ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬೇಕಾ, ಬೇಡ್ವಾ? ಈಗಲೇ ಸ್ಪಷ್ಟಪಡಿಸಿ: ಅಶ್ವಿನ್ – Kannada News | Ashwin Urges Selectors to Clarify Kohli Rohit’s 2027 World Cup Status

ಏಕದಿನ ವಿಶ್ವಕಪ್​ಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬೇಕಾ? ಬೇಡ್ವಾ? ಈಗಲೇ ಹೇಳಿ… ಇಂತಹದೊಂದು ಪ್ರಶ್ನೆ ಮುಂದಿಟ್ಟಿರುವುದು ಟೀಮ್ ಇಂಡಿಯಾದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್. ಈ ಬಗ್ಗೆ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್‌ ಸ್ಪಷ್ಟನೆ ನೀಡಬೇಕೆಂದು ಅಶ್ವಿನ್ ಆಗ್ರಹಿಸಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ರವಿಚಂದರರನ್ ಅಶ್ವಿನ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಕೆಲ ವದಂತಿಗಳು ಹರಿದಾಡುತ್ತಿದೆ. ದಿಗ್ಗಜ ಆಟಗಾರರ ಸುತ್ತ ಹರಿದಾಡುತ್ತಿರುವ ವದಂತಿಗಳಿಗೆ ಬ್ರೇಕ್ ಹಾಕಲು ಇದು ಸಕಾಲ. ಹೀಗಾಗಿ ಇಬ್ಬರನ್ನು ಏಕದಿನ ವಿಶ್ವಕಪ್​ಗೆ ಪರಿಗಣಿಸುತ್ತೀರಾ? ಇಲ್ಲವಾ ಎಂಬುದನ್ನು ಬಿಸಿಸಿಐ ಸ್ಪಷ್ಟಪಡಿಸಲಿ ಎಂದು ಅಶ್ವಿನ್ ಹೇಳಿದ್ದಾರೆ.

ಭವಿಷ್ಯ ನಿರ್ಧರಿಸಿ:

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಸ್ಥಾನದ ಬಗ್ಗೆ ಪದೇ ಪದೇ ಪ್ರಶ್ನೆ ಎತ್ತುವುದರಿಂದ ಟೀಮ್ ಇಂಡಿಯಾಗೆ ಯಾವುದೇ ಲಾಭವಿಲ್ಲ. ಇಬ್ಬರು ಪ್ರಮುಖ ಆಟಗಾರರು. ಅವರ ಬಗ್ಗೆ ಈ ಊಹಾಪೋಹ ಒಳ್ಳೆಯದಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಊಹಾಪೋಹ ಎಲ್ಲಿಂದ ಬರುತ್ತದೆ? ಎಲ್ಲೋ, ಯಾರದೋ ಮನಸ್ಸಿನಲ್ಲಿ ಅವರು ವಿಶ್ವಕಪ್‌ಗೆ ಹೋಗಬಾರದು ಎಂಬ ಆಲೋಚನೆ ಇದೆ. ಇದೇ ಕಾರಣದಿಂದಾಗಿ ಯಾರೋ ಈ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂದು ಅಶ್ವಿನ್ ಹೇಳಿದ್ದಾರೆ.

ಹೀಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಏಕದಿನ ವಿಶ್ವಕಪ್​ ಭವಿಷ್ಯದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕುತ್ತಿರುವುದು ಯಾರೆಂದು ನನಗೆ ತಿಳಿದಿಲ್ಲ. ಕೆಲವರಿಗೆ ಅವರ ಬಗ್ಗೆ ಅನುಮಾನವಿರುತ್ತದೆ. ಅಲ್ಲದೆ ಅವರು ಬೇರೆಯವರನ್ನು ತಂಡದಲ್ಲಿ ಸೇರಿಸಿಕೊಳ್ಳಬೇಕೆಂದು ಬಯಸುತ್ತಾರೆ. ಆದರೆ ಸೌತ್ ಆಫ್ರಿಕಾದಲ್ಲಿ ವಿಶ್ವಕಪ್ ಆಡಲು ಅನುಭವಿ ಬ್ಯಾಟ್ಸ್‌ಮನ್‌ಗಳು ಬೇಕು ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ ಎಂದು ಅಶ್ವಿನ್ ಹೇಳಿದ್ದಾರೆ.

ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮುಂದಿನ 2027ರ ಏಕದಿನ ವಿಶ್ವಕಪ್‌ಗೆ ಬೇಕು ಎಂದಾದರೆ, ಈಗಲೇ ನಿರ್ಧಾರ ಮಾಡಿ. ಮುಂದಿನ ಒಂದು ವರ್ಷ ಅವರಲ್ಲಿ ಸಂಪೂರ್ಣ ಆತ್ಮವಿಶ್ವಾಸ ತುಂಬಿ, ಮುಕ್ತವಾಗಿ ಆಡಲು ಬಿಡಬೇಕು ಎಂದು ಅಶ್ವಿನ್ ಬಿಸಿಸಿಐ ಆಯ್ಕೆ ಸಮಿತಿಗೆ ಕಿವಿಮಾತು ಹೇಳಿದ್ದಾರೆ.

ಸ್ಪಷ್ಟನೆಗೆ ಇದು ಸಕಾಲ:

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಷಯದಲ್ಲಿ ಆಯ್ಕೆಗಾರರು ಈಗಲೇ ಸ್ಪಷ್ಟ ನಿಲುವು ತೆಗೆದುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಅವರು ಒಂದು ಪಂದ್ಯದಲ್ಲಿ ವಿಫಲರಾದರೂ ಅದು ದೊಡ್ಡ ಸುದ್ದಿಯಾಗಲಿದೆ. ಅಲ್ಲದೆ ಮಾಧ್ಯಮಗಳು ಮತ್ತು ಅಭಿಮಾನಿಗಳು ಅವರ ಸಾಮರ್ಥ್ಯವನ್ನು ಪ್ರಶ್ನಿಸಲು ಶುರು ಮಾಡುತ್ತಾರೆ. ಇದು ಆಟಗಾರರ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ. ಹೀಗಾಗಿ ಇಬ್ಬರು ಆಟಗಾರರ ಭವಿಷ್ಯದ ಬಗ್ಗೆ ಸ್ಪಷ್ಟನೆ ನೀಡಲು ಇದು ಸಕಾಲ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಫಾಫ್ ಡುಪ್ಲೆಸಿಸ್ ಸೂಪರ್​ಮ್ಯಾನ್ ಕ್ಯಾಚ್​ಗೆ ಕ್ರಿಕೆಟ್ ಪ್ರಿಯರು ಫಿದಾ!

