ಸರ್ಜಾಪುರ – ಹೆಬ್ಬಾಳ ಡಬಲ್ ಡೆಕ್ಕರ್ ಫ್ಲೈಓವರ್​ನಿಂದ ಹೆಚ್ಚಾಗುತ್ತಂತೆ ಬೆಂಗಳೂರು ಟ್ರಾಫಿಕ್! IISC ಕೊಟ್ಟ ಕಾರಣ ಇಲ್ಲಿದೆ – Kannada News | IISc Study Rejects Sarjapur Hebbal Metro Double Decker Flyover Project in Bengaluru Citing Environmental, Financial Loss

ಸರ್ಜಾಪುರ ಟು ಹೆಬ್ಬಾಳ ಡಬಲ್ ಡೆಕ್ಕರ್ ಗೆ ಐಐಎಸ್ಸಿ ಅಸಮಾಧಾನImage Credit source: tv9

ಬೆಂಗಳೂರು, ಜುಲೈ 1: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಸಂಚಾರ ದಟ್ಟಣೆ ನಿವಾರಣೆಗೆ ಮದ್ದಾಗಬೇಕಿದ್ದ ನಮ್ಮ ಮೆಟ್ರೋದ ಬಹುನಿರೀಕ್ಷಿತ ಸರ್ಜಾಪುರ-ಹೆಬ್ಬಾಳ ‘ಕೆಂಪು ಮಾರ್ಗದ (Red Line)’ ಡಬಲ್ ಡೆಕ್ಕರ್ ಫ್ಲೈ ಓವರ್ ಯೋಜನೆಗೆ ಭಾರತೀಯ ವಿಜ್ಞಾನ ಸಂಸ್ಥೆಯ (IISc) ತಜ್ಞರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೆಟ್ರೋ ಮಾರ್ಗದ ಮೇಲೆಯೇ ರಸ್ತೆ ಫ್ಲೈ ಓವರ್ ನಿರ್ಮಿಸುವ ಈ ಡಬಲ್ ಡೆಕ್ಕರ್ ಮಾದರಿಯಿಂದ ಯಾವುದೇ ಲಾಭವಿಲ್ಲ, ಬದಲಿಗೆ ಇದು ಪರಿಸರಕ್ಕೆ ಅತ್ಯಂತ ಮಾರಕ ಎಂದು ಐಐಎಸ್ಸಿ ವರದಿ ಎಚ್ಚರಿಸಿದೆ. ಈಗಾಗಲೇ ಅಂದಾಜು ವೆಚ್ಚ ಹೆಚ್ಚಾಗಿದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಈ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು (DPR) ತಿರಸ್ಕರಿಸಿರುವ ಬೆನ್ನಲ್ಲೇ ತಜ್ಞರ ಈ ವರದಿ ಹೊರಬಿದ್ದಿರುವುದು ಬಿಎಂಆರ್‌ಸಿಎಲ್ (BMRCL) ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ.

ಖಾಸಗಿ ವಾಹನಗಳಿಗೆ ಉತ್ತೇಜನ, ಹೆಚ್ಚಾಗಲಿದೆ ಟ್ರಾಫಿಕ್

ಐಐಎಸ್ಸಿಯ ಸಾರಿಗೆ ತಜ್ಞ ಪ್ರೊ. ಆಶಿಶ್ ವರ್ಮಾ ನೇತೃತ್ವದಲ್ಲಿ ನಡೆದ ವೈಜ್ಞಾನಿಕ ಅಧ್ಯಯನದ ಪ್ರಕಾರ, ಮೆಟ್ರೋ ಮಾರ್ಗದ ಮೇಲೆಯೇ ರಸ್ತೆ ಫ್ಲೈ ಓವರ್ ನಿರ್ಮಿಸುವುದರಿಂದ ಜನರು ಸಾರ್ವಜನಿಕ ಸಾರಿಗೆಯಿಂದ ವಿಮುಖರಾಗಿ, ಖಾಸಗಿ ವಾಹನಗಳ ಬಳಕೆಗೆ ಮುಂದಾಗಲಿದ್ದಾರೆ. 2041ರ ವೇಳೆಗೆ ಈ ಯೋಜನೆಯಿಂದಾಗಿ ನಗರದಲ್ಲಿ ಕಾರುಗಳ ಬಳಕೆ ಶೇ 3.65 ರಿಂದ ಶೇ 7.45 ಕ್ಕೆ ಮತ್ತು ದ್ವಿಚಕ್ರ ವಾಹನಗಳ ಬಳಕೆ ಶೇ 18.31 ರಿಂದ ಶೇ 19.59 ಕ್ಕೆ ಏರಿಕೆಯಾಗಲಿದೆ. ಇದರ ನೇರ ಪರಿಣಾಮವಾಗಿ ಮೆಟ್ರೋ ರೈಲು ಬಳಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಪ್ರತಿದಿನ ಬರೋಬ್ಬರಿ 11,000 ದಷ್ಟು ಭಾರಿ ಕುಸಿತ ಉಂಟಾಗಲಿದೆ ಎಂದು ವರದಿ ಸ್ಪಷ್ಟಪಡಿಸಿದೆ. 37 ಕಿಲೋಮೀಟರ್ ಉದ್ದದ ಈ ಯೋಜನೆಗೆ 2024ರಲ್ಲಿ ರಾಜ್ಯ ಸರ್ಕಾರ 28,405 ಕೋಟಿ ರೂ. ವೆಚ್ಚದಲ್ಲಿ ಅನುಮೋದನೆ ನೀಡಿ ಕೇಂದ್ರಕ್ಕೆ ಕಳುಹಿಸಿತ್ತು.

2,863 ಕೋಟಿ ರೂ. ಹೆಚ್ಚುವರಿ ಹೊರೆ

ಡಬಲ್ ಡೆಕ್ಕರ್ ವಿನ್ಯಾಸಕ್ಕಾಗಿ ಮೆಟ್ರೋ ಪಿಲ್ಲರ್‌ಗಳ ಸೂಪರ್ ಸ್ಟ್ರಕ್ಚರ್ ವೆಚ್ಚ ಶೇ 125 ರಷ್ಟು ಮತ್ತು ಸಬ್ ಸ್ಟ್ರಕ್ಚರ್ ವೆಚ್ಚ ಶೇ 60 ರಷ್ಟು ಹೆಚ್ಚಾಗಲಿದ್ದು, ಇದರಿಂದ ಬಿಎಂಆರ್‌ಸಿಎಲ್ ಮೇಲೆ ಅಂದಾಜು 2,863.54 ಕೋಟಿ ರೂ. ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ.

ನಷ್ಟದ ಯೋಜನೆ ಎಂಬ ತೀರ್ಮಾನಕ್ಕೆ ಬಂದಿದ್ದು ಹೇಗೆ?

ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ನಿಯಮಾವಳಿಗಳ ಪ್ರಕಾರ ಯಾವುದೇ ಮೆಟ್ರೋ ಯೋಜನೆಯ ಆರ್ಥಿಕ ಆಂತರಿಕ ಆದಾಯ ದರ (EIRR) ಕನಿಷ್ಠ ಶೇ 14 ರಷ್ಟಿರಬೇಕು. ಆದರೆ, ಈ ಡಬಲ್ ಡೆಕ್ಕರ್ ಯೋಜನೆಯ ಒಟ್ಟಾರೆ ಇಐಆರ್‌ಆರ್ ಕೇವಲ ಶೇ 5.43 ರಷ್ಟಿದ್ದು, ಇದು ಆರ್ಥಿಕವಾಗಿ ಸಂಪೂರ್ಣ ನಷ್ಟದ ಯೋಜನೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪರಿಸರದ ಮೇಲೆ ಗಂಭೀರ ಪರಿಣಾಮ

ಫ್ಲೈ ಓವರ್ ನಿರ್ಮಾಣದಿಂದ ಖಾಸಗಿ ವಾಹನಗಳ ಓಡಾಟ ಹೆಚ್ಚಾಗುವುದರಿಂದ ಪ್ರತಿದಿನ 7,000 ಲೀಟರ್ ಹೆಚ್ಚುವರಿ ಇಂಧನ ವ್ಯರ್ಥವಾಗಲಿದ್ದು, ಇದರಿಂದ ಪ್ರತಿನಿತ್ಯ 6.45 ಲಕ್ಷ ರೂ. ನಷ್ಟವಾಗಲಿದೆ. ಅಲ್ಲದೆ, ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ಪ್ರತಿದಿನ 17,011.6 ಕೆ.ಜಿ ಯಷ್ಟು ಹೆಚ್ಚಳವಾಗಲಿದ್ದು, ಬೆಂಗಳೂರಿನ ಪರಿಸರದ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ರೆಡ್ ಲೈನ್ ವೆಚ್ಚ ಕಡಿತಕ್ಕೆ ಒಂದು ಸ್ಟೇಷನನ್ನೇ ಕೈಬಿಡಲು ನಿರ್ಧರಿಸಿದ ಬಿಎಂಆರ್​ಸಿಎಲ್!

