ಬೆಂಗಳೂರಿಗರೇ ಗಮನಿಸಿ: 60 ದಿನಗಳ ಕಾಲ ಈ ಪ್ರಮುಖ ರಸ್ತೆ ಕ್ಲೋಸ್​​; ಬದಲಿ ಮಾರ್ಗಗಳ ಮಾಹಿತಿ ಇಲ್ಲಿದೆ – Kannada News | Bengaluru Traffic Alert: Kamaraj Road Closed for 60 Days Due to Construction Work; Check Alternative Routes Here

ಬೆಂಗಳೂರು, ಮೇ 25: ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನಾಲಾ ಕ್ರಾಸ್ ಸಮೀಪ ಹಳೆಯ ಕಲ್ಲಿನ ಕಲ್ವರ್ಟ್ ತೆರವುಗೊಳಿಸಿ ಹೊಸ RCC ಕಲ್ವರ್ಟ್ ನಿರ್ಮಾಣ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 60 ದಿನಗಳ ಕಾಲ ಕಾಮರಾಜ್ ರಸ್ತೆ ಬಂದ್ ಆಗಲಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ತಿಳಿಸಿದೆ. ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಸಂಚಾರ ಮಾರ್ಪಾಡುಗಳನ್ನು ಮಾಡಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಯಾವೆಲ್ಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ?

  • ಕಾಮರಾಜ ರಸ್ತೆಯ ವಿಠೋಬಾ ದೇವಸ್ಥಾನದಿಂದ ನಾಲಾ ರಸ್ತೆಯವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.
  • ಕಾಮರಾಜ ರಸ್ತೆಯ ಕೆ.ಆರ್ ರಸ್ತೆ – ಕಬ್ಬನ್ ರಸ್ತೆ ಜಂಕ್ಷನ್‌ನಿಂದ ಡಿಕನ್ಸನ್ ಜಂಕ್ಷನ್ ಕಡೆಗೆ ಬರುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.

ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವರುಣಾರ್ಭಟ! 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಪರ್ಯಾಯ ಮಾರ್ಗಗಳು

  • ಕಮರ್ಷಿಯಲ್ ಸ್ಟ್ರೀಟ್ ಕಡೆಯಿಂದ ಕಾಮರಾಜ ರಸ್ತೆಯ ಮೂಲಕ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳು ಕಾಮರಾಜ ರಸ್ತೆಯ ವಿಠೋಬಾ ದೇವಸ್ಥಾನದ ಹತ್ತಿರ ಬಲ ತಿರುವು ಪಡೆದು ವೀರಪಿಳ್ಳೆ ಸ್ಟ್ರೀಟ್ ಮೂಲಕ ನಾಗಮ್ಮ ದೇವಸ್ಥಾನದ ಹತ್ತಿರ ಎಡ ತಿರುವು ಪಡೆದು ಸೇಂಟ್ ಜಾನ್ ರಸ್ತೆಯ ಮೂಲಕ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸಬಹುದಾಗಿದೆ.
  • ಕಬ್ಬನ್ ರಸ್ತೆ ಕಡೆಯಿಂದ ಕಾಮರಾಜ ರಸ್ತೆಯ ಮೂಲಕ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳು ಕೆ.ಆರ್ ರಸ್ತೆ ಕಬ್ಬನ್ ರಸ್ತೆ ಜಂಕ್ಷನ್ ಹತ್ತಿರ ಬಲ ತಿರುವು ಪಡೆದು ಕಬ್ಬನ್ ರಸ್ತೆಯ ಮೂಲಕ ತೆರಳಿ ಮಣಿಪಾಲ್ ಜಂಕ್ಷನ್ ಹತ್ತಿರ ಎಡ ತಿರುವು ಪಡೆದು ಡಿಕನ್ಸನ್ ರಸ್ತೆ ಮೂಲಕ ನೇರವಾಗಿ ತೆರಳಿ ಬ್ಲೂ ಸ್ಟೋನ್​​ ಹತ್ತಿರ ಬಲ ತಿರುವು ಪಡೆದುಕೊಂಡು ಸೇಂಟ್ ಜಾನ್ ರಸ್ತೆಯ ಮೂಲಕ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸಬಹುದಾಗಿದೆ.
  • ಡಿಸ್ಪೆನ್ಸರಿ ರಸ್ತೆ (ಆಲೀಸ್ ಜಂಕ್ಷನ್) ಕಡೆಯಿಂದ ಕಾಮರಾಜ ರಸ್ತೆಯ ಮೂಲಕ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳು ಡಿಕನ್ಸನ್ ರಸ್ತೆಯ ಮೂಲಕ ನೇರವಾಗಿ ಚಲಿಸಿ ಬ್ಲೂ ಸ್ಟೋನ್ ಹತ್ತಿರ ಎಡ ತಿರುವು ಪಡೆದು ಸೇಂಟ್ ಜಾನ್ ರಸ್ತೆ ಮೂಲಕ ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಸಂಚರಿಸಬಹುದಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Petrol Diesel Prices Hike: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಬೆಂಗಳೂರಿನಲ್ಲಿ ಇಂಧನ ದರದ ಚಾರ್ಟ್ ಇಲ್ಲಿದೆ – Kannada News | Bangalore Petrol Price Reaches Rs 110.93: Fuel Prices Hike For 4th Time In 13 Days, Check Today’s Rate List Inside

ಬೆಂಗಳೂರು, ಮೇ 25: ವಾಹನ ಸವಾರರಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ತೈಲ ಬೆಲೆ ಏರಿಕೆ ಶಾಕ್ ನೀಡಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸತತ ನಾಲ್ಕನೇ ಬಾರಿಗೆ ಹೆಚ್ಚಳ ಕಂಡಿದ್ದು, ಕಳೆದ 13 ದಿನಗಳಲ್ಲಿ ಇದು ನಾಲ್ಕನೇ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ದರ 2.61 ರೂ. ಏರಿಕೆಯಾಗಿದ್ದರೆ, ಡೀಸೆಲ್ ದರ 2.71 ರೂ. ಹೆಚ್ಚಳವಾಗಿದೆ. ಈ ಬೆಲೆ ಏರಿಕೆಯ ನಂತರ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 110.93 ರೂ. ಗೆ ತಲುಪಿದೆ. ಭಾನುವಾರಕ್ಕೆ (ಮೇ 24) ಹೋಲಿಸಿದರೆ ಡೀಸೆಲ್ ದರ 95.99 ರೂ. ನಿಂದ 98.54 ರೂ. ಗೆ ಏರಿದೆ. ದೆಹಲಿಯಲ್ಲಿ ಈಗಾಗಲೇ ಪೆಟ್ರೋಲ್ ದರ 100 ರೂ. ಗಡಿದಾಟಿದೆ.

