ಹೂಸು ಬಿಡುವಾಗ ಕೆಟ್ಟ ವಾಸನೆ ಯಾಕೆ ಬರುತ್ತೆ ಗೊತ್ತಾ? ಇದರ ಹಿಂದಿರುವ ವೈಜ್ಞಾನಿಕ ಕಾರಣಗಳು ಇಲ್ಲಿವೆ – Kannada News | Smelly Gas Causes: What Your Gut Is Trying To Tell You

ಹೂಸು (Farts) ಅಥವಾ ಗ್ಯಾಸ್ ಬಿಡುವುದು ದೇಹದ ಸಹಜ ಜೀರ್ಣಕ್ರಿಯೆಯ ಒಂದು ಭಾಗ. ಆದರೆ ಕೆಲವೊಮ್ಮೆ ಹೂಸು ಬಿಟ್ಟಾಗ ತೀವ್ರ ದುರ್ವಾಸನೆ ಬರುತ್ತದೆ. ಇದರಿಂದ ಮುಜುಗರ ಉಂಟಾಗಬಹುದು. ಹಾಗಾದರೆ ಈ ದುರ್ವಾಸನೆಗೆ ಕಾರಣವೇನು ಎಂದು ಎಂದಾದರೂ ಯೋಚಿಸಿದ್ದೀರಾ ಅಥವಾ ಈ ಅನಿಲವು ನಿಜವಾಗಿಯೂ ಹೊಟ್ಟೆಯಲ್ಲಿ ಹೇಗೆ ರೂಪುಗೊಳ್ಳುತ್ತದೆ ಎಂಬುದು ತಿಳಿದಿದೆಯೇ… ಇದರ ಹಿಂದಿನ ವೈಜ್ಞಾನಿಕ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ನಮ್ಮ ಜೀರ್ಣಕ್ರಿಯೆಯ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಲು ಸಹಾಯ ಮಾಡುತ್ತದೆ. ಆ ಮೂಲಕ ಇಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಹಾಗಾದರೆ ಯಾವ ರೀತಿಯ ಆಹಾರಗಳು ಹೂಸಿನ ಸಮಸ್ಯೆಗೆ ಕಾರಣವಾಗುತ್ತದೆ ಮತ್ತು ದೇಹದಿಂದ ಹೊರಹೋದ ಗ್ಯಾಸ್ ಅಥವಾ ಹೂಸು ಕೆಟ್ಟ ವಾಸನೆ ಬರುವುದಕ್ಕೆ ನಿಜವಾದ ಕಾರಣವೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಾವು ಆಹಾರ ಸೇವಿಸುವಾಗ, ನೀರು ಕುಡಿಯುವಾಗ ಅಥವಾ ಮಾತನಾಡುವಾಗ ಸ್ವಲ್ಪ ಪ್ರಮಾಣದ ಗಾಳಿ ಹೊಟ್ಟೆಯೊಳಗೆ ಸೇರುತ್ತದೆ. ಜೊತೆಗೆ, ನಾವು ತಿನ್ನುವ ಆಹಾರ ದೊಡ್ಡ ಕರುಳಿಗೆ ತಲುಪಿದಾಗ ಅಲ್ಲಿ ಇರುವ ಬ್ಯಾಕ್ಟೀರಿಯಾಗಳು ಅದನ್ನು ಒಡೆಯುವ ಪ್ರಕ್ರಿಯೆ ಆರಂಭಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುತ್ತದೆ. ಸಾಮಾನ್ಯವಾಗಿ ಈ ಗ್ಯಾಸ್‌ನಲ್ಲಿ ನೈಟ್ರೋಜನ್, ಆಮ್ಲಜನಕ, ಹೈಡ್ರೋಜನ್, ಕಾರ್ಬನ್ ಡೈಆಕ್ಸೈಡ್ ಮತ್ತು ಮೀಥೇನ್ ಇರುತ್ತವೆ. ಇವುಗಳಿಗೆ ಹೆಚ್ಚಿನ ವಾಸನೆ ಇರುವುದಿಲ್ಲ. ಆದರೆ ಕೆಲವು ಆಹಾರಗಳು ಗ್ಯಾಸ್‌ಗೆ ದುರ್ವಾಸನೆ ಉಂಟುಮಾಡಬಹುದು.

ಇದನ್ನೂ ಓದಿ: ಆರೋಗ್ಯ ಕಾಪಾಡಿಕೊಳ್ಳಲು ಮಳೆಗಾಲದಲ್ಲಿ ಇಂತಹ ಆಹಾರಗಳಿಂದ ದೂರವಿರಿ

ಹೂಸು ಬಿಡುವಾಗ ಕೆಟ್ಟ ವಾಸನೆ ಬರುವುದಕ್ಕೆ ಕಾರಣವಾಗುವ ಆಹಾರ:

ವಿಶೇಷವಾಗಿ ಎಲೆಕೋಸು, ಕಾಲಿಫ್ಲವರ್, ಬ್ರೋಕೋಲಿ, ಈರುಳ್ಳಿ, ಬೆಳ್ಳುಳ್ಳಿ, ಮೊಟ್ಟೆ ಹಾಗೂ ಮಾಂಸಾಹಾರಗಳಲ್ಲಿ ಸಲ್ಫರ್ ಅಂಶ ಹೆಚ್ಚಿರುತ್ತದೆ. ಇವುಗಳನ್ನು ಜೀರ್ಣಿಸುವ ವೇಳೆ ಬ್ಯಾಕ್ಟೀರಿಯಾಗಳು ಹೈಡ್ರೋಜನ್ ಸಲ್ಫೈಡ್ ಎಂಬ ಅನಿಲವನ್ನು ಉತ್ಪಾದಿಸುತ್ತವೆ. ಈ ಅನಿಲಕ್ಕೆ ಕೊಳೆತ ಮೊಟ್ಟೆಯಂತಹ ತೀವ್ರ ದುರ್ವಾಸನೆ ಇರುತ್ತದೆ. ಆದ್ದರಿಂದ ಇಂತಹ ಆಹಾರಗಳ ನಂತರ ಹೂಸು ಹೆಚ್ಚು ವಾಸನೆ ಬರಬಹುದು. ಜೀರ್ಣಕ್ರಿಯೆ ನಿಧಾನವಾಗಿದ್ದರೆ ಅಥವಾ ಆಹಾರ ಕರುಳಿನಲ್ಲಿ ಹೆಚ್ಚು ಸಮಯ ಉಳಿದಿದ್ದರೂ ಹೂಸು ಹೊರ ಹೋಗುವಾಗ ದುರ್ವಾಸನೆ ಹೆಚ್ಚಾಗಬಹುದು. ಕೆಲವು ಮಂದಿಯಲ್ಲಿ ಹಾಲಿನ ಉತ್ಪನ್ನಗಳು ಸರಿಯಾಗಿ ಜೀರ್ಣವಾಗದಿರುವುದು ಅಥವಾ ಗ್ಲೂಟನ್ ಅಸಹಿಷ್ಣುತೆಯೂ ಕಾರಣವಾಗಬಹುದು.

ಹೂಸು ಬಿಟ್ಟಾಗ ಕೆಟ್ಟ ವಾಸನೆ ಬರುವುದನ್ನು ತಡೆಯಲು ಸಲಹೆಗಳು:

  • ಆಹಾರವನ್ನು ನಿಧಾನವಾಗಿ ಚೆನ್ನಾಗಿ ಜಗಿದು ತಿನ್ನಿ.
  • ಸಾಕಷ್ಟು ನೀರು ಕುಡಿಯಿರಿ.
  • ಕಾರ್ಬೊನೇಟೆಡ್ ಪಾನೀಯಗಳನ್ನು ಕಡಿಮೆ ಮಾಡಿ.
  • ಸಮತೋಲನದ ಫೈಬರ್ ಇರುವ ಆಹಾರ ಸೇವಿಸಿ.

