ISRO URSC Internship 2026: ಇಸ್ರೋ ಉಪಗ್ರಹ ಕೇಂದ್ರದಲ್ಲಿ ಇಂಟರ್ನ್‌ಶಿಪ್‌ಗೆ ಆಹ್ವಾನ; ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ! – Kannada News | ISRO URSC Internship 2026: Apply Now for Space Science and Engineering Student Opportunity

Isro ಇಂಟರ್ನ್‌ಶಿಪ್‌ ಅವಕಾಶImage Credit source: Getty Images

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಅತ್ಯಂತ ಪ್ರತಿಷ್ಠಿತ ಕೇಂದ್ರಗಳಲ್ಲಿ ಒಂದಾದ ಬೆಂಗಳೂರಿನ ಯು.ಆರ್. ರಾವ್ ಉಪಗ್ರಹ ಕೇಂದ್ರವು (URSC) ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ಗೆ (Internship) ಅರ್ಜಿ ಆಹ್ವಾನಿಸಿದೆ. ಬಾಹ್ಯಾಕಾಶ ವಿಜ್ಞಾನ (Space Science), ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಇದು ಪ್ರಾಯೋಗಿಕ ಜ್ಞಾನವನ್ನು ಪಡೆಯಲು ಮತ್ತು ಇಸ್ರೋ ವಿಜ್ಞಾನಿಗಳೊಂದಿಗೆ ಕಲಿಯಲು ಒಂದು ಅತ್ಯುತ್ತಮ ಅವಕಾಶವಾಗಿದೆ. URSC ಯಲ್ಲಿ ಈ ಇಂಟರ್ನ್‌ಶಿಪ್‌ಗಾಗಿ ಮುಂದಿನ ಅರ್ಜಿ ಪ್ರಕ್ರಿಯೆಯು ಆಗಸ್ಟ್‌ 3 ರಿಂದ ಪ್ರಾರಂಭವಾಗಲಿದೆ.

ಅರ್ಹತೆಗೆ ಅನುಗುಣವಾಗಿ ಪ್ರಾಜೆಕ್ಟ್ ಲಭ್ಯ:

ಇಂಟರ್ನ್‌ಶಿಪ್‌ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಹಿನ್ನೆಲೆ, ಪ್ರಸ್ತುತ ಓದುತ್ತಿರುವ ಕೋರ್ಸ್ ಮತ್ತು ಇಸ್ರೋದಲ್ಲಿ ಲಭ್ಯವಿರುವ ಯೋಜನೆಗಳ ಆಧಾರದ ಮೇಲೆ ಕೆಲಸವನ್ನು ನಿಯೋಜಿಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನ ಮತ್ತು ಕೌಶಲ್ಯಕ್ಕೆ ತಕ್ಕಂತೆ ನೈಜ ಸಂಶೋಧನೆ ಹಾಗೂ ತಾಂತ್ರಿಕ ಕಾರ್ಯಗಳನ್ನು ಅರ್ಥಮಾಡಿಕೊಳ್ಳಲು ಇಸ್ರೋ ಸೂಕ್ತ ಅವಕಾಶವನ್ನು ಕಲ್ಪಿಸಿಕೊಡಲಿದೆ.

‘ಮೊದಲು ಬಂದವರಿಗೆ ಮೊದಲ ಆದ್ಯತೆ’:

URSC ಸ್ಪಷ್ಟಪಡಿಸಿರುವ ಪ್ರಕಾರ, ಈ ಇಂಟರ್ನ್‌ಶಿಪ್‌ನಲ್ಲಿ ಪ್ರಾಜೆಕ್ಟ್‌ಗಳ ಹಂಚಿಕೆಯನ್ನು “ಫಸ್ಟ್ ಕಮ್, ಫಸ್ಟ್ ಸರ್ವ್” (First Come, First Served) ಅಂದರೆ ‘ಮೊದಲು ಬಂದವರಿಗೆ ಮೊದಲ ಆದ್ಯತೆ’ ಎಂಬ ಆಧಾರದ ಮೇಲೆ ಮಾಡಲಾಗುತ್ತದೆ. ಇಲ್ಲಿ ಸೀಟುಗಳ ಸಂಖ್ಯೆ ಅತ್ಯಂತ ಸೀಮಿತವಾಗಿರುವುದರಿಂದ, ಅರ್ಜಿ ಪ್ರಕ್ರಿಯೆ ಪ್ರಾರಂಭವಾದ ತಕ್ಷಣವೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವುದು ಸೂಕ್ತ. ತಡವಾಗಿ ಅರ್ಜಿ ಸಲ್ಲಿಸಿದರೆ ಅವಕಾಶ ಕೈತಪ್ಪುವ ಸಾಧ್ಯತೆ ಇರುತ್ತದೆ.

ಸ್ಟೈಪೆಂಡ್ ಮತ್ತು ವಸತಿ ಸೌಲಭ್ಯ ಇರುವುದಿಲ್ಲ:

ಈ ಇಂಟರ್ನ್‌ಶಿಪ್ ಕಾರ್ಯಕ್ರಮದ ಅಡಿಯಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಆರ್ಥಿಕ ಸಹಾಯ ಅಥವಾ ಸ್ಟೈಪೆಂಡ್ (Stipend) ನೀಡಲಾಗುವುದಿಲ್ಲ. ಇದರೊಂದಿಗೆ, ಸಂಸ್ಥೆಯ ಕಡೆಯಿಂದ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯವನ್ನೂ (Accommodation) ಒದಗಿಸುವುದಿಲ್ಲ. ಹೀಗಾಗಿ, ಆಯ್ಕೆಯಾಗುವ ಅಭ್ಯರ್ಥಿಗಳು ತಮ್ಮ ಪ್ರಯಾಣ ಮತ್ತು ವಾಸ್ತವ್ಯದ ವ್ಯವಸ್ಥೆಯನ್ನು ಸ್ವತಃ ತಾವೇ ಮಾಡಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವ ಮುನ್ನ ಹೀಗಿರಲಿ ಸಿದ್ಧತೆ:

  • ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ: ಅರ್ಜಿ ಪ್ರಕ್ರಿಯೆ ಆರಂಭವಾಗುವ ಮುನ್ನವೇ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳು, ರೆಸ್ಯೂಮ್ (Resume) ಮತ್ತು ಕಾಲೇಜಿನಿಂದ ಅಗತ್ಯವಿರುವ ಅನುಮತಿ ಪತ್ರಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು.
  • ಕಾರ್ಯಕ್ಷೇತ್ರದ ಪರಿಶೀಲನೆ: ನಿಮ್ಮ ಅಧ್ಯಯನದ ವಿಷಯ ಮತ್ತು ಆಸಕ್ತಿಗಳು URSC ಯ ತಾಂತ್ರಿಕ ಕಾರ್ಯಕ್ಷೇತ್ರಕ್ಕೆ ಹೊಂದಿಕೆಯಾಗುತ್ತವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಅಧಿಕೃತ ಮಾಹಿತಿ: ಇಂಟರ್ನ್‌ಶಿಪ್‌ನ ಸಂಪೂರ್ಣ ಮಾರ್ಗಸೂಚಿಗಳು, ಅರ್ಹತಾ ಮಾನದಂಡಗಳು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್‌ಗಾಗಿ ವಿದ್ಯಾರ್ಥಿಗಳು URSC ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ವಿವರಗಳನ್ನು ಪರಿಶೀಲಿಸಬಹುದು.

