Headlines

Bangalore Rain: ಬೆಂಗಳೂರಿನಲ್ಲಿ ಶುಕ್ರವಾರದವರೆಗೆ ಗುಡುಗು ಸಹಿತ ಭಾರೀ ಮಳೆ – Kannada News | Bangalore Weather Update: Heavy Rain Expected, Temperature Drops, Yellow Alert Issued by IMD

ಬೆಂಗಳೂರು, ಮೇ.25: ತೀವ್ರ ಉಷ್ಣಾಂಶ ಮತ್ತು ಬಿಸಿಲಿನಿಂದ ಕಂಗಾಲಾಗಿದ್ದ ರಾಜಧಾನಿ ಬೆಂಗಳೂರಿನ ಜನತೆಗೆ ಹವಾಮಾನ ಇಲಾಖೆ ಕೂಲ್​ ಸುದ್ದಿ ನೀಡಿದೆ. ಭಾರತೀಯ ಹವಾಮಾನ ಇಲಾಖೆ (IMD) ಭಾನುವಾರ ಹೊರಡಿಸಿರುವ ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಬೆಂಗಳೂರಿನಲ್ಲಿ ಮೇ 29 ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಇಡೀ ವಾರ ನಗರದಾದ್ಯಂತ ಗುಡುಗು, ಸಿಡಿಲು ಸಹಿತ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆ (Cyclonic Circulation) ಉಂಟಾಗಿರುವುದರಿಂದ ಹವಾಮಾನ ಪರಿಸ್ಥಿತಿ ಸಂಪೂರ್ಣವಾಗಿ…

Read More

ಮಂಡ್ಯ: ನಾಗಮಂಗಲ ಕಂದಾಯ ಇಲಾಖೆಯಲ್ಲಿ ಭಾರಿ ಗೋಲ್ಮಾಲ್, 1000 ಎಕರೆ ಭೂ ಅಕ್ರಮ ಬಯಲಿಗೆ – Kannada News | Mandya Nagamangala Land Scam: Upa Lokayukta Justice B Veerappa Confirms Bagar Hukum Fraud Expanded to 1,000 Acres

ಮಂಡ್ಯ, ಮೇ 25: ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ತಾಲೂಕು ಕಂದಾಯ ಇಲಾಖೆಯಲ್ಲಿ ನಡೆದಿರುವ ಬಗರ್‌ಹುಕುಂ ಭೂ ಮಂಜೂರಾತಿ ಹಗರಣದ ಲೋಕಾಯುಕ್ತ ತನಿಖೆ ವೇಳೆ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಮೀಲಾಗಿ ನಡೆಸಿದ್ದ ಭೂ ಮಾಫಿಯಾದ ಜಾಲವು ಬರೋಬ್ಬರಿ 1,000 ಎಕರೆ ಸರ್ಕಾರಿ ಜಮೀನನ್ನು ನುಂಗಿ ನೀರು ಕುಡಿದಿರುವುದು ತನಿಖೆಯಲ್ಲಿ ಬಯಲಾಗಿದೆ. ಅರ್ಹತೆ ಇಲ್ಲದ ಸ್ಥಳೀಯ ಪ್ರಭಾವಿಗಳಿಗೆ, ಹಣ ಕೊಟ್ಟ ಖದೀಮರಿಗೆ ಹಾಗೂ ಹೊರ ರಾಜ್ಯದ ವ್ಯಕ್ತಿಗಳಿಗೂ ಕಾನೂನು ಬಾಹಿರವಾಗಿ ನಕಲಿ…

Read More

ಹೈಕಮಾಂಡ್‌ನಿಂದ ಸಿಎಂ ಸಿದ್ದರಾಮಯ್ಯಗೆ ದೆಹಲಿ ಬುಲಾವ್​​ ಯಾಕೆ?: ಇಲ್ಲಿದೆ ಅಸಲಿ ಕಾರಣ – Kannada News | High Command Summons: CM Siddaramaiah To Visit Delhi Tonight Amid Cabinet Reshuffle and Leadership Talks

