ಅವನು ನನ್ನನ್ನು ಕೊಲ್ಲಲು ಯತ್ನಿಸಿದ, ಮಗನನ್ನು ಗಾಯಗೊಳಿಸಿದ: ಸೈಫ್ – Kannada News | Saif Ali Khan talks about the burglar who invaded his house and cause chaos

ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ (Saif Ali Khan), ಇತ್ತೀಚೆಗೆ ದಕ್ಷಿಣ ಭಾರತ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಕಳೆದ ವರ್ಷ ಜನವರಿ ತಿಂಗಳಲ್ಲಿ ಸೈಫ್ ಅಲಿ ಖಾನ್ ಮನೆ ಪ್ರವೇಶಿಸಿದ್ದ ಅಗಂತುಕನೊಬ್ಬ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದ, ಹಲವು ಬಾರಿ ಸೈಫ್ ಅಲಿ ಖಾನ್ ಅನ್ನು ಚಾಕುವಿನಿಂದ ಚುಚ್ಚಿ ದಾಳಿ ಮಾಡಿದ್ದ. ಆಸ್ಪತ್ರೆಗೆ ದಾಖಲಾಗಿದ್ದ ಸೈಫ್ ಅಲಿ ಖಾನ್ ಕೆಲ ದಿನಗಳ ಬಳಿಕ ಗುಣಮುಖರಾಗಿ ಹೊರಬಂದಿದ್ದರು. ಈ ಹಿಂದೆ ಕೆಲ ಬಾರಿ ಆ ಬಗ್ಗೆ ಮಾತನಾಡಿದ್ದ, ಸೈಫ್ ಅಲಿ ಖಾನ್ ಇದೀಗ ಮತ್ತೊಮ್ಮೆ ಆ ದಾಳಿಕೋರನ ಬಗ್ಗೆ ಮಾತನಾಡಿದ್ದು, ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ.

ಸೈಫ್ ಅಲಿ ಖಾನ್ ಹೇಳಿರುವಂತೆ, ಆ ವ್ಯಕ್ತಿ ಸೈಫ್​ ಅವರ ಮನೆಯ ಬಾತ್​​ರೂಂ ಕಿಟಕಿ ಮೂಲಕ ಪ್ರವೇಶಿಸಿದವನೇ ನೇರವಾಗಿ ಪುತ್ರ ಜೆಹ್ ಮಲಗಿದ್ದ ರೂಮಿಗೆ ಹೋದನಂತೆ. ಜೆಹ್ ಅನ್ನು ನೋಡಿಕೊಳ್ಳಲು ನೇಮಿಸಲಾಗಿದ್ದ ನ್ಯಾನಿ, ಸೈಫ್ ಅಲಿ ಖಾನ್ ರೂಮಿಗೆ ಬಂದವರೇ ಜೆಹ್ ರೂಮಿಗೆ ಅಗಂತುಕ ಬಂದಿದ್ದು, ಚಾಕು ಹಿಡಿದು ಹಣಕ್ಕೆ ಬೇಡಿಕೆ ಇಡುತ್ತಿದ್ದಾನೆ ಎಂದರಂತೆ. ಕೂಡಲೆ ಎದ್ದು ಓಡಿದ ಸೈಫ್ ಅಲಿ ಖಾನ್, ಹೋದವರೆ ಅಗಂತುಕನ ಮೇಲೆ ಹಾರಿ ಬಿದ್ದರಂತೆ.

‘ನಾನು ಅಂದು ತುಸು ತಡೆದು ಲೈಟ್ ಆನ್ ಮಾಡಿ ಆತನೊಂದಿಗೆ ಮಾತನಾಡಿದ್ದಿದ್ದರೆ ಸರಿ ಇರುತ್ತಿತ್ತು. ಆತನಿಗೆ ಸಹ ತಾನು ಎಲ್ಲಿಗೆ ಬಂದಿದ್ದೇನೆ ಎಂಬುದು ಅರಿವಾಗಿರುತ್ತಿತ್ತು’ ಎಂದಿದ್ದಾರೆ. ‘ಅಂದು ಆತನಿಗೂ ನನಗೆ ಒಂದು ರೀತಿ ಜಟಾಪಟಿಯೇ ನಡೆಯಿತು. ಆತ ಚಾಕುವಿನಿಂದ ಸತತವಾಗಿ ಚುಚ್ಚಿದ, ಆತ ನನ್ನನ್ನು ಕೊಲ್ಲಲೇ ಬೇಕು ಎಂದು ನಿರ್ಣಯಿಸಿದಂತೆ ಇತ್ತು ಆತನ ದಾಳಿ. ಆತ ನನ್ನ ಮಗ ಜೆಹ್​​ನಿಗೂ ಗಾಯ ಮಾಡಿದ’ ಎಂದಿದ್ದಾರೆ ಸೈಫ್ ಅಲಿ ಖಾನ್.

ಇದನ್ನೂ ಓದಿ:ಹಣ ಬಂದರೂ ಸಿನಿಮಾ ನಿರ್ಮಾಣ ಕೈಬಿಟ್ಟಿದ್ದೇಕೆ ಸೈಫ್ ಅಲಿ ಖಾನ್?

‘ನಾನು ಅಂದು ನೆಲದ ಮೇಲೆ ಬಿದ್ದಿದ್ದಾಗ ನಾನು ಬದುಕುವುದಿಲ್ಲ ಎಂದುಕೊಂಡಿದ್ದೆ. ನನ್ನ ಮಗ ಜೆಹ್ ಸಹ ಬಂದು ನೀವು ಸಾಯುತ್ತೀರ ಅಪ್ಪ ಎಂದು ಅಳುತ್ತಾ ಕೇಳಿದ್ದ. ಬಳಿಕ ನಾನು ಆಸ್ಪತ್ರೆಗೆ ಹೊರೆಟೆ ಆಗ ನನಗೆ ತುಸು ನಂಬಿಕೆ ಬಂದು. ನಾನು ಆಟೋ ಹತ್ತಿದಾಗ, ನಾನು ಧರಿಸಿದ್ದ ಪೈಜಾಮ ಸಂಪೂರ್ಣ ರಕ್ತಮಯವಾಗಿತ್ತು. ಆದರೆ ನನಗೆ ಬದುಕಬೇಕೆಂಬ ಛಲ ಬಂದುಬಿಟ್ಟಿತ್ತು’ ಎಂದಿದ್ದಾರೆ ಸೈಫ್ ಅಲಿ ಖಾನ್.

‘ನಾವು ಆ ಬಳಿಕ ಮನೆಯಲ್ಲಿ ಹಲವು ಬಾರಿ ಈ ಬಗ್ಗೆ ಮಾತನಾಡಿದೆವು. ಆ ವ್ಯಕ್ತಿಯನ್ನು ಕ್ಷಮಿಸಬೇಕಾ ಬೇಡವ ಎಂಬ ಬಗ್ಗೆ ನನಗೆ ನಾನು ಹಲವು ಬಾರಿ ಯೋಚಿಸಿದ್ದೇನೆ. ಆದರೆ ಆತ ನನ್ನನ್ನು ಕೊಲ್ಲಲೇ ಬೇಕೆಂಬ ಹಠದಲ್ಲಿ ಚಾಕು ಬೀಸಿದ್ದು ನೆನಪಿಸಿಕೊಂಡಾಗಲೆಲ್ಲ ನಾನು ಕ್ಷಮಿಸಲು ಸೋಲುತ್ತಿದ್ದೆ. ಕೊನೆಗೆ ಮನೆಯವರೆಲ್ಲ ಮಾತನಾಡಿ, ಅವನನ್ನು ಕ್ಷಮಿಸಲು ತೀರ್ಮಾನಿಸಿದೆವು’ ಎಂದಿದ್ದಾರೆ ಸೈಫ್ ಅಲಿ ಖಾನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಏನಿದು ಮೀಲ್ ಪ್ರೆಪ್ ಟ್ರೆಂಡ್? ನಿಜವಾಗಿಯೂ ಇದು ಸಮಯ, ಹಣ ಉಳಿಸುವುದರ ಜೊತೆಗೆ ಆರೋಗ್ಯ ಕಾಪಾಡುತ್ತಾ? – Kannada News | Meal Prep Guide: Best Foods, Benefits And Storage Tips

