ಕೆಸರು ಗದ್ದೆಯಾದ ಬೆಳಗಾವಿ-ಗೋವಾ ಹೆದ್ದಾರಿ: ನಡುರಸ್ತೆಯಲ್ಲೇ ಸಿಲುಕಿಕೊಂಡ ಕೆಎಸ್‌ಆರ್‌ಟಿಸಿ ಬಸ್ – Kannada News | KSRTC Bus Stuck on Muddy Belagavi Goa Highway; Locals Demand Urgent Road Repair

ಬೆಳಗಾವಿ, ಜು.1: ಸತತವಾಗಿ ಸುರಿಯುತ್ತಿರುವ ಮಳೆಯ ಬೆನ್ನಲ್ಲೇ ಎರಡು ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿ-ಗೋವಾ ಹೆದ್ದಾರಿಯು ಸಂಪೂರ್ಣವಾಗಿ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ರಸ್ತೆಯ ಈ ದುಸ್ಥಿತಿಯಿಂದಾಗಿ ನಡುರಸ್ತೆಯಲ್ಲೇ ಕೆಎಸ್‌ಆರ್‌ಟಿಸಿ (KSRTC) ಬಸ್ಸೊಂದು ಕೆಸರಿನಲ್ಲಿ ಸಿಲುಕಿಕೊಂಡಿದ್ದು, ಪ್ರಯಾಣಿಕರು ತೀವ್ರವಾಗಿ ಪರದಾಡಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ವರಕಡ ಗ್ರಾಮದ ಬಳಿ ನಡೆದಿದೆ. ಬೆಳಗಾವಿಯಿಂದ ಗೋವಾ ಕಡೆಗೆ ಪ್ರಯಾಣಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ವರಕಡ ಗ್ರಾಮದ ಬಳಿ ಬರುತ್ತಿದ್ದಂತೆ, ರಸ್ತೆಯಲ್ಲಿದ್ದ ಭಾರಿ ಪ್ರಮಾಣದ ಕೆಸರಿನ ಹೂಳಿನಲ್ಲಿ ಸಿಲುಕಿಕೊಂಡಿದೆ. ಬಸ್‌ನ ಚಕ್ರಗಳು ಕೆಸರಿನಲ್ಲಿ ಹೂತುಹೋಗಿ ಮುಂದೆ ಚಲಿಸಲಾಗದೆ ನಡುರಸ್ತೆಯಲ್ಲೇ ನಿಂತಿದೆ. ಬಸ್ ಅನ್ನು ಕೆಸರಿನಿಂದ ಹೊರತೆಗೆಯಲು ಚಾಲಕ ಸತತ ಪ್ರಯತ್ನ ನಡೆಸಿದರೂ ಸಾಧ್ಯವಾಗದ ಕಾರಣ, ಮುನ್ನೆಚ್ಚರಿಕೆ ಕ್ರಮವಾಗಿ ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. ಹೆದ್ದಾರಿಯ ನಡುಭಾಗದಲ್ಲೇ ಬಸ್ ಸಿಲುಕಿಕೊಂಡಿದ್ದರಿಂದ ಎರಡು ರಾಜ್ಯಗಳ ನಡುವಿನ ವಾಹನ ಸಂಚಾರ ಸಂಪೂರ್ಣವಾಗಿ ಕಡಿತಗೊಂಡು ಅಸ್ತವ್ಯಸ್ತವಾಗಿತ್ತು. ಸ್ಥಳೀಯರು ಹಾಗೂ ಇತರ ವಾಹನ ಸವಾರರ ಸಹಾಯದೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ, ಕೊನೆಗೂ ಬಸ್ ಅನ್ನು ಕೆಸರಿನಿಂದ ಹೊರಕ್ಕೆ ಎಳೆಯಲಾಯಿತು. ಅಲ್ಲಿಯವರೆಗೆ ಪ್ರಯಾಣಿಕರು ಸುರಿಯುವ ಮಳೆಯಲ್ಲೇ ರಸ್ತೆಬದಿಯಲ್ಲಿ ನಿಂತು ತೀವ್ರ ತೊಂದರೆ ಅನುಭವಿಸಿದರು. ಈ ಹೆದ್ದಾರಿಯಲ್ಲಿ ಪ್ರತಿದಿನ ಸಾವಿರಾರು ಲಘು ಹಾಗೂ ಭಾರಿ ವಾಹನಗಳು ಸಂಚರಿಸುತ್ತವೆ. ಗೋವಾ ಮತ್ತು ಕರ್ನಾಟಕದ ನಡುವಿನ ಪ್ರಮುಖ ವಾಣಿಜ್ಯ ರಸ್ತೆಯಾಗಿದ್ದರೂ, ಇದರ ಅಭಿವೃದ್ಧಿಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಈ ರಸ್ತೆಯನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದಿದ್ದರೆ, ಮುಂದಿನ ದಿನಗಳಲ್ಲಿ ಹೆದ್ದಾರಿ ತಡೆದು ಉಗ್ರ ಹೋರಾಟ ಮಾಡುವುದಾಗಿ ಖಾನಾಪುರ ಮತ್ತು ವರಕಡ ಗ್ರಾಮದ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಐತಿಹಾಸಿಕ ಸಿನಿಮಾಕ್ಕಾಗಿ 13 ವರ್ಷಗಳ ಬಳಿಕ ಒಂದಾದ ಪ್ರೇಮ್-ಮೇಘನಾ – Kannada News | Movie about Kempe Gowda’s life, Nenpirali Prem is hero

ಕನ್ನಡ ಚಿತ್ರರಂಗದಲ್ಲಿ (Kempe Gowda) ಐತಿಹಾಸಿಕ ಕತೆಯುಳ್ಳ ಸಿನಿಮಾಗಳು ನಿರ್ಮಾಣ ಆಗುವುದು ಬಹಳ ಅಪರೂಪ. ನಮ್ಮಲ್ಲಿ ರೌಡಿಸಂ, ಅಂಡರ್ವಲ್ಡ್ ಸಿನಿಮಾಗಳೇ ಹೆಚ್ಚು. ಇದೀಗ ಚಿತ್ರತಂಡವೊಂದು ಐತಿಹಾಸಿಕ ಕತೆಯುಳ್ಳ ಸಿನಿಮಾ ನಿರ್ಮಾಣ ಮಾಡುವ ಸಾಹಸಕ್ಕೆ ಕೈ ಹಾಕಿದ್ದು, ಇತ್ತೀಚೆಗಷ್ಟೆ ಸಿನಿಮಾದ ಟೀಸರ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ಜೀವನವನ್ನು ತೆರೆಗೆ ತರಲಾಗುತ್ತಿದ್ದು, ಕೆಂಪೇಗೌಡರ ಜೀವನ, ಸಾಧನೆ ಆಧರಿಸಿದ ‘ಕೆಂಪಾಂಬುಧಿ’ ಹೆಸರಿನ ಸಿನಿಮಾ ನಿರ್ಮಾಣ ಮಾಡಲಾಗಿದೆ. ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಕೆಂಪೇಗೌಡರ ಜಯಂತಿಯಂದು ಬಿಡುಗಡೆ ಆಗಿದ್ದು, ಟೀಸರ್ ಗಮನ ಸೆಳೆಯುತ್ತಿದೆ.

ಸಾಹಿತಿ ಜನಗೆರೆ ವೆಂಕಟರಾಮಯ್ಯನವರ ಅವರ ಕಾದಂಬರಿಯನ್ನು ಆಧರಿಸಿ ಈ ಸಿನಿಮಾದ ಚಿತ್ರಕತೆ ರಚಿಸಲಾಗಿದೆ. ರಮೇಶ್ ಬೇಗೂರ್ ಅವರು ಸಿನಿಮಾ ನಿರ್ದೇಶನ ಮಾಡಿದ್ದಾರೆ. ನಾಡಪ್ರಭು ಕೆಂಪೇಗೌಡರ ಪಾತ್ರದಲ್ಲಿ ನೆನಪಿರಲಿ ಪ್ರೇಮ್ ನಟಿಸಿದ್ದು, ಸಿನಿಮಾನಲ್ಲಿ ಮೇಘನಾ ಗಾಂವ್ಕರ್ ಕೆಂಪೇಗೌಡರ ಪತ್ನಿ ಚೆನ್ನಾಂಬಾ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಜೊತೆಗೆ ಸುಧಾ ಬೆಳವಾಡಿ, ರಮೇಶ್ ನಟರಂಗ, ಸೇರಿದಂತೆ ಇನ್ನೂ ಕೆಲವು ಒಳ್ಳೆಯ ಕಲಾವಿದರುಗಳು ನಟಿಸಿದ್ದಾರೆ. ಹಳೆ ಬೆಂಗಳೂರಿನ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯು ಇತಿಹಾಸ, ಜಾನಪದ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕಟ್ಟಿಕೊಡಲಾಗಿದೆ.

