“ಥ್ಯಾಂಕ್ಯೂ ಫ್ರೆಂಡ್ಸ್”: ಮತ್ತೊಂದು ಮಹತ್ವದ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ – Kannada News | Midnight Address: PM Modi Thanks Youth Following NEET Controversy

ದೆಹಲಿ, ಜು.25: ದೇಶದಲ್ಲಿ ನೀಟ್ ಪರೀಕ್ಷಾ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಮಧ್ಯರಾತ್ರಿ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಈ ಹಿಂದೆಯೂ ಒಂದು ವಿಡಿಯೋ ಮೂಲಕ ಸಂದೇಶ ನೀಡಿದ್ದ ಪ್ರಧಾನಿ, ಈಗ “ಥ್ಯಾಂಕ್ಯೂ ಫ್ರೆಂಡ್ಸ್” ಎಂದು ಹೇಳುವ ಮೂಲಕ ಯುವಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ತಮ್ಮ ಹೊಸ ಸಂದೇಶದಲ್ಲಿ, ಪ್ರಧಾನಿ ಮೋದಿ ಅವರು ಹಿಂದಿನ ವಿಡಿಯೋಗೆ ದೊರೆತ ಪ್ರತಿಕ್ರಿಯೆಗಳ ಬಗ್ಗೆ ಉಲ್ಲೇಖಿಸಿದ್ದಾರೆ. “ನಿನ್ನೆ ನಿಮ್ಮನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ನನ್ನ ವಿಡಿಯೋಗೆ ನೀವು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು” ಎಂದು ಅವರು ಹೇಳಿದ್ದಾರೆ. ಅಲ್ಲದೆ, “ಸಕಾರಾತ್ಮಕ ಸಲಹೆಗಳನ್ನು ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು. ನಿಮ್ಮ ಪ್ರೀತಿಯಿಂದ ನಮ್ಮ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗುತ್ತದೆ. ಯುವಕರೇ, ಎಲ್ಲರಿಗೂ ಧನ್ಯವಾದ” ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಈ ಸಂದೇಶವು ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ಮತ್ತು ರಾಜಕೀಯ ಪಕ್ಷಗಳಿಂದ ನಡೆಯುತ್ತಿರುವ ಪ್ರತಿಭಟನೆಗಳ ಸಮಯದಲ್ಲಿ ಬಂದಿರುವುದು ಗಮನಾರ್ಹವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ ಬಾಕ್ಸ್ ಆಫೀಸ್‌ ಕಲೆಕ್ಷನ್; ಎರಡನೇ ದಿನ ದೊಡ್ಡ ಕುಸಿತ ಕಂಡ ವಿಜಯ್ ಸಿನಿಮಾ – Kannada News | Jana Nayagan Box Office Day 2 Vijay Starrer Faces Massive 50 Drop Despite Crossing 100 Cr Globally

ಭಾರೀ ನಿರೀಕ್ಷೆ ಮೂಡಿಸಿ ತೆರೆಕಂಡಿದ್ದ ‘ಜನ ನಾಯಗನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎರಡನೇ ದಿನವೇ ಅತಿ ದೊಡ್ಡ ಹಿನ್ನಡೆ ಅನುಭವಿಸಿದೆ. ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನದ ಗಳಿಕೆಯಲ್ಲಿ ದೊಡ್ಡ ಕುಸಿತ ಕಂಡಿದ್ದು, ಚಿತ್ರತಂಡಕ್ಕೆ ಭಾರೀ ಆತಂಕ ಮೂಡಿಸಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡುತ್ತದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ.

ಮೊದಲ ದಿನವಾದ ಗುರುವಾರ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಂಡು 42.70 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದ್ದ ‘ಜನ ನಾಯಗನ್’ ಸಿನಿಮಾ, ಎರಡನೇ ದಿನವಾದ ಶುಕ್ರವಾರ ಕೇವಲ 21.15 ಕೋಟಿ ರೂಪಾಯಿ ಮಾತ್ರ ಗಳಿಸಲು ಶಕ್ತವಾಗಿದೆ. ಅಂದರೆ ಕೇವಲ ಒಂದೇ ದಿನದಲ್ಲಿ ಚಿತ್ರದ ಗಳಿಕೆ ಶೇಕಡಾ 50 ಕ್ಕಿಂತಲೂ ಹೆಚ್ಚು ಕುಸಿದಂತಾಗಿದೆ. ಇದರೊಂದಿಗೆ ಚಿತ್ರದ ಶೋಗಳ ಸಂಖ್ಯೆಯೂ 13,067 ರಿಂದ 12,190 ಕ್ಕೆ ಇಳಿಕೆಯಾಗಿದೆ. ಥಿಯೇಟರ್‌ ಆಕ್ಯುಪೆನ್ಸಿ ಕೂಡ ಶೇ. 41.6 ರಿಂದ ಶೇ. 29.5 ಕ್ಕೆ ಪಲ್ಟಿಯಾಗಿದೆ.

ಸದ್ಯಕ್ಕೆ ಎರಡು ದಿನಗಳ ಪ್ರದರ್ಶನದಿಂದ ಭಾರತದಲ್ಲಿ ಒಟ್ಟು 63.85 ಕೋಟಿ ರೂಪಾಯಿ ನೆಟ್ ಹಾಗೂ 75.00 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. ಇನ್ನು ವಿದೇಶಿ ಮಾರುಕಟ್ಟೆಯಲ್ಲಿ ಎರಡನೇ ದಿನ 10.00 ಕೋಟಿ ರೂಪಾಯಿ ಗಳಿಸಿರುವ ಸಿನಿಮಾ, ಅಲ್ಲಿನ ಒಟ್ಟು ಗಳಿಕೆಯನ್ನು 37.50 ಕೋಟಿಗೆ ಕೊಂಡೊಯ್ದಿದೆ. ಈ ಮೂಲಕ ಜಾಗತಿಕವಾಗಿ ಚಿತ್ರದ ಗ್ರಾಸ್ ಕಲೆಕ್ಷನ್ 112.50 ಕೋಟಿ ರೂಪಾಯಿ ತಲುಪಿದಂತಾಗಿದೆ.

ಎರಡು ದಿನಕ್ಕೆ 100 ಕೋಟಿ ರೂಪಾಯಿ ಕ್ಲಬ್ ಸೇರೋದು ಎಂದರೆ ಅದು ತಮಾಷೆಯ ವಿಷಯ ಅಲ್ಲ. ಆದರೆ, ಸಿನಿಮಾದ ಒಟ್ಟಾರೆ ಬಜೆಟ್​ಗೆ ಹೋಲಿಕೆ ಮಾಡಿದರೆ ಈ ಗಳಿಕೆ ತೀರಾ ಕಮ್ಮಿ ಎನಿಸುತ್ತಿದೆ. ಎರಡನೇ ದಿನವೂ ತಮಿಳು ಭಾಷೆಯಲ್ಲೇ ಹೆಚ್ಚಿನ ಗಳಿಕೆ ಆಗಿದೆ.

ಇದನ್ನೂ ಓದಿ: ‘ಜನ ನಾಯಗನ್’ ನೋಡಿ ಸಂಭ್ರಮಿಸಿದ ನಟ ರವಿ ಮೋಹನ್: ತಮಿಳುನಾಡು ಸಚಿವರ ಕಣ್ಣೀರು

ಮೂಲಗಳ ಪ್ರಕಾರ ‘ಜನ ನಾಯಗನ್’ ಚಿತ್ರದ ಬಜೆಟ್ ಬರೋಬ್ಬರಿ 300 ರಿಂದ 500 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇಷ್ಟು ಬೃಹತ್ ಮೊತ್ತವನ್ನು ಹೂಡಿಕೆ ಮಾಡಿರುವ ಕಾರಣ, ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅತಿ ದೊಡ್ಡ ಮಟ್ಟದ ಗಳಿಕೆ ಮಾಡುವುದು ಅನಿವಾರ್ಯವಾಗಿದೆ. ಶನಿವಾರ ಮತ್ತು ಭಾನುವಾರದ ರಜಾದಿನಗಳಲ್ಲಿ ಸಿನಿಮಾ ಭರ್ಜರಿ ಪಿಕ್‌ಅಪ್ ಕಾಣದೇ ಹೋದರೆ ನಿರ್ಮಾಪಕರಿಗೆ ತೊಂದರೆ ಆಗಬಹುದು.

