ಭಾರತವನ್ನು ಅಸ್ಥಿರಗೊಳಿಸುವ ಶಕ್ತಿಗಳ ಬಿ-ಟೀಮ್; ಸಿಜೆಪಿ ವಿರುದ್ಧ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ವಾಗ್ದಾಳಿ – Kannada News | B Team Of Disruptive Elements Education Minister Dharmendra Pradhan Says CJP Fronting Forces

ನವದೆಹಲಿ, ಜೂನ್ 23: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಕಾಕ್ರೋಚ್ ಜನತಾ ಪಾರ್ಟಿ (CJP) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಜೆಪಿ ಸಂಘಟನೆಯು ಪ್ರಜಾಪ್ರಭುತ್ವ ಮಾದರಿಯಲ್ಲಿ ದೇಶದ ಜನರಿಂದ ತಿರಸ್ಕರಿಸಲ್ಪಟ್ಟಿರುವ ವಿಧ್ವಂಸಕ ಶಕ್ತಿಗಳ ಬಿ-ಟೀಮ್​ನಂತೆ ಕೆಲಸ ಮಾಡುತ್ತಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಇಂದು ವಿವಿಧ ವಿಷಯಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ಕೆಲವು ಸಂಘಟನೆಗಳು ದೇಶದ ಪ್ರಗತಿಯನ್ನು ಸಹಿಸದೆ ವ್ಯವಸ್ಥಿತ ಪಿತೂರಿ ನಡೆಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದ ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿ ಕಾರ್ಯಸೂಚಿಯನ್ನು ಒಪ್ಪದ, ಚುನಾವಣೆಯಲ್ಲಿ ಜನರಿಂದ ತಿರಸ್ಕೃತಗೊಂಡಿರುವ ಕೆಲವು ಶಕ್ತಿಗಳ ಪರವಾಗಿ ಸಿಜೆಪಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದೆ. ಇದು ದೇಶದ ಇಮೇಜ್ ಅನ್ನು ಜಾಗತಿಕ ಮಟ್ಟದಲ್ಲಿ ಹಾಳುಮಾಡಲು ಮತ್ತು ಸಮಾಜದಲ್ಲಿ ಗೊಂದಲ ಮೂಡಿಸಲು ನಿರಂತರವಾಗಿ ಯತ್ನಿಸುತ್ತಿದೆ. ಪ್ರಜಾಪ್ರಭುತ್ವದ ಮಾರ್ಗದಲ್ಲಿ ಸೋತವರು ಈಗ ಇಂತಹ ಸಂಘಟನೆಗಳ ಮೂಲಕ ದೇಶದ ಪ್ರಗತಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ‘ಕಾಕ್ರೋಚ್ ಜನತಾ ಪಕ್ಷ’ದ ಶಾಂತಿಯುತ ಹೆಜ್ಜೆ: ಹೊಸ ವಕ್ತಾರರ ನೇಮಕ, ಜೂನ್ 6 ರಂದು ಬೃಹತ್ ಜಾಗೃತಿ ರ‍್ಯಾಲಿ

ಕೆಲವರಿಗೆ ದೇಶದ ಪ್ರಗತಿ ಮೇಲೆ ನಂಬಿಕೆಯಿಲ್ಲ:

ಪ್ರಜಾಪ್ರಭುತ್ವದಲ್ಲಿ ದೇಶದ ಜನರಿಂದ ತಿರಸ್ಕೃತಗೊಂಡವರು ಈಗ ವೇಷ ಮರೆಸಿಕೊಂಡು ಬಂದು ನಮ್ಮ ವ್ಯವಸ್ಥೆಯ ಬೆನ್ನು ಬಿದ್ದಿದ್ದಾರೆ. ದೇಶವನ್ನು ವಿಭಜಿಸಲು ಬಯಸುವವರ ಪರವಾಗಿ ಇವರು ಘೋಷಣೆಗಳನ್ನು ಕೂಗುತ್ತಾರೆ. ಇಂತಹವರನ್ನು ಈಗ ಗುರುತಿಸಲಾಗಿದೆ. ಕೆಲವು ಜನರಿಗೆ ದೇಶದ ಪ್ರಗತಿಯ ಮೇಲೆ ನಂಬಿಕೆಯಿಲ್ಲ ಎಂದು ಹಿರಿಯ ಬಿಜೆಪಿ ನಾಯಕರಾದ ಧರ್ಮೇಂದ್ರ ಪ್ರಧಾನ್ ಟೀಕಿಸಿದ್ದಾರೆ.

ಇದನ್ನೂ ಓದಿ: NEET ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಿ, ಯಾವುದೇ ರಾಜಿ ಬೇಡ; ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸೂಚನೆ

ಸಿಜೆಪಿ ಆರೋಪವೇನು?:

ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಈ ಹಿಂದೆ ನಡೆದಿದ್ದ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಅದಾಗಿ ಒಂದು ತಿಂಗಳ ನಂತರ, ನಿನ್ನೆ ದೇಶಾದ್ಯಂತ 22 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಆಕಾಂಕ್ಷಿ ವಿದ್ಯಾರ್ಥಿಗಳು ‘ನೀಟ್ ಮರುಪರೀಕ್ಷೆ’ ಬರೆದಿದ್ದರು. ಇದರ ಮರುದಿನವೇ ಶಿಕ್ಷಣ ಸಚಿವರ ಈ ಹೇಳಿಕೆ ಹೊರಬಿದ್ದಿದೆ. ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಸಿಜೆಪಿ (CJP) ಧರ್ಮೇಂದ್ರ ಪ್ರಧಾನ್ ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಳ್ಳ ಹಿಡಿಯಿತಾ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ?: ತುಮಕೂರು ನಗರದಲ್ಲಿ ಇಂದಿರಾ ಕ್ಯಾಂಟೀನ್​​ಗಳ ಬಾಗಿಲು ಬಂದ್​​! – Kannada News | Indira Canteens Shut Down in Tumakuru for the Last 8 Days

ಬಾಗಿಲು ಬಂದ್​​ ಆಗಿರುವ ಇಂದಿರಾ ಕ್ಯಾಂಟೀನ್​​Image Credit source: Tv9 Kannada

ತುಮಕೂರು, ಜೂನ್​​ 23: ಬಡವರ ಹಸಿವು ನೀಗಿಸಲೆಂದೇ ಆರಂಭಿಸಿದ್ದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್​​ ಯೋಜನೆ ಹಳ್ಳ ಹಿಡಿದೆಯಾ ಎಂಬ ಅನುಮಾನವೀಗ ಸಾರ್ವಜನಿಕರನ್ನು ಕಾಡತೊಡಗಿದೆ. ಇದಕ್ಕೆ ಕಾರಣವಾಗಿರೋದು ಇಂದಿರಾ ಕ್ಯಾಂಟೀನ್​​ಗಳ ನಿರ್ವಹಣೆ ಸರಿಯಾಗಿ ಇಲ್ಲದಿರೋದು. ಒಂದೆರಡಲ್ಲ ಬರೋಬ್ಬರಿ ಎಂಟು ದಿನಗಳಿಂದ ತುಮಕೂರು ನಗರದಲ್ಲಿರುವ 6 ಇಂದಿರಾ ಕ್ಯಾಂಟೀನ್​​ಗಳು ಕ್ಲೋಸ್​​ ಆಗಿದ್ದು, ಇವುಗಳನ್ನೇ ನಂಬಿಕೊಂಡಿದ್ದ ನೂರಾರು ಮಂದಿಯೀಗ ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಅಡುಗೆ ಕಾಂಟ್ರಾಕ್ಟ್ ವಹಿಸಿಕೊಂಡವರಿಗೆ ಜಿಲ್ಲಾಡಳಿತ ಹಣ ಪಾವತಿಸದಿರೋದೇ ಕ್ಯಾಂಟೀನ್​​ಗಳು ಬಾಗಿಲು ಮುಚ್ಚಲು ಕಾರಣ ಎನ್ನಲಾಗಿದೆ.

ಅಧಿಕಾರಿಗಳು ಹೇಳೋದೇನು?