ಬಾಹ್ಯಾಕಾಶ ತಂತ್ರಜ್ಞಾನದ ಜಗತ್ತನ್ನು ಹತ್ತಿರದಿಂದ ನೋಡಬಯಸುವ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಈಗಿನಿಂದಲೇ ತಮ್ಮ ಸಿದ್ಧತೆಗಳನ್ನು ಆರಂಭಿಸುವುದು ಒಳ್ಳೆಯದು.

ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: 

Source link

ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಪಕ್ಷವೇ ಕಾರಣ ಎಂದ ಆರ್ ಅಶೋಕ್! – Kannada News | R Ashoka Blames Congress Meet for NEET Exam Traffic Chaos, Students Miss Exam

ಬೆಂಗಳೂರು, ಜೂನ್ 22: ಭಾನುವಾರ ನಡೆದ ನೀಟ್ ಮರು ಪರೀಕ್ಷೆಗೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯಿಂದಾಗಿ ಮೂವರು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಲುಪಲು ಸಾಧ್ಯವಾಗದೇ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಆರ್.ಸಿ ಕಾಲೇಜಿನಲ್ಲಿ ನಡೆದ ಈ ಘಟನೆಗೆ ಪೋಷಕರು ಸಂಚಾರ ದಟ್ಟಣೆಯೇ ಕಾರಣವೆಂದು ಆರೋಪಿಸಲಾಗಿದೆ. ಇದೇ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಮೇಲೆ ಬಿಜೆಪಿ ನಾಯಕ ಆರ್.ಅಶೋಕ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನೀಟ್ ಪರೀಕ್ಷೆ ನಡೆಯುತ್ತಿದ್ದ ದಿನವೇ ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿ ಕಾಂಗ್ರೆಸ್ ಪಕ್ಷ ಸಭೆ ನಡೆಸಿದ್ದು, ಇದರಿಂದ ಉಂಟಾದ ಸಂಚಾರ ದಟ್ಟಣೆಯೇ ವಿದ್ಯಾರ್ಥಿಗಳಿಗೆ ತೊಂದರೆಯಾಗಲು ಕಾರಣ ಎಂದು ಅಶೋಕ್ ಆರೋಪಿಸಿದ್ದಾರೆ. ಕಾರ್ಯಕ್ರಮದ ಸಮಯವನ್ನು ಬದಲಿಸಿದ್ದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂದಿದ್ದಾರೆ. ಪ್ರಧಾನ ಮಂತ್ರಿಯವರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಮಾನ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾದ ಉದಾಹರಣೆಯನ್ನು ನೀಡಿದ ಆರ್.ಅಶೋಕ್, ಕಾಂಗ್ರೆಸ್ ನಾಯಕರಿಗೆ ಈ ಜ್ಞಾನ ಮತ್ತು ಸಾಮಾನ್ಯ ತಿಳುವಳಿಕೆ ಇರಲಿಲ್ಲ ಎಂದು ಟೀಕಿಸಿದ್ದಾರೆ. ಈ ಸಮಸ್ಯೆಗೆ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವೇ ನೇರ ಹೊಣೆ ಎಂದು ಅವರು ಆರೋಪಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Shiva Parivar: ಶಿವನನ್ನ ಒಬ್ಬಂಟಿಯಾಗಿ ಪೂಜಿಸಲ್ಲ ಯಾಕೆ? ನಂದಿ, ಗಣೇಶ, ಪಾರ್ವತಿ ವಿಗ್ರಹ ಪ್ರತಿಷ್ಠಾಪಿಸುವುದೇಕೆ? – Kannada News | Shiva Parivar’s Sacred Meaning: Nandi, Ganesha, Parvati Idols in Temples Explained

ಶಿವಲಿಂಗದ ಸುತ್ತಲೂ ಇರುವ ಶಿವ ಪರಿವಾರImage Credit source: Getty Images

ಯಾವುದೇ ಶಿವ ದೇವಾಲಯಕ್ಕೆ ಹೋದರೂ ಅಲ್ಲಿ ಕೇವಲ ಶಿವಲಿಂಗ ಮಾತ್ರವಲ್ಲದೆ, ಅದರ ಸುತ್ತಲೂ ನಂದಿ, ಪಾರ್ವತಿ ದೇವಿ, ಗಣೇಶ, ಕಾರ್ತಿಕೇಯ ಹಾಗೂ ನಾಗದೇವರ ವಿಗ್ರಹಗಳು ಇರುತ್ತವೆ. ಅನೇಕರಿಗೆ ಇದು ಕೇವಲ ಒಂದು ಸಾಂಪ್ರದಾಯಿಕ ರಚನೆ ಎನಿಸಬಹುದು. ಆದರೆ, ಶಿವಲಿಂಗದ ಪಕ್ಕದಲ್ಲಿ ಇಡೀ ಶಿವ ಪರಿವಾರದ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದರ ಹಿಂದೆ ಅತ್ಯಂತ ಆಳವಾದ ಧಾರ್ಮಿಕ, ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಮಹತ್ವ ಅಡಗಿದೆ. ಈ ವಿಗ್ರಹಗಳ ಉಪಸ್ಥಿತಿ ಮತ್ತು ಅವು ನೀಡುವ ಜೀವನದ ಸಂದೇಶಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಂದಿ ಮಹಾರಾಜ:

ಪ್ರತಿಯೊಂದು ಶಿವ ದೇವಸ್ಥಾನದಲ್ಲೂ ಶಿವಲಿಂಗಕ್ಕೆ ಮುಖಮಾಡಿ ಕುಳಿತಿರುವ ನಂದಿಯ ವಿಗ್ರಹವಿರುತ್ತದೆ. ನಂದಿಯು ಶಿವನ ವಾಹನ ಮಾತ್ರವಲ್ಲ, ಪರಶಿವನ ಪರಮ ಭಕ್ತ ಮತ್ತು ಗಣಗಳ ಅಧಿಪತಿ. ನಂದಿಯ ಕಣ್ಣುಗಳು ಯಾವಾಗಲೂ ಶಿವಲಿಂಗದ ಮೇಲೆಯೇ ನೆಟ್ಟಿರುತ್ತವೆ, ಇದು ಏಕಾಗ್ರತೆ ಮತ್ತು ಸದಾ ದೈವಿಕ ಚಿಂತನೆಯಲ್ಲಿರಬೇಕೆಂಬ ಸಂದೇಶವನ್ನು ನೀಡುತ್ತದೆ. ಭಕ್ತರು ತಮ್ಮ ಮನದ ಇಷ್ಟಾರ್ಥಗಳನ್ನು ನಂದಿಯ ಕಿವಿಯಲ್ಲಿ ಪಿಸುಗುಟ್ಟುವ ಸಂಪ್ರದಾಯವಿದೆ. ನಿರಂತರ ಧ್ಯಾನದಲ್ಲಿರುವ ಶಿವನಿಗೆ ನಂದಿಯು ಭಕ್ತರ ಪ್ರಾರ್ಥನೆಯನ್ನು ತಲುಪಿಸುತ್ತಾನೆ ಎಂಬುದು ನಂಬಿಕೆ.