ಹೂಸು ಬಿಡುವುದು ಸಾಮಾನ್ಯ. ಆದರೆ ತೀವ್ರ ಹೊಟ್ಟೆನೋವು, ವಾಂತಿ, ಅತಿಸಾರ, ತೂಕ ಇಳಿಕೆ ಅಥವಾ ನಿರಂತರ ಕೆಟ್ಟ ವಾಸನೆ ಹೂಸು ಹೊರಹೋದಾಗ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀವು ಅಸಲಿ ಕಾಶ್ಮೀರಿಗಳಲ್ಲ; ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿಕೆಗೆ ಪಿಒಕೆಯಲ್ಲಿ ಭಾರಿ ಆಕ್ರೋಶ – Kannada News | You are not proper Kashmiris Pakistan Defence minister Khwaja Asif identity remark sparks PoK outrage

ಮುಜಾಫರಾಬಾದ್, ಜೂನ್ 24: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) ನಾಗರಿಕರ ಗುರುತನ್ನು ಪ್ರಶ್ನಿಸುವ ಮುಖಾಂತರ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ನೀಡಿರುವ ವಿವಾದಾತ್ಮಕ ಹೇಳಿಕೆ ಅಲ್ಲಿನ ಜನರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. “ನೀವು ಅಸಲಿ ಕಾಶ್ಮೀರಿಗಳಲ್ಲ” ಎಂದು ಪಾಕಿಸ್ತಾನದ ರಕ್ಷಣಾ ಸಚಿವರು ನೀಡಿರುವ ಹೇಳಿಕೆ ಪಿಒಕೆಯಾದ್ಯಂತ ಸಾರ್ವಜನಿಕ ಪ್ರತಿಭಟನೆಗಳಿಗೆ ನಾಂದಿ ಹಾಡಿದೆ. ಪಾಕಿಸ್ತಾನ ಸರ್ಕಾರವು ಪಿಒಕೆಯ ಜನರನ್ನು ಕೇವಲ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದೆ ಮತ್ತು ಅವರ ಮೂಲ ಅಸ್ತಿತ್ವವನ್ನೇ ನಿರಾಕರಿಸುತ್ತಿದೆ ಎಂದು ಅಲ್ಲಿನ ಸ್ಥಳೀಯ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗೆ ನಡೆದ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್, ಪಿಒಕೆ ಭಾಗದ ನಿವಾಸಿಗಳ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ಹಿನ್ನೆಲೆಯನ್ನು ಕೆಣಕುವ ನಿಟ್ಟಿನಲ್ಲಿ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಪಿಒಕೆ ಜನರನ್ನು ಪಾಕಿಸ್ತಾನದ ಇತರ ಪ್ರಾಂತ್ಯಗಳ ಜನರೊಂದಿಗೆ ಹೋಲಿಸುತ್ತಾ, ಅವರು ಕಣಿವೆ ರಾಜ್ಯದ ಮೂಲ ‘ಅಸಲಿ ಕಾಶ್ಮೀರಿ’ ಅಸ್ತಿತ್ವವನ್ನು ಹೊಂದಿಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪಿಒಕೆ ನಾಗರಿಕರು ಕೆರಳಿ ಕೆಂಡವಾಗಿದ್ದಾರೆ.

ಇದನ್ನೂ ಓದಿ: ಪಿಒಕೆಯಲ್ಲಿ ಪಾಕಿಸ್ತಾನದ ಸೇನಾ ಹೆಲಿಕಾಪ್ಟರ್ ಪತನ; ಅಧಿಕಾರಿಗಳು ಸೇರಿದಂತೆ ಎಲ್ಲ ಸೈನಿಕರೂ ಸಜೀವದಹನ

ರಸ್ತೆಗಿಳಿದ ಜನ:

ಮುಜಾಫರಾಬಾದ್, ರಾವಲಕೋಟ್ ಮತ್ತು ಮೀರ್​​ಪುರ ಸೇರಿದಂತೆ ಪಿಒಕೆಯ ಪ್ರಮುಖ ನಗರಗಳಲ್ಲಿ ನೂರಾರು ವಿದ್ಯಾರ್ಥಿಗಳು, ನಾಗರಿಕರು ಮತ್ತು ರಾಜಕೀಯ ಕಾರ್ಯಕರ್ತರು ಪಾಕಿಸ್ತಾನ ಸರ್ಕಾರದ ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಪಾಕ್ ಧ್ವಜ, ಸಚಿವರ ಪ್ರತಿಕೃತಿ ದಹನ:

ಆಕ್ರೋಶಗೊಂಡ ಪ್ರತಿಭಟನಾಕಾರರು ಪಾಕಿಸ್ತಾನ ರಕ್ಷಣಾ ಸಚಿವರ ಪ್ರತಿಕೃತಿಯನ್ನು ದಹಿಸಿ, ಇಸ್ಲಾಮಾಬಾದ್ ಆಡಳಿತದ ವಿರುದ್ಧ ತೀವ್ರ ಘೋಷಣೆಗಳನ್ನು ಕೂಗಿದ್ದಾರೆ. “ನಮ್ಮ ಪೂರ್ವಜರು ಈ ಭೂಮಿಗಾಗಿ ತ್ಯಾಗ ಮಾಡಿದ್ದಾರೆ. ನಮ್ಮನ್ನು ಎರಡನೇ ದರ್ಜೆಯ ನಾಗರಿಕರಂತೆ ಕಾಣುವ ಪಾಕಿಸ್ತಾನದ ಮಂತ್ರಿಗಳು ನಮ್ಮ ಗುರುತನ್ನು ನಿರ್ಧರಿಸಲು ಯಾರು?” ಎಂದು ಸ್ಥಳೀಯ ಹೋರಾಟಗಾರರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಭಾರತದ ನಕ್ಷೆಯಲ್ಲಿ ಪಿಒಕೆ ಸೇರಿಸಿದ ಅಮೆರಿಕ; ಪಾಕಿಸ್ತಾನಕ್ಕೆ ಬಿಸಿ ತುಪ್ಪವಾದ ಟ್ರಂಪ್

ಪಿಒಕೆ ಪ್ರಾದೇಶಿಕ ನಾಯಕರು ಮತ್ತು ಪ್ರತ್ಯೇಕತಾವಾದಿ ಗುಂಪುಗಳು ಕೂಡ ಖವಾಜಾ ಆಸಿಫ್ ಹೇಳಿಕೆಯನ್ನು ಕಟುವಾಗಿ ಖಂಡಿಸಿದ್ದು, ತಕ್ಷಣವೇ ಅವರು ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ವೈಭವ್ ಅಲ್ಲ..! – Kannada News | Vaibhav Sooryavanshi: 15 Year Old Set for India Debut, Eying Sachin’s Historic Mark

ಐರ್ಲೆಂಡ್ ಹಾಗೂ ಇಂಗ್ಲೆಂಡ್‌ ಪ್ರವಾಸದಲ್ಲಿ ವೈಭವ್ ಸೂರ್ಯವಂಶಿ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರೆ, ಭಾರತ ಪರ ಪುರುಷರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ದಾಖಲೆಯು ಪ್ರಸ್ತುತ ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದೆ (PC-PTI).

Source link

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಬಸ್ ಪಾಸ್ ಹಣ ಮರುಪಾವತಿಗೆ ಆದೇಶ, ಪ್ರಕ್ರಿಯೆ ಹೇಗೆ? – Kannada News | Karnataka Governmnet Orders Students Bus Pass Money refund, here Is Details How to Apply And Where

ಬೆಂಗಳೂರು, (ಜೂನ್ 24): ಕರ್ನಾಟಕದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ (Students) ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸಿಹಿಸುದ್ದಿಯೊಂದನ್ನು ನೀಡಿದೆ. ಈಗಾಗಲೇ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ (Free Bus Pass) ವಿತರಣಗೆ ಕೆಎಸ್​​ಆರ್​​​ಟಿಸಿ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಈಗಾಗಲೇ ಹಣ ನೀಡಿ ಬಸ್ ಪಾಸ್ ಪಡೆದ ವಿದ್ಯಾರ್ಥಿಗಳ ಹಣವನ್ನು ಮರುಪಾವತಿಗೆ ಮಹತ್ವದ ಆದೇಶ ಹೊರಡಿಸಿದೆ. KSRTC, BMTC, NWKRTC, KKRTC ನಿಗಮಗಳು ಹಣ ವಾಪಸ್ ಪಡೆಯುವ ಬಗ್ಗೆ ವಿದ್ಯಾರ್ಥಿಗಳಿ ಅವಕಾಶ ನೀಡಿದ್ದು, ಹಣ ಮರುಪಾವತಿಗೆ ಅರ್ಜಿಸಲು ಕೋರಿದೆ. ಹೀಗಾಗಿ ಹಣ ವಾಪಸ್​​​​ ಪಡೆದುಕೊಳ್ಳಲು ವಿದ್ಯಾರ್ಥಿಗಳು 29-05-2026ರಿಂದ ಸೇವಾಸಿಂಧು ಪೋರ್ಟಲ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಿದ್ದು, ಅರ್ಜಿ ಸಲ್ಲಿಸಿದ 7 ದಿನಗಳಲ್ಲಿ ಹಣ ಮರುಪಾವತಿಯಾಗಲಿದೆ.

