‘ವೆಲ್ಕಮ್ ಟು ದಿ ಜಂಗಲ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಶಾಕ್; ಬಿಕಿನಿ ದೃಶ್ಯಕ್ಕೆ ಕತ್ತರಿ – Kannada News | Akshay Kumar’s ‘Welcome to the Jungle’ Faces 18 Censor Cuts, Gets UA 16+ Certificate

ವೆಲ್​ಕಮ್​ ಟು ದಿ ಜಂಗಲ್ Image Credit source: Welcome To The Jungle

ಇತ್ತೀಚೆಗೆ ಸಿನಿಮಾಗಳಿಗೂ ಸೆನ್ಸಾರ್ ಮಂಡಳಿಗೂ (Sencor Board) ಕಿತ್ತಾಟ ನಡೆಯುತ್ತಿದೆ. ಸೆನ್ಸಾರ್ ಪತ್ರ ನೀಡುವಾಗ ಸಾಕಷ್ಟು ಕಿರಿಕ್​​ಗಳು ಆಗುತ್ತವೆ. ಈಗ ಬಾಲಿವುಡ್ ನಟ ಅಕ್ಷಯ್ ಕುಮಾರ್​ಗೆ ಸೆನ್ಸಾರ್ ಮಂಡಳಿ ಶಾಕ್ ನೀಡಿದೆ. ಅವರ ನಟನೆಯ ‘ವೆಲ್ಕಮ್ ಟು ದಿ ಜಂಗಲ್’ ಚಿತ್ರಕ್ಕೆ ಕೇಂದ್ರ ಸೆನ್ಸಾರ್ ಮಂಡಳಿ UA 16+ ಪ್ರಮಾಣಪತ್ರ ನೀಡಿದೆ. ಸೆನ್ಸಾರ್ ಮಂಡಳಿ ಸೂಚಿಸಿದ ಒಟ್ಟು 18 ಬದಲಾವಣೆಗಳನ್ನು ಅಳವಡಿಸಿಕೊಂಡ ನಂತರ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ಸಿಕ್ಕಿದೆ.

10 ಸೆಕೆಂಡ್ ಕಟ್, ಸಂಭಾಷಣೆಗಳಿಗೆ ಕತ್ತರಿ:

ಚಿತ್ರದ ಕೆಲವು ಮುಖ್ಯ ಸಂಭಾಷಣೆಗಳು ಹಾಗೂ ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದೆ. ಚಿತ್ರದಲ್ಲಿದ್ದ 10 ಸೆಕೆಂಡ್‌ಗಳ ಒಂದು ಸಣ್ಣ ದೃಶ್ಯವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಈ ಎಲ್ಲಾ ಬದಲಾವಣೆಗಳ ನಂತರ ಚಿತ್ರದ ಸಮಯ 2 ಗಂಟೆ 44 ನಿಮಿಷಗಳು ಆಗಿದೆ.

‘ಕಾಲಾ ಪೈದಾ ಹುವಾ…’ (ಕಪ್ಪಗಿರುವವನು ಹುಟ್ಟಿದ, ಕಲ್ಲಿದ್ದಲಿನಂತಿದ್ದಾನೆ) ಎಂಬ ಡೈಲಾಗ್ ಅನ್ನು ‘ಸಾದಾ ಪೈದಾ ಹುವಾ…’ (ಸಾಮಾನ್ಯ ವ್ಯಕ್ತಿ, ವಿಚಿತ್ರ ಕ್ಯಾರೆಕ್ಟರ್) ಎಂದು ಬದಲಾಯಿಸಲಾಗಿದೆ. ‘ಪನ್ನಿ ಆಫ್ ಕಾಶ್ಮೀರ್’ ಎಂಬ ಸಾಲನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. ‘ಗೂರ್ಖಾ ರೆಜಿಮೆಂಟ್’ ಎಂಬ ಪದದ ಬದಲಿಗೆ ‘ತುಮ್ ಆರ್ಮಿ ಸೇ ಹೋ?’ ಎಂದು ಬಳಸಲಾಗಿದೆ. ಹಾಗೆಯೇ ‘ಜನರಲ್’ ಎಂಬ ಪದವನ್ನು ‘ಆಫೀಸರ್’ ಎಂದು ಬದಲಾಯಿಸಲಾಗಿದೆ. ಹಾಡೊಂದರಲ್ಲಿದ್ದ ಬಿಕಿನಿ ದೃಶ್ಯಗಳು ಮತ್ತು ಕ್ಲೋಸ್-ಅಪ್ ಶಾಟ್‌ಗಳನ್ನು ಸೆನ್ಸಾರ್ ಮಂಡಳಿ ತೆಗೆಸಿದೆ. ನಟಿಯರಾದ ದಿಶಾ ಪಟಾನಿ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರ ಗ್ಲಾಮರಸ್ ದೃಶ್ಯಗಳನ್ನು ಮಾರ್ಪಡಿಸಲಾಗಿದೆ.

ಇದನ್ನೂ ಓದಿ: ‘ಜನ ನಾಯಗನ್’ ರೀತಿ ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ ‘ಕೆಡಿ’ ಸಿನಿಮಾಗೂ ಸೆನ್ಸಾರ್ ಸಮಸ್ಯೆ

ಚಿತ್ರದಲ್ಲಿದ್ದ ಅಶ್ಲೀಲ ಕೈ ಸನ್ನೆಯ ದೃಶ್ಯದ ಜಾಗದಲ್ಲಿ ನಟ ವಿಂದು ದಾರಾ ಸಿಂಗ್ ಅವರ ಕ್ಲೋಸ್-ಅಪ್ ಶಾಟ್ ಇಡಲಾಗಿದೆ. ಇಂಗ್ಲಿಷ್ ಸಬ್‌ಟೈಟಲ್ಸ್‌ನಲ್ಲಿದ್ದ ಕೆಲವು ಪದಗಳನ್ನು ಕೂಡ ಬದಲಾಯಿಸಲಾಗಿದೆ.
ಅಹ್ಮದ್ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್‌ನ ದೊಡ್ಡ ತಾರಾಬಳಗವೇ ಇದೆ. ಅಕ್ಷಯ್ ಕುಮಾರ್ ಜೊತೆಗೆ ಸುನಿಲ್ ಶೆಟ್ಟಿ, ಅರ್ಷದ್ ವಾರ್ಸಿ, ಜಾಕಿ ಶ್ರಾಫ್, ಪರೇಶ್ ರಾವಲ್, ರವೀನಾ ಟಂಡನ್ ಮತ್ತು ಲಾರಾ ದತ್ತಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫಿರೋಜ್ ಎ. ನಾಡಿಯಾಡ್ವಾಲಾ ನಿರ್ಮಿಸಿರುವ ‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾ ಜೂನ್ 26 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today: ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 23, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಪರಾಭವ ನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಹಸ್ತಾ ನಕ್ಷತ್ರ, ವರಿಯನ್ ಯೋಗ ಮತ್ತು ಬಾಲವಕರಣ ಇರುತ್ತದೆ. ರಾಹುಕಾಲ ಮಧ್ಯಾಹ್ನ 3:35 ರಿಂದ ಸಂಜೆ 5:09 ರವರೆಗೆ ಇದ್ದು, ಸರ್ವಸಿದ್ಧಿ, ಸಂಕಲ್ಪ ಹಾಗೂ ಶುಭಕಾಲ ಮಧ್ಯಾಹ್ನ 12:21 ರಿಂದ 1:58 ರವರೆಗೆ ಇರುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಆಗಲಿದೆ ಮುಖಭಂಗ – Kannada News | Daily Horoscope for June 23, 2026: Tuesday Astrology Predictions for All Zodiac Signs