ಒಟ್ಟಾರೆಯಾಗಿ, 2027ರ ಏಕದಿನ ವಿಶ್ವಕಪ್‌ಗೆ ಇನ್ನು ಒಂದು ವರ್ಷ ಮಾತ್ರ ಬಾಕಿ ಇದೆ. ಇದಕ್ಕಾಗಿ ಟೀಮ್ ಇಂಡಿಯಾ ಈಗಿನಿಂದಲೇ ಒಂದು ಬಲಿಷ್ಠ ಪ್ಲ್ಯಾನ್ ಸಿದ್ಧಪಡಿಸಿಕೊಳ್ಳಬೇಕಿದೆ. ಇದಾಗ್ಯೂ ಆಯ್ಕೆ ಸಮಿತಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ದಿಗ್ಗಜ ಆಟಗಾರರ ಆಯ್ಕೆ ಬಗ್ಗೆ ಇನ್ನೂ ಕೂಡ ಗೊಂದಲ ಏರ್ಪಡಿಸುತ್ತಿರುವುದು ಮಾತ್ರ ವಿಪರ್ಯಾಸ.

Source link

ಕಲ್ಲಯ್ಯಜ್ಜ ಶ್ರೀಗಳಿಗೆ ಮಠದ ಟ್ರಸ್ಟಿಗಳಿಂದಲೇ ಜೀವ ಬೆದರಿಕೆ ಆರೋಪ: ಹಣ ನೀಡುವಂತೆ ಮಾನಸಿಕ ಹಿಂಸೆ? – Kannada News | Kallayyajja Swamiji Claims Threats to Life, Alleges Financial Extortion by Trustees

ಗದಗ, ಜೂನ್​​ 25: ಉತ್ತರ ಕರ್ನಾಟಕದ ಪ್ರಸಿದ್ಧಿ ಮಠ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಿಗೆ ಜೀವ ಬೆದರಿಕೆ ಆರೋಪ ಕೇಳಿಬಂದಿದೆ. ಮೂವರು ಟ್ರಸ್ಟಿಗಳಿಂದಲೇ ತನಗೆ ಜೀವ ಬೆದರಿಕೆ ಇದೆ ಎಂದು ಮಠದ ಪೀಠಾಧಿಪತಿ ಕಲ್ಲಯ್ಯಜ್ಜನವರೇ ಗಂಭೀರ ಆರೋಪ ಮಾಡಿದ್ದಾರೆ. ಲಕ್ಷಾಂತರ ಹಣ ಕೊಡುವಂತೆ ಓರ್ವ ಟ್ರಸ್ಟಿ ಶ್ರೀಗಳಿಗೆ ಒತ್ತಾಯ ಮಾಡುತ್ತಿದ್ದು, ಹಣ ಕೊಡದಿದ್ದಕ್ಕೆ ಶ್ರೀಗಳ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆಯಂತೆ. ಈ ಸಂಬಂಧ ಶ್ರೀಗಳು ಕಣ್ಣೀರು ಹಾಕಿದ್ದು, ಯಾವುದೇ ಕ್ಷಣದಲ್ಲಾದರೂ ತನ್ನ ಹಲ್ಲೆ ನಡೆಯುವ ಸಾಧ್ಯತೆಯಿದೆ. ಆಶ್ರಮಕ್ಕೆ ತಾನು ಪೀಠಾಧಿಪಯಾದ 59 ಲಕ್ಷ ಸಾಲವಿತ್ತು. ಈಗ ಸಾಲವನ್ನು ತೀರಿಸಿ, 4 ಕೋಟಿಗೂ ಅಧಿಕ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿದ್ದೆನೆ. ಆಶ್ರಮದ ಎಲ್ಲ ಲೆಕ್ಕಪತ್ರ, ಖರ್ಚು ವೆಚ್ಚಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ. ದೇಣಿಗೆ ನೀಡಿದ ಪ್ರತಿಯೊಂದು ರೂಪಾಯಿಗೂ ಲೆಕ್ಕ ಇಟ್ಟಿದ್ದೇನೆಂದು ಶ್ರೀಗಳು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

‘ಧರ್ಮನ್’ ಚಿತ್ರದಲ್ಲಿ ನಿರ್ದೇಶಕರಿಗೆ ಅಸಿಸ್ಟಂಟ್ ಆದ ರಜನಿಕಾಂತ್ – Kannada News | Rajinikanth’s Humble Advice to Ashwath Marimuthu for ‘Dharman’ Wins Hearts

ತಮಿಳು ನಿರ್ದೇಶಕ ಅಶ್ವತ್ಥ್ ಮಾರಿಮುತ್ತು ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ಮೊದಲ ಬಾರಿಗೆ ಭೇಟಿಯಾದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ‘ಧರ್ಮನ್’ ಚಿತ್ರದ ಕುರಿತು ರಜನಿ ಹೇಳಿದ ಮಾತುಗಳು ಈಗ ಅಭಿಮಾನಿಗಳ ಹೃದಯ ಗೆಲ್ಲುತ್ತಿವೆ. ಈ ಚಿತ್ರದ ಪೋಸ್ಟರ್ ಜೂನ್ 24ರಂದು ರಿಲೀಸ್ ಆಗಿ ಗಮನ ಸೆಳೆದಿದೆ.

ರಜನಿಕಾಂತ್ ಸರಳತೆ

ಅಶ್ವತ್ಥ್ ಪ್ರಕಾರ ರಜನಿಕಾಂತ್ ಅವರು ಭಾರತೀಯ ಚಿತ್ರರಂಗದ ಇಷ್ಟು ದೊಡ್ಡ ತಾರೆಯಾಗಿದ್ದರೂ ಅತ್ಯಂತ ವಿನಮ್ರವಾಗಿ ನಡೆದುಕೊಂಡಿದ್ದಾರಂತೆ. ಅವರು ಈ ಪ್ರಾಜೆಕ್ಟ್‌ಗೆ ತಾವೇ ಮುಂದೆ ಬಂದು ಬೆಂಬಲ ಸೂಚಿಸಿದ್ದಾರೆ ಎಂದು ಅಶ್ವತ್ಥ್ ವಿವರಿಸಿದ್ದಾರೆ.

‘ನಾವು ಯಾವುದೇ ಪರಿಸ್ಥಿತಿಯಲ್ಲೂ ಗೆಲ್ಲಲೇಬೇಕು. ನಾವು ಈ ಸಿನಿಮಾವನ್ನು ಕಮಲ್ ಹಾಸನ್ ಅವರ ಆರ್‌ಕೆಎಫ್‌ಐ ಬ್ಯಾನರ್ ಅಡಿಯಲ್ಲಿ ಮಾಡುತ್ತಿದ್ದೇವೆ. ಆದ್ದರಿಂದ ನನ್ನನ್ನು ನಿಮ್ಮ ಅಸಿಸ್ಟೆಂಟ್ ಎಂದು ಅಂದುಕೊಳ್ಳಿ. ನಾನು ಕೆಲವು ಸಲಹೆಗಳನ್ನು ನೀಡುತ್ತೇನೆ. ಅವುಗಳನ್ನು ಸ್ವೀಕರಿಸುವುದು ಅಥವಾ ಬಿಡುವುದು ನಿಮಗೆ ಬಿಟ್ಟಿದ್ದು’ ಎಂದು ರಜನಿ ಸಲಹೆ ನೀಡಿದ್ದಾಗಿ ಅಶ್ವತ್ಥ್​ ವಿವರಿಸಿದ್ದಾರೆ.