ಒಟ್ಟಾರೆಯಾಗಿ ಈ ಯೋಜನೆಯು ಕೇಂದ್ರ ಸರ್ಕಾರದ ಸಮಗ್ರ ಸಾರಿಗೆ ನೀತಿ (CMP) ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ ಎಂದು ಐಐಎಸ್ಸಿ ವರದಿ ತಿಳಿಸಿದೆ. ಈ ವರದಿಯ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ಮುಂದಿನ ನಡೆ ತೀವ್ರ ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:07 am, Wed, 1 July 26

Source link

Horoscope Today: ಇಂದು ಈ ರಾಶಿಯವರಿಗೆ ಸ್ವಲ್ಪ ಖರ್ಚು ಹೆಚ್ಚಾಗುವ ಸಾಧ್ಯತೆ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜುಲೈ 01, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ.ಪರಾಭವನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸದ ಗ್ರೀಷ್ಮ ಋತು, ಕೃಷ್ಣ ಪಕ್ಷ, ಪಾಡ್ಯ, ಪೂರ್ವಾಷಾಢ ನಕ್ಷತ್ರದಲ್ಲಿ ಈ ದಿನ ಶುಭ ಯೋಗಗಳನ್ನು ಹೊಂದಿದೆ.

ಇಂದು ರಾಷ್ಟ್ರೀಯ ವೈದ್ಯರ ದಿನವಾಗಿದ್ದು, ವೈದ್ಯರನ್ನು ದೇವರಿಗೆ ಸಮಾನ ಎಂದು ಪರಿಗಣಿಸುವ ದಿನವಾಗಿದೆ. ಸೂರ್ಯ ಮಿಥುನ ರಾಶಿಯಲ್ಲಿ ಹಾಗೂ ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಜನಿಸಿದವರಿಗೆ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರಿಗೆ ಡಾ. ಬಸವರಾಜ ಗುರೂಜಿ ಅವರು ಶುಭ ಹಾರೈಸಿದ್ದಾರೆ. ರಾಹುಕಾಲ ಮಧ್ಯಾಹ್ನ 12:22 ರಿಂದ 1:58 ರವರೆಗೆ ಇರಲಿದ್ದು, ಶುಭಕಾಲ ಬೆಳಗ್ಗೆ 9:10 ರಿಂದ 10:46 ರವರೆಗೆ ಇರುತ್ತದೆ. ಈ ದಿನ ಮೇಷ ಮತ್ತು ವೃಷಭ ರಾಶಿಗಳಿಗೆ ವಿಶೇಷ ಫಲಾಫಲಗಳನ್ನು ವಿವರಿಸಲಾಗಿದೆ.

 

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಂದ ಆಸ್ತಿಯನ್ನು ಪಡೆಯುವ ಸಂದರ್ಭ ಬರಲಿದೆ… – Kannada News | Daily Horoscope for July 01, 2026: Uttarayan Greeshma season, jyeshtha Masa Krishna Paksha Wednesday astrology prediction by Lohitha Hebbar

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಆರ್ದ್ರಾ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಉತ್ತರಾಷಾಢಾ, ಯೋಗ : ಐಂದ್ರ, ಕರಣ : ಕೌಲವ, ಸೂರ್ಯೋದಯ – 05 – 58 am, ಸೂರ್ಯಾಸ್ತ – 06 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:24 – 13:59, ಯಮಗಂಡ ಕಾಲ 07:35 – 09:11, ಗುಳಿಕ ಕಾಲ 10:47 – 12:24

ಮೇಷ ರಾಶಿ :

ಮಂಗಲಕರವಾದ ಕಾರ್ಯಗಳನ್ನು ಮಾಡಲಿದ್ದೀರಿ. ಮನೆಯಲ್ಲಿಯೇ ಇರುವ ನಿಮಗೆ ಮನೆಯವರ ಮಾತುಗಳು ಕಿರಿಕಿರಿ‌ ಎನಿಸಬಹುದು. ನಿಮ್ಮ ಮಾತು ಜೊತೆಗಾರರಿಗೆ ಮನ ನೋಯುವಂತೆ ಇರಲಿದೆ. ನೀವು ಇಂದು ನಡೆದಾಡಲೂ ಇಷ್ಟಪಡುವುದಿಲ್ಲ. ಕಂಕಣಬಲ ಕೂಡಿ ಬರಲು ಯಾತ್ರೆ ಮಾಡುವಿರಿ. ನಿಮ್ಮನ್ನು ದಿಕ್ಕು ತಪ್ಪಿಸಿ ವೇಗವನ್ನು ಕಡಿಮೆ‌ ಮಾಡಿಸಬಹುದು. ನಿಮ್ಮ ಕಾರ್ಯದ ಮೇಲೆ ಕಾರಣಾಂತರಗಳಿಂದ ಗಮನವು ಕಡಿಮೆ ಆಗಬಹುದು. ಅಂತಃಕರಣದ ಒಪ್ಪಿಗೆಯಿಂದ ಕಾರ್ಯವನ್ನು ಮಾಡುವಿರಿ.

ವೃಷಭ ರಾಶಿ :

ನೀವು ಕೊಟ್ಟಿರುವ ಸಂಪತ್ತು ತಾನಾಗಿಯೇ ಬರಲಿದೆ. ದಾಂಪತ್ಯವು ಸುಖವಾಗಿರಲು ಇಬ್ಬರೂ ಪ್ರಯತ್ನಿಸಬೇಕು. ನಿಮ್ಮನ್ನು ಅರ್ಥಮಾಡಿಕೊಳ್ಳಲು ಜನರು ಬಹಳ ಪ್ರಯತ್ನಿಸಬಹುದು. ನಿಮ್ಮ ನಡೆಯು ಸುಲಭಕ್ಕೆ ತಿಳಿಯದು. ಐಷಾರಾಮಿಯಾಗಿ ಇರಲು ಈ ದಿನವನ್ನು ಇಷ್ಟಪಡುವಿರಿ. ನಿಮ್ಮ ಬಳಿ ಯಾರೂ ವಾದ‌ಮಾಡಬಾರದು ಎನ್ನವ ಸಂಗಾತಿಯನ್ನು ಕೆಲವು ವಿಷಯಕ್ಕೆ ದ್ವೇಷಿಸಬಹುದು. ಹಳೆಯ ವಿಚಾರವನ್ನು ಮತ್ತೆ ಕೆದಕುವಿರಿ. ಅಮೂಲ್ಯ ವಸ್ತುವನ್ನು ಖರೀದಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ.

ಮಿಥುನ ರಾಶಿ :

ಬಂಧುಗಳ ಮಾತು ಕಹಿ ಎನಿಸಬಹುದು. ನಿಮ್ಮ ಮನಸ್ಸನ್ನು ಕುಗ್ಗಿಸಬಹುದು. ಸಂಗಾತಿಯ ಅಸಂಬದ್ಧ ಮಾತುಗಳನ್ನು ಕೇಳಿ ನಿಮಗೆ ಬೇಸರವಾದೀತು. ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಿಯಿಂದ ಭಾಗವಹಿಸುವಿರಿ. ದುಷ್ಟ ಶಕ್ತಿಯಿಂದ ತೊಂದರೆಯಾಗುವ ಅನುಮಾನ ಕಾಡವುದು. ತಿದ್ದಿಕೊಳ್ಳುವ ಅಂಶಗಳನ್ನು ಗಮನಿಸುವುದು ಮುಖ್ಯವಾದೀತು. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಇರುವುದು ಕಷ್ಟವಾಗುವುದು. ಆಲಸ್ಯದಿಂದ ಕೆಲವು ಅನಿವಾರ್ಯ ಕಾರ್ಯವನ್ನು ಮಾಡಲಾರಿರಿ.