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಆರ್ದ್ರಾ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ನವಮೀ, ನಿತ್ಯನಕ್ಷತ್ರ : ಹಸ್ತಾ, ಯೋಗ : ವಜ್ರ, ಕರಣ : ಬಾಲವ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 47 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:35 – 17:11, ಯಮಗಂಡ ಕಾಲ 09:09 – 10:45, ಗುಳಿಕ ಕಾಲ 12:22 – 13:58

ಮೇಷ ರಾಶಿ: ​ಇಂದು ನಿಮಗೆ ಮಿಶ್ರಫಲ ಕೊಡುವ ದಿನವಾಗಿದೆ. ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಾಗಲಿದ್ದು, ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ನಡೆದುಕೊಳ್ಳುವುದು ಒಳಿತು. ವ್ಯವಹಾರದಲ್ಲಿ ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು, ಹಾಗಾಗಿ ಹಣಕಾಸಿನ ವಿಷಯದಲ್ಲಿ ಜಾಗ್ರತೆ ಇರಲಿ. ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಿಬರಬಹುದು, ಸಂಗಾತಿಯ ಮಾತಿಗೆ ಗೌರವ ನೀಡಿ. ಹಿರಿಯರ ಆರೋಗ್ಯದ ಕಡೆ ಗಮನಹರಿಸಿ.

ವೃಷಭ ರಾಶಿ: ​ಆರ್ಥಿಕವಾಗಿ ಇಂದು ನಿಮಗೆ ಅತ್ಯಂತ ಲಾಭದಾಯಕ ದಿನ. ಹಳೆಯ ಹೂಡಿಕೆಗಳಿಂದ ಉತ್ತಮ ಆದಾಯ ಬರಲಿದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ಹಾಗೂ ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಹಸನ್ಮುಖಿ ವಾತಾವರಣ ಇರಲಿದ್ದು, ಶುಭ ಕಾರ್ಯಗಳ ಬಗ್ಗೆ ಚರ್ಚೆಗಳು ನಡೆಯಬಹುದು. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ.

ಮಿಥುನ ರಾಶಿ: ​ಇಂದು ನೀವು ಮಾತಿನ ಮೇಲೆ ನಿಗಾ ಇಡಬೇಕಾದ ದಿನ. ನಿಮ್ಮ ಆತುರದ ನಿರ್ಧಾರಗಳು ಕೈಹಿಡಿದ ಕೆಲಸಗಳನ್ನು ಹದಗೆಡಿಸಬಹುದು. ಕಚೇರಿಯಲ್ಲಿ ರಾಜಕೀಯದಿಂದ ದೂರವಿರಿ. ಆಸ್ತಿ ಅಥವಾ ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ತೊಂದರೆ ಎದುರಾಗಬಹುದು, ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ. ಖರ್ಚುಗಳು ಕೈಮೀರಿ ಹೋಗದಂತೆ ಬಜೆಟ್ ಯೋಜನೆ ಮಾಡಿ. ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾಗಬಹುದು, ಧನಾತ್ಮಕ ಚಿಂತನೆ ರೂಢಿಸಿಕೊಳ್ಳಿ.

ಕರ್ಕಾಟಕ ರಾಶಿ: ​ಕಟಕ ರಾಶಿಯವರಿಗೆ ಇಂದು ಅತ್ಯಂತ ಉತ್ಸಾಹಭರಿತ ದಿನವಾಗಿರುತ್ತದೆ. ಮನಸ್ಸಿನಲ್ಲಿದ್ದ ಆತಂಕಗಳು ದೂರವಾಗಿ, ನೆಮ್ಮದಿ ಸಿಗಲಿದೆ. ಸಮಾಜದಲ್ಲಿ ಗೌರವ, ಕೀರ್ತಿ ಹೆಚ್ಚಾಗಲಿದೆ. ಹೊಸ ಉದ್ಯೋಗದ ಹುಡುಕಾಟದಲ್ಲಿದ್ದವರಿಗೆ ಉತ್ತಮ ಅವಕಾಶಗಳು ಕೈಗೆಟಕಲಿವೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ ಹಾಗೂ ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯುವಿರಿ. ದೇವತಾ ಆರಾಧನೆಯಿಂದ ಮಾನಸಿಕ ಶಾಂತಿ ಲಭಿಸುತ್ತದೆ.

​ಸಿಂಹ ರಾಶಿ: ​ಇಂದು ನಿಮಗೆ ಮಧ್ಯಮ ಫಲದಾಯಕ ದಿನ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗಬಹುದು, ಆದರೆ ನಿಮ್ಮ ಬುದ್ಧಿವಂತಿಕೆಯಿಂದ ಲಾಭ ಗಳಿಸುವಿರಿ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ದೂರದ ಪ್ರಯಾಣದ ಯೋಜನೆಗಳಿದ್ದರೆ ಸದ್ಯಕ್ಕೆ ಮುಂದೂಡುವುದು ಒಳ್ಳೆಯದು. ಅತಿಯಾದ ಕೋಪ ಅಥವಾ ಹಠ ಸಾಧನೆ ನಿಮ್ಮ ಆಪ್ತ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು, ಎಚ್ಚರ.

ಕನ್ಯಾ ರಾಶಿ: ​ನಿಮ್ಮ ದೀರ್ಘಕಾಲದ ಕನಸುಗಳು ಅಥವಾ ಯೋಜನೆಗಳು ನನಸಾಗುವ ಸಮಯ ಹತ್ತಿರ ಬಂದಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದ್ದು, ಸಾಲದ ಬಾಧೆಗಳಿಂದ ಮುಕ್ತಿ ಸಿಗಬಹುದು. ಕಲಾ ರಂಗ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಇರುವವರಿಗೆ ಗೌರವ ಮತ್ತು ಹೊಸ ಅವಕಾಶಗಳು ಲಭಿಸಲಿವೆ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದ್ದು, ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ. ಆರೋಗ್ಯದ ದೃಷ್ಟಿಯಿಂದ ದಿನವು ಉತ್ತಮವಾಗಿದೆ.

ತುಲಾ ರಾಶಿ: ​ಇಂದು ಧನಲಾಭದ ಯೋಗವಿದೆ. ನೂತನ ವಸ್ತುಗಳು ಅಥವಾ ಆಭರಣಗಳನ್ನು ಖರೀದಿಸುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ನಿಮ್ಮ ಕಾರ್ಯಕ್ಷಮತೆಗೆ ತಕ್ಕ ಮನ್ನಣೆ ಸಿಗಲಿದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಲಾಭಾಂಶ ಹೆಚ್ಚಾಗಲಿದೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶ ಸಿಗಲಿದ್ದು, ಮನಸ್ಸು ಪ್ರಫುಲ್ಲವಾಗುತ್ತದೆ. ದಾಂಪತ್ಯ ಜೀವನದಲ್ಲಿ ಮಧುರತೆ ಇರಲಿದೆ.

