Headlines

ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ: ಅಧಿಕಾರಿಗಳಿಗೆ ಸಿಎಂ ಕೊಟ್ಟ ಸೂಚನೆಗಳೇನು? – Kannada News | CM DK Shivakumar gives Some suggestions about guarantee schemes, here Is Meeting Details

ಬೆಂಗಳೂರು, (ಜೂನ್ 19): ವಿಧಾನಸೌಧದಲ್ಲಿಂದು (ಜೂನ್ 19) ನಡೆದ ಗ್ಯಾರಂಟಿ ಯೋಜನೆಗಳ (guarantee schemes) ಅನುಷ್ಠಾನದ ಹಿರಿಯ ಅಧಿಕಾರಿಗಳು ಹಾಗೂ ಸಚಿವರ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿರುವ ಒಬ್ಬನೇ ಒಬ್ಬ ಅರ್ಹ ಫಲಾನುಭವಿಗೂ ತೊಂದರೆಯಾಗಬಾರದು. ಆದರೆ, ಯೋಜನೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಅನರ್ಹರಿಗೆ ಮಾತ್ರ ತಕ್ಷಣವೇ ಬ್ರೇಕ್ ಹಾಕಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮರಣ ಹೊಂದಿದ ಫಲಾನುಭವಿಗಳ ವಿವರಗಳು ಸಕಾಲದಲ್ಲಿ…

Read More

15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಶಾಸಕ ಎಚ್​ಸಿ ಬಾಲಕೃಷ್ಣ ಸವಾಲು – Kannada News | Farmers to Get Compensation Within 15 Days or I’ll retire from Politics: MLA HC Balakrishna

ರಾಮನಗರ, ಜೂನ್​​ 19: ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಕೆಲ ರೈತರು ತಮ್ಮ ಜಮೀನುಗಳನ್ನು ಯೋಜನೆಗೆ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ರಾಮನಗರದ ಜಿಬಿಡಿಎ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಮತ್ತು ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್​​ ಭೂಸ್ವಾಧೀನಕ್ಕೆ ಒಪ್ಪಿದ ರೈತರಿಗೆ ಪರಿಹಾರ ಚೆಕ್‌ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಾಲಕೃಷ್ಣ, ನಮ್ಮ ವಿರೋಧಿಗಳು ಪರಿಹಾರ ನೀಡಲು ಹಣವಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದರು. ಅದಕ್ಕೆ ನಾವು ಇಂದು ಪರಿಹಾರ…

Read More

ಯಮ ಪಾಶದಂತೆ ಹಾರಿ ಬಂದ ಓಮ್ನಿ: ಪಾದಚಾರಿಗಳ ಮೇಲೆ ಎರಗಿದ ಭಯಾನಕ ದೃಶ್ಯ

ಬೆಳ್ತಂಗಡಿ, ಏ.13: ತಾಲೂಕಿನ ಕೊಡಬೈಲು ಎಂಬಲ್ಲಿ ಭಾನುವಾರ ಮಧ್ಯಾಹ್ನ ಅತೀ ವೇಗವಾಗಿ ಬಂದ ಓಮ್ನಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಪಾದಚಾರಿಗಳ ಮೇಲೆ ಉರುಳಿ ಬಿದ್ದಿರುವ ಭೀಕರ ಘಟನೆ ನಡೆದಿದೆ. ಈ ಘಟನೆಯಲ್ಲಿ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಬೊಲೆರೋ ಜೀಪ್‌ನಿಂದ ಇಳಿದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅತೀ ವೇಗವಾಗಿ ಬಂದ ಮಾರುತಿ ಓಮ್ನಿ ಕಾರು, ತೀಕ್ಷ್ಣವಾದ ತಿರುವಿನಲ್ಲಿ ನಿಯಂತ್ರಣ…