ಅಭಿಮಾನಿಗಳ ಮೆಚ್ಚುಗೆ

ರಜನಿಕಾಂತ್ ಅವರ ಈ ಮಾತುಗಳು ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿವೆ. ಅವರ ಡೌನ್ ಟು ಅರ್ಥ್ ಸ್ವಭಾವಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಯುವ ನಿರ್ದೇಶಕನ ಕಲ್ಪನೆಗೆ ರಜನಿ ನೀಡಿದ ಗೌರವವನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಚಿತ್ರದ ಹಿನ್ನೆಲೆ ‘ಧರ್ಮನ್’ ಚಿತ್ರವನ್ನು ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆ ನಿರ್ಮಿಸುತ್ತಿದೆ. ಈ ಸಿನಿಮಾ ತಮಿಳು ಚಿತ್ರರಂಗದಲ್ಲಿ ಸದ್ಯ ಭಾರೀ ನಿರೀಕ್ಷೆ ಮೂಡಿಸಿದೆ. ನಟಿಯರಾದ ಸಿಮ್ರಾನ್ ಮತ್ತು ರಾಶಿ ಖನ್ನಾ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Gold Rate: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಕುಸಿತ; 3 ದಿನದಲ್ಲಿ ಬಂಗಾರದ ದರ 7,000 ರೂಗೂ ಅಧಿಕ ಇಳಿಕೆ – Kannada News | Gold Price Today on 25th June 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜೂನ್ 25: ಚಿನ್ನದ ಬೆಲೆಯ ಸತತ ಇಳಿಮುಖ ಮುಂದುವರಿದಿದೆ. ಇಂದು ಗುರುವಾರ ಒಂದೇ ದಿನ ಚಿನ್ನದ ಬೆಲೆ (Gold Rates) ಸತತವಾಗಿ ಇಳಿದಿದೆ. ಎರಡು ದಿನದಲ್ಲಿ ಇದರ ಬೆಲೆ 385 ರೂನಷ್ಟು ಕಡಿಮೆಗೊಂಡಿದೆ. 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 3,350 ರೂನಷ್ಟು ತಗ್ಗಿದಂತಾಗಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿ ಬಹುತೇಕ ಕಡೆ ಬೆಲೆ ಭರ್ಜರಿಯಾಗಿ ಇಳಿದಿದೆ. ಬೆಳ್ಳಿ ಬೆಲೆಯೂ ಸಖತ್ ಇಳಿಕೆಯಾಗಿದೆ. ಗ್ರಾಮ್​ಗೆ 10 ರೂ ಕಡಿಮೆ ಆಗಿದೆ. ಚೆನ್ನೈ ಮೊದಲಾದ ಕಡೆ ಬೆಲೆ ಗ್ರಾಮ್​ಗೆ 230 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,28,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,40,130 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,28,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 23,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 25ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,013 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,845 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,510 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,013 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,845 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,845 ರೂ
  • ಚೆನ್ನೈ: 13,140 ರೂ
  • ಮುಂಬೈ: 12,845 ರೂ
  • ದೆಹಲಿ: 12,860 ರೂ
  • ಕೋಲ್ಕತಾ: 12,845 ರೂ
  • ಕೇರಳ: 12,845 ರೂ
  • ಅಹ್ಮದಾಬಾದ್: 12,850 ರೂ
  • ಜೈಪುರ್: 12,860 ರೂ
  • ಲಕ್ನೋ: 12,860 ರೂ
  • ಭುವನೇಶ್ವರ್: 12,845 ರೂ

ಇದನ್ನೂ ಓದಿ: ಡಿಜಿಟಲ್ ಟ್ರಾನ್ಸಾಕ್ಷನ್ಸ್​ನಲ್ಲಿ ಸಣ್ಣ ಮೊತ್ತದ ವಂಚನೆ ಸಿಗಲಿದೆ ಪರಿಹಾರ; ಆರ್​ಬಿಐನಿಂದ ಹೊಸ ನಿಯಮಗಳು ಜಾರಿಗೆ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 541 ರಿಂಗಿಟ್ (12,428 ರುಪಾಯಿ)
  • ದುಬೈ: 483.25 ಡಿರಾಮ್ (12,410 ರುಪಾಯಿ)
  • ಅಮೆರಿಕ: 132 ಡಾಲರ್ (12,450 ರುಪಾಯಿ)
  • ಸಿಂಗಾಪುರ: 177 ಸಿಂಗಾಪುರ್ ಡಾಲರ್ (12,873 ರುಪಾಯಿ)
  • ಕತಾರ್: 486.50 ಕತಾರಿ ರಿಯಾಲ್ (12,601 ರೂ)
  • ಸೌದಿ ಅರೇಬಿಯಾ: 497 ಸೌದಿ ರಿಯಾಲ್ (12,485 ರುಪಾಯಿ)
  • ಓಮನ್: 50.70 ಒಮಾನಿ ರಿಯಾಲ್ (12,420 ರುಪಾಯಿ)
  • ಕುವೇತ್: 40.66 ಕುವೇತಿ ದಿನಾರ್ (12,455 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 235 ರೂ
  • ಚೆನ್ನೈ: 230 ರೂ
  • ಮುಂಬೈ: 235 ರೂ
  • ದೆಹಲಿ: 235 ರೂ
  • ಕೋಲ್ಕತಾ: 235 ರೂ
  • ಕೇರಳ: 230 ರೂ
  • ಅಹ್ಮದಾಬಾದ್: 235 ರೂ
  • ಜೈಪುರ್: 235 ರೂ
  • ಲಕ್ನೋ: 235 ರೂ
  • ಭುವನೇಶ್ವರ್: 230 ರೂ
  • ಪುಣೆ: 235

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ವೈಶಾಕ್ ಆತ್ಮಹತ್ಯೆ; ಬೆಂಗಳೂರಿನ ಆರ್ ಆರ್ ನಗರದಲ್ಲಿ ಘಟನೆ – Kannada News | Krishi Thapanda’s Friend Vaishak Found dead in RR Nagar, Bengaluru

ಉದ್ಯಮಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ಕೃಷಿ ತಾಪಂಡ ಗೆಳೆಯ ವೈಶಾಕ್ ಜೂನ್ 24ರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೃಷಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಅವರ ಮನೆಯಲ್ಲೇ ಇದ್ದ ವೈಶಾಕ್, ರಾತ್ರಿ ವೇಳೆ ನಟಿಗೆ ಕರೆ ಮಾಡಿ ತಾನು ಸಾಯುವುದಾಗಿ ಹೇಳಿಕೊಂಡಿದ್ದ. ತಕ್ಷಣ ನಟಿ ಈ ವಿಷಯವನ್ನು ಕುಟುಂಬಸ್ಥರಿಗೆ ತಿಳಿಸಿದ್ದರು. ಆ ಬಳಿಕ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಏನಿದು ಕೊರಿಯರ್ ಬೆದರಿಕೆ ಪ್ರಕರಣ?

