Headlines

IND vs AFG: ಭಾರತ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಗೆ ಅಫ್ಘಾನಿಸ್ತಾನ ತಂಡ ಪ್ರಕಟ – Kannada News | India vs Afghanistan 2026: Full Squads, Test and ODI Series Schedule Announced

2026 ರ ಐಪಿಎಲ್ ಮುಗಿದ ಬಳಿಕ ಟೀಂ ಇಂಡಿಯಾ ಹಾಗೂ ಅಫ್ಘಾನಿಸ್ತಾನದ ನಡುವೆ ಒಂದು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಭಾರತದ ಆತಿಥ್ಯದಲ್ಲಿ ನಡೆಯಲಿರುವ ಈ ಸರಣಿಗೆ ಬಿಸಿಸಿಐ ಈಗಾಗಲೇ ತಂಡಗಳನ್ನು ಪ್ರಕಟಿಸಿದೆ. ಇದೀಗ ಐಪಿಎಲ್ ಪ್ಲೇಆಫ್‌ ನಡುವೆ ಅಫ್ಘಾನಿಸ್ತಾನ ಕೂಡ ತನ್ನ ತಂಡವನ್ನು ಪ್ರಕಟಿಸಿದೆ. ಹಶ್ಮತುಲ್ಲಾ ಶಾಹಿದಿ ನಾಯಕತ್ವದಲ್ಲಿ ಅಫ್ಘಾನಿಸ್ತಾನದ ಟೆಸ್ಟ್ ಮತ್ತು ಏಕದಿನ ತಂಡಗಳೆರಡನ್ನು ಪ್ರಕಟಿಸಲಾಗಿದೆ. ಟೆಸ್ಟ್ ಪಂದ್ಯಕ್ಕೆ ರಶೀದ್ ಖಾನ್ ಮತ್ತು ಇಬ್ರಾಹಿಂ ಜದ್ರಾನ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು,…

Read More

ಜಮ್ಮು ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗ; ಪಾಕಿಸ್ತಾನ-ಚೀನಾಗೆ ವಿದೇಶಾಂಗ ಸಚಿವಾಲಯ ಚಾಟಿ – Kannada News | Inalienable part of India MEA rips into China and Pakistans reference to Jammu and Kashmir

ನವದೆಹಲಿ, ಮೇ 26: ಚೀನಾ ಮತ್ತು ಪಾಕಿಸ್ತಾನ ಜಂಟಿಯಾಗಿ ಬಿಡುಗಡೆ ಮಾಡಿದ್ದ ಜಂಟಿ ಹೇಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು (Jammu and Kashmir) ಉಲ್ಲೇಖಿಸಿದ್ದಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. “ಜಮ್ಮು ಮತ್ತು ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗ” ಎಂದು ಪುನರುಚ್ಚರಿಸಿರುವ ಭಾರತ ಚೀನಾ-ಪಾಕಿಸ್ತಾನದ ವಿರುದ್ಧ ಕಿಡಿಕಾರಿದೆ. ಇಂದು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್, ಚೀನಾ-ಪಾಕಿಸ್ತಾನ ಜಂಟಿ ಹೇಳಿಕೆಯಲ್ಲಿ ಜಮ್ಮು ಮತ್ತು…

Read More

ಕಾಶಿ ಯಾತ್ರೆಗೆ ಹೋಗಿದ್ದವರ ಮನೆಯಲ್ಲಿ ಕನ್ನ: ಲಾಕರನ್ನೇ ಕದ್ದೊಯ್ದ ಕಳ್ಳರು; ಬಂಧನ – Kannada News | House Robbery During Kashi Pilgrimage: Thieves Who Stole Locker Arrested

