ನಿರ್ಮಾಪಕಿ ಬಳಿಕ ಈಗ ಹಿನ್ನೆಲೆ ಗಾಯಕಿಯಾದ ಗಣೇಶ್ ಪತ್ನಿ ಶಿಲ್ಪಾ – Kannada News | Shilpa Ganesh talks about she singing in movie

ಗೋಲ್ಡನ್ ಸ್ಟಾರ್ ಗಣೇಶ್ (Ganesh) ಅವರ ಪತ್ನಿ ಶಿಲ್ಪಾ ಗಣೇಶ್ ಈ ಹಿಂದೆ ನಿರ್ಮಾಪಕಿ ಆಗಿದ್ದವರು ಈಗ ಗಾಯಕಿ ಆಗಿದ್ದಾರೆ. ಶಿಲ್ಪಾ ಗಣೇಶ್ ಅವರೇ ನಿರ್ಮಾಣ ಮಾಡಿರುವ ‘ಪಿಚ್ಚರ್’ ಸಿನಿಮಾನಲ್ಲಿ ಅವರು ಹಾಡೊಂದನ್ನು ಹಾಡಿದ್ದಾರೆ. ಶಿಲ್ಪಾ ಗಣೇಶ್ ಅವರು ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿ, ಅನುಭವವನ್ನು ಹಂಚಿಕೊಂಡಿದ್ದಾರೆ. ಮೊದಲಿನಿಂದಲೂ ನಾನು ಹಾಡುತ್ತಿದ್ದೆ, ನನ್ನ ಹಾಡು ಕೇಳಿದವರು ಸಿನಿಮಾನಲ್ಲಿ ಹಾಡಬೇಕು ಎಂದು ಒತ್ತಾಯಿಸಿದ್ದರು. ಆದರೆ ಬೇರೆ ಸಿನಿಮಾಗಳಲ್ಲಿ ಹಾಡುವುದಕ್ಕಿಂತಲೂ ನಮ್ಮ ಸಿನಿಮಾಗಳಲ್ಲಿಯೇ ಹಾಡುವುದು ಉತ್ತಮ ಎನಿಸಿತು. ಅಲ್ಲದೆ ಸಂಗೀತ ನಿರ್ದೇಶಕರೂ ಸಹ ನನ್ನ ಧ್ವನಿ ಸೂಟ್ ಆಗುತ್ತೆ ಎಂದು ಒತ್ತಾಯಿಸಿದ ಕಾರಣಕ್ಕೆ ಸಿನಿಮಾನಲ್ಲಿ ಹಾಡುವ ಧೈರ್ಯ ಮಾಡಿದ್ದೇನೆ ಎಂದಿದ್ದಾರೆ ಶಿಲ್ಪಾ ಗಣೇಶ್. ಗಾಯಕಿ ಆಗಿರುವ ಬಗ್ಗೆ ಶಿಲ್ಪಾ ಗಣೇಶ್ ಹೇಳಿರುವುದು ಹೀಗೆ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಫುಟ್​ಪಾತ್ ತೆರವು ಶುರು: ಜಯನಗರದ ಅಶೋಕ ಪಿಲ್ಲರ್​ನಿಂದ ಫುಟ್​ಪಾತ್​ ತೆರವು ಕಾರ್ಯಾಚರಣೆ ಆರಂಭ – Kannada News | Bengaluru Footpath Clearance Drive Begins: GBA deploys JCBs near Jayanagar Ashoka Pillar to Evict Encroachments

ಬೆಂಗಳೂರು, ಜುಲೈ 1: ಬೃಹತ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಬೆಂಗಳೂರು ನಗರದಾದ್ಯಂತ ಫುಟ್​ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ. ಜಯನಗರದ ಅಶೋಕ ಪಿಲ್ಲರ್ ಸಮೀಪದಿಂದ ಬುಧವಾರ ಬೆಳಗ್ಗೆ ಕಾರ್ಯಾಚರಣೆ ಆರಂಭಗೊಂಡಿದ್ದು, ಅಂಗಡಿಗಳು ಮತ್ತು ಕಟ್ಟಡ ಕಾಮಗಾರಿಗೆ ಸಂಬಂಧಿಸಿದ ವಸ್ತುಗಳಿಂದ ಒತ್ತುವರಿ ಮಾಡಲಾಗಿದ್ದ ಫುಟ್​ಪಾತ್‌ಗಳನ್ನು ತೆರವುಗೊಳಿಸಲಾಗುತ್ತಿದೆ.

ಬೆಳಗ್ಗೆ 9:30ಕ್ಕೆ ಶುರುವಾದ ಈ ಕಾರ್ಯಾಚರಣೆಗೆ ಜೆಸಿಬಿಗಳನ್ನು ಬಳಸಲಾಗುತ್ತಿದೆ. ಸ್ಥಳೀಯ ಅಧಿಕಾರಿಗಳ ನೇತೃತ್ವದಲ್ಲಿ ಪೊಲೀಸರ ಬೆಂಗಾವಲು ಸಹ ಒದಗಿಸಲಾಗಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ 153 ರಲ್ಲಿ, ಅಶೋಕ ಪಿಲ್ಲರ್‌ನಿಂದ ಮಾಧವನ್ ಪಾರ್ಕ್‌ವರೆಗೆ ಈ ತೆರವು ನಡೆಯುತ್ತಿದೆ. ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ಎಲ್ಲ ಒತ್ತುವರಿಗಳನ್ನು ತೆರವುಗೊಳಿಸಿ, ಭವಿಷ್ಯದಲ್ಲಿ ಮತ್ತೆ ಒತ್ತುವರಿ ಮಾಡದಂತೆ ನಿಗಾ ವಹಿಸಲು ಜಿಬಿಎ ಎಚ್ಚರಿಕೆ ವಹಿಸುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Guru Astama 2026: ಜು.14 ರಿಂದ ಗುರು ಅಸ್ತಮ; ಈ 3 ರಾಶಿಯವರು ಆ. 12 ರವರೆಗೆ ತುಂಬಾ ಜಾಗರೂಕರಾಗಿರಿ – Kannada News | Guru Astama 2026: Major Impact on 3 Zodiac Signs from July 14! Know Effects

ಜು.14 ರಿಂದ ಗುರು ಅಸ್ತಮImage Credit source: Getty Images

ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂಬತ್ತು ಗ್ರಹಗಳ ಪೈಕಿ ದೇವಗುರು ಬೃಹಸ್ಪತಿಗೆ ಅತ್ಯಂತ ಪ್ರಮುಖ ಸ್ಥಾನವಿದೆ. ಗುರುವನ್ನು ಜ್ಞಾನ, ಶಿಕ್ಷಣ, ಬುದ್ಧಿವಂತಿಕೆ, ಸಂಪತ್ತು, ಅದೃಷ್ಟ, ಧರ್ಮ ಮತ್ತು ಸಂತಾನ ಭಾಗ್ಯದ ಕಾರಕ ಎಂದು ಪರಿಗಣಿಸಲಾಗುತ್ತದೆ. ಗುರುವಿನ ನಡಿಗೆಯಲ್ಲಿ ಆಗುವ ಸಣ್ಣ ಬದಲಾವಣೆಯೂ ಇಡೀ ದೇಶ ಮತ್ತು ಪ್ರಪಂಚದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಪ್ರಸ್ತುತ ಗುರುಗ್ರಹವು ಚಂದ್ರನ ಒಡೆತನದ, ತನ್ನ ಉಚ್ಚ ರಾಶಿಯಾದ ಕರ್ಕಾಟಕ (Cancer) ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಆದರೆ, ಜುಲೈ 14 ರಂದು ಗುರುವು ಇದೇ ರಾಶಿಯಲ್ಲಿ ಅಸ್ತಮಿಸಲಿದ್ದು, ಆಗಸ್ಟ್ 12 ರವರೆಗೆ ಇದೇ ಸ್ಥಿತಿಯಲ್ಲಿ ಇರಲಿದ್ದಾನೆ.