ಕಳೆದ ಫೆಬ್ರವರಿಯಲ್ಲಿ ಉದ್ಯಮಿ ಅರವಿಂದ ರೆಡ್ಡಿ ಅವರಿಗೆ ಅನಾಮಧೇಯ ಹೆಸರಿನಲ್ಲಿ ಬೆದರಿಕೆ ಪತ್ರವೊಂದು ಬಂದಿತ್ತು. ಬ್ಲೂ ಡಾರ್ಟ್ ಕೊರಿಯರ್ ಮುಖಾಂತರ ಈ ಪತ್ರವನ್ನು ಕಳುಹಿಸಲಾಗಿತ್ತು. ಪತ್ರದಲ್ಲಿ ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಇತ್ತೀಚೆಗೆ ಕೃಷಿ ತಾಪಂಡ ಅವರು ಅರವಿಂದ ರೆಡ್ಡಿ ವಿರುದ್ಧ ದೂರು ನೀಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬೆದರಿಕೆ ಪತ್ರ ನೀಡಲಾಗಿತ್ತು

ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿ

‘ಕೃಷಿ ಜೊತೆ ಇರುವ ಸಮಸ್ಯೆಯನ್ನು ನೀನು ತಕ್ಷಣ ಬಗೆಹರಿಸಿಕೊಳ್ಳಬೇಕು. ಅದರೊಂದಿಗೆ ಕ್ಷಮಾಪಣೆ ಪತ್ರ ಮತ್ತು 6 ರಿಂದ 7 ಕೋಟಿ ರೂಪಾಯಿ ಹಣವನ್ನು ಕಳುಹಿಸಬೇಕು. ಇಲ್ಲವಾದಲ್ಲಿ ನೀನು ಬೇರೆ ಬೇರೆ ರೀತಿಯ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಪತ್ರದಲ್ಲಿ ಉದ್ಯಮಿಗೆ ನೇರವಾಗಿ ಬೆದರಿಕೆ ಹಾಕಲಾಗಿತ್ತು. ಈ ಪತ್ರವನ್ನು ನೋಡಿ ಆತಂಕಗೊಂಡ ಅರವಿಂದ ರೆಡ್ಡಿ ಅವರು ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ: 

ಪೊಲೀಸ್ ತನಿಖೆಯಲ್ಲಿ ಸಿಕ್ಕಿಬಿದ್ದಿದ್ದ ವೈಶಾಕ್

ಅರವಿಂದ ರೆಡ್ಡಿ ನೀಡಿದ ದೂರಿನ ಮೇರೆಗೆ ಎಚ್‌ಎಎಲ್ (HAL) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಜಾಲ ಬೀಸಿದ್ದರು. ಈ ವೇಳೆ ವೈಶಾಕ್ ಸಿಕ್ಕಿ ಬಿದ್ದಿದ್ದರು.

ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ:

ಸದ್ಯ ವೈಶಾಕ್ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯ ಯಾವುದೇ ಪತ್ರ ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾವೇರಿ ನದಿಯಲ್ಲಿ ಐವರು ಜಲಸಮಾಧಿ ಕೇಸ್​: ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಹೇಳಿದ್ದೇನು? – Kannada News | Five Lives Lost in Cauvery River; Sole Survivor Reveals Sequence of Events

ಮಂಡ್ಯ, ಜೂನ್​, 25: ಮುತ್ತತ್ತಿಯ ಕಾವೇರಿ ನದಿಯಲ್ಲಿ ಜಲಸಮಾಧಿಯಾಗಿದ್ದ ಐವರ ಮರಣೋತ್ತರ ಪರೀಕ್ಷೆ ಮಂಡ್ಯದ ಮಿಮ್ಸ್ ಶವಾಗಾರದಲ್ಲಿ ನಡೆದಿದೆ. ಶವಾಗಾರದ ಬಳಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ತಮ್ಮವರನ್ನು ಕಳೆದುಕೊಂಡು ಗೋಳಾಡುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ. ಇನ್ನು ಘಟನೆಯಲ್ಲಿ ಬದುಕುಳಿದಿರುವ ರವಿ ಏನಾಯ್ತು ಎಂಬುದನ್ನು ವಿವರಿಸಿದ್ದಾರೆ. ಬೆಂಗಳೂರಿನಿಂದ ಕಬ್ಬಾಳಿಗೆ ಬಂದಿದ್ದ ನಾವು ಬೀಗರೂಟ ಮುಗಿಸಿ ತಾನೂ ಸೇರಿದಂತೆ 6 ಜನ ಕಾರಿನಲ್ಲಿ ಮುತ್ತತ್ತಿಗೆ ಹೋಗಿದ್ದೆವು. ನೀರಿನಲ್ಲಿ ಆಟವಾಡುವಾಗ ಅಕ್ಕ ವಿಜಯಮ್ಮ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾರೆ. ಅವರನ್ನ ರಕ್ಷಿಸಲು ಪತ್ನಿ ಶ್ವೇತಾ, ಮಗಳು ಚೈತ್ರಾ, ಅಕ್ಕನ ಮಗಳು ಪ್ರಿಯಾಂಕಾ ಪ್ರಯತ್ನಿಸಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗುತ್ತಿದ್ದ ಎಲ್ಲರನ್ನೂ ಕಾಪಾಡಲೆಂದು ನೀರಿಗಿಳಿದ ಕಾರು ಚಾಲಕ ಮತ್ತು ಸ್ನೇಹಿತನಾಗಿರುವ ಮಹೇಶ್​​ ಕೂಡ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಷಿಸಲು ಹೋಗಿ ನೀರಿಗೆ ಬಿದ್ದಿದ್ದ ತನ್ನನ್ನು ಸ್ಥಳೀಯರು ಕಾಪಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸರ್ಕಾರಿ ಶಾಲೆ ಪ್ರವೇಶ ದ್ವಾರದ ಮುಂದೆಯೇ ಕಸದ ರಾಶಿ, ಗಲೀಜು: ಮಕ್ಕಳ ಆರೋಗ್ಯಕ್ಕೆ ಸಂಚಕಾರ – Kannada News | Bengaluru Balepet Government School Entrance Turns into Garbage Dump and Urinal, BBMP Apathy Sparks Outrage