ಒಂದು ದಿನ ಬಿಟ್ಟು ಒಂದು ದಿನದಂತೆ ಇಂಧನ ಬೆಲೆಗಳನ್ನು ಹೆಚ್ಚಿಸುತ್ತಿರುವುದು ವಾಹನ ಸವಾರರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮದಿಂದ ಬೆಲೆ ಏರಿಕೆಯಾಗುತ್ತಿದೆ ಎಂದು ಕೆಲವರು ಸಮರ್ಥಿಸಿಕೊಂಡರೆ, ಇನ್ನು ಕೆಲವರು ಈ ರೀತಿ ಮುಂದುವರಿದರೆ ಜೀವನ ನಡೆಸುವುದು ಕಷ್ಟ ಎಂದು ತಮ್ಮ ಸಂಕಷ್ಟವನ್ನು ವ್ಯಕ್ತಪಡಿಸಿದ್ದಾರೆ. ಈ ನಿರಂತರ ಬೆಲೆ ಏರಿಕೆಯಿಂದ ದಿನನಿತ್ಯದ ಬಳಕೆ ವಸ್ತುಗಳ ಮೇಲೆ ಸಹ ಪರಿಣಾಮ ಬೀರುವ ಆತಂಕವಿದೆ. ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಮಂಗಳೂರು: ಬೈಕ್ ತಡೆದಿದ್ದಕ್ಕೆ ಪೊಲೀಸ್ ಕಾನ್‌ಸ್ಟೆಬಲ್ ತಲೆಗೆ ಹೊಡೆದು ದುಷ್ಕರ್ಮಿಗಳು ಪರಾರಿ – Kannada News | Police Constable Attacked During Night Patrol in Kodical Mangaluru

ಮಂಗಳೂರು, ಮೇ 25: ಮಂಗಳೂರಿನ ಕೋಡಿಕಲ್‌ನಲ್ಲಿ ಭಾನುವಾರ ಮುಂಜಾನೆ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್‌ಸ್ಟೆಬಲ್ ಹನುಮಂತ್ ಕಾಂತಿ ಅವರ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ತಲೆಗೆ ಹೊಡೆದು ಪರಾರಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಬೆಳಗಿನ ಜಾವ 2 ಗಂಟೆ ಸುಮಾರಿಗೆ ನಾರಾಯಣ ಗುರು ಸಹಕಾರಿ ಸಂಘದ ಕಟ್ಟಡದ ಬಳಿ ಕಾನ್‌ಸ್ಟೆಬಲ್ ಹನುಮಂತ್ ಮತ್ತು ಗೃಹರಕ್ಷಕ ಸಿಬ್ಬಂದಿ ಬಸವರಾಜ್ ಕರ್ತವ್ಯದಲ್ಲಿದ್ದರು. ಈ ವೇಳೆ ವೇಗವಾಗಿ ಬಂದ ದ್ವಿಚಕ್ರ ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ಸವಾರರು ನಿಲ್ಲಿಸದೆ ತಲೆ ತಪ್ಪಿಸಿಕೊಂಡಿದ್ದಾರೆ. ಆದರೆ, ಕೆಲವು ನಿಮಿಷಗಳ ನಂತರ ಮತ್ತೆ ಸ್ಥಳಕ್ಕೆ ಹಿಂತಿರುಗಿದ ಬೈಕ್‌ ಸವಾರ, ಕಾನ್‌ಸ್ಟೆಬಲ್ ಹನುಮಂತ್ ಅವರ ತಲೆಗೆ ಬಲವಾಗಿ ಹೊಡೆದು ಎಸ್ಕೇಪ್ ಆಗಿದ್ದಾನೆ. ಗಾಯಗೊಂಡ ಸಿಬ್ಬಂದಿ ಹಲ್ಲೆಕೋರರನ್ನು ಹಿಡಿಯಲು ಪ್ರಯತ್ನಿಸಿದರಾದರೂ ಅವರು ಸಿಗಲಿಲ್ಲ.

ಸದ್ಯ ತಲೆಗೆ ಸಣ್ಣಪುಟ್ಟ ಗಾಯಗಳಾಗಿರುವ ಹನುಮಂತ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಪಾಯದಿಂದ ಪಾರಾಗಿದ್ದಾರೆ. ಇಡೀ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉರ್ವಾ ಪೊಲೀಸರು ಆರೋಪಿಗಳ ವಿರುದ್ಧ ಕೊಲೆ ಯತ್ನ (BNS 109) ಸೇರಿದಂತೆ ಹಲವು ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮೈದಾನದಲ್ಲೇ ಕೊನೆಯುಸಿರೆಳೆದ ಕರ್ನಾಟಕದ ಕ್ರಿಕೆಟಿಗ! – Kannada News | Former Karnataka Pacer SL Akshay Passes Away at 39

ಕರ್ನಾಟಕ ಕ್ರಿಕೆಟ್ ಲೋಕ ಇಂದು ಅತ್ಯಂತ ಆಘಾತಕಾರಿ ಮತ್ತು ದುಃಖದ ಸುದ್ದಿಯೊಂದಕ್ಕೆ ಸಾಕ್ಷಿಯಾಗಿದೆ. ತನ್ನ ಸ್ವಿಂಗ್ ಬೌಲಿಂಗ್ ಮತ್ತು ಸೌಮ್ಯ ಸ್ವಭಾವದಿಂದ ಎಲ್ಲರ ಮನಗೆದ್ದಿದ್ದ ಕರ್ನಾಟಕದ ಮಾಜಿ ವೇಗದ ಬೌಲರ್ ಎಸ್.ಎಲ್. ಅಕ್ಷಯ್ (39) ಅವರು ಕೆ.ಎಸ್.ಸಿ.ಎ ಡಿವಿಷನ್ ಪಂದ್ಯವೊಂದನ್ನು ಆಡುತ್ತಿರುವಾಗಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಸಿರು ಮೈದಾನವನ್ನೇ ದೇವರೆಂದು ನಂಬಿದ್ದ ಆಟಗಾರ, ಅದೇ ಮೈದಾನದಲ್ಲೇ ಕೊನೆಯುಸಿರೆಳೆದಿರುವುದು ಇಡೀ ಕ್ರೀಡಾಲೋಕವನ್ನು ದಿಗ್ಭ್ರಮೆಗೊಳಿಸಿದೆ.

ಮೈದಾನದಲ್ಲಿ ನಡೆದಿದ್ದೇನು?

ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ಎಸ್‌ಎಲ್‌ಎಸ್ ಕ್ರೀಡಾಂಗಣದಲ್ಲಿ ಸಫೈರ್ ಸಿಸಿ ಮತ್ತು ಭರತ್ ಸಿಸಿ ತಂಡಗಳ ನಡುವೆ ಡಿವಿಷನ್ 3 ಪಂದ್ಯ ನಡೆಯುತ್ತಿತ್ತು. ಸಫೈರ್ ಸಿಸಿ ಪರ ಆಡುತ್ತಿದ್ದ ಅಕ್ಷಯ್, ಆರಂಭದಲ್ಲಿ ಅತ್ಯಂತ ಉತ್ಸಾಹದಿಂದ 4 ಓವರ್‌ಗಳ ಬೌಲಿಂಗ್ ದಾಳಿ ನಡೆಸಿದ್ದರು. ಆ ಬಳಿಕ ಅವರಿಗೆ ಎದೆಯಲ್ಲಿ ತೀವ್ರ ಅಸ್ವಸ್ಥತೆ ಮತ್ತು ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಮೈದಾನದಿಂದ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು ಎಂದು ವೈದ್ಯರು ಘೋಷಿಸಿದರು.