29-05-2026ರಿಂದ ಅರ್ಜಿ ಆರಂಭ

ರಾಜ್ಯದಲ್ಲಿ ವಾಸವಿದ್ದು, ಗಡಿರಾಜ್ಯಗಳಲ್ಲಿನ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಗಡಿರಾಜ್ಯಗಳಲ್ಲಿ (ರಾಜ್ಯದ ಗಡಿಭಾಗದಲ್ಲಿ) ವಾಸವಿದ್ದು, ರಾಜ್ಯದೊಳಗಿನ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಒದಗಿಸಲಾಗಿದೆ. ಆದ್ರೆ, ಉಚಿತ ಬಸ್ ಪಾಸ್ ಯೋಜನೆ ಜಾರಿಯಾಗುವುದರಿಂದ ಶುಲ್ಕ ಪಡೆದು ವಿತರಿಸಲಾದ ಪಾಸುಗಳ ಸಂಪೂರ್ಣ ಶುಲ್ಕವನ್ನು ಆಯಾ ವಿದ್ಯಾರ್ಥಿಗಳಿಗೆ ಮರುಪಾವತಿಸಲು KSRTC, BMTC, NWKRTC, KKRTC ನಿಗಮದಿಂದ ಆದೇಶ ಹೊರಡಿಸಲಾಗಿದ್ದು, 29-05-2026ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಲಿದೆ.

ಇದನ್ನೂ ಓದಿ: ಸೇವಾ ಸಿಂಧು ಪೋರ್ಟಲ್​ನಲ್ಲಿ ಉಚಿತ ಬಸ್ ಪಾಸ್​ಗೆ ಅರ್ಜಿ ಸಲ್ಲಿಸುವುದು ಹೇಗೆ? ಹಂತ ಹಂತದ ಮಾಹಿತಿ

ಅರ್ಜಿ ಹೇಗೆ? ಎಲ್ಲಿ ಸಲ್ಲಿಸಬೇಕು?

ಈಗಾಗಲೇ ಹಣ ನೀಡಿ ಬಸ್ ಪಾಸ್ ಮಾಡಿಸಿಕೊಂಡಿರುವ ವಿದ್ಯಾರ್ಥಿಗಳು, ವಾಪಸ್ ಹಣವನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕು. 29-05-2026ರಿಂದ ಅರ್ಜಿ ಪ್ರಕ್ರಿಯೆ ಆರಂವಾಗಲಿದ್ದು, OTP ಮೂಲಕ ನೋಂದಣಿ ಮಾಡಿ ಸೇವಾಸಿಂಧು ಪೋರ್ಟಲ್ ಮೂಲಕ ಸಲ್ಲಿಸಬೇಕು. ಇನ್ನು ವಿದ್ಯಾರ್ಥಿಗಳು ಬ್ಯಾಂಕ್ ಖಾತೆ ವಿವರ ಸಲ್ಲಿಕೆ ಕಡ್ಡಾಯವಾಗಿದ್ದು, ಅರ್ಜಿ ಪರಿಶೀಲನೆ ಬಳಿಕ NEFT/RTGS ಮೂಲಕ ಹಣ ವಿದ್ಯಾರ್ಥಿಗಳ ನೀಡಿರುವ ಬ್ಯಾಂಕ್ ಖಾತೆಗೆ 7 ದಿನಗಳಲ್ಲಿ ಮರುಪಾವತಿಯಾಗಲಿದೆ.

ಡಿಕೆಶಿ ಸಿಎಂ ಆದ ದಿನವೇ ಘೋಷಿಸಿದ್ದ ಯೋಜನೆ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ಶಾಲಾ ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಿಸಿದ್ದರು. ಇದೀಗ ಈ ಯೋಜನೆ ಜಾರಿಗೆ ಬಂದಿದೆ.ರಾಜ್ಯದ ಎಲ್ಲಾ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಿದಲ್ಲಿ ತಗಲುವ ಅಂದಾಜು ವೆಚ್ಚ 286.08 ರೂ. ಕೋಟಿಗಳನ್ನು ಮತ್ತು ಪ್ರತಿ ಬಸ್ ಪಾಸ್‌ನ ಸಂಸ್ಕರಣಾ ಶುಲ್ಕ 100 ರೂ. ಹಾಗೂ ಅಪಘಾತ ಪರಿಹಾರ ನಿಧಿ 50 ರೂ. ರಂತೆ (ಪ್ರತಿ ತಿಂಗಳಿಗೆ 5ರೂ.ರಂತೆ) ಒಟ್ಟು ಅಂದಾಜು ವೆಚ್ಚ 15 ಕೋಟಿ ರೂ. ಸರ್ಕಾರದಿಂದ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಭರಿಸುವಂತೆ ತಿಳಿಸಲಾಗಿದೆ. ಜೊತೆಗೆ 2026-27ನೇ ಶೈಕ್ಷಣಿಕ ಸಾಲಿನಲ್ಲಿ 30.05.2026 ರಿಂದ 09.06.2026ರ ವರೆಗೆ ನಾಲ್ಕು ನಿಗಮ / ಸಂಸ್ಥೆಗಳಿಂದ ಒಟ್ಟಾರೆ 19,792 ರಿಯಾಯಿತಿ ದರದಲ್ಲಿ ಪಾಸುಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗಿದ್ದು, ಉಚಿತ ಬಸ್ ಪಾಸ್ ವ್ಯವಸ್ಥೆ ಜಾರಿಯಾಗುವವರೆಗೆ ವಿತರಿಸಲಾದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಪಾಸಿನ ಮೊತ್ತವನ್ನು ವಿದ್ಯಾರ್ಥಿಗಳಿಗೆ ಮರುಪಾವತಿಸಲು ಅನುಮೋದನೆ ನೀಡಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮನೆ ಕೆಲಸದ ಮಹಿಳೆಯರನ್ನು ಕೂಡಿಹಾಕಿದ ನಟ ರವಿ ಮೋಹನ್? ಹೊಸ ವಿವಾದ – Kannada News | Actor Ravi Mohan house theft case and house help detention allegations Chennai

ತಮಿಳು ಚಿತ್ರರಂಗದ ಖ್ಯಾತ ನಟ ರವಿ ಮೋಹನ್ (ಜಯಂ ರವಿ) ಅವರ ಇಂಜಂಬಾಕ್ಕಂನಲ್ಲಿರುವ ಐಷಾರಾಮಿ ನಿವಾಸ ಈಗ ದೊಡ್ಡ ವಿವಾದಕ್ಕೆ ಕೇಂದ್ರಬಿಂದುವಾಗಿದೆ. ರವಿ ಮೋಹನ್ ಅವರ ಮನೆಯಲ್ಲಿ ಭಾರಿ ಕಳ್ಳತನ (Theft) ನಡೆದಿರುವ ಬೆನ್ನಲ್ಲೇ, ಕೆಲಸದವರನ್ನು ಅಕ್ರಮವಾಗಿ ಕೂಡಿಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಸಂಸಾರದ ಗಲಾಟೆಯಿಂದ ಸುದ್ದಿಯಾಗಿದ್ದ ರವಿ ಮೋಹನ್ (Ravi Mohan) ಅವರು ಈಗ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಮಾಧ್ಯಮಗಳ ವರದಿಯ ಪ್ರಕಾರ, ರವಿ ಮೋಹನ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರು ಮತ್ತು ಒಬ್ಬ ಬಾಲಕ ಸೋಮವಾರ ಕೆಲಸಕ್ಕೆಂದು ಹೋದವರು ಮರಳಿ ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಅವರ ಕುಟುಂಬಸ್ಥರು ತಕ್ಷಣ ಪೊಲೀಸ್ ಕಂಟ್ರೋಲ್ ರೂಮ್​ಗೆ ದೂರು ನೀಡಿದ್ದಾರೆ. ಮಾಹಿತಿ ಪಡೆದ ನೀಲಂಕರೈ ಪೊಲೀಸರು ನಟನ ಮನೆಗೆ ಭೇಟಿ ನೀಡಿದಾಗ, ಆ ಮೂವರನ್ನು ಅಲ್ಲಿಯೇ ತಡೆದು ನಿಲ್ಲಿಸಿರುವುದು ಪತ್ತೆಯಾಗಿದೆ.