ಬೆಂಗಳೂರು, ಮೇ 25: ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆ ಬಗ್ಗೆ ರಾಜ್ಯ ಕಾಂಗ್ರೆಸ್​​ನಲ್ಲಿ (Congress) ಬಿಸಿಬಿಸಿ ಚರ್ಚೆಯ ನಡುವೆಯೇ ಸಿಎಂ ಸಿದ್ದರಾಮಯ್ಯಗೆ (Siddaramaiah) ಹೈಕಮಾಂಡ್​​ನಿಂದ ಬುಲಾವ್​​ ಬಂದಿರೋದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. ಸಂಜೆ 7 ಗಂಟೆಗೆ ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, HALನಿಂದ ವಿಶೇಷ ವಿಮಾನದಲ್ಲಿ ತೆರಳಲಿದ್ದಾರೆ. ರಾತ್ರಿ 9.30ಕ್ಕೆ ಅವರು ದೆಹಲಿ ತಲುಪಲಿದ್ದು, ನಾಳೆ ಹೈಕಮಾಂಡ್ ನಾಯಕರೊಂದಿಗೆ ಸಿಎಂ ಮಾತುಕತೆ ನಡೆಸಲಿದ್ದಾರೆ. ಸಭೆಯಲ್ಲಿ ಏನೆಲ್ಲ ಚರ್ಚೆ ಸಾಧ್ಯತೆ? ನಾಳೆ ಬೆಳಗ್ಗೆ 11 ಗಂಟೆಗೆ ಹೈಕಮಾಂಡ್‌…

Read More

ಬಿಗ್ ಬಾಸ್ ಖ್ಯಾತಿಯ ಕಾವ್ಯಾ ಶೈವಾಗೆ ಅವಮಾನ; ವೇದಿಕೆಯಲ್ಲೇ ಮೈಕ್ ಕಿತ್ತುಕೊಂಡ ವ್ಯಕ್ತಿ – Kannada News | Kavya Shaiva Mic Snatched: Bigg Boss Star’s Kalaburagi Event Controversy Goes Viral

ನಟಿ ಕಾವ್ಯಾ ಶೈವ ಅವರಿಗೆ ಬಿಗ್ ಬಾಸ್ (Bigg Boss) ಮೂಲಕ ತುಂಬಾನೇ ಖ್ಯಾತಿ ಸಿಕ್ಕಿದೆ. ಅವರು ಅನೇಕ ಸಮಾರಂಭಗಳಿಗೆ ತೆರಳುತ್ತಿದ್ದಾರೆ. ಈಗ ಅವರು ವೇದಿಕೆ ಮೇಲೆ ಇದ್ದಾಗಲೇ ನಡೆದ ಒಂದು ಘಟನೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಕಾವ್ಯಾ ಅವರು ವೇದಿಕೆ ಮೇಲೆ ಮಾತನಾಡುವಾಗ ಮೈಕ್ ಕಸಿದುಕೊಳ್ಳಲಾಗಿದೆ. ಕಲಬುರಗಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಾ ಇದೆ. ಕಾವ್ಯಾ ಶೈವ ಅವರು ಕಲಬುರಗಿಯ ಕಲಬುರಗಿಯ ಎಸ್.ಎಂ ಪಂಡಿತ ರಂಗಮಂದಿರದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಭಾಗಿ…

Read More

ಭರವಸೆ ಮೂಡಿಸಿದ ಅಮೆರಿಕ-ಇರಾನ್ ಡೀಲ್; ಗರಿಗೆದರಿದ ಷೇರುಬಜಾರು – Kannada News | Stock Market rising today on May 25th, know the reasons behind this rise

ನವದೆಹಲಿ, ಮೇ 25: ಭಾರತದ ಷೇರು ಮಾರುಕಟ್ಟೆ (Stock Market) ಇವತ್ತು ಸೋಮವಾರ ಚೇತರಿಸಿಕೊಂಡಿದೆ. ಪ್ರಮುಖ ಸೂಚ್ಯಂಕಗಳಾದ ನಿಫ್ಟಿ50 ಮತ್ತು ಸೆನ್ಸೆಕ್ಸ್30 ಇದು ಶೇ. 1ರಿಂದ ಶೇ. 1.20ರಷ್ಟು ಹೆಚ್ಚಳ ಕಂಡಿವೆ. ಹೂಡಿಕೆದಾರರಿಗೆ 5 ಲಕ್ಷ ಕೋಟಿ ರೂ ಗಳಿಕೆ ಆಗಿದೆ. ನಿಫ್ಟಿ ಸೂಚ್ಯಂಕ 240 ಅಂಕಗಳ (ಶೇ. 1.02) ಹೆಚ್ಚಳದೊಂದಿಗೆ 23,959 ಮಟ್ಟಕ್ಕೆ ಏರಿದೆ. ಸೆನ್ಸೆಕ್ಸ್ 863 ಅಂಕಗಳ ಏರಿಕೆಯೊಂದಿಗೆ 76,279 ಮಟ್ಟ ಮುಟ್ಟಿದೆ. ಬಿಎಸ್​ಇ ಮತ್ತು ಎನ್​ಎಸ್​ಇಯಲ್ಲಿರುವ ಬಹುತೇಕ ಎಲ್ಲಾ ಸೂಚ್ಯಂಕಗಳೂ ಕೂಡ ಹಸಿರುಬಣ್ಣದಲ್ಲಿವೆ….

