ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣ: ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ನಾಲ್ವರ ಬಂಧನ; ಖರ್ಗೆ ಖಂಡನೆ – Kannada News | Chikkaballapur Clashes: Four Arrested After Slippers Hurled at MLA Pradeep Eshwar

ಚಿಕ್ಕಬಳ್ಳಾಪುರ, ಜೂನ್ 28: ನಗರದಲ್ಲಿ ಶನಿವಾರ (ಜೂ.27) ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಮಹೋತ್ಸವದ ವೇಳೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep eshwar) ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ನಡೆದ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇಂದು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ನಿನ್ನೆ ನಡೆದ ಈ ಆಘಾತಕಾರಿ ಘಟನೆಯನ್ನು ಬೆನ್ನಟ್ಟಿ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಸದ್ಯ ನಾಲ್ವರನ್ನು ಬಂಧಿಸಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಬಂಧನ

ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ನಗರ ಠಾಣೆಯ ಪಿಎಸ್‌ಐ ಅಮರ್ ಅವರು ಸ್ವಯಂಪ್ರೇರಿತ (Suo Moto) ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಶಾಸಕರ ಮೇಲೆ ಚಪ್ಪಲಿ ಎಸೆದು, ಅವಾಚ್ಯ ಪದಗಳಿಂದ ನಿಂದಿಸಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಕೇಸ್ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರಾದ ಅಖಿಲ್ ರೆಡ್ಡಿ, ಪ್ರಕಾಶ್, ಮೋಹನ್ ರಾಜ್ ಮತ್ತು ಮಹೇಂದ್ರ ಎಂಬುವವರನ್ನು ಬಂಧಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರ ಪೊಲೀಸ್ ಠಾಣೆ ಸುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಈ ವೇಳೆ

ನಿನ್ನೆ ಕಾರ್ಯಕ್ರಮದಲ್ಲಿ ನಡೆದಿದ್ದೇನು?

ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಶಾಂತಿಯುತವಾಗಿ ನಡೆಯುತ್ತಿತ್ತು. ಈ ವೇಳೆ ಅಲ್ಲಿಗೆ ನುಗ್ಗಿದ ಜೆಡಿಎಸ್ ಕಾರ್ಯಕರ್ತರು, ಶಾಸಕ ಪ್ರದೀಪ್ ಈಶ್ವರ್ ಅವರನ್ನು ವೇದಿಕೆಯಿಂದ ಕೆಳಗಿಳಿಸಬೇಕು ಎಂದು ಘೋಷಣೆ ಕೂಗಿ ಗಲಾಟೆ ಆರಂಭಿಸಿದರು. ಕಾರ್ಯಕ್ರಮಕ್ಕೆ ತೀವ್ರ ಅಡ್ಡಿಯಾದಾಗ ಸ್ಥಳದಲ್ಲಿದ್ದ ಸ್ವಾಮೀಜಿಯವರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿ, ಕಾರ್ಯಕ್ರಮ ಮುಂದುವರಿಯಲು ಅನುವು ಮಾಡಿಕೊಟ್ಟರು.

ಆದರೆ, ಕಾರ್ಯಕ್ರಮ ಮುಗಿದ ಬಳಿಕ ಗಲಾಟೆ ಮತ್ತಷ್ಟು ವಿಕೋಪಕ್ಕೆ ತಿರುಗಿತು. ಪ್ರದೀಪ್ ಈಶ್ವರ್ ಅವರು ತಮ್ಮ ಕಾರಿನ ಸನ್‌ರೂಫ್ (Sunroof) ಮೂಲಕ ಹೊರಬಂದು ಮೆರವಣಿಗೆಯಲ್ಲಿ ತೆರಳುತ್ತಿದ್ದಾಗ, ತಮ್ಮ ವಿರುದ್ಧ ಘೋಷಣೆ ಕೂಗುತ್ತಿದ್ದ ಜೆಡಿಎಸ್ ಕಾರ್ಯಕರ್ತರಿಗೆ ತಿರುಗೇಟು ನೀಡಲು ಮೀಸೆ ತಿರುವಿ, ತೋಳು ತಟ್ಟಿ ಸವಾಲು ಹಾಕಿದ್ದಾರೆ. ಇದರಿಂದ ತೀವ್ರ ರೊಚ್ಚಿಗೆದ್ದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಶಾಸಕರ ಮೇಲೆ ನೇರವಾಗಿ ಚಪ್ಪಲಿ ಎಸೆದಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳದಲ್ಲೇ ಕೆಲವರನ್ನು ವಶಕ್ಕೆ ಪಡೆದಿದ್ದಾರೆ.

ಜಿಲ್ಲಾಧಿಕಾರಿ ಏನಂದ್ರು?

ಘಟನೆ ಕುರಿತು ಪ್ರತಿಕ್ರಿಯಿಸಿರುವ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ (DC) ಜಿ. ಪ್ರಭು, ಕೆಂಪೇಗೌಡ ಜಯಂತಿ ಅರ್ಥಪೂರ್ಣವಾಗಿ ನಡೆಯುತ್ತಿತ್ತು. ಆದರೆ ಈ ಘಟನೆ ತೀವ್ರ ಬೇಸರ ಮತ್ತು ನೋವು ತರಿಸಿದೆ. ಈಗಾಗಲೇ ನಾಲ್ವರನ್ನು ಕಸ್ಟಡಿಗೆ ಪಡೆಯಲಾಗಿದ್ದು, ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ ತೋಳು ತಟ್ಟಿ ಮೀಸೆ ತಿರುವಿದ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ

ಖರ್ಗೆ ಪ್ರತಿಕ್ರಿಯೆ ಏನು?

