Nail Polish: ಉಗುರುಗಳಿಗೆ ವಿಧವಿಧದ ಬಣ್ಣ ಹಚ್ಚುವ ಮುನ್ನ ಈ ವಿಷ್ಯ ತಿಳಿದಿರಲಿ; ಜ್ಯೋತಿಷ್ಯ ಸಲಹೆ ಇಲ್ಲಿದೆ
ಸನಾತನ ಹಿಂದೂ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದಲೂ ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಇಂದಿನ ಯುಗದಲ್ಲೂ ಸೌಂದರ್ಯವು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ಈ ಸೌಂದರ್ಯದ ಒಂದು ಭಾಗವೇ ಉಗುರುಗಳಿಗೆ ಬಣ್ಣ ಹಚ್ಚುವುದು, ಇದನ್ನು ನಾವು ನೈಲ್ ಪಾಲಿಶ್ ಎಂದು ಕರೆಯುತ್ತೇವೆ. ಈ ಅಭ್ಯಾಸವು ಮುಖ್ಯವಾಗಿ ಮಹಿಳೆಯರಲ್ಲಿ ಹೆಚ್ಚು ಪ್ರಚಲಿತವಿದ್ದರೂ, ಕೆಲವೊಮ್ಮೆ ಪುರುಷರೂ ಇದನ್ನು ಬಳಸುವುದನ್ನು ಕಾಣಬಹುದು. ಆದರೆ, ಇದು ಕೇವಲ ಸೌಂದರ್ಯಕ್ಕೆ ಸೀಮಿತವಲ್ಲ, ನಮ್ಮ ಜ್ಯೋತಿಷ್ಯ ಶಾಸ್ತ್ರ ಮತ್ತು ಸಾಮುದ್ರಿಕ ಶಾಸ್ತ್ರದ…