Video: ಬೇಕರಿಯಿಂದ ಹೊರಡುವಾಗ ಪಕ್ಕದಲ್ಲಿದ್ದ ಯುವಕನ ಕೂದಲಿಗೆ ಲೈಟರ್​ನಿಂದ ಬೆಂಕಿ ಹಚ್ಚಿದ ಬಾಲಕ – Kannada News | Security Footage From Mexico Shows Child Setting Teen’s Hair on Fire Inside Store

ಮೆಕ್ಸಿಕೋ, ಮೇ 27: ಯಾವುದೇ ಕಾರಣವಿಲ್ಲದಿದ್ದರೂ ಬಾಲಕನೊಬ್ಬ ಬೇಕರಿಯಿಂದ ಹೊರಡುವಾಗ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯ ಕೂದಲಿಗೆ ಲೈಟರ್​ನಿಂದ ಬೆಂಕಿ ಹಚ್ಚಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಯುವಕನ ಗುಂಗುರು ಕೂದಲಿಗೆ ಬೆಂಕಿ ಹಚ್ಚಿದ ದೃಶ್ಯವೊಂದು ಅಂಗಡಿಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯುವಕ ಏನೋ ಆಲೋಚಿಸುತ್ತಾ ನಿಂತಿದ್ದಾಗ, ಹಿಂದಿನಿಂದ ಬಂದ ಬಾಲಕ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಅದೃಷ್ಟವಶಾತ್, ಯುವಕ ತಕ್ಷಣವೇ ಎಚ್ಚೆತ್ತುಕೊಂಡು, ಅತ್ಯಂತ ಸಮಯಪ್ರಜ್ಞೆಯಿಂದ ಕೆಲವೇ ಸೆಕೆಂಡುಗಳಲ್ಲಿ ತನ್ನ ಕೂದಲಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾನೆ. ಇದರಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ದುರಂತ ಮತ್ತು ಪ್ರಾಣಾಪಾಯ ತಪ್ಪಿದಂತಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕದಲ್ಲಿ ‘ಹೌಸ್ ಪಾರ್ಟಿ’ ಪ್ರಿಯರಿಗೆ ಬಿಗ್ ಶಾಕ್: ಮದ್ಯದ ಪರ್ಮಿಟ್ ಶುಲ್ಕ ದುಪ್ಪಟ್ಟು ಮಾಡಿದ ಸರ್ಕಾರ! – Kannada News | Karnataka Liquor Permit Fee: Government Doubles License Rates for House Parties and Events

ದ್ಯದ ಪರ್ಮಿಟ್ ಶುಲ್ಕ ದುಪ್ಪಟ್ಟು ಮಾಡಿದ ಸರ್ಕಾರ!

ಬೆಂಗಳೂರು, ಮೇ 27: ಬರ್ತ್​ ಡೇ, ಮದುವೆ, ಗೆಟ್-ಟು-ಗೆದರ್ ಎಂದು ಹೌಸ್ ಪಾರ್ಟಿ ಮಾಡುವವರಿಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ. ಪಾರ್ಟಿಗೆ ಬಂದ ಅತಿಥಿಗಳಿಗೆ ಭರಪೂರವಾಗಿ ಮದ್ಯ (Alcohol) ನೀಡಲು ಯೋಚಿಸುತ್ತಿರುವವರ ಜೇಬಿಗೆ ಇನ್ನು ಮುಂದೆ ಕತ್ತರಿ ಬೀಳಲಿದೆ. ಏಕೆಂದರೆ ಕರ್ನಾಟಕ ಸರ್ಕಾರವು ಖಾಸಗಿ ಪಾರ್ಟಿಗಳಲ್ಲಿ ಮದ್ಯ ಸರಬರಾಜು ಮಾಡಲು ನೀಡಲಾಗುವ ತಾತ್ಕಾಲಿಕ ಮದ್ಯದ ಪರ್ಮಿಟ್ (CL-5 ಲೈಸೆನ್ಸ್) ಶುಲ್ಕವನ್ನು ಅಕ್ಷರಶಃ ದುಪ್ಪಟ್ಟು ಮಾಡಿದೆ. ಆರ್ಥಿಕ ಇಲಾಖೆಯು ಹೊರಡಿಸಿರುವ ಹೊಸ ನಿಯಮಗಳ ಪ್ರಕಾರ, ವಾಣಿಜ್ಯೇತರ (Non-commercial) ಮತ್ತು ವಾಣಿಜ್ಯ (Commercial) ಪಾರ್ಟಿಗಳ ಮದ್ಯದ ಪರ್ಮಿಟ್ ದರಗಳನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಖಾಸಗಿ ಪಾರ್ಟಿಗಳ ತಾತ್ಕಾಲಿಕ ಮದ್ಯದ ಪರ್ಮಿಟ್ ಶುಲ್ಕ ದುಪ್ಪಟ್ಟುಗೊಂಡಿದೆ.
  • ವಾಣಿಜ್ಯೇತರ ಕಾರ್ಯಕ್ರಮಗಳ ಸಾಮಾನ್ಯ ಪರ್ಮಿಟ್ ದರ ಇಪ್ಪತ್ತು ಸಾವಿರಕ್ಕೇರಿಕೆ ಕಂಡಿದೆ.
  • ಒಂಬತ್ತು ಲೀಟರ್ ಒಳಗಿನ ಮದ್ಯದ ಬಳಕೆಗೆ ಯಾವುದೇ ಪರವಾನಗಿ ಅಗತ್ಯವಿಲ್ಲ.

ಹೊಸ ದರ ಪಟ್ಟಿ ಹೀಗಿದೆ

ಹೌಸ್ ಪಾರ್ಟಿಗಳಲ್ಲಿಇದುವರೆಗೆ ಪ್ರತಿದಿನಕ್ಕೆ 11,500 ರೂ. ಇದ್ದ ಶುಲ್ಕವನ್ನು ಈಗ 20,000 ರೂ.ಗೆ ಹೆಚ್ಚಿಸಲಾಗಿದೆ. ಈ ಪರ್ಮಿಟ್‌ ಅನ್ನು ಕನಿಷ್ಠ 7 ದಿನಗಳ ಮುಂಚಿತವಾಗಿಯೇ ಪಡೆಯಬೇಕು. ಒಂದು ವೇಳೆ ಕಾರ್ಯಕ್ರಮಕ್ಕೆ 24 ಗಂಟೆಗಳ ಮುಂಚೆ ತುರ್ತಾಗಿ ಅನುಮತಿ ಬೇಕಿದ್ದರೆ, ತತ್ಕಾಲ್ ಯೋಜನೆಯಡಿ ಪ್ರತಿದಿನಕ್ಕೆ ಬರೋಬ್ಬರಿ 40,000 ರೂ.ಪಾವತಿಸಬೇಕಾಗುತ್ತದೆ.

ವಾಣಿಜ್ಯ ಕಾರ್ಯಕ್ರಮಗಳಿಗೆ ಲಕ್ಷಗಳಲ್ಲಿ ಶುಲ್ಕ!

ಸಂಗೀತ ಕಚೇರಿಗಳು (Concerts), ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರದರ್ಶನಗಳು, ಕಾರ್ಪೊರೇಟ್ ಈವೆಂಟ್‌ಗಳು ಮತ್ತು ಹೊಸ ವರ್ಷದ ಆಚರಣೆಗಳಂತಹ ವಾಣಿಜ್ಯ (Commercial) ಪಾರ್ಟಿಗಳಿಗೆ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಏರಿಸಲಾಗಿದ್ದು, ಪ್ರತಿದಿನಕ್ಕೆ 75,000 ರೂ. ನಿಗದಿಪಡಿಸಲಾಗಿದೆ. ತುರ್ತು ಅನುಮತಿಗಾಗಿ ಪ್ರತಿದಿನಕ್ಕೆ 1.5 ಲಕ್ಷ ರೂ. ದಂಡ ತೆರಬೇಕಾಗುತ್ತದೆ.

9 ಲೀಟರ್‌ವರೆಗಿನ ಮದ್ಯಕ್ಕೆ ಲೈಸೆನ್ಸ್ ಬೇಡ!

ಮನೆಯಲ್ಲಿ ಸಣ್ಣ ಪ್ರಮಾಣದ ಪಾರ್ಟಿ ಮಾಡುವವರಿಗೆ ಅಬಕಾರಿ ಇಲಾಖೆ ಒಂದು ಸಣ್ಣ ವಿನಾಯಿತಿ ನೀಡಿದೆ. ಖಾಸಗಿ ಪಾರ್ಟಿಗಳಲ್ಲಿ 9 ಲೀಟರ್ ಮದ್ಯ (IMFL) ಮತ್ತು 18 ಲೀಟರ್ ಬಿಯರ್ ಅಥವಾ ವೈನ್ ಮಿತಿಯೊಳಗೆ ಮದ್ಯ ಬಳಸಲು ಯಾವುದೇ ರೀತಿಯ ಅಬಕಾರಿ ಪರವಾನಗಿ (Licence) ಪಡೆಯುವ ಅಗತ್ಯವಿಲ್ಲ ಎಂದು ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ಈ ಮಿತಿ ದಾಟಿದರೆ ಕಡ್ಡಾಯವಾಗಿ CL-5 ಲೈಸೆನ್ಸ್ ಪಡೆಯಲೇಬೇಕು.