ಕರ್ಕಾಟಕ ರಾಶಿ :

ಹಳೆಯ ಸಿಟ್ಟನ್ನು ನೆನಪಿಸಿಕೊಂಡು ದ್ವೇಷವನ್ನು ಸಾಧಿಸುವ ಕೆಲಸವನ್ನು ಮಾಡಬೇಡಿ. ನಿಮ್ಮ ಹಳೆಯ ವಾಹನವನ್ನು ಮಾರಾಟಮಾಡುವ ಆಲೋಚನೆ ಮಾಡುವಿರಿ. ಎಲ್ಲವೂ ಗೊತ್ತಿದೆ ಎಂಬ ಅಹಂಕಾರವನ್ನು ತೋರಿಸುವಿರಿ. ಉದ್ಯೋಗದ ನಿಮಿತ್ತ ನೀವು ಹೊರದೇಶಕ್ಕೆ ಹೋಗಬಹುದು. ನಿಮ್ಮ‌ ಪರೀಕ್ಷೆಯನ್ನು ನೀವು ಮಾಡಿಕೊಳ್ಳುವುದು ಉತ್ತಮ. ಉನ್ನತ ಅಧಿಕಾರದ ಆಸೆಯನ್ನು ಸಹೋದ್ಯೋಗಿಗಳು ನಿಮಗೆ ತಿಳಿಸಬಹುದು. ಕಾನೂನಾತ್ಮಕ ವಿಚಾರವು ನಿಮಗೆ ಅರ್ಥವಾಗದಿರಬಹುದು.

ಸಿಂಹ ರಾಶಿ :

ಯಾರಾದರೂ ನಿಮ್ಮ ಶತ್ರುಗಳು ನಿಮ್ಮ ಏಳ್ಗೆಯನ್ನು ಸಹಿಸದೇ ತೊಂದರೆಗಳನ್ನು ಕೊಡಬಹುದು. ಮನೆಯ ಹಿರಿಯರ ಸೇವೆಯನ್ನು ಮಾಡುವಿರಿ. ಸರ್ಕಾರಿ ಉದ್ಯೋಗದವರಿಗೆ ಕಛೇರಿಯಲ್ಲಿ ಕಿರಿಕಿರಿಯಾಗಬಹುದು. ಕಂಟಕವನ್ನು ಲಘುವಾಗಿ ಕಾಣುವುದು ಬೇಡ. ಬಂಧುಗಳ ಮಾತಿನಿಂದ ಬೇಸರವಾದರೂ ಅದನ್ನು ತೋರಿಸಿಕೊಳ್ಳುವುದಿಲ್ಲ. ಇಂದು ಸ್ಥೈರ್ಯವನ್ನು ಕಳೆದುಕೊಳ್ಳುವಿರಿ. ನಿಮ್ಮಲ್ಲಿ ವಿದ್ಯೆ ಇರುವ ಕಾರಣ ಯಾವ ಸಂದರ್ಭಕ್ಕೂ ಹೆದರುವುದಿಲ್ಲ.

ಕನ್ಯಾ ರಾಶಿ :

ಹೊಸ ಕೆಲಸಗಳನ್ನು ಹುಡುಕಲು ಪ್ರಯತ್ನಿಸಿ‌. ಸಂಗಾತಿಯಿಂದ ಅಪಮಾನವೂ ಆಗಬಹುದು. ಆಸ್ತಿಯನ್ನು ಕಳೆದುಕೊಳ್ಳುವ ಸ್ಥಿತಿ ಬರಬಹುದು. ಆಗದ ಕೆಲಸಕ್ಕೆ ಸುಮ್ಮನೇ ಕೈ ಹಾಕಬೇಡಿ. ಅಧಿಕಾರಿಗಳಿಂದ ಏನಾದರೂ ತೊಂದರೆಯಾದೀತು. ಲೆಕ್ಕಪತ್ರವು ಇಂದು ಪರಿಶೀಲನಗೆ ಕೊಡಬೇಕಾಗುವುದು. ಅದೇ ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ. ನೇರವಾದ ಮಾತುಗಳು ನಿಮಗೆ ಒಪ್ಪಿಗೆ ಆಗದೇಹೋಗಬಹುದು. ಅಧಿಕ ಲಾಭಕ್ಕೆ ಯೋಜನೆಯನ್ನು ರೂಪಿಸುವುದು ಒಳ್ಳೆಯದು.

ತುಲಾ ರಾಶಿ:

ಎಲ್ಲರ ಜೊತೆ ಸಲುಗೆಯಿಂದ ಇರುವ ನಿಮ್ಮ ಬಗ್ಗೆ ಕೆಲವು ಅಪವಾದದ ಮಾತುಗಳು ಕೇಳಿಬರಬಹುದು. ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ಸಿಗುವ ಸಾಧ್ಯತೆ ಇದೆ. ಸಿಟ್ಟೇ ನಿಮ್ಮ ಶತ್ರುವಾಗಿ ಕಾಡಲಿದ್ದು, ಸಕಲ ಕಾರ್ಯಗಳಿಗೂ ಇದು ವಿಘ್ನವಾಗಲಿದೆ. ಮಾಡುವ ಕೆಲಸದಲ್ಲಿ ನಿಧಾನವಾಗಿ ಜಯ ಸಿಗಲಿದೆ. ಮಿತ್ರರಿಂದ ಧನದ ವಿಚಾರದಲ್ಲಿ ಮೋಸವಾಗಬಹುದು. ಏಕಾಂಗಿಯಾಗಿ ಸುತ್ತುವುದು ಇಷ್ಟವಾಗುವುದು. ‌ನಂಬಿಕೆಯನ್ನು ಉಳಿಸಿಕೊಳ್ಳುವುದು ಕಷ್ಟ.

ವೃಶ್ಚಿಕ ರಾಶಿ:

ಜೀವನದಲ್ಲಿ ಉತ್ತಮವಾದ ಗುರಿಯನ್ನು ಇಟ್ಟುಕೊಳ್ಳಲು ಯಾರಾದರೂ ಸಹಾಯ ಮಾಡುವರು. ದೀರ್ಘಾವಧಿಯ ಶಿಕ್ಷೆಯಿಂದ ಮುಕ್ತರಾಗಿ ಸ್ವತಂತ್ರತೆಯನ್ನು ಪಡೆಯುವಿರಿ. ನಿಮ್ಮೊಳಗೆ ಇಂದು ವಿಚಿತ್ರವಾದ ಕೆಲವು ಆಲೋಚನೆಗಳು ಬರಲಿದ್ದು, ನಿಮಗೇ ಆಶ್ಚರ್ಯವೆನಿಸುವಂತೆ ಮಾಡುವುದು. ಬಂಧುಗಳ ಮನೆಗೆ ಹೋಗಲಿದ್ದೀರಿ. ಕೆಲವನ್ನು ನೀವು ಬಿಡಲು ಸಾಧ್ಯವಾಗದು. ದಿನದ ಬಹಳ ಹೊತ್ತನ್ನು ಏಕಾಂತಸಲ್ಲಿ ಇರಬೇಕೆಂದು ನೀವಿಂದು ಬಯಸಬಹುದು.

ಧನು ರಾಶಿ:

ನಿಮ್ಮ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುವವರಿದ್ದಾರೆ. ಮಕ್ಕಳಿಂದ ಧನಸಹಾಯವನ್ನು ಪಡೆಯುವಿರಿ. ದೇವರಲ್ಲಿ ದೃಢವಾದ ಭಕ್ತಿಯನ್ನು ಇಟ್ಟುಕೊಳ್ಳುವುದು ಒಳ್ಳೆಯದು. ನಿಮ್ಮ ಆಲೋಚನೆಗಳು ಕಾರ್ಯರೂಪಕ್ಕೆ ಬರಬಹುದು. ವಾಹನ ಖರೀದಿಯನ್ನು ಮಾಡಲೇಬೇಕು ಎಂಬ ಗಟ್ಟಿ ನಿರ್ಧಾರವನ್ನು ಮಾಡಿಕೊಳ್ಳುವಿರಿ. ಒತ್ತಡಕ್ಕೆ ಮಣಿದು ಇಷ್ಟವಿಲ್ಲದ ಕೆಲಸವನ್ನು ಮಾಡಬೇಕಾಗುವುದು. ಬಂಧುಗಳಿಂದ ಆದ ಮನಸ್ತಾಪವನ್ನು ಮರೆಯಲಾರಿರಿ.