ಇಂದಿನ ಬ್ಯುಸಿ ಜೀವನಶೈಲಿಯಲ್ಲಿ ಮೀಲ್ ಪ್ರೆಪ್ (Meal Prep) ಜನಪ್ರಿಯವಾಗುತ್ತಿದೆ. ಅಂದರೆ, ಕೆಲವು ದಿನ ಅಥವಾ ವಾರಕ್ಕೆ ಬೇಕಾಗುವ ಆಹಾರವನ್ನು ಮುಂಚಿತವಾಗಿಯೇ ಯೋಜಿಸಿ ತಯಾರಿಸಿ ಇಟ್ಟುಕೊಳ್ಳುವುದು. ಇದರಿಂದ ಪ್ರತಿದಿನ ಅಡುಗೆ ಮಾಡುವ ತೊಂದರೆ ಕಡಿಮೆಯಾಗುವುದರ ಜೊತೆಗೆ ಆರೋಗ್ಯಕರ ಆಹಾರವನ್ನು ನಿಯಮಿತವಾಗಿ ಸೇವಿಸಲು ಸಹಾಯವಾಗುತ್ತದೆ. ಅಷ್ಟೇಅಲ್ಲ, ವಾರದ ಬಜೆಟ್ ಅನ್ನು ನಿಯಂತ್ರಿಸಲು ಕೂಡ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಆದರೆ ಮೀಲ್ ಪ್ರೆಪ್‌ಗೆ ಸೂಕ್ತ ಆಹಾರಗಳು ಯಾವವು, ತಯಾರಿಸಿಟ್ಟುಕೊಳ್ಳುವ ಮೊದಲು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಸಮಯ ಮತ್ತು ಹಣದ ಉಳಿತಾಯ

ಒಂದೇ ಬಾರಿ ಮುಂದಿನ ಕೆಲವು ದಿನಗಳ ವರೆಗೆ ಆಹಾರ ತಯಾರಿಸುವುದರಿಂದ ಪ್ರತಿದಿನ “ಏನು ಅಡುಗೆ ಮಾಡಬೇಕು?” ಎಂಬ ಚಿಂತೆ ಇರುವುದಿಲ್ಲ. ಅಗತ್ಯಕ್ಕೆ ತಕ್ಕಷ್ಟು ಸಾಮಗ್ರಿ ಖರೀದಿಸುವುದರಿಂದ ಅನಗತ್ಯ ಖರ್ಚು ಕಡಿಮೆಯಾಗುತ್ತದೆ. ಹೊರಗಿನ ಆಹಾರಕ್ಕೆ ಹಣ ವ್ಯಯಿಸುವುದು ಕೂಡ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಆರೋಗ್ಯ ಕಾಪಾಡಿಕೊಳ್ಳಲು ಮಳೆಗಾಲದಲ್ಲಿ ಇಂತಹ ಆಹಾರಗಳಿಂದ ದೂರವಿರಿ

ಮೀಲ್ ಪ್ರೆಪ್‌ಗೆ ಸೂಕ್ತ ಆಹಾರಗಳು

ಬೇಳೆ, ರಾಜ್ಮಾ, ಕಡಲೆ, ಬ್ರೌನ್ ರೈಸ್, ಓಟ್ಸ್, ಬೇಯಿಸಿದ ಮೊಟ್ಟೆ, ಗ್ರಿಲ್ ಮಾಡಿದ ಚಿಕನ್, ಪನೀರ್, ಟೋಫು, ಬೇಯಿಸಿದ ತರಕಾರಿಗಳು ಹಾಗೂ ಹಣ್ಣುಗಳನ್ನು ಮೀಲ್ ಪ್ರೆಪ್‌ಗೆ ಬಳಸಬಹುದು. ಇವುಗಳನ್ನು ಸ್ವಚ್ಛವಾದ, ಗಾಳಿಯಾಡದ ಡಬ್ಬಿಗಳಲ್ಲಿ ಸಂಗ್ರಹಿಸುವುದು ಉತ್ತಮ.

ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿ

ಆಹಾರವನ್ನು ಸಂಪೂರ್ಣವಾಗಿ ಬೇಯಿಸಿ ತಣ್ಣಗಾದ ನಂತರವೇ ಡಬ್ಬಿಗಳಿಗೆ ಹಾಕಿ ಫ್ರಿಜ್‌ನಲ್ಲಿ ಇಡಿ. ಸಾಮಾನ್ಯವಾಗಿ ಬೇಯಿಸಿದ ಆಹಾರವನ್ನು 3–4 ದಿನಗಳವರೆಗೆ ಫ್ರಿಜ್‌ನಲ್ಲಿ ಸುರಕ್ಷಿತವಾಗಿ ಇಡಬಹುದು. ಹೆಚ್ಚು ದಿನ ಸಂಗ್ರಹಿಸಬೇಕಾದರೆ ಫ್ರೀಜರ್ ಬಳಸುವುದು ಉತ್ತಮ. ಮತ್ತೆ ಬಿಸಿ ಮಾಡುವಾಗ ಚೆನ್ನಾಗಿ ಬಿಸಿ ಮಾಡಿ, ಹಾಳಾದ ವಾಸನೆ ಅಥವಾ ಬಣ್ಣ ಬದಲಾದ ಆಹಾರವನ್ನು ಸೇವಿಸಬೇಡಿ.

ಮೀಲ್ ಪ್ರೆಪ್ ಕೇವಲ ಸಮಯ ಮತ್ತು ಹಣ ಉಳಿಸುವ ವಿಧಾನವಲ್ಲ, ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಲು ಸಹ ಸಹಕಾರಿ. ಆದರೆ ಆಹಾರದ ಗುಣಮಟ್ಟ, ಸ್ವಚ್ಛತೆ ಮತ್ತು ಸರಿಯಾದ ಸಂಗ್ರಹಣೆಗೆ ಆದ್ಯತೆ ನೀಡುವುದು ಅತ್ಯಗತ್ಯ. ಸರಿಯಾದ ಯೋಜನೆಯೊಂದಿಗೆ ಮೀಲ್ ಪ್ರೆಪ್ ಅನುಸರಿಸಿದರೆ ಆರೋಗ್ಯಕರ ಜೀವನಶೈಲಿಯನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ತಪ್ಪಿಯೂ ಈ ರೀತಿಯ ಜನರಿಗೆ ಸಹಾಯ ಮಾಡಲು ಹೋಗ್ಬೇಡಿ – Kannada News | Chanakya Niti: Chanakya says it is a big mistake to help these few people

ಕಷ್ಟಕಾಲದಲ್ಲಿ ಒಬ್ಬರಿಗೆ ಸಹಾಯ (help) ಮಾಡುವುದು ತುಂಬಾನೇ ಒಳ್ಳೆಯ ಕೆಲಸ. ಇದು ಮಾನವೀಯತೆ ಕೂಡಾ ಹೌದು. ಹಾಗಾಗಿ ಸಹಾಯ ಮಾಡುವ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಹಿರಿಯರು ಹೇಳುತ್ತಿರುತ್ತಾರೆ. ಸಹಾಯ ಮಾಡ್ಬೇಕು ನಿಜ, ಆದ್ರೆ ಕುರುಡಾಗಿ ಎಲ್ಲರಿಗೂ ಸಹಾಯ ಮಾಡುವುದು ಸರಿಯಲ್ಲ ಎಂದು ಎಚ್ಚರಿಸಿದ್ದಾರೆ ಆಚಾರ್ಯ ಚಾಣಕ್ಯ. ಈ ಕೆಲವೊಂದಿಷ್ಟು ಜನರಿಗೆ ಉಪಕಾರ ಮಾಡಿದರೆ, ಅದರಿಂದ ನಮಗೆಯೇ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ತಪ್ಪಿಯೂ ಈ ರೀತಿಯ ಜನರಿಗೆ ಉಪಕಾರ ಮಾಡಬಾರದು ಎಂದಿದ್ದಾರೆ. ಎಂತಹ ಜನಗಳಿಗೆ ಉಪಕಾರ ಮಾಡುವುದು ಸರಿಯಲ್ಲ ಎಂಬುದನ್ನು ನೋಡೋಣ ಬನ್ನಿ.