ಇದನ್ನೂ ಓದಿ ಮದ್ಯಪ್ರಿಯರಿಗೆ ಗುಡ್ ನ್ಯೂಸ್: ಬಿಯರ್ ಮತ್ತು ವಿಸ್ಕಿ ದರ ಭಾರಿ ಇಳಿಕೆ!

ರಾಜ್ಯ ಸರ್ಕಾರದ ಆದಾಯ ಸಂಗ್ರಹಣೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ವಾಣಿಜ್ಯೇತರ ಕಾರ್ಯಕ್ರಮಗಳಿಗೂ ಇನ್ಮುಂದೆ ಕಡ್ಡಾಯವಾಗಿ CL-5 ಲೈಸೆನ್ಸ್ ಪಡೆಯಬೇಕಾಗುತ್ತದೆ ಎಂದು ಅಬಕಾರಿ ಆಯುಕ್ತ ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ. ಒಟ್ಟಿನಲ್ಲಿ ವೀಕೆಂಡ್ ಪಾರ್ಟಿ ಮೂಡ್‌ನಲ್ಲಿದ್ದ ಸಿಲಿಕಾನ್ ಸಿಟಿ ಮಂದಿಗೆ ಸರ್ಕಾರದ ಈ ಹೊಸ ಆದೇಶ ಭಾರಿ ಶಾಕ್ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಿರಸ್ಕಾರದಿಂದ ಕಿರೀಟದವರೆಗೆ… ಈ ‘ಪಾಟಿ’ಯ ಯಶಸ್ಸು! – Kannada News | Rise of Rajat Patidar: From Unsold to RCB’s Trophy Winning Captain

ಕ್ರೀಡಾ ಲೋಕದಲ್ಲಿ ಕೆಲವೊಂದು ಕರೆಗಳು ಇಡೀ ಚರಿತ್ರೆಯನ್ನೇ ಬದಲಿಸುತ್ತದೆ. ಹೀಗೆ ಚರಿತ್ರೆಯನ್ನೇ ಬದಲಿಸಿದ ಆಟಗಾರನೆಂದರೆ ರಜತ್ ಪಾಟಿದಾರ್ (Rajat Patidar). ಐಪಿಎಲ್​ ಹರಾಜಿನಲ್ಲಿ ನಿರಂತರ ಅವಗಣನೆ, ಈ ಅವಗಣನೆ ನಡುವೆ ಹೊಸ ಬದುಕಿಗೆ ನಾಂದಿಯಾಡಲು ಸಜ್ಜಾಗುತ್ತಿದ್ದ ಆಟಗಾರನ ಭವಿಷ್ಯ ಬದಲಿಸಿದ್ದು ಒಂದು ಕರೆ. ಆ ಕರೆಯಿಂದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಶಾಪ ವಿಮೋಚಣೆಯಾಗಿದ್ದು ಈಗ ಇತಿಹಾಸ.

ಅದು 2021ರ ಐಪಿಎಲ್ ಹರಾಜು… ಮಿನಿ ಹರಾಜಿನ ಕೊನೆಯ ಸುತ್ತಿನಲ್ಲಿ 20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ರಜತ್ ಪಾಟಿದಾರ್ ಅವರನ್ನು ಆರ್​ಸಿಬಿ ಖರೀದಿಸಿತ್ತು. ಹೀಗೆ ಖರೀದಿಸಿದ ಆಟಗಾರನಿಗೆ 4 ಪಂದ್ಯಗಳಲ್ಲಿ ಅವಕಾಶ ನೀಡಲಾಯಿತು. ಈ ನಾಲ್ಕು ಮ್ಯಾಚ್​ಗಳಲ್ಲಿ ರಜತ್ ಕಲೆಹಾಕಿದ್ದು ಕೇವಲ 71 ರನ್​ಗಳು. ಹೀಗಾಗಿಯೇ ಐಪಿಎಲ್ 2022 ರ ಮೆಗಾ ಹರಾಜಿಗೂ ಮುನ್ನ ರಜತ್ ಪಾಟಿದಾರ್ ಅವರನ್ನು ತಂಡದಿಂದ ಕೈ ಬಿಡಲಾಯಿತು.

ಇದಾಗ್ಯೂ  2022 ರ ಮೆಗಾ ಹರಾಜಿಗಾಗಿ ರಜತ್ ಪಾಟಿದಾರ್ ಹೆಸರು ನೊಂದಾಯಿಸಿಕೊಂಡಿದ್ದರು. ಕೇವಲ 20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಆಟಗಾರನ ಖರೀದಿಗೆ ಯಾವುದೇ ಫ್ರಾಂಚೈಸಿ ಮುಂದಾಗಲಿಲ್ಲ.

ಐಪಿಎಲ್​ನಲ್ಲಿ ಅವಕಾಶ ಕೈ ತಪ್ಪಿದ್ದರಿಂದ ಆ ಅವಧಿಯಲ್ಲಿ ಮದುವೆಗೆ ಸಿದ್ಧತೆಗಳನ್ನು ಮಾಡಿಕೊಂಡರು. ಇನ್ನೇನು ಮದುವೆ ದಿನಾಂಕ ಫಿಕ್ಸ್ ಮಾಡಿ ಹೊಸ ಇನಿಂಗ್ಸ್ ಆರಂಭಿಸಬೇಕು ಅನ್ನುವಷ್ಟರಲ್ಲಿ ರಜತ್ ಪಾಟಿದಾರ್​ಗೆ ಒಂದು ಕರೆ ಬಂದಿತ್ತು.

ಅದೃಷ್ಟ ಬದಲಿಸಿದ ಆ ಒಂದು ಫೋನ್ ಕರೆ:

ಐಪಿಎಲ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಲವ್​ನೀತ್ ಸಿಸೋಡಿಯಾ ಗಾಯಗೊಂಡರು. ಹೀಗೆ ಗಾಯಗೊಂಡ ಆಟಗಾರನ ಬದಲಿಯಾಗಿ ತಂಡವನ್ನು ಸೇರಿಕೊಳ್ಳುವಂತೆ ರಜತ್ ಪಾಟಿದಾರ್​ಗೆ ಕರೆ ಮಾಡಲಾಯಿತು.

ಈ ಕರೆ ಸ್ವೀಕರಿಸಿದ ಬೆನ್ನಲ್ಲೇ ಮದುವೆಯನ್ನು ಮುಂದೂಡಿ ರಜತ್ ಪಾಟಿದಾರ್ ಆರ್​ಸಿಬಿ ತಂಡವನ್ನು ಕೂಡಿಕೊಂಡರು. ಅಲ್ಲದೆ ಆ ಸೀಸನ್​ನಲ್ಲಿ ರಜತ್ ಪಾಟಿದಾರ್​ಗೆ 8 ಪಂದ್ಯಗಳಲ್ಲಿ ಕಣಕ್ಕಿಳಿಯಲು ಅವಕಾಶ ಸಿಕ್ಕಿತ್ತು.

ಈ ಅವಕಾಶಗಳನ್ನು ಬಳಸಿಕೊಂಡ ರಜತ್ ಪಾಟಿದಾರ್ 8 ಪಂದ್ಯಗಳಿಂದ ಕಲೆಹಾಕಿದ್ದು ಬರೋಬ್ಬರಿ 333 ರನ್​ಗಳು. ಇದರಲ್ಲಿ ಒಂದು ಸಿಡಿಲಬ್ಬರದ ಶತಕ ಕೂಡ ಸೇರಿದೆ.

ಈ ಭರ್ಜರಿ ಪ್ರದರ್ಶನದೊಂದಿಗೆ ರಜತ್ ಪಾಟಿದಾರ್ ಆರ್​ಸಿಬಿ ಪ್ಲೇಯಿಂಗ್ ಇಲೆವೆನ್​ನ ಖಾಯಂ ಸದಸ್ಯರಾಗುವುದು ಖಚಿತವಾಯಿತು.

ಬೆನ್ನತ್ತಿದ ದುರಾದೃಷ್ಟ:

ಐಪಿಎಲ್ ಮುಗಿದ ಬೆನ್ನಲ್ಲೇ ಮಧ್ಯಪ್ರದೇಶ ತಂಡವನ್ನು ಮುನ್ನಡೆಸಿದ ರಜತ್ ಪಾಟಿದಾರ್ ರಣಜಿ ಟೂರ್ನಿಯ ಫೈನಲ್​​ನಲ್ಲಿ ಭರ್ಜರಿ ಶತಕ ಸಿಡಿಸಿದರು. ಈ ಶತಕದೊಂದಿಗೆ ಮಧ್ಯಪ್ರದೇಶ ತಂಡಕ್ಕೆ ಚೊಚ್ಚಲ ರಣಜಿ ಟ್ರೋಫಿ ತಂದುಕೊಟ್ಟರು.