ಅಕ್ಷಯ್ ಕ್ರಿಕೆಟ್ ಪಯಣ ಮತ್ತು ಸಾಧನೆ:

  • ಪ್ರಥಮ ದರ್ಜೆ ಕ್ರಿಕೆಟ್ ಪಾದಾರ್ಪಣೆ: ನವೆಂಬರ್ 29, 2011 ರಂದು ಬೆಂಗಳೂರಿನಲ್ಲಿ ಸೌರಾಷ್ಟ್ರ ತಂಡದ ವಿರುದ್ಧ ತಮ್ಮ ಮೊದಲ ರಂಜಿ ಪಂದ್ಯ ಆಡಿದರು.
  • ಕೊನೆಯ ಪಂದ್ಯ: ಡಿಸೆಂಬರ್ 22, 2012 ರಂದು ಹುಬ್ಬಳ್ಳಿಯಲ್ಲಿ ಹರಿಯಾಣ ತಂಡದ ವಿರುದ್ಧ ಆಡಿದ್ದರು.ಸಾಧನೆ: ಆಡಿದ 6 ಪಂದ್ಯಗಳಿಂದ 18 ವಿಕೆಟ್‌ಗಳನ್ನು ಕಬಳಿಸಿದ್ದರು.
  • ಉತ್ತಮ ಬೌಲಿಂಗ್ ಪ್ರದರ್ಶನ: ಒಂದು ಇನ್ನಿಂಗ್ಸ್‌ನಲ್ಲಿ 40 ರನ್‌ಗಳಿಗೆ 4 ವಿಕೆಟ್ (4/40) ಪಡೆದಿದ್ದು ಇವರ ಅತ್ಯುತ್ತಮ ಸಾಧನೆಯಾಗಿದೆ.
  • ಐತಿಹಾಸಿಕ ಸಾಧನೆ: ಅಕ್ಷಯ್ ಅವರು 2014-15ರ ಸಾಲಿನಲ್ಲಿ ರಂಜಿ ಟ್ರೋಫಿ ಮುಕುಟ ಮುಡಿಗೇರಿಸಿಕೊಂಡ ಐತಿಹಾಸಿಕ ಕರ್ನಾಟಕ ತಂಡದ ಪ್ರಮುಖ ಸದಸ್ಯರಾಗಿದ್ದರು.
  • ಲಿಸ್ಟ್ ಎ ಕ್ರಿಕೆಟ್ ಪಾದಾರ್ಪಣೆ: ಫೆಬ್ರವರಿ 16, 2010 ರಂದು ಚೆನ್ನೈನಲ್ಲಿ ಹೈದರಾಬಾದ್ ವಿರುದ್ಧ ಆಡುವ ಮೂಲಕ ಹಿರಿಯರ ರಾಜ್ಯ ತಂಡಕ್ಕೆ ಮೊದಲ ಕ್ಯಾಪ್ ಧರಿಸಿದರು.
  • ಲಿಸ್ಟ್ ಎ ಸಾಧನೆ: ಆಡಿದ 3 ಪಂದ್ಯಗಳಿಂದ 6 ವಿಕೆಟ್‌ಗಳನ್ನು ಪಡೆದಿದ್ದರು. ಹಾಗೆಯೇ 50 ರನ್‌ಗಳಿಗೆ 4 ವಿಕೆಟ್ (4/50) ಇವರ ಅತ್ಯುತ್ತಮ ಲಿಸ್ಟ್-ಎ ಪ್ರದರ್ಶನವಾಗಿದೆ.
  • ಟಿ20 ಕ್ರಿಕೆಟ್ ಪಾದಾರ್ಪಣೆ: ಅಕ್ಟೋಬರ್ 21, 2011 ರಂದು ಆಂಧ್ರಪ್ರದೇಶ ವಿರುದ್ಧ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.
  • ಟಿ20 ಸಾಧನೆ: ಆಡಿದ 9 ಪಂದ್ಯಗಳಿಂದ 8 ವಿಕೆಟ್‌ಗಳನ್ನು ಪಡೆದಿದ್ದರು.  18 ರನ್‌ಗಳಿಗೆ 2 ವಿಕೆಟ್ (2/18) ಇವರ ಬೆಸ್ಟ್ ಬೌಲಿಂಗ್ ಸ್ಪೆಲ್ ಆಗಿದೆ.
  • ಕೆಪಿಎಲ್ ಮತ್ತು ಇತರೆ ತಂಡಗಳು​​: ಕರ್ನಾಟಕ ಪ್ರೀಮಿಯರ್ ಲೀಗ್ (KPL) ಟೂರ್ನಿಯಲ್ಲಿ ಅವರು ಬಿಜಾಪುರ್ ಬುಲ್ಸ್, ಬಳ್ಳಾರಿ ಟಸ್ಕರ್ಸ್, ಮೈಸೂರು ವಾರಿಯರ್ಸ್ ಮತ್ತು ಮಂಗಳೂರು ಯುನೈಟೆಡ್ ಸೇರಿದಂತೆ ಹಲವು ಪ್ರಮುಖ ಫ್ರಾಂಚೈಸಿಗಳ ಪರ ಆಡಿದ್ದರು. ಇತ್ತೀಚಿನವರೆಗೂ ಅವರು ಬ್ಯಾಂಕ್ ಆಫ್ ಬರೋಡಾ (Bank of Baroda) ತಂಡದ ಪರವಾಗಿ ಹಾಗೂ ಕೆ.ಎಸ್.ಸಿ.ಎ ಲೀಗ್‌ಗಳಲ್ಲಿ ಸಫೈರ್ ಸಿಸಿ ಪರ ಅತ್ಯಂತ ಸಕ್ರಿಯವಾಗಿ ಆಡುತ್ತಿದ್ದರು.

ದೊಡ್ಡ ಗಣೇಶ್ ಸಂತಾಪ:

ಎಸ್​.ಎಲ್ ಅಕ್ಷಯ್ ಅವರ ನಿಧನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿರುವ ಟೀಮ್ ಇಂಡಿಯಾದ ಮಾಜಿ ವೇಗಿ, ಕನ್ನಡಿಗ ದೊಡ್ಡ ಗಣೇಶ್ ಅವರು, ಕ್ರಿಕೆಟ್ ಸಮುದಾಯಕ್ಕೆ ಅತ್ಯಂತ ಆಘಾತಕಾರಿ ಸುದ್ದಿ. ಅಂಡರ್-19 ಕ್ರಿಕೆಟ್​ ದಿನಗಳಿಂದಲೂ ನಾನು ಹತ್ತಿರದಿಂದ ನೋಡಿದ್ದ 39 ವರ್ಷದ ವೇಗದ ಬೌಲರ್ ಎಸ್.ಎಲ್. ಅಕ್ಷಯ್, ಇಂದು ಡಿವಿಷನ್ ಪಂದ್ಯವನ್ನಾಡುವಾಗ ನಿಧನರಾಗಿದ್ದಾರೆ.

