ಅಡ್ಡಮತದಾನ ಮಾಡಿಲ್ಲ, ಪಕ್ಷಕ್ಕೆ ದ್ರೋಹ ಬಗೆದಿಲ್ಲ: ಚನ್ನಕೇಶವನ ಬಲಿಕಲ್ಲು ಮುಟ್ಟಿ ಬೇಲೂರು ಬಿಜೆಪಿ ಶಾಸಕ ಸುರೇಶ್ ಆಣೆ-ಪ್ರಮಾಣ – Kannada News | Belur BJP MLA HK Suresh Takes Oath at Channakeshwara Temple Rejecting Cross Voting Allegations

ಬಿಜೆಪಿ ಶಾಸಕ ಎಚ್.ಕೆ. ಸುರೇಶ್Image Credit source: tv9

ಹಾಸನ, ಜೂನ್ 30: ವಿಧಾನಪರಿಷತ್ ಚುನಾವಣೆಯಲ್ಲಿ ಶಾಸಕರಿಂದ ಅಡ್ಡಮತದಾನ ನಡೆದಿದೆ ಎಂಬ ಆರೋಪಗಳು ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಹಾಸನ ಜಿಲ್ಲೆಯ ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ (BJP) ಶಾಸಕ ಎಚ್.ಕೆ. ಸುರೇಶ್ (HK Suresh)  ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡುವ ಮೂಲಕ ತಾವೊಬ್ಬ ನಿಷ್ಠಾವಂತ ಪಕ್ಷದ ಕಾರ್ಯಕರ್ತ ಎಂಬುದನ್ನು ಸಾಬೀತುಪಡಿಸಲು ಮುಂದಾಗಿದ್ದಾರೆ. ಬೇಲೂರಿನ ಐತಿಹಾಸಿಕ ಹಾಗೂ ಪ್ರಸಿದ್ಧ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ಶಾಸಕರು ಆಣೆ ಪ್ರಮಾಣ ಮಾಡಿದ್ದಾರೆ.

ಚನ್ನಕೇಶವಸ್ವಾಮಿ ದೇಗುಲ ದರ್ಶನ ಬಳಿಕ ಆಣೆ

ಶಾಸಕ ಎಚ್.ಕೆ. ಸುರೇಶ್ ಮಂಗಳವಾರ ಬೆಳಗ್ಗೆ ಚನ್ನಕೇಶವಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಚನ್ನಕೇಶವಸ್ವಾಮಿ, ಸೌಮ್ಯನಾಯಕಿ ಹಾಗೂ ರಂಗನಾಯಕಿ ಅಮ್ಮನವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಚನ್ನಕೇಶವಸ್ವಾಮಿಯ ಪಾದಮುಟ್ಟಿ ಭಕ್ತಿಯಿಂದ ನಮಸ್ಕರಿಸಿದರು. ‘ಪೂರ್ವಜನ್ಮದ ಪುಣ್ಯದಿಂದ ನನಗೆ ಭಗವಂತನ ಬಲಭಾಗದಲ್ಲಿ ವಾಸಮಾಡುವ ಹಾಗೂ ಕ್ಷೇತ್ರದ ಜನರ ಸೇವೆ ಮಾಡುವ ಅಪೂರ್ವ ಅವಕಾಶ ಸಿಕ್ಕಿದೆ’ ಎಂದು ಅವರು ಹೇಳಿದರು.

ಬಿಜೆಪಿಗೆ ದ್ರೋಹ ಬಗೆಯಲ್ಲ ಎಂದ ಸುರೇಶ್


ದೇವಾಲಯದ ಆವರಣದ ಎದುರಿನ ಬಲಿಕಲ್ಲು (ಕರಿಕಲ್ಲು) ಮುಟ್ಟಿ ಪ್ರಮಾಣ ಮಾಡಿದ ಶಾಸಕರು, ‘ಈ ಕರಿಕಲ್ಲೇ ಸಾಕ್ಷಿ, ನಾನು ವಿಧಾನಪರಿಷತ್ ಚುನಾವಣೆಯಲ್ಲಿ ಯಾವುದೇ ಅಡ್ಡಮತದಾನ ಮಾಡಿಲ್ಲ’ ಎಂದು ಮೂರು ಬಾರಿ ಗಟ್ಟಿಯಾಗಿ ಉಚ್ಚರಿಸಿದರು. ಅಷ್ಟೇ ಅಲ್ಲದೆ, ‘ನಾನು ನನ್ನ ಜೀವವಿರುವವರೆಗೂ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ದ್ರೋಹ ಮಾಡಿಲ್ಲ’ ಎಂದು ಮೂರು ಬಾರಿ ಪುನರುಚ್ಚರಿಸಿದರು.

ಮೋದಿಗೆ ದ್ರೋಹ ಮಾಡಿದ್ರೆ ಭಗವಂತ ಕ್ಷಮಿಸಲ್ಲ: ಸುರೇಶ್

ಆಣೆ ಪ್ರಮಾಣದ ಬಳಿಕ ಮಾತನಾಡಿದ ಶಾಸಕ ಸುರೇಶ್, ‘ನನ್ನ ವಿರುದ್ಧ ಕೇಳಿಬರುತ್ತಿರುವ ಈ ಅಡ್ಡಮತದಾನದ ಅಪಪ್ರಚಾರ ಈ ಕ್ಷೇತ್ರದ ವಿರುದ್ಧ ನಡೆದಿರುವ ದೊಡ್ಡ ಪಿತೂರಿ ಮತ್ತು ಷಡ್ಯಂತ್ರವಾಗಿದೆ. ನಮ್ಮ ಕ್ಷೇತ್ರಕ್ಕೆ ಖುದ್ದಾಗಿ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಬಂದು ಪ್ರಚಾರ ಮಾಡಿದ್ದರು. ಅಂತಹ ನಾಯಕರಿಗೆ ಹಾಗೂ ಪಕ್ಷಕ್ಕೆ ನಾನು ಅನ್ಯಾಯ ಮಾಡಿದರೆ ಭಗವಂತ ನನ್ನನ್ನು ಎಂದಿಗೂ ಕ್ಷಮಿಸುವುದಿಲ್ಲ. ನಮ್ಮ ಪಕ್ಷದ ವಿರೋಧ ಪಕ್ಷದ ನಾಯಕರು ಸೂಚಿಸಿದಂತೆ ನಾನು ನಿಖರವಾಗಿ ನನ್ನ ಮತ ಚಲಾವಣೆ ಮಾಡಿದ್ದೇನೆ. ಇದಕ್ಕೆ ಆ ಪರಮಾತ್ಮನೇ ಸಾಕ್ಷಿ’ ಎಂದು ಸ್ಪಷ್ಟಪಡಿಸಿದರು.

‘ನನ್ನನ್ನು ಹಣದಿಂದಾಗಲಿ ಅಥವಾ ದೌರ್ಜನ್ಯದಿಂದಾಗಲಿ ಯಾರೂ ಖರೀದಿಸಲು ಸಾಧ್ಯವಿಲ್ಲ. ನನ್ನನ್ನು ಕೇವಲ ಜನರ ಪ್ರೀತಿಯಿಂದ ಮಾತ್ರ ಖರೀದಿಸಲು ಸಾಧ್ಯ. ಇಷ್ಟು ಜನರ ಪ್ರೀತಿಯೇ ನನಗೆ ಶ್ರೀರಕ್ಷೆ. ನನ್ನ ವಿರುದ್ಧ ನಡೆದಿರುವ ಈ ಪಿತೂರಿಯ ಹಿಂದಿನ ಷಡ್ಯಂತ್ರವನ್ನು ಆ ಭಗವಂತನೇ ಎಲ್ಲರಿಗೂ ತಿಳಿಸಲಿ ಎಂಬ ಕಾರಣಕ್ಕೆ ನಾನು ಈ ಆಣೆ ಪ್ರಮಾಣ ಮಾಡಿದ್ದೇನೆ’ ಎಂದು ಶಾಸಕ ಎಚ್.ಕೆ. ಸುರೇಶ್ ಆಕ್ರೋಶ ಮತ್ತು ಬೇಸರವನ್ನು ಹೊರಹಾಕಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಮೇ ತಿಂಗಳ ಖರ್ಚು ವೆಚ್ಚ ರಿವೀಲ್ ಮಾಡಿದ ಬೆಂಗಳೂರಿನ ಸಾಫ್ಟ್‌ವೇರ್‌ ಇಂಜಿನಿಯರ್ – Kannada News | Bengaluru: A software engineer from Bengaluru who spends Rs 71,000 per month

ಬೆಂಗಳೂರು, ಜೂನ್ 30: ಇಂದಿನ ದುಬಾರಿ ದುನಿಯಾದಲ್ಲಿ ಎಷ್ಟೇ ದುಡಿದರೂ ಜೀವನ ನಿರ್ವಹಣೆ  ಅಷ್ಟೊಂದು ಸುಲಭವಲ್ಲ. ಇನ್ನೊಂದೆಡೆ ದುಡಿಮೆ ಕಡಿಮೆಯಾಗಿದೆ ಖರ್ಚು ಡಬಲ್ ಆಗಿದೆ. ಲೈಫ್ ಎಂಜಾಯ್ ಮಾಡ್ತಾ ಖರ್ಚಿಗೆ ಕಡಿವಾಣ ಹಾಕುವುದನ್ನು ಹೆಚ್ಚಿನವರು ಮರತೇ ಬಿಟ್ಟಿದ್ದಾರೆ. ಹೈ ಫೈವ್ ಜೀವನಕ್ಕೆ ಒಗ್ಗಿಕೊಂಡು ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದಾರೆ. ಇದೀಗ ಬೆಂಗಳೂರು (Bengaluru) ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು, ಮೇ ತಿಂಗಳಿನಲ್ಲಿ 71,000 ರೂ ಖರ್ಚು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಮನೆ ಬಾಡಿಗೆ 28,000 ರೂ ಹಾಗೂ ವೀಕೆಂಡ್ ಟ್ರಿಪ್ ಗೆ 20,000 ರೂ ಬೇಕಂತೆ. ಈ ಮಹಿಳೆ ಪೋಸ್ಟ್‌ ಸದ್ಯ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.

ಅಂಜಲಿ (@anjaliclickss) ಎಂಬುವವರು ತಮ್ಮ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ತನ್ನನ್ನು ಬೆಂಗಳೂರಿನಲ್ಲಿ ವಾಸಿಸುವ ಕಾರ್ಪೊರೇಟ್ ಹುಡುಗಿ ಎಂದು ಹೇಳಿಕೊಂಡಿದ್ದಾರೆ. ಮಾಸಿಕ ಬಜೆಟ್‌ನ ವಿವರವಾದ ಮಾಹಿತಿ ಹಂಚಿಕೊಂಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಸುಮಾರು 71,000 ರೂ ಖರ್ಚು ಮಾಡುವುದು ದುರ್ಬಲರಾಗಲು, ಆದರೆ ಇದು ಕೆಟ್ಟದ್ದಲ್ಲ ಎಂದಿದ್ದಾರೆ. 1BHK ಅಪಾರ್ಟ್‌ಮೆಂಟ್‌ನ ಬಾಡಿಗೆ ಹಾಗೂ ನಿರ್ವಹಣೆಯೇ ತನ್ನ ಅತಿದೊಡ್ಡ ಖರ್ಚು ಎಂದು ಬಹಿರಂಗಪಡಿಸಿದ್ದಾರೆ, ಇದು ಮನೆ ಬಾಡಿಗೆ ತಿಂಗಳಿಗೆ 28,000 ರೂ ನೀರು ಹಾಗೂ ವಿದ್ಯುತ್‌ಗಾಗಿ 1,000 ರೂ ಖರ್ಚು ಮಾಡುತ್ತೇನೆ. ಅಡುಗೆಯವರಿಗೆ 3,000 ರೂ ಪಾವತಿಸುತ್ತೇನೆ, ಆದರೆ ದಿನಸಿ ವಸ್ತುಗಳಿಗೆ 3,000 ರಿಂದ 4,000 ರೂ ಬೇಕಾಗುತ್ತದೆ ಎಂದು ಹೇಳಿದ್ದಾರೆ.