ಇದನ್ನೂ ಓದಿ:ಶಾರುಖ್ ಖಾನ್ ಸಿನಿಮಾವನ್ನು ಹಿಂದಿಕ್ಕಿದ ಯಶ್ ಸಿನಿಮಾಗಳು

ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್ ಮತ್ತು ಹೊಂಬಾಳೆ ಮ್ಯೂಸಿಕ್ ಸಹಯೋಗದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಕೇವಲ ಮನರಂಜನೆಯಷ್ಟೇ ಅಲ್ಲದೆ, ಕೆಂಪೇಗೌಡರ ದೂರದೃಷ್ಟಿ ಮತ್ತು ಅವರು ಬೆಂಗಳೂರಿಗೆ ನೀಡಿದ ಕೊಡುಗೆಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸಿಕೊಡುವುದು ಈ ಚಿತ್ರದ ಮುಖ್ಯ ಉದ್ದೇಶವಾಗಿದೆ. ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಹಸಿರು ವಾತಾವರಣ ಮತ್ತು ಪರಂಪರೆಯನ್ನು ಉಳಿಸಿಕೊಳ್ಳುವ ಸಂದೇಶವನ್ನು ಚಿತ್ರವು ಹೊತ್ತು ತರಲಿದೆ.

‘ಚಾರ್ಮಿನಾರ್’ ಚಿತ್ರದ ಬಳಿಕ ಪ್ರೇಮ್ ಮತ್ತು ಮೇಘನಾ ಗಾಂವ್ಕರ್ ಮತ್ತೆ ತೆರೆ ಹಂಚಿಕೊಳ್ಳುತ್ತಿರುವುದು ಈ ಚಿತ್ರದ ಮತ್ತೊಂದು ವಿಶೇಷತೆಯಾಗಿದೆ. 13 ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗುತ್ತಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಬಗ್ಗೆ ಚಿತ್ರತಂಡ ಭಾರೀ ಭರವಸೆಯನ್ನು ಇಟ್ಟುಕೊಂಡಿದೆ. ಬೆಂಗಳೂರಿನ ಇತಿಹಾಸವನ್ನು ಭವ್ಯವಾಗಿ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:51 am, Wed, 1 July 26

Source link

Camphor Bath Benefits: ಸಾನ್ನದ ನೀರಿಗೆ ಒಂದು ಚಿಟಿಕೆ ಕರ್ಪೂರ ಬೆರೆಸಿ; ಇದರ ಚಮತ್ಕಾರಿ ಪ್ರಯೋಜನಗಳು ಇಲ್ಲಿವೆ… – Kannada News | Camphor Bath Benefits: End Negative Energy, Solve Financial and Health Problems

ಅನೇಕ ಜನರು ಜೀವನದಲ್ಲಿ ಎಷ್ಟೇ ಕಷ್ಟಪಟ್ಟು ದುಡಿದರೂ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು, ಕೌಟುಂಬಿಕ ಕಲಹಗಳು ಅಥವಾ ನಿರಂತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇದಕ್ಕೆ ಮುಖ್ಯ ಕಾರಣ ಮನೆಯಲ್ಲಿ ಅಥವಾ ನಮ್ಮ ಸುತ್ತಮುತ್ತ ಆವರಿಸಿರುವ ನಕಾರಾತ್ಮಕ ಶಕ್ತಿ ಇರಬಹುದು. ಈ ಎಲ್ಲಾ ಸಮಸ್ಯೆಗಳಿಗೆ ಕರ್ಪೂರದಿಂದ ಮಾಡುವ ಒಂದು ಸಣ್ಣ ಮತ್ತು ಸರಳ ಪರಿಹಾರವು ಅದ್ಭುತವಾಗಿ ಕೆಲಸ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಸ್ವಲ್ಪ ಕರ್ಪೂರದ ಪುಡಿ ಅಥವಾ ಎರಡು ಹನಿ ಕರ್ಪೂರದ ಎಣ್ಣೆಯನ್ನು (Camphor Oil) ಸ್ನಾನ ಮಾಡುವ ನೀರಿಗೆ ಹಾಕಿ ಸ್ನಾನ ಮಾಡುವುದರಿಂದ ಏನೆಲ್ಲಾ ಲಾಭಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಜಾತಕದಲ್ಲಿ ಶುಕ್ರ ಮತ್ತು ಚಂದ್ರ ದೋಷ ನಿವಾರಣೆ:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಪೂರವನ್ನು ಶುಕ್ರ ಮತ್ತು ಚಂದ್ರ ಗ್ರಹಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶುಕ್ರನು ನಮ್ಮ ಜೀವನಕ್ಕೆ ಸಂಪತ್ತು, ಐಷಾರಾಮಿ ಜೀವನ ಮತ್ತು ಸಂತೋಷವನ್ನು ತಂದರೆ, ಚಂದ್ರನು ನಮ್ಮ ಮನಸ್ಸಿನ ಸ್ಥಿತಿಯನ್ನು ನಿಯಂತ್ರಿಸುತ್ತಾನೆ. ಕರ್ಪೂರದ ನೀರಿನಿಂದ ಸ್ನಾನ ಮಾಡುವುದರಿಂದ ಜಾತಕದಲ್ಲಿ ಈ ಎರಡು ಗ್ರಹಗಳ ದೋಷಗಳು ನಿವಾರಣೆಯಾಗಿ, ಸಕಾರಾತ್ಮಕ ಫಲಿತಾಂಶಗಳು ಲಭಿಸುತ್ತವೆ ಎಂದು ನಂಬಲಾಗಿದೆ.

ಆರ್ಥಿಕ ತೊಂದರೆಗಳಿಂದ ಮುಕ್ತಿ, ವ್ಯಾಪಾರದಲ್ಲಿ ಲಾಭ:

ನಿಯಮಿತವಾಗಿ ಕರ್ಪೂರದ ನೀರಿನಿಂದ ಸ್ನಾನ ಮಾಡುವುದರಿಂದ ಮನೆಯಲ್ಲಿದ್ದ ದರಿದ್ರ ಲಕ್ಷ್ಮಿ ದೂರವಾಗಿ, ಆರ್ಥಿಕ ತೊಂದರೆಗಳು ಕ್ರಮೇಣ ನಿವಾರಣೆಯಾಗುತ್ತವೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗುತ್ತವೆ ಮತ್ತು ವ್ಯಾಪಾರ-ವ್ಯವಹಾರಗಳಲ್ಲಿ ನಷ್ಟ ಅನುಭವಿಸುತ್ತಿರುವವರಿಗೆ ಧನಲಾಭ ಉಂಟಾಗುತ್ತದೆ.

ಮಾನಸಿಕ ಶಾಂತಿ ಮತ್ತು ಅದ್ಭುತ ಉಲ್ಲಾಸ:

ಕರ್ಪೂರದ ವಿಶಿಷ್ಟ ಸುವಾಸನೆಯು ಮನಸ್ಸಿನಿಂದ ತೀವ್ರವಾದ ಒತ್ತಡ ಮತ್ತು ಆತಂಕವನ್ನು (Stress & Anxiety) ದೂರ ಮಾಡುತ್ತದೆ. ಇದು ದಿನವಿಡೀ ಸಕ್ರಿಯವಾಗಿ ಕೆಲಸ ಮಾಡಲು ಅಗತ್ಯವಾದ ಸಕಾರಾತ್ಮಕ ಶಕ್ತಿಯನ್ನು (Positive Energy) ಒದಗಿಸುತ್ತದೆ. ರಾತ್ರಿ ಸರಿಯಾಗಿ ನಿದ್ರೆ ಬಾರದವರು ಅಥವಾ ಕೆಟ್ಟ ಕನಸುಗಳಿಂದ ತೊಂದರೆಗೊಳಗಾಗುವವರು ಈ ಪರಿಹಾರ ಮಾಡುವುದರಿಂದ ಗಾಢವಾದ ನಿದ್ರೆ ಪಡೆಯಬಹುದು.

ಚರ್ಮದ ಸಮಸ್ಯೆಗಳಿಗೆ ಉತ್ತಮ ಆಯುರ್ವೇದ ಮದ್ದು:

ಆರೋಗ್ಯದ ದೃಷ್ಟಿಕೋನದಿಂದ ನೋಡುವುದಾದರೆ, ಕರ್ಪೂರದಲ್ಲಿ ಬ್ಯಾಕ್ಟೀರಿಯಾ ವಿರೋಧಿ (Antibacterial) ಮತ್ತು ಶಿಲೀಂಧ್ರನಾಶಕ (Antifungal) ಗುಣಗಳು ಸಮೃದ್ಧವಾಗಿವೆ. ಕರ್ಪೂರ ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮದ ಮೇಲಿನ ಬ್ಯಾಕ್ಟೀರಿಯಾಗಳು ನಾಶವಾಗಿ, ತುರಿಕೆ ಮತ್ತು ಅಲರ್ಜಿಯಂತಹ ಚರ್ಮದ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ವಿಶೇಷವಾಗಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಇದು ಚರ್ಮವನ್ನು ಸೋಂಕುಗಳಿಂದ ರಕ್ಷಿಸುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಮನೆಯ ನಕಾರಾತ್ಮಕ ಶಕ್ತಿ ಓಡಿಸಲು ಸರಳ ಉಪಾಯ:

ನಿಮ್ಮ ಮನೆಯಲ್ಲಿ ಸದಾ ಅಶಾಂತಿ ನೆಲೆಸಿದ್ದರೆ, ಪ್ರತಿ ಶನಿವಾರ ಅಥವಾ ಮಂಗಳವಾರ ಮನೆಯ ಮೂಲೆ ಮೂಲೆಗಳಲ್ಲಿ ಕರ್ಪೂರವನ್ನು ಬೆಳಗಿಸಿ. ಇದರಿಂದ ಮನೆಯಲ್ಲಿರುವ ದುಷ್ಟ ಶಕ್ತಿಗಳು ಮತ್ತು ನಕಾರಾತ್ಮಕತೆ ದೂರವಾಗಿ, ಲಕ್ಷ್ಮಿ ದೇವಿಯ ಕೃಪೆ ಸದಾ ನಿಮ್ಮ ಮೇಲಿರುತ್ತದೆ.