ಶುಭ ಕಾರ್ಯಗಳಿಗೆ ತಾತ್ಕಾಲಿಕ ಬ್ರೇಕ್:

ಗುರುಗ್ರಹವು ಅಸ್ತಮಿಸಿದ ತಕ್ಷಣವೇ ಮದುವೆ, ಮುಂಜಿ, ಗೃಹಪ್ರವೇಶ, ಚೌಲ (ಕ್ಷೌರ ಸಮಾರಂಭ) ಮುಂತಾದ ಯಾವುದೇ ರೀತಿಯ ಶುಭ ಕಾರ್ಯಕ್ರಮಗಳನ್ನು ಶಾಸ್ತ್ರೋಕ್ತವಾಗಿ ನಿಷೇಧಿಸಲಾಗುತ್ತದೆ. ಈ ಅವಧಿಯಲ್ಲಿ ಗುರು ಬಲ ಕಡಿಮೆ ಇರುವುದರಿಂದ ಹೊಸ ಕಾರ್ಯಗಳನ್ನು ಆರಂಭಿಸುವುದಿಲ್ಲ. ಜ್ಯೋತಿಷಿಗಳ ಪ್ರಕಾರ, ಈ ಗುರು ಅಸ್ತಮದ ಅವಧಿಯಲ್ಲಿ ಮುಖ್ಯವಾಗಿ 3 ರಾಶಿಯವರು ಅತ್ಯಂತ ಜಾಗರೂಕರಾಗಿರಬೇಕು. ಆ ರಾಶಿಗಳು ಯಾವುವು ಮತ್ತು ಅವರ ಮೇಲೆ ಆಗುವ ಪರಿಣಾಮಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಮೇಷ ರಾಶಿ (Aries):

ಮೇಷ ರಾಶಿಯ ಅಧಿಪತಿ ಮಂಗಳ. ಪ್ರಸ್ತುತ ಗುರುವು ಮೇಷ ರಾಶಿಯ 4ನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಇಷ್ಟು ದಿನ ವೃತ್ತಿಜೀವನದಲ್ಲಿ ಪ್ರಗತಿ ಮತ್ತು ಯಶಸ್ಸನ್ನು ಕಂಡಿದ್ದ ನಿಮಗೆ, ಗುರು ಅಸ್ತಮವಾದ ನಂತರ ಸವಾಲುಗಳು ಎದುರಾಗಬಹುದು. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಋತುಮಾನದ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆಹಾರ ಪದ್ಧತಿಯಲ್ಲಿ ಶಿಸ್ತು ಕಾಪಾಡಿಕೊಳ್ಳಿ, ಉದ್ವೇಗಕ್ಕೆ ಒಳಗಾಗದೆ ತಾಳ್ಮೆಯಿಂದ ವರ್ತಿಸಿ.

ಇದನ್ನೂ ಓದಿ: ಸಾನ್ನದ ನೀರಿಗೆ ಒಂದು ಚಿಟಿಕೆ ಕರ್ಪೂರ ಬೆರೆಸಿ; ಇದರ ಚಮತ್ಕಾರಿ ಪ್ರಯೋಜನಗಳು ಇಲ್ಲಿವೆ…

ವೃಷಭ ರಾಶಿ (Taurus):

ವೃಷಭ ರಾಶಿಯ ಅಧಿಪತಿ ಶುಕ್ರ. ಪ್ರಸ್ತುತ ಗುರುವು ನಿಮ್ಮ ರಾಶಿಯ 3ನೇ ಮನೆಯಲ್ಲಿದ್ದು, ಆತನ ದೃಷ್ಟಿ 8ನೇ ಮನೆಯ ಮೇಲಿದೆ. ಎಂಟನೇ ಮನೆ ಸವಾಲುಗಳು ಮತ್ತು ಹಠಾತ್ ಬದಲಾವಣೆಗಳನ್ನು ಸೂಚಿಸುತ್ತದೆ. ಗುರು ಅಸ್ತಮದ ಅವಧಿಯಲ್ಲಿ ಯಾವುದೇ ಹೊಸ ಉದ್ಯೋಗ ಅಥವಾ ವ್ಯವಹಾರದಲ್ಲಿ ಹಣ ಹೂಡುವ ಮುನ್ನ ಎಚ್ಚರವಿರಲಿ. ಯಾವುದೇ ರೀತಿಯ ರಿಸ್ಕ್ (ಅಪಾಯ) ತೆಗೆದುಕೊಳ್ಳಲು ಹೋಗಬೇಡಿ. ಆರೋಗ್ಯದ ಏರುಪೇರಾಗುವ ಸಾಧ್ಯತೆ ಇದೆ. ಕಚೇರಿಯಲ್ಲಿ ಅಥವಾ ಮನೆಯಲ್ಲಿ ನಿಮ್ಮ ಹಿರಿಯರೊಂದಿಗೆ ಅನಗತ್ಯ ವಾದಗಳನ್ನು ಮಾಡಬೇಡಿ ಮತ್ತು ಅವರೊಂದಿಗೆ ಉತ್ತಮ ಸಮನ್ವಯ ಕಾಯ್ದುಕೊಳ್ಳಿ.

ಮಿಥುನ ರಾಶಿ (Gemini):

ಮಿಥುನ ರಾಶಿಯ ಅಧಿಪತಿ ಬುಧ. ಪ್ರಸ್ತುತ ಗುರುವು ನಿಮ್ಮ ರಾಶಿಯ 2ನೇ ಮನೆಯಲ್ಲಿ ಅಂದರೆ ಧನ ಮತ್ತು ಕುಟುಂಬದ ಸ್ಥಾನದಲ್ಲಿ ಸಂಚರಿಸುತ್ತಿದ್ದಾನೆ. ಗುರು ಅಸ್ತಮದ ಪ್ರಭಾವದಿಂದಾಗಿ ನಿಮ್ಮ ಕುಟುಂಬ ಜೀವನದಲ್ಲಿ ತಪ್ಪು ತಿಳುವಳಿಕೆಗಳು ಮತ್ತು ಭಿನ್ನಾಭಿಪ್ರಾಯಗಳು ಮೂಡಬಹುದು. ಹಣಕಾಸಿನ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಅವಧಿಯಲ್ಲಿ ನಿಮ್ಮ ಮಾತಿನ ಮೇಲೆ ಸಂಪೂರ್ಣ ನಿಯಂತ್ರಣವಿರಲಿ. ಕಠಿಣ ಪದಗಳ ಬಳಕೆಯನ್ನು ತಪ್ಪಿಸಿ. ಮುಖ್ಯವಾಗಿ, ಯಾವುದೇ ದೊಡ್ಡ ಹೂಡಿಕೆ ಮಾಡುವ ಮುನ್ನ ತಜ್ಞರ ಅಥವಾ ಹಿರಿಯರ ಸಲಹೆಯನ್ನು ಪಡೆಯಿರಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಿರಿಯ ಸಿನಿಮಾ ನಿರ್ದೇಶಕಿ ವಿಜಯ ಮೆಹ್ತಾ ನಿಧನ – Kannada News | Famous Marathi drama and movie director Vijaya Mehta passed away

ಭಾರತೀಯ ಚಿತ್ರರಂಗದಲ್ಲಿ (Indian Cinema) ಈಗಲೂ ಮಹಿಳಾ ನಿರ್ದೇಶಕರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಆದರೆ ದಶಕಗಳ ಹಿಂದೆಯೇ ನಿರ್ದೇಶಕಿಯಾಗಿ ಹೆಸರು, ಗೌರವಗಳನ್ನು ಗಳಿಸಿದ್ದ ವಿಜಯಾ ಮೆಹ್ತಾ ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ. ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ನಟಿ ಮತ್ತು ನಿರ್ದೇಶಕಿಯಾಗಿ ಹೆಸರು ಮಾಡಿದ್ದ ವಿಜಯಾ ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರು ಮುಂಬೈನ ‘ರಂಗಾಯಣ’ ರಂಗ ತಂಡದ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ಇವರೊಂದಿಗೆ ಹೆಸರಾಂತ ನಾಟಕಕಾರ ವಿಜಯ್ ತೆಂಡೂಲ್ಕರ್ ಹಾಗೂ ನಟರಾದ ಅರವಿಂದ್ ದೇಶಪಾಂಡೆ ಮತ್ತು ಶ್ರೀರಾಮ್ ಲಾಗೂ ಸಹ ಇದ್ದರು.