ಗಣೇಶ:

ಶಿವ-ಪಾರ್ವತಿಯರ ಪ್ರಥಮ ಪುತ್ರನಾದ ಗಣೇಶನ ವಿಗ್ರಹವು ಶಿವಲಿಂಗದ ಬಳಿ ಇರುವುದು ಅನಿವಾರ್ಯವಾಗಿದೆ. ಸನಾತನ ಧರ್ಮದಲ್ಲಿ ಯಾವುದೇ ಪೂಜೆ ಅಥವಾ ಶುಭ ಕಾರ್ಯವು ಗಣೇಶನ ಆರಾಧನೆಯಿಲ್ಲದೆ ಆರಂಭವಾಗುವುದಿಲ್ಲ. ಗಣೇಶನು ಬುದ್ಧಿವಂತಿಕೆ, ಜ್ಞಾನ ಮತ್ತು ಯಶಸ್ಸಿನ ಪ್ರತೀಕವಾಗಿದ್ದಾನೆ. ಶಿವಲಿಂಗದ ಪೂಜೆಗೆ ಮುನ್ನ ವಿಘ್ನನಿವಾರಕ ಗಣೇಶನನ್ನು ಆರಾಧಿಸುವುದರಿಂದ ಭಕ್ತಿಯ ಹಾದಿಯಲ್ಲಿರುವ ಎಲ್ಲಾ ಅಡೆತಡೆಗಳು ದೂರವಾಗುತ್ತವೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಪಾರ್ವತಿ ದೇವಿ:

ಶಿವನ ಪಕ್ಕದಲ್ಲಿ ಜಗನ್ಮಾತೆಯಾದ ಪಾರ್ವತಿ ದೇವಿಯ ವಿಗ್ರಹ ಅಥವಾ ಪೀಠದ ರೂಪದಲ್ಲಿ ಅವಳ ಸಾನ್ನಿಧ್ಯವಿರುತ್ತದೆ. ಶಿವ ಮತ್ತು ಶಕ್ತಿ ಪರಸ್ಪರ ಬೇರೆಯಲ್ಲ. ಶಿವನು ‘ಪ್ರಜ್ಞೆ’ ಆಗಿದ್ದರೆ, ಪಾರ್ವತಿಯು ‘ಶಕ್ತಿ’. ಶಕ್ತಿಯಿಲ್ಲದ ಶಿವನು ಶವಕ್ಕೆ ಸಮಾನ ಎನ್ನಲಾಗುತ್ತದೆ. ದೇವಸ್ಥಾನದಲ್ಲಿ ಇವರಿಬ್ಬರ ಉಪಸ್ಥಿತಿಯು ಪ್ರಕೃತಿ ಮತ್ತು ಪುರುಷನ ಜೋಡಣೆಯನ್ನು ಹಾಗೂ ಜೀವನದಲ್ಲಿ ಸ್ತ್ರೀ-ಪುರುಷ ಸಮಾನತೆಯ ಸಮತೋಲನವನ್ನು ತೋರ್ಪಡಿಸುತ್ತದೆ.

ಕಾರ್ತಿಕೇಯ ಮತ್ತು ನಾಗದೇವತೆ:

ಶಿವನ ದ್ವಿತೀಯ ಪುತ್ರ ಹಾಗೂ ದೇವತೆಗಳ ಸೇನಾಧಿಪತಿಯಾದ ಕಾರ್ತಿಕೇಯನ (ಸುಬ್ರಹ್ಮಣ್ಯ) ವಿಗ್ರಹವು ನಮಗೆ ಸಾಹಸ, ಧೈರ್ಯ ಮತ್ತು ನಾಯಕತ್ವದ ಗುಣಗಳನ್ನು ನೆನಪಿಸುತ್ತದೆ. ಶಿವನು ಸರ್ಪಭೂಷಣ. ಕಾಲ ಮತ್ತು ಮೃತ್ಯುವನ್ನು ಜಯಿಸಿದ ಶಿವನ ಕುತ್ತಿಗೆಯಲ್ಲಿರುವ ನಾಗದೇವತೆಯು ಪ್ರಕೃತಿಯ ರಕ್ಷಣೆ ಮತ್ತು ಕುಂಡಲಿನಿ ಶಕ್ತಿಯ ಜಾಗೃತಿಯನ್ನು ಸಂಕೇತಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಎಳಿಯುವ ಮುನ್ನ ಎಚ್ಚರ: ಚಿಕ್ಕಜಾಲದಲ್ಲಿ ಧೂಮಪಾನಿಗಳ ಬೆವರಿಳಿಸಿದ ರಾಣಿ ಚೆನ್ನಮ್ಮ ಪಡೆ – Kannada News | Bengaluru Police Enforce Public Smoking Ban Rani Chennamma Brigade Acts

ಬೆಂಗಳೂರು, ಜೂ.22: ರಾಜಧಾನಿಯಲ್ಲಿ ಸಾರ್ವಜನಿಕ ಆರೋಗ್ಯ ಕಾಪಾಡುವ ಮತ್ತು ಧೂಮಪಾನ ಮುಕ್ತ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಈಶಾನ್ಯ ವಿಭಾಗದ ‘ರಾಣಿ ಚೆನ್ನಮ್ಮ ಪಡೆ’ ಭರ್ಜರಿ ಕಾರ್ಯಾಚರಣೆ ಕೈಗೊಂಡಿದೆ. ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾಯ್ದೆ (COTPA) ಉಲ್ಲಂಘಿಸುವವರ ವಿರುದ್ಧ ವಿಶೇಷ ಜಾಗೃತಿ ಹಾಗೂ ಕಠಿಣ ಜಾರಿ ಕಾರ್ಯಾಚರಣೆಯನ್ನು ನಡೆಸಲಾಗಿದೆ.

ಕಾರ್ಯಾಚರಣೆಯ ವೇಳೆ ರಾಣಿ ಚೆನ್ನಮ್ಮ ಪಡೆ ಹಾಗೂ ಚಿಕ್ಕಜಾಲ ಠಾಣೆಯ ಸಿಬ್ಬಂದಿ ತಂಡವು ಬಸ್ ನಿಲ್ದಾಣಗಳು, ಪ್ರಮುಖ ವಾಣಿಜ್ಯ ಸಂಕೀರ್ಣಗಳ ಸುತ್ತಮುತ್ತಲಿನ ಪ್ರದೇಶಗಳು, ಸಾರ್ವಜನಿಕ ರಸ್ತೆ ಬದಿಗಳು ಹಾಗೂ ಜನಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ ದಿಢೀರ್ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲೇ ನಿಯಮ ಉಲ್ಲಂಘಿಸಿ ಧೂಮಪಾನ ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆಹಚ್ಚಿ, ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ ಅಡಿಯಲ್ಲಿ ಒಟ್ಟು 10 ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಲಾಗಿದೆ.

ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್​:

ಕೇವಲ ಕಾನೂನು ಕ್ರಮ ಜರುಗಿಸುವುದಷ್ಟೇ ಅಲ್ಲದೆ, ಪೊಲೀಸರು ಸ್ಥಳದಲ್ಲೇ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಿದರು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದರಿಂದ ಉಂಟಾಗುವ ಆರೋಗ್ಯ ಹಾನಿಗಳು ಹಾಗೂ ಪರೋಕ್ಷವಾಗಿ ಧೂಮಪಾನದಿಂದ ಸುತ್ತಮುತ್ತಲಿನ ಮಹಿಳೆಯರು, ಮಕ್ಕಳು ಸೇರಿದಂತೆ ಇತರೆ ಅಮಾಯಕ ಸಾರ್ವಜನಿಕರಿಗೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಮನವರಿಕೆ ಮಾಡಿಕೊಟ್ಟರು. ಕೋತ್ಪಾ (COTPA) ಕಾಯ್ದೆಯ ಕಠಿಣ ನಿಯಮಗಳ ಬಗ್ಗೆ ವಿವರಿಸಿ, ನಗರವನ್ನು ಆರೋಗ್ಯಕರವಾಗಿಸಲು ಸಹಕರಿಸುವಂತೆ ಮನವಿ ಮಾಡಿದರು.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮನೆಗಳ ಮುಳುಗಡೆಗೆ ರಸ್ತೆಗಳೇ ಕಂಟಕ: ಮಿಲ್ಲಿಂಗ್ ಮಾಡದೆ ಡಾಂಬರು ಹಾಕಿ ಮನೆಗಳಿಗಿಂತ ರಸ್ತೆ ಎತ್ತರಿಸುತ್ತಿರುವ ಜಿಬಿಎ

“ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ಉಲ್ಲಂಘನೆಗಳ ವಿರುದ್ಧ ಪೊಲೀಸ್ ಇಲಾಖೆಯು ಮುಂಬರುವ ದಿನಗಳಲ್ಲೂ ನಿರಂತರವಾಗಿ ಇಂತಹ ಜಾಗೃತಿ ಹಾಗೂ ಜಾರಿ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲಿದೆ” ಎಂದು ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:03 pm, Mon, 22 June 26

Source link

ನಾನಂತೂ ರೆಡಿ… ಸ್ಪಷ್ಟ ಸಂದೇಶ ರವಾನಿಸಿದ ವೈಭವ್ ಸೂರ್ಯವಂಶಿ! – Kannada News | Vaibhav Sooryavanshi’s message to Team India selectors

ಟೀಮ್ ಇಂಡಿಯಾದ ಹೊಸ ಸೆನ್ಸೇಷನ್ ವೈಭವ್ ಸೂರ್ಯವಂಶಿಯ ಅಬ್ಬರ ಏಕದಿನ ಕ್ರಿಕೆಟ್​ನಲ್ಲೂ ಶುರುವಾಗಿದೆ.  ಶ್ರೀಲಂಕಾ ಎ ವಿರುದ್ಧದ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 94 ರನ್ ಚಚ್ಚಿದ ಸೂರ್ಯವಂಶಿ, ಪಂದ್ಯದ ನಂತರ ಬಿಸಿಸಿಐ ಆಯ್ಕೆಗಾರರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಪಂದ್ಯದ ನಂತರ ವೈಭವ್ ಹೇಳಿದ್ದೇನು?

ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಬೆನ್ನಲ್ಲೇ ವೈಭವ್ ಸೂರ್ಯವಂಶಿಗೆ ಟಿ20 ಸ್ಪೆಷಲಿಸ್ಟ್ ಎಂದು ಮುದ್ರೆ ಹೊತ್ತಲಾಗಿತ್ತು. ಆದರೆ ಇದೀಗ ಏಕದಿನ ಪಂದ್ಯದಲ್ಲೂ ನಾನು ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಬಲ್ಲೇ ಎಂಬುದನ್ನು ವೈಭವ್ ನಿರೂಪಿಸಿದ್ದಾರೆ. ಅದು ಕೂಡ ಶ್ರೀಲಂಕಾ ಎ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ.

ಈ ಪಂದ್ಯದ ಬಳಿಕ ಮಾತನಾಡಿದ ವೈಭವ್ ಸೂರ್ಯವಂಶಿ, “ಜನರಿಗೆ ಇದರ ಬಗ್ಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ… ನಾನು 50 ಓವರ್‌ಗಳ (ಏಕದಿನ) ಕ್ರಿಕೆಟ್ ಅನ್ನು ತುಂಬಾ ಆಡಿದ್ದೇನೆ” ಎಂದು ಮಾರ್ಮಿಕವಾಗಿ ನೆನಪಿಸಿದ್ದಾರೆ.

ಈ ಮೂಲಕ ತಾನು ಕೇವಲ ಟಿ20 ಕ್ರಿಕೆಟ್​ಗೆ ಮಾತ್ರವಲ್ಲ, ಹಿರಿಯರ ಏಕದಿನ ತಂಡಕ್ಕೂ ಸಿದ್ಧನಿದ್ದೇನೆ ಎಂಬ ನೇರ ಸಂದೇಶವನ್ನು ವೈಭವ್ ಸೂರ್ಯವಂಶಿ ಆಯ್ಕೆಗಾರರಿಗೆ ರವಾನಿಸಿದ್ದಾರೆ.

ಇದಾಗ್ಯೂ ವೈಭವ್ ಸೂರ್ಯವಂಶಿಯನ್ನು ಭಾರತ ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಅಂದರೆ ಮುಂಬರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರುವ ವೈಭವ್ ಅವರನ್ನು ಭಾರತ ಏಕದಿನ ತಂಡದಿಂದ ಹೊರಗಿಡಲಾಗಿದೆ. ಹೀಗಾಗಿ ಭಾರತದ ಒನ್​ಡೇ ಟೀಮ್​ನಲ್ಲಿ ಸ್ಥಾನ ಪಡೆಯಲು ವೈಭವ್ ಸೂರ್ಯವಂಶಿ ಮತ್ತೊಂದಷ್ಟು ದಿನಗಳವರೆಗೆ ಕಾಯಬೇಕಾಗಿ ಬರಬಹುದು.

ಪ್ರಚಂಡ ಚೆಂಡಾಟ:

ದಂಬುಲ್ಲಾದಲ್ಲಿ ನಡೆದ ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಲಂಕಾ ಬೌಲರ್​ಗಳನ್ನು ಚೆಂಡಾಡಿದ್ದರು. ಈ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದ್ದರು.

  • ಈ ಪಂದ್ಯದಲ್ಲಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ವೈಭವ್ ‘ಲಿಸ್ಟ್ ಎ’ (List A) ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕದ ದಾಖಲೆ ಬರೆದರು.
  • ಈ ಮ್ಯಾಚ್​ನಲ್ಲಿ ಕೇವಲ 29 ಎಸೆತಗಳನ್ನು ಎದುರಿಸಿದ ವೈಭವ್ 10 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿ 94 ರನ್ ಗಳಿಸಿದರು. ಅದು ಕೂಡ 324.14 ರ ಸ್ಟ್ರೈಕ್ ರೇಟ್​ನಲ್ಲಿ ಎಂಬುದು ವಿಶೇಷ.

ಇದನ್ನೂ ಓದಿ:  ಇಂಗ್ಲೆಂಡ್ ತಂಡಕ್ಕೆ ಬಿಗ್ ಶಾಕ್:​ 12 ಅಂಕಗಳು ಕಡಿತ..!

