Headlines

ರಾಜಕೀಯವಾಗಿ ನಾವು ಸಿದ್ಧರಿದ್ದೇವೆ: SIR ಮುಗಿದ ತಕ್ಷಣ ಜಿಬಿಎ ಎಲೆಕ್ಷನ್ ಎಂದ ಕೃಷ್ಣಬೈರೇಗೌಡ – Kannada News | We Are Politically Prepared: Krishna Byre Gowda Says GBA Elections Will Be Held Immediately After SIR

ದೆಹಲಿ, ಜುಲೈ 17: ‘‘ಸರ್ಕಾರಕ್ಕೆ ಸಮಯ ಕೇಳುವ ಉದ್ದೇಶವಿಲ್ಲ. ನಾವು ಜಿಬಿಎ ಚುನಾವಣೆ ಮಾಡಲಿಕೆ ರಾಜಕೀಯವಾಗಿ ಸಿದ್ಧವಾಗಿದ್ದೇವೆ. ಎಸ್​ಐಆರ್ ನಡೆಯುವಾಗ ಚುನಾವಣೆ ಮಾಡಿದರೆ ಸರಿಯಾಗಿರಲ್ಲ, ಹೀಗಾಗಿ‌‌ ಎಸ್​ಐಆರ್​ ಮುಗಿದ ಬಳಿಕ ಚುನಾವಣೆ ನಡೆಯಲಿದ್ದು, ಇದರಲ್ಲಿ ಯಾವ ರಾಜಕೀಯ ಉದ್ದೆಶ ಇಲ್ಲ’’ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. ಡಿಸೆಂಬರೊಳಗೆ ಜಿಬಿಎ ಎಲೆಕ್ಷನ್​​​ ವಿಚಾರವಾಗಿ ಮಾತನಾಡಿದ ಅವರು, ‘‘ಪ್ರಸ್ತುತ SIR ಪ್ರಕ್ರಿಯೆಯಲ್ಲಿ ಅಧಿಕಾರಿಗಳು ತೊಡಗಿಸಿಕೊಂಡಿದ್ದು, ಇದು ಸಂಪೂರ್ಣಗೊಳ್ಳಲು ಸಮಯ ತೆಗೆದುಕೊಳ್ಳುತ್ತಿದೆ. ಆಗಸ್ಟ್ 8ರ ನಂತರ ಆಕ್ಷೇಪಣೆಗಳನ್ನು ಆಹ್ವಾನಿಸಿ, ಅಂತಿಮ ಮತದಾರರ…

Read More

ರೆಕಾರ್ಡ್ ಬುಕ್‌ನಿಂದ ಮಾಯವಾಯ್ತು ಅಭಿಷೇಕ್ ಶರ್ಮಾ ಅರ್ಧಶತಕ..! – Kannada News | Abhishek Sharma’s Milestone Erased Post Match

ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದಲ್ಲಿ ಅಪರೂಪ ಎನಿಸುವ ಘಟನೆಯೊಂದಕ್ಕೆ ಭಾರತ ಮತ್ತು ಐರ್ಲೆಂಡ್ ನಡುವಣ ಮೊದಲ ಟಿ20 ಪಂದ್ಯ ಸಾಕ್ಷಿಯಾಗಿದೆ. ಕೇವಲ 19 ಎಸೆತಗಳಲ್ಲಿ ಭರ್ಜರಿ 50 ರನ್ ಚಚ್ಚಿ ಸಂಭ್ರಮಿಸಿದ್ದ ಭಾರತದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಅರ್ಧಶತಕವನ್ನು ಪಂದ್ಯದ ನಂತರ ಅಧಿಕೃತ ದಾಖಲೆಯಿಂದ ಕೈಬಿಡಲಾಗಿದೆ. ಅಲ್ಲದೆ ಅವರ ಸ್ಕೋರ್​ ಅನ್ನು  50 ರಿಂದ 49 ರನ್‌ಗಳಿಗೆ ಪರಿಷ್ಕರಿಸಲಾಗಿದೆ. ರನ್ ಕಡಿತವೇಕೆ? ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡವು 20 ಓವರ್​ಗಳಲ್ಲಿ 182…