ಮೆಹ್ತಾ ಅವರು ದೆಹಲಿಯ ಪ್ರಖ್ಯಾತ ಮಾರ್ಗದರ್ಶಕ ಇಬ್ರಾಹಿಂ ಅಲ್ಕಾಜಿ ಮತ್ತು ಮುಂಬೈನ ಆದಿ ಮರ್ಜ್‌ಬಾನ್ ಅವರ ಬಳಿ ರಂಗಭೂಮಿಯ ತರಬೇತಿ ಪಡೆದಿದ್ದರು. ರಂಗಭೂಮಿ ನಿರ್ದೇಶನಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ, 1975ರಲ್ಲಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಲಾಯಿತು. ನಂತರ, 1986ರಲ್ಲಿ ಬಿಡುಗಡೆಯಾದ ‘ರಾವ್ ಸಾಹೇಬ್’ ಚಿತ್ರದಲ್ಲಿನ ನಟನೆಗಾಗಿ ಅವರು ಅತ್ಯುತ್ತಮ ಪೋಷಕ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸಹ ಪಡೆದುಕೊಂಡರು.

80ರ ದಶಕದಲ್ಲಿ ಸಿನಿಮಾ ಮತ್ತು ನಾಟಕ ನಿರ್ದೇಶನ ಪ್ರಾರಂಭಿಸಿದ ವಿಜಯ ಮೆಹ್ತಾ, 1982 ರಲ್ಲಿ ಟಿವಿ ಸಿನಿಮಾ ನಿರ್ದೇಶಿಸಿದರು. ಬಳಿಕ 1985 ರಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದ ‘ರಾವ್ ಸಾವೇಬ್’ ಸಿನಿಮಾ ನಿರ್ದೇಶಿಸಿದರು. ಆ ಬಳಿಕ 1988 ರಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ‘ಪೆಸ್ತೂಂಜಿ’ ಸಿನಿಮಾ ನಿರ್ದೇಶನ ಮಾಡಿದರು. ಆ ಸಿನಿಮಾನಲ್ಲಿ ನಸೀರುದ್ದೀನ್ ಶಾ, ಶಬಾನಾ ಆಜ್ಮಿ, ಕಿರಣ್ ಖೇರ್ ಮತ್ತು ಅನುಪಮ್ ಖೇರ್ ನಟಿಸಿದ್ದರು. ವಿಜಯ ಅವರು ಮರಾಠಿ ರಂಗಭೂಮಿ ಅಪಾರವಾದ ಕೊಡುವೆಯನ್ನು ನೀಡಿದ್ದಾರೆ. ಮರಾಠಿ ರಂಗಭೂಮಿಯಲ್ಲಿ ಅವರಿಗೆ ಅಪಾರ ಗೌರವ, ಆದರಗಳು ಇವೆ.

ಇದನ್ನೂ ಓದಿ:ಜಾಲಿಯಾಗಿ ಪ್ರಚಾರ ಮಾಡಿದ ಗ್ರಾಮಾಯಣ ಸಿನಿಮಾ ಟೀಮ್

ಪ್ರೀತಿಯಿಂದ ‘ಭಾಯಿ’ ಎಂದು ಕರೆಸಿಕೊಳ್ಳುತ್ತಿದ್ದ ವಿಜಯ ಅವರು ನಿನ್ನೆ (ಜೂನ್ 30) ತಡರಾತ್ರಿ ನಿಧನ ಹೊಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮಹರಾಷ್ಟ್ರ ಸಿಎಂ ದೇವೇಂದ್ರ ಫಡ್ಣವೀಸ್ ಸೇರಿದಂತೆ ಹಲವಾರು ಮಂದಿ ಸಿನಿಮಾ ಮತ್ತು ರಾಜಕೀಯ ಗಣ್ಯರು ವಿಜಯಾ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ವಿಜಯಾ ಅವರ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಶ್ರೀಮತಿ ವಿಜಯ ಮೆಹ್ತಾ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಸಂಸ್ಕೃತಿ ಮತ್ತು ಸಿನಿಮಾ ರಂಗದ ಅತ್ಯುನ್ನತ ವ್ಯಕ್ತಿಗಳಲ್ಲಿ ಒಬ್ಬರಾಗಿ ಅವರನ್ನು ಸ್ಮರಿಸಲಾಗುವುದು. ಆಧುನಿಕ ಮರಾಠಿ ರಂಗಭೂಮಿಯ ಪ್ರವರ್ತಕರಾಗಿದ್ದ ಅವರು ತಮ್ಮ ಸೃಜನಶೀಲತೆ ಮತ್ತು ಕಲಾತ್ಮಕ ಶ್ರೇಷ್ಠತೆಗೆ ಬದ್ಧತೆಗೆ ಹೆಸರುವಾಸಿಯಾಗಿದ್ದರು. ಅವರ ಕೆಲಸವು ಪೀಳಿಗೆಗಳ ನಟರು, ನಿರ್ದೇಶಕರು ಮತ್ತು ರಂಗಭೂಮಿ ಪ್ರೇಮಿಗಳಿಗೆ ಸ್ಫೂರ್ತಿ ನೀಡಿತು. ಈ ದುಃಖದ ಸಮಯದಲ್ಲಿ ಅವರ ಕುಟುಂಬ, ಅಭಿಮಾನಿಗಳು ಮತ್ತು ಇಡೀ ಕಲಾ ಭ್ರಾತೃತ್ವದೊಂದಿಗೆ ನನ್ನ ಆಲೋಚನೆಗಳು ಇವೆ. ಓಂ ಶಾಂತಿ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳೂರಿನಲ್ಲಿ ಮೇಲ್ಛಾವಣಿ ಕುಸಿತ: ಬಚಾವಾದವರು ಹೇಳಿದ್ದೇನು?

