ಜಿಬಿಎ ವ್ಯಾಪ್ತಿಯಲ್ಲಿ ಶೇ 76.32ರಷ್ಟು ಮ್ಯಾಪಿಂಗ್: ಬೆಂಗಳೂರಿನಲ್ಲಿ SIR ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದ ಆಯುಕ್ತರು – Kannada News | 76.32% mapping in GBA area: Commissioner Maheshwar Rao briefs about SIR process in Bengaluru

GBA ಮುಖ್ಯ ಆಯುಕ್ತ ಮಹೇಶ್ವರ ರಾವ್Image Credit source: tv9 kannada

ಬೆಂಗಳೂರು, ಜೂನ್​​ 29: ಕೇಂದ್ರ ಚುನಾವಣಾ ಆಯೋಗ ದೇಶಾದ್ಯಂತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (SIR) ಮುಂದಾಗಿದೆ. ಹೀಗಾಗಿ ಕರ್ನಾಟಕದಲ್ಲಿ ನಾಳೆಯಿಂದ (ಜೂನ್ 30ರಿಂದ) ಎಸ್​ಐಆರ್​ ಶುರುವಾಗಲಿದೆ. ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಇತ್ತ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲೂ ನಾಳೆಯಿಂದ ಜುಲೈ 29ರವರೆಗೂ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ, ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರ್ ರಾವ್ ಹೇಳಿದ್ದಾರೆ.

76.32% ರಷ್ಟು ಮ್ಯಾಪಿಂಗ್ ಆಗಿದೆ ಎಂದ ಮಹೇಶ್ವರ್ ರಾವ್

ರಾಜ್ಯಾದ್ಯಂತ ನಾಳೆಯಿಂರ ಎಸ್​ಐಆರ್​​ ಆರಂಭ ಹಿನ್ನಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಬಿಎ ಮುಖ್ಯ ಆಯುಕ್ತ, ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರ್ ರಾವ್,  ಜಿಬಿಎ ವ್ಯಾಪ್ತಿಯಲ್ಲಿ ನಾಳೆಯಿಂದ ಜುಲೈ 29ರವರೆಗೂ ನಡೆಯಲಿದೆ. 1,03,88, 363 ಮತದಾರರ ಅಂದರೆ 76.32% ರಷ್ಟು ಮ್ಯಾಪಿಂಗ್ ಆಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಮಂಗಳವಾರದಿಂದ ರಾಜ್ಯದಲ್ಲಿ SIR ಪ್ರಕ್ರಿಯೆ ಶುರು: ಜಾಗೃತಿ ವಹಿಸದಿದ್ರೆ ಮಾರಣಹೋಮ ಎಂದ ಸಿದ್ದರಾಮಯ್ಯ

ಇನ್ನು ಜಿಬಿಎ ವ್ಯಾಪ್ತಿಯಲ್ಲಿ 28 ಮತದಾರರ ನೊಂದಣಾಧಿಕಾರಿಗಳು, 75 ಸಹಾಯಕ ಮತದಾರರ ನೋಂದಣಾಧಿಕಾರಿಗಳು, 905 BLO ಸೂಪರ್ವೈಸರ್​ಗಳು, 8972 ಬಿಎಲ್​ಓಗಳ ನೇಮಕ ಮಾಡಲಾಗಿದೆ. 16505 ರಾಜಕೀಯ ಪಕ್ಷಗಳ ಮುಖಂಡರ ಬಿಎಲ್​​ಓಗಳೂ ಹಾಜರಿರಲಿದ್ದಾರೆ ಎಂದು ತಿಳಿಸಿದರು.

ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು 8972 ಮತಗಟ್ಟೆಗಳು

ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು 8972 ಮತಗಟ್ಟೆಗಳಿವೆ. 7685 ಕಾಂಗ್ರೆಸ್, 8193 ಬಿಜೆಪಿ, 831 ಜೆಡಿಎಸ್, 90 ಎಎಪಿ ಮತ್ತು ಪಕ್ಷದ ಮುಖಂಡರು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವೇಳೆ ಬಿಎಲ್​​ಓಗಳ ಜತೆ ಇರಲಿದ್ದಾರೆ ಎಂದು ಮಹೇಶ್ವರ್ ರಾವ್ ಮಾಹಿತಿ ನೀಡಿದರು. ಇನ್ನು ಸುದ್ದಿಗೋಷ್ಠಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಖ್ಯ ಆಯುಕ್ತ ಮಹೇಶ್ವರ ರಾವ್, ವಿಶೇಷ ಆಯುಕ್ತರು ಸೇರಿದಂತೆ ಐವರು ನಗರ ಪಾಲಿಕೆಗಳ ಆಯುಕ್ತರು ಭಾಗಿಯಾಗಿದ್ದರು.

ಮನೆ ಮನೆ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳುವ ಕುರಿತು ಬಿಎಲ್​​ಓ ಹಾಗೂ ಬಿಲ್​ಎಗಳಿಗೆ ತರಬೇತಿ ನೀಡಲಾಗಿದೆ. ಮತದಾರರು ಗಣತಿ ನಮೂನೆಗಳನ್ನು ನೀಡುವ ಸಂದರ್ಭದಲ್ಲಿ ಲಭ್ಯವಿರದ ಸಂದರ್ಭದಲ್ಲಿ ಇನ್ನು ಎರಡು ಭಾರಿ ಭೇಟಿ ನೀಡಿ ಗಣತಿ ನಮೂನೆಗಳನ್ನು ನೀಡಲು ಕ್ರಮ ವಹಿಸಲಾಗುವುದು. ಆನ್‌ಲೈನ್ ವಿಧಾನದ ಮೂಲಕ ಅಪ್‌ ಲೋಡ್ ಮಾಡಲು ಸೌಲಭ್ಯವನ್ನು ಸಹ ಕಲ್ಪಿಸಲಾಗಿದೆ. ಪ್ರತಿಯೊಬ್ಬ ಮತದಾರರು ಈ ನಮೂನೆಯನ್ನು ಅಗತ್ಯ ಮಾಹಿತಿ ಮತ್ತು ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ಮತಗಟ್ಟೆ ಸ್ತರದ ಅಧಿಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸುವಂತೆ ತಿಳಿಸಿದರು.

ಇದನ್ನು ಓದಿ: ಮನೆ ಶಿಫ್ಟ್ ಮಾಡಿದವರಿಗೆ ಬಿಗ್ ಶಾಕ್ ಕಾದಿದೆ; ನಾಳೆಯಿಂದ ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ ‘SIR’ ಮತದಾರರ ಪಟ್ಟಿ ಪರಿಷ್ಕರಣೆ

ಮತದಾರನು ದಾಖಲೆಗಳೊಂದಿಗೆ ಭರ್ತಿ ಮಾಡಿದ ನಮೂನೆಯನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಿದ ಸಂದರ್ಭದಲ್ಲಿ, ಮತಗಟ್ಟೆ ಮಟ್ಟದ ಅಧಿಕಾರಿಗಳು ಆ ಮತದಾರರ ಮನೆಗೆ ಭೇಟಿ ನೀಡಿದಾಗ ಆ ದಾಖಲೆಯನ್ನು ಪರಿಶೀಲಿಸುತ್ತಾರೆ. ಮತದಾರರ ನೋಂದಣಾಧಿಕಾರಿ ಕಛೇರಿಯಲ್ಲಿ ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿ ಕಛೇರಿಯಲ್ಲಿ 2855 ಮತದಾರರ ಸಹಾಯ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:20 pm, Mon, 29 June 26

Source link

‘ದಿ ರಾಯಲ್ ಕೋಹಿನೂರ್ ಹೈಸ್ಟ್’ – ಅಮೂಲ್ಯ ವಜ್ರದ ಇತಿಹಾಸಕ್ಕೆ ಮರುಜೀವ ನೀಡುವ ಗೌರವ್ ಕರ್ರಿರ್ ಅವರ ಪತ್ತೇದಾರಿ ಕಾದಂಬರಿ – Kannada News | Book Review: A New Historical Thriller Brings the Kohinoor Legend to Life

‘ದಿ ರಾಯಲ್ ಕೊಹಿನೂರ್ ಹೈಸ್ಟ್’ ಪುಸ್ತಕImage Credit source: TV9 Network

ಭಾರತೀಯ ಸಾಹಿತ್ಯ ಲೋಕದಲ್ಲಿ ಐತಿಹಾಸಿಕ ಪತ್ತೇದಾರಿ (Historical Thriller) ಕಾದಂಬರಿಗಳು ಬರುವುದು ತುಂಬಾ ಅಪರೂಪ. ಈ ಕಾರಣಕ್ಕಾಗಿಯೇ ಹೊಸದಾಗಿ ಮಾರುಕಟ್ಟೆಗೆ ಬಂದಿರುವ ‘ದಿ ರಾಯಲ್ ಕೋಹಿನೂರ್ ಹೈಸ್ಟ್ – ಎ 1930ಸ್ ಸ್ಪೈ ಥ್ರಿಲ್ಲರ್’ (The Royal Kohinoor Heist – A 1930s Spy Thriller) ಕಾದಂಬರಿಯು ಓದುಗರಿಗೆ ಒಂದು ವಿಭಿನ್ನ ಅನುಭವವನ್ನು ನೀಡುತ್ತದೆ.