ಆದರೆ ಈ ಯಶಸ್ವಿನ ಬೆನ್ನಲ್ಲೇ ರಜತ್ ಪಾಟಿದಾರ್ ಗಂಭೀರವಾಗಿ ಗಾಯಗೊಂಡರು. ಪರಿಣಾಮ 2023 ರಲ್ಲಿ ಹಿಮ್ಮಡಿ ಗಾಯದ ಕಾರಣ ಐಪಿಎಲ್‌ನಿಂದ ಹೊರಗುಳಿಯಬೇಕಾಯಿತು.

ಕಂಬ್ಯಾಕ್ ಮಾಡಿದ ಪಾಟಿದಾರ್:

ಹಿಮ್ಮಡಿ ಗಾಯದ ಕಾರಣ ಕೆಲ ತಿಂಗಳುಗಳ ಕಾಲ ಮೈದಾನದಿಂದ ಹೊರಗುಳಿದಿದ್ದ ರಜತ್ ಪಾಟಿದಾರ್ 2024 ರ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ವೇಳೆ ಕಂಬ್ಯಾಕ್ ಮಾಡಿದರು. ಮಧ್ಯಪ್ರದೇಶ ತಂಡದ ನಾಯಕನಾಗಿ ಕಣಕ್ಕಿಳಿದ ಪಾಟಿದಾರ್ ಅತ್ಯುತ್ತಮ ಪ್ರದರ್ಶನ ನೀಡಿದರು. ಅಲ್ಲದೆ ಬಲಿಷ್ಠ ಮುಂಬೈ ತಂಡಕ್ಕೆ ಸೋಲುಣಿಸಿ ಮಧ್ಯಪ್ರದೇಶ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಡುವಲ್ಲಿ ರಜತ್ ಪಾಟಿದಾರ್ ಯಶಸ್ವಿಯಾದರು.

ಅಲ್ಲದೆ ಐಪಿಎಲ್ 2024 ರಲ್ಲಿ ಆರ್​ಸಿಬಿ ಪರ 15 ಪಂದ್ಯಗಳನ್ನಾಡಿದ ರಜತ್ ಪಾಟಿದಾರ್ 5 ಅರ್ಧಶತಕಗಳೊಂದಿಗೆ 395 ರನ್ ಕಲೆಹಾಕಿ ಮಿಂಚಿದರು. ಇದರ ನಡುವೆ ರಜತ್​ನಲ್ಲಿರುವ ನಾಯಕತ್ವದ ಗುಣಗಳನ್ನು ಆರ್​ಸಿಬಿ ತಂಡದ ಕೋಚ್ ಆ್ಯಂಡಿ ಫ್ಲವರ್ ಗುರುತಿಸಿದ್ದರು.

ಪಾಟಿದಾರ್​​ಗೆ ಕ್ಯಾಪ್ಟನ್ ಪಟ್ಟ:

ಐಪಿಎಲ್ 2025ರ ಆರಂಭಕ್ಕೂ ಮುನ್ನ ಆರ್​ಸಿಬಿ ಮ್ಯಾನೇಜ್ಮೆಂಟ್ ಹೊಸ ನಾಯಕನನ್ನು ಕಣಕ್ಕಿಳಿಸಲು ನಿರ್ಧರಿಸಿತು. ಇತ್ತ ನಾಯಕನ ಹುಡುಕಾಟದಲ್ಲಿದ್ದ ಆರ್​ಸಿಬಿ ಮ್ಯಾನೇಜ್ಮೆಂಟ್​ಗೆ ಆ್ಯಂಡಿ ಫ್ಲವರ್​ ರಜತ್ ಪಾಟಿದಾರ್ ಅವರ ಹೆಸರನ್ನು ಶಿಫಾರಸ್ಸು ಮಾಡಿದರು.

ಅತ್ತ ಅದಾಗಲೇ ರಣಜಿ ಟೂರ್ನಿ ಹಾಗೂ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಗಳಲ್ಲಿ ಮಧ್ಯ ಪ್ರದೇಶ ತಂಡವನ್ನು ಯಶಸ್ವಿಯಾಗಿ  ಮುನ್ನಡೆಸಿದ ರಜತ್​ಗೆ ನಾಯಕತ್ವ ನೀಡುವುದು ಉತ್ತಮ ಎಂಬ ಅಭಿಪ್ರಾಯವನ್ನು ಆರ್​ಸಿಬಿ ತಂಡದ ಮೆಂಟರ್ ದಿನೇಶ್ ಕಾರ್ತಿಕ್ ಕೂಡ ಮುಂದಿಟ್ಟರು.  ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ರಜತ್ ಪಾಟಿದಾರ್ ಆಯ್ಕೆಯಾದರು.

ಆರ್​ಸಿಬಿಯ ಶಾಪ ವಿಮೋಚನೆ:

ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯ ಬೆನ್ನೇರಿ ಬಂದ ರಜತ್ ಪಾಟಿದಾರ್ ಮುಂದಿದದ್ದು ಒಂದೇ ಗುರಿ… ಅದು ಆರ್​ಸಿಬಿ ತಂಡಕ್ಕೆ ಚಾಂಪಿಯನ್ ಪಟ್ಟ. ವಿರಾಟ್ ಕೊಹ್ಲಿಗೆ ಮೊದಲ ಟ್ರೋಫಿ.

ಈ ನಿರೀಕ್ಷೆಗಳು ಹುಸಿಯಾಗಲಿಲ್ಲ. ಐಪಿಎಲ್ 2025 ರಲ್ಲಿ ಫೈನಲ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ರಜತ್ ಪಾಟಿದಾರ್ ಟ್ರೋಫಿ ಎತ್ತಿ ಹಿಡಿದರು. ಈ ಮೂಲಕ ಆರ್​ಸಿಬಿ ಅಭಿಮಾನಿಗಳ 18 ವರ್ಷಗಳ ಕಾಯುವಿಕೆಗೆ ಮುಕ್ತಿ ನೀಡಿದರು.

ಇದೀಗ ಮತ್ತೊಮ್ಮೆ ಆರ್​ಸಿಬಿ ಫೈನಲ್​ಗೆ ಲಗ್ಗೆಯಿಟ್ಟಿದೆ. ಅದು ಕೂಡ ಬ್ಯಾಕ್ ಟು ಬ್ಯಾಕ್. ಅಂದರೆ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೀಸನ್​ಗಳಲ್ಲಿ ಫೈನಲ್​ಗೇರಿದೆ. ಹೀಗೆ ಆರ್​ಸಿಬಿ ತಂಡವನ್ನು  ಬ್ಯಾಕ್ ಟು ಬ್ಯಾಕ್  ಫೈನಲ್​ಗೆ ಕೊಂಡೊಯ್ದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ರಜತ್ ಪಾಟಿದಾರ್ ಪಾತ್ರರಾಗಿದ್ದಾರೆ.

ಇದನ್ನೂ ಓದಿ: CSK ದಾಖಲೆಯನ್ನೇ ಧೂಳೀಪಟ ಮಾಡಿದ RCB

ಈ ಹೆಗ್ಗಳಿಕೆಯೊಂದಿಗೆ ರಜತ್ ಪಾಟಿದಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೊಮ್ಮೆ ಚಾಂಪಿಯನ್ ಪಟ್ಟ ತಂದುಕೊಡಲಿದ್ದಾರಾ ಕಾದು ನೋಡಬೇಕಿದೆ.

Source link

Rahu Transit 2026: ಕುಂಭ ರಾಶಿಯಲ್ಲಿ ರಾಹು; ಡಿಸೆಂಬರ್​​ವರೆಗೆ ಈ 3 ರಾಶಿಯವರು ಜಾಗರೂಕರಾಗಿರಿ – Kannada News | Rahu Transit 2026: 3 Zodiac Signs Face Challenges Until Dec and Astrology Predictions

ರಾಹು ಕುಂಭ ರಾಶಿಯಲ್ಲಿ ಸಂಚಾರImage Credit source: Pinterest

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಗ್ರಹಕ್ಕೆ ವಿಶೇಷ ಸ್ಥಾನವಿದೆ. ರಾಹುವನ್ನು ಸಾಮಾನ್ಯವಾಗಿ ಒಂದು ದುಷ್ಟ, ಪಾಪ ಮತ್ತು ‘ಛಾಯಾ ಗ್ರಹ’ (ನೆರಳು ಗ್ರಹ) ಎಂದು ಕರೆಯಲಾಗುತ್ತದೆ. ರಾಹು ಎಂದ ತಕ್ಷಣ ಅನೇಕರಲ್ಲಿ ಒಂದು ರೀತಿಯ ಭಯ ಮೂಡುವುದು ಸಹಜ. ಏಕೆಂದರೆ, ಜಾತಕದಲ್ಲಿ ಅಥವಾ ಗೋಚಾರದಲ್ಲಿ ರಾಹುವಿನ ಪ್ರಭಾವ ಸರಿಯಾಗಿಲ್ಲದಿದ್ದರೆ, ಜೀವನವು ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುತ್ತದೆ ಮತ್ತು ಹಠಾತ್ ಸಮಸ್ಯೆಗಳು ಎದುರಾಗುತ್ತವೆ.