ಆಫೀಸ್ ಕ್ಯಾಬ್ ಸೇವೆಗಳು ಫ್ರೀ ಇರುವುದರಿಂದ ಸಾರಿಗೆ ವೆಚ್ಚಗಳು ಅಷ್ಟೇನು ಇರಲ್ಲ. ಜಿಮ್ ಸದಸ್ಯತ್ವ, ವೈ-ಫೈ, ಆರ್‌ಒ ನೀರಿನ ವೆಚ್ಚ, ಮತ್ತು ಚಂದಾದಾರಿಕೆ ಸೇರಿ ಪ್ರತಿ ತಿಂಗಳು ಸುಮಾರು 3,000 ರೂ ಖರ್ಚಾಗುತ್ತದೆ. ತಿಂಗಳಿಗೆ 12,000 ರೂ ರಿಂದ 15,000 ರೂವರೆಗೆ ಊಟ, ವಾರಾಂತ್ಯದ ಚಟುವಟಿಕೆಗಳು, ಶಾಪಿಂಗ್‌ಗಾಗಿ ಖರ್ಚು ಮಾಡುತ್ತೇನೆ. ಬೆಂಗಳೂರಿನಿಂದ ಮೂರು ನಾಲ್ಕು ದಿನ  ಟ್ರಿಪ್ ಗೆ ತೆರಳುತ್ತೇನೆ. ಹೀಗಾಗಿ ಮಾಸಿಕ ವೆಚ್ಚಗಳಿಗೆ ಹೆಚ್ಚುವರಿಯಾಗಿ 15,000 ರೂ ರಿಂದ 20,000 ರೂ ಬೇಕಾಗುತ್ತದೆ. ಹೀಗಾಗಿ ಎಲ್ಲಾ ಖರ್ಚು ವೆಚ್ಚಗಳನ್ನು ಒಟ್ಟು ಸೇರಿಸಿದರೆ ಮೇ ತಿಂಗಳ ವೆಚ್ಚ 71,000 ರೂ ಎಂದು ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ: ತಿಂಗಳ ಸಂಬಳ 3.5 ಲಕ್ಷ ರೂಯಿದ್ರೂ ಉಳಿತಾಯ ಮಾತ್ರ ಶೂನ್ಯ; ಬೆಂಗಳೂರಿನ ವ್ಯಕ್ತಿ ಹೀಗೆಂದಿದ್ದೇಕೆ?

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನೀವು ನಿಷ್ಪ್ರಯೋಜಕ ಖರ್ಚುಗಳಿಗೆ ಕಡಿವಾಣ ಹಾಕಿ ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬರು, ಈ ಮಹಿಳೆಯ ತಿಂಗಳ ಖರ್ಚು ಬೆಂಗಳೂರಿನ ಹೆಚ್ಚಿನ ಜನರ ಸಂಬಳಕ್ಕೆ ಸಮಾನವಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಬೆಂಗಳೂರಿನಲ್ಲಿ ತಿಂಗಳಿಗೆ 71 ಸಾವಿರ ರೂ ಖರ್ಚು? ಆದರೆ ನಾನು ತಿಂಗಳಿಗೆ 10 ರೂ ಸಾವಿರದಲ್ಲಿ ಇದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್​ ಬಾಸ್​​ಗೆ ಬರೋಕೆ ರೆಡಿ ಆದ ‘ಹುಚ್ಚ’ ನಟಿ ರೇಖಾ? – Kannada News | Huchcha Actress Rekha to Join Bigg Boss Telugu 10? Fans Speculate Grand Entry

ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಮತ್ತೆ ಸದ್ದು ಮಾಡುತ್ತಿದೆ. ಈ ಬಾರಿ ಕನ್ನಡ,ತೆಲುಗು ಮೊದಲಾದ ಭಾಷೆಗಳಲ್ಲಿ ಒಟ್ಟಿಗೆ ಆರಂಭ ಆಗುವ ಸಾಧ್ಯತೆ ಇದೆ. ತೆಲುಗಿನಲ್ಲಿ ಈಗಾಗಲೇ 9 ಸೀಸನ್‌ಗಳು ಪೂರ್ಣಗೊಂಡಿವೆ. ಈ ಶೋ ಈಗ ಹತ್ತನೇ ಸೀಸನ್‌ಗೆ ಸಜ್ಜಾಗುತ್ತಿದೆ. ಈ ಬಾರಿ ತೆಲುಗಿನಲ್ಲಿ ದೊಡ್ಡ ಸೆಲೆಬ್ರಿಟಿಗಳನ್ನು ಸ್ಪರ್ಧಿಗಳಾಗಿ ಕರೆತರಲು ಸಿದ್ಧತೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಂಭಾವ್ಯ ಸ್ಪರ್ಧಿಗಳ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಈ ಪಟ್ಟಿಯಲ್ಲಿ ತೇಜಸ್ವಿನಿ ಗೌಡ, ಪಲ್ಲವಿ ಗೌಡ, ಜಬರ್ದಸ್ತ್ ವರ್ಷ, ಪವಿತ್ರ, ವರ್ಷಿಣಿ, ಎಕ್ಸ್‌ಪ್ರೆಸ್ ಹರಿ ಮತ್ತು ನೂಕರಾಜು ಸೇರಿದಂತೆ ಹಲವು ಪ್ರಸಿದ್ಧ ಹೆಸರುಗಳು ಕೇಳಿಬರುತ್ತಿವೆ. ಇದರ ನಡುವೆ ಬಹುಭಾಷಾ ನಟಿ ರೇಖಾ ಹೆಸರು ಜೋರಾಗಿ ಕೇಳಿ ಬರುತ್ತಿದೆ.

ರೇಖಾ ವೇದವ್ಯಾಸ್ ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ ‘ಹುಚ್ಚ’ ಚಿತ್ರದಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಈ ಚಿತ್ರಗಳ ಮೂಲಕ ಅವರು ಕನ್ನಡಿಗರ ನೆಚ್ಚಿನ ನಟಿಯಾಗಿದ್ದಾರೆ. ಇದರ ಜೊತೆಗೆ ತೆಲುಗಿನಲ್ಲಿ ‘ಆನಂದಮ್’’, ‘ಜಾನಕಿ ವೆಡ್ಸ್ ಶ್ರೀರಾಮ್’ ‘ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ರೇಖಾ ಅವರು ಸಿನಿಮಾಗಳನ್ನು ಮಾಡುತ್ತಿಲ್ಲ. 2014ರ ನಂತರ ಅವರು ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ.

ದೀರ್ಘ ಬಿಡುವಿನ ಬಳಿಕ ರೇಖಾ ಬಣ್ಣದ ಲೋಕಕ್ಕೆ ಮರಳಲು ರೆಡಿ ಆಗಿದ್ದಾರೆ. ಇದರ ಭಾಗವಾಗಿ ಅವರು ಸರಣಿ ಸಂದರ್ಶನಗಳನ್ನು ನೀಡುತ್ತಾ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಅವರು ಬಿಗ್ ಬಾಸ್ ಬಗ್ಗೆ ಮಾತನಾಡಿದ್ದರು.‘ಬಿಗ್ ಬಾಸ್ ಮನೆಗೆ ಹೋಗಲು ದೊಡ್ಡ ಧೈರ್ಯ ಬೇಕು. ಅಷ್ಟೊಂದು ಜನರ ನಡುವೆ ಸ್ಪರ್ಧಿಸುವ ಮತ್ತು ಕ್ಯಾಮೆರಾಗಳ ಮುಂದೆ ಟಾಸ್ಕ್ ಮಾಡುವ ಸ್ಪರ್ಧಿಗಳಿಗೆ ನಾನು ಸೆಲ್ಯೂಟ್ ಮಾಡುತ್ತೇನೆ’ ಎಂದು ರೇಖಾ ಹೇಳಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಸುರೇಶ್‌ಗೆ ಕಹಿ ಅನುಭವ; ಯುವಕನ ವಿಕೃತ ವರ್ತನೆ

‘ನನಗೆ ಆ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಹೋಗಲು ಅಷ್ಟೊಂದು ಧೈರ್ಯವಿಲ್ಲ. ಅತಿಥಿಯಾಗಿ ಹೋಗಲು ನಾನು ಸಿದ್ಧಳಿದ್ದೇನೆ. ಆದರೆ ಸ್ಪರ್ಧಿಯಾಗಿ ಮನೆ ಒಳಗೆ ಹೋಗಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ್ದರು. ಆದರೆ ಈ ಹಿಂದೆ ಬಿಗ್ ಬಾಸ್ ಹೋಗಲ್ಲ ಎಂದವರೇ ಶೋಗೆ ಎಂಟ್ರಿ ಕೊಟ್ಟು ಶಾಕ್ ನೀಡಿದ ಉದಾಹರಣೆಗಳಿವೆ. ಹಾಗಾಗಿ ರೇಖಾ ವೇದವ್ಯಾಸ್ ಕೂಡ ಅದೇ ರೀತಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂದು ಸಿನಿಮಾ ಅಭಿಮಾನಿಗಳು ಅಭಿಪ್ರಾಯಪಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಏಷ್ಯನ್ ಗೇಮ್ಸ್​ಗೆ ಭಾರತ ಮಹಿಳಾ ತಂಡ ಪ್ರಕಟ – Kannada News | India women’s squad for the Asian Games

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಕ್ರಿಕೆಟ್ ಟೂರ್ನಿಗಾಗಿ ಭಾರತ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ಬಲಿಷ್ಠ ಪಡೆಯನ್ನು ಹರ್ಮನ್​ಪ್ರೀತ್ ಕೌರ್ ಮುನ್ನಡೆಸಲಿದ್ದು, ಉಪನಾಯಕಿಯಾಗಿ ಸ್ಮೃತಿ ಮಂಧಾನ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಈ ಬಾರಿಯ ತಂಡದಲ್ಲಿ 17 ವರ್ಷದ ಯುವ ವಿಕೆಟ್ ಕೀಪರ್-ಬ್ಯಾಟರ್ ಜಿ. ಕಮಲಿನಿ ಅವರ ಸೇರ್ಪಡೆಯಾಗಿದ್ದಾರೆ. ಮಹಿಳಾ ಟಿ20 ವಿಶ್ವಕಪ್ ವೇಳೆ ಟೀಮ್ ಇಂಡಿಯಾದಲ್ಲಿದ್ದ ವಿಕೆಟ್ ಕೀಪರ್ ಬ್ಯಾಟರ್ ಯಾಸ್ತಿಕಾ ಭಾಟಿಯಾ ಅವರು ತಂಡದಿಂದ ಹೊರಬಿದ್ದಿದ್ದು, ಅವರ ಬದಲಿಗೆ ಕಮಲಿನಿ ಆಯ್ಕೆಯಾಗಿದ್ದಾರೆ. ಅದರಂತೆ ಏಷ್ಯನ್ ಗೇಮ್ಸ್​ಗೆ ಭಾರತ ತಂಡ ಈ ಕೆಳಗಿನಂತಿದೆ…