ಇಂತಹ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ:

ದುಷ್ಟ ಅಥವಾ ಕೆಟ್ಟ ಸ್ವಭಾವದ ಜನರು: ದುಷ್ಟನಾಗಿರುವ ಅಥವಾ ಕೆಟ್ಟ ಸ್ವಭಾವದ ವ್ಯಕ್ತಿಗೆ ಎಂದಿಗೂ ಸಹಾಯ ಮಾಡಬಾರದು ಎಂದು ಚಾಣಕ್ಯ ಹೇಳುತ್ತಾರೆ. ದುಷ್ಟ ವ್ಯಕ್ತಿ ಹಾವು ಇದ್ದಂತೆ, ನೀವು ಹಾವಿಗೆ ಎಷ್ಟೇ ಹಾಲು ಕುಡಿಸಿದರೂ ಅದು ತನ್ನ ವಿಷವನ್ನು ಉಗುಳುವುದನ್ನು ನಿಲ್ಲಿಸುವುದಿಲ್ಲ. ಅದೇ ರೀತಿ, ನೀವು ದುಷ್ಟ ವ್ಯಕ್ತಿಗೆ ಎಷ್ಟೇ ಸಹಾಯ ಮಾಡಿದರೂ, ಆತನಿಂದ ನಿಮಗೆ ಎಂದಿಗೂ ಒಳ್ಳೆಯದಾಗುವುದಿಲ್ಲ, ಆತ ನಿಮಗೆ ಒಳ್ಳೆಯದನ್ನು ಬಯಸುವುದು ಸಹ ಇಲ್ಲ. ಆದ್ದರಿಂದ ಕೆಟ್ಟ ಸ್ವಭಾವದ ವ್ಯಕ್ತಿಗಳಿಗೆ ಎಂದಿಗೂ ಸಹಾಯ ಮಾಡಬೇಡಿ.

ಯಾವಾಗಲೂ ದುಃಖದಿಂದ ಮತ್ತು ಅಳುತ್ತಾ ಇರುವ ಜನರು: ಕೆಲವು ಜನರಿಗೆ ಎಲ್ಲವೂ ಇದ್ದರೂ ನಿರಂತರವಾಗಿ ಅಳುವ ಅಭ್ಯಾಸವಿರುತ್ತದೆ. ಅವರು ತಮ್ಮ ಜೀವನದಲ್ಲಿನ ನ್ಯೂನತೆಗಳನ್ನು ಮಾತ್ರ ನೋಡುತ್ತಾರೆ. ಚಾಣಕ್ಯ ನೀತಿಯ ಪ್ರಕಾರ ಅಂತಹ ಜನರಿಗೆ ಸಹಾಯ ಮಾಡುವುದರಿಂದ ಅಥವಾ ಅವರೊಂದಿಗೆ ಇರುವುದರಿಂದ ಅವರ ನಕಾರಾತ್ಮಕ ಶಕ್ತಿ ನಿಮಗೂ ಆವರಿಸುತ್ತದೆ. ಅಂತಹ ಜನರು ಯಾವಾಗಲೂ ಇತರರ ಸಂತೋಷವನ್ನು ನೋಡಿ ಅಸೂಯೆಪಡುತ್ತಾರೆ. ನೀವು ಅವರಿಗೆ ಸಹಾಯ ಮಾಡಿದರೆ, ಅವರು ತಮ್ಮ ನ್ಯೂನತೆಗಳಿಗೆ ನಿಮ್ಮನ್ನು ದೂಷಿಸುತ್ತಾರೆ. ಆದ್ದರಿಂದ, ಅವರಿಂದ ದೂರವಿರುವುದು ಉತ್ತಮ.

ಮೂರ್ಖ ಜನರು: ಆಚಾರ್ಯ ಚಾಣಕ್ಯರ ಪ್ರಕಾರ, ಅಜ್ಞಾನಿ ಮತ್ತು ತಮ್ಮದೇ ಮೂರ್ಖತನ ಸರಿ ಎಂದು ನಂಬುವ ಯಾರಿಗೂ ಸಹಾಯ ಮಾಡಬಾರದು, ಜೊತೆಗೆ ಅವರೊಂದಿಗೆ ತರ್ಕವನ್ನೂ ಮಾಡಬಾರದು. ಅಂತಹ ಮೂರ್ಖನಿಗೆ ಸತ್ಯವನ್ನು ಹೇಳುವುದರಿಂದ ಅವರು ನಿಮ್ಮ ಶತ್ರುಗಳಾಗಿ ಬದಲಾಗುತ್ತಾರೆ. ಅವರು ನಿಮ್ಮ ಒಳ್ಳೆಯತನವನ್ನು ಅವರ ವಿರುದ್ಧದ ಪಿತೂರಿ ಎಂದು ಪರಿಗಣಿಸುತ್ತಾರೆ.

ಇದನ್ನೂ ಓದಿ: ಶ್ರೀಮಂತಿಕೆ ಗಳಿಸಲು ಬಯಸುವವರು ಗೋಲ್ಡನ್‌ ರೂಲ್ಸ್‌ಗಳನ್ನು ತಪ್ಪದೇ ಪಾಲಿಸಿ

ಕೆಟ್ಟ ಚಟಕ್ಕೆ ದಾಸರಾಗಿರುವವರಿ: ಸಾಮಾಜಿಕ ನಿಯಮಗಳನ್ನು ಪಾಲಿಸದವರಿಗೆ ಕಳ್ಳತನ, ಜೂಜಾಟ ಅಥವಾ ಮಾದಕ ದ್ರವ್ಯ ಸೇವನೆಯಂತಹ ಕೆಟ್ಟ ಚಟಗಳಿಗೆ ದಾಸರಾಗಿರುವವರಿಗೆ ಸಹಾಯ ಮಾಡಬಾರದು. ಅಂತಹ ಜನರಿಗೆ ಆರ್ಥಿಕವಾಗಿ ಅಥವಾ ಯಾವುದೇ ರೀತಿಯಲ್ಲಿ ಸಹಾಯ ಮಾಡುವುದು ಎಂದರೆ ನೀವು ಅವರ ತಪ್ಪು ಕೃತ್ಯಗಳನ್ನು ಬೆಂಬಲಿಸುತ್ತಿದ್ದೀರಿ ಎಂದರ್ಥ. ಇದು ನಿಮ್ಮ ಘನತೆಯನ್ನು ಹಾಳು ಮಾಡುತ್ತದೆ.

ಸೋಮಾರಿಯಾಗಿರುವವನು: ಆಚಾರ್ಯ ಚಾಣಕ್ಯರ ಪ್ರಕಾರ, ಕಷ್ಟಪಟ್ಟು ಕೆಲಸ ಮಾಡಲು ಇಷ್ಟವಿಲ್ಲದ ಮತ್ತು ತಮ್ಮ ಕೆಲಸವನ್ನು ಮಾಡಲು ಇತರರನ್ನು ಅವಲಂಬಿಸಿರುವ ಸೋಮಾರಿಗಳಿಗೆ ಸಹಾಯ ಮಾಡುವುದನ್ನು ತಪ್ಪಿಸಬೇಕು. ಅಂತಹ ಜನರು ಎಲ್ಲದಕ್ಕೂ ಇತರರನ್ನು ಅವಲಂಬಿಸಿರುತ್ತಾರೆ ಮತ್ತು ತಮ್ಮ ಸ್ವಂತ ಪರಿಸ್ಥಿತಿಯನ್ನು ಸುಧಾರಿಸಲು ಎಂದಿಗೂ ಪ್ರಯತ್ನಿಸುವುದಿಲ್ಲ. ಸೋಮಾರಿಯಾದ ವ್ಯಕ್ತಿಗೆ ಸಹಾಯ ಮಾಡುವುದು ನಿಮ್ಮ ಸಮಯವನ್ನು ವ್ಯರ್ಥ ಮಾಡುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.