ಪ್ರಸ್ತುತ ರಾಹು ಗ್ರಹವು ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದು, ಡಿಸೆಂಬರ್ ತಿಂಗಳವರೆಗೆ ಇದೇ ರಾಶಿಯಲ್ಲಿ ಮುಂದುವರಿಯಲಿದ್ದಾನೆ. ಜ್ಯೋತಿಷ್ಯ ತಜ್ಞರ ಪ್ರಕಾರ, ರಾಹುವಿನ ಈ ಸಂಚಾರದ ಅವಧಿಯಲ್ಲಿ ಕೆಲವು ರಾಶಿಗಳ ಮೇಲೆ ಆತನ ‘ಕೆಟ್ಟ ಕಣ್ಣು’ (ವಕ್ರದೃಷ್ಟಿ) ಬೀಳಲಿದೆ. ಇದರಿಂದಾಗಿ ಮುಂದಿನ ಏಳು ತಿಂಗಳುಗಳ ಕಾಲ ಮೂರು ರಾಶಿಗಳ ವ್ಯಕ್ತಿಗಳು ತೀವ್ರ ತೊಂದರೆ ಹಾಗೂ ಸವಾಲುಗಳನ್ನು ಎದುರಿಸಬೇಕಾಗಬಹುದು. ಆ ದುರ್ಬಲ ರಾಶಿಗಳು ಯಾವುವು ಮತ್ತು ಅವರು ಎದುರಿಸಲಿರುವ ಸಮಸ್ಯೆಗಳೇನು ಎಂಬುದರ ವಿವರ ಇಲ್ಲಿದೆ.

ಮೇಷ ರಾಶಿ:

ಮೇಷ ರಾಶಿಯ ಜನರಿಗೆ ಈ ರಾಹು ಸಂಚಾರವು ಅತ್ಯಂತ ಕಠಿಣ ಪರಿಸ್ಥಿತಿಗಳನ್ನು ತಂದೊಡ್ಡಲಿದೆ. ಈ ಅವಧಿಯಲ್ಲಿ ನಿಮ್ಮ ಸ್ವಂತ ಕುಟುಂಬದ ಸದಸ್ಯರಿಂದಲೇ ನಿಮಗಾಗಿ ವಿರೋಧ ಅಥವಾ ಭಿನ್ನಾಭಿಪ್ರಾಯಗಳು ಆರಂಭವಾಗಬಹುದು. ಇದು ನಿಮಗೆ ತೀವ್ರ ಮಾನಸಿಕ ಯಾತನೆ ಮತ್ತು ಒತ್ತಡವನ್ನು ಉಂಟುಮಾಡುತ್ತದೆ. ಮುಂಬರುವ ಏಳು ತಿಂಗಳುಗಳ ಕಾಲ ನೀವು ಪ್ರತಿಯೊಂದು ಹೆಜ್ಜೆಯನ್ನೂ ಅತ್ಯಂತ ಜಾಗರೂಕತೆಯಿಂದ ಇಡಬೇಕು. ಯಾವುದೇ ಪ್ರಮುಖ ಅಥವಾ ಹೊಸ ಕೆಲಸಗಳನ್ನು ಸದ್ಯಕ್ಕೆ ಮುಂದೂಡುವುದು ಉತ್ತಮ ನಿರ್ಧಾರವಾಗಿರುತ್ತದೆ. ನಿಮ್ಮ ಮತ್ತು ನಿಮ್ಮ ಕುಟುಂಬದವರ ಆರೋಗ್ಯದ ಕಡೆಗೆ ವಿಶೇಷ ಕಾಳಜಿ ವಹಿಸಿ, ಇಲ್ಲದಿದ್ದರೆ ದೈಹಿಕ ಹಾಗೂ ಆರ್ಥಿಕ ತೊಂದರೆಗಳು ಹೆಚ್ಚಾಗಬಹುದು.

ವೃಷಭ ರಾಶಿ:

ವೃಷಭ ರಾಶಿಯವರಿಗೆ ಈ ಅವಧಿಯು ಆರ್ಥಿಕವಾಗಿ ಮತ್ತು ವೃತ್ತಿಪರವಾಗಿ ಸಾಕಷ್ಟು ಸವಾಲಿನಿಂದ ಕೂಡಿರಲಿದೆ. ಅನಗತ್ಯ ಖರ್ಚುಗಳು ದಿಢೀರನೆ ಹೆಚ್ಚಾಗುವುದರಿಂದ ಆರ್ಥಿಕ ಸಮತೋಲನ ತಪ್ಪಬಹುದು. ಉದ್ಯೋಗಿಗಳಿಗೆ ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಅತಿಯಾದ ಒತ್ತಡ ಎದುರಾಗಬಹುದು. ಕೆಲವರಿಗೆ ಕೆಲಸ ಕಳೆದುಕೊಳ್ಳುವ ಭೀತಿಯೂ ಇರುವುದರಿಂದ, ಕೆಲಸದ ಸ್ಥಳದಲ್ಲಿ ತಾಳ್ಮೆ ಮತ್ತು ಜಾಗರೂಕತೆಯಿಂದ ಇರಬೇಕು. ದೀರ್ಘಾವಧಿಯ ಪ್ರಯಾಣಗಳನ್ನು ಸದ್ಯಕ್ಕೆ ತಡೆಹಿಡಿಯುವುದು ಸೂಕ್ತ. ಏಕೆಂದರೆ ಈ ಸಮಯದಲ್ಲಿ ವಾಹನ ಅಪಘಾತ ಅಥವಾ ವಾಹನ ರಿಪೇರಿಯಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚು. ಅನಿರೀಕ್ಷಿತ ತೊಂದರೆಗಳಿಂದಾಗಿ ದೊಡ್ಡ ಮಟ್ಟದ ಹಣಕಾಸಿನ ನಷ್ಟ ಉಂಟಾಗುವ ಸಾಧ್ಯತೆ ಇರುವುದರಿಂದ ಹೂಡಿಕೆ ಮಾಡುವಾಗ ಎಚ್ಚರವಿರಲಿ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿಯವರಿಗೆ ರಾಹುವಿನ ವಕ್ರದೃಷ್ಟಿಯಿಂದಾಗಿ ವೈಯಕ್ತಿಕ ಮತ್ತು ವೃತ್ತಿ ಜೀವನ ಎರಡರಲ್ಲೂ ಗೊಂದಲಗಳು ಸೃಷ್ಟಿಯಾಗಬಹುದು. ಮುಖ್ಯವಾಗಿ ಕೌಟುಂಬಿಕ ಕಲಹಗಳು ಮತ್ತು ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ನಿಮ್ಮ ನೆಮ್ಮದಿಯನ್ನು ಕೆಡಿಸಬಹುದು. ಈ ರಾಶಿಯ ಉದ್ಯಮಿಗಳು ಅಥವಾ ವ್ಯಾಪಾರಸ್ಥರು ಈ ಅವಧಿಯಲ್ಲಿ ತೀವ್ರ ಹಿನ್ನಡೆ ಅನುಭವಿಸಬೇಕಾಗಬಹುದು. ಹೂಡಿಕೆ ಮಾಡಿದ ಹಣದಿಂದ ಲಾಭ ಬರುವ ಬದಲಿಗೆ ದೊಡ್ಡ ಪ್ರಮಾಣದ ನಷ್ಟ ಎದುರಾಗಬಹುದು. ಅನಿವಾರ್ಯವಾಗಿ ದೂರದ ಪ್ರಯಾಣಗಳನ್ನು ಮಾಡಬೇಕಾಗಿ ಬರಬಹುದು, ಆದರೆ ಇವುಗಳಿಂದ ಯಾವುದೇ ಲಾಭವಾಗದೆ ಕೇವಲ ಸುಸ್ತು ಮತ್ತು ಅನಗತ್ಯ ವೆಚ್ಚಗಳು ಮಾತ್ರ ಹೆಚ್ಚಾಗುತ್ತವೆ. ಕರ್ಕಾಟಕ ರಾಶಿಯವರು ಮುಂಬರುವ ಏಳು ತಿಂಗಳುಗಳ ಕಾಲ ಸಂಗಾತಿಯೊಂದಿಗೆ ಮತ್ತು ಉದ್ಯೋಗದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ತೀರಾ ಜಾಗರೂಕರಾಗಿರಬೇಕು.

