Headlines

ಗಲ್ಫ್ ಇನ್ಮುಂದೆ ಅಮೆರಿಕಕ್ಕೆ ರಕ್ಷಣೆ ನೀಡಲಾರದು; ಟ್ರಂಪ್​ಗೆ ಇರಾನ್ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಎಚ್ಚರಿಕೆ – Kannada News | Gulf nations wont be safe for US bases Mojtaba Khamenei warns amid Iran Peace Talk

ಟೆಹ್ರಾನ್, ಮೇ 26: ಇರಾನ್ ಮತ್ತು ಅಮೆರಿಕ ನಡುವೆ ಶಾಂತಿ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ, ಇರಾನ್‌ನ ಅತ್ಯುನ್ನತ ಆಧ್ಯಾತ್ಮಿಕ ನಾಯಕ ಮೊಜ್ತಬಾ ಖಮೇನಿ (Mojtaba Khamenei) ಗಲ್ಫ್ ರಾಷ್ಟ್ರಗಳಿಗೆ ಹಾಗೂ ಅಮೆರಿಕಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಅಮೆರಿಕವು ಇನ್ನು ಮುಂದೆ ಗಲ್ಫ್ ದೇಶಗಳಲ್ಲಿ ಸುರಕ್ಷಿತ ನೆಲೆಗಳನ್ನು ಹೊಂದಿರುವುದಿಲ್ಲ ಎಂದು ಇರಾನ್ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಎಚ್ಚರಿಸಿದ್ದಾರೆ. ತಮ್ಮ ತಂದೆಯ ಮರಣದ ನಂತರ ಇರಾನ್‌ನ ಸರ್ವೋಚ್ಚ ನಾಯಕರಾಗಿ ಅಧಿಕಾರ ವಹಿಸಿಕೊಂಡ ಮತ್ತು ಇಲ್ಲಿಯವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲದ ಮೊಜ್ತಬಾ…

Read More

ಪ್ರಿಯಕರನಿಂದ ವಿಧವೆ ಹತ್ಯೆ; ಪೊಲೀಸ್ ತನಿಖೆಯಲ್ಲಿ ಆಘಾತಕಾರಿ ಸಂಗತಿ ಬಯಲು – Kannada News | Warangal Widow Killed by Lover Shocking Facts Revealed in Police Probe

ವಾರಂಗಲ್, ಮೇ 26: ವಾರಂಗಲ್ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ವಿಧವೆ ಮಹಿಳೆಯ ಕೊಲೆಯ ರಹಸ್ಯ (Crime News) ಕೊನೆಗೂ ಬಯಲಾಗಿದೆ. ವಿವಾಹೇತರ ಸಂಬಂಧದಿಂದಾಗಿ ಆಕೆಯ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಆಕೆಯ ಜೊತೆ ವಾಸಿಸುತ್ತಿದ್ದ ಆಕೆಯ ಪ್ರಿಯಕರ ಆಕೆ ತನ್ನನ್ನು ಬಿಟ್ಟು ಬೇರೆ ಪುರುಷನೊಂದಿಗೆ ಸಂಬಂಧ ಹೊಂದಿದ್ದಳು ಎಂಬ ಕಾರಣಕ್ಕೆ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ಆತನನ್ನು ಬಂಧಿಸಿ ರಿಮಾಂಡ್‌ಗೆ ಕಳುಹಿಸಲಾಗಿದೆ. ಗ್ರಾಮದ ಹೊರವಲಯದಲ್ಲಿರುವ ಎಸ್‌ಆರ್‌ಎಸ್‌ಪಿ ಕಾಲುವೆಯಲ್ಲಿ ಆಕೆಯ ಕತ್ತನ್ನು ಚಾಕುವಿನಿಂದ ಸೀಳಿ…

Read More

ಕರ್ನಾಟಕಕ್ಕೆ ಕಾಲಿಟ್ಟಿತಾ ಎಬೋಲಾ? ಉಗಾಂಡಾದಿಂದ ಬೆಂಗಳೂರಿಗೆ ಬಂದ ಮಹಿಳೆಯಲ್ಲಿ ವೈರಸ್​​​ ಪತ್ತೆ ಶಂಕೆ – Kannada News | Ebola Scare in Karnataka; Woman Arriving in Bengaluru from Uganda Suspected of Infection