ಮಕರ ರಾಶಿ:

ಉಪಕಾರ ಮಾಡುವುದು ನಿಮಗೆ ಖುಷಿ ಕೊಡುವುದು. ಮಕ್ಕಳಿಂದ ನಿಮಗೆ ಖುಷಿಯಾಗಲಿದೆ. ನಿಮ್ಮ ಮಾತಿಗೆ ವಿರೋಧ ಉಂಟಾಗಬಹುದು. ಹೇಳಬೇಕಾದುದನ್ನು ಸ್ಪಷ್ಟವಾಗಿ ಹೇಳಿ. ನೆರಹೊರೆಯರ ಭೂಮಿಯ ವಿಚಾರಕ್ಕೆ ಮನಸ್ತಾಪ. ಕೆಲಸಗಳಿಂದ ಒತ್ತಡವು ಅತಿಯಾಗಬಹುದು, ಸಮಾಧಾನಚಿತ್ತದಿಂದ ಸ್ವೀಕರಿಸಿರಿ. ತಪ್ಪುಗಳಿಂದ ಪಶ್ಚಾತ್ತಾಪ ಆಗಬಹುದು. ಕೃಷಿಯ ವ್ಯವಹಾರದಲ್ಲಿ ಲಾಭವು ಬರವಂತೆ ಆಲೋಚನೆ ಮಾಡುವಿರಿ.

ಕುಂಭ ರಾಶಿ:

ಸಂಪಾದನೆಗೆ ನೂರು ದಾರಿಗಳಿದ್ದರೂ ನಿಮ್ಮ ಆಯ್ಕೆ ಸ್ಪಷ್ಟವೂ ಯೋಗ್ಯವೂ ಆಗಿರಬೇಕು. ಆಲಸ್ಯವೂ ಒಮ್ಮೆ ನಿಮ್ಮನ್ನು ರಕ್ಷಿಸುವುದು. ಸಾಮರ್ಥ್ಯದ ಬಗ್ಗೆ ಅಪನಂಬಿಕೆ ಇರಲಿದೆ. ನಿಮ್ಮ ಬಗ್ಗೆ ಋಣಾತ್ಮಕವಾದ ಮಾತುಗಳು ಕೇಳಿ ಬರಬಹುದು. ಅದನ್ನು ಧನಾತ್ಮಕವಾಗಿ ಮಾಡುವ ಛಲವು ನಿಮಗೆ ಇರಬೇಕಿದೆ. ಪರಿಸ್ಥಿತಿಗಳು ನಮ್ಮ‌ಅನುಕೂಲಕ್ಕೆ ತಕ್ಕಂತೆ ಇರದು. ನೀವು ಭವಿಷ್ಯಕ್ಕೆಂದು ರೂಪಿಸಿಕೊಂಡ ಯೋಜನೆಗೆ ಇನ್ನಷ್ಟು ಸ್ಪಷ್ಟತೆ ಬೇಕಿದೆ. ಮನೆಯವರ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ.

ಮೀನ ರಾಶಿ:

ಇರುವುದರಲ್ಲಿ ಖುಷಿಪಡುವುದು ಉತ್ತಮ. ಸಂಗಾತಿಯನ್ನು ಮುಚ್ಚಿಡಲು ಹೋಗಿ ಸೋಲುವಿರಿ. ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದ ಹಾಗೆ ದಿನವನ್ನು ರೂಪಿಸಿಕೊಳ್ಳಿ. ದುಸ್ಸಾಹಸವು ಒಳ್ಳೆಯದಲ್ಲ. ಅನಾಹುತದ ಭೀತಿ ಕಾಡುವುದು. ವಿದ್ಯಾರ್ಥಿಗಳು ಓದಿನ ಕಡೆ ಗಮನಕೊಟ್ಟರೂ ತಲೆಯ ಒಳಗೆ ಹೋಗದು. ಅತಿಯಾದ ನಂಬಿಕೆಯು ಹುಸಿಯಾದ ಕಾರಣ ಪಶ್ಚಾತ್ತಾಪಪಡುವಿರಿ. ನಿಮ್ಮೊಳಗೆ ಹೇಳಿಕೊಳ್ಳಲಾಗದ ಭಯವು ಕಾಣಿಸುವುದು.

-ಲೋಹಿತ್ ಹೆಬ್ಬಾರ್ – 8762924271 (what’s app only)

Source link

ಮುಂಬೈನಲ್ಲಿ ವರುಣನ ಆರ್ಭಟಕ್ಕೆ ಕೆರೆಯಂತಾದ ರಸ್ತೆಗಳು; ಜುಲೈ 4ರವರೆಗೆ ಭಾರೀ ಮಳೆಯ ಎಚ್ಚರಿಕೆ – Kannada News | Heavy rain causes waterlogging in Mumbai Roads IMD Issues orange alert till July 4th

ಮುಂಬೈ, ಜೂನ್ 30: ನೈಋತ್ಯ ಮುಂಗಾರು ಈಗ ಇಡೀ ಮಹಾರಾಷ್ಟ್ರ ರಾಜ್ಯವನ್ನು ಆವರಿಸಿಕೊಂಡಿದ್ದು, ಮುಂಬರುವ ದಿನಗಳಲ್ಲಿ ತೀವ್ರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ರಾಜ್ಯಾದ್ಯಂತ ಮುನ್ನೆಚ್ಚರಿಕೆ ನೀಡಿದೆ. ಭಾರೀ ಮಳೆಯಿಂದಾಗಿ ಮುಂಬೈನ (Mumbai Rains) ರಸ್ತೆಗಳಲ್ಲಿ ಮಳೆನೀರು ತುಂಬಿದ್ದು, ಕೆರೆಯಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ವಾಹನ ಸವಾರರು, ಪಾದಚಾರಿಗಳು ಸಂಚರಿಸಲು ಪರದಾಡುವಂತಾಗಿದೆ.

ಸಾಮಾನ್ಯವಾಗಿ ಜೂನ್ 11ರ ಸುಮಾರಿಗೆ ಮುಂಬೈ ಪ್ರವೇಶಿಸಬೇಕಿದ್ದ ಮುಂಗಾರು, ಈ ವರ್ಷ ಒಂದು ವಾರಕ್ಕೂ ಹೆಚ್ಚು ತಡವಾಗಿ ಆಗಮಿಸಿದ್ದರಿಂದ ಮುಂಬೈ ಜನತೆ ದೀರ್ಘಕಾಲ ಕಾಯಬೇಕಾಯಿತು. ಮುಂಬರುವ ದಿನಗಳಲ್ಲಿ ವ್ಯಾಪಕ ಮತ್ತು ಅತ್ಯಂತ ತೀವ್ರವಾದ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ರಾತ್ರಿಯಿಡೀ ಸುರಿದ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡು, ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ.