  • ಹರ್ಮನ್‌ಪ್ರೀತ್ ಕೌರ್ (ನಾಯಕಿ)
  •  ಸ್ಮೃತಿ ಮಂಧಾನ (ಉಪನಾಯಕಿ)
  • ಶಫಾಲಿ ವರ್ಮಾ
  •  ಜೆಮಿಮಾ ರೋಡ್ರಿಗಸ್
  • ದೀಪ್ತಿ ಶರ್ಮಾ
  •  ರಿಚಾ ಘೋಷ್ (ವಿಕೆಟ್ ಕೀಪರ್)
  •  ಜಿ. ಕಮಲಿನಿ (ವಿಕೆಟ್ ಕೀಪರ್)
  •  ಭಾರತಿ ಫುಲ್ಮಾಲಿ
  •  ಶ್ರೀ ಚರಣಿ
  • ರೇಣುಕಾ ಠಾಕೂರ್
  • ಕ್ರಾಂತಿ ಗೌಡ್
  •  ಅರುಂಧತಿ ರೆಡ್ಡಿ
  • ರಾಧಾ ಯಾದವ್
  •  ನಂದಿನಿ ಶರ್ಮಾ
  • ಶ್ರೇಯಾಂಕಾ ಪಾಟೀಲ್*

ಶ್ರೇಯಾಂಕಾ ಪಾಟೀಲ್ ಟಿ20 ವಿಶ್ವಕಪ್​ ವೇಳೆ ಗಾಯಗೊಂಡಿದ್ದರು. ಇದಾಗ್ಯೂ ಅವರನ್ನು ಏಷ್ಯನ್ ಗೇಮ್ಸ್​ಗೆ ಆಯ್ಕೆ ಮಾಡಲಾಗಿದೆ. ಆದರೆ ಈ ಟೂರ್ನಿಗೂ ಮುನ್ನ ಅವರು ಫಿಟ್‌ನೆಸ್ ಕ್ಲಿಯರೆನ್ಸ್‌ ಮಾಡಿಕೊಳ್ಳಬೇಕಿದೆ. ಒಂದು ವೇಳೆ ಶ್ರೇಯಾಂಕಾ ಏಷ್ಯನ್ ಗೇಮ್ಸ್​ ವೇಳೆಗೆ ಫಿಟ್ ಆಗದಿದ್ದರೆ ಅವರ ಬದಲಿಗೆ ಬೇರೆಯವರನ್ನು ಆಯ್ಕೆ ಮಾಡಲಿದ್ದಾರೆ.

ಏಷ್ಯನ್ ಗೇಮ್ಸ್ ಕ್ರಿಕೆಟ್ ಯಾವಾಗ?

ಜಪಾನ್​ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ಪಂದ್ಯಾವಳಿಗಳು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 3, 2026ರವರೆಗೆ ನಡೆಯಲಿದೆ. ಈ ಟೂರ್ನಿಯ ಎಲ್ಲಾ ಪಂದ್ಯಗಳು ಟಿ20ಸ್ವರೂಪದಲ್ಲಿ ಆಡಲಾಗುತ್ತದೆ.

ಇನ್ನು ಮಹಿಳಾ ಏಷ್ಯನ್ ಗೇಮ್ಸ್ ಕ್ರಿಕೆಟ್ ಟೂರ್ನಿಯಲ್ಲಿಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, ಭಾರತ ತಂಡವು ನೇರವಾಗಿ ಕ್ವಾರ್ಟರ್ ಫೈನಲ್‌ನಿಂದ ಕಣಕ್ಕಿಳಿಯಲಿದೆ.

ಇದನ್ನೂ ಓದಿ: FIFA World Cup 2026: ಪೆನಾಲ್ಟಿ ಶೂಟೌಟ್‌ನಲ್ಲಿ 2 ಬಲಿಷ್ಠ ತಂಡಗಳು ಕಿಕ್ ಔಟ್..!

ಭಾರತದ ಮೊದಲ ಪಂದ್ಯ ಯಾರ ವಿರುದ್ಧ?

ಮಹಿಳಾ ವಿಭಾಗದ ಪಂದ್ಯಗಳು ಸೆಪ್ಟೆಂಬರ್ 17, 2026 ರಂದು ಆರಂಭವಾಗಲಿದ್ದು, ಅಂದೇ ಭಾರತ ತಂಡವು ತನ್ನ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಲಿದೆ. ಬಿಸಿಸಿಐ ಮೂಲಗಳ ಪ್ರಕಾರ, ಕ್ವಾಲಿಫೈಯರ್ಸ್ ಹಂತದಿಂದ ಬಂದ ಕೆಳ ಶ್ರೇಯಾಂಕದ ತಂಡವೊಂದು (ಥಾಯ್ಲೆಂಡ್​, ಮಲೇಷ್ಯಾ ಅಥವಾ ಚೀನಾ) ಕ್ವಾರ್ಟರ್ ಫೈನಲ್‌ನಲ್ಲಿ ಭಾರತಕ್ಕೆ ಎದುರಾಳಿಯಾಗುವ ಸಾಧ್ಯತೆ ಇದೆ.

Source link

ನಮ್ಮ ನೀರು ತಡೆದವರ ಕೈ ಕತ್ತರಿಸುತ್ತೇವೆ: ಸಿಂಧೂ ನದಿ ನೀರು ಹಂಚಿಕೆ ಕುರಿತು ಭಾರತಕ್ಕೆ ಬೆದರಿಕೆ ಹಾಕಿದ ಪಾಕಿಸ್ತಾನ – Kannada News | We’ll Cut Off Those Hands: Pakistan Minister Musadik Malik Threatens India Over Indus Waters Treaty Row

ಇಸ್ಲಾಮಾಬಾದ್, ಜೂನ್ 30: ಭಾರತದ (India) ವಿರುದ್ಧ ಸದಾ ಕಿಡಿ ಕಾರುವ ಪಾಕಿಸ್ತಾನ (Pakistan), ಇದೀಗ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ (Indus Waters Treaty) ವಿಚಾರವಾಗಿ ಮತ್ತೊಮ್ಮೆ ಪ್ರಚೋದನಾಕಾರಿ ಹೇಳಿಕೆ ನೀಡಿ ಉದ್ಧಟತನ ಪ್ರದರ್ಶಿಸಿದೆ. ಇಸ್ಲಾಮಾಬಾದ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವ ಮುಸಾದಿಕ್ ಮಲಿಕ್, ‘ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಅಡಿಯಲ್ಲಿ ಪಾಕಿಸ್ತಾನಕ್ಕೆ ಬರಬೇಕಾದ ನೀರಿನ ಪಾಲನ್ನು ಯಾರಾದರೂ ಕಸಿದುಕೊಳ್ಳಲು ಬಂದರೆ, ಅಂತಹವರ ಕೈಗಳನ್ನು ನಾವು ಕತ್ತರಿಸುತ್ತೇವೆ’ ಎಂದು ಭಾರತದ ಹೆಸರು ಉಲ್ಲೇಖಿಸದೆ ಬೆದರಿಕೆ ಹಾಕಿದ್ದಾರೆ. ಕಳೆದ ವರ್ಷ (2025) ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯ ಬಳಿಕ ಭಾರತವು ಈ ಒಪ್ಪಂದವನ್ನು ಅಮಾನತುಗೊಳಿಸಿರುವುದಕ್ಕೆ ಪಾಕಿಸ್ತಾನ ಈ ರೀತಿ ಹತಾಶೆಯಿಂದ ಪ್ರತಿಕ್ರಿಯಿಸಿದೆ.

ನೆರೆ ದೇಶದ ಪ್ರಧಾನಿ ಕೈಯಲ್ಲಿ ನೀರಿನ ನಲ್ಲಿ ಇದೆ!

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಪರೋಕ್ಷವಾಗಿ ಟೀಕಿಸಿದ ಮುಸಾದಿಕ್ ಮಲಿಕ್, ‘ನೆರೆ ದೇಶದ ಪ್ರಧಾನಿಯವರ ಕೈಯಲ್ಲಿ ಒಂದು ನಲ್ಲಿ (ಟ್ಯಾಪ್) ಇದೆ. ಅವರು ಪಾಕಿಸ್ತಾನಕ್ಕೆ ಒಂದು ಹನಿ ನೀರನ್ನೂ ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ನಮ್ಮ ದೇಶದ ಶೇ 40 ರಿಂದ 50 ರಷ್ಟು ಜನಸಂಖ್ಯೆ ಜೀವನಕ್ಕಾಗಿ ಕೃಷಿಯನ್ನೇ ಅವಲಂಬಿಸಿದೆ. ಯಾರೋ ಒಬ್ಬರು ನಮ್ಮ ದೇಶದ ಆಹಾರ ಭದ್ರತೆ, ಶೇ 50 ರಷ್ಟು ಉದ್ಯೋಗ ಮತ್ತು ಶೇ 25 ರಷ್ಟು ಆರ್ಥಿಕತೆಯನ್ನು ನಿಯಂತ್ರಿಸಲು ನೋಡುತ್ತಿದ್ದಾರೆ. ಜಾಗತಿಕವಾಗಿ ಕೆಳಮಟ್ಟದ ಜಲಾನಯನ ಪ್ರದೇಶದ ದೇಶಗಳ ಹಕ್ಕಿನ ಬಗ್ಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಾವು ನಾಳೆ ಪ್ರಶ್ನೆ ಮಾಡಲಿದ್ದೇವೆ’ ಎಂದು ಕಿಡಿಕಾರಿದ್ದಾರೆ.

ಒಪ್ಪಂದ ಏಕಪಕ್ಷೀಯವಾಗಿ ರದ್ದು ಮಾಡಲು ಸಾಧ್ಯವಿಲ್ಲ ಎಂದ ಪಾಕ್

ಇದೇ ವೇಳೆ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನದ ಮಾಹಿತಿ ಸಚಿವ ಅತಾವುಲ್ಲಾ ತರಾರ್, ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವು ಕಾನೂನುಬದ್ಧವಾಗಿದೆ. ಇದನ್ನು ಭಾರತ ಏಕಪಕ್ಷೀಯವಾಗಿ ರದ್ದುಗೊಳಿಸಲು ಅಥವಾ ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ. ಅಲ್ಲದೆ, ಪಾಕಿಸ್ತಾನದ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ‘‘ನೀರು ನಮ್ಮ ಜೀವನಾಡಿ ಮತ್ತು ನಮ್ಮ ರೆಡ್ ಲೈನ್’’ ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ ಎಂದು ಅವರು ನೆನಪಿಸಿದ್ದಾರೆ.

ಸಿಂಧೂ ನದಿ ನೀರು ಹಂಚಿಕೆ ವಿವಾದದ ಹಿನ್ನೆಲೆ ಏನು?

