40 ವರ್ಷಗಳ ನಂತರ ಶ್ರೀನಗರದಲ್ಲಿ ಪ್ರಮುಖ ಕ್ರಿಕೆಟ್ ಪಂದ್ಯ – Kannada News | Irani Cup Returns to Srinagar After 4 Decades: J&K Domestic Cricket Season Begins

ದುಲೀಪ್ ಟ್ರೋಫಿ (Duleep Trophy) ಆರಂಭದೊಂದಿಗೆ ಭಾರತದಲ್ಲಿ ದೇಶೀ ಕ್ರಿಕೆಟ್ ಸೀಸನ್ ಕೂಡ ಆರಂಭವಾಗಲಿದೆ. ದುಲೀಪ್ ಟ್ರೋಫಿ ಇದೇ ತಿಂಗಳು ಅಂದರೆ ಆಗಸ್ಟ್ 23 ರಿಂದ ಆರಂಭವಾಗಿ​ ಸೆಫ್ಟೆಂಬರ್ 10ರವರೆಗೆ ನಡೆಯಲಿದೆ. ಇದಾದ ಬಳಿಕ ಹಾಲಿ ರಣಜಿ ಚಾಂಪಿಯನ್ ಜಮ್ಮು ಮತ್ತು ಕಾಶ್ಮೀರ (Jammu Kashmir) ಹಾಗೂ ರೆಸ್ಟ್ ಆಫ್ ಇಂಡಿಯಾ ತಂಡಗಳ ನಡುವೆ ಇರಾನಿ ಕಪ್ (Irani Cup) ಅಕ್ಟೋಬರ್ 1 ರಿಂದ ಶುರುವಾಗಲಿದೆ. ಈ ಟೂರ್ನಿಯ ವಿಶೇಷತೆ ಏನೆಂದರೆ, ಸುಮಾರು ನಾಲ್ಕು ದಶಕಗಳ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಟೂರ್ನಿಯ ಪಂದ್ಯಗಳು ನಡೆಯಲಿವೆ. ಶ್ರೀನಗರದ ಶೇರ್-ಎ-ಕಾಶ್ಮೀರ ಕ್ರೀಡಾಂಗಣದಲ್ಲಿ ಅಕ್ಟೋಬರ್ 1 ರಿಂದ 5 ರವರೆಗೆ ಇರಾನಿ ಕಪ್ ನಡೆಯಲಿದೆ.

ಇರಾನಿ ಕಪ್ ಪಂದ್ಯ

1980 ರ ದಶಕದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ಅತಿದೊಡ್ಡ ಕ್ರಿಕೆಟ್ ಪಂದ್ಯ ಇದಾಗಲಿದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕೋಚ್ ಅಜಯ್ ಶರ್ಮಾ ಗೆ ತಿಳಿಸಿದ್ದಾರೆ, ‘ಶ್ರೀನಗರದ ಶೇರ್-ಎ-ಕಾಶ್ಮೀರ ಕ್ರೀಡಾಂಗಣವು ಅಕ್ಟೋಬರ್ 1 ರಿಂದ 5 ರವರೆಗೆ ರಣಜಿ ಚಾಂಪಿಯನ್ ಜಮ್ಮು ಮತ್ತು ಕಾಶ್ಮೀರ ಮತ್ತು ರೆಸ್ಟ್ ಆಫ್ ಇಂಡಿಯಾ ನಡುವಿನ ಇರಾನಿ ಕಪ್ ಪಂದ್ಯವನ್ನು ಆಯೋಜಿಸಲಿದೆ.

ಜಮ್ಮು ಮತ್ತು ಕಾಶ್ಮೀರ 2025-26ರ ರಣಜಿ ಟ್ರೋಫಿಯನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿತ್ತು. ತಂಡವು ಫೈನಲ್‌ನಲ್ಲಿ ಕರ್ನಾಟಕವನ್ನು ಸೋಲಿಸಿ ತನ್ನ ಮೊದಲ ರಣಜಿ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದೀಗ ಇರಾನಿ ಕಪ್‌ನಲ್ಲಿ ದೇಶದ ಅಗ್ರ ಆಟಗಾರರನ್ನು ಒಳಗೊಂಡ ತಂಡವಾದ ರೆಸ್ಟ್ ಆಫ್ ಇಂಡಿಯಾ ವಿರುದ್ಧ ಜಮ್ಮು ಕಾಶ್ಮೀರ ಪಂದ್ಯವನ್ನಾಡಲಿದೆ.

1986 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯ

ಇನ್ನು ಇರಾನಿ ಕಪ್​ಗೆ ಆತಿಥ್ಯವಹಿಸುತ್ತಿರುವ ಶೇರ್-ಎ-ಕಾಶ್ಮೀರ್ ಕ್ರೀಡಾಂಗಣ ತನ್ನದೇಯಾದ ಇತಿಹಾಸವನ್ನು ಹೊಂದಿದೆ. ಈ ಮೈದಾನದಲ್ಲಿ ಟೀಂ ಇಂಡಿಯಾ 1983 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮತ್ತು 1986 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಗಳನ್ನು ಆಡಿತ್ತು. ಆದರೆ ಇದಾದ ಬಳಿಕ ಭದ್ರತಾ ಕಾಳಜಿ ಮತ್ತು ಇತರ ಸಂದರ್ಭಗಳಿಂದಾಗಿ, ಪ್ರಮುಖ ಕ್ರಿಕೆಟ್ ಪಂದ್ಯಗಳನ್ನು ಈ ಮೈದಾನದಲ್ಲಿ ನಡೆಸಲಾಗಲಿಲ್ಲ.

Duleep Trophy 2025: ರಜತ್ ಪಾಟಿದರ್ ನಾಯಕತ್ವದಲ್ಲಿ ದುಲೀಪ್ ಟ್ರೋಫಿ ಗೆದ್ದ ಕೇಂದ್ರ ವಲಯ

ಕಳೆದ ಕೆಲವು ವರ್ಷಗಳಿಂದ ಕ್ರೀಡಾಂಗಣವನ್ನು ನವೀಕರಿಸಲಾಗಿದ್ದು, ದೇಶೀಯ ಕ್ರಿಕೆಟ್ ಮರಳಿದೆ. ಇರಾನಿ ಕಪ್ ಅನ್ನು ಆಯೋಜಿಸುವುದು ಈಗ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್‌ಗೆ ಐತಿಹಾಸಿಕ ಕ್ಷಣವಾಗಿದೆ. ಪಂದ್ಯವು ವೇಳಾಪಟ್ಟಿಯ ಪ್ರಕಾರ ನಡೆದರೆ, ಶ್ರೀನಗರ ಮತ್ತೊಮ್ಮೆ ಭಾರತೀಯ ಕ್ರಿಕೆಟ್ ಕ್ಯಾಲೆಂಡರ್‌ನ ಅತ್ಯಂತ ಪ್ರತಿಷ್ಠಿತ ದೇಶೀಯ ಈವೆಂಟ್‌ಗಳಲ್ಲಿ ಸೇರ್ಪಡೆಯಾಗಲಿದೆ ಮತ್ತು ಸ್ಥಳೀಯ ಕ್ರಿಕೆಟ್ ಅಭಿಮಾನಿಗಳಿಗೆ ದೀರ್ಘ ಕಾಯುವಿಕೆಯ ನಂತರ ದೊಡ್ಡ ಪಂದ್ಯವನ್ನು ವೀಕ್ಷಿಸುವ ಅವಕಾಶ ಸಿಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಾಮಾಯಣ ಟ್ರೇಲರ್‌ ನನ್ನನ್ನು ಇಂಪ್ರೆಸ್ ಮಾಡಿಲ್ಲ: ‘ಮಹಾಭಾರತ’ ಖ್ಯಾತಿಯ ಗಜೇಂದ್ರ ಚೌಹಾಣ್ ಪ್ರತಿಕ್ರಿಯೆ – Kannada News | Gajendra Chauhan not impressed with Ranbir Kapoor Ramayana Trailer criticises Kaikeyi Look

ಬಿ.ಆರ್. ಚೋಪ್ರಾ ಅವರ ಪ್ರಸಿದ್ಧ ‘ಮಹಾಭಾರತ’ ಧಾರಾವಾಹಿಯಲ್ಲಿ ಯುಧಿಷ್ಠಿರನ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ಹಿರಿಯ ನಟ ಗಜೇಂದ್ರ ಚೌಹಾಣ್ (Gajendra Chauhan) ಅವರು ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾದ ಟ್ರೇಲರ್ ಕುರಿತು ತಮ್ಮ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್ (Ranbir Kapoor) ಗೆಟಪ್ ಚೆನ್ನಾಗಿದೆ ಎಂದಿರುವ ಅವರು, ಟ್ರೇಲರ್‌ನ ಕೆಲವು ಭಾಗಗಳು ತಮಗೆ ಸಂಪೂರ್ಣ ತೃಪ್ತಿ ನೀಡಿಲ್ಲ ಎಂದು ಹೇಳಿದ್ದಾರೆ.