ಹೌದು, ಬಡವರಿಗೆ ಕೈಗೆಟುಕುವ ಬೆಲೆಯಲ್ಲಿ ತಿಂಡಿ ಮತ್ತು ಊಟ ನೀಡುವ ಆಶಯದೊಂದಿಗೆ ಆರಂಭವಾದ ಇಂದಿರಾ ಕ್ಯಾಂಟೀನ್​​ಗಳಿಗೆ ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಲೇ ಇದೆ. ಅಡುಗೆ ಗುತ್ತಿಗೆ ಪಡೆದವರಿಗೆ ಜಿಲ್ಲಾಡಳಿತ ಹಣ ಪಾವತಿಸದ ಕಾರಣ ಕೆಲಸಗಾರರಿಗೂ ಕಳೆದ ಒಂದು ವರ್ಷದಿಂದ ಸಂಬಳ ಬಾಕಿಯಾಗಿದೆ ಎಂಬ ಮಾಹಿತಿ ಇದೆ. ಹಾಗಾಗಿ ಅವರೂ ಕೆಲಸ ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ತುಮಕೂರು ಮಹಾನಗರ ಪಾಲಿಕೆ ಆಯುಕ್ತರನ್ನು ಕೇಳಿದರೆ ಗುತ್ತಿಗೆದಾರರು ಕೆಲವು ರೂಲ್ಸ್ ಬ್ರೇಕ್ ಮಾಡಿದ್ದರು. ಅದಕ್ಕೆ ನೋಟಿಸ್​ ಕೊಟ್ಟಿದ್ದೇವೆ. ಆದರೆ ಅವರು ಉತ್ತರ ಕೊಟ್ಟಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಇದನ್ನೂ ಓದಿ: ಹುಟ್ಟುಹಬ್ಬದ ದಿನವೇ ನಿವೃತ್ತ ಸೈನಿಕನಿಗೆ ಸೈಬರ್ ಶಾಕ್; ‘ಗಿಫ್ಟ್’ ಆಸೆಗೆ ಬಿದ್ದ ಯೋಧನಿಗೆ 2.82 ಲಕ್ಷ ರೂ. ವಂಚನೆ

ಆದರೆ ಮಾಹಿತಿ ಪ್ರಕಾರ ಗುತ್ತಿಗೆದಾರರು ಕ್ಯಾಂಟೀನ್​​ನ ದಿಢೀರ್ ಆಗಿಯೇನು ಮುಚ್ಚಿಲ್ಲ. ಹಲವು ಬಾರಿ ಅಧಿಕಾರಿಗಳಿಗೆ ಹಣಕ್ಕಾಗಿ ಮನವಿ ಮಾಡಿದ್ದಾರೆ. ಆರಂಭದಲ್ಲಿ ರಾತ್ರಿ ಊಟ ಬಂದ್ ಮಾಡಿದ್ದು, ತದನಂತರ ಬೆಳಗ್ಗಿನ ತಿಂಡಿ ಬಂದ್ ಮಾಡಿದ್ದಾರೆ. ಇಷ್ಟಾದರೂ ಜಿಲ್ಲಾಡಳಿತ ತಲೆಕೆಡಿಸಿಕೊಳ್ಳದ ಕಾರಣ ಈಗ ಸಂಪೂರ್ಣ ಕ್ಯಾಂಟೀನ್​​ ಬಂದ್​​ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ. ಆದರೆ ಬಿಲ್​​ ಎಷ್ಟು ಬಾಕಿಯಿದೆ? ಎಷ್ಟು ತಿಂಗಳ ಹಣ ಬರಬೇಕು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಇನ್ನು ಗುತ್ತಿಗೆದಾರರಿಗೆ ಜಿಲ್ಲಾಡಳಿತ ಬಿಲ್​​ ಪಾವತಿಸಿಲ್ಲ ಎಂಬುದು ಸತ್ಯವೋ? ಗುತ್ತಿಗೆದಾರರು ಕೆಲವು ರೂಲ್ಸ್ ಬ್ರೇಕ್ ಮಾಡಿದ್ದಾರೆ ಎಂಬ ಆರೋಪ ನಿಜವೋ? ಗೊತ್ತಿಲ್ಲ. ಆದರೆ ಇಂದಿರಾ ಕ್ಯಾಂಟೀನ್​​ಗಳು ಬಂದ್​​ ಆಗಿರುವುದರಿಂದ ಬಡವರಂತೂ ಸಂಕಷ್ಟಕ್ಕೆ ಸಿಲುಕಿರುವುದು ಸತ್ಯ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:57 pm, Tue, 23 June 26

Source link

‘ಈಠಾ’ ಟೀಸರ್ ರಿಲೀಸ್: ಲಾವಣಿ ಕಲಾವಿದೆಯಾಗಿ ಶ್ರದ್ಧಾ ಕಪೂರ್ ನಟನೆಗೆ ಫ್ಯಾನ್ಸ್ ಫಿದಾ – Kannada News | Shraddha Kapoor Eetha Teaser released Laxman Utekar Vithabai Narayangaonkar Biopic

ಬಾಲಿವುಡ್ ಸ್ಟಾರ್ ನಟಿ ಶ್ರದ್ಧಾ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ‘ಈಠಾ’ (Eetha) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮಹಾರಾಷ್ಟ್ರದ ಪ್ರಸಿದ್ಧ ತಮಾಶಾ ಮತ್ತು ಲಾವಣಿ ಜಾನಪದ ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನಾಧಾರಿತ ಚಿತ್ರ ಇದಾಗಿದ್ದು, ಶ್ರದ್ಧಾ ಕಪೂರ್ (Shraddha Kapoor) ಅವರ ನಟನೆಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ‘ಛಾವಾ’ ಚಿತ್ರದ ಖ್ಯಾತಿಯ ಲಕ್ಷ್ಮಣ್ ಉಟೇಕರ್ ಅವರು ‘ಈಠಾ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಮೂಡುವಂತಾಗಿದೆ.

ಲಾವಣಿ ಕಲಾವಿದರ ಅದ್ಭುತ ನೃತ್ಯ ಪ್ರದರ್ಶನದೊಂದಿಗೆ ಟೀಸರ್ ಆರಂಭವಾಗುತ್ತದೆ. ಆದರೆ, ನೆರೆದಿರುವ ಉದ್ರಿಕ್ತ ಜನರು ನೃತ್ಯ ಪ್ರದರ್ಶನವನ್ನು ತಡೆದು, ಈಠಾ ವೇದಿಕೆಗೆ ಬರಬೇಕೆಂದು ಒತ್ತಾಯಿಸುತ್ತಾರೆ. ಮತ್ತೊಂದೆಡೆ, 9 ತಿಂಗಳ ಗರ್ಭಿಣಿಯಾಗಿರುವ ಈಠಾ ಬ್ಯಾಕ್‌ಸ್ಟೇಜ್‌ನಲ್ಲಿ ನೃತ್ಯಕ್ಕೆ ಸಿದ್ಧವಾಗುತ್ತಿರುತ್ತಾಳೆ. ಅದೇ ಸಮಯದಲ್ಲಿ ಆಕೆಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತದೆ.

‘ಈ ಪರಿಸ್ಥಿತಿಯಲ್ಲಿ ಸ್ಟೇಜ್ ಮೇಲೆ ಹೋದರೆ ನೀನು ಸಾಯಬಹುದು, ನೃತ್ಯ ಮಾಡೋದು ಬೇಡ’ ಎಂದು ಹಿನ್ನೆಲೆಯಲ್ಲಿ ಧ್ವನಿಯೊಂದು ಎಚ್ಚರಿಸುತ್ತದೆ. ಆದರೆ, ಇದಕ್ಕೆ ಒಪ್ಪದ ಈಠಾ, ಹೊಸ ಇತಿಹಾಸ ಸೃಷ್ಟಿಸಲು ವೇದಿಕೆ ಏರುತ್ತಾಳೆ. ಮಗುವಿಗೆ ಜನ್ಮ ನೀಡಿದ ತಕ್ಷಣವೇ ಮತ್ತೆ ವೇದಿಕೆಗೆ ಮರಳಿ ನೃತ್ಯ ಮುಂದುವರಿಸುವ ದೃಶ್ಯ ಮೈ ಜುಂ ಎನಿಸುವಂತಿದೆ. ಟೀಸರ್‌ನ ಕೊನೆಯಲ್ಲಿ ಆಕೆಯನ್ನು ‘ಬಿರುಗಾಳಿ’ ಎಂದು ಕರೆಯಲಾಗಿದೆ.

‘ಈಠಾ’ ಸಿನಿಮಾ ಟೀಸರ್:

ಚಿತ್ರಮಂದಿರಗಳಲ್ಲಿ ‘ಕಾಕ್‌ಟೇಲ್ 2’ ಸಿನಿಮಾದ ಜೊತೆಗೆ ‘ಈಠಾ’ ಟೀಸರ್ ಪ್ರದರ್ಶಿಸಲಾಗಿತ್ತು. ಆದರೆ, ಥಿಯೇಟರ್‌ನಲ್ಲಿದ್ದ ಪ್ರೇಕ್ಷಕರು ಮೊಬೈಲ್​ನಲ್ಲಿ ಚಿತ್ರೀಕರಿಸಿದ ಟೀಸರ್‌ನ ಕ್ಲಿಪ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿ ವೈರಲ್ ಆದವು. ಕ್ರೇಜ್ ಹೆಚ್ಚಾಗುತ್ತಿದ್ದಂತೆಯೇ ಶ್ರದ್ಧಾ ಕಪೂರ್ ಇನ್‌ಸ್ಟಾಗ್ರಾಮ್‌ನಲ್ಲಿ ಮಹಾರಾಷ್ಟ್ರದ ಸಾಂಪ್ರದಾಯಿಕ ಸೀರೆಯಲ್ಲಿರುವ ತಮ್ಮ ಲುಕ್ ಹಂಚಿಕೊಂಡು, ಅಧಿಕೃತವಾಗಿ ಟೀಸರ್ ಬಿಡುಗಡೆ ಮಾಡಿದರು. ಚಿತ್ರವು ಆಗಸ್ಟ್ 28ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಇದನ್ನೂ ಓದಿ: ಶ್ರದ್ಧಾ ಕಪೂರ್ ಕತ್ತನ್ನು ಹಿಡಿದು ಕಾರಿನೊಳಗೆ ನೂಕಿದ ಬಾಯ್​ಫ್ರೆಂಡ್; ಫ್ಯಾನ್ಸ್ ಆಕ್ರೋಶ