ಸರ್ಕಾರಿ ಶಾಲೆ ಪ್ರವೇಶ ದ್ವಾರದ ಮುಂದೆಯೇ ಕಸದ ರಾಶಿImage Credit source: tv9

ಬೆಂಗಳೂರು, ಜೂನ್ 25: ‘‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’’ ಎನ್ನುವ ಶ್ರೇಷ್ಠ ನುಡಿಯಿದೆ. ಆದರೆ, ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಬಳೆಪೇಟೆಯಲ್ಲಿರುವ ಚಿಕ್ಕ ಲಾಲ್‌ಬಾಗ್ ಸರ್ಕಾರಿ ಶಾಲೆಯ ಸ್ಥಿತಿಯನ್ನು ನೋಡಿದರೆ, ‘‘ಬಾಯಿ, ಮೂಗು ಮುಚ್ಚಿಕೊಂಡು ಒಳಗೆ ಬಾ’’ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಯ ಮುಖ್ಯ ಪ್ರವೇಶ ದ್ವಾರದ ಮುಂಭಾಗದಲ್ಲೇ ರಾಶಿ ರಾಶಿ ಕಸವನ್ನು ತಂದು ಸುರಿಯಲಾಗುತ್ತಿದ್ದು, ಇಡೀ ಆವರಣವು ಕಸದ ತಾಣವಾಗಿ ಮಾರ್ಪಟ್ಟಿದೆ. ಸ್ಥಳೀಯ ಜಿಬಿಎ (GBA) ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದರಿಂದ ಶಾಲೆಯ ಪರಿಸರ ಸಂಪೂರ್ಣವಾಗಿ ನರಕಸದೃಶವಾಗಿದೆ.

ಪೇ ಅಂಡ್ ಯೂಸ್ ಶೌಚಾಲಯವಿದ್ದರೂ ಗೇಟೇ ಮೂತ್ರಾಲಯ!

ಬೆಳಗ್ಗೆಯಿಂದ ಸಂಜೆಯವರೆಗೆ ನೂರಾರು ಸಣ್ಣ ಸಣ್ಣ ವಿದ್ಯಾರ್ಥಿಗಳು ಅಕ್ಷರ ಕಲಿಯುವ ಈ ಶಾಲೆಯ ಮುಖ್ಯ ಗೇಟ್ ಮುಂಭಾಗದಲ್ಲೇ ಸಾರ್ವಜನಿಕರು ಬೇಕಾಬಿಟ್ಟಿಯಾಗಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ವಿಶೇಷವೆಂದರೆ, ಶಾಲೆಯ ಗೇಟ್ ಪಕ್ಕದಲ್ಲೇ ಸಾರ್ವಜನಿಕ ‘ಪೇ ಅಂಡ್ ಯೂಸ್’ ಶೌಚಾಲಯವಿದೆ. ಆದರೆ, ಅಲ್ಲಿ ಹಣ ಕೊಡಬೇಕು ಎನ್ನುವ ಕಾರಣಕ್ಕಾಗಿ ಕೆಲ ಕಿಡಿಗೇಡಿಗಳು ನೇರವಾಗಿ ಶಾಲೆಯ ಆವರಣದ ಗೋಡೆ ಹಾಗೂ ಗೇಟ್ ಮುಂಭಾಗವನ್ನೇ ಮೂತ್ರಾಲಯವನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಇಡೀ ಶಾಲಾ ಆವರಣದ ಸುತ್ತಮುತ್ತ ತೀವ್ರ ದುರ್ವಾಸನೆ ಹರಡಿದ್ದು, ಸೊಳ್ಳೆ ಹಾಗೂ ನೊಣಗಳ ಕಾಟ ಮಿತಿಮೀರಿದೆ.

ಮಕ್ಕಳ ಆರೋಗ್ಯದ ಬಗ್ಗೆ ಪೋಷಕರಲ್ಲಿ ಹೆಚ್ಚಿದ ಭೀತಿ

ಇಂತಹ ಕೊಳಕು ಪರಿಸರದಲ್ಲಿ ನಿತ್ಯ ಮಕ್ಕಳು ಪಾಠ ಕೇಳಬೇಕಾಗಿ ಬಂದಿರುವುದು ಹೆತ್ತವರ ಮತ್ತು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದ್ದು, ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಗಂಭೀರ ಸಮಸ್ಯೆಯ ಕುರಿತು ಶಾಲಾ ಆಡಳಿತ ಮಂಡಳಿ ಹಾಗೂ ಸ್ಥಳೀಯ ನಿವಾಸಿಗಳು ಹಲವು ಬಾರಿ ಜಿಬಿಎ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿ, ಕಸ ತೆರವುಗೊಳಿಸಲು ಹಾಗೂ ಸಾರ್ವಜನಿಕ ಮೂತ್ರ ವಿಸರ್ಜನೆಗೆ ತಡೆಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

ಮನವಿಗೆ ಸ್ಪಂದಿಸದ ಜಿಬಿಎ

ಶಾಲಾ ಆಡಳಿತ ಮಂಡಳಿ ಹಾಗೂ ಸ್ಥಳೀಯರು ದೂರು ನೀಡಿದರೂ ಅಧಿಕಾರಿಗಳು ಮಾತ್ರ ಇತ್ತ ತಲೆಹಾಕಿಯೂ ಮಲಗಿಲ್ಲ ಎನ್ನುವುದು ಇಲ್ಲಿನ ನಿವಾಸಿಗಳ ಗಂಭೀರ ಆರೋಪವಾಗಿದೆ. ಇನ್ನಾದರೂ ಉನ್ನತ ಅಧಿಕಾರಿಗಳು ಎಚ್ಚೆತ್ತುಕೊಂಡು ಶಾಲಾ ಮಕ್ಕಳ ಭವಿಷ್ಯ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ಗೂಗಲ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡು ಭಾವನಾತ್ಮಕ ಜರ್ನಿ ಹಂಚಿಕೊಂಡ ಯುವತಿ – Kannada News | Delhi young woman lands job at Google, inspiring journey goes viral

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೆಲಸ ಸಿಗೋದು ಕಷ್ಟ. ಹೀಗಿರುವಾಗ ಓದು ಮುಗಿಯುತ್ತಿದ್ದಂತೆ ಯುವಕ ಯುವತಿಯರು ಬೆಂಗಳೂರು, ಮುಂಬೈನಂತಹ ದೊಡ್ಡ ದೊಡ್ಡ ನಗರಕ್ಕೆ ತೆರಳುತ್ತಾರೆ. ಆದರೆ ಈ ದೆಹಲಿ (Delhi )ಮೂಲದ ಯುವತಿಯ ಸ್ಫೂರ್ತಿದಾಯಕ ಕಥೆ ವೈರಲ್ ಆಗಿದೆ. ಹೌದು, ಯುವತಿ ಕಠಿಣ ಪರಿಶ್ರಮದಿಂದ ಗೂಗಲ್ (Google) ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ತನ್ನ ವೃತ್ತಿಜೀವನದ ಜರ್ನಿ ಬಗ್ಗೆ ಹಂಚಿಕೊಂಡಿದ್ದು, ಈ ಪೋಸ್ಟ್ ನೆಟ್ಟಿಗರಿಗೆ ಸ್ಫೂರ್ತಿದಾಯಕವಾಗಿದೆ.