‘ಹಿಂದಿ ರಶ್’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಗಜೇಂದ್ರ ಚೌಹಾಣ್, ಚಿತ್ರದಲ್ಲಿ ನಟಿ ಲಾರಾ ದತ್ತಾ ನಿರ್ವಹಿಸಿರುವ ಕೈಕೇಯಿ ಪಾತ್ರದ ಚಿತ್ರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶ್ರೀರಾಮನನ್ನು ವನವಾಸಕ್ಕೆ ಕಳುಹಿಸುವಂತೆ ದಶರಥ ಮಹಾರಾಜನ ಬಳಿ ಕೈಕೇಯಿ ಕೇಳುವ ದೃಶ್ಯವನ್ನು ತೋರಿಸಿದ ರೀತಿ ಅವರಿಗೆ ಇಷ್ಟವಾಗಿಲ್ಲ. ‘ನಾನು ರಾಮಾಯಣ ಟ್ರೇಲರ್ ನೋಡಿದೆ. ವೈಯಕ್ತಿಕವಾಗಿ ಹೇಳಬೇಕೆಂದರೆ, ನನಗೇನೂ ಇಂಪ್ರೆಸ್ ಆಗಿಲ್ಲ. ಶ್ರೀರಾಮನ ವನವಾಸವನ್ನು ಕೋರುವ ಕೈಕೇಯಿಯ ದೃಶ್ಯ ನನ್ನನ್ನು ಸೆಳೆಯಲಿಲ್ಲ. ಆಕೆಯ ವೇಷಭೂಷಣ ತುಂಬಾ ಆಧುನಿಕವಾಗಿದೆ. ಅವರಿಗೆ ಆಧುನಿಕ ಶೈಲಿಯ ಸೀರೆಯನ್ನು ನೀಡಲಾಗಿದೆ’ ಎಂದು ಚೌಹಾಣ್ ಹೇಳಿದ್ದಾರೆ.

2002ರಲ್ಲಿ ರವಿ ಚೋಪ್ರಾ ಅವರ ‘ರಾಮಾಯಣ’ ಧಾರಾವಾಹಿಯಲ್ಲಿ ದಶರಥನಾಗಿ ಅಭಿನಯಿಸಿದ ಅನುಭವವನ್ನು ನೆನಪಿಸಿಕೊಂಡ ಅವರು, ಮಂಥರೆಯ ಮಾತಿಗೆ ಮರುಳಾಗಿ ಕೈಕೇಯಿ ವನವಾಸ ಕೇಳುವ ಘಟನೆಯು ಇಡೀ ಕುಟುಂಬ ಒಡೆಯುವ ಪ್ರಮುಖ ಭಾವನಾತ್ಮಕ ತಿರುವು. ಹಾಗಾಗಿ ಅಂತಹ ದೃಶ್ಯಗಳನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ಭಾವನಾತ್ಮಕವಾಗಿ ಸೆರೆಹಿಡಿಯಬೇಕಿತ್ತು ಎಂದಿದ್ದಾರೆ.

‘ರಾಮಾಯಣ’ ಸಿನಿಮಾದ ಟ್ರೇಲರ್:

ಆದಾಗ್ಯೂ, ರಣಬೀರ್ ಕಪೂರ್ ಅವರ ಶ್ರೀರಾಮನ ಗೆಟಪ್​ ಅನ್ನು ಗಜೇಂದ್ರ ಚೌಹಾಣ್ ಶ್ಲಾಘಿಸಿದ್ದಾರೆ. ‘ರಣಬೀರ್ ಕಪೂರ್ ಅವರಿಗೆ ಸ್ಟಾರ್ ಆಗಿ ತಮ್ಮದೇ ಆದ ಇಮೇಜ್ ಇದೆ. ಅವರು ದೊಡ್ಡ ನಟ. ಈಗ ರಾಮನ ಪಾತ್ರ ಮಾಡುತ್ತಿದ್ದಾರೆ. ಆ ಗೆಟಪ್‌ನಲ್ಲಿ ಅವರು ನಿಜಕ್ಕೂ ಚೆನ್ನಾಗಿ ಕಾಣಿಸುತ್ತಿದ್ದಾರೆ. ಅದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಪಾತ್ರದ ವಸ್ತ್ರಗಳ ಬಗೆಗಿನ ಟೀಕೆಗೆ ಸ್ಪಷ್ಟನೆ ನೀಡಿದ ವಿನ್ಯಾಸಕರು

‘ನಮ್ಮ ಸಂಸ್ಕೃತಿ ಮತ್ತು ಹಿಂದಿನ ಸಿನಿಮಾಗಳಿಂದಾಗಿ ಜನರ ಮನಸ್ಸಿನಲ್ಲಿ ಶ್ರೀರಾಮನ ಬಗ್ಗೆ ನಿರ್ದಿಷ್ಟವಾದ ದೈವಿಕ ಕಲ್ಪನೆ ಆಳವಾಗಿ ಬೇರೂರಿದೆ. ಹಾಗಾಗಿ ಅಂತಹ ನಿರೀಕ್ಷೆಗಳನ್ನು ತಲುಪುವುದು ಯಾವುದೇ ನಟನಿಗೂ ಸವಾಲಿನ ಕೆಲಸ. ಆದರೂ ಕೇವಲ ಟ್ರೇಲರ್ ನೋಡಿ ನಟನೆಯನ್ನು ನಿರ್ಣಯಿಸುವುದು ಸರಿಯಲ್ಲ. ಸಂಪೂರ್ಣ ಸಿನಿಮಾ ಬಿಡುಗಡೆಯಾದ ಮೇಲೆಯೇ ಅಂತಿಮ ಅಭಿಪ್ರಾಯಕ್ಕೆ ಬರಬಹುದು’ ಎಂದು ಗಜೇಂದ್ರ ಚೌಹಾಣ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸ್ಮಾಲ್ ಫೈನಾನ್ಸ್ ಬ್ಯಾಂಕ್ vs ಕಾರ್ಪೊರೇಟ್ ಎಫ್​ಡಿ, ಎರಡರಲ್ಲೂ ಶೇ. 8ಕ್ಕಿಂತ ಹೆಚ್ಚು ಬಡ್ಡಿ; ಯಾವುದರಲ್ಲಿ ಹೂಡಿಕೆ ಸೂಕ್ತ? – Kannada News | Good investment options in deposits smb vs corporate fd know which one suits you

ನಿಶ್ಚಿತ ಆದಾಯ ನೀಡುವ ಹೂಡಿಕೆಗಳಲ್ಲಿ ಹಲವು ಆಯ್ಕೆಗಳಿವೆ. ಬ್ಯಾಂಕ್ ಡೆಪಾಸಿಟ್, ಡೆಟ್ ಫಂಡ್, ಸರ್ಕಾರಿ ಬಾಂಡ್, ಕಾರ್ಪೊರೇಟ್ ಎಫ್​ಡಿ, ಕಾರ್ಪೊರೇಟ್ ಬಾಂಡ್ ಮೊದಲಾದವಿವೆ. ಫಿಕ್ಸೆಡ್ ಡೆಪಾಸಿಟ್ ಎಂದು ಬಂದರೆ ಬ್ಯಾಂಕ್ ಡೆಪಾಸಿಟ್, ಕಾರ್ಪೊರೇಟ್ ಎಫ್​ಡಿ ಆಯ್ಕೆಗಳಿವೆ. ಹೂಡಿಕೆದಾರರಿಗೆ ಸುರಕ್ಷಿತ ಆದಾಯ ನೀಡುವ ಫಿಕ್ಸ್ಡ್ ಡೆಪಾಸಿಟ್ (FD) ವಲಯದಲ್ಲಿ ಈಗ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಒಂದೆಡೆ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳು (SFB) ಮತ್ತು ಇನ್ನೊಂದೆಡೆ ಕಾರ್ಪೊರೇಟ್ ಕಂಪನಿಗಳು (Corporate FDs) ಹೂಡಿಕೆದಾರರನ್ನು ಸೆಳೆಯಲು ಶೇಕಡಾ 8 ಕ್ಕಿಂತಲೂ ಹೆಚ್ಚಿನ ಆಕರ್ಷಕ ಬಡ್ಡಿದರಗಳನ್ನು ನೀಡುತ್ತಿವೆ. ಆದರೆ, ಎರಡರಲ್ಲೂ ಉತ್ತಮ ಬಡ್ಡಿ ಸಿಗುತ್ತಿದ್ದರೂ, ನಿಮ್ಮ ಹಣ ಹೂಡಿಕೆ ಮಾಡುವ ಮುನ್ನ ಸುರಕ್ಷತೆ ಮತ್ತು ಅಪಾಯದ (Risk) ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಅತ್ಯಗತ್ಯ.

ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಫ್‌ಡಿ – ಸುರಕ್ಷತೆಗೆ ಮೊದಲ ಆದ್ಯತೆ

ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳಲ್ಲಿ (SFB) ಹೂಡಿಕೆ ಮಾಡುವುದು ಸಾಮಾನ್ಯ ವಾಣಿಜ್ಯ ಬ್ಯಾಂಕ್‌ಗಳಷ್ಟೇ ಸುರಕ್ಷಿತ.

  • DICGC ಗ್ಯಾರಂಟಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅಡಿಯಲ್ಲಿ ಬರುವ ‘ಡೆಪಾಸಿಟ್ ಇನ್ಶೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್’ (DICGC) ನಿಯಮಾವಳಿಯಂತೆ, ಪ್ರತಿ ಬ್ಯಾಂಕ್ ಖಾತೆದಾರರ ₹5 ಲಕ್ಷದವರೆಗಿನ ಡೆಪಾಸಿಟ್‌ಗೆ (ಅಸಲು + ಬಡ್ಡಿ) ಪೂರ್ಣ ಸುರಕ್ಷತೆ ಮತ್ತು ವಿಮೆ ಇರುತ್ತದೆ.
  • ಬಡ್ಡಿದರ: ಜನಾ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಉಜ್ಜೀವನ್, ಸೂರ್ಯೋದಯ್ ಮುಂತಾದ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ 8.5% ರಿಂದ 9% ರವರೆಗೆ ಬಡ್ಡಿದರ ನೀಡುತ್ತಿವೆ.

ಬ್ಯಾಂಕ್‌ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರೂ ₹5 ಲಕ್ಷದವರೆಗಿನ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ.