Read More

ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ ಆಗಿದ್ದೇನು? ವಿಡಿಯೋ

ತಮಿಳು ಚಿತ್ರರಂಗದ (Tamil Industry) ಜನಪ್ರಿಯ ನಾಯಕ ನಟರಲ್ಲಿ ಒಬ್ಬರಾಗಿರುವ ಜಯಂ ರವಿ ಸುದ್ದಿಗೋಷ್ಠಿ ನಡೆಸಿದ್ದು, ಸುದ್ದಿಗೋಷ್ಠಿಯಲ್ಲಿ ತೀವ್ರ ಆಕ್ರೋಶ ಹೊರಹಾಕಿ ಕಣ್ಣೀರು ಸಹ ಹಾಕಿದ್ದಾರೆ. ತಮಗೆ ತಮ್ಮ ಪತ್ನಿ ಆರತಿಯಿಂದ ವಿಚ್ಛೇದನ ಸಿಗುವವರೆಗೆ ಯಾವ ಸಿನಿಮಾನಲ್ಲೂ ನಟಿಸುವುದಿಲ್ಲ ಎಂದಿದ್ದಾರೆ. ಅಷ್ಟಕ್ಕೂ ಜಯಂ ರವಿ ಜೀವನದಲ್ಲಿ ಆಗಿರುವುದೇನು? ಇಂದಿನ ಅವರ ಈ ಭಾವುಕ ಆಕ್ರೋಶಕ್ಕೆ ಕಾರಣವೇನು? ಜೊತೆಗಿದ್ದ ಗೆಳತಿಯ ಕತೆ ಏನಾಯ್ತು? ವಿವರ ಇಲ್ಲಿದೆ, ವಿಡಿಯೋ ನೋಡಿ… ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ   Source…

Read More

ಸೇನೆಗೆ ಡ್ರೋನ್ ಪೂರೈಸುವ ಸಂಸ್ಥೆಗೆ ಕರ್ನಾಟಕ ಪೊಲೀಸರ ಕಿರುಕುಳ; ಹೈಕೋರ್ಟ್​ ಗರಂ! – Kannada News | Karnataka HC Slams Police for Harassing Bengaluru Drone Firm; Seeks Explanation

ಸೇನೆಗೆ ಡ್ರೋನ್ ಪೂರೈಸುವ ಸಂಸ್ಥೆಗೆ ಕರ್ನಾಟಕ ಪೊಲೀಸರ ಕಿರುಕುಳ ಬೆಂಗಳೂರು, ಫೆಬ್ರುವರಿ 06: ಸೇನೆಗೆ ಡ್ರೋನ್ ಪೂರೈಸುವ ಬೆಂಗಳೂರಿನ ನ್ಯೂ ಸ್ಪೇಸ್ ರಿಸರ್ಚ್ ಟೆಕ್ ಸಂಸ್ಥೆಗೆ ಪೊಲೀಸರಿಂದ ಕಿರುಕುಳ ನೀಡಲಾಗಿದೆ ಎಂದು ಆರೋಪದ ಸಂಬಂಧ ಪ್ರಕರಣ ಕೋರ್ಟ್​ ಮೆಟ್ಟಿಲೇರಿದ್ದು, ಇದಕ್ಕೆ ಹೈಕೋರ್ಟ್​, ಪೊಲೀಸರಿಂದ ವಿವರಣೆ ಕೇಳಿದೆ. ಡ್ರೋನ್ ಮಾದರಿಯ ಪರೀಕ್ಷಾ ಹಾರಾಟದ ವಿಷಯದಲ್ಲಿ ಸಂಸ್ಥೆಯನ್ನು ಸತಾಯಿಸಿದ್ದ  ಕಾರಣ ಸಂಸ್ಥೆ ಕರ್ನಾಟಕ ಹೈಕೋರ್ಟ್‌ನಲ್ಲಿ (High Court) ರಿಟ್ ಅರ್ಜಿ ಸಲ್ಲಿಸಿತ್ತು. ಈ ವಿಚಾರವಾಗಿ ನ್ಯಾ. ನಾಗಪ್ರಸನ್ನ ಅವರ ಪೀಠ, …

Read More

ಬಲೂಚಿಸ್ತಾನದ ಗಣಿಯಲ್ಲಿ ಉಗ್ರರ ದಾಳಿ; ಟರ್ಕಿಶ್ ಪ್ರಜೆ ಸೇರಿದಂತೆ 10 ಜನ ಸಾವು – Kannada News | 10 workers killed in deadly terror attack at Balochistan mining site