ಇತ್ತ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರ ಮೇಲೆ ಚಪ್ಪಲಿ ಎಸೆಯುವುದು ಸರಿಯಲ್ಲ. ಯಾರೇ ಆಗಲಿ ಪ್ರಚೋದನೆ ನೀಡುವುದು ತಪ್ಪು, ಎಲ್ಲರೂ ಕಾನೂನಿನ ಇತಿಮಿತಿಯಲ್ಲಿದ್ದರೆ ರಾಜ್ಯಕ್ಕೆ ಒಳ್ಳೆಯ ಹೆಸರು. ಜೆಡಿಎಸ್‌ನವರಿಗೆ ಈಗ ಅಸ್ತಿತ್ವದ ಪ್ರಶ್ನೆ ಶುರುವಾಗಿದೆ. ಬಿಜೆಪಿ-ಜೆಡಿಎಸ್‌ನ 12 ಶಾಸಕರು ಅಡ್ಡಮತದಾನ ಮಾಡಿರುವುದು ಅವರಲ್ಲಿನ ನಾಯಕತ್ವದ ಕೊರತೆಯನ್ನು ತೋರಿಸುತ್ತದೆ. ಜವಾಬ್ದಾರಿ ಹೊತ್ತ ಆರ್. ಅಶೋಕ್ ಮತ್ತು ವಿಜಯೇಂದ್ರ ರಾಜೀನಾಮೆ ನೀಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಚ್ಚಾಟ ಮೆರೆದು ದಾರುಣ ಅಂತ್ಯಕಂಡ ಪಾಗಲ್​​ ಪ್ರೇಮಿ: ನಾಗೇಂದ್ರಗೆ ಸ್ಫೋಟಕ ಸಿಕ್ಕಿದ್ದೇಗೆಂದು ಖಾಕಿ ತನಿಖೆ – Kannada News | Tumakuru Horror: Obsessive Lover Stabs Girl, Dies by Self Inflicted Device; Police Avert Another Threat in Sira

ಮೃತ ಪಾಗಲ್​​ ಪ್ರೇಮಿImage Credit source: Tv9 Kannada

ತುಮಕೂರು, ಜೂನ್​​ 28: ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ಕಾರು ಸ್ಫೋಟಿಸಿಕೊಂಡು ಪಾಗಲ್​​ ಪ್ರೇಮಿ ನಾಗೇಂದ್ರ ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ (ಜೂನ್​​ 27) ನಡೆದಿತ್ತು. ಈ ಸಂಬಂಧ ತನಿಖೆ ವೇಳೆ ಬಗೆದಷ್ಟು ಶಾಕಿಂಗ್​​ ಮಾಹಿತಿ ಬಯಲಾಗುತ್ತಿವೆ. ಬೆಂಗಳೂರಿನಿಂದ (Bengaluru) ಕಾರಿನಲ್ಲಿ ಯುವತಿಯೋರ್ವಳನ್ನು ಈತ ಕರೆತಂದಿದ್ದ. ಮಾರ್ಗಮಧ್ಯೆ ನಾಗೇಂದ್ರ, ಯುವತಿ ನಡುವೆ ಜಗಳವಾಗಿದ್ದು, ಜಗಳದ ನಡುವೆ ಯುವತಿಗೆ ಚಾಕುವಿನಿಂದ ನಾಗೇಂದ್ರ ಇರಿದಿದ್ದ. ಕೂಡಲೇ ಕಾರಿನ ಡೋರ್ ತೆಗೆದು ಯುವತಿ ಹೊರಗಡೆ ಇಳಿದಿದ್ದಳು. ಯುವತಿ ಕಾರಿನಿಂದ ಇಳಿದಾಗ ಸಹಾಯಕ್ಕೆ ಚಾಲಕ ಕೂಡ ತೆರಳಿದ್ದು, ಈ ವೇಳೆ ಡೋರ್​​ ಲಾಕ್​​ ಮಾಡಿಕೊಂಡಿದ್ದ ನಾಗೇಂದ್ರ ಏಕಾಏಕಿ ಕಾರನ್ನು ಸ್ಫೋಟಿಸಿಕೊಂಡು ಪ್ರಾಣಬಿಟ್ಟಿದ್ದಾನೆ ಎಂಬುದು ಗೊತ್ತಾಗಿದೆ.

ಇನ್ನು ಪೊಲೀಸರ ಪರಿಶೀಲನೆ ವೇಳೆ ಮತ್ತೊಂದು ಜೀವಂತ ಬಾಂಬ್ ಪತ್ತೆಯಾಗಿದ್ದು, ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಅದನ್ನು ನಿಷ್ಕ್ರಿಯಗೊಳಿಸಲಾಗಿದೆ. ಬಳಿಕ ಪಾಗಲ್‌ ನಾಗೇಂದ್ರ ತಂದಿದ್ದ ಜೀವಂತ ಬಾಂಬ್​​ನ ಅಧಿಕಾರಿಗಳು ಶಿರಾ ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ ಸ್ಫೋಟಿಸಿದ್ದು, ಬಾಂಬ್ ತೀವ್ರತೆ ಕಂಡು ಶಾಕ್ ಆಗಿದ್ದಾರೆ. ಬಾಂಬ್‌ಗೆ ಪಟಾಕಿ ಮದ್ದು ತುಂಬಿದ್ದ ಮಾಹಿತಿ ಸಿಕ್ಕಿದ್ದು, ಜಿಲೆಟಿನ್ ಇತ್ತಾ ಎಂಬ ಶಂಕೆಯೂ ವ್ಯಕ್ತವಾಗಿದೆ. ಹೀಗಾಗಿ ಇದರ ಸ್ಯಾಂಪಲ್ಸ್‌ ಸಂಗ್ರಹಿಸಿ ಬೆಂಗಳೂರಿನ FSLಗೆ ರವಾನಿಸಲಾಗಿದೆ. ಮತ್ತೊಂದೆಡೆ ನಾಗೇಂದ್ರಗೌಡ ಯಲ್ಲಾಪುರ ಭಾಗದಿಂದ ಬಾಂಬ್ ತಂದಿರುವ ಶಂಕೆ ವ್ಯಕ್ತವಾದ ಹಿನ್ನಲೆ ತನಿಖೆ ಚುರುಕುಗೊಳಿಸಲಾಗಿದೆ. ಯಲ್ಲಾಪುರ ಭಾಗದಲ್ಲಿ ನಾಗೇಂದ್ರ ಗೆಳೆತನ ಹೊಂದಿದ್ದವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಹೊಸ ಬೈಕ್​​ ಖರೀದಿಸಿದ ಮರುದಿನವೇ ಭೀಕರ ಅಪಘಾತ; ದಾರುಣ ಅಂತ್ಯ ಕಂಡ ಯುವಕ

ಪ್ರೇಯಸಿಯ ಹತ್ಯೆಗೂ ಯತ್ನಿಸಿದ್ದ ನಾಗೇಂದ್ರ!