ಇದನ್ನೂ ಓದಿ: ರೀಟೇಲ್ ಹಣದುಬ್ಬರ ಜುಲೈನಲ್ಲಿ ಶೇ. 4.45ಕ್ಕೆ ಏರಿಕೆ; ಆರ್​ಬಿಐನ ತಾಳಿಕೆ ಮಿತಿಯೊಳಗಿದೆ ಬೆಲೆ ಏರಿಕೆ ದರ

ಕಾರ್ಪೊರೇಟ್ ಎಫ್‌ಡಿ – ಹೆಚ್ಚಿನ ಆದಾಯ, ಆದರೆ ಆಪತ್ತು ಹೆಚ್ಚು

ಕಾರ್ಪೊರೇಟ್ ಅಥವಾ ಕಂಪನಿ ಎಫ್‌ಡಿಗಳನ್ನು (Corporate FDs) ಆರ್ಥಿಕವಾಗಿ ಸೌಂಡ್ ಆಗಿರುವ ಕಂಪನಿಗಳು ಮತ್ತು ಎನ್‌ಬಿಎಫ್‌ಸಿಗಳು (NBFC) ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಲು ನೀಡುತ್ತವೆ.

  • ಕ್ರೆಡಿಟ್ ರೇಟಿಂಗ್ ಮುಖ್ಯ: ಈ ಎಫ್‌ಡಿಗಳಲ್ಲಿ ಹೂಡಿಕೆ ಮಾಡುವ ಮುನ್ನ CRISIL, ICRA ನಂತಹ ಸಂಸ್ಥೆಗಳು ನೀಡುವ ರೇಟಿಂಗ್ ನೋಡಬೇಕು. ‘AAA’ ಅಥವಾ ‘AA+’ ರೇಟಿಂಗ್ ಇರುವ ಕಂಪನಿಗಳು ಸುರಕ್ಷಿತ ಎನಿಸಿಕೊಳ್ಳುತ್ತವೆ.
  • ಯಾವುದೇ DICGC ವಿಮೆ ಇಲ್ಲ: ಬ್ಯಾಂಕ್‌ಗಳಂತೆ ಕಂಪನಿ ಎಫ್‌ಡಿಗಳಿಗೆ ಆರ್‌ಬಿಐನ ₹5 ಲಕ್ಷದ ವಿಮಾ ಸುರಕ್ಷತೆ ಇರುವುದಿಲ್ಲ. ಕಂಪನಿ ನಷ್ಟಕ್ಕೆ ಸಿಲುಕಿದರೆ ಅಥವಾ ದಿವಾಳಿಯಾದರೆ ಹೂಡಿಕೆದಾರರು ಹಣ ಕಳೆದುಕೊಳ್ಳುವ ಅಪಾಯವಿರುತ್ತದೆ.
  • ಬಡ್ಡಿದರ: ಉತ್ತಮ ರೇಟಿಂಗ್ ಹೊಂದಿರುವ ಕಂಪನಿಗಳು 8% ರಿಂದ 8.75% ರವರೆಗೆ ಬಡ್ಡಿ ನೀಡುತ್ತವೆ. ಕಡಿಮೆ ರೇಟಿಂಗ್ ಇರುವ ಕಂಪನಿಗಳು ಹೆಚ್ಚು ಬಡ್ಡಿ ನೀಡುತ್ತವಾದರೂ ರಿಸ್ಕ್ ಸಾಧ್ಯತೆ ಹೆಚ್ಚು.

ಇದನ್ನೂ ಓದಿ: ಟಾಟಾ ಸನ್ಸ್ ಉನ್ನತ ಸ್ಥಾನ ತೊರೆದ ಎನ್ ಚಂದ್ರಶೇಖರನ್ ಅವರ ವೇತನ, ಕಮಿಷನ್ ಇತ್ಯಾದಿ ವರಮಾನ ಎಷ್ಟು ಗೊತ್ತಾ?

ಹೂಡಿಕೆದಾರರು ಹೇಗೆ ಆಯ್ಕೆ ಮಾಡಬೇಕು?

ಸುರಕ್ಷತೆ ಬಯಸುವವರಿಗೆ: ನೀವು ಹಿರಿಯ ನಾಗರಿಕರಾಗಿದ್ದು, ನಿಮ್ಮ ಬಂಡವಾಳಕ್ಕೆ ಯಾವುದೇ ಅಪಾಯವಿರಬಾರದು ಎಂದರೆ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಫ್‌ಡಿ ಅತ್ಯುತ್ತಮ. ಹೆಚ್ಚು ಹಣ ಇದ್ದಾಗ, ಬೇರೆ ಬೇರೆ SFB ಬ್ಯಾಂಕ್‌ಗಳಲ್ಲಿ ತಲಾ ₹5 ಲಕ್ಷದಂತೆ ಹೂಡಿಕೆ ಮಾಡುವುದರಿಂದ ಸಂಪೂರ್ಣ ಹಣಕ್ಕೆ ವಿಮಾ ಸುರಕ್ಷತೆ ಪಡೆಯಬಹುದು.

ಸ್ವಲ್ಪ ರಿಸ್ಕ್ ತೆಗೆದುಕೊಳ್ಳುವವರಿಗೆ: ಹೆಚ್ಚಿನ ಆದಾಯದ ಜೊತೆಗೆ ಉತ್ತಮ ಕ್ರೆಡಿಟ್ ರೇಟಿಂಗ್ (AAA ರೇಟಿಂಗ್) ಹೊಂದಿರುವ ಪ್ರತಿಷ್ಠಿತ ಕಂಪನಿಗಳ ಎಫ್‌ಡಿಗಳಲ್ಲಿ ಒಟ್ಟು ಹೂಡಿಕೆಯ ಸಣ್ಣ ಭಾಗವನ್ನು ಮಾತ್ರ ಇಡಬಹುದು.

ಅಂತಿಮವಾಗಿ, ಕೇವಲ ಹೆಚ್ಚಿನ ಬಡ್ಡಿದರವನ್ನು ನೋಡಿ ನಿರ್ಧಾರ ಕೈಗೊಳ್ಳುವ ಬದಲು, ನಿಮ್ಮ ಆರ್ಥಿಕ ಗುರಿ ಮತ್ತು ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಆಧರಿಸಿ ಹೂಡಿಕೆ ಮಾಡುವುದು ಸೂಕ್ತ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೀದರ್​ನಲ್ಲಿ ಶೂಟೌಟ್​ ಮಾಡಿ 83 ಲಕ್ಷ ಹಣ ದರೋಡೆ ಕೇಸ್: 19 ತಿಂಗಳ ಬಳಿಕ‌ ಆರೋಪಿಗಳ ಬಂಧನ – Kannada News | Bidar 83 Lakh ATM Robbery: Accused Arrested After 19 Months in Bihar

ಬೀದರ್, ಆಗಸ್ಟ್​​ 12: 2025ರ ಜನವರಿ 16ರಂದು ಬೀದರ್​ (bidar) ನಗರದಲ್ಲಿ ಹಾಡಹಗಲೇ ನಡೆದಿದ್ದ ಎಟಿಎಂ ದರೋಡೆ (ATM Robbery) ಮತ್ತು ಕೊಲೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಇಬ್ಬರು ದರೋಡೆಕೋರರನ್ನು ಬೀದರ್ ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ಬರೋಬ್ಬರಿ 19 ತಿಂಗಳ ಬಳಿಕ‌ ಖಾಕಿ ಪಡೆ ಪ್ರಕರಣವನ್ನು ಭೇದಿಸಿದೆ. ಅಲೋಕ್ ಹಾಗೂ ಅಮನ್ ಬಂಧಿತರು. ಸದ್ಯ ಬೀದರ್ ಪೊಲೀಸರು ಆರೋಪಿಗಳನ್ನು ಬಿಹಾರದಿಂದ ಕರೆತರುತ್ತಿದ್ದಾರೆ.

ಪಟಾಕಿ ಸಿಡಿಸಿ ಜನರ ಸಂಭ್ರಮಾಚರಣೆ

ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟೆ ಅವರ ಮಾರ್ಗದರ್ಶನದಲ್ಲಿ, 50 ಸಿಬ್ಬಂದಿಗಳನ್ನೊಳಗೊಂಡ ವಿಶೇಷ ಪೊಲೀಸ್ ಪಡೆ ಬಿಹಾರದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಅತ್ತ ದರೋಡೆಕೋರರ ಬಂಧನವಾಗುತ್ತಿದ್ದಂತೆ ಇತ್ತ ನಗರದಲ್ಲಿ ಪಟಾಕಿ ಸಿಡಿಸಿ ಜನರು ಸಂಭ್ರಮಾಚರಣೆ ಮಾಡಿದರು.

ಪ್ರಕರಣ ಹಿನ್ನೆಲೆ

2025ರ ಜನವರಿ 16ರ ಬೆಳಿಗ್ಗೆ 11 ಗಂಟೆಗೆ ಹಾಡಹಗಲೇ ಬೀದರ್‌ನ ಶಿವಾಜಿ ವೃತ್ತದ ಬಳಿ ಇರುವ ಎಸ್‌ಬಿಐ ಎಟಿಎಂಗೆ ನಗದು ತುಂಬಿಸಲು ಸಿಬ್ಬಂದಿ ವಾಹನದಲ್ಲಿ ಬಂದಿದ್ದಾಗ, ಇಬ್ಬರು ದುಷ್ಕರ್ಮಿಗಳು ಪಿಸ್ತೂಲ್‌ನಿಂದ ಗುಂಡಿನ ದಾಳಿ ನಡೆಸಿ 83 ಲಕ್ಷ ರೂಪಾಯಿ ನಗದನ್ನು ದೋಚಿ ಆರೋಪಿಗಳು ಪರಾರಿಯಾಗಿದ್ದರು.