ಪೊಲೀಸರ ಎಚ್ಚರಿಕೆ ಮತ್ತು ಬಿಡುಗಡೆ:

ಖಾಸಗಿಯಾಗಿ ಯಾರನ್ನೂ ಕೂಡಿಹಾಕುವಂತಿಲ್ಲ ಎಂದು ಎಚ್ಚರಿಕೆ ನೀಡಿದ ಪೊಲೀಸರು, ‘ಕಳ್ಳತನ ನಡೆದಿದ್ದರೆ ಕಾನೂನುಬದ್ಧವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕೇ ಹೊರತು, ಈ ರೀತಿ ಅಕ್ರಮವಾಗಿ ಬಂಧಿಸಿ ವಿಚಾರಣೆ ನಡೆಸಲು ಯಾರಿಗೂ ಹಕ್ಕಿಲ್ಲ’ ಎಂದು ಖಡಕ್ ಆಗಿ ಹೇಳಿದ್ದಾರೆ. ತಕ್ಷಣವೇ ಪೊಲೀಸರು ಆ ಇಬ್ಬರು ಮಹಿಳೆಯರು ಹಾಗೂ ಬಾಲಕನನ್ನು ಅಲ್ಲಿಂದ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ.

ದೂರು ನೀಡಿದ ರವಿ ಮೋಹನ್ ಮ್ಯಾನೇಜರ್:

ಇದಾದ ಬಳಿಕ, ರವಿ ಮೋಹನ್ ಅವರ ಮ್ಯಾನೇಜರ್ ಪೊಲೀಸರಿಗೆ ಅಧಿಕೃತ ದೂರು ನೀಡಿದ್ದಾರೆ. ಮನೆಯಲ್ಲಿದ್ದ 10 ಲಕ್ಷ ರೂಪಾಯಿ ಮೌಲ್ಯದ ವಜ್ರದ ಹಾರ ಹಾಗೂ 40 ಸಾವಿರ ರೂಪಾಯಿ ಹಣವನ್ನು ಈ ಕೆಲಸದವರೇ ಕದ್ದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ನಡೆದಾಗ ರವಿ ಮೋಹನ್ ಮನೆಯಲ್ಲಿದ್ದರೇ ಇಲ್ಲವೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಅವರ ತಂಡ ಈ ಬಗ್ಗೆ ಯಾವುದೇ ಬಹಿರಂಗ ಹೇಳಿಕೆ ನೀಡಿಲ್ಲ.

ಇದನ್ನೂ ಓದಿ: ವಿಚ್ಛೇದನ ಸಿಗೋ ತನಕ ಸಿನಿಮಾ ಮಾಡಲ್ಲ ಅಂತ ಹೇಳಿ ಈಗ ಉಲ್ಟಾ ಹೊಡೆದ ಜಯಂ ರವಿ

ವೈಯಕ್ತಿಕ ಜೀವನದಲ್ಲೂ ವಿವಾದಗಳ ಸುಳಿ:

ಕಳೆದ ಕೆಲವು ಸಮಯದಿಂದ ರವಿ ಮೋಹನ್ ಅವರ ವೈಯಕ್ತಿಕ ಜೀವನ ಸದಾ ಸುದ್ದಿಯಲ್ಲಿದೆ. 2009ರಲ್ಲಿ ಆರತಿ ಅವರನ್ನು ವಿವಾಹವಾಗಿದ್ದ ರವಿ, ಸೆಪ್ಟೆಂಬರ್ 2024ರಲ್ಲಿ ವಿಚ್ಛೇದನ ಘೋಷಿಸಿದ್ದರು. ಇತ್ತೀಚೆಗಷ್ಟೇ ಮೇ 2026ರಲ್ಲಿ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದ ರವಿ, ವಿಚ್ಛೇದನ ಸಿಗುವವರೆಗೂ ತಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಘೋಷಿಸಿ ಚಿತ್ರರಂಗಕ್ಕೆ ತಾತ್ಕಾಲಿಕ ಬ್ರೇಕ್ ನೀಡಿದ್ದಾರೆ. ಈ ನಡುವೆ ಈಗ ಅವರ ಮನೆಯ ಕಳ್ಳತನ ಮತ್ತು ಸಿಬ್ಬಂದಿ ಬಂಧನದ ವಿವಾದ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Personality Test: ಈ ಚಿತ್ರದಲ್ಲಿ ನಿಮಗೆ ಕಾಣಿಸಿದ್ದೇನು? ಇದುವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ‌ – Kannada News | Personality Test: Find out whether you are an emotional person or a practical thinker through this image

ವ್ಯಕ್ತಿತ್ವ ಪರೀಕ್ಷೆImage Credit source: Pinterest

ಸಾಮಾನ್ಯವಾಗಿ ಜನರು ಭವಿಷ್ಯ, ಗುಣ ಸ್ವಭಾವದ ಬಗ್ಗೆ ತಿಳಿಯಲು ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಹಸ್ತಶಾಸ್ತ್ರಗಳನ್ನು ಅವಲಂಬಿಸುತ್ತಾರೆ. ಇದಲ್ಲದೆ ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ (Personality Test) ಮೂಲಕವೂ ಒಬ್ಬ ವ್ಯಕ್ತಿಯ ನಿಗೂಢ ಗುಣ ಸ್ವಭಾವ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಇಲ್ಲೊಂದು ಅದೇ ರೀತಿ ಪರ್ಸನಾಲಿಟಿ ಟೆಸ್ಟ್‌ ಫೋಟೋ ವೈರಲ್‌ ಆಗಿದ್ದು, ಮಹಿಳೆ ಹಾಗೂ ಮರ ಇವೆರಡು ಅಂಶಗಳನ್ನು ಒಳಗೊಂಡ ಈ ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ ಫೋಟೋದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬುದರ ಆಧಾರದ ಮೇಲೆ ನೀವು ಭಾವನಾತ್ಮಕ ವ್ಯಕ್ತಿಯೇ ಅಥವಾ ಪ್ರಾಕ್ಟಿಕಲ್‌ ವ್ಯಕ್ತಿಯೇ ಎಂಬುದನ್ನು ತಿಳಿದುಕೊಳ್ಳಿ.

ಚಿತ್ರದಲ್ಲಿ ನಿಮಗೆ ಕಾಣಿಸಿದ್ದೇನು?

ಮೇಲಿನ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಮರ ಮತ್ತು ಮಹಿಳೆ ಇವೆರಡು ಅಂಶಗಳಿದ್ದು, ಇದರಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬುದರ ಮೇಲೆ ನೀವು ಪ್ರಾಕ್ಟಿಕಲ್‌ ವ್ಯಕ್ತಿಯೇ ಅಥವಾ ಭಾವನಾತ್ಮಕ ವ್ಯಕ್ತಿಯೇ ಎಂಬುದನ್ನು ತಿಳಿದುಕೊಳ್ಳಿ.

ಮರ: ನೀವು ಮೊದಲು ಮರಗಳನ್ನು ನೋಡಿದರೆ, ಅದರರ್ಥ ನೀವು ಸ್ವಾಭಾವಿಕವಾಗಿ ಕುತೂಹಲ ಹೊಂದಿರುವವರು, ಸೃಜನಶೀಲರು ಹಾಗೂ ಪ್ರಾಕ್ಟಿಕಲ್‌ ಆಗಿ ಯೋಚಿಸುವ ವ್ಯಕ್ತಿ. ನೀವು ಭಾವನೆಗಳಿಗೆ ಒಳಗಾಗುವ ಬದಲು ಪ್ರಾಕ್ಟಿಕಲ್‌ ಆಗಿ ಯೋಚಿಸುವ ಜನರಾಗಿರುತ್ತೀರಿ. ಉದಾಹರಣೆಗೆ ನೀವು ಒಂದು ವಸ್ತುವನ್ನು ಅದರ  ಮೇಲ್ಮೈ ಲಕ್ಷಣವನ್ನು ನೋಡಿ ತೆಗೆದುಕೊಳ್ಳುವುದಿಲ್ಲ ಬದಲಾಗಿ, ಸ್ವಲ್ಪ ಆಳವಾಗಿ ಅದರ ಸಾಧಕ ಬಾಧಕದ ಬಗ್ಗೆಯೂ ಪರಿಶೀಲಿಸುತ್ತೀರಿ.  ನೀವು ಸೃಜನಶೀಲರಾಗಿರುವುದರಿಂದ, ನೀವು ಆಗಾಗ್ಗೆ ನಿಮ್ಮ ಆಲೋಚನೆಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ನಿಮಗೆ ಒಂದೇ ಕಡೆ ಇರುವ ಬದಲು ಹೊರಗೆ ಹೋಗಿ ಪ್ರಪಂಚವನ್ನು ಅನ್ವೇಷಿಸುವುದೆಂದರೆ ಸಖತ್‌ ಇಷ್ಟ.

