ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್ – Kannada News | Maa Inti Bangaram Sequel Confirmed: Samantha’s Comeback After Huge Box Office Hit

ತೆಲುಗು ಚಿತ್ರರಂಗದಲ್ಲಿ ‘ಮಾ ಇಂಟಿ ಬಂಗಾರಂ’ ಸಿನಿಮಾ ಸದ್ಯ ಸೂಪರ್ ಹಿಟ್ ಆಗಿದೆ. ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ಈ ಸಿನಿಮಾ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಲಾಭ ತಂದುಕೊಟ್ಟ ಚಿತ್ರಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಒಂದು ಸಿನಿಮಾ ಹಿಟ್ ಆದರೆ ಸೀಕ್ವೆಲ್ ಮಾಡುವುದು ಸಿನಿಮಾ ಇಂಡಸ್ಟ್ರಿಯ ಹಳೇ ಟೆಕ್ನಿಕ್ ಆಗಿದೆ. ನಟಿ ಸಮಂತಾ (Samantha) ನಟನೆಯ ಈ ಚಿತ್ರ ಕೂಡ ಭಾರಿ ಲಾಭದಲ್ಲಿ ಇರುವುದರಿಂದ ಚಿತ್ರತಂಡ ಈಗ ಇದೇ ಟೆಕ್ನಿಕ್ ಬಳಸಲು ಮುಂದಾಗಿದೆ. ಸಮಂತಾ ಪತಿ ರಾಜ್ ನಿಡಿಮೋರು ಈ ರೀತಿಯ ಸುಳಿವು ನೀಡಿದ್ದಾರೆ.

ಸೀಕ್ವೆಲ್ ಮಾಡಲು ಒಂದು ಒಳ್ಳೆ ಕಥೆಯ ಲೈನ್ ಸಿಕ್ಕಿದೆ ಎಂದು ರಾಜ್ ಖಚಿತಪಡಿಸಿದ್ದಾರೆ. ಇನ್ನು ಎರಡು ವರ್ಷಗಳ ನಂತರ ಈ ಸಿನಿಮಾದ ಕೆಲಸಗಳು ಆರಂಭವಾಗಲಿವೆ. ಮೊದಲ ಭಾಗದಲ್ಲಿದ್ದ ಪಾತ್ರವರ್ಗ ಸೀಕ್ವೆಲ್​​ನಲ್ಲೂ ಮುಂದುವರಿಯಲಿದೆ. ಇದು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಮೊದಲ ಭಾಗದ ಕಥೆಗೆ ಚಿತ್ರತಂಡ ಈಗಾಗಲೇ ಒಂದು ಉತ್ತಮ ಅಂತ್ಯವನ್ನು ನೀಡಿದೆ. ಚಿತ್ರದ ವಿಲನ್ ಕೂಡ ಸತ್ತಿದ್ದಾನೆ. ಹೀಗಾಗಿ ಸಮಂತಾ ಕುಟುಂಬಕ್ಕೆ ಸದ್ಯಕ್ಕೆ ಯಾವುದೇ ಅಪಾಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಬ್ಬ ವಿಲನ್ ಎಂಟ್ರಿ ಕೊಟ್ಟರೆ ಕಥೆ ಸಪ್ಪೆಯಾಗುವ ಭೀತಿ ಇರುತ್ತದೆ. ಒಂದು ವೇಳೆ ಕಥೆ ವರ್ಕೌಟ್ ಆಗದಿದ್ದರೆ ಮೊದಲ ಭಾಗದ ಯಶಸ್ಸಿಗೂ ಧಕ್ಕೆ ಬರಬಹುದು. ಆದರೆ ರಾಜ್ ನಿಡಿಮೋರು ಅವರು ಸೀಕ್ವೆಲ್ ಮಾಡುವುದರಲ್ಲಿ ಎಕ್ಸ್‌ಪರ್ಟ್ ಆಗಿದ್ದಾರೆ. ಹೀಗಾಗಿ ಅವರು ಮೊದಲ ಭಾಗಕ್ಕಿಂತಲೂ ಉತ್ತಮವಾದ ಕಥೆಯೊಂದನ್ನು ತರಲಿದ್ದಾರೆ ಎಂಬ ಭರವಸೆ ಅಭಿಮಾನಿಗಳಲ್ಲಿದೆ.

ನಟಿ ಸಮಂತಾ ಸದ್ಯ ಗರ್ಭಿಣಿಯಾಗಿದ್ದಾರೆ. ಈ ಕಾರಣಕ್ಕೆ ಅವರು ತಮ್ಮ ಕೆಲಸಗಳಿಂದ ಸಣ್ಣ ವಿರಾಮ ತೆಗೆದುಕೊಂಡಿದ್ದಾರೆ. ಅವರ ಎಲ್ಲಾ ಶೂಟಿಂಗ್ ಕೆಲಸಗಳು ಸದ್ಯಕ್ಕೆ ಸ್ಥಗಿತಗೊಂಡಿವೆ. ಸಮಂತಾ ಅವರು ಇನ್ನೊಂದು ವರ್ಷದ ನಂತರ ಮತ್ತೆ ಬಣ್ಣದ ಪ್ರಪಂಚಕ್ಕೆ ಮರಳಲಿದ್ದಾರೆ. ಆ ಸಮಯದೊಳಗೆ ರಾಜ್ ನಿಡಿಮೋರು ಅವರು ಚಿತ್ರಕಥೆಯ ಕೆಲಸಗಳನ್ನು ಮುಗಿಸಿಕೊಳ್ಳಲಿದ್ದಾರೆ. ನಂತರ ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸಗಳು ಆರಂಭವಾಗಲಿವೆ. ಈ ಚಿತ್ರದಲ್ಲಿ ಗುಲ್ಶನ್ ದೇವಯ್ಯ, ಶ್ರೀಮುಖಿ, ದಿಗಂತ್, ಮಂಜು, ಗೌತಮಿ ಸೇರಿದಂತೆ ಹಲವರು ನಟಿಸಿದ್ದಾರೆ.

ಇದನ್ನೂ ಓದಿ: ಸಮಂತಾ ಸಿನಿಮಾಕ್ಕೆ ನಿರ್ಮಾಪಕರೇ ಇರಲಿಲ್ಲ, ಈಗ ಕೋಟಿಗಳಲ್ಲಿ ಗಳಿಕೆ

ಇನ್ನು ಚಿತ್ರದ ಕಲೆಕ್ಷನ್ ವಿಚಾರಕ್ಕೆ ಬಂದರೆ 8ನೇ ದಿನ ಈ ಸಿನಿಮಾ ಬರೋಬ್ಬರಿ 3,074 ಶೋಗಳಿಂದ 4.65 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ಗ್ರಾಸ್ ಕಲೆಕ್ಷನ್ 46.83 ಕೋಟಿ ರೂಪಾಯಿ ದಾಟಿದೆ. ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಕಲೆಕ್ಷನ್ ಸದ್ಯಕ್ಕೆ 40.50 ಕೋಟಿ ರೂಪಾಯಿ ಆಗಿದೆ. ವಿದೇಶದಲ್ಲೂ ಈ ಚಿತ್ರ 8ನೇ ದಿನಕ್ಕೆ 0.35 ಕೋಟಿ ರೂಪಾಯಿ ಗಳಿಸಿದೆ. ಇದರೊಂದಿಗೆ ವಿದೇಶದ ಒಟ್ಟು ಗ್ರಾಸ್ ಕಲೆಕ್ಷನ್ 18.30 ಕೋಟಿ ರೂಪಾಯಿ ತಲುಪಿದೆ. ಇವೆಲ್ಲವನ್ನೂ ಸೇರಿಸಿ ‘ಮಾ ಇಂಟಿ ಬಂಗಾರಂ’ ಚಿತ್ರದ ವಿಶ್ವಾದ್ಯಂತ ಒಟ್ಟು ಗಳಿಕೆ 65.13 ಕೋಟಿ ರೂಪಾಯಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಭಿಷೇಕ್ ಆರ್ಭಟಕ್ಕೆ ಧಗ್ಗರು ದಾಂಡಿಗರ ದಾಖಲೆ ಧೂಳೀಪಟ – Kannada News | Abhishek Sharma Creates New World Record in T20I