ಇದನ್ನೂ ಓದಿ: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬೀದರ್‌ ATM ದರೋಡೆ ಕೇಸ್‌ಗೆ 1 ವರ್ಷ: ಆರೋಪಿಗಳ ಸುಳಿವೇ ಇಲ್ಲ

ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ದರೋಡೆಕೋರರ ದಾಳಿಗೆ ಬೀದರ್​ನ ನಿವಾಸಿ ಗಿರಿ ವೆಂಕಟೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಶಿವಕುಮಾರ್ ಎಂಬ ಮತ್ತೊಬ್ಬ ಸಿಬ್ಬಂದಿ ಗಾಯಗೊಂಡಿದ್ದರು. ದರೋಡೆಯಲ್ಲಿ ಭಾಗವಹಿಸಿದ ಗ್ಯಾಂಗ್ ದರೋಡೆಗೂ ಮುನ್ನ ಪಕ್ಕಾ ಪ್ಲ್ಯಾನ್ ಮಾಡಿತ್ತು. ದರೋಡೆ ಮಾಡುವ ಎರಡು ದಿನ ಮುನ್ನ ಬೀದರ್​ನಲ್ಲಿ ದರೋಡೆಕೋರರು ಉಳಿದುಕೊಂಡಿದ್ದರು.

ಇದನ್ನೂ ಓದಿ: ಬೆನ್ನಟ್ಟಿದ್ದ ಪೊಲೀಸರ ಮೇಲೆಯೇ ಫೈರಿಂಗ್ ಮಾಡಿ ಬೀದರ್​ ದರೋಡೆಕೋರರು ಎಸ್ಕೇಪ್

ದರೋಡೆ ಮಾಡಿಕೊಂಡು ಯಾವ ಮಾರ್ಗದಲ್ಲಿ ಹೋಗಬೇಕು ಎನ್ನುವುದನ್ನು ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದ ಗ್ಯಾಂಗ್, ಆ ಪ್ರಕಾರವೇ ಹಣವನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಇದೀಗ ಸುದೀರ್ಘ ಕಾರ್ಯಚರಣೆ ಬಳಿಕ ಅಂದರೆ ಒಂದು ವರ್ಷ 7 ತಿಂಗಳ ನಂತರ ಆರೋಪಿಗಳನ್ನು ಬೀದರ್ ಪೊಲೀಸರು ಸೆರೆಹಿಡಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಳೆಗಾಲದಲ್ಲಿ ಮನೆಯಲ್ಲಿ ಜರ್ಮ್ಸ್‌ ಹೆಚ್ಚಾಗದಂತೆ ತಡೆಯುವುದು ಹೇಗೆ? ಈ ಟಿಪ್ಸ್‌ ಪಾಲಿಸಿ – Kannada News | Germs Increase During Monsoon: How to Keep Your Home Clean and Dry

ಮಳೆಗಾಲ ಆರಂಭವಾಗುತ್ತಿದ್ದಂತೆ ಮನೆಗಳಲ್ಲಿ ತೇವಾಂಶ ಹೆಚ್ಚಾಗುತ್ತದೆ. ಇದರಿಂದ ಕಿಚನ್‌, ಬಾತ್‌ರೂಮ್‌, ನೆಲ, ಗೋಡೆಗಳು ಸೇರಿದಂತೆ ಹಲವು ಜಾಗಗಳು ಹೆಚ್ಚು ಹೊತ್ತು ತೇವವಾಗಿರುವ ಸಾಧ್ಯತೆ ಇರುತ್ತದೆ. ಇಂತಹ ವಾತಾವರಣದಲ್ಲಿ ಜರ್ಮ್ಸ್‌, ಬ್ಯಾಕ್ಟೀರಿಯಾ ಮತ್ತು ಫಂಗಸ್‌ ಬೆಳೆಯಬಹುದು. ಇದರಿಂದ ಕೆಲವರಿಗೆ ಸೋಂಕು, ಅಲರ್ಜಿ, ಚರ್ಮದ ಸಮಸ್ಯೆ ಅಥವಾ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳಬಹುದು. ಮನೆಯ ಸ್ವಚ್ಛತೆ ಎಂದರೆ ಕಣ್ಣಿಗೆ ಕಾಣುವ ಧೂಳು ಮತ್ತು ಕೊಳೆಯನ್ನು ತೆಗೆಯುವುದಷ್ಟೇ ಅಲ್ಲ. ಪದೇಪದೆ ಕೈಗೆ ತಾಗುವ ವಸ್ತುಗಳು, ಕಿಚನ್‌ ಸಿಂಕ್‌, ಡಿಶ್‌ಕ್ಲಾತ್‌, ಸ್ಪಾಂಜ್‌, ಬಾತ್‌ರೂಮ್‌ ಮತ್ತು ತೇವವಾಗಿರುವ ಸ್ಥಳಗಳನ್ನು ಸರಿಯಾಗಿ ಸ್ವಚ್ಛವಾಗಿಡುವುದು ಕೂಡ ಮುಖ್ಯ. ಹಾಗಾದರೆ ಮಳೆಗಾಲದಲ್ಲಿ ಮನೆಯನ್ನು ಜರ್ಮ್ಸ್‌ಗಳಿಂದ ಸುರಕ್ಷಿತವಾಗಿಡುವುದು ಹೇಗೆ ಎಂಬುದಕ್ಕೆ ಇಲ್ಲಿದೆ ಕೆಲವು ಸರಳ ಸಲಹೆಗಳು.

ಪದೇಪದೆ ಮುಟ್ಟುವ ಸ್ಥಳಗಳನ್ನು ಸ್ವಚ್ಛಗೊಳಿಸಿ

ಬಾಗಿಲಿನ ಹ್ಯಾಂಡಲ್‌, ಲೈಟ್‌ ಸ್ವಿಚ್‌, ಮೆಟ್ಟಿಲಿನ ರೈಲಿಂಗ್‌, ಟೇಬಲ್‌, ಕೌಂಟರ್‌ ಸೇರಿದಂತೆ ಪದೇಪದೆ ಕೈಗೆ ತಾಗುವ ಸ್ಥಳಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಈ ಜಾಗಗಳಲ್ಲಿ ಕೊಳಕು ಮತ್ತು ಜರ್ಮ್ಸ್‌ ಸಂಗ್ರಹವಾಗುವ ಸಾಧ್ಯತೆ ಇರುತ್ತದೆ. ಮನೆಯ ಮೇಲ್ಮೈಗೆ ಸೂಕ್ತವಾದ ಕ್ಲೀನರ್‌ ಅಥವಾ ಸಾಬೂನು ಮತ್ತು ನೀರನ್ನು ಬಳಸಿ ಸ್ವಚ್ಛಗೊಳಿಸಬಹುದು.

ಕಿಚನ್‌ ಸ್ವಚ್ಛತೆಗೆ ಹೆಚ್ಚು ಗಮನ ಕೊಡಿ

ಮಳೆಗಾಲದಲ್ಲಿ ಕಿಚನ್‌ನ ಕೌಂಟರ್‌, ಸಿಂಕ್‌, ಗ್ಯಾಸ್‌ ಸ್ಟೌವ್‌ ಮತ್ತು ಇತರ ಮೇಲ್ಮೈಗಳನ್ನು ಸ್ವಚ್ಛವಾಗಿಡುವುದು ಮುಖ್ಯ. ಬಳಸಿದ ಪಾತ್ರೆಗಳನ್ನು ಹೆಚ್ಚು ಹೊತ್ತು ಹಾಗೆಯೇ ಬಿಡದೆ ತೊಳೆಯಿರಿ. ಡಿಶ್‌ಕ್ಲಾತ್‌ ಮತ್ತು ಸ್ಪಾಂಜ್‌ಗಳನ್ನು ಒದ್ದೆಯಾಗಿಯೇ ಇಡಬೇಡಿ. ಅವುಗಳನ್ನು ತೊಳೆದು ಚೆನ್ನಾಗಿ ಹಿಂಡಿ, ಗಾಳಿ ಬೀಸುವ ಜಾಗದಲ್ಲಿ ಒಣಗಿಸಿ. ಹಸಿ ಮಾಂಸ ಮತ್ತು ತರಕಾರಿಗಳನ್ನು ಕತ್ತರಿಸಲು ಒಂದೇ ಕಟಿಂಗ್‌ ಬೋರ್ಡ್‌ ಬಳಸುವುದನ್ನು ತಪ್ಪಿಸುವುದು ಕೂಡ ಆಹಾರದಲ್ಲಿ ಜರ್ಮ್ಸ್‌ ಹರಡುವುದನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.

ಬಾತ್‌ರೂಮ್‌ ಒದ್ದೆಯಾಗಿರದಂತೆ ನೋಡಿಕೊಳ್ಳಿ

ಮಳೆಗಾಲದಲ್ಲಿ ಬಾತ್‌ರೂಮ್‌ನಲ್ಲಿ ತೇವಾಂಶ ಹೆಚ್ಚಾಗುವುದರಿಂದ ಫಂಗಸ್‌ ಬೆಳೆಯುವ ಸಾಧ್ಯತೆ ಹೆಚ್ಚಿರುತ್ತದೆ. ಸ್ನಾನ ಮಾಡಿದ ನಂತರ ನೆಲ ಮತ್ತು ಹೆಚ್ಚು ಒದ್ದೆಯಾಗಿರುವ ಮೇಲ್ಮೈಗಳನ್ನು ಸಾಧ್ಯವಾದಷ್ಟು ಬೇಗ ಒರೆಸಿ. ಬಾತ್‌ರೂಮ್‌ನಲ್ಲಿ ಗಾಳಿಯ ಸಂಚಾರ ಉತ್ತಮವಾಗಿರುವಂತೆ ನೋಡಿಕೊಳ್ಳಿ. ಟಾಯ್ಲೆಟ್‌, ಸಿಂಕ್‌ ಮತ್ತು ಇತರ ಮೇಲ್ಮೈಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಕೂಡ ಮುಖ್ಯ.