ವೃಶ್ಚಿಕ ರಾಶಿ: ​ಇಂದು ನಿಮಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ. ಕಚೇರಿಯಲ್ಲಿ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಬಹುದು, ಆದರೆ ನಿಮ್ಮ ದಕ್ಷತೆಯಿಂದ ಅದನ್ನು ಪೂರ್ಣಗೊಳಿಸುವಿರಿ. ಕೋರ್ಟ್ ಕಚೇರಿ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ವಿಶೇಷವಾಗಿ ಉದರ ಸಂಬಂಧಿ ಸಮಸ್ಯೆಗಳಿದ್ದರೆ ಜಾಗ್ರತೆ ವಹಿಸಿ. ಅನಗತ್ಯ ಚರ್ಚೆಗಳಿಂದ ದೂರವಿರಿ, ಮೌನವೇ ಇಂದು ನಿಮ್ಮ ರಕ್ಷಾಕವಚ.

ಧನು ರಾಶಿ: ​ವಿದ್ಯಾರ್ಥಿಗಳಿಗೆ ಮತ್ತು ಸಂಶೋಧನಾ ರಂಗದಲ್ಲಿ ಇರುವವರಿಗೆ ಇಂದು ಪ್ರಗತಿಪರ ದಿನವಾಗಿದೆ. ನಿಮ್ಮ ಜ್ಞಾನ ಮತ್ತು ಕೌಶಲ್ಯಕ್ಕೆ ತಕ್ಕ ಗೌರವ ಸಿಗಲಿದೆ. ಆಧ್ಯಾತ್ಮಿಕ ಚಿಂತನೆಗಳು ಮನಸ್ಸಿಗೆ ನೆಮ್ಮದಿ ನೀಡಲಿವೆ. ತಂದೆಯ ಕಡೆಯಿಂದ ಆರ್ಥಿಕ ಸಹಾಯ ಅಥವಾ ಮಾರ್ಗದರ್ಶನ ಸಿಗಬಹುದು. ಉದ್ಯೋಗದಲ್ಲಿ ವರ್ಗಾವಣೆಯ ಸಾಧ್ಯತೆಗಳಿವೆ. ಹಿರಿಯರ ಆಶೀರ್ವಾದ ಸದಾ ನಿಮ್ಮ ಮೇಲಿರಲಿದೆ.

ಮಕರ ರಾಶಿ: ​ಇಂದು ಗ್ರಹಗತಿಗಳು ನಿಮಗೆ ಅನುಕೂಲಕರವಾಗಿವೆ. ಆಸ್ತಿ ಖರೀದಿ ಅಥವಾ ಮಾರಾಟ ಪ್ರಕ್ರಿಯೆಗಳಿಗೆ ಚಾಲನೆ ನೀಡಬಹುದು. ಹಳೆಯ ಹೂಡಿಕೆಗಳು ಕೈಹಿಡಿಯಲಿವೆ. ಕೃಷಿ ಹಾಗೂ ಭೂಮಿಗೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಂಡವರಿಗೆ ಉತ್ತಮ ಲಾಭ ಸಿಗಲಿದೆ. ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಸಂಗಾತಿಯ ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡುವುದು ಅಗತ್ಯ.

​ಕುಂಭ ರಾಶಿ: ​ಇಂದು ನಿಮ್ಮ ಆತ್ಮವಿಶ್ವಾಸ ಗರಿಷ್ಠ ಮಟ್ಟದಲ್ಲಿರುತ್ತದೆ. ಕಠಿಣ ಸವಾಲುಗಳನ್ನು ಕೂಡ ನಿಮ್ಮ ಚಾಕಚಕ್ಯತೆಯಿಂದ ಎದುರಿಸಿ ಯಶಸ್ವಿಯಾಗುವಿರಿ. ಸಹೋದರ-ಸಹೋದರಿಯರೊಂದಿಗೆ ಇದ್ದ ಭಿನ್ನಾಭಿಪ್ರಾಯಗಳು ಬಗೆಹರಿದು ಸಂಬಂಧ ಸುಧಾರಿಸಲಿದೆ. ಉದ್ಯೋಗಿಗಳಿಗೆ ಸಂಬಳ ಹೆಚ್ಚಳ ಅಥವಾ ಬಡ್ತಿಯ ಶುಭ ಸಮಾಚಾರ ಸಿಗಬಹುದು. ವ್ಯವಹಾರದಲ್ಲಿ ಹೊಸ ಒಪ್ಪಂದಗಳಿಗೆ ಸಹಿ ಹಾಕಲು ಇದು ಸಕಾಲ.

​ಮೀನ ರಾಶಿ: ​ಇಂದು ಭಾವನಾತ್ಮಕವಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಯಾರನ್ನೂ ಅತಿಯಾಗಿ ನಂಬಬೇಡಿ, ಆರ್ಥಿಕ ವಹಿವಾಟುಗಳಲ್ಲಿ ಜಾಗರೂಕರಾಗಿರಿ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿವೆ. ವಿದ್ಯಾರ್ಥಿಗಳು ಏಕಾಗ್ರತೆಯ ಕೊರತೆಯನ್ನು ಎದುರಿಸಬಹುದು. ಶ್ರಮಕ್ಕೆ ತಕ್ಕ ಪ್ರತಿಫಲ ತಡವಾಗಿ ಸಿಕ್ಕರೂ, ನಿರಾಶರಾಗಬೇಡಿ. ಮನಸ್ಸಿಗೆ ನೆಮ್ಮದಿ ನೀಡುವ ಘಟನೆಯೊಂದು ಸಂಭವಿಸಬಹುದು.

ಲೋಹಿತ್ ಹೆಬ್ಬಾರ್ – 8762924271 (what’s app only)

Source link

ಮೂರ್ನಾಲ್ಕು ಜನರಿಗಷ್ಟೇ ಗೊತ್ತಿತ್ತು:ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿಕೆ ಶಿವಕುಮಾರ್ – Kannada News | CM DK Shivakumar first Time reveals in public about Power Sharing With Siddaramaiah