ಮಂಗಳೂರು, ಜುಲೈ 01: ನಗರದ ಕಂಕನಾಡಿ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಮನೆ ಹಿಂಭಾಗದ ತಡೆಗೋಡೆ ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ. ಈ ಅವಘಡದಲ್ಲಿ ಒಬ್ಬ ಮಹಿಳೆ ಮತ್ತು ಇಬ್ಬರು ಬಾಲಕಿಯರು ಮೃತಪಟ್ಟಿದ್ದು,ಓರ್ವ ಪುರುಷ ಮತ್ತು ಇಬ್ಬರು ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನೆರೆಮನೆಯವರು, ಬೆಳಗಿನ ಜಾವ ಸುಮಾರು 4 ಗಂಟೆಗೆ ಈ ದುರಂತ ಸಂಭವಿಸಿದೆ. ಜೋರಾಗಿ ಶಬ್ಧ ಬಂದ ನಂತರ ಸ್ಥಳಕ್ಕೆ ಹೋಗಿ ನೋಡಿದೆವು. ನಾವು ಬರುವಷ್ಟರಲ್ಲಿ ಮೇಲ್ಛಾವಣಿ ಕುಸಿದು ಬಿದ್ದಿತ್ತು. ದುರಾದೃಷ್ಟವಶಾತ್ ಯಾರನ್ನೂ ಬಚಾವು ಮಾಡಲು ಆಗಲಿಲ್ಲ. ತಕ್ಷಣವೇ ಪೊಲೀಸರಿಗೆ ಮಾಹಿತಿ ತಿಳಿಸಿದೆವು. ಇಲ್ಲಿ ಇರುವ ಎಲ್ಲವೂ ಬಾಡಿಗೆ ಮನೆಗಳೇ ಆಗಿದ್ದು, ನಮ್ಮ ಕುಟುಂಬ ಹೊರತುಪಡಿಸಿ ಉಳಿದ 4 ಕುಟುಂಬ ದುರಂತಕ್ಕೀಡಾಗಿದೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಎಂಬಾಪೆ ಪರಾಕ್ರಮಕ್ಕೆ ಮೆಸ್ಸಿಯ ವಿಶ್ವ ದಾಖಲೆ ಶೇಕಿಂಗ್! – Kannada News | Kylian Mbappe Breaks All Time World Cup Knockout Goal Record

ಫಿಫಾ ವಿಶ್ವಕಪ್ 2026ರಲ್ಲಿ ಕಿಲಿಯನ್ ಎಂಬಾಪೆ ಪರಾಕ್ರಮ ಮುಂದುವರೆದಿದೆ. ಕಳೆದ ಮೂರು ಮ್ಯಾಚ್​ಗಳಲ್ಲಿ 4 ಗೋಲು ಬಾರಿಸಿದ್ದ ಎಂಬಾಪೆ ಇದೀಗ ಮತ್ತೆರಡು ಗೋಲುಗಳನ್ನು ದಾಖಲಿಸಿದ್ದಾರೆ. ಈ ಗೋಲುಗಳೊಂದಿಗೆ 20 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

ಸ್ವೀಡನ್ ವಿರುದ್ಧದ ಪಂದ್ಯದಲ್ಲಿ ಫ್ರಾನ್ಸ್ ಪರ ಸೆಂಟರ್​ ಫಾರ್ವರ್ಡ್​ನಲ್ಲಿ ಆಡಿದ್ದ ಎಂಬಾಪೆ ಮೊದಲಾರ್ಧದ 45ನೇ ನಿಮಿಷದಲ್ಲಿ ಸಿಕ್ಕ ಕಾರ್ನರ್ ಪಾಸ್​ ಅನ್ನು ಗೋಲಾಗಿ ಪರಿವರ್ತಿಸಿದ್ದರು.

ಇದಾದ ಬಳಿಕ ದ್ವಿತೀಯಾರ್ಧದ 74ನೇ ನಿಮಿಷದಲ್ಲಿ, ಮೈಕೆಲ್ ಒಲಿಸೆ ನೀಡಿದ ಮತ್ತೊಂದು ನಿಖರವಾದ ತ್ರೂ-ಪಾಸ್ ಅನ್ನು ಗೋಲು ಬಲೆಯೊಳಗೆ ತಲುಪಿಸಿದ್ದರು.

ಇದರ ನಡುವೆ 53ನೇ ನಿಮಿಷದಲ್ಲಿ ಮೈಕೆಲ್ ಒಲಿಸೆ ಕೂಡ ಒಂದು ಗೋಲು ದಾಖಲಿಸಿದ್ದರು. ಈ ಮೂಲಕ ಫ್ರಾನ್ಸ್ ತಂಡವು 3-0 ಅಂತರದಿಂದ ಸ್ವೀಡನ್ ತಂಡವನ್ನು ಮಣಿಸಿ ಪ್ರೀ ಕ್ವಾರ್ಟರ್​ ಫೈನಲ್​​ಗೆ ಎಂಟ್ರಿ ಕೊಟ್ಟಿದೆ.

ಎಂಬಾಪೆ ವಿಶ್ವ ದಾಖಲೆ:

ಸ್ವೀಡನ್ ವಿರುದ್ಧ ಬಾರಿಸಿದ 2 ಗೋಲುಗಳೊಂದಿಗೆ ಕಿಲಿಯನ್ ಎಂಬಾಪೆ ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ ನಾಕೌಟ್ ಗೋಲುಗಳನ್ನು ಬಾರಿಸಿದ ಸಾರ್ವಕಾಲಿಕ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ಪಂದ್ಯಕ್ಕೂ ಮುನ್ನ ಈ ದಾಖಲೆ ಬ್ರೆಝಿಲ್​ ದಿಗ್ಗಜರಾದ ರೊನಾಲ್ಡೊ ನಜಾರಿಯೊ ಮತ್ತು ಲಿಯೊನಿಡಾಸ್ ಡಾ ಸಿಲ್ವಾ ಅವರ ಹೆಸರಿನಲ್ಲಿತ್ತು.

  • ರೊನಾಲ್ಡೊ ನಜಾರಿಯೊ ಮತ್ತು ಲಿಯೊನಿಡಾಸ್ ಡಾ ಸಿಲ್ವಾ ತಲಾ 8 ನಾಕೌಟ್ ಗೋಲು ದಾಖಲಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.
  • ಕಿಲಿಯನ್ ಎಂಬಾಪೆ 10 ನಾಕೌಟ್ ಗೋಲುಗಳೊಂದಿಗೆ ಇದೀಗ ಹೊಸ ಇತಿಹಾಸ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.

2018 ರ ವಿಶ್ವಕಪ್​ನ ನಾಕೌಟ್​ ಹಂತದಲ್ಲಿ 3 ಗೋಲು ಬಾರಿಸಿದ್ದ ಎಂಬಾಪೆ, 2022 ರ ವಿಶ್ವಕಪ್​ನ ನಾಕೌಟ್ ಸುತ್ತಿನಲ್ಲಿ 5 ಗೋಲು ದಾಖಲಿಸಿದ್ದರು. ಇದೀಗ ಸ್ವೀಡನ್ ವಿರುದ್ಧದ ನಾಕೌಟ್ ಪಂದ್ಯದಲ್ಲಿ ಮತ್ತೆರಡು ಗೋಲು ಬಾರಿಸಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಮೆಸ್ಸಿ ದಾಖಲೆಯೇ ಶೇಕಿಂಗ್!

ಸ್ವೀಡನ್ ವಿರುದ್ಧದ ಎರಡು ಗೋಲುಗಳ ನೆರವಿನಿಂದ ಕಿಲಿಯನ್ ಎಂಬಾಪೆ ತಮ್ಮ ಒಟ್ಟಾರೆ ವಿಶ್ವಕಪ್ ವೃತ್ತಿಜೀವನದ ಗೋಲುಗಳ ಸಂಖ್ಯೆಯನ್ನು 18ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಈ ಮೂಲಕ ಜರ್ಮನಿಯ ಮಿರೋಸ್ಲಾವ್ ಕ್ಲೋಸ್ (16 ಗೋಲು) ಅವರನ್ನು ಹಿಂದಿಕ್ಕಿ ಸಾರ್ವಕಾಲಿಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.

ಪ್ರಸ್ತುತ 19 ಗೋಲುಗಳೊಂದಿಗೆ ಅಗ್ರಸ್ಥಾನದಲ್ಲಿರುವ ಲಿಯೋನೆಲ್ ಮೆಸ್ಸಿ ಅವರಿಗಿಂತ ಎಂಬಾಪೆ ಕೇವಲ 1 ಗೋಲಿನ ಅಂತರದಿಂದ ಹಿಂದೆ ಇದ್ದಾರೆ.  ಅಂದರೆ ಈ ಬಾರಿಯ ಟೂರ್ನಿಯಲ್ಲೇ ಕಿಲಿಯನ್ ಎಂಬಾಪೆ, ಲಿಯೋನೆಲ್ ಮೆಸ್ಸಿ ಅವರನ್ನು ಹಿಂದಿಕ್ಕಿ ಹೊಸ ಇತಿಹಾಸ ನಿರ್ಮಿಸುವುದನ್ನು ಎದುರು ನೋಡಬಹುದು.