Read More

Daily Devotional: ಬಲಗೈಯಿಂದಲೇ ಆಶೀರ್ವಾದ ಮಾಡುವುದು ಯಾಕೆ ಗೊತ್ತಾ? – Kannada News | Daily Devotional: Why Blessings Are Traditionally Given with the Right Hand

ಬೆಂಗಳೂರು, ಫೆಬ್ರವರಿ​ 27: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿಬಲಗೈಯಿಂದ್ಲೇ ಆಶೀರ್ವಾದ ಮಾಡುವುದು ಯಾಕೆ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಸನಾತನ ಹಿಂದೂ ಸಂಸ್ಕೃತಿಯಲ್ಲಿ ಗುರುಗಳು, ಹಿರಿಯರು ಮತ್ತು ಮಠಾಧೀಶರು ನಮಸ್ಕಾರ ಮಾಡಿದಾಗ ಆಶೀರ್ವಾದ ನೀಡುವುದು ಒಂದು ಪದ್ಧತಿಯಾಗಿದೆ. ಈ ಆಶೀರ್ವಾದವನ್ನು ಸಾಮಾನ್ಯವಾಗಿ ಬಲಗೈಯಿಂದಲೇ ನೀಡಲಾಗುತ್ತದೆ. ದೇಹವನ್ನು ಎರಡು ಭಾಗಗಳಾಗಿ ವಿಂಗಡಿಸಿದಾಗ, ಬಲಭಾಗವನ್ನು ಸೂರ್ಯ ಭಾಗ ಮತ್ತು ಎಡಭಾಗವನ್ನು ಚಂದ್ರ ಭಾಗ ಅಥವಾ ವಾಮ ಭಾಗ ಎಂದು ಕರೆಯಲಾಗುತ್ತದೆ. ಬಲಗೈಗೆ ಹೆಚ್ಚಿನ ಪ್ರಾಶಸ್ತ್ಯವಿದ್ದು, ಊಟ ಮಾಡುವುದು, ವಿಭೂತಿ ಅಥವಾ…

Read More

ಸೊಳ್ಳೆ ಓಡಿಸಲು ಬಳಸುವ ಅಗರಬತ್ತಿಗಳಿಂದ ಬರಬಹುದು ಗಂಭೀರ ಕಾಯಿಲೆ! ಸಮೀಕ್ಷೆಯಲ್ಲಿ ಆತಂಕಕಾರಿ ಮಾಹಿತಿ ಬಹಿರಂಗ – Kannada News | Is Your Mosquito Agarbatti Safe? How To Identify Legal Vs Illegal Brands

ಮನೆಗಳಲ್ಲಿ ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ಅನೇಕರು ಸೊಳ್ಳೆ ಅಗರಬತ್ತಿ (Mosquito Agarbatti), ಕಾಯಿಲ್ ಮತ್ತು ವಿವಿಧ ಮಸ್ಕಿಟೋ ರಿಪೆಲೆಂಟ್‌ಗಳನ್ನು ಬಳಸುತ್ತಾರೆ. ಇವು ಸೊಳ್ಳೆಗಳನ್ನು ದೂರವಿಡಲು ಸಹಾಯ ಮಾಡಿದರೂ, ಎಲ್ಲ ಉತ್ಪನ್ನಗಳು ಸಂಪೂರ್ಣ ಸುರಕ್ಷಿತವಾಗಿರುತ್ತವೆ ಎನ್ನುವುದು ತಪ್ಪು ಕಲ್ಪನೆ. ಅದರಲ್ಲಿಯೂ ಇತ್ತೀಚೆಗೆ ಬಿಡುಗಡೆಯಾದ ಎಚ್ಐಸಿಎ (Home Insect Control Association) ಎಂಬ ಸಮೀಕ್ಷೆ ಈ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದು ಇವು ಸೊಳ್ಳೆಗಳನ್ನು ಸಾಯಿಸುವುದರ ಜೊತೆಗೆ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ಸಿಐಆರ್ ನೋಂದಣಿ ಸಂಖ್ಯೆ ಇಲ್ಲದ ಸೊಳ್ಳೆ ನಿವಾರಕ…