ವಶಕ್ಕೆ ಪಡೆದುಕೊಂಡಿರುವ ಚಿನ್ನಾಭರಣಗಳುImage Credit source: tv9 kannada ಬೆಂಗಳೂರು, ಮೇ 26: ನಗರದಲ್ಲಿ ಕಳ್ಳತನ (Theft) ಕೇಸ್​​ಗಳು ಕಡಿಮೆಯಾಗುತ್ತಿಲ್ಲ. ಭಿನ್ನ ವಿಭಿನ್ನ ರೀಯಿಯಲ್ಲಿ ಖದೀಮರು ದೋಚುತ್ತಿರುತ್ತಾರೆ. ಇತ್ತೀಚೆಗೆ ಒಂದು ತಂಡ ಜ್ಯುವೆಲರಿ ಶಾಪ್​​ಗೆ ಕನ್ನ ಹಾಕಿದ್ದರು. ಇದೀಗ ಮತ್ತೊಂದು ತಂಡ ಕಾಶಿ ಯಾತ್ರೆಗೆ ಹೋಗಿದ್ದವರ ಮನೆ ಟಾರ್ಗೆಟ್ ಮಾಡಿ ನುಗ್ಗಿದ್ದಾರೆ. ಎರಡು ಕೇಸ್​​​ ಭೇದಿಸಿರುವ ಪೊಲೀಸರು ದೋಚಿರುವ ವಸ್ತುಗಳ ಸಮೇತ ಆರೋಪಿಗಳ ಹೆಡೆಮುರಿ (Arrest) ಕಟ್ಟಿದ್ದಾರೆ. ಕಾಶಿ ಯಾತ್ರೆಗೆ ಹೋಗಿದ್ದವರ ಮನೆಯಲ್ಲಿ ಕಳ್ಳತನ ಮಾಡಿದ್ದ ಮೂವರು…

Read More

ಇದೀಗ ಬಂದ ಸುದ್ದಿ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ನಿರ್ಧಾರ – Kannada News | Karnataka power tussle: Siddaramaiah Likely Resign to CM Post This Week

ನವದೆಹಲಿ/ಬೆಂಗಳೂರು, (ಮೇ 26): ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಸಸ್ಪೆನ್ಸ್ ಈಗ ರೋಚಕ ತಿರುವು ಪಡೆದುಕೊಂಡಿದೆ. ದೆಹಲಿಯಲ್ಲಿ ನಡೆದ ಸುಮಾರು 6 ಗಂಟೆಗಳ ಸುದೀರ್ಘ ಮ್ಯಾರಾಥಾನ್ ಸಭೆಯಲ್ಲಿ ನಾಯಕತ್ವ ಬದಲಾವಣೆ (karnataka power tussle) ಬಗ್ಗೆ ಚರ್ಚೆಯಾಗಿದ್ದು, ಈ ವೇಳೆ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ (CM Siddaramaiah) ರಾಜ್ಯಸಭೆ ಆಫರ್ ನೀಡುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಆಫರ್ ನೀಡಿದ್ದಾರೆ. ಇದಕ್ಕೆ ಯಾವುದೇ ಸಮ್ಮತಿ ಸೂಚಿಸದ ಸಿದ್ದರಾಮಯ್ಯ, ಸಭೆ ಬಳಿಕ ನೇರವಾಗಿ ಜಾರ್ಜ್​​​ ನಿವಾಸದಲ್ಲಿದ್ದ ಆಪ್ತ…

Read More

ಆರ್ಟ್ ಆಫ್ ಲಿವಿಂಗ್ 45ರ ಸಂಭ್ರಮ: ಒಂದೇ ವೇದಿಕೆಯಲ್ಲಿ ಬಾಲಿವುಡ್ ತಾರೆಯರು, ಗಣ್ಯರು – Kannada News | Art Of Living 45 Years Celebration in Bengaluru Vikrant Massey Rajkumar Hirani attend

ಆಧ್ಯಾತ್ಮಿಕ ಮತ್ತು ಮಾನವೀಯ ಆಂದೋಲನದ ಪ್ರಮುಖ ಸಂಸ್ಥೆಯಾದ ‘ಆರ್ಟ್ ಆಫ್ ಲಿವಿಂಗ್’ (Art of Living) ತನ್ನ 45 ವರ್ಷಗಳ ಯಶಸ್ವಿ ಪ್ರಯಾಣವನ್ನು ಪೂರೈಸಿದ ಹಿನ್ನೆಲೆಯಲ್ಲಿ, ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಭವ್ಯ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿತ್ತು. ಶ್ರೀ ಶ್ರೀ ರವಿಶಂಕರ್ ಗುರೂಜಿ (Sri Sri Ravi Shankar Guruji) ಅವರ ನಿಸ್ವಾರ್ಥ ಸೇವೆ ಹಾಗೂ ಮಾನವೀಯ ಮೌಲ್ಯಗಳ ಜಾಗೃತಿಯನ್ನು ಗೌರವಿಸಲು ದೇಶದ ಪ್ರಮುಖ ಚಿತ್ರನಿರ್ಮಾಪಕರು, ಬಾಲಿವುಡ್ ತಾರೆಯರು ಹಾಗೂ ರಾಜಕೀಯ ಮುಖಂಡರು…