ವೈಭವ್ ಸೂರ್ಯವಂಶಿಯ ಈ ಪ್ರಚಂಡ ಬ್ಯಾಟಿಂಗ್ ನೆರವಿನಿಂದ ಭಾರತ ಎ ತಂಡ 50 ಓವರ್​ಗಳಲ್ಲಿ 377/9 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ಎ ತಂಡ 311 ರನ್​ಗಳಿಸಿ ಆಲೌಟ್ ಆಗಿದ್ದರು. ಈ ಮೂಲಕ ಟೀಮ್ ಇಂಡಿಯಾ 66 ರನ್​ಗಳ ಭರ್ಜರಿ ಜಯ ಸಾಧಿಸಿದೆ.

Published On – 12:58 pm, Mon, 22 June 26

Source link

ಪರಿಷತ್​​ ಚುನಾವಣೆಯಲ್ಲಿ ಕ್ರಾಸ್​​ ವೋಟಿಂಗ್​: ಆಣೆ ಪ್ರಮಾಣಕ್ಕೆ ಮುಂದಾದ ಬಿಜೆಪಿಗರಿಗೆ ಹೆಚ್​​.ಡಿ. ಕುಮಾರಸ್ವಾಮಿ ಕಿವಿಮಾತು – Kannada News | Council Election Cross Voting: HD Kumaraswamy and Suresh Kumar Advise BJP to Drop Dharmasthala Oath Plan

ಕುಮಾರಸ್ವಾಮಿ ಮತ್ತು ಸುರೇಶ್​​ ಕುಮಾರ್​​Image Credit source: Tv9 Kannada

ಬೆಂಗಳೂರು, ಜೂನ್​​ 22: ವಿಧಾನ ಪರಿಷತ್​​ ಚುನಾವಣೆಯಲ್ಲಿ ಅಡ್ಡಮತದಾನದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ರಾಜ್ಯ ಬಿಜೆಪಿ ನಿರ್ಧರಿಸಿದೆ. ಪಕ್ಷಕ್ಕೆ ದ್ರೋಹ ಬಗೆದವರು ಯಾರೆಂಬುದು ದೇವರ ಎದುರೇ ಬಯಲಾಗಲಿ ಎಂದು ನಿನ್ನೆಯಷ್ಟೇ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದರು. ಪಕ್ಷದ ಈ ನಿರ್ಧಾರಕ್ಕೆ ಕೆಲ ಹಿರಿಯ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದು, ರಾಜಕೀಯ ಅಪಚಾರಗಳಿಗೆ ರಾಜಕೀಯ ಪರಿಹಾರ ಕಂಡುಕೊಳ್ಳಬೇಕು. ಬದಲಾಗಿ ಪವಿತ್ರ ಕ್ಷೇತ್ರಗಳನ್ನು ಎಳೆದು ತರುವುದು ಸೂಕ್ತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಕೂಡ ರಾಜ್ಯ ಬಿಜೆಪಿಗೆ ಕೆಲ ಸಲಹೆ ನೀಡಿದ್ದಾರೆ.

ಕುಮಾರಸ್ವಾಮಿ ಹೇಳಿದ್ದೇನು?

ನ್ನ ಅಭಿಪ್ರಾಯದಲ್ಲಿ ಆಣೆ ಪ್ರಮಾಣದ ವಿಚಾರವನ್ನು ಇಲ್ಲಿಗೆ ನಿಲ್ಲಿಸಿ. ಈ ಸರ್ಕಾರದಲ್ಲಿ ಯಾರನ್ನ ಬೇಕಾದರೂ ಬ್ಲಾಕ್‌ಮೇಲ್, ಬದಲಾವಣೆ ಮಾಡುತ್ತಾರೆ. ಕ್ರಾಸ್ ವೋಟಿಂಗ್ ಹೊಸದೇನಲ್ಲ. ಹೀಗಾಗಿ ಬಿಜೆಪಿಯವ್ರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗಬೇಡಿ. ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತ ಆಗಿದೆ, ಈಗಿನ ಸಿಎಂ ದಾರಾಳವಾಗಿದ್ದಾರೆ.ಆ ಕಾರಣಕ್ಕೆಅಭಿವೃದ್ಧಿ ಹೆಸರಲ್ಲಿ ಕ್ಷೇತ್ರದ ಜನರ ಮುಂದೆ ಹೋಗಲು ಕ್ರಾಸ್ ವೋಟ್ ಮಾಡಿರಬಹುದು. ಇದನ್ನ ಇಲ್ಲಿಗೆ ಬಿಟ್ಟುಬಿಡಿ ಎಂದು ಹೆಚ್​​ಡಿಕೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಪರಿಷತ್​​ ಚುನಾವಣೆಯಲ್ಲಿ ಕ್ರಾಸ್​​ ವೋಟಿಂಗ್​​; ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣಕ್ಕೆ ಮುಂದಾದ ಬಿಜೆಪಿ

ಶಾಸಕ ಸುರೇಶ್​​ ಕುಮಾರ್​​ರಿಂದಲೂ ಸಲಹೆ

ರಾಜಕೀಯದಲ್ಲಿ ಆಗಿರುವ ಅಪಚಾರಗಳಿಗೆ ರಾಜಕೀಯ ಉತ್ತರ ಕಂಡುಕೊಳ್ಳಬೇಕು. ಧರ್ಮಸ್ಥಳವು ನಾಡಿನ ಭಕ್ತರ ಶ್ರದ್ಧಾ ಕೇಂದ್ರವಾಗಿದ್ದು, ಅದರ ಪಾವಿತ್ರ್ಯತೆಯನ್ನು ಕಾಪಾಡಬೇಕು. ರಾಜಕೀಯದಲ್ಲಿ ನಡೆದಿರುವ ಅಡ್ಡಮತದಾನದಂತಹ ಅಪಸವ್ಯಗಳಿಗೆ ಪವಿತ್ರ ಕ್ಷೇತ್ರವನ್ನು ಎಳೆದು ತರುವುದು ಸರಿಯಲ್ಲ. ರಾಜಕೀಯ ಸಮಸ್ಯೆಗಳಿಗೆ ರಾಜಕೀಯ ಪರಿಹಾರವೇ ಉತ್ತಮ ಎಂದು ಬಿಜೆಪಿಯ ಹಿರಿಯ ಸುರೇಶ್ ಕುಮಾರ್ ಕೂಡ ಅಭಿಪ್ರಾಯಪಟ್ಟಿದ್ದಾರೆ. ವಿಜಯೇಂದ್ರ ಅವರು ನೋವಿನಿಂದ ಈ ಮಾತುಗಳನ್ನು ಹೇಳಿದ್ದಾರೆ. ಆದರೆ, ಅಡ್ಡಮತದಾನ ಮಾಡಿದವರನ್ನು ಗುರುತಿಸಲು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡುವುದು ಪರಿಹಾರವಲ್ಲ. ಹಾಗೆ ಮಾಡಿದರೂ, ಸುಳ್ಳು ಹೇಳುವವನನ್ನು ಕಂಡುಹಿಡಿಯುವುದು ಕಷ್ಟವಾಗುತ್ತದೆ. ಇದರಿಂದ ಪವಿತ್ರ ಕ್ಷೇತ್ರದ ಶ್ರದ್ಧೆಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರು, ದೆಹಲಿ, ಮುಂಬೈ ವಿಮಾನ ನಿಲ್ದಾಣಗಳನ್ನು ಗ್ಲೋಬಲ್ ಟ್ರಾನ್ಸಿಟ್ ಹಬ್​ಗಳಾಗಿ ಅಭಿವೃದ್ದಿಪಡಿಸಲು ಕೇಂದ್ರ ಯೋಜನೆ – Kannada News | Govt pushing Bangalore, Delhi and Mumbai Airports as global transit hub