ಮನೆಯಲ್ಲಿ ಧೂಳು ಮತ್ತು ಕೊಳೆ ಸಂಗ್ರಹವಾಗದಂತೆ ನೋಡಿಕೊಳ್ಳಿ

ಕಿಟಕಿ, ಫರ್ನಿಚರ್‌, ಶೆಲ್ಫ್‌ ಮತ್ತು ಇತರ ಸ್ಥಳಗಳಲ್ಲಿ ಸಂಗ್ರಹವಾಗುವ ಧೂಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಮೊದಲು ಮೇಲ್ಮೈಯಲ್ಲಿರುವ ಧೂಳನ್ನು ತೆಗೆದುಹಾಕಿ. ನಂತರ ಅಗತ್ಯವಿದ್ದರೆ ವ್ಯಾಕ್ಯೂಮ್‌ ಅಥವಾ ಗುಡಿಸಿ, ಬಳಿಕ ನೆಲ ಒರೆಸಬಹುದು. ಮನೆಯಲ್ಲಿರುವ ಧೂಳು ಕಡಿಮೆಯಾಗುವುದರಿಂದ ಅಲರ್ಜಿಯನ್ನು ಉಂಟುಮಾಡುವ ಕಣಗಳ ಪ್ರಮಾಣವನ್ನು ನಿಯಂತ್ರಿಸಲು ಸಹಾಯವಾಗಬಹುದು.

ಸ್ವಚ್ಛತಾ ಬಟ್ಟೆ ಮತ್ತು ಸ್ಪಾಂಜ್‌ಗಳನ್ನು ಸ್ವಚ್ಛವಾಗಿಡಿ

ಡಿಶ್‌ ಸ್ಪಾಂಜ್‌, ಡಿಶ್‌ಕ್ಲಾತ್‌, ನೆಲ ಒರೆಸುವ ಬಟ್ಟೆ ಮತ್ತು ಇತರ ಕ್ಲೀನಿಂಗ್‌ ಬಟ್ಟೆಗಳಲ್ಲಿ ಜರ್ಮ್ಸ್‌ ಸಂಗ್ರಹವಾಗಬಹುದು. ಬಳಕೆ ಮಾಡಿದ ನಂತರ ಅವುಗಳನ್ನು ಚೆನ್ನಾಗಿ ತೊಳೆದು, ನೀರನ್ನು ಹಿಂಡಿ, ಸಂಪೂರ್ಣ ಒಣಗುವಂತೆ ಇಡಿ. ಕಿಚನ್‌ ಮತ್ತು ಬಾತ್‌ರೂಮ್‌ಗೆ ಪ್ರತ್ಯೇಕ ಬಟ್ಟೆಗಳನ್ನು ಬಳಸುವುದು ಉತ್ತಮ. ಟಾಯ್ಲೆಟ್‌ ಸ್ವಚ್ಛಗೊಳಿಸಲು ಬಳಸಿದ ಬಟ್ಟೆಯನ್ನು ಕಿಚನ್‌ ಕೌಂಟರ್‌ ಅಥವಾ ಊಟದ ಸ್ಥಳದಲ್ಲಿ ಬಳಸಬಾರದು.

ಮನೆ ಸ್ವಚ್ಛಗೊಳಿಸುವಾಗ ಈ ತಪ್ಪು ಮಾಡಬೇಡಿ

ಸ್ವಚ್ಛತೆ ಮಾಡುವಾಗ ಮೊದಲು ವಸ್ತುಗಳನ್ನು ಸರಿಯಾದ ಜಾಗದಲ್ಲಿಡಿ. ನಂತರ ಮೇಲಿನ ಭಾಗಗಳಲ್ಲಿರುವ ಧೂಳನ್ನು ತೆಗೆದುಹಾಕಿ. ಅಗತ್ಯವಿದ್ದರೆ ವ್ಯಾಕ್ಯೂಮ್‌ ಅಥವಾ ಗುಡಿಸಿ, ನಂತರ ನೆಲ ಒರೆಸಿ. ಒದ್ದೆಯಾದ ಜಾಗಗಳನ್ನು ಹೆಚ್ಚು ಹೊತ್ತು ಹಾಗೆಯೇ ಬಿಡಬೇಡಿ. ಮನೆಯಲ್ಲಿ ಗಾಳಿ ಮತ್ತು ಬೆಳಕಿನ ಸಂಚಾರ ಇರುವಂತೆ ನೋಡಿಕೊಳ್ಳಿ. ಒಣ ಮತ್ತು ಉತ್ತಮ ಗಾಳಿಯಾಡುವ ವಾತಾವರಣವು ತೇವಾಂಶ ಮತ್ತು ಫಂಗಸ್‌ ನಿಯಂತ್ರಿಸಲು ಸಹಾಯ ಮಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರೈತರ ಪ್ರತಿಭಟನೆಗೆ ಬಾರದ ಸ್ಟಾರ್​ಗಳ ಸಿನಿಮಾ ನಿಷೇಧಿಸಿ’: ಸಾರಾ ಗೋವಿಂದು ಗರಂ

ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಕರ್ನಾಟಕ ಮತ್ತು ತಮಿಳುನಾಡು ನಡುವೆ ತಿಕ್ಕಾಟ ನಡೆಯುತ್ತಿದೆ. ಸದ್ಯಕ್ಕೆ ಮಳೆ ಆಗಿರುವುದರಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಆದರೆ ಪ್ರತಿ ಬಾರಿ ನೀರಿನ ಸಲುವಾಗಿ ರೈತರು ಪ್ರತಿಭಟನೆ ಮಾಡಿದಾಗ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಸೂಕ್ತವಾಗಿ ಬೆಂಬಲ ನೀಡುವುದಿಲ್ಲ ಎಂಬ ಮಾತಿದೆ. ಈ ಬಗ್ಗೆ ಸಾರಾ ಗೋವಿಂದು (Sa Ra Govindu) ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಬೆಂಬಲ ನೀಡುತ್ತೇವೆ ಎಂದು ವಾಣಿಜ್ಯ ಮಂಡಳಿ ಈಗಾಗಲೇ ಸುದ್ದಿಗೋಷ್ಠಿ ನಡೆಸಿ ಹೇಳಿದ್ದಾರೆ. ಅದು ಎಲ್ಲರ ಧ್ವನಿ. ನೈತಿಕತೆ ಇದ್ದರೆ ಎಲ್ಲ ಸ್ಟಾರ್ ನಟರು ಬರಬೇಕು. ಅವರಿಗೆ ಆಹ್ವಾನ ನೀಡೋಕೆ ಆಗಲ್ಲ. ಒಂದು ವೇಳೆ ಯಾರಾದರೂ ಹೋರಾಟಕ್ಕೆ ಬಾರದೇ ಇದ್ದರೆ ಅಂಥವರ ಸಿನಿಮಾ ನಿಷೇಧ ಮಾಡಿ. ಏನಾಗುತ್ತೆ ನೋಡೋಣ. ಆಗ ಅವರಿಗೆ ಬುದ್ಧಿ ಬರುತ್ತದೆ’ ಎಂದು ಸಾರಾ ಗೋವಿಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಈ ಸೌಲಭ್ಯ ಪಡೆಯಲು ಹಿರಿಯ ನಾಗರಿಕರ ಕಾರ್ಡ್ ಅಗತ್ಯ, ಹೀಗೆ ಅರ್ಜಿ ಸಲ್ಲಿಸಿ – Kannada News | Senior Citizen Card: A senior citizen card is required to avail of this facility

ಕೇಂದ್ರ ಹಾಗೂ ರಾಜ್ಯ ಸರ್ಕಾರವು ಹಿರಿಯ ನಾಗರಿಕರಿಗೆ ವಿಶೇಷ ಆದ್ಯತೆ ನೀಡಿದೆ. ಹೀಗಾಗಿ 60 ವರ್ಷ ಮೇಲ್ಪಟ್ಟವರಿಗಾಗಿ ಪಿಂಚಣಿ ಯೋಚನೆ ಹಾಗೂ ಬಸ್, ರೈಲುಗಳಲ್ಲಿ ಟಿಕೆಟ್‌ಗಳ ಮೇಲೆ ರಿಯಾಯಿತಿ ಸೇರಿದಂತೆ ಇನ್ನಿತ್ತರ ಯೋಜನೆಗಳನ್ನು ಜಾರಿಗೆ ತಂದಿವೆ. ನಿಮ್ಮ ವಯಸ್ಸು 60 ವರ್ಷ ಮೇಲ್ಪಟ್ಟಿದ್ದು, ಟಿಕೆಟ್‌ಗಳ ಮೇಲೆ ರಿಯಾಯಿತಿ ಸೌಲಭ್ಯ ಪಡೆಯಬೇಕೆಂದುಕೊಂಡಿದ್ದರೆ ನೀವು ಈ ಹಿರಿಯ ನಾಗರಿಕರ ಕಾರ್ಡ್ (Senior Citizen Card) ಹೊಂದಿರುವುದು ಕಡ್ಡಾಯ. ಆದರೆ ಈ ಕಾರ್ಡ್‌ಗೆ ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹಿರಿಯ ನಾಗರಿಕ ಕಾರ್ಡ್ ನಿಮ್ಮ ಬಳಿಯಿದ್ದರೆ ಬಸ್‌ಗಳಲ್ಲಿ ಟಿಕೆಟ್‌ಗಳ ಮೇಲೆ ನೀವು ಶೇಕಡಾ 30 ರಿಂದ 50 ರಷ್ಟು ರಿಯಾಯಿತಿ ಪಡೆಯಬಹುದು. ಅದರ ಜತೆಗೆ ಹಿರಿಯ ನಾಗರಿಕರಿಗಾಗಿ ರೈಲ್ವೆಯಲ್ಲಿ ವಯಸ್ಸಿಗೆ ತಕ್ಕಂತೆ ಲೋವರ್ ಬರ್ತ್ ಮೀಸಲಾತಿ ಸೌಲಭ್ಯವು ಇದೆ.

