Republic Day 2026: ಈ ಬಾರಿ ಗಣರಾಜ್ಯೋತ್ಸವದಲ್ಲಿ ಕೇವಲ ಮಿಲಿಟರಿ ಮೆರವಣಿಗೆಯಲ್ಲ, ಇರಲಿದೆ ಯುದ್ಧಭೂಮಿ – Kannada News | Republic Day 2026 Live Streaming in Tv9 Kannada, Grand Military Parade, Battlefield Display and Vande Mataram Theme
ನವದೆಹಲಿ, ಜನವರಿ 23: ಈ ಬಾರಿ ಗಣರಾಜ್ಯೋತ್ಸವ(Republic Day)ವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಕೇವಲ ಮಿಲಿಟರಿ ಮೆರವಣಿಗೆಯಲ್ಲ ಬದಲಾಗಿ ಯುದ್ಧಭೂಮಿಯೇ ಕಣ್ಣೆದುರು ಬರಲಿದೆ. ಸ್ವಾತಂತ್ರ್ಯ ಹೋರಾಟದಿಂದ ಸ್ವಾವಲಂಬಿ ಭಾರತದವರೆಗೆ, ಭಾರತ ತೆಗೆದುಕೊಂಡ ಹೆಜ್ಜೆಗಳು ಕಣ್ಮುಂದೆ ಬರಲಿದೆ. ಕಲಾವಿದರು ತಮ್ಮ ಪೂರ್ವಾಭ್ಯಾಸಕ್ಕೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಮೆರವಣಿಗೆಯ ಮುಖ್ಯ ವಿಷಯ ವಂದೇ ಮಾತರಂ ಆಗಿರುತ್ತದೆ. ವಿವಿಧ ರಾಜ್ಯಗಳ ಮೆರವಣಿಗೆಗಳು ದೇಶವು ಸಾಧಿಸಿದ ಆರ್ಥಿಕ ಅಭಿವೃದ್ಧಿ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಪ್ರದರ್ಶಿಸುತ್ತವೆ. ಕಲಾವಿದರು ಅಭಿವೃದ್ಧಿ ಹೊಂದಿದ ಭಾರತದ ರೂಪಗಳನ್ನು ಅನಾವರಣಗೊಳಿಸಲಿದ್ದಾರೆ. ಕರ್ತವ್ಯಪಥದಲ್ಲಿ…