ಈ ಬಗ್ಗೆ ನನಗೆ ದುಃಖವನ್ನು ವ್ಯಕ್ತಪಡಿಸಲು ಮಾತುಗಳೇ ಸಿಗುತ್ತಿಲ್ಲ. 2011/12 ರಲ್ಲಿ ಕರ್ನಾಟಕ ತಂಡದ ಪರವಾಗಿ ಆಡಿ ಉತ್ತಮ ಯಶಸ್ಸು ಕಂಡಿದ್ದ, ಮೃದು ಸ್ವಭಾವದ ವ್ಯಕ್ತಿ ಅಕ್ಷಯ್ ಇನ್ನಿಲ್ಲ ಎಂಬುದು ಅರಗಿಸಿಕೊಳ್ಳಲಾಗುತ್ತಿಲ್ಲ. RIP Akshay… ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಕುಟುಂಬಕ್ಕೆ ಈ ನೋವನ್ನ ಸಹಿಸಿಕೊಳ್ಳೋ ಶಕ್ತಿ ಆ ಭಗವಂತ ನೀಡಲಿ ಎಂದಷ್ಟೇ ಕೇಳಿಕೊಳ್ಳಬಲ್ಲೆ ಎಂದು ದೊಡ್ಡ ಗಣೇಶ್ ಸೋಷಿಯಲ್ ಮೀಡಿಯಾ ಮೂಲಕ ಸಂತಾಸ ಸೂಚಿಸಿದ್ದಾರೆ.

ಯುವ ಪ್ರತಿಭೆಗಳಿಗೆ ಮಾರ್ಗದರ್ಶಕ:

ಕ್ರಿಕೆಟ್ ಆಟದಿಂದ ನಿವೃತ್ತರಾದ ಮೇಲೆಯೂ ಅಕ್ಷಯ್ ಅವರ ಕ್ರೀಡಾ ಪ್ರೇಮ ಕಡಿಮೆಯಾಗಲಿಲ್ಲ. ಎನ್.ಸಿ.ಎ (NCA) ಪ್ರಮಾಣೀಕೃತ ಕೋಚ್ ಆಗಿ ಬದಲಾದ ಅವರು, ಕರ್ನಾಟಕದ ಅಂಡರ್-19 ಮತ್ತು ಜೂನಿಯರ್ ತಂಡಗಳ ಯುವ ಆಟಗಾರರನ್ನು ತರಬೇತುಗೊಳಿಸುವಲ್ಲಿ ನಿರತರಾಗಿದ್ದರು. ಅವರ ಗರಡಿಯಲ್ಲಿ ಬೆಳೆದ ಹಲವು ಯುವ ಆಟಗಾರರು ಇಂದು ಅಕ್ಷಯ್ ಅವರ ಕೋಚಿಂಗ್ ಶೈಲಿ ಮತ್ತು ಪ್ರೀತಿಯ ಸ್ವಭಾವವನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.

ಮುಗಿಯದ ಶೋಕ:

ಅಕ್ಷಯ್ ಕೇವಲ ಒಬ್ಬ ಉತ್ತಮ ಕ್ರಿಕೆಟಿಗನಷ್ಟೇ ಅಲ್ಲದೆ, ವೈಯಕ್ತಿಕ ಜೀವನದಲ್ಲಿ ಅತ್ಯಂತ ಸೌಮ್ಯ, ಶಿಸ್ತುಬದ್ಧ ಮತ್ತು ಸ್ನೇಹಪರ ವ್ಯಕ್ತಿಯಾಗಿದ್ದರು. ಅವರ ಅಕಾಲಿಕ ಮರಣದಿಂದಾಗಿ ಅವರ ಪತ್ನಿ ಹಾಗೂ ಇಬ್ಬರು ಸಣ್ಣ ಹೆಣ್ಣುಮಕ್ಕಳು ಅನಾಥರಾಗಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಸೇರಿದಂತೆ ಹಲವು ಹಿರಿಯ ಕ್ರಿಕೆಟಿಗರು ಅಕ್ಷಯ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: IPL 2026: ಡೆಡ್ ಬಾಲ್​ನಲ್ಲಿ ಔಟ್ ನೀಡಿದ ಅಂಪೈರ್..!

ಮೈದಾನದಲ್ಲಿ ಸದಾ ಹಸನ್ಮುಖಿಯಾಗಿರುತ್ತಿದ್ದ ಈ ಪ್ರತಿಭಾನ್ವಿತ ವೇಗಿಯ ನೆನಪು ಕರ್ನಾಟಕ ಕ್ರಿಕೆಟ್ ಇತಿಹಾಸದಲ್ಲಿ ಸದಾ ಜೀವಂತವಾಗಿರುತ್ತದೆ. ಭಗವಂತನು ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ, ಹಾಗೂ ಅವರ ಕುಟುಂಬಕ್ಕೆ ಈ ಅಪಾರ ದುಃಖವನ್ನು ಸಹಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.

Source link

ಮಗ ಯಶ್ ಪರ ನಿಂತ ಯಶ್ ತಾಯಿ ಪುಷ್ಪಾ: ‘ಟಾಕ್ಸಿಕ್’ ಬಗ್ಗೆ ಹೇಳಿದ್ದೇನು? – Kannada News | Yash’s Mother Pushpa Defends ‘Toxic’ Teaser and Movie Delays: Her Strong Stance

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ಸಿನಿಮಾ ಸದ್ಯ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರದ ಟೀಸರ್​​ಗೆ ಅನೇಕರು ಟೀಕೆ ಹೊರಹಾಕಿದ್ದರು. ಇತ್ತೀಚಿಗೆ ಮಾಧ್ಯಮಗಳ ಜೊತೆ ಮಾತನಾಡುವಾಗ ಅವರು ‘ಟಾಕ್ಸಿಕ್’ ಟೀಸರ್ ಮತ್ತು ದೊಡ್ಡ ಸಿನಿಮಾಗಳು ತಡವಾಗುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ‘ಟಾಕ್ಸಿಕ್’ ಬಗ್ಗೆ ಪಾಸಿಟಿವ್ ವಿಷಯ ಹೇಳಿಕೊಂಡಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಟೀಸರ್​​ನಲ್ಲಿ ಬೋಲ್ಡ್ ದೃಶ್ಯ ಇತ್ತು. ಕನ್ನಡ ವೀಕ್ಷಕರಿಗೆ ಈ ರೀತಿಯ ವಿಷಯ ನೀಡೋದು ಸರಿ ಅಲ್ಲ ಎಂಬ ಮಾತು ಕೇಳಿ ಬಂದವು. ಆದರೆ, ಪುಷ್ಪಾ ಅವರು ಇದನ್ನು ಸಮರ್ಥಿಸಿಕೊಂಡಿದ್ದಾರೆ. ‘ಟಾಕ್ಸಿಕ್’ ವಿಳಂಬದ ಬಗ್ಗೆ ಅವರಿಗೆ ಯಾವುದೇ ತಕರಾರು ಇಲ್ಲ.