ಇದನ್ನೂ ಓದಿ: ಶ್…‌ ನಿಮ್ಮ ವೈಯಕ್ತಿಕ ವಿಚಾರಗಳನ್ನು ಯಾರ ಬಳಿಯೂ ಶೇರ್‌ ಮಾಡಿಕೊಳ್ಳಬೇಡಿ

ಮಹಿಳೆ: ನೀವು ಆ ಮಹಿಳೆಯನ್ನು ಮೊದಲು ನೋಡಿದರೆ, ನೀವು ಭಾವನಾತ್ಮಕ ವ್ಯಕ್ತಿಯೆಂದು ಅರ್ಥ. ನಿಮ್ಮ ಮೆದುಳು ಸಾಮಾನ್ಯವಾಗಿ ತರ್ಕಕ್ಕಿಂತ ಮೊದಲು ಭಾವನೆಯ ಮೂಲಕ ವಿಷಯಗಳನ್ನು ಪ್ರಕ್ರಿಯೆಗೊಳಿಸುತ್ತದೆ. ನೀವು ಸಂಬಂಧಗಳಿಗೆ ಹೆಚ್ಚಿನ ಮೌಲ್ಯವನ್ನು ನೀಡುವವರಾಗಿದ್ದೀರಿ. ನೀವು ಪೂರ್ಣ ಹೃದಯದಿಂದ ನಿಮ್ಮವರ ಕಾಳಜಿಯನ್ನು ಮಾಡುತ್ತೀರಿ. ನೀವು ಸಹಾನುಭೂತಿಯ ಸ್ವಭಾವದರಾಗಿರುವುದರಿಂದ ಇದು ಜನರು ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡುವಂತೆ ಮಾಡುತ್ತದೆ. ಅವರು ನಿಮ್ಮನ್ನು ಬೆಂಬಲ ನೀಡುವವರು ಎಂದು ಕಂಡುಕೊಳ್ಳುತ್ತಾರೆ ಮತ್ತು ನಿಮ್ಮ ಉಪಸ್ಥಿತಿಯಲ್ಲಿ ಅವರಿಗೆ ಸಾಂತ್ವನ ಸಿಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಕ್ರಮ ಬಡ್ಡಿ ದಂಧೆಕೋರರ ವಿರುದ್ಧ ಖಾಕಿ ಸಮರ: ಕಂತೆ ಕಂತೆ ಹಣ, ಚಿನ್ನಾಭರಣ ಕಂಡು ಶಾಕ್​​! – Kannada News | Police Raid Exposes Massive Illegal Money Lending Network; Cash, Gold Seized

ಗದಗ, ಜೂನ್​​ 24: ನಗರದಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ಅಕ್ರಮ ಬಡ್ಡಿ ದಂಧೆಕೋರರ ವಿರುದ್ಧ ಪೊಲೀಸ್ ಇಲಾಖೆ ಸಮರ ಸಾರಿದೆ. ಅಕ್ರಮ ಹಣಕಾಸು ವ್ಯವಹಾರ ಮತ್ತು ಅತಿಯಾದ ಬಡ್ಡಿ ವಸೂಲಿ ಆರೋಪ ಬೆನ್ನಲ್ಲೇ ಡಿವೈಎಸ್​ಪಿ ಮುರ್ತುಜ್ ಖಾದ್ರಿ ನೇತೃತ್ವದಲ್ಲಿ ಗದಗದ (gadag) ಬೆಟಗೇರಿಯ ಹಲವೆಡೆ ದಾಳಿ ನಡೆಸಿ ಪರಿಶೀಲನೆ ಮಾಡಿದರು. ದಾಳಿ ವೇಳೆ ಕಂತೆ ಕಂತೆ ಹಣ, ಅಪಾರ ಚಿನ್ನಾಭರಣ ಪತ್ತೆ ಆಗಿದ್ದು, ಪೊಲೀಸರೇ ಶಾಕ್ ಆಗಿದ್ದಾರೆ.

ದಾಳಿ ವೇಳೆ ಸಿಕ್ಕಿದ್ದೇನು?

ಗದಗ ಎಸ್​​ಪಿ ರೋಹನ್ ಜಗದೀಶ್ ಸೂಚನೆ ಮೇರೆಗೆ ಪೊಲೀಸ್​ರ ಆರು ತಂಡಗಳು ಏಕಕಾಲದಲ್ಲಿ ವಿವಿಧೆಡೆ ದಾಳಿ ಮಾಡಿದ್ದಾರೆ. ಅದರಲ್ಲೂ ಬಡ್ಡಿ ದಂಧೆಕೋರ ಮನೋಹರ ಕಟ್ಟಿಮಣಿ ಕಚೇರಿ ಮತ್ತು ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ 9 ಪಾಸ್​ಬುಕ್, 11 ಚೆಕ್ ಬುಕ್, ATM ಕಾರ್ಡ್, ಪ್ಯಾನ್ ಕಾರ್ಡ್​, 150ಕ್ಕೂ ಹೆಚ್ಚು ಚೆಕ್​, 65ಕ್ಕೂ ಹೆಚ್ಚು ಖಾಲಿ ಬಾಂಡ್, ಒಪ್ಪಂದ ಪತ್ರಗಳು ಪತ್ತೆ ಆಗಿವೆ.

ಇದನ್ನೂ ಓದಿ: ಗದಗದಲ್ಲಿ ಬಡ್ಡಿ ಬಕಾಸುರರ ಅಟ್ಟಹಾಸ: 17 ಲಕ್ಷ ರೂ. ಸಾಲ ಕೊಟ್ಟು ರೈತನ 5 ಎಕರೆ ಜಮೀನು ನುಂಗಿದ ರೌಡಿಶೀಟರ್ ಗ್ಯಾಂಗ್

ಇನ್ನು 60 ಲಕ್ಷ ರೂಪಾಯಿ ಮೌಲ್ಯದ 422.4 ಗ್ರಾಂ ಚಿನ್ನಾಭರಣ. 5.5 ಲಕ್ಷ ನಗದು, 10 ಗೋವಾ ಮದ್ಯದ ಬಾಟಲಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಬ್ಬಾಳಿಕೆ, ಬೆದರಿಕೆ, ಮೈಕ್ರೋಫೈನಾನ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸಮಾಜಕ್ಕೆ ಹಾನಿಕಾರಕವಾಗಿರುವ ಅಕ್ರಮ ಹಣಕಾಸು ವ್ಯವಹಾರಗಳನ್ನು ನಿಯಂತ್ರಿಸಲು ಹಾಗೂ ನಿರ್ಮೂಲನೆ ಮಾಡಲು ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ದಾಳಿ ಕುರಿತು ಗದಗ ಎಸ್​​ಪಿ ರೋಹನ್ ಜಗದೀಶ್ ಮಾಹಿತಿ ನೀಡಿದ್ದಾರೆ.

ಮುಂಡಗೋಡದಲ್ಲಿ ಮೀಟರ್ ಬಡ್ಡಿ ದಂಧೆಗೆ ಬಿಳುತ್ತಿಲ್ಲ ಬ್ರೇಕ್: ಪೊಲೀಸರು ದಾಳಿ

ಇನ್ನು ಇತ್ತ ಮುಂಡಗೋಡನಲ್ಲಿ ಮೀಟರ್ ಬಡ್ಡಿ ದಂಧೆಗೆ ಬಿಳುತ್ತಿಲ್ಲ ಬ್ರೇಕ್. ಎಷ್ಟೇ ಕಠಿಣ ಕ್ರಮಕೈಗೊಂಡರು ದಂಧೆಕೋರರು ಮಾತ್ರ ಬಗ್ಗುತ್ತಿಲ್ಲ. ಹೀಗಾಗಿ ಶಿರಸಿ ಡಿವೈಎಸ್​​ಪಿ ಗೀತಾ ಪಾಟೀಲ್ ನೆತೃತ್ವದಲ್ಲಿ ಇಂದು ಬೆಳಿಗ್ಗೆ ಒಟ್ಟು 14 ಜನರ ಮನೆ ಮೇಲೆ ಏಕಕಾಲದಲ್ಲಿ ದಾಳಿ ಮಾಡಲಾಗಿದೆ.