ಪ್ರಶ್ನೆ:  ಜನ ನಾಯಗನ್ ಸಿನಿಮಾ ಯಾವಾಗ ಬಿಡುಗಡೆ ಆಗಿದೆ
ಉತ್ತರ:
ಜುಲೈ 23

ಪ್ರಶ್ನೆ: ಇದು ವಿಜಯ್ ಕೊನೆ ಚಿತ್ರವೇ? 
ಉತ್ತರ:
ಹೌದು

ಪ್ರಶ್ನೆ: ಎರಡು ದಿನಕ್ಕೆ ಜನ ನಾಯಗನ್ ಗಳಿಸಿದ್ದೆಷ್ಟು?
ಉತ್ತರ: 
112.50 ಕೋಟಿ ರೂಪಾಯಿ

Source link

ಆಷಾಡ ಶುಕ್ಲ ಏಕಾದಶಿ ರಾಶಿಫಲ: ಈ ರಾಶಿಯವರಿಗೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ, ಯಾರಿಗೆ ಗೃಹ-ವಿವಾಹ ಯೋಗ? – Kannada News | Astrological Insights: Dr. Basavaraj Gurujis Daily Forecast for 25 07 2026 and Planetary Effects

ಬೆಂಗಳೂರು, ಜು.25: ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2026ರ ಜುಲೈ 25, ಶನಿವಾರದ ದ್ವಾದಶ ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಆಷಾಡ ಮಾಸ, ಶುಕ್ಲ ಪಕ್ಷದ ಏಕಾದಶಿ ತಿಥಿಯ ಈ ದಿನ, ಜೇಷ್ಠ ನಕ್ಷತ್ರ ಮತ್ತು ವೈದೃತಿ ಯೋಗವಿದೆ. ಈ ದಿನವನ್ನು ದೇವಶಯನಿ ಏಕಾದಶಿ ಎಂದು ಆಚರಿಸಲಾಗುತ್ತಿದ್ದು, ಚಾತುರ್ಮಾಸ ವ್ರತದ ಪೂರ್ವತಯಾರಿಗೆ ವಿಶೇಷವಾಗಿದೆ. ಉಡುಪಿ ಸೇರಿದಂತೆ ಅನೇಕ ಮಠಗಳಲ್ಲಿ ತಪ್ತ ಮುದ್ರಾ ಧಾರಣೆಯಂತಹ ಮಹತ್ವದ ಕಾರ್ಯಗಳು ನಡೆಯುತ್ತವೆ. ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ವೃಶ್ಚಿಕ ರಾಶಿಯ ಜೇಷ್ಠ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ. ಮೇಷ ರಾಶಿಯವರಿಗೆ ಆರ್ಥಿಕವಾಗಿ ಆದಾಯ ಹೆಚ್ಚಳ, ರೈತರು, ವ್ಯಾಪಾರಸ್ಥರು, ಉದ್ಯಮಿಗಳಿಗೆ ಶುಭ, ಹಳೆ ಬಾಕಿ ವಸೂಲಿ ಆಗುವ ಸಾಧ್ಯತೆಗಳಿವೆ. ವೃಷಭ ರಾಶಿಯವರಿಗೆ ಹಣ ಬಂದರೂ ಖರ್ಚು ಹೆಚ್ಚಾಗುವ ಸಂಭವವಿದ್ದು, ಗೃಹ ನಿರ್ಮಾಣ ಯೋಗವಿದೆ. ಮಿಥುನ ರಾಶಿಯವರಿಗೆ ಆರ್ಥಿಕವಾಗಿ ಅನುಕೂಲ, ಆಸ್ತಿ ವಿಚಾರದಲ್ಲಿ ಗೊಂದಲ ನಿವಾರಣೆ. ಕರ್ಕಾಟಕ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ, ವಾಹನ ಯೋಗ. ಸಿಂಹ ರಾಶಿಯವರಿಗೆ ಆದಾಯದಲ್ಲಿ ಏರಿಕೆ, ಕೀರ್ತಿ ಪ್ರತಿಷ್ಠೆ. ಕನ್ಯಾ ರಾಶಿಯವರಿಗೆ ಬುದ್ಧಿವಂತಿಕೆಯಿಂದ ಕಾರ್ಯಸಿದ್ಧಿ, ಕಾನೂನು ವಿಷಯಗಳಲ್ಲಿ ಶುಭ. ತುಲಾ ರಾಶಿಯವರಿಗೆ ಆರ್ಥಿಕ ಲಾಭ, ಹೊಸ ವ್ಯಾಪಾರಕ್ಕೆ ಪ್ರಯತ್ನ. ವೃಶ್ಚಿಕ ರಾಶಿಯವರಿಗೆ ಅರ್ಧಂಬರ್ಧ ಕೆಲಸಗಳು ಪೂರ್ಣ, ವಿವಾಹ ಯೋಗ. ಧನು ರಾಶಿಯವರಿಗೆ ಅದೃಷ್ಟ ಮತ್ತು ದೈವ ಬಲ, ಪೂರ್ವಿಕರ ಆಸ್ತಿ ವಿಚಾರದಲ್ಲಿ ಶುಭ. ಮಕರ ರಾಶಿಯವರಿಗೆ ಯಶಸ್ಸು, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ. ಕುಂಭ ರಾಶಿಯವರಿಗೆ ಅಧಿಕಾರ ಪ್ರಾಪ್ತಿ, ಋಣಭಾದೆಯಿಂದ ಮುಕ್ತಿ. ಮೀನ ರಾಶಿಯವರಿಗೆ ಆರ್ಥಿಕ ಲಾಭ, ಧರ್ಮ ಕಾರ್ಯಗಳಲ್ಲಿ ಭಾಗಿ. ಈ ದಿನ ಪ್ರತಿಯೊಂದು ರಾಶಿಯವರಿಗೂ ಆಯಾ ಗ್ರಹಸ್ಥಿತಿಗೆ ಅನುಗುಣವಾಗಿ ಶುಭ, ಅದೃಷ್ಟದ ಸಂಖ್ಯೆ, ಬಣ್ಣ ಮತ್ತು ಜಪಿಸಬೇಕಾದ ಮಂತ್ರಗಳನ್ನು ಗುರೂಜಿ ತಿಳಿಸಿದ್ದಾರೆ. ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಹಳೆಯದನ್ನು ಮರೆತು ಮುನ್ನಡೆದರೆ ಶ್ರೇಯಸ್ಸು… – Kannada News | Daily Horoscope for July 25, 2026: Uttarayan Greeshma season, Ashada Masa shukla Paksha Satursday astrology Prediction

ಮೇಷ ರಾಶಿ:

ಆಹಾರದ ಉದ್ಯಮಕ್ಕೆ ಹೊಸ ತಿರುವು ಕೊಡಬಹುದು. ಅತ್ಯಂತ ಶ್ರಮವಹಿಸಿ ಕಾರ್ಯವನ್ನು ಮಾಡಲಿದ್ದೀರಿ. ಸಕಾರಾತ್ಮಕ ಚಿಂತನೆಗಳನ್ನು ಪ್ರಯತ್ನಪೂರ್ವಕವಾಗಿ ತಂದುಕೊಳ್ಳಬೇಕಿದೆ. ಸಂಗಾತಿಯನ್ನು ಬಿಟ್ಟಿರುವುದು ಬೇಸರ ತರಿಸಬಹುದು. ಇಂದು ತಿಳಿದು ಕೂಗಾಡಬಹುದು.‌ ವಯೋಮಾನಕ್ಕೆ ಸಹಜವಾದ ಖಾಯಿಲೆಯಿಂದ ಕೊರಗುವಿರಿ. ನೀವು ಇಂದು ಅಸಹಾಯಕರಂತೆ ತೋರುವಿರಿ. ಉಪದೇಶ ನೀಡುವ ಬದಲು ಆಚರಿಸಿದರೆ ಉತ್ತಮ.