ಶಾಲಿನಿ (Shalini) ಹೆಸರಿನ ಎಕ್ಸ್ ಖಾತೆಯಲ್ಲಿ ವೃತ್ತಿಜೀವನದ ಏಳು ಬೀಳಿನ ನಡುವೆ ಉದ್ಯೋಗ ಸಿಕ್ಕಿದ್ದನ್ನು ಬರೆದುಕೊಂಡಿದ್ದಾಳೆ. ಈ ಪೋಸ್ಟ್ ನಲ್ಲಿ ಬಹಳಷ್ಟು ಏರಿಳಿತಗಳ ಬಳಿಕ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಗೂಗಲ್ ಸೇರಿಕೊಂಡಿದ್ದೇನೆ. ಕಳೆದ ವರ್ಷ 2025ರಲ್ಲಿ ಗೂಗಲ್ ಕ್ಲೌಡ್ ವಿಭಾಗದಲ್ಲಿ ಇಂಟರ್ನ್‌ಶಿಪ್ ಆರಂಭಿಸಿದ್ದೆ. ಕೆಲವು ದಿನಗಳಂತೂ ಬೆಳಿಗ್ಗೆ 9:30ರಿಂದ ರಾತ್ರಿ 9:30ರವರೆಗೆ ಕೆಲಸ ಮಾಡುತ್ತಿದ್ದೆ. ಹೀಗಾಗಿ ರೆಸ್ಟ್‌ ಅನ್ನೋದೇ ಇಲ್ಲ ಆಗಿತ್ತು. ಇನ್ನು,  ವಾರಾಂತ್ಯದ ರಜೆಯಲ್ಲಿ ನಾನು ಕೆಲಸ ಮಾಡಿದ್ದೇನೆ ಎಂದು  ಹೇಳಿಕೊಂಡಿದ್ದಾಳೆ.

ವೈರಲ್ ಪೋಸ್ಟ್ ಇಲ್ಲಿದೆ

ಹೈದರಾಬಾದ್‌ನಲ್ಲಿದ್ದ ನನ್ನ ಸ್ನೇಹಿತರು ಕೆಫೆಗಳಿಗೆ ತೆರಳುತ್ತಾ, ಊರು ಸುತ್ತುತ್ತಾ ಮೋಜು ಮಾಡುತ್ತಿದ್ದರೆ, ನಾನು ಮಾತ್ರ ಆಫೀಸ್ ಕೆಲಸ ಎಂದು ಬ್ಯುಸಿಯಾಗಿದ್ದೆ. ಪೂರ್ಣಾವಧಿ ಉದ್ಯೋಗ ನೇಮಕಾತಿಯ ಬಗ್ಗೆ ಯಾವುದೇ ಖಚಿತ ಮಾಹಿತಿ ಇರಲಿಲ್ಲ. ಹೀಗಾಗಿ ಪರ್ಯಾಯ ಉದ್ಯೋಗಗಳನ್ನು ಹುಡುಕುವಂತೆ ಇಂಟರ್ನ್‌ಗಳಿಗೆ ಕಂಪನಿ ಸೂಚನೆ ನೀಡಿತ್ತು. ಈ ವೇಳೆ ನಾನು ಶೇಕಡಾ ನೂರರಷ್ಟು ಶ್ರಮವನ್ನು ಹಾಕಿದೆ ಎಂದು ಬರೆದುಕೊಂಡಿದ್ದಾಳೆ.

ಆ ಸಮಯದಲ್ಲಿ ರಾತ್ರಿಗಳು ಬಹಳ ಕಷ್ಟಕರವಾಗಿದ್ದವು. ನಾನು ಯಾವಾಗಲೂ ಆತಂಕದಲ್ಲಿರುತ್ತಿದ್ದೆ. ಕೆಲಸ ಸಿಗುತ್ತದೆ ಎಂಬ ನೀರಿಕ್ಷೆ ಜತೆಗೆ ಕಾಯುವಿಕೆಯ ಅವಧಿಯಲ್ಲಿ ನನಗೆ ಡಾಯ್ಚ ಬ್ಯಾಂಕ್‌ನಿಂದ ಉದ್ಯೋಗದ ಆಫರ್ ಬಂದಿತ್ತು. ಸ್ಟಾರ್ಟ್‌ಅಪ್ ನಲ್ಲಿ ವಿಂಟರ್ ಇಂಟರ್ನ್‌ಶಿಪ್ ಅವಕಾಶವೂ ಸಿಕ್ಕಿತ್ತು. ಆದರೆ ಗೂಗಲ್ ಉದ್ಯೋಗ ಸಿಗಬಹುದೆಂಬ ಸಣ್ಣ ಭರವಸೆ ನನ್ನಲ್ಲಿ ತುಂಬಾನೇ ಇತ್ತು.  ಬಹಳ  ಚಿಂತೆ, ಆತಂಕದಲ್ಲಿದ್ದಾಗ ಮೊಬೈಲ್‌ನಿಂದ ದೂರ ಉಳಿಯುತ್ತಿದ್ದೆ. ಅಷ್ಟೇ ಅಲ್ಲದೇ, ತನ್ನ ಹೆಚ್ಚಿನ ಸಮಯವನ್ನು ಹೊರಗಡೆ ಕಳೆಯುತ್ತಿದ್ದೆ ಎಂದು ಬರೆದಿರುವುದನ್ನು ನೋಡಬಹುದು.

ಹೀಗಿರುವಾಗ ಸರೋಜಿನ್ ನಗರದಲ್ಲಿ ಶಾಪಿಂಗ್ ಮಾಡುತ್ತಿದ್ದ ವೇಳೆ ಫೋನ್‌ಪೇ ಮೂಲಕ ಹಣ ಪಾವತಿಸಲು ಫೋನ್ ತೆಗೆದೆ. ಆದಾಗಲೇ ಗೂಗಲ್ ನಿಂದ ಆಫರ್ ಲೆಟರ್ ಬಂದಿತ್ತು. ಸರಿಯಾಗಿ ಪರಿಶೀಲಿಸಿ ನೋಡಿದಾಗ @google.com ನಿಂದಲೇ ಬಂದಿದ್ದು ಖಾತರಿಯಾಯಿತು. ಈಗ ನನ್ನ ವೃತ್ತಿಜೀವನವನ್ನು ಹಿಂತಿರುಗಿ ನೋಡಿದಾಗ ನಿದ್ದೆ ಇಲ್ಲದೆ, ಕೆಲಸ ಮಾಡಿದ ರಾತ್ರಿಗಳು ಎಲ್ಲವು ಸಾರ್ಥಕವಾಯಿತು. ದೇವರಿಗೆ ಧನ್ಯವಾದ ಹೇಳುತ್ತೇನೆ ಎಂದು ಬರೆದುಕೊಂಡಿದ್ದಾಳೆ.