ಗಮನಿಸಿ: ರಾಹುವಿನ ಪ್ರಭಾವವು ಜಾತಕದಲ್ಲಿನ ಇತರ ಗ್ರಹಗಳ ಸ್ಥಾನದ ಮೇಲೆಯೂ ಆಧಾರಿತವಾಗಿರುತ್ತದೆ. ಆದ್ದರಿಂದ ಯಾವುದೇ ಆತಂಕಕ್ಕೆ ಒಳಗಾಗದೆ, ಈ ಅವಧಿಯಲ್ಲಿ ದೇವತಾ ಆರಾಧನೆ ಮತ್ತು ಜಾಗರೂಕತೆಯಿಂದ ಸಂಕಷ್ಟಗಳನ್ನು ಎದುರಿಸುವುದು ಒಳ್ಳೆಯದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:38 am, Wed, 27 May 26

Source link

Shubman Gill: 255 ರನ್​ಗಳನ್ನು ಚೇಸ್ ಮಾಡಬಹುದಿತ್ತು, ಆದರೆ..! – Kannada News | Shubman gill post match presentation After RCB vs GT Match in IPL 2026

IPL 2026: ಐಪಿಎಲ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡ ಸೋಲನುಭವಿಸಿದೆ. ಧರ್ಮಶಾಲಾದ ಹೆಚ್​ಪಿಸಿಎ ಮೈದಾನದಲ್ಲಿ ನಡೆದ ಆರ್​ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದು ಶುಭ್​ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ ಬರೋಬ್ಬರಿ 254 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 19.3 ಓವರ್​ಗಳಲ್ಲಿ 162 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ 92 ರನ್​ಗಳಿಂದ ಹೀನಾಯವಾಗಿ ಸೋಲೊಪ್ಪಿಕೊಂಡಿದೆ.

ಈ ಸೋಲಿನ ಬಳಿಕ ಮಾತನಾಡಿದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​ಮನ್ ಗಿಲ್, ನಮ್ಮ ಸೋಲಿಗೆ ಕಳಪೆ ಫೀಲ್ಡಿಂಗ್ ಪ್ರಮುಖ ಕಾರಣ ಎಂದಿದ್ದಾರೆ. ಈ ಪಂದ್ಯದಲ್ಲಿ 12 ಅಥವಾ 13ನೇ ಓವರ್​ವರೆಗೆ ನಾವು ಉತ್ತಮ ಹಿಡಿತ ಸಾಧಿಸಿದ್ದೆವು. ಆದರೆ ಆ ಬಳಿಕ ನಮ್ಮ ಕಳಪೆ ಫೀಲ್ಡಿಂಗ್​ಗೆ ಭಾರೀ ಬೆಲೆ ತೆರಬೇಕಾಯಿತು.

ನಮ್ಮ ಫೀಲ್ಡಿಂಗ್​ ಅತ್ಯಂತ ಕಳಪೆ ಮಟ್ಟದಲ್ಲಿತ್ತು ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಏಕೆಂದರೆ ಕೆಲ ಪ್ರಮುಖ ಕ್ಯಾಚ್​ಗಳನ್ನು ಕೈ ಬಿಟ್ಟೆವು. ಇದರ ಸಂಪೂರ್ಣ ಲಾಭ ಪಡೆದ ಆರ್​ಸಿಬಿ ಬ್ಯಾಟರ್​ಗಳು ಬೃಹತ್ ಮೊತ್ತ ಪೇರಿಸಿದ್ದಾರೆ. ಇದರಿಂದ ನಾವು ಸೋಲಬೇಕಾಯಿತು ಎಂದು ಗಿಲ್ ಹೇಳಿದ್ದಾರೆ.

ಇನ್ನು 255 ರನ್​ಗಳ ಗುರಿ ಬೆನ್ನತ್ತಲು ಸಾಧ್ಯವಿತ್ತೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶುಭ್​ಮನ್ ಗಿಲ್, ನಾವು ಉತ್ತಮ ಆರಂಭ ಪಡೆದಿದ್ದರೆ ಖಂಡಿತವಾಗಿಯೂ ಸಾಧ್ಯವಿತ್ತು. ಏಕೆಂದರೆ ಪವರ್​ಪ್ಲೇನಲ್ಲಿ ಉತ್ತಮವಾಗಿ ರನ್​ ಗಳಿಸಿದ್ದರೆ ಈ ಗುರಿಯನ್ನು ಚೇಸ್ ಮಾಡುವುದು ಕಷ್ಟವಾಗಿರಲಿಲ್ಲ.

ಆದರೆ ನಮ್ಮ ಆರಂಭಿಕ ದಾಂಡಿಗ ಸಾಯಿ ಸುದರ್ಶನ್ ದುರಾದೃಷ್ಟಕರ ರೀತಿಯಲ್ಲಿ ಔಟಾದರು. ಇಂತಹ ಹಿಟ್ ವಿಕೆಟ್​ ಔಟ್​ಗಳು ಸಾಮಾನ್ಯವಾಗಿ ಕಾಣಿಸುವುದಿಲ್ಲ. ಆದರೆ ಇಂದು ದುರಾದೃಷ್ಟದಿಂದ ಅವರು ಬೇಗನೆ ವಿಕೆಟ್ ಒಪ್ಪಿಸಿದರು. ಇನ್ನು ನಮ್ಮ ಕಡೆಯಿಂದಲೂ ಉತ್ತಮ ಬ್ಯಾಟಿಂಗ್ ಬಂದಿರಲಿಲ್ಲ.

ಒಂದು ವೇಳೆ ಪವರ್​ಪ್ಲೇನಲ್ಲಿ ನಾವು ಉತ್ತಮವಾಗಿ ಬ್ಯಾಟ್ ಬೀಸಿದ್ದರೆ, 255 ರನ್ ಚೇಸ್ ಮಾಡುವುದು ಕಷ್ಟವೇನು ಆಗುತ್ತಿರಲಿಲ್ಲ. ಏಕೆಂದರೆ ಈ ಮೈದಾನವು ವೇಗದ ಔಟ್ ಫೀಲ್ಡ್​ ಹೊಂದಿದೆ. ಹೀಗಾಗಿ ದಾಖಲೆಯ ಮೊತ್ತವನ್ನು ಚೇಸ್ ಮಾಡಲು ಅವಕಾಶವಿತ್ತು. ಆದರೆ ನಾವು ಆರಂಭಿಕ ಆಘಾತಕ್ಕೆ ಒಳಗಾದ ಕಾರಣ ಸೋಲಬೇಕಾಯಿತು ಎಂದರು.

ಈ ಸೋಲಿನ ಹೊರತಾಗಿಯೂ ನಮಗೆ ಮತ್ತೊಂದು ಅವಕಾಶವಿದೆ. ದ್ವಿತೀಯ ಕ್ವಾಲಿಫೈಯರ್​ನಲ್ಲಿ ಗೆದ್ದು ಫೈನಲ್​ಗೇರಬಹುದು. ಹೀಗಾಗಿ ಈ ಸೋಲನ್ನು ನಾವು ಆದಷ್ಟು ಬೇಗ ಮರೆಯಬೇಕು ಎಂದು ಶುಭ್​ಮನ್ ಗಿಲ್ ಸಹ ಆಟಗಾರರಿಗೆ ಕಿವಿಮಾತು ಹೇಳಿದರು.

ಇದನ್ನೂ ಓದಿ: IPL 2026: ಪ್ಲೇಆಫ್ ಚರಿತ್ರೆಯನ್ನೇ ಬದಲಿಸಿದ RCB

ಅಲ್ಲದೆ ಮೊಹಾಲಿಯಲ್ಲಿ ನಡೆಯಲಿರುವ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಇಂದಿನ ತಪ್ಪುಗಳನ್ನು ತಿದ್ದುಕೊಂಡು ಕಣಕ್ಕಿಳಿಯಬೇಕಿದೆ. ಅಲ್ಲಿ ಹೊಸ ಆರಂಭ ಹಾಗೂ ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿಯುವ ಮೂಲಕ ಗೆಲ್ಲುವ ವಿಶ್ವಾಸವಿದೆ. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡವು ಫೈನಲ್​ಗೇರುವ ವಿಶ್ವಾಸವನ್ನು ಶುಭ್​ಮನ್ ಗಿಲ್ ವ್ಯಕ್ತಪಡಿಸಿದ್ದಾರೆ.