ಇತ್ತೀಚೆಗಷ್ಟೇ ಭಾರತದ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು, ಸಿಂಧೂ ನದಿಯಲ್ಲಿ ಭಾರತದ ಪಾಲಿನ ಸಂಪೂರ್ಣ ನೀರನ್ನು ಮುಂದಿನ ಒಂದೂವರೆಯಿಂದ ಎರಡು ವರ್ಷಗಳಲ್ಲಿ ದೇಶದ ಜನರಿಗಾಗಿಯೇ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುವುದು ಮತ್ತು ಭಾರತದ ಪಾಲಿನ ಒಂದು ಹನಿ ನೀರೂ ಪಾಕಿಸ್ತಾನಕ್ಕೆ ಹರಿಯದಂತೆ ತಡೆಯಲಾಗುವುದು ಎಂದು ಸ್ಪಷ್ಟಪಡಿಸಿದ್ದರು. 2025ರ ಏಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ನಾಗರಿಕರು ಹತರಾದ ನಂತರ, ಭಾರತವು 1960ರ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತುಗೊಳಿಸಿದೆ. ಪಾಕಿಸ್ತಾನ ತನ್ನ ನೆಲದಲ್ಲಿರುವ ಭಯೋತ್ಪಾದನಾ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವವರೆಗೂ ಈ ಒಪ್ಪಂದವನ್ನು ಪುನರಾರಂಭಿಸುವುದಿಲ್ಲ ಎಂದು ಭಾರತ ಕಠಿಣ ನಿಲುವು ತಳೆದಿದೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:41 am, Tue, 30 June 26

Source link

ಉತ್ತರ ಕನ್ನಡದಲ್ಲಿ ಬಯಲಾಯ್ತು ನಾಡಬಾಂಬ್, ಕಳ್ಳಬಂದೂಕು ತಯಾರಿಕೆಯ ಬೃಹತ್ ಜಾಲ: ಪ್ರಾಣಿ ಬೇಟೆಯ ಕರಾಳ ದಂಧೆಗೆ ತುಮಕೂರು ಬ್ಲಾಸ್ಟ್ ಲಿಂಕ್! – Kannada News | Uttara Kannada Native Explosives Making Network Uneared Following Tumakuru Blast Case Investigation

ಉತ್ತರ ಕನ್ನಡದಲ್ಲಿ ಬಯಲಾಯ್ತು ನಾಡಬಾಂಬ್, ಕಳ್ಳಬಂದೂಕು ತಯಾರಿಕೆಯ ಬೃಹತ್ ಜಾಲ

ಕಾರವಾರ, ಜೂನ್ 30: ದೇಶದ ಹಲವೆಡೆ ಹಲವು ಉದ್ದೇಶಕ್ಕಾಗಿ ನಾಡಬಾಂಬ್​ಗಳನ್ನು ಬಳಸುತ್ತಾರೆ. ಆದರೆ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ನಾಡಬಾಂಬ್ ತಯಾರಿಕೆ ಮತ್ತು ವಿಭಿನ್ನ ಬಳಕೆಯ ಸ್ಫೋಟಕ ಮಾಹಿತಿ ಸಿಕ್ಕಿದೆ. ಇತ್ತಿಚೆಗೆ ಉತ್ತರ ಕನ್ನಡ ಮೂಲದ ಪಾಗಲ್ ಪ್ರೇಮಿ ನಾಗೇಂದ್ರ ಪ್ರೇಯಸಿಗೆ ಚಾಕುವಿನಿಂದ ಇರಿದು, ತುಮಕೂರು ಬಳಿ ಕಾರಿನಲ್ಲಿ ಬಾಂಬ್ ಸ್ಫೋಟಿಸಿಕೊಂಡ ಘಟನೆಯ ಜಾಡು ಹಿಡಿದು ಹೊರಟ ಎಸ್​ಐಟಿ ತಂಡ, ಮಲೆನಾಡು ಹಾಗೂ ಕರಾವಳಿಯ ದಟ್ಟ ಅರಣ್ಯದ ಒಳಗೆ ಅಡಗಿದ್ದ ನಾಡಬಾಂಬ್ , ಪೆಟ್ರೋಲ್ ಬಾಂಬ್ ಹಾಗೂ ಕಳ್ಳಬಂದೂಕು ತಯಾರಿಸುವ ಬೃಹತ್ ಜಾಲವನ್ನು ಪತ್ತೆಹಚ್ಚಿದ್ದು, ಇಡೀ ಪೊಲೀಸ್ ಇಲಾಖೆಯೇ ಬೆಚ್ಚಿಬಿದ್ದಿದೆ.

60 ಜನರ ವಿಚಾರಣೆ; ಮೂವರು ಪೊಲೀಸ್ ವಶಕ್ಕೆ!

ಬಾಂಬ್ ಸ್ಫೋಟದ ತನಿಖೆ ತೀವ್ರಗೊಳಿಸಿರುವ ಪೊಲೀಸರು ಈವರೆಗೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸುಮಾರು 60ಕ್ಕೂ ಹೆಚ್ಚು ಜನರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪೈಕಿ ಸ್ಫೋಟದ ಪ್ರಮುಖ ಸೂತ್ರಧಾರಿ ನಾಗೇಂದ್ರಗೌಡನಿಗೆ ಸಹಕರಿಸಿದ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದವರಲ್ಲಿ ಇಬ್ಬರು ಅಂಕೋಲಾ ತಾಲೂಕಿನ ಸರಳಬೈಲ್ ಗ್ರಾಮದವರಾಗಿದ್ದು, ಒಬ್ಬ ನಾಗೇಂದ್ರಗೌಡನ ನಿಕಟ ಸಂಬಂಧಿ ಹಾಗೂ ಇನ್ನೊಬ್ಬ ಆತನ ಆಪ್ತ ಸ್ನೇಹಿತ ಎಂದು ಗುರುತಿಸಲಾಗಿದೆ. ಮೂರನೇ ವ್ಯಕ್ತಿಯನ್ನು ಹೊನ್ನಾವರ ತಾಲೂಕಿನ ಚಂದಾವರ ಮೂಲದವನೆಂದು ಗುರುತಿಸಲಾಗಿದ್ದು, ಸದ್ಯ ಇವರನ್ನು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ತನಿಖೆಗೆ ಮೂರು ಪ್ರತ್ಯೇಕ ತಂಡಗಳ ರಚನೆ

ಬಾಂಬ್ ಪೂರೈಕೆಯ ಮೂಲ ಹಾಗೂ ಇದರ ಹಿಂದಿರುವ ಕಿಂಗ್‌ಪಿನ್‌ಗಳನ್ನು ಪತ್ತೆಹಚ್ಚಲು ಒಟ್ಟು ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ತುಮಕೂರು ಪೊಲೀಸ್ ತಂಡ, ಅಂಕೋಲಾ ಸಿಪಿಐ ತಂಡ ಹಾಗೂ ಗೋಕರ್ಣ ಸಿಪಿಐ ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಕಾಡಿನ ಪ್ರದೇಶಗಳು ಹಾಗೂ ಸಂಶಯಾಸ್ಪದ ಸ್ಥಳಗಳ ಮೇಲೆ ನಿಗಾ ಇಟ್ಟಿವೆ.

ಡಿಜಿಟಲ್ ಸಾಕ್ಷಿ ಸಿಗದಂತೆ ನಾಗೇಂದ್ರನ ಸಖತ್ ಪ್ಲಾನ್!

ಪ್ರಾಥಮಿಕ ತನಿಖೆಯಲ್ಲಿ ಆರೋಪಿ ನಾಗೇಂದ್ರಗೌಡ ಬಾಂಬ್ ಖರೀದಿ ಮತ್ತು ಡೀಲಿಂಗ್ ವೇಳೆ ಅತ್ಯಂತ ಚಾಣಾಕ್ಷತನ ಪ್ರದರ್ಶಿಸಿರುವುದು ಬೆಳಕಿಗೆ ಬಂದಿದೆ. ಈತ ಬಾಂಬ್ ಖರೀದಿಸಿದವರೊಂದಿಗೆ ಎಲ್ಲೂ ಮೊಬೈಲ್ ಮೂಲಕ ಸಂಪರ್ಕ ಸಾಧಿಸಿಲ್ಲ. ಪೊಲೀಸರಿಗೆ ಕಾಲ್ ಲಿಸ್ಟ್ ಸಿಗದಂತೆ ಮಾಡಲು ಖುದ್ದು ತಾನೇ ನೇರವಾಗಿ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದ ಎಂಬ ಆಘಾತಕಾರಿ ವಿಷಯ ಗೊತ್ತಾಗಿದೆ.

ಕೇವಲ 100 ರಿಂದ 300 ರೂಪಾಯಿಗೆ ಸಿಗುತ್ತೆ ನಾಡಬಾಂಬ್!

ಯಲ್ಲಾಪುರ ಹಾಗೂ ಹಳಿಯಾಳ ಭಾಗದ ದಟ್ಟ ಅರಣ್ಯದ ನಡುವೆ ಈ ನಾಡಬಾಂಬ್‌ಗಳನ್ನು ಅಕ್ರಮವಾಗಿ ತಯಾರಿಸಲಾಗುತ್ತಿದ್ದು, ಕೇವಲ 100 ರಿಂದ 300 ರೂಪಾಯಿಗಳ ಅಗ್ಗದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ರಾಸಾಯನಿಕ ನೈಟ್ರೇಟ್ ಬಳಕೆಯ ಪ್ರಮಾಣದ ಮೇಲೆ ಈ ಬಾಂಬ್‌ಗಳ ತೀವ್ರತೆ ನಿರ್ಧಾರವಾಗುತ್ತದೆ. ಈ ಬಾಂಬ್ ಹಾಗೂ ಗನ್‌ಗಳನ್ನು ಪ್ರಮುಖವಾಗಿ ಪ್ರಾಣಿಗಳ ಬೇಟೆಗಾಗಿ ಬಳಸಲಾಗುತ್ತಿದೆ.

ಕಾಡುಹಂದಿ ಬೇಟೆಗೆ ಮಾಂಸದ ಬಾಂಬ್

ಕೋಳಿಯ ಮಾಂಸದ ಒಳಗೆ ನಾಡಬಾಂಬ್ ಇಟ್ಟು ಕಾಡಿನ ಅಂಚಿನಲ್ಲಿ ಇಡಲಾಗುತ್ತದೆ. ಆಹಾರ ಅರಸಿ ಬರುವ ಕಾಡುಹಂದಿ ಇದನ್ನು ಅಗಿಯುತ್ತಿದ್ದಂತೆ ಒತ್ತಡಕ್ಕೆ ಸಿಲುಕಿ ಬಾಂಬ್ ಒಮ್ಮೆಲೆ ಬ್ಲಾಸ್ಟ್ ಆಗುತ್ತದೆ. ತಲೆ ಹಾಗೂ ಮುಖದ ಭಾಗ ಛಿದ್ರಗೊಂಡು ಹಂದಿ ಸ್ಥಳದಲ್ಲೇ ಸಾವನ್ನಪ್ಪುತ್ತದೆ. ಹೀಗೆ ಬೇಟೆಯಾಡಿದ ಒಂದು ಹಂದಿ ಕಳ್ಳಮಾರುಕಟ್ಟೆಯಲ್ಲಿ 7 ರಿಂದ 8 ಸಾವಿರ ರೂಪಾಯಿಗೆ ರಹಸ್ಯವಾಗಿ ಮಾರಾಟವಾಗುತ್ತದೆ.

ಇದನ್ನೂ ಓದಿ ಹುಚ್ಚಾಟ ಮೆರೆದು ದಾರುಣ ಅಂತ್ಯಕಂಡ ಪಾಗಲ್​​ ಪ್ರೇಮಿ: ನಾಗೇಂದ್ರಗೆ ಸ್ಫೋಟಕ ಸಿಕ್ಕಿದ್ದೇಗೆಂದು ಖಾಕಿ ತನಿಖೆ

ಜಲಚರಗಳ ಬೇಟೆಗೆ ಪೆಟ್ರೋಲ್ ಬಾಂಬ್

ಪ್ಲಾಸ್ಟಿಕ್‌ನಲ್ಲಿ ಪೆಟ್ರೋಲ್ ಬಾಂಬ್ ಸುತ್ತಿ ನೀರಿನಾಳಕ್ಕೆ ಬಿಟ್ಟು ಬ್ಲಾಸ್ಟ್ ಮಾಡಲಾಗುತ್ತದೆ. ಈ ಸ್ಫೋಟದ ತೀವ್ರತೆಗೆ ನೂರಾರು ಮೀನುಗಳು ಸತ್ತು ಮೇಲೇಳುತ್ತವೆ ಅಥವಾ ಪ್ರಜ್ಞೆ ತಪ್ಪಿ ಬಲೆಗೆ ಬೀಳುತ್ತವೆ.