ಹೊಸ ಲೇಖಕರಾದ ಗೌರವ್ ಎಸ್. ಕರ್ರಿರ್ (Gaurav S. Karrir) ಅವರು ಬರೆದಿರುವ ಈ ಚೊಚ್ಚಲ ಕಾದಂಬರಿಯು, ಜಗತ್ಪ್ರಸಿದ್ಧ ‘ಕೋಹಿನೂರ್’ ವಜ್ರದ ಸುತ್ತ ಹೆಣೆಯಲಾದ ಕಾಲ್ಪನಿಕ ಕಥೆಯಾಗಿದೆ. ಆದರೆ, ಇದಕ್ಕೆ ಲೇಖಕರು ನೈಜ ಐತಿಹಾಸಿಕ ಘಟನೆಗಳ ಹಿನ್ನೆಲೆಯನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ.

‘ದಿ ರಾಯಲ್ ಕೋಹಿನೂರ್ ಹೈಸ್ಟ್’ ಕಥೆಯ ಸಾರಾಂಶ

ಈ ಕಾದಂಬರಿಯಲ್ಲಿಯ ಕಥೆಯ ಮುಖ್ಯ ನಾಯಕ ಕೆಹರ್ ಸಿಂಗ್, ಪಂಜಾಬ್‌ನ ಒಬ್ಬ ಸಾಮಾನ್ಯ ಸಿಖ್ ಯುವಕ. ಕೋಹಿನೂರ್ ವಜ್ರದ ಮೇಲಿನ ಅವನ ಅತಿಯಾದ ಆಕರ್ಷಣೆ, ಮುಂದೆ ಅವನ ಜೀವನದ ಅತಿ ದೊಡ್ಡ ಗುರಿಯಾಗಿ ಬದಲಾಗುತ್ತದೆ. ಆ ವಜ್ರವನ್ನು ಹಿಂಪಡೆಯುವ ಸಾಹಸದ ಹಾದಿಯಲ್ಲಿ ಅವನು 1930ರ ದಶಕದ ಅತ್ಯಂತ ಪ್ರಕ್ಷುಬ್ಧ ಪ್ರದೇಶಗಳಾದ ನಾಜಿ ಜರ್ಮನಿ ಮತ್ತು ಎರಡನೇ ಮಹಾಯುದ್ಧದ ಮುನ್ನಾದಿನಗಳಲ್ಲಿದ್ದ ಲಂಡನ್ ನಗರಗಳಿಗೆ ಪ್ರಯಾಣಿಸುತ್ತಾನೆ. ಈ ಪ್ರಯಾಣದಲ್ಲಿ ಅವನು ರಹಸ್ಯ ಬೇಹುಗಾರಿಕೆ (Espionage), ರಾಜಕೀಯ ಪಿತೂರಿಗಳು ಮತ್ತು ಜೀವಕ್ಕೆ ಅಪಾಯ ತರುವಂತಹ ಕಠಿಣ ಸನ್ನಿವೇಶಗಳನ್ನು ಎದುರಿಸುತ್ತಾನೆ. ಇವು ಆತನ ಧೈರ್ಯ ಮತ್ತು ದೇಶಪ್ರೇಮಕ್ಕೆ ಒಡ್ಡುವ ದೊಡ್ಡ ಪರೀಕ್ಷೆಗಳಾಗಿರುತ್ತವೆ.

ಇದನ್ನೂ ಓದಿ: ಪತ್ನಿ ಬಿಟ್ಟು ಹೋಗಿದ್ದಕ್ಕೆ ಇಡೀ ಪ್ರಪಂಚದ ಮೇಲೆ ಸೇಡು: ಮುಂಬೈನಲ್ಲಿ 15 ಸಾವಿರ ಜನರನ್ನು ಮುಗಿಸಲು ಇಲಿ ವಿಷದಿಂದಲೇ ಮಾತ್ರೆ ತಯಾರಿಸಿದ್ದ ಸೈಕೋ

‘ದಿ ರಾಯಲ್ ಕೋಹಿನೂರ್ ಹೈಸ್ಟ್’ ಕಾದಂಬರಿ ವಿಶೇಷತೆಗಳು

ಈ ಕಾದಂಬರಿಯು ಆ ಕಾಲದ ವಾತಾವರಣವನ್ನು ಓದುಗರ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ. ಕಥಾನಾಯಕ ಕೆಹರ್ ಸಿಂಗ್ ಯಾವುದೇ ಸೂಪರ್ ಹೀರೊ ಅಥವಾ ಪ್ರಸಿದ್ಧ ಐತಿಹಾಸಿಕ ವ್ಯಕ್ತಿಯಲ್ಲ; ಬದಲಿಗೆ ಅಸಾಮಾನ್ಯ ಕನಸನ್ನು ಬೆನ್ನಟ್ಟುವ ಒಬ್ಬ ಸಾಮಾನ್ಯ ಯುವಕ. ಹೀಗಾಗಿ ಓದುಗರು ಸುಲಭವಾಗಿ ಕಥೆಯೊಂದಿಗೆ ಕನೆಕ್ಟ್ ಆಗಬಹುದು.

ಇತಿಹಾಸ, ರೋಮಾಂಚನ ಮತ್ತು ಸಾಹಸಗಳನ್ನು ಅದ್ಭುತವಾಗಿ ಸಮ್ಮಿಲನಗೊಳಿಸಿರುವ ‘ದಿ ರಾಯಲ್ ಕೋಹಿನೂರ್ ಹೈಸ್ಟ್’ ಪುಸ್ತಕವು, ಐತಿಹಾಸಿಕ ಪತ್ತೇದಾರಿ ಕಥೆಗಳನ್ನು ಇಷ್ಟಪಡುವ ಓದುಗರಿಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ. ಭಾರತೀಯರ ಮನಸ್ಸಿನಲ್ಲಿ ಕೋಹಿನೂರ್ ವಜ್ರಕ್ಕೆ ಇರುವ ಭಾವನಾತ್ಮಕ ಸ್ಥಾನ ಮತ್ತು ಅದರ ಸುತ್ತಲಿನ ಕುತೂಹಲವನ್ನು ಈ ಕಾದಂಬರಿ ಮತ್ತೊಮ್ಮೆ ನೆನಪಿಸುತ್ತದೆ.

ಗೌರವ್ ಎಸ್ ಕರ್ರಿರ್ ಅವರ ಪರಿಚಯ

ಗೌರವ್ ಎಸ್ ಕರ್ರಿರ್ ಅವರೊಬ್ಬ ಲೈವ್ ಸ್ಪೋರ್ಟ್ಸ್ ಬ್ರಾಡ್​ಕ್ಯಾಸ್ಟರ್ ಆಗಿದ್ದಾರೆ. ಭಾರತದ ಎರಡು ಪ್ರಮುಖ ರೇಡಿಯೋ ನೆಟ್ವರ್ಕ್​ಗಳಲ್ಲಿ ಪ್ರೋಗ್ರಾಮಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡಿದವರಾಗಿದ್ದಾರೆ. 1990ರ ದಶಕದ ಕೊನೆಯಲ್ಲಿ ಕ್ರೈಮ್ ಮತ್ತು ಕೋರ್ಟ್ ರಿಪೋರ್ಟರ್ ಆಗುವುದರೊಂದಿಗೆ ಅವರ ಸ್ಟೋರಿಟೆಲಿಂಗ್ ಅಧ್ಯಾಯ ಆರಂಭವಾಗಿತ್ತು. ಎಂಬಿಬಿಎಸ್ ಫಸ್ಟ್ ಯಿಯರ್ ಎಂಬುದು ಅವರ ಚೊಚ್ಚಲ ಆಡಿಯೋ ಸೀರೀಸ್. ಅಲ್ಲಿಂದ ಮೊದಲಿಟ್ಟ ಅವರ ಕಥೆಗಾರಿಕೆ ಈಗ ಅವರ ಮೊದಲ ಕಾದಂಬರಿಯಾದ ‘ದಿ ರಾಯಲ್ ಕೊಹಿನೂರ್ ಹೈಸ್ಟ್’ ಹಂತಕ್ಕೆ ಬಂದಿದೆ.