Read More

Video: ಎಷ್ಟು ಚಂದ ಈ ಬಾಂಧವ್ಯ; ಅಪ್ಪನಿಗೆ ತನ್ನ ಪುಟ್ಟ ಕೈಗಳಿಂದ ಕೈ ತುತ್ತು ನೀಡಿದ ಪುಟಾಣಿ

ತಾಯಿ ತನ್ನ ಕಂದಮ್ಮನನ್ನು ಒಂಬತ್ತು ತಿಂಗಳು ಗರ್ಭದಲ್ಲಿಟ್ಟುಕೊಂಡರೆ, ತಂದೆ (father) ತನ್ನ ಹೆಗಲ ಮೇಲೆ ಕೂರಿಸಿಕೊಂಡು ಪ್ರಪಂಚವನ್ನು ತೋರಿಸುತ್ತಾನೆ. ಹೀಗಾಗಿ ಪ್ರತಿಯೊಬ್ಬ ಮಗಳಿಗೂ (daughter) ಅಪ್ಪ ಅಂದ್ರೆ ಆಕಾಶನೇ. ತಂದೆಗೂ ತನ್ನ ಮಗಳೆಂದರೆ ಜೀವಕ್ಕಿಂತಲೂ ಹೆಚ್ಚು. ಮಗಳ ಯಾವುದೇ ಬೇಡಿಕೆಗೆ ಇಲ್ಲ ಎನ್ನದೇ ಈಡೇರಿಸುತ್ತಾನೆ.  ಇತ್ತ ತಮದೆಗೆ ಮಗಳು ತಾಯಿ ಪ್ರೀತಿಸುತ್ತಾಳೆ. ಇದೀಗ ಮಗಳೊಬ್ಬಳು ಕೆಲಸದಲ್ಲಿದ್ದ ಬ್ಯುಸಿಯಾಗಿದ್ದ ತಂದೆಗೆ ತನ್ನ ಪುಟ್ಟ ಕೈಗಳಿಂದ ಕೈ ತುತ್ತು ನೀಡಿರುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು…

Read More

ಪೊಲೀಸರ ಕೊರಳ ಪಟ್ಟಿ ಹಿಡಿದು ರಂಪಾಟ: ಜೀಪ್​​​​​​​ನಿಂದ ಇಳಿಯದ PSI ಸಸ್ಪೆಂಡ್, 8 ಜನ ಸಿಬ್ಬಂದಿ ಎತ್ತಂಗಡಿ – Kannada News | Haliyala PSI Suspended and Other 8 Staff Transfer Over rowdy manja video viral

ಕಾರವಾರ, (ಜೂನ್ 17): ಜಿಲ್ಲೆಯ ಹಳಿಯಾಳದಲ್ಲಿ (haliyala) ಮಾಜಿ ರೌಡಿ ಶೀಟರ್ ‘ಮಚ್ಚುಮಂಜ’ ಎಂಬಾತ ಪೊಲೀಸರ ಕೊರಳ ಪಟ್ಟಿ ಹಿಡಿದು, ಅವಾಚ್ಯ ಶಬ್ದಗಳಿಂದ ನಿಂದಿಸಿದರೂ ಸಹ ಜೀಪ್​​​​​​​ನಲ್ಲೇ ಕುಳಿತು ನೋಡುತ್ತಿದ್ದ ಪಿಎಸ್​​​​ಐ ಸಸ್ಪೆಂಡ್ ಆಗಿದ್ದಾರೆ. ಸಾರ್ವಜನಿಕರ ಎದುರೇ ತಮ್ಮ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಬೈಯುತ್ತಿದ್ದರೂ ಜೀಪಿನಿಂದ ಇಳಿಯದೇ ನೋಡುತ್ತ ಕುಳಿತ್ತಿದ್ದ ಹಳಿಯಾಳ PSI ಬಸವರಾಜ್ ಮಬನೂರ ಅವರನ್ನ ಅಮಾನತು ಮಾಡಿ ಉತ್ತರ ಕನ್ನಡ (Uttara Kannada) ಎಸ್ಪಿ ದೀಪನ್ ಆದೇಶ ಹೊರಡಿಸಿದ್ದಾರೆ. ಜೊತೆಗೆ ಹಳಿಯಾಳ ಪೊಲೀಸ್…