ವೃಷಭ ರಾಶಿ:

ಅಚಾತುರ್ಯದಿಂದ ಅನಾಹುತ ಮಾಡಿಕೊಳ್ಳುವಿರಿ. ಆಲಸ್ಯದಿಂದ ಮೇಲೆಳಬೇಕಾದ ಸ್ಥಿತಿ ಇದೆ. ಮನೆಯಲ್ಲಿ ನಿಮಗಾಗಿ ತರದ ವಸ್ತುಗಳನ್ನು ಇಷ್ಟಪಟ್ಟು ಪಡೆಯುವಿರಿ. ನಿಮ್ಮ ವಿಚಾರದಲ್ಲಿ ಬೇರೆಯವರು ಮಧ್ಯಪ್ರವೇಶ ಮಾಡುವರು. ಇದು ನಿಮಗೆ ಬಹಳ ಸಿಟ್ಟನ್ನು ತರಿಸೀತು. ಅದನ್ನು ವ್ಯಕ್ತಪಡಿಸಲು ನೀವು ಸೂಕ್ತ ಸಂದರ್ಭವನ್ನು ಹುಡುಕುವಿರಿ. ಕಳೆದುಕೊಂಡ ಸಂಬಂದವು ಮತ್ತೆ ಚಿಗುರಬಹುದು. ವ್ಯಾಪಾರಸ್ಥರಿಗೆ ಸ್ವಲ್ಪ ಆಲಸ್ಯವು ಇರುವುದು.

ಮಿಥುನ ರಾಶಿ:

ತಂತ್ರಜ್ಞರಿಗೆ ಉತ್ತಮ ಕೆಲಸ ಸಿಗಲಿದೆ. ಭೋಗವಸ್ತುವಿನ ಜೊತೆ ಹೆಚ್ಚು ಕಾಲಕಳೆಯಲು ಬಯಸುವಿರಿ. ಬಂಧುಗಳ ಒಡನಾಟ ಹೆಚ್ಚಾಗುವುದು. ನಿಮ್ಮ ಗುರಿಯ ಬಗ್ಗೆ ಬಲ್ಲವರು ತಿಳಿಸಬಹುದು. ಮನಸ್ಸು ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಹೇಳಿಬಿಡಬಹುದು. ದೈವಿಕ ವಿಘ್ನಗಳಿಗೆ ಅಲೌಕಿಕ ಉಪಾಯದಿಂದ ಪರಿಹಾರ ಸಾಧ್ಯವಾಗಲಿದೆ. ಒಂದೇ ಕೆಲಸದಿಂದ ಎರಡು ಪ್ರಯೋಜನವನ್ನು ಪಡೆಯುವಿರಿ. ಭೂಮಿಯ ವ್ಯವಹಾರವು ಸುಲಭಕ್ಕೆ ಕೈ ಹಿಡಿಯದು.

ಕರ್ಕಾಟಕ ರಾಶಿ:

ಹಣವನ್ನು ಗಳಿಸುವ ಹಂಬಲವು ಅತಿಯಾಗಿದ್ದರೂ ದಾರಿಗಳು ಮಾತ್ರ ಕಾಣಿಸದೇ ಇದ್ದೀತು. ಮರಣಭೀತಿಯು ನಿಮ್ಮನ್ನು ಕಾಡಬಹುದು.‌ ಕೆಟ್ಟ ಆಲೋಚನೆಗಳನ್ನು ಬಿಟ್ಟು ಸರಿಯಾದುದರ ಬಗ್ಗೆ ಗಮನವಿರಲಿ. ಅಲ್ಪಾದಾಯದಲ್ಲಿ ತೃಪ್ತಿಪಡುವಿರಿ. ಕುಟುಂಬದಿಂದ ನಿಮ್ಮ ಬಗ್ಗೆ ಮಹತ್ತರವಾದ ಬದಲಾವಣೆ ಕಾಣಿಸುವುದು. ಸಂಗಾತಿಯ ಆಯ್ಕೆಯನ್ನು ಸರಿಯಾಗಿ ಮಾಡಿಕೊಳ್ಳಿ. ಮಕ್ಕಳು ನಿಮ್ಮ ಕೆಲಸಕ್ಕೆ ತೊಂದರೆ ಕೊಡಬಹುದು.

ಸಿಂಹ ರಾಶಿ:

ಪರಾವಲಂಬನೆಯನ್ನು ಇಂದು ಕಡಿಮೆಮಾಡುವಿರಿ. ಉನ್ನತ ವಿದ್ಯಾಭ್ಯಾಸವು ಕಷ್ಟವೆನಿಸಬಹುದು. ತುಂಬಾ ಕಷ್ಟದಿಂದ ಗಳಿಸಿದ ಹಣವನ್ನು ಖರ್ಚುಮಾಡಲು ಮನಸ್ಸುಬಾರದು. ಹೊರಗಡೆ ಸುತ್ತಾಡಲು ಹೋಗಬಹುದು. ಅಪರಿಚಿತ ಸ್ಥಳದಲ್ಲಿಯೂ ಪರಿಚಿತರ ಭೇಟಿಯಾಗಲಿದೆ. ಇನ್ನೊಬ್ಬರನ್ನು ಅನುಕರಿಸುವ ನಿಮ್ಮ ಸ್ವಭಾವವನ್ನು ಬಿಡುವುದು ಒಳ್ಳೆಯದು. ಕೆಲವು ವಿಚಾರದಲ್ಲಿ ಧೈರ್ಯದ ಕೊರೆತೆ ಕಾಣುವುದು. ನೂತನ ಸ್ನೇಹವನ್ನು ಬೆಳೆಸಿಕೊಳ್ಳುವಿರಿ.

ಕನ್ಯಾ ರಾಶಿ:

ಗೃಹೋಪಯೋಗಿ ವ್ಯಾಪಾರದಲ್ಲಿ ಮಂದಗತಿ ಇರಲಿದೆ. ಯಂತ್ರೋಪಕರಣದ ಮಾರಾಟಗಾರಿಗೆ ಲಾಭವು ಆಗುವುದು. ಕೆಲಸದ ಸ್ಥಳದಲ್ಲಿ ಎಲ್ಲರೂ ನಿಮ್ಮ ಹಿಡಿತದಲ್ಲಿ ಇರಬೇಕು ಎನ್ನುವ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಳ್ಳುವಿರಿ. ಸಂಗಾತಿಯ ಜೊತೆ ಮಾತನಾಡಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ನಿಮ್ಮ ವಿದ್ಯಾಪ್ರಗತಿಯು ಬಹಳ ಯಶಸ್ವಿಯಾಗುವುದು. ನಿಮ್ಮಲ್ಲಿರುವ ಅಲ್ಪ ಹಣವನ್ನು ಸೇರಿಸಿ ಕೊಡಬೇಕಾದವರಿಗೆ ಹಣವನ್ನು ಕೊಡುವಿರಿ.

ತುಲಾ ರಾಶಿ:

ಸಹನೆಯನ್ನು ಕಳೆದುಕೊಳ್ಳುವ ಸಂದರ್ಭದಲ್ಲಿ ನಿಮಗೆ ಎಚ್ಚರಿಕೆ ಇರಲಿ. ಬಹಳ ಆಯಾಸವಾದಂತೆ ಎನಿಸಬಹುದು. ನಿನ್ನೆಯ ಸುಸ್ತಿನಿಂದ ಹೊರಬರಲು ವಿಶ್ರಾಂತಿ ಪಡೆಯುವಿರಿ. ಮಂಗಲಕರವಾದ ಕಾರ್ಯವನ್ನು ಆರಂಭ ಮಾಡಲು ಪ್ರಶಸ್ತ ದಿನ ಎನಿಸುವುದು. ಒಂದೇ ಕೆಲಸದಲ್ಲಿ ಮಗ್ನರಾಗಿ ಮಾಡಬೇಕಾದ ಕೆಲವು ಕೆಲಸವನ್ನು ಮರೆಯುವಿರಿ. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಬೇಕು ಎಂದು ಅನ್ನಿಸಬಹುದು.