ಐತಿಹಾಸಿಕ ಪ್ರಶ್ನೆ ಮತ್ತು ನಿರೂಪಣೆಯ ತೀವ್ರತೆ ಮಿಳಿತಗೊಂಡಿರುವ ಗೌರವ್ ಕರ್ರಿರ್ ಅವರ ಕಾದಂಬರಿಯು ಮನರಂಜನೆ ನೀಡುವುದು ಮಾತ್ರವಲ್ಲ, ಕೊಹಿನೂರ್ ವಜ್ರದ ಪಾರಂಪರಿಕತೆಯ ಸುತ್ತ ಸಂವಾದವನ್ನೂ ಹುಟ್ಟು ಹಾಕುತ್ತದೆ.

ಇದನ್ನೂ ಓದಿ: ಮಜಾ ಮಾಡಲು ಹೋಗಿ ಹೆಣವಾಗಿ ಮರಳಿದ ಪ್ರವಾಸಿಗ; 10 ಅಡಿ ಎತ್ತರದಿಂದ ಸ್ವಿಮ್ಮಿಂಗ್ ಪೂಲ್‌ಗೆ ಜಂಪ್ ಮಾಡಿದ ಯುವಕ ಸ್ಥಳದಲ್ಲೇ ಸಾವು

‘ದಿ ರಾಯಲ್ ಕೊಹಿನೂರ್ ಹೈಸ್ಟ್’ ಪುಸ್ತಕ ಖರೀದಿಸಲು ಲಿಂಕ್‌ಗಳು:

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 3:02 pm, Mon, 29 June 26

Source link

ರಾಮನ ಹಣ ಕದ್ದವರಿಗೆ ಮತ್ತೊಂದು ಶಾಕ್; ಆರೋಪಿಗಳ ಪರ ವಾದಿಸುವ ವಕೀಲರಿಗೆ 5 ಲಕ್ಷ ರೂ. ದಂಡದ ಎಚ್ಚರಿಕೆ! – Kannada News | Ayodhya Bar Association Refuses To Defend Ram Temple Donation Theft Case Accused Lawyers warned of Rs 5 lakh fine

ಲಕ್ನೋ, ಜೂನ್ 29: ಅಯೋಧ್ಯೆಯ ರಾಮ ಮಂದಿರದ (Ram Temple Donation Row) ದೇಣಿಗೆ ಕಳ್ಳತನದ ಆರೋಪದ ಪ್ರಕರಣವು ಈಗ ಹೊಸ ತಿರುವು ಪಡೆದುಕೊಂಡಿದೆ. ಮಂದಿರದ ದೇಣಿಗೆಯ ದುರುಪಯೋಗಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ 8 ಮಂದಿ ಆರೋಪಿಗಳ ಪರವಾಗಿ ತಮ್ಮ ಸಂಘದ ಯಾವುದೇ ಸದಸ್ಯರು ವಕಾಲತ್ತು ವಹಿಸುವುದಿಲ್ಲ ಎಂದು ಅಯೋಧ್ಯೆಯ ‘ಫೈಜಾಬಾದ್ ಬಾರ್ ಅಸೋಸಿಯೇಷನ್’ ನಿರ್ಣಯ ಕೈಗೊಂಡಿದೆ. ಅಷ್ಟೇ ಅಲ್ಲದೆ, ಈ ನಿರ್ಣಯವನ್ನು ಉಲ್ಲಂಘಿಸಿ ಆರೋಪಿಗಳ ಪರ ವಾದಿಸಲು ನ್ಯಾಯಾಲಯಕ್ಕೆ ಹಾಜರಾಗುವ ವಕೀಲರಿಗೆ 5 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ಅಸೋಸಿಯೇಷನ್ ಎಚ್ಚರಿಸಿದೆ.

ಇಂದು ನಡೆದ ಬಾರ್ ಅಸೋಸಿಯೇಷನ್‌ನ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ರಾಮ ಮಂದಿರದಲ್ಲಿ ಭಕ್ತರು ನೀಡಿದ ಕಾಣಿಕೆಯನ್ನು ಕಳ್ಳತನ ಮಾಡಿರುವುದರ ವಿರುದ್ಧ ಅಸೋಸಿಯೇಷನ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಭೆಯ ಸಂದರ್ಭದಲ್ಲಿ ಹಲವು ವಕೀಲರು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿರ್ವಹಣೆಯೊಂದಿಗೆ ಗುರುತಿಸಿಕೊಂಡಿರುವ ಆದರೆ ಎಫ್‌ಐಆರ್‌ನಲ್ಲಿ ಆರೋಪಿಗಳೆಂದು ಹೆಸರಿಸಲ್ಪಡದ ಚಂಪತ್ ರಾಯ್, ಅನಿಲ್ ಮಿಶ್ರಾ ಮತ್ತು ಗೋಪಾಲ್ ರಾವ್ ಅವರು ಅಯೋಧ್ಯೆಯನ್ನು ತೊರೆಯಬೇಕು ಎಂದು ಒತ್ತಾಯಿಸಿದರು. ಈ ಮೂವರು ಮುಂದಿನ ಮೂರು ದಿನಗಳೊಳಗೆ ನಗರವನ್ನು ತೊರೆಯದಿದ್ದರೆ, ಅಯೋಧ್ಯೆಯನ್ನು ಸಂಪೂರ್ಣವಾಗಿ ಬಂದ್ ಮಾಡುವ ಮೂಲಕ ಮತ್ತು ನಗರಕ್ಕೆ ಬರುವ ಪ್ರವೇಶವನ್ನು ನಿರ್ಬಂಧಿಸುವ ಮೂಲಕ ಬೃಹತ್ ಚಳವಳಿಯನ್ನು ಪ್ರಾರಂಭಿಸುವುದಾಗಿ ವಕೀಲರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ತಿಂಗಳಿಗೆ 15 ಸಾವಿರ ರೂ. ಸಂಬಳ, 22ನೇ ವಯಸ್ಸಿಗೆ ಕೋಟ್ಯಾಧಿಪತಿ: ರಾಮಮಂದಿರ ಕಾಣಿಕೆ ಲೂಟಿ ಮಾಡಿದ ಅನುಕಲ್ಪ್ ಮಿಶ್ರಾ ಅಕ್ರಮ ಆಸ್ತಿ ಕಂಡು ಪೊಲೀಸರೇ ಶಾಕ್!

ಬಾರ್ ಅಸೋಸಿಯೇಷನ್‌ನ ಈ ನಿರ್ಧಾರವನ್ನು ವಿವರಿಸಿದ ಸಂಘದ ಕಾರ್ಯದರ್ಶಿ ಶೈಲೇಂದ್ರ ಜೈಸ್ವಾಲ್, “ರಾಮ ಮಂದಿರದ ಕಾಣಿಕೆಯ ಕಳ್ಳತನದಿಂದ ನಮ್ಮೆಲ್ಲರ ಭಾವನೆಗಳಿಗೆ ತೀವ್ರ ಧಕ್ಕೆಯಾಗಿದೆ. ಹೀಗಾಗಿ ಬಂಧಿತ ಆರೋಪಿಗಳ ಪರವಾಗಿ ವಾದ ಮಾಡದಿರಲು ಫೈಜಾಬಾದ್‌ನ ವಕೀಲರು ಒಮ್ಮತದಿಂದ ಒಪ್ಪಿಕೊಂಡಿದ್ದಾರೆ” ಎಂದು ಹೇಳಿದ್ದಾರೆ. ಅಸೋಸಿಯೇಷನ್ ಅಂಗೀಕರಿಸಿದ ನಿರ್ಣಯದ ಪ್ರಕಾರ, ಈ ನಿರ್ಧಾರದ ಹೊರತಾಗಿಯೂ ಯಾರಾದರೂ ವಕೀಲರು ಆರೋಪಿಗಳ ಪರವಾಗಿ ಕೋರ್ಟ್‌ಗೆ ಹಾಜರಾದರೆ ಅವರು 5 ಲಕ್ಷ ರೂ. ದಂಡ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ರಾಮಮಂದಿರ ಕಾಣಿಕೆ ಲೂಟಿ ಪ್ರಕರಣದಲ್ಲಿ ಸ್ಫೋಟಕ ಟ್ವಿಸ್ಟ್!: ಬ್ಯಾಂಕ್ ಉದ್ಯೋಗಿಗಳಿಗೆ 3 ತಿಂಗಳ ಹಿಂದೆಯೇ ಸಿಕ್ಕಿತ್ತು ಕಳ್ಳತನದ ಸುಳಿವು