‘ಯಾವಾಗ ಯೂತ್ಸ್ ಬದಲಾಗುತ್ತಾರೋ, ಹಳೆಯ ಕಾಲದ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತಾರೋ ಆಗ ನಿರ್ದೇಶಕರು ಅಂತಹ ಸಿನಿಮಾಗಳನ್ನೇ ಮಾಡುತ್ತಾರೆ. ಟೀಸರ್ ಎನ್ನುವುದು ಕೇವಲ ಪ್ರೇಕ್ಷಕರನ್ನು ಸೆಳೆಯುವ ಒಂದು ಸಣ್ಣ ಆಕರ್ಷಣೆಯಷ್ಟೇ. ಟೀಸರ್ ನೋಡಿಯೇ ಇಡೀ ಸಿನಿಮಾ ಹೀಗೆ ಇರುತ್ತದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಚಿತ್ರಮಂದಿರಕ್ಕೆ ಹೋಗಿ ಇಡೀ ಸಿನಿಮಾ ನೋಡಿದ ಮೇಲಷ್ಟೇ ಅದರ ಸಂಪೂರ್ಣ ಕಥೆ ತಿಳಿಯುತ್ತದೆ’ ಎಂದು ಟ್ರೋಲರ್‌ಗಳಿಗೆ ಪರೋಕ್ಷವಾಗಿ ಉತ್ತರಿಸಿದರು. ಅಲ್ಲದೆ ಯಾರು ಯಾವುದನ್ನು ಇಷ್ಟಪಡುತ್ತಾರೋ ಅದನ್ನೇ ಯಶ್ ನೀಡುತ್ತಾರೆ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಟಾಕ್ಸಿಕ್ ಸಿನಿಮಾದ ಮಹಿಳಾ ಪಾತ್ರಗಳು ಸಖತ್ ಬೋಲ್ಡ್’: ಕೌತುಕ ಹೆಚ್ಚಿಸಿದ ಯಶ್

ಯಶ್ ಅವರಂತಹ ದೊಡ್ಡ ಸ್ಟಾರ್‌ಗಳ ಸಿನಿಮಾಗಳು ಬಿಡುಗಡೆಯಾಗಲು ತುಂಬ ಸಮಯ ತೆಗೆದುಕೊಳ್ಳುತ್ತಿವೆ ಎನ್ನುವ ಚರ್ಚೆಗೆ ಉತ್ತರಿಸಿದ ಪುಷ್ಪಾ ಅವರು, ‘ಕನ್ನಡ ಚಿತ್ರರಂಗದವರು ಇಂದು ಇಷ್ಟು ದೊಡ್ಡ ಮಟ್ಟದ ಸಿನಿಮಾಗಳನ್ನು ಮಾಡುತ್ತಿದ್ದಾರೆ ಎನ್ನುವುದಕ್ಕೆ ನಾವು ಹೆಮ್ಮೆ ಪಡಬೇಕು. ನಮ್ಮವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಬಿಗ್ ಬಜೆಟ್ ಸಿನಿಮಾಗಳನ್ನು ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಬೇಜಾರು ಮಾಡಿಕೊಳ್ಳಬೇಕೋ ಅಥವಾ ಅವರು ಇಷ್ಟು ದೊಡ್ಡ ಸಾಧನೆ ಮಾಡುತ್ತಿದ್ದಾರೆ ಎಂದು ಹೆಮ್ಮೆ ಪಡಬೇಕೋ ನೀವೇ ಹೇಳಿ’ಎಂದು ಪ್ರಶ್ನಿಸುವ ಮೂಲಕ ಯಶ್ ಸಿನಿಮಾ ಮಾಡುತ್ತಿರುವ ಹೆಜ್ಜೆಯನ್ನು ಬೆಂಬಲಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಏನಂದ್ರು? – Kannada News | DCM Shivakumar Denies Knowledge of High Commands Call to CM Siddaramaiah

ಬೆಂಗಳೂರು, ಮೇ 25: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಬುಲಾವ್ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಅವರನ್ನು ಯಾಕೆ ಕರೆದಿದ್ದಾರೆ ಎಂಬುದು ತಮಗೆ ತಿಳಿದಿಲ್ಲ ಎಂದು ಡಿಕೆಶಿ ಹೇಳಿದ್ದಾರೆ. ಸಿಎಂ ನನಗೆ ಏನೂ ಹೇಳಿಲ್ಲ ಎಂದಿರುವ ಅವರು, ಹೈಕಮಾಂಡ್‌ನಿಂದ ತಮಗೆ ಕರೆ ಬಂದಿಲ್ಲ. ಕರೆದರೆ ಹೋಗುವುದಾಗಿ ತಿಳಿಸಿದ್ದಾರೆ. ಸಂಪುಟ ಪುನರಚನೆ ಅಥವಾ ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗಳಿಗೆ, ನನಗೆ ಗೊತ್ತಿಲ್ಲ ಎಂದು ಅವರು ಉತ್ತರಿಸಿದ್ದಾರೆ. ಸದ್ಯಕ್ಕೆ ಹೈಕಮಾಂಡ್‌ನಿಂದ ಇನ್ನಾವುದೇ ಮಾಹಿತಿ ಬಂದಿಲ್ಲ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಹಾರಾಷ್ಟ್ರದ ರಾಯಗಢದಲ್ಲಿ ಕಂದಕಕ್ಕೆ ಉರುಳಿದ ಕಾರು, ಎಂಟು ಮಂದಿ ಸಾವು – Kannada News | Tourist Vehicle Falls Into Gorge in Raigad, Multiple Fatalities Reported

ರಾಯಗಢ, ಮೇ 25: ಮಹಾರಾಷ್ಟ್ರದ ರಾಯಗಢದ ಮಹಾಬಲೇಶ್ವರ-ಪೋಲಾದ್​ಪುರ ರಸ್ತೆಯಲ್ಲಿ ಭಾನುವಾರ ತಡರಾತ್ರಿ ಕಾರು ಕಂದಕಕ್ಕೆ ಉರುಳಿಬಿದ್ದ ಪರಿಣಾಮ 8 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೇಗವಾಗಿ ಚಲಿಸುತ್ತಿದ್ದ ಸ್ಕಾರ್ಪಿಯೋ ಕಾರು ಆಳವಾದ ಕಂದಕಕ್ಕೆ ಉರುಳಿದ ನಂತರ ಮಾರ್ಗದಲ್ಲಿ ಅಂಬೆನಾಲಿ ಘಾಟ್ ಬಳಿ ಈ ಅಪಘಾತ ಸಂಭವಿಸಿದೆ. ಸ್ಥಳೀಯರು ಈ ಕಂದಕವು ಸುಮಾರು 1,000 ಅಡಿ ಆಳದಲ್ಲಿದೆ ಎಂದು ಅಂದಾಜಿಸಿದ್ದಾರೆ. ಇಲ್ಲಿಯವರೆಗೆ ಎರಡು ಶವಗಳನ್ನು ಹೊರತೆಗೆಯಲಾಗಿದೆ.