ಪಾಗಲ್​​ ಪ್ರೇಮಿ ನಾಗೇಂದ್ರ ತಾನು ಆತ್ಮಹತ್ಯೆ ಮಅಡಿಕೊಳ್ಳುವ ಜೊತೆಗೆ ಪ್ರೇಯಸಿಯ ಹತ್ಯೆಗೂ ಸಂಚು ರೂಪಿಸಿದ್ದ. ಹೀಗಾಗಿಯೇ ಬೆಂಗಳೂರಿನ ಜಯನಗರದಲ್ಲಿರುವ ಸಿದ್ದಾಪುರದ ಯುವತಿ ರೂಂಗೆ ಬ್ಯಾಗ್​​ನಲ್ಲಿ ಚಾಕು ಮತ್ತು ಬಾಂಬ್​​ ಇಟ್ಟುಕೊಂಡೇ ಬಂದಿದ್ದ. ಯುವತಿಯ ಕೊಠಡಿಯಲ್ಲಿ ಬರೋಬ್ಬರಿ 3 ಗಂಟೆ ಹೈಡ್ರಾಮಾವನ್ನೂ ನಡೆಸಿದ್ದ. ಬೆಳಿಗ್ಗೆ 7.50ರಿಂದ 8 ಗಂಟೆ ಸುಮಾರಿಗೆ ಯುವತಿ ರಮ್ಯಾಳ ರೂಂ ಬಾಗಿಲನ್ನು ಈತ ತಟ್ಟಿದ್ದ. ಈ ವೇಳೆ ರಮ್ಯಾ ಗೆಳತಿಯೂ ಅಲ್ಲಿದ್ದಳು. ರಮ್ಯಾ ಜೊತೆ ಮದುವೆ ಬಗ್ಗೆ ಮಾತಾಡಿದ್ದ ನಾಗೇಂದ್ರ, ನೀನು ನನ್ನನ್ನು ಪ್ರೀತಿಸಿ ಮೋಸ ಮಾಡಿದ್ದೀಯ. ನಿನ್ನನ್ನು ಜೀವಂತವಾಗಿ ಬಿಡೋದಿಲ್ಲ ಎಂದು ಚಾಕು ತೆಗೆದಿದ್ದ. ಈ ವೇಳೆ ಇಬ್ಬರ ನಡುವೆ ಎಂಟ್ರಿ ಕೊಟ್ಟ ರಮ್ಯಾ ಗೆಳತಿ ಇಲ್ಲಿ ಗಲಾಟೆ ಮಾಡಬೇಡ, ಸರಿ ಇರೊದಿಲ್ಲ. ಮರ್ಯಾದೆಯಿಂದ ಹೊರಗೆ ಹೊಗು ಎಂದಿದ್ದಳು. ರಮ್ಯಾ ಗೆಳತಿ ಮಾತಿಗೆ ಮತ್ತಷ್ಟು ಕೆರಳಿದ ನಾಗೇಂದ್ರ, ಚಾಕುವಿನಿಂದ ಆಕೆ ಮೇಲೆಯೂ ದಾಳಿಗೆ ಮುಂದಾಗಿದ್ದ ಎಂಬುದು ಗೊತ್ತಾಗಿದೆ. ಕೆರಳಿದ್ದ ನಾಗೇಂದ್ರನ ಸಮಾಧಾನ ಮಾಡಿದ್ದ ರಮ್ಯಾ, ನಿನ್ನೊಂದಿಗೆ ನಾನು ಬರುತ್ತೇನೆ, ಮದುವೆಯಾಗುತ್ತೇನೆ ಎಂದಿದ್ದಳು. ರಮ್ಯಾಳ ಈ ಮಾತಿನ ಬಳಿಕ ತಣ್ಣಗಾದ ನಾಗೇಂದ್ರ, ಸರಿಸುಮಾರು ಮೂರುವರೆ ಗಂಟೆಗಳ ಕಾಲ ರಮ್ಯಾ ಜೊತೆ ಅದೇ ರೂಂನಲ್ಲಿದ್ದ. ಬಳಿಕ ಕಾರ್ ಬುಕ್ ಮಾಡಿ ರಮ್ಯಾ ಜೊತೆಗೇ ಅಂಕೋಲಾದ ಕಡೆ ಪ್ರಯಾಣ ಬೆಳೆಸಿದ್ದ ಎನ್ನಲಾಗಿದೆ.

ಗಾಯಗೊಂಡಿದ್ದ ಯುವತಿ ಡಿಸ್ಚಾರ್ಜ್​​

ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವತಿ ರಮ್ಯಾಳನ್ನು ತುಮಕೂರು ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇಂದು ಮುಂಜಾನೆಯೇ ಆಸ್ಪತ್ರೆಯಿಂದ ಆಕೆಯನ್ನು ಸೋದರನ ಸ್ನೇಹಿತರು, ಸಂಬಂಧಿಕರು ಕರೆದೊಯ್ದಿದ್ದಾರೆ. ತಲೆ, ಕೈ ಭಾಗಕ್ಕೆ ಚಾಕುವಿನಿಂದ ನಾಗೇಂದ್ರ ಇರಿದ್ದ ಕಾರಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಿಶ್ಚಿತಾರ್ಥ ಮಾಡಿಕೊಂಡ ನಟಿ ಶರ್ಮಿಳಾ ಮಾಂಡ್ರೆ; ಇಲ್ಲಿವೆ ಸುಂದರ ಫೋಟೋಗಳು – Kannada News | Actress Sharmiela Mandrae gets engaged to producer Sudhan Sundaram photos viral

ಕನ್ನಡ ಚಿತ್ರರಂಗದ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಶುಭ ಸಂದರ್ಭದ ಫೋಟೋಗಳನ್ನು ಅವರೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