ಜುಲೈ 1ರಿಂದ ಜುಲೈ 4 ರವರೆಗಿನ ಅವಧಿಯಲ್ಲಿ ಮಳೆಯ ಮುನ್ನೆಚ್ಚರಿಕೆಯ ತೀವ್ರತೆಯನ್ನು ಹೆಚ್ಚಿಸಲಾಗಿದ್ದು, ಮುಂಬೈನ ಕೆಲವು ಪ್ರದೇಶಗಳಲ್ಲಿ ‘ಅತಿ ಭಾರಿ’ ಮಳೆಯಾಗುವ ಸಾಧ್ಯತೆಯಿದೆ. ಈ ಕಾರಣಕ್ಕಾಗಿ ಹವಾಮಾನ ಇಲಾಖೆಯು ಈ ಅವಧಿಗೆ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಅದರಲ್ಲೂ ಜುಲೈ 3ರಂದು ಅತ್ಯಂತ ತೀವ್ರವಾದ ಮಳೆಯಾಗುವ ಮುನ್ಸೂಚನೆಯಿದೆ ಎಂದು ಐಎಂಡಿ ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜು.1ರಿಂದ ಗೃಹ ಜ್ಯೋತಿ ಯೋಜನೆ ಪರಿಶೀಲನೆ: ನಿಮ್ಮ ಮನೆಗೆ ಬರುವ ಸಿಬ್ಬಂದಿಗೆ ಯಾವೆಲ್ಲಾ ದಾಖಲೆ ತೋರಿಸ್ಬೇಕು? – Kannada News | Gruha Jyoti scheme review begins from July 1st, here Is Details Which documents required

ಬೆಂಗಳೂರು, (ಜೂನ್ 30): ಗ್ಯಾರಂಟಿ ಯೋಜನೆಗಳಲ್ಲಿ (guarantee schemes) ಆಗುತ್ತಿರುವ ಅಕ್ರಮಗಳನ್ನು ತಡೆದು, ಕೇವಲ ಅರ್ಹರಿಗೆ ಮಾತ್ರ ಯೋಜನೆಯ ಫಲ ತಲುಪಿಸಲು ಕರ್ನಾಟಕ ಕಾಂಗ್ರೆಸ್ ಸರ್ಕಾರ (Karnataka Congress Government)  ಮುಂದಾಗಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳಲ್ಲಿ ಫಿಲ್ಟರ್ ಕಾರ್ಯ ನಡೆದಿದ್ದು, ಅರ್ಹರಿಗೆ ಅಷ್ಟೇ ಸೌಲಭ್ಯ ದೊರೆಯಲಿದೆ. ಹೌದು..ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ ಯೋಜನೆಯ (gruha jyothi scheme) ಫಲಾನುಭವಿಗಳ ಮನೆ – ಮನೆ ಪರಿಶೀಲನೆ ಕಾರ್ಯವನ್ನು ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಜುಲೈ 1 ರಿಂದ ಕೈಗೊಳ್ಳಲಿದ್ದಾರೆ.

ಎಸ್ಕಾಂ ಸಿಬ್ಬಂದಿ ಮನೆ-ಮನೆ ಭೇಟಿ

ಮೊಬೈಲ್ ಆಪ್ ಹಾಗೂ ಘೋಷಣಾ ಪತ್ರ ಮೂಲಕ ಅರ್ಜಿ ಭರ್ತಿ ಪ್ರಕ್ರಿಯೆನ್ನು ಪೂರ್ಣಗೊಳಿಸಲಿದ್ದು,
ಎಸ್ಕಾಂ ಸಿಬ್ಬಂದಿ ಮನೆ-ಮನೆ ಭೇಟಿ ಸಂದರ್ಭದಲ್ಲಿ ಆಧಾರ್ ಕಾರ್ಡ್, ಫಲಾನುಭವಿಯ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ (ವೋಟರ್ ಐಡಿ), ಪ್ಯಾನ್ ಕಾರ್ಡ್, ಬಾಡಿಗೆ ಒಪ್ಪಂದದ ಪತ್ರಗಳು (ಅನ್ವಯಿಸುವಲ್ಲಿ ಮಾತ್ರ) , ರೇಷನ್ ಕಾರ್ಡ್ ಹಾಗೂ ಜಾತಿ ಪ್ರಮಾಣ ಪತ್ರ ವನ್ನು ತೋರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

ಯಾವೆಲ್ಲಾ ದಾಖಲೆ ತೋರಿಸಬೇಕು?

ಎಸ್ಕಾಂ ಸಿಬ್ಬಂದಿ ಮನೆ-ಮನೆ ಭೇಟಿ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ಸಿಬ್ಬಂದಿಗೆ ತೋರಿಸಲು ಬೆಸ್ಕಾಂ ವಿನಂತಿಸಿಕೊಂಡಿದೆ. ಆಧಾರ್ ಕಾರ್ಡ್, ಫಲಾನುಭವಿಯ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ (ವೋಟರ್ ಐಡಿ), ಪ್ಯಾನ್ ಕಾರ್ಡ್, ಬಾಡಿಗೆ ಒಪ್ಪಂದದ ಪತ್ರಗಳು (ಅನ್ವಯಿಸುವಲ್ಲಿ ಮಾತ್ರ) , ರೇಷನ್ ಕಾರ್ಡ್ ಹಾಗೂ ಜಾತಿ ಪ್ರಮಾಣ ಪತ್ರವನ್ನು ತೋರಿಸಲು ಕೋರಿದೆ.

ಈ ಪ್ರಕ್ರಿಯೆಗೆ ಮೀಟರ್ ರೀಡರ್ ಮೂಲಕ ಸ್ಥಳದಲ್ಲೇ ಪರಿಶೀಲನೆ ಮಾಡುವುದು ಏಕೈಕ ಮಾರ್ಗವಾಗಿದ್ದು, ಗ್ರಾಹಕರು ಮತ್ತು ಫಲಾನುಭವಿಗಳು ಮೀಟರ್ ರೀಡರ್ ಗಳಿಗೆ ಸಂಪೂರ್ಣ ಸಹಕಾರ ನೀಡಿ, ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇಂಧನ ಇಲಾಖೆ ಮನವಿ ಮಾಡಿದೆ.

ಗೃಹ ಬಳಕೆದಾರರಿಗೆ ಮಾತ್ರ ಅನ್ವಯ

ರಾಜ್ಯದ ಪ್ರತಿಯೊಂದು ಮನೆಗೆ ಪ್ರತಿ ತಿಂಗಳು ಗರಿಷ್ಠ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದು ಗೃಹಜ್ಯೋತಿ ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಈ ಯೋಜನೆಯು ಕೇವಲ ಗೃಹ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ಉದ್ದೇಶದ ಮಳಿಗೆಗಳಿಗೆ ಇದು ಅನ್ವಯಿಸುವುದಿಲ್ಲ. ಜತೆಗೆ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಬಾಡಿಗೆ ಮನೆಯಲ್ಲಿ ವಾಸಿಸುವವರು ಕೂಡ ಈ ಯೋಜನೆಯ ಲಾಭ ಪಡೆಯಬಹುದು. ಒಂದು ಆಧಾರ್ ಕಾರ್ಡ್ ಸಂಖ್ಯೆಗೆ ಕೇವಲ ಒಂದು ಮೀಟರ್‌ಗೆ ಮಾತ್ರ ರಿಯಾಯಿತಿ ಸಿಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ; ಇರಾನ್ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಸಲಹೆ – Kannada News | PM Modi speaks with Iran President amid West Asia crisis reiterates Indias call for diplomacy

ನವದೆಹಲಿ, ಜೂನ್ 30: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ದೂರವಾಣಿ ಮೂಲಕ ಮಹತ್ವದ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಉಭಯ ನಾಯಕರು ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಚರ್ಚಿಸಿದರು. ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಆ ಪ್ರದೇಶದ ಪ್ರಸ್ತುತ ಪರಿಸ್ಥಿತಿ ಬಗ್ಗೆ ಪ್ರಧಾನಮಂತ್ರಿ ಮೋದಿಗೆ (PM Modi) ವಿವರಣೆ ನೀಡಿದರು.

ಈ ಮಾತುಕತೆಯ ಸಂದರ್ಭದಲ್ಲಿ, ಪಶ್ಚಿಮ ಏಷ್ಯಾದಲ್ಲಿ ಇತ್ತೀಚೆಗೆ ಮೂಡಿಬಂದಿರುವ ಒಮ್ಮತದ ನಿರ್ಧಾರವನ್ನು ಪ್ರಧಾನಿ ಮೋದಿ ಸ್ವಾಗತಿಸಿದರು. ಎಲ್ಲಾ ಸಮಸ್ಯೆಗಳನ್ನು ಕೇವಲ ರಾಜತಾಂತ್ರಿಕತೆ ಮತ್ತು ಶಾಂತಿಯುತ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂಬ ಭಾರತದ ದೀರ್ಘಕಾಲೀನ ನಿಲುವನ್ನು ಅವರು ಮತ್ತೊಮ್ಮೆ ಪುನರುಚ್ಚರಿಸಿದರು. ಪ್ರಾದೇಶಿಕ ಸವಾಲುಗಳನ್ನು ಎದುರಿಸಲು ಶಾಂತಿಯುತ ಒಡನಾಟ ಅತ್ಯಂತ ಪ್ರಮುಖವಾಗಿದೆ ಎಂದು ಅವರು ಒತ್ತಿಹೇಳಿದರು.