ನಾಡಬಂದೂಕಿನ ಬಳಕೆ

ಉಡಾ, ಕಾಡುಕೋಣ, ಕಡವೆ ಬೇಟೆಗೆ ನಾಡಬಂದೂಕು ಬಳಸಲಾಗುತ್ತಿದ್ದು, ಇತ್ತೀಚೆಗೆ ಪೊಲೀಸರ ದಾಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇವುಗಳನ್ನು ತೋಟ ಹಾಗೂ ಗದ್ದೆಗಳ ಮಣ್ಣಿನಲ್ಲಿ ಬಚ್ಚಿಡಲಾಗುತ್ತಿದೆ. ಸದ್ಯ ಪೊಲೀಸರು ಈ ಇಡೀ ಅಕ್ರಮ ಜಾಲದ ಬೇರು ಸವೆಯಲು ತನಿಖೆ ತೀವ್ರಗೊಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Gajakesari Rajayoga: ಜುಲೈ ಮೊದಲ ವಾರದಿಂದ ‘ಗಜಕೇಸರಿ ರಾಜಯೋಗ’; ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ, ಕೈತುಂಬಾ ಹಣ! – Kannada News | Gajakesari Rajayoga July 2026: 4 Lucky Zodiac Signs to Strike Gold and Gain Wealth

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಜಯೋಗಗಳಿಗೆ ವಿಶೇಷ ಮಹತ್ವವಿದೆ. ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಕಾಲಕಾಲಕ್ಕೆ ಹಲವು ಅಪರೂಪದ ಯೋಗಗಳು ಸೃಷ್ಟಿಯಾಗುತ್ತವೆ. ಅವುಗಳಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಶುಭ ಫಲ ನೀಡುವ ಯೋಗವೆಂದರೆ ಅದುವೇ ‘ಗಜಕೇಸರಿ ರಾಜಯೋಗ’. ಜುಲೈ ತಿಂಗಳ ಮೊದಲ ವಾರದಲ್ಲಿ ಈ ಮಹಾ ರಾಜಯೋಗವು ರೂಪುಗೊಳ್ಳುತ್ತಿದ್ದು, ಇದರ ಪ್ರಭಾವ ಎಲ್ಲಾ 12 ರಾಶಿಗಳ ಮೇಲಿರಲಿದೆ. ಆದರೆ, ವಿಶೇಷವಾಗಿ 4 ರಾಶಿಯವರಿಗೆ ಈ ಸಮಯವು ಅತ್ಯಂತ ಅದೃಷ್ಟಶಾಲಿಯಾಗಿದ್ದು, ಅವರು “ಮುಟ್ಟಿದ್ದೆಲ್ಲಾ ಚಿನ್ನ”ವಾಗುವಂತಹ ಸುವರ್ಣ ಕಾಲ ಆರಂಭವಾಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಾರೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ಇಲ್ಲಿ ತಿಳಿಯೋಣ.

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿಯವರಿಗೆ ಗಜಕೇಸರಿ ರಾಜಯೋಗವು ಅಭೂತಪೂರ್ವ ಯಶಸ್ಸನ್ನು ತಂದುಕೊಡಲಿದೆ. ಈ ಸಮಯದಲ್ಲಿ ನೀವು ಕೈಹಾಕುವ ಪ್ರತಿಯೊಂದು ಕೆಲಸದಲ್ಲೂ ಜಯ ಕಾಯಂ. ನಿಮ್ಮ ಆದಾಯವು ದ್ವಿಗುಣಗೊಳ್ಳಲಿದ್ದು, ಧನಲಾಭದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಕೋರ್ಟ್-ಕಚೇರಿ ಪ್ರಕರಣಗಳಲ್ಲಿ ನಿಮಗೆ ಸಾಫಲ್ಯ ಸಿಗಲಿದೆ. ಮನೆಯ ಒಳಗೆ ಮತ್ತು ಹೊರಗೆ ಸದಾ ಸಂತೋಷದ ವಾತಾವರಣವಿರಲಿದೆ.

ಮೇಷ ರಾಶಿ:

ಮೇಷ ರಾಶಿಯ ಜನರಿಗೆ ಈ ರಾಜಯೋಗವು ಅತ್ಯಂತ ಅನುಕೂಲಕರ ಮತ್ತು ಶುಭ ಫಲಿತಾಂಶಗಳನ್ನು ನೀಡಲಿದೆ. ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತಿ ಸಿಗುವ ಸಮಯ ಇದಾಗಿದೆ. ಹಳೆಯ ಆರೋಗ್ಯ ಸಮಸ್ಯೆಗಳು ದೂರವಾಗಿ ನೆಮ್ಮದಿ ಸಿಗಲಿದೆ. ಪವಿತ್ರ ತೀರ್ಥಯಾತ್ರೆಗಳಿಗೆ ಹೋಗುವ ಸುವರ್ಣಾವಕಾಶ ಒದಗಿಬರಲಿದೆ. ಮನೆಯಲ್ಲಿ ಮದುವೆ, ಮುಂಜಿ ಮುಂತಾದ ಶುಭ ಕಾರ್ಯಗಳು ನೆರವೇರಲಿವೆ. ಆರ್ಥಿಕವಾಗಿ ದೊಡ್ಡ ಲಾಭವಾಗಲಿದ್ದು, ಸಮಾಜದಲ್ಲಿ ವಿಶೇಷ ಗೌರವ ಲಭಿಸಲಿದೆ.

ಇದನ್ನೂ ಓದಿ: ಶುಕ್ರ-ಕೇತು ಸಂಯೋಗ; ಈ 4 ರಾಶಿಯವರು ಜುಲೈನಲ್ಲಿ ಅತ್ಯಂತ ಜಾಗರೂಕರಾಗಿರಿ

ಮೀನ ರಾಶಿ:

ಮೀನ ರಾಶಿಯವರಿಗೆ ಈ ಅವಧಿಯು ಅತ್ಯುತ್ತಮ ದಿನಗಳನ್ನು ಉಡುಗೊರೆಯಾಗಿ ನೀಡಲಿದೆ. ನೀವು ಬಹಳ ದಿನಗಳಿಂದ ಯೋಜಿಸುತ್ತಿದ್ದ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿವೆ. ಮದುವೆಗಾಗಿ ಕಾಯುತ್ತಿರುವ ಯುವಕ-ಯುವತಿಯರಿಗೆ ಕಳಸ ಕೂಡಿಬರಲಿದ್ದು, ಯಶಸ್ಸು ಸಿಗಲಿದೆ. ಕುಟುಂಬದಲ್ಲಿ ಸಂತಸ ಮೂಡಲಿದೆ. ಹಠಾತ್ ಧನಲಾಭ ಅಥವಾ ಲಾಟರಿ ಹೊಡೆಯುವಂತಹ ಯೋಗವಿದ್ದು, ಆರ್ಥಿಕ ಸ್ಥಿತಿ ಭದ್ರವಾಗಲಿದೆ. ಆರೋಗ್ಯ ಮತ್ತು ಹಣದ ವಿಷಯದಲ್ಲಿ ಅದೃಷ್ಟ ನಿಮ್ಮ ಬೆನ್ನಿಗಿರಲಿದೆ.

ತುಲಾ ರಾಶಿ:

ತುಲಾ ರಾಶಿಯಲ್ಲಿ ಜನಿಸಿದವರಿಗೆ ಇದು ಅತ್ಯಂತ ಸುವರ್ಣ ಸಮಯ ಎನ್ನಬಹುದು. ನೀವು ಎಂದಿಗೂ ಮಾಡಲು ಸಾಧ್ಯವಿಲ್ಲ ಎಂದುಕೊಂಡಿದ್ದ ಕಠಿಣ ಕೆಲಸಗಳೂ ಈ ಸಮಯದಲ್ಲಿ ಸುಲಭವಾಗಿ ಪೂರ್ಣಗೊಳ್ಳಲಿವೆ. ಅಂದುಕೊಂಡ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಿ ಸೈ ಎನಿಸಿಕೊಳ್ಳುತ್ತೀರಿ. ಸಮಾಜದಲ್ಲಿ ನಿಮಗೊಂದು ವಿಶೇಷ ಸ್ಥಾನಮಾನ ಸಿಗಲಿದೆ. ವೈವಾಹಿಕ ಜೀವನವು ಅತ್ಯಂತ ಸುಖಮಯವಾಗಿರಲಿದೆ. ಜೀವನಸಂಗಾತಿಯ ಕಡೆಯಿಂದ ನಿಮಗೆ ಭರಪೂರ ಅದೃಷ್ಟ ಮತ್ತು ಆರ್ಥಿಕ ಸಹಾಯ ದೊರೆಯುವ ಸಾಧ್ಯತೆ ಇದೆ.

ಗಮನಿಸಿ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣವಾಗಿ ಜ್ಯೋತಿಷ್ಯ ಶಾಸ್ತ್ರದ ನಂಬಿಕೆಗಳು ಮತ್ತು ಜ್ಯೋತಿಷಿಗಳ ಅಭಿಪ್ರಾಯಗಳನ್ನು ಆಧರಿಸಿದೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

FIFA World Cup 2026: ಪೆನಾಲ್ಟಿ ಶೂಟೌಟ್‌ನಲ್ಲಿ 2 ಬಲಿಷ್ಠ ತಂಡಗಳು ಕಿಕ್ ಔಟ್..! – Kannada News | Germany and Netherlands Knocked Out in FIFA World Cup 2026

ಫಿಫಾ ವಿಶ್ವಕಪ್​ ರೌಂಡ್ ಆಫ್ 32 ಸುತ್ತಿನಲ್ಲಿ ಭರ್ಜರಿ ಪೈಪೋಟಿ ಮುಂದುವರೆದಿದೆ. ಈ ಪೈಪೋಟಿಯೊಂದಿಗೆ ವಿಶ್ವಕಪ್ ಅಂಗಳದ ಎರಡು ಬಲಿಷ್ಠ ತಂಡಗಳಾದ ಜರ್ಮನಿ ಹಾಗೂ ನೆದರ್​ಲ್ಯಾಂಡ್ಸ್ ತಂಡಗಳು ಹೊರಬಿದ್ದಿವೆ. ಸದಾ ವಿಶ್ವಕಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಈ ಯುರೋಪಿಯನ್ ಬಲಿಷ್ಠ ತಂಡಗಳಿಗೆ ಕ್ರಮವಾಗಿ ಪರಾಗ್ವೆ ಮತ್ತು ಮೊರಾಕೊ ತಂಡಗಳು ಸೋಲುಣಿಸಿವೆ.

ಜರ್ಮನಿಗೆ ಬಿಗ್ ಶಾಕ್!

ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಜರ್ಮನಿ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ಸೋತಿರುವುದು ಇದೇ ಮೊದಲು. ಫಿಲಡೆಲ್ಫಿಯಾ ಸ್ಟೇಡಿಯಂ ನಲ್ಲಿ ನಡೆದ ಈ ಪಂದ್ಯದಲ್ಲಿ ಪರಾಗ್ವೆ ಮತ್ತು ಜರ್ಮನಿ ನಡುವೆ ಭರ್ಜರಿ ಪೈಪೋಟಿ ಕಂಡು ಬಂದಿತ್ತು. ಪರಾಗ್ವೆ ಪರ ಜೂಲಿಯೊ ಎನ್ಸಿಸೊ (42ನೇ ನಿಮಿಷ) ಗೋಲು ಗಳಿಸಿದರೆ, ಜರ್ಮನಿಯ ಕೈ ಹಾವರ್ಟ್ಜ್ (54ನೇ ನಿಮಿಷ) ಪಂದ್ಯವನ್ನು ಸಮಬಲಕ್ಕೆ ತಂದರು.

1-1 ಅಂತರದಿಂದ ಸಾಗಿದ ಈ ಪಂದ್ಯವು ಆ ಬಳಿಕ ಪೆನಾಲ್ಟಿ ಶೂಟೌಟ್​ನತ್ತ ಮುಖ ಮಾಡಿತು. ಆದರೆ ಪೆನಾಲ್ಟಿ ಶೂಟೌಟ್‌ನಲ್ಲಿ ಜರ್ಮನಿಯ ಅದೃಷ್ಟ ಕೈಕೊಟ್ಟಿತು. ತಂಡದ ಸ್ಟಾರ್ ಆಟಗಾರರಾದ ಕೈ ಹಾವರ್ಟ್ಜ್ ಮತ್ತು ನಿಕ್ ವೋಲ್ಟಮೇಡ್ ಪೆನಾಲ್ಟಿ ಕಿಕ್‌ಗಳನ್ನು ಮಿಸ್ ಮಾಡಿಕೊಂಡರು. ಅಂತಿಮವಾಗಿ ಪರಾಗ್ವೆ ತಂಡ 4-3 ಅಂತರದಿಂದ ಜರ್ಮನಿಯ ಹೆಡೆಮುರಿ ಕಟ್ಟಿ ಐತಿಹಾಸಿಕ ಜಯ ದಾಖಲಿಸಿತು.

  • ಜರ್ಮನಿ ತಂಡದ ಫಿಫಾ ರ್ಯಾಂಕ್: 12
  • ಪರಾಗ್ವೆ ತಂಡದ ಫಿಫಾ ರ್ಯಾಂಕ್: 34

ಡಚ್ಚರ ಕನಸು ಭಗ್ನ!

ಹೂಸ್ಟನ್ ಸ್ಟೇಡಿಯಂ ನಲ್ಲಿ ನಡೆದ ಮತ್ತೊಂದು ರೋಮಾಂಚಕ ಪಂದ್ಯದಲ್ಲಿ ಮಾಜಿ ರನ್ನರ್-ಅಪ್ ನೆದರ್​ಲ್ಯಾಂಡ್ಸ್ ತಂಡವನ್ನು ಮೊರಾಕೊ ಪೆನಾಲ್ಟಿ ಶೂಟೌಟ್‌ನಲ್ಲಿ 3-2 ಅಂತರದಿಂದ ಮಣಿಸಿದೆ.  ಈ ಪಂದ್ಯದ 72ನೇ ನಿಮಿಷದಲ್ಲಿ ನೆದರ್​ಲ್ಯಾಂಡ್ಸ್‌ನ ಕೋಡಿ ಗ್ಯಾಕ್ಪೋ ಗೋಲು ಬಾರಿಸಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು.

ಆದರೆ ಪಂದ್ಯ ಮುಗಿಯಲು ಕೇವಲ ಕೆಲವೇ ಸೆಕೆಂಡುಗಳು ಬಾಕಿ ಇರುವಾಗ (91ನೇ ನಿಮಿಷ) ಮೊರಾಕೊದ ಇಸ್ಸಾ ಡಿಯಾಪ್ ಗೋಲು ಹೊಡೆದು ಪಂದ್ಯವನ್ನು ಹೆಚ್ಚುವರಿ ಸಮಯಕ್ಕೆ ವಿಸ್ತರಿಸಿದರು. ಹೆಚ್ಚುವರಿ ಸಮಯದಲ್ಲಿ ಗೋಲುಗಳು ದಾಖಲಾದ ಕಾರಣ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಬೇಕಾಯಿತು.

ಪೆನಾಲ್ಟಿ ಶೂಟೌಟ್‌ನಲ್ಲಿ ಮೊರಾಕೊ ಗೋಲ್‌ಕೀಪರ್ ಯಾಸಿನ್ ಬೋನೊ ತಂಡದ ಒಂದು ಗೋಲು ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರವಹಿಸಿತು. ಡಚ್ ಆಟಗಾರ ಕ್ರಿಸೆನ್ಸಿಯೊ ಸಮ್ಮರ್‌ವಿಲ್ಲೆ ಅವರ ನಿರ್ಣಾಯಕ ಕಿಕ್ ಅನ್ನು ಬೋನೊ ತಡೆದರೆ, ಮೊರಾಕೊ ಇಸ್ಮಾಯಿಲ್ ಸೈಬಾರಿ ವಿನ್ನಿಂಗ್ ಗೋಲು ಬಾರಿಸಿ 3-2 ಅಂತರದಿಂದ ತಂಡಕ್ಕೆ ಗೆಲುವು ತಂದು ಕೊಟ್ಟರು.

  • ನೆದರ್​ಲ್ಯಾಂಡ್ಸ್​ ತಂಡದ ಫಿಫಾ ರ್ಯಾಂಕ್: 7
  • ಮೊರಾಕೊ ತಂಡದ ಫಿಫಾ ರ್ಯಾಂಕ್: 6

ಈ  ಗೆಲುವುಗಳೊಂದಿಗೆ ಮೊರಾಕೊ ಹಾಗೂ ಪರಾಗ್ವೆ ತಂಡಗಳು ಪ್ರೀ-ಕ್ವಾರ್ಟರ್ ಫೈನಲ್‌ಗೇರಿದೆ. ಅಲ್ಲದೆ ಮುಂದಿನ ಪಂದ್ಯದಲ್ಲಿ ಮೊರಾಕೊ ತಂಡ ಕೆನಡಾವನ್ನು ಎದುರಿಸಿದರೆ, ಪರಾಗ್ವೆ ತಂಡ ಸ್ವೀಡನ್ ವಿರುದ್ಧ ಕಣಕ್ಕಿಳಿಯಲಿದೆ.

Published On – 10:15 am, Tue, 30 June 26

Source link

Weekly Horoscope in Kannada 2026ರ ಜೂನ್ 28ರಿಂದ ಜುಲೈ 4 ರವರೆಗಿನ ವಾರ ಭವಿಷ್ಯ ಇಲ್ಲಿದೆ – Kannada News | Here is the weekly horoscope for June 28 to July 4, 2026 in Kannada Predicted by Lohitha Hebbar

2026ರ ಜೂನ್ 28ರಿಂದ ಜುಲೈ ,04ರವರೆಗೆ ಆಗುವ ಗ್ರಹಗತಿ ಆಧಾರದ ಮೇಲೆ ವ್ಯವಹಾರ, ಕೌಟುಂಬಿಕ ಅಸಮತೋಲನ, ಕೀರ್ತಿಯ ಆಸೆ, ಪ್ರಶಸ್ತಿಗೆ ಪ್ರಯತ್ನ, ಸಮಸ್ಯೆಗಳು ಕಾಣದಂತೆ ಮಾಯ ಇವೆಲ್ಲ ಈ ವಾರದ ವಿಶೇಷತೆಗಳಾಗಿವೆ.


ಮೇಷ ರಾಶಿ
​ಮಂಗಳನ ದಿವ್ಯ ದೃಷ್ಟಿಯಿಂದ ಧೈರ್ಯದ ಕಾರಂಜಿ ಚಿಮ್ಮಲಿದೆ. ಉದ್ಯೋಗದ ಹಾದಿಯಲ್ಲಿ ಸುವರ್ಣಾವಕಾಶಗಳ ಹೊಸ ಮುಂಜಾವು ಮೂಡಲಿದ್ದು, ಹಳೆಯ ಕಷ್ಟದ ಮೋಡಗಳು ಕರಗಲಿವೆ. ಬದುಕಿನ ತೋಟದಲ್ಲಿ ಹರ್ಷದ ಹೂವುಗಳು ಅರಳುವವು. ಕುಟುಂಬದ ಜೊತೆ ಕಳೆಯುವ ಸುಂದರ ಕ್ಷಣಗಳು ಮನಸ್ಸಿಗೆ ಅಪಾರ ನೆಮ್ಮದಿ ನೀಡಿ, ಆರ್ಥಿಕತೆಗೆ ಹೊಸ ಚೈತನ್ಯ ತರಲಿವೆ.

ವೃಷಭ ರಾಶಿ
​ನಿಮ್ಮ ರಾಶಿಯಲಿರುವ ಮಂಗಳನು ಆತುರಕ್ಕೆ ಒಲಿಯನು, ತಾಳ್ಮೆಯೇ ಯಶಸ್ಸಿನ ಮಂತ್ರ. ಆರ್ಥಿಕ ಪ್ರಗತಿಯ ತಂಗಾಳಿ ಬೀಸಲಿದ್ದು, ವ್ಯಾಪಾರದ ಹೊಸ ಹೂಡಿಕೆಗೆ ಸುಂದರ ಸಮಯವಿದು. ಪ್ರೀತಿಪಾತ್ರರ ಮಧುರ ಒಡನಾಟವು ಜೀವನವನ್ನು ರಮಣೀಯವಾಗಿಸಲಿದೆ. ಆರೋಗ್ಯದ ಕಡೆಗೆ ಕೊಂಚ ನಿಗಾವಹಿಸಿ, ಉಳಿದಂತೆ ಈ ವಾರ ಸೌಭಾಗ್ಯದ ಹೊನಲು ನಿಮ್ಮ ಮನೆಮನಗಳಲ್ಲಿ ಹರಿಯಲಿದೆ.

ಮಿಥುನ ರಾಶಿ
​ಸೂರ್ಯನು ನಿಮ್ಮ ರಾಶಿಯಲ್ಲೇ ಹೊಳೆಯುತ್ತಾ ಕೀರ್ತಿಯ ಬೆಳಕನ್ನು ಚೆಲ್ಲಲಿದ್ದಾನೆ. ನಿಮ್ಮ ಮಾತುಗಳ ಮಧುರ ಚತುರತೆಯು ಕಚೇರಿಯಲ್ಲಿ ಎಲ್ಲರ ಹೃದಯ ಗೆಲ್ಲುವುದು. ದೀರ್ಘಕಾಲದ ಕನಸುಗಳು ನನಸಾಗುವ ಸುಂದರ ಹಾದಿ ತೆರೆಯಲಿದೆ. ಆರ್ಥಿಕ ಇಕ್ಕಟ್ಟುಗಳು ಕರಗಿ, ಮನದಲ್ಲಿ ನೆಮ್ಮದಿಯ ರಾಗ ಮೂಡಲಿದೆ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕಂತೆ ಯಶಸ್ಸಿನ ಸವಿಫಲ ಸಿಗಲಿದೆ.