ಬೆಂಗಳೂರು, (ಜೂನ್ 22): ಸಿದ್ದರಾಮಯ್ಯನವರು (Siddaramaiah) ಸಿಎಂ ಕುರ್ಚಿ ಬಿಟ್ಟಾಗಿದೆ. ಮುಖ್ಯಮಂತ್ರಿಯಾಗುವ ಹಠಕ್ಕೆ ಬಿದ್ದಿದ್ದ ಡಿಕೆ ಶಿವಕುಮಾರ್  (CM DK Shivakumar) ಅಂತಿಮವಾಗಿ ಕುರ್ಚಿ ಮೇಲೆ ಕುಳಿತಾಗಿದೆ. ಆದ್ರೆ, ಇದೀಗ ಈ ಹಿಂದೆ ಹೈಕಮಾಂಡ್ ಮಟ್ಟದಲ್ಲಿ ನಡೆದಿದ್ದ ಅಧಿಕಾರ ಹಂಚಿಕೆ ಗುಟ್ಟನ್ನು ಇದೇ ಮೊದಲ ಬಾರಿಗೆ ಬಹಿರಂಗವಾಗಿ ಬಿಚ್ಚಿಟ್ಟಿದ್ದಾರೆ. ಹೌದು…ಪರಿಷತ್ ಸದಸ್ಯ ಸಲೀಂ ಅಹ್ಮದ್​ಗೆ ಸಚಿವ ಸ್ಥಾನ ನೀಡಬೇಕೆಂದು ದರ್ಗಾಗಳ ಧರ್ಮಗುರುಗಳ ನಿಯೋಗ ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದು, ಈ ವೇಳೆ ಅಧಿಕಾರ ಹಂಚಿಕೆ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ನಿಮ್ಮ ಮನವಿ ವರಿಷ್ಠರ​ ಗಮನಕ್ಕೆ ತರುತ್ತೇನೆ. ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಬಂದಿತ್ತು. ವರಿಷ್ಠರು ನನ್ನನ್ನೇ ಸಿಎಂ ಮಾಡುತ್ತಾರೆ ಅಂದುಕೊಂಡಿದ್ದೆ. ಆದ್ರೆ, ಸಿದ್ದರಾಮಯ್ಯಗೂ ಅವಕಾಶ ಕೊಡೋಣ ಅಂದರು. ಅಲ್ಲದೇ ಅಂದು ಇಬ್ಬರು ಶೇರ್ ಮಾಡಿಕೊಳ್ಳಿ ಎಂದು ಪಕ್ಷ ಹೇಳಿತ್ತು. ಅಂದು ಈ ನಿರ್ಧಾರವಾಗಿತ್ತು, ಅದರ ಬಗ್ಗೆ ಎಲ್ಲೂ ಹೇಳಲಿಲ್ಲ. ಅಧಿಕಾರ ಹಂಚಿಕೆ ವಿಚಾರ 3ರಿಂದ 4 ಜನರಿಗಷ್ಟೇ ಗೊತ್ತಿತ್ತು. ಆದ್ರೆ ಈಗ ಪಕ್ಷ ನನಗೂ ಅವಕಾಶ ಮಾಡಿಕೊಟ್ಟಿದೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

ಬಿಡದಿ ಟೌನ್​​​​ ಶಿಪ್: ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​ – Kannada News | Bidadi township row: kumaraswamy Rejected CM DK Shivakumar invited for discussion at Vidhana Soudha on June 26

ಬೆಂಗಳೂರು, ಜೂನ್​​ 22: ಬಿಡದಿ ಟೌನ್‌ಶಿಪ್ ಯೋಜನೆಯ ವಿಚಾರವು ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಮತ್ತು ಜೆಡಿಎಸ್​ ಪಕ್ಷಗಳು ತೀರ್ವ ವಿರೋಧಿಸುತ್ತಿವೆ. ಅದರಲ್ಲೂ ಸಿಎಂ ಡಿಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನಡುವೆ ಲೆಟರ್​​​ ವಾರ್ ಶುರುವಾಗಿದೆ.​ ಹೆಚ್​​ಡಿ ಕುಮಾರಸ್ವಾಮಿ ದಾಖಲೆಗಳನ್ನು ಬಿಡುಗಡೆ ಮಾಡಿ, ಯೋಜನೆಯ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಸರ್ಕಾರಕ್ಕೆ ಸವಾಲು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಜೂನ್ 26ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧಕ್ಕೆ ತಮ್ಮ ಐವರು ಪ್ರತಿನಿಧಿಗಳೊಂದಿಗೆ ಆಗಮಿಸುವಂತೆ ಹೆಚ್​ಡಿ ಕುಮಾರಸ್ವಾಮಿಗೆ ಪತ್ರದ ಮೂಲಕ ಆಹ್ವಾನ ನೀಡಿದ್ದರು. ಆದರೆ, ಸಿಎಂ ಆಹ್ವಾನವನ್ನು ತಿರಸ್ಕರಿಸಿದ ಕುಮಾರಸ್ವಾಮಿ, ಜೂನ್ 26ರಂದು ಪೂರ್ವನಿಗದಿತ ಕಾರ್ಯಕ್ರಮಗಳಿರುವ ಕಾರಣ ಬರಲು ಸಾಧ್ಯವಿಲ್ಲ. ಜೂನ್ 27ರಂದು ಚರ್ಚೆಗೆ ಸಿದ್ಧ ಎಂದಿದ್ದಾರೆ. ಆದರೆ ವಿಧಾನಸೌಧದ ಬದಲು ಬಿಡದಿ ಅಥವಾ ಭೈರಮಂಗಲದಲ್ಲಿ ರೈತರ ಸಮ್ಮುಖದಲ್ಲಿ ಚರ್ಚೆ ನಡೆಸುವಂತೆ ಪ್ರಸ್ತಾವನೆ ಇಟ್ಟಿದ್ದಾರೆ. ಇದಕ್ಕೆ ಸಿಎಂ ಡಿಕೆ. ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಭಾರತೀಯರಿಗೆ ಹೆಮ್ಮೆಯ ಸಂಗತಿ; ವಾಟ್ಸಾಪ್ ಜಾಗತಿಕ ಮುಖ್ಯಸ್ಥರಾಗಿ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ನೇಮಕ – Kannada News | Good News for Indians CRED Founder Kunal Shah Appointed As Global Head Of WhatsApp

ನವದೆಹಲಿ, ಜೂನ್ 22: ಭಾರತದ ಪ್ರಮುಖ ಫಿಂಟೆಕ್ ಸಂಸ್ಥೆಯಾದ ‘ಕ್ರೆಡ್’ (CRED)ನ ಸಂಸ್ಥಾಪಕರಾದ ಕುನಾಲ್ ಶಾ (Kunal Shah) ಅವರನ್ನು ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp)ನ ಜಾಗತಿಕ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ತಂತ್ರಜ್ಞಾನ ವಲಯದಲ್ಲಿ ಇದೊಂದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ. ಕುನಾಲ್ ಶಾ ಭಾರತೀಯರಾಗಿರುವುದರಿಂದ ಭಾರತದ ಪಾಲಿಗೂ ಇದು ಹೆಮ್ಮೆಯ ಸಂಗತಿಯಾಗಿದೆ. ಕುನಾಲ್ ಶಾ ಅವರ ನಾಯಕತ್ವದಲ್ಲಿ ವಾಟ್ಸಾಪ್ ಜಾಗತಿಕ ಮಟ್ಟದಲ್ಲಿ ಹಲವು ಹೊಸ ಮೈಲಿಗಲ್ಲುಗಳನ್ನು ತಲುಪುವ ನಿರೀಕ್ಷೆಯಿದೆ.