ಗಮನಿಸಬೇಕಾದ ಮುಖ್ಯ ವಿಷಯ:

ಸ್ನಾನದ ನೀರಿಗೆ ಕರ್ಪೂರವನ್ನು ಬಳಸುವಾಗ ಅತಿ ಕಡಿಮೆ ಪ್ರಮಾಣದಲ್ಲಿ (ಕೇವಲ 1 ಅಥವಾ 2 ಹನಿ ಎಣ್ಣೆ ಅಥವಾ ಚಿಟಿಕೆ ಪುಡಿ) ಬಳಸಿ. ಅತಿಯಾದ ಬಳಕೆ ಚರ್ಮಕ್ಕೆ ಉರಿ ಉಂಟುಮಾಡಬಹುದು. ಹಸುಗೂಸುಗಳು ಅಥವಾ ಅತಿ ಸೂಕ್ಷ್ಮ ಚರ್ಮ ಹೊಂದಿರುವವರು ಇದನ್ನು ಬಳಸುವ ಮುನ್ನ ಎಚ್ಚರ ವಹಿಸುವುದು ಸೂಕ್ತ. ಬಾಹ್ಯ ಸೌಂದರ್ಯದ ಜೊತೆಗೆ ಆಂತರಿಕ ಸಕಾರಾತ್ಮಕತೆಯನ್ನು ಹೆಚ್ಚಿಸುವ ಈ ಸರಳ ಪರಿಹಾರವನ್ನು ನಿಮ್ಮ ದೈನಂದಿನ ದಿನಚರಿಯ ಭಾಗವಾಗಿಸಿ. ಕೆಲವೇ ದಿನಗಳಲ್ಲಿ ನಿಮ್ಮ ಆಲೋಚನೆಗಳು ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಅದ್ಭುತ ಬದಲಾವಣೆಗಳನ್ನು ನೀವೇ ಗಮನಿಸಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chamarajanagar: ಮೂರ್ನಾಲ್ಕು ತಿಂಗಳಿನಿಂದ 400ಕ್ಕೂ ಹೆಚ್ಚು ಮಂದಿಗೆ ಸಿಗ್ತಿಲ್ಲ ವೃದ್ಧಾಪ್ಯ ವೇತನ – Kannada News | Chamarajanagar Pension Crisis: Over 400 Elders in Ummattur Deprived of Old Age and Widows Pension For 4 Months

ಚಾಮರಾಜನಗರ, ಜುಲೈ 1: ಚಾಮರಾಜನಗರ ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ವಯೋವೃದ್ಧರು ಕಳೆದ ನಾಲ್ಕು ತಿಂಗಳಿಂದ ವೃದ್ಧಾಪ್ಯ, ವಿಧವಾ ಹಾಗೂ ಸಂಧ್ಯಾ ಸುರಕ್ಷಾ ಪಿಂಚಣಿಗಳಿಂದ ವಂಚಿತರಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ತಾಲೂಕು ಕಚೇರಿ ಹಾಗೂ ಜಿಲ್ಲಾಡಳಿತ ಕಚೇರಿಗಳಿಗೆ ಹಲವು ಬಾರಿ ಅಲೆದಿದ್ದರೂ, ಪಿಂಚಣಿ ದೊರೆಯದೆ ಫಲಾನುಭವಿಗಳು ನಿರಾಶೆಗೊಂಡಿದ್ದಾರೆ. ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮವೊಂದರಲ್ಲೇ 400ಕ್ಕೂ ಅಧಿಕ ಮಂದಿಗೆ ಪಿಂಚಣಿ ಬಂದಿಲ್ಲ ಎಂದು ಫಲಾನುಭವಿಗಳು ದೂರಿದ್ದಾರೆ. ಪಿಂಚಣಿಯೇ ತಮ್ಮ ಜೀವನದ ಆಧಾರವಾಗಿದ್ದ ಅನೇಕರಿಗೆ, ಹಣವಿಲ್ಲದೆ ಊಟಕ್ಕೂ ತೊಂದರೆಯಾಗುವ ಪರಿಸ್ಥಿತಿ ಬಂದಿದೆ.

‘ನನ್ನನ್ನು ನೋಡಿಕೊಳ್ಳಲು ಯಾರೂ ಇಲ್ಲ, ಪಿಂಚಣಿಯೇ ಆಧಾರವಾಗಿತ್ತು’ ಎಂದು ವಯೋವೃದ್ಧೆಯೊಬ್ಬರು ‘ಟಿವಿ9’ ಮುಂದೆ ಕಣ್ಣೀರಿಟ್ಟಿದ್ದಾರೆ. ಅಧಿಕಾರಿಗಳು ತಾಂತ್ರಿಕ ದೋಷ ಅಥವಾ ಆದಾಯ ಮಿತಿಗಳಂತಹ ಕಾರಣಗಳನ್ನು ನೀಡುತ್ತಿದ್ದರೂ, ಫಲಾನುಭವಿಗಳು ದಾಖಲಾತಿ ಸಮೇತ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕೂಡಲೇ ಗಮನಹರಿಸಿ, ಹಿರಿಯ ನಾಗರಿಕರಿಗೆ ಅವರ ನ್ಯಾಯಯುತ ಪಿಂಚಣಿಯನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TV9 Kannada News Live: ನಿದ್ದೆಯಲ್ಲಿದ್ದಾಗಲೇ ಕುಸಿದುಬಿದ್ದ ಮನೆ, ಗೃಹಜ್ಯೋತಿ ಯೋಜನೆಯಲ್ಲಿ ಭಾರಿ ಪರಿಷ್ಕರಣೆ, ಇಲ್ಲಿದೆ ಇಂದಿನ ಪ್ರಮುಖ ಸುದ್ದಿಗಳು – Kannada News | TV9 Kannada News Live 1 July 2026 Karnataka SIR, Mangalore Rains, Gruha Jyothi Application Revision Top News Updates

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಮಂಗಳೂರು ನಗರದ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಮಳೆಯ ಆರ್ಭಟಕ್ಕೆ ಮನೆಯ ಹಿಂಬದಿಯ ತಡೆಗೋಡೆ ಹಾಗೂ ಮೇಲ್ಚಾವಣಿ ಕುಸಿದುಬಿದ್ದ ಪರಿಣಾಮ ಇಬ್ಬರು ಅಪ್ರಾಪ್ತ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಜ್ಯೋತಿ’ ಉಚಿತ ವಿದ್ಯುತ್ ಯೋಜನೆಯಲ್ಲಿ ಭಾರಿ ಪರಿಷ್ಕರಣೆ ನಡೆಯುತ್ತಿದ್ದು, ಇದು ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರವು ‘SIR’ ಪ್ರಕ್ರಿಯೆಯ ಮೂಲಕ ಗೃಹಜ್ಯೋತಿ ಫಲಾನುಭವಿಗಳಿಂದ ವೋಟರ್ ಐಡಿ (ಎಪಿಕ್ ಕಾರ್ಡ್ ನಂಬರ್) ಹಾಗೂ ಜಾತಿ ವಿವರಗಳನ್ನು ಕಡ್ಡಾಯವಾಗಿ ಸಂಗ್ರಹಿಸುತ್ತಿದೆ. ಅಂತಾರಾಷ್ಟ್ರೀಯ ಬಿಕ್ಕಟ್ಟಿನ ನಡುವೆಯೂ ಇಂದಿನಿಂದ (ಜುಲೈ 01) ವಾಣಿಜ್ಯ ಬಳಕೆಯ (19 ಕೆಜಿ) ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಕಡಿತವಾಗಿದ್ದು, ಹೋಟೆಲ್ ಉದ್ಯಮಿಗಳು ಹಾಗೂ ವ್ಯಾಪಾರಿಗಳು ನಿಟ್ಟುಸಿರು ಬಿಡುವಂತಾಗಿದೆ. ವಾಣಿಜ್ಯ ಸಿಲಿಂಡರ್ ದರದಲ್ಲಿ ಒಮ್ಮೆಗೆ 183.50 ರೂಪಾಯಿಗಳನ್ನು ಕಡಿತಗೊಳಿಸಲಾಗಿದೆ. ನಟ ಅಖಿಲ್ ರಾಜ್ ಅವರ ಮೇಲೆ ಹಲವಾರು ಫುಡ್ ಡೆಲಿವರಿ ಬಾಯ್ಸ್‌ಗಳು ಒಟ್ಟಾಗಿ ಸೇರಿ ದಾಳಿ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಟ ಅಖಿಲ್ ರಾಜ್ ಅವರು ತಮ್ಮ ಕಾರಿನಲ್ಲಿ ಚಲಿಸುತ್ತಿದ್ದಾಗ ಡೆಲಿವರಿ ಬಾಯ್ಸ್‌ಗಳು ಒಟ್ಟಾಗಿ ಅವರ ಕಾರನ್ನು ಅಡ್ಡಗಟ್ಟಿ, ಗಾಜುಗಳನ್ನು ಪುಡಿಮಾಡಿ ಹಲ್ಲೆಗೆ ಯತ್ನಿಸಿದ್ದಾರೆ. ಇದೇ ರೀತಿ ಪ್ರಮುಖ ಸುದ್ದಿಗಳ ಅಪ್ಡೇಟ್​​​ಗಳನ್ನು ಇಲ್ಲಿ ನೀಡಲಾಗುತ್ತದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಾಯದ ಸಮಸ್ಯೆ… ಬೆಂಗಳೂರಿಗೆ ಶಿಫ್ಟ್ ಆದ ಹಾರ್ದಿಕ್ ಪಾಂಡ್ಯ! – Kannada News | Team India Player Hardik Pandya shifts to Bengaluru