ಇದಕ್ಕೂ ಮುನ್ನ ಇಂತಹದೊಂದು ದಾಖಲೆಯನ್ನು ಹಲವು ದಾಂಡಿಗರು ಜಂಟಿಯಾಗಿ ಹಂಚಿಕೊಂಡಿದ್ದರು. ಭಾರತದ ಯುವರಾಜ್ ಸಿಂಗ್, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಇಂಗ್ಲೆಂಡ್‌ನ ಫಿಲ್ ಸಾಲ್ಟ್ ಮತ್ತು ನ್ಯೂಝಿಲೆಂಡ್‌ನ ಕಾಲಿನ್ ಮನ್ರೋ ಅವರು ತಲಾ 3 ಬಾರಿ ಐಸಿಸಿ ಪೂರ್ಣಾವಧಿ ಸದಸ್ಯ ರಾಷ್ಟ್ರಗಳ ವಿರುದ್ಧ 20 ಕ್ಕಿಂತ ಕಡಿಮೆ ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ದರು. (PC: ICC)

Source link

ಗ್ಯಾರಂಟಿ ಚಕ್ಕರ್‌ನಲ್ಲಿ ಆರೋಗ್ಯ ಇಲಾಖೆ ಐಸಿಯುಗೆ! ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ಗರಂ – Kannada News | R Ashoka Slams Congress Government Over Delayed Salary for Namma Clinic Staff

ಆರ್. ಅಶೋಕ

ಬೆಂಗಳೂರು, ಜೂನ್ 27: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜಕೀಯ ವಾಗ್ದಾಳಿ ತೀವ್ರಗೊಳಿಸಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashoka), ಆರೋಗ್ಯ ಇಲಾಖೆಯ ಅವ್ಯವಸ್ಥೆ ಹಾಗೂ ‘ನಮ್ಮ ಕ್ಲಿನಿಕ್’ ಸಿಬ್ಬಂದಿಯ ವೇತನ ವಿಳಂಬವನ್ನು ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯದ ಆರೋಗ್ಯ ಇಲಾಖೆಯೇ ಇಂದು ಐಸಿಯು ತಲುಪಿದೆ ಎಂದು ಟೀಕಿಸಿದ್ದಾರೆ.

ಆರೋಗ್ಯ ಇಲಾಖೆ ಸಂಪೂರ್ಣ ಐಸಿಯುನಲ್ಲಿದೆ: ಆರ್. ಅಶೋಕ್

ರಾಜ್ಯದಲ್ಲಿ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಹಾಗೂ ಸರ್ಕಾರ ಬದಲಾದರೂ ಸಹ ಆರೋಗ್ಯ ಇಲಾಖೆಯ ಹಣೆಬರಹ ಮಾತ್ರ ಬದಲಾಗಿಲ್ಲ ಎಂದು ಅಶೋಕ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ, ಅಸಮರ್ಥತೆ ಮತ್ತು ಜನವಿರೋಧಿ ನೀತಿಗಳಿಂದಾಗಿ ಸಾರ್ವಜನಿಕ ಆರೋಗ್ಯ ಕ್ಷೇತ್ರ ಸಂಪೂರ್ಣ ಹದಗೆಟ್ಟಿದೆ. ಜೀವ ಉಳಿಸಬೇಕಾದ ಇಲಾಖೆಯಲ್ಲೇ ಬರೋಬ್ಬರಿ 35,196 ಹುದ್ದೆಗಳು ಖಾಲಿ ಇವೆ ಎಂದು ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಸರ್ಕಾರಿ ಆಸ್ಪತ್ರೆಗಳು ಕೇವಲ ಹೆಸರಿಗಷ್ಟೇ ಉಳಿದಿದ್ದು, ಸಮಸ್ಯೆಗಳ ಆಗರಗಳಾಗಿವೆ. ರಾತ್ರಿ ವೇಳೆ ತುರ್ತು ಚಿಕಿತ್ಸೆಗೆ ಬರುವ ರೋಗಿಗಳನ್ನು ನೋಡಿಕೊಳ್ಳುವವರೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕನಿಷ್ಠ ಪ್ಯಾರಾಸಿಟಮಾಲ್ ಮಾತ್ರೆಗಳೂ ಸಿಗದೆ ಬಡ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ದುಸ್ಥಿತಿ ಎದುರಾಗಿದೆ ಎಂದು ಅವರು ರಾಜ್ಯದ ದುಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.

‘ನಮ್ಮ ಕ್ಲಿನಿಕ್’ ಸಿಬ್ಬಂದಿಗೆ 3 ತಿಂಗಳಿಂದ ಸಂಬಳವಿಲ್ಲ!

ಬಡವರು ಹಾಗೂ ಕೂಲಿ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಆರಂಭವಾಗಿದ್ದ ‘ನಮ್ಮ ಕ್ಲಿನಿಕ್’ ಯೋಜನೆಗೆ ಕಾಂಗ್ರೆಸ್ ಸರ್ಕಾರ ಗರ ಬಡಿದಿದೆ ಎಂದು ಅಶೋಕ್ ಟೀಕಿಸಿದ್ದಾರೆ. ಇಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿಗೆ ಕಳೆದ 3 ತಿಂಗಳಿಂದ ವೇತನವನ್ನೇ ನೀಡಿಲ್ಲ. ದುಡಿಯುವ ಕೈಗಳಿಗೆ ಸಂಬಳ ಕೊಡಲೂ ಸಾಧ್ಯವಾಗದ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಾದರೂ ಇದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಗ್ಯಾರಂಟಿಗಳ ಹೆಸರಲ್ಲಿ ಖಜಾನೆ ಖಾಲಿ ಮಾಡಿ, ಈಗ ಆರೋಗ್ಯ ಇಲಾಖೆಯನ್ನೇ ಐಸಿಯು ಅಲ್ಲಿ ಇರಿಸುವ ಪರಿಸ್ಥಿತಿ ತಂದಿರುವುದೇ ಕಾಂಗ್ರೆಸ್ ಸರ್ಕಾರದ ನಿಜವಾದ ಸಾಧನೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ ಕ್ರಾಸ್ ವೋಟಿಂಗ್ ಮಾಹಿತಿ ನೀಡಿದ ಬಿಜೆಪಿ ನಾಯಕರಿಗೆ ಹೈಕಮಾಂಡ್​ನಿಂದ ಸಾಲು ಸಾಲು ಪ್ರಶ್ನೆಗಳು!

ಬಿಜೆಪಿ ಉಗ್ರ ಹೋರಾಟದ ಎಚ್ಚರಿಕೆ

ಮುಖ್ಯಮಂತ್ರಿಗಳೇ, ತಕ್ಷಣವೇ ಇಲಾಖೆಯಲ್ಲಿ ಖಾಲಿ ಇರುವ 35,196 ಹುದ್ದೆಗಳನ್ನು ಭರ್ತಿ ಮಾಡಿ ಹಾಗೂ ‘ನಮ್ಮ ಕ್ಲಿನಿಕ್’ ಸಿಬ್ಬಂದಿಯ ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡಿ. ಇಲ್ಲದಿದ್ದರೆ ಬಡವರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಈ ಜನವಿರೋಧಿ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಆರ್. ಅಶೋಕ್ ಎಚ್ಚರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜಗದ್ಧಾತ್ರಿ’ ಪ್ರೋಮೋ: ಆ್ಯಕ್ಷನ್ ಅವತಾರದಲ್ಲಿ ಎಂಟ್ರಿ ಕೊಟ್ಟ ಮೋಕ್ಷಿತಾ ಪೈ-ವಿಜಯ್ ಸೂರ್ಯ  – Kannada News | Jagaddhatri: Zee Kannada’s New Action Serial with Mokshitha Pai and Vijay Suriya

ಕನ್ನಡ ಕಿರುತೆರೆಯಲ್ಲಿ ಸದಾ ವಿಭಿನ್ನ ಕಥೆಗಳ ಮೂಲಕ ಗಮನ ಸೆಳೆಯುವ ಜೀ ಕನ್ನಡ ವಾಹಿನಿ, ಈಗ ಮತ್ತೊಂದು ಭಾವುಕ ಹಾಗೂ ಆ್ಯಕ್ಷನ್ ಪ್ರಧಾನ ಸೀರಿಯಲ್ ಅನ್ನು ಹೊತ್ತು ತರುತ್ತಿದೆ. ಅದೇ ‘ಜಗದ್ಧಾತ್ರಿ’. ಮೋಕ್ಷಿತಾ ಪೈ (Mokshitha Pai) ಹಾಗೂ ವಿಜಯ್ ಸೂರ್ಯ ಇದರಲ್ಲಿ ಮುಖ್ಯಭೂಮಿಕೆಯಲ್ಲಿ ಇದ್ದಾರೆ. ಇತ್ತೀಚೆಗಷ್ಟೇ ರಿಲೀಸ್ ಆಗಿರುವ ಈ ಧಾರಾವಾಹಿಯ ಪ್ರೋಮೋ ಸಖತ್ ಇಂಟರೆಸ್ಟಿಂಗ್ ಆಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ ಎಂದರೂ ತಪ್ಪಾಗಲಾರದು. ಈ ಧಾರಾವಾಹಿಯ ಪ್ರಸಾರ ದಿನಾಂಕಕ್ಕಾಗಿ ವೀಕ್ಷಕರು ಕಾದಿದ್ದಾರೆ.