ಬೆಂಗಳೂರು, ಮೇ 26: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (bangluru) ಎಬೋಲಾ ವೈರಸ್ ರೋಗದ (EVD) ಶಂಕಿತ ಪ್ರಕರಣವೊಂದು ಪತ್ತೆಯಾಗಿದೆ ಎನ್ನಲಾಗುತ್ತಿದ್ದು, ರಾಜಧಾನಿ ಜನತೆಯಲ್ಲಿ ತೀವ್ರ ಆತಂಕ ಮೂಡಿಸಿದೆ. ಉಗಾಂಡಾ ದೇಶದಿಂದ ಬಂದ 28 ವರ್ಷದ ವಿದೇಶಿ ಮಹಿಳೆಯಲ್ಲಿ ಎಬೋಲಾ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದು, ಸದ್ಯ ಅವರನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದೆ. ಮುಖ್ಯಾಂಶಗಳು ರಾಜಧಾನಿ ಬೆಂಗಳೂರಿಗೂ ಕಾಲಿಟ್ಟಿತಾ ಎಬೋಲಾ ವೈರಸ್? ಉಗಾಂಡಾದ ಕ್ಯಾಂಪಾಲಾ ಮೂಲದವರಲ್ಲಿ ಶಂಕಿತ ಪ್ರಕರಣ ಪತ್ತೆ 28 ವರ್ಷದ ಮಹಿಳೆಯಲ್ಲಿ ಕಾಣಿಸಿಕೊಂಡ ಎಬೋಲಾ ಪತ್ತೆ ಶಂಕೆ…

Read More

RCB vs GT: ಬೌಂಡರಿಗಳಿಂದಲೇ 60 ರನ್..! ಪವರ್​ಪ್ಲೇನಲ್ಲಿ ಅಬ್ಬರಿಸಿದ ಆರ್​ಸಿಬಿ – Kannada News | RCB Dominates GT Powerplay: 76/1 in IPL 2026 Qualifier 1 at Dharamshala

ಐಪಿಎಲ್ 2026 ಕ್ವಾಲಿಫೈಯರ್ 1 ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯುತ್ತಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ ಮೊದಲ 6 ಓವರ್​ಗಳಲ್ಲಿ ಅಂದರೆ ಪವರ್​ಪ್ಲೇನಲ್ಲಿ ಒಂದು ವಿಕೆಟ್ ಕಳೆದುಕೊಂಡು 76 ರನ್ ಕಲೆಹಾಕಿದೆ. ಈ 76 ರನ್​ಗಳಲ್ಲಿ ಆರ್​ಸಿಬಿ ಕೇವಲ ಬೌಂಡರಿ ಹಾಗೂ ಸಿಕ್ಸರ್​ಗಳಿಂದಲೇ 60…

Read More

ಒಳನುಸುಳುವಿಕೆ, ಜನಸಂಖ್ಯೆ ಬದಲಾವಣೆ ಬಗ್ಗೆ ಅಧ್ಯಯನಕ್ಕೆ ಸಮಿತಿ ರಚನೆ; ಅಮಿತ್ ಶಾ ಘೋಷಣೆ – Kannada News | Amit Shah announced high level committee to examine demographic change in India

ನವದೆಹಲಿ, ಮೇ 26: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ದೇಶದ ಜನಸಂಖ್ಯೆಯಲ್ಲಿ ಆಗುತ್ತಿರುವ ಆತಂಕಕಾರಿ ಬದಲಾವಣೆಗಳು ಮತ್ತು ಒಳನುಸುಳುವಿಕೆ (Infiltration) ಕುರಿತು ಮಹತ್ವದ ಹೇಳಿಕೆ ನೀಡಿದ್ದು, ಈ ಸಮಸ್ಯೆಯನ್ನು ಎದುರಿಸಲು ವಿಶೇಷ ಸಮಿತಿಯೊಂದನ್ನು ರಚಿಸಿರುವುದಾಗಿ ಘೋಷಿಸಿದ್ದಾರೆ. ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಭದ್ರತಾ ಸಭೆಯೊಂದರಲ್ಲಿ ಮಾತನಾಡಿದ ಅಮಿತ್ ಶಾ, ಭಾರತದ ಗಡಿಭಾಗದ ಮೂಲಕ ನಡೆಯುತ್ತಿರುವ ಅಕ್ರಮ ಒಳನುಸುಳುವಿಕೆ ದೇಶದ ಆಂತರಿಕ ಭದ್ರತೆಗೆ ಮತ್ತು ಸಾಮಾಜಿಕ ಸಮತೋಲನಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು…

Read More

ನಾಯಕತ್ವ ಬದಲಾವಣೆ: ಸಿದ್ದರಾಮಯ್ಯಗೆ ಆಫರ್ ಮೇಲೆ ಆಫರ್ ಕೊಟ್ರಾ ರಾಹುಲ್ ಗಾಂಧಿ? – Kannada News | Rahul Gandhi Gives Big Offers To CM Siddaramaiah Over Karnataka Power Tussle, here Is Meeting Inside details