Source link

Gold Rate: ಚಿನ್ನದ ಬೆಲೆ ಸತತ ಹೆಚ್ಚಳ; ಹತ್ತು ಗ್ರಾಮ್ ಬಂಗಾರಕ್ಕೆ 1,43,950 ರೂ ಬೆಲೆ – Kannada News | Gold Price Today on 28th June 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜೂನ್ 28: ಶುಕ್ರವಾರ ಗ್ರಾಮ್​ಗೆ 135 ರೂಗಳಷ್ಟು ಹೆಚ್ಚಿದ್ದ ಚಿನ್ನದ ಬೆಲೆ (Gold Prices) ವಾರಾಂತ್ಯದಲ್ಲಿ 210 ರೂ ಜಿಗಿದಿದೆ. ಆಭರಣ ಬಂಗಾರದ ಬೆಲೆ 13,000 ರೂ ಗಡಿ ದಾಟಿ ಹೋಗಿದೆ. ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಹೆಚ್ಚಿನ ದೇಶಗಳಲ್ಲಿ ಹಳದಿ ಲೋಹದ ಬೆಲೆ ಏರಿಕೆಯಾಗಿದೆ. ಇನ್ನು, ಬೆಳ್ಳಿ ಬೆಲೆಯಲ್ಲಿ ವಾರದ ಕೊನೆಯಲ್ಲಿ ಬದಲಾವಣೆ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,31,950 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,43,950 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,31,950 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 28ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,395 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,195 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,796 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,395 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,195 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,195 ರೂ
  • ಚೆನ್ನೈ: 13,370 ರೂ
  • ಮುಂಬೈ: 13,195 ರೂ
  • ದೆಹಲಿ: 13,210 ರೂ
  • ಕೋಲ್ಕತಾ: 13,195 ರೂ
  • ಕೇರಳ: 13,195 ರೂ
  • ಅಹ್ಮದಾಬಾದ್: 13,200 ರೂ
  • ಜೈಪುರ್: 13,210 ರೂ
  • ಲಕ್ನೋ: 13,210 ರೂ
  • ಭುವನೇಶ್ವರ್: 13,195 ರೂ

ಇದನ್ನೂ ಓದಿ: ವೋಕ್ಸ್‌ವ್ಯಾಗನ್ ಶಾಕ್; ಒಂದು ಲಕ್ಷ ಉದ್ಯೋಗ ಕಡಿತ; ಪ್ರಮುಖ ಕಾರ್ಖಾನೆಗಳನ್ನೇ ಮುಚ್ಚಲುಹೊರಟ ವಾಹನ ತಯಾರಕ ಸಂಸ್ಥೆ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 553 ರಿಂಗಿಟ್ (12,762 ರುಪಾಯಿ)
  • ದುಬೈ: 490.75 ಡಿರಾಮ್ (12,610 ರುಪಾಯಿ)
  • ಅಮೆರಿಕ: 134.50 ಡಾಲರ್ (12,694 ರುಪಾಯಿ)
  • ಸಿಂಗಾಪುರ: 180.50 ಸಿಂಗಾಪುರ್ ಡಾಲರ್ (13,165 ರುಪಾಯಿ)
  • ಕತಾರ್: 493.50 ಕತಾರಿ ರಿಯಾಲ್ (12,778 ರೂ)
  • ಸೌದಿ ಅರೇಬಿಯಾ: 507 ಸೌದಿ ರಿಯಾಲ್ (12,742 ರುಪಾಯಿ)
  • ಓಮನ್: 51.85 ಒಮಾನಿ ರಿಯಾಲ್ (12,710 ರುಪಾಯಿ)
  • ಕುವೇತ್: 41.50 ಕುವೇತಿ ದಿನಾರ್ (12,721 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 240 ರೂ
  • ಚೆನ್ನೈ: 245 ರೂ
  • ಮುಂಬೈ: 240 ರೂ
  • ದೆಹಲಿ: 240 ರೂ
  • ಕೋಲ್ಕತಾ: 240 ರೂ
  • ಕೇರಳ: 245 ರೂ
  • ಅಹ್ಮದಾಬಾದ್: 240 ರೂ
  • ಜೈಪುರ್: 240 ರೂ
  • ಲಕ್ನೋ: 240 ರೂ
  • ಭುವನೇಶ್ವರ್: 245 ರೂ
  • ಪುಣೆ: 240

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Swapna Shastra: ಈ 4 ಕನಸುಗಳು ಬಿದ್ದರೆ ನಿಮ್ಮ ಅದೃಷ್ಟ ಬದಲಾಗುವುದು ಖಂಡಿತ! ಸಂಪತ್ತಿನ ಸಂಕೇತಗಳಿವು – Kannada News | Auspicious Dreams: 4 Lucky Signs of Wealth and Success in Swapna Shastra

ನಾವು ನಿದ್ರಿಸುವಾಗ ಬೀಳುವ ಪ್ರತಿಯೊಂದು ಕನಸಿಗೂ ಅದರದ್ದೇ ಆದ ವಿಶಿಷ್ಟ ಅರ್ಥ ಇದೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ಕೆಲವು ಕನಸುಗಳು ದಿನವಿಡೀ ನಾವು ಯೋಚಿಸುವ ಆಲೋಚನೆಗಳ ಪ್ರತಿಬಿಂಬವಾಗಿದ್ದರೆ, ಇನ್ನು ಕೆಲವು ಕನಸುಗಳು ಮುಂಬರುವ ಭವಿಷ್ಯದ ಘಟನೆಗಳ ಮುನ್ಸೂಚನೆಯಾಗಿರುತ್ತವೆ. ಜ್ಯೋತಿಷ್ಯ ಮತ್ತು ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಕೆಲವು ನಿರ್ದಿಷ್ಟ ಕನಸುಗಳು ನಮಗೆ ಅಪಾರ ಸಂಪತ್ತು, ಯಶಸ್ಸು, ನೆಮ್ಮದಿ ಮತ್ತು ಅದೃಷ್ಟವನ್ನು ತರಲಿವೆ ಎಂಬುದರ ಸೂಚಕಗಳಾಗಿವೆ. ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಅಂತಹ 4 ಶುಭ ಕನಸುಗಳ ವಿವರ ಇಲ್ಲಿದೆ.