ಟೀಮ್ ಇಂಡಿಯಾ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯ ಕಾರಣ ಇದೀಗ ತಮ್ಮ ವೃತ್ತಿಜೀವನದ ಅತ್ಯಂತ ದೊಡ್ಡ ಮತ್ತು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಈ ನಿರ್ಧಾರದಂತೆ ಇದೀಗ ಹಾರ್ದಿಕ್ ಪಾಂಡ್ಯ  ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ.

ಬಲ್ಲ ಮೂಲಗಳ ಮಾಹಿತಿ ಪ್ರಕಾರ, ಹಾರ್ದಿಕ್ ಪಾಂಡ್ಯ ಬೆಂಗಳೂರಿನ ಹೊರವಲಯದಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್ (CoE) ತರಬೇತಿ ಕೇಂದ್ರದ ಹತ್ತಿರವೇ ಮನೆಯೊಂದನ್ನು ಬಾಡಿಗೆಗೆ ಪಡೆದು ಈಗಾಗಲೇ ವಾಸ್ತವ್ಯ ಹೂಡಿದ್ದಾರೆ.

  • ಹಾರ್ದಿಕ್ ಪಾಂಡ್ಯ ಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ.
  • ಈ ಸಮಸ್ಯೆಯ ಕಾರಣ ಇಂಗ್ಲೆಂಡ್ ವಿರುದ್ಧದ ಸರಣಿಗಳಿಂದ ಹೊರಗುಳಿದಿದ್ದಾರೆ.

ಬೆಂಗಳೂರಿಗೆ ಬರಲು ಕಾರಣವೇನು?

ಕಳೆದ ಒಂದು ದಶಕದಿಂದ ಮುಂಬೈನ ಲೋವರ್ ಪರೇಲ್‌ನಲ್ಲಿ ವಾಸವಿದ್ದ ಹಾರ್ದಿಕ್ ಪಾಂಡ್ಯ, ತರಬೇತಿಗಾಗಿ ಘಾನ್ಸೋಲಿಯಲ್ಲಿರುವ ಮುಂಬೈ ಇಂಡಿಯನ್ಸ್ ಫಿಸಿಲಿಟಿ ಸೆಂಟರ್​ಗೆ ಹೋಗಬೇಕಿತ್ತು. ಆದರೆ ಮುಂಬೈನ ಟ್ರಾಫಿಕ್ ಹಾಗೂ ಸುದೀರ್ಘ ಪ್ರಯಾಣದಿಂದಾಗಿ ಅವರ ಅಮೂಲ್ಯ ಸಮಯ ಮತ್ತು ಶಕ್ತಿ ಪೋಲಾಗುತ್ತಿತ್ತು. ಅಲ್ಲದೆ ತಮ್ಮ ಫಿಟ್‌ನೆಸ್ ಕಾಪಾಡಿಕೊಳ್ಳಲು ದಿನನಿತ್ಯದ ಪ್ರಯಾಣದ ಆಯಾಸ ದೊಡ್ಡ ಅಡ್ಡಿಯಾಗಿತ್ತು.

ಈ ಪ್ರಯಾಣದ ದಣಿವನ್ನು ಸಂಪೂರ್ಣವಾಗಿ ನಿವಾರಿಸಲು, ಅವರು ಬೆಂಗಳೂರಿನ ಹೊರವಲಯದಲ್ಲಿರುವ CoE ತರಬೇತಿ ಕೇಂದ್ರದ ಅತ್ಯಂತ ಸಮೀಪದಲ್ಲೇ ಮನೆಯೊಂದನ್ನು ಬಾಡಿಗೆಗೆ ಪಡೆದು ಶಿಫ್ಟ್ ಆಗಿದ್ದಾರೆ.

ಅಂದರೆ ಮುಂಬೈ ತೊರೆದು ಸಿಲಿಕಾನ್ ಸಿಟಿ ಬೆಂಗಳೂರಿಗೆ ಖಾಯಂ ಆಗಿ ವಾಸ್ತವ್ಯ ಬದಲಾಯಿಸಿರುವ ಅವರು, ಬಿಸಿಸಿಐನ ಅತ್ಯಾಧುನಿಕ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಕೇಂದ್ರವನ್ನು ತಮ್ಮ ಖಾಯಂ ತರಬೇತಿ ನೆಲೆಯನ್ನಾಗಿ ಮಾಡಿಕೊಂಡಿದ್ದಾರೆ. ಈ ಮೂಲಕ ಫಿಟ್​ನೆಸ್ ಕಡೆಗೆ ಹೆಚ್ಚಿನ ಸಮಯ ನೀಡಲು ಮುಂದಾಗಿದ್ದಾರೆ.

ಈ ನಿರ್ಧಾರದ ಹಿಂದಿರುವ ಗುರಿಯೇನು?

ಸಾಮಾನ್ಯವಾಗಿ ಬಿಸಿಸಿಐನ ಕೇಂದ್ರ ಒಪ್ಪಂದದಲ್ಲಿರುವ ಆಟಗಾರರು ಕೇವಲ ಗಾಯಗೊಂಡಾಗ ಚಿಕಿತ್ಸೆಗಾಗಿ ಅಥವಾ ರಾಷ್ಟ್ರೀಯ ಶಿಬಿರಗಳು ಇದ್ದಾಗ ಮಾತ್ರ ಬೆಂಗಳೂರಿನ ತರಬೇತಿ ಕೇಂದ್ರಕ್ಕೆ ಬರುತ್ತಾರೆ. ಆದರೆ ಇಲ್ಲೇ ಉಳಿದು ತರಬೇತಿ ಪಡೆಯಲು ನಿರ್ಧರಿಸಿದ ಟೀಮ್ ಇಂಡಿಯಾದ ಮೊದಲ ಆಟಗಾರ ಹಾರ್ದಿಕ್ ಪಾಂಡ್ಯ.

32 ವರ್ಷದ ಹಾರ್ದಿಕ್ ಪಾಂಡ್ಯ ಮುಂದಿನ ಏಕದಿನ ವಿಶ್ವಕಪ್​ ಅನ್ನು ಗಮನದಲ್ಲಿಟ್ಟುಕೊಂಡು ಫಿಟ್​ನೆಸ್​ನತ್ತ ಸಂಪೂರ್ಣ ಗಮನ ಕೇಂದ್ರೀಕರಿಸಲು ನಿರ್ಧರಿಸಿದ್ದಾರೆ.

ಅಲ್ಲದೆ ಮುಂದಿನ 5 ರಿಂದ 6 ವರ್ಷಗಳ ಕಾಲ ಯಾವುದೇ ದೊಡ್ಡ ಗಾಯಗಳಿಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿ ಆಡುವುದು ಅವರ ಗುರಿಯಾಗಿದೆ.

ಇದಕ್ಕಾಗಿ ಅವರು ಬಿಸಿಸಿಐನ ತಜ್ಞರ ಜೊತೆಗೆ, ತಮ್ಮದೇ ಆದ ವೈಯಕ್ತಿಕ ಫಿಸಿಯೋಥೆರಪಿಸ್ಟ್ ಮತ್ತು ಸ್ಟ್ರೆಂತ್ ಆಂಡ್ ಕಂಡೀಷನಿಂಗ್ ಕೋಚ್ ಅನ್ನು ಸಹ ನೇಮಿಸಿಕೊಂಡಿದ್ದಾರೆ.