ಬಡತನದ ಹಿನ್ನೆಲೆಯಿಂದ ಬಂದು ಮಹಾರಾಷ್ಟ್ರದ ಅತ್ಯಂತ ಜನಪ್ರಿಯ ಜಾನಪದ ರಂಗಭೂಮಿ ಕಲಾವಿದೆಯಾಗಿ ಬೆಳೆದ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನದ ಸ್ಫೂರ್ತಿದಾಯಕ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ದಿನೇಶ್ ವಿಜನ್ ಅವರ ‘ಮ್ಯಾಡಾಕ್ ಫಿಲ್ಮ್ಸ್’ ಸಂಸ್ಥೆ ಈ ಚಿತ್ರವನ್ನು ನಿರ್ಮಿಸುತ್ತಿದೆ. ರಣದೀಪ್ ಹೂಡಾ ಮತ್ತು ಅನಂತ್ ಜೋಶಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರೇಣುಕಾ ಸ್ವಾಮಿ ಪ್ರಕರಣ: ದರ್ಶನ್ ಪರ ವಕೀಲ ಬದಲು – Kannada News | Darshan’s lawyer Sunil Kumar withdraw himself from the case

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದಲ್ಲಿ ಕನಿಷ್ಟ ಇನ್ನು ಒಂದು ವರ್ಷ ದರ್ಶನ್ ಅವರಿಗೆ ಜಾಮೀನು ಸಿಗುವುದಿಲ್ಲ ಎಂಬುದು ಖಾತ್ರಿ ಆಗಿದೆ. ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದ್ದು, ಇನ್ನೊಂದು ವರ್ಷದಲ್ಲಿ ನಿಗದಿತ ಸಂಖ್ಯೆಯ ಸಾಕ್ಷಿಗಳ ವಿಚಾರಣೆ ನಡೆಯದಿದ್ದಲ್ಲಿ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಇದೀಗ ದರ್ಶನ್​​ಗೆ ಹಿನ್ನಡೆಯೊಂದು ಎದುರಾಗಿದೆ. ದರ್ಶನ್ ಅನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸುತ್ತಿದ್ದ ವಕೀಲರು ಪ್ರಕರಣದಿಂದ ಹಿಂದೆ ಸರಿದಿದ್ದಾರೆ. ದರ್ಶನ್ ಪರ ವಕಾಲತ್ತು ನಡೆಸುತ್ತಿದ್ದ ವಕೀಲ ಸುನಿಲ್ ಅವರು ಪ್ರಕರಣದಿಂದ ಹಿಂದೆ ಸರಿದಿದ್ದು, ಬೇರೊಬ್ಬ ವಕೀಲರು ದರ್ಶನ್ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ.

ದರ್ಶನ್ ಪರವಾಗಿ ಆರಂಭದಿಂದಲೂ ವಕಾಲತ್ತು ಮಾಡುತ್ತಿದ್ದ ವಕೀಲ ಸುನಿಲ್ ಅವರು ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿ ಪ್ರಕರಣದಿಂದ ನಿವೃತ್ತರಾಗಿದ್ದಾರೆ. 59ನೇ ಸಿಸಿಎಚ್ ನ್ಯಾಯಾಲಯಕ್ಕೆ ಮೆಮೊ ಸಲ್ಲಿಕೆ ಮಾಡುವ ಮೂಲಕ ತಾವು ಇನ್ನು ಮುಂದೆ ಈ ಪ್ರಕರಣದಲ್ಲಿ ವಕಾಲತ್ತು ವಹಿಸುವುದಿಲ್ಲ ಎಂದಿದ್ದಾರೆ. ದರ್ಶನ್ ಮಾತ್ರವೇ ಅಲ್ಲದೆ ಇದೇ ಪ್ರಕರಣದಲ್ಲಿ ಆರೋಪಿಗಳಾದ ನಾಗರಾಜ್ ಮತ್ತು ಲಕ್ಷ್ಮಣ್ ಪರವಾಗಿಯೂ ಸುನಿಲ್ ವಕಾಲತ್ತು ವಹಿಸಿದ್ದರು.

ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ಸುಳ್ಳು ಸಾಕ್ಷ್ಯ ಆರೋಪಕ್ಕೆ ಎಸ್​​ಪಿಪಿ ಪ್ರಸನ್ನ ತಿರುಗೇಟು

ಇದೀಗ ಸುನಿಲ್ ಅವರ ಹಠಾತ್ ನಿವೃತ್ತಿಯ ಬಳಿಕ ದರ್ಶನ್ ಪರವಾಗಿ ವಕೀಲ ಹಷ್ಮತ್ ಪಾಷಾ ಅವರು ದರ್ಶನ್ ಪರ ವಕೀಲರಾಗಿ ನ್ಯಾಯಾಲಯದಲ್ಲಿ ಹಾಜರಾಗಿದ್ದಾರೆ. ಇನ್ನು ಮುಂದೆ ದರ್ಶನ್ ಪರವಾಗಿ ಹಷ್ಮತ್ ಪಾಷಾ ಅವರು ವಾದಗಳನ್ನು ಮಾಡಲಿದ್ದಾರೆ. ದರ್ಶನ್​​ಗೆ ಸಹ ಈ ಮಾಹಿತಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನೀಡಲಾಗಿದೆ. ‘ನಾನು ಕುಟುಂಬದವರ ಬಳಿ ಚರ್ಚಿಸಿ ಈ ಬಗ್ಗೆ ನಿರ್ಧಾರ ತಿಳಿಸುವೆ’ ಎಂದು ದರ್ಶನ್, ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದ್ದು, ಸಾಕ್ಷ್ಯಗಳ ವಿಚಾರಣೆ ನಡೆಯುತ್ತಿದೆ. ವರ್ಷದಲ್ಲಿ 60 ಸಾಕ್ಷ್ಯಗಳ ವಿಚಾರಣೆ ನಡೆಸದಿದ್ದಲ್ಲಿ ದರ್ಶನ್ ಮತ್ತೆ ಜಾಮೀನಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ನ್ಯಾಯಾಲಯವು ತ್ವರಿತವಾಗಿ ಸಾಕ್ಷ್ಯಗಳ ವಿಚಾರಣೆ ನಡೆಸುವಂತೆ ಈಗಾಗಲೇ ಸೂಚಿಸಿದೆ. ಈಗ ವಕೀಲರ ಬದಲಾವಣೆಯಿಂದ ವಿಚಾರಣೆ ತುಸು ನಿಧಾನ ಆದಂತಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರೇವತಿ ಅದ್ವೈತಿಯಿಂದ ಹಿಡಿದು ಸುಂದರ್ ಪಿಚೈವರೆಗೆ ಜಾಗತಿಕ ದೈತ್ಯ ಸಂಸ್ಥೆಗಳ ಚುಕ್ಕಾಣಿ ಹಿಡಿದ ಭಾರತೀಯರು; ಈಗ ಕುನಾಲ್ ಹೊಸ ಸೇರ್ಪಡೆ – Kannada News | From Jayshree Ullal, Revathi Advaithi to Sundar Pichai, Indians leading global tech giants

ಅಮೆರಿಕದ ಬೃಹತ್ ತಂತ್ರಜ್ಞಾನ ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ಮುನ್ನಡೆಸುತ್ತಿರುವ ಭಾರತೀಯ ಮೂಲದ ಸಿಇಒಗಳ (CEOs) ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಭಾರತೀಯರ ನಾಯಕತ್ವ, ನಿರ್ವಹಣಾ ಕೌಶಲ್ಯ ಮತ್ತು ತಂತ್ರಜ್ಞಾನದ ಮೇಲಿನ ಹಿಡಿತಕ್ಕೆ ಇದು ಸಾಕ್ಷಿಯಾಗಿದೆ. ಇತ್ತೀಚೆಗಷ್ಟೇ (ಜೂನ್ 2026) ‘ಕ್ರೆಡ್’ (CRED) ಸಂಸ್ಥಾಪಕ ಕುನಾಲ್ ಶಾ ಅವರು ವಾಟ್ಸಾಪ್‌ನ (WhatsApp) ಗ್ಲೋಬಲ್ ಹೆಡ್ ಆಗಿ ನೇಮಕಗೊಂಡಿರುವುದು ಈ ಪಟ್ಟಿಗೆ ಹೊಸ ಮತ್ತು ಅತಿದೊಡ್ಡ ಸೇರ್ಪಡೆಯಾಗಿದೆ.