ಕೃತಘ್ನನಿಲ್ಲದ ಅಥವಾ ಸ್ವಾರ್ಥಿ ವ್ಯಕ್ತಿ: ಚಾಣಕ್ಯ ನೀತಿಯ ಪ್ರಕಾರ, ನೀವು ಪದೇ ಪದೇ ಸಹಾಯ ಮಾಡಿದರೂ ಗೌರವ ತೋರಿಸದ ಮತ್ತು ನಿಮ್ಮ ಸಹಾಯವನ್ನು ನಿರ್ಲಕ್ಷಿಸುವ ವ್ಯಕ್ತಿಗೆ ಸಹಾಯ ಮಾಡುವುದನ್ನು ತಪ್ಪಿಸಬೇಕು. ಅಂತಹ ಜನರು ಬರೀ ತಮ್ಮ ಸ್ವಾರ್ಥಕ್ಕಾಗಿ ಮಾತ್ರ ನಿಮ್ಮನ್ನು ಬಳಸಿಕೊಳ್ಳುತ್ತಾರೆ. ನೀವು ಅಂತಹ ಸ್ವಾರ್ಥಿ ಜನರಿಗೆ ಮತ್ತೆಂದೂ ಸಹಾಯ ಮಾಡಬಾರದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs IRE: ಸೋಲಿನ ಆಘಾತದ ನಡುವೆ ಕೊನೆಯ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ರೆಡಿ – Kannada News | India vs Ireland 2nd T20: Match Preview, Date, Time and Live Stream Series Decider

ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯವನ್ನು 34 ರನ್​ಗಳಿಂದ ಸೋತ ಆಘಾತದಲ್ಲಿರುವ ಟೀಂ ಇಂಡಿಯಾ ಇದೀಗ ಎರಡನೇ ಟಿ20 ಪಂದ್ಯಕ್ಕೆ ಸಜ್ಜಾಗಿದೆ. ಮೊದಲ ಪಂದ್ಯವನ್ನು ಗೆದ್ದುಕೊಂಡಿರುವ ಐರ್ಲೆಂಡ್ 2 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಇದೀಗ ನಾಳೆ ನಡೆಯಲಿರುವ ಕೊನೆಯ ಟಿ20 ಪಂದ್ಯದಲ್ಲಿ ಭಾರತ ಸೋತರೆ, ಐರ್ಲೆಂಡ್ 2-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಳ್ಳಲಿದೆ. ಒಂದು ವೇಳೆ ಭಾರತ ಗೆದ್ದರೆ ಸರಣಿ 1-1 ರ ಸಮಬಲದೊಂದಿಗೆ ಅಂತ್ಯವಾಗಲಿದೆ. ಹೀಗಾಗಿ ಸರಣಿ ಗೆಲ್ಲುವ ಅವಕಾಶ ಕಳೆದುಕೊಂಡಿರುವ ಭಾರತ, ಸರಣಿ ಸೋಲಿನಿಂದ ಪಾರಾಗಲು ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಹೀಗಾಗಿ ಈ ನಿರ್ಣಾಯಕ ಪಂದ್ಯದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದ್ದು, ಪಂದ್ಯದ ಬಗ್ಗೆಗಿನ ಪೂರ್ಣ ವಿವರ ಇಲ್ಲಿದೆ.

ಭಾರತ ಹಾಗೂ ಐರ್ಲೆಂಡ್ ನಡುವಿನ 2ನೇ ಟಿ20 ಪಂದ್ಯ ಯಾವಾಗ ನಡೆಯಲಿದೆ?

ಭಾರತ ಹಾಗೂ ಐರ್ಲೆಂಡ್ ನಡುವಿನ 2ನೇ ಟಿ20 ಪಂದ್ಯ ಜೂನ್ 28 ರಂದು ನಡೆಯಲಿದೆ.

ಭಾರತ ಹಾಗೂ ಐರ್ಲೆಂಡ್ ನಡುವಿನ 2ನೇ ಟಿ20 ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಹಾಗೂ ಐರ್ಲೆಂಡ್ ನಡುವಿನ 2ನೇ ಟಿ20 ಪಂದ್ಯ ಬೆಲ್‌ಫಾಸ್ಟ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಭಾರತ ಹಾಗೂ ಐರ್ಲೆಂಡ್ ನಡುವಿನ 2ನೇ ಟಿ20 ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಭಾರತ ಹಾಗೂ ಐರ್ಲೆಂಡ್ ನಡುವಿನ 2ನೇ ಟಿ20 ಪಂದ್ಯ ಭಾರತೀಯ ಕಾಲಮಾನ ಸಂಜೆ 6 ಗಂಟೆಗೆ ಪ್ರಾರಂಭವಾಗುತ್ತದೆ.

ಭಾರತ ಹಾಗೂ ಐರ್ಲೆಂಡ್ ನಡುವಿನ 2ನೇ ಟಿ20 ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಭಾರತ ಹಾಗೂ ಐರ್ಲೆಂಡ್ ನಡುವಿನ 2ನೇ ಟಿ20 ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ನೆಟ್​ವರ್ಕ್​ನಲ್ಲಿ ವೀಕ್ಷಿಸಬಹುದು.

ಉಭಯ ತಂಡಗಳು

ಐರ್ಲೆಂಡ್ ತಂಡ: ಲೋರ್ಕನ್ ಟಕರ್ (ನಾಯಕ), ರಾಸ್ ಅಡೈರ್, ಬೆನ್ ಕೌಲ್ಟಿಡ್ಜ್, ಗ್ಯಾರೆತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಮ್ಯಾಥ್ಯೂ ಹಂಫ್ರೈಸ್, ಗ್ಯಾವಿನ್ ಹೋಯ್, ಮ್ಯಾಥ್ಯೂ ಹೊಲ್ಲಾರ್ಡ್, ಲಿಯಾಮ್ ಮೆಕಾರ್ಥಿ, ಜೇ ಮುಂದ್ರಾ, ಹ್ಯಾರಿ ಟೆಕ್ಟರ್, ಟಿಮ್ ಟೆಕ್ಟರ್, ರೂಬೆನ್ ವಿಲ್ಸನ್.

ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ತಿಲಕ್ ವರ್ಮಾ (ಉಪನಾಯಕ), ನಿತೀಶ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್ ಮತ್ತು ವೈಭವ್ ಸೂರ್ಯವಂಶಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟ್ರೆಕ್ಕಿಂಗ್‌ ಹೋಗುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – Kannada News | Do you know how many benefits there are of trekking?