ಹಿರಿಯ ನಾಗರಿಕರ ಕಾರ್ಡ್ ಪಡೆಯಲು ಈ ದಾಖಲೆಗಳು ಅಗತ್ಯ

  • ವಿಳಾಸದ ಪುರಾವೆ: ವೋಟರ್ ಐಡಿ, ಯುಟಿಲಿಟಿ ಬಿಲ್ ಅಥವಾ ರೇಷನ್ ಕಾರ್ಡ್
  • ವಯಸ್ಸಿನ ಪುರಾವೆ: ಜನನ ಪ್ರಮಾಣಪತ್ರ ಅಥವಾ ಪಾಸ್‌ಪೋರ್ಟ್
  • ಗುರುತಿನ ಚೀಟಿ: ಪೆನ್ಷನ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್
  • ಪೋಟೋ: ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ

ಹಿರಿಯ ನಾಗರಿಕರ ಕಾರ್ಡ್‌ಗೆ ಪಡೆಯುವುದು ಹೇಗೆ?

ಹಂತ 1: ರಾಜ್ಯ ಸರ್ಕಾರದ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಪೋರ್ಟಲ್‌ಗೆ ಭೇಟಿ ನೀಡಿ.

ಹಂತ 2: ಹೊಸ ಬಳಕೆದಾರ ನೋಂದಣಿಯ ಮೇಲೆ ಕ್ಲಿಕ್ ಮಾಡಿ ಮತ್ತು ವಿವರಗಳನ್ನು ನೀಡಿ ಲಾಗಿನ್ ಆಗಿ.

ಹಂತ 3: ಅರ್ಜಿ ನಮೂನೆ ಆಯ್ಕೆ ಮಾಡಿ. ಅದರಲ್ಲಿ ಹೆಸರು, ತಂದೆಯ ಹೆಸರು, ಹುಟ್ಟಿದ ದಿನಾಂಕ, ಲಿಂಗ ಹಾಗೂ ವಿಳಾಸದ ವಿವರಗಳನ್ನು ಭರ್ತಿ ಮಾಡಿ.

ಹಂತ 4: ವಿಳಾಸದ ಪುರಾವೆ, ವಯಸ್ಸಿನ ಪುರಾವೆ, ಗುರುತಿನ ಚೀಟಿ ಹಾಗೂ ಪಾಸ್‌ಪೋರ್ಟ್ ಗಾತ್ರದ ಫೋಟೋ ಈ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

ಹಂತ 5: ಭರ್ತಿ ಮಾಡಿದ  ಈ ಅರ್ಜಿಯಲ್ಲಿನ ಎಲ್ಲಾ ವಿವರಗಳನ್ನು ಒಮ್ಮೆ ಪರಿಶೀಲಿಸಿ.

ಹಂತ 6: ಈ ಅರ್ಜಿ ಅಥವಾ ಸ್ವೀಕೃತಿ ಸಂಖ್ಯೆಯನ್ನು ನಿಮ್ಮ ಬಳಿಯಿಟ್ಟುಕೊಳ್ಳಿ. ಮೂವತ್ತು ದಿನಗಳೊಳಗೆ ವೆಬ್‌ಸೈಟ್‌ನಲ್ಲಿ ಈ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಿ.

ಇದನ್ನೂ ಓದಿ: ಪಿಪಿಎಫ್​ನಲ್ಲಿ ತಿಂಗಳಿಗೆ 5,000 ರೂ ಹೂಡಿಕೆ ಮಾಡಿದರೆ ಮೆಚ್ಯೂರಿಟಿಗೆ ಎಷ್ಟು ಸಿಗುತ್ತದೆ? ಕೋಟಿ ರೂ ಕಾರ್ಪಸ್ ನಿರ್ಮಿಸಲು ಎಷ್ಟು ವರ್ಷ ಬೇಕು?

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಹಿರಿಯ ನಾಗರಿಕರ ಕಾರ್ಡ್ ಪಡೆಯಲು ಯಾವೆಲ್ಲಾ ದಾಖಲೆಗಳು ಬೇಕು?

ಉತ್ತರ: ಹಿರಿಯ ನಾಗರಿಕರ ಕಾರ್ಡ್ ಪಡೆಯಲು ಜನನ ಪ್ರಮಾಣಪತ್ರ ಅಥವಾ ಪಾಸ್‌ಪೋರ್ಟ್, ಪೆನ್ಷನ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಗಾತ್ರದ ಇತ್ತೀಚಿನ ಫೋಟೋ, ವೋಟರ್ ಐಡಿ, ಯುಟಿಲಿಟಿ ಬಿಲ್ ಅಥವಾ ರೇಷನ್ ಕಾರ್ಡ್ ಈ ದಾಖಲೆಗಳು ನಿಮ್ಮ ಬಳಿ ಇರಲಿ.

ಪ್ರಶ್ನೆ: ಹಿರಿಯ ನಾಗರಿಕರ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಉತ್ತರ: ಹಿರಿಯ ನಾಗರಿಕರ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರದ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಪೋರ್ಟಲ್‌ಗೆ ಭೇಟಿ ನೀಡಿ.

ಪ್ರಶ್ನೆ: ಹಿರಿಯ ನಾಗರಿಕರ ಕಾರ್ಡ್ ಹೊಂದಿದ್ದರೆ ಬಸ್ ಹಾಗೂ ರೈಲ್ವೆಯಲ್ಲಿ ಯಾವೆಲ್ಲಾ ಸೌಲಭ್ಯ ಪಡೆಯಬಹುದು?

ಉತ್ತರ: ಹಿರಿಯ ನಾಗರಿಕ ಕಾರ್ಡ್ ಬಸ್‌ಗಳಲ್ಲಿ ಟಿಕೆಟ್‌ಗಳ ಮೇಲೆ ಶೇಕಡಾ 30 ರಿಂದ 50 ರಷ್ಟು ರಿಯಾಯಿತಿ ಹಾಗೂ ರೈಲ್ವೆಯಲ್ಲಿ ವಯಸ್ಸಿಗೆ ತಕ್ಕಂತೆ ಲೋವರ್ ಬರ್ತ್ ಮೀಸಲಾತಿ ಸೌಲಭ್ಯವಿದೆ

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಮ್ರಾನ್ ಖಾನ್ ಬದುಕಿಲ್ಲವೇ?; ಮಾಜಿ ಪ್ರಧಾನಿಯ ಕುರಿತು ಪಾಕಿಸ್ತಾನಿ ಪತ್ರಕರ್ತನ ಶಾಕಿಂಗ್ ಹೇಳಿಕೆ – Kannada News | Is Pakistan Former PM Imran Khan Dead Journalist Shocking Claim

ವಾಷಿಂಗ್ಟನ್, ಆಗಸ್ಟ್ 12: ಪಾಕಿಸ್ತಾನದ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿ ಬಂಧಿಯಾಗಿರುವ ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಹಾಗೂ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (PTI) ಮುಖ್ಯಸ್ಥ ಇಮ್ರಾನ್ ಖಾನ್ ಅವರ ಆರೋಗ್ಯದ ಕುರಿತು ಉಂಟಾಗಿದ್ದ ತೀವ್ರ ಗೊಂದಲಗಳು ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ. ಇಮ್ರಾನ್ ಖಾನ್ (Imran Khan) ಜೈಲಿನಲ್ಲೇ ನಿಧನರಾಗಿರಬಹುದು ಎಂದು ಅಮೆರಿಕ ಮೂಲದ ಪಾಕಿಸ್ತಾನಿ ಪತ್ರಕರ್ತ ವಜಾಹತ್ ಸಯೀದ್ ಖಾನ್ ನೀಡಿದ್ದ ಸ್ಫೋಟಕ ಹೇಳಿಕೆ ಭಾರಿ ಆತಂಕ ಸೃಷ್ಟಿಸಿದೆ.

“ಸೇನೆಯ ಮೂವರು ಹಿರಿಯ ಮಿಲಿಟರಿ ಮೂಲಗಳು ಇಮ್ರಾನ್ ಖಾನ್ ನಿಧನರಾಗಿರಬಹುದು ಎಂಬ ಆತಂಕ ವ್ಯಕ್ತಪಡಿಸಿವೆ. ಆದರೆ, ಇದನ್ನು ಯಾರೂ ಕಣ್ಣಾರೆ ಕಂಡಿಲ್ಲ” ಎಂದು ಪಾಕಿಸ್ತಾನದ ಪ್ರಸಿದ್ಧ ಪತ್ರಕರ್ತ ವಜಾಹತ್ ಸಯೀದ್ ಖಾನ್ ಪ್ರತಿಪಾದಿಸಿದ್ದಾರೆ. ಹೀಗಾಗಿ, ಈ ಮಾಹಿತಿ ಅಧಿಕೃತವಲ್ಲ.

ಜೈಲಿನಲ್ಲಿ ಇಮ್ರಾನ್ ಖಾನ್:

73 ವರ್ಷದ ಇಮ್ರಾನ್ ಖಾನ್ ಅವರು 2023ರ ಆಗಸ್ಟ್ 5ರಿಂದ ಜೈಲಿನಲ್ಲಿದ್ದು, 190 ಮಿಲಿಯನ್ ಅಲ್-ಖಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ 14 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಪ್ರಸ್ತುತ ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮತ್ತು ಇಮ್ರಾನ್ ಖಾನ್ ನಡುವಿನ ತೀವ್ರ ರಾಜಕೀಯ ಹಗೆತನವೇ ಈ ಸುದೀರ್ಘ ಬಂಧನಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿ ಮೇಲೆ ಗುಂಡಿನ ದಾಳಿ; ಓರ್ವ ಸೈನಿಕ ಸಾವು

ಇನ್ನೊಂದೆಡೆ, ಇಮ್ರಾನ್ ಖಾನ್ ಸಾವಿನ ಸುದ್ದಿಯನ್ನು ತಳ್ಳಿಹಾಕಿರುವ ಅವರ ಪಕ್ಷದ ನಾಯಕರು ಕಣ್ಣಿನ ಸಮಸ್ಯೆ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಇಮ್ರಾನ್ ಖಾನ್ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇಮ್ರಾನ್ ಖಾನ್ ಅವರ ಕುಟುಂಬಸ್ಥರು, ವಕೀಲರು ಹಾಗೂ ಪಕ್ಷದ ನಾಯಕರಿಗೆ ಅವರನ್ನು ಭೇಟಿಯಾಗಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ಅವರ ಪಕ್ಷದ ನಾಯಕರು ಆರೋಪಿಸಿದ್ದಾರೆ.