‘ಮನೆ ಬೆಳಗೋ ದೀಪ.. ಅಧರ್ಮ ಅಳಿಸೋ ಜ್ವಾಲೆ!’

ಇದು ಈ ಧಾರಾವಾಹಿಯ ಮುಖ್ಯ ಥೀಮ್ ಆಗಿದೆ. ಪ್ರೋಮೋದ ಆರಂಭದಲ್ಲಿ ನಾಯಕಿ ಜಗದ್ಧಾತ್ರಿ ಮನೆಯಲ್ಲಿ ಎಲ್ಲರ ಮಾತು ಕೇಳಿಕೊಂಡು, ದೇವರಿಗೆ ಪೂಜೆ ಮಾಡುತ್ತಾ, ಅತ್ಯಂತ ಸಾತ್ವಿಕವಾಗಿ ಕಾಣಿಸಿಕೊಳ್ಳುತ್ತಾಳೆ. ಮನೆಯವರು ಆಕೆಯನ್ನು ದರಿದ್ರ ಎಂದು ಬೈದರೂ ಸುಮ್ಮನಿರುತ್ತಾಳೆ. ಆದರೆ, ಹೊರಗಿನ ಪ್ರಪಂಚದಲ್ಲಿ ಅಧರ್ಮ, ಅನ್ಯಾಯ ನಡೆದಾಗ ಅದೇ ಜಗದ್ಧಾತ್ರಿ ಮಹಾಕಾಳಿಯಂತೆ ರೌಡಿಗಳ ಹೆಡೆಮುರಿ ಕಟ್ಟಲು ಜ್ವಾಲೆಯಾಗಿ ಧುಮುಕುತ್ತಾಳೆ.

ಮೋಕ್ಷಿತಾ ಪೈ-ವಿಜಯ್ ಸೂರ್ಯ ಜುಗಲ್ಬಂದಿ

‘ಪಾರು’ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ನಟಿ ಮೋಕ್ಷಿತಾ ಪೈ ಈ ಸೀರಿಯಲ್‌ನಲ್ಲಿ ಜಗದ್ಧಾತ್ರಿ ಆಗಿ ಕಥಾನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಸೀರೆಯಲ್ಲಿ ಎಷ್ಟು ಮುದ್ದಾಗಿ ಕಾಣುತ್ತಾರೋ, ಅಷ್ಟೇ ಭೀಕರವಾಗಿ ಬೈಕ್ ಸ್ಟಂಟ್ ಹಾಗೂ ಆ್ಯಕ್ಷನ್ ಸೀನ್‌ಗಳಲ್ಲಿ ಅಬ್ಬರಿಸಿದ್ದಾರೆ. ಇನ್ನು ಇವರಿಗೆ ಜೋಡಿಯಾಗಿ ಕಿರುತೆರೆಯ ‘ಡಿಂಪಲ್ ಕಿಂಗ್’ ವಿಜಯ್ ಸೂರ್ಯ ಹೀರೊ ಆಗಿ ಎಂಟ್ರಿ ಕೊಟ್ಟಿದ್ದಾರೆ. ಪ್ರೋಮೋದಲ್ಲಿ ವಿಜಯ್ ಸೂರ್ಯ ಕೂಡ ಸಖತ್ ಮಾಸ್ ಆಗಿ ಗನ್ ಹಿಡಿದು ಫೈಟ್ ಮಾಡುತ್ತಾ ಎಂಟ್ರಿ ನೀಡಿದ್ದು, ಇವರಿಬ್ಬರ ಕಾಂಬಿನೇಷನ್ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.

ಇದನ್ನೂ ಓದಿ: ಜೀ ಕನ್ನಡದ ಹೊಸ ಧಾರಾವಾಹಿಗೆ ನಾಯಕಿಯಾದ ಮೋಕ್ಷಿತಾ ಪೈ

ಪ್ರೋಮೋದ ಹೈಲೈಟ್ಸ್:

ನಾಯಕಿ ಕಿವಿಗೆ ಹಿಯರಿಂಗ್ ಡಿವೈಸ್ ಹಾಕಿಕೊಂಡು, ರೌಡಿಗಳ ಕೈಯಿಂದ ಮಗುವನ್ನು ರಕ್ಷಿಸುವ ಸೀನ್ ಹೈಲೈಟ್ ಆಗಿದೆ. ಬೈಕ್ ಚೇಸಿಂಗ್, ಫೈಟಿಂಗ್ ಹಾಗೂ ಸ್ಕೈ-ಡೈವಿಂಗ್ ರೇಂಜ್‌ನ ಸಾಹಸಗಳು ಪ್ರೋಮೋದಲ್ಲಿವೆ. ನಾಯಕ ಮತ್ತು ನಾಯಕಿ ಇಬ್ಬರೂ ಯಾವುದೋ ಸೀಕ್ರೆಟ್ ಮಿಷನ್‌ನಲ್ಲಿ ಇರುವ ತನಿಖಾಧಿಕಾರಿಗಳಂತೆ ಕಾಣುತ್ತಿದ್ದಾರೆ.

ಒಟ್ಟಿನಲ್ಲಿ, ಕೌಟುಂಬಿಕ ಡ್ರಾಮಾ ಜೊತೆಗೆ ಹೈ-ವೋಲ್ಟೇಜ್ ಆ್ಯಕ್ಷನ್ ಕಥಾಹಂದರ ಹೊಂದಿರುವ ‘ಜಗದ್ಧಾತ್ರಿ’ ಸದ್ಯದಲ್ಲೇ ಜೀ ಕನ್ನಡದಲ್ಲಿ ಪ್ರಸಾರವಾಗಲಿದ್ದು, ಸ್ಯಾಂಡಲ್‌ವುಡ್ ಸಿನಿಮಾ ರೇಂಜ್‌ಗೆ ಹೈಪ್ ಕ್ರಿಯೇಟ್ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Venezuela Earthquake: ವೆನೆಜುವೆಲಾದಲ್ಲಿ ಮತ್ತೆ ನಡುಗಿದ ಭೂಮಿ, ಅವಳಿ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 920ಕ್ಕೆ ಏರಿಕೆ – Kannada News | Venezuela Earthquakes: Death Toll Hits 920 After New 4.9 Magnitude Tremor

ಕ್ಯಾರಕಾಸ್, ಜೂನ್ 27: ಅವಳಿ ಭೂಕಂಪ(Earthquake)ಗಳು ಇಡೀ ದೇಶವನ್ನೇ ಸ್ಮಶಾನವಾಗಿಸಿದ ಕೇವಲ ಎರಡು ದಿನಗಳ ಬೆನ್ನಲ್ಲೇ, ವೆನೆಜುವೆಲಾದ ಉತ್ತರ ಕರಾವಳಿಯಲ್ಲಿ ಶುಕ್ರವಾರ 4.9 ತೀವ್ರತೆಯ ಮತ್ತೊಂದು ಹೊಸ ಭೂಕಂಪ ಸಂಭವಿಸಿದೆ. ಈಗಾಗಲೇ ಭಾರಿ ಸಾವು-ನೋವುಗಳಿಂದ ತತ್ತರಿಸಿ ಹೋಗಿರುವ ಜನರಲ್ಲಿ ಈ ಇತ್ತೀಚಿನ ಕಂಪನವು ಹೊಸ ಆತಂಕ ಹಾಗೂ ಭೀತಿಯನ್ನು ಹುಟ್ಟುಹಾಕಿದೆ.