Read More

IPL 2026: ಗೆಲ್ಲೋರು ಯಾರು? ಹೀಗಿದೆ RCB ಲೆಕ್ಕಾಚಾರ – Kannada News | GT vs RCB: Dharamshala Debut in Qualifier 1

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19ರ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಆತಿಥ್ಯವಹಿಸಲು ವಿಶ್ವದ ಅತ್ಯಂತ ಸುಂದರ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಒಂದಾದ ಹಿಮಾಚಲ ಪ್ರದೇಶದ ಧರ್ಮಶಾಲಾದ ಎಚ್‌ಪಿಸಿಎ (HPCA) ಸ್ಟೇಡಿಯಂ ಸಜ್ಜಾಗಿದೆ. ಈ ಮೈದಾನದಲ್ಲಿ ನಾಳೆ (ಮೇ 26) ನಡೆಯಲಿರುವ ಪ್ಲೇಆಫ್​ನ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಈ ಮುಖಾಮುಖಿಗೂ ಮುನ್ನ ಆರ್​ಸಿಬಿ ಈ ಮೈದಾನದಲ್ಲಿ ಗೆಲ್ಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಹೆಚ್​ಪಿಸಿಎ ಮೈದಾನದಲ್ಲಿ ಆರ್​ಸಿಬಿ ಈವರೆಗೆ…

Read More

ಲಕ್ಷ ಲಕ್ಷ ನಾಣ್ಯಗಳನ್ನು ಕೊಟ್ಟು ಕನಸಿನ ಬುಲೆಟ್ ಬೈಕ್ ಖರೀದಿಸಿದ ಮೀನು ವ್ಯಾಪಾರಿ – Kannada News | Fish Seller in Andhra Pradesh Buys Dream Bike Using Only Coins

ಆಂಧ್ರಪ್ರದೇಶ, ಮೇ 25: ಬಾಲ್ಯದ ಕನಸೊಂದನ್ನು ನನಸು ಮಾಡಿಕೊಳ್ಳಲು ವ್ಯಕ್ತಿಯೊಬ್ಬರು ಮೂರು ವರ್ಷಗಳ ಕಾಲ ಸತತವಾಗಿ ಶ್ರಮಿಸಿ, ವಿಭಿನ್ನ ರೀತಿಯಲ್ಲಿ ಬೈಕ್(Bike) ಖರೀದಿಸಿರುವ ಅಪರೂಪದ ಘಟನೆಯೊಂದು ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ನಡೆದಿದೆ. ಈ ವಿಚಿತ್ರ ಘಟನೆಯ ವೀಡಿಯೊಗಳು ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಬಾಪಟ್ಲಾ ಜಿಲ್ಲೆಯ ಪಟಾಚಿರಾದ ಮೀನು ವ್ಯಾಪಾರಿಯಾದ ರಸನಿ ರಾಘವ ಅವರಿಗೆ ಬಾಲ್ಯದಿಂದಲೂ ಬುಲೆಟ್ ಬೈಕ್ ಖರೀದಿಸಬೇಕೆಂಬ ಬಲವಾದ ಆಸೆ ಇತ್ತು. ಆದರೆ, ಆರ್ಥಿಕ ತೊಂದರೆಗಳಿಂದಾಗಿ ಅವರ ಕನಸು ನನಸಾಗುತ್ತಿರಲಿಲ್ಲ. ಆಗ…

Read More

ಬೆಂಗಳೂರಿನಲ್ಲಿ ಆರ್ಥಿಕ ಅಪರಾಧಗಳ ಭಾರಿ ಏರಿಕೆ: ಪ್ರತಿ 2.5 ಗಂಟೆಗೆ ದಾಖಲಾಗ್ತಿದೆ ಒಂದು ಆರ್ಥಿಕ ವಂಚನೆ ಕೇಸ್! – Kannada News | Bengaluru Economic Crime: One Financial Fraud Case Filed Every 2.5 Hours, NCRB 2024 Report Reveals Structural Shift