ಬೃಹತ್ ಪ್ರತಿಭಟನೆಯ ಎಚ್ಚರಿಕೆ: 

ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಹಾಗೂ ಪಿಟಿಐ ನಾಯಕ ಸೊಹೈಲ್ ಅಫ್ರಿದಿ ಅವರು ಮಂಗಳವಾರ ಜೈಲಿನಲ್ಲಿ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಲು ಬಿಡದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಸುಮಾರು 20 ಲಕ್ಷಕ್ಕೂ ಹೆಚ್ಚು ಜನರು ಬೀದಿಗಿಳಿದು ಹೋರಾಟ ನಡೆಸಲು ಸಿದ್ಧರಾಗಿದ್ದಾರೆ. ಪಾಕಿಸ್ತಾನದ ಯುವಜನತೆಯಲ್ಲಿ ಮೂಡಿರುವ ಆಕ್ರೋಶವನ್ನು ನಿಯಂತ್ರಿಸುವುದು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕುರ್ಚಿಗೆ ಕುತ್ತು ತಂದಿದ್ದ ಅಸಲಿ ರಹಸ್ಯ ದಾಖಲೆ ಬಯಲು

ಇಮ್ರಾನ್ ಖಾನ್ ಅವರ ಭೇಟಿಗೆ ಅವಕಾಶ ನೀಡದಿದ್ದರೆ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿರುವ ಪಿಟಿಐ, ಸೆಪ್ಟೆಂಬರ್ 27ರಂದು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ಗೆ ಬೃಹತ್ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದೆ. ಇಮ್ರಾನ್ ಖಾನ್ ಅವರ ಸುದೀರ್ಘ ಜೈಲುವಾಸ ಹಾಗೂ ಅನಾರೋಗ್ಯದ ಕುರಿತು ಪಾಕಿಸ್ತಾನ ಸರ್ಕಾರದ ಮೇಲೆ ದೇಶೀಯವಾಗಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರಿ ಒತ್ತಡ ಹೆಚ್ಚುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಆ.13ರಂದು ಕರ್ನಾಟಕ ಬಂದ್​​​ಗೆ ಯಾರ್ಯಾರ ಬೆಂಬಲ? ಏನಿರುತ್ತೆ? ಏನಿರಲ್ಲ? ಇಲ್ಲಿದೆ ವಿವರ – Kannada News | Karnataka bandh On August 13th for Cauvery Water Dispute: what is open what is closed? And Who Supported? here Is details

ಬೆಂಗಳೂರು (ಆಗಸ್ಟ್.12): ಕರ್ನಾಟಕದಲ್ಲಿ (Karnataka) ಮತ್ತೆ ಕಾವೇರಿ ನದಿ ನೀರು ವಿವಾದ (Cauvery Water Dispute) ಮುನ್ನೆಲೆಗೆ ಬಂದಿದ್ದು, ಬರದ ಮಧ್ಯೆ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಆದೇಶ ಹೊರಡಿಸಿರುವುದು ರಾಜ್ಯದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನಾಳೆ (ಆಗಸ್ಟ್ 13, ಗುರುವಾರ) ‘ಕರ್ನಾಟಕ ಬಂದ್’ (Karnataka Bandh) ಗೆ ಕರೆ ನೀಡಿದ್ದಾರೆ. ಆದರೆ, ಈ ಬಂದ್‌ಗೆ ರೈತ ಸಂಘಟನೆಗಳು ಬಿಟ್ಟರೆ ಬೇರೆ ಯಾವುದೇ ಸಂಘಟನೆಗಳು ಬೆಂಬಲಿಸಿಲ್ಲ. ಆರಂಭದಲ್ಲೇ ಬಂದ್​​​​ಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದವು. ಆದ್ರೆ, ಇದೇ ಸಮಯಕ್ಕೆ ಸ್ವಲ್ಪ ಮಳೆಯಾಗಿದ್ದರಿಂದ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಇನ್ನು ಸಿಎಂ ಡಿಕೆ ಶಿವಕುಮಾರ್ ಸಹ ರೈತರ ಪರ ನಿರ್ಧಾರ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಕೆಲ ಸಂಘಟನೆಗಳು ಬಂದ್​​​ಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಂಡಿವೆ. ಈ ಹಿನ್ನೆಲೆಯಲ್ಲಿ ನಾಳಿನ ಬಂದ್ ಫ್ಲಾಪ್ ಆಗುವ ಸಾಧ್ಯತೆಯಿದ್ದು, ರಾಜ್ಯಾದ್ಯಂತ ಜನಜೀವನ ಎಂದಿನಂತೆ ಯಥಾಸ್ಥಿತಿಯಲ್ಲಿ ಇರಲಿದೆ.

ಖಾಸಗಿ ಶಾಲೆಗಳ ಒಕ್ಕೂಟ, ಖಾಸಗಿ ಬಸ್ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ನೈತಿಕ ಬೆಂಬಲ ಘೋಷಣೆ ಮಾಡಿದ್ದರಿಂದ ಶಾಲಾ-ಕಾಲೇಜುಗಳು, ಸಾರಿಗೆ ಸೇವೆಗಳು ಹಾಗೂ ವಾಣಿಜ್ಯ ಚಟುವಟಿಕೆಗಳು ಯಥಾರೀತಿ ನಡೆಯಲಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ.

ಇದನ್ನೂ ನೋಡಿ: ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್ ಘೋಷಣೆ

ನಾಳೆ ಬಂದ್​​​​​​ ವೇಳೆ ಏನಿರುತ್ತೆ?

ನಾಳೆ ರಾಜ್ಯದಾದ್ಯಂತ ಬಹುತೇಕ ಎಲ್ಲಾ ಅಗತ್ಯ ಹಾಗೂ ಪ್ರಮುಖ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಸಾರಿಗೆ ಸೇವೆಗಳಾದ KSRTC, BMTC ಬಸ್‌ಗಳು, ನಮ್ಮ ಮೆಟ್ರೋ (Namma Metro), ರೈಲ್ವೆ ಸೇವೆಗಳು, ಆಟೋ ರಿಕ್ಷಾ ಹಾಗೂ ಟ್ಯಾಕ್ಸಿ (Ola/Uber) ಸೇವೆಗಳು ಎಂದಿನಂತೆ ಲಭ್ಯವಿರಲಿವೆ. ಮುಖ್ಯವಾಗಿ ಶಾಲಾ-ಕಾಲೇಜುಗಳು ಎಂದಿನಂತೆ ಓಪನ್ ಇರಲಿವೆ.

ಇನ್ನು ಆರೋಗ್ಯ ಸೇವೆಗಳಾದ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಮೆಡಿಕಲ್ ಶಾಪ್‌ಗಳು ಹಾಗೂ ಆಂಬ್ಯುಲೆನ್ಸ್ ಸೇವೆಗಳು ಯಥಾರೀತಿ ಇರಲಿವೆ.

ಅಗತ್ಯ ಸರಕುಗಳಾದ ದಿನಸಿ ಅಂಗಡಿಗಳು, ಹಾಲು, ತರಕಾರಿ, ಮಾರುಕಟ್ಟೆಗಳು, ಬೇಕರಿ, ಜ್ಯೂಸ್ ಅಂಗಡಿಗಳು ಹಾಗೂ ಬೀದಿ ಬದಿ ವ್ಯಾಪಾರ ವಹಿವಾಟು ನಡೆಯಲಿದೆ.

ವಾಣಿಜ್ಯ ವಲಯಗಳಾದ ಮಾಲ್‌ಗಳು, ಚಿತ್ರಮಂದಿರಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕೈಗಾರಿಕಾ ಕ್ಷೇತ್ರಗಳು ಹಾಗೂ ಸರ್ಕಾರಿ ಆಫೀಸ್‌ಗಳು ಎಂದಿನಂತೆ ಓಪನ್ ಇರಲಿವೆ.

ಬಂದ್‌ಗೆ ಯಾರ ಬೆಂಬಲವಿದೆ?

  • ವಾಟಾಳ್ ನಾಗರಾಜ್ ನೇತೃತ್ವದ ‘ಕನ್ನಡ ಸಂಘಟನೆಗಳ ಒಕ್ಕೂಟ’
  • ಕನ್ನಡ ಸೇನೆ
  • ಕನ್ನಡ ಜಾಗೃತಿ ವೇದಿಕೆ ಹಾಗೂ ಕೆಲವು ಸಣ್ಣಪುಟ್ಟ ಸಂಘಟನೆಗಳು ಮಾತ್ರ ಬಂದ್‌ಗೆ ಬೆಂಬಲ ನೀಡಿವೆ.