ಇದನ್ನೂ ಓದಿ: ವೈಭವ್​ನ ಆಡಿಸ್ತೀರಾ? ಎಲ್ಲರೂ ರನ್​ಗಳಿಸಿಯೇ ಬಂದಿದ್ದಾರೆ: ಶ್ರೇಯಸ್ ಖಡಕ್ ಉತ್ತರ

ಒಟ್ಟಾರೆಯಾಗಿ, ಹಾರ್ದಿಕ್ ಪಾಂಡ್ಯ ಅವರ ಈ ನಿರ್ಧಾರವು ಕೇವಲ ಅವರ ವೈಯಕ್ತಿಕ ವೃತ್ತಿಜೀವನಕ್ಕೆ ಮಾತ್ರವಲ್ಲದೆ, ಇಡೀ ಭಾರತೀಯ ಕ್ರಿಕೆಟ್‌ಗೆ ಒಂದು ಹೊಸ ದಿಕ್ಸೂಚಿಯಾಗಿದೆ. ಈ ದಿಕ್ಸೂಚಿಯೊಂದಿಗೆ ಪಾಂಡ್ಯ ಶೀಘ್ರದಲ್ಲೇ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವುದನ್ನು ಎದುರು ನೋಡಬಹುದು.

Published On – 9:01 am, Wed, 1 July 26

Source link

ಸಲ್ಮಾನ್ ಮುಂದೆ ಹೀಗೆ ಮಾಡ್ತೀರಾ? ರಿತೇಶ್ ದೇಶಮುಖ್ ಜೊತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ನೇರ ಪ್ರಶ್ನೆ – Kannada News | Lock Upp 2: Ram Kapoor Lashes Out At Host Riteish Deshmukh Over Water During Paintball Task

ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ‘ಲಾಕ್ ಅಪ್: ಸಚ್ ಯಾ ಸಜಾ’ ರಿಯಾಲಿಟಿ ಶೋನ ಎರಡನೇ ಸೀಸನ್ ಇದೀಗ ಆರಂಭವಾಗಿದೆ. ಈ ಸೀಸನ್ ಮೊದಲ ಕಂತಿನಿಂದಲೂ ವಿವಾದಗಳು, ಜಗಳಗಳು ಭಾರಿ ಸುದ್ದಿಯಲ್ಲಿದೆ. ಇತ್ತೀಚಿನ ಎಪಿಸೋಡ್‌ನಲ್ಲಿ ನಟ,ಸ್ಪರ್ಧಿ ರಾಮ್ ಕಪೂರ್ ತುಂಬಾ ಅಸಭ್ಯವಾಗಿ ವರ್ತಿಸಿದ್ದಾರೆ. ಅವರು ಶೋನ ನಿರೂಪಕ ರಿತೇಶ್ ದೇಶಮುಖ್ ಮೇಲೆ ತೀವ್ರ ಕೋಪಗೊಂಡಿದ್ದರು. ಈ ವರ್ತನೆಗೆ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಲ್ಮಾನ್ ಖಾನ್ ಅವರ ಮುಂದೆ ಇಂತಹ ಕೆಲಸ ಮಾಡಲು ಇವರಿಗೆ ಧೈರ್ಯ ಇರುತ್ತಿತ್ತಾ ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ.

‘ಲಾಕ್ ಅಪ್ 2’ ಕಾರ್ಯಕ್ರಮವನ್ನು ಫರಾ ಖಾನ್ ಮತ್ತು ರಿತೇಶ್ ದೇಶಮುಖ್ ಜಂಟಿಯಾಗಿ ನಿರೂಪಣೆ ಮಾಡುತ್ತಿದ್ದಾರೆ. ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಈ ಶೋನ ಟಾಸ್ಕ್ ಒಂದರಲ್ಲಿ, ಹರ್ಷದ್ ಚೋಪ್ರಾ ಮತ್ತು ಆಕಾಂಕ್ಷಾ ಚಮೋಲಾ ಕೈಯಲ್ಲಿ ಪೇಂಟ್‌ಬಾಲ್ ಗನ್‌ಗಳನ್ನು ಹಿಡಿದಿದ್ದರು. ಈ ವಾರದ ಎಲಿಮಿನೇಷನ್‌ನಿಂದ ಬದುಕುಳಿಯಲು ದುರ್ಬಲ ಸ್ಪರ್ಧಿಗಳು ಒಂದೇ ಒಂದು ಪೇಂಟ್‌ಬಾಲ್ ಗುಂಡು ತಗುಲದಂತೆ ನಿಗದಿ ಪಡಿಸಿದ ಸ್ಥಳ ತಲುಪಬೇಕಾಗಿತ್ತು. ಆದರೆ ಈ ಟಾಸ್ಕ್‌ನಲ್ಲಿ ರಾಮ್ ಕಪೂರ್ ಗೆಲ್ಲಲು ವಿಫಲರಾಗಿದ್ದಲ್ಲದೆ, ಆಟದ ಮಧ್ಯದಲ್ಲಿ ನೀರು ಕೇಳಲು ಆರಂಭಿಸಿದರು.

ಸಕಾಲಕ್ಕೆ ನೀರು ಸಿಗದಿದ್ದಾಗ ತೀವ್ರ ಕೋಪಗೊಂಡ ರಾಮ್ ಕಪೂರ್, ‘ನಾನು ಬಹಳ ಸಮಯದಿಂದ ನೀರು ಕೇಳುತ್ತಿದ್ದೇನೆ. ನೀವು ಇದನ್ನೆಲ್ಲಾ ಮಾಡುವಂತೆ ನಮ್ಮನ್ನು ಒತ್ತಾಯಿಸುತ್ತಿದ್ದೀರಿ, ಆದರೆ ನಮಗೆ ನೀರು ಕೊಡುತ್ತಿಲ್ಲ. ಇದು ಸರಿಯಲ್ಲ, ತಕ್ಷಣ ನೀರು ಕಳುಹಿಸಿ’ ಎಂದು ಕಿರುಚಾಡಿದರು. ಟಾಸ್ಕ್ ಮುಗಿಯುವ ವೇಳೆಗೆ ತನ್ನ ಹಠ ಸಾಧಿಸದ ಕಾರಣ ಕೊನೆಗೆ ರಾಮ್ ಆಟವನ್ನು ಮುಂದುವರಿಸಲು ನಿರಾಕರಿಸಿದರು. ರಾಮ್‌ನ ಮೊಂಡುತನವನ್ನು ನೋಡಿ ನಿರೂಪಕ ರಿತೇಶ್ ದೇಶಮುಖ್ ಅವರು ಬಣ್ಣದ ಚೆಂಡಿನಿಂದ ಪೆಟ್ಟು ಬೀಳಬಹುದು ಎಂದು ಎಚ್ಚರಿಸಿದಾಗ, ರಾಮ್ ಅವಾಚ್ಯವಾಗಿ ‘ಧೈರ್ಯವಿದ್ದರೆ ನನ್ನನ್ನು ಹೊಡೆಯಲು ಬಾ’ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ‘ಲಾಕ್ ಅಪ್ ಸೀಸನ್ 2’: ಶೋನಿಂದ ಕಂಗನಾ ರಣಾವತ್​​ನ ಹೊರಗಿಟ್ಟಿದ್ದೇಕೆ?

ಇದಕ್ಕೆ ಶಾಂತವಾಗಿಯೇ ಉತ್ತರಿಸಿದ ರಿತೇಶ್, ಪ್ರತಿಯೊಬ್ಬ ಸ್ಪರ್ಧಿಗಳಿಗೂ ಈಗಾಗಲೇ ವೈಯಕ್ತಿಕ ನೀರಿನ ಬಾಟಲಿಯನ್ನು ನೀಡಲಾಗಿದೆ ಮತ್ತು ಟಾಸ್ಕ್ ಸಮಯದಲ್ಲಿ ಅದನ್ನು ತಮ್ಮೊಂದಿಗೆ ಕೊಂಡೊಯ್ಯುವುದು ಸ್ಪರ್ಧಿಯ ಜವಾಬ್ದಾರಿಯಾಗಿದೆ ಎಂದು ವಿವರಿಸಿದರು. ಇದನ್ನು ಕೇಳಿದ ನಂತರ ರಾಮ್ ಕಪೂರ್ ಅಂತಿಮವಾಗಿ ಪಕ್ಕಕ್ಕೆ ಸರಿದು ಆಟವನ್ನು ಮುಂದುವರಿಸಲು ಅವಕಾಶ ನೀಡಿದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ತಕ್ಷಣ ನೆಟ್ಟಿಗರು ರಾಮ್ ಅವರ ಅಸಭ್ಯ ವರ್ತನೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ‘ಅವರು ಸಲ್ಮಾನ್ ಖಾನ್ ಮುಂದೆ ಖಂಡಿತಾ ಹೀಗೆ ವರ್ತಿಸುತ್ತಿರಲಿಲ್ಲ, ರಿತೇಶ್ ಒಳ್ಳೆಯವರು ಎಂಬ ಕಾರಣಕ್ಕೆ ಇಷ್ಟೊಂದು ಅತಿಯಾಗಿ ಆಡುತ್ತಿದ್ದಾರೆ’ ಎಂದು ಕಾಮೆಂಟ್ ಬಾಕ್ಸ್‌ನಲ್ಲಿ ಕಿಡಿಕಾರಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