ನವದೆಹಲಿ,(ಮೇ 26): ದೆಹಲಿಯಲ್ಲಿಂದು (New Delhi) ನಡೆದ ಸರಣಿ ಸಭೆಯಲ್ಲಿ ರಾಜ್ಯಸಭಾ ಚುನಾವಣೆ ಮಾತ್ರವಲ್ಲದೇ ಪ್ರಮುಖವಾಗಿ ಕರ್ನಾಟಕ (Karnataka) ನಾಯಕತ್ವ ಬದಲಾವಣೆ ಬಗ್ಗೆಯೂ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ. ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಜತೆ ಪ್ರತ್ಯೇಕ ಸಭೆ ನಡೆಸಿದ್ದು, ಸಭೆಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಸರಿಸುಮಾರು 45 ನಿಮಿಷಗಳ ಕಾಲ ನಡೆದ ಸುದೀರ್ಘ ಚರ್ಚೆಯಲ್ಲಿ ನಾಯಕತ್ವ ಬದಲಾವಣೆ ಸಂಬಂಧ ಸಿದ್ದರಾಮಯ್ಯಗೆ ರಾಜ್ಯಸಭೆ ಆಫರ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ಇದಕ್ಕೆ ಸಿಎಂ ಸಿದ್ದರಾಮಯ್ಯ ಯಾವುದೇ…

Read More

‘ಸನ್‌ ಉದಯ’ ಟಿವಿಯಲ್ಲಿ ಅಮೂಲ್ಯ ಗೌಡ ಹೊಸ ಧಾರಾವಾಹಿ ‘ಮಹಾಲಕ್ಷ್ಮೀ ಮದುವೆ’ – Kannada News | Amulya Gowda new Kannada Serial Mahalakshmi Maduve on Sun Udaya Tv Story Line Star Cast

‘ಸನ್ ಉದಯ’ (Sun Udaya) ವಾಹಿನಿಯಲ್ಲಿ ಹಲವು ಧಾರಾವಾಹಿಗಳು ಜನಮನ ಗೆದ್ದಿವೆ. ʻಮೂಗುತಿ ಮಲ್ಲಿ’ ರೀತಿಯ ಜನಪ್ರಿಯ ಧಾರಾವಾಹಿಯನ್ನು ಕನ್ನಡಿಗರಿಗೆ ನೀಡಿದ ಈ ವಾಹಿನಿಯು ಈಗ ಮಧ್ಯಮ ವರ್ಗದ ಮನೆ ಮನೆಯ ಕಥೆಯೊಂದನ್ನು ಇಟ್ಟುಕೊಂಡು ಹೊಸ ಧಾರಾವಾಹಿಯನ್ನು ಪರಿಚಯಿಸುತ್ತಿದೆ. ʻಮಹಾಲಕ್ಷ್ಮೀ ಮದುವೆʼ (Mahalakshmi Maduve) ಎಂಬುದು ಈ ಹೊಸ ಸೀರಿಯಲ್ ಹೆಸರು. ಈ ಧಾರಾವಾಹಿಯು ಜೂನ್‌ 1ರಿಂದ ಪ್ರಸಾರ ಆರಂಭಿಸಿಲಿದೆ. ಈ ಸೀರಿಯಲ್ (Kannada Serial) ಕಥೆಯ ಎಳೆ ಏನು ಎಂಬುದನ್ನು ತಿಳಿಸಲಾಗಿದೆ. ಈ ಧಾರಾವಾಹಿಯ ಕಥಾನಾಯಕ…

Read More

‘ಜನ ನಾಯಗನ್’ ಬಿಡುಗಡೆಗೆ ದಿನಾಂಕ ನಿಗದಿ: ಸಮಂತಾಗೆ ಶುರು ಆತಂಕ – Kannada News | Thalapathy Vijay starrer Jana Nayagan movie may release on June 19

ತಮಿಳುನಾಡಿನ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ಈಗ ತಮಿಳುನಾಡಿನ ಸಿಎಂ. ವಿಜಯ್ ಅವರು ರಾಜಕೀಯ ಪ್ರವೇಶದ ಬಳಿಕ ಚಿತ್ರರಂಗದಿಂದ ನಿವೃತ್ತಿ ಘೋಷಿಸಿದ್ದಾರೆ. ಆದರೆ ಅವರು ನಟಿಸಿದ ಕೊನೆಯ ಸಿನಿಮಾ ‘ಜನ ನಾಯಗನ್’ ಇನ್ನೂ ಬಿಡುಗಡೆ ಆಗಿಲ್ಲ. ‘ಜನ ನಾಯಗನ್’ ನನ್ನ ಕೊನೆಯ ಸಿನಿಮಾ ಎಂದು ವಿಜಯ್ ಹೇಳಿದ್ದರು. ಈ ಸಿನಿಮಾ ಇದೇ ವರ್ಷ ಜನವರಿಯಲ್ಲಿ ಬಿಡುಗಡೆ ಆಗಬೇಕಿತ್ತು ಆದರೆ ರಾಜಕೀಯ ಒತ್ತಡಗಳ ಕಾರಣ ಇನ್ನೂ ಬಿಡುಗಡೆ ಆಗಿಲ್ಲ. ಇದೀಗ ವಿಜಯ್ ಸಿಎಂ ಆದ ಬಳಿಕ…