ಇದನ್ನೂ ಓದಿ: ಇರಾನ್​ನಲ್ಲಿ ಖಮೇನಿ ಅಂತ್ಯಕ್ರಿಯೆ; ಭಾರತದ ಪರವಾಗಿ ಬಿಹಾರದ ರಾಜ್ಯಪಾಲ, ಸಚಿವ ಪವಿತ್ರ ಮಾರ್ಗರಿಟಾ ಭಾಗಿ

ಶಾಶ್ವತ ಶಾಂತಿ ಮತ್ತು ಪ್ರಾದೇಶಿಕ ಸ್ಥಿರತೆಗೆ ಕರೆ:

ಪಶ್ಚಿಮ ಏಷ್ಯಾದಲ್ಲಿ ಶಾಶ್ವತ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ನಿರಂತರ ಪ್ರಯತ್ನಗಳ ಅಗತ್ಯವನ್ನು ಪ್ರಧಾನಿ ಒತ್ತಿಹೇಳಿದರು. ಇದಲ್ಲದೆ, ಸಮುದ್ರಯಾನದ ಸ್ವಾತಂತ್ರ್ಯ ಮತ್ತು ವಾಣಿಜ್ಯ ಹಡಗುಗಳ ಸಂಚಾರದ ಸುರಕ್ಷತೆಯನ್ನು ಕಾಪಾಡುವ ಮಹತ್ವವನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಭೀಕರ ಸಂಘರ್ಷ: ಶಾಂತಿ ಒಪ್ಪಂದವಾದ ಕೆಲವೇ ದಿನಗಳಲ್ಲಿ ಅಮೆರಿಕ-ಇರಾನ್ ಮುಖಾಮುಖಿ ದಾಳಿ

ಹಾರ್ಮುಜ್ ಜಲಸಂಧಿಯ ಸುತ್ತಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಅಮೆರಿಕ ಮತ್ತು ಇರಾನ್ ದೇಶಗಳು ಕತಾರ್‌ನ ದೋಹಾದಲ್ಲಿ ಮತ್ತೊಂದು ಸುತ್ತಿನ ಉನ್ನತ ಮಟ್ಟದ ಮಾತುಕತೆಗೆ ಸಜ್ಜಾಗುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಫೋನ್ ಕರೆ ಮಾಡಿದ್ದಾರೆ. ವರದಿಗಳ ಪ್ರಕಾರ, ಮಾತುಕತೆ ಮುಂದುವರಿಯುವವರೆಗೆ ಉಭಯ ದೇಶಗಳು ಪರಸ್ಪರರ ವಿರುದ್ಧದ ದಾಳಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಒಪ್ಪಿಕೊಂಡಿವೆ. ಈ ಮಾತುಕತೆಯು ಪ್ರಮುಖವಾಗಿ ಕಡಲ ಭದ್ರತೆ, ಹಾರ್ಮುಜ್ ಜಲಸಂಧಿಯ ಮೂಲಕ ವಾಣಿಜ್ಯ ಹಡಗುಗಳ ಸಂಚಾರ, ಆರ್ಥಿಕ ನಿರ್ಬಂಧಗಳು ಮತ್ತು ಇತರ ಬಾಕಿ ಉಳಿದಿರುವ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವ ನಿರೀಕ್ಷೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೆಟ್ರೋ ನಿಲ್ದಾಣಗಳಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಲು ಆದೇಶ: ರಾಜ್ಯದಲ್ಲಿ 1,000 ವೈದ್ಯರ ಕೊರತೆಗೆ ಗುತ್ತಿಗೆ ನೇಮಕಾತಿ ಪರಿಹಾರ ಎಂದ ಸಚಿವ ಯು.ಟಿ. ಖಾದರ್ – Kannada News | Karnataka Health Sector Insights: Khader Addresses KFD, Staffing and Palliative Care

ದೆಹಲಿ, ಜೂ.30: ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಕರ್ನಾಟಕದ ಆರೋಗ್ಯ ಕ್ಷೇತ್ರದ ಪ್ರಮುಖ ಸವಾಲುಗಳು ಮತ್ತು ಅವುಗಳ ಪರಿಹಾರಗಳ ಕುರಿತು ಮಾತನಾಡಿದರು. ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಂತಹ ಪ್ರದೇಶಗಳಲ್ಲಿ ವ್ಯಾಪಕವಾಗಿರುವ ಮಂಗನ ಕಾಯಿಲೆಗೆ (KFD) ಲಸಿಕೆ ಅಭಿವೃದ್ಧಿಪಡಿಸುವ ತುರ್ತು ಅಗತ್ಯವನ್ನು ಅವರು ಒತ್ತಿ ಹೇಳಿದರು. ಐಸಿಎಂಆರ್‌ಗೆ ಈ ಕುರಿತು ಶೀಘ್ರ ಸಂಶೋಧನೆ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದರು. ಅಲ್ಲದೆ, ಕ್ಯಾನ್ಸರ್‌ನಂತಹ ಅಸಾಧ್ಯ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ, ವಿಶೇಷವಾಗಿ ಮಕ್ಕಳಿಂದ ವೃದ್ಧರವರೆಗೆ, “ಡಿಗ್ನಿಟಿ ಆಫ್ ಡೆತ್” ಅಂದರೆ ನೋವುರಹಿತ ಮತ್ತು ನೆಮ್ಮದಿಯ ಜೀವನವನ್ನು ಕೊನೆಯ ಕ್ಷಣದವರೆಗೂ ಒದಗಿಸುವ ವಾತಾವರಣ ಸೃಷ್ಟಿಸುವ ಕುರಿತು ಸಚಿವರು ಪ್ರಸ್ತಾಪಿಸಿದರು. ಮೆಟ್ರೋ ನಿಲ್ದಾಣಗಳಲ್ಲಿ ತುರ್ತು ಪ್ರಥಮ ಚಿಕಿತ್ಸಾ ಸೌಲಭ್ಯಗಳನ್ನು, ಸ್ಟ್ರೆಚರ್, ಆಕ್ಸಿಜನ್ ಮತ್ತು ಸ್ಟಾಫ್ ನರ್ಸ್ ಒಳಗೊಂಡಂತೆ ಒದಗಿಸಬೇಕು ಎಂದು ಮೆಟ್ರೋ ಅಧಿಕಾರಿಗಳಿಗೆ ಸಲಹೆ ನೀಡಿದರು. ರಾಜ್ಯದಲ್ಲಿ 900-1000 ಎಂಬಿಬಿಎಸ್ ವೈದ್ಯರ ಕೊರತೆ ಇದೆ. ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬ ಮತ್ತು ಕೆಲವು ವೈದ್ಯರು ಆದ್ಯತೆಯ ಸ್ಥಳ ಸಿಗದ ಕಾರಣ ಸೇರಿಕೊಳ್ಳದಿರುವುದು ಇದಕ್ಕೆ ಕಾರಣ. ಈ ಸಮಸ್ಯೆಗೆ ಗುತ್ತಿಗೆ ಆಧಾರದ ನೇಮಕಾತಿ ಉತ್ತಮ ಪರಿಹಾರವಾಗಬಹುದು ಎಂದು ಖಾದರ್ ಅಭಿಪ್ರಾಯಪಟ್ಟರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರೇಣುಕಾಸ್ವಾಮಿ ಕೇಸ್: 17ನೇ ಸಾಕ್ಷಿಗೆ ಬೆದರಿಕೆ ಕರೆ; ಭದ್ರತೆ ನೀಡಲು ಕೋರ್ಟ್ ಆದೇಶ – Kannada News | Renukaswamy Case Court orders police protection for 17th witness after Threat Calls

