ಗಲ್ಫ್ ಇನ್ಮುಂದೆ ಅಮೆರಿಕಕ್ಕೆ ರಕ್ಷಣೆ ನೀಡಲಾರದು; ಟ್ರಂಪ್ಗೆ ಇರಾನ್ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಎಚ್ಚರಿಕೆ – Kannada News | Gulf nations wont be safe for US bases Mojtaba Khamenei warns amid Iran Peace Talk
ಟೆಹ್ರಾನ್, ಮೇ 26: ಇರಾನ್ ಮತ್ತು ಅಮೆರಿಕ ನಡುವೆ ಶಾಂತಿ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ, ಇರಾನ್‌ನ ಅತ್ಯುನ್ನತ ಆಧ್ಯಾತ್ಮಿಕ ನಾಯಕ ಮೊಜ್ತಬಾ ಖಮೇನಿ (Mojtaba Khamenei) ಗಲ್ಫ್ ರಾಷ್ಟ್ರಗಳಿಗೆ ಹಾಗೂ ಅಮೆರಿಕಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಅಮೆರಿಕವು ಇನ್ನು ಮುಂದೆ ಗಲ್ಫ್ ದೇಶಗಳಲ್ಲಿ ಸುರಕ್ಷಿತ ನೆಲೆಗಳನ್ನು ಹೊಂದಿರುವುದಿಲ್ಲ ಎಂದು ಇರಾನ್ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಎಚ್ಚರಿಸಿದ್ದಾರೆ. ತಮ್ಮ ತಂದೆಯ ಮರಣದ ನಂತರ ಇರಾನ್‌ನ ಸರ್ವೋಚ್ಚ ನಾಯಕರಾಗಿ ಅಧಿಕಾರ ವಹಿಸಿಕೊಂಡ ಮತ್ತು ಇಲ್ಲಿಯವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲದ ಮೊಜ್ತಬಾ…