ಪೋಲಾದ್‌ಪುರ ಪೊಲೀಸರು, ಸ್ಥಳೀಯರು ಮತ್ತು ರಕ್ಷಣಾ ತಂಡಗಳು ಯುದ್ಧೋಪಾದಿಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಕಂದರದ ತೀವ್ರ ಆಳ ಮತ್ತು ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಕತ್ತಲೆಯು ರಕ್ಷಣಾ ಕಾರ್ಯಾಚರಣೆಗೆ ಗಮನಾರ್ಹ ಸವಾಲುಗಳನ್ನು ಒಡ್ಡುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಕಾರು ಸತಾರಾ ಜಿಲ್ಲೆಯ ಕೊರೆಗಾಂವ್ ತಾಲ್ಲೂಕಿನ ಅಸ್ಗಾಂವ್ ಗ್ರಾಮಕ್ಕೆ ಸೇರಿದೆ. ಅವರು ದಪೋಲಿಯಿಂದ ಸತಾರಾಕ್ಕೆ ತೆರಳುತ್ತಿದ್ದಾಗ ವಾಹನ ಕಮರಿಗೆ ಬಿದ್ದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮತ್ತೊಂದು ಮೃತದೇಹ ಪತ್ತೆ: ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆ – Kannada News | Bhatkal Beach Tragedy: Death Toll Rises to 11 as Missing Man’s Body Recovered in Joint Search Operation

ಕಾರವಾರ, ಮೇ 25: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿಯ ಅಳ್ವೆಕೋಡಿ ಕಡಲತೀರ ಪ್ರದೇಶದಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. 11 ಜನರ ಪೈಕಿ ನಿನ್ನೆ 10 ಜನರ ಮೃತದೇಹಗಳು ಪತ್ತೆಯಾಗಿದ್ದವು. ನಾಪತ್ತೆಯಾಗಿದ್ದ ಮಾದೇವ್ ನಾಯ್ಕ್ ಮೃತದೇಹ ಕೂಡ ಇಂದು ಪತ್ತೆಯಾಗಿದೆ. ಎನ್‌ಡಿಆರ್‌ಎಫ್‌, ಈಶ್ವರ ಮಲ್ಪೆ ತಂಡ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮೃತದೇಹವನ್ನು ಪತ್ತೆ ಮಾಡಿ ಹೊರತೆಗೆಯಲಾಗಿದೆ. ಆ ಮೂಲಕ ನೀರಿನ ಅಬ್ಬರಕ್ಕೆ 11 ಮಂದಿ ಜಲ ಸಮಾಧಿಯಾಗಿದ್ದರೆ, ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.

ಮುಖ್ಯಾಂಶಗಳು

  • ಭಟಕ್ಕಳದ ಬಳಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ದುರಂತ
  • ಮತ್ತೋರ್ವನ ಮೃತದೇಹ ಪತ್ತೆ, ಸಾವಿನ ಸಂಖ್ಯೆ 11ಕ್ಕೆ ಏರಿಕೆ
  • ಶೋಧಧ ವೇಳೆ ಸಿಕ್ಕ ನಾಪತ್ತೆಯಾಗಿದ್ದ ಮಾದೇವ್ ಮೃತದೇಹ

ತಾಯಿ ಉಳಿಸಲು ಹೋಗಿ ಮಗನೂ ಸಾವು

ಇನ್ನು ಮೃತರ ಪೈಕಿ ಮಾಸ್ತಮ್ಮ ನಾಯ್ಕ್ ಅವರನ್ನು ಉಳಿಸಲು ಹೋಗಿ ಅವರ ಮಗ ಉಮೇಶ್​​ ನಾಯ್ಕ್​​ ಕೂಡ ನೀರುಪಾಲಾಗಿದ್ದಾರೆ. ತಾಯಿ ನೀರಲ್ಲಿ ಕಪ್ಪೆಚಿಪ್ಪು ಹೆಕ್ಕುತ್ತಿದ್ದರೆ ಮಗ ಉಮೆಶ್​​, ಬಂಡೆ ಮೇಲೆ ಕಪ್ಪು ಚಿಪ್ಪು ಹೆಕ್ಕುತ್ತಿದ್ದರು. ತಾಯಿ ನೀರಲ್ಲಿ ಮುಳುಗುತ್ತಿದ್ದಿದ್ದು ಕಂಡಿದ್ದೇ ತಡ ಆಕೆಯ ರಕ್ಷಣೆಗೆಂದು ಅವರು ಕೂಡ ನೀರಿಗೆ ಹಾರಿದ್ದರು. ತಾಯಿ ದಪ್ಪ ಇದ್ದಿದ್ದರಿಂದ ಆಕೆಯನ್ನು ಎಷ್ಟೇ ಎಳೆಯಲು ಪ್ರಯತ್ನಿಸಿದರೂ ಬದುಕಿಸಲು ಸಾಧ್ಯವಾಗಿಲ್ಲ. ಹೀಗಾಗಿ ನೀರಿಂದ ಆತ ಹಿಂದಿರುಗುವ ವೇಳೆ ಮತ್ತಿಬ್ಬರು ತಮ್ಮ ರಕ್ಷಣೆಗಾಗಿ ಉಮೇಶ್​​ ಕಾಲು ಎಳೆದಿದ್ದಾರೆ. ಹೀಗಾಗಿ ಅವರೂ ನೀರಲ್ಲಿ ಮುಳುಗಿ ಮೃತಪಟ್ಟಿರೋದಾಗಿ ಪ್ರತ್ಯಕ್ಷದರ್ಶಿ ಮಂಜುನಾಥ್ ನಾಯ್ಕ್ ತಿಳಿಸಿದ್ದಾರೆ.

ಇದನ್ನೂ ಓದಿ: ಕಪ್ಪೆ ಚಿಪ್ಪುಗಾಗಿ ಹೋದವರು ಜಲಸಮಾಧಿ

ಮಕ್ಕಳು ಅನಾಥ

ಕಪ್ಪೆ ಚಿಪ್ಪು ಹೆಕ್ಕಲು ಹೋಗಿ ನೀರುಪಾಲದವರ ಪೈಕಿ ಒಂದೊಂದು ಕುಟುಂಬಗಳ ಕಥೆಯೂ ಮನಕಲಕುವಂತಿದೆ. ಅವಘಡದಲ್ಲಿ ಮಾದೇವ ನಾಯ್ಕ್ ಮತ್ತು ಲಕ್ಷ್ಮಿ ನಾಯ್ಕ್ ದಂಪತಿ ಅಸುನೀಗಿದ್ದು, ತಂದೆ ತಾಯಿ ಇಬ್ಬರೂ ನೀರುಪಾಲಾದ ಹಿನ್ನೆಲೆ ಮಕ್ಕಳಾದ ದರ್ಶನ (23), ಕಿರ್ತನಾ(20) ಈಗ ಅನಾಥರಾಗಿದ್ದಾರೆ. ಮತ್ತೊಂದೆಡೆ ಅವಘಡದಲ್ಲಿ ಮೃತ ಲಕ್ಷ್ಮೀ ಶಿವರಾಮ ನಾಯ್ಕ್​​ ಅವರ ಪತಿ ಕೂಡ 10 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹೀಗಾಗಿ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಓದುತ್ತಿದ್ದ ನಾಲ್ವರು ಮಕ್ಕಳಿಗೆ ಅಮ್ಮನೇ ಅಧಾರವಾಗಿದ್ದರು. ಆದರೀಗ ಆಕೆಯೂ ಮೃತಪಟ್ಟಿರೋದು ಮಕ್ಕಳಿಗೆ ದಿಕ್ಕು ತೋಚದಂತೆ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮುಂಬೈ ಇಂಡಿಯನ್ಸ್​ ತಂಡದ ಸೋಲಿನ ಸೀಕ್ರೆಟ್ ಬಿಚ್ಚಿಟ್ಟ ಹಾರ್ದಿಕ್ ಪಾಂಡ್ಯ! – Kannada News | Hardik pandya Post Match interview after MI vs RR Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 69ನೇ ಪಂದ್ಯದಲ್ಲೂ ಮುಂಬೈ ಇಂಡಿಯನ್ಸ್ ತಂಡ ಮುಗ್ಗರಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್​ಗಳಲ್ಲಿ 205 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ 20 ಓವರ್​ಗಳಲ್ಲಿ 175 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಕೊನೆಯ ಪಂದ್ಯದಲ್ಲಿ ಮುಂಬೈ ಪಡೆ 30 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಡೆತ್ ಓವರ್‌ಗಳಲ್ಲಿ ಅತಿಯಾದ ರನ್ ಬಿಟ್ಟುಕೊಟ್ಟಿದ್ದು ಮತ್ತು ಪವರ್‌ಪ್ಲೇ ಅವಧಿಯಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿದ್ದೇ ಸೋಲಿಗೆ ಮುಖ್ಯ ಕಾರಣ ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.