ವೃಶ್ಚಿಕ ರಾಶಿ:

ಈಗಿರುವ ಕೆಲಸವನ್ನು ಬಿಟ್ಟು ಸ್ವಂತ ಉದ್ಯೋಗಕ್ಕೆ ಮನಸ್ಸು ಒತ್ತಾಯ ಮಾಡುವುದು. ಅತಿಯಾಗಿ ದೇಹವನ್ನು ದಂಡಿಸಬೇಡಿ. ಹಣವಿದ್ದರೂ ವಾಹನವನ್ನು ಕೊಳ್ಳುವ ಯೋಗ ದೂರವಿದೆ. ವಸ್ತುಗಳ ಕಳ್ಳತನವಾಗಬಹುದು. ಇದೇ ವಿಚಾರಕ್ಕೆ ಮನೆಯಲ್ಲಿ ಕಲಹವಾದೀತು. ವೈಯಕ್ತಿಕ ವಿಚಾರಕ್ಕೆ ಯಾರನ್ನೂ ಸೇರಿಸಿಕೊಳ್ಳಲು ಬಯಸುವುದಿಲ್ಲ. ಯಾರನ್ನಾದರೂ ಗೆಳೆಯರನ್ನಾಗಿ ಮಾಡಿಕೊಳ್ಳುವಿರಿ. ಆದಾಯಕ್ಕೆ ಯಾರಿಂದಲಾದರೂ ಅಡ್ಡಿಯಾಗಿ, ಸಿಟ್ಟುಗೊಳ್ಳುವಿರಿ.

ಧನು ರಾಶಿ:

ಆಸ್ತಿಯ ವಿಚಾರದಲ್ಲಿ ನಿಮಗೆ ಅಕ್ಕಪಕ್ಕದವರ ಜೊತೆ ಅಸಮಾಧಾನ ವ್ಯಕ್ತವಾಗುವುದು. ಸಂಗಾತಿಯ ಜೊತೆ ಸಂತೋಷ ಕೂಟದಲ್ಲಿ ಭಾಗವಹಿಸುವಿರಿ. ಸ್ನೇಹಿತರಿಂದ ಹಣವನ್ನು ಸಾಲವಾಗಿಯೂ ಒಡೆಯಬಹುದು. ಸುವ್ಯವಸ್ಥಿತ ಭವಿಷ್ಯದ ಕನಸು ಕಾಣುವಿರಿ. ಅಸ್ಥಿರವಾದ ವ್ಯವಸ್ಥೆಯು ಕಿರಿಕಿರಿಯನ್ನು ಉಂಟುಮಾಡಬಹುದು. ಸಂಗಾತಿಯ ಆಯ್ಕೆಯಲ್ಲಿ ನಿಮಗೆ ಅನೇಕ ಗೊಂದಲಗಳು ಬರುವುದು.

ಮಕರ ರಾಶಿ:

ನಿಮ್ಮ ಸಂತೋಷ ಅನ್ಯರ ಹಸ್ತದಲ್ಲಿ ಇಲ್ಲ ಎಂಬುದು ಗೊತ್ತಾಗಲಿ. ಕುಟುಂಬದವರ ಮಾತಿನ ಅಲಕ್ಷ್ಯದಿಂದ ನಿಮಗೆ ಸಮಸ್ಯೆಯಾದೀತು. ಹಿರಿಯರಿಗೆ ತೊಂದರೆಯನ್ನು ಕೊಡಲು ಹೋಗಬೇಡಿ. ಇಂದು ನಿಮ್ಮ ಭಾರ ಇಳಿಯಿತು ಎಂಬ ಹರ್ಷೋದ್ಗಾರ ಬೇಡ. ಮತ್ತೊಂದು ನಿಮ್ಮ ಹೆಗಲೇರುವ ಸಾಧ್ಯತೆ ಇದೆ. ನೀವು ಬಯಸಿದ ವಸ್ತುವು ಅನಾಯಾಸವಾಗಿ ದೊರೆಯುವುದು. ಒಬ್ಬರೇ ಎಲ್ಲಿಯಾದರೂ ಸುತ್ತಾಟ ಮಾಡಬಹುದು. ಅನವಶ್ಯಕವಾದ ಚಿಂತನೆಯಿಂದ ಆತ್ಮವಿಶ್ವಾಸವನ್ನು ನೀವೇ ಹಾಳುಮಾಡಿಕೊಳ್ಳುವಿರಿ.

ಇದನ್ನೂ ಓದಿ: ವಾರದ ಪ್ರೇಮ – ಪ್ರೀತಿ ಭವಿಷ್ಯ: ಜುಲೈ 19 ರಿಂದ 25 ರವರೆಗೆ ಪ್ರಮುಖ ಗ್ರಹಗಳ ಸಂಚಾರ; ನಿಮ್ಮ ಪ್ರೇಮ ಜೀವನದ ಮೇಲಾಗುವ ಪ್ರಭಾವ ಇಲ್ಲಿದೆ

ಕುಂಭ ರಾಶಿ:

ದುಃಖದಿಂದ ಇದ್ದವರಿಗೆ ಆಪ್ತರ ಜೊತೆ ಮಾತುಕತೆಗಳು ಆಗಬಹುದು. ಬಯಕೆಯನ್ನು ಬಹಳ ಬಲವಾಗಿ ಹಿಡಿದಿಟ್ಟುಕೊಳ್ಳುವಿರಿ. ತೊಂದರೆಯನ್ನು ತೆಗೆದುಕೊಳ್ಳದೇ ಕೆಲಸವನ್ನು ಮುಗಿಸುವ ಮಾನಸಿಕ ಸ್ಥಿತಿಯನ್ನು ಹೊಂದಿದ್ದೀರಿ. ಇಂದು ನಿಮ್ಮ ಪರೀಕ್ಷೆಯ ಕಾಲವಾಗಿದ್ದು ಸ್ಥೈರ್ಯವು ಕಡಿಮೆ ಆಗುವುದು. ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡಬಹುದು. ಯಾವುದೇ ಪ್ರಭಾವಕ್ಕೆ ಒಳಗಾಗದೆ ಸ್ವಂತ ನಿರ್ಧಾರಕ್ಕೆ ಬದ್ಧರಾಗುವಿರಿ.

ಮೀನ ರಾಶಿ:

ಕಡಿಮೆ ವೆಚ್ಚದಲ್ಲಿ ಹೆಚ್ಚು ಸಂಪಾದಿಸುವ ಯೋಜನೆಯನ್ನು ಹಾಕಿಕೊಳ್ಳುವುದಕ್ಕೆ ಎಲ್ಲಿಂದಲಾದರೂ ನಿಮಗೆ ಐಡಿಯಾ ಸಿಗಬಹುದು. ಬೇಡದ ಯೋಚನೆಗಳೇ ನಿಮ್ಮ ತಲೆಯಲ್ಲಿ ಸುತ್ತಬಹುದು. ನಿಮ್ಮದೇ ಮನಸ್ಸಾದರೂ ನಿಮ್ಮ ಮಾತನ್ನು ಕೇಳದೇ ಇದ್ದೀತು. ನೀವು ಅಂದು ಕೊಂಡ ವಿಚಾರಗಳು ನಿಮ್ಮಿಂದ ಆಗಿಲ್ಲ ಎಂಬ ಬೇಸರವು ಉಂಟಾದೀತು. ಪ್ರೀತಿಪಾತ್ರರಿಗೆ ಸಮಯ ವ್ಯರ್ಥ ಮಾಡುವಿರಿ. ನಿಮ್ಮ ಪ್ರೇಮವು ಇಂದು ಯಾರಿಂದಲೋ ಬಹಿರಂಗವಾಗುವುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುಷ್ಯಾ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ವೈಧೃತಿ, ಕರಣ : ಬವ, ಸೂರ್ಯೋದಯ – 06 – 04 am, ಸೂರ್ಯಾಸ್ತ – 06 – 47 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:15 – 10:15, ಯಮಗಂಡ ಕಾಲ 14:15 – 15:37 ಗುಳಿಕ ಕಾಲ 06:05 – 07:40

– ಲೋಹಿತ್ ಹೆಬ್ಬಾರ್-8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಷ್ಯಾದ ಬಳಿ ವಾಣಿಜ್ಯ ಹಡಗಿನ ಮೇಲೆ ದಾಳಿ; ಭಾರತೀಯ ನಾವಿಕ ಸಾವಿಗೆ ಭಾರತ ಖಂಡನೆ – Kannada News | Indian sailor killed in strike on commercial vessel in Black Sea near Russia MEA condemns attack

ನವದೆಹಲಿ, ಜುಲೈ 24: ರಷ್ಯಾ ಮತ್ತು ಉಕ್ರೇನ್ (Russia-Ukraine War) ನಡುವೆ ನಿರಂತರವಾಗಿ ನಡೆಯುತ್ತಿರುವ ಸಂಘರ್ಷದ ನಡುವೆಯೇ ರಷ್ಯಾಕ್ಕೆ ಹತ್ತಿರವಿರುವ ಕಪ್ಪು ಸಮುದ್ರದ ಜಲಪ್ರದೇಶದಲ್ಲಿ ವಾಣಿಜ್ಯ ಹಡಗೊಂದರ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ನಾವಿಕರೊಬ್ಬರು ದುರಂತವಾಗಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಹಡಗಿನಲ್ಲಿದ್ದ ಉಳಿದ ಇಬ್ಬರು ಭಾರತೀಯ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (MEA) ದೃಢಪಡಿಸಿದೆ. ಹಾಗೇ, ಭಾರತೀಯ ನಾವಿಕನ ಸಾವಿಗೆ ತೀವ್ರ ಖಂಡನೆ ವ್ಯಕ್ತಪಡಿಸಿದೆ.