ಬಲೂಚಿಸ್ತಾನ್, ಏಪ್ರಿಲ್ 23: ಪಾಕಿಸ್ತಾನದ ಬಲೂಚಿಸ್ತಾನ್ (Balochistan) ಪ್ರಾಂತ್ಯದಲ್ಲಿ ತಾಮ್ರ ಮತ್ತು ಚಿನ್ನದ ಗಣಿಗಾರಿಕೆ ಸ್ಥಳದಲ್ಲಿ ಭಯೋತ್ಪಾದಕರು ಗುರಿಯಿಟ್ಟು ದಾಳಿ ನಡೆಸಿದ ನಂತರ 10 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ಘಟನೆಯು ಈ ಪ್ರದೇಶದ ದುರ್ಬಲ ಭದ್ರತಾ ಪರಿಸ್ಥಿತಿಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ನ್ಯಾಷನಲ್ ರಿಸೋರ್ಸಸ್ ಲಿಮಿಟೆಡ್ ಗಣಿಗಾರಿಕೆ ಕಾರ್ಯಾಚರಣೆಗಳನ್ನು ನಡೆಸುವ ಚಾಗೈ ಜಿಲ್ಲೆಯ ದರಿಗ್ವಾನ್ ಸ್ಥಳದಲ್ಲಿ ಈ ದಾಳಿ ನಡೆದಿದೆ. “ಘಟನೆಯಲ್ಲಿ ಟರ್ಕಿಶ್ ಪ್ರಜೆ, 6 ಕಾರ್ಮಿಕರು ಮತ್ತು ಮೂವರು ಕಾವಲುಗಾರರು…

Read More

5 ತಿಂಗಳಲ್ಲಿ 3 ಮದುವೆಯಾಗಿ ವಂಚಿಸಿದ ಕಿಲಾಡಿ ಮಹಿಳೆ, ದೇವಸ್ಥಾನಕ್ಕೆ ಹೋದ್ರೆ ವಾಪಸ್ ಬರ್ತಿರ್ಲಿಲ್ಲ – Kannada News | Himachal Marriage Fraud: Woman Cheats 3 Men in 5 Months, Police Issue Warning

ಹಮೀರ್​ಪುರ, ಜೂನ್ 15: ಐದು ತಿಂಗಳಲ್ಲಿ ಮೂರು ಮದುವೆ(Marriage)ಯಾಗಿ ಮಹಿಳೆಯೊಬ್ಬಳು ಪರಾರಿಯಾಗಿರುವ ಘಟನೆ ಹಿಮಾಚಲ ಪ್ರದೇಶದ ಹಮೀರ್​ಪುರದಲ್ಲಿ ನಡೆದಿದೆ. ಶೀತಲ್ ಎಂಬ ಮಹಿಳೆ ಕೇವಲ ಐದು ತಿಂಗಳೊಳಗೆ ಮೂವರು ವ್ಯಕ್ತಿಗಳನ್ನು ಮದುವೆಯಾಗಿ, ಸುಳ್ಳು ನೆಪಗಳನ್ನು ಹೇಳಿ ಪರಾರಿಯಾಗಿದ್ದಾಳೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಸಾರ್ವಜನಿಕರ ಹಿತದೃಷ್ಟಿಯಿಂದ ಪೊಲೀಸರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಸಂತ್ರಸ್ತ ಕುಟುಂಬಗಳು ನೀಡಿದ ಅಧಿಕೃತ ದೂರಿನ ಮೇರೆಗೆ ಸಂಬಂಧಿತ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದ್ದು, ಇಡೀ ಜಾಲವನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ…

Read More

13 ಸಿಕ್ಸ್​, 5 ಫೋರ್​: ದಾಖಲೆಯ ಸೆಂಚುರಿ ಸಿಡಿಸಿದ ನಿಕೋಲಸ್ ಪೂರನ್ – Kannada News | Nicholas Pooran smashes 31 ball century in MLC 2026

ಇದಕ್ಕೂ ಮುನ್ನ ಈ ದಾಖಲೆ ಫಿನ್ ಅಲೆನ್ ಹೆಸರಿನಲ್ಲಿತ್ತು. 2025 ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ಪರ ಕಣಕ್ಕಿಳಿದಿದ್ದ ಫಿನ್ ಅಲೆನ್, ವಾಷಿಂಗ್ಟನ್ ಫ್ರೀಡಂ ವಿರುದ್ಧ ಕೇವಲ 34 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಮೂಲಕ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಸ್ಫೋಟಕ ಸೆಂಚುರಿ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದರು. (PC: MLC) Source link