Read More

ಸಕ್ರೆಬೈಲಿನಲ್ಲಿ ಒಡೆಯನಿಲ್ಲದೆ ‘ಭೀಷ್ಮ’ ಆನೆ ಅನಾಥ: ಹೆತ್ತ ಮಗನಂತೆ ಸಾಕಿ ಸಲಹುತ್ತಿದ್ದ ಮಾವುತ ಸಿದ್ದಿಕ್ ಪಾಷಾ ಇನ್ನಿಲ್ಲ – Kannada News | Siddique Pasha: Sakrebailu Elephant Camp Mourns Beloved Mahout’s Untimely Demise

ಶಿವಮೊಗ್ಗ, ಜೂ.12: ರಾಜ್ಯದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಪ್ರಕೃತಿ ಪ್ರೇಮಿಗಳ ಸ್ವರ್ಗ ಎಂದೇ ಹೆಸರಾಗಿರುವ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಸದ್ಯ ಸೂತಕದ ಛಾಯೆ ಆವರಿಸಿದೆ. ಕಳೆದ 16 ವರ್ಷಗಳಿಂದ ಕಾಡಾನೆಗಳನ್ನು ಅತ್ಯಂತ ಪ್ರೀತಿಯಿಂದ ಪಳಗಿಸಿ, ಸಲಹುತ್ತಿದ್ದ ಬಿಡಾರದ ದಕ್ಷ ಮಾವುತ ಸಿದ್ದಿಕ್ ಪಾಷಾ (39) ಅವರು ಅನಾರೋಗ್ಯದಿಂದ ಅಕಾಲಿಕ ನಿಧನ ಹೊಂದಿದ್ದಾರೆ. ನೆಚ್ಚಿನ ಮಾವುತನ ಅಗಲಿಕೆಯಿಂದಾಗಿ ಇಡೀ ಆನೆ ಬಿಡಾರದಲ್ಲಿ ಸದ್ಯ ಮೌನ ನೆಲೆಸಿದೆ. ಸುತ್ತಲೂ ದಟ್ಟ ಅರಣ್ಯ, ತುಂಗಾ ನದಿಯ ಹಿನ್ನೀರಿನ…

Read More

ಧರ್ಮಸ್ಥಳ ಬುರುಡೆ ಕೇಸ್‌: ಚಿನ್ನಯ್ಯನ ಬ್ರೈನ್ ಮ್ಯಾಪಿಂಗ್ ಮಾಡವಂತೆ ಎಸ್​ಐಟಿಗೆ ಗಿರೀಶ್ ಮಟ್ಟಣ್ಣನವರ್​​ ದೂರು – Kannada News | Dharmasthala Case: Girish Mattennavar Files SIT Complaint Against Chinnayya, Seeks Brain Mapping