ವಿಶ್ವದ ಪ್ರಮುಖ ಕಂಪನಿಗಳನ್ನು ಮುನ್ನಡೆಸುತ್ತಿರುವ ಪ್ರಭಾವಿ ಭಾರತೀಯ ಮೂಲದ ನಾಯಕರ ಪಟ್ಟಿ ಇಲ್ಲಿದೆ.

  • ಸತ್ಯ ನಾಡೆಳ್ಲ, ಮೈಕ್ರೋಸಾಫ್ಟ್ : ಹೈದರಾಬಾದ್ ಮೂಲದ ಸತ್ಯ ನಾಡೆಲ್ಲ (Satya Nadella) ಅವರು 2014ರಿಂದ ಮೈಕ್ರೋಸಾಫ್ಟ್‌ನ ಸಿಇಒ ಆಗಿದ್ದಾರೆ. ಕ್ಲೌಡ್ ಕಂಪ್ಯೂಟಿಂಗ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕ್ಷೇತ್ರದಲ್ಲಿ ಮೈಕ್ರೋಸಾಫ್ಟ್ ಅನ್ನು ಉತ್ತುಂಗಕ್ಕೇರಿಸಿದ ಕೀರ್ತಿ ಇವರದ್ದು.
  • ಸುಂದರ್ ಪಿಚೈ, ಆಲ್ಫಾಬೆಟ್ / ಗೂಗಲ್: ತಮಿಳುನಾಡಿನ ಮಧುರೈನಲ್ಲಿ ಜನಿಸಿದ ಸುಂದರ್ ಪಿಚೈ (Sundar Pichai) ಅವರು 2015ರಲ್ಲಿ ಗೂಗಲ್ (Google) ಸಿಇಒ ಆಗಿ, ನಂತರ ಮಾತೃಸಂಸ್ಥೆ ಆಲ್ಫಾಬೆಟ್‌ಗೂ (Alphabet) ಸಿಇಒ ಆದರು. ಗೂಗಲ್ ಕ್ರೋಮ್, ಆಂಡ್ರಾಯ್ಡ್ ಸೇರಿದಂತೆ ಹಲವು ಪ್ರಮುಖ ಉತ್ಪನ್ನಗಳ ಯಶಸ್ಸಿನ ರೂವಾರಿ ಇವರು.

ಇದನ್ನೂ ಓದಿ: ಚ್ಯಾಟ್ ಜಿಪಿಟಿಯಲ್ಲಿ ಕೇಳಬಾರದ ಒಂದು ಪ್ರಶ್ನೆ ಯಾವುದು? ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಉತ್ತರ ಕೇಳಿ

  • ಕುನಾಲ್ ಶಾ , ವಾಟ್ಸಾಪ್: ಇದು ಇತ್ತೀಚಿನ ಅತಿದೊಡ್ಡ ಬೆಳವಣಿಗೆಯಾಗಿದೆ. ಮೆಟಾ (Meta) ಸಂಸ್ಥೆಯು ಭಾರತೀಯ ಫಿನ್‌ಟೆಕ್ ಸಂಸ್ಥೆ ‘ಕ್ರೆಡ್’ (CRED) ನಲ್ಲಿ $900 ಮಿಲಿಯನ್ ಹೂಡಿಕೆ ಮಾಡಿದ ಬೆನ್ನಲ್ಲೇ, ಅದರ ಸಂಸ್ಥಾಪಕ ಕುನಾಲ್ ಶಾ ಅವರನ್ನು ವಾಟ್ಸಾಪ್‌ನ ಗ್ಲೋಬಲ್ ಹೆಡ್ ಆಗಿ ನೇಮಿಸಿದೆ. ವಿಲ್ ಕ್ಯಾತ್‌ಕಾರ್ಟ್ (Will Cathcart) ಅವರ ಸ್ಥಾನಕ್ಕೆ ಬಂದಿರುವ ಕುನಾಲ್ ಶಾ, ವಾಟ್ಸಾಪ್ ಮುನ್ನಡೆಸುತ್ತಿರುವ ಮೊದಲ ಭಾರತೀಯ ನಾಯಕ ಎನಿಸಿಕೊಂಡಿದ್ದಾರೆ.
  • ಅರವಿಂದ್ ಕೃಷ್ಣ, ಐಬಿಎಂ: ಆಂಧ್ರಪ್ರದೇಶ ಮೂಲದ ಅರವಿಂದ್ ಕೃಷ್ಣ ಅವರು 2020ರಿಂದ ಐಬಿಎಂ ಸಂಸ್ಥೆಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಹೈಬ್ರಿಡ್ ಕ್ಲೌಡ್ ತಂತ್ರಜ್ಞಾನದಲ್ಲಿ 100 ವರ್ಷಕ್ಕೂ ಹಳೆಯದಾದ ಈ ಕಂಪನಿಯನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸುತ್ತಿದ್ದಾರೆ.
  • ನೀಲ್ ಮೋಹನ್, ಯೂಟ್ಯೂಬ್: ಲಕ್ನೋದಲ್ಲಿ ಜನಿಸಿದ ನೀಲ್ ಮೋಹನ್ (Neil Mohan) 2023ರಲ್ಲಿ ವಿಶ್ವದ ಅತಿ ದೊಡ್ಡ ವಿಡಿಯೋ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ನ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು. ಗೂಗಲ್‌ನ ಜಾಹೀರಾತು ವಿಭಾಗ ಮತ್ತು ಯೂಟ್ಯೂಬ್ ಶಾರ್ಟ್ಸ್ (YouTube Shorts) ಯಶಸ್ಸಿನಲ್ಲಿ ಇವರದ್ದು ಪ್ರಮುಖ ಪಾತ್ರ.
  • ಶಂತನು ನಾರಾಯಣ್, ಅಡೋಬ್: ಹೈದರಾಬಾದ್‌ನಲ್ಲಿ ಬೆಳೆದ ಶಂತನು ನಾರಾಯಣ್ (Shantanu Narayen) ಅವರು 2007ರಿಂದ ಅಡೋಬ್ ಸಂಸ್ಥೆಯ ಸಿಇಒ ಆಗಿದ್ದಾರೆ. ಸಾಫ್ಟ್‌ವೇರ್ ಕ್ಷೇತ್ರದಿಂದ ಕ್ಲೌಡ್-ಆಧಾರಿತ ಚಂದಾದಾರಿಕೆ (Subscription) ಮಾದರಿಗೆ ಅಡೋಬ್ ಅನ್ನು ಬದಲಾಯಿಸಿ ಕಂಪನಿಯ ಆದಾಯವನ್ನು ಹೆಚ್ಚಿಸಿದ ಶ್ರೇಯಸ್ಸು ಇವರದ್ದು.
  • ನಿಕೇಶ್ ಅರೋರಾ, ಪಾಲೋ ಆಲ್ಟೊ ನೆಟ್‌ವರ್ಕ್ಸ್: ನಿಕೇಶ್ ಅರೋರಾ (Nikesh Arora) ಸೈಬರ್ ಸೆಕ್ಯುರಿಟಿ ಕ್ಷೇತ್ರದ ದೈತ್ಯ ಕಂಪನಿಯಾದ ಪಾಲೋ ಆಲ್ಟೊ ನೆಟ್‌ವರ್ಕ್ಸ್‌ನ (Palo Alto Networks) ಸಿಇಒ ಆಗಿ 2018ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಟೆಕ್ ಸಿಇಒಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದಾರೆ.
  • ರೇವತಿ ಅದ್ವೈತಿ, ಫ್ಲೆಕ್ಸ್ (Flex): ರೇವತಿ ಅದ್ವೈತಿ (Revathi Advaithi) ಜಾಗತಿಕ ಉತ್ಪಾದನೆ ಮತ್ತು ಸಪ್ಲೈ ಚೈನ್ ಕಂಪನಿಯಾದ ಫ್ಲೆಕ್ಸ್‌ನ ಸಿಇಒ ಆಗಿ 2019ರಲ್ಲಿ ನೇಮಕಗೊಂಡರು. ಕಾರ್ಪೊರೇಟ್ ಜಗತ್ತಿನಲ್ಲಿ, ಅದರಲ್ಲೂ ಉತ್ಪಾದನಾ ವಲಯದಲ್ಲಿ ಭಾರತೀಯ ಮಹಿಳಾ ನಾಯಕತ್ವದ ಅತ್ಯುತ್ತಮ ಉದಾಹರಣೆ ಇವರಾಗಿದ್ದಾರೆ.