July Born Personality: ಜುಲೈ ತಿಂಗಳಿನಲ್ಲಿ ಜನಿಸಿದವರ ಭವಿಷ್ಯ ಮತ್ತು ಗುಣಲಕ್ಷಣಗಳು; ಇವರ ವ್ಯಕ್ತಿತ್ವದ ರಹಸ್ಯಗಳೇನು ಗೊತ್ತಾ? – Kannada News | July Born Personality: Traits, Career, Family and Love – Astrology and Numerology Insights

ಜುಲೈ ತಿಂಗಳಿನಲ್ಲಿ ಜನಿಸಿದವರ ವ್ಯಕ್ತಿತ್ವ

ಸಂಖ್ಯಾಶಾಸ್ತ್ರ (Numerology) ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿ ಜನಿಸಿದ ಜನ್ಮ ದಿನಾಂಕ ಹಾಗೂ ಜನ್ಮ ತಿಂಗಳು ಅವರ ಜೀವನ, ಸ್ವಭಾವ ಮತ್ತು ಭವಿಷ್ಯದ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಕೆಲವರು ರಾಶಿ ಆಧಾರದ ಮೇಲೆ ಭವಿಷ್ಯ ತಿಳಿದುಕೊಂಡರೆ, ಇನ್ನು ಕೆಲವರು ಜನ್ಮ ತಿಂಗಳ ಆಧಾರದ ಮೇಲೆ ವ್ಯಕ್ತಿಯ ಗುಣಲಕ್ಷಣಗಳನ್ನು ಅಳೆಯುತ್ತಾರೆ. ಈ ಲೇಖನದಲ್ಲಿ ಜುಲೈ ತಿಂಗಳಿನಲ್ಲಿ ಜನಿಸಿದವರ ವಿಶೇಷ ಗುಣಗಳು, ಅವರ ವೃತ್ತಿಜೀವನ ಮತ್ತು ಕುಟುಂಬದ ಮೇಲಿನ ಅವರ ಪ್ರೀತಿಯ ಬಗ್ಗೆ ವಿವರವಾಗಿ ತಿಳಿದುಕೊಳ್ಳಿ.

ಅದ್ಭುತ ಬುದ್ಧಿಶಕ್ತಿ ಮತ್ತು ಕಠಿಣ ಪರಿಶ್ರಮಿಗಳು:

ಜುಲೈ ತಿಂಗಳಿನಲ್ಲಿ ಜನಿಸಿದವರು ಶಿಕ್ಷಣ ಮತ್ತು ಜ್ಞಾನದ ವಿಷಯದಲ್ಲಿ ಎಲ್ಲರಿಗಿಂತ ಸದಾ ಒಂದು ಹೆಜ್ಜೆ ಮುಂದಿರುತ್ತಾರೆ. ಇವರಲ್ಲಿ ಹುಟ್ಟುತ್ತಲೇ ಸ್ಪರ್ಧಾತ್ಮಕ ಮನೋಭಾವ ಇರುತ್ತದೆ. ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಅದರಲ್ಲಿ ಅತ್ಯುತ್ತಮ ಫಲಿತಾಂಶ ಸಾಧಿಸುವವರೆಗೂ ಇವರು ವಿಶ್ರಮಿಸುವುದಿಲ್ಲ. ಇವರ ಕಠಿಣ ಪರಿಶ್ರಮವೇ ಇವರ ಯಶಸ್ಸಿನ ರಹಸ್ಯ.

ಕುಟುಂಬಕ್ಕೆ ಮೊದಲ ಆದ್ಯತೆ ನೀಡುವ ಜವಾಬ್ದಾರಿಯುತ ಜೀವಿಗಳು:

ಈ ತಿಂಗಳಲ್ಲಿ ಜನಿಸಿದವರಿಗೆ ಎಲ್ಲದಕ್ಕಿಂತಲೂ ತಮ್ಮ ಕುಟುಂಬವೇ ಮೊದಲ ಆದ್ಯತೆ. ಇವರು ಕುಟುಂಬದ ಪ್ರತಿಯೊಂದು ಜವಾಬ್ದಾರಿಗಳನ್ನು ಅತ್ಯಂತ ಸಂತೋಷದಿಂದ ಹಂಚಿಕೊಳ್ಳುತ್ತಾರೆ. ತಂದೆ-ತಾಯಿ, ಸಂಗಾತಿ ಮತ್ತು ಮಕ್ಕಳ ಸಂತೋಷಕ್ಕಾಗಿ ಎಷ್ಟು ಬೇಕಾದರೂ ತ್ಯಾಗ ಮಾಡಲು ಸಿದ್ಧರಿರುವ ಇವರು, ಮನೆಯಲ್ಲಿ ಸದಾ ಶಾಂತಿ ಮತ್ತು ಪ್ರೀತಿಯ ವಾತಾವರಣ ಇರಲು ಬಯಸುತ್ತಾರೆ.

ಅತಿಯಾದ ಭಾವನಾತ್ಮಕ ಸ್ವಭಾವ ಮತ್ತು ಅಚಲವಾದ ನಿಷ್ಠೆ:

ಜುಲೈ ತಿಂಗಳಿನವರು ಸ್ವಭಾವತಃ ಅತ್ಯಂತ ಸೂಕ್ಷ್ಮ ಮನಸ್ಸಿನವರು ಮತ್ತು ಭಾವಜೀವಿಗಳು. ಇವರು ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ ಮತ್ತು ತಾವು ಪ್ರೀತಿಸುವವರ ಬಗ್ಗೆ ಅಪಾರ ಕಾಳಜಿ ಹೊಂದಿರುತ್ತಾರೆ. ಇವರ ನಿಷ್ಠೆ ಪ್ರಶ್ನಾತೀತವಾದದ್ದು. ಆದರೆ, ಇವರ ನಿಷ್ಠಾವಂತ ಸ್ವಭಾವಕ್ಕೆ ಯಾರಾದರೂ ಒಮ್ಮೆ ಮೋಸ ಮಾಡಿದರೆ, ಇವರು ಅವರನ್ನು ಮತ್ತೊಮ್ಮೆ ಎಂದಿಗೂ ಕ್ಷಮಿಸುವುದಿಲ್ಲ. ನಂಬಿಕೆಗೆ ದ್ರೋಹ ಬಗೆದವರ ಹೆಸರನ್ನು ಸಹ ಕೇಳಲು ಇವರು ಇಷ್ಟಪಡುವುದಿಲ್ಲ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಚಿಕ್ಕ ವಯಸ್ಸಿನಲ್ಲೇ ಆರ್ಥಿಕ ಸ್ಥಿರತೆ ಮತ್ತು ಉಜ್ವಲ ಭವಿಷ್ಯ:

ಇವರ ಭವಿಷ್ಯದ ಬಗ್ಗೆ ಇವರಿಗೆ ಸ್ಪಷ್ಟವಾದ ದೂರದೃಷ್ಟಿ ಮತ್ತು ಅಚಲವಾದ ಆತ್ಮವಿಶ್ವಾಸವಿರುತ್ತದೆ. ಈ ಅದ್ಭುತ ಗುಣದಿಂದಾಗಿ ಇವರಿಗೆ ಚಿಕ್ಕ ವಯಸ್ಸಿನಲ್ಲೇ ಉತ್ತಮ ಉದ್ಯೋಗ ಅಥವಾ ವ್ಯವಹಾರದ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ತುಂಬಾ ಬೇಗನೆ ಜೀವನದಲ್ಲಿ ಸೆಟಲ್ ಆಗುವ ಇವರು, ಸಮಾಜದಲ್ಲಿ ಗೌರವಾನ್ವಿತ ಸ್ಥಾನವನ್ನು ಗಳಿಸುತ್ತಾರೆ. ಇವರು ಎಲ್ಲರಿಗಿಂತ ಉತ್ತಮ ಮತ್ತು ಐಷಾರಾಮಿ ಜೀವನವನ್ನು ನಡೆಸುವ ಯೋಗವನ್ನು ಹೊಂದಿರುತ್ತಾರೆ.