ಹೂವುಗಳಿಂದ ತುಂಬಿದ ಮರ:

ನಿಮ್ಮ ಕನಸಿನಲ್ಲಿ ಹೂವುಗಳಿಂದ ಸಂಪೂರ್ಣವಾಗಿ ಅರಳಿ ನಿಂತಿರುವ ಹಸಿರು ಮರ ಅಥವಾ ತೋಟ ಕಾಣಿಸಿಕೊಂಡರೆ, ಅದನ್ನು ಅತ್ಯಂತ ಶ್ರೇಷ್ಠ ಹಾಗೂ ಶುಭ ಸಂಕೇತವೆಂದು ಪರಿಗಣಿಸಬೇಕು. ಸ್ವಪ್ನ ಶಾಸ್ತ್ರದ ಪ್ರಕಾರ, ಈ ರೀತಿಯ ಕನಸು ನಿಮ್ಮ ಮುಚ್ಚಿಹೋಗಿರುವ ಅದೃಷ್ಟದ ಬಾಗಿಲು ಶೀಘ್ರದಲ್ಲೇ ತೆರೆಯಲಿದೆ ಎಂಬುದನ್ನು ಸೂಚಿಸುತ್ತದೆ. ಇದು ಕೇವಲ ವೈಯಕ್ತಿಕ ಬೆಳವಣಿಗೆಯಷ್ಟೇ ಅಲ್ಲದೆ, ಕುಟುಂಬದಲ್ಲಿ ಸಂತೋಷ ಹೆಚ್ಚಾಗುವುದು, ಆರ್ಥಿಕ ಪರಿಸ್ಥಿತಿ ಸುಧಾರಿಸುವುದು ಮತ್ತು ವೃತ್ತಿಜೀವನದಲ್ಲಿ ಹೊಸ ಹಾಗೂ ಅತ್ಯುತ್ತಮ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುವುದರ ಸಂಕೇತವಾಗಿದೆ.

ಜಿಟಿಜಿಟಿ ಬೀಳುವ ಮಳೆ:

ಕನಸಿನಲ್ಲಿ ಆಕಾಶದಿಂದ ತಿಳಿಯಾದ ಮಳೆ ಹನಿಗಳು ಬೀಳುವುದನ್ನು ನೋಡುವುದು ಅತ್ಯಂತ ಮಂಗಳಕರ ಶಕುನವಾಗಿದೆ. ಮಳೆಯು ಭೂಮಿಗೆ ಹೇಗೆ ಹೊಸ ಚೈತನ್ಯವನ್ನು ನೀಡುತ್ತದೆಯೋ, ಹಾಗೆಯೇ ಈ ಕನಸು ನಿಮ್ಮ ಜೀವನದಲ್ಲಿ ಹೊಸ ಬದಲಾವಣೆಗಳು, ಯಶಸ್ಸು ಮತ್ತು ಅಭಿವೃದ್ಧಿಯನ್ನು ತರುತ್ತದೆ. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಬಡ್ತಿ ಸಿಗುವ ಅಥವಾ ಉದ್ಯಮಿಗಳಿಗೆ ವ್ಯಾಪಾರದಲ್ಲಿ ಲಾಭವಾಗುವ ಸಾಧ್ಯತೆಗಳನ್ನು ಇದು ಉಲ್ಲೇಖಿಸುತ್ತದೆ. ವಿಶೇಷವಾಗಿ, ಇದು ಧನಲಕ್ಷ್ಮಿಯ ಆಶೀರ್ವಾದ ನಿಮ್ಮ ಮೇಲಿದೆ ಎಂಬುದರ ನೇರ ಸೂಚನೆಯಾಗಿದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಗುಲಾಬಿ ಹೂವುಗಳು:

ಗುಲಾಬಿ ಹೂವುಗಳನ್ನು ಪ್ರೀತಿ, ಸೌಂದರ್ಯ, ಸಂತೋಷ ಮತ್ತು ಸಮೃದ್ಧಿಯ ಪ್ರತೀಕ ಎಂದು ಕರೆಯಲಾಗುತ್ತದೆ. ಇವು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾದ ಹೂವುಗಳಾಗಿವೆ. ಹಾಗಾಗಿ, ನಿಮ್ಮ ಕನಸಿನಲ್ಲಿ ಗುಲಾಬಿ ಹೂವುಗಳು ಬಂದರೆ ನಿಮ್ಮ ಜೀವನದಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಮುಖ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿವೆ ಎಂದರ್ಥ. ಇದು ನಿಮ್ಮ ಆಸೆಗಳ ಈಡೇರಿಕೆಯೊಂದಿಗೆ, ಶೀಘ್ರದಲ್ಲೇ ಮನೆಯಲ್ಲಿ ಶುಭ ವಾರ್ತೆಯೊಂದನ್ನು ಕೇಳುವ ಸೌಭಾಗ್ಯವನ್ನು ತರುತ್ತದೆ.

ಹಣ ಅಥವಾ ನೋಟುಗಳ ಕಟ್ಟುಗಳು:

ಕನಸಿನಲ್ಲಿ ಹಣ, ಕರೆನ್ಸಿ ನೋಟುಗಳ ಕಟ್ಟುಗಳು ಅಥವಾ ಸಂಪತ್ತಿಗೆ ಸಂಬಂಧಿಸಿದ ಚಿತ್ರಗಳು ಕಾಣಿಸಿಕೊಂಡರೆ, ಅದನ್ನು ನೇರವಾಗಿ ಧನಲಾಭದ ಸಂಕೇತವೆಂದು ತಿಳಿಯಬಹುದು. ಇಂತಹ ಕನಸುಗಳು ಸದ್ಯ ನೀವು ಎದುರಿಸುತ್ತಿರುವ ಆರ್ಥಿಕ ತೊಂದರೆಗಳು ಕೊನೆಗೊಳ್ಳಲಿವೆ ಮತ್ತು ಆದಾಯದ ಮೂಲಗಳು ಹೆಚ್ಚಾಗಲಿವೆ. ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭ, ಆಕಸ್ಮಿಕ ಧನ ಯೋಗ ಮತ್ತು ಕುಟುಂಬದಲ್ಲಿ ಆರ್ಥಿಕ ಸ್ಥಿರತೆ ಮೂಡುವ ಶುಭ ಫಲಿತಾಂಶಗಳನ್ನು ಇದು ಒಳಗೊಂಡಿರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫುಡ್ ಪಾಯ್ಸನಿಂಗ್‌ ಆಗದಂತೆ ತಡೆಯಲು ಉಳಿದ ಆಹಾರವನ್ನು ಈ ರೀತಿ ಸಂಗ್ರಹಿಸಿಡಿ! – Kannada News | How To Store Leftover Food Safely And Prevent Food Spoilage

Avoid Food Poisoning: Smart Tips For Storing Leftover FoodImage Credit source: Getty Images