ಕರ್ಕಾಟಕ ರಾಶಿ
​ಗುರು ಮತ್ತು ಬುಧರ ಸುಂದರ ಮಿಲನವು ನಿಮ್ಮ ರಾಶಿಗೆ ಬುದ್ಧಿಶಕ್ತಿಯ ಅಮೃತಧಾರೆಯನ್ನೇ ಎರೆಯಲಿದೆ. ಉದ್ಯೋಗದಲ್ಲಿ ಬಡ್ತಿಯ ಯೋಗವಿದ್ದು, ಸಮಾಜದಲ್ಲಿ ಗೌರವ ದುಪ್ಪಟ್ಟಾಗಲಿದೆ. ಮನೆಯಂಗಳದಲ್ಲಿ ಹಬ್ಬದ ಸಡಗರದ ವಾತಾವರಣವಿರಲಿದ್ದು, ಧಾರ್ಮಿಕ ಕಾರ್ಯಗಳು ಮನಸ್ಸಿಗೆ ಶಾಂತಿಯನ್ನು ನೀಡಲಿವೆ. ಕೈಕೊಳ್ಳುವ ಪ್ರತಿಯೊಂದು ನಿರ್ಧಾರವೂ ರಮಣೀಯ ಯಶಸ್ಸನ್ನು ತಂದುಕೊಡಲಿದೆ.

ಸಿಂಹ ರಾಶಿ
​ಶುಕ್ರ ಹಾಗೂ ಕೇತುವಿನ ಸಾನ್ನಿಧ್ಯವು ಭೌತಿಕ ಸುಖ ಹಾಗೂ ಆಧ್ಯಾತ್ಮದ ಅದ್ಭುತ ಸಮನ್ವಯ ತರಲಿದೆ. ಸೃಜನಶೀಲ ಕಲಾ ಲೋಕದಲ್ಲಿ ನಿಮ್ಮ ಕೀರ್ತಿ ಪತಾಕೆ ಹಾರಲಿದೆ. ಹಳೆಯ ಸ್ನೇಹಿತರ ಮಧುರ ಭೇಟಿಯು ಬಾಲ್ಯದ ನೆನಪುಗಳನ್ನು ಮರುಕಳಿಸುವುದು. ಆರ್ಥಿಕವಾಗಿ ವೆಚ್ಚಗಳು ಹೆಚ್ಚಾಗಬಹುದಾದರೂ, ಆದಾಯದ ರಮಣೀಯ ಹರಿವು ನಿಮ್ಮ ಕೈಹಿಡಿದು ಮುನ್ನಡೆಸಲಿದೆ.

ಕನ್ಯಾ ರಾಶಿ
​ಸವಾಲುಗಳ ಕಲ್ಲುಬಂಡೆಗಳ ನಡುವೆಯೂ ಈ ವಾರ ಯಶಸ್ಸಿನ ತಾವರೆ ಅರಳಲಿದೆ. ಕಠಿಣ ಪರಿಶ್ರಮಕ್ಕೆ ಮೇಲಧಿಕಾರಿಗಳಿಂದ ಪ್ರಶಂಸೆಯ ಹೂಮಳೆ ಸಿಗಲಿದೆ. ಆಸ್ತಿ ಅಥವಾ ಹೊಸ ವಾಹನ ಖರೀದಿಯ ಯೋಗ ಕೂಡಿಬರಲಿದೆ. ಹಠಾತ್ ಧನಲಾಭವು ಆರ್ಥಿಕ ಸಂಕಷ್ಟಗಳನ್ನು ಕರಗಿಸಲಿದೆ. ನಕಾರಾತ್ಮಕ ಚಿಂತನೆಗಳನ್ನು ದೂಗಿಸಿ, ಆತ್ಮವಿಶ್ವಾಸದಿಂದ ಮುನ್ನಡೆದರೆ ವಿಜಯಲಕ್ಷ್ಮಿ ಒಲಿಯುವಳು.

ತುಲಾ ರಾಶಿ
​ಮನದ ದ್ವಂದ್ವಗಳ ಮಂಜು ಮುಸುಕಿದ ವಾತಾವರಣ ಸಿದ್ಧಿಗೆದ್ದು ಸ್ಪಷ್ಟತೆಯ ಬೆಳಕು ಮೂಡಲಿದೆ. ನೆನೆಗುದಿಗೆ ಬಿದ್ದಿದ್ದ ಕಾರ್ಯಗಳು ಸುಲಭವಾಗಿ ಪೂರ್ಣಗೊಂಡು ನೆಮ್ಮದಿ ತರಲಿವೆ. ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭದ ಅಮೃತ ಸಿಗಲಿದೆ. ಕೌಟುಂಬಿಕ ಜೀವನದಲ್ಲಿ ಪ್ರೀತಿಯ ಸಾಮರಸ್ಯ ಮೂಡಲಿದ್ದು, ಸಂಗಾತಿಯ ಸುಂದರ ಸಹಕಾರವು ಬದುಕಿನ ಹಾದಿಯನ್ನು ರಮಣೀಯವಾಗಿಸಲಿದೆ.

ವೃಶ್ಚಿಕ ರಾಶಿ
​ಭಾಗ್ಯಸ್ಥಾನದ ಗ್ರಹಗಳ ಒಲುಮೆಯಿಂದ ಅದೃಷ್ಟದ ಹೊಸ ಮುಂಜಾವು ನಿಮ್ಮನ್ನು ಆಲಿಂಗಿಸಲಿದೆ. ನಿರುದ್ಯೋಗಿಗಳಿಗೆ ಸುಂದರ ಉದ್ಯೋಗದ ಶುಭ ಸಮಾಚಾರ ಸಿಗಲಿದೆ. ಸಮಾಜದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಾಗಲಿದ್ದು, ಧನಲಕ್ಷ್ಮಿಯ ಕೃಪೆ ಸದಾ ಇರಲಿದೆ. ಹಳೆಯ ಆರೋಗ್ಯದ ಏರುಪೇರುಗಳು ಸುಧಾರಿಸಿ, ಮನದಲ್ಲಿ ನವೋತ್ಸಾಹದ ರಂಗು ಮೂಡಲಿದ್ದು ಸವಾಲುಗಳು ತಾವಾಗಿಯೇ ಕರಗಲಿವೆ.

ಧನು ರಾಶಿ
​ವ್ಯಕ್ತಿತ್ವದಲ್ಲಿ ಅದ್ಭುತ ಆಕರ್ಷಣೆಯ ತೇಜಸ್ಸು ಮೂಡಲಿದೆ. ನಿಮ್ಮ ನಾಯಕತ್ವದ ಗುಣವು ಕಚೇರಿಯಲ್ಲಿ ಎಲ್ಲರ ಗೌರವಕ್ಕೆ ಪಾತ್ರವಾಗಲಿದೆ. ಹೊಸ ಸುಂದರ ಯೋಜನೆಗಳಿಗೆ ಚಾಲನೆ ನೀಡಲು ಇದು ಪ್ರಶಸ್ತ ಸಮಯ. ಆರ್ಥಿಕ ತೊಂದರೆಗಳು ನಿವಾರಣೆಯಾಗಿ, ದೂರದ ಪ್ರಯಾಣದಿಂದ ಧನಲಾಭವಾಗಲಿದೆ. ಕೌಟುಂಬಿಕ ಸುಖ ನೆಮ್ಮದಿ ಸದಾ ಕಾಯಲಿದೆ.

ಇದನ್ನೂ ಓದಿ: ಜುಲೈ 2026 ಮಾಸ ಭವಿಷ್ಯ: ಈ ರಾಶಿಯ ಜನರಿಗೆ ಪರಿವರ್ತನಾ ಯೋಗ; ಜುಲೈ ತಿಂಗಳಲ್ಲಿ ಶುಭವೋ ಶುಭ

ಮಕರ ರಾಶಿ
​ವ್ಯವಹಾರದ ಹಾದಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಗ್ರಹಬಲವು ರಮಣೀಯವಾಗಿ ಕೈಜೋಡಿಸಿದೆ. ಹಿರಿಯರ ದಿವ್ಯ ಮಾರ್ಗದರ್ಶನದಿಂದ ಅಪಾರ ಲಾಭ ಪಡೆಯುವಿರಿ. ಕಚೇರಿಯ ವಿವಾದಗಳು ಸುಖಾಂತ್ಯಗೊಂಡು ನೆಮ್ಮದಿ ತರಲಿವೆ. ಕೌಟುಂಬಿಕ ಭಿನ್ನಾಭಿಪ್ರಾಯಗಳ ಮಳೆ ನಿಂತು, ಪ್ರೀತಿಯ ಮಧುರ ವಾತಾವರಣ ಸೃಷ್ಟಿಯಾಗಲಿದೆ. ಆರ್ಥಿಕ ಸ್ಥಿತಿ ಭದ್ರವಾಗಿದ್ದು ನವ ಹೂಡಿಕೆಗೆ ಸುಸಮಯ.


ಕುಂಭ ರಾಶಿ
​ಚಂದ್ರ ಮತ್ತು ರಾಹುವಿನ ಜುಗಲ್ಬಂದಿಯಿಂದ ಮನಸ್ಸು ಕೊಂಚ ಚಂಚಲವಾದರೂ, ತಾಳ್ಮೆಯ ಹರಿವು ನಿಮ್ಮನ್ನು ಕಾಯಲಿದೆ. ಉದ್ಯೋಗದಲ್ಲಿನ ನಿರಂತರ ಶ್ರಮಕ್ಕೆ ವಾರಾಂತ್ಯದಲ್ಲಿ ಯಶಸ್ಸಿನ ಸಿಹಿ ಸಿಗಲಿದೆ. ಅನಗತ್ಯ ಖರ್ಚುಗಳಿಗೆ ಲಗಾಮು ಹಾಕುವುದು ಒಳಿತು. ಹಿರಿಯರ ಆರೋಗ್ಯದ ಕಡೆಗೆ ಕಾಳಜಿಯಿರಲಿ, ಧನಾತ್ಮಕ ಚಿಂತನೆಗಳೇ ನಿಮ್ಮನ್ನು ಯಶಸ್ಸಿನ ಶಿಖರಕ್ಕೆ ರಮಣೀಯವಾಗಿ ತಲುಪಿಸಲಿವೆ.

ಮೀನ ರಾಶಿ
​ನಿಮ್ಮ ರಾಶಿಯಲ್ಲಿರುವ ಶನಿದೇವನು ಕಠಿಣ ಪರಿಶ್ರಮದ ಶಿಸ್ತನ್ನು ಬಯಸುತ್ತಿದ್ದಾನೆ. ತಾಳ್ಮೆಯಿಂದ ಹೆಜ್ಜೆಯಿಟ್ಟರೆ ವಾರಾಂತ್ಯದಲ್ಲಿ ಯಶಸ್ಸಿನ ಸವಿಫಲ ನಿಮ್ಮ ಮುಡಿಗೇರಲಿದೆ. ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಅಪಾರ ಶಾಂತಿ ಸಿಗಲಿದೆ. ಹಠಾತ್ ಧನಲಾಭದ ಸುಂದರ ಯೋಗವಿದ್ದು, ಆರ್ಥಿಕ ಸಂಕಷ್ಟಗಳು ದೂರಾಗಲಿವೆ. ಸಂಗಾತಿಯ ಪ್ರೀತಿಯ ಆಸರೆ ಬದುಕಿಗೆ ಹೊಸ ಚೈತನ್ಯ ನೀಡಲಿದೆ.