Read More

5 ರೂ.ಗೆ ತಟ್ಟೆ ತುಂಬ ಮೀನು ಊಟ; ಏನಿದು ಹೊಸ ಯೋಜನೆ? – Kannada News | Fish rice meals for Rs 5 in West Bengal CM Suvendu Adhikari announces new initiatives

ಕೊಲ್ಕತ್ತಾ, ಮೇ 26: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಇಂದು ರಾಜ್ಯದ ಜನರಿಗೆ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಇವುಗಳಲ್ಲಿ 5 ರೂ.ಗೆ ಮೀನು ಊಟ, ಅನ್ನಪೂರ್ಣ ಯೋಜನೆ ಮತ್ತು ರಾಜ್ಯಾದ್ಯಂತ ಮದ್ಯದಂಗಡಿಗಳ ಕುರಿತು ಹೊಸ ನಿಯಮಗಳು ಕೂಡ ಸೇರಿವೆ. ಈ ಮೀನೂಟದಲ್ಲಿ ತಟ್ಟೆಯ ತುಂಬ ಬಿಸಿ ಬಿಸಿ ಅನ್ನ, ದಾಲ್ ಅಥವಾ ಬೇಳೆ ಸಾರು, ಒಂದು ಬಗೆಯ ತರಕಾರಿ ಪಲ್ಯ, ರುಚಿಕರವಾದ ಮೀನಿನ ಸಾರು ಅಥವಾ ಫಿಶ್ ಫ್ರೈ ನೀಡಲಾಗುವುದು. ಬುಧವಾರದಿಂದ ರಾಜ್ಯ…

Read More

ಇನ್ನೇನು ಟೇಕಾಫ್ ಆಗಬೇಕೆನ್ನುವಷ್ಟರಲ್ಲಿ ಇಂಡಿಗೋ ವಿಮಾನದಲ್ಲಿ ಹೊಗೆ: ಆಮೇಲೇನಾಯ್ತು? – Kannada News | Smoke Detected on IndiGo Flight Before Takeoff at Kempegowda Airport in Devanahalli

ದೇವನಹಳ್ಳಿ, ಮೇ 26: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರಲ್ಲಿ ಟೇಕಾಫ್‌ಗೆ ಸಿದ್ಧವಾಗಿದ್ದ ಇಂಡಿಗೋ ವಿಮಾನದ ಇಂಜಿನ್ ಭಾಗದಲ್ಲಿ ಹೊಗೆ ಕಾಣಿಸಿಕೊಂಡ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಬೆಂಗಳೂರಿನಿಂದ ಚೆನ್ನೈಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಟೇಕಾಫ್‌ಗಾಗಿ ರನ್‌ವೇಗೆ ಚಲಿಸುತ್ತಿದ್ದ ವೇಳೆ ಇಂಜಿನ್ ಬಳಿ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಪೈಲಟ್ ವಿಮಾನವನ್ನು ರನ್‌ವೇನಲ್ಲೇ ನಿಲ್ಲಿಸಿದರು. ಸ್ಥಳಕ್ಕೆ ಕೆಐಎಬಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಹಿರಿಯ ತಾಂತ್ರಿಕ ಅಧಿಕಾರಿಗಳು ದೌಡಾಯಿಸಿ ಪರಿಶೀಲಿಸಿದರು. ಮುಂಜಾಗ್ರತಾ ಕ್ರಮವಾಗಿ ವಿಮಾನದಲ್ಲಿದ್ದ ಪ್ರಯಾಣಿಕರನ್ನು…

Read More

9 ಸಿಕ್ಸರ್, 32 ಎಸೆತಗಳಲ್ಲಿ 93 ರನ್..! ರಜತ್ ರೌದ್ರಾವತಾರಕ್ಕೆ ಗುಜರಾತ್ ವಿಲವಿಲ – Kannada News | Rajat Patidar’s IPL 2026 Qualifier 1 Heroics: RCB Captain Smashes 93 vs GT