ಮುಂಡಗೋಡ ಪಟ್ಟಣದ ನಿವಾಸಿ ತೌಸಿಪ್ ಪಣಿಬಂದ ಮನೆ ಮೇಲೆ ಅನುಮಾನಸ್ಪದ ದಾಳಿಯಲ್ಲಿ 14 ಖಾಲಿ ಚೆಕ್ ಹಾಗೂ ಬಾಂಡ್​​ಗಳು ಪತ್ತೆ ಆಗಿವೆ. ಇನ್ನು ಮೊಹಮ್ಮದ್ ಪಾನವಾಲೆ ಮನೆಯಲ್ಲಿ ಎರಡು ಜಿಂಕೆ ಕೊಂಬು ಪತ್ತೆ ಆಗಿವೆ. ಸದ್ಯ ಮುಂಡಗೊಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಇಡಿ ಖೆಡ್ಡಾಕ್ಕೆ ಬಿದ್ದ ಸಚಿವ ಜಾರಕಿಹೊಳಿ ಬಾಮೈದ: ಮೆಗಾ ಕಾರ್ಯಾಚರಣೆಯಲ್ಲಿ ಏನೆಲ್ಲಾ ಸಿಕ್ತು?

ಮುಂಡಗೊಡನಲ್ಲಿ ಬಡ್ಡಿ ದಂಧೆ ತಣ್ಣಗಾಗಿತ್ತು ಎನ್ನಲಾಗಿತ್ತು. ಇಂದು ಬೆಳಿಗ್ಗೆ 14 ಖಾಲಿ ಚೆಕ್ ಪತ್ತೆ ಹಿನ್ನೆಲೆ ಮುಂಡಗೋಡನಲ್ಲಿ ಮೀಟರ್ ಬಡ್ಡಿ ದಂಧೆ ಬಯಲಿಗೆ‌‌. ಕಳೆದ ಒಂದುವರೆ ವರ್ಷದಲ್ಲಿ 63 ಮನೆಗಳ ಮೇಲೆ ಪೊಲೀಸರು ದಾಳಿ‌‌ ಮಾಡಿದ್ದು, 58 ಜನರನ್ನ ಬಂಧಿಸಿ, 2 ರೌಡಿ ಶೀಟರ್​​ನ್ನ ಬಳ್ಳಾರಿ ಜಿಲ್ಲೆಗೆ ಶಿಫ್ಟ್ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿಯಲಿರುವ ಭಾರತೀಯ..! – Kannada News | Indian Born Pacer To Play For Ireland Vs India In T20I Series

ಭಾರತ ಮತ್ತು ಐರ್ಲೆಂಡ್ ನಡುವಣ ಟಿ20 ಸರಣಿಗೆ ದಿನಗಣನೆ ಶುರುವಾಗಿದೆ. ಜೂನ್ 26 ರಿಂದ ಆರಂಭವಾಗಲಿರುವ ಈ ಸರಣಿಯ ಮೂಲಕ ಭಾರತೀಯ ಮೂಲದ ಆಟಗಾರನೊಬ್ಬ ಇಂಟರ್​ನ್ಯಾಷನಲ್ ಕೆರಿಯರ್ ಆರಂಭಿಸಲು ಸಜ್ಜಾಗಿದ್ದಾರೆ. ಅದು ಕೂಡ ಟೀಮ್ ಇಂಡಿಯಾ ವಿರುದ್ಧ ಎಂಬುದು ವಿಶೇಷ.

ಹೌದು, ಭಾರತದ ವಿರುದ್ಧದ ಸರಣಿಗೆ ಪ್ರಕಟಿಸಲಾದ ಐರ್ಲೆಂಡ್ ತಂಡದಲ್ಲಿ ರಾಜಸ್ಥಾನ್ ಮೂಲದ ಜೈ ಮುಂಧ್ರಾ ಕಾಣಿಸಿಕೊಂಡಿದ್ದಾರೆ. ಜನವರಿ 10, 1997 ರಂದು, ರಾಜಸ್ಥಾನದ ಜೈಪುರದಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಟೋಂಕ್ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದ ಮುಂಧ್ರಾ ಬಾಲ್ಯದಲ್ಲಿ ಟೀಮ್ ಇಂಡಿಯಾ ಪರ ಆಡುವ ಕನಸು ಕಟ್ಟಿಕೊಂಡಿದ್ದರು.

ಇದಕ್ಕಾಗಿ ಮುಂಧ್ರಾ ಸ್ಥಳೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ್ದರು. ಆದರೆ, ಕಾಲೇಜು ಶಿಕ್ಷಣದ ಬಳಿಕ ಅವರ ಬದುಕು ಹೊಸ ತಿರುವು ಪಡೆದುಕೊಂಡಿತು. 2021 ರಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಅವರು ಐರ್ಲೆಂಡ್‌ಗೆ ತೆರಳಿದರು.

ಟರ್ನಿಂಗ್ ಪಾಯಿಂಟ್:

ಐರ್ಲೆಂಡ್​ನಲ್ಲಿ ಓದಿನ ನಡುವೆಯೂ ಕ್ರಿಕೆಟ್ ಮೇಲಿನ ಪ್ರೀತಿ ಬಿಡದ ಮುಂಧ್ರಾ, ಅಲ್ಲಿನ ಪ್ರಸಿದ್ಧ ‘ಲೈನ್ಸ್ಟರ್ ಕ್ರಿಕೆಟ್ ಕ್ಲಬ್’  ಪರ ದೇಶಿ ಕ್ರಿಕೆಟ್ ಆಡಲು ಆರಂಭಿಸಿದರು. ಆರಂಭದಲ್ಲಿ ಎಡಗೈ ಸ್ಪಿನ್ನರ್ ಹಾಗೂ ಬ್ಯಾಟರ್ ಆಗಿದ್ದ ಜೈ, ನಂತರ ಎಡಗೈ ವೇಗದ ಬೌಲರ್ ಆಗಿ ರೂಪಾಂತರಗೊಂಡರು.

2023 ರಲ್ಲಿ ‘ಲೈನ್ಸ್ಟರ್ ಕ್ರಿಕೆಟ್ ಕ್ಲಬ್’  ಐರಿಶ್ ಸೀನಿಯರ್ ಕಪ್ ಗೆಲ್ಲುವಲ್ಲಿ ಜೈ ಮುಂಧ್ರಾ ಪ್ರಮುಖ ಪಾತ್ರ ವಹಿಸಿದರು. ಇತ್ತೀಚೆಗೆ ನಡೆದ ಇಂಟರ್-ಪ್ರೊವಿನ್ಶಿಯಲ್ ಟಿ20 ಟ್ರೋಫಿಯಲ್ಲಿ ಲೈನ್ಸ್ಟರ್ ಲೈಟ್ನಿಂಗ್ ಪರ ಆಡಿದ ಅವರು, ಕೇವಲ 4 ಪಂದ್ಯಗಳಲ್ಲಿ 14.57 ರ ಭರ್ಜರಿ ಸರಾಸರಿಯಲ್ಲಿ 7 ವಿಕೆಟ್ ಕಬಳಿಸಿ ಆಯ್ಕೆಗಾರರ ಗಮನ ಸೆಳೆದಿದ್ದರು.

ಖುಲಾಯಿಸಿದ ಅದೃಷ್ಟ:

ಅತ್ತ ಇಂಟರ್-ಪ್ರೊವಿನ್ಶಿಯಲ್ ಟಿ20 ಟ್ರೋಫಿಯಲ್ಲಿ 7 ವಿಕೆಟ್ ಉರುಳಿಸಿ ಮಿಂಚಿದ್ದ ಮುಂಧ್ರಾ ಮೇಲೆ ಐರ್ಲೆಂಡ್ ಆಯ್ಕೆ ಸಮಿತಿ ಸದಸ್ಯರು ಕಣ್ಣಿಟ್ಟಿದ್ದರು. ಇದಾಗ್ಯೂ ಟೀಮ್ ಇಂಡಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗುತ್ತೇನೆ ಎಂದು ಖುದ್ದು ಮುಂಧ್ರಾ ಕೂಡ ಅಂದುಕೊಂಡಿರಲಿಲ್ಲ.

ಆದರೆ ಇತ್ತ  ಐರ್ಲೆಂಡ್ ತಂಡದ ಪ್ರಮುಖ ಬೌಲರ್‌ಗಳಾದ ಮಾರ್ಕ್ ಅಡೇರ್ ಮತ್ತು ಬ್ಯಾರಿ ಮೆಕಾರ್ಥಿ ಸೇರಿದಂತೆ ಐದು ಜನ ಆಟಗಾರರು ಗಾಯಗೊಂಡಿದ್ದರು. ಪ್ರಮುಖ ಆಟಗಾರರು ಗಾಯಾಳುಗಳಾಗಿ ಹೊರಬಿದ್ದ ಕಾರಣ ಆಯ್ಕೆಗಾರರು ಹೊಸ ಆಟಗಾರರತ್ತ ಮುಖ ಮಾಡಿದ್ದರು.