ರಾಮ ಮಂದಿರದ ದೇಣಿಗೆ ಕಳ್ಳತನದ ಪ್ರಕರಣದಲ್ಲಿ ಬಂಧಿತರಾಗಿರುವ 8 ಮಂದಿ ಆರೋಪಿಗಳನ್ನು ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್ ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮ್ ಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಮಾಶಂಕರ್ ಅಲಿಯಾಸ್ ಟೀನು ಯಾದವ್ ಎಂದು ಗುರುತಿಸಲಾಗಿದೆ. ತನಿಖಾಧಿಕಾರಿಗಳ ಪ್ರಕಾರ, ಈ ಎಂಟೂ ಜನ ಅಯೋಧ್ಯೆ ರಾಮ ಮಂದಿರಕ್ಕೆ ದೇಣಿಗೆಯಾಗಿ ಬರುವ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ಎಣಿಸುವ ಕಾರ್ಯದಲ್ಲಿ ತೊಡಗಿದ್ದರು. ರಾಮ ಮಂದಿರದ ದೇಣಿಗೆಯನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದ್ದು, ಇಂದಿನವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ತನಿಖೆಯ ಭಾಗವಾಗಿ, ಪೊಲೀಸ್ ತಂಡಗಳು ಭಾನುವಾರ ಎಲ್ಲಾ 8 ಆರೋಪಿಗಳ ನಿವಾಸಗಳ ಮೇಲೆ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದವು. ಈ ದಾಳಿಯ ಸಂದರ್ಭದಲ್ಲಿ, ಹಣದ ಅಕ್ರಮ ವರ್ಗಾವಣೆಯನ್ನು ಪತ್ತೆಹಚ್ಚಲು ಸಹಾಯ ಮಾಡುವ ಪ್ರಮುಖ ದಾಖಲೆಗಳು, ಆರ್ಥಿಕ ವಿವರಗಳು ಮತ್ತು ಇತರ ಸಾಮಗ್ರಿಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಮಂಗಳೂರಿನಲ್ಲಿ ಸಿನೀಮಿಯ ರೀತಿಯ ದರೋಡೆ: ಕೇರಳದ ಚಿನ್ನದ ವ್ಯಾಪಾರಿಯಿಂದ 20 ಲಕ್ಷ ರೂ. ಮೌಲ್ಯದ ಚಿನ್ನ, ಕಾರು ಕಳವು – Kannada News | Filmy Style Highway Robbery in Mangaluru: Gold Valued at Rs 20 Lakh and Car Stolen from Kerala Businessman

ಮಂಗಳೂರು, ಜೂನ್ 29: ಮಂಗಳೂರಿನ ಬೈಕಂಪಾಡಿ ಎಂಬಲ್ಲಿ ಹೆದ್ದಾರಿಯಲ್ಲಿ ಕೇರಳ ಮೂಲದ ಚಿನ್ನದ ವ್ಯಾಪಾರಿಯೊಬ್ಬರಿಂದ ಸಿನೀಮಿಯ ರೀತಿಯಲ್ಲಿ ದರೋಡೆ ಮಾಡಲಾಗಿದೆ. ವಿಕಾಸ್ ಎಂಬ ಹೆಸರಿನ ಚಿನ್ನದ ವ್ಯಾಪಾರಿ ಮಹಾರಾಷ್ಟ್ರದಿಂದ ಮದುವೆ ಮುಗಿಸಿ ತನ್ನ ಕುಟುಂಬದೊಂದಿಗೆ ಕೇರಳಕ್ಕೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮುಂಜಾನೆ 4 ಗಂಟೆಯ ಸುಮಾರಿಗೆ, ಸುರತ್ಕಲ್‌ನ ಬೈಕಂಪಾಡಿ ಹೆದ್ದಾರಿಯಲ್ಲಿ ಖದೀಮರು ವಿಕಾಸ್ ಅವರ ಕಾರನ್ನು ಅಡ್ಡಗಟ್ಟಿದ್ದಾರೆ. ಖದೀಮರು ವಿಕಾಸ್ ಅವರ ಪತ್ನಿ ಮತ್ತು ಪುತ್ರನನ್ನು ಬೆದರಿಸಿ ಕಾರಿನಲ್ಲಿದ್ದ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ದೋಚಿದ್ದಾರೆ. ದರೋಡೆಕೋರರು ಚಿನ್ನದೊಂದಿಗೆ ವಿಕಾಸ್ ಅವರ ಕಾರನ್ನೂ ಅಪಹರಿಸಿಕೊಂಡು ಹೋಗಿದ್ದಾರೆ. ಉಡುಪಿ-ಮಂಗಳೂರು ಸಂಪರ್ಕಿಸುವಂತಹ ರಾಷ್ಟ್ರೀಯ ಹೆದ್ದಾರಿಯಲ್ಲೇ ಈ ಕೃತ್ಯ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ರಸ್ತೆಯು ನಿರಂತರ ವಾಹನ ಸಂಚಾರದಿಂದ ಕೂಡಿದ್ದು, ಇಂತಹ ಘಟನೆ ನಡೆದಿರುವುದು ಪೊಲೀಸರ ನಿದ್ದೆಗೆಡಿಸಿದೆ.

ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದರೋಡೆಕೋರರು ಎರಡು ಇನ್ನೋವಾ ಮತ್ತು ಒಂದು ಸ್ವಿಫ್ಟ್ ಕಾರುಗಳಲ್ಲಿ ಬಂದಿದ್ದರೆಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಈ ಕೃತ್ಯದ ಹಿಂದೆ ಚಿನ್ನದ ವ್ಯಾಪಾರಿಯ ಚಲನವಲನಗಳ ಬಗ್ಗೆ ನಿಖರ ಮಾಹಿತಿ ಹೊಂದಿರುವವರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯೇಂದ್ರರನ್ನ ಕೆಳಗಿಳಿಸಲು ಪ್ಲ್ಯಾನ್? ಸದಾನಂದ ಗೌಡರದ್ದು ಎನ್ನಲಾದ ಆಡಿಯೋ ವೈರಲ್ – Kannada News | DV Sadananda Gowda talks about BY Vijayendra Change Audio viral sparks massive row In Karnataka BJP

ಬೆಂಗಳೂರು, (ಜೂನ್ 29): ಕರ್ನಾಟಕ ಬಿಜೆಪಿಯಲ್ಲಿ (Karnataka BJP) ಮತ್ತೆ ನಾಯಕಯತ್ವ ಬದಲಾವಣೆ ಚರ್ಚೆ ಮುನ್ನಲೆಗೆ ಬಂದಿದೆ. ಇದಕ್ಕೆ ಪೂಕರವೆಂಬಂತೆ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರ‌ರನ್ನು (BY VIjayendra) ಕೆಳಗಿಳಿಸಲು ದೆಹಲಿ ನಾಯಕರಲ್ಲಿ ಒತ್ತಾಯ ಮಾಡಿರುವ ಡಿವಿ ಸದಾನಂದ ಗೌಡ (DV Sadanandagowda) ಅವರದ್ದು ಎನ್ನಲಾದ ಆಡಿಯೋ ವೈರಲ್ (Audio Viral) ಆಗಿದೆ. ಬಿಜೆಪಿ ದೆಹಲಿ ಮಟ್ಟದ ನಾಯಕ ಪ್ರದೀಪ್ ಎಂಬುವವರ ಜೊತೆಗೆ ಇಂಗ್ಲಿಷ್ ಭಾಷೆಯಲ್ಲಿ ನಡೆಸಿದ ಸಂಭಾಷಣೆ ಇದಾಗಿದ್ದು, ಇದರಲ್ಲಿ ಮೂರು ತಿಂಗಳ ಬಳಿಕ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಿ ಎಂದು ಇದರಲ್ಲಿ ಬೇಡಿಕೆ ಇಡಲಾಗಿದೆ. ಈ ಆಡಿಯೋ ಇದೀಗ ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಮತ್ತೆ ಬಣ ಬಡಿದಾಟ ಶುರುವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರು ಇನ್ನು ಮೂರು ತಿಂಗಳಲ್ಲಿ ಮೂರು ವರ್ಷ ಪೂರೈಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಅವಧಿ ಮೂರು ವರ್ಷ ಇರುವುದು ಬಿಜೆಪಿಯಲ್ಲಿ ನಡೆದುಕೊಂಡು ಬಂದ ನಿಯಮವಾಗಿದೆ. ಇದೇ ಸಂದರ್ಭದಲ್ಲಿ ದೆಹಲಿ ಮಟ್ಟದ ನಾಯಕರೊಬ್ಬರ ಜೊತೆಗೆ ಡಿವಿ ಸದಾನಂದ ಗೌಡ ಅವರು ಮಾತನಾಡಿದ್ದಾರೆ ಎಂಬ ಆಡಿಯೋ ಹೊರಬಂದಿದ್ದು, ಡಿವಿ ಸದಾನಂದಗೌಡ ಅವರ ಧ್ವನಿಯನ್ನೇ ಹೋಲುವಂತಹ ಆಡಿಯೋ ಇದಾಗಿದೆ. ಹೀಗಾಗಿ ಸದ್ಯ ಬಿಜೆಪಿ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ.

ಇದನ್ನೂ ನೋಡಿ: ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?

ಆಡಿಯೋನಲ್ಲೇನಿದೆ?

ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ವರೆಗೂ ವಿಜಯೇಂದ್ರ‌ ಮುಂದುವರೆಯಲು ಬಿಡಿ, ಬಳಿಕ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿ ಎಂಬುವುದು ಆಡಿಯೋದಲ್ಲಿ ಉಲ್ಲೇಖವಾಗಿದೆ. ಈಗಲೇ ತೆಗೆದು ಹಾಕಿದ್ರೆ ಬಿಜೆಪಿ ಮತ್ತೆ ಲಿಂಗಾಯತ ವಿರೋಧಿ ಅಂತ ಟೀಕೆಗೆ ಗುರಿ ಆಗುವ ಅಪಾಯ ಇದೆ. ಇದು ಪಕ್ಷಕ್ಕೆ ಡ್ಯಾಮೇಜ್ ಆಗಬಹುದು. ಹಾಗಾಗಿ ಮುಂದಿನ ಅಕ್ಟೋಬರ್ ವರೆಗೂ ಕಾದು ವಿಜಯೇಂದ್ರ‌ ಅವರನ್ನು ಪದವಿಯಿಂದ ತೆಗೆಯುವಂತೆ ಮನವಿ ಮಾಡಲಾಗಿದೆ.

ಬಿವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಮೂರು ವರ್ಷ ಪೂರ್ಣಗೊಳಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಗೊಂದಲ ಮಾಡಿಕೊಳ್ಳುವುದು ಯಾಕೆ? ಎರಡು ತಿಂಗಳ ಒಳಗಾಗಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕಾಗಿದೆ. ಎರಡು ತಿಂಗಳಲ್ಲಿ ಅವರ ಅವಧಿ ಕೂಡಾ ಮುಕ್ತಾಯವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಯಾರೂ ಇದನ್ನು ಪ್ರಶ್ನೆ ಮಾಡುವುದಿಲ್ಲ. ಪಕ್ಷದಲ್ಲಿ ಮುಂದುವರಿಯಬೇಕೆಂದು ಯಾವುದೇ ಷರತ್ತು ಇಲ್ಲ. ಹಾಗಾಗಿ ಯೋಜನಾಬದ್ಧವಾಗಿ ಅಕ್ಟೋಬರ್‌ನಲ್ಲಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ. ಈ ಕೆಲಸ ಮಾಡಿದರೆ, ಲಿಂಗಾಯತರು ಸ್ವಲ್ಪ ವಿರೋಧ ಮಾಡಬಹುದು. ಆದರೆ ಯೋಗ್ಯರನ್ನು ನಾವು ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ಎಲ್ಲಾ ವಿರೋಧಗಳು ತಣ್ಣಗಾಗಲಿದೆ. ಇದು ನನ್ನ ಅಭಿಪ್ರಾಯವಾಗಿದೆ.

ಬೇರೆ ಉತ್ತಮ ಅವಕಾಶಗಳು ಇದ್ದರೆ ನಾನು ಪಕ್ಷದ ನಿರ್ಧಾರಕ್ಕೆ ಬದ್ಧವಾಗಿದ್ದೇನೆ. ನಾನು ದೇವರಲ್ಲಿ ನಂಬಿಕೆ ಇಟ್ಟಿದ್ದೇನೆ. ನನ್ನನ್ನು ಜನರು ಒಪ್ಪಿಕೊಂಡಿದ್ದಾರೆ. ಬಸ್ ನಿಲ್ದಾಣದಲ್ಲಿ ಕಾಣಿಸಿಕೊಂಡರೂ 25-30 ಆಟೋ ಚಾಲಕರು ಬಂದು ಮಾತನಾಡಿಸುತ್ತಾರೆ. ನಾನು ಆ ರೀತಿಯ ಸಂಪರ್ಕ ಇಟ್ಟಿದ್ದೇನೆ ಎಂದು ಪ್ರದೀಪ್ ಎಂಬುವವರ ಜೊತೆಗೆ ಮಾತನಾಡಿದ ಆಡಿಯೋನಲ್ಲಿದೆ.

ಈ ಬಗ್ಗೆ ಸದಾನಂದಗೌಡ ಹೇಳಿದ್ದೇನು?

ಇನ್ನು ಈ ಆಡಿಯೋ ವೈರಲ್ ಆಗುತ್ತಿದ್ದಂತೆಯೇ ಈ ಬಗ್ಗೆ ಮಾತನಾಡಿರುವ ನೀಡಿರುವ ಡಿವಿಎಸ್, ಆಡಿಯೋ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ಆಡಿಯೋ ಬಗ್ಗೆ ನನಗೆ ಗೊತ್ತಿಲ್ಲ, ಹಾಗಾಗಿ ಉತ್ತರ ಕೊಡುವುದಿಲ್ಲ. ಆಡಿಯೋ ಬಗ್ಗೆ ಸತ್ಯ ಸಂಗತಿ ಹೊರಬರಲಿ. ನನ್ನ ಬಗ್ಗೆ ಬಹಳ ದಿನದಿಂದ ಚರ್ಚೆ ಆಗುತ್ತಿತ್ತು. ಕೋರ್ ಕಮಿಟಿ ಸಭೆಯಲ್ಲಿ ಕೆಲವು ಮಾತುಗಳನ್ನು ಹೇಳಿದ್ದೇನೆ. ಕೇಂದ್ರ ನಾಯಕರು, ರಾಜ್ಯ ನಾಯಕರು ಕೇಳಿದ್ರೆ ಉತ್ತರ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ರೇಣುಕಾಚಾರ್ಯ ಖಡಕ್ ಎಚ್ಚರಿಕೆ

ಇನ್ನು ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತು ಬಿಸಾಕಿ ಅನ್ನೋ ಆಡಿಯೋ ವೈರಲ್ ಆಗುತ್ತಿದ್ದಂತೆಯೇ ಯಡಿಯೂರಪ್ಪ ಬಣದ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.  ಈ ಬಗ್ಗೆ ದಾಣವಣಗೆರೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿಎಸ್​​ವೈ ಬಣದ ಪ್ರಮುಖ ನಾಯಕ ಎಂಪಿ ರೇಣುಕಾಚಾರ್ಯ, ಯಡಿಯೂರಪ್ಪ ನವರ ಅಶೀರ್ವಾದ ದಿಂದ‌ ಕೆಲವರು ಸಿಎಂ ಆಗಿದ್ದಾರೆ, ಸಚಿವರು ಆಗಿದ್ದಾರೆ. ಏನಾದರೂ ಪಿತೂರಿ ನಡೆಸಿದರೆ ನಾವು ಸುಮ್ಮನೆ ಕೂರುವುದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಎರಡು ವರ್ಷ ಪೂರೈಸಿದ್ದಾರೆ. ಪಕ್ಷ ಸಂಘಟನೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಪಕ್ಷ ಸಂಘಟನೆ ಮಾಡದಿದ್ರೆ ಈಗ ಮಾತನಾಡುವವರು ಇರುತ್ತಿರಲಿಲ್ಲ . ಆವರ ಮಗ ಅಂತಾ ಹೇಳುತ್ತಿಲ್ಲ ಅವರು ಜಾತ್ಯತೀತ ವ್ಯಕ್ತಿ . ರಾಜ್ಯದಲ್ಲಿ ಅನೇಕ ಹೋರಾಟವನ್ನು ವಿಜಯೇಂದ್ರ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯೇಂದ್ರ ಬಗ್ಗೆ ಮಾತನಾಡಿದ್ರೆ ಸಹಿಸುವುದಿಲ್ಲ

ಮೊನ್ನೆ ನಡೆದ ಪರಿಷತ್ ಚುನಾವಣೆಯಲ್ಲಿ ವಿಜಯೇಂದ್ರಗೆ ಅವರಿಗೆ ಕೆಟ್ಟ ಹೆಸರು ತರಲು ಅಡ್ಡ ಮತದಾನ ಮಾಡಿದ್ದಾರೆ . ತಾಕತ್ತು ಇದ್ದರೆ ಯಡಿಯೂರಪ್ಪ ಬಿಜೆಪಿಗೆ ಅವಶ್ಯಕತೆ ಇಲ್ಲ ಅಂತಾ ಹೇಳಲಿ ನೋಡೋಣಾ. ಇನ್ನೂ ಮುಂದೆ ವಿಜಯೇಂದ್ರ ಬಗ್ಗೆ ಅವಹೇಳನವಾಗಿ ಮಾತಾಡಿದ್ರೆ ಸಹಿಸುವುದಿಲ್ಲ. ಯಡಿಯೂರಪ್ಪ ಕಟ್ಟಿದ್ದ ಪಕ್ಷಕ್ಕೆ ಇವರೆಲ್ಲ ಬಂದು ಈಗ ಆವರ ಕುಟುಂಬ ಆವರ ಬಗ್ಗೆ ಮಾತಾಡುತ್ತಾರೆ ಇದು ಒಳ್ಕೆಯದೆಲ್ಲ. 2028ಕ್ಕೆ ಆವರ ಮುಖಂಡತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ರಾಷ್ಟ್ರೀಯ ನಾಯಕರು ಬದಲಾವಣೆ ಮಾಡಲ್ಲ ಅವರೇ ಮುಂದುವರೆಯುತ್ತಾರೆ. ವಿಜಯೇಂದ್ರ ಅವರೇ ಮುಂದುವರೆಯಬೇಕು. ಇಲ್ಲದಿದ್ರೆ ನಾವು ಸಂಘಟನೆ ಮಾಡಿ ಹೋರಾಡುತ್ತೇವೆ.