ಕ್ಯಾರಕಾಸ್ ಮತ್ತು ಮರಕೇಯಲ್ಲೂ ಕಂಪನದ ಅನುಭವ
ಭೂಕಂಪ ಟ್ರ್ಯಾಕಿಂಗ್ ಸಂಸ್ಥೆ EMSC ಪ್ರಕಾರ, ಈ ಹೊಸ ಭೂಕಂಪದ ಕೇಂದ್ರಬಿಂದು ಮರಕೇ ನಗರದಿಂದ ವಾಯುವ್ಯಕ್ಕೆ ಸುಮಾರು 61 ಕಿಲೋಮೀಟರ್ ದೂರದಲ್ಲಿ ದಾಖಲಾಗಿದೆ. ಮರಕೇ ಹಾಗೂ ದೇಶದ ರಾಜಧಾನಿ ಕ್ಯಾರಕಾಸ್ ಎರಡರಲ್ಲೂ ಭೂಮಿ ಜೋರಾಗಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಹೊಸ ಕಂಪನದಿಂದ ಉಂಟಾದ ಹೆಚ್ಚುವರಿ ಹಾನಿಯ ವಿವರಗಳು ಇನ್ನೂ ಲಭ್ಯವಾಗಿಲ್ಲದಿದ್ದರೂ, ಇದು ಸದ್ಯ ನಡೆಯುತ್ತಿರುವ ರಕ್ಷಣಾ ಕಾರ್ಯವನ್ನು ಮತ್ತಷ್ಟು ಕಠಿಣಗೊಳಿಸಿದೆ.

920ಕ್ಕೆ ಏರಿದ ಸಾವಿನ ಸಂಖ್ಯೆ, 3,300ಕ್ಕೂ ಹೆಚ್ಚು ಜನರಿಗೆ ಗಾಯ
ಕಳೆದ ಬುಧವಾರ ತಡರಾತ್ರಿ ವೆನೆಜುವೆಲಾದಲ್ಲಿ 7.2 ಮತ್ತು 7.5 ರಷ್ಟು ಭೀಕರ ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿದ್ದವು. ಈ ಮಹಾ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಶುಕ್ರವಾರದ ವೇಳೆಗೆ 920ಕ್ಕೆ ಏರಿಕೆಯಾಗಿದೆ. 3,300 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

ಪ್ರೀತಿಪಾತ್ರರನ್ನು ಕಳೆದುಕೊಂಡ ಹತಾಶ ನಾಗರಿಕರು ಸ್ವತಃ ತಾವೇ ಮನೆಗಳ ಅವಶೇಷಗಳನ್ನು ಅಗೆದು ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ದುರಂತದ ತೀವ್ರತೆಗೆ ಹೋಲಿಸಿದರೆ ಸ್ಥಳೀಯ ಸರ್ಕಾರಿ ರಕ್ಷಣಾ ತಂಡಗಳ ಕೊರತೆ ಎದ್ದುಕಾಣುತ್ತಿದೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.
ಭೂಕಂಪ ನಡೆದ ಮೊದಲ 48 ರಿಂದ 72 ಗಂಟೆಗಳನ್ನು ಬದುಕುಳಿದವರನ್ನು ಜೀವಂತವಾಗಿ ಹೊರತೆಗೆಯಲು ‘ಸುವರ್ಣ ಸಮಯ’ ಎಂದು ಪರಿಗಣಿಸಲಾಗುತ್ತದೆ. ಸಿಕ್ಕಿಬಿದ್ದವರಿಗೆ ಆಹಾರ ಮತ್ತು ನೀರು ಸಿಗದಿದ್ದರೆ ಅವರ ಬದುಕುವ ಸಾಧ್ಯತೆ ಕ್ಷೀಣಿಸಲಿದೆ.

ಮತ್ತಷ್ಟು ಓದಿ: ವೆನೆಜುವೆಲಾದಲ್ಲಿ ಒಂದು ನಿಮಿಷದ ಅಂತರದಲ್ಲಿ ಎರಡೆರಡು ಪ್ರಬಲ ಭೂಕಂಪ, ಕಟ್ಟಡಗಳ ಕುಸಿತ, ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಶಂಕೆ

ವೆನೆಜುವೆಲಾದ ಈ ಬಿಕ್ಕಟ್ಟಿಗೆ ಸ್ಪಂದಿಸಿರುವ ವಿಶ್ವದ ಎರಡು ಡಜನ್‌ಗಿಂತಲೂ ಹೆಚ್ಚು ದೇಶಗಳ ಅಂತಾರಾಷ್ಟ್ರೀಯ ರಕ್ಷಣಾ ತಂಡಗಳು ಈಗಾಗಲೇ ವೆನೆಜುವೆಲಾಕ್ಕೆ ಧಾವಿಸಿವೆ.

ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರು ಅಂತಾರಾಷ್ಟ್ರೀಯ ನೆರವನ್ನು ಸ್ವಾಗತಿಸಿದ್ದು, ಸರ್ಕಾರವು ಸಂತ್ರಸ್ತರಿಗೆ ಆಹಾರ ಮತ್ತು ನೀರನ್ನು ವಿತರಿಸಲು ದಣಿವರಿಯಿಲ್ಲದೆ ಕೆಲಸ ಮಾಡುತ್ತಿದೆ ಎಂದು ಭರವಸೆ ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಅತ್ಯಂತ ಹಾನಿಗೊಳಗಾದ ‘ಲಾ ಗುಯಿರಾ’ ನಗರವನ್ನು ಸಂಪೂರ್ಣವಾಗಿ ಮಿಲಿಟರಿ ವಶಕ್ಕೆ ಒಪ್ಪಿಸಲಾಗಿದೆ. ಆದಾಗ್ಯೂ, ಈಗ ಸಿಗುತ್ತಿರುವ ಪರಿಹಾರವು ತಮಗೆ ಬೇಕಾಗಿರುವ ಅಗತ್ಯದ ಒಂದು ಸಣ್ಣ ಭಾಗ ಮಾತ್ರ ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಿಲೀಸ್​​ಗೆ 7 ತಿಂಗಳಿರುವಾಗಲೇ ‘ವಾರಣಾಸಿ’ ಶೂಟ್ ಪೂರ್ಣಗೊಳಿಸಲಿದ್ದಾರೆ ರಾಜಮೌಳಿ – Kannada News | SS Rajamouli’s Varanasi Mahesh Babu Film Shoot Nears End, Shooting Completes before September

‘ಗುಂಟೂರು ಖಾರಮ್’ ಚಿತ್ರದ ನಂತರ, ಸೂಪರ್ ಸ್ಟಾರ್ ಮಹೇಶ್ ಬಾಬು ಈಗ ‘ವಾರಣಾಸಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಆರ್​​ಆರ್​ಆರ್’ ನಂತಹ ಜಾಗತಿಕ ಸೂಪರ್ ಹಿಟ್ ಚಿತ್ರದ ಬಳಿಕ ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ (SS Rajamouli) ಕೈಗೆತ್ತಿಕೊಂಡಿರುವ ಬಿಗ್ ಪ್ರಾಜೆಕ್ಟ್ ಇದಾಗಿದೆ. ಹೀಗಾಗಿ, ಈ ಪ್ಯಾನ್-ವರ್ಲ್ಡ್ ಸಿನಿಮಾ ಮೇಲೆ ಭಾರಿ ನಿರೀಕ್ಷೆಗಳು ಸೃಷ್ಟಿಯಾಗಿವೆ. ಅದಕ್ಕೆ ತಕ್ಕಂತೆ, ಈ ಚಿತ್ರದಿಂದ ಇಲ್ಲಿಯವರೆಗೆ ಬಿಡುಗಡೆಯಾಗಿರುವ ಪೋಸ್ಟರ್‌ಗಳು ಮತ್ತು ಗ್ಲಿಂಪ್ಸ್‌ಗಳು ಸಿನಿಪ್ರಿಯರಲ್ಲಿ ಭಾರಿ ಹೈಪ್ ಕ್ರಿಯೇಟ್ ಮಾಡಿವೆ. ಈಗ ಸೆಪ್ಟೆಂಬರ್​​ನಲ್ಲಿ ಸಿನಿಮಾ ಶೂಟ್ ಮುಗಿಯಲಿದೆ.