Read More

ಆರ್ಥಿಕ ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತಿಸಿಕೊಳ್ಳಬೇಕು; ದಿಟ್ಟ ಸುಧಾರಣೆ ಕ್ರಮ ಕೈಗೊಳ್ಳಬೇಕು: ನಿಲೇಶ್ ಶಾ – Kannada News | Nilesh Shah calls for bold economic reforms seizing global crisis as opportunity for growth

ನಿಲೇಶ್ ಶಾ ಅವರ ಫೈಲ್ ಚಿತ್ರImage Credit source: TV9 Network ನವದೆಹಲಿ, ಮೇ 26: ಜಾಗತಿಕ ಮಟ್ಟದಲ್ಲಿ ಆರ್ಥಿಕ ಅನಿಶ್ಚಿತತೆ ಹಾಗೂ ಸವಾಲುಗಳು ಎದುರಾಗಿರುವ ಈ ಸಮಯದಲ್ಲಿ, ಭಾರತವು ಈ ಬಿಕ್ಕಟ್ಟನ್ನು ಕೇವಲ ಒಂದು ಸಮಸ್ಯೆಯಾಗಿ ನೋಡಬಾರದು. ಬದಲಿಗೆ, ದೇಶದ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸಲು ಪ್ರಮುಖ ಮತ್ತು ದಿಟ್ಟ ಸುಧಾರಣೆಗಳನ್ನು (Bold Reforms) ಜಾರಿಗೆ ತರಲು ಇದೊಂದು ಅತ್ಯುತ್ತಮ ಅವಕಾಶ ಎಂದು ಖ್ಯಾತ ಆರ್ಥಿಕ ತಜ್ಞ ನಿಲೇಶ್ ಶಾ (Nilesh Shah) ಅಭಿಪ್ರಾಯಪಟ್ಟಿದ್ದಾರೆ. ಸಿಎನ್​ಬಿಸಿ ಆವಾಜ್…

Read More

ಮಕ್ಕಳನ್ನು ಸ್ಮಾರ್ಟ್‌ಫೋನ್‌ನಿಂದ ದೂರವಿಡಲು ಈ ಸಿಂಪಲ್‌ ಟ್ರಿಕ್ಸ್‌ಗಳನ್ನು ಪ್ರಯತ್ನಿಸಿ – Kannada News | Try these simple tricks to keep children away from smartphones

ಈ ಡಿಜಿಟಲ್‌ ಯುಗದಲ್ಲಿ ದೊಡ್ಡವರಿಗಿಂತ ಮಕ್ಕಳೇ (children) ಹೆಚ್ಚು  ಮೊಬೈಲ್‌ ಫೋನ್‌ ವ್ಯಸನಿಗಳಾಗಿದ್ದಾರೆ. ಹೌದು ಈಗಿನ ಮಕ್ಕಳಂತೂ ಹೊರಗೆ ಹೋಗಿ ಆಟ ಆಡುವುದಕ್ಕಿಂತ ಹೆಚ್ಚು ಮೊಬೈಲ್‌ನಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಈ ಒಂದು ಅಭ್ಯಾಸ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಮಕ್ಕಳನ್ನು ಸ್ಮಾರ್ಟ್‌ಫೋನ್‌ನಿಂದ ದೂರವಿಡುವುದು ಬಹಳ ಮುಖ್ಯ. ಆದರೆ ಅನೇಕ ಪೋಷಕರಿಗೆ ತಮ್ಮ ಮಕ್ಕಳನ್ನು ಮೊಬೈಲ್‌ ಚಟಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಹೇಗೆ ಎಂಬುದೇ ಗೊತ್ತಿಲ್ಲ. ಈ ಕೆಲವೊಂದು ಟ್ರಿಕ್ಸ್‌ಗಳನ್ನು ಪಾಲಿಸುವ ಮೂಲಕ ಸುಲಭವಾಗಿ ಮಕ್ಕಳನ್ನು ಸ್ಮಾರ್ಟ್‌…

Read More