ಗಿರೀಶ್ ಮಟ್ಟಣ್ಣನವರ್, ಚಿನ್ನಯ್ಯ Image Credit source: tv9 kannada ಮಂಗಳೂರು, ಜೂನ್​​ 07: ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ (Dharmasthala Mass Burial Case) ಸಂಬಂಧಿಸಿದಂತೆ ಮಾಸ್ಕ್​ಮ್ಯಾನ್ ಚಿನ್ನಯ್ಯ, ತಮ್ಮದೇ ಬುರುಡೆ ಗ್ಯಾಂಗ್ ವಿರುದ್ಧ ತಿರುಗಿ ಬಿದ್ದಿದ್ದಾನೆ. 200 ಕೋಟಿ ರೂ ಫಂಡಿಂಗ್ ಮತ್ತು ನಟ ಪ್ರಕಾಶ್ ರಾಜ್ ಹೆಸರನ್ನು ಉಲ್ಲೇಖಿಸಿ ನ್ಯಾಯಾಲಯಕ್ಕೆ ರಿಟ್ ಅರ್ಜಿ  ಕೂಡ ಸಲ್ಲಿದ್ದಾನೆ. ಇದೀಗ ಗಿರೀಶ್ ಮಟ್ಟಣ್ಣನವರ್​​ (Girish Mattannavar), ಚಿನ್ನಯ್ಯ ಬ್ರೈನ್ ಮ್ಯಾಪಿಂಗ್​​ ಮತ್ತು ಆತ ಸಲ್ಲಿರುವ ರಿಟ್ ಅರ್ಜಿ…

Read More

‘ಕೆಡಿ’ ಚಿತ್ರದಲ್ಲಿಲ್ಲ ‘ಸರ್ಸೆ ಸರ್ಸೆ’ ಹಾಡು; ಅಪ್​​ಡೇಟ್​ ಕೊಟ್ಟ ಪ್ರೇಮ್

‘ಕೆಡಿ’ ಸಿನಿಮಾದ ‘ಸರ್ಸೆ ಸರ್ಸೆ’ ಹಾಡು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ವಿವಾದದ ಬಳಿಕ ಯೂಟ್ಯೂಬ್​​ನಿಂದಲೇ ಹಾಡನ್ನು ತೆಗೆಯಲಾಗಿದೆ. ಈಗ ಸಿನಿಮಾದಲ್ಲೂ ಈ ಹಾಡು ಇಲ್ಲ. ಈ ಬಗ್ಗೆ ಪ್ರೇಮ್ ಮಾತನಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಹಾಡನ್ನು ಸಿನಿಮಾದಲ್ಲಿ ಸೇರ್ಪಡೆ ಮಾಡೋದಾಗಿ ಅವರು ಹೇಳಿದ್ದಾರೆ. ಇದನ್ನು ಕೇಳಿ ಪಡ್ಡೆ ಹುಡುಗರು ಖುಷಿಪಟ್ಟಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ. Source link

Read More

‘ನಾನು ನಿರ್ಮಿಸಿದ ಎಲ್ಲಾ ಸಿನಿಮಾಗಳು ನಷ್ಟವನ್ನೇ ಮಾಡಿವೆ’; ವಿಜಯ್ ಸೇತುಪತಿ ಬೇಸರ

ಸ್ಟಾರ್ ಹೀರೋ ಆಗಿ ಬೆಳೆದ ಬಳಿಕ ಕೆಲವರಿಗೆ ಸಿನಿಮಾ ನಿರ್ಮಾಣ ಮಾಡುವ ಹುಮ್ಮಸ್ಸು ಬರುತ್ತದೆ. ಹಾಗಂತ ಅದನ್ನು ಮಾಡೋದ್ರಲ್ಲಿ ಸ್ವಾರ್ಥ ಇದೆ ಎಂದರ್ಥವಲ್ಲ. ಹೊಸ ಪ್ರತಿಭೆಗಳಿಗೆ ಅವಕಾಶ ಸಿಗಲಿ ಎಂಬುದು ಇದರ ಮುಖ್ಯ ಉದ್ದೇಶ ಆಗಿರುತ್ತದೆ. ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ಕೂಡ ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಹೊಸ ಸಿನಿಮಾಗಳನ್ನು ಅವರು ನಿರ್ಮಿಸುತ್ತಿದ್ದಾರೆ. ಅವರು ಬಂಡವಾಳ ಹಾಕಿದ ಸಿನಿಮಾಗಳೆಲ್ಲ ಬಾಕ್ಸ್ ಆಫೀಸ್​​​ನಲ್ಲಿ ಸೋತಿವೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ಭಾರದ್ವಾಜ್ ರಂಗನ್ ಜೊತೆ ‘ಗಲಾಟಾ…

Read More