ಆಂತರಿಕ ವಿಚಾರವನ್ನು ಮಾತಾಡಬಾರದು ಅಂತಾ ಮೌನವಾಗಿದ್ದೆ. ವಿಜಯೇಂದ್ರ ಬಗ್ಗೆ ಮಾತಾಡ್ರಿ ನಾವು ಅದೇ ತರ ಉತ್ತರ ಕೊಡುತ್ತೇವೆ .ಕುಮಾರ್ ಬಂಗಾರಪ್ಪ ನನ್ನು ಕರೆತಂದು ಶಾಸಕರನ್ನಾಗಿ ಮಾಡಿದ್ದು ವಿಜಯೇಂದ್ರ ಯಡಿಯೂರಪ್ಪ. ಯಡಿಯೂರಪ್ಪ ವಿಜಯೇಂದ್ರರವರ ಬೆಂಬಲ ಇಲ್ಲದೆ ಸೊರಬದಲ್ಲಿ ಗೆದ್ದು ತೋರಿಸಲಿ. ಕುಮಾರ್ ಬಂಗಾರಪ್ಪ ಜಿಲ್ಲಾ ಪಂಚಾಯತಿ ಸದಸ್ಯ ಆಗಲು ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗಂಭೀರ್ ಗರಡಿಯಲ್ಲಿ ಕಂಡ 5 ಹೀನಾಯ ಸೋಲುಗಳು! – Kannada News | 5 Humiliating Defeats for Team India in the Gambhir Era

ಗೌತಮ್ ಗಂಭೀರ್ ಅವರು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡ ನಂತರ, ಟೀಮ್ ಇಂಡಿಯಾ ಏರಿಳಿತದ ಹಾದಿಯನ್ನು ಸವೆಸಿದೆ. ಗಂಭೀರ್ ಗರಡಿಯಲ್ಲಿ ಭಾರತ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ಟಿ20 ವಿಶ್ವಕಪ್‌ಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆಯಾದರೂ, ದ್ವಿಪಕ್ಷೀಯ ಸರಣಿಗಳಲ್ಲಿ ಅನುಭವಿಸಿದ ಕೆಲವು ಸೋಲುಗಳಿಂದ ಟೀಮ್ ಇಂಡಿಯಾ ಭಾರೀ ಮುಖಭಂಗಕ್ಕೆ ಒಳಗಾಗಿದೆ. ಈ ಪಟ್ಟಿಗೆ ಹೊಸ ಸೇರ್ಪಡೆ ಐರ್ಲೆಂಡ್ ವಿರುದ್ಧದ ಟಿ20 ಸರಣಿ ಸೋಲು. ಹೀಗೆ ಗಂಭೀರ್ ಯುಗದಲ್ಲಿ ಟೀಮ್ ಇಂಡಿಯಾ ಅನುಭವಿಸಿದ ಅತ್ಯಂತ ಹೀನಾಯ ಹಾಗೂ ಆಘಾತಕಾರಿ ಸೋಲುಗಳ ಸಂಪೂರ್ಣ ವಿವರ ಈ ಕೆಳಗಿನಂತಿದೆ…

 ಐರ್ಲೆಂಡ್ ವಿರುದ್ಧ ವೈಟ್‌ವಾಶ್ (2026)

  • ಐತಿಹಾಸಿಕ ಸೋಲು: ಜೂನ್ 2026 ರ ಐರ್ಲೆಂಡ್ ಪ್ರವಾಸದಲ್ಲಿ ಭಾರತ ತಂಡ 0-2 ಅಂತರದಿಂದ ಟಿ20 ಸರಣಿಯನ್ನು ಸೋತು ಭಾರೀ ಮುಖಭಂಗ ಅನುಭವಿಸಿದೆ.
  • ಅಪರೂಪದ ದಾಖಲೆ: ಕ್ರಿಕೆಟ್ ಇತಿಹಾಸದಲ್ಲೇ ಭಾರತ ತಂಡ ಐರ್ಲೆಂಡ್ ವಿರುದ್ಧ ಪಂದ್ಯ ಹಾಗೂ ದ್ವಿಪಕ್ಷೀಯ ಸರಣಿ ಸೋತಿರುವುದು ಇದೇ ಮೊದಲು.
  • ದಾಖಲೆ ಬ್ರೇಕ್: ಭಾರತ ತಂಡದ 16 ದ್ವಿಪಕ್ಷೀಯ ಟಿ20 ಸರಣಿಗಳ ಅಜೇಯ ಓಟಕ್ಕೆ ಐರ್ಲೆಂಡ್ ತಂಡ ಬ್ರೇಕ್ ಹಾಕಿದೆ.

ನ್ಯೂಝಿಲೆಂಡ್ ವಿರುದ್ಧ ಸರಣಿ ಸೋಲು (2024)

  • ಐತಿಹಾಸಿಕ ಸೋಲು: ನ್ಯೂಝಿಲೆಂಡ್ ವಿರುದ್ಧ ತವರಿನಲ್ಲೇ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ 0-3 ಅಂತರದಿಂದ ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿತು.
  • ಅಪರೂಪದ ದಾಖಲೆ: ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ತವರಿನಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳ ಸರಣಿಯಲ್ಲಿ ಭಾರತ ವೈಟ್‌ವಾಶ್ ಆಗಿದ್ದು ಇದೇ ಮೊದಲು.
  •  ದಾಖಲೆ ಬ್ರೇಕ್: ಭಾರತದಲ್ಲಿ ಕಳೆದ 12 ವರ್ಷಗಳಿಂದ ಸತತವಾಗಿ  ಟೆಸ್ಟ್ ಸರಣಿ ಗೆದ್ದು ಬೀಗಿದ್ದ ಟೀಮ್ ಇಂಡಿಯಾ ಈ ದಾಖಲೆ ಈ ಸೋಲಿನೊಂದಿಗೆ ಕೊನೆಗೊಂಡಿತು.

ಶ್ರೀಲಂಕಾ ವಿರುದ್ಧ ಹೀನಾಯ ಸೋಲು (2024)

  • ಐತಿಹಾಸಿಕ ಸೋಲು: ಗಂಭೀರ್ ಕೋಚ್ ಆದ ತಕ್ಷಣವೇ ಎದುರಾದ ಮೊದಲ ದೊಡ್ಡ ಆಘಾತವಿದು. ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ಭಾರತ 0-2 ರಿಂದ ಸೋತಿತು.
  • ಅಪರೂಪದ ದಾಖಲೆ: 1997ರ ನಂತರ (ಕಳೆದ 27 ವರ್ಷಗಳಲ್ಲಿ) ಶ್ರೀಲಂಕಾ ವಿರುದ್ಧ ಭಾರತ ಅನುಭವಿಸಿದ ಮೊದಲ ದ್ವಿಪಕ್ಷೀಯ ಏಕದಿನ ಸರಣಿ ಸೋಲು ಇದಾಗಿದೆ.

ಬಾರ್ಡರ್-ಗವಾಸ್ಕರ್ ಸರಣಿ ಗೋಲು (2024-25)

  • ಐತಿಹಾಸಿಕ ಸೋಲು: ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಭಾರತ ತಂಡ 1-3 ಅಂತರದಿಂದ ಸೋತಿತು.
  • ಅಪರೂಪದ ದಾಖಲೆ: 2014ರ ನಂತರ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಸೋಲು ಕಾಣದ ಭಾರತ ತಂಡವು, ಈ ಪರಾಜಯದೊಂದಿಗೆ BGT ಟ್ರೋಫಿಯನ್ನು ಆಸ್ಟ್ರೇಲಿಯಾಕ್ಕೆ ಒಪ್ಪಿಸಬೇಕಾಯಿತು.