ಭಾರಿ ಬಜೆಟ್‌ನಲ್ಲಿ ಅದ್ದೂರಿಯಾಗಿ ತಯಾರಾಗುತ್ತಿರುವ ಈ ಅತ್ಯಂತ ಪ್ರತಿಷ್ಠಿತ ಚಿತ್ರದಲ್ಲಿ ಜಾಗತಿಕ ಸುಂದರಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಲ್ಲದೆ, ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅವರು ‘ಕುಂಭ’ ಎಂಬ ಶಕ್ತಿಶಾಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ, ಹಲವು ವರ್ಷಗಳ ನಂತರ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಮತ್ತೊಮ್ಮೆ ರಾಜಮೌಳಿ ಅವರ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.

ಪ್ರಸ್ತುತ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ನಿರ್ದೇಶಕ ರಾಜಮೌಳಿ ಅವರು ಸಿನಿಮಾದ ಬಗ್ಗೆ ದೊಡ್ಡ ಅಪ್‌ಡೇಟ್ ಒಂದನ್ನು ನೀಡಿದ್ದಾರೆ. ‘ನಾವು ವಾರಣಾಸಿಯಲ್ಲಿ ಪ್ರಮುಖ ಚಿತ್ರೀಕರಣದ ಭಾಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಚಿತ್ರದಲ್ಲಿ ಬರುವ ಎಲ್ಲಾ ಬೃಹತ್ ದೃಶ್ಯ ವೈಭವದ ಆಕ್ಷನ್ ಸೀಕ್ವೆನ್ಸ್‌ಗಳನ್ನು ಈಗಾಗಲೇ ಶೂಟ್ ಮಾಡಲಾಗಿದೆ. ಪ್ರಸ್ತುತ, ಕಥೆಗೆ ಪೂರಕವಾಗಿರುವ ಸಣ್ಣ ಸಣ್ಣ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಉಳಿದ ಭಾಗವನ್ನು ಪೂರ್ಣಗೊಳಿಸಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಸದ್ಯದ ವೇಳಾಪಟ್ಟಿಯ ಪ್ರಕಾರ, ಸೆಪ್ಟೆಂಬರ್ ಅಥವಾ ಅಕ್ಟೋಬರ್ ಮೊದಲ ವಾರದೊಳಗೆ ಇಡೀ ಸಿನಿಮಾದ ಶೂಟಿಂಗ್ ಮುಕ್ತಾಯವಾಗಲಿದೆ’ ಎಂದು ರಾಜಮೌಳಿ ತಿಳಿಸಿದ್ದಾರೆ.

ಇದನ್ನೂ ಓದಿ: ‘ವಾರಣಾಸಿ’ ಚಿತ್ರೀಕರಣದ ಬಾಕಿ ಇರುವುದೆಷ್ಟು? ಮಾಹಿತಿ ನೀಡಿದ ರಾಜಮೌಳಿ

‘ನಮ್ಮ ಕಣ್ಣುಗಳು ಸಾಮಾನ್ಯವಾಗಿ ಸಿನಿಮಾ ಸ್ಕೋಪ್ ಸ್ವರೂಪದಲ್ಲಿ ಚಿತ್ರೀಕರಣ ಮಾಡಲು ಒಗ್ಗಿಕೊಂಡಿವೆ ಮತ್ತು ನನಗೂ ಅದು ಇಷ್ಟ. ಆದಾಗ್ಯೂ, ಐಮ್ಯಾಕ್ಸ್ ಸ್ವರೂಪದಲ್ಲಿ ‘ವಾರಣಾಸಿ’ ಚಿತ್ರದ ಕಥೆ ಅದ್ಭುತವಾಗಿ ಕಾಣಿಸಲಿದೆ ಎಂದು ನಾವು ಮೊದಲಿನಿಂದಲೂ ಯೋಚಿಸುತ್ತಿದ್ದೆವು. ಆದರೆ, ಈ ತಾಂತ್ರಿಕ ಸ್ವರೂಪಕ್ಕಾಗಿ ನಾವು ಕಥೆಯಲ್ಲೇನೂ ಬದಲಾವಣೆ ಮಾಡಿಲ್ಲ. ಬದಲಿಗೆ ಸಣ್ಣಪುಟ್ಟ ಹೊಂದಾಣಿಕೆಗಳನ್ನು ಮಾತ್ರ ಮಾಡಿದ್ದೇವೆ. ಐಮ್ಯಾಕ್ಸ್ ಮತ್ತು ಸಿನಿಮಾ ಸ್ಕೋಪ್ ಎರಡಕ್ಕೂ ಸರಿಹೊಂದುವಂತೆ ದೃಶ್ಯಗಳನ್ನು ರೂಪಿಸುತ್ತಿದ್ದೇವೆ’ ಎಂದು ರಾಜಮೌಳಿ ಹೇಳಿದ್ದಾರೆ. ಈ ಬಹುನಿರೀಕ್ಷಿತ ‘ವಾರಣಾಸಿ’ ಚಿತ್ರವು ಏಪ್ರಿಲ್ 7, 2027 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ ಶ್ರೇಯಸ್ ಅಯ್ಯರ್ ಖಡಕ್ ಸೂಚನೆ..! – Kannada News | Shreyas iyer Post match interview after IND vs IRE Match

ಭಾರತ ಮತ್ತು ಐರ್ಲೆಂಡ್ ನಡುವಣ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ ಮುಗ್ಗರಿಸಿದೆ. ಬೆಲ್​ಫಾಸ್ಟ್​​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 182 ರನ್​ಗಳು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 148 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಐರ್ಲೆಂಡ್ ತಂಡ 34 ರನ್​ಗಳ ಐತಿಹಾಸಿಕ ಗೆಲುವು ದಾಖಲಿಸಿದೆ. ಇತ್ತ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ಐರ್ಲೆಂಡ್ ವಿರುದ್ಧ ಸೋಲೊಪ್ಪಿಕೊಂಡಿದೆ.

ಈ ಸೋಲಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾದ ನೂತನ ನಾಯಕ ಶ್ರೇಯಸ್ ಅಯ್ಯರ್, ಬೌಲಿಂಗ್ ವಿಭಾಗದಲ್ಲಿನ ತಪ್ಪುಗಳು ಹಾಗೂ ಮಧ್ಯದ ಓವರ್‌ಗಳಲ್ಲಿ ರನ್ ನಿಯಂತ್ರಿಸಲು ವಿಫಲವಾದದ್ದೇ ಸೋಲಿಗೆ ಪ್ರಮುಖ ಕಾರಣ ಎಂದಿದ್ದಾರೆ.

ನಾವು ಆರಂಭದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದೆವು. ಪಿಚ್‌ನಿಂದ ಸಿಕ್ಕ ಸ್ವಿಂಗ್ ಮತ್ತು ಲ್ಯಾಟರಲ್ ಮೂವ್‌ಮೆಂಟ್ ಬಳಸಿಕೊಂಡು ನಮ್ಮ ಬೌಲರ್​ಗಳು 36 ರನ್‌ಗಳಿಗೆ 3 ವಿಕೆಟ್ ಉರುಳಿಸಿ ಐರ್ಲೆಂಡ್ ತಂಡಕ್ಕೆ ಆಘಾತ ನೀಡಿದ್ದರು. ಆದರೆ, ಆ ಬಳಿಕ ಭಾರತ ಪಂದ್ಯದ ಮೇಲಿನ ಹಿಡಿತ ಕೈಬಿಟ್ಟಿತು.