  • ಲಿಯೋನೆಲ್ ಮೆಸ್ಸಿ 29 ವಿಶ್ವಕಪ್ ಪಂದ್ಯಗಳ ಮೂಲಕ ಈವರೆಗೆ 19 ಗೋಲು ದಾಖಲಿಸಿದ್ದಾರೆ.
  • ಕಿಲಿಯನ್ ಎಂಬಾಪೆ ಕೇವಲ 18 ವಿಶ್ವಕಪ್​ ಪಂದ್ಯಗಳ ಮೂಲಕ ಈವರೆಗೆ 18 ಗೋಲು ಬಾರಿಸಿದ್ದಾರೆ.

ಇದನ್ನೂ ಓದಿ: ಗಾಯದ ಸಮಸ್ಯೆ… ಬೆಂಗಳೂರಿಗೆ ಶಿಫ್ಟ್ ಆದ ಹಾರ್ದಿಕ್ ಪಾಂಡ್ಯ!

ಈಗಾಗಲೇ ನಾಲ್ಕು ಮ್ಯಾಚ್​ಗಳ ಮೂಲಕ ಒಟ್ಟು 6 ಗೋಲು ದಾಖಲಿಸಿರುವ ಕಿಲಿಯನ್ ಎಂಬಾಪೆ ಅವರ ಅದ್ಭುತ ಪ್ರದರ್ಶನ ಮುಂದಿನ ಪಂದ್ಯದಲ್ಲೂ ನಿರೀಕ್ಷಿಸಬಹುದು. ಈ ಪ್ರದರ್ಶನದೊಂದಿಗೆ ‘ಫ್ರೆಂಚ್ ಬುಲೆಟ್’ ವಿಶ್ವಕಪ್ ಇತಿಹಾಸದಲ್ಲೇ ಅತೀ ಹೆಚ್ಚು ಗೋಲು ಬಾರಿಸಿದ ಸಾರ್ವಕಾಲಿಕ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.

Published On – 10:01 am, Wed, 1 July 26

Source link

Shreyas Iyer: ಐರ್ಲೆಂಡ್ ವಿರುದ್ಧ ಸೋತಿದ್ದಕ್ಕೆ ಮುಜಗರವೇನು ಇಲ್ಲ..! – Kannada News | No embarrassment, but it was depressing: Shreyas Iyer

ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಸರಣಿಗೆ ವೇದಿಕೆ ಸಿದ್ಧವಾಗಿದೆ. ಐದು ಮ್ಯಾಚ್​ಗಳ ಈ ಸರಣಿಗೂ ಮುನ್ನ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅಯ್ಯರ್​ ಅವರಿಗೆ ಐರ್ಲೆಂಡ್ ಸರಣಿ ಸೋಲಿನ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು.

ಈ ಬಗ್ಗೆ ಮಾತನಾಡಿದ ಶ್ರೇಯಸ್ ಅಯ್ಯರ್,  ಐರ್ಲೆಂಡ್ ಎದುರಿನ 2-0 ಸರಣಿ ಸೋಲಿನ ತಪ್ಪುಗಳಿಂದ ತಂಡವು ಸಾಕಷ್ಟು ಪಾಠ ಕಲಿತಿದೆ ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಆದರೆ ಈ ಸರಣಿ ಸೋಲಿನಿಂದ ಮುಜಗರವೇನು ಆಗಿಲ್ಲ ಎಂದಿದ್ದಾರೆ.

ನಾವು ಐರ್ಲೆಂಡ್ ತಂಡ ಇಷ್ಟೊಂದು ಅದ್ಭುತವಾಗಿ ಆಡುತ್ತದೆ ಎಂದು ಖಂಡಿತವಾಗಿಯೂ ನಿರೀಕ್ಷಿಸಿರಲಿಲ್ಲ. ಅವರು ಎಲ್ಲಾ ವಿಭಾಗಗಳಲ್ಲೂ ನಮಗಿಂತ ಅತ್ಯುತ್ತಮ ಪ್ರದರ್ಶನ ನೀಡಿದರು. ಬೆಲ್‌ಫಾಸ್ಟ್ ಮೈದಾನದ ಆಯಾಮಗಳು ಮತ್ತು ಬೌಂಡರಿಗಳ ಗಾತ್ರದ ಬಗ್ಗೆ ಅವರಿಗೆ ಸ್ಪಷ್ಟವಾದ ಕಲ್ಪನೆ ಇತ್ತು.

ಆದರೆ ನಾವು ಮೈದಾನದ ಗಾತ್ರ ಮತ್ತು ಪಿಚ್ ಹೇಗೆ ವರ್ತಿಸುತ್ತದೆ ಎಂಬುದನ್ನು ಸರಿಯಾಗಿ ವಿಶ್ಲೇಷಿಸುವಲ್ಲಿ ಹಾಗೂ ಯೋಜನೆ ರೂಪಿಸುವಲ್ಲಿ ವಿಫಲರಾದೆವು. ಹಾಗಾಗಿ ಇದರ ಸಂಪೂರ್ಣ ಕ್ರೆಡಿಟ್ ಐರ್ಲೆಂಡ್ ತಂಡಕ್ಕೆ ಸಲ್ಲಬೇಕು ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ಈ ಸರಣಿ ಸೋಲು ಮುಜುಗರ ತರದಿದ್ದರೂ ತೀವ್ರ ನಿರಾಶೆ ಮೂಡಿಸಿದೆ ಎಂದು ಇದೇ ವೇಳೆ ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ. ಆದರೆ, ಆ ಸರಣಿ ಈಗ ಮುಗಿದ ಅಧ್ಯಾಯವಾಗಿದ್ದು, ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಗೆ ತಂಡವು ಹೊಸ ಹುರುಪಿನೊಂದಿಗೆ ಮೈದಾನಕ್ಕಿಳಿಯಲಿದೆ. ಚೆಸ್ಟರ್-ಲೆ-ಸ್ಟ್ರೀಟ್ ಮೈದಾನವು ಸಾಂಪ್ರದಾಯಿಕ ಕ್ರೀಡಾಂಗಣವಾಗಿದ್ದು, ಇಲ್ಲಿನ ಪರಿಸ್ಥಿತಿಗಳಿಗೆ ಭಾರತೀಯ ಆಟಗಾರರು ಬೇಗನೆ ಹೊಂದಿಕೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನು ಟೀಮ್ ಇಂಡಿಯಾ ನಾಯಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಎಂಬಾಪೆ ಪರಾಕ್ರಮಕ್ಕೆ ಮೆಸ್ಸಿಯ ವಿಶ್ವ ದಾಖಲೆ ಶೇಕಿಂಗ್!