ಸೌತ್ ಆಫ್ರಿಕಾ ವಿರುದ್ಧ ಸರಣಿ ಸೋಲು (2025)

  •  ಐತಿಹಾಸಿಕ ಸೋಲು: ತವರಿನಲ್ಲೇ ನಡೆದ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಹೀನಾಯವಾಗಿ ಸೋತು 2-0 ಅಂತರದಿಂದ ಸರಣಿ ಕೈಚೆಲ್ಲಿಕೊಂಡಿತು.
  • ಅಪರೂಪದ ದಾಖಲೆ: ಈ ಸರಣಿಯ 2ನೇ ಪಂದ್ಯದಲ್ಲಿ ಭಾರತ ತಂಡ 408 ರನ್‌ಗಳ ಬೃಹತ್ ಅಂತರದಿಂದ ಸೋತಿದ್ದು, ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ (ತವರಿನಲ್ಲಿ ಹಾಗೂ ವಿದೇಶದಲ್ಲಿ) ರನ್‌ಗಳ ಲೆಕ್ಕಾಚಾರದಲ್ಲಿ ಅನುಭವಿಸಿದ ಅತ್ಯಂತ ಗರಿಷ್ಠ ಮತ್ತು ಹೀನಾಯ ಸೋಲಾಗಿದೆ.

ಇದನ್ನೂ ಓದಿ: ನಿಮ್ಮಂತ ಕೋಚ್ ನಮಗೆ ಬೇಡ: ಗಂಭೀರ್​ನ ಅಣಕಿಸಿದ ​ಐಸ್‌ಲ್ಯಾಂಡ್ ಕ್ರಿಕೆಟ್

ಇದೀಗ ಐರ್ಲೆಂಡ್ ವಿರುದ್ಧದ ಸರಣಿಯನ್ನು 2-0 ಅಂತರದಿಂದ ಸೋತು ಟೀಮ್ ಇಂಡಿಯಾ ಭಾರೀ ಮುಖಭಂಗ ಅನುಭವಿಸಿದೆ. ಈ ಆಘಾತಕಾರಿ ಸೋಲು ಗೌತಮ್ ಗಂಭೀರ್ ಅವರ ಕೋಚಿಂಗ್ ಅವಧಿಯ ಕಪ್ಪು ಚುಕ್ಕೆಯಾಗಿ ಉಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ.

Source link

ಕಾಲಿವುಡ್ ನಟ ಸೂರ್ಯ ಜೊತೆ ಕೈಜೋಡಿಸಿದ ಹೊಂಬಾಳೆ ಫಿಲ್ಮ್ಸ್; ದೊಡ್ಡ ಘೋಷಣೆ – Kannada News | Hombale Films Teams Up with Suriya for Pan India Blockbuster; Gnanavel to Direct

ಕನ್ನಡ ಚಿತ್ರರಂಗದ ಜೊತೆ ಭಾರತೀಯ ಸಿನಿಮಾ ರಂಗದಲ್ಲೂ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’  (Hombale Films)ಈಗ ಮತ್ತೊಂದು ದೊಡ್ಡ ಘೋಷಣೆ ಮಾಡಿದೆ. ಸದ್ಯ ಕೇವಲ ಸ್ಯಾಂಡಲ್‌ವುಡ್‌ಗಷ್ಟೇ ಸೀಮಿತವಾಗದೆ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಸಾಲು ಸಾಲು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನಿರ್ಮಿಸುತ್ತಿರುವ ಹೊಂಬಾಳೆ ಸಂಸ್ಥೆ, ಈಗ ಕಾಲಿವುಡ್ ಸ್ಟಾರ್ ನಟ ಸೂರ್ಯ ಜೊತೆ ಹೊಸ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದೆ.

‘ದಿ ನೆಕ್ಸ್ಟ್ ಚಾಪ್ಟರ್’ ಆರಂಭ

‘ದಿ ನೆಕ್ಸ್ಟ್ ಚಾಪ್ಟರ್’ (#SuriyaXHombale) ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದೆ. ‘ಕಳೆದ ಮೂರು ದಶಕಗಳಿಂದ ಸತ್ಯಕ್ಕೆ ಹತ್ತಿರವಾದ ಪಾತ್ರಗಳು, ನೈಜ ಬದುಕಿನ ತೂಕವನ್ನು ಹೊತ್ತ ಕ್ಯಾರೆಕ್ಟರ್‌ಗಳು ಹಾಗೂ ಅದ್ಭುತ ಸಾಹಸಗಳ ಮೂಲಕ ಕೋಟ್ಯಂತರ ಪ್ರೇಕ್ಷಕರ ಹೃದಯ ಗೆದ್ದಿರುವ ಈ ತಲೆಮಾರಿನ ಅತ್ಯಂತ ನಿರ್ಭೀತ ನಟ ಸೂರ್ಯ ಅವರನ್ನು ನಮ್ಮ ಸಂಸ್ಥೆಗೆ ಹೆಮ್ಮೆಯಿಂದ ಸ್ವಾಗತಿಸುತ್ತಿದ್ದೇವೆ’ ಎಂದು ಹೊಂಬಾಳೆ ಬರೆದುಕೊಂಡಿದೆ.

ಇದನ್ನೂ ಓದಿ: ಜೂ.ಎನ್​​ಟಿಆರ್​​ಗೆ ವಿಶ್ ಮಾಡಿದ ಹೊಂಬಾಳೆ ಫಿಲ್ಮ್ಸ್; ಇದರ ಹಿಂದಿದೆ ದೊಡ್ಡ ಲೆಕ್ಕಾಚಾರ?

ಈ ಬಿಗ್ ಬಜೆಟ್ ಸಿನಿಮಾಗೆ ಯಾರು ನಿರ್ದೇಶನ ಮಾಡಲಿದ್ದಾರೆ ಮತ್ತು ಯಾರೆಲ್ಲಾ ತಂತ್ರಜ್ಞರು ಇರಲಿದ್ದಾರೆ ಎಂಬ ಕುತೂಹಲಕ್ಕೆ ಈ ಟ್ವೀಟ್‌ನಲ್ಲೇ ಸುಳಿವು ಸಿಕ್ಕಿದೆ.

  • ಜ್ಞಾನವೇಲ್ ಆ್ಯಕ್ಷನ್ ಕಟ್: ಹೊಂಬಾಳೆ ಫಿಲ್ಮ್ಸ್ ಮಾಡಿರುವ ಟ್ವೀಟ್‌ನಲ್ಲಿ ಖ್ಯಾತ ನಿರ್ದೇಶಕ ಟಿ.ಜೆ. ಜ್ಞಾನವೇಲ್ ಅವರನ್ನು ಟ್ಯಾಗ್ ಮಾಡಲಾಗಿದ್ದು, ಈ ಚಿತ್ರಕ್ಕೆ ಅವರೇ ಕಥೆ ಬರೆದು ನಿರ್ದೇಶನ ಮಾಡುವುದು ಬಹುತೇಕ ಖಚಿತವಾಗಿದೆ.
  • ಸಾಯಿ ಅಭಯಂಕರ್ ಮ್ಯೂಸಿಕ್: ಇತ್ತೀಚಿನ ಟ್ರೆಂಡಿಂಗ್ ಮ್ಯೂಸಿಕ್ ಸೆನ್ಸೇಷನ್ ಸಾಯಿ ಅಭಯಂಕರ್ ಅವರನ್ನು ಸಹ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಲಾಗಿದ್ದು, ಚಿತ್ರಕ್ಕೆ ಇವರೇ ಸಂಗೀತ ಸಂಯೋಜನೆ ಮಾಡುವ ಸಾಧ್ಯತೆ ದಟ್ಟವಾಗಿದೆ.
  • ಕಯಾದು ಲೋಹರ್ ನಾಯಕಿ: ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಸೂರ್ಯ ಅವರಿಗೆ ಜೋಡಿಯಾಗಿ ನಟಿ ಕಯಾದು ಲೋಹರ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಬಲವಾದ ಮಾಹಿತಿ ಕೇಳಿಬಂದಿದೆ.

The next chapter… #SuriyaXHombale

He built it.
Frame by frame. Film by film. Fight by fight.

Roles that bled truth.
Characters that carried the weight of real lives.
A journey defined by courage, conviction, and craft.