ಈ ಮೂಲಕ ಗೂಗಲ್‌ನ ಸುಂದರ್ ಪಿಚೈ ಮತ್ತು ಮೈಕ್ರೋಸಾಫ್ಟ್‌ನ ಸತ್ಯ ನಡೆಲ್ಲಾ ಅವರ ಸಾಲಿಗೆ ಈಗ ಕುನಾಲ್ ಶಾ ಕೂಡ ಸೇರ್ಪಡೆಯಾಗಿದ್ದಾರೆ. ವಿಶ್ವದಾದ್ಯಂತ ಬಿಲಿಯನ್‌ಗಟ್ಟಲೆ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ನ ಅತ್ಯುನ್ನತ ಜಾಗತಿಕ ಹುದ್ದೆಗೆ ಭಾರತೀಯ ಉದ್ಯಮಿಯೊಬ್ಬರನ್ನು ಆಯ್ಕೆ ಮಾಡಿರುವುದು ಭಾರತೀಯ ಸ್ಟಾರ್ಟ್‌ಅಪ್ ಮತ್ತು ತಂತ್ರಜ್ಞಾನ ರಂಗಕ್ಕೆ ಸಂದ ಗೌರವವಾಗಿದೆ.

ವಾಟ್ಸಾಪ್‌ಗೆ ಜಗತ್ತಿನಲ್ಲೇ ಅತಿ ದೊಡ್ಡ ಮಾರುಕಟ್ಟೆ ಭಾರತವಾಗಿದೆ. ಭಾರತೀಯ ಗ್ರಾಹಕರ ಮನಸ್ಥಿತಿ ಮತ್ತು ಡಿಜಿಟಲ್ ಪೇಮೆಂಟ್ಸ್ ಮಾರುಕಟ್ಟೆಯನ್ನು ಕುನಾಲ್ ಶಾ ಅತ್ಯಂತ ಹತ್ತಿರದಿಂದ ಬಲ್ಲವರಾಗಿದ್ದಾರೆ. ಮೊದಲು ‘ಫ್ರೀಚಾರ್ಜ್’ ಮತ್ತು ನಂತರ ‘ಕ್ರೆಡ್’ (CRED) ಆ್ಯಪ್‌ಗಳ ಮೂಲಕ ಭಾರತದಲ್ಲಿ ಡಿಜಿಟಲ್ ಕ್ರಾಂತಿ ಮಾಡಿದ ಕೀರ್ತಿ ಕುನಾಲ್ ಶಾ ಅವರಿಗೆ ಸಲ್ಲುತ್ತದೆ. ವಾಟ್ಸಾಪ್ ಇತ್ತೀಚಿನ ದಿನಗಳಲ್ಲಿ ಕೇವಲ ಚಾಟಿಂಗ್ ಆ್ಯಪ್ ಆಗಿ ಉಳಿಯದೆ ಬಿಸಿನೆಸ್ ಮತ್ತು ಪೇಮೆಂಟ್ಸ್ ಕಡೆಗೂ ಹೆಚ್ಚಿನ ಗಮನ ಹರಿಸುತ್ತಿರುವುದರಿಂದ ಕುನಾಲ್ ಶಾ ಅವರ ಅನುಭವ ಮೆಟಾ ಸಂಸ್ಥೆಗೆ ದಿಕ್ಸೂಚಿಯಾಗಲಿದೆ.

ಇದನ್ನೂ ಓದಿ: ಇಪಿಎಫ್​ಒದಿಂದ ಸದ್ಯದಲ್ಲೇ 2 ಹೊಸ ಸೇವೆಗಳು; ವಾಟ್ಸಾಪ್ ಚಾಟ್​ಬೋಟ್ ಮತ್ತು ಯುಪಿಐ ವಿತ್​ಡ್ರಾವಲ್

ಕುನಾಲ್ ಶಾ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಈ ಮಹತ್ವದ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಿಸಿದ್ದಾರೆ. “ನಾನು ವಾಟ್ಸಾಪ್ ಅನ್ನು ಜಾಗತಿಕವಾಗಿ ಮುನ್ನಡೆಸಲು ಮೆಟಾ ಸಂಸ್ಥೆಯನ್ನು ಸೇರುತ್ತಿದ್ದೇನೆ. ಮೆಟಾ ಕಂಪನಿಯು ‘ಕ್ರೆಡ್’ನಲ್ಲಿ ಹೂಡಿಕೆದಾರರಾಗಿ ಪ್ರವೇಶಿಸಿದೆ. ಈ ಹೂಡಿಕೆಯಿಂದಾಗಿ ಮೆಟಾ ಸಂಸ್ಥೆಗೆ ಕ್ರೆಡ್ ಬಳಕೆದಾರರ ಯಾವುದೇ ವೈಯಕ್ತಿಕ ಡೇಟಾ ಅಥವಾ ಮಾಹಿತಿ ಸಿಗುವುದಿಲ್ಲ” ಎಂದು ಬಳಕೆದಾರರ ಗೌಪ್ಯತೆಯ ಕುರಿತು ಸ್ಪಷ್ಟಪಡಿಸಿದ್ದಾರೆ.

ಕುನಾಲ್ ಶಾ ಅವರ ಈ ಜಾಗತಿಕ ಸಾಧನೆಗೆ ಭಾರತದ ವಿವಿಧ ಸ್ಟಾರ್ಟ್‌ಅಪ್ ಸಂಸ್ಥಾಪಕರು ಮತ್ತು ತಂತ್ರಜ್ಞಾನ ತಜ್ಞರು ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಇದನ್ನೂ ಓದಿ: ಇನ್​ಸ್ಟಾ, ಫೇಸ್​ಬುಕ್, ವಾಟ್ಸಾಪ್​ಗೆ ಪೇಡ್ ಸಬ್​ಸ್ಕ್ರಿಶನ್ಸ್ ಆರಂಭಿಸಲು ಮೆಟಾ ನಿರ್ಧಾರ; ತಿಂಗಳಿಗೆ ಎಷ್ಟಿರುತ್ತೆ ಚಂದಾದಾರಿಕೆ?

ಕುನಾಲ್ ಶಾ ಅವರು ವಾಟ್ಸಾಪ್ ಜಾಗತಿಕ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿರುವುದರಿಂದ, ಕ್ರೆಡ್ ಕಂಪನಿಯ ಮಧ್ಯಂತರ ಸಿಇಒ ಆಗಿ ಮಿಟೆನ್ ಸಂಪತ್ ಅವರನ್ನು ನೇಮಕ ಮಾಡಲಾಗಿದೆ. ಸದ್ಯ ಭಾರತದಲ್ಲಿ 1.7 ಕೋಟಿಗೂ ಹೆಚ್ಚು ವಿಶ್ವಾಸಾರ್ಹ ಗ್ರಾಹಕರು ತಮ್ಮ ಹಣಕಾಸು ನಿರ್ವಹಣೆಗೆ ಕ್ರೆಡ್ ಆ್ಯಪ್ ಬಳಸುತ್ತಿದ್ದಾರೆ. ಮೆಟಾ ನೇತೃತ್ವದ 8,550 ಕೋಟಿ ರೂಪಾಯಿ ಹೂಡಿಕೆಯ ಬಳಿಕ ‘ಕ್ರೆಡ್’ ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯವು ಬರೋಬ್ಬರಿ 43,239 ಕೋಟಿ ರೂ.ಗಳಿಗೆ (4.5 ಬಿಲಿಯನ್ ಯುಎಸ್ ಡಾಲರ್) ತಲುಪಿದೆ.