ಸ್ನೇಹಕ್ಕೆ ಪ್ರಾಣ ಕೊಡುವ ಜೀವ ಗೆಳೆಯರು:

ಇವರು ಕೇವಲ ಕುಟುಂಬಕ್ಕೆ ಮಾತ್ರವಲ್ಲ, ತಮ್ಮ ಸ್ನೇಹಿತರ ಬಳಗಕ್ಕೂ ಅತ್ಯಂತ ಆಪ್ತರಾಗಿರುತ್ತಾರೆ. ಸ್ನೇಹಿತರ ಕಷ್ಟದ ಸಮಯದಲ್ಲಿ ಮೊದಲ ವ್ಯಕ್ತಿಯಾಗಿ ಬಂದು ನಿಲ್ಲುವ ಗುಣ ಇವರದ್ದು. ಇವರ ಕಾಳಜಿ ವಹಿಸುವ ಮತ್ತು ಪ್ರೀತಿ ತೋರುವ ಸ್ವಭಾವದಿಂದಾಗಿ ಇವರು ಹೋದ ಕಡೆಯಲ್ಲೆಲ್ಲಾ ಉತ್ತಮ ಸ್ನೇಹಿತರನ್ನು ಸಂಪಾದಿಸುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಟನ ಮೇಲೆ ಡೆಲಿವೆರಿ ಬಾಯ್ಸ್ ದಾಳಿ: ಕೊಲೆಗೆ ಯತ್ನ ಎಂದ ನಟ – Kannada News | Delivery Boys attack on Tollywood hero Akhil Raj

ತೆಲುಗು ಚಿತ್ರರಂಗದ (Tollywood) ನಟನ ಮೇಲೆ ಹಲವಾರು ಡೆಲಿವರಿ ಬಾಯ್ಸ್ ಒಟ್ಟಿಗೆ ದಾಳಿ ನಡೆಸಿದ್ದಾರೆ. ನಟ ಅಖಿಲ್ ರಾಜ್, ಕಾರಿನಲ್ಲಿ ಹೋಗುತ್ತಿದ್ದಾಗ ಡೆಲಿವರಿ ಬಾಯ್ಸ್​​​ಗಳು ಒಟ್ಟಿಗೆ ನಟನ ಕಾರಿನ ಮೇಲೆ ದಾಳಿ ಮಾಡಿದ್ದು, ಕಾರು ಅಡ್ಡಗಟ್ಟಿ ಹಲ್ಲೆ ಸಹ ಮಾಡಿದ್ದಾರೆ. ಬಳಿಕ ನಟ ತನ್ನ ಕಾರನ್ನು ನೇರವಾಗಿ ಪೊಲೀಸ್ ಠಾಣೆಗೆ ಚಲಾಯಿಸಿದ್ದು, ಘಟನೆ ಬಗ್ಗೆ ದೂರು ಸಹ ದಾಖಲಿಸಿದ್ದಾರೆ. ಡೆಲಿವರಿ ಬಾಯ್ಸ್​​ಗಳು ತಮ್ಮನ್ನು ಕೊಲ್ಲಲು ಯತ್ನಿಸಿದರು ಎಂದು ನಟ ಅಖಿಲ್ ಆರೋಪಿಸಿದ್ದಾರೆ. ಮಾತ್ರವಲ್ಲದೆ, ಡೆಲಿವರಿ ಬಾಯ್ಸ್ ಸಹ ನಾಯಕ ನಟನ ವಿರುದ್ಧ ದೂರು ದಾಖಲಿಸಿದ್ದಾರೆ.

ತೆಲುಗಿನ ‘ರಾಜು ವೆಡ್ಸ್ ರಾಂಬಾಯಿ’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಅಖಿಲ್ ರಾಜ್ ಮತ್ತು ಡೆಲಿವರಿ ಬಾಯ್ ನಡುವಿನ ವಾಗ್ವಾದ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ. ತಪ್ಪು ಡೆಲಿವರಿಯಿಂದ ಆರಂಭವಾದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಸಹ ಈ ಬಗ್ಗೆ ಇದೀಗ ಚರ್ಚೆಗಳು ನಡೆಯುತ್ತಿವೆ. ಪರ-ವಿರೋಧ ಪೋಸ್ಟ್​​ಗಳು ಹರಿದಾಡುತ್ತಿವೆ.

ಆಗಿದ್ದಿಷ್ಟು, ನಟ ಅಖಿಲ್ ವಾಸಿಸುತ್ತಿರುವ ಅರುಣಾ ರೆಸಿಡೆನ್ಸಿಯ ಫ್ಲಾಟ್ ನಂಬರ್ 201ಕ್ಕೆ ಎದುರಾಗಿ ‘ಚೇಲಂ ರೆಸಿಡೆನ್ಸಿ’ ಎಂಬ ಮತ್ತೊಂದು ಅಪಾರ್ಟ್ಮೆಂಟ್ ಇದೆ. ಅಲ್ಲಿನ ಫ್ಲಾಟ್ ನಂಬರ್ 201ಕ್ಕೆ ಬರಬೇಕಾಗಿದ್ದ ಪಾರ್ಸೆಲ್ ಅನ್ನು ಡೆಲಿವರಿ ಬಾಯ್ ರಮೇಶ್, ತಪ್ಪಾಗಿ ಅಖಿಲ್ ಮನೆಯ ವಿಳಾಸದಲ್ಲಿ ನೀಡಿದ್ದಾನೆ. ಪಾರ್ಸೆಲ್ ಮೇಲೆ ವಿಳಾಸ ಸ್ಪಷ್ಟವಾಗಿದ್ದರೂ, ಒಟಿಪಿ ಅಥವಾ ಹೆಸರನ್ನು ಪರಿಶೀಲಿಸದೆ ನಿರ್ಲಕ್ಷ್ಯದಿಂದ ಡೆಲಿವರಿ ನೀಡಿದ್ದಾನೆ. ಮನೆಯಲ್ಲಿ ನಾಲ್ವರು ಇದ್ದಿದ್ದರಿಂದ ಯಾರೋ ಆರ್ಡರ್ ಮಾಡಿರಬಹುದು ಎಂದು ಅಖಿಲ್ ತಂದೆ ಪಾರ್ಸೆಲ್ ತೆಗೆದುಕೊಂಡರು. ವಿಷಯ ತಿಳಿಯದ ಅಖಿಲ್ ತಾಯಿ, ಬಂದ ಪಾರ್ಸೆಲ್ ಅನ್ನು ಓಪನ್ ಮಾಡಿದರು. ಆ ನಂತರ ಮನೆಯಲ್ಲಿ ಯಾರೂ ಆರ್ಡರ್ ಮಾಡಿಲ್ಲವೆಂದು ತಿಳಿದು ಅದನ್ನು ಪಕ್ಕಕ್ಕಿಟ್ಟಿದ್ದಾರೆ. ಸರಿಯಾಗಿ 20 ನಿಮಿಷಗಳ ನಂತರ ತಪ್ಪು ಅರಿವಾದ ಡೆಲಿವರಿ ಬಾಯ್ ವಾಪಸ್ ಬಂದು ಪಾರ್ಸೆಲ್ ಕೇಳಿದ್ದು, ಪಾರ್ಸೆಲ್ ಓಪನ್ ಆಗಿದ್ದರಿಂದ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಇದನ್ನೂ ಓದಿ:ತೆಲುಗು ಚಿತ್ರರಂಗವ ಕೊಂಡಾಡಿ, ದೀಪಿಕಾ ಪಡುಕೋಣೆಗೆ ಟಾಂಗ್ ಕೊಟ್ಟ ಜಾನ್ಹವಿ

ಡೆಲಿವರಿ ಬಾಯ್ ರಮೇಶ್ ಹೇಳಿರುವಂತೆ, ಪಾರ್ಸಲ್ ಅನ್ನು ಅಖಿಲ್ ಓಪನ್ ಮಾಡಿದ್ದರು. ಇದರ ಬಗ್ಗೆ ಕೇಳಿದ್ದಕ್ಕೆ ಅಖಿಲ್ ಕೆಟ್ಟದಾಗಿ ಬೈದು, ಹಲ್ಲೆ ಮಾಡಲು ಯತ್ನಿಸಿ, ಮುಖಕ್ಕೆ ಉಗುಳಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಕಣ್ಣೀರು ಹಾಕುತ್ತಾ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸಹ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಅಖಿಲ್ ವರ್ತನೆಯನ್ನು ಟೀಕೆ ಮಾಡಿದ್ದಾರೆ.

ಬಳಿಕ ನಟ ಅಖಿಲ್ ಸಹ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಡೆಲಿವರಿ ಬಾಯ್ ರಮೇಶ್ ಅವರನ್ನು ವಿಳಾಸ ನೋಡಿ ಕೊಡಬೇಕಲ್ಲಾ ಬ್ರದರ್ ಎಂದು ಕೇಳಿದ್ದಕ್ಕೆ, ರಮೇಶ್ ‘ನಾನು ನೋಡಲಿಲ್ಲ, ಕೊಟ್ಟೆ ಅಷ್ಟೇ” ಎಂದು ರಮೇಶ್ ದುರಹಂಕಾರದಿಂದ ಉತ್ತರಿಸಿದ್ದಾನೆ ಎಂಬುದು ಅಖಿಲ್ ವಾದ. ಅಷ್ಟರಲ್ಲಿ ಅಖಿಲ್ ತಾಯಿ ಬಂದು, “ತಿಳಿಯದೆ ಓಪನ್ ಮಾಡಿದೆವು ಬಾಬು” ಎಂದು ಪಾರ್ಸೆಲ್ ಹಿಂತಿರುಗಿಸುತ್ತಿದ್ದರೆ, “ಫ್ರೀಯಾಗಿ ಬಂದರೆ ಓಪನ್ ಮಾಡಿ ತೆಗೆದುಕೊಳ್ತೀರಾ” ಎಂದು ರಮೇಶ್ ವ್ಯಂಗ್ಯವಾಗಿ ಮಾತನಾಡಿದ್ದಾನೆ. ತಾಯಿಯನ್ನು ಆಡಿದ ಮಾತಿಗೆ ಸಿಟ್ಟಿಗೆದ್ದ ಅಖಿಲ್, ಸರಿಯಾಗಿ ಮಾತನಾಡು ಎಂದು ಎಚ್ಚರಿಸಿದರಂತೆ. ಆಗ ಆ ಡೆಲಿವರಿ ಬಾಯ್, ‘ನೀನು ಹೀರೋ ಅಲ್ವಾ.. ನೋಡು ಏನು ಮಾಡುತ್ತೇನೆ’ ಎಂದು ಫೋನ್ ತೆಗೆದು ವಿಡಿಯೋ ರೆಕಾರ್ಡ್ ಮಾಡಲು ಪ್ರಾರಂಭಿಸಿದನಂತೆ.