ಮನೆಯಲ್ಲಿ ಆಹಾರ (Food) ಉಳಿಯುವುದು ಸಾಮಾನ್ಯ. ಪ್ರತಿದಿನ ಮಾಡಿ ಮಾಡಿ ಬಿಸಾಡುವುದಕ್ಕಿಂತ ಅದನ್ನು ಸರಿಯಾಗಿ ಸಂಗ್ರಹಿಸಿ ಸೇವನೆ ಮಾಡುವುದು ಬಹಳ ಉತ್ತಮ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸದಿದ್ದರೆ ಬೇಗ ಹಾಳಾಗುವ ಸಾಧ್ಯತೆ ಇರುತ್ತದೆ. ಇದರಿಂದ ಬ್ಯಾಕ್ಟೀರಿಯಾ ಬೆಳೆಯುವ ಅಪಾಯ ಹೆಚ್ಚಾಗಿ, ಆಹಾರದ ಗುಣಮಟ್ಟ ಮತ್ತು ರುಚಿಯೂ ಹಾಳಾಗಬಹುದು. ಆದ್ದರಿಂದ ಉಳಿದ ಆಹಾರವನ್ನು ಸುರಕ್ಷಿತವಾಗಿ ಸಂಗ್ರಹಿಸುವುದು ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ. ಜೊತೆಗೆ ಫುಡ್ ಪಾಯ್ಸನಿಂಗ್‌ನಿಂದ ಮುಕ್ತಿ ಪಡೆಯಬಹುದು. ಹಾಗಾದರೆ ಉಳಿದ ಆಹಾರವನ್ನು (Leftover Food) ಯಾವ ರೀತಿ ಇಡಬೇಕು, ಯಾವಾಗ ಉಳಿದ ಆಹಾರ ತಿನ್ನಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಉಳಿದ ಆಹಾರವನ್ನು ಹೇಗೆ ಸಂಗ್ರಹಿಸಿಡಬೇಕು?

ಆಹಾರ ಸಂಪೂರ್ಣ ತಣ್ಣಗಾದ ಬಳಿಕ ಸ್ವಚ್ಛವಾದ, ಗಾಳಿಯಾಡದ (ಏರ್‌ಟೈಟ್) ಡಬ್ಬಿಯಲ್ಲಿ ಹಾಕಿ ಫ್ರಿಜ್‌ನಲ್ಲಿ ಇಡಿ. ಅಡುಗೆ ಮಾಡಿದ 2 ಗಂಟೆಗಳೊಳಗೆ ಫ್ರಿಜ್‌ ನಲ್ಲಿ ಇಡುವುದು ಉತ್ತಮ. ವಿವಿಧ ಆಹಾರಗಳನ್ನು ಪ್ರತ್ಯೇಕ ಡಬ್ಬಿಗಳಲ್ಲಿ ಇಟ್ಟು, ಅವುಗಳನ್ನು ಸಂಗ್ರಹಿಸಿದ ದಿನಾಂಕವನ್ನು ಬರೆಯಿರಿ. ಸಾಮಾನ್ಯವಾಗಿ ಬೇಯಿಸಿದ ಆಹಾರವನ್ನು 2– 3 ದಿನಗಳವರೆಗೆ ಸುರಕ್ಷಿತವಾಗಿ ಬಳಸಬಹುದು.

ಇದನ್ನೂ ಓದಿ: ಏನಿದು ಮೀಲ್ ಪ್ರೆಪ್ ಟ್ರೆಂಡ್? ನಿಜವಾಗಿಯೂ ಇದು ಸಮಯ, ಹಣ ಉಳಿಸುವುದರ ಜೊತೆಗೆ ಆರೋಗ್ಯ ಕಾಪಾಡುತ್ತಾ?

ಈ ತಪ್ಪುಗಳನ್ನು ಮಾಡಬೇಡಿ

ಬಿಸಿ ಆಹಾರವನ್ನು ನೇರವಾಗಿ ಫ್ರಿಜ್‌ ನಲ್ಲಿ ಇಡಬೇಡಿ. ಮುಚ್ಚಳವಿಲ್ಲದೆ ಆಹಾರವನ್ನು ಬಿಡುವುದು, ಕೊಳಕು ಡಬ್ಬಿಗಳಲ್ಲಿ ಸಂಗ್ರಹಿಸುವುದು ಅಥವಾ ಒಂದೇ ಆಹಾರವನ್ನು ಪದೇಪದೇ ಬಿಸಿ ಮಾಡಿ ತಿನ್ನುವುದು ಆರೋಗ್ಯಕ್ಕೆ ಹಾನಿಕರ. ಫ್ರಿಜ್ ಅನ್ನು ಅತಿಯಾಗಿ ತುಂಬಿದರೆ ತಂಪಾದ ಗಾಳಿಯ ಹರಿವು ಕಡಿಮೆಯಾಗಿ ಆಹಾರ ಬೇಗ ಹಾಳಾಗಬಹುದು.

ಯಾವಾಗ ಉಳಿದ ಆಹಾರ ತಿನ್ನಬಾರದು?

ಆಹಾರದಿಂದ ಹುಳಿ ಅಥವಾ ಬೇರೆ ವಾಸನೆ ಬಂದರೆ, ಬಣ್ಣ ಬದಲಾಗಿದ್ದರೆ, ಶಿಲೀಂಧ್ರ (ಫಂಗಸ್) ಕಾಣಿಸಿಕೊಂಡರೆ ಅಥವಾ ರುಚಿ ಮತ್ತು ವಿನ್ಯಾಸ ಬದಲಾಗಿದ್ದರೆ ಅದನ್ನು ಸೇವಿಸಬೇಡಿ. ಫ್ರಿಜ್‌ನಲ್ಲಿ ಹೆಚ್ಚು ದಿನ ಇಟ್ಟ ಆಹಾರ ಹೊರಗೆ ಚೆನ್ನಾಗಿ ಕಂಡರೂ ಸುರಕ್ಷಿತವಾಗಿರದೇ ಇರಬಹುದು. ಇಂತಹ ಆಹಾರ ಸೇವನೆಯಿಂದ ಫುಡ್ ಪಾಯ್ಸನಿಂಗ್ ಅಪಾಯ ಹೆಚ್ಚಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭವಿಷ್ಯದಲ್ಲಿ ಮಕ್ಕಳಿಗೆ ತೊಂದರೆ ಆಗಬಾರದು, ಪೋಲಿಯೋ ಲಸಿಕೆ ಹಾಕಿಸಲೇಬೇಕು: ಡಿ.ಕೆ ಶಿವಕುಮಾರ್