ಮಾರ್ಷಲ್ ಐಲ್ಯಾಂಡ್ಸ್‌ನ ಧ್ವಜ ಹೊಂದಿದ್ದ ‘ಎಮ್‌ವಿ ಒಮೊರ್ಫಿ’ ಎಂಬ ವಾಣಿಜ್ಯ ಹಡಗು ರಷ್ಯಾದ ವ್ಯಾಪ್ತಿಯಲ್ಲಿ ಪ್ರಯಾಣಿಸುತ್ತಿದ್ದಾಗ ಈ ದಾಳಿ ಸಂಭವಿಸಿದೆ. ಹಡಗಿನಲ್ಲಿ ಒಟ್ಟು ಸಿಬ್ಬಂದಿಯ ಪೈಕಿ ಮೂವರು ಭಾರತೀಯರಿದ್ದರು. ಈ ದಾಳಿಯಲ್ಲಿ ಒಬ್ಬ ಭಾರತೀಯ ನಾವಿಕ ಪ್ರಾಣ ಕಳೆದುಕೊಂಡಿದ್ದು, ಉಳಿದ ಇಬ್ಬರು ಭಾರತೀಯ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದು ಸುರಕ್ಷಿತವಾಗಿದ್ದಾರೆ.

ಇದನ್ನೂ ಓದಿ: ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗುತ್ತಿದೆ ‘ಮಾಲ್ವಾಣ್’ ಯುದ್ಧನೌಕೆ: ಸ್ವದೇಶಿ ನಿರ್ಮಿತ ಹಡಗಿನ ವಿಶೇಷಗಳೇನು? ಇಲ್ಲಿದೆ ನೋಡಿ

ರಷ್ಯಾದ ಸೆಂಟ್ ಪೀಟರ್ಸ್‌ಬರ್ಗ್ ಬಂದರಿನಿಂದ ಕೊನೆಯದಾಗಿ ಪ್ರಯಾಣ ಬೆಳೆಸಿದ್ದ ಈ ಹಡಗಿನಲ್ಲಿ ಘಟನೆ ಸಂಭವಿಸಿದಾಗ ಮೂವರು ಭಾರತೀಯರು ಸೇರಿದಂತೆ ಒಟ್ಟು 10 ಮಂದಿ ಸಿಬ್ಬಂದಿ ಇದ್ದರು. ಮೃತರ ಗುರುತನ್ನು ವಿದೇಶಾಂಗ ಸಚಿವಾಲಯ ಇನ್ನೂ ಬಹಿರಂಗಪಡಿಸಿಲ್ಲವಾದರೂ, ಅವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದೆ.

ರಷ್ಯಾ ಸರ್ಕಾರದ ಸ್ಪಂದನೆ:

ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಮೃತ ನಾವಿಕನ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಕಾನೂನು ಹಾಗೂ ರಾಜತಾಂತ್ರಿಕ ನೆರವು ನೀಡಲು ತಕ್ಷಣದ ಕ್ರಮಗಳನ್ನು ಕೈಗೊಂಡಿದೆ.

ಇದನ್ನೂ ಓದಿ: ನಿಶ್ಚಿತಾರ್ಥ ಮುಗಿದು ವಾರವಷ್ಟೇ ಕಳೆದಿತ್ತು, ರಷ್ಯಾದ ಕ್ಷಿಪಣಿ ದಾಳಿಗೆ ಉಕ್ರೇನ್ ಕರಾವಳಿಯಲ್ಲಿ ಕೇರಳದ ನಾವಿಕ ಬಲಿ

ದಾಳಿಯನ್ನು ಖಂಡಿಸಿದ ಭಾರತ:

ವಾಣಿಜ್ಯ ಹಡಗುಗಳು ಮತ್ತು ನಿರಪರಾಧಿ ನಾಗರಿಕ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ಇಂತಹ ದಾಳಿಗಳನ್ನು ಭಾರತ ಸರ್ಕಾರವು ತೀವ್ರವಾಗಿ ಖಂಡಿಸಿದೆ. ಜಾಗತಿಕ ವಾಣಿಜ್ಯ ಮತ್ತು ಸಮುದ್ರ ಸಂಚಾರದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ಕೃತ್ಯಗಳು ಕಳವಳಕಾರಿಯಾಗಿದ್ದು, ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳು ಹಾಗೂ ಸಿಬ್ಬಂದಿಯ ಸುರಕ್ಷತೆಯನ್ನು ಎಲ್ಲಾ ಕಡೆಯವರೂ ಕಟ್ಟುನಿಟ್ಟಾಗಿ ಕಾಯ್ದುಕೊಳ್ಳಬೇಕು ಎಂದು ಭಾರತ ಒತ್ತಾಯಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಗರಸಭೆ ಆಯುಕ್ತರ ಚೇಂಬರ್‌ಗೆ “ಸಾರ್ವಜನಿಕರಿಗೆ ಪ್ರವೇಶವಿಲ್ಲ”: ಬೋರ್ಡ್​ ನೋಡಿ ಉಪ ಲೋಕಾಯುಕ್ತ ಶಾಕ್ – Kannada News | Upalokayukta B Veerappa Angry after Saw a No Entry to Bagalkot commissioner chamber

ಬಾಗಲಕೋಟೆ, (ಜುಲೈ 24): ಬಾಗಲಕೋಟೆಯಲ್ಲಿ (Bagalkot) ಸರ್ಕಾರಿ ಕಚೇರಿಗಳಿಗೆ ಉಪ ಲೋಕಾಯುಕ್ತರಾದ ಬಿ.ವೀರಪ್ಪ  (B Veerappa) ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕಚೇರಿಗಳ ಕಾರ್ಯವೈಖರಿ ಬಗ್ಗೆ ಸಿಡಿಮಿಡಿಗೊಂಡರು. ಅಲ್ಲದೇ ನಗರಸಭೆ ಆಯುಕ್ತರ ಚೇಂಬರ್ ಮುಂದೆ ‘ಸಾರ್ವಜನಿಕರಿಗೆ ಪ್ರವೇಶವಿಲ್ಲ’ ಎಂದು ಹಾಕಲಾಗಿದ್ದ ಬೋರ್ಡ್ ನೋಡಿ ಶಾಕ್ ಆಗಿದ್ದಾರೆ. ಸರ್ಕಾರಿ ಕಚೇರಿಗೆ ಸಾರ್ವಜನಿಕರ ಬದಲು ಇನ್ಯಾರು ಹೋಗಬೇಕು?‌ ಇದು ಶಾಕಿಂಗ್, 17 ಜಿಲ್ಲೆಗಳಲ್ಲಿ ಮೊದಲ ಬಾರಿ ನೋಡುತ್ತಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಚೇರಿ ಕಾರ್ಯವೈಖರಿ ಪರಿಶೀಲನೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪ ಲೋಕಾಯುಕ್ತ ಬಿ.ವೀರಪ್ಪ, ನಗರಸಭೆ ಆಯುಕ್ತರ ಚೇಂಬರ್‌ಗೆ ‘ಸಾರ್ವಜನಿಕರಿಗೆ ಪ್ರವೇಶವಿಲ್ಲ’ ಎಂದು ಬೋರ್ಡ್ ಹಾಕಿದ್ದಾರೆ. ಸರ್ಕಾರಿ ಕಚೇರಿಗೆ ಸಾರ್ವಜನಿಕರ ಬದಲು ಇನ್ಯಾರು ಹೋಗಬೇಕು?‌ ಇದು ಶಾಕಿಂಗ್, 17 ಜಿಲ್ಲೆಗಳಲ್ಲಿ ಮೊದಲ ಬಾರಿ ನೋಡುತ್ತಿದ್ದೇನೆ. ಬಾಗಲಕೋಟೆ ನಗರಸಭೆ ಅಧಿಕಾರಿಗಳ ಅಸಹಕಾರ ಇದೆ. 4 ಜನ ಇಂಜಿನಿಯರ್‌ಗಳು ಸರಿಯಾದ ಮಾಹಿತಿ ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ನೋಡಿ: ಸಿಲಿಂಡರ್ ಹೊರಗಿಡಿ, ತಾಜಾ ಎಣ್ಣೆ ಬಳಸಿ: ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ

ಅತಿಕ್ರಮಣ ಬಗ್ಗೆ ನೋಟಿಸ್ ಕೊಟ್ಟಿದ್ದಾರೆ. 2-3 ವರ್ಷ ಆದರೂ ಯಾವುದೇ ಕ್ರಮ ಆಗಿಲ್ಲ. ಬರೀ ನೋಟಿಸ್ ಕೊಟ್ಟು ಕ್ರಮ ಕೈಗೊಳ್ಳದಿದ್ದರೆ ಏನು ಪ್ರಯೋಜನ? ಅತಿಕ್ರಮಣ, ಲೈಸೆನ್ಸ್ ಉಲ್ಲಂಘನೆ ಎಷ್ಟು ಆಗಿದೆ ಹಾಗೂ ಎಷ್ಟು ಅತಿಕ್ರಮಣ ಆಗಿದೆ ಎಂಬ ಬಗ್ಗೆ ಸಂಪೂರ್ಣ ವರದಿ ಕೇಳಿದ್ದೇನೆ. ಡ್ಯೂಟಿ ಸರಿಯಾಗಿ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ನಗರಸಭೆ ಕಮಿಷನರ್ ನಾವು ಬರೋದು ಗೊತ್ತಾಗಿ ರಜೆ ಹೋಗಿದ್ದಾರೆ. ನಗರಸಭೆ ಹಾಗೂ BTDA ಮಧ್ಯೆ ಯಾವುದೇ ಹೊಂದಾಣಿಕೆ ಇಲ್ಲ. 2 ಕಡೆ ಪರಿಶೀಲನೆ ನಡೆಸಿ ಕೇಸ್ ರಿಜಿಸ್ಟರ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಮಾಜ ನಿರ್ಮಾಣದ ಅಡಿಪಾಯವೇ ತಾಯ್ತನ; ಮಾತೃತ್ವದ ಕುರಿತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ – Kannada News | Motherhood is a eternal truth RSS Sarsanghchalak Mohan Bhagwat says in Vishwamanglya Sabha Program

ನವದೆಹಲಿ, ಜುಲೈ 24: ಮಾತೃತ್ವವಿಲ್ಲದೆ ಜೀವರಾಶಿಯ ಸೃಷ್ಟಿ, ಪೋಷಣೆ ಅಸಾಧ್ಯವಾಗಿದ್ದು, ಮಾತೃತ್ವವೇ ಮಾನವ ಸಮಾಜದ ನಿಜವಾದ ಅಡಿಪಾಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ. ನವದೆಹಲಿಯ ಅಂಬೇಡ್ಕರ್ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ‘ವಿಶ್ವ ಮಾಂಗಲ್ಯ ಸಭಾ’ ಆಯೋಜಿಸಿದ್ದ “ಸಮಕಾಲೀನ ಮಾತೃತ್ವ” ವಿಷಯದ ಕುರಿತ ರಾಷ್ಟ್ರೀಯ ಜಾಗೃತಿ ಸಭೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಮತ್ತು ರವೀಂದ್ರನಾಥ ಟ್ಯಾಗೋರ್ ಅವರಂತಹ ಮಹಾನ್ ವ್ಯಕ್ತಿಗಳು ಸಹ ಮಾತೃತ್ವ ಮತ್ತು ಕುಟುಂಬ ವ್ಯವಸ್ಥೆಯ ಬಗ್ಗೆ ಆಳವಾದ ಆಲೋಚನೆಗಳನ್ನು ಹೊಂದಿದ್ದರು ಎಂದು ಮೋಹನ್ ಭಾಗವತ್ ನೆನಪಿಸಿಕೊಂಡಿದ್ದಾರೆ.

ತಾಯ್ತನದ ಶಾಶ್ವತ ಮೌಲ್ಯಗಳು ಎಂದಿಗೂ ಬದಲಾಗುವುದಿಲ್ಲ. ಕಾಲಕ್ರಮೇಣ ಪರಿಸ್ಥಿತಿಗಳು ಬದಲಾದರೂ, ತಾಯ್ತನದ ನಿಜವಾದ ಸ್ವರೂಪ ಬದಲಾಗುವುದಿಲ್ಲ. ಜಗತ್ತಿನಲ್ಲಿ ಜೀವನದ ಸೃಷ್ಟಿ, ಪೋಷಣೆ ಮತ್ತು ಮುಂದುವರಿಕೆಗೆ ತಾಯ್ತನವೇ ಮುಖ್ಯ ಆಧಾರ. ಪ್ರತಿಯೊಬ್ಬ ಮನುಷ್ಯನ ಮೊದಲ ಶಿಕ್ಷಕಿ ತಾಯಿ. ಆ ಮಗುವಿನ ವ್ಯಕ್ತಿತ್ವ ವಿಕಸನ ಮತ್ತು ಆಲೋಚನೆಗಳಿಗೆ ಸರಿಯಾದ ದಿಕ್ಕನ್ನು ತೋರಿಸುವವಳು ತಾಯಿ ಎಂದು ಅವರು ಹೇಳಿದರು.

ಇದನ್ನೂ ಓದಿ: ಜಾಗತಿಕ ಬಿಕ್ಕಟ್ಟುಗಳಿಗೆ ಭಾರತ ಒಂದೇ ಪರಿಹಾರ; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ

ಇಂದಿನ ಕುಟುಂಬಗಳಲ್ಲಿ ಮಕ್ಕಳಿಗಾಗಿ ಸಮಯವನ್ನು ಮೀಸಲಿಡುವುದು ಮತ್ತು ಅವರೊಂದಿಗೆ ನಿರಂತರವಾಗಿ ಸಂವಹನ ನಡೆಸುವುದು ಬಹಳ ಮುಖ್ಯ. ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಅವರ ಆಸಕ್ತಿಗಳನ್ನು ಪ್ರೋತ್ಸಾಹಿಸುವುದು ಪೋಷಕರ ಜವಾಬ್ದಾರಿಯಾಗಿದೆ. ಮಕ್ಕಳು ತಮ್ಮ ಹೆತ್ತವರ ನಡವಳಿಕೆಯನ್ನು ಅವರ ಮಾತುಗಳಿಗಿಂತ ಹೆಚ್ಚಾಗಿ ಅನುಕರಿಸುತ್ತಾರೆ ಮತ್ತು ಆದ್ದರಿಂದ, ಪೋಷಕರು ಮಾದರಿಯಾಗಿರಬೇಕು ಎಂದು ಮೋಹನ್ ಭಾಗವತ್ ಸಲಹೆ ನೀಡಿದರು.

ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಕುರಿತಾದ ತಪ್ಪು ಕಲ್ಪನೆಗಳ ಬಗ್ಗೆ ಎಚ್ಚರಿಸಿದ ಅವರು, ಭಾರತದ ನಾಗರಿಕತೆಯ ಅಡಿಪಾಯಗಳು ಇಂದಿಗೂ ಗಟ್ಟಿಯಾಗಿವೆ. ಸಮಾಜವು ತನ್ನ ಸಾಂಸ್ಕೃತಿಕ ಪರಂಪರೆ, ಜ್ಞಾನ ವ್ಯವಸ್ಥೆ ಮತ್ತು ಇತಿಹಾಸದ ಮೇಲೆ ನಂಬಿಕೆಯಿಟ್ಟು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದರು. ಭಾರತೀಯ ಸಂಸ್ಕೃತಿಯ ಬಗ್ಗೆ ಅನೇಕ ತಪ್ಪು ಕಲ್ಪನೆಗಳನ್ನು ಉದ್ದೇಶಪೂರ್ವಕವಾಗಿ ಹರಡಲಾಗಿದೆ. ವೈವಿಧ್ಯತೆಯಲ್ಲಿ ಏಕತೆ ಭಾರತೀಯ ಸಂಸ್ಕೃತಿಯ ಮುಖ್ಯ ಸಂದೇಶವಾಗಿದ್ದು, ವಿದೇಶಿ ಜೀವನ ವಿಧಾನಗಳನ್ನು ಕುರುಡಾಗಿ ಅನುಸರಿಸುವ ಬದಲು ಭಾರತೀಯ ಕುಟುಂಬ ವ್ಯವಸ್ಥೆಯನ್ನು ಬಲಪಡಿಸುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಕೋರ್ಟ್ ಸಮನ್ಸ್

ಬೃಹತ್ ಸಮಾವೇಶ:

ಜುಲೈ 23 ಮತ್ತು ಇಂದು “ಮಾತೃತ್ವದ ಮೂಲಕ ರಾಷ್ಟ್ರ ನಿರ್ಮಾಣ” ಎಂಬ ಆಶಯದಡಿ ನಡೆದ ಎರಡು ದಿನಗಳ ಈ ರಾಷ್ಟ್ರೀಯ ಜಾಗೃತಿ ಸಭೆಯಲ್ಲಿ, ದೇಶಾದ್ಯಂತದಿಂದ ಸುಮಾರು 280 ಮಹಿಳೆಯರು ಭಾಗವಹಿಸಿ ಸಮಕಾಲೀನ ಮಾತೃತ್ವ, ಬದಲಾಗುತ್ತಿರುವ ಸಾಮಾಜಿಕ ವಾಸ್ತವಗಳು ಮತ್ತು ಭಾರತೀಯ ಕುಟುಂಬ ವ್ಯವಸ್ಥೆಯನ್ನು ರಕ್ಷಿಸುವಲ್ಲಿ ತಾಯಂದಿರ ಪಾತ್ರದ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ 900ಕ್ಕೂ ಹೆಚ್ಚು ಮಹಿಳಾ ನಾಯಕಿಯರು ಮತ್ತು ಗಣ್ಯರು ಭಾಗವಹಿಸಿದ್ದರು. ಈ ವಿಷಯದ ಸಂವಾದಕ್ಕಾಗಿ ಸುಮಾರು 2000ದಿಂದ 2500 ಮಹಿಳೆಯರು ನೋಂದಾಯಿಸಿಕೊಂಡಿದ್ದರು. 2010ರಲ್ಲಿ ನಾಗಪುರದಲ್ಲಿ ಪರಮ ಪೂಜ್ಯ ಆಚಾರ್ಯ ಸ್ವಾಮಿ ಜಿತೇಂದ್ರನಾಥ್ ಜಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಸ್ಥಾಪಿತವಾದ ‘ವಿಶ್ವ ಮಾಂಗಲ್ಯ ಸಭಾ’ ಪ್ರಸ್ತುತ ಭಾರತದ 33 ಪ್ರಾಂತ್ಯಗಳಲ್ಲಿ ಸಕ್ರಿಯವಾಗಿದ್ದು, ಸುಮಾರು 6 ಲಕ್ಷ ಮಹಿಳೆಯರು ಇದರೊಂದಿಗೆ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಅಮೆರಿಕ ಮತ್ತು ನೆದರ್‌ಲ್ಯಾಂಡ್ಸ್ ಸೇರಿದಂತೆ 14 ದೇಶಗಳಲ್ಲೂ ತನ್ನ ಚಟುವಟಿಕೆಗಳನ್ನು ವಿಸ್ತರಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾಕಿಸ್ತಾನದಲ್ಲಿ ಭೀಕರ ಆತ್ಮಾಹುತಿ ಬಾಂಬ್ ದಾಳಿ; 12 ಯೋಧರು ಸೇರಿ 15 ಜನ ಸಾವು – Kannada News | 15 people Including 12 Soldiers Killed In Suicide Bombing In Pakistan Khyber Pakhtunkhwa

ಇಸ್ಲಾಮಾಬಾದ್, ಜುಲೈ 24: ಪಾಕಿಸ್ತಾನದಲ್ಲಿ (Pakistan) ಸೇನಾ ಭದ್ರತಾ ಚೆಕ್​ಪಾಯಿಂಟ್ ಅನ್ನು ಗುರಿಯಾಗಿಸಿಕೊಂಡು ಉಗ್ರನೊಬ್ಬ ನಡೆಸಿದ ಭೀಕರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 15 ಜನರು ಮೃತಪಟ್ಟಿದ್ದಾರೆ, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದ ಪ್ರದೇಶದಲ್ಲಿ ಭದ್ರತಾ ಪಡೆಗಳ ಚೆಕ್‌ಪೋಸ್ಟ್ ಅನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ.

ಸ್ಫೋಟಕಗಳನ್ನು ತುಂಬಿದ್ದ ವಾಹನದಲ್ಲಿ ದಾಳಿಕೋರನು ನೇರವಾಗಿ ಭದ್ರತಾ ತಪಾಸಣಾ ಕೇಂದ್ರದ ಸಮೀಪ ಬಂದು ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಈ ಸ್ಫೋಟದ ತೀವ್ರತೆಗೆ ಸ್ಥಳದಲ್ಲೇ 15 ಜನರು ಮೃತಪಟ್ಟಿದ್ದು, ಮೃತರಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಸಮೀಪದಲ್ಲಿದ್ದ ಸಾರ್ವಜನಿಕರು ಕೂಡ ಸೇರಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

ಇದನ್ನೂ ಓದಿ: ಪಿಒಕೆಯ ಪ್ರಧಾನಿಯಾಗುವೆ, ಹೊಸ ಇಚ್ಛೆ ವ್ಯಕ್ತಪಡಿಸಿದ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್

ರಕ್ಷಣಾ ಕಾರ್ಯಾಚರಣೆ ಮತ್ತು ತನಿಖೆ:

ಸ್ಫೋಟ ಸಂಭವಿಸಿದ ತಕ್ಷಣವೇ ಸ್ಥಳಕ್ಕೆ ಹೆಚ್ಚುವರಿ ಸೇನಾ ಪಡೆಗಳು ಮತ್ತು ಪರಿಹಾರ ಪಡೆಗಳು ಧಾವಿಸಿದ್ದು, ಇಡೀ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿವೆ. ದಾಳಿಯ ಹೊಣೆಯನ್ನು ತಕ್ಷಣಕ್ಕೆ ಯಾವುದೇ ಉಗ್ರ ಸಂಘಟನೆ ಅಧಿಕೃತವಾಗಿ ವಹಿಸಿಕೊಂಡಿಲ್ಲವಾದರೂ, ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (TTP) ಅಥವಾ ಇತರ ಸ್ಥಳೀಯ ಬಂಡಾಯ ಗುಂಪುಗಳ ಮೇಲೆ ಶಂಕೆ ವ್ಯಕ್ತವಾಗಿದೆ.

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಭದ್ರತಾ ಪಡೆಗಳ ಮೇಲೆ ಹಾಗೂ ಪೊಲೀಸ್ ತಪಾಸಣಾ ಕೇಂದ್ರಗಳ ಮೇಲೆ ಉಗ್ರರ ದಾಳಿಗಳು ಗಣನೀಯವಾಗಿ ಹೆಚ್ಚಾಗುತ್ತಿದ್ದು, ಈ ಘಟನೆಯು ದೇಶದ ಭದ್ರತಾ ವ್ಯವಸ್ಥೆಯ ಮೇಲಿನ ಆತಂಕವನ್ನು ಹೆಚ್ಚಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕರಾವಳಿ’ ಸಿನಿಮಾ ನೋಡಿ ಎಮೋಷನಲ್ ಪ್ರತಿಕ್ರಿಯೆ ನೀಡಿದ ಪ್ರೇಕ್ಷಕರು – Kannada News | Raj B Shetty starrer Karavali movie release Audience share their review

ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ, ಮಿತ್ರ ಮುಂತಾದವರು ನಟಿಸಿರುವ ‘ಕರಾವಳಿ’ (Karavali) ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾಗೆ ಗುರುದತ್ ಗಾಣಿಗ ಅವರು ನಿರ್ದೇಶನ ಮಾಡಿದ್ದಾರೆ. ಕಂಬಳ ಕುರಿತಾದ ಕಥೆ ಈ ಸಿನಿಮಾದಲ್ಲಿ ಇದೆ. ಚಿತ್ರವನ್ನು ನೋಡಿದ ಪ್ರೇಕ್ಷಕರು ಎಮೋಷನಲ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಗಳು ಮಾತನಾಡಿರುವ ಈ ವಿಡಿಯೋವನ್ನು ಚಿತ್ರತಂಡದವರು ಹಂಚಿಕೊಂಡಿದ್ದಾರೆ. ‘ಕಂಬಳದ ಅನುಭವ ಚೆನ್ನಾಗಿತ್ತು. ಮಹಾವೀರ ಮತ್ತು ಮಹಾಬಲ ಎಂಬ ಎರಡು ಪಾತ್ರಗಳ ಮೇಲೆ ಈ ಸಿನಿಮಾ ನಿಂತಿದೆ. ಆ ಪಾತ್ರಗಳನ್ನು ನೋಡಿ ನಾವು ಅತ್ತಿದ್ದೇವೆ. ರಾಜ್ ಬಿ. ಶೆಟ್ಟಿ ಅವರ ಪಾತ್ರ ಒಂದು ರೀತಿಯ ಕರೆಂಟ್ ರೀತಿ ಇದೆ. ಮಧ್ಯಂತರದ ಬಳಿಕ ಸಿನಿಮಾ ಇನ್ನೂ ಚೆನ್ನಾಗಿದೆ. ಈ ಸಿನಿಮಾದ ಕಥೆಯನ್ನು ವಿಭಿನ್ನವಾಗಿ ಕಟ್ಟಿಕೊಡಲಾಗಿದೆ’ ಎಂದು ಪ್ರೇಕ್ಷಕರು ತಮ್ಮ ವಿಮರ್ಶೆ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಜನ ನಾಯಗನ್’ ನೋಡಿ ಸಂಭ್ರಮಿಸಿದ ನಟ ರವಿ ಮೋಹನ್: ತಮಿಳುನಾಡು ಸಚಿವರ ಕಣ್ಣೀರು – Kannada News | Ravi Mohan Cheers for CM Vijay starrer Jana Nayagan in Theatre TN Minister Cries

ತಮಿಳುನಾಡು ಮುಖ್ಯಮಂತ್ರಿ, ನಟ ದಳಪತಿ ವಿಜಯ್ (CM Vijay) ಅಭಿನಯದ ಬಹುನಿರೀಕ್ಷಿತ ‘ಜನ ನಾಯಗನ್’ (Jana Nayagan) ಸಿನಿಮಾ ಜುಲೈ 23ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ವಿಮರ್ಶಕರಿಂದ ಈ ಸಿನಿಮಾಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಪ್ರೇಕ್ಷಕರು ಹಾಗೂ ವಿಜಯ್ ಅಭಿಮಾನಿಗಳು ಚಿತ್ರಮಂದಿರಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದೀಗ ಖ್ಯಾತ ನಟ ರವಿ ಮೋಹನ್ (Ravi Mohan) ಸಹ ಥಿಯೇಟರ್‌ಗೆ ತೆರಳಿ ಸಿನಿಮಾ ವೀಕ್ಷಿಸಿದ್ದು, ವಿಜಯ್ ಅವರ ಎಂಟ್ರಿ ಸೀನ್‌ಗೆ ಶಿಳ್ಳೆ ಹೊಡೆದು ಸಂಭ್ರಮಿಸಿದ್ದಾರೆ.

ಚೆನ್ನೈನ ಖ್ಯಾತ ವೆಟ್ರಿ ಥಿಯೇಟರ್​ನ ಕೊನೆಯ ಸಾಲಿನಲ್ಲಿ ಕುಳಿತು ರವಿ ಮೋಹನ್ ಅವರು ಸಾರ್ವಜನಿಕರೊಂದಿಗೆ ‘ಜನ ನಾಯಗನ್’ ವೀಕ್ಷಿಸಿದ್ದಾರೆ. ವಿಜಯ್ ಅವರ ಗ್ರ್ಯಾಂಡ್ ಎಂಟ್ರಿ ದೃಶ್ಯ ಬಂದಾಗ ರವಿ ಮೋಹನ್ ಎದ್ದು ನಿಂತು ಚಪ್ಪಾಳೆ ತಟ್ಟಿ, ಸೀಟಿ ಹೊಡೆದು ಖುಷಿಪಟ್ಟ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿನಿಮಾ ಮುಗಿದ ಬಳಿಕ ಥಿಯೇಟರ್ ಹೊರಗೆ ಕಾದಿದ್ದ ಅಭಿಮಾನಿಗಳೊಂದಿಗೆ ಅವರು ಸೆಲ್ಫಿ ಕೂಡ ತೆಗೆಸಿಕೊಂಡಿದ್ದಾರೆ.

ಥಿಯೇಟರ್‌ನಲ್ಲೇ ಕಣ್ಣೀರಿಟ್ಟ ತಮಿಳುನಾಡು ಸಚಿವ:

ವಿಜಯ್ ಅವರ ರಾಜಕೀಯ ಪ್ರವೇಶದ ಬಳಿಕ ಬಿಡುಗಡೆ ಆಗಿರುವ ಕೊನೆಯ ಚಿತ್ರ ಇದಾಗಿರುವುದರಿಂದ ಅಭಿಮಾನಿಗಳಿಗೆ ಇದು ಅತ್ಯಂತ ಭಾವುಕ ಕ್ಷಣವಾಗಿದೆ. ಕೇವಲ ಅಭಿಮಾನಿಗಳು ಮಾತ್ರವಲ್ಲದೆ, ತಮಿಳುನಾಡು ಕಾರ್ಮಿಕ ಕ್ಷೇಮಾಭಿವೃದ್ಧಿ ಸಚಿವ ಮೊಹಮ್ಮದ್ ಪರ್ವೇಜ್ ಅವರು ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸುತ್ತಾ ಕಣ್ಣೀರು ಹಾಕಿದ್ದಾರೆ.

ಸಿನಿಮಾದ ಪ್ರಮುಖ ದೃಶ್ಯವೊಂದರಲ್ಲಿ ಸಚಿವರು ಕಣ್ಣೀರು ಒರೆಸಿಕೊಳ್ಳುತ್ತಿರುವ ದೃಶ್ಯ ವೈರಲ್ ಆಗಿದೆ. ‘ವಿಜಯ್ ಅವರ ಕೊನೆಯ ಸಿನಿಮಾ ಇದಾಗಿರುವುದರಿಂದ ಮತ್ತು ಅವರು ಸಂಪೂರ್ಣವಾಗಿ ರಾಜಕೀಯದಲ್ಲಿ ಸಕ್ರಿಯವಾಗಿರುವುದರಿಂದ ಈ ಸಿನಿಮಾ ವೀಕ್ಷಣೆ ತಮಗೆ ಅತ್ಯಂತ ಭಾವುಕ ಅನುಭವ ನೀಡಿತು’ ಎಂದು ಚಿತ್ರ ವೀಕ್ಷಣೆಯ ಬಳಿಕ ಸಚಿವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ವಿಚ್ಛೇದನ ಸಿಗೋ ತನಕ ಸಿನಿಮಾ ಮಾಡಲ್ಲ ಅಂತ ಹೇಳಿ ಈಗ ಉಲ್ಟಾ ಹೊಡೆದ ಜಯಂ ರವಿ

‘ಜನ ನಾಯಗನ್’ ಕಥೆ ಏನು?

ಎಚ್. ವಿನೋದ್ ನಿರ್ದೇಶನದ ಹಾಗೂ ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಿಸಿರುವ ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್ ಹಾಗೂ ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ತೀರಿಹೋದ ತಮ್ಮ ಸ್ನೇಹಿತನ ಮಗಳನ್ನು ಸಾಕಿ ಬೆಳೆಸಿ, ಆಕೆಯ ಬಾಲ್ಯದ ನೋವುಗಳನ್ನು ಮರೆಸಿ ಭಾರತೀಯ ಸೇನೆಗೆ ಸೇರ್ಪಡೆಗೊಳಿಸಲು ಪಡುವ ಶ್ರಮ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಭ್ರಷ್ಟರ ವಿರುದ್ಧ ನಡೆಸುವ ಹೋರಾಟವೇ ಈ ಚಿತ್ರದ ಮುಖ್ಯ ಕಥಾವಸ್ತುವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version