ಬೆಂಗಳೂರು ಏರ್​ಪೋರ್ಟ್​ನ ಒಂದನೇ ಟರ್ಮಿನಲ್Image Credit source: Wikipedia

ನವದೆಹಲಿ, ಜೂನ್ 22: ದುಬೈ, ದೋಹಾ ಮತ್ತು ಸಿಂಗಾಪುರದಂತಹ ಜಾಗತಿಕವಾಗಿ ಪ್ರಸಿದ್ಧವಾಗಿರುವ ವಿಮಾನ ನಿಲ್ದಾಣಗಳಿಗೆ ನೇರ ಪೈಪೋಟಿ ನೀಡಲು ಭಾರತ ಸರ್ಕಾರವು ಒಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಭಾರತದ ಪ್ರಮುಖ ವಿಮಾನ ನಿಲ್ದಾಣಗಳಾದ ದೆಹಲಿ, ಮುಂಬೈ ಮತ್ತು ಬೆಂಗಳೂರನ್ನು ಅಂತರರಾಷ್ಟ್ರೀಯ ಸಾರಿಗೆ ಕೇಂದ್ರ ಅಥವಾ ಟ್ರಾನ್ಸಿಟ್ ಹಬ್​ಗಳಾಗಿ (Transit Hubs) ಪರಿವರ್ತಿಸಲು ಸರ್ಕಾರ ಯೋಜಿಸುತ್ತಿದೆ.

ಪ್ರಯಾಣಿಕರ ಪ್ರಯಾಣವನ್ನು ಸುಲಭಗೊಳಿಸಲು ವಲಸೆ ಮತ್ತು ಕಸ್ಟಮ್ಸ್ ನಿಯಮಗಳನ್ನು ಸರಳಗೊಳಿಸಲಾಗುತ್ತಿದೆ. ಸಣ್ಣ ನಗರಗಳಿಂದ ಬರುವ ಪ್ರಯಾಣಿಕರು ಅಂತರರಾಷ್ಟ್ರೀಯ ಪ್ರಯಾಣ ಬೆಳೆಸುವಾಗ, ತಮ್ಮ ಮೊದಲ ನಿರ್ಗಮನದ ನಗರದಲ್ಲೇ (ಉದಾಹರಣೆಗೆ ವಾರಣಾಸಿ) ವಲಸೆ ಪ್ರಕ್ರಿಯೆಗಳನ್ನು ಮುಗಿಸಿಕೊಳ್ಳಬಹುದು. ಈ ಮೂಲಕ ಕನೆಕ್ಟಿಂಗ್ ಫ್ಲೈಟ್ ಹಿಡಿಯುವ ಜಾಗದಲ್ಲಿ ಸಮಯ ಉಳಿತಾಯವಾಗುತ್ತದೆ. ಏರ್ ಇಂಡಿಯಾ ಸಂಸ್ಥೆಯು ವಾರಣಾಸಿಯಿಂದ ಅಂತರರಾಷ್ಟ್ರೀಯ ಮಾರ್ಗದಲ್ಲಿ ಇದರ ಪ್ರಾಯೋಗಿಕ ಪರೀಕ್ಷೆಯನ್ನು (Pilot Program) ಆರಂಭಿಸುತ್ತಿದೆ.

ಟ್ರಾನ್ಸಿಟ್ ಹಬ್ ಹೇಗೆ ಕೆಲಸ ಮಾಡುತ್ತದೆ?

ಟ್ರಾನ್ಸಿಟ್ ಹಬ್ ಎಂದರೆ ಸಣ್ಣ ನಗರಗಳಿಂದ ನೇರವಾಗಿ ಇನ್ನೊಂದು ನಗರಕ್ಕೆ ಫ್ಲೈಟ್ ಇಲ್ಲದಾಗ ಟ್ರಾನ್ಸಿಟ್ ಹಬ್ ಮುಖಾಂತರ ಆ ನಗರ ತಲುಪಬಹುದು. ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಬೆಂಗಳೂರಿನಲ್ಲಿರುವ ನಿಮ್ಮ ಏರಿಯಾದಿಂದ ನಿಮ್ಮ ಊರಿಗೆ ನೇರ ಬಸ್ ಇರುವುದಿಲ್ಲ. ನೀವು ಮೆಜೆಸ್ಟಿಕ್​ಗೆ ಹೋಗಿ ಅಲ್ಲಿಂದ ಇನ್ನೊಂದು ಬಸ್​ನಲ್ಲಿ ಊರು ತಲುಪಬಹುದು. ಇಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣವು ಟ್ರಾನ್ಸಿಟ್ ಹಬ್ ಆಗಿರುತ್ತದೆ. ಏವಿಯೇಶನ್ ಹಬ್ ಕೂಡ ಹೀಗೆಯೇ ಕೆಲಸ ಮಾಡುತ್ತದೆ. ಈ ವ್ಯವಸ್ಥೆಯಿಂದ ವೈಮಾನಿಕ ಕಂಪನಿಗಳಿಗೆ ಉಳಿತಾಯ ಸಾಧ್ಯವಾಗುತ್ತದೆ.

ಇದನ್ನೂ ಓದಿ: ಭಾರತ-ಬ್ರಿಟನ್ ವ್ಯಾಪಾರ ಒಪ್ಪಂದ: ಭಾರತೀಯ ವಾಹನ ತಯಾರಕರಿಗೆ ದೊಡ್ಡ ಮಾರುಕಟ್ಟೆ ಅವಕಾಶ

ದೆಹಲಿಯಲ್ಲಿ ‘ಏರ್ ಟ್ರೈನ್’ (Air Train) ಯೋಜನೆ

ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (DIAL) ಟರ್ಮಿನಲ್ 1, ಟರ್ಮಿನಲ್ 2, ಟರ್ಮಿನಲ್ 3, ಏರೋಸಿಟಿ ಮತ್ತು ಕಾರ್ಗೋ ಸಿಟಿಯನ್ನು ಸಂಪರ್ಕಿಸಲು 7.7 ಕಿಲೋಮೀಟರ್ ಉದ್ದದ ಚಾಲಕ ರಹಿತ ‘ಏರ್ ಟ್ರೈನ್’ (Automated People Mover) ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಇದರ ಅಂದಾಜು ವೆಚ್ಚ 3,000 ರಿಂದ 4,000 ಕೋಟಿ ರೂ. ಆಗಿದ್ದು, ಮುಂದಿನ 30 ತಿಂಗಳುಗಳಲ್ಲಿ ಇದು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಸೇವೆಯು ಪ್ರಯಾಣಿಕರಿಗೆ ಉಚಿತವಾಗಿರಲಿದೆ.