ಈ ಘಟನೆಗಳು ನಡೆದ ಬಳಿಕ ಡೆಲಿವರಿ ಬಾಯ್ ಗಳೆಲ್ಲ ಒಂದಾಗಿ ಅಖಿಲ್ ವಾಸಿಸುತ್ತಿರುವ ಅರುಣಾ ರೆಸಿಡೆನ್ಸಿ ಬಳಿ ಒಟ್ಟಾದರು. ನಟ ಹೊರಬರುವುದನ್ನೇ ಕಾದು, ಅಖಿಲ್ ತಮ್ಮ ಕಾರಿನಲ್ಲಿ ಮನೆಯಿಂದ ಹೊರಬರುತ್ತಿದ್ದಂತೆಯೇ, ಡೆಲಿವರಿ ಬಾಯ್ಸ್ ಗುಂಪು ಏಕಾಏಕಿ ಕಾರನ್ನು ಸುತ್ತುವರಿದು ದಾಳಿ ಮಾಡಲು ಯತ್ನಿಸಿದೆ. ಪ್ರಾಣಭಯದಿಂದ ಅಖಿಲ್ ಕಾರಿನಲ್ಲೇ ಕುಳಿತು, ಆ ದೃಶ್ಯಗಳನ್ನು ಮತ್ತು ತಮ್ಮನ್ನು ಹಿಂಬಾಲಿಸುತ್ತಿರುವವರನ್ನು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ತಾವು ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಹೇಳಿದರೂ ಕೇಳದ ಅವರು ಹಲ್ಲೆಗೆ ಮುಂದಾದಾಗ, ಅಖಿಲ್ ನೇರವಾಗಿ ಗಚ್ಚಿಬೌಲಿ ಪೊಲೀಸ್ ಠಾಣೆಗೆ ತೆರಳಿ, ತಮ್ಮ ಪ್ರಾಣಕ್ಕೆ ಅಪಾಯವಿದೆ ಎಂದು ದೂರು ನೀಡಿದರು. ಅದಕ್ಕೂ ಮುನ್ನವೇ ಬೆಳಿಗ್ಗೆ ಸದರಿ ಡೆಲಿವರಿ ಬಾಯ್ ಕೂಡ ಅಖಿಲ್ ವಿರುದ್ಧ ದೂರು ನೀಡಿದ್ದರಿಂದ ಪೊಲೀಸರು ಎರಡೂ ಕಡೆಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Bengaluru AQI Update: ಬೆಂಗಳೂರು, ಮಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ ಉತ್ತಮ ವಾಯುಗುಣಮಟ್ಟ – Kannada News | Bengaluru aqi update air quality improves significantly in karnataka amid monsoon rain

ಬೆಂಗಳೂರು, ಮಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ ಉತ್ತಮ ವಾಯುಗುಣಮಟ್ಟ

ಬೆಂಗಳೂರು, ಜುಲೈ 01: ರಾಜ್ಯಾದ್ಯಂತ ಮುಂಗಾರು ಮಳೆ ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಜುಲೈ 01ರ ಇಂದು ಕರ್ನಾಟಕದ ಬಹುತೇಕ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಅತ್ಯಂತ ಉತ್ತಮ ಮತ್ತು ಆರೋಗ್ಯಕರ ಮಟ್ಟದಲ್ಲಿದೆ. ಮಳೆಯ ಕಾರಣದಿಂದಾಗಿ ವಾತಾವರಣದಲ್ಲಿನ ಧೂಳಿನ ಕಣಗಳು ನೆಲಕಚ್ಚಿದ್ದು, ಪ್ರಮುಖ ನಗರಗಳ ಜನತೆ ನಿರಾಳವಾಗಿ ಉಸಿರಾಡುವಂತಾಗಿದೆ.

ಬೆಂಗಳೂರಿನಲ್ಲಿ ಅತ್ಯುತ್ತಮ ವಾಯು ಗುಣಮಟ್ಟ

ರಾಜಧಾನಿ ಬೆಂಗಳೂರಿನಲ್ಲಿ ಇಂದು ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕುಸಿದಿದೆ. ನಗರದ ಸರಾಸರಿ ಎಕ್ಯೂಐ (AQI) 13 ರಿಂದ 23 ರ ಆಸುಪಾಸಿನಲ್ಲಿ ದಾಖಲಾಗಿದ್ದು, ಇದು ಅತ್ಯುತ್ತಮ ವಲಯಕ್ಕೆ ಸೇರುತ್ತದೆ. ಅಲ್ಲದೆ ಹೆಬ್ಬಾಳ, ಬಿಟಿಎಂ ಲೇಔಟ್, ಸಿಟಿ ರೈಲ್ವೆ ಸ್ಟೇಷನ್ ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶಗಳಲ್ಲೂ ವಾಯು ಗುಣಮಟ್ಟ ಉತ್ತಮವಾಗಿದೆ.

ಗಾಳಿಯಲ್ಲಿನ ಪಿಎಂ 2.5 (PM 2.5) ಮತ್ತು ಪಿಎಂ 10 (PM 10) ಕಣಗಳ ಪ್ರಮಾಣವು ಜಾಗತಿಕ ಆರೋಗ್ಯ ಸಂಸ್ಥೆ (WHO) ನಿಗದಿಪಡಿಸಿದ ಮಿತಿಗಿಂತಲೂ ಕಡಿಮೆ ಇದೆ. ಓಝೋನ್ ಮತ್ತು ಕಾರ್ಬನ್ ಮೊನಾಕ್ಸೈಡ್ ಪ್ರಮಾಣ ಕೂಡ ತೀರಾ ಕನಿಷ್ಠ ಮಟ್ಟದಲ್ಲಿದ್ದು, ಯಾವುದೇ ಆರೋಗ್ಯದ ಅಪಾಯಗಳಿಲ್ಲದೆ ಸಾರ್ವಜನಿಕರು ಮುಕ್ತವಾಗಿ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು.

ರಾಜ್ಯದ ಇತರ ಪ್ರಮುಖ ನಗರಗಳ ಸ್ಥಿತಿಗತಿ

ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರೆ ಜಿಲ್ಲಾ ಕೇಂದ್ರಗಳಲ್ಲೂ ವಾಯು ಗುಣಮಟ್ಟ ತೃಪ್ತಿದಾಯಕವಾಗಿದೆ. ಯಾದಗಿರಿ ಭಾಗಗಳಲ್ಲಿ ಎಕ್ಯೂಐ ಅತ್ಯಂತ ಕನಿಷ್ಠ ಮಟ್ಟದಲ್ಲಿದ್ದು (17 ರಿಂದ 28), ಅತ್ಯಂತ ಶುದ್ಧ ಗಾಳಿ ದಾಖಲಾಗಿದೆ.

ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದರೂ, ವಾಣಿಜ್ಯ ಮತ್ತು ಕೈಗಾರಿಕಾ ಚಟುವಟಿಕೆಗಳ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಎಕ್ಯೂಐ 58ರಷ್ಟಿದ್ದು, ಇದು ಸಾಧಾರಣ (Moderate – 51-100) ವಲಯದಲ್ಲಿದೆ. ಬೆಳಗಾವಿ ಮತ್ತು ಬೇಲೂರು ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 65 ರ ಆಸುಪಾಸಿನಲ್ಲಿದ್ದು, ಇಲ್ಲೂ ಕೂಡ ಗಾಳಿಯ ಗುಣಮಟ್ಟ ತೃಪ್ತಿದಾಯಕವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಇಂದಿನ ಮುಂಗಾರು ಮಳೆಯ ಆರ್ಭಟವು ಕೇವಲ ತಂಪಾದ ವಾತಾವರಣವನ್ನು ಮಾತ್ರವಲ್ಲದೆ, ಇಡೀ ರಾಜ್ಯಕ್ಕೆ ಮಾಲಿನ್ಯಮುಕ್ತ, ಆರೋಗ್ಯಕರ ಹಾಗೂ ಶುದ್ಧವಾದ ಗಾಳಿಯನ್ನು ಉಡುಗೊರೆಯಾಗಿ ನೀಡಿದೆ. ದೀರ್ಘಕಾಲದ ಉಸಿರಾಟದ ಸಮಸ್ಯೆ ಇರುವವರಿಗೂ ಇಂದಿನ ಹವಾಮಾನ ಅತ್ಯಂತ ಪೂರಕವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version