2018ರಲ್ಲಿ ಕುನಾಲ್ ಶಾ ಅವರು ಕ್ರೆಡ್ ಆ್ಯಪ್ ಅನ್ನು ಕೇವಲ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವ ಮತ್ತು ಅದಕ್ಕೆ ರಿವಾರ್ಡ್ಸ್ ನೀಡುವ ವೇದಿಕೆಯಾಗಿ ಆರಂಭಿಸಿದ್ದರು. ಆದರೆ, ಇಂದು ಅದು ದೈತ್ಯ ಫಿಂಟೆಕ್ ಸೂಪರ್ ಆ್ಯಪ್ ಆಗಿ ಬೆಳೆದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊರಬಿತ್ತು ಕಿಂಗ್ ಕೊಹ್ಲಿ ಫಿಟ್ನೆಸ್ ಫಲಿತಾಂಶ; ಇಂಗ್ಲೆಂಡ್‌ ವಿರುದ್ಧ ಆಡ್ತಾರಾ ವಿರಾಟ್? – Kannada News | Virat Kohli Fit for England ODI Series: Team India Ready to Battle

ಭಾರತ ಹಾಗೂ ಇಂಗ್ಲೆಂಡ್‌ (India vs England) ನಡುವಿನ ಏಕದಿನ ಸರಣಿಗಾಗಿ ಬಿಸಿಸಿಐ ಇತ್ತೀಚೆಗಷ್ಟೇ ಭಾರತ ಏಕದಿನ ತಂಡವನ್ನು ಪ್ರಕಟಿಸಿತ್ತು. ಶುಭ್​ಮನ್ ಗಿಲ್ ನಾಯಕತ್ವದಲ್ಲಿ 15 ಸದಸ್ಯರ ಬಲಿಷ್ಠ ತಂಡವನ್ನು ಇಂಗ್ಲೆಂಡ್‌ ಪ್ರವಾಸಕ್ಕೆ ಬಿಸಿಸಿಐ ಆಯ್ಕೆ ಮಾಡಿತ್ತು. ಈ 15 ಸದಸ್ಯರ ಪಟ್ಟಿಯಲ್ಲಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಕೂಡ ಸೇರಿದ್ದರು. ಆದರೆ ಕೊಹ್ಲಿ ಸರಣಿಯಲ್ಲಿ ಆಡುವುದು ಅವರ ಫಿಟ್ನೆಸ್ ಫಲಿತಾಂಶವನ್ನು ಅವಲಂಬಿಸಿರುತ್ತದೆ ಎಂದು ಬಿಸಿಸಿಐ ತಿಳಿಸಿತ್ತು. ಅದರಂತೆ ವಿರಾಟ್ ಕೊಹ್ಲಿ ಜೂನ್ 22 ರಂದು ಬೆಂಗಳೂರಿನಲ್ಲಿರುವ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು. ಇದೀಗ ಅವರ ಫಿಟ್ನೆಸ್ ಫಲಿತಾಂಶವೂ ಹೊರಬಿದ್ದಿದ್ದು, ಕೊಹ್ಲಿ ಸಂಪೂರ್ಣವಾಗಿ ಫಿಟ್ ಆಗಿದ್ದು, ಏಕದಿನ ಸರಣಿಯಲ್ಲಿ ಆಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ.

2026 ರ ಐಪಿಎಲ್ ಫೈನಲ್ ಪಂದ್ಯದ ವೇಳೆ ಕೊಹ್ಲಿ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯನ್ನು ಆಡಿರಲಿಲ್ಲ. ಅದಾದ ಬಳಿಕ ಇಂಗ್ಲೆಂಡ್‌ ಪ್ರವಾಸಕ್ಕೆ ಕೊಹ್ಲಿಯನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಗಾಯದಿಂದ ಬಳಲುತ್ತಿರುವ ವಿರಾಟ್ ಈ ಸರಣಿಯಿಂದಲೂ ಹೊರಗುಳಿಯಬಹುದೆಂದು ಅಭಿಮಾನಿಗಳು ಚಿಂತಿತರಾಗಿದ್ದರು. ಆದರೆ ಕೊಹ್ಲಿ ಸಂಪೂರ್ಣವಾಗಿ ಫಿಟ್ ಆಗಿದ್ದು, ಆಂಗ್ಲರ ನೆಲದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

15 ವರ್ಷಗಳ ನಂತರ ಬರುತ್ತಾ ಶತಕ?

ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 54 ಶತಕಗಳನ್ನು ಗಳಿಸಿದ್ದಾರೆಯಾದರೂ ಇಂಗ್ಲೆಂಡ್‌ ನೆಲದಲ್ಲಿ ಕೇವಲ ಒಂದು ಏಕದಿನ ಶತಕವನ್ನಷ್ಟೇ ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ಕೊನೆಯದಾಗಿ ಇಂಗ್ಲೆಂಡ್‌ನಲ್ಲಿ 15 ವರ್ಷಗಳ ಹಿಂದೆ ಅಂದರೆ, 2011 ರಲ್ಲಿ ಏಕದಿನ ಶತಕ ಬಾರಿಸಿದ್ದರು. ಕಾರ್ಡಿಫ್‌ನಲ್ಲಿ ನಡೆದ ಆ ಪಂದ್ಯದಲ್ಲಿ, ವಿರಾಟ್ ಕೊಹ್ಲಿ 93 ಎಸೆತಗಳಲ್ಲಿ 107 ರನ್ ಬಾರಿಸಿದರಾದರೂ ಟೀಂ ಇಂಡಿಯಾ ಆ ಪಂದ್ಯವನ್ನು ಸೋತಿತು. ಡಕ್ವರ್ತ್-ಲೂಯಿಸ್ ವಿಧಾನದ ಪ್ರಕಾರ, ಇಂಗ್ಲೆಂಡ್ ಆ ಪಂದ್ಯವನ್ನು ಗೆದ್ದಿತು. ಆದರೆ ಈಗ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಶತಕ ಸಿಡಿಸುವ ಮೂಲಕ ತಮ್ಮ ಏಕದಿನ ಶತಕದ ಬರವನ್ನು ನೀಗಿಸಿಕೊಳ್ಳುವುದರ ಜೊತೆಗೆ ತಂಡವನ್ನು ಸರಣಿ ಗೆದ್ದುಕೊಡುವ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಇಂಗ್ಲೆಂಡ್‌ನಲ್ಲಿ ವಿರಾಟ್ ಕೊಹ್ಲಿ ದಾಖಲೆ ಹೇಗಿದೆ?

ಇಂಗ್ಲೆಂಡ್‌ನಲ್ಲಿ ವಿರಾಟ್ ಕೊಹ್ಲಿ ದಾಖಲೆ ಅದ್ಭುತವಾಗಿದೆ. ಇಂಗ್ಲೆಂಡ್‌ನಲ್ಲಿ ಒಟ್ಟು 33 ಏಕದಿನ ಪಂದ್ಯಗಳನ್ನು ಆಡಿದ್ದಾರುವ ಕೊಹ್ಲಿ, 51.88 ಸರಾಸರಿಯಲ್ಲಿ 1349 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 12 ಅರ್ಧಶತಕಗಳು ಸೇರಿವೆ. ಇದಲ್ಲದೆ ವಿರಾಟ್ ಕೊಹ್ಲಿ ಇಂಗ್ಲೆಂಡ್‌ನಲ್ಲಿ ಎರಡು ಬಾರಿ ಶೂನ್ಯಕ್ಕೂ ಔಟಾಗಿದ್ದಾರೆ.