Source link

ಉಪ್ಪಿ ಮಕ್ಕಳು ಹೇಗಿದ್ದಾರೆ ನೋಡಿ; ಮಿಂಚಿದ ಆಯುಷ್-ಐಶ್ವರ್ಯಾ

Source link

Byju’s Founder Sentenced: ಬೈಜುಸ್ ಸಂಸ್ಥಾಪಕ ಬೈಜು ರವೀಂದ್ರನ್​ಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದ ಸಿಂಗಾಪುರ ಕೋರ್ಟ್​ – Kannada News | Byju’s Founder Byju Raveendran Sentenced to 6 Months Jail in Singapore

ಬೈಜುಸ್ ಸಂಸ್ಥಾಪಕ ರವೀಂದ್ರನ್ Image Credit source: GQ India

ಸಿಂಗಾಪುರ, ಮೇ 27: ಭಾರತದ ಒಂದು ಕಾಲದ ಯಶಸ್ವಿ ಎಡ್‌ಟೆಕ್ ಕಂಪನಿ ‘ಬೈಜುಸ್'(Byju’s) ಸಂಸ್ಥಾಪಕ ಬೈಜು ರವೀಂದ್ರನ್ ಅವರ ಸಂಕಷ್ಟಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇತ್ತೀಚಿನ ಭಾರಿ ಬೆಳವಣಿಗೆಯೊಂದರಲ್ಲಿ, ಸಿಂಗಾಪುರ ನ್ಯಾಯಾಲಯವು ಬೈಜು ರವೀಂದ್ರನ್ ಅವರನ್ನು ನ್ಯಾಯಾಲಯ ನಿಂದನೆಯ ಆರೋಪದಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಿದ್ದು, ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಈಗಾಗಲೇ ತೀವ್ರ ಆರ್ಥಿಕ ಬಿಕ್ಕಟ್ಟು ಹಾಗೂ ವಿದೇಶಿ ಹೂಡಿಕೆದಾರರಿಂದ ಕಾನೂನು ಹೋರಾಟ ಎದುರಿಸುತ್ತಿರುವ ರವೀಂದ್ರನ್ ಅವರಿಗೆ ಈ ತೀರ್ಪು ಅತ್ಯಂತ ದೊಡ್ಡ ಹೊಡೆತ ನೀಡಿದೆ.

ಜೈಲು ಶಿಕ್ಷೆಗೆ ಕಾರಣವೇನು?

ಬೈಜು ರವೀಂದ್ರನ್ ಅವರು ತಮ್ಮ ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದಂತೆ ಏಪ್ರಿಲ್ 2024 ರಿಂದ ನ್ಯಾಯಾಲಯ ನೀಡಿದ್ದ ಹಲವಾರು ಆದೇಶಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದಾರೆ ಎಂದು ಸಿಂಗಾಪುರ ನ್ಯಾಯಾಲಯವು ಸ್ಪಷ್ಟಪಡಿಸಿದೆ. ನ್ಯಾಯಾಲಯದ ನಿಯಮಗಳನ್ನು ಪಾಲಿಸಲು ಸಂಪೂರ್ಣವಾಗಿ ವಿಫಲರಾದ ಕಾರಣಕ್ಕಾಗಿ ಅವರಿಗೆ ಈ ಶಿಕ್ಷೆ ವಿಧಿಸಲಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಸಂಬಂಧಿತ ಅಧಿಕಾರಿಗಳ ಮುಂದೆ ಶರಣಾಗುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.

ಭಾರಿ ಮೊತ್ತದ ದಂಡ ಮತ್ತು ಕಠಿಣ ಸೂಚನೆ

ಜೈಲು ಶಿಕ್ಷೆಯ ಜೊತೆಗೆ ನ್ಯಾಯಾಲಯವು ರವೀಂದ್ರನ್ ಅವರಿಗೆ ಕಾನೂನು ವೆಚ್ಚದ ರೂಪದಲ್ಲಿ 90,000 ಸಿಂಗಾಪುರ ಡಾಲರ್ ಪಾವತಿಸುವಂತೆ ಆದೇಶಿಸಿದೆ.

ಮಾಲೀಕತ್ವ ಸಾಬೀತುಪಡಿಸಲು ಸೂಚನೆ

ರವೀಂದ್ರನ್ ಅವರು ‘ಬಿಯರ್ ಇನ್ವೆಸ್ಟ್‌ಕೋ ಪ್ರೈವೇಟ್ ಲಿಮಿಟೆಡ್’ (ಮತ್ತೊಂದು ಕಂಪನಿಯ ಷೇರುಗಳನ್ನು ಹೊಂದಿರುವ ಕಾರ್ಪೊರೇಟ್ ಘಟಕ) ಸಂಸ್ಥೆಯ ನಿಜವಾದ ಮತ್ತು ಕಾನೂನುಬದ್ಧ ಮಾಲೀಕರು ಹೌದೇ ಎಂಬುದನ್ನು ಸಾಬೀತುಪಡಿಸುವ ಅಗತ್ಯ ಕಾನೂನು ದಾಖಲೆಗಳನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಈ ಕಾನೂನು ಹೋರಾಟದಲ್ಲಿ ಕತಾರ್ ಹೋಲ್ಡಿಂಗ್ಸ್ ಪರವಾಗಿ ‘ಡ್ರೂ ಆ್ಯಂಡ್ ನೇಪಿಯರ್’ ಹಾಗೂ ಬೈಜುಸ್ ಇನ್ವೆಸ್ಟ್‌ಮೆಂಟ್ಸ್ ಪರವಾಗಿ ‘ಫೆರ್ವೆಂಟ್ ಚೇಂಬರ್ಸ್’ ಸಂಸ್ಥೆಗಳು ವಕಾಲತ್ತು ವಹಿಸಿವೆ.

ಮತ್ತಷ್ಟು ಓದಿ:

Manipal Group & Byjus: ಬೈಜುಸ್ ಖರೀದಿಗೆ ಎರಡನೇ ಬಿಡ್ ಸಲ್ಲಿಸಿದ ಮಣಿಪಾಲ್ ಗ್ರೂಪ್

ವಿದೇಶಿ ಹೂಡಿಕೆದಾರರಿಂದ ಹೆಚ್ಚಿದ ಒತ್ತಡ

ಜಾಗತಿಕ ಮಟ್ಟದ ಹಲವಾರು ವಿದೇಶಿ ಹೂಡಿಕೆದಾರರು ಬೈಜುಸ್‌ನಲ್ಲಿ ತಮಗಾಗಿರುವ ಭಾರಿ ನಷ್ಟದ ಮರುಪಾವತಿಗೆ ಪಟ್ಟು ಹಿಡಿದಿರುವ ಬೆನ್ನಲ್ಲೇ ಈ ತೀರ್ಪು ಹೊರಬಿದ್ದಿದೆ. ಯುಎಸ್ (US) ನಲ್ಲಿರುವ ಸಾಲದಾತರು $1.2 ಬಿಲಿಯನ್ ಸಾಲದ ಡೀಫಾಲ್ಟ್ ನಂತರ ತಮ್ಮ ಹಣವನ್ನು ವಸೂಲಿ ಮಾಡಲು ತೀವ್ರ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಕತಾರ್ ಹೂಡಿಕೆ ಪ್ರಾಧಿಕಾರದ ಅಂಗಸಂಸ್ಥೆಯು ಕೂಡ ಸಿಂಗಾಪುರದಲ್ಲಿ ರವೀಂದ್ರನ್ ವಿರುದ್ಧ ಸಕ್ರಿಯವಾಗಿ ಪ್ರಕರಣವನ್ನು ಮುಂದುವರಿಸಿದೆ.

ಒಂದು ಕಾಲದಲ್ಲಿ ಭಾರತೀಯ ಸ್ಟಾರ್ಟ್‌ಅಪ್‌ಗಳಿಗೆ ರೋಲ್ ಮಾಡೆಲ್ ಆಗಿದ್ದ ಮತ್ತು ಬಿಲಿಯನೇರ್ ಆಗಿ ಮಿಂಚಿದ್ದ ಬೈಜು ರವೀಂದ್ರನ್ ಈ ಇತ್ತೀಚಿನ ತೀರ್ಪಿಗೆ ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ತೀರ್ಪಿನ ವೇಳೆಗೆ ಅವರು ಸಿಂಗಾಪುರದಲ್ಲಿದ್ದಾರೆಯೇ ಅಥವಾ ಬೇರೆ ಎಲ್ಲಿದ್ದಾರೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಂದು ಜಸ್ಟ್ 20 ನಿಮಿಷದಲ್ಲಿದ್ದ ಜರ್ನಿ ಇಂದು 3.5 ಗಂಟೆ!: ಬೆಂಗಳೂರಿನ ಈ ದಯನೀಯ ಸ್ಥಿತಿಗೆ ಅಸಲಿ ಕಾರಣವೇನು? – Kannada News | Bengaluru Traffic Woes: Why Whitefield Commutes Worsen and Public Transport is Key

ಬೆಂಗಳೂರು ಟ್ರಾಫಿಕ್, ಸಂಚಾರ ದಟ್ಟಣೆImage Credit source: Google

ಬೆಂಗಳೂರು, ಮೇ27: “ಐಟಿ ಸಿಟಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಇಲ್ಲಿನ ಟ್ರಾಫಿಕ್ ನರಕ ಮಾತ್ರ ದಿನದಿಂದ ದಿನಕ್ಕೆ ವಿಸ್ತರಿಸುತ್ತಲೇ ಇದೆ.” ಈ ಮಾತುಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಸತ್ಯವಾಗಿಸಿದೆ. ಸ್ಥಳೀಯ ನಿವಾಸಿಯೊಬ್ಬರ ರೆಡ್ಡಿಟ್ (Reddit)ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ವಿದ್ಯಾರಣ್ಯಪುರದಿಂದ ವೈಟ್‌ಫೀಲ್ಡ್‌ಗೆ ದಿನನಿತ್ಯ ಸಂಚರಿಸುವ ಬೆಂಗಳೂರಿನ ಉದ್ಯೋಗಿಯೊಬ್ಬರು, ಕೇವಲ 20 ನಿಮಿಷಗಳಿದ್ದ ತಮ್ಮ ಜರ್ನಿ ಇಂದು 3.5 ಗಂಟೆಗಳ ದೈಹಿಕ ಮತ್ತು ಮಾನಸಿಕ ಯುದ್ಧವಾಗಿ ಹೇಗೆ ಬದಲಾಗಿದೆ ಎಂಬುದನ್ನು ಬಿಚ್ಚಿಟ್ಟಿದ್ದು, ಇದು ಲಕ್ಷಾಂತರ ಸ್ಥಳೀಯ ಪ್ರಯಾಣಿಕರ ತೀವ್ರ ಆಕ್ರೋಶ ಮತ್ತು ಭಾವುಕತೆಗೆ ಕಾರಣವಾಗಿದೆ.