ಇದನ್ನೂ ಓದಿ: ಕೆಲಸದಲ್ಲಿನ ಪರಿಪೂರ್ಣತೆ ಬದಿಗಿರಿಸಿ ಮಾನಸಿಕ ಶಾಂತಿ ಕಂಡುಕೊಂಡ ಅಮೆಜಾನ್ ಉದ್ಯೋಗಿ

ಈ ಪೋಸ್ಟ್ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕಂಗ್ರಾಜುಲೇಷನ್ ಲೇಡಿ, ಹೀಗೆ ಸದಾ ಬೆಳೆಯುತ್ತ ಇರಿ ಎಂದಿದ್ದಾರೆ. ಮತ್ತೊಬ್ಬರು, ದೇವರ ಸರಿಯಾದ ಸಮಯದಲ್ಲಿ ಎಲ್ಲವನ್ನು ನೀಡುತ್ತಾನೆ. ನೀವು ಶ್ರಮ ವಹಿಸಿ ಸಾಧಿಸಿದ್ದಕ್ಕಾಗಿ ಅಭಿನಂದನೆಗಳು. ನೀವು ನಿಮ್ಮ ಜೀವನದಲ್ಲಿ ಯಶಸ್ಸು ಮತ್ತು ಸಂತೋಷವನ್ನು ಪಡೆಯಲಿ ಎಂದು ಬಯಸುತ್ತೇನೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನೀವು ಹಗಲು ರಾತ್ರಿ ಎನ್ನದೇ ತುಂಬಾ ಕೆಲಸ ಮಾಡಿದ್ದೀರಿ, ನಿಮಗೆ ಶುಭಾಶಯಗಳು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಪೆರಿಯಾರ್ ನಾಸ್ತಿಕತೆಯನ್ನು ಒಪ್ಪುವುದಿಲ್ಲ, ನಮಗೆ ದೇವರಲ್ಲಿ ನಂಬಿಕೆ ಇದೆ’; ಸಿಎಂ ವಿಜಯ್ – Kannada News | CM Vijay’s TVK: Embracing Periyar’s Social Justice, Rejecting Atheism in Tamil Nadu Politics

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರು (Vijay) ಇತ್ತೀಚೆಗೆ ವಿಧಾನಸಭೆಯಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ತಮ್ಮ ತಮಿಳಗ ವೆಟ್ರಿ ಕಳಗಂ ಪಕ್ಷವು ದ್ರಾವಿಡ ರಾಜಕಾರಣದ ಪಿತಾಮಹ ಪೆರಿಯಾರ್ ಇ.ವಿ. ರಾಮಸ್ವಾಮಿ ಅವರ ಸಾಮಾಜಿಕ ತತ್ವಗಳನ್ನು ಸ್ವೀಕರಿಸಿದೆ ಎಂದು ಅವರು ಹೇಳಿದ್ದಾರೆ. ಆದರೆ ಪೆರಿಯಾರ್ ಅವರ ನಾಸ್ತಿಕತೆ ಮತ್ತು ಧರ್ಮ ನಿರಾಕರಣೆಯ ವಿಚಾರಗಳನ್ನು ತಮ್ಮ ಪಕ್ಷ ಒಪ್ಪುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅವರ ಹೇಳಿಕೆ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.

ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಸಿಎಂ ವಿಜಯ್ ಮಾತನಾಡಿದ್ದಾರೆ. ‘ಪೆರಿಯಾರ್ ಅವರ ಧರ್ಮ ನಿರಾಕರಣೆಯ ನಿಲುವನ್ನು ನಾವು ಒಪ್ಪಿಲ್ಲ. ಆದರೆ ಅವರ ವಿಶಾಲವಾದ ಸಾಮಾಜಿಕ ತತ್ವಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿದ್ದೇವೆ. ನಾವು ಪೆರಿಯಾರ್ ಅವರ ಬೋಧನೆಗಳನ್ನು ಸ್ವೀಕರಿಸಿದ್ದೇವೆ. ಹಾಗೆಯೇ ನಾವು ದೇವರನ್ನು ನಂಬುವವರು ಎಂಬುದನ್ನು ಸ್ಪಷ್ಟಪಡಿಸಿದ್ದೇವೆ. ನಾವು ಯಾರ ಸಿದ್ಧಾಂತಕ್ಕೂ ವಿರುದ್ಧವಾಗಿಲ್ಲ’ ಎಂದು ವಿಜಯ್ ತಿಳಿಸಿದ್ದಾರೆ.

ಮೂವರು ನಾಯಕರೇ ಪ್ರೇರಣೆ

ತಮ್ಮ ಸರ್ಕಾರವು ಪೆರಿಯಾರ್, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಾಜಿ ಸಿಎಂ ಕೆ. ಕಾಮರಾಜ್ ಅವರ ಸಿದ್ಧಾಂತಗಳ ಸಮ್ಮಿಶ್ರಣದಿಂದ ಪ್ರೇರಣೆ ಪಡೆದಿದೆ ಎಂದು ವಿಜಯ್ ಹೇಳಿದ್ದಾರೆ. ‘ನಾವು ಡಾ. ಅಂಬೇಡ್ಕರ್ ಅವರ ಸಮಾನ ಅವಕಾಶ ಮತ್ತು ಸಾಮಾಜಿಕ ನ್ಯಾಯದ ಆದರ್ಶಗಳನ್ನು ಒಪ್ಪಿಕೊಂಡಿದ್ದೇವೆ. ಕಾಮರಾಜ್ ಅವರ ಪ್ರಾಮಾಣಿಕ ಆಡಳಿತದ ಮಾದರಿಯನ್ನು ನಮ್ಮ ಮಾರ್ಗದರ್ಶಿ ಸೂತ್ರವಾಗಿ ಅಳವಡಿಸಿಕೊಂಡಿದ್ದೇವೆ’ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ವಿಜಯ್ ಜನ್ಮದಿನಕ್ಕೆ ತ್ರಿಶಾ ತರಿಸಿದ್ದು ವಿಶೇಷ ಕೇಕ್; ‘00.00’ ಅರ್ಥ ಹುಡುಕಿದ ನೆಟ್ಟಿಗರು