ಗುಜರಾತ್ ಟೈಟಾನ್ಸ್ ವಿರುದ್ಧದ ಐಪಿಎಲ್ 2026 ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದರ್ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದರು. ನಿರ್ಣಾಯಕ ಪಂದ್ಯದಲ್ಲಿ ನಾಯಕನ ಇನ್ನಿಂಗ್ಸ್ ಆಡಿದ ರಜತ್ ಬಲಿಷ್ಠ ಗುಜರಾತ್ ಬೌಲಿಂಗ್ ವಿಭಾಗವನ್ನು ಹೈರಾಣಾಗಿಸಿದರು. ತಂಡ ಆರಂಭಿಕ ಆಘಾತಕ್ಕೆ ಸಿಲುಕಿಕೊಂಡಿದ್ದರೂ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದ ರಜತ್ ಆ ಬಳಿಕ ರೌದ್ರಾವತಾರ ತಾಳಿದರು ಇದರ ಪರಿಣಾಮವಾಗಿ ರಜತ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆ ಬಳಿಕ ಮತ್ತಷ್ಟು ಉಗ್ರರೂಪ ತಾಳಿದ ರಜತ್…

Read More

ಪ್ರತಿದಿನ 1 ಕಿಲೋಮೀಟರ್ ನಡೆದರೆ ಎಷ್ಟು ಕ್ಯಾಲೊರಿ ಕರಗುತ್ತೆ ಗೊತ್ತಾ? ಇಲ್ಲಿದೆ ಆರೋಗ್ಯ ತಜ್ಞರು ನೀಡಿರುವ ಮಹತ್ವದ ಮಾಹಿತಿ – Kannada News | 1 KM Walk Benefits: How Just 10 Minutes A Day Transforms Your Body & Brain

ಇಂದಿನ ವೇಗದ ಜೀವನಶೈಲಿಯಲ್ಲಿ ಫಿಟ್ ಆಗಿರುವುದು ದೊಡ್ಡ ಸವಾಲಾಗಿದೆ. ವ್ಯಾಯಾಮ ಮಾಡುವುದಕ್ಕೂ ಸಮಯ ಸಿಗದವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ ಕೇವಲ 1 ಕಿಲೋಮೀಟರ್ ನಡೆಯುವ (Walk) ಅಭ್ಯಾಸವೂ ದೇಹದ ಆರೋಗ್ಯದಲ್ಲಿ ದೊಡ್ಡ ಬದಲಾವಣೆ ತರಬಹುದು. ಹೌದು, ತಜ್ಞರು ನೀಡಿರುವ ಮಾಹಿತಿ ಅನುಸಾರ, ಸಾಮಾನ್ಯವಾಗಿ 1 ಕಿ.ಮೀ. ನಡೆದರೆ ಸುಮಾರು 60ರಿಂದ 100 ಕ್ಯಾಲೊರಿಗಳವರೆಗೆ ಕರಗಿಸಬಹುದು. ಇದು ವ್ಯಕ್ತಿಯ ತೂಕ, ಎತ್ತರ ಮತ್ತು ನಡೆಯುವ ವೇಗದ ಮೇಲೆ ಅವಲಂಬಿತವಾಗಿರುತ್ತದೆ. ವೇಗವಾಗಿ ನಡೆದಷ್ಟು ಹೆಚ್ಚು…

Read More

RCB vs GT: ಐಪಿಎಲ್ ಪ್ಲೇಆಫ್‌ನಲ್ಲಿ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ – Kannada News | Virat Kohli Sets New IPL Playoff Record in RCB vs GT Q1 2026 Match

ಐಪಿಎಲ್ 2026 ಕ್ವಾಲಿಫೈಯರ್ 1 (IPL 2026 Qualifier 1) ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ (RCB vs GT) ನಡುವೆ ನಡೆಯಿತು. ಈ ಪಂದ್ಯದಲ್ಲಿ ಆರ್​​ಸಿಬಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಮತ್ತೊಂದು ಅದ್ಭುತ ಮೈಲಿಗಲ್ಲು ಸಾಧಿಸಿದ್ದಾರೆ. ಐಪಿಎಲ್​ನ ಮೊದಲ ಸೀಸನ್‌ನಿಂದಲೂ ಆರ್‌ಸಿಬಿ ತಂಡದ ಆಧಾರಸ್ತಂಭವಾಗಿರುವ ಕೊಹ್ಲಿ, ಐಪಿಎಲ್ 2026 ರ ಕ್ವಾಲಿಫೈಯರ್ 1 ಪಂದ್ಯದಲ್ಲಿ ಆಡುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಮೇ 26 ರಂದು ಧರ್ಮಶಾಲಾದಲ್ಲಿ…

Read More