ಇಂದಿನ ಈ ಬ್ಯುಸಿ ಮತ್ತು ಒತ್ತಡದ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಹುಡುಕುತ್ತಾ ಹಲವು ಜನ ಎತ್ತರದ ಪರ್ವತಗಳಿಗೆ ಟ್ರೆಕ್ಕಿಂಗ್‌ (trekking) ಹೋಗುತ್ತಾರೆ. ಯುವ ಜನರಂತೂ ಕೆಲಸದ ಒತ್ತಡದಿಂದ ಕೊಂಚ ಬ್ರೇಕ್‌ ತೆಗೆದುಕೊಂಡು ವೀಕೆಂಡ್‌ನಲ್ಲಿ ಮುಳ್ಳಯ್ಯನಗಿರಿ, ಕೊಡಚಾದ್ರಿ, ಲೋನಾವಾಲ ಅಂತೆಲ್ಲಾ ಬೇರೆ ಬೇರೆ ಕಡೆ ಟ್ರೆಕ್ಕಿಂಗ್‌ ಹೋಗ್ತಾರೆ. ಚಿಂತೆ, ಒತ್ತಡವನ್ನು ಮರೆಯಲು, ಪ್ರಕೃತಿಗೆ ಹತ್ತಿರವಾಗಲು, ಸ್ನೇಹಿತರೊಂದಿಗೆ ಒಂದೊಳ್ಳೆ ಸಮಯ ಕಳೆಯಲು ಟ್ರೆಕ್ಕಿಂಗ್‌ ಬೆಸ್ಟ್‌ ಆಯ್ಕೆ ಆಗಿದೆ. ಇಷ್ಟು ಮಾತ್ರವಲ್ಲ ಚಾರಣ ಹೋಗುವುದರಿಂದ ಸಾಕಷ್ಟು ಪ್ರಯೋಜನಗಳು ಸಹ ಲಭಿಸುತ್ತವೆಂತೆ. ಟ್ರೆಕ್ಕಿಂಗ್‌ ಮಾಡುವುದರಿಂದ ಏನೆಲ್ಲಾ ಲಾಭಗಳನ್ನು ಪಡೆಯಬಹುದು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಟ್ರೆಕ್ಕಿಂಗ್‌ ಹೋಗುವುದರಿಂದ ಲಭಿಸುವ ಪ್ರಯೋಜನಗಳೇನು?

ಒತ್ತಡದಿಂದ ಪರಿಹಾರ ನೀಡುತ್ತದೆ:  ಇಂದಿನ ಈ ಬ್ಯುಸಿ ಜೀವನದಲ್ಲಿ ಒತ್ತಡ ಸಾಮಾನ್ಯವಾಗಿದೆ. ಹೀಗಿರುವಾಗ ವಾರಾಂತ್ಯದಲ್ಲಿ ಟ್ರೆಕ್ಕಿಂಗ್‌ ಹೋಗಿ, ಪ್ರಕೃತಿಯೊಂದಿಗೆ  ಸಂಪರ್ಕ ಸಾಧಿಸಿದಾಗ, ಅದು ಮರಗಳ ಶಬ್ದವಾಗಿರಬಹುದು, ಪಕ್ಷಿಗಳ ಚಿಲಿಪಿಲಿಯಾಗಿರಬಹುದು ಅಥವಾ ತಾಜಾ ಗಾಳಿಯಾಗಿರಬಹುದು, ಈ ಎಲ್ಲಾ ಸಕಾರಾತ್ಮಕ ಅಂಶಗಳು ಮೆದುಳು ‘ಎಂಡಾರ್ಫಿನ್‌ಗಳು’ ಮತ್ತು ‘ಡೋಪಮೈನ್’ ನಂತಹ ಸಂತೋಷದ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಟ್ರೆಕ್ಕಿಂಗ್‌ ಮಾಡುವಾಗ ದೇಹವು ನೋವಿನಲ್ಲಿದ್ದರೂ, ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ. ಆ ತಾಜಾತನವೇ ಅವರಿಗೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ.

ಸಾಮಾಜಿಕ ಬಾಂಧವ್ಯ ಉತ್ತಮವಾಗುತ್ತದೆ: ಚಾರಣವು ಕೇವಲ ವೈಯಕ್ತಿಕ ಪ್ರಯಾಣವಲ್ಲ, ಅದು ಗುಂಪಿನಲ್ಲಿ ಕೆಲಸ ಮಾಡುವ ಅದ್ಭುತ ಅನುಭವ. ಚಾರಣಕ್ಕೆ ಹೋಗುವಾಗ ಸಾಕಷ್ಟು ಜನರನ್ನು ಭೇಟಿಯಾಗುತ್ತೀರಿ, ಇದು ಸಾಮಾಜಿಕ ಬಾಂಧವ್ಯವನ್ನು ಉತ್ತಮವಾಗಿಸುತ್ತದೆ. ಈ ಸ್ನೇಹಿತರ ವಲಯ ಮತ್ತು ಮಾನವ ಸಂಪರ್ಕವು ಜೀವನದಲ್ಲಿ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಜೀವನ ಪಾಠಗಳನ್ನು ಕಲಿಸುತ್ತದೆ: ಪ್ರತಿಯೊಂದು ಚಾರಣ ಪ್ರವಾಸವು ಜೀವನ ಪಾಠವನ್ನು ಕಲಿಸುತ್ತದೆ. ಪರ್ವತವನ್ನು ಹತ್ತುವಾಗ ನಿಮ್ಮ ಬ್ಯಾಗ್‌ಪ್ಯಾಕ್‌ನಲ್ಲಿ  ಅನಗತ್ಯ ಭಾರವನ್ನು ಹೊತ್ತುಕೊಂಡರೆ, ನೀವು ಹೆಚ್ಚು ದೂರ ನಡೆಯಲು ಸಾಧ್ಯವಾಗುವುದಿಲ್ಲ. ಜೀವನದಲ್ಲೂ ಇದೇ ರೀತಿ ಅನಗತ್ಯ ಚಿಂತೆಗಳನ್ನು ಮತ್ತು ಕಹಿಯನ್ನು ಹೊತ್ತುಕೊಂಡರೆ ಶಾಂತಿಯುತವಾಗಿ ಬದುಕಲು ಸಾಧ್ಯವಿಲ್ಲ ಎಂಬ ಅದ್ಭುತ ಪಾಠ ಕಲಿಸುತ್ತದೆ. ಇದಲ್ಲದೆ ಟ್ರೆಕ್ಕಿಂಗ್‌ ಮಾಡುವುದರಿಂದ ತಾಳ್ಮೆ, ಪರಿಶ್ರಮ, ಯೋಜನೆ ಮುಂತಾದ ಕೌಶಲ್ಯಗಳು ಸ್ವಾಭಾವಿಕವಾಗಿಯೇ ಬೆಳೆಯುತ್ತವೆ. ಮುಖ್ಯವಾಗಿ  ಎಷ್ಟೇ ದೊಡ್ಡ ಸವಾಲನ್ನು ಎದುರಿಸಿದರೂ, ಶಾಂತವಾಗಿ ವರ್ತಿಸಿದರೆ ಅದನ್ನು ಜಯಿಸಬಹುದು ಎಂಬ ಮನಸ್ಥಿತಿ ಬೆಳೆಯುತ್ತದೆ.

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ತಪ್ಪುಗಳನ್ನು ಮಾಡಲೇಬೇಡಿ

ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ: ಚಾರಣವು ದೈಹಿಕ ಆರೋಗ್ಯವನ್ನೂ ವೃದ್ಧಿಸುತ್ತದೆ. ಇದು ಹೃದಯ ಬಡಿತವನ್ನು ನಿಯಂತ್ರಿಸುತ್ತದೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ವಿಶೇಷವಾಗಿ, ಬೆನ್ನು ನೋವು ಮತ್ತು ಬೊಜ್ಜಿನಂತಹ ಇಂದಿನ ಪೀಳಿಗೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಚಾರಣವು ಉತ್ತಮ ಪರಿಹಾರವಾಗಿದೆ. ಟ್ರೆಕ್ಕಿಂಗ್‌ಗೆ ಹೋದಾಗ ಶುದ್ಧ ಗಾಳಿಯನ್ನು ಉಸಿರಾಡುತ್ತೇವೆ, ಇದು ಶ್ವಾಸಕೋಶದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ. ಈ ಆರೋಗ್ಯ ಪ್ರಯೋಜನ ಹಾಗೂ ಅದ್ಭುತ ಅನುಭವವನ್ನು ಪಡೆಯಲೆಂದೇ ಟ್ರೆಕ್ಕಿಂಗ್‌ ಪ್ರಿಯರು ಆಗಾಗ್ಗೆ ಚಾರಣ ಹೋಗುವುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಣ್ಣ ಬಾಂಬ್ ಇದೆ ಓಡು ಅಂದು ಹೋದ್ಲು: ಕಾರು ಕಳೆದುಕೊಂಡವನ ಕರುಣಾಜನಕ ಕಥೆ – Kannada News | A Youth Blast car With crude bomb In Tumakuru, Driver Revels about the Incident