ಭಾರತೀಯ ವಿಮಾನ ಪ್ರಯಾಣಿಕರ ವೆಚ್ಚದ ಆದಾಯ ಹೊರಹೋಗುವುದು ತಪ್ಪುತ್ತದೆ

ಪ್ರಸ್ತುತ ಭಾರತದ ಬಹುತೇಕ ಅಂತರರಾಷ್ಟ್ರೀಯ ಪ್ರಯಾಣಿಕರು ವಿದೇಶಿ ವಿಮಾನ ನಿಲ್ದಾಣಗಳ (ದುಬೈ ಅಥವಾ ದೋಹಾ) ಮೂಲಕ ಪ್ರಯಾಣಿಸುತ್ತಾರೆ. ಇದರಿಂದ ಭಾರತಕ್ಕೆ ಸಿಗಬೇಕಾದ ಡ್ಯೂಟಿ-ಫ್ರೀ ಶಾಪಿಂಗ್, ರೀಟೇಲ್ ವ್ಯಾಪಾರ ಮತ್ತು ವಿಮಾನ ನಿಲ್ದಾಣದ ಆದಾಯಗಳು ವಿದೇಶಗಳ ಪಾಲಾಗುತ್ತಿವೆ. ಭಾರತದಲ್ಲೇ ಹಬ್‌ಗಳನ್ನು ನಿರ್ಮಿಸುವುದರಿಂದ ಜಿಎಂಆರ್ ಏರ್‌ಪೋರ್ಟ್ಸ್ (GMR Airports) ಮತ್ತು ಅದಾನಿ ಏರ್‌ಪೋರ್ಟ್ಸ್ (Adani Airports) ನಂತಹ ದೇಶೀಯ ಆಪರೇಟರ್‌ಗಳ ಆದಾಯ ಗಣನೀಯವಾಗಿ ಹೆಚ್ಚಾಗಲಿದೆ.

ಇದನ್ನೂ ಓದಿ: ಏಪ್ರಿಲ್​ನಿಂದ ಜೂನ್ 14ರವರೆಗೆ ಭಾರತದ ರಫ್ತು ಶೇ. 15ರಷ್ಟು ಏರಿಕೆ: ವಾಣಿಜ್ಯ ಸಚಿವ ಪಿಯೂಶ್ ಗೋಯಲ್

ಎದುರಾಗಲಿರುವ ಸವಾಲುಗಳು

ಭಾರತದ ಕೆಲ ವಿಮಾನ ನಿಲ್ದಾಣಗಳನ್ನು ಗ್ಲೋಬಲ್ ಟ್ರಾನ್ಸಿಟ್ ಹಬ್​ಗಳಾಗಿ ಮಾಡುವ ಕಾರ್ಯದಲ್ಲಿ ಬಹಳ ಸವಾಲುಗಳಿವೆ. ಗಲ್ಫ್ ದೇಶಗಳ ವಿಮಾನ ನಿಲ್ದಾಣಗಳು ದಶಕಗಳಿಂದ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅತ್ಯಂತ ವೇಗದ ಕನೆಕ್ಟಿಂಗ್ ಫ್ಲೈಟ್ ವ್ಯವಸ್ಥೆಯನ್ನು ಹೊಂದಿವೆ. ಅವುಗಳ ದಕ್ಷತೆಗೆ ಸಾಟಿಯಾಗುವಂತೆ ಭಾರತೀಯ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸಬೇಕಾಗುತ್ತದೆ.

ದೆಹಲಿಯ ಏರ್ ಟ್ರೈನ್‌ನಂತಹ ಬೃಹತ್ ಯೋಜನೆಗಳು ನಿಗದಿತ 30 ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳದಿದ್ದರೆ, ವೆಚ್ಚ ಹೆಚ್ಚಾಗುವ ಮತ್ತು ಹೂಡಿಕೆಯ ಮೇಲಿನ ಲಾಭ ಕಡಿಮೆಯಾಗುವ ಅಪಾಯವಿರುತ್ತದೆ.

ಒಟ್ಟಾರೆಯಾಗಿ, ಭಾರತವು ತನ್ನದೇ ಆದ ವಿಮಾನ ನಿಲ್ದಾಣಗಳನ್ನು ಜಾಗತಿಕ ಮಟ್ಟದ ಸಂಪರ್ಕ ಕೊಂಡಿಯನ್ನಾಗಿ ಮಾಡಲು ಮತ್ತು ವಿದೇಶಿ ಆಪರೇಟರ್‌ಗಳ ಕೈಯಲ್ಲಿರುವ ಮಾರುಕಟ್ಟೆಯನ್ನು ತನ್ನದಾಗಿಸಿಕೊಳ್ಳಲು ಹಮ್ಮಿಕೊಂಡಿರುವ ಈ ಬೃಹತ್ ಯೋಜನೆ ಎಷ್ಟು ಯಶಸ್ವಿಗೊಳ್ಳುತ್ತದೆ ಕಾದು ನೋಡಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಟ್ರ್ಯಾಕ್ಟರ್ ಬಾಡಿಗೆ ಹೆಚ್ಚು: ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು! – Kannada News | High Tractor Rent Forces Hubballi Farmer Family to Pull Plough Themselves Amid Dry Spell in Dharwad

ಹುಬ್ಬಳ್ಳಿ, ಜೂನ್ 22: ಧಾರವಾಡ ಜಿಲ್ಲೆಯಲ್ಲಿ ಕಳೆದ 20 ದಿನಗಳಿಂದ ಮಳೆ ಸುರಿಯದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಗ್ರಾಮದಲ್ಲಿ ಬಿತ್ತನೆ ಕಾರ್ಯ ನಡೆಸಿದ್ದ ರೈತರು ಇದೀಗ ಮಳೆಗಾಗಿ ನಿರೀಕ್ಷೆಯಲ್ಲಿದ್ದಾರೆ. ಆದರೆ ನಿರಂತರ ಬರದಿಂದಾಗಿ ಬಿತ್ತಿದ ಬೀಜ ಮೊಳಕೆಯೊಡೆಯದೆ ಬೆಳೆ ನಷ್ಟದ ಭೀತಿ ಎದುರಿಸುತ್ತಿದ್ದಾರೆ. ಕೃಷಿ ಕಾರ್ಯಗಳಿಗೆ ಎತ್ತುಗಳನ್ನು ಖರೀದಿಸುವುದು ದುಬಾರಿಯಾಗಿದ್ದು, ಒಂದು ಜೊತೆ ಎತ್ತುಗಳಿಗೆ ಒಂದೂವರೆಯಿಂದ ಎರಡು ಲಕ್ಷ ರೂಪಾಯಿ ಖರ್ಚಾಗುತ್ತದೆ. ಇನ್ನು ಟ್ರ್ಯಾಕ್ಟರ್‌ಗಳ ಮೂಲಕ ಉಳುಮೆ ಮಾಡಿಸುವುದು ಕೂಡ ಪ್ರತಿ ಎಕರೆಗೆ 1,500 ರಿಂದ 2,000 ರೂಪಾಯಿಗಳಷ್ಟು ವೆಚ್ಚ ತಗಲುತ್ತದೆ. ಈ ಹೆಚ್ಚಿದ ವೆಚ್ಚ ಮತ್ತು ಮಳೆ ಇಲ್ಲದ ಕಾರಣದಿಂದಾಗಿ ರೈತರು ಆರ್ಥಿಕವಾಗಿ ಬಸವಳಿದಿದ್ದಾರೆ.