ಒಟ್ಟಾರೆಯಾಗಿ ಹೇಳುವುದಾದರೆ, ಐರ್ಲೆಂಡ್ ವಿರುದ್ಧದ ಸರಣಿಯ ಆಘಾತಕಾರಿ ಸೋಲು ಟೀಮ್ ಇಂಡಿಯಾಕ್ಕೆ ಕಠಿಣ ಪಾಠ ಕಲಿಸಿದೆ. ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದ ಯುವ ತಂಡವು ಆ ತಪ್ಪುಗಳನ್ನು ತಿದ್ದಿಕೊಂಡು, ಈಗ ಇಂಗ್ಲೆಂಡ್ ವಿರುದ್ಧದ ಬಲಿಷ್ಠ ಸರಣಿಗೆ ಸಂಪೂರ್ಣವಾಗಿ ಸಜ್ಜಾಗಿದೆ. ಹಳೆಯ ನಿರಾಶೆಯನ್ನು ಮರೆತು ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲಿರುವ ಭಾರತ ತಂಡ, ಇಂಗ್ಲೆಂಡ್ ಮಣ್ಣಿನಲ್ಲಿ ಭರ್ಜರಿ ಪುನರಾಗಮನ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Source link

SIRಗೆ ಕೌಂಟರ್ ಕೊಡುತ್ತಾ ಗೃಹ ಜ್ಯೋತಿ ಪರಿಶೀಲನೆ? ಬಲವಾಯ್ತು ಅನುಮಾನ, ಕಾರಣ ಇಲ್ಲಿದೆ – Kannada News | Is Karnataka Govt Collecting Voter ID and Caste Data via Gruha Jyothi Verification Drive? Know here

ಬೆಂಗಳೂರು, ಜುಲೈ 1: ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರದ ಮಹತ್ವಾಕಾಂಕ್ಷೆಯ ಉಚಿತ ವಿದ್ಯುತ್ ಯೋಜನೆ ‘ಗೃಹ ಜ್ಯೋತಿ’ ಫಲಾನುಭವಿಗಳ ಮನೆ ಬಾಗಿಲಿಗೆ ಎಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುವ ಪ್ರಕ್ರಿಯೆ ಇಂದಿನಿಂದ ಆರಂಭವಾಗುತ್ತಿದೆ. ಇದರ ಬೆನ್ನಲ್ಲೇ ಹೊಸದೊಂದು ರಾಜಕೀಯ ಹಾಗೂ ಸಾಮಾಜಿಕ ಚರ್ಚೆ ಮುನ್ನೆಲೆಗೆ ಬಂದಿದೆ. ಯಾವುದೇ ಸರ್ಕಾರಿ ಯೋಜನೆಗೆ ಕಡ್ಡಾಯವಲ್ಲದ ಎಪಿಕ್ (EPIC) ಕಾರ್ಡ್ ಅಥವಾ ವೋಟರ್ ಐಡಿಯನ್ನು ಈಗ ಗೃಹ ಜ್ಯೋತಿ ಯೋಜನೆಗೆ ಕಡ್ಡಾಯಗೊಳಿಸಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇದರೊಂದಿಗೆ ಫಲಾನುಭವಿಗಳ ಜಾತಿ ಹಾಗೂ ಪ್ರವರ್ಗಗಳ (ಎಸ್‌ಸಿ, ಎಸ್‌ಟಿ, ಓಬಿಸಿ, ಅಲ್ಪಸಂಖ್ಯಾತ) ವಿವರಗಳನ್ನೂ ಅಪ್‌ಡೇಟ್ ಮಾಡಲಾಗುತ್ತಿದ್ದು, ಸರ್ಕಾರ ಪರೋಕ್ಷವಾಗಿ ಮತದಾರರ ಇಂಚಿಂಚೂ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ.

ಮತದಾರರ ಅಧಿಕೃತ ದತ್ತಾಂಶ ಕ್ರೂಢೀಕರಣ ತಂತ್ರವೇ?

ಚುನಾವಣಾ ಆಯೋಗದ ಬಳಿ ಇರುವ ಮತದಾರರ ಅಧಿಕೃತ ದತ್ತಾಂಶವನ್ನು ತಾನೂ ಕ್ರೋಢೀಕರಿಸಿಕೊಳ್ಳಲು ಸರ್ಕಾರ ಈ ಹೊಸ ಮಾರ್ಗವನ್ನು ಕಂಡುಕೊಂಡಿದೆ ಎನ್ನಲಾಗುತ್ತಿದೆ. ಇದರ ಮೂಲಕ ಕರ್ನಾಟಕದ ನೈಜ ಮತದಾರರು ಎಷ್ಟು ಎಂಬ ಅಧಿಕೃತ ವಿವರ ಸರ್ಕಾರದ ಕೈಸೇರಲಿದೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ಪರಿಷ್ಕರಣೆಯ ಕಟ್ಟುನಿಟ್ಟಿನ ‘ಎಸ್‌ಐಆರ್’ (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆ ನಡೆಯುತ್ತಿದೆ. ಈ ಪರಿಷ್ಕರಣೆ ವೇಳೆ ಯಾವುದೇ ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗದಂತೆ ಸಾರ್ವಜನಿಕರೇ ಎಚ್ಚೆತ್ತುಕೊಳ್ಳಲಿ ಮತ್ತು ಯೋಜನೆಯ ಲಾಭ ಪಡೆಯುವವರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗಿಯಾಗಲಿ ಎಂಬ ಗುಪ್ತ ಯೋಜನೆ ಇದರ ಹಿಂದಿದೆ ಎನ್ನಲಾಗಿದೆ.

ಹೊರ ರಾಜ್ಯದವರಿಗೆ ಸಿಗಲ್ಲ ಗ್ಯಾರಂಟಿ

ಈ ಸಮೀಕ್ಷೆಯಿಂದಾಗಿ ಕರ್ನಾಟಕದ ಮೂಲ ಮತದಾರರಲ್ಲದವರು ಮತ್ತು ಹೊರರಾಜ್ಯದವರು ಯೋಜನೆಯಿಂದ ಹೊರಗುಳಿಯಲಿದ್ದಾರೆ. ಇದರ ಜೊತೆಗೆ, ಆದಾಯ ತೆರಿಗೆ (ಐಟಿ) ಪಾವತಿಸುತ್ತಿರುವ ಶ್ರೀಮಂತ ವರ್ಗದವರನ್ನು ಪತ್ತೆ ಹಚ್ಚಿ ಅವರಿಗೆ ಗೃಹ ಜ್ಯೋತಿ ಯೋಜನೆಯಿಂದ ಕೊಕ್ ನೀಡಲು ಸರ್ಕಾರ ಈ ಪರಿಶೀಲನೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಜು.1ರಿಂದ ಗೃಹ ಜ್ಯೋತಿ ಯೋಜನೆ ಪರಿಶೀಲನೆ: ನಿಮ್ಮ ಮನೆಗೆ ಬರುವ ಸಿಬ್ಬಂದಿಗೆ ಯಾವೆಲ್ಲಾ ದಾಖಲೆ ತೋರಿಸ್ಬೇಕು?

ಒಟ್ಟಿನಲ್ಲಿ ಉಚಿತ ವಿದ್ಯುತ್ ನೆಪದಲ್ಲಿ ನಡೆಯುತ್ತಿರುವ ಈ ಹಠಾತ್ ಜಾತಾವಾರು ಮತ್ತು ವೋಟರ್ ಐಡಿ ಮಾಹಿತಿ ಸಂಗ್ರಹ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಮುಂದಿನ ದಿನಗಳಲ್ಲಿ ದೊಡ್ಡ ರಾಜಕೀಯ ಬಿರುಗಾಳಿ ಎಬ್ಬಿಸುವ ಮುನ್ಸೂಚನೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರಿಷತ್ ಚುನಾವಣೆ ಅಡ್ಡಮತದಾನದ ಎಫೆಕ್ಟ್: ಬಿಜೆಪಿ ವರದಿ ಬೆನ್ನಲ್ಲೇ ಮೈತ್ರಿಕೂಟದಲ್ಲಿ ಮುನಿಸು! – Kannada News | BJP Fact Finding Report Sparks Rift in NDA Alliance Over Cross Voting Allegations

ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ, ಮೈತ್ರಿಯಲ್ಲಿ ಮುನಿಸು

ಬೆಂಗಳೂರು, ಜುಲೈ 01: ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗೆ ನಿರೀಕ್ಷಿತ ಮತಗಳು ಸಿಗದ ಹಿನ್ನೆಲೆಯಲ್ಲಿ ಅಡ್ಡ ಮತದಾನದ (Cross voting) ಆರೋಪ ಕೇಳಿಬಂದಿತ್ತು. ಈ ಕಾರಣಕ್ಕೆ ಎಮ್​ಎಲ್​ಸಿ ಸಿಟಿ ರವಿ ನೇತೃತ್ವದ ಸಮಿತಿ ಜೂನ್ 27ರಂದು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಆಂತರಿಕ ವರದಿ ನೀಡಿದ್ದು, ಎನ್‌ಡಿಎ ಮೈತ್ರಿಗೆ ಸೇರಿದ್ದ (ಬಿಜೆಪಿ, ಜೆಡಿಸ್) 12 ಮತಗಳಲ್ಲಿ ಒಂದು ಅಸಿಂಧುವಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಈ ವರದಿಗೂ ಮುನ್ನ ಬಿಜೆಪಿಯಲ್ಲಿದ್ದ ಆಂತರಿಕ ಅಸಮಾಧಾನ ಈಗ ಜೆಡಿಎಸ್ ಹೆಸರಿನ ಉಲ್ಲೇಖದೊಂದಿಗೆ ಮೈತ್ರಿಕೂಟದಲ್ಲಿ ದೊಡ್ಡ ಮಟ್ಟದ ಮುನಿಸಿಗೆ ಕಿಡಿ ಹೊತ್ತಿಸಿದೆ.

ಬಿಜೆಪಿ ಸಲ್ಲಿಸಿರುವ ಸತ್ಯಶೋಧನಾ ವರದಿಯಲ್ಲೇನಿದೆ?

ವಿಧಾನ ಪರಿಷತ್ ಚುನಾವಣೆಯ ಸೋಲಿನ ಪರಾಮರ್ಶೆ ನಡೆಸಲು ಬಿಜೆಪಿ ಹೈಕಮಾಂಡ್ ರಚಿಸಿದ್ದ ಸತ್ಯಶೋಧನಾ ಸಮಿತಿಯ ವರದಿ ಈಗ ಮೈತ್ರಿ ಪಾಳಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ವರದಿಯಲ್ಲಿ ಬಿಜೆಪಿಯಿಂದ 3 ಅಡ್ಡಮತ ಹಾಗೂ 1 ಅಸಿಂಧು ಮತ ಚಲಾವಣೆಯಾಗಿದೆ. ಜೊತೆಗೆ ಮೈತ್ರಿ ಪಕ್ಷವಾದ ಜೆಡಿಎಸ್‌ನಿಂದ ಬರೋಬ್ಬರಿ 8 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.  ಬಿಜೆಪಿ ನಾಯಕರ ಈ ಹೇಳಿಕೆಗಳು ಜೆಡಿಎಸ್ ಪಾಳಯವನ್ನು ಕೆರಳಿಸಿದೆ. ಯಾವುದೇ ಬಲವಾದ ದಾಖಲೆಗಳಿಲ್ಲದೆ ಜೆಡಿಎಸ್ ಶಾಸಕರ ಹೆಸರನ್ನು ಈ ವಿವಾದಕ್ಕೆ ಎಳೆದು ತಂದಿರುವುದಕ್ಕೆ ಪಕ್ಷದ ಶಾಸಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಹೇಳಿಕೆಗೆ ಬ್ರೇಕ್ ಹಾಕಲು ಮನವಿ

ಬಿಜೆಪಿ ನಾಯಕರ ನಿರಂತರ ಆರೋಪಗಳಿಂದಾಗಿ ಜೆಡಿಎಸ್ ಶಾಸಕರ ಮೇಲೆ ಅನಗತ್ಯವಾಗಿ ಅನುಮಾನದ ನೆರಳು ಬೀಳುವಂತಾಗಿದೆ ಎಂದು ಶಾಸಕರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ನ ಪ್ರಮುಖ ಶಾಸಕರು ತಮ್ಮ ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಬಳಿ ದೂರು ನೀಡಿದ್ದಾರೆ. ಮೈತ್ರಿ ಧರ್ಮಕ್ಕೆ ಧಕ್ಕೆ ತರುತ್ತಿರುವ ಬಿಜೆಪಿ ನಾಯಕರ ಹೇಳಿಕೆಗಳಿಗೆ ತಕ್ಷಣವೇ ಬ್ರೇಕ್ ಹಾಕುವಂತೆ ವರಿಷ್ಠರ ಮೇಲೆ ಒತ್ತಡ ಹೇರಲಾಗಿದೆ.

ಇದನ್ನೂ ಓದಿ 12 ಶಾಸಕರು ಅಡ್ಡಮತದಾನ, ಕೋಡ್ ವರ್ಡ್ ಪಾಲಿಸದೇ ಎಡವಟ್ಟು: ಸತ್ಯಶೋಧನಾ ಸಮಿತಿ ವರದಿಯ ಸ್ಫೋಟಕ ಅಂಶ ಬಹಿರಂಗ

ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳಲ್ಲಿ ಅಡ್ಡ ಮತದಾನದ ಕುರಿತು ಅನಗತ್ಯ ಚರ್ಚೆಗಳನ್ನು ನಿಲ್ಲಿಸಲು ಉಭಯ ಪಕ್ಷಗಳ ಹಿರಿಯ ನಾಯಕರು ಸೂಚನೆ ನೀಡಬೇಕು ಎಂದು ಜೆಡಿಎಸ್ ಮನವಿ ಮಾಡಿದೆ. ಮೇಲ್ನೋಟಕ್ಕೆ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿಯೇ ಇದೆಯೆಂಬಂತೆ ಕಂಡರೂ, ಬಿಜೆಪಿ ವರದಿಯ ಬಳಿಕ ಕಿಚ್ಚು ಹೆಚ್ಚಾಗಿರುವುದಂತೂ ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Chartered Accountants Day 2026: ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗಳ ಕೊಡುಗೆ ಅತ್ಯಂತ ಮಹತ್ವದ್ದು – Kannada News | Chartered Accountants Day 2026: Why is Chartered Accountants Day celebrated on July 1st?

ಚಾರ್ಟರ್ಡ್ ಅಕೌಂಟೆಂಟ್ಸ್ ದಿನImage Credit source: Pinterest

ಚಾರ್ಟರ್ಡ್ ಅಕೌಂಟೆಂಟ್‌ (Chartered Accountant) ಹುದ್ದೆಯನ್ನು ಭಾರತದಲ್ಲಿ ಅತ್ಯಂತ ಗೌರವಾನ್ವಿತ ಮತ್ತು ಉದಾತ್ತ ವೃತ್ತಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ನಮ್ಮ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಲೆಕ್ಕಪರಿಶೋಧಕರು ಪ್ರಮುಖ ಪಾತ್ರ ವಹಿಸುತ್ತಾರೆ. ಅಲ್ಲದೆ ಚಾರ್ಟರ್ಡ್ ಅಕೌಂಟೆಂಟ್‌ಗಳು ಸರ್ಕಾರ ಮತ್ತು ತೆರಿಗೆದಾರರ ನಡುವಿನ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ. ಹೌದು ಜನರ ವೈಯಕ್ತಿಕ, ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿನ ಹಣಕಾಸಿನ ವಹಿವಾಟುಗಳು ಸರ್ಕಾರ ಸ್ಥಾಪಿಸಿರುವ ನಿಯಮಗಳೊಂದಿಗೆ ಸರಿಯಾದ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಿಕೊಳ್ಳುವಲ್ಲಿ ಚಾರ್ಟರ್ಡ್‌ ಅಕೌಂಟೆಂಟ್‌ಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಆರ್ಥಿಕತೆಯ ವಿವಿಧ ವಲಯಗಳಲ್ಲಿ ಸಿ.ಎ ಗಳು ವಹಿಸುವ ಪಾತ್ರ,  ಅವರ ಅಸಾಧಾರಣ ಸಾಮರ್ಥ್ಯ, ಅಚಲ ವೃತ್ತಿಪರತೆಯನ್ನು ಗೌರವಿಸಲು ಪ್ರತಿವರ್ಷ ಜುಲೈ 1 ರಂದು ರಾಷ್ಟ್ರೀಯ ಚಾರ್ಟರ್ಡ್ ಅಕೌಂಟೆಂಟ್ಸ್ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ಚಾರ್ಟರ್ಡ್ ಅಕೌಂಟೆಂಟ್ಸ್ ದಿನದ ಇತಿಹಾಸವೇನು?