ಉತ್ತಮ ಆರಂಭ ಪಡೆದರೂ, ನಮ್ಮ ಬೌಲರ್​ಗಳು ಮಧ್ಯದ ಓವರ್‌ಗಳಲ್ಲಿ ಸರಿಯಾದ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ವಿಫಲರಾದರು. ಈ ಮೈದಾನದ ಮುಂಭಾಗದ ಬೌಂಡರಿಗಳು ಚಿಕ್ಕದಾಗಿವೆ ಎಂದು ಎಲ್ಲರಿಗೂ ಗೊತ್ತಿದೆ. ಇದಾಗ್ಯೂ ನಮ್ಮ ಬೌಲರ್​ಗಳು ನೇರವಾಗಿ ಶಾಟ್ ಬಾರಿಸಲು ಹೆಚ್ಚಿನ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಶ್ರೇಯಸ್ ಅಯ್ಯರ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಪಂದ್ಯದಲ್ಲಿ ನಮಗೆ ಸಿಕ್ಕ ಆರಂಭವನ್ನು ನೋಡಿದರೆ, ಐರ್ಲೆಂಡ್ ತಂಡವನ್ನು 140 ರನ್‌ಗಳ ಒಳಗೆ ನಿಯಂತ್ರಿಸಬೇಕಿತ್ತು. ಹಾಗಾಗಿದ್ದಲ್ಲಿ ಈ ಪಿಚ್‌ನಲ್ಲಿ ಆ ಮೊತ್ತವನ್ನು ಸುಲಭವಾಗಿ ಚೇಸ್ ಮಾಡಬಹುದಿತ್ತು. ಆದರೆ ನಮ್ಮ ಬೌಲರ್​ಗಳು ಡೆತ್ ಓವರ್​ಗಳನ್ನು ಸಿಕ್ಕಾಪಟ್ಟೆ ರನ್ ನೀಡಿದ್ದಾರೆ. ಇದರಿಂದಾಗಿ ಐರ್ಲೆಂಡ್ ತಂಡಕ್ಕೆ 182 ರನ್​ಗಳನ್ನು ಪೇರಿಸಲು ಸಾಧ್ಯವಾಗಿದೆ ಎಂದು ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.

ಅಯ್ಯರ್ ಖಡಕ್ ಸೂಚನೆ:

ಟೀಮ್ ಇಂಡಿಯಾ ದೀರ್ಘ ಬಿಡುವಿನ ನಂತರ ಮತ್ತೆ ಮೈದಾನಕ್ಕಿಳಿದಿದೆ. ಇದರಿಂದ ಆಟಗಾರರಲ್ಲಿ ತುಸು ಜಡತ್ವ ಎದ್ದು ಕಾಣುತ್ತಿತ್ತು ಎಂಬುದನ್ನು ಒಪ್ಪಿಕೊಂಡ ಶ್ರೇಯಸ್ ಅಯ್ಉರ್, ತಂಡದ ಸಹ ಆಟಗಾರರಿಗೆ ಕಠಿಣ ಸಂದೇಶ ರವಾನಿಸಿದ್ದಾರೆ.

ಯಾವುದೇ ಪರಿಸ್ಥಿತಿಯನ್ನು ಅಥವಾ ಎದುರಾಳಿ ತಂಡವನ್ನು ಹಗುರವಾಗಿ ಪರಿಗಣಿಸಬೇಡಿ. ಸುಮ್ಮನೆ ಮೈದಾನಕ್ಕೆ ಬಂದು ಪಂದ್ಯ ಗೆಲ್ಲಲು ಸಾಧ್ಯವಿಲ್ಲ. ಅದಕ್ಕಾಗಿ ಕಷ್ಟಪಡಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.

ಅಲ್ಲದೆ ಮುಂದಿನ ಪಂದ್ಯದಲ್ಲಿ ತಪ್ಪುಗಳನ್ನು ತಿದ್ದಿಕೊಂಡು, ಸಂಪೂರ್ಣ ಸಿದ್ಧತೆಯೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ ಎಂದು ಶ್ರೇಯಸ್ ಅಯ್ಯರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾ ಸೋಲಿಗೆ ಕಾರಣರಾದ ‘ಇಬ್ಬರು ಭಾರತೀಯರು’

ಅಂದಹಾಗೆ ಭಾರತ ಮತ್ತು ಐರ್ಲೆಂಡ್ ನಡುವಣ 2ನೇ ಟಿ20 ಪಂದ್ಯ ಕೂಡ ಬೆಲ್​ಫಾಸ್ಟ್​ನಲ್ಲೇ ನಡೆಯಲಿದ್ದು, ಈ ಮ್ಯಾಚ್​ ಭಾನುವಾರ (ಜೂ.28) ಜರುಗಲಿದೆ.

Source link

Bengaluru Air Quality: ಮುಂಗಾರು ಮಳೆ ಪ್ರಭಾವ; ರಾಜ್ಯದ ಪ್ರಮುಖ ನಗರಗಳಲ್ಲಿ ಗಣನೀಯವಾಗಿ ಸುಧಾರಿಸಿದ AQI – Kannada News | Bengaluru AQI Today: Air Quality Improves Across Karnataka Cities Due to Rain

ರಾಜ್ಯದ ಪ್ರಮುಖ ನಗರಗಳಲ್ಲಿ ಗಣನೀಯವಾಗಿ ಸುಧಾರಿಸಿದ AQI

ಬೆಂಗಳೂರು, ಜೂನ್ 27: ಪ್ರಸ್ತುತ ಮುಂಗಾರು ಮಳೆಯ ಮಾರುತಗಳು ಹಾಗೂ ನಿರಂತರ ಗಾಳಿಯ ಹಿನ್ನೆಲೆಯಲ್ಲಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಅತ್ಯಂತ ಉತ್ತಮ ಮತ್ತು ತೃಪ್ತಿದಾಯಕ ಮಟ್ಟದಲ್ಲಿದೆ.

ಬೆಂಗಳೂರಿನ ಇಂದಿನ ವಾಯು ಗುಣಮಟ್ಟ

ರಾಜಧಾನಿ ಬೆಂಗಳೂರಿನಲ್ಲಿ ಇಂದು ವಾಯು ಮಾಲಿನ್ಯ ಗಣನೀಯವಾಗಿ ಕುಸಿದಿದ್ದು, ಜನತೆಗೆ ನಿರಾಳ ತಂದಿದೆ. ಬೆಂಗಳೂರಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು 30 ರಿಂದ 53 ರ ಆಸುಪಾಸಿನಲ್ಲಿ ದಾಖಲಾಗಿದೆ. ನಗರದ ಬಹುತೇಕ ವಸತಿ ಪ್ರದೇಶಗಳಾದ ಜಯನಗರ, ಬಿಟಿಎಂ ಲೇಔಟ್ ಮತ್ತು ಬಸವನಗುಡಿಯಲ್ಲಿ ಗಾಳಿಯ ಗುಣಮಟ್ಟ ‘ಉತ್ತಮ’ (Good) ಶ್ರೇಣಿಯಲ್ಲಿದೆ.

ಸಿಲ್ಕ್ ಬೋರ್ಡ್, ಕಡಬೀಸನಹಳ್ಳಿ ಮತ್ತು ವೈಟ್‌ಫೀಲ್ಡ್‌ನಂತಹ ವಾಣಿಜ್ಯ ಹಾಗೂ ಅತಿ ಹೆಚ್ಚು ವಾಹನ ಸಂಚಾರವಿರುವ ಪ್ರದೇಶಗಳಲ್ಲಿ AQI ಸಲ್ಪ ಮಟ್ಟಿಗೆ ಹೆಚ್ಚಿದ್ದರೂ (55 ರ ಆಸುಪಾಸು), ಅದು ಹಾನಿಕಾರಕವಲ್ಲದ ಮಿತಿಯಲ್ಲೇ ಉಳಿದಿದೆ. ಮಳೆಯ ಕಾರಣದಿಂದಾಗಿ ವಾತಾವರಣದಲ್ಲಿರುವ ಧೂಳಿನ ಕಣಗಳು (PM2.5 ಮತ್ತು PM10) ನೆಲಕಚ್ಚಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಕರ್ನಾಟಕದ ಪ್ರಮುಖ ನಗರಗಳ ವಾಯು ಗುಣಮಟ್ಟ

  • ಮೈಸೂರು ಮತ್ತು ರಾಮನಗರ: ಇಲ್ಲಿನ ವಾಯು ಗುಣಮಟ್ಟ ಅತ್ಯಂತ ಆರೋಗ್ಯಕರವಾಗಿದ್ದು, ಸರಾಸರಿ AQI 55ರಷ್ಟಿದೆ.
  • ಮಂಗಳೂರು : ನಿರಂತರ ಮಳೆಯಾಗುತ್ತಿರುವುದರಿಂದ ಕರಾವಳಿ ಭಾಗದಲ್ಲಿ ಶುದ್ಧ ಗಾಳಿ ಇದ್ದು, AQI 59ರ ಆಸುಪಾಸಿನಲ್ಲಿದೆ.
  • ಶಿವಮೊಗ್ಗ ಮತ್ತು ತುಮಕೂರು: ಇಲ್ಲಿ ಗಾಳಿಯ ಗುಣಮಟ್ಟ ತೃಪ್ತಿದಾಯಕವಾಗಿದ್ದು, AQI 69 ರಿಂದ 71 ರವರೆಗೆ ದಾಖಲಾಗಿದೆ.
  • ಧಾರವಾಡ, ಹುಬ್ಬಳ್ಳಿ, ಗದಗ: ಈ ಭಾಗದಲ್ಲಿ ಬಿರುಗಾಳಿ ಸಹಿತ ಮಳೆಯ ಮುನ್ಸೂಚನೆ ಇರುವುದರಿಂದ ಗಾಳಿಯ ವೇಗ ಹೆಚ್ಚಾಗಿದೆ. ಧಾರವಾಡದಲ್ಲಿ AQI 96ರಷ್ಟಿದ್ದು, ಗದಗ ಮತ್ತು ಹುಬ್ಬಳ್ಳಿಯಲ್ಲಿ ಕ್ರಮವಾಗಿ 77 ಮತ್ತು 76ರಷ್ಟಿದೆ.