ಸಾಮಾನ್ಯ ಜನರ ಸರ್ಕಾರ

ತಮ್ಮ ಪಕ್ಷವನ್ನು ಕೇವಲ ಒಬ್ಬ ನಟನ ನೇತೃತ್ವದ ಸಂಘಟನೆ ಎಂದು ಕರೆಯುವವರ ವಿರುದ್ಧ ವಿಜಯ್ ವಾಗ್ದಾಳಿ ನಡೆಸಿದ್ದಾರೆ. ‘ಹೆಚ್ಚಿನ ಜನರು ಮೊದಲು ರಾಜಕೀಯ ಪಕ್ಷವನ್ನು ಪ್ರಾರಂಭಿಸಿ ನಂತರ ಜನರ ಬಳಿಗೆ ಹೋಗುತ್ತಾರೆ. ಆದರೆ ನಾವು ಮೊದಲು ಜನರ ಬಳಿಗೆ ಹೋಗಿ ಆ ನಂತರ ನಮ್ಮ ಪಕ್ಷವನ್ನು ಪ್ರಾರಂಭಿಸಿದ್ದೇವೆ. ಅಣ್ಣಾದೊರೈ ಹಾಗೂ ಎಂ.ಜಿ. ರಾಮಚಂದ್ರನ್ ಅವರ ಅವಧಿಯಲ್ಲಿ ಸಾಮಾನ್ಯ ಜನರ ಸರ್ಕಾರವಿತ್ತು. ಅದೇ ರೀತಿ ವಿಜಯ್ ನೇತೃತ್ವದ ಈ ಸರ್ಕಾರವು ಅತ್ಯಂತ ಸಾಮಾನ್ಯ ಜನರ ಸರ್ಕಾರವಾಗಿದೆ’ ಎಂದು ಭರವಸೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಫಾಫ್ ಡುಪ್ಲೆಸಿಸ್ ಸೂಪರ್​ಮ್ಯಾನ್ ಕ್ಯಾಚ್​ಗೆ ಕ್ರಿಕೆಟ್ ಪ್ರಿಯರು ಫಿದಾ! – Kannada News | 42 Year Old Faf du Plessis Flies for a Blinder in MLC 2026!

ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೇ ಎಂಬುದನ್ನು ಸೌತ್ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈ ಬಾರಿ ಸಾಬೀತುಪಡಿಸಿರುವುದು 42ನೇ ವಯಸ್ಸಿನಲ್ಲಿ ಎಂಬುದು ವಿಶೇಷ. ಅದು ಸಹ ಅತ್ಯದ್ಭುತ ಫ್ಲೇಯಿಂಗ್ ಕ್ಯಾಚ್ ಹಿಡಿದು!

ಪ್ರಸ್ತುತ ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ (MLC) ಟೂರ್ನಿಯಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ನಾಯಕನಾಗಿ ಕಣಕ್ಕಿಳಿಯುತ್ತಿರುವ ಫಾಫ್ ಡುಪ್ಲೆಸಿಸ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸಿ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಶತಕ ಬಾರಿಸಿದ ಅತ್ಯಂತ ಹಿರಿಯ ಬ್ಯಾಟರ್ ಎನಿಸಿಕೊಂಡಿದ್ದರು. ಇದೀಗ ತಮ್ಮ ಅದ್ಭುತ ಫೀಲ್ಡಿಂಗ್ ಮೂಲಕ ಇಡೀ ಕ್ರಿಕೆಟ್ ಜಗತ್ತೇ ಹುಬ್ಬೇರಿಸುವಂತೆ ಮಾಡಿದ್ದಾರೆ.

“ಸೂಪರ್ ಮ್ಯಾನ್” ಕ್ಯಾಚ್!

ಓಕ್ಲ್ಯಾಂಡ್ ಕೊಲಿಸಿಯಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ಹಾಗೂ ಸ್ಯಾನ್ ಫ್ರಾನ್ಸಿಸ್ಕೊ ಯುನಿಕಾರ್ನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಸ್ಯಾನ್ ಫ್ರಾನ್ಸಿಸ್ಕೊ ಯುನಿಕಾರ್ನ್ಸ್ ತಂಡವು ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಟಿಎಸ್​ಕೆ ತಂಡ ದಾಂಡಿಗರು 20 ಓವರ್​ಗಳಲ್ಲಿ 161 ರನ್ ಕಲೆಹಾಕಿದ್ದರು.

162 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಲು ಸ್ಯಾನ್ ಫ್ರಾನ್ಸಿಸ್ಕೊ ಯುನಿಕಾರ್ನ್ಸ್ ಪರ ಲೂವಾನ್-ಡ್ರೆ ಪ್ರಿಟೋರಿಯಸ್ ಹಾಗೂ ಫಿನ್ ಅಲೆನ್ ಕಣಕ್ಕಿಳಿದಿದ್ದರು. ಆದರೆ ಎರಡನೇ ಓವರ್​ನ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿ ಫಿನ್ ಅಲೆನ್ (3) ಔಟಾದರು.

ಇದಾಗ್ಯೂ ಡೇಂಜರಸ್ ಲೂವಾನ್-ಡ್ರೆ ಪ್ರಿಟೋರಿಯಸ್ ಕ್ರೀಸ್​ ಕಚ್ಚಿ ನಿಲ್ಲುವ ಸೂಚನೆ ನೀಡಿದ್ದರು. ಆದರೆ ಪಂದ್ಯದ 5ನೇ ಓವರ್​ನ ಮೊದಲ ಎಸೆತದಲ್ಲಿ ಪ್ರಿಟೋರಿಯಸ್  ಬಾರಿಸಿದ ಚೆಂಡನ್ನು ಮಿಡ್-ಆಫ್‌ನಲ್ಲಿದ್ದ ಫಾಫ್ ಡು ಪ್ಲೆಸಿಸ್  ನಂಬಲಸಾಧ್ಯದಂತೆ ಹಿಡಿದರು.

ಗಾಳಿಯಲ್ಲಿ ಸಂಪೂರ್ಣವಾಗಿ ತೇಲುತ್ತಾ, ಕೇವಲ ಒಂದೇ ಕೈಯಿಂದ ಅವರು ಹಿಡಿದ ಆ ಡೈವಿಂಗ್ ಕ್ಯಾಚ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. 41 ವರ್ಷ ದಾಟಿದರೂ ಯುವ ಆಟಗಾರರನ್ನು ಮೀರಿಸುವಂತೆ ಫೀಲ್ಡಿಂಗ್ ಮಾಡುತ್ತಿರುವ ಫಾಫ್ ಡು ಪ್ಲೆಸಿಸ್ ಅವರ ಚುರುಕುತನಕ್ಕೆ ಕ್ರಿಕೆಟ್ ಪ್ರೇಮಿಗಳು ಬಹುಪರಾಕ್ ಅನ್ನುತ್ತಿದ್ದಾರೆ.

ಇದನ್ನೂ ಓದಿ: FIFA World Cup 2026: ನಾಕೌಟ್ ರೌಂಡ್​ಗೆ ಬ್ರೆಝಿಲ್ ಎಂಟ್ರಿ

ಗೆದ್ದು ಬೀಗಿದ TSK:

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 161 ರನ್ ಕಲೆಹಾಕಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಸ್ಯಾನ್ ಫ್ರಾನ್ಸಿಸ್ಕೊ ಯುನಿಕಾರ್ನ್ಸ್ ತಂಡವು 17.4 ಓವರ್​ಗಳಲ್ಲಿ 139 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟಿಎಸ್​ಕೆ ತಂಡವು 22 ರನ್​ಗಳ ಭರ್ಜರಿ ಜಯ ಸಾಧಿಸಿದೆ.

Source link

Exit mobile version