ನಟ ದರ್ಶನ್ (Darshan), ಪವಿತ್ರಾ ಗೌಡ ಮುಂತಾದವರು ಪ್ರಮುಖ ಆರೋಪಿಗಳಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದ (Renukaswamy Case) ತನಿಖೆಯಲ್ಲಿ ಈಗ ಒಂದು ಅತ್ಯಂತ ಸ್ಫೋಟಕ ತಿರುವು ಸಿಕ್ಕಿದೆ. ಪ್ರಕರಣದ 17ನೇ ಸಾಕ್ಷಿಗೆ ಅಪರಿಚಿತರಿಂದ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಆ ಸಾಕ್ಷಿಗೆ ತಕ್ಷಣವೇ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ನ್ಯಾಯಾಲಯವು ತನಿಖಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗಿದ್ದ 17ನೇ ಸಾಕ್ಷಿಯು ತನಗೆ ಎದುರಾಗಿರುವ ಆತಂಕವನ್ನು ಕೋರ್ಟ್ ಮುಂದೆ ತೋಡಿಕೊಂಡಿದ್ದಾರೆ. ‘ಕೆಲವು ಅಪರಿಚಿತ ವ್ಯಕ್ತಿಗಳು ತನಗೆ ಫೋನ್ ಕರೆಗಳನ್ನು ಮಾಡುತ್ತಿದ್ದಾರೆ. ನ್ಯಾಯಾಲಯದಲ್ಲಿ ನಾವು ಹೇಳಿದಂತೆಯೇ ಸಾಕ್ಷ್ಯ ನುಡಿಯಬೇಕು ಎಂದು ಒತ್ತಡ ಹೇರುತ್ತಿದ್ದಾರೆ’ ಎಂದು ಸಾಕ್ಷಿಯು ಜಡ್ಜ್ ಎದುರು ಕಳವಳ ವ್ಯಕ್ತಪಡಿಸಿದ್ದಾರೆ.

ಸಾಕ್ಷಿಯ ಈ ಆಘಾತಕಾರಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು, ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ತನಿಖಾಧಿಕಾರಿಗೆ ನಿರ್ದೇಶನ ನೀಡಿದೆ. ತಮಗೆ ಬಂದಿರುವ ಬೆದರಿಕೆ ಕರೆಗಳು ಹಾಗೂ ಒತ್ತಡದ ಕುರಿತು ಸಂಪೂರ್ಣ ವಿವರಗಳನ್ನು ಒಳಗೊಂಡ ಅಫಿಡವಿಟ್ (ಪ್ರಮಾಣಪತ್ರ) ಒಂದನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ 17ನೇ ಸಾಕ್ಷಿಗೆ ನ್ಯಾಯಾಧೀಶರು ಸೂಚಿಸಿದ್ದಾರೆ. ಈ ಮೂಲಕ ಬೆದರಿಕೆ ಹಾಕುತ್ತಿರುವವರ ಪತ್ತೆಗೆ ಕಾನೂನು ಪ್ರಕ್ರಿಯೆ ಚುರುಕುಗೊಳಿಸಲು ಕೋರ್ಟ್ ಮುಂದಾಗಿದೆ.

‘ಪ್ರಕರಣದ ಸಾಕ್ಷ್ಯಗಳನ್ನು ನಾಶಪಡಿಸಲು ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸುವವರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ನ್ಯಾಯಾಲಯ ಖಡಕ್ ಎಚ್ಚರಿಕೆ ನೀಡಿದೆ. 17ನೇ ಸಾಕ್ಷಿಗೆ ಬೆದರಿಕೆ ಹಾಕುತ್ತಿರುವವರು ಯಾರು ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಕೊರೆಯುತ್ತಿದೆ. ಬೆದರಿಕೆ ಹಾಕಿದವರು ಪತ್ತೆಯಾದರೆ ಕೇಸ್​ಗೆ ದೊಡ್ಡ ತಿರುವು ಸಿಗಲಿದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ

ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರರು ಆರೋಪಿಗಳಾಗಿರುವ ಈ ಹೈಪ್ರೊಫೈಲ್ ಕೊಲೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ತ್ವರಿತವಾಗಿ ನಡೆಸಲಾಗುತ್ತಿದ್ದು, ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಿರುವ ಘಟನೆ ಕಾನೂನು ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗಾಯಕಿಯಾದ ಪತ್ನಿ ಶಿಲ್ಪಾ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಗಣೇಶ್ ಕಾಮಿಡಿ ಮಾತು – Kannada News | Golden Star Ganesh talks about wife Shilpa singing debut in Picture Tulu Kannada movie

ನಟ ಗಣೇಶ್ (Golden Star Ganesh) ಅವರು ‘ಪಿಕ್ಚರ್’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಇಂದು ನಮ್ಮ ಪ್ರೊಡಕ್ಷನ್ ಸಿನಿಮಾದ ಸುದ್ದಿಗೋಷ್ಠಿಗೆ ಬಂದಿದ್ದೇನೆ. ಒಳ್ಳೆಯ ಕಥೆ ಸಿಕ್ಕರೆ ತುಳು-ಕನ್ನಡ ಸಿನಿಮಾ ಮಾಡೋಣ ಅಂದುಕೊಂಡಿದ್ದೆ. ಆಪ್ತರಿಂದ ಈ ಕಥೆ ಬಗ್ಗೆ ತಿಳಿಯಿತು. ಈ ಕಥೆಯಲ್ಲಿ ಕೌಟುಂಬಿಕ ಅಂಶ ಇದೆ. ಹಾಸ್ಯವೂ ಇದೆ. ಬಜೆಟ್ ಜಾಸ್ತಿ ಬೇಕು ಅಂತ ನನಗೆ ಮೊದಲೇ ಅನಿಸಿತು. ಹಾಗಾಗಿ ಎರಡು ಭಾಷೆಯಲ್ಲಿ ಮಾಡಲು ನಿರ್ಧರಿಸಿದೆವು. ಎಲ್ಲರೂ ಪ್ರೀತಿಯಿಂದ ಸಿನಿಮಾದ ಕೆಲಸ ಮಾಡಿಕೊಟ್ಟರು’ ಎಂದು ಗಣೇಶ್ ಹೇಳಿದರು. ಈ ಚಿತ್ರದಲ್ಲಿ ಗಣೇಶ್ ಪತ್ನಿ ಶಿಲ್ಪಾ ಅವರು ಹಾಡಿದ್ದಾರೆ. ‘ಒಬ್ಬರು ಅದ್ಭುತ ಗಾಯಕಿಯನ್ನು ನಾವು ಈ ಸಿನಿಮಾದಲ್ಲಿ ಪರಿಚಯಿಸಿದ್ದೇವೆ. ತುಂಬಾ ಚೆನ್ನಾಗಿ ಹಾಡಿದ್ದಾರೆ. ಮನೆಯಲ್ಲಿ ಅವರ ಎಲ್ಲ ರಾಗಗಳನ್ನು ಕೇಳಿಸಿಕೊಂಡಿದ್ದೇನೆ’ ಎಂದು ಗಣೇಶ್ ಹೇಳುತ್ತಿದ್ದಂತೆಯೇ ಶಿಲ್ಪಾ ನಕ್ಕರು. ಜುಲೈ 24ರಂದು ಈ ಸಿನಿಮಾ ರಿಲೀಸ್ ಆಗಲಿದೆ ಎಂದು ಗಣೇಶ್ ಮಾಹಿತಿ ಹಂಚಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟ್ರಂಪ್‌ಗೆ ಭಾರಿ ಹಿನ್ನಡೆ; ಜನ್ಮಸಿದ್ಧ ಪೌರತ್ವ ಕಾಯ್ದೆ ಎತ್ತಿಹಿಡಿದ ಅಮೆರಿಕದ ಸುಪ್ರೀಂ ಕೋರ್ಟ್ – Kannada News | Setback For Trump; US Supreme Court Upholds Birthright Citizenship, Rejects Trump’s order

ವಾಷಿಂಗ್ಟನ್, ಜೂನ್ 30: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶಕ್ಕೆ ತೀವ್ರ ಹಿನ್ನಡೆ ಉಂಟುಮಾಡುವ ಮಹತ್ವದ ತೀರ್ಪನ್ನು ಯುಎಸ್ ಸುಪ್ರೀಂ ಕೋರ್ಟ್ ನೀಡಿದ್ದು, ‘ಜನ್ಮಸಿದ್ಧ ಪೌರತ್ವ’ವನ್ನು (Birthright Citizenship) ಎತ್ತಿಹಿಡಿದಿದೆ. ಈ ಮೂಲಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ವಿರೋಧಿ ನೀತಿಗಳಿಗೆ ಯುಎಸ್ ಸುಪ್ರೀಂ ಕೋರ್ಟ್ ಭಾರಿ ಹೊಡೆತ ನೀಡಿದೆ. ಅಮೆರಿಕದ ಮಣ್ಣಿನಲ್ಲಿ ಜನಿಸುವ ಮಕ್ಕಳಿಗೆ ಅಲ್ಲಿನ ಪೌರತ್ವ ನೀಡುವ ದಶಕಗಳ ಹಳೆಯ ‘ಜನ್ಮಸಿದ್ಧ ಪೌರತ್ವ’ ಹಕ್ಕನ್ನು ರದ್ದುಗೊಳಿಸಲು ಟ್ರಂಪ್ ಹೊರಡಿಸಿದ್ದ ಕಾರ್ಯಕಾರಿ ಆದೇಶವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