ಒಟ್ಟಾರೆಯಾಗಿ ಇಂದಿನ ಹವಾಮಾನವು ರಾಜ್ಯದ ಜನತೆಗೆ ಅತ್ಯಂತ ಶುದ್ಧ ಹಾಗೂ ಉಸಿರಾಡಲು ಯೋಗ್ಯವಾದ ವಾತಾವರಣವನ್ನು ಕಲ್ಪಿಸಿಕೊಟ್ಟಿದೆ. ಮುಂಗಾರು ಮಳೆ ಮುಂದುವರಿಯಲಿರುವುದರಿಂದ ಮುಂದಿನ ಕೆಲವು ದಿನಗಳ ಕಾಲ ಇದೇ ಪರಿಸ್ಥಿತಿ ಇರಲಿದೆ ಎಂದು ಅಂದಾಜಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆಎಸ್‌ಆರ್‌ಟಿಸಿ ಭರ್ಜರಿ ಕಾರ್ಯಾಚರಣೆ: ಟಿಕೆಟ್ ಇಲ್ಲದೆ ಪ್ರಯಾಣಿಸಿದವರಿಂದ ಒಂದೇ ತಿಂಗಳಲ್ಲಿ 9 ಲಕ್ಷ ರೂ. ದಂಡ ವಸೂಲಿ – Kannada News | KSRTC Collects Around Rs 9 Lakh Fine From Ticketless Passengers in Month Long Crackdown

ಬೆಂಗಳೂರು, ಜೂನ್ 27: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್‌ಗಳಲ್ಲಿ ಟಿಕೆಟ್ ಪಡೆಯದೇ ಕದ್ದುಮುಚ್ಚಿ ಪ್ರಯಾಣಿಸುವವರ ವಿರುದ್ಧ ಸಾರಿಗೆ ಸಂಸ್ಥೆ ಮೇ ತಿಂಗಳಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಕರ್ನಾಟಕ ಹಾಗೂ ನೆರೆಯ ರಾಜ್ಯಗಳಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಜಾಗೃತ ದಳದ ಸಿಬ್ಬಂದಿ ನಡೆಸಿದ ದಿಢೀರ್ ತಪಾಸಣೆಯ ವೇಳೆ ಸಿಕ್ಕಿಬಿದ್ದ ಟಿಕೆಟ್ ರಹಿತ ಪ್ರಯಾಣಿಕರಿಂದ ಒಟ್ಟು 8.94 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಸಂಸ್ಥೆಯ ಆದಾಯಕ್ಕೆ ನಷ್ಟ ಉಂಟುಮಾಡುವವರನ್ನು ಪತ್ತೆ ಹಚ್ಚಲು ಈ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು.

42 ಸಾವಿರಕ್ಕೂ ಅಧಿಕ ಬಸ್‌ಗಳಲ್ಲಿ ಪರಿಶೀಲನೆ

ಕೆಎಸ್‌ಆರ್‌ಟಿಸಿ ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಈ ಒಂದು ತಿಂಗಳ ಸುದೀರ್ಘ ಕಾರ್ಯಾಚರಣೆಯಲ್ಲಿ ಜಾಗೃತ ದಳದ ತಂಡಗಳು ಒಟ್ಟು 42,518 ಬಸ್‌ಗಳನ್ನು ತಪಾಸಣೆಗೆ ಒಳಪಡಿಸಿವೆ. ಈ ವೇಳೆ 4,353 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದ 4,476 ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ. ಈ ಇಡೀ ಕಾರ್ಯಾಚರಣೆಯಲ್ಲಿ ಸುಮಾರು 1.52 ಲಕ್ಷ ರೂಪಾಯಿ ಮೌಲ್ಯದ ಆದಾಯ ಸೋರಿಕೆಯನ್ನು ತಡೆಗಟ್ಟಲಾಗಿದ್ದು, ಒಟ್ಟಾರೆ 8.94 ಲಕ್ಷ ರೂ. ದಂಡದ ರೂಪದಲ್ಲಿ ಸಂಗ್ರಹವಾಗಿದೆ.

ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ

ಇದೇ ವೇಳೆ, ಇಂತಹ ಅಕ್ರಮಗಳಲ್ಲಿ ಭಾಗಿಯಾಗಿರುವ ಅಥವಾ ಟಿಕೆಟ್ ನೀಡುವಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿರುವ ಸಂಸ್ಥೆಯ ನೌಕರರ ವಿರುದ್ಧವೂ ಕೆಎಸ್‌ಆರ್‌ಟಿಸಿ ಕಠಿಣ ನಿಲುವು ತಳೆದಿದೆ. ಇಂತಹ ಅಕ್ರಮಗಳಿಗೆ ಕಾರಣರಾದ ಸಿಬ್ಬಂದಿಗಳ ವಿರುದ್ಧ ಈಗಾಗಲೇ ಇಲಾಖಾ ಮಟ್ಟದ ಶಿಸ್ತು ಕ್ರಮಗಳನ್ನು ಜರುಗಿಸಲಾಗಿದೆ ಎಂದು ಸಂಸ್ಥೆ ಖಚಿತಪಡಿಸಿದೆ.

ಇದನ್ನೂ ಓದಿ: BMTC, KSRTC ಬಸ್ ಟಿಕೆಟ್ ದರ ಬರೋಬ್ಬರಿ ಏರಿಕೆಯಾಗೋದು ಈ ಬಾರಿ ಪಕ್ಕಾ 

ಮುಂದಿನ ದಿನಗಳಲ್ಲೂ ಇಂತಹ ಕಾರ್ಯಾಚರಣೆಗಳು ಮುಂದುವರಿಯಲಿದ್ದು, ಪದೇ ಪದೇ ನಿಯಮ ಉಲ್ಲಂಘಿಸುವವರಿಗೆ ಮತ್ತಷ್ಟು ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಪ್ರಯಾಣಿಕರು ಜವಾಬ್ದಾರಿಯಿಂದ ವರ್ತಿಸಿ, ಪ್ರಯಾಣದ ಅವಧಿಯಲ್ಲಿ ಸೂಕ್ತ ಟಿಕೆಟ್ ಅಥವಾ ಪಾಸ್‌ಗಳನ್ನು ಖರೀದಿಸಿ ಸಂಸ್ಥೆಯೊಂದಿಗೆ ಸಹಕರಿಸಬೇಕು ಎಂದು ಕೆಎಸ್‌ಆರ್‌ಟಿಸಿ ಮನವಿ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾರ್ಮುಜ್ ಜಲಸಂಧಿಯಲ್ಲಿ ಭೀಕರ ಸಂಘರ್ಷ: ಶಾಂತಿ ಒಪ್ಪಂದವಾದ ಕೆಲವೇ ದಿನಗಳಲ್ಲಿ ಅಮೆರಿಕ-ಇರಾನ್ ಮುಖಾಮುಖಿ ದಾಳಿ – Kannada News | Hormuz Strait Crisis: US Iran Clash After Peace Deal, Global Oil at Risk

ವಾಷಿಂಗ್ಟನ್, ಜೂನ್ 27: ಜಾಗತಿಕ ಮಾರುಕಟ್ಟೆ ಮತ್ತು ಪೂರೈಕೆ ಸರಪಳಿಗೆ ಭಾರಿ ಅಡ್ಡಿ ಉಂಟು ಮಾಡಿದ್ದ ದೀರ್ಘಕಾಲದ ಸಂಘರ್ಷವನ್ನು ಕೊನೆಗೊಳಿಸಲು ಅಮೆರಿಕ ಮತ್ತು ಇರಾನ್(Iran) ದೇಶಗಳು ಇತ್ತೀಚೆಗಷ್ಟೇ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದವು. ಆದರೆ ಈ ಶಾಂತಿ ಒಪ್ಪಂದದ ಶಾಯಿ ಒಣಗುವ ಮುನ್ನವೇ ಮಧ್ಯಪ್ರಾಚ್ಯದ ಹಾರ್ಮುಜ್ ಜಲಸಂಧಿಯಲ್ಲಿ ಉಭಯ ದೇಶಗಳ ನಡುವೆ ಮತ್ತೆ ಭೀಕರ ಮಿಲಿಟರಿ ಸಂಘರ್ಷ ಭುಗಿಲೆದ್ದಿದ್ದು ಜಾಗತಿಕ ಆತಂಕಕ್ಕೆ ಕಾರಣವಾಗಿದೆ.