ಕೈಕೊಟ್ಟ ಬೌಲರ್​ಗಳು:

“ನಾವು ಬೌಲಿಂಗ್ ಮಾಡುವಾಗ ಎದುರಾಳಿ ತಂಡಕ್ಕೆ ಕನಿಷ್ಠ 10 ರಿಂದ 15 ರನ್‌ಗಳನ್ನು ಹೆಚ್ಚುವರಿಯಾಗಿ ನೀಡಿದೆವು ಎಂದು ನನಗೆ ಅನಿಸುತ್ತದೆ. ಕ್ರೀಡಾಂಗಣದಲ್ಲಿ ತೀವ್ರವಾದ ಸೆಖೆಯ ವಾತಾವರಣವಿತ್ತು. ಆದರೂ ನಮ್ಮ ಬೌಲರ್‌ಗಳು ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಆದರೆ ಅಂತಿಮ ಹಂತದಲ್ಲಿ ಪಂದ್ಯದ ಮೇಲಿನ ಹಿಡಿತ ಕೈತಪ್ಪಿತು” ಎಂದು ಪಾಂಡ್ಯ ಹೇಳಿದ್ದಾರೆ.

ಡೆತ್ ಓವರ್‌ಗಳು ದುಬಾರಿ:

ಪಂದ್ಯದ ಕೊನೆಯ 5 ಓವರ್‌ಗಳು ಮುಂಬೈ ಇಂಡಿಯನ್ಸ್ ತಂಡಕ್ಕೆ ಭಾರಿ ಹೊಡೆತ ನೀಡಿದವು. ಈ ಬಗ್ಗೆ ಮಾತನಾಡಿದ ಪಾಂಡ್ಯ, “ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವುದು ಯಾವಾಗಲೂ ಕಷ್ಟಕರವಾಗಿರುತ್ತದೆ. ಅಂತಿಮ 5 ಓವರ್‌ಗಳ ಬ್ಲಾಕ್‌ನಲ್ಲಿ ಕೇವಲ 1 ಅಥವಾ 2 ಬೌಂಡರಿಗಳನ್ನು ತಡೆದಿದ್ದರೂ, ಎದುರಾಳಿ ತಂಡವನ್ನು 12-15 ರನ್ ಮುಂಚಿತವಾಗಿಯೇ ನಿಯಂತ್ರಿಸಬಹುದಿತ್ತು. ದುರದೃಷ್ಟವಶಾತ್ ನಾವು ಆ ಕೆಲಸ ಮಾಡಲು ವಿಫಲರಾದೆವು. ಕೊನೆಯ 5 ಓವರ್‌ಗಳಲ್ಲಿ ಎದುರಾಳಿಗಳು ಬಾರಿಸಿದ 73 ರನ್‌ಗಳು ನಮಗೆ ಪಂದ್ಯವನ್ನು ಕೈತಪ್ಪುವಂತೆ ಮಾಡಿದವು” ಎಂದರು.

ಪವರ್‌ಪ್ಲೇನಲ್ಲಿ ವಿಕೆಟ್ ಪತನ:

ಇನ್ನು ಚೇಸಿಂಗ್ ಬಗ್ಗೆ ಮಾತನಾಡಿದ ಹಾರ್ದಿಕ್ ಪಾಂಡ್ಯ, “ಈ ರನ್ ಮೊತ್ತವನ್ನು ಖಂಡಿತವಾಗಿಯೂ ಬೆನ್ನಟ್ಟಬಹುದಾಗಿತ್ತು. ಆದರೆ ನಾವು ಪವರ್‌ಪ್ಲೇ (ಮೊದಲ 6 ಓವರ್) ಅವಧಿಯಲ್ಲೇ ಸಾಲು ಸಾಲು ವಿಕೆಟ್‌ಗಳನ್ನು ಕಳೆದುಕೊಂಡೆವು. ಆರಂಭದಲ್ಲೇ ಪ್ರಮುಖ ವಿಕೆಟ್‌ಗಳು ಬಿದ್ದಿದ್ದರಿಂದ, ನಂತರದ ಓವರ್‌ಗಳಲ್ಲಿ ರನ್ ವೇಗವನ್ನು ಕಾಯ್ದುಕೊಳ್ಳುವುದು ನಮಗೆ ಕೇವಲ ‘ಕ್ಯಾಚ್-ಅಪ್’ (ಹಿಂದಿನ ರನ್ ರೇಟ್ ಸರಿದೂಗಿಸುವ) ಆಟವಾಗಿ ಮಾರ್ಪಟ್ಟಿತು” ಎಂದು ಬೇಸರ ವ್ಯಕ್ತಪಡಿಸಿದರು.

ಬ್ಯಾಟಿಂಗ್‌ಗೆ ಪೂರಕವಾಗಿದ್ದ ಪಿಚ್:

ಪಿಚ್  ಬಗ್ಗೆ ಸ್ಪಷ್ಟನೆ ನೀಡಿದ ಹಾರ್ದಿಕ್ ಪಾಂಡ್ಯ, “ನಾನು ಬ್ಯಾಟಿಂಗ್ ಮಾಡಲು ಕ್ರೀಸ್​ಗೆ ಬಂದಾಗ ಚೆಂಡು ಬ್ಯಾಟ್‌ಗೆ ತುಂಬಾ ಚೆನ್ನಾಗಿ ಬರುತ್ತಿತ್ತು. ಪಿಚ್ ಎರಡೂ ಇನಿಂಗ್ಸ್‌ಗಳಲ್ಲೂ ಒಂದೇ ರೀತಿ ವರ್ತಿಸಿದೆ. ಇಲ್ಲಿ ಬ್ಯಾಟ್ಸ್‌ಮನ್‌ಗಳು ತಮ್ಮ ಶೇಪ್ ಕಾಯ್ದುಕೊಂಡು, ಕೇವಲ ಉತ್ತಮ ಕ್ರಿಕೆಟಿಂಗ್ ಶಾಟ್‌ಗಳನ್ನು ಆಡಿದರೆ ರನ್ ಗಳಿಸುವುದು ಸುಲಭವಾಗಿತ್ತು” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: IPL 2026: ಡೆಡ್ ಬಾಲ್​ನಲ್ಲಿ ಔಟ್ ನೀಡಿದ ಅಂಪೈರ್..!