ತುಮಕೂರು, (ಜೂನ್ 27): ಪ್ರೇಮಿಗಳ (Lovers) ನಡುವೆ ಕಾರಲ್ಲೇ (Car) ಗಲಾಟೆ ನಡೆದು, ಪೆಟ್ರೋಲ್‌ ಬಾಂಬ್‌ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರು ಜಿಲ್ಲೆಯ ಶಿರಾ (Shira) ತಾಲೂಕಿನ ಕಳ್ಳಂಬೆಳ್ಳ ಬಳಿ ನಡೆದಿದೆ. ನಾಗೇಂದ್ರ (30) ಸಜೀವ ದಹನವಾದ ವ್ಯಕ್ತಿ. ನಾಗೇಂದ್ರ ಎನ್ನುವಾತ ಬೆಂಗಳೂರಿಂದ ಅಂಕೋಲಕ್ಕೆ ಹೋಗಲೆಂದು ಕಾರು ಬುಕ್​ ಮಾಡಿದ್ದು, ಜಯನಗರದಲ್ಲಿದ್ದ ಪ್ರೇಯಸಿಯನ್ನು ಒತ್ತಾಯಪೂರ್ವಕವಾಗಿ ಕಾರಿನಲ್ಲಿ ಕರೆದೊಯ್ದಿದ್ದಾನೆ. ಆದ್ರೆ, ಅದೇನಾಯ್ತೋ ಏನೋ ಕಾರಿನಲ್ಲೇ ಪ್ರೇಮಿಗಳು ಕಿತ್ತಾಡಿಕೊಂಡಿದ್ದು, ಈ ವೇಳೆ ಚಾಲಕ ಕಾರನ್ನು ಸೈಡಿಗೆ ಹಾಕಿದ್ದು, ಈ ವೇಳೆ ಯುವತಿ ಕಾರಿನಿಂದ ಇಳಿದಿದ್ದಾಳೆ. ಬಳಿಕ ಪ್ರಿಯಕರ ನಾಗೇಂದ್ರ ಕಾರಿನಲ್ಲೇ ನಾಡಬಾಂಬ್ ಸ್ಫೋಟಿಸಿಕೊಂಡಿದ್ದಾನೆ. ಇನ್ನೊಂದೆಡೆ ಹೆಂಡತಿಯ ಚಿನ್ನ ಅಡವಿಟ್ಟು ಕಾರು ಖರೀದಿಸಿದ್ದ ಚಾಲಕ ಕಂಗಾಲಾಗಿದ್ದಾನೆ. ಅಷ್ಟಕ್ಕೂ ಆಗಿದ್ದೇನು? ಯುವತಿ ಹಾಗೂ ಚಾಲಕ ಪಾರಾಗಿದ್ಹೇಗೆ? ಎನ್ನುವ ಬಗ್ಗೆ ಕಾರಿನ ಡ್ರೈವರ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಉಬರ್ ನಲ್ಲಿ ನನಗೆ ನಾಗೇಂದ್ರ ಎಂಬ ಹೆಸರಿನಲ್ಲಿ ಕಾರ್ ಬುಕ್ ಆಗಿದ್ದು, ಇಂದು (ಜೂನ್ 27) ಬೆಳಿಗ್ಗೆ 11 ಗಂಟೆಗೆ ಜಯನಗರದಲ್ಲಿ ಒಟ್ಟಿಗೆ ಕಾರ್ ಹತ್ತಿದ್ದರು. ಕಳ್ಳಂಬೆಳ್ಳ ವರೆಗೂ ಯಾವುದೇ ಸಮಸ್ಯೆ ಕಂಡಿಲ್ಲ. ಇಲ್ಲಿಗೆ ಬರುವ ಕೊಂಚ ದೂರದಲ್ಲೇ ಪೆಟ್ರೋಲ್ ಹಾಕಿಸಿಕೊಂಡೆ. ಈ ವೇಳೆ ಇಬ್ಬರು ವಾಶ್ ರೂಂಗೆ ಹೊಗಿ ಬಂದರು. ಜೊತೆಗೆ ಆಂಕೊಲದಿಂದ ನನಗೆ ಕರೆ ಬಂದಿದ್ದು, ಇದು ಕಿಡ್ನಾಪ್ ಅಂತ ಪೊಲೀಸರು ಮಾಹಿತಿ ಕೊಟ್ಟಿದ್ದರು. ಆ ನಂತರ ಹೊರಟಾಗ ಇಬ್ಬರ ನಡುವೆ ಗಲಾಟೆ ಆಗಿತ್ತು. ಆತ ಚಾಕುನಿಂದ ಆಕೆಗೆ ಚುಚ್ಚುತಿದ್ದ. ಇದರಿಂದ ನಾನು ಗಾಡಿ ಸೈಡ್​​ಗೆ ಹಾಕಿದೆ.ನಂತರ ಹೊಗುತಿದ್ದ ಬೈಕ್ ಗೆ ಕೈ ಒಡ್ಡಿ ಯುವತಿಯನ್ನು ಹತ್ತಿಸಿದೆ. ಆಗ ಆಕೆ ಹೊರಡುವಾಗ ಕಾರ್ ನಲ್ಲಿ ಬಾಂಬ್ ಇದೆ ಎಂದಳು. ನಂತರ ನಾನು ಕಾರ್ ಹತ್ತಿರ ಹೋದಾಗ ಆಗಲೇ ಒಂದು ಬಾಂಬ್ ಕೈನಲ್ಲಿ ಹಿಡಿದಿದ್ದ. ಅದನ್ನು ನಾನು ಆಚೆಗೆ ಕಿತ್ತು ಎಸೆದೆ. ನಂತರ ಮತ್ತೊಂದು ಅಚ್ಚಿಕೊಳ್ಳುತಿದ್ದ. ಆಗ ನಾನು ಅಲ್ಲಿಂದ ಓಡಿದೆ. ನಂತರ ಕಾರ್ ಬ್ಲಾಸ್ಟ್ ಆಗಿದೆ. ನನ್ನ ಹೆಂಡತಿ ವಡವೆ ಅಡ ಇಟ್ಟು ಕಾರು ಖರೀದಿ ಮಾಡಿದ್ದೆ ಸರ್ ಎಂದು ಅಳಲು ತೋಡಿಕೊಂಡಿದ್ದಾನೆ.

ಇದನ್ನೂ ಓದಿ: ಪ್ರೇಯಸಿ ಜೊತೆ ಕಾರಿನಲ್ಲಿ ಹೋಗುತ್ತಿರುವಾಗಲೇ ನಾಡಬಾಂಬ್​ ಸ್ಫೋಟಿಸಿದ ಪ್ರಿಯಕರ: ಆಗಿದ್ದೇನು?

Source link

ಪ್ರತಿದಿನ ಬ್ಲೂಬೆರ್ರಿ ತಿಂದರೆ ಆರೋಗ್ಯಕ್ಕೆ ಎಷ್ಟೊಂದು ಲಾಭವಿದೆ ಗೊತ್ತೆ? ವಿಜ್ಞಾನ ಹೇಳುವ ಅಚ್ಚರಿಯ ಸಂಗತಿಗಳು – Kannada News | Daily Blueberry Benefits For Heart, Brain And Overall Health

ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಆಹಾರದತ್ತ ಜನರ ಒಲವು ಹೆಚ್ಚುತ್ತಿದೆ. ಅಂತಹ ಸೂಪರ್‌ಫುಡ್‌ಗಳಲ್ಲಿ ಬ್ಲೂಬೆರ್ರಿ (Blueberry) ಪ್ರಮುಖ ಸ್ಥಾನ ಪಡೆದಿದೆ. ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಪೋಷಕಾಂಶ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಈ ಹಣ್ಣು ದೇಹಕ್ಕೆ ಹಲವು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಆದರೆ ಈ ಹಣ್ಣು ಸ್ವಲ್ಪ ದುಬಾರಿಯಾಗಿರುವುದರಿಂದ ಜನ ಇದನ್ನು ತಿನ್ನುವುದಕ್ಕೆ ಹಿಂದೇಟು ಹಾಕುತ್ತಾರೆ. ಸಾಮಾನ್ಯವಾಗಿ ಈ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನೀವು ಊಹಿಸಲೂ ಸಾಧ್ಯವಿಲ್ಲದಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹಾಗಾದರೆ ಇದರ ಸೇವನೆಯಿಂದ ಸಿಗುವ ಪ್ರಯೋಜನಗಳೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ವೃದ್ಧಾಪ್ಯವನ್ನು ನಿಧಾನಗೊಳಿಸುವ ಶಕ್ತಿ ಇದೆ;

ಬ್ಲೂಬೆರ್ರಿಯಲ್ಲಿರುವ ಆಂಥೋಸೈನಿನ್ (Anthocyanin) ಎಂಬ ಆಂಟಿಆಕ್ಸಿಡೆಂಟ್ ದೇಹದ ಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ. ಇದರಿಂದ ಚರ್ಮದ ಆರೋಗ್ಯ ಉತ್ತಮವಾಗಿದ್ದು, ವಯಸ್ಸಾಗುವ ಲಕ್ಷಣಗಳು ತಡವಾಗಿ ಕಾಣಿಸಿಕೊಳ್ಳುತ್ತದೆ. ಯಾವಾಗಲೂ ಯಂಗ್ ಆಗಿ ಕಾಣುವುದಕ್ಕೆ ಇದು ಒಂದು ಕಾರಣವಾಗಬಹುದು.

ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಬ್ಲೂಬೆರ್ರಿಯನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತನಾಳಗಳ ಕಾರ್ಯಕ್ಷಮತೆ ಸುಧಾರಿಸಬಹುದು. ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿಯಾಗುವುದರಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ.

ಇದನ್ನೂ ಓದಿ: ಡ್ರೈ ಫ್ರೂಟ್ಸ್ ತಿನ್ನುವುದಕ್ಕೆ ತುಂಬಾ ಇಷ್ಟಾನಾ? ಹಾಗಿದ್ರೆ ಇವುಗಳನ್ನು ತಿನ್ನುವ ಸರಿಯಾದ ವಿಧಾನದ ಬಗ್ಗೆ ತಿಳಿದುಕೊಳ್ಳಿ

ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸಬಹುದು

ಈ ಹಣ್ಣಿನಲ್ಲಿರುವ ಪೋಷಕಾಂಶಗಳು ಮೆದುಳಿನ ಕೋಶಗಳ ನಡುವಿನ ಸಂವಹನವನ್ನು ಉತ್ತಮಗೊಳಿಸಲು ಸಹಕಾರಿಯಾಗಬಹುದು. ಇದರಿಂದ ನೆನಪಿನ ಶಕ್ತಿ, ಏಕಾಗ್ರತೆ ಮತ್ತು ಚಿಂತನಾ ಸಾಮರ್ಥ್ಯ ಹೆಚ್ಚಾಗಬಹುದು.

ರಕ್ತದಲ್ಲಿನ ಸಕ್ಕರೆ ಮತ್ತು ತೂಕ ನಿಯಂತ್ರಣಕ್ಕೆ ಸಹಕಾರಿ

ಬ್ಲೂಬೆರ್ರಿಯಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಹಾಗೂ ಫೈಬರ್ ಅಧಿಕವಾಗಿರುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯವಾಗಬಹುದು. ಜೊತೆಗೆ ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ ನೀಡುವುದರಿಂದ ತೂಕ ನಿಯಂತ್ರಣಕ್ಕೂ ನೆರವಾಗುತ್ತದೆ.

ಹೇಗೆ ಸೇವಿಸಬೇಕು?

ತಾಜಾ ಬ್ಲೂಬೆರ್ರಿಯನ್ನು ನೇರವಾಗಿ ತಿನ್ನಬಹುದು. ಅಲ್ಲದೆ ಓಟ್ಸ್, ಮೊಸರು, ಸ್ಮೂದಿ ಅಥವಾ ಹಣ್ಣಿನ ಸಲಾಡ್‌ನಲ್ಲಿ ಸೇರಿಸಿಕೊಂಡರೂ ಉತ್ತಮ. ಆದರೆ ಮಧುಮೇಹ ಅಥವಾ ಇತರ ಆರೋಗ್ಯ ಸಮಸ್ಯೆಗಳಿರುವವರು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವ ಮೊದಲು ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯುವುದು ಉತ್ತಮ.

ಗಮನಿಸಿ: ಈ ಮಾಹಿತಿ ಸಾಮಾನ್ಯ ಆರೋಗ್ಯ ಮಾಹಿತಿಯಾಗಿದ್ದು. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಆರೋಗ್ಯ ಸಂಬಂಧಿತ ಯಾವುದೇ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೊಲೀಸರ ಮೇಲೆ ಹಲ್ಲೆ ಮಾಡಿ ನಟೋರಿಯಸ್ ಕ್ರಿಮಿನಲ್ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ – Kannada News | Mangaluru Crime: Notorious Altaf Hussain Escapes Police Custody After Assaulting police

ಮಂಗಳೂರು, ಜೂನ್​​ 27: ಪೊಲೀಸರ ಮೇಲೆ ಹಲ್ಲೆ ಮಾಡಿ ನಟೋರಿಯಸ್ ಕ್ರಿಮಿನಲ್ ಕೈಕೋಳದೊಂದಿಗೆ​​ ಪರಾರಿ ಆಗಿರುವಂತಹ ಘಟನೆ ಮಂಗಳೂರು ನಗರದ ರೋಜಾರಿಯೋ ಚರ್ಚ್ ರಸ್ತೆಯಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ಅಲ್ತಾಫ್ ಹುಸೇನ್ ಪರಾರಿಯಾದ ಕ್ರಿಮಿನಲ್. ಇತ ಪರಾರಿ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ವಾಹನ ಕಳ್ಳತನ, ಸರಗಳ್ಳತನ, ಸುಲಿಗೆ ಕೃತ್ಯದಲ್ಲಿ ಅಲ್ತಾಫ್ ಹುಸೇನ್​ ತೊಡಗಿಸಿಕೊಂಡಿದ್ದ. ಉತ್ತರ ಪ್ರದೇಶ ಮೂಲದ ಮಹಮ್ಮದ್ ಸಿದ್ದಿಕ್, ರವಿ ಬೌರ ಎಂಬ ಇಬ್ಬರು ಸಹಚರರ ಜೊತೆ ಸೇರಿ ಕೃತ್ಯವೆಸಗುತ್ತಿದ್ದ. ನಗರದ ಜಪ್ಪಿನಮೊಗರಿನಲ್ಲಿ ನಡೆದ ಸರಗಳ್ಳತನವನ್ನು ಅಲ್ತಾಫ್ ಹುಸೇನ್ ಗ್ಯಾಂಗ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೆಲ ದಿನಗಳ ಹಿಂದೆ ನಗರದ ಮೀನುಗಾರಿಕಾ ಬಂದರು ಪ್ರದೇಶಕ್ಕೆ ಗ್ಯಾಂಗ್ ವಾಪಸ್​​ ಬಂದ ಖಚಿತ ಮಾಹಿತಿ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಿ ಪಾಂಡೇಶ್ವರ ಠಾಣೆಗೆ ಪೊಲೀಸರು ಕರೆತರುತ್ತಿದ್ದರು. ಈ ವೇಳೆ ಪೊಲೀಸರನ್ನು ತಳ್ಳಿ ಹಲ್ಲೆ ಮಾಡಿ ಪರಾರಿ ಆಗಿದ್ದಾನೆ. ಸದ್ಯ ಆರೋಪಿ ಪತ್ತೆಯಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಭಾಮಾ ಹರೀಶ್ ಪುತ್ರ ನಿಧನ: ನಡೆದಿದ್ದೇನೆಂದು ವಿವರಿಸಿದ ಚಿಕ್ಕಪ್ಪ – Kannada News | Ba Ma Harish’s son Ullas passed away, his uncle gave information