ಬೆಂಗಳೂರು, ಜೂನ್ 28: ದೇಶದಲ್ಲಿ ಪೋಲಿಯೋ ಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಇಂದು ರಾಷ್ಟ್ರದಾದ್ಯಂತ ಹಮ್ಮಿಕೊಳ್ಳಲಾಗಿರುವ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದ್ದಾರೆ. ಬೆಂಗಳೂರಿನ ಸಿಎಂ ನಿವಾಸದಲ್ಲೇ ಈ ಬಾರಿಯ ರಾಜ್ಯ ಮಟ್ಟದ ಪೋಲಿಯೋ ಲಸಿಕಾ ಅಭಿಯಾನಕ್ಕೆ ಅಧಿಕೃತ ಚಾಲನೆ ದೊರೆತಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, 1972ರಲ್ಲೇ ಇಂದಿರಾ ಗಾಂಧಿಯವರು ದೇಶದಲ್ಲಿ ಪೋಲಿಯೋ ನಿರ್ಮೂಲನೆಗೆ ಮುನ್ನುಡಿ ಬರೆದಿದ್ದರು. ಮಕ್ಕಳ ಭವಿಷ್ಯಕ್ಕೆ ಮುಂದೆ ಯಾವುದೇ ತೊಂದರೆ ಆಗಬಾರದು ಎಂಬ ದೂರದೃಷ್ಟಿಯಿಂದ ಈ ಲಸಿಕೆ ಹಾಕಲಾಗುತ್ತದೆ. ನಮ್ಮ ಅಕ್ಕಪಕ್ಕದ ದೇಶಗಳಲ್ಲಿ ಇಂದಿಗೂ ಪೋಲಿಯೋ ಸಮಸ್ಯೆ ಜೀವಂತವಾಗಿದೆ, ಆದರೆ ಅದು ನಮ್ಮಲ್ಲಿ ಮರುಕಳಿಸಬಾರದು ಎಂದು ಎಚ್ಚರಿಸಿದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಜವಾಬ್ದಾರಿಯಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜನೆಗೊಂಡಿದ್ದು, ಸಿಎಂ ನಿವಾಸದಿಂದಲೇ ಅಭಿಯಾನ ಆರಂಭಿಸಲು ಅಧಿಕಾರಿಗಳು ನಿರ್ಧರಿಸಿದ್ದರು. ಇದಕ್ಕೆ ಎಲ್ಲಾ ಇಲಾಖೆಯ ಅಧಿಕಾರಿಗಳು ಉತ್ತಮ ಸಹಕಾರ ನೀಡಿದ್ದಾರೆ ಎಂದು ಸಿಎಂ ಶ್ಲಾಘಿಸಿದರು. ವಿಶೇಷವಾಗಿ ಹಳ್ಳಿ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿರುವ ಪ್ರತಿಯೊಂದು ಮಗುವಿಗೂ ಪೋಲಿಯೋ ಲಸಿಕೆ ತಲುಪಬೇಕು ಮತ್ತು ಪೋಷಕರು ಕಡ್ಡಾಯವಾಗಿ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ಮುಖ್ಯಮಂತ್ರಿಗಳು ಕರೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್​​ ಸೇರ್ತಾರ ಜಿ.ಟಿ. ದೇವೇಗೌಡ?: ಸ್ವತಃ ಸ್ಪಷ್ಟನೆ ಕೊಟ್ಟ ಜೆಡಿಎಸ್​​ ಶಾಸಕ – Kannada News | G.T. Devegowda Clarifies Stand Amid Congress Joining Rumours

ಮೈಸೂರು, ಜೂನ್​​ 28: ತಮ್ಮ ಕುರಿತು ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಆಡಿರುವ ಮಾತುಗಳಿಗೆ ಜೆಡಿಎಸ್​​ ಶಾಸಕ ಜಿ.ಟಿ. ದೇವೇಗೌಡ ಕೌಂಟರ್​​ ಕೊಟ್ಟಿದ್ದಾರೆ. ನನ್ನ ಬೆಂಬಲದಿಂದಲೇ ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಭಿವೃದ್ಧಿ ಬಿಟ್ಟರೆ ಬೇರೆ ರಾಜಕಾರಣ ನನಗೆ ಗೊತ್ತಿಲ್ಲ. ಕುಮಾರ ಪರ್ವ ಮಾಡಿದ್ದು ಚಾಮುಂಡೇಶ್ವರಿ ಜನ ಮಾತ್ರ. ಬೇರೆ ಯಾವ ಕ್ಷೇತ್ರದಲ್ಲೂ ಈ ರೀತಿಯ ಸಮಾವೇಶ ಮಾಡಿಲ್ಲ. ನನಗೆ ಫೋನ್ , ಇನ್ಸ್ಟಾಗ್ರಾಂ ನೋಡಲು ಬರಲ್ಲ. ಎಸ್​ಎಂಎಸ್​​​ ನೋಡಲೂ ಬರಲ್ಲ. ಪಿಎಗಳು ಫೋನ್ ಮಾಡಿಕೊಡ್ತಾರೆ. ನಾನು ಟಿವಿ ನೋಡಿಲ್ಲ, ಹೀಗಾಗಿ ಅವರ ಹೇಳಿಕೆಯನ್ನ ಗಮನಿಸಿಲ್ಲ ಎಂದು ಜಿಟಿಡಿ ಹೇಳಿದ್ದಾರೆ. ಕಾಂಗ್ರೆಸ್​​ಗೆ ಸೇರುವ ವದಂತಿಗಳಿಗೂ ಇದೇ ವೇಳೆ ಅವರು ಸ್ಪಷ್ಟನೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

Optical Illusion: ಕೋಳಿ ಮರಿಗಳ ನಡುವೆ ಇದೆ ಐದು ನಿಂಬೆ ಹಣ್ಣು; ಜಸ್ಟ್ 10 ಸೆಕೆಂಡುಗಳಲ್ಲಿ ಹುಡುಕಿ – Kannada News | Optical Illusion: A challenge for your eyes, find a lemons in this chicks within 10 seconds