ಅಮೆರಿಕ ಸಂವಿಧಾನದ ಆಧಾರ ಸ್ತಂಭಗಳಲ್ಲಿ ಒಂದಾದ ಈ ನಿಯಮವನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿಹಿಡಿದಿರುವುದು ವಲಸಿಗರು, ಅದರಲ್ಲೂ ವಿಶೇಷವಾಗಿ ಭಾರತೀಯ ಮೂಲದ ಲಕ್ಷಾಂತರ ಜನರಿಗೆ ದೊಡ್ಡ ಸಮಾಧಾನ ತಂದಿದೆ.

ಏನಿದು ಪ್ರಕರಣ?:

ಅಮೆರಿಕದಲ್ಲಿ ಕಾನೂನುಬದ್ಧವಾಗಿ ಅಥವಾ ಕಾನೂನುಬಾಹಿರವಾಗಿ ವಾಸಿಸುತ್ತಿರುವ ವಿದೇಶಿಯರ ಮಕ್ಕಳು ಅಮೆರಿಕದ ಮಣ್ಣಿನಲ್ಲಿ ಜನಿಸಿದರೆ, ಅವರಿಗೆ ಸಂವಿಧಾನದ ಪ್ರಕಾರ ‘ಜನ್ಮಸಿದ್ಧ ಪೌರತ್ವ’ ಸಿಗುತ್ತದೆ. ಇದನ್ನು ತಡೆಯಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರ್ಯಕಾರಿ ಆದೇಶವೊಂದನ್ನು ಹೊರಡಿಸಿದ್ದರು. ಅನಧಿಕೃತ ವಲಸಿಗರು ಮತ್ತು ತಾತ್ಕಾಲಿಕ ವೀಸಾಗಳ ಮೇಲೆ ಬಂದಿರುವವರ ಮಕ್ಕಳಿಗೆ ಈ ಹಕ್ಕನ್ನು ನಿರಾಕರಿಸುವುದು ಅವರ ಉದ್ದೇಶವಾಗಿತ್ತು.

ಇದನ್ನೂ ಓದಿ: Birthright Citizenship: ಅಮೆರಿಕ: ಹುಟ್ಟಿನಿಂದಲೇ ಸಿಗುವ ಪೌರತ್ವ ಕೊನೆಗೊಳಿಸುವ ಆದೇಶಕ್ಕೆ ಕೋರ್ಟ್​ ತಡೆ

ಟ್ರಂಪ್ ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಹಲವಾರು ಮಾನವ ಹಕ್ಕುಗಳ ಸಂಘಟನೆಗಳು ಮತ್ತು ನಾಗರಿಕ ಹಕ್ಕುಗಳ ಒಕ್ಕೂಟಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಅಮೆರಿಕ ಸಂವಿಧಾನದ 14ನೇ ತಿದ್ದುಪಡಿಯು ಆ ದೇಶದಲ್ಲಿ ಜನಿಸುವ ಪ್ರತಿಯೊಬ್ಬರಿಗೂ ಪೌರತ್ವದ ಹಕ್ಕನ್ನು ಖಾತರಿಪಡಿಸುತ್ತದೆ. ಹೀಗಾಗಿ, ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, “ಸಂವಿಧಾನದ ಈ ಆಶಯವನ್ನು ಬದಲಾಯಿಸುವ ಅಥವಾ ನಿರ್ಬಂಧಿಸುವ ಅಧಿಕಾರ ಅಧ್ಯಕ್ಷರ ಕಾರ್ಯಕಾರಿ ಆದೇಶಕ್ಕೆ ಇಲ್ಲ” ಎಂದು ಸ್ಪಷ್ಟಪಡಿಸಿದೆ.

ನ್ಯಾಯಾಲಯವು 1898ರ ಐತಿಹಾಸಿಕ ‘ಯುನೈಟೆಡ್ ಸ್ಟೇಟ್ಸ್ ವಿರುದ್ಧ ವಾಂಗ್ ಕಿಮ್ ಆರ್ಕ್’ ಪ್ರಕರಣವನ್ನು ಉಲ್ಲೇಖಿಸಿದೆ. ಆ ತೀರ್ಪಿನಲ್ಲೂ ಚೀನೀ ಪೋಷಕರಿಗೆ ಅಮೆರಿಕದಲ್ಲಿ ಜನಿಸಿದ ಮಗುವಿಗೆ ಪೌರತ್ವವನ್ನು ಇದೇ 14ನೇ ತಿದ್ದುಪಡಿಯ ಅಡಿಯಲ್ಲಿ ಎತ್ತಿಹಿಡಿಯಲಾಗಿತ್ತು.

ಇದನ್ನೂ ಓದಿ: ಇರಾನ್ ಮನವಿ ಮಾಡಿದ್ದರಿಂದ ನಾಳೆ ದೋಹಾದಲ್ಲಿ ಮಾತುಕತೆ; ಅಮೆರಿಕ ಅಧ್ಯಕ್ಷ ಟ್ರಂಪ್ ಮಾಹಿತಿ

ಭಾರತೀಯರಿಗೆ ಇದರಿಂದ ಆಗುವ ಲಾಭವೇನು?:

ಅಮೆರಿಕದಲ್ಲಿ ಎಚ್-1ಬಿ (H-1B), ಎಲ್-1 (L-1) ನಂತಹ ತಾತ್ಕಾಲಿಕ ಕೆಲಸದ ವೀಸಾಗಳ ಮೇಲೆ ವಾಸಿಸುತ್ತಿರುವ ಸಾವಿರಾರು ಭಾರತೀಯ ಐಟಿ ಉದ್ಯೋಗಿಗಳಿಗೆ ಈ ತೀರ್ಪು ನಿರಾಳತೆ ತಂದಿದೆ. ಅವರ ಗ್ರೀನ್ ಕಾರ್ಡ್ ಪ್ರಕ್ರಿಯೆಯು ಬಾಕಿ ಉಳಿದಿದ್ದರೂ, ಅಮೆರಿಕದಲ್ಲಿ ಜನಿಸುವ ಅವರ ಮಕ್ಕಳಿಗೆ ಸಿಗುವ ಪೌರತ್ವದ ಹಕ್ಕಿಗೆ ಈಗ ಯಾವುದೇ ಕಾನೂನು ತೊಂದರೆ ಉಂಟಾಗುವುದಿಲ್ಲ.

ಟ್ರಂಪ್ ಸರ್ಕಾರದ ಪ್ರತಿಕ್ರಿಯೆ:

ಸುಪ್ರೀಂ ಕೋರ್ಟ್ ತೀರ್ಪಿಗೆ ಡೊನಾಲ್ಡ್ ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಿಯಮದಿಂದಾಗಿ ಬೇರೆ ದೇಶಗಳ ಜನರು ಕೇವಲ ಪೌರತ್ವ ಪಡೆಯುವ ಉದ್ದೇಶದಿಂದಲೇ ಅಮೆರಿಕಕ್ಕೆ ಬರುತ್ತಿದ್ದಾರೆ ಎಂದು ಅವರು ವಾದಿಸಿದ್ದಾರೆ. ಈ ತೀರ್ಪಿನ ವಿರುದ್ಧ ಸಂಸತ್ತಿನಲ್ಲಿ ಕಾನೂನು ತರಲು ರಿಪಬ್ಲಿಕನ್ ಪಕ್ಷದ ಮೂಲಕ ಪ್ರಯತ್ನಿಸುವುದಾಗಿ ಶ್ವೇತಭವನದ ಮೂಲಗಳು ತಿಳಿಸಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Exit mobile version