯಲಿದೆ.
  • ಚುನಾವಣಾ ತಂತ್ರಜ್ಞಾನ: ವಿಶ್ವದ ಅತಿ ದೊಡ್ಡ ಮತ್ತು ಮೂರನೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶಗಳಾದ ಭಾರತ ಮತ್ತು ಇಂಡೋನೇಷ್ಯಾವನ್ನು ಬೆಸೆಯುವಂತೆ, ಇಂಡೋನೇಷ್ಯಾ ತನ್ನದೇ ಆದ ಇವಿಎಂಗಳನ್ನು ಅಭಿವೃದ್ಧಿಪಡಿಸಲು ಭಾರತದ ಚುನಾವಣಾ ಆಯೋಗ ನೆರವು ನೀಡಲಿದೆ.
  • ಆರೋಗ್ಯ ಮತ್ತು ಸಾರ್ವಜನಿಕ ವಿತರಣೆ: ಇಂಡೋನೇಷ್ಯಾದ 280 ಮಿಲಿಯನ್ ನಾಗರಿಕರಿಗೆ ಭಾರತದ ಕೈಗೆಟುಕುವ ದರದ ಔಷಧಗಳು ಲಭ್ಯವಾಗಲಿವೆ. ಇದರೊಂದಿಗೆ, ಭಾರತವು ತನ್ನ ಮಧ್ಯಾಹ್ನದ ಬಿಸಿಯೂಟ ಯೋಜನೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮಾದರಿಯನ್ನು ಇಂಡೋನೇಷ್ಯಾದೊಂದಿಗೆ ಹಂಚಿಕೊಂಡಿದೆ.
  • ಆಹಾರ ಭದ್ರತೆ: ಕೃಷಿ ಆಧಾರಿತ ಆರ್ಥಿಕತೆಯನ್ನು ಹೊಂದಿರುವ ಇಂಡೋನೇಷ್ಯಾಕ್ಕೆ ಆಹಾರ ಭದ್ರತೆಯನ್ನು ಉತ್ತೇಜಿಸಲು ಭಾರತವು 100 ಟನ್ ಉತ್ತಮ ಗುಣಮಟ್ಟದ ಗೋಧಿ ಬಿತ್ತನೆ ಬೀಜಗಳನ್ನು ಪೂರೈಸುವುದಾಗಿ ಪ್ರಕಟಿಸಿದೆ.
  • ವಿಪತ್ತು ನಿರ್ವಹಣೆ: ಭಾರತ ಮತ್ತು ಇಂಡೋನೇಷ್ಯಾದ ನಡುವೆ ಒಪ್ಪಂದವಾಗಿದ್ದು, ತಂತ್ರಜ್ಞಾನ ಆಧಾರಿತ ಮುನ್ನೆಚ್ಚರಿಕೆ ವ್ಯವಸ್ಥೆಗಳ ಮೂಲಕ ಲಕ್ಷಾಂತರ ಜನರ ಜೀವ ಉಳಿಸಲು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ.

ಪ್ರಧಾನಿ ಮೋದಿಯವರ ಮಹಾಸಾಗರ್ ದೃಷ್ಟಿಕೋನದ ಅಡಿಯಲ್ಲಿ ಕೈಗೊಳ್ಳಲಾದ ಈ ಐತಿಹಾಸಿಕ ಭೇಟಿಯು, ಕೇವಲ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವುದಲ್ಲದೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ರಕ್ಷಣೆ, ಸ್ಥಿರತೆ ಮತ್ತು ಅಂತರ್ಗತ ಬೆಳವಣಿಗೆಗೆ ಹೊಸ ದಾರಿದೀಪವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version