ಅದ್ಭುತ ಫಾರ್ಮ್​ನಲ್ಲಿರುವ ಕೊಹ್ಲಿ

ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ ಪ್ರಸ್ತತ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಕಳೆದ ಏಳು ಏಕದಿನ ಪಂದ್ಯಗಳಲ್ಲಿ ಅವರು ಮೂರು ಶತಕ ಮತ್ತು ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಈ ವರ್ಷ ಅವರು 80 ರ ಸರಾಸರಿಯಲ್ಲಿ 240 ರನ್ ಗಳಿಸಿದ್ದಾರೆ. ಕಳೆದ ವರ್ಷ ವಿರಾಟ್ 65.1 ರ ಸರಾಸರಿಯಲ್ಲಿ 651 ರನ್ ಕಲೆಹಾಕಿದ್ದರು.

IND vs ENG: ಕೊಹ್ಲಿ ಇನ್, ಹಾರ್ದಿಕ್ ಔಟ್; ಇಂಗ್ಲೆಂಡ್‌ ಪ್ರವಾಸಕ್ಕೆ ಭಾರತ ಏಕದಿನ ತಂಡ ಪ್ರಕಟ

ಭಾರತದ ತಂಡ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಗುರ್ನೂರ್ ಬ್ರಾರ್.

ಏಕದಿನ ಸರಣಿ ವೇಳಾಪಟ್ಟಿ

  • ಮೊದಲ ಏಕದಿನ ಪಂದ್ಯ ಜುಲೈ 14 ರಂದು ಮಧ್ಯಾಹ್ನ 3:30 ಕ್ಕೆ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯಲಿದೆ.
  • ಎರಡನೇ ಏಕದಿನ ಪಂದ್ಯ ಜುಲೈ 16 ರಂದು ಸಂಜೆ 5:30 ಕ್ಕೆ ಕಾರ್ಡಿಫ್‌ನಲ್ಲಿ ನಡೆಯಲಿದೆ.
  • ಮೂರನೇ ಏಕದಿನ ಪಂದ್ಯ ಜುಲೈ 19 ರಂದು ಮಧ್ಯಾಹ್ನ 3:30 ಕ್ಕೆ ಲಾರ್ಡ್ಸ್‌ನಲ್ಲಿ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಹುಟ್ಟುಹಬ್ಬ ಆಚರಿಸಿದ ಶಿವಣ್ಣ ಫ್ಯಾನ್ಸ್ – Kannada News | Fans celebrate Geetha Shivarajkumar birthday in Chennai amid shooting

ಗೀತಾ ಶಿವರಾಜ್​ಕುಮಾರ್ (Geetha Shiva Rajkumar) ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಅವರ ಜನ್ಮದಿನವನ್ನು ಅಭಿಮಾನಿಗಳು ಸಡಗರದಿಂದ ಆಚರಿಸಿದ್ದಾರೆ. ಕೇಕ್ ಕಟ್ ಮಾಡಿ ಸಂಭ್ರಮಿಸಲಾಗಿದೆ. ಶಿವರಾಜ್​ಕುಮಾರ್ ಅವರು ಈಗ ಶೂಟಿಂಗ್ ಸಲುವಾಗಿ ಚೆನ್ನೈನಲ್ಲಿ ಇದ್ದಾರೆ. ಅವರ ಜೊತೆ ಗೀತಾ ಕೂಡ ಇದ್ದಾರೆ. ಹಾಗಾಗಿ ಅಭಿಮಾನಿಗಳು ಕರ್ನಾಟಕದಿಂದ ಚೆನ್ನೈಗೆ ಹೋಗಿ ಅಲ್ಲಿಯೇ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ಲಭ್ಯವಾಗಿದೆ. ಶಿವರಾಜ್​ಕುಮಾರ್ ಅವರ ವೃತ್ತಿಜೀವನಕ್ಕೆ ಗೀತಕ್ಕ ಸದಾ ಬೆಂಬಲವಾಗಿ ನಿಂತಿದ್ದಾರೆ. ಅನಾರೋಗ್ಯದ ಕಷ್ಟದ ದಿನಗಳಲ್ಲಿ ಕೂಡ ಕಾಳಜಿ ಮಾಡಿದ್ದಾರೆ. ಆ ಬಗ್ಗೆ ಅನೇಕ ಸಂದರ್ಶನಗಳಲ್ಲಿ ಶಿವರಾಜ್​ಕುಮಾರ್ ಅವರು ಹೇಳಿಕೊಂಡಿದ್ದಾರೆ. ಶಿವರಾಜ್​ಕುಮಾರ್ ಅವರ ಅಭಿಮಾನಿಗಳಿಗೆ ಗೀತಕ್ಕ ಬಗ್ಗೆ ತುಂಬ ಗೌರವ ಇದೆ. ಚೆನ್ನೈಗೆ ಹೋಗಿ ಜನ್ಮದಿನ ಆಚರಿಸಿದ ಅಭಿಮಾನಿಗಳ ಪ್ರೀತಿ ಕಂಡು ಶಿವರಾಜ್​ಕುಮಾರ್-ಗೀತಾ ದಂಪತಿಗೆ ಖುಷಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಮಾನವೀಯ ಕೃತ್ಯ: ಊಟ ಕೊಡಿ ಎಂದಿದ್ದಕ್ಕೆ ಭಿಕ್ಷುಕ ದಂಪತಿಗೆ ಥಳಿಸಿದ ಹೋಟೆಲ್ ಮಾಲೀಕ – Kannada News | Hotel Owner Assaults Beggar Couple for Asking for Food, Sparks Outrage

ಪ್ರಾತಿನಿಧಿಕ ಚಿತ್ರImage Credit source: Getty images

ಕಾರವಾರ, ಜೂನ್​​ 22: ಹೋಟೆಲ್​ನಲ್ಲಿ ಊಟ ಕೇಳಿದ ಭಿಕ್ಷುಕ (Beggar) ದಂಪತಿಗೆ ಹೋಟೆಲ್​​ ಮಾಲೀಕ ಹಿಗ್ನಾಮುಗ್ಗ ಥಳಿಸಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ (uttara kannada) ಕುಮಟಾ ನಗರದಲ್ಲಿರುವ ಗೋವರ್ಧನ ಹೋಟೆಲ್​ನಲ್ಲಿ ನಡೆದಿದೆ. ರಮೇಶ್ ದ್ಯಾಮಣ್ಣ ಅಲೆಮಾರಿ (62) ಮತ್ತು ಅವರ ಪತ್ನಿ ದ್ಯಾಮವ್ವ ರಮೇಶ್ ಅಲೆಮಾರಿ (51) ಹಲ್ಲೆಗೊಳಗಾದವರು. ಸದ್ಯ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

  • ಕುಮಟಾದಲ್ಲಿ ಭಿಕ್ಷುಕ ದಂಪತಿ ಮೇಲೆ ಹಲ್ಲೆ
  • ಹೋಟೆಲ್ ಮಾಲೀಕನಿಂದ ದರ್ಪ
  • ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲು

ನಡೆದಿದ್ದೇನು?