ನೈತಿಕ ಬೆಂಬಲ ಘೋಷಿಸಿದ ಹಲವು ಸಂಘಗಳು

  • ಕರ್ನಾಟಕದಲ್ಲಿ ಖಾಸಗಿ ಬಸ್ ಒಕ್ಕೂಟಗಳಿಂದ ಬಂದ್​ಗೆ ನೈತಿಕ ಬೆಂಬಲ
  • ಕ್ಯಾಮ್ಸ್ ಹಾಗೂ ರುಪ್ಸಾ ಖಾಸಗಿ ಶಾಲೆಗಳಿಂದ ನೈತಿಕ ಬೆಂಬಲ
  • ಹೋಟೆಲ್ ಮಾಲೀಕರ ಸಂಘ
  • ಖಾಸಗಿ ಬಸ್ ಒಕ್ಕೂಟ
  • ಖಾಸಗಿ ಆಸ್ಪತ್ರೆಗಳು

ಯಾರ ಬೆಂಬಲವಿಲ್ಲ

  • ಕರವೇ ಪ್ರವೀಣ್ ಶೆಟ್ಟಿ ಬಣ
  • ಶಿವರಾಮೇಗೌಡ ಬಣ
  • ನಾರಾಯಣಗೌಡ ಬಣ
  • ಬಿಎಂಟಿಸಿ, ಕೆಎಸ್‌ಆರ್‌ಟಿಸಿ
  • ಆಟೋ, ಕ್ಯಾಬ್ ಸಂಘಟನೆ

ಒಟ್ಟಿನಲ್ಲಿ ನಾಳಿನ ಕರ್ನಾಟಕ ಬಂದ್​​​​ಗೆ ಹಲವು ಸಂಘಟನೆಗಳು ಬೆಂಬಲ ಘೋಷಿಸಿಲ್ಲ. ಹೀಗಾಗಿ ಎಂದಿನಂತೆ ಜನಜೀವನ, ವ್ಯಾಪಾರ ವಹಿವಾಟುಗಳು ನಡೆಯಲಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಈ ವರ್ಷ ಇನ್ನೂ 19 ಟಿ20 ಪಂದ್ಯಗಳನ್ನಾಡಲಿದೆ ಟೀಂ ಇಂಡಿಯಾ – Kannada News | Team India T20 Schedule 2026: Asian Games, Afghanistan, WI, NZ, SL Series and 17+ Matches

ಪ್ರಸ್ತುತ ಟೀಂ ಇಂಡಿಯಾ ಶ್ರೀಲಂಕಾ (India vs Sri Lanka) ಪ್ರವಾಸದಲ್ಲಿದೆ. ಅಲ್ಲಿ ಉಭಯ ತಂಡಗಳ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿ ಬಳಿಕ ಟೀಂ ಇಂಡಿಯಾ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್​ನಲ್ಲಿ ಕಾಣಿಸಿಕೊಳ್ಳಲಿದೆ. ಈ ಕ್ರೀಡಾಕೂಟದಲ್ಲಿ ಟಿ20 ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ಶ್ರೇಯಸ್ ಅಯ್ಯರ್ ನಾಯಕತ್ವದ ತಂಡ ಕಣಕ್ಕಿಳಿಯಲಿದೆ. ಈ ವರ್ಷ ಟಿ20 ಮಾದರಿಯಲ್ಲಿ ಟೀಂ ಇಂಡಿಯಾ ಸಾಕಷ್ಟು ಪಂದ್ಯಗಳನ್ನಾಡಿದೆ. ಇನ್ನು ಈ ವರ್ಷ ಉಳಿದಿರುವ ನಾಲ್ಕೂವರೆ ತಿಂಗಳಲ್ಲಿ ಟೀಂ ಇಂಡಿಯಾ ಕನಿಷ್ಠ ಪಕ್ಷ 17 ಟಿ20 ಪಂದ್ಯಗಳನ್ನಾಡಲಿದೆ. ಒಂದು ವೇಳೆ ಟೀಂ ಇಂಡಿಯಾ ಏಷ್ಯನ್ ಕ್ರೀಡಾಕೂಟದ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಗೆದ್ದರೆ ಪಂದ್ಯಗಳ ಸಂಖ್ಯೆ 19 ಕ್ಕೇರಲಿದೆ.

ಇಂದು ಅಂದರೆ ಆಗಸ್ಟ್ 12 ರಂದು ಭಾರತದ ಮತ್ತೊಂದು ಟಿ20 ಸರಣಿಯ ವೇಳಾಪಟ್ಟಿಯೂ ಪ್ರಕಟವಾಗಿದೆ. ಅದರಂತೆ ಮೂರು ಪಂದ್ಯಗಳ ಟಿ20 ಸರಣಿಗೆ ಅಫ್ಘಾನಿಸ್ತಾನ ತಂಡ ಭಾರತದಲ್ಲಿ ಟೀಂ ಇಂಡಿಯಾಕ್ಕೆ ಆತಿಥ್ಯವಹಿಸಲಿದೆ. ಉಳಿದಂತೆ ಈ ವರ್ಷ ಟೀಂ ಇಂಡಿಯಾ, ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಗಳನ್ನು ಆಡಲಿದೆ. ಹಾಗಿದ್ದರೆ, ಉಳಿದಿರುವ ನಾಲ್ಕೂವರೆ ತಿಂಗಳಲ್ಲಿ ಟೀಂ ಇಂಡಿಯಾದ ಟಿ20 ಸರಣಿ ವೇಳಾಪಟ್ಟಿ ಹೇಗಿದೆ ಎಂಬುದನ್ನು ನೋಡುವುದಾದರೆ..

ಭಾರತ vs ಅಫ್ಘಾನಿಸ್ತಾನ T20 ಸರಣಿ (ಸೆಪ್ಟೆಂಬರ್ 2026)

  1. ಮೊದಲ ಟಿ20: ಸೆಪ್ಟೆಂಬರ್ 13, 2026, ನವದೆಹಲಿ
  2. ಎರಡನೇ ಟಿ20: ಸೆಪ್ಟೆಂಬರ್ 15, 2026, ನವದೆಹಲಿ
  3. ಮೂರನೇ ಟಿ20: ಸೆಪ್ಟೆಂಬರ್ 17, 2026, ನವದೆಹಲಿ

ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ತಂಡ (ಸೆಪ್ಟೆಂಬರ್-ಅಕ್ಟೋಬರ್ 2026)

ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಕ್ರಿಕೆಟ್ ಸೆಪ್ಟೆಂಬರ್ 24, 2026 ರಿಂದ ಅಕ್ಟೋಬರ್ 3, 2026 ರವರೆಗೆ ನಡೆಯಲಿದೆ. ಮೊದಲ ಸುತ್ತಿನ ಪಂದ್ಯ ಸೆಪ್ಟೆಂಬರ್ 24 ರಂದು ಆರಂಭವಾಗಲಿದೆ, ಆದರೂ ಟೀಂ ಇಂಡಿಯಾ ಈ ಸುತ್ತನ್ನು ಆಡುವುದಿಲ್ಲ. ಬದಲಿಗೆ ಭಾರತ ತಂಡ ನೇರವಾಗಿ ಕ್ವಾರ್ಟರ್ ಫೈನಲ್ ಆಡಲಿದೆ. ಈ ಸುತ್ತನ್ನು ಗೆದ್ದರೆ, ಅಕ್ಟೋಬರ್ 3 ರಂದು ಸೆಮಿಫೈನಲ್ ಮತ್ತು ನಂತರ ಫೈನಲ್ ಆಡಲಿದೆ. ಇದರರ್ಥ ಟೀಂ ಇಂಡಿಯಾ ಈ ಪಂದ್ಯಾವಳಿಯಲ್ಲಿ ಗರಿಷ್ಠ ಮೂರು ಪಂದ್ಯಗಳನ್ನು ಆಡಬಹುದು.

ಭಾರತ vs ವೆಸ್ಟ್ ಇಂಡೀಸ್ ಟಿ20 ಸರಣಿ (ಅಕ್ಟೋಬರ್ 2026)

  1. ಮೊದಲ ಟಿ20: ಅಕ್ಟೋಬರ್ 6, 2026, ಲಕ್ನೋ
  2. ಎರಡನೇ ಟಿ20: ಅಕ್ಟೋಬರ್ 9, 2026, ರಾಂಚಿ
  3. ಮೂರನೇ ಟಿ20: ಅಕ್ಟೋಬರ್ 11, 2026, ಇಂದೋರ್
  4. ನಾಲ್ಕನೇ ಟಿ20: ಅಕ್ಟೋಬರ್ 14, 2026, ಹೈದರಾಬಾದ್
  5. ಐದನೇ ಟಿ20: ಅಕ್ಟೋಬರ್ 17, 2026, ಬೆಂಗಳೂರು

ಭಾರತ vs ನ್ಯೂಜಿಲೆಂಡ್ ಟಿ20 ಸರಣಿ (ಅಕ್ಟೋಬರ್-ನವೆಂಬರ್ 2026)

  1. ಮೊದಲ ಟಿ20: ಅಕ್ಟೋಬರ್ 22, 2026, ಕ್ರೈಸ್ಟ್‌ಚರ್ಚ್
  2. ಎರಡನೇ ಟಿ20 ಅಕ್ಟೋಬರ್ 24, 2026, ಕ್ರೈಸ್ಟ್‌ಚರ್ಚ್
  3. ಮೂರನೇ ಟಿ20: ಅಕ್ಟೋಬರ್ 27, 2026, ವೆಲ್ಲಿಂಗ್ಟನ್
  4. ನಾಲ್ಕನೇ ಟಿ20: ಅಕ್ಟೋಬರ್ 30, 2026, ಆಕ್ಲೆಂಡ್
  5. ಐದನೇ ಟಿ20: ನವೆಂಬರ್ 1, 2026, ಹ್ಯಾಮಿಲ್ಟನ್

ಭಾರತ vs ಶ್ರೀಲಂಕಾ ಟಿ20 ಸರಣಿ (ಡಿಸೆಂಬರ್ 2026)

  1. ಮೊದಲ ಟಿ20: ಡಿಸೆಂಬರ್ 22, 2026, ರಾಜ್‌ಕೋಟ್
  2. ಎರಡನೇ ಟಿ20: ಡಿಸೆಂಬರ್ 24, 2026, ಕಟಕ್
  3. ಮೂರನೇ ಟಿ20: ಡಿಸೆಂಬರ್ 27, 2026, ಪುಣೆ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:37 pm, Wed, 12 August 26

Source link

Exit mobile version