ಈ ವೇಳೆ ಕಾಣಿಸಿಕೊಂಡಿದ್ದೇ ಜೈ ಮುಂಧ್ರಾ. ಅತ್ತ 7 ವಿಕೆಟ್​ ಪಡೆದು ಮಿಂಚಿದ್ದ ಮುಂಧ್ರಾ ಅವರನ್ನು ಆಂಡ್ರ್ಯೂ ವೈಟ್ ನೇತೃತ್ವದ ಸಮಿತಿಯು ಐರ್ಲೆಂಡ್ ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಅದರಂತೆ ಇದೀಗ ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿ ನಿಂತಿದ್ದಾರೆ.

ಎರಡನೇ ಭಾರತೀಯ:

ಜೈ ಮುಂಧ್ರಾ ಐರ್ಲೆಂಡ್ ತಂಡದಲ್ಲಿ ಸ್ಥಾನ ಪಡೆದ ಎರಡನೇ ಭಾರತೀಯ. ಇದಕ್ಕೂ ಮುನ್ನ ಸಿಮಿ ಸಿಂಗ್ ಐರ್ಲೆಂಡ್ ಪರ ಕಣಕ್ಕಿಳಿದಿದ್ದರು.

  • ಪಂಜಾಬ್ ಮೂಲದ ಸಿಮಿ ಸಿಂಗ್ 2017 ರಲ್ಲಿ ಐರ್ಲೆಂಡ್ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು.
  • ಸಿಮಿ ಸಿಂಗ್ ಐರ್ಲೆಂಡ್ ಪರ ಒಟ್ಟು 88 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.

ಇದನ್ನೂ ಓದಿ: IPL 2027: ಎಷ್ಟು ಕೋಟಿ ಹೇಳಿ… ಹಾರ್ದಿಕ್ ಪಾಂಡ್ಯ ಖರೀದಿಗೆ KKR..!

ಇದೀಗ ಐರ್ಲೆಂಡ್ ತಂಡದ ಪರ ಕಣಕ್ಕಿಳಿದ ಎರಡನೇ ಭಾರತೀಯ ಎನಿಸಿಕೊಳ್ಳಲು ಜೈ ಮುಂಧ್ರಾ ಸಜ್ಜಾಗಿ ನಿಂತಿದ್ದಾರೆ. ಅದರಂತೆ ಜುಲೈ 26 ರಂದು ನಡೆಯಲಿರುವ ಭಾರತ ಮತ್ತು ಐರ್ಲೆಂಡ್ ನಡುವಣ ಮ್ಯಾಚ್​ನಲ್ಲಿ ಮುಂಧ್ರಾ ಕಣಕ್ಕಿಳಿಯಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

Published On – 2:51 pm, Wed, 24 June 26

Source link

‘ರಫೇಲ್ ಯುದ್ಧ ವಿಮಾನಗಳ ಬಗ್ಗೆ ಪಾಕಿಸ್ತಾನದ ಸುಳ್ಳು ಬಯಲು’; ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ – Kannada News | BJP hits back at Rahul Gandhi after Pakistan claim of downing Rafales discredited

ನವದೆಹಲಿ, ಜೂನ್ 24: ಭಾರತೀಯ ವಾಯುಪಡೆಯ (IAF) ಬಳಿ ಇರುವ ಎಲ್ಲಾ 36 ರಫೇಲ್ ಯುದ್ಧ ವಿಮಾನಗಳು ಸುರಕ್ಷಿತವಾಗಿದ್ದು, ಸಕ್ರಿಯ ಸೇವೆಯಲ್ಲಿವೆ ಎಂಬುದನ್ನು ಅಧಿಕೃತ ದಾಖಲೆಯೊಂದು ಖಚಿತಪಡಿಸಿದೆ. ಇದರ ಬೆನ್ನಲ್ಲೇ, ರಫೇಲ್ ವಿಮಾನಗಳ ಕುರಿತು ಪಾಕಿಸ್ತಾನ ಹರಡಿದ್ದ ಸುಳ್ಳು ಸುದ್ದಿ ಬಯಲಾಗಿದ್ದು, ಈ ಹಿಂದೆ ಪಾಕ್ ಪ್ರಚಾರಕ್ಕೆ ಬೆಂಬಲ ನೀಡುವಂತೆ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.

ದೇಶದ ಭದ್ರತೆ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಗಳ ವಿರುದ್ಧ ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ವಾಗ್ದಾಳಿ ನಡೆಸಿದೆ. ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಮಹತ್ವದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಸಮಯದಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆಗಳು ಮತ್ತು ನಿಲುವುಗಳು, ಪಾಕಿಸ್ತಾನದ ಭಾರತ ವಿರೋಧಿ ಸುಳ್ಳು ಪ್ರಚಾರವನ್ನು ಹೋಲುವಂತಿದ್ದವು ಎಂದು ಬಿಜೆಪಿ ಗಂಭೀರವಾಗಿ ಆರೋಪಿಸಿದೆ.

ಇದನ್ನೂ ಓದಿ: ಆತ್ಮನಿರ್ಭರ ಭಾರತವನ್ನು ಲೇವಡಿ ಮಾಡಿದ್ದಕ್ಕೆ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಾಯಕರು ರಾಹುಲ್ ಗಾಂಧಿ ಅವರ ರಾಷ್ಟ್ರೀಯ ಭದ್ರತೆಯ ಕುರಿತಾದ ತಿಳುವಳಿಕೆಯನ್ನು ಪ್ರಶ್ನಿಸಿದ್ದಾರೆ. ಭಾರತೀಯ ವಾಯುಪಡೆಯ ಅಧಿಕೃತ ಟೆಂಡರ್ ಪ್ರಕ್ರಿಯೆಯನ್ನು ಉಲ್ಲೇಖಿಸಿರುವ ಬಿಜೆಪಿ, ದೇಶವು ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಸಮಯದಲ್ಲಿ ರಾಹುಲ್ ಗಾಂಧಿ ಅವರು ಪಾಕಿಸ್ತಾನದ ಪ್ರೊಪಗಾಂಡಾವನ್ನು (Propaganda) ಬೆಂಬಲಿಸುವ ಹೇಳಿಕೆ ನೀಡಿದ್ದರು ಎಂದು ಗಂಭೀರ ಆರೋಪ ಮಾಡಿದೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡುವ ಮೂಲಕ ರಾಹುಲ್ ಗಾಂಧಿ ಅವರ ನಿಲುವನ್ನು ತೀವ್ರವಾಗಿ ಖಂಡಿಸಿದ್ದಾರೆ. “ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಸಮಯದಲ್ಲಿ ಭಾರತವು ರಾಷ್ಟ್ರೀಯ ಭದ್ರತೆಯ ಗಂಭೀರ ಸವಾಲನ್ನು ಎದುರಿಸುತ್ತಿತ್ತು. ಆ ಸೂಕ್ಷ್ಮ ಸಂದರ್ಭದಲ್ಲಿ, ಭಾರತದ ರಫೇಲ್ ಯುದ್ಧ ವಿಮಾನಗಳನ್ನು ಹೊಡೆದು ಉರುಳಿಸಲಾಗಿದೆ ಎಂಬ ಪಾಕಿಸ್ತಾನದ ಸುಳ್ಳು ಪ್ರಚಾರವನ್ನು ಪ್ರತಿಬಿಂಬಿಸುವಂತಹ ಪ್ರಶ್ನೆಗಳನ್ನು ಮತ್ತು ನಿರೂಪಣೆಗಳನ್ನು ಬಿತ್ತರಿಸಲು ರಾಹುಲ್ ಗಾಂಧಿ ಮುಂದಾಗಿದ್ದರು” ಎಂದು ಅಮಿತ್ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಮೋದಿಯನ್ನು ಬೆಂಬಲಿಸುವ ಮೂಲಕ ರಾಹುಲ್ ಗಾಂಧಿಗೆ ಶಶಿ ತರೂರ್​​ ಜನ್ಮದಿನದ ಗಿಫ್ಟ್ ನೀಡಿದ್ದಾರೆ; ಬಿಜೆಪಿ ಲೇವಡಿ

ಭಾರತ ಸರ್ಕಾರವನ್ನೇ ಪ್ರಶ್ನಿಸಿದ ವಿಪಕ್ಷ ನಾಯಕ:

ಪಾಕಿಸ್ತಾನದ ಸುಳ್ಳು ಆರೋಪಗಳ ಬಗ್ಗೆ ಇಸ್ಲಾಮಾಬಾದ್‌ನಿಂದ ಪುರಾವೆಗಳನ್ನು ಕೇಳುವ ಬದಲಿಗೆ, ರಾಹುಲ್ ಗಾಂಧಿ ಅವರು ಭಾರತ ಸರ್ಕಾರವನ್ನೇ ಪ್ರಶ್ನಿಸುವ ಮೂಲಕ ಶತ್ರು ರಾಷ್ಟ್ರದ ವಾದಕ್ಕೆ ಜಾಗತಿಕ ಮಟ್ಟದಲ್ಲಿ ಪುಷ್ಟಿ ಸಿಗುವಂತೆ ಮಾಡಲು ಯತ್ನಿಸಿದ್ದರು ಎಂದು ಅವರು ದೂರಿದ್ದಾರೆ.