ಈ ದಿನವು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಸ್ಥಾಪನೆಯನ್ನು ಸ್ಮರಿಸುತ್ತದೆ. ICAI ಭಾರತದಲ್ಲಿ ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸು ಲೆಕ್ಕಪರಿಶೋಧನೆಗೆ ವಿಶೇಷ ಪರವಾನಗಿ ಮತ್ತು ನಿಯಂತ್ರಕ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ. ಮತ್ತು CA ಕೋರ್ಸ್‌ಗಳನ್ನು  ಈ ಸಂಸ್ಥೆಯೇ ನಡೆಸುತ್ತದೆ. ಈ ಸಂಸ್ಥೆಯ ಸ್ಥಾಪನಾ ದಿನದ ಸ್ಮರಣಾರ್ಥವಾಗಿ ಜುಲೈ 1 ರಂದು ರಾಷ್ಟ್ರೀಯ ಚಾರ್ಟರ್‌ ಅಕೌಂಟೆಂಟ್ಸ್‌ ದಿನವನ್ನು ಆಚರಿಸಲಾಗುತ್ತದೆ.

ಜುಲೈ 1 ರಂದೇ ಏಕೆ ಚಾರ್ಟರ್ಡ್‌ ಅಕೌಂಟೆಂಟ್‌ ದಿನವನ್ನು ಆಚರಿಸಲಾಗುತ್ತದೆ?

ಜುಲೈ 1, 1949 ರಂದು, ಭಾರತ ಸರ್ಕಾರವು ಲೆಕ್ಕಪತ್ರ ವೃತ್ತಿಯನ್ನು ನಿಯಂತ್ರಿಸಲು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾವನ್ನು ಸ್ಥಾಪಿಸಿತು. ಯುನೈಟೆಡ್ ಕಿಂಗ್‌ಡಮ್ ನಂತರ ಇಂತಹ ವೃತ್ತಿಪರ ಲೆಕ್ಕಪತ್ರ ಸಂಸ್ಥೆಯನ್ನು ರಚಿಸಿದ ವಿಶ್ವದ ಎರಡನೇ ದೇಶ ಭಾರತವಾಯಿತು. ಅಂದಿನಿಂದ, ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುವಲ್ಲಿ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಈ ವೃತ್ತಿಯ ಮಹತ್ವವನ್ನು ಗುರುತಿಸಲು ಜುಲೈ 1 ರಂದು ರಾಷ್ಟ್ರೀಯ ಸಿ.ಎ ದಿನವನ್ನು ಆಚರಿಸಲಾಗುತ್ತದೆ.

ಚಾರ್ಟರ್ಡ್ ಅಕೌಂಟೆಂಟ್ಸ್ ದಿನದ ಮಹತ್ವವೇನು?

  • ದೇಶದ ಆರ್ಥಿಕ ಯೋಗಕ್ಷೇಮಕ್ಕೆ ಗಣನೀಯವಾಗಿ ಕೊಡುಗೆ ನೀಡುವ ಲೆಕ್ಕಪರಿಶೋಧಕರ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಪರಿಣತಿಯನ್ನು ಗುರುತಿಸಲು ಮತ್ತು ಗೌರವಿಸಲು ಈ ದಿನ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
  • ಈ ದಿನವು ಸಿ.ಎ ಗಳಿಗೆ ಸಹೋದ್ಯೋಗಿಗಳೊಂದಿಗೆ ಸಂಪರ್ಕ ಸಾಧಿಸಲು, ಜ್ಞಾನವನ್ನು ಹಂಚಿಕೊಳ್ಳಲು ಮತ್ತು ಬಲವಾದ ವೃತ್ತಿಪರ ನೆಟ್‌ವರ್ಕ್‌ಗಳನ್ನು ನಿರ್ಮಿಸಲು ಅವಕಾಶಗಳನ್ನು ಒದಗಿಸುತ್ತದೆ.
  • ಈ ದಿನ ವಿವಿಧ ವಲಯಗಳಲ್ಲಿ ಆರ್ಥಿಕ ಸ್ಥಿರತೆ, ಪಾರದರ್ಶಕತೆ ಮತ್ತು ಉತ್ತಮ ಆಡಳಿತವನ್ನು ಖಾತ್ರಿಪಡಿಸುವಲ್ಲಿ ಸಿ.ಎ ಗಳ ಪ್ರಮುಖ ಪಾತ್ರದ ಬಗ್ಗೆ ಜಾಗೃತಿ ಮೂಡಿಸುತ್ತದೆ.
  • ದೇಶದ ಹಣಕಾಸು ವ್ಯವಸ್ಥೆಯನ್ನು ಬಲಪಡಿಸುವಲ್ಲಿ, ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಬೆಂಬಲಿಸುವಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗಳ (CAs) ಅಮೂಲ್ಯ ಕೊಡುಗೆಯನ್ನು ಈ ದಿನ ಗುರುತಿಸುತ್ತದೆ.

ಇದನ್ನೂ ಓದಿ: ಸಾಮಾಜಿಕ ಮಾಧ್ಯಮಗಳ ಬಳಕೆ ಸಕಾರಾತ್ಮಕ ಮಾರ್ಗದಲ್ಲಿರಲಿ

ಭಾರತದಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗಳ ಪಾತ್ರ:

ಚಾರ್ಟರ್ಡ್ ಅಕೌಂಟೆಂಟ್‌ಗಳು ಹಣಕಾಸಿನ ದಾಖಲೆಗಳನ್ನು ನಿರ್ವಹಿಸುವಲ್ಲಿ ಮತ್ತು ಕಾನೂನು ಮತ್ತು ನಿಬಂಧನೆಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ವ್ಯಕ್ತಿಗಳು, ಕಂಪೆನಿಗಳು, ವ್ಯವಹಾರಗಳು ಮತ್ತು ಸರ್ಕಾರಗಳು ತಿಳುವಳಿಕೆಯುಳ್ಳ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತಾರೆ.

  • ಲೆಕ್ಕಪರಿಶೋಧನೆಗಳನ್ನು ನಡೆಸುವುದು ಮತ್ತು ಹಣಕಾಸಿನ ಪಾರದರ್ಶಕತೆಯನ್ನು ಖಚಿತಪಡಿಸುವುದು
  • ತೆರಿಗೆ ಮತ್ತು ತೆರಿಗೆ ಯೋಜನೆ ಕುರಿತು ಸಲಹೆ ನೀಡುವುದು
  • ಹಣಕಾಸು ಮತ್ತು ವ್ಯವಹಾರ ಸಲಹಾ ಸೇವೆಗಳನ್ನು ಒದಗಿಸುವುದು
  • ಸರ್ಕಾರಿ ಆದಾಯ ವ್ಯವಸ್ಥೆಗಳನ್ನು ಬೆಂಬಲಿಸುವುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version