ಪರಿಸ್ಥಿತಿ ಕೈಮೀರುತ್ತಿರುವ ಕಾರಣ, ಕುಟುಂಬದ ಸದಸ್ಯರೇ ನೊಗಕ್ಕೆ ಹೆಗಲು ಕೊಟ್ಟು ತಮ್ಮ ಜಮೀನುಗಳನ್ನು ಉಳುಮೆ ಮಾಡುತ್ತಿದ್ದಾರೆ. ಮಳೆ ಇಲ್ಲದೆ ಬೆಳೆ ಹಾಳಾಗುತ್ತಿರುವುದರಿಂದ ಪ್ರತಿ ಎಕರೆಗೆ 30,000 ರಿಂದ 40,000 ರೂಪಾಯಿಗಳ ನಷ್ಟ ಉಂಟಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ – Kannada News | Anchor Anushree Come up with Little Girl Avatar In Saregamapa

‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ವೇದಿಕೆಯೆಂದರೆ ಅಲ್ಲಿ ಹಾಡುಗಳ ಜೊತೆಗೆ ಮನರಂಜನೆಗೂ ಕೊರತೆಯಿರುವುದಿಲ್ಲ. ಇತ್ತೀಚೆಗೆ ನಡೆದ ವಿಶೇಷ ಸಂಚಿಕೆಯಲ್ಲಿ ಮೆಂಟರ್‌ಗಳೆಲ್ಲರೂ ಶಾಲಾ ಮಕ್ಕಳ ವೇಷ ಧರಿಸಿ ಬಂದು ಶಿಶುಗೀತೆಗಳನ್ನು ಹಾಡುವ ಮೂಲಕ ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡಿದ್ದರು. ಆದರೆ, ಈ ಇಡೀ ಸಂಚಿಕೆಯಲ್ಲಿ ಎಲ್ಲರ ಕಣ್ಣು ನೆಟ್ಟಿದ್ದು ಮಾತ್ರ ನಿರೂಪಕಿ ಅನುಶ್ರೀ ಅವರ ಮೇಲೆ.

ಯಾವಾಗಲೂ ಸೀರೆ ಅಥವಾ ಮಾಡರ್ನ್ ಉಡುಗೆಗಳಲ್ಲಿ ಕಂಗೊಳಿಸುತ್ತಿದ್ದ ಅನುಶ್ರೀ, ಈ ಬಾರಿ ಕಾರ್ಯಕ್ರಮದ ಥೀಮ್‌ಗೆ ತಕ್ಕಂತೆ ಕ್ಯೂಟ್ ಆಗಿ ರೆಡಿಯಾಗಿದ್ದರು. ಶಾಲಾ ಬಾಲಕಿಯ ಉಡುಗೆ, ತಲೆಗೊಂದು ಮುದ್ದಾದ ಹೇರ್ ಬ್ಯಾಂಡ್ ಧರಿಸಿ, ಕೈಯಲ್ಲಿ ವಾಟರ್ ಬಾಟಲ್ ಹಿಡಿದು ತರಲೆ ಶಾಲಾ ಹುಡುಗಿಯಂತೆ ವೇದಿಕೆ ಮೇಲೆ ಎಂಟ್ರಿ ಕೊಟ್ಟ ಅನುಶ್ರೀ ಅವರ ಲುಕ್ ಎಲ್ಲರ ಗಮನ ಸೆಳೆಯಿತು. ಇದರ ಜೊತೆಗೆ ಮೆಂಟರ್​​ಗಳು ಹಾಗೂ ಜಡ್ಜ್​​ಗಳು ಕೂಡ ಗಮನ ಸೆಳೆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Gold Rate: ಚಿನ್ನದ ಬೆಲೆ 10 ಗ್ರಾಮ್​ಗೆ 400 ರೂ ಏರಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 22nd June 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜೂನ್ 22: ಕಳೆದ ವಾರಾಂತ್ಯದಲ್ಲಿ ಗ್ರಾಮ್​ಗೆ 20 ರೂ ಏರಿದ್ದ ಚಿನ್ನದ ಬೆಲೆ (Gold Rates) ಇವತ್ತು ಸೋಮವಾರ 40 ರೂ ಹೆಚ್ಚಿದೆ. 18 ಗ್ರಾಮ್ ಚಿನ್ನದ ಬೆಲೆ 11,000 ರೂ ಸಮೀಪಕ್ಕೆ ಹೋಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಯಥಾಸ್ಥಿತಿಯಲ್ಲಿದೆ. ಕೆಲವೆಡೆ ಬಹಳ ಅಲ್ಪ ಮೊತ್ತದಷ್ಟು ಬೆಲೆ ವ್ಯತ್ಯಯ ಆಗಿದೆ. ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,34,300 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,46,510 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,34,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 22ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,651 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,430 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,988 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,651 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,430 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,430 ರೂ
  • ಚೆನ್ನೈ: 13,600 ರೂ
  • ಮುಂಬೈ: 13,430 ರೂ
  • ದೆಹಲಿ: 13,445 ರೂ
  • ಕೋಲ್ಕತಾ: 13,430 ರೂ
  • ಕೇರಳ: 13,430 ರೂ
  • ಅಹ್ಮದಾಬಾದ್: 13,435 ರೂ
  • ಜೈಪುರ್: 13,445 ರೂ
  • ಲಕ್ನೋ: 13,445 ರೂ
  • ಭುವನೇಶ್ವರ್: 13,430 ರೂ

ಇದನ್ನೂ ಓದಿ: ವಿಶ್ವಬ್ಯಾಂಕ್​ನಿಂದ 1.5 ಬಿಲಿಯನ್, ಎಡಿಬಿಯಿಂದ 1 ಬಿಲಿಯನ್ ಡಾಲರ್ ಸಾಲ ಪಡೆಯಲಿರುವ ಭಾರತ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 575 ರಿಂಗಿಟ್ (13,051 ರುಪಾಯಿ)
  • ದುಬೈ: 500.75 ಡಿರಾಮ್ (12,871 ರುಪಾಯಿ)
  • ಅಮೆರಿಕ: 137 ಡಾಲರ್ (12,935 ರುಪಾಯಿ)
  • ಸಿಂಗಾಪುರ: 185 ಸಿಂಗಾಪುರ್ ಡಾಲರ್ (13,511 ರುಪಾಯಿ)
  • ಕತಾರ್: 502 ಕತಾರಿ ರಿಯಾಲ್ (13,002 ರೂ)
  • ಸೌದಿ ಅರೇಬಿಯಾ: 515 ಸೌದಿ ರಿಯಾಲ್ (12,955 ರುಪಾಯಿ)
  • ಓಮನ್: 52.65 ಒಮಾನಿ ರಿಯಾಲ್ (12,911 ರುಪಾಯಿ)
  • ಕುವೇತ್: 41.94 ಕುವೇತಿ ದಿನಾರ್ (12,872 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 250 ರೂ
  • ಚೆನ್ನೈ: 255 ರೂ
  • ಮುಂಬೈ: 250 ರೂ
  • ದೆಹಲಿ: 250 ರೂ
  • ಕೋಲ್ಕತಾ: 250 ರೂ
  • ಕೇರಳ: 255 ರೂ
  • ಅಹ್ಮದಾಬಾದ್: 250 ರೂ
  • ಜೈಪುರ್: 250 ರೂ
  • ಲಕ್ನೋ: 250 ರೂ
  • ಭುವನೇಶ್ವರ್: 255 ರೂ
  • ಪುಣೆ: 250

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version