ಬೆಂಗಳೂರು, ಮೇ 25: ದೇಶದ ತಂತ್ರಜ್ಞಾನ ರಾಜಧಾನಿ, ಸಿಲಿಕಾನ್ ಸಿಟಿ ಎಂದೆಲ್ಲ ಖ್ಯಾತಿ ಪಡೆದಿರುವ ಬೆಂಗಳೂರು (Bengaluru) ಈಗ ಆರ್ಥಿಕ ಅಪರಾಧಗಳ ಕೇಂದ್ರವಾಗಿ ಹೊರಹೊಮ್ಮುತ್ತಿದೆ! ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ ‘ಕ್ರೈಮ್ ಇನ್ ಇಂಡಿಯಾ 2024’ ವರದಿಯ ಪ್ರಕಾರ, ನಗರದಲ್ಲಿ ಕಳೆದ ಮೂರು ವರ್ಷಗಳಲ್ಲಿ (2022 ರಿಂದ 2024) ಪ್ರತಿ 2.5 ಗಂಟೆಗೆ ಸರಾಸರಿ ಒಂದರಂತೆ ಆರ್ಥಿಕ ಅಪರಾಧ ಪ್ರಕರಣಗಳು ದಾಖಲಾಗಿವೆ. ನಕಲಿ ದಾಖಲೆ ಸೃಷ್ಟಿ, ವಂಚನೆ, ಹಣಕಾಸು ಹಗರಣಗಳು ಮತ್ತು ವೈಟ್…

Read More

ಬಕ್ರೀದ್ ಸ್ಪೆಷಲ್: ಪೆರೆಸಂದ್ರ ಸಂತೆಯಲ್ಲಿ ಕುರಿಗಳಿಗೆ ಭಾರೀ ಬೇಡಿಕೆ! – Kannada News | Bakrid 2026: Heavy Demand at Chikkaballapur’s Peresandra Sheep Market, Traders Flock from Neighboring States

ಚಿಕ್ಕಬಳ್ಳಾಪುರ, ಮೇ 25: ಬಕ್ರೀದ್ ಹಬ್ಬ ಹತ್ತಿರ ಬರುತ್ತಿದ್ದಂತೆ ರಾಜ್ಯಾದ್ಯಂತ ಕುರಿ, ಮೇಕೆ ಹಾಗೂ ಕೋಳಿಗಳ ಖರೀದಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಅದರಲ್ಲೂ ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ಧ ಪೆರೆಸಂದ್ರ ಕುರಿ ಸಂತೆಯಲ್ಲಿ ವರ್ತಕರು ಕುರಿ, ಮೇಕೆ ಖರೀದಿಗೆ ಮುಗಿಬಿದ್ದಿದ್ದಾರೆ. ಈ ಸಂತೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ, ತಮಿಳುನಾಡು ಮತ್ತು ಕೇರಳದಿಂದಲೂ ವರ್ತಕರು ಆಗಮಿಸುತ್ತಿದ್ದಾರೆ. ಮಾರಾಟಕ್ಕೆ ಸುಮಾರು 40 ಸಾವಿರಕ್ಕೂ ಹೆಚ್ಚು ಕುರಿಗಳು ಆಗಮಿಸಿದ್ದು, ಪ್ರಸ್ತುತ 25 ಸಾವಿರದಿಂದ 30 ಸಾವಿರಕ್ಕೂ ಹೆಚ್ಚು ಕುರಿಗಳು ಮಾರಾಟಕ್ಕೆ ಲಭ್ಯವಿವೆ….

Read More

ಅಭಿಮಾನಿಗಳ ಬಳಿ ವಿಶೇಷ ಮನವಿ ಇಟ್ಟ ಅಶ್ವಿನಿ ಗೌಡ – Kannada News | Ashwini Gowda Ask Fans to Watch Hayagriva Movie

ಬಿಗ್ ಬಾಸ್ ಖ್ಯಾತಿಯ ಅಶ್ವಿನಿ ಗೌಡ ಅವರು ಈಗ ಅಭಿಮಾನಿಗಳ ಬಳಿ ಒಂದು ವಿಶೇಷ ಮನವಿ ಇಟ್ಟಿದ್ದಾರೆ. ಅಷ್ಟಕ್ಕೂ ಏನದು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ. ಅಶ್ವಿನಿ ಗೌಡ, ಧನ್ವೀರ್, ಸುನೀಲ್ ಮೊದಲಾದವರು ನಟಿಸಿರುವ ‘ಹಯಗ್ರೀವ’ ಹೆಸರಿನ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಆರಂಭಿಸಿದೆ. ಈ ಚಿತ್ರವನ್ನು ನೋಡುವಂತೆ ಅವರು ಅಭಿಮಾನಿಗಳಲ್ಲಿ ಕೋರಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅಶ್ವಿನಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ. Source…

Read More