ಇದನ್ನೂ ಓದಿ: ಒರಾಕಲ್​ನಲ್ಲಿ ಒಂದು ವರ್ಷದಲ್ಲಿ ಕೆಲಸ ಕಳೆದುಕೊಂಡ 21,000 ಉದ್ಯೋಗಿಗಳು; ಎಐನಲ್ಲಿ ಹೂಡಿಕೆ ಮಾಡಲಿರುವ ಐಟಿ ದಿಗ್ಗಜ

  • ಸಂಜಯ್ ಮೆಹ್ರೋತ್ರಾ, ಮೈಕ್ರಾನ್ ಟೆಕ್ನಾಲಜಿ: ಕಾನ್ಪುರದಲ್ಲಿ ಜನಿಸಿದ ಸಂಜಯ್ ಮೆಹ್ರೋತ್ರಾ (Sanjay Mehrotra) ಅವರು 2017ರಿಂದ ಅಮೆರಿಕದ ಪ್ರಮುಖ ಸೆಮಿಕಂಡಕ್ಟರ್ ಮತ್ತು ಮೆಮೊರಿ ಚಿಪ್ ಉತ್ಪಾದನಾ ಕಂಪನಿಯಾದ ಮೈಕ್ರಾನ್‌ನ (Micron Technology) ಸಿಇಒ ಆಗಿದ್ದಾರೆ. ಈ ಹಿಂದೆ ಇವರು ಸ್ಯಾನ್‌ಡಿಸ್ಕ್ (SanDisk) ಕಂಪನಿಯ ಸಹ-ಸಂಸ್ಥಾಪಕರಾಗಿದ್ದರು.
  • ಜಯಶ್ರೀ ಉಲ್ಲಾಳ್, ಅರಿಸ್ಟಾ ನೆಟ್‌ವರ್ಕ್ಸ್: ಲಂಡನ್‌ನಲ್ಲಿ ಜನಿಸಿ ದೆಹಲಿಯಲ್ಲಿ ಬೆಳೆದ ಜಯಶ್ರೀ ಉಲ್ಲಾಳ್ (Jayshree Ullal) ಅವರು 2008ರಿಂದ ಕ್ಲೌಡ್ ನೆಟ್‌ವರ್ಕಿಂಗ್ ಕಂಪನಿ ಅರಿಸ್ಟಾ ನೆಟ್‌ವರ್ಕ್ಸ್‌ನ (Arista Networks) ಸಿಇಒ ಆಗಿದ್ದಾರೆ. ಇವರು ಸಿಲಿಕಾನ್ ವ್ಯಾಲಿಯಲ್ಲಿ ಅತ್ಯಂತ ಪ್ರಭಾವಿ ಮಹಿಳೆಯರಲ್ಲೊಬ್ಬರಾಗಿದ್ದು, ಸ್ವಯಂ-ನಿರ್ಮಿತ ಬಿಲಿಯನೇರ್ (Self-made billionaire) ಆಗಿದ್ದಾರೆ.
  • ರಾಜ್ ಸುಬ್ರಮಣಿಯಂ, ಫೆಡ್ಎಕ್ಸ್: ಕೇರಳದ ತಿರುವನಂತಪುರಂ ಮೂಲದ ರಾಜ್ ಸುಬ್ರಮಣಿಯಂ (Raj Subramaniam) ಅವರು 2022ರಲ್ಲಿ ವಿಶ್ವದ ಅತಿದೊಡ್ಡ ಕೊರಿಯರ್ ಮತ್ತು ಲಾಜಿಸ್ಟಿಕ್ಸ್ ಕಂಪನಿಯಾದ ಫೆಡ್ಎಕ್ಸ್‌ನ (FedEx) ಸಿಇಒ ಆಗಿ ಅಧಿಕಾರ ವಹಿಸಿಕೊಂಡರು. ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಅದೇ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮುಸ್ಲಿಂ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು? – Kannada News | Karnataka Cabinet Formation: Minister Satish Jarkiholi on Regional Representation and Future Decisions

ಬೆಳಗಾವಿ, ಜೂ.23: ಮುಂಗಾರು ಅಧಿವೇಶನ ಹಾಗೂ ಸಚಿವ ಸಂಪುಟ ವಿಸ್ತರಣೆಯ ಕುರಿತು ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಸಚಿವ ಸಂಪುಟ ರಚನೆಯಲ್ಲಿ ಪ್ರಾದೇಶಿಕತೆ ಮತ್ತು ಜಾತಿ ಆಧಾರಿತ ಪ್ರಾತಿನಿಧ್ಯವನ್ನು ಗಮನದಲ್ಲಿಟ್ಟುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಹಾಸನ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಕುರಿತು ಮಾತನಾಡಿದ ಅವರು, ಇನ್ನು ಹಾಸನಕ್ಕೆ ಸಿಕ್ಕಿಲ್ಲ ಎಂದಿದ್ದಾರೆ. ಪಕ್ಷದ ನಿಲುವು ಸ್ಪಷ್ಟಪಡಿಸಿದ ಸಚಿವ ಜಾರಕಿಹೊಳಿ, ಮುಸ್ಲಿಂ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪಕ್ಷದಲ್ಲಿ ಚರ್ಚೆಯಾಗಿದೆ. ಮುಂದಿನ ನಿರ್ಧಾರ ಪಕ್ಷಕ್ಕೆ ಬಿಟ್ಟಿದ್ದು. ಪಕ್ಷಕ್ಕೆ ಯಾವ ರೀತಿ ಅನುಕೂಲ ಆಗುತ್ತದೆ ಎಂಬುದನ್ನು ನೋಡಿ, ಪ್ರಾಂತ್ಯ ವೈಸ್, ಜಾತಿ ಆಧಾರದ ಮೇಲೆ ಇವನ್ನೆಲ್ಲಾ ಪರಿಗಣಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು. ಸಂಪುಟ ವಿಸ್ತರಣೆಯ ಬಗ್ಗೆ ದಿನಾಂಕ ನಿಗದಿ ಕುರಿತು ಕೇಳಿದಾಗ, ಯಾವುದೇ ನಿರ್ದಿಷ್ಟ ದಿನಾಂಕದ ಬಗ್ಗೆ ನನಗೆ ಮಾಹಿತಿ ಇಲ್ಲ. ಶೀಘ್ರವಾಗಿ ನಿರ್ಧಾರ ಕೈಗೊಳ್ಳಬೇಕು ಎಂಬುದು ನಮ್ಮ ಆಸೆ ಎಂದರು. ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಗೂ, ಈಗಿನ ಮುಖ್ಯಮಂತ್ರಿಯವರ ಅವಧಿಗೂ ಬದಲಾವಣೆಗಳಿವೆ ಎಂದು ಸ್ಪಷ್ಟಪಡಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಅಂದು ದ್ವೇಷಿಸುತ್ತಿದ್ದ ಈ ನಗರ ಇಂದು ನಂಗೆ ತುಂಬಾ ಆಪ್ತ; ಬೆಂಗಳೂರನ್ನು ಮೆಚ್ಚಿಕೊಂಡ ಮಹಿಳೆ – Kannada News | Bengaluru: Woman says she can’t imagine leaving Bengaluru today

ಬೆಂಗಳೂರು, ಜೂನ್ 23: ಶಿಕ್ಷಣ ಉದ್ಯೋಗ ಹೀಗೆ ನಾನಾ ಕಾರಣಕ್ಕೆ ಬೆಂಗಳೂರು (Bengaluru), ಮುಂಬೈ ಹೀಗೆ ದೊಡ್ಡ ದೊಡ್ಡ ನಗರಗಳಿಗೆ ಹೋಗಬೇಕಾಗುತ್ತದೆ. ಹೊಸ ಜನರು, ಹೊಸ ಊರಿಗೆ ಹೊಂದಿಕೊಳ್ಳಲು ಸಮಯ ಬೇಕು. ಎಲ್ಲರಿಗೂ ಅದ್ಭುತವಾಗಿ ಕಾಣುವ ಬೆಂಗಳೂರು ಹೊಸಬರಿಗೆ ಅಪರಿಚಿತವೆನಿಸುತ್ತದೆ. ಹೀಗಾದಾಗ ಮನೆ ಪದೇ ಪದೇ ನೆನಪಾಗುತ್ತದೆ. ಮಹಿಳೆಯೊಬ್ಬರು ಕಾಲಕ್ರಮೇಣ ಈ ನಗರದ ಬಗ್ಗೆ ತಮಗಿದ್ದ ಭಾವನೆಗಳು ಹೇಗೆ ಬದಲಾದವು ಎಂಬ ಬಗ್ಗೆ ವಿಡಿಯೋ ಮಾಡಿದ್ದಾರೆ. ಮೊದಲು ಬೆಂಗಳೂರನ್ನು ದ್ವೇಷಿಸುತ್ತಿದ್ದೆ. ಆದರೆ ಈಗ ಈ ನಗರವನ್ನು ಬಿಟ್ಟು ಬೇರೆಲ್ಲಿಗೂ ಹೋಗುವುದನ್ನು ಊಹಿಸಲು ಅಸಾಧ್ಯ ಎಂದು ಹೇಳಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ನೆಟ್ಟಿಗರು ಬೆಂಗಳೂರಿನ ಬಗ್ಗೆ ಈ ಮಹಿಳೆಯ ಅಭಿಪ್ರಾಯ ಕೇಳಿ ಖುಷಿಯಾಗಿದ್ದಾರೆ.