ಪಾಕ್ ಸುಳ್ಳು ಜಗತ್ತಿಗೆ ಬಹಿರಂಗ:

ಭಾರತೀಯ ವಾಯುಪಡೆಯು ತನ್ನ ಎಲ್ಲಾ 36 ರಫೇಲ್ ಯುದ್ಧ ವಿಮಾನಗಳಿಗೆ ಬೆಂಬಲ ಪ್ಯಾಕೇಜ್ ಕೋರಿ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಧಿಕೃತ ಟೆಂಡರ್, ಪಾಕಿಸ್ತಾನದ ನಿರೂಪಣೆಯನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

“ಯಾವಾಗಲೆಲ್ಲಾ ನಮ್ಮ ವೀರ ಯೋಧರು ಗಡಿಯಲ್ಲಿ ಅಥವಾ ದೇಶದ ಭದ್ರತೆಗಾಗಿ ದೊಡ್ಡ ಕಾರ್ಯಾಚರಣೆಗಳನ್ನು ನಡೆಸುತ್ತಾರೋ, ಆಗೆಲ್ಲಾ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರು ಪುರಾವೆಗಳನ್ನು ಕೇಳುವುದು ಅಥವಾ ಕಾರ್ಯಾಚರಣೆಯ ವಿಶ್ವಾಸಾರ್ಹತೆಯನ್ನು ಅನುಮಾನಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಇದು ನಮ್ಮ ಸೇನಾ ಪಡೆಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ರಾಜಕೀಯ ತಂತ್ರವಾಗಿದೆ” ಎಂದು ಬಿಜೆಪಿ ನಾಯಕ ಅಮಿತ್ ಮಾಳವೀಯ ಕಟುವಾಗಿ ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆರೋಗ್ಯ ಕಾಪಾಡಿಕೊಳ್ಳಲು ಮಳೆಗಾಲದಲ್ಲಿ ಇಂತಹ ಆಹಾರಗಳಿಂದ ದೂರವಿರಿ – Kannada News | Monsoon Diet Tips: Foods You Should Not Eat In Rainy Weather

ಮಳೆಗಾಲವು (Monsoon) ಬೇಸಿಗೆಯ ಬಿಸಿಯಿಂದ ನಿರಾಳತೆ ನೀಡಿದರೂ, ಅನೇಕ ಆರೋಗ್ಯ ಸಮಸ್ಯೆಗಳು ಮತ್ತು ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದು ಸುಳ್ಳಲ್ಲ. ಈ ಸಮಯದಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಿರುವುದರಿಂದ ಬ್ಯಾಕ್ಟೀರಿಯಾ, ವೈರಸ್ ಹಾಗೂ ಶಿಲೀಂಧ್ರಗಳು ವೇಗವಾಗಿ ಬೆಳೆಯುತ್ತವೆ. ಇದರಿಂದ ಹೊಟ್ಟೆನೋವು, ಅಜೀರ್ಣ ಮತ್ತು ಇತರೆ ಸೋಂಕುಗಳ ಅಪಾಯ ಹೆಚ್ಚಾಗಬಹುದು. ಹಾಗಾಗಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮಳೆಗಾಲದಲ್ಲಿ ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬಾರದು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಳೆಗಾಲದಲ್ಲಿ ಯಾವ ಆಹಾರಗಳನ್ನು ಸೇವನೆ ಮಾಡಬಾರದು?

ರಸ್ತೆ ಬದಿಯಲ್ಲಿ ಮಾರಾಟವಾಗುವ ತೆರೆದ ಆಹಾರ, ಮುಂಚಿತವಾಗಿ ಕತ್ತರಿಸಿ ಇಟ್ಟಿರುವ ಹಣ್ಣುಗಳು, ಹಿಂದಿನ ದಿನ ಮಾಡಿಟ್ಟ ಆಹಾರಗಳನ್ನು ಸೇವಿಸುವುದನ್ನು ಆದಷ್ಟು ತಪ್ಪಿಸಬೇಕು. ಕಚ್ಚಾ ಸಲಾಡ್, ಸರಿಯಾಗಿ ಬೇಯದ ಮಾಂಸಾಹಾರ ಹಾಗೂ ಚೆನ್ನಾಗಿ ತೊಳೆಯದ ಹಣ್ಣು- ತರಕಾರಿಗಳ ಸೇವನೆಯೂ ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು. ಜೊತೆಗೆ ಅತಿಯಾಗಿ ಎಣ್ಣೆಯಲ್ಲಿ ಕರಿದ ಆಹಾರ, ಮಸಾಲೆಯುಕ್ತ ಆಹಾರಗಳು ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡಬಹುದು. ಆದ್ದರಿಂದ ಮನೆಯಲ್ಲೇ ತಯಾರಿಸಿದ ತಾಜಾ ಆಹಾರ ಸೇವಿಸುವುದು ಉತ್ತಮ.

ಇದನ್ನೂ ಓದಿ: ಈ ಆರೋಗ್ಯ ಸಮಸ್ಯೆ ಇದ್ದಾಗ ಡೆಂಗ್ಯೂ ಸೋಂಕು ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು ಎಚ್ಚರ!

ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಮಳೆಗಾಲದಲ್ಲಿ ಪದೇಪದೇ ಹೊಟ್ಟೆನೋವು, ವಾಂತಿ, ಅತಿಸಾರ, ಹೊಟ್ಟೆ ಉಬ್ಬರ, ಜ್ವರ, ದೌರ್ಬಲ್ಯ ಅಥವಾ ಹಸಿವು ಕಡಿಮೆಯಾಗುವುದು ಕಂಡುಬಂದರೆ ಅದನ್ನು ನಿರ್ಲಕ್ಷಿಸಬಾರದು. ಇವು ಸೋಂಕಿನ ಲಕ್ಷಣಗಳಾಗಿರಬಹುದು. ಹಾಗಾಗಿ ದೇಹದಲ್ಲಿ ನೀರಿನ ಕೊರತೆ, ನಿರಂತರ ಆಯಾಸ ಅಥವಾ ಹಲವು ದಿನಗಳ ಕಾಲ ಆರೋಗ್ಯ ಸಮಸ್ಯೆಗಳು ಮುಂದುವರಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಆರೋಗ್ಯ ಕಾಪಾಡಲು ಏನು ಮಾಡಬೇಕು?

ಯಾವಾಗಲೂ ತಾಜಾ ಮತ್ತು ಸ್ವಚ್ಛ ಆಹಾರ ಸೇವಿಸಿ. ಊಟದ ಮೊದಲು ಮತ್ತು ನಂತರ ಕೈಗಳನ್ನು ಚೆನ್ನಾಗಿ ತೊಳೆಯುವ ಅಭ್ಯಾಸ ಬೆಳೆಸಿಕೊಳ್ಳಿ. ಸಾಕಷ್ಟು ನೀರು ಕುಡಿಯಿರಿ ಹಾಗೂ ಹಣ್ಣು-ತರಕಾರಿಗಳನ್ನು ಸ್ವಚ್ಛವಾಗಿ ತೊಳೆದು ಬಳಸಿ. ಹೊರಗಿನ ಆಹಾರದ ಸೇವನೆಯನ್ನು ಕಡಿಮೆ ಮಾಡಿ ಮತ್ತು ಆಹಾರವನ್ನು ಹೆಚ್ಚು ಹೊತ್ತು ತೆರೆದಿಡಬೇಡಿ. ಸರಿಯಾಗಿ ನಿದ್ರೆ ಮತ್ತು ವೈಯಕ್ತಿಕ ಸ್ವಚ್ಛತೆಯತ್ತ ಗಮನಹರಿಸಿ. ಸಣ್ಣ ಮುನ್ನೆಚ್ಚರಿಕೆಗಳೇ ಮಳೆಗಾಲದಲ್ಲಿ ದೊಡ್ಡ ಆರೋಗ್ಯ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version