ಒಟ್ಟಾರೆಯಾಗಿ ಹೇಳುವುದಾದರೆ, ಈ ಬಾರಿಯ ಐಪಿಎಲ್​ ಮುಂಬೈ ಇಂಡಿಯನ್ಸ್ ಪಾಲಿಗೆ ನಿರಾಶದಾಯಕ. ಆಡಿರುವ 14 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಗೆದ್ದಿರುವುದು ಕೇವಲ 4 ಮ್ಯಾಚ್​ಗಳಲ್ಲಿ ಮಾತ್ರ. ಈ ನಾಲ್ಕು ಗೆಲುವಿನೊಂದಿಗೆ ಐದು ಬಾರಿಯ ಚಾಂಪಿಯನ್ ಅಂಕ ಪಟ್ಟಿಯಲ್ಲಿ 9ನೇ ಸ್ಥಾನ ಅಲಂಕರಿಸಿರುವುದು ಅಭಿಮಾನಿಗಳ ಪಾಲಿಗೆ ಬೇಸರ ಸಂಗತಿ.

Source link

IPL 2026: ಡೆಡ್ ಬಾಲ್​ನಲ್ಲಿ ಔಟ್ ನೀಡಿದ ಅಂಪೈರ್..! – Kannada News | IPL 2026 Drama: Shardul’s Towel Mishap Sparks Outrage as Dubey Rules Out

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ವಿವಾದಗಳಿಂದಲೇ ಮತ್ತೆ ಸುದ್ದಿಯಲ್ಲಿದೆ. ಈ ಬಾರಿ ವಿವಾದ ಸೃಷ್ಟಿಯಾಗಿರುವುದು ಅಂಪೈರ್ ತೀರ್ಪಿನಿಂದ. ಅದು ಕೂಡ ಡೆಡ್ ಬಾಲ್ ಘೋಷಿಸದೇ ಔಟ್ ನೀಡಿರುವುದರಿಂದ. ಮೇ 24, 2026 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಪರ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಡಗೈ ದಾಂಡಿಗ ಶುಭಂ ದುಬೆ (5) ಶಾರ್ದೂಲ್ ಠಾಕೂರ್ ಎಸೆತದಲ್ಲಿ ಕ್ಯಾಚ್ ನೀಡಿ ಔಟಾಗಿದ್ದರು. ಆದರೆ ಅದು ನಾಟೌಟ್ ಆಗಬೇಕಿತ್ತು. ಏಕೆಂದರೆ ಚೆಂಡೆಸೆಯುವ ವೇಳೆ ಶಾರ್ದೂಲ್ ಠಾಕೂರ್ ಅವರ ಟವೆಲ್ ಕೆಳಗೆ ಬಿದ್ದಿತ್ತು. ಇದನ್ನು ಗಮನಿಸದೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು.

  • ಬೌಲಿಂಗ್ ವೇಳೆ ಬಿದ್ದ ಟವೆಲ್: ರಾಜಸ್ಥಾನ್ ರಾಯಲ್ಸ್​ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ಅವರು ಸ್ಲೋವರ್ ಎಸೆತವನ್ನು ಎಸೆಯಲು ಮುಂದಾದರು. ಈ ವೇಳೆ ಅವರ ಸೊಂಟದಲ್ಲಿದ್ದ ಬಿಳಿ ಟವೆಲ್ ಕಳಚಿ ಪಿಚ್ ಮೇಲೆ ಬಿದ್ದಿತು.
  • ಶುಭಂ ದುಬೆ ವಿಕೆಟ್ ಪತನ: ಬೌಲರ್ ಕೈಯಿಂದ ಚೆಂಡು ಹೊರಬೀಳುವ ಮೊದಲೇ ಈ ಘಟನೆ ನಡೆದಿದ್ದರಿಂದ ಅದು ಡೆಡ್ ಬಾಲ್ ಆಗಬೇಕಿತ್ತು. ಇತ್ತ ಚೆಂಡನ್ನು ಎದುರಿಸಿದ ಶುಭಂ ದುಬೆ ಡೀಪ್ ಮಿಡ್​ ವಿಕೆಟ್​ನಲ್ಲಿದ್ದ ನಮನ್​ಧೀರ್​ಗೆ ಕ್ಯಾಚ್ ನೀಡಿದರು.
  • ಡೆಡ್ ಬಾಲ್ ನಿಯಮದ ಅಪೀಲ್: ಬೌಲಿಂಗ್ ಮಾಡುವಾಗ ಬೌಲರ್‌ನ ಯಾವುದೇ ವಸ್ತ್ರ ಅಥವಾ ವಸ್ತು ಕೆಳಗೆ ಬಿದ್ದರೆ ಅದು ಬ್ಯಾಟರ್‌ನ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ. ಕ್ರಿಕೆಟ್ ನಿಯಮಗಳ ಪ್ರಕಾರ, ಇಂತಹ ಸಂದರ್ಭಗಳಲ್ಲಿ ಅಂಪೈರ್ “ಡೆಡ್ ಬಾಲ್” ಎಂದು ಘೋಷಿಸಬೇಕು.
  • ಅಂಪೈರ್ ಮೌನ: ಅತ್ತ ಶಾರ್ದೂಲ್ ಠಾಕೂರ್ ತಮ್ಮ ಟವೆಲ್ ಅನ್ನು ಎಕ್ಕುತ್ತಿರುವುದು ಕಂಡು ಬಂದರೂ ಫೀಲ್ಡ್ ಅಂಪೈರ್​ಗಳು ರಿಪ್ಲೇ ಪರಿಶೀಲಿಸಲು ಮುಂದಾಗಲಿಲ್ಲ.

ಕುಮಾರ್ ಸಂಗಕ್ಕಾರ ಆಕ್ರೋಶ:

ಈ ಔಟ್ ತೀರ್ಪನ್ನು ಕಂಡ ತಕ್ಷಣ ರಾಜಸ್ಥಾನ್ ರಾಯಲ್ಸ್ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ತೀವ್ರ ಅಸಮಾಧಾನಗೊಂಡರು. ಅವರು ತಕ್ಷಣವೇ ಬೌಂಡರಿ ಲೈನ್‌ ಬಳಿ ಇದ್ದ ನಾಲ್ಕನೇ ಅಂಪೈರ್ ಬಳಿ ತೆರಳಿ ತೀವ್ರವಾಗಿ ವಾದಿಸಿದರು. ಬೌಲರ್‌ನ ಟವೆಲ್ ಬಿದ್ದಿರುವುದರಿಂದ ಬ್ಯಾಟರ್‌ಗೆ ತೊಂದರೆಯಾಗಿದೆ, ಇದು ನಿಯಮಬಾಹಿರ ಎಂದು ವಾದಿಸಿದರು.

ಇದನ್ನೂ ಓದಿ: RCB ಅಲ್ಲ, ಬಲಿಷ್ಠ ತಂಡವನ್ನು ಹೆಸರಿಸಿದ ಅಕ್ಷರ್ ಪಟೇಲ್

ಇದಾಗ್ಯೂ ಫೀಲ್ಡ್ ಅಂಪೈರ್​ಗಳು ತೀರ್ಪನ್ನು ಬದಲಿಸಲು ಮುಂದಾಗಲೇ ಇಲ್ಲ. ಇದೀಗ ಈ ಈ ವಿವಾದಾತ್ಮಕ ತೀರ್ಪಿನ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಮುಂದುವರೆದಿದೆ.

Source link

Exit mobile version