ರಿಯಾಹ್ (Riyah) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಬೆಂಗಳೂರು ಒಂದು ವೈಬ್ ಎಂಬ ಶೀರ್ಷಿಕೆ ನೀಡಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ನಾನು ಮೊದಲು ಇಲ್ಲಿಗೆ ಬಂದಾಗ ಬೆಂಗಳೂರನ್ನು ದ್ವೇಷಿಸುತ್ತಿದ್ದೆ. ಬೆಂಗಳೂರು ಅಂತರ್ಗತವಾಗಿ ಕೆಟ್ಟದ್ದಾಗಿರುವುದರಿಂದ ಅಲ್ಲ. ನನಗೆ ಇಲ್ಲಿ ಯಾರು ಸ್ನೇಹಿತರು ಇರಲಿಲ್ಲ, ಆತ್ಮೀಯತೆಯ ಭಾವನೆ ಇರಲಿಲ್ಲ. ನನಗೆ ಇಲ್ಲಿ ಏನೂ ಪರಿಚಿತವಾಗಿರಲಿಲ್ಲ. ಆದರೆ ಆ ನಗರವು ನನ್ನ ಮೇಲೆ ತುಂಬಾ ಪ್ರಭಾವ ಬೀರಿದೆ. ನಾನು ಬೇರೆ ಯಾವುದೇ ನಗರಕ್ಕೆ ಸ್ಥಳಾಂತರಗೊಳ್ಳುವ ಬಗ್ಗೆ ಯೋಚಿಸಿದಾಗ, ಅದು ಸರಿಯಲ್ಲ ಅನಿಸಿತು. ಈಗ ಈ ಊರು ಬಿಟ್ಟು ಹೋಗುವುದನ್ನು ಊಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ತಮಾಷೆಯ ಭಾಗವೆಂದರೆ ನನಗೆ ಇನ್ನೂ ಇಲ್ಲಿ ಹೆಚ್ಚಿನ ಸ್ನೇಹಿತರು ಇಲ್ಲ, ಇದ್ದರೆ ಒಬ್ಬರು ಇಬ್ಬರಷ್ಟೇ. ಆದರೆ ನಾನು ಅವರನ್ನು ಭೇಟಿಯಾಗುವುದು ಅಪರೂಪ. ವಾಸ್ತವವಾಗಿ, ಈ ವೀಡಿಯೊವನ್ನು ಒಬ್ಬಂಟಿ ಡೇಟ್‌ನಲ್ಲಿ ಚಿತ್ರೀಕರಿಸಲಾಗಿದೆ. ಹೌದು, ನೀವು ವಾಸಿಸುವ ಪ್ರತಿಯೊಂದು ಮನೆ ಮತ್ತು ನಗರ ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಮನೆಯ ಬಾಲ್ಕನಿಯಲ್ಲೇ ವೆಸ್ಟರ್ನ್ ಕಮೋಡ್, ವೈರಲ್ ಆಯ್ತು ದೃಶ್ಯ

ಈ ಪೋಸ್ಟ್ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರ, ನನಗೂ ಹಾಗೆಯೇ ಅನಿಸುತ್ತಿದೆ. ಬೆಂಗಳೂರು ಮೊದಲಿಗೆ ಅಪರಿಚಿತವೆನಿಸಿತು, ಆದರೆ ಹೇಗೋ, ನಗರ ನಿಧಾನವಾಗಿ ನನ್ನ ಮೇಲೆ ಪ್ರಭಾವ ಬೀರಿದೆ ಎಂದಿದ್ದಾರೆ. ಇನ್ನೊಬ್ಬರು, ಈ ನಗರವೇ ಮೊದಲು ಅಪರಿಚಿತ, ಆ ಬಳಿಕ ಹುಟ್ಟೂರಿಗಿಂತಲೂ ಆಪ್ತ ಎಂದು ಹೇಳಿದ್ದಾರೆ. ಮತ್ತೊಬ್ಬರು, ಬೆಂಗಳೂರಿಗೆ ಬಂದಾಗ ಮೊದ ಮೊದಲು ಹಾಗೆಯೇ ಅನಿಸಿತು, ಆದರೆ ಈಗ ಈ ನಗರಕ್ಕೆ ಹೊಂದಿಕೊಂಡಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ಬಗ್ಗೆ ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡ ನಟ ರಾಮ್ ಚರಣ್ – Kannada News | Ram Charan being trolled for talking about Dhurandhar movie

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಮೂರು ವಾರದ ಹಿಂದೆ ಬಿಡುಗಡೆ ಆಗಿದ್ದು ಹಿಟ್ ಎನಿಸಿಕೊಂಡಿದೆ. ಬಿಡುಗಡೆ ಆದ 18 ದಿನಗಳಲ್ಲಿ ಸುಮಾರು 350 ಕೋಟಿಗೂ ಹೆಚ್ಚು ಮೊತ್ತವನ್ನು ಈ ಸಿನಿಮಾ ಗಳಿಕೆ ಮಾಡಿದೆ. ‘ಆರ್​​ಆರ್​​ಆರ್’ ಬಳಿಕ ಸತತ ಸೋಲಿನಿಂದ ಕಂಗೆಟ್ಟಿದ್ದ ನಟ ರಾಮ್ ಚರಣ್, ‘ಪೆದ್ದಿ’ ಸಿನಿಮಾ ಮೂಲಕ ಗೆಲುವು ಸಾಧಿಸಿದ್ದಾರೆ. ಆದರೆ ಇತ್ತೀಚೆಗೆ ರಾಮ್ ಚರಣ್, ತಮ್ಮ ಮಾತುಗಳಿಂದ ಟ್ರೋಲ್​​ಗೆ ಗುರಿ ಆಗುತ್ತಿದ್ದಾರೆ. ‘ಪೆದ್ದಿ’ ಪ್ರಚಾರದ ಸಮಯದಲ್ಲಿ ಜಸ್ಪೀತ್ ಬುಮ್ರಾ ಅವರನ್ನು ಫುಟ್​​ಬಾಲರ್ ಎಂದು ಹೇಳಿ ಟ್ರೋಲ್ ಆಗಿದ್ದರು. ಈಗ ‘ಧುರಂಧರ್ 2’ ಸಿನಿಮಾ ಬಗ್ಗೆ ಮಾತನಾಡಿ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ.

ಇತ್ತೀಚೆಗಷ್ಟೆ ನಟ ರಾಮ್ ಚರಣ್, ಮಾಧ್ಯಮವೊಂದು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸಿನಿಮಾಗಳ ಬಗ್ಗೆ, ಸಿನಿಮಾಗಳಲ್ಲಿ ರಾಷ್ಟ್ರೀಯತೆಯ ಬಗ್ಗೆ ಮಾತನಾಡಿದರು. ಇದೇ ಸಂವಾದದಲ್ಲಿ ‘ಧುರಂಧರ್’ ಸಿನಿಮಾದ ಬಗ್ಗೆಯೂ ಚರ್ಚೆಯಾಯ್ತು, ಈ ವೇಳೆ ನಟ ರಾಮ್ ಚರಣ್, ‘ನಾನು ಕಳೆದ ವಾರವಷ್ಟೆ ಒಟಿಟಿಯಲ್ಲಿ ‘ಧುರಂಧರ್’ ಸಿನಿಮಾ ನೋಡಿದೆ. ಅದೊಂದು ಬಹಳ ಅದ್ಭುತವಾದ ಸಿನಿಮಾ, ಆ ಸಿನಿಮಾನಲ್ಲಿ, ಎಲ್ಲ ವಿಷಯಗಳು ಸರಿಯಾಗಿ ಒದಗಿ ಬಂದಿವೆ’ ಎಂದರು.

ಆದರೆ ರಾಮ್ ಚರಣ್, ‘ಧುರಂಧರ್ 2’ ಸಿನಿಮಾ ಬಿಡುಗಡೆ ಆದ ಮರುದಿನವೇ (ಮಾರ್ಚ್ 20) ಸಿನಿಮಾ ಬಗ್ಗೆ ಟ್ವೀಟ್ ಮಾಡಿ, ಸಿನಿಮಾವನ್ನು ಕೊಂಡಾಡಿದ್ದರು. ಖುದ್ದು ಸಿನಿಮಾ ನೋಡಿ ಬರೆದವರಂತೆ ವಿಮರ್ಶೆ ಸಹ ಬರೆದಿದ್ದರು. ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಅವರ ಕ್ರಿಯಾಶೀಲತೆಯನ್ನು, ರಣ್ವೀರ್ ಸಿಂಗ್ ಅವರ ನಟನೆಯನ್ನು ಕೊಂಡಾಡಿದ್ದರು. ರಾಮ್ ಚರಣ್ ಟ್ವೀಟ್ ನೋಡಿದವರು, ನಟ ಸಿನಿಮಾ ನೋಡಿ ಟ್ವೀಟ್ ಮಾಡಿದ್ದಾರೆ ಎಂದುಕೊಂಡಿದ್ದರು. ಆದರೆ ಈಗ ರಾಮ್ ಚರಣ್, ತಾವು ಇತ್ತೀಚೆಗಷ್ಟೆ ಒಟಿಟಿಯಲ್ಲಿ ಸಿನಿಮಾ ನೋಡಿದೆ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ರಾಮ್ ಚರಣ್ ಟ್ರೋಲ್ ಆಗುತ್ತಿದ್ದಾರೆ.