“ನನಗೆ ನೆನಪಿದೆ, ಸುಮಾರು 2005-2006 ರ ಅವಧಿಯಲ್ಲಿ ನಾನು ನನ್ನ ಸ್ನೇಹಿತನೊಂದಿಗೆ ಸಿಬಿಝಡ್ (CBZ) ಬೈಕ್‌ನಲ್ಲಿ ರಿಂಗ್ ರೋಡ್ ಮೂಲಕ ಮೊದಲ ಬಾರಿಗೆ ವೈಟ್‌ಫೀಲ್ಡ್‌ಗೆ ಹೋಗಿದ್ದೆ. ಆಗ ರಿಂಗ್ ರೋಡ್ ಆಗಿದ್ದರೂ ರಸ್ತೆಯ ಇಕ್ಕೆಲಗಳಲ್ಲಿ ತುಂಬಾ ಮರಗಳಿದ್ದವು, ತಂಪಾದ ವಾತಾವರಣವಿತ್ತು. ಟೆಸ್ಕೋ (TESCO) ಕಚೇರಿಯಲ್ಲಿ ಇಂಟರ್ವ್ಯೂ ಇದ್ದಿದ್ದರಿಂದ ಕೇವಲ 20 ರಿಂದ 25 ನಿಮಿಷಗಳಲ್ಲಿ ನಾವು ತಲುಪಿದ್ದೆವು. ಆದರೆ ಕಳೆದ 20 ವರ್ಷಗಳಲ್ಲಿ ರಿಂಗ್ ರೋಡ್‌ನಲ್ಲಿ ರಸ್ತೆ ಕಾಮಗಾರಿ ಇಂದಿಗೂ ನಡೆಯುತ್ತ ಇದೆ. ಫ್ಲೈಓವರ್, ಅಂಡರ್‌ಪಾಸ್ ಬರುವ ಮುನ್ನವೇ ರಿಂಗ್ ರೋಡ್ ಚೆನ್ನಾಗಿತ್ತು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಹೆಸರಾಂತ ಆಸ್ಪತ್ರೆಯಲ್ಲಿ ಗರ್ಭಿಣಿ ಶೌಚಾಲಯದಲ್ಲಿದ್ದಾಗ ವಿಡಿಯೋ ಮಾಡಿದ ಸಿಬ್ಬಂದಿ

ಇದೇ ವೇಳೆ ನೆಟ್ಟಿಗರು ಕೂಡ ತಮ್ಮ ಕಷ್ಟವನ್ನು ತೋಡಿಕೊಳ್ಳುತ್ತಾ, “ಇತ್ತೀಚೆಗೆ ನಾನು ಆಫೀಸ್‌ಗೆ ಕಾರಿನಲ್ಲಿ ಹೋಗುವುದನ್ನು ಬಿಟ್ಟು ಬೈಕ್‌ನಲ್ಲಿ ಸಂಚರಿಸಲು ಆರಂಭಿಸಿದೆ. ನಾನು ವಿದ್ಯಾರಣ್ಯಪುರದಿಂದ ವೈಟ್‌ಫೀಲ್ಡ್‌ಗೆ ಕಾರಿನಲ್ಲಿ ಹೋಗುತ್ತಿದ್ದಾಗ ಹೋಗಿ ಬರಲು ಒಟ್ಟು 3.5 ಗಂಟೆ ಬೇಕಾಗುತ್ತಿತ್ತು. ಕಾರಿನ ಒಳಗಿದ್ದಾಗ ಮ್ಯೂಸಿಕ್, ಪಾಡ್‌ಕಾಸ್ಟ್‌ಗಳು ಅಥವಾ ಕಾಲ್‌ಗಳಲ್ಲಿ ಬ್ಯುಸಿಯಾಗಿರುತ್ತಿದ್ದರಿಂದ ನನಗೆ ಇದರ ತೀವ್ರತೆ ಆರಂಭದಲ್ಲಿ ಕಾಡಿರಲಿಲ್ಲ. ಏಕೆಂದರೆ ವರ್ಷಗಳು ಉರುಳಿದಂತೆ ಟ್ರಾಫಿಕ್ ನಿಧಾನವಾಗಿ ಹೆಚ್ಚುತ್ತಾ ಹೋಯಿತು. ಆದರೆ, ಕಳೆದ ಮೇ 22ರಂದು ಬೈಕ್‌ನಲ್ಲಿ ಮನೆಗೆ ಹಿಂದಿರುಗುವಾಗ ನನಗೆ ಸತ್ಯದ ದರ್ಶನವಾಯಿತು” ಎಂದು ಬರೆದುಕೊಂಡಿದ್ದಾರೆ.

ಇಲ್ಲಿದೆ ನೋಡಿ ಪೋಸ್ಟ್​:

ಈ ಪೋಸ್ಟ್‌ಗೆ ಬೆಂಗಳೂರಿನ ಸಾವಿರಾರು ಐಟಿ ಉದ್ಯೋಗಿಗಳು ಹಾಗೂ ನಿವಾಸಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ವ್ಯಕ್ತಿ “ನಾನು ಗಲ್ಫ್ ದೇಶಗಳಲ್ಲಿ ಬೆಳೆದವನು. ಅಲ್ಲಿ ಕೇವಲ ಒಂದು ತಿಂಗಳೊಳಗೆ ಬೃಹತ್ ಫ್ಲೈಓವರ್‌ಗಳನ್ನು ಕಟ್ಟಿ ಮುಗಿಸುತ್ತಾರೆ. ಇಡೀ ನಗರದ ಜನಸಂಖ್ಯೆ ನಮ್ಮ ಕೋರಮಂಗಲದ ಒಂದು ಬ್ಲಾಕ್‌ಗಿಂತ ಕಡಿಮೆ ಇರುತ್ತಿತ್ತು. ಆದರೆ ಇಲ್ಲಿ ಕೇವಲ 20 ಕಿಲೋಮೀಟರ್ ರಸ್ತೆ ಮತ್ತು ಮೆಟ್ರೋ ಅಭಿವೃದ್ಧಿಪಡಿಸಲು 20 ವರ್ಷಗಳನ್ನು ತೆಗೆದುಕೊಳ್ಳುತ್ತಿರುವುದು ನಿಜಕ್ಕೂ ಅಸಹನೀಯ. ಇಷ್ಟಕ್ಕೂ ಇವರು ಮಾಡುತ್ತಿರುವುದಾದರೂ ಏನು?” ಎಂದು ಪ್ರಶ್ನಿಸಿದ್ದಾರೆ. “ಇಲ್ಲಿ ಎಷ್ಟು ಫ್ಲೈಓವರ್ ಅಥವಾ ಅಂಡರ್‌ಪಾಸ್‌ಗಳನ್ನು ಕಟ್ಟಿದರೂ ಟ್ರಾಫಿಕ್ ಕಂಟ್ರೋಲ್ ಆಗುವುದಿಲ್ಲ. ಜಗತ್ತಿನ ಯಾವುದೇ ಉತ್ತಮ ನಗರದಲ್ಲೂ ಖಾಸಗಿ ವಾಹನಗಳನ್ನೇ ಅವಲಂಬಿಸಿಲ್ಲ. ನಾವು ಯುರೋಪಿಯನ್ ಅಥವಾ ಜಪಾನ್ ಮಾದರಿಯ ಸಾರ್ವಜನಿಕ ಸಾರಿಗೆ (Public Transport) ಹಾಗೂ ವಾಕಿಂಗ್‌ಗೆ ಹೆಚ್ಚಿನ ಒತ್ತು ನೀಡಬೇಕು. ನಮ್ಮ ಬಿಆರ್‌ಟಿಎಸ್ ಮೆಟ್ರೋ ಬ್ಲೂ ಲೈನ್ (Blue Line) ಬೇಗ ಆರಂಭವಾದರೆ ವಿದ್ಯಾರಣ್ಯಪುರದಿಂದ ವೈಟ್‌ಫೀಲ್ಡ್‌ಗೆ ಮೆಟ್ರೋ ಮೂಲಕ ಸುಲಭವಾಗಿ ಕನೆಕ್ಟ್ ಆಗಬಹುದು” ಎಂದು ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಪೆದ್ದಿ’ ಸಿನಿಮಾ ರಿಲೀಸ್​​ಗೆ ಕೆಲವೇ ದಿನ ಬಾಕಿ ಇರುವಾಗ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ – Kannada News | Ram Charan’s ‘Peddi’ Movie Release Date and Shivanna’s Role: Japan Release Delayed?