ಓಮನ್ ಕರಾವಳಿ ಬಳಿ ಹಡಗಿನ ಮೇಲೆ ಇರಾನ್ ದಾಳಿ
ಜೂನ್ 25 ರಂದು ಓಮನ್ ಕರಾವಳಿಯ ಬಳಿ ಇರುವ ಆಯಕಟ್ಟಿನ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುತ್ತಿದ್ದ ‘ಎಂ/ವಿ ಎವರ್ ಲವ್ಲಿ’ ಎಂಬ ವಾಣಿಜ್ಯ ಹಡಗಿನ ಮೇಲೆ ಇರಾನ್ ಪಡೆಗಳು ಹಠಾತ್ ದಾಳಿ ನಡೆಸಿದ್ದವು. ಇರಾನ್‌ನ ಈ ಕ್ರಮವನ್ನು ಅನಗತ್ಯ ಆಕ್ರಮಣ ಮತ್ತು ಸಂಚಾರ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಕರೆದ ಅಮೆರಿಕದ ಮಿಲಿಟರಿ ಕಮಾಂಡ್ (CENTCOM), ತಕ್ಷಣವೇ ಇರಾನ್‌ಗೆ ತಿರುಗೇಟು ನೀಡಲು ಅಖಾಡಕ್ಕಿಳಿಯಿತು.

ಇರಾನ್ ರಾಡಾರ್, ಕ್ಷಿಪಣಿ ನೆಲೆಗಳ ಮೇಲೆ ಅಮೆರಿಕದ ಭೀಕರ ಬಾಂಬ್ ದಾಳಿ
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ನೀಡಿರುವ ಅಧಿಕೃತ ಹೇಳಿಕೆಯ ಪ್ರಕಾರ, ಹಡಗಿನ ಮೇಲಿನ ದಾಳಿಗೆ ಪ್ರತಿಯಾಗಿ ಅಮೆರಿಕದ ವಾಯುಸೇನೆ ಮತ್ತು ನೌಕಾಸೇನೆ ಇರಾನ್‌ನ ಸೈನಿಕ ನೆಲೆಗಳನ್ನು ಗುರಿಯಾಗಿಸಿಕೊಂಡು ಭೀಕರ ದಾಳಿ ನಡೆಸಿವೆ. ಇರಾನ್ ಕರಾವಳಿಯಲ್ಲಿರುವ ಕ್ಷಿಪಣಿ ಉಡಾವಣಾ ಕೇಂದ್ರಗಳು, ಡ್ರೋನ್ ತಾಣಗಳು ಮತ್ತು ಕರಾವಳಿ ರಾಡಾರ್ ಕೇಂದ್ರಗಳನ್ನು ಅಮೆರಿಕ ಸಂಪೂರ್ಣವಾಗಿ ಧ್ವಂಸಗೊಳಿಸಿದೆ. ಒಪ್ಪಂದದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಲು ಯುಎಸ್ ಮಿಲಿಟರಿ ಸದಾ ಜಾಗರೂಕವಾಗಿರುತ್ತದೆ ಎಂದು ಅಮೆರಿಕದ ಸೇನೆ ಎಚ್ಚರಿಸಿದೆ.

ಮತ್ತಷ್ಟು ಓದಿ: ಅಮೆರಿಕ-ಇರಾನ್ ಮಹತ್ವದ ಮಾತುಕತೆ ಮುಕ್ತಾಯ: ಪರಮಾಣು ಬಿಕ್ಕಟ್ಟು, ಆರ್ಥಿಕ ನಿರ್ಬಂಧಗಳ ಇತ್ಯರ್ಥಕ್ಕೆ ಜಂಟಿ ಕಾರ್ಯಪಡೆ ರಚನೆ

ಕೊಲ್ಲಿಯಲ್ಲಿರುವ ಅಮೆರಿಕ ನೆಲೆಗಳ ಮೇಲೆ ಇರಾನ್ ಪ್ರತಿದಾಳಿ
ಅಮೆರಿಕ ತನ್ನ ನೆಲದ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಕೆರಳಿದ ಇರಾನ್, ಗಲ್ಫ್ (ಕೊಲ್ಲಿ) ಪ್ರದೇಶದಲ್ಲಿರುವ ಅಮೆರಿಕದ ಮಿಲಿಟರಿ ತಾಣಗಳನ್ನು ಗುರಿಯಾಗಿಸಿಕೊಂಡು ಶಕ್ತಿಶಾಲಿ ಪ್ರತಿದಾಳಿ ನಡೆಸಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಅಮೆರಿಕದ ಆಕ್ರಮಣಶೀಲತೆ ಹೀಗೆಯೇ ಮುಂದುವರೆದರೆ, ನಮ್ಮ ಮುಂದಿನ ಪ್ರತಿಕ್ರಿಯೆ ಇದಕ್ಕಿಂತಲೂ ಭೀಕರವಾಗಿರಲಿದೆ ಎಂದು ನೇರ ಎಚ್ಚರಿಕೆ ನೀಡಿದೆ.

ಶಾಂತಿ ಒಪ್ಪಂದ ‘ಮೂರ್ಖತನದ ಉಲ್ಲಂಘನೆ’ ಎಂದ ಡೊನಾಲ್ಡ್ ಟ್ರಂಪ್
ಜಾಗತಿಕ ಕಚ್ಚಾ ತೈಲದ (Crude Oil) ಸುಮಾರು ಐದನೇ ಒಂದು ಭಾಗ (20%) ಹಾದುಹೋಗುವ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲು ಇರಾನ್‌ಗೆ ಬಿಡುವುದಿಲ್ಲ ಎಂದು ವಾಷಿಂಗ್ಟನ್ ಸ್ಪಷ್ಟಪಡಿಸಿದೆ. ಇರಾನ್‌ನ ಈ ವರ್ತನೆಯನ್ನು ತೀವ್ರವಾಗಿ ಖಂಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಳ್ಳುವುದು ಉಭಯ ದೇಶಗಳ ನಡುವಿನ ಶಾಂತಿ ಒಪ್ಪಂದದ ಮೂರ್ಖತನದ ಉಲ್ಲಂಘನೆಯಾಗಿದೆ ಎಂದು ಕಿಡಿಕಾರಿದ್ದಾರೆ.

 ಇರಾನ್‌ಗೆ ತಕ್ಕ ಶಾಸ್ತಿ ಮಾಡುವುದಾಗಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್  ಎಚ್ಚರಿಕೆ

ಆದರೆ ಇದಕ್ಕೆ ಜಗ್ಗದ ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಆಯೋಗದ ಮುಖ್ಯಸ್ಥ ಇಬ್ರಾಹಿಂ ಅಜೀಜಿ, ಹಾರ್ಮುಜ್ ಜಲಸಂಧಿ ನಮ್ಮ ನಿಯಂತ್ರಣದಲ್ಲೇ ಇರಲಿದೆ. ಇದು ಕದನ ವಿರಾಮದ ಉಲ್ಲಂಘನೆಯಲ್ಲ, ಬದಲಿಗೆ ಕದನ ವಿರಾಮವನ್ನು ನಮ್ಮ ಶರತ್ತುಗಳ ಮೇಲೆ ಕಾಪಾಡಿಕೊಳ್ಳುವ ಪ್ರಯತ್ನ ಎಂದು ತಿರುಗೇಟು ನೀಡಿದ್ದಾರೆ. ಈ ಘಟನೆಯಿಂದಾಗಿ ಇಡೀ ಕೊಲ್ಲಿ ವಲಯದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version