ಇದನ್ನೂ ಓದಿ:ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಒಟಿಟಿಗೆ ಎಂಟ್ರಿ ಕೊಡೋದು ಯಾವಾಗ?

ಆದರೆ ರಾಮ್ ಚರಣ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಬೆಂಬಲಕ್ಕೆ ಬಂದಿದ್ದು, ‘ರಾಮ್ ಚರಣ್ ಅವರು ಎರಡನೇ ಬಾರಿಗೆ ಒಟಿಟಿಯಲ್ಲಿ ನೋಡಿದ್ದಾರೆ. ಹಾಗಾಗಿ ಅವರು ಸಂವಾದದಲ್ಲಿ ಹಾಗೆ ಹೇಳಿದ್ದಾರೆ ಎಂದಿದ್ದಾರೆ. ಏನೇ ಆಗಲಿ, ರಾಮ್ ಚರಣ್ ಮತ್ತೊಮ್ಮೆ ತಮ್ಮ ಮಾತಿನಿಂದಾಗಿ ಟ್ರೋಲ್ ಆಗುತ್ತಿದ್ದಾರೆ.

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ರಾಮ್ ಚರಣ್ ಅವರು ಸುಕುಮಾರ್ ಅವರೊಟ್ಟಿಗೆ ಸಿನಿಮಾ ಮಾಡಲಿದ್ದಾರೆ. ಇನ್ನೆರಡು ತಿಂಗಳಲ್ಲಿ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಸುಕುಮಾರ್ ಜೊತೆಗೆ ಇದು ಅವರ ಎರಡನೇ ಸಿನಿಮಾ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಕರಾವಳಿಯಲ್ಲಿ ನಾಳೆ ಮಳೆಯಬ್ಬರ, ಈ ಜಿಲ್ಲೆಗಳಲ್ಲಿಯೂ ವರ್ಷಧಾರೆಯ ನಿರೀಕ್ಷೆ – Kannada News | Karnataka Weather Update: Heavy Rain Alert Issued for Coastal Districts on June 24

ಬೆಂಗಳೂರು, ಜೂನ್​​ 23: ಕರ್ನಾಟಕದಾದ್ಯಂತ ಮುಂಗಾರು ಬಿರುಸು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಒಂದು ವಾರಗಳ ಅವಧಿಗೆ ರಾಜ್ಯದ ವಿವಿಧೆಡೆ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮುಂದಿನ 24 ಗಂಟೆಗಳಲ್ಲಿ ಕರವಾಳಿ ಕರ್ನಾಟಕದ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿಲೋ ಮೀಟರ್​​ ವೇಗದ ಗಾಳಿಯ ಜೊತೆಗೆ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭಾರಿ ವರ್ಷಧಾರೆಯ ಎಚ್ಚರಿಕೆ ನೀಡಲಾಗಿದೆ.

ರಾಜ್ಯದ ಎಲ್ಲೆಲ್ಲಿ ಮಳೆ?

ದಾವಣಗೆರೆ ಚಿಕ್ಕಮಗಳೂರು, ಹಾಸನ, ಕೊಡಗು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರದ ಹಲವೆಡೆಯೂ ಗುಡುಗು ಸಹಿತ ಸಾಧಾರಣ ಮಳೆಯನ್ನು ಅಂದಾಜಿಸಲಾಗಿದೆ.

ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ; ಮಾಯವಾಯ್ತು ಮುಂಗಾರು, ಹೇಳತೀರದಾಯ್ತು ಅನ್ನದಾತರ ಸ್ಥಿತಿ

ಹೇಗಿರಲಿದೆ ಬೆಂಗಳೂರು ವಾತಾವರಣ?

ಈ ವಾರ ಬೆಂಗಳೂರು ನಗರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಮುಂದಿನ ಕೆಲವು ದಿನಗಳ ಕಾಲ ತೇವಾಂಶಯುಕ್ತ ವಾತಾವರಣ ಕಂಡುಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಐಎಂಡಿ ವರದಿ ಪ್ರಕಾರ, ಜೂನ್ 28ರವರೆಗೆ (ಭಾನುವಾರ) ಬೆಂಗಳೂರಿನಲ್ಲಿ ಮಳೆ ಚಟುವಟಿಕೆ ಮುಂದುವರಿಯುವ ಸಾಧ್ಯತೆಯಿದೆ. ಮುಂದಿನ ವಾರದ ಹವಾಮಾನ ಪರಿಸ್ಥಿತಿಯ ಸ್ಪಷ್ಟ ಚಿತ್ರಣ ಐಎಂಡಿಯ ವಿಸ್ತೃತ ಮುನ್ಸೂಚನೆ ಪ್ರಕಟವಾದ ಬಳಿಕ ಲಭ್ಯವಾಗಲಿದೆ. ಬುಧವಾರ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯುವ ಸಾಧ್ಯತೆ ಇದ್ದು, ನಗರದ ಕೆಲವೆಡೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ನಗರದ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ನಡುವೆಯೇ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:07 pm, Tue, 23 June 26

Source link

ಆಂಧ್ರದ ಶೇಷಾಚಲಂ ಅರಣ್ಯದಲ್ಲಿ ವಿಜಯನಗರ ಸಾಮ್ರಾಜ್ಯದ ಮಹತ್ವದ ಶಾಸನಗಳು ಪತ್ತೆ – Kannada News | Ancient Inscriptions from Vijayanagara Empire Discovered in Andhra Pradesh Seshachalam Forests

Inscriptions From Vijayanagara Empire Discovered In AndhraImage Credit source: TV9

ತಿರುಪತಿ, ಜೂನ್ 23: ಆಂಧ್ರಪ್ರದೇಶದ ತಿರುಮಲ ಬೆಟ್ಟಗಳನ್ನು ಒಳಗೊಂಡಿರುವ ಶೇಷಾಚಲಂ ಅರಣ್ಯ ವಲಯದಲ್ಲಿ (Seshachalam Forests) ವಿಜಯನಗರ ಸಾಮ್ರಾಜ್ಯದ (Vijayanagara Empire) ಕಾಲದ ಅತ್ಯಂತ ಅಪರೂಪದ ಐತಿಹಾಸಿಕ ಪುರಾವೆಗಳು ಮತ್ತು ಶಿಲ್ಪಕಲೆಗಳು ಪತ್ತೆಯಾಗಿವೆ. ಇತಿಹಾಸ ಸಂಶೋಧಕರು ಮತ್ತು ಪುರಾತತ್ವ ಇಲಾಖೆಯ ವಿಜ್ಞಾನಿಗಳು ನಡೆಸಿರುವ ಅನ್ವೇಷಣೆಯಲ್ಲಿ ಈ ಮಹತ್ವದ ವಿಷಯ ಬೆಳಕಿಗೆ ಬಂದಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಅಭಯಾರಣ್ಯಗಳಲ್ಲಿ ಅಡಗಿರುವ ಐತಿಹಾಸಿಕ ಸಂಪತ್ತನ್ನು ಬಯಲು ಮಾಡಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನಲ್ಲಮಲ, ಲಂಕಮಲ ಮತ್ತು ಶೇಷಾಚಲಂ ಕಾಡುಗಳಲ್ಲಿ ಸಮೀಕ್ಷೆ ನಡೆಸುತ್ತಿದೆ.

ಅರಣ್ಯ ಇಲಾಖೆಯ ಸಹಕಾರದೊಂದಿಗೆ, ಅಭಯಾರಣ್ಯಗಳಲ್ಲಿ ಅವುಗಳ ಕುರುಹುಗಳನ್ನು ಹುಡುಕುವ ಕೆಲಸವನ್ನು ಪ್ರಾರಂಭಿಸಿದೆ. ಶೇಷಾಚಲಂ ಅಭಯಾರಣ್ಯದಲ್ಲಿನ ಶಾಸನ ನಿಧಿಗಳನ್ನು ಬಯಲು ಮಾಡುವ ಪ್ರಯತ್ನದಲ್ಲಿ ASI ಸದಾಶಿವಕೋಣದಲ್ಲಿ ಸಮೀಕ್ಷೆಯನ್ನು ಕೈಗೊಂಡಿದೆ. ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಶಿಲಾಫಲಕಗಳ ಮೇಲೆ ಬರೆಯಲಾಗಿದೆ. ಪಲ್ಲವರು ಮತ್ತು ಕಾಕತೀಯ ರಾಜರು ಮಾಡಿದ ಅಭಿವೃದ್ಧಿಯ ಕುರಿತು ಹಲವಾರು ಶಿಲಾ ಶಾಸನಗಳನ್ನು ಗುರುತಿಸಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು, ಅವುಗಳ ವಿವರಗಳನ್ನು ಸಂರಕ್ಷಿಸಲು ಪ್ರಯತ್ನಿಸುತ್ತಿದೆ.