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಅಭಿನಯದ ಬಹುನಿರೀಕ್ಷಿತ ‘ಪೆದ್ದಿ’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಜೂನ್ 4 ರಂದು ಈ ಚಿತ್ರ ವಿಶ್ವಾದ್ಯಂತ ಅತ್ಯಂತ ಅದ್ಧೂರಿಯಾಗಿ ತೆರೆಗೆ ಬರಲು ಸಿದ್ಧವಾಗಿದ್ದು, ಚಿತ್ರತಂಡ ಸರಣಿ ಇವೆಂಟ್‌ಗಳು ಹಾಗೂ ಪ್ರೆಸ್ ಮೀಟ್‌ಗಳ ಮೂಲಕ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಆದರೆ, ಇದೇ ಸಂದರ್ಭದಲ್ಲಿ ರಾಮ್ ಚರಣ್ ಅಭಿಮಾನಿಗಳಿಗೆ ಸಣ್ಣದೊಂದು ಬೇಸರದ ಸುದ್ದಿಯೊಂದು ಹೊರಬಿದ್ದಿದೆ.

‘ಪೆದ್ದಿ’ ಚಿತ್ರವನ್ನು ಭಾರತದ ಜೊತೆಜೊತೆಗೆ ಜಪಾನ್‌ನಲ್ಲೂ ಏಕಕಾಲಕ್ಕೆ ತೆರೆಗೆ ತರಲು ಚಿತ್ರತಂಡ ಭರ್ಜರಿ ಯೋಜನೆ ರೂಪಿಸಿತ್ತು. ‘ಆರ್‌ಆರ್‌ಆರ್‌’ ಚಿತ್ರದ ನಂತರ ಜಪಾನ್‌ನಲ್ಲಿ ರಾಮ್ ಚರಣ್‌ಗೆ ದೊಡ್ಡ ಮಟ್ಟದ ಫ್ಯಾನ್ ಬೇಸ್ ಸೃಷ್ಟಿಯಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ಕೆಲವು ಅನಿವಾರ್ಯ ಕಾರಣಗಳಿಂದಾಗಿ ಸದ್ಯಕ್ಕೆ ಜಪಾನ್ ರಿಲೀಸ್ ಅನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.

ಈ ಬೆಳವಣಿಗೆಯಿಂದ ಜಪಾನ್ ದೇಶದ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಹೊಸ ಬಿಡುಗಡೆ ದಿನಾಂಕಕ್ಕಾಗಿ ಕಾಯುತ್ತಿದ್ದಾರೆ. ಇತ್ತ ಭಾರತದ ಅಭಿಮಾನಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದು, ಒಟ್ಟಿಗೆ ರಿಲೀಸ್ ಆಗಿದ್ದರೆ ಬಾಕ್ಸ್ ಆಫೀಸ್‌ನಲ್ಲಿ ಇನ್ನೂ ದೊಡ್ಡ ದಾಖಲೆ ಬರೆಯಬಹುದಿತ್ತು ಎಂಬ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಈ ಚಿತ್ರದ ಮತ್ತೊಂದು ದೊಡ್ಡ ವಿಶೇಷತೆ ಎಂದರೆ ಕನ್ನಡದ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅಬ್ಬರಿಸಿದ್ದಾರೆ. ಶಿವಣ್ಣ ಅವರ ಖಡಕ್ ಎಂಟ್ರಿ ಮತ್ತು ರಾಮ್ ಚರಣ್ ಜೊತೆಗಿನ ಸ್ಕ್ರೀನ್ ಶೇರಿಂಗ್ ಈ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾದ ಮುಖ್ಯ ಹೈಲೈಟ್ ಆಗಿರಲಿದ್ದು, ಕನ್ನಡ ಮತ್ತು ತೆಲುಗು ಎರಡೂ ಚಿತ್ರರಂಗದ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ರಾಮ್ ಚರಣ್ ಹೊಸ ಬಾಡಿಗಾರ್ಡ್ ಯಾರು ಗೊತ್ತಾ? ದಿನದ ಸಂಬಳ ಎಷ್ಟು?

ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ಅವರು ಈ ಚಿತ್ರವನ್ನು ಅದ್ಧೂರಿ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ್ದಾರೆ. ಸೂಪರ್ ಹಿಟ್ ‘ಉಪ್ಪೇನಾ’ ಚಿತ್ರದ ಖ್ಯಾತಿಯ ಬುಚ್ಚಿ ಬಾಬು ಸನಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರಾಮ್ ಚರಣ್‌ಗೆ ಜೋಡಿಯಾಗಿ ಬಾಲಿವುಡ್ ಸುಂದರಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಚಿತ್ರದಲ್ಲಿ ಕನ್ನಡದ ಶಿವರಾಜ್‌ಕುಮಾರ್ ಜೊತೆಗೆ ಜಗಪತಿ ಬಾಬು, ದಿವ್ಯೇಂದು ಶರ್ಮ ಮತ್ತು ಬೊಮನ್ ಇರಾನಿ ಅವರಂತಹ ಘಟಾನುಘಟಿ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಡಿಕೆ ಶಿವಕುಮಾರ್ ಸಿಎಂ ಹುದ್ದೆಗೆ ಅರ್ಹರು’: ಸಾಮಾಜಿಕ ಜಾಲತಾಣದಲ್ಲಿ ಶುರುವಾಯ್ತು ಪೋಸ್ಟರ್ ಅಭಿಯಾನ! – Kannada News | Next CM of Karnataka: Team DK Launches Massive Online Poster Campaign Demanding DK Shivakumar as Chief Minister

ಬೆಂಗಳೂರು, ಮೇ 27: ಕರ್ನಾಟಕ ರಾಜಕೀಯದಲ್ಲಿ ಕ್ಷಣಕ್ಕೊಂದು ಬೆಳವಣಿಗೆಯಾಗುತ್ತಿದ್ದು, ಅಧಿಕಾರ ಹಂಚಿಕೆ ಬಹುತೇಕ ಫೈನಲ್ ಆದಂತಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಪ್ತ ಸಚಿವರೊಂದಿಗೆ ಮಂಗಳವಾರ ತಡರಾತ್ರಿವರೆಗೂ ಸಭೆ ನಡೆಸಿದ್ದಾರೆ. ಮಧ್ಯರಾತ್ರಿ 2 ಗಂಟೆಯವರೆಗೂ ನಡೆದ ಈ ಸಭೆಯಲ್ಲಿ ಮುಂದಿನ ರಾಜಕೀಯ ನಡೆಗಳು ಹಾಗೂ ಹೈಕಮಾಂಡ್‌ನೊಂದಿಗಿನ ಮಾತುಕತೆಗಳ ಬಗ್ಗೆ ಚರ್ಚಿಸಲಾಗಿದೆ. ಸಿಎಂ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಆಪ್ತರ ಬಳಗದಲ್ಲಿ ಆತಂಕ ಮೂಡಿಸಿದ್ದು, ರಾಜಕೀಯ ಭವಿಷ್ಯದ ಕುರಿತು ಸಿಎಂ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ.

ಅನಿರೀಕ್ಷಿತ ಬೆಳವಣಿಗೆಯಾಗಿ ಸಚಿವ ಹೆಚ್.ಕೆ. ಪಾಟೀಲ್ ಗದಗದಲ್ಲಿ ನಿಗದಿಯಾಗಿದ್ದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿ ದಿಢೀರನೆ ಬೆಂಗಳೂರಿಗೆ ಆಗಮಿಸಿದ್ದಾರೆ. ಇತ್ತೀಚಿನ ಈ ಬದಲಾವಣೆಗಳಿಂದ ಸಿಎಂ ಆಪ್ತ ಬಳಗದಲ್ಲಿ ಆಘಾತ ಮೂಡಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಇದರ ಜೊತೆಗೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರೆಂದು ಬಿಂಬಿಸುವ ಪೋಸ್ಟರ್ ಅಭಿಯಾನವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರಂಭವಾಗಿದೆ. ‘ಟೀಮ್ ಡಿಕೆ’ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಈ ಅಭಿಯಾನ ನಡೆಯುತ್ತಿದ್ದು, ಡಿ.ಕೆ. ಶಿವಕುಮಾರ್ ಅವರ 45 ವರ್ಷಗಳ ರಾಜಕೀಯ ಅನುಭವ ಮತ್ತು ತಳಮಟ್ಟದಿಂದ ಬೆಳೆದು ಬಂದ ಹಾದಿಯನ್ನು ಉಲ್ಲೇಖಿಸಿ, ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತರೆಂದು ಪ್ರಚಾರ ಮಾಡಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version