– ಲೋಹಿತ್ ಹೆಬ್ಬಾರ್

Published On – 10:17 am, Tue, 30 June 26

Source link

World Social Media Day 2026: ಸಾಮಾಜಿಕ ಮಾಧ್ಯಮಗಳ ಬಳಕೆ ಸಕಾರಾತ್ಮಕ ಮಾರ್ಗದಲ್ಲಿರಲಿ – Kannada News | World Social Media Day 2026: Why is World Social Media Day celebrated? Here is the information

ವಿಶ್ವ ಸಾಮಾಜಿಕ ಮಾಧ್ಯಮ ದಿನImage Credit source: Getty Images

ಸೋಷಿಯಲ್‌ ಮೀಡಿಯಾದ (Social Media) ಇಲ್ಲದೆ ಇಂದಿನ ಜಗತ್ತನ್ನು ಕಲ್ಪಿಸುವುದು ಅಸಾಧ್ಯವಾಗಿದೆ. ಇಂದು ಅನೇಕಾರು ಕೆಲಸಗಳು ಸೋಷಿಯಲ್‌ ಮೀಡಿಯಾದ ಮುಖಾಂತರವೇ ನಡೆಯುತ್ತಿದೆ. ಹೌದು ಸಾಮಾಜಿಕ ಬದಲಾವಣೆಗಾಗಿ ಜಾಗೃತಿ ಮೂಡಿಸುವುದೇ ಆಗಿರಲಿ, ವ್ಯವಹಾರವನ್ನು ಉತ್ತೇಜಿಸಲು ಕ್ರಿಯೇಟಿವ್‌ ಆಗಿ ಪ್ರಮೋಷನ್‌ಗಳನ್ನು ಮಾಡುವುದಾಗಿರಲಿ ಅಥವಾ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕ ಸಾಧಿಸುವುದಾಗಿರಲಿ ಇವೆಲ್ಲವೂ ಸೋಷಿಯಲ್‌ ಮೀಡಿಯಾದ ಮುಖಾಂತರವೇ ನಡೆಯುತ್ತಿದೆ. ಅಷ್ಟೇ ಅಲ್ಲದೆ ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌, ಯೂಟ್ಯೂಬ್‌ ಇತ್ಯಾದಿ ಸೋಷಿಯಲ್‌ ಮೀಡಿಯಾದ ಪ್ಲಾಟ್‌ಫಾರ್ಮ್‌ಗಳಲ್ಲಿ ರೀಲ್ಸ್‌, ವ್ಲಾಗ್‌ ಶೇರ್‌ ಮಾಡುವ ಮೂಲಕ ಹಣ ಸಂಪಾದನೆ ಮಾಡುತ್ತಿದ್ದಾರೆ. ಅದೆಷ್ಟೋ ವ್ಲಾಗರ್ಸ್‌, ಕಂಟೆಂಟ್‌ ಕ್ರಿಯೇಟರ್ಸ್‌ ಸೋಷಿಯಲ್‌ ಮೀಡಿಯಾದಿಂದ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದ ಈ ಸಕಾರಾತ್ಮಕ ಹಾಗೂ ಸೃಜನಾತ್ಮಕ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಪ್ರತಿವರ್ಷ ಜೂನ್‌ 30 ರಂದು ವಿಶ್ವ ಸಾಮಾಜಿಕ ಮಾಧ್ಯಮ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಸಾಮಾಜಿಕ ಮಾಧ್ಯಮ ದಿನದ ಇತಿಹಾಸವೇನು?

ಸಾಮಾಜಿಕ ಮಾಧ್ಯಮ ದಿನವನ್ನು ಮೊದಲು 2010 ರಲ್ಲಿ Mashable ಎಂಬ ಜನಪ್ರಿಯ ತಂತ್ರಜ್ಞಾನ ವೆಬ್‌ಸೈಟ್ ಪ್ರಾರಂಭಿಸಿತು. ಜೂನ್‌ ತಿಂಗಳಲ್ಲಿ ಅನೇಕ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳು ದಾಖಲೆಗಳನ್ನು ನಿರ್ಮಿಸಿವೆ ಎಂದು ಹೇಳಲಾಗುತ್ತದೆ ಮತ್ತು ಈ ತಿಂಗಳು ತಂತ್ರಜ್ಞಾನ ಉದ್ಯಮಕ್ಕೆ ಮಹತ್ವದ್ದಾಗಿ ಪರಿಗಣಿಸಲಾಗಿದೆ. ಅದಕ್ಕಾಗಿಯೇ ಈ ದಿನಾಚರಣೆಯನ್ನು ಜೂನ್‌ ತಿಂಗಳ ಕೊನೆಯಲ್ಲಿ ಆಚರಿಸಲಾಗುತ್ತದೆ.  ಪ್ರತಿ ವರ್ಷ, ಈ ದಿನದ ಮೂಲಕ, ಸಾಮಾಜಿಕ ಮಾಧ್ಯಮದ ಅನುಕೂಲಗಳು ಮತ್ತು ಅನಾನುಕೂಲಗಳೆರಡರ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತದೆ.

ವಿಶ್ವದ ಮೊದಲ ಸಾಮಾಜಿಕ ಮಾಧ್ಯಮ ವೇದಿಕೆಯ ಹೆಸರು SixDegree (ಸಿಕ್ಸ್‌ಡಿಗ್ರೀಸ್), ಇದನ್ನು 1997 ರಲ್ಲಿ ಪ್ರಾರಂಭಿಸಲಾಯಿತು. ಈ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಆಂಡ್ರ್ಯೂ ವೈನ್ರೀಚ್ ರಚಿಸಿದರು. ಆ ನಂತರ ಫೇಸ್‌ಬುಕ್‌, ಮೈಸ್ಪೇಸ್‌, ಎಕ್ಸ್‌ (ಟ್ವಿಟರ್)‌, ಇನ್‌ಸ್ಟಾಗ್ರಾಮ್‌, ಲಿಂಕ್ಡ್‌ಇನ್‌, ಸ್ನ್ಯಾಪ್‌ಚಾಟ್‌ನಂತಹ  ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಪ್ರಾರಂಭಿಸಲಾಯಿತು ಮತ್ತು ಇವು ಇಂದು ವಿಶ್ವದ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಗಳಾಗಿವೆ.

ವಿಶ್ವ ಸಾಮಾಜಿಕ ಮಾಧ್ಯಮ ದಿನದ ಮಹತ್ವವೇನು?

  • ಈ ದಿನದ ಉದ್ದೇಶ ಸಮಾಜಕ್ಕೆ ಸಾಮಾಜಿಕ ಮಾಧ್ಯಮದ ಪ್ರಭಾವ, ತಲುಪುವಿಕೆ ಮತ್ತು ಸಕಾರಾತ್ಮಕ ಕೊಡುಗೆಯನ್ನು ಎತ್ತಿ ತೋರಿಸುವುದು.
  • ಈ ದಿನವು ಜನರು ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕ ಸಾಧಿಸಲು, ವಿಚಾರಗಳನ್ನು ಹಂಚಿಕೊಳ್ಳಲು ಮತ್ತು ಸೃಜನಶೀಲ ಬಳಕೆಯನ್ನು ಉತ್ತೇಜಿಸಲು ಪ್ರೋತ್ಸಾಹಿಸುತ್ತದೆ.
  • ಸಾಮಾಜಿಕ ಮಾಧ್ಯಮದ ಸಕಾರಾತ್ಮಕ ಪರಿಣಾಮಗಳು ಮತ್ತು ಅದು ಸಮಾಜಕ್ಕೆ ತಂದ ಬದಲಾವಣೆಗಳನ್ನು ಶ್ಲಾಘಿಸುವುದು ಈ ದಿನದ ಉದ್ದೇಶವಾಗಿದೆ.
  • ಸಾಮಾಜಿಕ ಮಾಧ್ಯಮದ ಸಕಾರಾತ್ಮಕ ಬಳಕೆಯ ಬಗ್ಗೆ ಗಮನ ಸೆಳೆಯುವುದು ಮತ್ತು ಜನರು ಇತರರೊಂದಿಗೆ ಸಂಪರ್ಕ ಸಾಧಿಸಲು, ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಜಗತ್ತಿಗೆ ಸಕಾರಾತ್ಮಕವಾಗಿ ಕೊಡುಗೆ ನೀಡಲು ಪ್ರೋತ್ಸಾಹಿಸುವುದು ಈ ದಿನದ ಉದ್ದೇಶವಾಗಿದೆ.
  • ವಿಶ್ವ ಸಾಮಾಜಿಕ ಮಾಧ್ಯಮ ದಿನವು ತಂತ್ರಜ್ಞಾನವನ್ನು ಮಾನವೀಯತೆಯ ಪ್ರಯೋಜನಕ್ಕಾಗಿ ಹೇಗೆ ಬಳಸಬಹುದು ಎಂಬುದರ ಕುರಿತು ಚಿಂತಿಸಲು ನಮಗೆ ಒಂದು ಅವಕಾಶವನ್ನು ನೀಡುತ್ತದೆ.

ಇದನ್ನೂ ಓದಿ: ಅಂಕಿಅಂಶಗಳು ದೇಶದ ಅಭಿವೃದ್ಧಿಗೆ ಬೆನ್ನೆಲುಬು

ಇಂದಿನ ಜಗತ್ತಿನಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರ:

  • ಇಂದು, ಸಾಮಾಜಿಕ ಮಾಧ್ಯಮವು ಕೇವಲ ಮನರಂಜನೆ ಅಥವಾ ವೈಯಕ್ತಿಕ ಅಭಿವ್ಯಕ್ತಿಗೆ ಒಂದು ಮಾಧ್ಯಮವಾಗಿ ಉಳಿದಿಲ್ಲ, ಇದು ಸಮಾಜ, ರಾಜಕೀಯ, ಶಿಕ್ಷಣ, ವ್ಯವಹಾರ, ಸಂಸ್ಕೃತಿ ಮತ್ತು ಸಾರ್ವಜನಿಕ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿರುವ ಪ್ರಭಾವಶಾಲಿ ಶಕ್ತಿಯಾಗಿದೆ.
  • ಸಾಮಾಜಿಕ ಮಾಧ್ಯಮವು ಪತ್ರಿಕೋದ್ಯಮ ಮತ್ತು ಮಾಹಿತಿ ಜಗತ್ತಿನಲ್ಲಿ ಅಭೂತಪೂರ್ವ ಬದಲಾವಣೆಗಳನ್ನು ತಂದಿದೆ. ಸುದ್ದಿಗಳು ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳಿಗೆ ಸೀಮಿತವಾಗಿಲ್ಲ. ಡಿಜಿಟಲ್‌ ಮಾಧ್ಯಮಗಳ ಮುಖಾಂತರ ಸುದ್ದಿಗಳು ನೇರವಾಗಿ ಮೊಬೈಲ್ ಫೋನ್‌ಗಳಿಗೆ ತಲುಪುತ್ತಿವೆ.
  • ಸಾಮಾಜಿಕ ಮಾಧ್ಯಮದ ಪ್ರಮುಖ ಸಕಾರಾತ್ಮಕ ಅಂಶವೆಂದರೆ ಅದು ಶಿಕ್ಷಣ, ವ್ಯವಹಾರ ಮತ್ತು ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ತೆರೆದಿದೆ. ಆನ್‌ಲೈನ್ ಶಿಕ್ಷಣ, ಡಿಜಿಟಲ್ ಮಾರ್ಕೆಟಿಂಗ್, ಸ್ವತಂತ್ರ ಬರವಣಿಗೆ, ಪ್ರದರ್ಶನ ಕಲೆಗಳು ಮತ್ತು ಉದ್ಯಮಶೀಲತೆ ಹೊಸ ಆವೇಗವನ್ನು ಕಂಡುಕೊಂಡಿವೆ. ಸಣ್ಣ ವ್ಯವಹಾರಗಳು ಮತ್ತು ಸ್ಥಳೀಯ ಪ್ರತಿಭೆಗಳು ಈಗ ಜಾಗತಿಕ ಮನ್ನಣೆಯನ್ನು ಪಡೆಯುತ್ತಿವೆ. ಹೀಗೆ, ಸಾಮಾಜಿಕ ಮಾಧ್ಯಮವು ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗೆ ಪರಿಣಾಮಕಾರಿ ಮಾಧ್ಯಮವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version