ಆಂಧ್ರಪ್ರದೇಶದ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು, ಅಭಯಾರಣ್ಯಗಳಲ್ಲಿ ಅಡಗಿರುವ ಐತಿಹಾಸಿಕ ಸತ್ಯಗಳನ್ನು ಬಯಲು ಮಾಡುತ್ತಿದೆ. ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಲಂಕಾಮಾಲಾ ಮತ್ತು ನಲ್ಲಮಲ ಕಾಡುಗಳಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸಿದೆ. ಮೊದಲ ಶತಮಾನಕ್ಕೂ ಮೊದಲಿನಿಂದಲೂ ನಲ್ಲಮಲದಲ್ಲಿ ಶ್ರೀಶೈಲ ದೇವಾಲಯವಿತ್ತು ಎಂದು ಶಾಸನಗಳ ಮೂಲಕ ಸ್ಪಷ್ಟಪಡಿಸಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು, ಶ್ರೀ ಕೃಷ್ಣ ದೇವರಾಯ ಮತ್ತು ಶಿವಾಜಿ ಸೇರಿದಂತೆ ಅನೇಕ ಜನರು ಶ್ರೀಶೈಲಕ್ಕೆ ಭೇಟಿ ನೀಡಿದ್ದರು ಎಂದು ಗುರುತಿಸಿದೆ.

ಇದನ್ನೂ ಓದಿ: ವಿದೇಶಗಳಿಂದ 640 ಪುರಾತನ ಕಲಾಕೃತಿಗಳನ್ನು ಮರಳಿ ತಂದ ಪುರಾತತ್ವ ಇಲಾಖೆ, ಅಮೆರಿಕದಿಂದಲೇ ಹೆಚ್ಚು

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಈಗಾಗಲೇ 38 ಶಾಸನಗಳನ್ನು ಗುರುತಿಸಿದೆ ಮತ್ತು ಶಾಸನಗಳ ಮೂಲಕ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯದ ಮಹತ್ವವನ್ನು ತಿಳಿದುಕೊಂಡಿದೆ. 2ನೇ ಶತಮಾನದ ಶನಿವಾಹನರ ಆಳ್ವಿಕೆಗೆ ಸಂಬಂಧಿಸಿದ ಅನೇಕ ಶಾಸನಗಳನ್ನು, ಆದಿಮಾನವನ ವಾಸಸ್ಥಳಗಳು ಮತ್ತು ಅದಕ್ಕೆ ಪುರಾವೆಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಪತ್ತೆಹಚ್ಚುತ್ತಿದೆ.

ಇದರ ಭಾಗವಾಗಿ, ಆಂಧ್ರಪ್ರದೇಶ ಸರ್ಕಾರವು ಹೆಚ್ಚಿನ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪುರಾತತ್ವ ಇಲಾಖೆಯು ಮೈಸೂರು ಪುರಾತತ್ವ ಜಂಟಿ ನಿರ್ದೇಶಕ ಮುನಿರತ್ನಂ ರೆಡ್ಡಿ ಮತ್ತು ತಿರುಪತಿ ಸಂಸದ ಗುರುಮೂರ್ತಿ ಅವರ ಸಹಯೋಗದೊಂದಿಗೆ ಶೇಷಾಚಲಂ ಅಭಯಾರಣ್ಯದ ಪುರಾತತ್ವ ಸಂಪತ್ತನ್ನು ಬಯಲು ಮಾಡಲು ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: ಕೊನೆಗೂ ಎಚ್ಚೆತ್ತ ಪುರಾತತ್ವ ಇಲಾಖೆ: ಸೋರುತ್ತಿದ್ದ ಬನವಾಸಿ ದೇಗುಲದ ದುರಸ್ತಿ ಕಾರ್ಯ ಆರಂಭ

ಅರಣ್ಯದ ದಟ್ಟವಾದ ಆವರಣದಲ್ಲಿ ವಿಜಯನಗರ ಕಾಲಕ್ಕೆ ಸೇರಿದ ಹಲವಾರು ಸ್ಮಾರಕಗಳು ಪತ್ತೆಯಾಗಿವೆ. ಅವುಗಳೆಂದರೆ,

ಶಿಲಾಶಾಸನಗಳು ಮತ್ತು ವೀರಗಲ್ಲುಗಳು: ಅಂದಿನ ರಾಜರು, ಸೈನಿಕರ ಶೌರ್ಯ ಹಾಗೂ ಧಾರ್ಮಿಕ ಆಚರಣೆಗಳನ್ನು ಬಿಂಬಿಸುವ ಕಲ್ಲಿನ ಶಾಸನಗಳು ಮತ್ತು ವೀರಗಲ್ಲುಗಳು ಸಿಕ್ಕಿವೆ.

ಪ್ರಾಚೀನ ದೇವಾಲಯದ ಅವಶೇಷಗಳು: ವಿಜಯನಗರ ಶೈಲಿಯ ವಿಶಿಷ್ಟ ವಾಸ್ತುಶಿಲ್ಪವನ್ನು ಹೊಂದಿರುವ ಸಣ್ಣ ಗುಡಿಗಳು, ಕಲ್ಲಿನ ಕಂಬಗಳು ಮತ್ತು ಕೆತ್ತನೆಗಳು ಈ ಪ್ರದೇಶದಲ್ಲಿ ಪತ್ತೆಯಾಗಿವೆ.

ಕಾವಲು ಗೋಪುರಗಳು: ಅರಣ್ಯದ ಮೂಲಕ ಹಾದುಹೋಗುತ್ತಿದ್ದ ಅಂದಿನ ಪ್ರಮುಖ ವ್ಯಾಪಾರಿ ಮಾರ್ಗಗಳು ಹಾಗೂ ತಿರುಮಲ ದೇವಸ್ಥಾನಕ್ಕೆ ಬರುವ ಭಕ್ತರ ರಕ್ಷಣೆಗಾಗಿ ನಿರ್ಮಿಸಲಾಗಿದ್ದ ಭದ್ರತಾ ಕೋಟೆ ಮತ್ತು ಕಾವಲು ಗೋಪುರಗಳ ಅವಶೇಷಗಳು ಪತ್ತೆಯಾಗಿವೆ.

ಇತಿಹಾಸ ತಜ್ಞರ ಪ್ರಕಾರ, ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ರಾಜರಾದ ಶ್ರೀಕೃಷ್ಣದೇವರಾಯ ಸೇರಿದಂತೆ ಹಲವು ರಾಜರು ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ಪರಮ ಭಕ್ತರಾಗಿದ್ದರು. ರಾಜರು ಶ್ರೀವಾರಿ ದೇವಸ್ಥಾನಕ್ಕೆ ಭೇಟಿ ನೀಡಲು ಹಾಗೂ ಯುದ್ಧದ ಕಾರ್ಯತಂತ್ರಗಳಿಗಾಗಿ ಶೇಷಾಚಲಂ ಅರಣ್ಯ ಮಾರ್ಗಗಳನ್ನು ಹೆಚ್ಚಾಗಿ ಬಳಸುತ್ತಿದ್ದರು. ಅಂದಿನ ಕಾಲದಲ್ಲಿ ಈ ಅರಣ್ಯ ವಲಯವು ಕೇವಲ ಪ್ರಕೃತಿ ಸಂಪತ್ತಷ್ಟೇ ಅಲ್ಲದೆ, ಆಯಕಟ್ಟಿನ ಮಿಲಿಟರಿ ನೆಲೆಯಾಗಿಯೂ ಕಾರ್ಯನಿರ್ವಹಿಸುತ್ತಿತ್ತು ಎಂಬುದಕ್ಕೆ ಈ ಕುರುಹುಗಳು ಸಾಕ್ಷಿಯಾಗಿವೆ.

ಅನೇಕ ಶಾಸನಗಳು ಕಾಲಕ್ಕೆ ತಕ್ಕಂತೆ ಕಳೆದುಹೋಗಿರುವ ಈ ಸಮಯದಲ್ಲಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಭಾರತ್ ಶ್ರೀ ಯೋಜನೆಯ ಮೂಲಕ ದೇಶಾದ್ಯಂತ ಶಾಸನಗಳನ್ನು ಗುರುತಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಈ ನಿಟ್ಟಿನಲ್ಲಿ ದೇಶಾದ್ಯಂತ 86 ಸಾವಿರ ಶಾಸನಗಳನ್ನು ಗುರುತಿಸಿರುವ ಕೇಂದ್ರ ಸರ್ಕಾರ ದೇಶದ ಸಾಂಸ್ಕೃತಿಕ ಇತಿಹಾಸವನ್ನು ಭವಿಷ್ಯದ ಪೀಳಿಗೆಗೆ ರವಾನಿಸಲು ಪ್ರಯತ್ನಿಸುತ್ತಿದೆ. ಗುರುತಿಸಲಾದ ಶಾಸನಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಭಾರತ್ ಶ್ರೀ ವೆಬ್ ಪೋರ್ಟಲ್‌ನಲ್ಲಿ ಅವುಗಳನ್ನು ಅಪ್‌ಲೋಡ್ ಮಾಡುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version