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: mirror.co.uk

ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಸೇರಿದಂತೆ ಇನ್ನಿತ್ತರ ಟ್ರಿಕ್ಕಿ ಒಗಟಿನ ಆಟಗಳು ಬಹಳಷ್ಟು ಜನಪ್ರಿಯವಾಗುತ್ತಿವೆ. ಕಣ್ಣು ಹಾಯಿಸಿದ್ದಲೆಲ್ಲಾ ಮೆದುಳಿಗೆ ವ್ಯಾಯಾಮ ನೀಡುವ ಈ ಆಟಗಳನ್ನು ಬಿಡಿಸುವುದು ಹೇಳಿದ್ದಷ್ಟು ಸುಲಭವಲ್ಲ. ಇದು ನಿಮ್ಮ ದೃಷ್ಟಿ ಹಾಗೂ ಬುದ್ಧಿವಂತಿಕೆಗೆ ಸವಾಲು ಎಸೆಯುವುದಲ್ಲದೇ ನಿಮ್ಮನ್ನು ಯೋಚಿಸುವಂತೆ ಮಾಡುತ್ತದೆ. ಈ ಚಿತ್ರದಲ್ಲಿ ಕೋಳಿಮರಿಗಳಿವೆ. ಅವುಗಳ ನಡುವೆ 5 ನಿಂಬೆಹಣ್ಣುಗಳಿವೆ. ನೀವು ಹತ್ತು ಸೆಕೆಂಡುಗಳಲ್ಲಿ ಈ ನಿಂಬೆ ಹಣ್ಣುಗಳನ್ನು ಗುರುತಿಸಬೇಕು.

ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳಲ್ಲಿ ಅಡಗಿರುವ ವಸ್ತುಗಳನ್ನು ಕಂಡು ಹಿಡಿಯುವುದು ಸುಲಭವಲ್ಲ. ಈ ಚಿತ್ರವನ್ನು ಮೊದಲು ನೋಡಿದಾಗ ನಿಮ್ಮ ಕಣ್ಣಿಗೆ ಹಳದಿ ಬಣ್ಣದ ಕೋಳಿಮರಿಗಳು ಕಾಣಿಸುತ್ತವೆ. ಆದರೆ ಈ ಕೋಳಿಮರಿಗಳ ನಡುವೆ ಅಡಗಿರುವ ನಿಂಬೆಹಣ್ಣುಗಳನ್ನು ಪತ್ತೆ ಹಚ್ಚುವ ಸವಾಲು ನೀಡಲಾಗಿದೆ. ನೀವು ಹತ್ತು ಸೆಕೆಂಡುಗಳೊಳಗೆ ಈ ಒಗಟು ಬಿಡಿಸಿ ನೋಡೋಣ.

ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್; ಈ ಎರಡು ಚಿತ್ರಗಳಲ್ಲಿನ ಮೂರು ವ್ಯತ್ಯಾಸಗಳನ್ನು ಗುರುತಿಸಬಲ್ಲಿರಾ

ನಿಮ್ಮ ಕಣ್ಣಿಗೆ ಕೋಳಿ ಮರಿಗಳು ಕಾಣಿಸಿತೇ?

ಟ್ರಿಕ್ಕಿ ಒಗಟುಗಳನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಈ ಚಿತ್ರದಲ್ಲಿ ಐದು ನಿಂಬೆ ಹಣ್ಣುಗಳಿವೆ. ಈ ಕೋಳಿಮರಿಗಳ ನಡುವೆ ಇರುವ 5 ನಿಂಬೆ ಹಣ್ಣುಗಳನ್ನು ಗುರುತಿಸಲು ಸಾಧ್ಯವಾಗಿಲ್ಲವೇ. ಬಹಳ ಎಚ್ಚರಿಕೆಯಿಂದ ನೋಡಿದರೆ ಮಾತ್ರ ನಿಂಬೆಹಣ್ಣುಗಳು ಕಣ್ಣಿಗೆ ಕಾಣಿಸುತ್ತವೆ. ಈ ಕೆಳಗಿನ ಚಿತ್ರದಲ್ಲಿ ನಿಂಬೆ ಹಣ್ಣನ್ನು ಗುರುತಿಸಿದ್ದೇವೆ. ನಿಮ್ಮ ಕಣ್ಣಿಗೆ ನಿಂಬೆ ಹಣ್ಣುಗಳು ಕಾಣಿಸಿತು ಎಂದು ಭಾವಿಸುತ್ತೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೆನೆಜುವೆಲಾ ಭೂಕಂಪ: ಪುಟ್ಟ ಮಗಳ ಜೀವ ಉಳಿಸಿ ಪ್ರಾಣಬಿಟ್ಟ ಫುಟ್ಬಾಲ್ ಆಟಗಾರನ ಪತ್ನಿ – Kannada News | Venezuela Earthquake: Footballer’s Wife Sacrifices Her Life to Save Young Daughter

ಕ್ಯಾರಕಾಸ್, ಜೂನ್​​ 26: ವೆನೆಜುವೆಲಾ ಭೂಕಂಪ ದುರಂತದಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ಪ್ರಸಿದ್ಧ ಫುಟ್ಬಾಲ್ ಆಟಗಾರ ಹೆಕ್ಟರ್ ಬೆಲ್ಲೊ ಅವರ ಪತ್ನಿ ಆಂಡ್ರಿಯಾ ಬೆಲ್ಲೊ ತಮ್ಮ ಒಂದು ವರ್ಷದ ಮಗಳು ಅಲಾನಾಳನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ್ದಾರೆ. ಭೂಕಂಪದಲ್ಲಿ ಅಪಾರ್ಟ್ಮೆಂಟ್ ಕುಸಿದಾಗ, ಆಂಡ್ರಿಯಾ ತಮ್ಮ ಮಗಳನ್ನು ತಬ್ಬಿಕೊಂಡು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು. ರಕ್ಷಣಾ ಸಿಬ್ಬಂದಿ ಅವಶೇಷಗಳನ್ನು ಹೊರತೆಗೆದಾಗ, ಆಂಡ್ರಿಯಾ ಮಗಳನ್ನು ತಬ್ಬಿದ ಸ್ಥಿತಿಯಲ್ಲೇ ಮೃತಪಟ್ಟಿರುವುದು ಕಂಡುಬಂದಿದೆ. ಆದರೆ, ಆಂಡ್ರಿಯಾಳ ಮುನ್ನೆಚ್ಚರಿಕೆಯಿಂದಾಗಿ ತಾಯಿಯ ಮಡಿಲಲ್ಲಿದ್ದ ಅಲಾನಾ ಪವಾಡ ಸದೃಶವಾಗಿ ಪಾರಾಗಿದ್ದಾಳೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version