ಹಲ್ಲೆಗೊಳಗಾದ ರಮೇಶ್ ದ್ಯಾಮಣ್ಣ ಮತ್ತು ಅವರ ಪತ್ನಿ ದ್ಯಾಮವ್ವ ರಮೇಶ್ ಅವರು ಶಿವಮೊಗ್ಗ ಜಿಲ್ಲೆಯ ಸೊರಬಾ ತಾಲೂಕಿನ ದೇವಿಕೆರೆ ಗ್ರಾಮದ ಅಲೆಮಾರಿ ದಂಪತಿ. ಭಿಕ್ಷಕರೆಂಬ ಕಾರಣಕ್ಕೆ ಊಟ ಕೊಡಲು ಹೋಟೆಲ್ ಮಾಲೀಕ ನಿರಾಕರಿಸಿದ್ದಾರೆ. ಬಹಳ ಹೊಟ್ಟೆ ಹಸಿದಿದೆ, ಊಟ ಕೊಡಿ ಎಂದಿದ್ದಕ್ಕೆ ಹೋಟೆಲ್​​ನಿಂದ ಹೊರಗೆ ತಳ್ಳಿದ್ದಾರೆ.

ಇದನ್ನೂ ಓದಿ: ಗಂಡನ ಮನೆಗಳ್ಳತನಕ್ಕೆ ಪತ್ನಿ ಸಾಥ್​: ಬಂದ ಹಣದಲ್ಲಿ ಗೋವಾದಲ್ಲಿ ಶೋಕಿ; ಸಿಕ್ಕಿಬಿದ್ದ ದಂಪತಿ

ಗೋವರ್ಧನ್ ಹೋಟೆಲ್ ಮಾಲೀಕ ಗಣೇಶ್​ ನಾಯ್ಕ್ ಹಾಗೂ ವಾಚ್‌ಮನ್ ಗಣೇಶ್​ ಗುರಕಾರಿಂದ ಭಿಕ್ಷಕ ದಂಪತಿ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆಯಿಂದ ನಡು ರಸ್ತೆಯಲ್ಲೇ ರಕ್ತಸಿಕ್ತವಾಗಿ ಬಿದ್ದಿದ್ದ ದಂಪತಿಯನ್ನ ಪೊಲೀಸರು ಸರ್ಕಾರಿ ಆಸ್ಪತ್ರೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಇತ್ತ ಹೋಟೆಲ್ ಮಾಲೀಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನೆಯಲ್ಲಿ ನಾಡಬಾಂಬ್​ ಸ್ಫೋಟ

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ನಾಡಬಾಂಬ್ ಸ್ಫೋಟಗೊಂಡ ಘಟನೆ ನಡೆದಿದೆ. ವಸಂತ ಕೊರವರ ಎಂಬುವರ ಮನೆಯಲ್ಲಿ ಈ ಸ್ಫೋಟ ಸಂಭವಿಸಿದೆ. ನಾಡಬಾಂಬ್ ಸ್ಫೋಟಗೊಳ್ಳುತ್ತಿದ್ದಂತೆ ಮನೆಯಲ್ಲಿದ್ದವರು ಪರಾರಿ ಆಗಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇದನ್ನೂ ಓದಿ: ವಿಚಾರಣೆಗೆ ಕರೆದು ಪೊಲೀಸರಿಂದ ಹಲ್ಲೆ ಆರೋಪ: ಠಾಣೆಯಲ್ಲೇ ವೃದ್ಧ ಸಾವು

ಇನ್ನು ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಹಲವು ಮನೆಗಳಿಗೆ ಹಾನಿಯಾಗಿದೆ. ಘಟನೆ ನಡೆದ ಸ್ಥಳಕ್ಕೆ ಹಳಿಯಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್ – Kannada News | Ashwin and Rauf’s Viral MLC Moment: India Pak Cricket’s Strained Relations Highlighted

ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಎಲ್ಲಾ ಸಂಬಂಧಗಳಿಗೂ ತೆರೆ ಎಳೆಯಲಾಗಿದೆ. ಇದು ಕ್ರಿಕೆಟ್‌ನ ಮೇಲೂ ಪರಿಣಾಮ ಬೀಡಿದೆ. ಪಾಕಿಸ್ತಾನಿ ಕ್ರಿಕೆಟಿಗರ ಜೊತೆ ಭಾರತೀಯ ಆಟಗಾರರು ಕೈಕುಲುವುದನ್ನು ನಿಲ್ಲಿಸಿ ಬಿಟ್ಟಿದ್ದಾರೆ. ಐಸಿಸಿ ಅಥವಾ ಎಸಿಸಿ ಪಂದ್ಯಾವಳಿಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾದರೂ ಉಭಯ ಆಟಗಾರರ ನಡುವೆ ಮಾತಿಲ್ಲ ಕತೆಯಿಲ್ಲ. ಹೀಗಿರುವಾಗ ಭಾರತೀಯ ಆಟಗಾರನೊಬ್ಬ, ಪಾಕಿಸ್ತಾನ್ ಆಟಗಾರನೊಂದಿಗೆ ಕಾಣಿಸಿಕೊಳ್ಳುವುದು ಅಪರೂಪದ ಘಟನೆಯಾಗಿದೆ. ಇದೀಗ ಅಂತಹದೆ ಘಟನೆಯಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ಆರ್. ಅಶ್ವಿನ್ ಹಾಗೂ ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ ರೌಫ್ ಭಾಗಿಯಾಗಿದ್ದಾರೆ.

ವಾಸ್ತವವಾಗಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ರವಿಚಂದ್ರನ್ ಅಶ್ವಿನ್ ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡದ ಪರ ಅಶ್ವಿನ್ ಆಡುತ್ತಿದ್ದು, ಈ ತಂಡದಲ್ಲಿ ಹಲವಾರು ಪಾಕಿಸ್ತಾನಿ ಕ್ರಿಕೆಟಿಗರು ಇದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಹ್ಯಾರಿಸ್ ರೌಫ್ ಅವರೊಂದಿಗೆ ಆರ್. ಅಶ್ವಿನ್ ಕುಳಿತಿರುವುದನ್ನು ಕಾಣಬಹುದಾಗಿದೆ. ಇವರಿಬ್ಬರು ಅಕ್ಕಪಕ್ಕದಲ್ಲಿ ಕುಳಿತು ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದ್ದಾರೆ. ಆದರೆ ಅಶ್ವಿನ್, ರೌಫ್ ಜೊತೆಗೆ ಮಾತನಾಡುವುದಾಗಲಿ ಅಥವಾ ರೌಫ್ ತೆಗೆದ ಸೆಲ್ಫಿಗೆ ಫೋಸ್ ನೀಡುವುದಾಗಲಿ ಮಾಡಿಲ್ಲ.

Source link

Exit mobile version