ಖ್ಯಾತ ನಿರ್ಮಾಪಕ ಮತ್ತು ಕರ್ನಾಟಕ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಭಾಮಾ ಹರೀಶ್ (Ba Ma Harish) ಅವರ ಪುತ್ರ ಉಲ್ಲಾಸ್ ಇಂದು (ಜೂನ 27) ನಿಧನ ಹೊಂದಿದ್ದಾರೆ. ಉಲ್ಲಾಸ್ ಅವರಿಗೆ ಇನ್ನೂ 29 ವರ್ಷ ವಯಸ್ಸಾಗಿತ್ತು. ಶಿವಮೊಗ್ಗದ ಕೊಡಚಾದ್ರಿಗೆ ಚಾರಣಕ್ಕೆಂದು ಹೋಗಿದ್ದಾಗ ಅವರಿಗೆ ಹೃದಯಾಘಾತವಾಗಿದೆ. ಉಲ್ಲಾಸ್ ಆಕ್ಟಿಂಗ್ ಅಕಾಡೆಮಿ ಸಹ ನಡೆಸುತ್ತಿದ್ದ ಉಲ್ಲಾಸ್ ಅವರಿಗೆ ಡಿಸೆಂಬರ್ ತಿಂಗಳಲ್ಲಿ ಮದುವೆ ಸಹ ನಿಶ್ಚಯವಾಗಿತ್ತು. ಅಸಲಿಗೆ ಉಲ್ಲಾಸ್ ಸಾವು ಹೇಗಾಯ್ತು? ಕೊಡಚಾದ್ರಿಯಲ್ಲಿ ನಡೆದಿದ್ದೇನು? ಇತ್ಯಾದಿ ವಿವರಗಳನ್ನು ಭಾಮಾ ಹರೀಶ್ ಅವರ ಸಹೋದರ, ಉಲ್ಲಾಸ್ ಅವರ ಚಿಕ್ಕಪ್ಪ, ಮಾಧ್ಯಮಗಳ ಜೊತೆಗೆ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಮಭಕ್ತರೇ ಆತಂಕ ಬೇಡ, ನೀವು ನೀಡಿದ ಬೆಳ್ಳಿ ಇಟ್ಟಿಗೆ, ಒಡವೆಗಳು ಸುರಕ್ಷಿತ; ಅಯೋಧ್ಯೆ ಟ್ರಸ್ಟ್‌ನಿಂದ ಪತ್ರಿಕಾ ಪ್ರಕಟಣೆ – Kannada News | Ayodhya Ram Mandir Trust: Champat Rai, Mishra Resign; Trust Promises Inquiry and Safe Donations

ಅಯೋಧ್ಯೆ ಜೂ.27: ಇಡೀ ದೇಶವೇ ಅತ್ಯಂತ ಪವಿತ್ರ ಭಾವನೆಯಿಂದ ನೋಡುವ ಅಯೋಧ್ಯೆಯ ಶ್ರೀರಾಮ ಮಂದಿರದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿರುವ ಆಘಾತಕಾರಿ ಬೆಳವಣಿಗೆಗಳ ಬೆನ್ನಲ್ಲೇ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಹತ್ವದ ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದೆ. ಈ ವಿವಾದದ ಬೆನ್ನಲ್ಲೇ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಟ್ರಸ್ಟಿ ಅನಿಲ್ ಮಿಶ್ರಾ ತಮ್ಮ ಸ್ಥಾನಗಳಿಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ.

ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಟ್ರಸ್ಟ್, “ಕಳೆದ ಕೆಲವು ದಿನಗಳಿಂದ ಶ್ರೀರಾಮ ಮಂದಿರಕ್ಕೆ ಸಂಬಂಧಿಸಿದಂತೆ ವರದಿಯಾಗುತ್ತಿರುವ ಘಟನೆಗಳಿಂದ ನಮಗೆ ತೀವ್ರ ಆಘಾತವಾಗಿದೆ, ನೋವಾಗಿದೆ ಮತ್ತು ಆಳವಾದ ಸೌಹಾರ್ದತೆಗೆ ಧಕ್ಕೆಯಾಗಿದೆ. ಈ ಇಡೀ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಮತ್ತು ರಾಮಭಕ್ತರಿಗೆ ಸಂಪೂರ್ಣ ಭರವಸೆ ನೀಡಲು ನಾವು ಬದ್ಧರಾಗಿದ್ದೇವೆ” ಎಂದು ತಿಳಿಸಿದೆ.

ಇಲ್ಲಿದೆ ನೋಡಿ ಎಕ್ಸ್​ ಪೋಸ್ಟ್​:

ರಾಮಮಂದಿರ ಆಂದೋಲನ ಹಾಗೂ ಮಂದಿರ ನಿರ್ಮಾಣದ ಉಸ್ತುವಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಇಬ್ಬರೂ ಹಿರಿಯ ಪದಾಧಿಕಾರಿಗಳ ರಾಜೀನಾಮೆ ಪತ್ರಗಳು ಈಗಾಗಲೇ ಟ್ರಸ್ಟ್ ಕೈಸೇರಿದ್ದು, ಮುಂಬರುವ ಟ್ರಸ್ಟ್‌ನ ತುರ್ತು ಸಭೆಯಲ್ಲಿ ಈ ರಾಜೀನಾಮೆಗಳ ಅಂಗೀಕಾರ ಹಾಗೂ ಮುಂದಿನ ಕ್ರಮಗಳ ಕುರಿತು ಸುದೀರ್ಘ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ: ರಾಮ ಮಂದಿರ ಹಗರಣ: ಚಂಪತ್ ರಾಯ್ ವಿರುದ್ಧ ತಿರುಗಿದ ಎಸ್‌ಐಟಿ ವರದಿ, ರೋಚಕ ರಹಸ್ಯ ಬಿಚ್ಚಿಟ್ಟ ರಹಸ್ಯ ಕ್ಯಾಮೆರಾ

ಭಕ್ತರ ಚಿನ್ನ-ಬೆಳ್ಳಿ ಸಂಪೂರ್ಣ ಸುರಕ್ಷಿತ:

ಮಂದಿರದ ದೇಣಿಗೆ ಹಾಗೂ ವಸ್ತುಗಳ ಸುರಕ್ಷತೆಯ ಬಗ್ಗೆ ಎದ್ದಿರುವ ಅನುಮಾನಗಳಿಗೆ ತೆರೆ ಎಳೆದಿರುವ ಟ್ರಸ್ಟ್, “ಪ್ರಭು ಶ್ರೀರಾಮನಿಗೆ ಅರ್ಪಿಸಲು ಭಕ್ತರು ವೈಯಕ್ತಿಕವಾಗಿ ಟ್ರಸ್ಟ್ ಅಧಿಕಾರಿಗಳಿಗೆ ಹಸ್ತಾಂತರಿಸಿದ ಬೆಳ್ಳಿ ಇಟ್ಟಿಗೆಗಳು, ಚಿನ್ನಾಭರಣಗಳು ಸೇರಿದಂತೆ ಪ್ರತಿಯೊಂದು ವಸ್ತುವೂ ಅತ್ಯಂತ ಸುರಕ್ಷಿತವಾಗಿದೆ. ಪ್ರತಿಯೊಂದಕ್ಕೂ ಸಂಪೂರ್ಣ ಲೆಕ್ಕಪತ್ರವಿದ್ದು, ಭಕ್ತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಯಾವುದೇ ದುರದೃಷ್ಟಕರ ಪರಿಸ್ಥಿತಿ ಮರುಕಳಿಸದಂತೆ ನಾವು ಎಲ್ಲಾ ರೀತಿಯ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ದೇಶದ ಕೋಟ್ಯಂತರ ರಾಮಭಕ್ತರಿಗೆ ಭರವಸೆ ನೀಡಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version