Three decades of truth on screen.
Countless hearts… pic.twitter.com/HoZOgQRbC7

— Hombale Films (@hombalefilms) June 29, 2026

ವಿಭಿನ್ನ ಭಾಷೆಗಳಲ್ಲಿ ವೈವಿಧ್ಯಮಯ ಸಿನಿಮಾಗಳನ್ನು ನೀಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿರುವ ಹೊಂಬಾಳೆ ಫಿಲ್ಮ್ಸ್ ಈಗ ಸೂರ್ಯ ಜೊತೆ ಕೈ ಜೋಡಿಸಿದ್ದು ಖುಷಿ ಮೈಡಿಸಿದೆ. ಇವರ ಈ ಹೊಸ ಕಾಂಬಿನೇಷನ್ ಸಿನಿರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯನ್ನು ಸೃಷ್ಟಿಸಿದ್ದು, ಸಿನಿಮಾ ಪ್ರೇಕ್ಷಕರು ಅಧಿಕೃತ ಅಪ್‌ಡೇಟ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸೆಶೆಲ್ಸ್ ಗಣಪತಿ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ವಿಶೇಷ ಪ್ರಾರ್ಥನೆ: ಗಾಂಧೀಜಿ ಸ್ಮಾರಕಕ್ಕೆ ನಮನ – Kannada News | India Seychelles Relations: Modi’s Historic Visit, Gandhi Tribute and Temple Tour

ಭಾರತ ಮತ್ತು ಸೆಶೆಲ್ಸ್ ದೇಶಗಳ ನಡುವಿನ ಶತಮಾನಗಳ ಹಳೆಯ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ರಾಜತಾಂತ್ರಿಕ ಬಾಂಧವ್ಯಕ್ಕೆ ಹೊಸ ಮೈಲಿಗಲ್ಲು ಸಿಕ್ಕಿದೆ. ಸೆಶೆಲ್ಸ್‌ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಅವರು ಸೋಮವಾರದಂದು ಅಲ್ಲಿನ ರಾಜಧಾನಿ ವಿಕ್ಟೋರಿಯಾದಲ್ಲಿರುವ ಪೀಸ್ ಪಾರ್ಕ್‌ನಲ್ಲಿ ಮಹಾತ್ಮಾ ಗಾಂಧೀಜಿಯವರಿಗೆ ಶ್ರದ್ಧಾಂಜಲಿ ಗೌರವ ಸಲ್ಲಿಸಿದರು. ತದನಂತರ ಅಲ್ಲಿನ ಪ್ರಸಿದ್ಧ ಮತ್ತು ಐತಿಹಾಸಿಕ ‘ಅರುಲ್ಮಿಗು ನವಶಕ್ತಿ ವಿನಾಯಗರ್’ ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಪೀಸ್ ಪಾರ್ಕ್‌ನಲ್ಲಿ ಮಹಾತ್ಮಾ ಗಾಂಧೀಜಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಕ್ಟೋರಿಯಾದ ಪೀಸ್ ಪಾರ್ಕ್‌ನಲ್ಲಿ ಮಹಾತ್ಮಾ ಗಾಂಧೀಜಿಯವರಿಗೆ ಗೌರವ ನಮನ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ

ಸೆಶೆಲ್ಸ್‌ನ ಪ್ರಮುಖ ಹಿಂದೂ ಧಾರ್ಮಿಕ ಕೇಂದ್ರವಾಗಿರುವ ಅರುಲ್ಮಿಗು ನವಶಕ್ತಿ ವಿನಾಯಗರ್ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ, ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿದರು.

ಸೆಶೆಲ್ಸ್‌ನಲ್ಲಿ ಈ ಭವ್ಯ ದೇಗುಲ ನಿರ್ಮಾಣಕ್ಕೆ ಶ್ರಮಿಸಿದ ಮತ್ತು ಭಾರತೀಯ ಸಂಸ್ಕೃತಿ-ಆಧ್ಯಾತ್ಮಿಕತೆಯನ್ನು ಅಲ್ಲಿ ಜನಪ್ರಿಯಗೊಳಿಸುತ್ತಿರುವ ‘ಸೆಶೆಲ್ಸ್ ಹಿಂದೂ ಕೋವಿಲ್ ಸಂಗಮ್’ ಸಂಸ್ಥೆಯ ಪ್ರಯತ್ನಗಳನ್ನು ನಾನು ಮುಕ್ತಕಂಠದಿಂದ ಶ್ಲಾಘಿಸುತ್ತೇನೆ” ಎಂದು ಪ್ರಧಾನಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಭಾನುವಾರ ನಡೆದ ಸೆಶೆಲ್ಸ್ ದೇಶದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ರಾಷ್ಟ್ರೀಯ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಚಿತ್ರಗಳನ್ನು ಹಂಚಿಕೊಂಡ ಪಿಎಂ, “ಕಳೆದ 50 ವರ್ಷಗಳಲ್ಲಿ ಸೆಶೆಲ್ಸ್ ಜನರ ಅದ್ಭುತ ಪ್ರಗತಿಯ ಪಯಣಕ್ಕೆ ಈ ಆಚರಣೆ ಸಾಕ್ಷಿಯಾಗಿದೆ.

ಸೆಶೆಲ್ಸ್‌ನ ಅಭಿವೃದ್ಧಿಯ ಪಯಣದಲ್ಲಿ ಅತ್ಯಂತ ವಿಶ್ವಾಸಾರ್ಹ ಗೆಳೆಯ ಹಾಗೂ ಪಾಲುದಾರನಾಗಿ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲು ಭಾರತ ಹೆಮ್ಮೆಪಡುತ್ತದೆ ಎಂದು ಹೇಳಿದ್ದಾರೆ.

Published On – 2:36 pm, Mon, 29 June 26

Source link

ಸೆಶೆಲ್ಸ್ ಗಣಪತಿ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ವಿಶೇಷ ಪ್ರಾರ್ಥನೆ: ‘ಸೆಶೆಲ್ಸ್ ಹಿಂದೂ ಕೋವಿಲ್ ಸಂಗಮ್’ ಸಂಸ್ಥೆಗೆ ಧನ್ಯವಾದ – Kannada News | India Seychelles Relations: Modi’s Historic Visit, Gandhi Tribute and Temple Tour

ಭಾರತ ಮತ್ತು ಸೆಶೆಲ್ಸ್ ದೇಶಗಳ ನಡುವಿನ ಶತಮಾನಗಳ ಹಳೆಯ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ರಾಜತಾಂತ್ರಿಕ ಬಾಂಧವ್ಯಕ್ಕೆ ಹೊಸ ಮೈಲಿಗಲ್ಲು ಸಿಕ್ಕಿದೆ. ಸೆಶೆಲ್ಸ್‌ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಅವರು ಸೋಮವಾರದಂದು ಅಲ್ಲಿನ ರಾಜಧಾನಿ ವಿಕ್ಟೋರಿಯಾದಲ್ಲಿರುವ ಪೀಸ್ ಪಾರ್ಕ್‌ನಲ್ಲಿ ಮಹಾತ್ಮಾ ಗಾಂಧೀಜಿಯವರಿಗೆ ಶ್ರದ್ಧಾಂಜಲಿ ಗೌರವ ಸಲ್ಲಿಸಿದರು. ತದನಂತರ ಅಲ್ಲಿನ ಪ್ರಸಿದ್ಧ ಮತ್ತು ಐತಿಹಾಸಿಕ ‘ಅರುಲ್ಮಿಗು ನವಶಕ್ತಿ ವಿನಾಯಗರ್’ ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Source link

ನಿವೃತ್ತರಾದ ದೈಹಿಕ ಶಿಕ್ಷಕನಿಗೆ ಹೊಸ ಬೈಕ್ ಉಡುಗೊರೆ ನೀಡಿದ ಹಳೆಯ ವಿದ್ಯಾರ್ಥಿಗಳು! – Kannada News | Heartwarming Gesture: Alumni Gift New Bike to Retired Physical Education Teacher in Yelburga

ಕೊಪ್ಪಳ, ಜೂನ್ 29: ಶಿಕ್ಷಣ ನೀಡಿ ಭವಿಷ್ಯ ರೂಪಿಸಿದ ತಮ್ಮ ನೆಚ್ಚಿನ ಗುರುವಿಗೆ ಹಳೆಯ ವಿದ್ಯಾರ್ಥಿಗಳು ಅಪೂರ್ವ ‘ಗುರು ಕಾಣಿಕೆ’ ನೀಡಿದ ಹೃದಯಸ್ಪರ್ಶಿ ಘಟನೆ ತಾಲೂಕಿನ ಮಸಬಹಂಚಿನಾಳದಲ್ಲಿ ನಡೆದಿದೆ. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾದ ಜೆ.ಎಂ. ನದಾಫ್ ಅವರು ಇತ್ತೀಚೆಗೆ ಸೇವೆಯಿಂದ ನಿವೃತ್ತರಾಗಿದ್ದರು. ತಮ್ಮ ನೆಚ್ಚಿನ ಶಿಕ್ಷಕರ ನಿವೃತ್ತಿ ಸನ್ಮಾನದ ನೆನಪಿಗಾಗಿ ಶಾಲೆಯ ಹಳೆಯ ವಿದ್ಯಾರ್ಥಿಗಳೆಲ್ಲರೂ ಒಟ್ಟಾಗಿ, ಪ್ರೀತಿಯಿಂದ ಹೊಸ ಬೈಕ್ ಒಂದನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಗುರುಭಕ್ತಿಯನ್ನು ತೋರಿಸಿದ್ದಾರೆ. ವಿದ್ಯಾರ್ಥಿಗಳ ಈ ಅಪೂರ್ವ ಕೊಡುಗೆಗೆ ಶಿಕ್ಷಕರು ಭಾವುಕರಾಗಿ ಕೃತಜ್ಞತೆ ಸಲ್ಲಿಸಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version