Read More

ಹೀರೋ ಆಗಬೇಕೆಂಬ ಕನಸು ಈಡೇರಿಸಿಕೊಂಡ ರೈತ ಚೇತನ್: ವಿಡಿಯೋ – Kannada News | Yuva Raitha Chethan talks about his movie Devi

ಯುವ ರೈತ ಚೇತನ್, ‘ದೇವಿ’ (Devi) ಸಿನಿಮಾನಲ್ಲಿ ನಾಯಕರಾಗಿ ನಟಿಸಿದ್ದಾರೆ. ನಾಯಕ ನಟ ಆಗಬೇಕು ಎಂಬುದು ಅವರ 10 ವರ್ಷದ ಕನಸಂತೆ. ಆ ಕನಸನ್ನು ‘ದೇವಿ’ ಸಿನಿಮಾ ಮೂಲಕ ಈಡೇರಿಸಿಕೊಂಡಿದ್ದಾರೆ. ಸಿನಿಮಾದ ಪ್ರಚಾರಾರ್ಥ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಚೇತನ್, ತಾವು ನಟ ದರ್ಶನ್ ಅವರ ಅಭಿಮಾನಿ ಆಗಿದ್ದು, ಅವರನ್ನು ನೋಡಿ ಸಿನಿಮಾ ಹೀರೋ ಆಗಬೇಕೆಂಬ ಕನಸು ಮೂಡಿತ್ತು ಎಂದು ಹೇಳಿದ್ದಾರೆ. ಯುವ ರೈತ ಎಂದು ತಮ್ಮನ್ನು ಕರೆದುಕೊಳ್ಳು ಚೇತನ್ ಚಿತ್ರರಂಗದ ಬಗ್ಗೆ, ತಮ್ಮ ಸಿನಿಮಾ ‘ದೇವಿ’…

Read More

GBA 1KmChallenge: ಬೆಂಗಳೂರಲ್ಲಿ ಮಾಲಿನ್ಯ ತಡೆಯಲು ಜಿಬಿಎ ಮಾಸ್ಟರ್ ಪ್ಲಾನ್; ಮೊದಲು ಫುಟ್‌ಪಾತ್ ಸರಿ ಮಾಡಿ ಎಂದ ಜನ!

ಬೆಂಗಳೂರಲ್ಲಿ ಮಾಲಿನ್ಯ ತಡೆಯಲು ಜಿಬಿಎ ಮಾಸ್ಟರ್ ಪ್ಲಾನ್ ಬೆಂಗಳೂರು, ಜೂನ್ 02: ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ವಾಯು ಮಾಲಿನ್ಯಕ್ಕೆ ಬ್ರೇಕ್ ಹಾಕಲು ‘ಗ್ರೇಟರ್ ಬೆಂಗಳೂರು ಅಥಾರಿಟಿ’ (GBA) ಒಂದು ವಿಶಿಷ್ಟ ಪರಿಸರಸ್ನೇಹಿ ಅಭಿಯಾನಕ್ಕೆ ಚಾಲನೆ ನೀಡಿದೆ. ಜೂನ್ ತಿಂಗಳ ಪೂರ್ತಿ ನಡೆಯಲಿರುವ ಈ ಅಭಿಯಾನಕ್ಕೆ #1KmChallenge (ಒಂದು ಕಿಲೋಮೀಟರ್ ಚಾಲೆಂಜ್) ಎಂದು ಹೆಸರಿಡಲಾಗಿದ್ದು, 1 ಕಿಲೋಮೀಟರ್ ವ್ಯಾಪ್ತಿಯ ಸಂಚಾರಕ್ಕೆ ವಾಹನ ಬಳಸಬೇಡಿ, ನಡೆದುಕೊಂಡು ಹೋಗಿ ಎಂದು ಜಿಬಿಎ ಜನರಲ್ಲಿ ಮನವಿ ಮಾಡಿದೆ. ಮುಖ್ಯಾಂಶಗಳು ಬೆಂಗಳೂರಿನಲ್ಲಿ…

Read More